Tag: recipe

  • ಹಸಿವನ್ನು ತಣಿಸಲು ಒನ್ ಪಾಟ್ ಗಾರ್ಲಿಕ್ ಚಿಕನ್ ಪಾಸ್ತಾ ಟ್ರೈ ಮಾಡಿ

    ಹಸಿವನ್ನು ತಣಿಸಲು ಒನ್ ಪಾಟ್ ಗಾರ್ಲಿಕ್ ಚಿಕನ್ ಪಾಸ್ತಾ ಟ್ರೈ ಮಾಡಿ

    ಬಿಡುವಿಲ್ಲದ ಕೆಲಸ ಅಥವಾ ವೀಕೆಂಡ್ ಸಮಯದಲ್ಲಿ ಫಟಾಫಟ್ ಅಂತ ಏನಾದ್ರೂ ವೆಸ್ಟರ್ನ್ ಸ್ಟೈಲ್‌ನ ಸಿಂಪಲ್ ಡಿಶ್ ತಯಾರಿಸಲು ನೀವು ಇಷ್ಟಪಡುತ್ತೀರಾದರೆ ಗಾರ್ಲಿಕ್ ಚಿಕನ್ ಪಾಸ್ತಾ ಟ್ರೈ ಮಾಡ್ಬೋದು. ಸಂಜೆ ಅಥವಾ ಊಟದ ವೇಳೆಗೂ ಈ ಯಮ್ಮೀ ರೆಸಿಪಿ ಚಪ್ಪರಿಸಬಹುದು. ಕೇವಲ ಅರ್ಧ ಗಂಟೆಯಲ್ಲಿ ಒನ್ ಪಾಟ್ ಗಾರ್ಲಿಕ್ ಚಿಕನ್ ಪಾಸ್ತಾ ನಿಮ್ಮ ಹೊಟ್ಟೆಯ ಹಸಿವನ್ನು ತಣಿಸಿಬಿಡುತ್ತದೆ. ಹಾಗಿದ್ರೆ ತಡಮಾಡದೇ ಈ ರೆಸಿಪಿಯನ್ನು ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಆಲಿವ್ ಎಣ್ಣೆ – 1 ಟೀಸ್ಪೂನ್
    ಹೆಚ್ಚಿದ ಈರುಳ್ಳಿ – 1
    ಕೊಚ್ಚಿದ ಬೆಳ್ಳುಳ್ಳಿ – 4
    ನೀರು – 3 ಟೀಸ್ಪೂನ್
    ಚಿಕನ್ ಸ್ಟಾಕ್ – ಎರಡೂವರೆ ಕಪ್
    ಪಾಸ್ತಾ – 200 ಗ್ರಾಂ
    ಹಾಲು – 100 ಎಂಎಲ್
    ಬೇಯಿಸಿ ಒರಟಾಗಿ ಪುಡಿ ಮಾಡಿದ ಚಿಕನ್ ಬ್ರೆಸ್ಟ್ – 2
    ನಿಂಬೆ ರಸ – 1 ಟೀಸ್ಪೂನ್
    ತುರಿದ ಚೀಸ್ – ಕಾಲು ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ಕರಿಮೆಣಸಿನ ಪುಡಿ – ರುಚಿಗೆ ಅನುಸಾರ ಇದನ್ನೂ ಓದಿ: ಟ್ರೈ ಮಾಡಿ ನೋಡಿ ಟೇಸ್ಟಿ ರಸ್ ಆಮ್ಲೆಟ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್‌ಗೆ ಆಲಿವ್ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.
    * ಅದಕ್ಕೆ ಈರುಳ್ಳಿ ಸೇರಿಸಿ ಸ್ವಲ್ಪ ಮೃದುವಾಗುವವರೆಗೆ ಫ್ರೈ ಮಾಡಿ.
    * ಬೆಳ್ಳುಳ್ಳಿ ಬೆರೆಸಿ ಅರ್ಧ ನಿಮಿಷ ಹುರಿಯಿರಿ.
    * ನಂತರ 3 ಟೀಸ್ಪೂನ್ ನೀರು ಸೇರಿಸಿ ನಿಧಾನವಾಗಿ ಬೇಯಲು ಬಿಡಿ.
    * ಬಳಿಕ ಚಿಕನ್ ಸ್ಟಾಕ್, ಪಾಸ್ತಾ ಹಾಗೂ ಹಾಲು ಸೇರಿಸಿ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿಕೊಳ್ಳಿ.
    * ನಂತರ ಮುಚ್ಚಳ ತೆಗೆದು ಚಿಕನ್ ಚೂರುಗಳನ್ನು ಬೆರೆಸಿ, ಮುಚ್ಚಳ ಮುಚ್ಚಿ ಮತ್ತೆ 7-10 ನಿಮಿಷ ಬೇಯಿಸಿಕೊಳ್ಳಿ. ನಡುವೆ ಒಂದೆರಡು ಬಾರಿ ಕೈಯಾಡಿಸಿಕೊಳ್ಳಿ.
    * ಪಾಸ್ತಾ ಬೆಂದಿದೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಉರಿಯನ್ನು ಆಫ್ ಮಾಡಿ.
    * ಬಳಿಕ ನಿಂಬೆ ರಸ ಹಾಕಿ ಬೆರೆಸಿ.
    * ಚೀಸ್, ಚಿಟಿಕೆ ಉಪ್ಪು, ಕರಿ ಮೆಣಸಿನ ಪುಡಿ ಸಿಂಪಡಿಸಿ, ಬಿಸಿಬಿಸಿಯಾಗಿ ಗಾರ್ಲಿಕ್ ಚಿಕನ್ ಪಾಸ್ತಾ ಸವಿಯಿರಿ. ಇದನ್ನೂ ಓದಿ: ಸಖತ್ ಟೇಸ್ಟಿ ಕೀಮಾ ಮಟರ್ ಟ್ರೈ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಟ್ರೀಟ್ ಸ್ಟೈಲ್ ವೆಜ್ ಫ್ರಾಂಕಿ ತಿಂದು ನೋಡಿ

    ಸ್ಟ್ರೀಟ್ ಸ್ಟೈಲ್ ವೆಜ್ ಫ್ರಾಂಕಿ ತಿಂದು ನೋಡಿ

    ನೆಯಲ್ಲಿ ಮಾಡುವ ಆಹಾರಗಳಿಗಿಂತಲೂ ಬೀದಿ ಬದಿಯ ಆಹಾರಗಳು ಜನರನ್ನು ಹೆಚ್ಚು ಆಕರ್ಷಿಸುತ್ತದೆ. ಅದರಲ್ಲೂ ಬೆಂಗಳೂರು, ಮುಂಬೈ ಮುಂತಾದ ಟಾಪ್ ಸಿಟಿಗಳಲ್ಲಿ ಬೀದಿಬದಿಯ ಆಹಾರ ತಿನ್ನುವವರೇ ಹೆಚ್ಚು. ಇವತ್ತಿನ ನಮ್ಮ ರೆಸಿಪಿಯಲ್ಲಿ ಬಾಂಬೆ ಸ್ಟೈಲ್‌ನ ವೆಜ್ ಫ್ರಾಂಕಿ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಚಹಾದೊಂದಿಗೆ ಮಜವೆನಿಸುತ್ತದೆ ಬೆಂಡೆಕಾಯಿಯ ಕುರುಕಲು ತಿಂಡಿ

