Tag: recipe

  • ಸುಲಭವಾಗಿ ಮಾಡಿ ಟೇಸ್ಟಿ ಪನೀರ್ ಪಕೋಡ

    ಸುಲಭವಾಗಿ ಮಾಡಿ ಟೇಸ್ಟಿ ಪನೀರ್ ಪಕೋಡ

    ನೀರ್‌ನಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇರುವುದರಿಂದ ದೇಹದ ಸ್ನಾಯುಗಳು ಬಲವಾಗುತ್ತವೆ. ಜೊತೆಗೆ ಪನೀರ್ ದೇಹಕ್ಕೆ ಶಕ್ತಿ ನೀಡುವ ಆಹಾರವಾಗಿದ್ದು, ಮಕ್ಕಳ ಬೆಳವಣಿಗೆಗೆ ತುಂಬಾ ಸಹಾಯಕವಾಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಪನೀರ್ ಪಕೋಡ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಸಂಜೆ ಟೀ ಜೊತೆ ಪನೀರ್ ಪಕೋಡ ಪರ್ಫೆಕ್ಟ್ ಕಾಂಬಿನೇಷನ್. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

    ಬೇಕಾಗುವ ಸಾಮಗ್ರಿಗಳು:
    ಪನೀರ್ – 250 ಗ್ರಾಂ
    ಕಡಲೆಹಿಟ್ಟು – 1 ಕಪ್
    ಅಕ್ಕಿಹಿಟ್ಟು – ಕಾಲು ಕಪ್
    ಕೆಂಪು ಮೆಣಸಿನ ಪುಡಿ – 1 ಚಮಚ
    ಅರಿಶಿನ ಪುಡಿ – ಅರ್ಧ ಚಮಚ
    ಜೀರಿಗೆ ಪುಡಿ – ಅರ್ಧ ಚಮಚ
    ಗರಂ ಮಸಾಲ – ಕಾಲು ಚಮಚ
    ಉಪ್ಪು – ರುಚಿಗೆ ತಕ್ಕಷ್ಟು
    ಕೊತ್ತಂಬರಿ ಸೊಪ್ಪು – ಸ್ವಲ್ಪ
    ಎಣ್ಣೆ – ಕರಿಯಲು ಅಗತ್ಯವಿರುವಷ್ಟು
    ನೀರು – ಮಿಶ್ರಣಕ್ಕೆ ಬೇಕಾದಷ್ಟು

    ಮಾಡುವ ವಿಧಾನ:
    *ಮೊದಲು ಪನೀರ್ ಅನ್ನು ಸಣ್ಣ ಚೌಕಾಕಾರದ ತುಂಡುಗಳಾಗಿ ಕತ್ತರಿಸಬೇಕು.
    *ನಂತರ ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿಹಿಟ್ಟು, ಮೆಣಸಿನ ಪುಡಿ, ಅರಿಶಿನ, ಜೀರಿಗೆ ಪುಡಿ, ಗರಂ ಮಸಾಲ, ಉಪ್ಪು ಹಾಗೂ ಕೊತ್ತಂಬರಿ ಸೊಪ್ಪುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣದಲ್ಲಿ ನೀರನ್ನು ನಿಧಾನವಾಗಿ ಸೇರಿಸುತ್ತಾ ದಪ್ಪವಾಗಿರುವ ಪೇಸ್ಟ್ ತಯಾರಿಸಬೇಕು.
    *ಈಗ ಪನೀರ್ ತುಂಡುಗಳನ್ನು ಈ ಮಿಶ್ರಣದಲ್ಲಿ ಮುಳುಗಿಸಿ ಬಾಣಲೆಯಲ್ಲಿ ಬಿಸಿ ಮಾಡಿದ ಎಣ್ಣೆಯಲ್ಲಿ ಹಾಕಿ ಕರಿಯಬೇಕು. ಎರಡೂ ಬದಿ ಗೋಲ್ಡನ್ ಕಲರ್ ಬರುವವರೆಗೆ ಕರಿಯಬೇಕು.
    *ನಂತರ ಪನೀರ್ ಪಕೋಡವನ್ನು ಎಣ್ಣೆಯಿಂದ ತೆಗೆದು ಸರ್ವಿಂಗ್ ಪ್ಲೇಟ್‌ಗೆ ಹಾಕಿಕೊಳ್ಳಿ.
    *ಹಸಿಮೆಣಸಿನ ಚಟ್ನಿ ಅಥವಾ ಟೊಮ್ಯಾಟೊ ಸಾಸ್ ಜೊತೆ ಸವಿಯುವುದರಿಂದ ಪನೀರ್ ಪಕೋಡ ರುಚಿ ಇನ್ನಷ್ಟು ಹೆಚ್ಚುತ್ತದೆ.

