Tag: recipe

  • ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕುಡಿಯಿರಿ ಮೆಂತ್ಯ ಹಾಲು

    ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕುಡಿಯಿರಿ ಮೆಂತ್ಯ ಹಾಲು

    ದೀಗ ಮಾನ್ಸೂನ್ ಸೀಸನ್. ಮಕ್ಕಳು, ಹಿರಿಯರು ಸೇರಿದಂತೆ ಹೆಚ್ಚಿನವರು ಈ ಸಮಯದಲ್ಲಿ ಸೋಂಕಿಗೊಳಗಾಗೋದು ಸಾಮಾನ್ಯ. ಇವೆಲ್ಲವನ್ನೂ ಎದುರಿಸಲು ಪ್ರತಿಯೊಬ್ಬರಿಗೂ ರೋಗನಿರೋಧಕ ಶಕ್ತಿ ಹೆಚ್ಚಿಸೋ ಆಹಾರ ಬೇಕೇಬೇಕು. ನಾವಿಂದು ಹೇಳಿಕೊಡುತ್ತಿರೋ ರೆಸಿಪಿ ಮೆಂತ್ಯ ಹಾಲು ಕೂಡಾ ಅದರಲ್ಲೊಂದು. ಇದರ ಮುಖ್ಯ ಪ್ರಯೋಜನವೇ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸೋ ಗುಣಲಕ್ಷಣ. ಹಾಗಿದ್ದರೆ ತಡ ಮಾಡದೆ ಮೆಂತ್ಯ ಹಾಲನ್ನು ತಯಾರಿಸೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಮೆಂತ್ಯ – 1 ಟೀಸ್ಪೂನ್
    ನೀರು – 1 ಕಪ್
    ಹಾಲು – ಅಗತ್ಯಕ್ಕೆ ಅನುಸಾರ
    ಜೇನುತುಪ್ಪ – ಸಿಹಿಗೆ ಅನುಸಾರ
    ದಾಲ್ಚಿನ್ನಿ ಪುಡಿ – ಚಿಟಿಕೆ ಇದನ್ನೂ ಓದಿ: ಸಿಹಿ ಸಿಹಿ ನೆಲ್ಲಿಕಾಯಿ ಮುರಬ್ಬಾ ಈ ರೀತಿ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಮೆಂತ್ಯವನ್ನು 1 ಕಪ್ ನೀರಿನಲ್ಲಿ ಸುಮಾರು 6-8 ಗಂಟೆಗಳ ಕಾಲ ನೆನೆಸಿಡಿ.
    * ಬಳಿಕ ನೀರನ್ನು ಹರಿಸಿ, ಮೆಂತ್ಯವನ್ನು ಬ್ಲೆಂಡರ್‌ಗೆ ವರ್ಗಾಯಿಸಿ. ಕಾಲು ಕಪ್ ತಾಜಾ ನೀರನ್ನು ಸೇರಿಸಿ ನಯವಾದ ಪೇಸ್ಟ್ ಆಗುವಂತೆ ರುಬ್ಬಿ.
    * ಒಂದು ಪಾತ್ರೆ ತೆಗೆದುಕೊಂಡು ಅದರಲ್ಲಿ ಹಾಲು ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.
    * ಹಾಲು ಬೆಚ್ಚಗಾಗಲು ಪ್ರಾರಂಭಿಸಿದಾಗ ಮೆಂತ್ಯ ಪೇಸ್ಟ್ ಅನ್ನು ಹಾಲಿಗೆ ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ.
    * ನೀವು ಸಿಹಿ ಇಷ್ಟಪಡುತ್ತೀರಾದರೆ 1-2 ಟೀಸ್ಪೂನ್ ಜೇನುತುಪ್ಪ ಸೇರಿಸಿ. ಸಿಹಿ ಬೇಡವಾದರೆ ಜೇನುತುಪ್ಪ ಬಳಸದೇ ಇರಬಹುದು.
    * ಬಳಿಕ ಚಿಟಿಕೆಯಷ್ಟು ದಾಲ್ಚಿನ್ನಿ ಪುಡಿಯನ್ನು ಸೇರಿಸಿ. ಇದು ಮೆಂತ್ಯ ಹಾಲಿನ ಪರಿಮಳವನ್ನು ಹೆಚ್ಚಿಸುತ್ತದೆ.
    * ಈಗ ಹಾಲನ್ನು ಕುದಿಯಲು ಬಿಡಿ. ತಳ ಹಿಡಿಯದಂತೆ ಆಗಾಗ ಕೈಯಾಡಿಸುತ್ತಿರಿ.
    * ಬಳಿಕ ಉರಿಯನ್ನು ಆಫ್ ಮಾಡಿ, ಸ್ವಲ್ಪ ಆರಲು ಬಿಡಿ.
    * ಇದೀಗ ರೋಗನಿರೋಧಕ ಶಕ್ತಿ ಹೆಚ್ಚಿಸೋ ಮೆಂತ್ಯ ಹಾಲು ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನು ನೀವು ಬೇಕೆಂದರೆ ಸಂಪೂರ್ಣವಾಗಿ ತಣಿಸಿಯೂ ಸವಿಯಬಹುದು. ಇದನ್ನೂ ಓದಿ: ಸಿಹಿಯಾದ ಶುಂಠಿ ಬರ್ಫಿ ಸವಿದು ಆನಂದಿಸಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾದಾಮಿ ಗ್ರೇವಿಯ ಚಿಕನ್ – ಯಮ್ಮೀ ಫ್ಲೇವರ್

    ಬಾದಾಮಿ ಗ್ರೇವಿಯ ಚಿಕನ್ – ಯಮ್ಮೀ ಫ್ಲೇವರ್

    ಬಾದಾಮಿ ಗ್ರೇವಿಯ ಚಿಕನ್ ಪ್ರೋಟೀನ್ ಹಾಗೂ ಕ್ಯಾಲ್ಸಿಯಂ ಭರಿತ ಸಖತ್ ರುಚಿಯಾದ ಅಡುಗೆ. ಈ ರೆಸಿಪಿ ಆರೋಗ್ಯಕ್ಕೆ ಬೆಸ್ಟ್ ಆಗಿರೋದು ಮಾತ್ರವಲ್ಲದೇ ರುಚಿಯಲ್ಲೂ ಯಮ್ಮೀ ಫ್ಲೇವರ್ ಇದೆ. ರೋಟಿ ಅಥವಾ ಅನ್ನದೊಂದಿಗೆ ಸವಿಯಲು ಈ ಗ್ರೇವಿ ಬೆಸ್ಟ್ ಆಗಿದೆ. ಯಾವಾಗಲೂ ಒಂದೇ ರೀತಿಯಲ್ಲಿ ಚಿಕನ್ ಸಾರು ಇಲ್ಲವೇ ಗ್ರೇವಿ ಮಾಡಿ ಬೋರ್ ಎನಿಸಿದವರು ಟ್ರೈ ಮಾಡಲೇಬೇಕಾದ ರೆಸಿಪಿಯಿದು. ಹಾಗಿದ್ರೆ ಬಾದಾಮಿ ಗ್ರೇವಿಯ ಚಿಕನ್ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಚಿಕನ್ – 500 ಗ್ರಾಂ
    ಈರುಳ್ಳಿ – 3
    ಟೊಮೆಟೋ – 1
    ಬೆಳ್ಳುಳ್ಳಿ – 15
    ದಾಲ್ಚಿನ್ನಿ ಚಕ್ಕೆ – ಒಂದು ಇಂಚು
    ಕಲ್ಲಂಗಡಿ ಬೀಜಗಳು – ಅರ್ಧ ಕಪ್
    ಬಿಳಿ ಎಳ್ಳು – 3 ಟೀಸ್ಪೂನ್
    ಬಾದಾಮಿ – 20 (ಪೇಸ್ಟ್ನಂತೆ ರುಬ್ಬಿಡಿ)
    ಏಲಕ್ಕಿ – 4
    ಗೋಡಂಬಿ – 10
    ತೆಂಗಿನ ಹಾಲು – 1 ಕಪ್
    ತುಪ್ಪ ಅಥವಾ ಎಣ್ಣೆ – 3 ಚಮಚ
    ಅರಿಶಿನ ಪುಡಿ – 1 ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಹಸಿರು ಮೆಣಸಿನಕಾಯಿ – 3
    ಪುದೀನಾ – 5 ಎಳೆಗಳು
    ಶುಂಠಿ – 1 ಇಂಚು
    ಲವಂಗ – 5
    ಕರಿಮೆಣಸು – 4
    ಜೀರಿಗೆ 1 ಟೀಸ್ಪೂನ್
    ದಾಲ್ಚಿನ್ನಿ ಎಲೆ – 1
    ಸಕ್ಕರೆ – 1 ಟೀಸ್ಪೂನ್
    ಕೊತ್ತಂಬರಿ ಸೊಪ್ಪು – 3 ಎಳೆಗಳು
    ಮೊಸರು – ಅರ್ಧ ಕಪ್
    ಕರಿಮೆಣಸಿನಪುಡಿ – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಚಿಕನ್ ಕೀಮಾ ಬಿರಿಯಾನಿ – ವಾವ್ ಎನ್ನದೇ ಇರೋಕಾಗಲ್ಲ

