Tag: recipe

  • ರುಚಿರುಚಿಯಾದ ಬಾಂಬೆ ಬಟರ್ ಚಿಕನ್ ಹೀಗೆ ಮಾಡಿ

    ರುಚಿರುಚಿಯಾದ ಬಾಂಬೆ ಬಟರ್ ಚಿಕನ್ ಹೀಗೆ ಮಾಡಿ

    ಟರ್ ಚಿಕನ್ ಎಂದರೆ ಯಾವ ನಾನ್‌ವೆಜ್ ಪ್ರಿಯರ ಬಾಯಲ್ಲಿ ನೀರು ಬರದೇ ಇರಲ್ಲ ಹೇಳಿ? ಭಾರತದಾದ್ಯಂತ ಈ ಚಿಕನ್ ರೆಸಿಪಿ ಅತ್ಯಂತ ಫೇಮಸ್ ಆಗಿದ್ದರೂ ಇದರ ರುಚಿಗೆ ಮಾರುಹೋಗಿ ಹೆಸರನ್ನು ಯಾವಾಗಲೂ ನೆನಪಿಟ್ಟುಕೊಳ್ಳೊ ವಿದೇಶಿಗರೂ ಇದ್ದಾರೆ. ನಾವಿಂದು ಬಾಂಬೆ ಸ್ಟೈಲ್ ಬಟರ್ ಚಿಕನ್ ಮಾಡೋದು ಹೇಗೆಂದು ಹೇಳಿಕೊಡಲಿದ್ದೇವೆ. ಈ ರೆಸಿಪಿಯನ್ನು ರೆಸ್ಟೊರೆಂಟ್‌ಗಳಲ್ಲೇ ಏಕೆ, ಮನೆಯಲ್ಲೂ ಮಾಡಿ ಸವಿದು ನೋಡಿ.

    ಬೇಕಾಗುವ ಪದಾರ್ಥಗಳು:
    ಬೆಣ್ಣೆ – ಅರ್ಧ ಕಪ್
    ಕತ್ತರಿಸಿದ ಈರುಳ್ಳಿ – 2
    ಕೊಚ್ಚಿದ ಬೆಳ್ಳುಳ್ಳಿ – 3
    ಚರ್ಮ, ಮೂಳೆ ರಹಿತ ಚಿಕನ್ ತುಂಡುಗಳು – 1 ಕೆಜಿ
    ಉಪ್ಪು – ಅರ್ಧ ಟೀಸ್ಪೂನ್
    ಕರಿಮೆಣಸಿನಪುಡಿ – ಅರ್ಧ ಟೀಸ್ಪೂನ್
    ಭಾರತೀಯ ಕರಿ ಪೇಸ್ಟ್ – 4 ಟೀಸ್ಪೂನ್
    ಕೊಚ್ಚಿದ ಶುಂಠಿ – 2 ಟೀಸ್ಪೂನ್
    ದಾಲ್ಚಿನ್ನಿ ಪುಡಿ – 1 ಟೀಸ್ಪೂನ್
    ಕತ್ತರಿಸಿದ ಟೊಮೆಟೋ – 1
    ಹುಳಿ ಕ್ರೀಮ್ – ಕಾಲು ಕಪ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಕಾಲು ಕಪ್
    ನಿಂಬೆ ಹಣ್ಣು – 1 ಇದನ್ನೂ ಓದಿ: ಈರುಳ್ಳಿ, ಮೊಟ್ಟೆಯ ಸಿಂಪಲ್ ಪಕೋಡಾ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಕಡಾಯಿಯನ್ನು ಬಿಸಿಗಿಟ್ಟು, ಮಧ್ಯಮ ಉರಿಯಲ್ಲಿ ಅರ್ಧದಷ್ಟು ಬೆಣ್ಣೆಯನ್ನು ಕರಗಿಸಿ.
    * ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಸೇರಿಸಿ ಆಗಾಗ ಕೈಯಾಡಿಸುತ್ತಾ 5 ನಿಮಿಷ ಹುರಿಯಿರಿ.
    * ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿದ ಚಿಕನ್ ಅನ್ನು ಅದಕ್ಕೆ ಹಾಕಿ, ಉಪ್ಪು ಮತ್ತು ಕರಿಮೆಣಸನ್ನು ಸಿಂಪಡಿಸಿ ಉರಿಯನ್ನು ಹೆಚ್ಚಿಸಿ ಚಿಕನ್ ಕಂದು ಬಣ್ಣಕ್ಕೆ ತಿರುವುವವರೆಗೆ ಬೇಯಿಸಿ.
    * ಬಳಿಕ ಕರಿಬೇವು, ಶುಂಠಿ, ದಾಲ್ಚಿನ್ನಿ ಸೇರಿಸಿ 30 ಸೆಕೆಂಡುಗಳ ಕಾಲ ಬೆರೆಸಿ.
    * ಬಳಿಕ ಟೊಮೆಟೋ ಹಾಗೂ ಉಳಿದ ಬೆಣ್ಣೆಯನ್ನು ಸೇರಿಸಿ ಕುದಿಸಿಕೊಳ್ಳಿ.
    * ಉರಿಯನ್ನು ಕಡಿಮೆ ಮಾಡಿ ಮುಚ್ಚಳ ಮುಚ್ಚಿ, 20 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ನಂತರ ಹುಳಿ ಕ್ರೀಮ್ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ.
    * ಉರಿಯನ್ನು ಆಫ್ ಮಾಡಿ, ನಿಂಬೆ ರಸವನ್ನು ಸೇರಿಸಿ.
    * ಇದೀಗ ಬಾಂಬೆ ಬಟರ್ ಚಿಕನ್ ತಯಾರಾಗಿದ್ದು ಬಿಸಿಬಿಸಿಯಾಗಿ ಅನ್ನ ಅಥವಾ ಚಪಾತಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಬಾದಾಮಿ ಗ್ರೇವಿಯ ಚಿಕನ್ – ಯಮ್ಮೀ ಫ್ಲೇವರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರುಚಿರುಚಿಯಾಗಿ ಮಾಡಿ ಚಿಲ್ಲಿ ಗಾರ್ಲಿಕ್ ಪರೋಟ