  • Dasara 2025 – ದುರ್ಗಾ ದೇವಿಗೆ ಇಷ್ಟವಾದ ಕ್ಷೀರಾನ್ನ ಮಾಡೋದು ಹೇಗೆ?

    Dasara 2025 – ದುರ್ಗಾ ದೇವಿಗೆ ಇಷ್ಟವಾದ ಕ್ಷೀರಾನ್ನ ಮಾಡೋದು ಹೇಗೆ?

    ಲ್ಲೆಡೆ ನಾಡಹಬ್ಬ ದಸರಾ (Dasara) ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದ ವೇಳೆ ದುರ್ಗಾ ದೇವಿಗೆ ಇಷ್ಟವಾಗುವ ನೈವೇದ್ಯವನ್ನು ಮಾಡಿ ಸಮರ್ಪಿಸುವುದರಿಂದ ತಾಯಿ ಸಂತೃಪ್ತಳಾಗುತ್ತಾಳೆ. ಹಾಗಾದರೆ ದೇವಿಗೆ ಇಷ್ಟವಾದ ನೈವೇದ್ಯ ಯಾವುದು ಎಂದರೆ ಅದು ಕ್ಷೀರಾನ್ನ. ಇದನ್ನು ತಯಾರಿಸುವುದು ಹೇಗೆ ಎಂದು ತಿಳಿಯೋಣ.

    ಬೇಕಾಗುವ ಪದಾರ್ಥಗಳು:
    *ಅಕ್ಕಿ
    * ಹಾಲು – 1 ಲೀಟರ್
    * ಕಲ್ಲು ಸಕ್ಕರೆ – 1 ಕಪ್
    * ಏಲಕ್ಕಿ – 4 (ಪುಡಿಮಾಡಿ)
    * ತುಪ್ಪ – 1/2 ಕಪ್
    * ಗೋಡಂಬಿ – 20 ರಿಂದ 25
    * ಒಣದ್ರಾಕ್ಷಿ – 2 ಟೀಸ್ಪೂನ್

    ಮಾಡುವ ವಿಧಾನ
    ಕ್ಷೀರಾನ್ನ ಮಾಡಲು ಮೊದಲು ಅಕ್ಕಿ ಅಥವಾ ಸಣ್ಣಕ್ಕಿಯನ್ನು ತೆಗೆದುಕೊಂಡು, ಅದನ್ನು ತೊಳೆದು ಕುಕ್ಕರ್ ಅಥವಾ ಸಣ್ಣ ಪಾತ್ರೆಯಲ್ಲಿ ಬೇಯಿಸಿಕೊಳ್ಳಬೇಕು. ಅನ್ನ ಶಾವಿಗೆಯ ಹದಕ್ಕೆ ಮೆತ್ತಗಾದಾಗ ಒಂದು ಬಾಣಲೆಗೆ ಅದನ್ನು ಸುರಿದುಕೊಂಡು, ಅನ್ನಕ್ಕೆ ಸರಿ ಪ್ರಮಾಣದಲ್ಲಿ ಸಕ್ಕರೆ ಅಥವಾ ಬೆಲ್ಲ ಹಾಕಿ ಅದು ಪಾಕ ಬಿಡುವವರೆಗೂ ಹುರಿದುಕೊಳ್ಳಬೇಕು. ನಂತರ ತುಪ್ಪವನ್ನು ಹಾಕಿ ಸರಿಯಾಗಿ ಮಿಶ್ರಣ ಕಲಿಸಿಕೊಳ್ಳಬೇಕು. ಅಗತ್ಯವಿದ್ದರೆ ಹೆಚ್ಚು ಹಾಲು ಸೇರಿಸಿ ಕುದಿಸಬೇಕು.