    ಮಾಡುವ ವಿಧಾನ:
    * ಮೊದಲಿಗೆ ಅರಿಶಿನ, ಮೆಣಸಿನ ಪುಡಿ, ಕರಿಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ, ಚಿಕನ್ ತುಂಡುಗಳಿಗೆ ಚೆನ್ನಾಗಿ ಉಜ್ಜಿ. ನಂತರ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಸುಮಾರು 15-20 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ.
    * ಈಗ ಪ್ಯಾನ್‌ನಲ್ಲಿ 1 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, 2 ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ. ಬಳಿಕ ರುಬ್ಬಿದ ಬಾದಾಮಿ, ಗೋಡಂಬಿ, ಎಳ್ಳು, ಕಲ್ಲಂಗಡಿ ಬೀಜಗಳು ಮತ್ತು ಏಲಕ್ಕಿ ಸೇರಿಸಿ ಕಡಿಮೆ ಉರಿಯಲ್ಲಿ 3 ನಿಮಿಷ ಮಿಶ್ರಣ ಮಾಡಿ.
    * ಬಳಿಕ ತೆಂಗಿನ ಹಾಲು ಸೇರಿಸಿ ಮಿಶ್ರಣವು ಸ್ವಲ್ಪ ಕಂದು ಬಣ್ಣಕ್ಕೆ ಬಂದ ನಂತರ ಉರಿಯನ್ನು ಆಫ್ ಮಾಡಿ. ಅದನ್ನು ತಣ್ಣಗಾಗಲು ಬಿಟ್ಟು ಬಳಿಕ ನಯವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ.
    * ಈಗ ಮಿಕ್ಸರ್ ಜಾರ್‌ನಲ್ಲಿ ಹೆಚ್ಚಿದ ಟೊಮೆಟೋ, ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಮೆಣಸಿನಕಾಯಿ, ಪುದೀನ ಸೇರಿಸಿ ನಯವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ.
    * ಒಂದು ಪಾತ್ರೆ ತೆಗೆದುಕೊಂಡು 2 ಟೀಸ್ಪೂನ್ ತುಪ್ಪ ಅಥವಾ ಎಣ್ಣೆಯನ್ನು ಸೇರಿಸಿ, ಬಿಸಿಯಾದ ನಂತರ ಜೀರಿಗೆ ಕಾಳುಮೆಣಸು, ದಾಲ್ಚಿನ್ನಿ, ಸಕ್ಕರೆ, ದಾಲ್ಚಿನ್ನಿ ಎಲೆ, ಲವಂಗ ಸೇರಿಸಿ ಸಣ್ಣ ಉರಿಯಲ್ಲಿ ಒಂದು ನಿಮಿಷ ಹುರಿಯಿರಿ.
    * ಈಗ ಬಿಳಿ ಪೇಸ್ಟ್ ಅನ್ನು ನಿಧಾನವಾಗಿ ಸೇರಿಸಿ, ಕಡಿಮೆ ಉರಿಯಲ್ಲಿ ಆಗಾಗ ಬೆರೆಸುತ್ತಿರಿ. ಸ್ಥಿರತೆ ನೋಡಿ ನೀರನ್ನು ಸೇರಿಸಬಹುದು. 2 ನಿಮಿಷಗಳ ನಂತರ ಅದಕ್ಕೆ ಹಸಿರು ಪೇಸ್ಟ್ ಅನ್ನು ಸೇರಿಸಿ 3 ನಿಮಿಷಗಳ ಕಾಲ ಕುದಿಸಿ.
    * ಬಳಿಕ ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಸೇರಿಸಿ. ಅಗತ್ಯವಿರುವಷ್ಟು ಉಪ್ಪು ಸೇರಿಸಿ, ಅಗತ್ಯವಿದ್ದರೆ ಯಾವುದೇ ಮಸಾಲೆಗಳನ್ನು ರುಚಿಗೆ ಅನುಸಾರವಾಗಿ ಬದಲಾಯಿಸಬಹುದು. ಹಾಗೂ ಚಿಕನ್ ಅನ್ನು 15-20 ನಿಮಿಷ ಬೇಯಲು ಬಿಡಿ.
    * ಈ ವೇಳೆ ಮತ್ತೊಂದು ಪ್ಯಾನ್‌ನಲ್ಲಿ 1 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, 1 ಈರುಳ್ಳಿಯನ್ನು ತೆಳ್ಳಗೆ ಕತ್ತರಿಸಿ, ಅದಕ್ಕೆ ಸೇರಿಸಿ, ಗಾಢ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ.
    * ಈಗ ಚಿಕನ್ ಗ್ರೇವಿಗೆ ಹುರಿದ ಈರುಳ್ಳಿ, ಹೆಚ್ಚಿದ ಕೊತ್ತಂಬರಿಸೊಪ್ಪು ಸೇರಿಸಿ ಅಲಂಕರಿಸಿ.
    * ಬಾದಾಮಿ ಗ್ರೇವಿಯ ಚಿಕನ್ ಇದೀಗ ತಯಾರಾಗಿದ್ದು, ರೋಟಿ ಅಥವಾ ಅನ್ನದೊಂದಿಗೆ ಬಡಿಸಿ. ಇದನ್ನೂ ಓದಿ: ರಾಜಸ್ಥಾನಿ ಲಾಲ್ ಮಾಸ್ ಮಾಡೋದು ಹೇಗೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುಲಭವಾಗಿ ಮಾಡಿ ಡ್ರೈಫ್ರೂಟ್ಸ್ ಬರ್ಫಿ

    ಸುಲಭವಾಗಿ ಮಾಡಿ ಡ್ರೈಫ್ರೂಟ್ಸ್ ಬರ್ಫಿ

    ಡ್ರೈಫ್ರೂಟ್ಸ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಆರೋಗ್ಯಕ್ಕೆ ಒಳ್ಳೆಯದು ಎಂದು ಡ್ರೈಫ್ರೂಟ್ಸ್ ಸೇವಿಸುತ್ತಾರೆ. ಡಯೆಟ್ ಮಾಡುವವರು, ಯೋಗ ಮಾಡುವವರು, ಜಿಮ್ ಮಾಡುವ ಪ್ರತಿಯೊಬ್ಬರು ಇದನ್ನು ತಿಂದೇ ತಿನ್ನುತ್ತಾರೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಡ್ರೈಫ್ರೂಟ್ಸ್ ಬರ್ಫಿ ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ.