    ರುಚಿರುಚಿಯಾಗಿ ಮಾಡಿ ಚಿಲ್ಲಿ ಗಾರ್ಲಿಕ್ ಪರೋಟ

    ರೋಟ ಸಾಮಾನ್ಯವಾಗಿ ಎಲ್ಲರೂ ತಿನ್ನುತ್ತಾರೆ. ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟಕ್ಕೂ ಇದನ್ನು ಸೇವಿಸಬಹುದಾಗಿದೆ. ಬೆಣ್ಣೆಯೊಂದಿಗೆ ಬಿಸಿಬಿಸಿಯಾಗಿ ಇದನ್ನು ತಿಂದರೆ ಇನ್ನೂ ಹೆಚ್ಚಿನ ರುಚಿಯನ್ನು ನೀಡುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಚಿಲ್ಲಿ ಗಾರ್ಲಿಕ್ ಪರೋಟ ಯಾವ ರೀತಿಯಾಗಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಅತ್ಯಂತ ಸುಲಭವಾಗಿ ಮನೆಯಲ್ಲಿಯೇ ಹೇಗೆ ತಯಾರಿಸಬಹುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಮೈದಾ ಬೇಡ – 5 ಪದಾರ್ಥಗಳನ್ನು ಬಳಸಿ ಮಾಡಿ ಪ್ರೊಟೀನ್‌ಯುಕ್ತ ಪ್ಯಾನ್‌ಕೇಕ್

    ಬೇಕಾಗುವ ಸಾಮಗ್ರಿಗಳು:
    ಗೋಧಿ ಹಿಟ್ಟು – ಅರ್ಧ ಕಪ್
    ಬೆಣ್ಣೆ- 1 ಚಮಚ
    ತುರಿದ ಬೆಳ್ಳುಳ್ಳಿ – 1 ಚಮಚ
    ಉಪ್ಪು – ರುಚಿಗೆ ತಕ್ಕಷ್ಟು
    ಚಿಲ್ಲಿ ಫ್ಲೇಕ್ಸ್ – 1 ಚಮಚ
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
    ನೀರು – 1 ಕಪ್
    ಹೆಚ್ಚಿದ ಹಸಿರುಮೆಣಸು – ಅರ್ಧ ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬೌಲ್‌ನಲ್ಲಿ ಬೆಣ್ಣೆ, ತುರಿದ ಬೆಳ್ಳುಳ್ಳಿ, ಚಿಲ್ಲಿ ಫ್ಲೇಕ್ಸ್, ಹೆಚ್ಚಿದ ಹಸಿರುಮೆಣಸು ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಬಳಿಕ ಇನ್ನೊಂದು ಬೌಲ್‌ನಲ್ಲಿ ಗೋಧಿ ಹಿಟ್ಟು ಮತ್ತು ಉಪ್ಪನ್ನು ಹಾಕಿಕೊಂಡು ಅದಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸಿಕೊಂಡು ಚಪಾತಿ ಹಿಟ್ಟಿನ ರೀತಿಯಲ್ಲಿ ಕಲಸಿಕೊಳ್ಳಿ.
    * ಈಗ ಬೆಣ್ಣೆ ಹಾಕಿದ್ದ ಮಿಶ್ರಣವನ್ನು ಈ ಹಿಟ್ಟಿನೊಂದಿಗೆ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
    * ಈಗ ಇದನ್ನು ಚಪಾತಿ ಹಿಟ್ಟಿನ ಉಂಡೆಗಳನ್ನಾಗಿ ಮಾಡಿಕೊಂಡು ಸ್ವಲ್ಪ ದಪ್ಪಕ್ಕೆ ಲಟ್ಟಿಸಿಕೊಳ್ಳಬೇಕು. ಇದೇ ರೀತಿ ಎಲ್ಲವನ್ನೂ ಮಾಡಿಕೊಳ್ಳಿ.
    * ನಂತರ ಇಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಸ್ವಲ್ಪ ಬೆಣ್ಣೆ ಹಾಕಿ. ಬೆಣ್ಣೆ ಕರಗಿದ ಬಳಿಕ ಪರೋಟವನ್ನು ಅದರಲ್ಲಿ ಹಾಕಿ ಎರಡೂ ಬದಿ ಬೇಯಿಸಿಕೊಳ್ಳಿ.
    * ಪರೋಟ ಬೆಂದ ಬಳಿಕ ಅದನ್ನು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ಬಿಸಿಬಿಸಿಯಾಗಿ ತಿನ್ನಲು ಕೊಡಿ. ಇದನ್ನೂ ಓದಿ: ಟ್ಯಾಂಗಿ ಫ್ಲೇವರ್ – ಮೊಳಕೆ ಕಾಳಿನ ಚಾಟ್ ರೆಸಿಪಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೈದಾ ಬೇಡ – 5 ಪದಾರ್ಥಗಳನ್ನು ಬಳಸಿ ಮಾಡಿ ಪ್ರೊಟೀನ್‌ಯುಕ್ತ ಪ್ಯಾನ್‌ಕೇಕ್