    ಬೇಕಾಗುವ ಸಾಮಗ್ರಿಗಳು:
    ಅಚ್ಚ ಖಾರದ ಪುಡಿ – 1 ಚಮಚ
    ಧನಿಯಾ ಪುಡಿ -1 ಚಮಚ
    ಜೀರಿಗೆ ಪುಡಿ – 1 ಚಮಚ
    ಆಮ್‌ಚೂರ್ ಪೌಡರ್ – ಒಂದೂವರೆ ಚಮಚ
    ಗರಂ ಮಸಾಲ – 1 ಚಮಚ
    ಬ್ಲ್ಯಾಕ್ ಸಾಲ್ಟ್ – ಅರ್ಧ ಚಮಚ
    ಅರಶಿಣ – ಅರ್ಧ ಚಮಚ
    ಮೈದಾ – ಅರ್ಧ ಕಪ್
    ಗೋಧಿ ಹಿಟ್ಟು – ಅರ್ಧ ಕಪ್
    ಉಪ್ಪು – 1 ಚಮಚ
    ಎಣ್ಣೆ – 1 ಚಮಚ
    ನೀರು – ಅರ್ಧ ಕಪ್
    ವಿನೇಗರ್ – 2 ಚಮಚ
    ಹೆಚ್ಚಿದ ಹಸಿರು ಮೆಣಸು – 1 ಚಮಚ
    ಹೆಚ್ಚಿದ ಈರುಳ್ಳಿ – 2 ಕಪ್
    ಕ್ಯಾಪ್ಸಿಕಮ್ – ಅರ್ಧ ಕಪ್
    ಬೆಣ್ಣೆ – 1 ಚಮಚ
    ಹೆಚ್ಚಿದ ಬೆಳ್ಳುಳ್ಳಿ – 1 ಚಮಚ
    ಹೆಚ್ಚಿದ ಶುಂಠಿ – 1 ಚಮಚ
    ಬೇಯಿಸಿದ ಅಲೂಗೆಡ್ಡೆ – 2
    ಮಯೋನೀಸ್ – 2 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಫ್ರಾಂಕಿ ಮಸಾಲ ಮಾಡಲು ಒಂದು ಬೌಲಿಗೆ ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಆಮ್‌ಚೂರ್ ಪೌಡರ್, ಗರಂ ಮಸಾಲ, ಬ್ಲ್ಯಾಕ್ ಸಾಲ್ಟ್, ಅರಶಿಣ ಹಾಕಿ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಗಾಳಿಯಾಡದಂತೆ ಮುಚ್ಚಿಟ್ಟರೆ ಇನ್ನೊಂದು ಬಾರಿಗೆ ಉಪಯೋಗಿಸಿಕೊಳ್ಳಬಹುದು.
    * ಈಗ ಇನ್ನೊಂದು ದೊಡ್ಡ ಬೌಲ್‌ನಲ್ಲಿ ಮೈದಾ ಹಿಟ್ಟು, ಗೋಧಿ ಹಿಟ್ಟು, ಉಪ್ಪು, ಎಣ್ಣೆಯನ್ನು ಹಾಕಿಕೊಂಡು ಅದಕ್ಕೆ ಅರ್ಧ ಕಪ್ ನೀರನ್ನು ಸೇರಿಸಿಕೊಂಡು ಚನ್ನಾಗಿ ಕಲಸಿಕೊಳ್ಳಿ. ನೀರು ಬೇಕೆನಿಸದರೆ ಮತ್ತೆ ಸ್ವಲ್ಪ ನೀರನ್ನು ಸೇರಿಸಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
    * ಈಗ ಅದರ ಮೇಲೆ ಸ್ವಲ್ಪ ಎಣ್ಣೆಯನ್ನು ಹಾಕಿ 30 ನಿಮಿಷಗಳ ಕಾಲ ಮುಚ್ಚಿಡಿ.
    * ಈಗ ಒಂದು ಚಿಕ್ಕ ಬೌಲ್‌ಗೆ 2 ಚಮಚ ವಿನೇಗರ್ ಹಾಕಿಕೊಂಡು ಅದಕ್ಕೆ ಹೆಚ್ಚಿದ ಹಸಿರು ಮೆಣಸನ್ನು ಸೇರಿಸಿಕೊಂಡು ಸ್ವಲ್ಪ ಉಪ್ಪನ್ನು ಹಾಕಿ 20 ನಿಮಿಷಗಳ ಕಾಲ ಹಾಗೆಯೇ ಬಿಡಿ.
    * ನಂತರ ಮುಚ್ಚಿಟ್ಟಿದ್ದ ಚಪಾತಿ ಹಿಟ್ಟನ್ನು ಮತ್ತೊಂದು ಬಾರಿ ಕಲಸಿಕೊಂಡು ಉಂಡೆಗಳನ್ನಾಗಿ ಮಾಡಿಕೊಳ್ಳಿ. ಬಳಿಕ ಅದನ್ನು ಚಪಾತಿ ರೀತಿಯಲ್ಲಿ ಲಟ್ಟಿಸಿಕೊಳ್ಳಿ.
    * ಬಳಿಕ ಒಂದು ತವಾದಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿಕೊಂಡು ತವಾ ಬಿಸಿಯಾದ ಬಳಿಕ ಚಪಾತಿಗಳನ್ನು ಎರಡೂ ಬದಿ ಬೇಯಿಸಿಕೊಳ್ಳಿ. ಈ ರೀತಿ ಎಲ್ಲಾ ಚಪಾತಿಗಳನ್ನು ಮಾಡಿ ಬದಿಗಿಟ್ಟುಕೊಳ್ಳಿ.
    * ಈಗ ಅದೇ ತವಾದ ಮೇಲೆ ಈರುಳ್ಳಿ, ಕ್ಯಾಪ್ಸಿಕಮ್ ಹಾಕಿ ಚನ್ನಾಗಿ ಫ್ರೈ ಮಾಡಿಕೊಳ್ಳಿ. ಬಳಿಕ ಚಿಟಿಕೆ ಉಪ್ಪನ್ನು ಸೇರಿಸಿಕೊಂಡು ತಿರುವಿಕೊಂಡು ಒಂದು ಪ್ಲೇಟ್‌ಗೆ ಹಾಕಿ ಬದಿಗಿಡಿ.
    * ಈಗ ಮತ್ತೆ ತವಾದ ಮೇಲೆ ಬೆಣ್ಣೆ ಹಾಕಿಕೊಂಡು ಅದರ ನೀರಾದ ಬಳಿಕ ಅದಕ್ಕೆ ಸ್ವಲ್ಪ ಹೆಚ್ಚಿದ ಹಸಿರು ಮೆಣಸನ್ನು ಹಾಕಿಕೊಂಡು, ಹೆಚ್ಚಿದ ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿಕೊಂಡು ಹಸಿವಾಸನೆ ಹೋಗುವವರೆಗೆ ಫ್ರೈ ಮಾಡಿಕೊಳ್ಳಿ.
    * ನಂತರ ಅದಕ್ಕೆ ಒಂದು ಕಪ್ ಹೆಚ್ಚಿದ ಈರುಳ್ಳಿಯನ್ನು ಹಾಕಿಕೊಂಡು ತಿರುವಿಕೊಳ್ಳಿ.
    * ಈಗ ಅದಕ್ಕೆ ಒಂದೂವರೆ ಚಮಚ ಫ್ರಾಂಕಿ ಮಸಾಲೆ ಪೌಡರ್ ಅನ್ನು ಹಾಕಿಕೊಂಡು ಮತ್ತೊಮ್ಮೆ ತಿರುವಿಕೊಳ್ಳಿ. ಬಳಿಕ ಸ್ವಲ್ಪ ಉಪ್ಪು ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಬೇಯಿಸಿ ಕಿವುಚಿಕೊಂಡ ಆಲೂಗೆಡ್ಡೆಯನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಂಡು ಚಿಕ್ಕ ಚಿಕ್ಕ ಉದ್ದನೆಯ ಉಂಡೆಗಳನ್ನಾಗಿ ಮಾಡಿ.
    * ಬಳಿಕ ಚಪಾತಿಗೆ ಸ್ವಲ್ಪ ಪುದಿನಾ ಚಟ್ನಿಯನ್ನು ಸವರಿಕೊಂಡು ಅದರ ಮೇಲೆ ಆಲೂಗೆಡ್ಡೆ ಮಿಶ್ರಣವನ್ನು ಇಟ್ಟುಕೊಂಡು ಅದಕ್ಕೆ ಕ್ಯಾಪ್ಸಿಕಮ್ ಮತ್ತು ಈರುಳ್ಳಿ ಮಿಶ್ರಣವನ್ನು ಹಾಕಿಕೊಳ್ಳಿ. ಬಳಿಕ ಇದರ ಮೇಲೆ ಸ್ವಲ್ಪ ಮಯೋನೀಸ್ ಸವರಿಕೊಂಡು ಅದಕ್ಕೆ ವಿನೇಗರ್ ಮತ್ತು ಹಸಿರು ಮೆಣಸು ಮಿಶ್ರಣವನ್ನು ಹಾಕಿಕೊಂಡು ರೋಲ್ ಮಾಡಿ.
    * ವೆಜ್ ಫ್ರಾಂಕಿ ರೋಲ್ ತಿನ್ನಲು ರೆಡಿ. ಇದನ್ನೂ ಓದಿ: ಮತ್ತೆ ಮತ್ತೆ ತಿನ್ನಬೇಕು ಎನಿಸುವ ಎಳ್ಳು ಚಿಕ್ಕಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 30 ನಿಮಿಷದಲ್ಲಿ ಮಾಡಿ ಸಿಂಪಲ್ ಗೋಬಿ ಕೂರ್ಮಾ