    ಬೇಕಾಗುವ ಸಾಮಗ್ರಿಗಳು:
    ಖರ್ಜೂರ – 20
    ಮಿಕ್ಸ್ ನಟ್ಸ್ – ಅರ್ಧ ಕಪ್
    ತುಪ್ಪ – 1 ಚಮಚ
    ಕೊಕೊವಾ ಪೌಡರ್ – 1 ಚಮಚ
    ವೆನಿಲ್ಲಾ ಎಸೆನ್ಸ್ – ಕಾಲು ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಖರ್ಜೂರ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ.
    * ಬಳಿಕ ಒಂದು ಪ್ಯಾನ್‌ಗೆ ನಟ್ಸ್‌ಗಳನ್ನು ಹಾಕಿಕೊಂಡು 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
    * ಬಳಿಕ ಇದನ್ನು ಮಿಕ್ಸಿಗೆ ಹಾಕಿಕೊಂಡು ಪೌಡರ್ ಮಾಡಿಕೊಳ್ಳಿ. ಇದನ್ನು ಪೌಡರ್ ಮಾಡಿಕೊಳ್ಳುವ ಬದಲು ಸಣ್ಣದಾಗಿ ಹೆಚ್ಚಿಕೊಂಡು ಹಾಕಿಕೊಳ್ಳಬಹುದು.
    * ಬಳಿಕ ಅದೇ ಪ್ಯಾನ್‌ಗೆ ಒಂದು ಚಮಚ ತುಪ್ಪವನ್ನು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹೆಚ್ಚಿದ ನಟ್ಸ್ ಅಥವಾ ಪೌಡರ್ ಅನ್ನು ಹಾಕಿಕೊಳ್ಳಿ.
    * ಈಗ ಇದಕ್ಕೆ ಕೊಕೊ ಪೌಡರ್ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ. ಬಳಿಕ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ನಂತರ ಇದನ್ನು ಒಂದು ಟ್ರೇಗೆ ಹಾಕಿಕೊಂಡು ಸಮತಟ್ಟಾಗಿ ಸವರಿಕೊಳ್ಳಿ.
    * ಬಳಿಕ ಇದನ್ನು ಒಂದು ಅಲ್ಯುಮೀನಿಯಂ ಫಾಯಿಲ್ ಅಲ್ಲಿ ಹಾಕಿಕೊಂಡು ರೋಲ್ ಮಾಡಿ ಫ್ರೀಜರ್‌ನಲ್ಲಿ 2 ಗಂಟೆಗಳ ಕಾಲ ಇರಿಸಿ.
    * ಈಗ ಇದನ್ನು ಫ್ರೀಜರ್‌ನಿಂದ ಹೊರತೆಗೆದು ರೌಂಡ್ ಶೇಪ್‌ನಲ್ಲಿ ಕತ್ತರಿಸಿಕೊಂಡು ಸವಿಯಲು ಕೊಡಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮ್ಯಾಂಗೋ ಫಲೂಡಾ ಸವಿದು ಚಿಲ್ ಆಗಿ

    ಮ್ಯಾಂಗೋ ಫಲೂಡಾ ಸವಿದು ಚಿಲ್ ಆಗಿ

    ಹೋಟೆಲ್‌ಗಳಲ್ಲಿ, ಬೀದಿ ಬದಿಯ ಅಂಗಡಿಗಳಲ್ಲಿ ಮಾಡುವ ಫಲೂಡಾಗಳು ಅದ್ಭುತ ರುಚಿಯನ್ನು ನೀಡುವುದಲ್ಲದೇ ಪದೇ ಪದೇ ತಿನ್ನಬೇಕು ಎನಿಸುತ್ತದೆ. ಆದರೆ ಬೀದಿ ಬದಿಯಲ್ಲಿ ಮಾಡುವ ಫಲೂಡಾಗಳನ್ನು ತಿನ್ನುವ ಬದಲು ಮನೆಯಲ್ಲಿಯೇ ಮಾಡಿ ತಿಂದರೆ ಆರೋಗ್ಯದ ದೃಷ್ಟಿಯಲ್ಲೂ ಉತ್ತಮವಲ್ಲದೇ ಶುಚಿರುಚಿಯಾಗಿ ಮಾಡಿಕೊಂಡು ತಿನ್ನಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಮ್ಯಾಂಗೋ ಫಲೂಡಾ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಸಿಹಿ ಸಿಹಿ ನೆಲ್ಲಿಕಾಯಿ ಮುರಬ್ಬಾ ಈ ರೀತಿ ಮಾಡಿ

    ಬೇಕಾಗುವ ಸಾಮಗ್ರಿಗಳು:
    ಹೆಚ್ಚಿದ ಮಾವಿನ ಹಣ್ಣಿನ ತುಂಡುಗಳು – 1 ಕಪ್
    ಮಾವಿನ ಹಣ್ಣಿನ ಪ್ಯೂರಿ – 1 ಕಪ್
    ಸಿಹಿಯಾದ ದಪ್ಪ ಹಾಲು – 1 ಕಪ್
    ತುಳಸಿ ಬೀಜಗಳು – 1 ಚಮಚ
    ಫಲೂಡಾ ಸೇವ್ – 2 ಚಮಚ
    ಮಾವಿನ ಹಣ್ಣಿನ ಐಸ್‌ಕ್ರೀಮ್ – ಸ್ವಲ್ಪ
    ಟೂಟಿ ಫ್ರೂಟಿ – ಅಲಂಕಾರಕ್ಕಾಗಿ

    ಮಾಡುವ ವಿಧಾನ:
    * ಮೊದಲಿಗೆ ತುಳಸಿ ಬೀಜವನ್ನು ಒಂದು ಕಪ್‌ನಲ್ಲಿ ಹಾಕಿ ಅದಕ್ಕೆ ಸ್ವಲ್ಪ ನೀರನ್ನು ಹಾಕಿ 15ರಿಂದ 20 ನಿಮಿಷಗಳ ಕಾಲ ನೆನೆಯಲು ಬಿಡಿ.
    * ಬಳಿಕ ಒಂದು ಕುಕ್ಕರ್‌ನಲ್ಲಿ ಫಲೂಡಾ ಸೇವ್ ಅನ್ನು ಬೇಯಿಸಿಕೊಂಡು ಸಿದ್ಧವಾಗಿರಿಸಿ.
    * ಈಗ ಒಂದು ಗ್ಲಾಸ್‌ನಲ್ಲಿ ಮಾವಿನ ಹಣ್ಣಿನ ಪೀಸ್‌ಗಳನ್ನು ಹಾಕಿಕೊಂಡು ಅದಕ್ಕೆ 1 ಚಮಚ ನೆನೆಸಿದ ತುಳಸಿ ಬೀಜ ಹಾಗೂ 1 ಚಮಚ ಫಲೂಡಾ ಸೇವ್ ಅನ್ನು ಸೇರಿಸಿಕೊಳ್ಳಿ.
    * ಬಳಿಕ ಇದಕ್ಕೆ ಸ್ವಲ್ಪ ಮಾವಿನ ಹಣ್ಣಿನ ಪ್ಯೂರಿ ಮತ್ತು ದಪ್ಪನೆಯ ಹಾಲನ್ನು ಹಾಕಿಕೊಳ್ಳಿ.
    * ಅದೇ ರೀತಿ ಗ್ಲಾಸ್ ಫುಲ್ ಆಗುವವರೆಗೆ ಇದೇ ಕ್ರಮವನ್ನು ಅನುಸರಿಸಿ.
    * ಕೊನೆಯಲ್ಲಿ ಅದರ ಮೇಲೆ ಒಂದು ಸ್ಕೂಪ್ ಐಸ್‌ಕ್ರೀಮ್ ಅನ್ನು ಸೇರಿಸಿಕೊಂಡು ಅದರ ಮೇಲೆ ಟೂಟಿ ಫ್ರೂಟಿ ಇಂದ ಅಲಂಕರಿಸಿಕೊಂಡು ಸರ್ವ್ ಮಾಡಿ. ಇದನ್ನೂ ಓದಿ: ಸವಿಯಿರಿ ಆರೋಗ್ಯಕರ ಬಾಳೆಹಣ್ಣಿನ ಖೀರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿಕನ್ ಕೀಮಾ ಬಿರಿಯಾನಿ – ವಾವ್ ಎನ್ನದೇ ಇರೋಕಾಗಲ್ಲ