    ಮೈದಾ ಬೇಡ – 5 ಪದಾರ್ಥಗಳನ್ನು ಬಳಸಿ ಮಾಡಿ ಪ್ರೊಟೀನ್‌ಯುಕ್ತ ಪ್ಯಾನ್‌ಕೇಕ್

    ಟಾಫಟ್ ಹಾಗೂ ಸುಲಭವಾಗಿ ಮಾಡಬಹುದಾಗ ಉಪಹಾರಗಳಲ್ಲಿ ಪ್ಯಾನ್‌ಕೇಕ್ ಒಂದು. ಆದರೆ ಇದಕ್ಕೆ ಹೆಚ್ಚಿನವರು ಮೈದಾ ಬಳಸಿ ಮಾಡುತ್ತಾರೆ ಎನ್ನೋದು ಬೇಸರದ ವಿಚಾರ. ನಾವಿಂದು ಮೈದಾ ಅಥವಾ ಯಾವುದೇ ಹಿಟ್ಟನ್ನು ಬಳಸದೆಯೇ ಪ್ರೊಟೀನ್‌ಯುಕ್ತ ಪ್ಯಾನ್‌ಕೇಕ್ ಹೇಗೆ ಮಾಡೋದು ಎಂದು ಹೇಳಿಕೊಡುತ್ತೇವೆ. ಇದನ್ನು ತಯಾರಿಸಲು ಕೇವಲ 5 ಪದಾರ್ಥಗಳಷ್ಟೇ ಸಾಕು. ಮೈದಾ ರಹಿತ, ಪ್ರೊಟೀನ್‌ಯುಕ್ತ ಪ್ಯಾನ್‌ಕೇಕ್ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಓಟ್ಸ್ – 1 ಕಪ್
    ಕಾಟೇಜ್ ಚೀಸ್ (ಪನೀರ್)‌ – 1 ಕಪ್
    ಪೀನಟ್ ಬಟರ್ – ಅರ್ಧ ಕಪ್
    ಹಾಲು – ಅರ್ಧ ಕಪ್
    ಮೊಟ್ಟೆ – 2 ಇದನ್ನೂ ಓದಿ: ಟ್ಯಾಂಗಿ ಫ್ಲೇವರ್ – ಮೊಳಕೆ ಕಾಳಿನ ಚಾಟ್ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬ್ಲೆಂಡರ್‌ನಲ್ಲಿ ಮೇಲೆ ತಿಳಿಸಲಾದ ಎಲ್ಲ ಪದಾರ್ಥಗಳನ್ನು ಹಾಕಿ ಹಿಟ್ಟಿನಂತೆ ನಯವಾಗುವವರೆಗೆ ಬ್ಲೆಂಡ್ ಮಾಡಿಕೊಳ್ಳಿ.
    * ನಾನ್ ಸ್ಟಿಕ್ ಪ್ಯಾನ್ ಅನ್ನು ಬಿಸಿ ಮಾಡಿ, ಎಣ್ಣೆ ಅಥವಾ ಬೆಣ್ಣೆಯನ್ನು ಸ್ವಲ್ಪ ಗ್ರೀಸ್ ಮಾಡಿ, ಬಳಿಕ ಕಾಲು ಕಪ್ ಅಳತೆಯಷ್ಟು ಹಿಟ್ಟನ್ನು ಸುರಿಯಿರಿ.
    * ಪ್ಯಾನ್‌ಕೇಕ್‌ನ ಮೇಲ್ಭಾಗದಲ್ಲಿ ಸಣ್ಣ ಸಣ್ಣ ಗುಳ್ಳೆಗಳು ಮೂಡಲು ಪ್ರಾರಂಭವಾಗುತ್ತದೆ. ಪ್ಯಾನ್‌ಕೇಕ್‌ನ ತಳ ಭಾಗ ಬೆಂದ ಬಳಿಕ ಅದನ್ನು ತಿರುವಿ ಹಾಕಿ ಹಾಗೂ ಎರಡೂ ಕಡೆ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕಾಯಿಸಿ. ಉಳಿದ ಹಿಟ್ಟನ್ನು ಕೂಡಾ ಇದೇ ರೀತಿ ಮಾಡೋದನ್ನು ಮುಂದುವರಿಸಿ.
    * ಇದೀಗ ಪ್ರೊಟೀನ್‌ಯುಕ್ತ ಪ್ಯಾನ್‌ಕೇಕ್ ತಯಾರಾಗಿದ್ದು, ಪೀನಟ್ ಬಟರ್ ಅಥವಾ ಬೆಣ್ಣೆಯೊಂದಿಗೆ ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಈರುಳ್ಳಿ, ಮೊಟ್ಟೆಯ ಸಿಂಪಲ್ ಪಕೋಡಾ ರೆಸಿಪಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟ್ಯಾಂಗಿ ಫ್ಲೇವರ್ – ಮೊಳಕೆ ಕಾಳಿನ ಚಾಟ್ ರೆಸಿಪಿ

    ಟ್ಯಾಂಗಿ ಫ್ಲೇವರ್ – ಮೊಳಕೆ ಕಾಳಿನ ಚಾಟ್ ರೆಸಿಪಿ

    ಮೊಳಕೆ ಬರಿಸಿದ ಕಾಳುಗಳು ಅತಿ ಹೆಚ್ಚು ಆರೋಗ್ಯಕರ ಅಂಶಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಚಾಟ್‌ಗಳು ಹುರಿದ ತಿಂಡಿಗಳಾಗಿರುತ್ತವೆ. ಆದರೆ ಈ ಮೊಳಕೆ ಬರಿಸಿದ ಕಾಳುಗಳಿಂದ ಮಾಡಲಾಗುವ ಚಾಟ್ ಹೆಚ್ಚು ರುಚಿಕರ ಹಾಗೂ ಆರೋಗ್ಯಕರವಾಗಿದ್ದು, ಮಕ್ಕಳಿಗೆ ಇದನ್ನು ಸುಲಭವಾಗಿ ತಿನ್ನಿಸಬಹುದ. ನಾವಿಲ್ಲಿ ಚಾಟ್‌ಗೆ ಮೊಳಕೆ ಬರಿಸಿದ ಹೆಸರು ಕಾಳನ್ನು ಬಳಸಿದ್ದೇವೆ. ನೀವು ಬೇಕೆಂದರೆ ಯಾವುದೇ ಮೊಳಕೆ ಬರಿಸಿದ ಮಿಶ್ರ ಕಾಳುಗಳನ್ನೂ ಬಳಸಬಹುದು. ಮೊಳಕೆ ಕಾಳಿನ ಚಾಟ್ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಮೊಳಕೆ ಬರಿಸಿದ ಹೆಸರು ಕಾಳು – 1 ಕಪ್
    ಸಣ್ಣಗೆ ಹೆಚ್ಚಿದ ಸೌತೆಕಾಯಿ – ಕಾಲು ಕಪ್
    ಸಣ್ಣಗೆ ಹೆಚ್ಚಿದ ಟೊಮೆಟೋ – ಕಾಲು ಕಪ್
    ಸಣ್ಣಗೆ ಹೆಚ್ಚಿದ ಈರುಳ್ಳಿ – ಕಾಲು ಕಪ್
    ಹಸಿರು ಮೆಣಸಿನಕಾಯಿ – 2
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಚಾಟ್ ಮಸಾಲಾ – ರುಚಿಗೆ ತಕ್ಕಷ್ಟು
    ಹುರಿದ ಜೀರಿಗೆ ಪುಡಿ – ರುಚಿಗೆ ತಕ್ಕಷ್ಟು
    ಉಪ್ಪು – ರುಚಿಗೆ ತಕ್ಕಷ್ಟು
    ನಿಂಬೆ ರಸ – ಅರ್ಧ ಇದನ್ನೂ ಓದಿ: ಆರೋಗ್ಯಕರ ಬಾದಾಮಿ, ಖರ್ಜೂರ ಹಾಲು