    30 ನಿಮಿಷದಲ್ಲಿ ಮಾಡಿ ಸಿಂಪಲ್ ಗೋಬಿ ಕೂರ್ಮಾ

    ಪಾತಿ, ಪೂರಿ, ದೋಸೆಯೊಂದಿಗೆ ಸವಿಯಲು ಅಥವಾ ಊಟದೊಂದಿಗೆ ಸೈಡ್ ಡಿಶ್ ಆಗಿ ಬಡಿಸಲು ನಾವಿಂದು ಕೇವಲ 30 ನಿಮಿಷಗಳಲ್ಲಿ ಮಾಡಬಹುದಾದ ಒಂದು ಸಿಂಪಲ್ ರೆಸಿಪಿಯನ್ನು ಹೇಳಿಕೊಡುತ್ತೇವೆ. ಗೋಬಿಯಿಂದ ಸಿಂಪಲ್ ಆಗಿ ನೀವು ಈ ರೀತಿಯಾಗಿ ಕೂರ್ಮಾವನ್ನು ಮಾಡಿ ನೋಡಿ.

    ಬೇಕಾಗುವ ಪರ್ದಾರ್ಥಗಳು:
    ಹೂಕೋಸು/ಗೋಬಿ – 200 ಗ್ರಾಂ
    ಬೀನ್ಸ್ – 100 ಗ್ರಾಂ
    ಕ್ಯಾರೆಟ್ – 1
    ಬಟಾಣಿ – ಅರ್ಧ ಕಪ್
    ಜೀರಿಗೆ – ಅರ್ಧ ಟೀಸ್ಪೂನ್
    ಈರುಳ್ಳಿ – 2
    ಲವಂಗ – 2
    ದಾಲ್ಚಿನ್ನಿ ಚಕ್ಕೆ – 1
    ಏಲಕ್ಕಿ – 1
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಹಸಿರು ಮೆಣಸಿನಕಾಯಿ – 2
    ಹಾಲು – 1 ಕಪ್
    ಗರಂ ಮಸಾಲೆ ಪುಡಿ – ಅರ್ಧ ಟೀಸ್ಪೂನ್
    ತುಪ್ಪ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ ಇದನ್ನೂ ಓದಿ: ಚಹಾದೊಂದಿಗೆ ಮಜವೆನಿಸುತ್ತದೆ ಬೆಂಡೆಕಾಯಿಯ ಕುರುಕಲು ತಿಂಡಿ

    ಮಾಡುವ ವಿಧಾನ:
    * ಮೊದಲಿಗೆ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಜೀರಿಗೆ ಹಾಕಿ ಹುರಿದುಕೊಳ್ಳಿ.
    * ಜೀರಿಗೆ ಸಿಡಿಯುವ ವೇಳೆ ಹೆಚ್ಚಿದ ಈರುಳ್ಳಿ, ಲವಂಗ, ದಾಲ್ಚಿನ್ನಿ, ಏಲಕ್ಕಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ ಸೇರಿಸಿ ಸ್ವಲ್ಪ ಹುರಿಯಿರಿ.
    * ಹೂಕೋಸು, ಬೀನ್ಸ್, ಕ್ಯಾರೆಟ್, ಬಟಾಣಿ, ಉಪ್ಪು, ಅರ್ಧ ಕಪ್ ಹಾಲು ಮತ್ತು ಕಾಲು ಕಪ್ ನೀರು ಸೇರಿಸಿ.
    * ತರಕಾರಿಗಳು ಮೃದುವಾಗುವವರೆಗೆ ಮುಚ್ಚಿ, ಬೇಯಿಸಿ.
    * ನಂತರ ಉಳಿದ ಹಾಲು ಮತ್ತು ಗರಂ ಮಸಾಲಾ ಸೇರಿಸಿ ಇನ್ನೂ 5 ನಿಮಿಷ ಬೇಯಿಸಿಕೊಳ್ಳಿ.
    * ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿಯಾಗಿ ಗೋಬಿ ಕೂರ್ಮಾವನ್ನು ಬಡಿಸಿ. ಇದನ್ನೂ ಓದಿ: ಕಬಾಬ್ ಪೌಡರ್ ಇಲ್ಲದೇ ಸೋಯಾ ಕಬಾಬ್ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೇಸಿಗೆಯಲ್ಲಿ ತಂಪಾಗಿರೋಕೆ ರಾಗಿ ಅಂಬಲಿ ಕುಡಿಯಿರಿ