    ಚಿಕನ್ ಕೀಮಾ ಬಿರಿಯಾನಿ – ವಾವ್ ಎನ್ನದೇ ಇರೋಕಾಗಲ್ಲ

    ಬಿರಿಯಾನಿ ಎಲ್ಲೆಡೆ ಫೇಮಸ್. ಆದ್ರೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿ ಬಿರಿಯಾನಿ ಮಾಡಲಾಗುತ್ತದೆ. ಅಲ್ಲಲ್ಲಿನ ರುಚಿಗೆ ಅನುಸಾರವಾಗಿ ಮಸಾಲೆಗಳನ್ನು ಹೊಂದಿಸಲಾಗುತ್ತದೆ. ನಾವಿಂದು ಕೊಚ್ಚಿದ ಚಿಕನ್ ಬಳಸಿ ಬಿರಿಯಾನಿ ಹೇಗೆ ಮಾಡ್ಬೋದು ಎಂಬುದನ್ನು ಹೇಳಿಕೊಡುತ್ತೇವೆ. ಸರಳ ಮತ್ತು ತುಂಬಾ ಟೇಸ್ಟಿಯಾದ ಈ ಬಿರಿಯಾನಿಯನ್ನು ಸವಿದವರು ವಾವ್ ಎನ್ನದೇ ಇರೋಕೆ ಆಗಲ್ಲ. ಚಿಕನ್ ಕೀಮಾ ಬಿರಿಯಾನಿ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಬಿರಿಯಾನಿ ಮಸಾಲೆ ತಯಾರಿಸಲು:
    ಕಲ್ಪಸಿ (ಕಲ್ಲಿನ ಹೂವು) – 1 ಟೀಸ್ಪೂನ್
    ಸ್ಟಾರ್ ಅನೀಸ್ – ಅರ್ಧ
    ದಾಲ್ಚಿನ್ನಿ – ಅರ್ಧ ಇಂಚು
    ಏಲಕ್ಕಿ – 3
    ಲವಂಗ – 3
    ಹಸಿರು ಮೆಣಸಿನಕಾಯಿ – 10
    ಬೆಳ್ಳುಳ್ಳಿ – 15
    ಶುಂಠಿ – ಅರ್ಧ ಇಂಚು
    ನೀರು – ಅರ್ಧ ಕಪ್ (ರುಬ್ಬಲು)

    ಇತರ ಪದಾರ್ಥಗಳು:
    ಅಕ್ಕಿ – 2 ಕಪ್
    ಕಡಲೆಕಾಯಿ ಎಣ್ಣೆ – ಕಾಲು ಕಪ್
    ದಾಲ್ಚಿನ್ನಿ ಎಲೆ – 2
    ಹೆಚ್ಚಿದ ಈರುಳ್ಳಿ – 1 ಕಪ್
    ಉಪ್ಪು – 2 ಟೀಸ್ಪೂನ್
    ಹೆಚ್ಚಿದ ಟೊಮೆಟೋ – 2
    ಮೊಸರು – ಕಾಲು ಕಪ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಕಾಲು ಕಪ್
    ಹೆಚ್ಚಿದ ಪುದೀನ ಸೊಪ್ಪು – ಕಾಲು
    ಚಿಕನ್ ಕೀಮಾ – 500 ಗ್ರಾಂ
    ನೀರು – 4 ಕಪ್
    ನಿಂಬೆ ರಸ – ಅರ್ಧ ಇದನ್ನೂ ಓದಿ: ಈರುಳ್ಳಿ, ಟೊಮೆಟೋ ಯಾವ್ದೂ ಬೇಡ – ಹೀಗೆ ಮಾಡಿ ರುಚಿಕರ ಚಿಕನ್ ಫ್ರೈ

    ಮಾಡುವ ವಿಧಾನ:
    * ಮೊದಲಿಗೆ ಬಿರಿಯಾನಿ ಮಸಾಲೆ ಕೆಳಗೆ ನಮೂದಿಸಿದ ಎಲ್ಲಾ ಪದಾರ್ಥಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ನುಣ್ಣಗೆ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ರುಬ್ಬುವಾಗ ನೀರು ಸೇರಿಸಿ ತುಂಬಾ ನುಣ್ಣಗೆ ರುಬ್ಬಿಕೊಳ್ಳಿ.
    * ಅಕ್ಕಿಯನ್ನು ನೀರಿನಲ್ಲಿ ತೊಳೆದು ನೆನೆಸಿಡಿ.
    * ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು ದಾಲ್ಚಿನ್ನಿ ಎಲೆ ಸೇರಿಸಿ. ಈರುಳ್ಳಿಯನ್ನು ಸೇರಿಸಿ ಮೃದುವಾಗುವವರೆಗೆ ಹಾಗೂ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ.
    * ಮಸಾಲೆ ಪೇಸ್ಟ್ ಮತ್ತು ಉಪ್ಪು ಸೇರಿಸಿ, ಮಸಾಲೆ ಒಣಗುವವರೆಗೆ ಮತ್ತು ಎಣ್ಣೆ ಬೇರ್ಪಡುವವರೆಗೆ ಫ್ರೈ ಮಾಡಿ.
    * ಟೊಮೆಟೋ ಸೇರಿಸಿ, ಬೆಂದು ರಸ ಬಿಡುವವರೆಗೆ ಹುರಿಯಿರಿ.
    * ಬಳಿಕ ಮೊಸರು ಸೇರಿಸಿ 1-2 ನಿಮಿಷಗಳ ಕಾಲ ಫ್ರೈ ಮಾಡಿ.
    * ಈಗ ಪುದೀನ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಒಂದು ನಿಮಿಷ ಹುರಿಯಿರಿ.
    * ಬಳಿಕ ಕೊಚ್ಚಿದ ಚಿಕನ್ ಸೇರಿಸಿ 1-2 ನಿಮಿಷ ಬೇಯಿಸಿ.
    * ಈಗ ನೀರು ಸೇರಿಸಿ ಮಿಶ್ರಣವನ್ನು ಕುದಿಯಲು ಬಿಡಿ. ಕುದಿ ಬಂದ ನಂತರ ನೆನೆಸಿದ ಅಕ್ಕಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿ.
    * ಬಳಿಕ ನಿಂಬೆ ರಸ ಸೇರಿಸಿ, ಪ್ಯಾನ್ ಅನ್ನು ಮುಚ್ಚಿ ಮತ್ತು 3-4 ನಿಮಿಷ ಕಾಲ ಹೆಚ್ಚಿನ ಉರಿಯಲ್ಲಿ ಬೇಯಿಸಿ.
    * ನಂತರ ಮುಚ್ಚಳವನ್ನು ತೆಗೆದು ಎಲ್ಲವನ್ನೂ ಒಮ್ಮೆ ಚೆನ್ನಾಗಿ ಮಿಶ್ರಣ ಮಾಡಿ.
    * ಪ್ಯಾನ್ ಅನ್ನು ಮುಚ್ಚಿ ಮಧ್ಯಮ ಉರಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಿ.
    * ಮತ್ತೆ ಮಿಶ್ರಣ ಮಾಡಿ, ಮುಚ್ಚಿ ಮತ್ತು 1-2 ನಿಮಿಷ ಬೇಯಿಸಿ ಬಳಿಕ ಉರಿಯನ್ನು ಆಫ್ ಮಾಡಿ.
    * ಈಗ ಬಿರಿಯಾನಿ ಮುಚ್ಚಳ ತೆಗೆಯದೇ 20 ನಿಮಿಷ ಹಾಗೇ ಬಿಡಿ. ಈ ವೇಳೆ ಬಿರಿಯಾನಿ ಹಬೆಯಲ್ಲಿ ಬೇಯುತ್ತದೆ.
    * ಇದೀಗ ಚಿಕನ್ ಕೀಮಾ ಬಿರಿಯಾನಿ ತಯಾರಾಗಿದ್ದು, ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ರಾಜಸ್ಥಾನಿ ಲಾಲ್ ಮಾಸ್ ಮಾಡೋದು ಹೇಗೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುಲಭವಾಗಿ ಮಾಡಿ ಕ್ರಿಸ್ಪಿ ಆಲೂ ಕುರುಕುರೆ