    ಮಾಡುವ ವಿಧಾನ:
    * ಮೊದಲಿಗೆ ಹಸಿರು ಮೆಣಸಿನಕಾಯಿಯನ್ನು ಸಣ್ಣಗೆ ಹೆಚ್ಚಿ ಪಕ್ಕಕ್ಕಿಡಿ.
    * ಒಂದು ಬೌಲ್‌ನಲ್ಲಿ ಮೊಳಕೆ ಬರಿಸಿದ ಹೆಸರು ಕಾಳನ್ನು ತೆಗೆದುಕೊಂಡು, ಅದಕ್ಕೆ ಸೌತೆಕಾಯಿ, ಹಸಿರು ಮೆಣಸಿನಕಾಯಿ, ಟೊಮೆಟೋ, ಈರುಳ್ಳಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
    * ಬಳಿಕ ಅದಕ್ಕೆ ಚಾಟ್ ಮಸಾಲಾ, ಹುರಿದ ಜೀರಿಗೆ ಪುಡಿ, ಉಪ್ಪು, ನಿಂಬೆರಸ ಸೇರಿಸಿ ಮಿಶ್ರಣ ಮಾಡಿ.
    * ಇದೀಗ ಆರೋಗ್ಯಕರ ಹಾಗೂ ಪೌಷ್ಟಿಕಾಂಶಭರಿತ ಹೆಸರು ಕಾಳಿನ ಚಾಟ್ ತಯಾರಾಗಿದ್ದು, ಇದನ್ನು ತಕ್ಷಣವೇ ಸವಿಯಿರಿ. ಇದನ್ನೂ ಓದಿ: ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕುಡಿಯಿರಿ ಮೆಂತ್ಯ ಹಾಲು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈರುಳ್ಳಿ, ಮೊಟ್ಟೆಯ ಸಿಂಪಲ್ ಪಕೋಡಾ ರೆಸಿಪಿ

    ಈರುಳ್ಳಿ, ಮೊಟ್ಟೆಯ ಸಿಂಪಲ್ ಪಕೋಡಾ ರೆಸಿಪಿ

    ಗೃಹಿಣಿಯರಿಗೆ ಸಂಜೆಯ ಸ್ನ್ಯಾಕ್ಸ್ ಏನು ವಿಶೇಷವಾಗಿ ಮಾಡೋದು ಎಂಬ ಚಿಂತೆ ಯಾವಾಗಲೂ ಇದ್ದೇ ಇರುತ್ತದೆ. ಅಂತಹವರಿಗಾಗಿ ನಾವಿಂದು ಈರುಳ್ಳಿ ಮೊಟ್ಟೆಯ ಪಕೋಡಾ ರೆಸಿಪಿಯನ್ನು ಹೇಳಿಕೊಡಲಿದ್ದೇವೆ. ಸಿಂಪಲ್ ಆಗಿರೋ ಈ ರೆಸಿಪಿ ತುಂಬಾ ಟೇಸ್ಟಿಯೂ ಆಗಿದೆ. ಸಾಮಾನ್ಯ ಈರುಳ್ಳಿ ಪಕೋಡಾವನ್ನು ನೀವು ಸವಿದಿರುತ್ತೀರಿ. ಆದ್ರೆ ಇದಕ್ಕೆ ಸ್ವಲ್ಪ ಟ್ವಿಸ್ಟ್ ನೀಡಿ ಮೊಟ್ಟೆಯೂ ಸೇರಿಸಿ ಪಕೋಡಾ ಮಾಡಿಲ್ಲ ಎಂದರೆ ಈ ರೆಸಿಪಿಯನ್ನೊಮ್ಮೆ ಖಂಡಿತಾ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಬೇಯಿಸಿದ ಮೊಟ್ಟೆ – 2
    ಹೆಚ್ಚಿದ ಈರುಳ್ಳಿ – 2
    ಕಡಲೆ ಹಿಟ್ಟು – 1 ಕಪ್
    ಮೈದಾ ಹಿಟ್ಟು – 2 ಟೀಸ್ಪೂನ್
    ಅರಿಶಿನ ಪುಡಿ – 1 ಟೀಸ್ಪೂನ್
    ಕೆಂಪು ಮೆಣಸಿನಪುಡಿ – ಅರ್ಧ ಟೀಸ್ಪೂನ್
    ಜೀರಿಗೆ – 1 ಟೀಸ್ಪೂನ್
    ಹಿಂಗ್ – ಚಿಟಿಕೆ
    ನೀರು – ಅಗತ್ಯವಿರುವಂತೆ
    ಎಣ್ಣೆ – ಹುರಿಯಲು ಬೇಕಾಗುವಷ್ಟು
    ಅಡುಗೆ ಸೋಡಾ – ಚಿಟಿಕೆ
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಉಳಿದ ದೋಸೆ ಹಿಟ್ಟು ಇದ್ದಾಗ ಕೀಮಾ ದೋಸೆ ಖಂಡಿತಾ ಟ್ರೈ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಟ್ಟಲಿನಲ್ಲಿ ಈರುಳ್ಳಿ ಹಾಕಿ, ಕಡಲೆ ಹಿಟ್ಟು, ಮೈದಾ ಹಿಟ್ಟು, ಅರಿಶಿನ ಪುಡಿ, ಕೆಂಪು ಮೆಣಸಿನಪುಡಿ, ಸಾಸಿವೆ, ಜೀರಿಗೆ, ಉಪ್ಪು ಹಾಕಿ ನೀರನ್ನು ಸೇರಿಸಿ ದಪ್ಪಗಿನ ಹಿಟ್ಟಾಗಿ ಮಿಶ್ರಣ ಮಾಡಿಕೊಳ್ಳಿ.
    * ಅದಕ್ಕೆ ಹಿಂಗ್ ಸೇರಿಸಿ ಮಿಶ್ರಣ ಮಾಡಿ.
    * ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
    * ಬೇಯಿಸಿದ ಮೊಟ್ಟೆಗಳನ್ನು 4 ಭಾಗಗಳಾಗಿ ಕತ್ತರಿಸಿ, ಒಂದೊಂದೇ ತುಂಡನ್ನು ಈರುಳ್ಳಿ ಮಿಶ್ರಣಕ್ಕೆ ಹಾಕಿಕೊಂಡು ಸುತ್ತಲೂ ಲೇಪಿಸಿಕೊಳ್ಳಿ.
    * ಈಗ ಕಾದ ಎಣ್ಣೆಯಲ್ಲಿ ಪಕೋಡಾ ರೀತಿಯಲ್ಲಿ ಅವುಗಳನ್ನು ಬಿಟ್ಟು ಗರಿಗರಿಯಾಗಿ ಹುರಿದುಕೊಳ್ಳಿ.
    * ಬಳಿಕ ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
    * ಇದೀಗ ಈರುಳ್ಳಿ, ಮೊಟ್ಟೆಯ ಪಕೋಡಾ ತಯಾರಾಗಿದ್ದು, ಕೆಚಪ್ ಅಥವಾ ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಬಾದಾಮಿ ಗ್ರೇವಿಯ ಚಿಕನ್ – ಯಮ್ಮೀ ಫ್ಲೇವರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮನೆಯಲ್ಲೇ ಮಾಡಿ ಯಮ್ಮೀ ಚೀಸ್ ಗಾರ್ಲಿಕ್ ಬ್ರೆಡ್ ಟೋಸ್ಟ್