    ಬೇಸಿಗೆಯಲ್ಲಿ ತಂಪಾಗಿರೋಕೆ ರಾಗಿ ಅಂಬಲಿ ಕುಡಿಯಿರಿ

    ಬೇಸಿಗೆಯಲ್ಲಿ ಹೆಚ್ಚಿನ ಉಷ್ಣದಿಂದಾಗಿ ದೇಹವು ನಾನಾ ಬಾಧೆಗೆ ಒಳಗಾಗುತ್ತದೆ. ಬಿಸಿಲಲ್ಲಿ ಕೂಲ್ ಆಗಿರೋಣ ಅಂತ ತಂಪು ಪಾನೀಯಗಳನ್ನ ಸೇವಿಸಿದ್ರೆ ಆರೋಗ್ಯಕ್ಕೆ ಮತ್ತಷ್ಟು ಹಾನಿಯಾಗುತ್ತದೆ. ಹೀಗಾಗಿ ದೇಹಕ್ಕೆ ತಂಪು ನೀಡೋ ರಾಗಿಯಿಂದ ಮಾಡಿದ ಆಹಾರ ಬೇಸಿಗೆಗೆ ಹೇಳಿ ಮಾಡಿಸಿದ್ದು. ಅದರಲ್ಲೂ ಬೇಸಿಗೆಯಲ್ಲಿ ಪ್ರತಿದಿನ ರಾಗಿ ಗಂಜಿ ಅಥವಾ ರಾಗಿ ಅಂಬಲಿ ಮಾಡಿ ಕುಡಿದರೆ ಆರೋಗ್ಯಕ್ಕೂ ಒಳ್ಳೆಯದು. ಆದ್ರೆ ಅದನ್ನ ಹೇಗೆ ಮಾಡೋದಪ್ಪಾ ಅಂತೀರಾ? ಇಲ್ಲಿದೆ ನೋಡಿ ಸಿಂಪಲ್ ವಿಧಾನ

    ಬೇಕಾಗುವ ಸಾಮಾಗ್ರಿಗಳು:

    ರಾಗಿ ಹಿಟ್ಟು – 4 ಚಮಚ
    ಪುಡಿ ಮಾಡಿದ ಜೀರಿಗೆ – 1/2 ಚಮಚ
    ಮೊಸರು ಅಥವಾ ಮಜ್ಜಿಗೆ – 1 ಕಪ್
    ನೀರು – 2 ಲೋಟ
    ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:

    * ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟನ್ನು ಹಾಕಿ ಅದಕ್ಕೆ 1/2 ಕಪ್ ನಷ್ಟು ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬಳಿಕ ಉಳಿದ ನೀರು ಹಾಕಿ ಕಲಸಿಕೊಳ್ಳಿ.
    * ನಂತರ ಒಲೆಯ ಮೇಲೆ ಒಂದು ಪಾತ್ರೆ ಇಟ್ಟು, ರಾಗಿ ಹಿಟ್ಟಿನ ಮಿಶ್ರಣವನ್ನ ಹಾಕಿ ಗಂಟಾಗದಂತೆ ಕೈಯ್ಯಾಡಿಸುತ್ತಾ 3 ನಿಮಿಷದವರೆಗೆ ಕಾಯಿಸಿಕೊಳ್ಳಿ.
    * ಹಿಟ್ಟು ಸ್ವಲ್ಪ ಗಟ್ಟಿ ಆದಾಗ ಅದಕ್ಕೆ ಉಪ್ಪು ಮತ್ತು ಜೀರಿಗೆ ಪುಡಿ ಹಾಕಿ ಮಿಕ್ಸ್ ಮಾಡಿ ನಂತರ ಒಲೆಯಿಂದ ಕೆಳಗಿಳಿಸಿ ಆರಲು ಬಿಡಿ.
    * ಗಂಜಿ ಸಂಪೂರ್ಣ ತಣ್ಣಗಾದ ನಂತರ ಮೊಸರು ಅಥವಾ ಮಜ್ಜಿಗೆಯನ್ನು ಹಾಕಿ ಮಿಕ್ಸ್ ಮಾಡಿದರೆ ರಾಗಿ ಅಂಬಲಿ ಸವಿಯಲು ಸಿದ್ಧ. ನಿಮಗೆ ಇಷ್ಟವಿದ್ದರೆ ಇದಕ್ಕೆ ಸಣ್ಣಗೆ ಕಟ್ ಮಾಡಿದ ಈರುಳ್ಳಿ ಸೇರಿಸಿಕೊಳ್ಳಬಹುದು.

     

  • ಚಿಕನ್ ಲಿವರ್ ಪೆಪ್ಪರ್ ಫ್ರೈ – ಲಿವರ್ ಪ್ರಿಯರು ಟ್ರೈ ಮಾಡ್ಲೇಬೇಕಾದ ರೆಸಿಪಿ

    ಚಿಕನ್ ಲಿವರ್ ಪೆಪ್ಪರ್ ಫ್ರೈ – ಲಿವರ್ ಪ್ರಿಯರು ಟ್ರೈ ಮಾಡ್ಲೇಬೇಕಾದ ರೆಸಿಪಿ

    ಚಿಕನ್ ಲಿವರ್ ಪೆಪ್ಪರ್ ಫ್ರೈ ಅತ್ಯಂತ ಜನಪ್ರಿಯ ಮಾತ್ರವಲ್ಲದೇ ಟೇಸ್ಟಿಯಾದ ನಾನ್‌ವೆಜ್ ರೆಸಿಪಿಗಳಲ್ಲಿ ಒಂದು. ಇದು ಯುರೋಪಿಯನ್, ಏಷ್ಯನ್ ಮತ್ತು ದಕ್ಷಿಣ ದೇಶಗಳಲ್ಲಿ ಹೆಚ್ಚು ಹೆಸರುವಾಸಿಯಾಗಿದೆ. ನಮ್ಮಲ್ಲಿ ಚಿಕನ್ ಖಾದ್ಯ ಏನಾದರೂ ಮಾಡಿದಾಗ ಲಿವರ್ ಹುಡುಕುವಂತಹವರೂ ಇದ್ದಾರೆ. ಅಂತಹ ಲಿವರ್ ಪ್ರಿಯರಿಗಾಗಿ ನಾವಿಂದು ಚಿಕನ್ ಲಿವರ್ ಪೆಪ್ಪರ್ ಫ್ರೈ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ನೀವೂ ಇದನ್ನು ಮನೆಯಲ್ಲಿ ಟ್ರೈ ಮಾಡಿ, ಚಪ್ಪರಿಸಿ ಸವಿಯಿರಿ.

    ಬೇಕಾಗುವ ಪದಾರ್ಥಗಳು:
    ಚಿಕನ್ ಲಿವರ್ _ 400 ಗ್ರಾಂ
    ಹೆಚ್ಚಿದ ಈರುಳ್ಳಿ – 4
    ಟೊಮೆಟೋ – 1
    ಶುಂಠಿ ಪೇಸ್ಟ್ – 1 ಟೀಸ್ಪೂನ್
    ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಜೀರಿಗೆ ಪುಡಿ – 1 ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಜೀರಿಗೆ – ಕಾಲು ಟೀಸ್ಪೂನ್
    ಅರಿಶಿನ ಪುಡಿ – ಅರ್ಧ ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಅಡುಗೆ ಎಣ್ಣೆ – 2 ಟೀಸ್ಪೂನ್
    ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ ಇದನ್ನೂ ಓದಿ: ಸಖತ್ ಟೇಸ್ಟಿ ಕೀಮಾ ಮಟರ್ ಟ್ರೈ ಮಾಡಿ