    ಸುಲಭವಾಗಿ ಮಾಡಿ ಕ್ರಿಸ್ಪಿ ಆಲೂ ಕುರುಕುರೆ

    ಡೆಬಿಡದೆ ಮಳೆ ಸುರಿಯುತ್ತಿರುವ ಕಾರಣ ಮಳೆಯ ಜೊತೆಗೆ ಚಳಿಯೂ ಜೋರಾಗಿದೆ. ಈ ಹೊತ್ತಲ್ಲಿ ಬಿಸಿಬಿಸಿಯಾದ ಚಹಾದೊಂದಿಗೆ ಏನಾದರು ಕುರುಕುಲು ತಿಂಡಿ ತಿನ್ನಬೇಕು ಎಂದೆನಿಸುವುದು ಸಹಜ. ಅದಕ್ಕಾಗಿ ನಾವು ಇವತ್ತು ನಿಮಗೆ ಸುಲಭವಾಗಿ ಆಲೂ ಕುರುಕುರೆ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಇದನ್ನು ಮಕ್ಕಳು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಇದನ್ನು ಮಕ್ಕಳು ಮಾತ್ರವಲ್ಲದೇ ದೊಡ್ಡವರು ಸಹ ಇಷ್ಟಪಟ್ಟು ತಿನ್ನುತ್ತಾರೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಹೀಗೆ ಮಾಡಿ ರುಚಿರುಚಿಯಾದ ಮಸಾಲಾ ಸ್ವೀಟ್ ಕಾರ್ನ್ ವಡಾ

    ಬೇಕಾಗುವ ಸಾಮಗ್ರಿಗಳು:
    ಆಲೂಗೆಡ್ಡೆ – 4
    ಮೈದಾ ಹಿಟ್ಟು – ಮುಕ್ಕಾಲು ಕಪ್
    ಪೋಹಾ/ಅವಲಕ್ಕಿ – ಮುಕ್ಕಾಲು ಕಪ್
    ಹೆಚ್ಚಿದ ಹಸಿರು ಮೆಣಸು – 2
    ಜೀರಾ ಪೌಡರ್ – 1 ಚಮಚ
    ಪುದಿನಾ ಎಲೆ – ಒಂದು ಮುಷ್ಟಿ
    ಉಪ್ಪು – ಅಗತ್ಯಕ್ಕೆ ತಕ್ಕಷ್ಟು
    ಎಣ್ಣೆ – ಅಗತ್ಯಕ್ಕೆ ಬೇಕಾದಷ್ಟು
    ನೀರು – ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ಆಲೂಗೆಡ್ಡೆಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ.
    * ಬೆಂದ ಬಳಿಕ ಅದನ್ನು ಬೇರೆ ಪಾತ್ರೆಗೆ ವರ್ಗಾಯಿಸಿ ಚೆನ್ನಾಗಿ ಕಿವುಚಿಕೊಳ್ಳಿ.
    * ಅದಕ್ಕೆ ಹೆಚ್ಚಿದ ಪುದಿನಾ ಎಲೆ, ಹಸಿರು ಮೆಣಸು, ಜೀರಾ ಪೌಡರ್, ಉಪ್ಪು ಮತ್ತು ಸ್ವಲ್ಪ ನಿಂಬೆ ರಸವನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡ ಬಳಿಕ ಅದನ್ನು ಚಿಕ್ಕ ಚಿಕ್ಕ ಕಡ್ಡಿಗಳ ರೀತಿಯಲ್ಲಿ ಮಾಡಿಕೊಳ್ಳಿ. ಅಥವಾ ಉಂಡೆಗಳನ್ನಾಗಿಯೂ ಮಾಡಿಕೊಳ್ಳಬಹುದು.
    * ಬಳಿಕ ಒಂದು ಪಾತ್ರೆಗೆ ಮೈದಾ ಹಿಟ್ಟು ಮತ್ತು ನೀರನ್ನು ಹಾಕಿಕೊಂಡು ದಪ್ಪ ಪೇಸ್ಟ್ ರೀತಿ ಮಾಡಿಕೊಳ್ಳಿ. ಬಳಿಕ ತಯಾರಿಸಿದ್ದ ಕಡ್ಡಿಗಳು ಅಥವಾ ಬಾಲ್‌ಗಳನ್ನು ಪೇಸ್ಟ್‌ನಲ್ಲಿ ಅದ್ದಿಕೊಂಡು ಪುಡಿಮಾಡಿಕೊಂಡ ಪೋಹಾದ ಮೇಲೆ ಒಂದು ಬಾರಿ ಉರುಳಿಸಿ.
    * ಈಗ ಒಂದು ಬಾಣಾಲೆಯಲ್ಲಿ ಎಣ್ಣೆ ಬಿಸಿಗಿಟ್ಟು ಅದರಲ್ಲಿ ಈ ಬಾಲ್‌ಗಳನ್ನು ಅಥವಾ ಕಡ್ಡಿಗಳನ್ನು ಹಾಕಿಕೊಂಡು ಡೀಪ್ ಫ್ರೈ ಮಾಡಿಕೊಳ್ಳಬೇಕು.
    * ಬಳಿಕ ಇದನ್ನು ಎಣ್ಣೆಯಿಂದ ತೆಗೆದು ಒಂದು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ತಿನ್ನಲು ಕೊಡಿ. ಇದನ್ನೂ ಓದಿ: ರಾಜಸ್ಥಾನಿ ಲಾಲ್ ಮಾಸ್ ಮಾಡೋದು ಹೇಗೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಹಿ ಸಿಹಿ ನೆಲ್ಲಿಕಾಯಿ ಮುರಬ್ಬಾ ಈ ರೀತಿ ಮಾಡಿ

    ಸಿಹಿ ಸಿಹಿ ನೆಲ್ಲಿಕಾಯಿ ಮುರಬ್ಬಾ ಈ ರೀತಿ ಮಾಡಿ

    ಸಿಹಿ ಸಿಹಿ ನೆಲ್ಲಿಕಾಯಿಯ ಮುರಬ್ಬಾ ರಾಜಸ್ಥಾನದ ಸಾಂಪ್ರದಾಯಿಕ ರೆಸಿಪಿ. ಆಮ್ಲಾ ಮುರಬ್ಬಾ ಎನ್ನಲಾಗುವ ಇದನ್ನು ಯಾವಾಗ ಬೇಕೆನಿಸಿದರೂ ಒಂದು ಚಮಚದಷ್ಟು ಸವಿಯಬಹುದು. ಊಟದೊಂದಿಗೂ ಇದು ಸಖತ್ತಾಗಿರುತ್ತದೆ. ಇದನ್ನು ತಯಾರಿಸಲು ಸ್ವಲ್ಪ ಹೆಚ್ಚಿನ ತಾಳ್ಮೆ ಬೇಕು. ಆದರೆ ಮಾಡುವ ವಿಧಾನ ತುಂಬಾ ಸಿಂಪಲ್ ಆಗಿದೆ. ಸಿಹಿ ಸಿಹಿ ನೆಲ್ಲಿಕಾಯಿ ಮುರಬ್ಬಾ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ನೆಲ್ಲಿಕಾಯಿ – 20
    ಸಕ್ಕರೆ – ಎರಡೂವರೆ ಕಪ್
    ಏಲಕ್ಕಿ ಪುಡಿ – ಕಾಲು ಟೀಸ್ಪೂನ್
    ಕೇಸರಿ ಎಳೆ – ಚಿಟಿಕೆ