    ಮನೆಯಲ್ಲೇ ಮಾಡಿ ಯಮ್ಮೀ ಚೀಸ್ ಗಾರ್ಲಿಕ್ ಬ್ರೆಡ್ ಟೋಸ್ಟ್

    ಗಿನ ಮಕ್ಕಳು ಸಾಮಾನ್ಯವಾಗಿ ಪಿಜ್ಜಾ, ಬರ್ಗರ್, ಬ್ರೆಡ್ ಟೋಸ್ಟ್ ಮುಂತಾದ ತಿಂಡಿಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಆದರೆ ಇವೆಲ್ಲಾ ಹೊರಗಡೆ ಅಂಗಡಿಗಳಲ್ಲಿ ದುಬಾರಿ. ಆದ್ದರಿಂದ ಇದನ್ನು ಸುಲಭವಾಗಿ ಮನೆಯಲ್ಲೇ ಮಾಡಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಯಮ್ಮೀ ಚೀಸ್ ಗಾರ್ಲಿಕ್ ಬ್ರೆಡ್ ಟೋಸ್ಟ್ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಹಕ್ಕಾ ನೂಡಲ್ಸ್ ಟೇಸ್ಟ್ ಮಾಡಿಲ್ಲ ಅಂದ್ರೆ ಇವತ್ತೇ ಟ್ರೈ ಮಾಡಿ..!

    ಬೇಕಾಗುವ ಸಾಮಗ್ರಿಗಳು:
    ಬ್ರೆಡ್ – 4
    ತುರಿದ ಚೀಸ್ – ಅರ್ಧ ಕಪ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
    ಜಜ್ಜಿದ ಬೆಳ್ಳುಳ್ಳಿ – 7ರಿಂದ 8
    ಚಿಲ್ಲಿ ಫ್ಲೇಕ್ಸ್ – ಅರ್ಧ ಚಮಚ
    ಕುಟ್ಟಿ ಪುಡಿ ಮಾಡಿದ ಕಾಳು ಮೆಣಸು – ಕಾಲು ಚಮಚ
    ಬೆಣ್ಣೆ – 3 ಚಮಚ
    ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್‌ಗೆ ಬೆಣ್ಣೆ ಹಾಕಿಕೊಳ್ಳಿ. ಬೆಣ್ಣೆ ಕರಗಿದ ಬಳಿಕ ಅದಕ್ಕೆ ಜಜ್ಜಿರುವ ಬೆಳ್ಳುಳ್ಳಿಯನ್ನು ಹಾಕಿಕೊಂಡು ಹಸಿವಾಸನೆ ಹೋಗುವವರೆಗೂ ಚನ್ನಾಗಿ ಫ್ರೈ ಮಾಡಿಕೊಳ್ಳಿ.
    * ಬಳಿಕ ಇದಕ್ಕೆ ಕುಟ್ಟಿ ಪುಡಿ ಮಾಡಿದ ಕಾಳುಮೆಣಸಸಿನ ಪುಡಿ ಹಾಕಿಕೊಳ್ಳಬೇಕು.
    * ಈಗ ಈ ಮಿಶ್ರಣವನ್ನು ಬ್ರೆಡ್ ಮೇಲೆ ಹಚ್ಚಿಕೊಳ್ಳಿ. ಬಳಿಕ ಅದರ ಮೇಲೆ ತುರಿದ ಚೀಸ್ ಹಾಕಿಕೊಳ್ಳಬೇಕು. ಈಗ ಅದಕ್ಕೆ ಚಿಲ್ಲಿ ಫ್ಲೇಕ್ಸ್ ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿಕೊಳ್ಳಿ.
    * ನಂತರ ಒಂದು ಪ್ಯಾನ್ ಮೇಲೆ ಈ ಬ್ರೆಡ್ ಅನ್ನು ಇಟ್ಟುಕೊಂಡು 5ರಿಂದ 6 ನಿಮಿಷಗಳ ವರೆಗೆ ಮುಚ್ಚಿಡಿ. ಚೀಸ್ ಸ್ವಲ್ಪ ನೀರಾದ ಬಳಿಕ ಅದಕ್ಕೆ ಮತ್ತೆ ಸ್ವಲ್ಪ ಚಿಲ್ಲಿ ಫ್ಲೇಕ್ಸ್ ಸೇರಿಸಿಕೊಳ್ಳಿ. ಅದೇ ರೀತಿ ಉಳಿದ ಬ್ರೆಡ್‌ಗಳನ್ನು ಮಾಡಿಕೊಳ್ಳಬೇಕು.
    * ಈಗ ಇದನ್ನು ಒಂದು ಸರ್ವಿಂಗ್ ಪ್ಲೇಟ್‌ಗೆ ಹಾಕಿಕೊಂಡು ಬಿಸಿಬಿಸಿಯಾಗಿ ತಿನ್ನಲು ಕೊಡಿ. ಇದನ್ನು ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಇದನ್ನೂ ಓದಿ: ಆರೋಗ್ಯಕರ ಬಾದಾಮಿ, ಖರ್ಜೂರ ಹಾಲು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆರೋಗ್ಯಕರ ಬಾದಾಮಿ, ಖರ್ಜೂರ ಹಾಲು

    ಆರೋಗ್ಯಕರ ಬಾದಾಮಿ, ಖರ್ಜೂರ ಹಾಲು

    ಬಾದಾಮಿ, ಖರ್ಜೂರ ಹಾಲು ರುಚಿಕರ, ಆರೋಗ್ಯಕರ ಮಾತ್ರವಲ್ಲದೇ ಹೆಚ್ಚಿನ ಪೋಷಕಾಂಶಗಳಿಂದಲೂ ಕೂಡಿದೆ. ಖರ್ಜೂರ ಶಕ್ತಿ ಮತ್ತು ನಾರಿನಂಶದ ನೈಸರ್ಗಿಕ ಮೂಲವಾಗಿದೆ. ದೇಹದ ತೂಕ ಹೆಚ್ಚಿಸಿಕೊಳ್ಳಲು ಬಯಸುವವರು ನಿಯಮಿತವಾಗಿ ಈ ಹಾಲನ್ನು ಕುಡಿಯಬಹುದು. ರಕ್ತ ಹೀನತೆಗೆ ಇದು ಮದ್ದಾಗಬಲ್ಲದು ಮಾತ್ರವಲ್ಲದೇ ಹೃದಯವನ್ನು ಆರೋಗ್ಯವಾಗಿಡಲು ಇದು ಸಹಾಯ ಮಾಡುತ್ತದೆ. ಆರೋಗ್ಯಕರ ಬಾದಾಮಿ, ಖರ್ಜೂರ ಹಾಲು ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಹಾಲು – 4.5 ಕಪ್
    ಖರ್ಜೂರ – 10
    ಬಾದಾಮಿ – 12
    ಏಲಕ್ಕಿ ಪುಡಿ – ಕಾಲು ಟೀಸ್ಪೂನ್
    ಕೇಸರಿ ಎಳೆ – ಚಿಟಿಕೆ ಇದನ್ನೂ ಓದಿ: ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕುಡಿಯಿರಿ ಮೆಂತ್ಯ ಹಾಲು