    ಮಾಡುವ ವಿಧನಾ:
    * ಮೊದಲಿಗೆ ಚಿಕನ್ ಲಿವರ್ ಅನ್ನು ಚೆನ್ನಾಗಿ ತೊಳೆದು ನೀರನ್ನು ಹರಿಸಿ.
    * ಅದಕ್ಕೆ ಅರಿಶಿನ ಪುಡಿಯನ್ನು ಚೆನ್ನಾಗಿ ಲೇಪಸಿ, ಸುಮಾರು 5-10 ನಿಮಿಷ ಪಕ್ಕಕ್ಕಿಡಿ.
    * ಒಂದು ಬಾಣಲೆಗೆ ಎಣ್ಣೆ ಹಾಕಿ, ಜೀರಿಗೆ ಹಾಗೂ ಈರುಳ್ಳಿ ಸೇರಿಸಿ ಸ್ವಲ್ಪ ಹುರಿದುಕೊಳ್ಳಿ.
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ಈರುಳ್ಳಿ ಸ್ವಲ್ಪ ಮೆತ್ತಗಾಗುವವರೆಗೆ ಹುರಿದುಕೊಳ್ಳಿ.
    * ನಂತರ ಚಿಕನ್ ಲಿವರ್ ಸೇರಿಸಿ ಹುರಿದುಕೊಳ್ಳಿ. ಲಿವರ್ ನೀರು ಬಿಡಲು ಪ್ರಾರಂಭಿಸುತ್ತದೆ. ನಂತರ ನೀರಿನಂಶ ಆವಿಯಾಗಲು ಬಿಡಿ. ಪ್ಯಾನ್ ಅನ್ನು ಮುಚ್ಚುವುದು ಬೇಡ.
    * ಲಿವರ್ ತುಂಡುಗಳ ಮೇಲೆ ಕಾಳುಮೆಣಸಿನ ಪುಡಿ, ಮೆಣಸಿನ ಪುಡಿ ಮತ್ತು ಜೀರಿಗೆ ಪುಡಿಯನ್ನು ಸಿಂಪಡಿಸಿ ಮತ್ತು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ.
    * ಟೊಮೆಟೋವನ್ನು ಸೇರಿಸಿ, ಅದು ಬಿಡುವ ನೀರಿನಿಂದ ಲಿವರ್ ಅನ್ನು ಬೇಯಿಸಿಕೊಳ್ಳಿ.
    * ಬಳಿಕ ಉಪ್ಪು ಸೇರಿಸಿ, ಎಲ್ಲಾ ನೀರು ಆವಿಯಾಗುವವರೆಗೆ ಫ್ರೈ ಮಾಡುವುದನ್ನು ಮುಂದುವರಿಸಿ.
    * ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚಿಕನ್ ಲಿವರ್ ಪೆಪ್ಪರ್ ಫ್ರೈ ತಯಾರಾಗುತ್ತದೆ. ಇದನ್ನು ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ರುಚಿರುಚಿಯಾದ ಬಾಂಬೆ ಬಟರ್ ಚಿಕನ್ ಹೀಗೆ ಮಾಡಿ

    
    

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಕ್ಷಾಬಂಧನ ಸ್ಪೆಷಲ್ – ಒಡಹುಟ್ಟಿದವರಿಗೆ ನಿಮ್ಮ ಕೈಯಾರೆ ಮಾಡಿ ಕೊಡಿ ಚಾಕ್ಲೇಟ್ ಬರ್ಫಿ

    ರಕ್ಷಾಬಂಧನ ಸ್ಪೆಷಲ್ – ಒಡಹುಟ್ಟಿದವರಿಗೆ ನಿಮ್ಮ ಕೈಯಾರೆ ಮಾಡಿ ಕೊಡಿ ಚಾಕ್ಲೇಟ್ ಬರ್ಫಿ

    ಹೋದರ-ಸಹೋದರಿಯರ ನಡುವಿನ ಪವಿತ್ರ ಬಂಧನವನ್ನು ಗುರುತಿಸೋ ರಕ್ಷಾ ಬಂಧನ ಹಬ್ಬದ ಹತ್ತಿರದಲ್ಲಿ ನಾವಿದ್ದೇವೆ. ಪರಸ್ಪರ ರಕ್ಷಣೆಯ ಭರವಸೆ ನೀಡುವ ಈ ದಿನ ನಿಮ್ಮ ಕೈಯಾರೆ ಸಿಹಿಯನ್ನು ತಯಾರಿಸಿ, ನಿಮ್ಮ ಒಡಹುಟ್ಟಿದವರಿಗೆ ನೀಡುವ ಮೂಲಕ ನೀವು ಅವರನ್ನು ಸೋತೋಷಪಡಿಸಬಹುದು. ನಾವಿಂದು ಚಾಕ್ಲೇಟ್‌ನಿಂದ ಸಿಂಪಲ್ ಆಗಿ ಬರ್ಫಿ ಹೇಗೆ ಮಾಡೋದು ಎಂದು ಹೇಳಿಕೊಡುತ್ತೇವೆ. ರಾಖಿ ಕಟ್ಟೋದರೊಂದಿಗೆ ಪರಸ್ಪರ ಈ ಸಿಹಿಯನ್ನೂ ಹಂಚಿ ರಕ್ಷಾಬಂಧನವನ್ನು ಆಚರಿಸಿ.

    ಬೇಕಾಗುವ ಪದಾರ್ಥಗಳು:
    ಹಾಲಿನ ಪುಡಿ – 2 ಕಪ್
    ಕೋಕೋ ಪೌಡರ್ – ಕಾಲು ಕಪ್
    ಕಂಡೆನ್ಸ್ಡ್ ಮಿಲ್ಕ್ – 400 ಗ್ರಾಂ
    ಹಾಲು – ಕಾಲು ಕಪ್
    ಏಲಕ್ಕಿ ಪುಡಿ – 1 ಟೀಸ್ಪೂನ್
    ಪಿಸ್ತಾ – ಅಲಂಕರಿಸಲು ಬೇಕಾಗುವಷ್ಟು
    ಬೆಣ್ಣೆ – 2 ಟೀಸ್ಪೂನ್
    ತುಪ್ಪ – 2 ಟೀಸ್ಪೂನ್ ಇದನ್ನೂ ಓದಿ: ಮತ್ತೆ ಮತ್ತೆ ತಿನ್ನಬೇಕು ಎನಿಸುವ ಎಳ್ಳು ಚಿಕ್ಕಿ