    ಮಾಡುವ ವಿಧಾನ:
    * ಮೊದಲಿಗೆ ಒಂದು ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ಸಾಕಷ್ಟು ನೀರು ಹಾಕಿ ಶುಚಿಗೊಳಿಸಿದ ನೆಲ್ಲಿಕಾಯಿಗಳನ್ನು ಅದರಲ್ಲಿ ಹಾಕಿ ಸುಮಾರು 10 ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಕುದಿಸಿಕೊಳ್ಳಿ.
    * ಬಳಿಕ ನೀರನ್ನು ಬಸಿದು ಪಕ್ಕಕ್ಕಿಡಿ.
    * ಈಗ ಒಂದು ನಾನ್‌ಸ್ಟಿಕ್ ಪ್ಯಾನ್ ತೆಗೆದುಕೊಂಡು ಅದಕ್ಕೆ ಸಕ್ಕರೆ ಹಾಗೂ 3 ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಮಧ್ಯಮ ಉರಿಯಲ್ಲಿ ಸುಮಾರು 8 ನಿಮಿಷಗಳ ಕಾಲ ಆಗಾಗ ಕೈಯಾಡಿಸುತ್ತಾ ಕುದಿಸಿಕೊಳ್ಳಿ. ಇದನ್ನೂ ಓದಿ: ಸಿಹಿಯಾದ ಶುಂಠಿ ಬರ್ಫಿ ಸವಿದು ಆನಂದಿಸಿ

    * ಬಳಿಕ ನೆಲ್ಲಿಕಾಯಿಗಳನ್ನು ಅದರಲ್ಲಿ ಹಾಕಿ ಮಿಶ್ರಣ ಮಾಡಿ ಹಾಗೂ ಕಡಿಮೆ ಉರಿಯಲ್ಲಿ ಸುಮಾರು 30 ನಿಮಿಷ ಬೇಯಿಸಿಕೊಳ್ಳಿ. ನೆಲ್ಲಿಕಾಯಿ ಮೆತ್ತಗಾಗುವವರೆಗೆ ಆಗಾಗ ಕೈಯಾಡಿಸುತ್ತಾ ಬೇಯಿಸಿ.
    * ಈಗ ಪಾತ್ರೆಗೆ ಮುಚ್ಚಳ ಮುಚ್ಚಿ, ಸುಮಾರು 2 ದಿನಗಳ ವರೆಗೆ ಹಾಗೇ ಬಿಡಿ.
    * ಈಗ ಸಕ್ಕರೆ ಪಾಕ ಹಾಗೂ ನೆಲ್ಲಿಕಾಯಿಗಳನ್ನು ಬೇರ್ಪಡಿಸಿ, ಎರಡನ್ನೂ ಬೇರೆ ಬೇರೆ ಪಾತ್ರೆಯಲ್ಲಿ ಸಂಗ್ರಹಿಸಿ.
    * ಸಕ್ಕರೆ ಪಾಕವನ್ನು ನಾನ್‌ಸ್ಟಿಕ್ ಪ್ಯಾನ್‌ಗೆ ಹಾಕಿ, ಅದಕ್ಕೆ ಏಲಕ್ಕಿ ಪುಡಿ ಹಾಗೂ ಕೇಸರಿ ಎಳೆಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಹೆಚ್ಚಿನ ಉರಿಯಲ್ಲಿ ಸುಮಾರು 8 ನಿಮಿಷ ಆಗಾಗ ಕೈಯಾಡಿಸುತ್ತಾ ಬೇಯಿಸಿಕೊಳ್ಳಿ.
    * ಈಗ ಬೇರ್ಪಡಿಸಿಟ್ಟಿದ್ದ ನೆಲ್ಲಿಕಾಯಿಗಳನ್ನು ಅದಕ್ಕೆ ಸೇರಿಸಿ, ಮಧ್ಯಮ ಉರಿಯಲ್ಲಿ ಸುಮಾರು 5 ನಿಮಿಷ ಬೇಯಿಸಿ.
    * ಈಗ ಅದನ್ನು ತಣ್ಣಗಾಗಲು ಬಿಡಿ. ಬಳಿಕ ಗಾಜಿನ ಬಾಟಲಿಯಲ್ಲಿ ಶೇಖರಿಸಿಡಿ.
    * ಇದೀಗ ಸಿಹಿ ಸಿಹಿ ಮುರಬ್ಬಾ ಸವಿಯಲು ಸಿದ್ಧವಾಗಿದ್ದು, ಬೇಕೆನಿಸಿದಾಗ ಚಪ್ಪರಿಸಬಹುದು. ಇದನ್ನೂ ಓದಿ: ಸವಿಯಿರಿ ಆರೋಗ್ಯಕರ ಬಾಳೆಹಣ್ಣಿನ ಖೀರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೀಗೆ ಮಾಡಿ ರುಚಿರುಚಿಯಾದ ಮಸಾಲಾ ಸ್ವೀಟ್ ಕಾರ್ನ್ ವಡಾ