    ಮಾಡುವ ವಿಧಾನ:
    * ಮೊದಲಿಗೆ ಬಾದಾಮಿಯನ್ನು ರಾತ್ರಿ ಅಥವಾ 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತರ ಅದರ ಸಿಪ್ಪೆ ಸುಲಿದು ಪಕ್ಕಕ್ಕಿಡಿ.
    * ಪಾತ್ರೆಯಲ್ಲಿ ಹಾಲನ್ನು ಸುಮಾರು 5 ನಿಮಿಷಗಳ ಕಾಲ ಕುದಿಸಿಕೊಳ್ಳಿ.
    * ಬಾದಾಮಿ ಹಾಗೂ ಖರ್ಜೂರವನ್ನು 5 ಟೀಸ್ಪೂನ್ ಹಾಲಿನೊಂದಿಗೆ ಮಿಕ್ಸರ್ ಜಾರ್‌ನಲ್ಲಿ ಚೆನ್ನಾಗಿ ಪೇಸ್ಟ್ ಮಾಡಿ ಇಟ್ಟುಕೊಳ್ಳಿ.
    * ಈಗ ಪೇಸ್ಟ್ ಅನ್ನು ಕುದಿಯುತ್ತಿರುವ ಹಾಲಿಗೆ ಹಾಕಿ 3-4 ನಿಮಿಷ ಕುದಿಯಲು ಬಿಡಿ.
    * ಬಳಿಕ ಏಲಕ್ಕಿ ಪುಡಿ ಸೇರಿಸಿ, ಉರಿಯನ್ನು ಆಫ್ ಮಾಡಿ.
    * ಕೊನೆಯಲ್ಲಿ ಕೇಸರಿ ಎಳೆಗಳು ಹಾಗೂ ಬಾದಾಮಿ ಚೂರುಗಳಿಂದ ಅಲಂಕರಿಸಿ, ಬಿಸಿಬಿಸಿಯಾಗಿ ಆರೋಗ್ಯಕರ ಬಾದಾಮಿ ಖರ್ಜೂರ ಹಾಲನ್ನು ಸವಿಯಿರಿ. ಇದನ್ನೂ ಓದಿ: ಮ್ಯಾಂಗೋ ಫಲೂಡಾ ಸವಿದು ಚಿಲ್ ಆಗಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಳಿದ ದೋಸೆ ಹಿಟ್ಟು ಇದ್ದಾಗ ಕೀಮಾ ದೋಸೆ ಖಂಡಿತಾ ಟ್ರೈ ಮಾಡಿ

    ಉಳಿದ ದೋಸೆ ಹಿಟ್ಟು ಇದ್ದಾಗ ಕೀಮಾ ದೋಸೆ ಖಂಡಿತಾ ಟ್ರೈ ಮಾಡಿ

    ಮ್ಮಲ್ಲಿ ಹೆಚ್ಚಿನವರು ಯಾವಾಗಲೂ ಹೆಚ್ಚುವರಿ ದೋಸೆ ಹಿಟ್ಟನ್ನು ಮನೆಯಲ್ಲಿ ತಯಾರಿಸಿಟ್ಟಿರುತ್ತಾರೆ. ಅಥವಾ ದೋಸೆ ಹಿಟ್ಟು ಆಗಾಗ ಉಳಿದು ಹೋಗಬಹುದು. ಈ ಸಂದರ್ಭದಲ್ಲಿ ನೀವು ಚಿಕನ್ ಕೀಮಾ ಇದ್ದಾಗ ಈ ರೆಸಿಪಿನ್ನೊಮ್ಮೆ ಟ್ರೈ ಮಾಡಲೇ ಬೇಕು. ದೋಸೆಯೊಂದಿಗೆ ಚಿಕನ್ ಕೀಮಾ ಸಖತ್ ರುಚಿಯಾಗಿರುತ್ತದೆ. ದೋಸೆಗೆ ಆಲೂಗಡ್ಡೆ ಸಾಗು ಬದಲು ಒಮ್ಮೆ ಕೀಮಾ ಕೂಡಾ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ದೋಸೆ ಹಿಟ್ಟಿಗೆ:
    ಉದ್ದಿನ ಬೇಳೆ – 1 ಕಪ್
    ಅಕ್ಕಿ – 3 ಕಪ್
    ಮೆಂತ್ಯ – 1 ಟೀಸ್ಪೂನ್
    ಅಡುಗೆ ಸೋಡಾ – ಚಿಟಿಕೆ
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ದೋಸೆ ತಯಾರಿಸಲು ಬೇಕಾಗುವಷ್ಟು
    ಕೀಮಾ ತಯಾರಿಸಲು:
    ಚಿಕನ್ ಕೀಮಾ – ಅರ್ಧ ಕೆಜಿ (ಮಟನ್ ಕೂಡಾ ಬಳಸಬಹುದು)
    ಈರುಳ್ಳಿ – 2
    ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ಜೀರಿಗೆ ಪುಡಿ – 1 ಟೀಸ್ಪೂನ್
    ಗರಂ ಮಸಾಲಾ – 2 ಟೀಸ್ಪೂನ್
    ಆಮ್ಚೂರ್ ಪುಡಿ (ಒಣ ಮಾವಿನಪುಡಿ) – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷು
    ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಎಣ್ಣೆ – 3 ಟೀಸ್ಪೂನ್ ಇದನ್ನೂ ಓದಿ: ಬಾದಾಮಿ ಗ್ರೇವಿಯ ಚಿಕನ್ – ಯಮ್ಮೀ ಫ್ಲೇವರ್