    ಮಾಡುವ ವಿಧಾನ:
    * ಮೊದಲಿಗೆ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಅದರಲ್ಲಿ ಬೆಣ್ಣೆ ಹಾಕಿ ಕರಗಿಸಿಕೊಳ್ಳಿ. ಉರಿಯನ್ನು ಆಫ್ ಮಾಡಿ, ಹಾಲಿನ ಪುಡಿ ಹಾಗೂ ಕೋಕೋ ಪೌಡರ್ ಅನ್ನು ಸೇರಿಸಿ.
    * ಒಂದು ಸೌಟಿನ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಬಳಿಕ ಕಂಡೆನ್ಸ್ಡ್ ಮಿಲ್ಕ್ ಅನ್ನು ಸೇರಿಸಿ.
    * ಉರಿಯನ್ನು ಆನ್ ಮಾಡಿ, ಕಡಿಮೆ ಉರಿಯಲ್ಲಿ ಮಿಶ್ರಣ ಮಾಡಿಕೊಳ್ಳಿ.
    * ಬಳಿಕ ಹಾಲು ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ, ಸುಮಾರು 10-12 ನಿಮಿಷಗಳ ವರೆಗೆ ಆಗಾಗ ಬೆರೆಸುತ್ತಾ ಬೇಯಿಸಿಕೊಳ್ಳಿ.
    * ಚಾಕ್ಲೇಟ್ ಮಿಶ್ರಣ ಪ್ಯಾನ್‌ನ ಬದಿಯನ್ನು ಬಿಡಲು ಪ್ರಾರಂಭಿಸಿದಾಗ ಉರಿಯನ್ನು ಆಫ್ ಮಾಡಿ, ಅದಕ್ಕೆ ತುಪ್ಪದಿಂದ ಗ್ರೀಸ್ ಮಾಡಿ, ಒಂದು ಪ್ಲೇಟ್‌ಗೆ ವರ್ಗಾಯಿಸಿ.
    * ಮಿಶ್ರಣ ಸ್ವಲ್ಪ ತಣ್ಣಗಾದ ಬಳಿಕ ಒಂದು ಚಮಚ ತುಪ್ಪವನ್ನು ನಿಮ್ಮ ಕೈಗೆ ಸವರಿಕೊಂಡು ಪುಟ್ಟ ಪುಟ್ಟ ಉಂಡೆಗಳನ್ನು ತಯಾರಿಸಿಕೊಳ್ಳಿ.
    * ಪಿಸ್ತಾ ಬಳಸಿ ಪೇಡಾಗಳನ್ನು ಅಲಂಕರಿಸಿ.
    * ಪೇಡಾ ಆರಂಭದಲ್ಲಿ ಜಿಗುಟಾಗಿದ್ದರೂ ಸುಮಾರು 3-4 ಗಂಟೆಗಳಲ್ಲಿ ಅದು ಸೆಟ್ ಆಗುತ್ತದೆ.
    * ಇದೀಗ ಚಾಕ್ಲೇಟ್ ಪೇಡಾ ತಯಾರಾಗಿದ್ದು, ನಿಮ್ಮ ಒಡಹುಟ್ಟಿದವರಿಗೆ ಹಂಚಿ ರಕ್ಷಾಬಂಧನ ಆಚರಿಸಿ. ಇದನ್ನೂ ಓದಿ: ಮನೆಯಲ್ಲೇ ಮಾಡ್ನೋಡಿ ಅಂಜೂರ, ಖರ್ಜೂರ ಬರ್ಫಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಹಾದೊಂದಿಗೆ ಮಜವೆನಿಸುತ್ತದೆ ಬೆಂಡೆಕಾಯಿಯ ಕುರುಕಲು ತಿಂಡಿ

    ಚಹಾದೊಂದಿಗೆ ಮಜವೆನಿಸುತ್ತದೆ ಬೆಂಡೆಕಾಯಿಯ ಕುರುಕಲು ತಿಂಡಿ

    ಸಂಜೆ ವೇಳೆ ಚಹಾದೊಂದಿಗೆ ಸವಿಯಲು ಕುರುಕಲು ತಿಂಡಿ ಏನಾದರೂ ಯಾವಾಗಲೂ ಬೇಕೇ ಬೇಕು. ಬೇಕರಿಯಿಂದ ನೀವು ಯಾವಾಗಲೂ ಕುರುಕಲು ತಿಂಡಿ ತರೋದಕ್ಕಿಂತ ಮನೆಯಲ್ಲೇ ಏನಾದರೂ ಸಿಂಪಲ್ ಆಗಿ ಟ್ರೈ ಮಾಡಲು ಬಯಸಿದರೆ ನಾವಿಂದು ಹೇಳಿಕೊಡುತ್ತಿರೋ ರೆಸಿಪಿ ಪರ್ಫೆಕ್ಟ್ ಆಗಿದೆ. ಬೆಂಡೆಕಾಯಿಯ ಈ ಕುರುಕಲು ತಿಂಡಿ ಚಹಾದೊಂದಿಗೆ ಸವಿಯಲು ಮಜವೆನಿಸುತ್ತದೆ. ಊಟದೊಂದಿಗೆ ಇದನ್ನು ನೀವು ಸೈಡ್ ಡಿಶ್ ಆಗಿಯೂ ಬಳಸಬಹುದು.

    ಬೇಕಾಗುವ ಪದಾರ್ಥಗಳು:
    ಬೆಂಡೆಕಾಯಿ – 200 ಗ್ರಾಂ
    ಕಡಲೆ ಹಿಟ್ಟು – 2 ಟೀಸ್ಪೂನ್
    ಅಕ್ಕಿ ಹಿಟ್ಟು – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಕೆಂಪು ಮೆಣಸಿನಪುಡಿ – ಅರ್ಧ ಟೀಸ್ಪೂನ್
    ಆಮ್ಚೂರ್ ಪುಡಿ – ಕಾಲು ಟೀಸ್ಪೂನ್
    ಚಾಟ್ ಮಸಾಲಾ – 1 ಟೀಸ್ಪೂನ್
    ಎಣ್ಣೆ – ಹುರಿಯಲು ಬೇಕಾಗುವಷ್ಟು ಇದನ್ನೂ ಓದಿ: ಕಬಾಬ್ ಪೌಡರ್ ಇಲ್ಲದೇ ಸೋಯಾ ಕಬಾಬ್ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಬೆಂಡೆಕಾಯಿಗಳನ್ನು ಚೆನ್ನಾಗಿ ತೊಳೆದು ಶುಭ್ರ, ಒಣ ಬಟ್ಟೆಯಿಂದ ಒರೆಸಿಕೊಳ್ಳಿ.
    * ಬೆಂಡೆಕಾಯಿಯ ಅಂಚುಗಳನ್ನು ಕತ್ತರಿಸಿ, ತೆಳ್ಳಗಿನ ಹಾಗೂ ಉದ್ದವಾದ ತುಂಡುಗಳಾಗಿ ಹೆಚ್ಚಿಕೊಳ್ಳಿ.
    * ಬಳಿಕ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಕೆಂಪು ಮೆಣಸಿನಪುಡಿ, ಆಮ್ಚೂರ್‌ಪುಡಿಯನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
    * ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಬೆಂಡೆಕಾಯಿಗಳನ್ನು ಕುರುಕಲಾಗುವಂತೆ ಹಾಗೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಡೀಪ್ ಫ್ರೈ ಮಾಡಿ.
    * ಬಳಿಕ ಅವುಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
    * ನಂತರ ಅದರ ಮೇಲೆ ಚಾಟ್ ಮಸಾಲಾವನ್ನು ಸಿಂಪಡಿಸಿ.
    * ಇದೀಗ ಬೆಂಡೆಕಾಯಿಯ ಕುರುಕಲು ತಿಂಡಿ ಸಿದ್ಧವಾಗಿದ್ದು, ಚಹಾದೊಂದಿಗೆ ಇಲ್ಲವೇ ಊಟದೊಂದಿಗೆ ಸೈಡ್ ಡಿಶ್ ಆಗಿ ಬಡಿಸಿ. ಇದನ್ನೂ ಓದಿ: ಅವಲಕ್ಕಿಯಿಂದ ಮಾಡಿ ನಮ್ಕೀನ್ ಕೇಕ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಖತ್ ಟೇಸ್ಟಿ ಕೀಮಾ ಮಟರ್ ಟ್ರೈ ಮಾಡಿ