    ಹೀಗೆ ಮಾಡಿ ರುಚಿರುಚಿಯಾದ ಮಸಾಲಾ ಸ್ವೀಟ್ ಕಾರ್ನ್ ವಡಾ

    ಳೆಗಾಲದ ಈ ದಿನಗಳಲ್ಲಿ ಒಂದು ಕಪ್ ಚಹಾ ಜೊತೆ ಸವಿಯಲು ಏನಾದರೂ ಬಿಸಿಬಿಸಿಯಾದ ಖಾದ್ಯ ಇದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ? ಚುಮುಚುಮು ಚಳಿಗೆ ನಾವಿಂದು ರುಚಿರುಚಿಯಾದ ರೆಸಿಪಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಮಾಡೋಕೆ ತುಂಬಾ ಸುಲಭವಾಗಿದೆ ಮಸಾಲಾ ಸ್ವೀಟ್ ಕಾರ್ನ್ ವಡಾ. ಹಾಗಿದ್ರೆ ಗರಿಗರಿಯಾದ ಈ ರೆಸಿಪಿ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಒರಟಾಗಿ ಪುಡಿ ಮಾಡಿದ ಸ್ವೀಟ್ ಕಾರ್ನ್ – 1 ಕಪ್
    ಕಡಲೆ ಹಿಟ್ಟು – ಅರ್ಧ ಕಪ್
    ಅಕ್ಕಿ ಹಿಟ್ಟು – ಕಾಲು ಕಪ್
    ಸಣ್ಣಗೆ ಹೆಚ್ಚಿದ ಈರುಳ್ಳಿ – ಕಾಲು ಕಪ್
    ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಮ್ – ಕಾಲು ಕಪ್
    ಬೆಳ್ಳುಳ್ಳಿ ಪೇಸ್ಟ್ – ಕಾಲು ಟೀಸ್ಪೂನ್
    ಮೆಣಸಿನ ಪುಡಿ – 1 ಟೀಸ್ಪೂನ್
    ಅರಿಶಿನ ಪುಡಿ – ಕಾಲು ಟೀಸ್ಪೂನ್
    ನಿಂಬೆ ರಸ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ಡೀಪ್ ಫ್ರೈಗೆ ಬೇಕಾಗುವಷ್ಟು
    ಚಾಟ್ ಮಸಾಲಾ – 1 ಟೀಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಬೌಲ್‌ನಲ್ಲಿ ಕಾರ್ನ್, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಈರುಳ್ಳಿ, ಕ್ಯಾಪ್ಸಿಕಮ್, ಬೆಳ್ಳುಳ್ಳಿ, ಮೆಣಸಿನ ಪುಡಿ, ಅರಿಶಿನ ಪುಡಿ, ನಿಂಬೆ ರಸ ಹಾಗೂ ಉಪ್ಪು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
    * ಹಿಟ್ಟಿಗೆ ಸಣ್ಣ ಸಣ್ಣ ವಡಾಗಳ ರೂಪವನ್ನು ನೀಡಿ.
    * ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ವಡಾಗಳನ್ನು ಬಿಟ್ಟು, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಎರಡೂ ಬದಿ ಚೆನ್ನಾಗಿ ಹುರಿದುಕೊಳ್ಳಿ.
    * ಬಳಿಕ ಅವುಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
    * ಕೊನೆಯಲ್ಲಿ ಚಾಟ್ ಮಸಾಲಾವನ್ನು ವಡಾಗಳ ಮೇಲೆ ಸಿಂಪಡಿಸಿ.
    * ಇದೀಗ ರುಚಿರುಚಿಯಾದ ಮಸಾಲಾ ಸ್ವೀಟ್ ಕಾರ್ನ್ ವಡಾ ತಯಾರಾಗಿದ್ದು, ನಿಮ್ಮಿಷ್ಟದ ಸಾಸ್‌ನೊಂದಿಗೆ ಸವಿಯಿರಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜಸ್ಥಾನಿ ಲಾಲ್ ಮಾಸ್ ಮಾಡೋದು ಹೇಗೆ?

    ರಾಜಸ್ಥಾನಿ ಲಾಲ್ ಮಾಸ್ ಮಾಡೋದು ಹೇಗೆ?

    ಲಾಲ್ ಮಾಸ್ ರಾಜಸ್ಥಾನದ ಅತ್ಯಂತ ಜನಪ್ರಿಯ ಮಾಂಸಾಹಾರಿ ರೆಸಿಪಿ. ಸಾಂಪ್ರದಾಯಿಕವಾಗಿ ಲಾಲ್ ಮಾಸ್ ಅನ್ನು ಮಟನ್, ಮೊಸರು ಹಾಗೂ ರಾಜಸ್ಥಾನದ ವಿಶೇಷ ಕೆಂಪು ಮಥಾನಿಯಾ ಮೆಣಸಿನಕಾಯಿಗಳನ್ನು ಬಳಸಿ ತಯಾರಿಸಲಾಗುತ್ತದೆ. ನಾವಿಂದು ರಾಜಸ್ಥಾನಿ ಲಾಲ್ ಮಾಸ್ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಮಟನ್ – 500 ಗ್ರಾಂ
    ಮೊಸರು – 1 ಕಪ್
    ರಾಜಸ್ಥಾನಿ ಕೆಂಪು ಮಥಾನಿಯಾ ಕೆಂಪು ಮೆಣಸಿನಕಾಯಿ – 10 + 5 (ಯಾವುದೇ ಇತರ ಒಣ ಮೆಣಸಿನಕಾಯಿ ಬಳಸಬಹುದು)
    ಹೆಚ್ಚಿದ ಈರುಳ್ಳಿ – 2
    ಶುಂಠಿ ಪೇಸ್ಟ್ – 2 ಟೀಸ್ಪೂನ್
    ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
    ಸಾಸಿವೆ ಎಣ್ಣೆ – ಅರ್ಧ ಕಪ್
    ದಾಲ್ಚಿನಿ ಎಲೆ – 2
    ಲವಂಗ – 5
    ಏಲಕ್ಕಿ – 4
    ಅರಿಶಿನ ಪುಡಿ – ಅರ್ಧ ಟೀಸ್ಪೂನ್
    ಕೊತ್ತಂಬರಿ – 2 ಟೀಸ್ಪೂನ್
    ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಹೆಚ್ಚಿದ ಬೆಳ್ಳುಳ್ಳಿ – 2 ಟೀಸ್ಪೂನ್
    ತುಪ್ಪ – 2 ಟೀಸ್ಪೂನ್
    ಇದ್ದಿಲು – 1 ಇದನ್ನೂ ಓದಿ: ಮೊಘಲ್ ಸ್ಟೈಲ್‌ನ ಮಟನ್ ಕಡೈ ಚಪ್ಪರಿಸಿ ನೋಡಿ

    ಮಾಡುವ ವಿಧಾನ:
    * ಮೊದಲಿಗೆ 10 ಕೆಂಪು ಮೆಣಸಿನಕಾಯಿಗಳನ್ನು ಬೆಚ್ಚಗಿನ ನೀರಿನಲ್ಲಿ 30 ನಿಮಿಷಗಳ ಕಾಲ ನೆನೆಸಿ, ನಂತರ ನೀರನ್ನು ಸೋಸಿ ಮಿಕ್ಸರ್ ಜಾರ್‌ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
    * ಬಾಣಲೆಯಲ್ಲಿ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಕೊತ್ತಂಬರಿಯನ್ನು ಹುರಿದು ಪುಡಿ ಮಾಡಿಕೊಳ್ಳಿ.
    * ದಾಲ್ಚಿನ್ನಿ ಎಲೆ, ಏಲಕ್ಕಿ ಮತ್ತು ಲವಂಗವನ್ನು ಎಣ್ಣೆಯಲ್ಲಿ ಕರಿದುಕೊಳ್ಳಿ. ಬಳಿಕ ಈರುಳ್ಳಿ ಸೇರಿಸಿ, ತಿಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
    * ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಒಂದು ನಿಮಿಷ ಬೆರೆಸಿ.
    * ಶುಂಠಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
    * ಬಳಿಕ ಮಟನ್ ಸೇರಿಸಿ ಮಿಶ್ರಣ ಮಾಡಿ ಮತ್ತು ಬೇಯಿಸಿ.
    * ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ ಮಧ್ಯಮ ಉರಿಯಲ್ಲಿ 5 ನಿಮಿಷ ನಿರಂತರವಾಗಿ ಬೆರೆಸಿಕೊಳ್ಳಿ.
    * ನಂತರ ಮುಚ್ಚಳವನ್ನು ಮುಚ್ಚಿ ಮತ್ತು ಕಡಿಮೆ ಉರಿಯಲ್ಲಿ 15 ನಿಮಿಷ ಬೇಯಿಸಿ. ನಡುವೆ ಬೆರೆಸಿಕೊಳ್ಳಿ.
    * 2 ಕಪ್ ಬೆಚ್ಚಗಿನ ನೀರನ್ನು ಸುರಿದು, ಕುದಿಯಲು ಬಿಡಿ. ನೀರು ಕುದಿಯಲು ಪ್ರಾರಂಭಿಸಿದಾಗ ಮುಚ್ಚಳವನ್ನು ಮುಚ್ಚಿ 40 ರಿಂದ 45 ನಿಮಿಷ ಬೇಯಿಸಿ.
    * ಬಳಿಕ ಮುಚ್ಚಳವನ್ನು ತೆಗೆದು ಬೆರೆಸಿ ಮತ್ತು ಬಟ್ಟಲಿಗೆ ವರ್ಗಾಯಿಸಿ.
    * ಗ್ಯಾಸ್ ಸ್ಟೌವ್ ಮೇಲೆ 5 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಇದ್ದಿಲುಗಳನ್ನು ಕಾಯಿಸಿಕೊಳ್ಳಿ.
    * ಸಣ್ಣ ಪ್ಯಾನ್‌ನಲ್ಲಿ ತುಪ್ಪವನ್ನು ಬಿಸಿ ಮಾಡಿ, 5 ಒಣ ಕೆಂಪು ಮೆಣಸಿನಕಾಯಿ, ಕಾಶ್ಮೀರಿ ಕೆಂಪು ಮೆಣಸಿನ ಪುಡಿ ಮತ್ತು ಕತ್ತರಿಸಿದ ಬೆಳ್ಳುಳ್ಳಿ ಸೇರಿಸಿ. ಅದು ಹುರಿಯಲು ಪ್ರಾರಂಭಿಸಿದಾಗ ಮಾಂಸದ ಕರಿ ಬಟ್ಟಲಿಗೆ ಸೇರಿಸಿ.
    * ಉಕ್ಕಿನ ಬಟ್ಟಲಿನಲ್ಲಿ ಕಾಯಿಸಿದ ಇದ್ದಿಲನ್ನು ಹಾಕಿ, ಬಟ್ಟಲನ್ನು ಕರಿ ಬಟ್ಟಲಿನಲ್ಲಿ ಇಡಿ. ಮೇಲಿನಿಂದ ತುಪ್ಪವನ್ನು ಸುರಿಯಿರಿ. ಹೊಗೆ ಏರಲು ಪ್ರಾರಂಭಿಸಿದಾಗ. ಬೌಲ್ ಅನ್ನು ಮುಚ್ಚಳದಿಂದ ಮುಚ್ಚಿ ಮತ್ತು ಮುಚ್ಚಳದ ಮೇಲೆ ಭಾರವಾದ ವಸ್ತುವನ್ನು ಇಡಿ.
    * ಒಂದೆರಡು ನಿಮಿಷ ಹಾಗೇ ಬಿಟ್ಟು ಬಳಿಕ ತೆರೆದರೆ ರಾಜಸ್ಥಾನಿ ಲಾಲ್ ಮಾಸ್ ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಈರುಳ್ಳಿ, ಟೊಮೆಟೋ ಯಾವ್ದೂ ಬೇಡ – ಹೀಗೆ ಮಾಡಿ ರುಚಿಕರ ಚಿಕನ್ ಫ್ರೈ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಹಿಯಾದ ಶುಂಠಿ ಬರ್ಫಿ ಸವಿದು ಆನಂದಿಸಿ