    ಮಾಡುವ ವಿಧಾನ:
    * ಮೊದಲಿಗೆ ಬೇಳೆ ಮತ್ತು ಅಕ್ಕಿಯನ್ನು ಪ್ರತ್ಯೇಕವಾಗಿ ಕನಿಷ್ಠ 5-6 ಗಂಟೆಗಳ ಕಾಲ ನೆನೆಸಿಡಿ. ಜೊತೆಯಲ್ಲಿ ಮೆಂತ್ಯ ಬೀಜವನ್ನೂ ನೆನೆಸಿ.
    * ಮೃದುವಾದ ಹಿಟ್ಟಿಗೆ ಸಾಕಾಗುವಷ್ಟು ನೀರು ಸೇರಿಸಿ ಅವುಗಳನ್ನು ಪ್ರತ್ಯೇಕವಾಗಿ ರುಬ್ಬಿಕೊಳ್ಳಿ. ಬಳಿಕ ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ, ಉಪ್ಪು ಸೇರಿಸಿ ಮತ್ತು ರಾತ್ರಿ ಹುದುಗಲು ಬಿಡಿ.
    * ನಂತರ ಕೀಮಾವನ್ನು ತೊಳೆಯಿರಿ ಮತ್ತು ನೀರನ್ನು ಸಂಪೂರ್ಣವಾಗಿ ಹರಿಯಲು ಬಿಡಿ.
    * ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಈರುಳ್ಳಿಯನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
    * ಈಗ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ ಮತ್ತು ಸ್ವಲ್ಪ ನೀರು ಸೇರಿಸಿ.
    * ಕೀಮಾ, ಉಪ್ಪು ಮತ್ತು ಒಣ ಮಸಾಲೆಗಳನ್ನು ಸೇರಿಸಿ ಬೇಯಿಸಿಕೊಳ್ಳಿ.
    * ಬಳಿಕ ಉರಿಯನ್ನು ಆಫ್ ಮಾಡಿ ಪಕ್ಕಕ್ಕಿಡಿ.
    * ಈಗ ದೋಸೆ ಹಿಟ್ಟನ್ನು ತವಾ ಮೇಲೆ ಒಂದು ಸೌಟಿನಷ್ಟು ಹರಡಿ, ಅದರ ಮೇಲೆ ಚಮಚದಷ್ಟು ಕೀಮಾ ಮಿಶ್ರಣವನ್ನು ಹರಡಿ.
    * ದೋಸೆಯನ್ನು ಗರಿಗರಿಯಾಗಿ ಮಾಡಲು ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಹಾಕಿ.
    * ಬಳಿಕ ದೋಸೆಯನ್ನು ರೋಲ್ ಮಾಡಿ ಮತ್ತು ಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಚಿಕನ್ ಕೀಮಾ ಬಿರಿಯಾನಿ – ವಾವ್ ಎನ್ನದೇ ಇರೋಕಾಗಲ್ಲ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಕ್ಕಾ ನೂಡಲ್ಸ್ ಟೇಸ್ಟ್ ಮಾಡಿಲ್ಲ ಅಂದ್ರೆ ಇವತ್ತೇ ಟ್ರೈ ಮಾಡಿ..!

    ಹಕ್ಕಾ ನೂಡಲ್ಸ್ ಟೇಸ್ಟ್ ಮಾಡಿಲ್ಲ ಅಂದ್ರೆ ಇವತ್ತೇ ಟ್ರೈ ಮಾಡಿ..!

    ನೂಡಲ್ಸ್ ಅಂದ್ರೆ ಮಕ್ಕಳು ತುಂಬಾ ಇಷ್ಟಪಡುತ್ತಾರೆ. ಮಕ್ಕಳು ಮಾತ್ರವಲ್ಲದೇ ದೊಡ್ಡವರು ಸಹ ಇದನ್ನು ತಿನ್ನಲು ಬಯಸುತ್ತಾರೆ. ಇದು ತಿನ್ನಲು ರುಚಿಕರವಾಗಿದ್ದು, ಹೊಟ್ಟೆ ಹಸಿವನ್ನು ಸಹಾ ನೀಗಿಸುತ್ತದೆ. ಇದನ್ನು ತುಂಬಾ ಸುಲಭವಾಗಿ ಮನೆಯಲ್ಲಿಯೇ ಮಾಡಬಹುದು. ಅಲ್ಲದೇ ಮಕ್ಕಳ ಲಂಚ್ ಬಾಕ್ಸ್‌ಗೂ ಹಾಕಿ ಕೊಡಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಹಕ್ಕಾ ನೂಡಲ್ಸ್ (Hakka Noodles) ಯಾವ ರೀತಿ ತಯಾರಿಸಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ. ಇದನ್ನೂ ಓದಿ: ಸುಲಭವಾಗಿ ಮಾಡಿ ಡ್ರೈಫ್ರೂಟ್ಸ್ ಬರ್ಫಿ