    ಸಖತ್ ಟೇಸ್ಟಿ ಕೀಮಾ ಮಟರ್ ಟ್ರೈ ಮಾಡಿ

    ಟನ್ ಬಳಸಿ ಮಾಡುವ ಈ ಕೀಮಾ ಮಟರ್ ತಯಾರಿಸೋದು ಸುಲಭವಾಗಿದ್ದು, ನಿಮ್ಮ ಇಡೀ ಮನೆಯವರು ಚಪ್ಪರಿಸಿ ಸವಿಯೋದು ಖಂಡಿತಾ. ಕೊಚ್ಚಿದ ಮಟನ್ ಮಾಂಸವನ್ನು (ಖೀಮಾ) ಒಲೆಯಲ್ಲಿ ಅಥವಾ ಸ್ಲೋ ಕುಕ್ಕರ್‌ನಲ್ಲಿ ಮಾಡಬಹುದು. ಭಾನುವಾರದ ನಾನ್‌ವೆಜ್ ಸ್ಪೆಷಲ್‌ಗೆ ಈ ರೆಸಿಪಿಯನ್ನು ನೀವು ಕೂಡಾ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಆಲಿವ್ ಎಣ್ಣೆ – 2 ಟೀಸ್ಪೂನ್
    ಸಣ್ಣಗೆ ಕೊಚ್ಚಿದ ಈರುಳ್ಳಿ – 2
    ಕೊಚ್ಚಿದ ಮಟನ್ – 450 ಗ್ರಾಂ
    ಕರಿ ಮಸಾಲೆ ಪುಡಿ – 1 ಟೀಸ್ಪೂನ್
    ಉಪ್ಪು – 1 ಟೀಸ್ಪೂನ್
    ಕೊಚ್ಚಿದ ಬೆಳ್ಳುಳ್ಳಿ – 1 ಟೀಸ್ಪೂನ್
    ಕೊಚ್ಚಿದ ಶುಂಠಿ – 1 ಟೀಸ್ಪೂನ್
    ಟೊಮೆಟೋ ಪ್ಯೂರಿ – 1 ಕಪ್
    ದಾಲ್ಚಿನ್ನಿ ಚಕ್ಕೆ – 1 ಇಂಚು
    ತಾಜಾ ಬಟಾಣಿ – 1 ಕಪ್
    ಮೆಣಸಿನಕಾಯಿ – 2
    ಕೊತ್ತಂಬರಿ ಸೊಪ್ಪು – ಅಲಂಕರಿಸಲು
    ನಿಂಬೆ ಹಣ್ಣು – ಅರ್ಧ ಇದನ್ನೂ ಓದಿ: ಟ್ರೈ ಮಾಡಿ ನೋಡಿ ಟೇಸ್ಟಿ ರಸ್ ಆಮ್ಲೆಟ್

    ಮಾಡುವ ವಿಧಾನ:
    * ಮೊಲಿಗೆ ದೊಡ್ಡ ಬಾಣಲೆಗೆ ಎಣ್ಣೆ ಹಾಕಿ, ಅದಕ್ಕೆ ಈರುಳ್ಳಿ, ಕೀಮಾ, ಕರಿ ಮಸಾಲೆ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
    * ಮಾಂಸ ಚೆನ್ನಾಗಿ ಬೆಂದು ಕಂದು ಬಣ್ಣಕ್ಕೆ ಬಂದ ಬಳಿಕ ಟೊಮೆಟೊ ಪ್ಯೂರಿ, ದಾಲ್ಚಿನ್ನಿ ಸೇರಿಸಿ ಎಲ್ಲವನ್ನು ಬೆರೆಸಿ. ಅಗತ್ಯವಿದ್ದರೆ ಸ್ವಲ್ಪ ನೀರು ಬಳಸಿ.
    * ಸುಮಾರು 20 ನಿಮಿಷಗಳ ಕಾಲ ಆಗಾಗ ಬೆರೆಸುತ್ತಾ ಮುಚ್ಚಳ ಹಾಕದೆ ಬೇಯಿಸಿಕೊಳ್ಳಿ.
    * ನಂತರ ಬಟಾಣಿ ಹಾಕಿ 5 ನಿಮಿಷ ಬೇಯಿಸಿಕೊಳ್ಳಿ.
    * ನಂತರ ದಾಲ್ಚಿನ್ನಿಯನ್ನು ತೆಗೆದು ಹಾಕಿ, ಕತ್ತರಿಸಿದ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ನಿಂಬೆ ರಸ ಸೇರಿಸಿ.
    * ಇದೀಗ ಟೇಸ್ಟಿ ಕೀಮಾ ಮಟರ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಪರೋಟಾಗೆ ರುಚಿಕರ ಟ್ವಿಸ್ಟ್ – ಚಿಕನ್ ಆಲೂ ಪರೋಟಾ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ಮತ್ತೆ ತಿನ್ನಬೇಕು ಎನಿಸುವ ಎಳ್ಳು ಚಿಕ್ಕಿ

    ಮತ್ತೆ ಮತ್ತೆ ತಿನ್ನಬೇಕು ಎನಿಸುವ ಎಳ್ಳು ಚಿಕ್ಕಿ

    ಸಿಹಿಯಾದ ಚಿಕ್ಕಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಮಕ್ಕಳಿಂದ ಹಿಡಿದು ದೊಡ್ಡವರೂ ಸಹ ಇದನ್ನೂ ಇಷ್ಟಪಟ್ಟು ತಿನ್ನುವುದರಲ್ಲಿ ಅನುಮಾನವೇ ಇಲ್ಲ. ಎಳ್ಳು ಸೇವನೆ ನಮ್ಮ ಆರೋಗ್ಯ ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಎಳ್ಳು ಚಿಕ್ಕಿ ಯಾವ ರೀತಿ ಮಾಡಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸಬಹುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಮನೆಯಲ್ಲೇ ಮಾಡ್ನೋಡಿ ಅಂಜೂರ, ಖರ್ಜೂರ ಬರ್ಫಿ