    ಸಿಹಿಯಾದ ಶುಂಠಿ ಬರ್ಫಿ ಸವಿದು ಆನಂದಿಸಿ

    ಶುಂಠಿ ಹಲವು ಔಷಧೀಯ ಗುಣಗಳನ್ನು ಒಳಗೊಂಡಿದೆ. ಶುಂಠಿಯನ್ನು ಸೇವಿಸುವುದರಿಂದ ಶೀತ, ವಾಕರಿಕೆ, ಸಂಧಿವಾತ, ಮೈಗ್ರೇನ್ ಮತ್ತು ಅಧಿಕ ರಕ್ತದೊತ್ತಡದಂತಹ ಹಲವಾರು ಕಾಯಿಲೆಗಳನ್ನು ಹತೋಟಿಗೆ ತರಬಹುದು. ಆದ್ದರಿಂದಲೇ ಈ ರೀತಿಯ ಕಾಯಿಲೆಗಳ ಚಿಕಿತ್ಸೆಗಳಲ್ಲಿ ಶುಂಠಿಯನ್ನು ಬಳಸಲಾಗುತ್ತದೆ. ಶುಂಠಿ ತುಂಬಾ ಖಾರವನ್ನು ಹೊಂದಿರುವುದರಿಂದ ಅದನ್ನು ಹಾಗೇ ತಿನ್ನುವುದು ಕಷ್ಟ. ಆದ್ದರಿಂದ ಇವತ್ತಿನ ನಮ್ಮ ರೆಸಿಪಿಯಲ್ಲಿ ಸಿಹಿಯಾದ ಶುಂಠಿ ಬರ್ಫಿಯನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಸಖತ್ ಕ್ರಂಚಿ ಟೋಫು ನಗ್ಗೆಟ್ಸ್ ರೆಸಿಪಿ

    ಬೇಕಾಗುವ ಸಾಮಗ್ರಿಗಳು:
    ಉಪ್ಪು – 1 ಚಮಚ
    ಸಕ್ಕರೆ – 2 ಕಪ್
    ಹಾಲು – 2 ಕಪ್
    ಏಲಕ್ಕಿ ಪೌಡರ್ – 1 ಚಮಚ
    ತುಪ್ಪ – 4 ಚಮಚ
    ಶುಂಠಿ -200 ಗ್ರಾಂ

    ಮಾಡುವ ವಿಧಾನ:
    * ಮೊದಲಿಗೆ ಶುಂಠಿಯನ್ನು ಚೆನ್ನಾಗಿ ತೊಳೆದು ಒಂದು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
    * ಬಳಿಕ ಒಂದು ಬಾಣಾಲೆಯಲ್ಲಿ ತುಪ್ಪ ಹಾಕಿ ಬಿಸಿಗಿಡಿ. ಬಿಸಿಯಾದ ಬಳಿಕ ಅದಕ್ಕೆ ರುಬ್ಬಿಕೊಂಡ ಶುಂಠಿ ಪೇಸ್ಟ್ ಅನ್ನು ಹಾಕಿಕೊಂಡು ಅದರ ಹಸಿವಾಸನೆ ಹೋಗಿ ಎಣ್ಣೆ ಬಿಟ್ಟುಕೊಳ್ಳುವವರೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
    * ಈಗ ಅದಕ್ಕೆ ಸಕ್ಕರೆ ಸೇರಿಸಿ ಶುಂಠಿ ಪೇಸ್ಟ್ನೊಂದಿಗೆ ಹೊಂದಿಕೊಳ್ಳುವಂತೆ 10ರಿಂದ 12 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಿ.
    * ಈ ಪಾಕ ಚೆನ್ನಾಗಿ ಹೊಂದಿಕೊಂಡು ದಪ್ಪವಾಗಲು ಪ್ರಾರಂಭವಾದ ಬಳಿಕ ಅದಕ್ಕೆ ಅರ್ಧ ಕಪ್ ಹಾಲನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡುತ್ತಲೇ ಇರಬೇಕು. ಇಲ್ಲವಾದಲ್ಲಿ ತಳ ಹಿಡಿಯುವ ಸಾಧ್ಯತೆಗಳಿವೆ.
    * ಬಳಿಕ ಇದಕ್ಕೆ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಮತ್ತು ಏಲಕ್ಕಿ ಪೌಡರ್ ಅನ್ನು ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ.
    * ಎಲ್ಲಾ ಪದಾರ್ಥಗಳು ಚೆನ್ನಾಗಿ ಹೊಂದಿಕೊಂಡ ಬಳಿಕ ಅದನ್ನು ಒಂದು ಅಗಲವಾದ ಪ್ಲೇಟ್‌ಗೆ ವರ್ಗಾಯಿಸಿಕೊಂಡು ಸಮವಾಗಿ ಹರಡಿಕೊಳ್ಳಿ.
    * ನಂತರ ಈ ಮಿಶ್ರಣವನ್ನು 20 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ನಿಮಿಗಿಷ್ಟವಾದ ಆಕಾರದಲ್ಲಿ ಕತ್ತರಿಸಿ ಸವಿಯಲು ಕೊಡಿ. ಇದನ್ನೂ ಓದಿ: ಸವಿಯಿರಿ ಆರೋಗ್ಯಕರ ಬಾಳೆಹಣ್ಣಿನ ಖೀರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]