    ಬೇಕಾಗುವ ಸಾಮಗ್ರಿಗಳು:
    ನೂಡಲ್ಸ್ – 1 ಪ್ಯಾಕ್
    ಉಪ್ಪು – 1 ಚಮಚ
    ಎಣ್ಣೆ – 3 ಚಮಚ
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
    ಹೆಚ್ಚಿದ ಬೀನ್ಸ್ – ಅರ್ಧ ಕಪ್
    ಹೆಚ್ಚಿದ ಕ್ಯಾಬೇಜ್ – ಅರ್ಧ ಕಪ್
    ಹೆಚ್ಚಿದ ಕ್ಯಾರೆಟ್ – ಅರ್ಧ ಕಪ್
    ಹೆಚ್ಚಿದ ಕಾಪ್ಸಿಕಮ್ – ಅರ್ಧ ಕಪ್
    ಸೋಯಾ ಸಾಸ್ – 2 ಚಮಚ
    ಗ್ರೀನ್ ಚಿಲ್ಲಿ ಸಾಸ್ – 2 ಚಮಚ
    ಟೊಮೆಟೊ ಸಾಸ್ – 1 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿಕೊಂಡು ಅದಕ್ಕೆ ಉಪ್ಪನ್ನು ಸೇರಿಸಿಕೊಂಡು ನೂಡಲ್ಸ್ ಅನ್ನು ಬೇಯಿಸಿಕೊಳಿ.
    * ಬೆಂದ ಬಳಿಕ ನೂಡಲ್ಸ್ ಅನ್ನು ಬಿಸಿನೀರಿನಿಂದ ಬೇರ್ಪಡಿಸಿ ಅದಕ್ಕೆ ತಣ್ಣೀರನ್ನು ಬೆರೆಸಿ ಸೋಸಿಕೊಳ್ಳಿ.
    * ಈಗ ಒಂದು ಪ್ಯಾನ್ ಅಲ್ಲಿ 3 ಚಮಚ ಎಣ್ಣೆ ಹಾಕಿಕೊಂಡು ಬಿಸಿಯಾದ ಬಳಿಕ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿಕೊಂಡು ಹಸಿವಾಸನೆ ಹೋಗುವವರೆಗೆ ಫ್ರೈ ಮಾಡಿಕೊಳ್ಳಿ.
    * ನಂತರ ಅದಕ್ಕೆ ಹೆಚ್ಚಿದ ಎಲ್ಲಾ ತರಕಾರಿಗಳನ್ನು ಹಾಕಿಕೊಳ್ಳಿ. ಬಳಿಕ ಸೋಯಾ ಸಾಸ್, ಗ್ರೀನ್ ಚಿಲ್ಲಿ ಸಾಸ್ ಮತ್ತು ಟೊಮೆಟೊ ಸಾಸ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ತರಕಾರಿ ಸ್ವಲ್ಪ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ.
    * ಈಗ ಅದಕ್ಕೆ ಬೇಯಿಸಿ ಇಟ್ಟಿದ್ದ ನೂಡಲ್ಸ್ ಅನ್ನು ಸೇರಿಸಿಕೊಂಡು ಚೆನ್ನಾಗಿ ತಿರುವಿಕೊಳ್ಳಿ.
    * ನೂಡಲ್ಸ್ ತರಕಾರಿ ಮಿಶ್ರಣದೊಂದಿಗೆ ಚೆನ್ನಾಗಿ ಹೊಂದಿದ ಬಳಿಕ ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ಬಿಸಿಬಿಸಿಯಾಗಿ ತಿನ್ನಲು ಕೊಡಿ. ಇದನ್ನೂ ಓದಿ: ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕುಡಿಯಿರಿ ಮೆಂತ್ಯ ಹಾಲು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಲ್ಕೇ ಪದಾರ್ಥ ಸಾಕು – ರುಚಿಕರವಾದ ತೆಂಗಿನಕಾಯಿ ಬಿಸ್ಕಿಟ್ ಹೀಗೆ ಮಾಡಿ

    ನಾಲ್ಕೇ ಪದಾರ್ಥ ಸಾಕು – ರುಚಿಕರವಾದ ತೆಂಗಿನಕಾಯಿ ಬಿಸ್ಕಿಟ್ ಹೀಗೆ ಮಾಡಿ

    ತೆಂಗಿನಕಾಯಿ ಬಿಸ್ಕಿಟ್ ಮಾಡಲು ಕೇವಲ ನಾಲ್ಕೇ ಪದಾರ್ಥ ಸಾಕು. ಮಾತ್ರವಲ್ಲದೇ ತುಂಬಾ ಸಿಂಪಲ್ ಕೂಡಾ. ಒಣ ತೆಂಗಿನ ತುರಿಯನ್ನು ಇದಕ್ಕಾಗಿ ಬಳಸಲಾಗಿದ್ದು, ರುಚಿಯೂ ಅದ್ಭುತ ಎನಿಸುತ್ತದೆ. ಸಂಜೆ ವೇಳೆ ಚಹಾಗೆ ಇದು ಒಂದು ಪರ್ಫೆಕ್ಟ್ ಸ್ನ್ಯಾಕ್ಸ್ ಆಗಬಲ್ಲದು. ನಾಲ್ಕೇ ಪದಾರ್ಥ ಬಳಸಿ ತೆಂಗಿನಕಾಯಿ ಬಿಸ್ಕಿಟ್ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಒಣ ತೆಂಗಿನತುರಿ – ಅರ್ಧ ಕಪ್
    ಅಡುಗೆ ಸೋಡಾ – ಕಾಲು ಟೀಸ್ಪೂನ್
    ಕರಗಿಸಿದ ಬೆಣ್ಣೆ – ಕಾಲು ಕಪ್
    ಮೊಟ್ಟೆ – 5
    ಉಪ್ಪು – ಕಾಲು ಟೀಸ್ಪೂನ್ (ಐಚ್ಛಿಕ) ಇದನ್ನೂ ಓದಿ: ಸುಲಭವಾಗಿ ಮಾಡಿ ಡ್ರೈಫ್ರೂಟ್ಸ್ ಬರ್ಫಿ

    ಮಾಡುವ ವಿಧಾನ:
    * ಮೊದಲಿಗೆ ಓವನ್ ಅನ್ನು 350 ಡಿಗ್ರಿ ಪ್ಯಾರಾಹೀಟ್‌ಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
    * ಒಣ ತೆಂಗಿನ ತುರಿ ಮತ್ತು ಕರಗಿದ ತುಪ್ಪವನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
    * ಬಳಿಕ ಮೊಟ್ಟೆಗಳನ್ನು ಸೇರಿಸಿ ಚೆನ್ನಾಗಿ ಸಂಯೋಜಿಸಿ.
    * ಹಿಟ್ಟನ್ನು ಸುಮಾರು 3 ಟೀಸ್ಪೂನ್ ಗಾತ್ರದಷ್ಟು ಒಂದೊಂದು ಬಿಸ್ಕಿಟ್ ಆಗುವಂತೆ ಬೇಕಿಂಗ್ ಶೀಟ್‌ನಲ್ಲಿ ಜೋಡಿಸಿಕೊಳ್ಳಿ.
    * ಬಳಿಕ ಅದನ್ನು ಓವನ್‌ನಲ್ಲಿ ಇರಿಸಿ, ಸುಮಾರು 20 ನಿಮಿಷ ಬೇಯಿಸಿಕೊಳ್ಳಿ.
    * ಬಳಿಕ ಟೂತ್‌ಪಿಕ್ ಬಳಸಿ ಬಿಸ್ಕಿಟ್ ಚೆನ್ನಾಗಿ ಬೆಂದಿದೆಯೇ ಎಂಬುದನ್ನು ಪರಿಶೀಲಿಸಿ. ಬೆಂದಿಲ್ಲವೆಂದಾದರೆ ಮತ್ತೆ 10 ನಿಮಿಷ ಬೇಯಿಸಿಕೊಳ್ಳಿ.
    * ಇದೀಗ ಟೇಸ್ಟಿ ತೆಂಗಿನಕಾಯಿ ಬಿಸ್ಕಿಟ್ ತಯಾರಾಗಿದ್ದು, ಟೀ ಟೈಮ್‌ನಲ್ಲಿ ಸವಿಯಿರಿ. ಇದನ್ನೂ ಓದಿ: ಹೀಗೆ ಮಾಡಿ ರುಚಿರುಚಿಯಾದ ಮಸಾಲಾ ಸ್ವೀಟ್ ಕಾರ್ನ್ ವಡಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]