    ಬೇಕಾಗುವ ಸಾಮಗ್ರಿಗಳು:
    ಬಿಳಿ ಎಳ್ಳು – 1 ಕಪ್
    ಪುಡಿ ಮಾಡಿದ ಬೆಲ್ಲ – 1 ಕಪ್
    ನೀರು- ಸ್ವಲ್ಪ
    ಸಿಲ್ವರ್ ಫಾಯಿಲ್
    ತುಪ್ಪ – ಸ್ವಲ್ಪ
    ಏಲಕ್ಕಿ ಪುಡಿ – ಕಾಲು ಚಮಚ
    ಅಡುಗೆ ಸೋಡಾ – ಕಾಲು ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಎಳ್ಳನ್ನು ಹಾಕಿಕೊಂಡು 2 ನಿಮಿಷಗಳವರೆಗೆ ಫ್ರೈ ಮಾಡಿಕೊಂಡು ಬೇರೆ ಬೌಲ್‌ಗೆ ಹಾಕಿಟ್ಟುಕೊಳ್ಳಿ.
    * ಬಳಿಕ ಅದೇ ಪ್ಯಾನ್‌ಗೆ ಬೆಲ್ಲ ಹಾಕಿಕೊಂಡು ಅದಕ್ಕೆ 2 ಚಮಚ ನೀರನ್ನು ಸೇರಿಸಿಕೊಳ್ಳಿ. ಬಳಿಕ ಅದನ್ನು ಮೀಡಿಯಮ್ ಉರಿಯಲ್ಲಿ ಬೆಲ್ಲವನ್ನು ಕರಗಿಸಿಕೊಳ್ಳಿ.
    * ಬಳಿಕ ಕರಗಿಸಿದ ಬೆಲ್ಲಕ್ಕೆ ಒಂದು ಚಮಚ ತುಪ್ಪವನ್ನು ಹಾಕಿಕೊಂಡು ಅದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿಕೊಂಡು ಬೆಲ್ಲದ ಪಾಕ ಕಂದು ಬಣ್ಣ ಆಗುವವರೆಗೆ ತಿರುವಿಕೊಳ್ಳಿ.
    * ನಂತರ ಆ ಮಿಶ್ರಣಕ್ಕೆ ಕಾಲು ಚಮಚ ಅಡುಗೆ ಸೋಡಾವನ್ನು ಹಾಕಿ ಸ್ವಲ್ಪ ಫ್ರೈ ಮಾಡಿಕೊಂಡು ಎಳ್ಳನ್ನು ಸೇರಿಸಿಕೊಳ್ಳಿ.
    * ಸಣ್ಣ ಉರಿಯಲ್ಲಿ 2ರಿಂದ ಮೂರು ನಿಮಿಷ ಈ ಮಿಶ್ರಣವನ್ನು ತಿರುವಿಕೊಳ್ಳಬೇಕು.
    * ಈಗ ಒಂದು ಪ್ಲೇಟ್‌ಗೆ ಸಿಲ್ವರ್ ಫಾಯಿಲ್ ಅನ್ನು ಹಾಕಿಕೊಂಡು ಅದಕ್ಕೆ ತುಪ್ಪ ಹಚ್ಚಿಕೊಂಡು ಬೆಲ್ಲ ಮತ್ತು ಎಳ್ಳಿನ ಮಿಶ್ರಣವನ್ನು ಅದಕ್ಕೆ ವರ್ಗಾಯಿಸಿಕೊಳ್ಳಿ.
    * ಈಗ ಅದನ್ನು ಸಮತಟ್ಟಾಗಿ ಪ್ಲೇಟ್‌ಗೆ ಹರಡಿಕೊಂಡು ಬಿಸಿಯಿರುವಾಗಲೇ ಚೌಕಾಕಾರದಲ್ಲಿ ಚಾಕುವಿನಿಂದ ತುಂಡರಿಸಿಕೊಳ್ಳಿ.
    * ಬಳಿಕ ಇದನ್ನು ಅರ್ಧ ಗಂಟೆಗಳ ಕಾಲ ಹಾಗೆಯೇ ಬಿಡಿ. ಬಿಸಿ ಆರಿದ ಬಳಿಕ ಇದನ್ನು ತುಂಡು ತುಂಡಾಗಿ ಮುರಿದು ತಿನ್ನಲು ಕೊಡಿ. ಇದನ್ನೂ ಓದಿ: ಕಬಾಬ್ ಪೌಡರ್ ಇಲ್ಲದೇ ಸೋಯಾ ಕಬಾಬ್ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಕ್ಕಳು ಇಷ್ಟಪಡೋ ರಾಗಿ, ಬಾಳೆಹಣ್ಣಿನ ದೋಸೆ

    ಮಕ್ಕಳು ಇಷ್ಟಪಡೋ ರಾಗಿ, ಬಾಳೆಹಣ್ಣಿನ ದೋಸೆ

    ರಾಗಿ ಹಾಗೂ ಬಾಳೆಹಣ್ಣು ಬಳಸಿ ಮಾಡಲಾಗೋ ಈ ದೋಸೆ ರುಚಿಕರವಾಗಿದ್ದು ಮಕ್ಕಳು ಇದನ್ನು ಇಷ್ಟಪಟ್ಟು ಸವಿಯುತ್ತಾರೆ. ಕ್ಯಾಲ್ಸಿಯಂ, ಕಬ್ಬಿಣ ಹಾಗೂ ನಾರಿನಂಶ ಹೇರಳವಾಗಿರೋ ರಾಗಿ ಮಕ್ಕಳಿಗಂತೂ ಅತ್ಯುತ್ತಮ ಆಹಾರ. ಬಾಳೆಹಣ್ಣು ಬಳಸಿ ಈ ದೋಸೆಯನ್ನು ಸಿಹಿಯಾಗಿಯೂ ಮಾಡಬಹುದು. ಕೇವಲ 20 ನಿಮಿಷಗಳಲ್ಲಿ ಸುಲಭವಾಗಿ ಮಾಡಬಹುದಾದ ರಾಗಿ, ಬಾಳೆಹಣ್ಣಿನ ದೋಸೆ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ರಾಗಿ ಹಿಟ್ಟು – ಅರ್ಧ ಕಪ್
    ಬಾಳೆಹಣ್ಣು – 1
    ಸಕ್ಕರೆ – 3 ಟೀಸ್ಪೂನ್
    ತೆಂಗಿನ ತುರಿ – ಕಾಲು ಕಪ್
    ನೀರು – ಅರ್ಧ ಕಪ್
    ಹೆಚ್ಚಿದ ಗೋಡಂಬಿ – 2 ಟೀಸ್ಪೂನ್ ಇದನ್ನೂ ಓದಿ: ಅವಲಕ್ಕಿಯಿಂದ ಮಾಡಿ ನಮ್ಕೀನ್ ಕೇಕ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಟ್ಟಲಿನಲ್ಲಿ ಬಾಳೆಹಣ್ಣನ್ನು ಹಾಕಿ ಫೋರ್ಕ್ ಸಹಾಯದಿಂದ ಅದನ್ನು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ.
    * ಅದಕ್ಕೆ ರಾಗಿ ಹಿಟ್ಟು, ಸಕ್ಕರೆ, ನೀರು, ತೆಂಗಿನ ತುರಿ, ಗೋಡಂಬಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಈ ಹಿಟ್ಟಿಗೆ 10 ನಿಮಿಷ ವಿಶ್ರಾಂತಿ ನೀಡಿ.
    * ಈಗ ಬಿಸಿ ತವಾಗೆ ಒಂದು ಸೌಟಿನಷ್ಟು ಹಿಟ್ಟನ್ನು ಸುರಿಯಿರಿ. ಇದನ್ನು ತೆಳ್ಳಗೆ ಹರಡುವುದು ಬೇಡ. ದೋಸೆ ದಪ್ಪವಾಗಿದ್ದರೆ ಉತ್ತಮ.
    * ದೋಸೆ ಒಂದು ಬದಿ ಬೆಂದ ಬಳಿಕ ಅದನ್ನು ತಿರುವಿ ಹಾಕಿ ಮತ್ತೊಂದು ನಿಮಿಷ ಬೇಯಿಸಿಕೊಳ್ಳಿ.
    * ಉಳಿದ ದೋಸೆಯ ಹಿಟ್ಟನ್ನು ಇದೇ ರೀತಿ ಮಾಡುವುದನ್ನು ಮುಂದುವರಿಸಿ.
    * ಇದೀಗ ಮಕ್ಕಳು ಇಷ್ಟಪಟ್ಟು ಸವಿಯೋ ರಾಗಿ, ಬಾಳೆಹಣ್ಣಿನ ದೋಸೆ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಮನೆಯಲ್ಲೇ ಮಾಡ್ನೋಡಿ ಅಂಜೂರ, ಖರ್ಜೂರ ಬರ್ಫಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]