    ಕ್ಷೀರಾನ್ನದ ಮಹತ್ವ
    ಶುದ್ಧತೆ ಮತ್ತು ಭಕ್ತಿ: ಹಾಲು ಮತ್ತು ಅಕ್ಕಿಯಂತಹ ಶುದ್ಧ ಪದಾರ್ಥಗಳನ್ನು ಬಳಸುವುದರಿಂದ, ಕ್ಷೀರಾನ್ನ ದೇವರಿಗೆ ಸಲ್ಲಿಸುವ ಶುದ್ಧತೆ ಮತ್ತು ಭಕ್ತಿಯನ್ನು ಪ್ರತಿನಿಧಿಸುತ್ತದೆ.

  • ಕೇವಲ 10 ನಿಮಿಷದಲ್ಲಿ ಮಾಡಿ ಕ್ಯಾರೆಟ್ ರೈಸ್

    ಕೇವಲ 10 ನಿಮಿಷದಲ್ಲಿ ಮಾಡಿ ಕ್ಯಾರೆಟ್ ರೈಸ್

    ಬೆಳಗಾದರೆ ಸಾಕು ತಿಂಡಿ ಏನು ಮಾಡೋದು, ಮಕ್ಕಳ ಲಂಚ್ ಬಾಕ್ಸ್‌ಗೆ ಏನು ರೆಡಿ ಮಾಡೋದು ಎಂಬ ಚಿಂತೆ ಎಲ್ಲಾ ಅಮ್ಮಂದಿರಲ್ಲಿರುತ್ತದೆ. ದಿನಾ ಒಂದೇ ರೀತಿಯ ರೈಸ್, ದೋಸೆ ಮಾಡಿಕೊಟ್ಟರೆ ಮಕ್ಕಳು ಕೂಡ ತಿನ್ನಲು ಇಷ್ಟಪಡಲ್ಲ. ಹಾಗಾಗಿ ಇವತ್ತು ನಾವು ಕೇವಲ 10 ನಿಮಿಷದಲ್ಲಿ ಕ್ಯಾರೆಟ್ ರೈಸ್ ಹೇಗೆ ಮಾಡೋದು ಅಂತ ಹೇಳಿಕೊಡ್ತೀವಿ. ಇದು ಮಾಡಲು ಸುಲಭ ಅಷ್ಟೇ ಅಲ್ಲದೇ ತಿನ್ನಲು ಕೂಡ ರುಚಿಕರವಾಗಿರುತ್ತದೆ. ನೀವು ಕೂಡ ನಿಮ್ಮ ಮನೆಯಲ್ಲಿ ಈ ರೆಸಿಪಿಯನ್ನು ತಪ್ಪದೇ ಟ್ರೈ ಮಾಡಿ.

    ಬೇಕಾಗುವ ಸಾಮಗ್ರಿಗಳು:
    ಅನ್ನ – 1 ಕಪ್
    ತುರಿದ ಕ್ಯಾರೆಟ್ – 2
    ಒಣ ಮೆಣಸು – 3
    ಗೋಡಂಬಿ – 6
    ಸಾಸಿವೆ, ಜೀರಿಗೆ – ಅರ್ಧ ಚಮಚ
    ಕರಿಬೇವು- ಒಗ್ಗರಣೆಗೆ
    ಹೆಚ್ಚಿದ ಈರುಳ್ಳಿ – 1
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
    ಅಚ್ಚಖಾರದ ಪುಡಿ -ಅರ್ಧ ಚಮಚ
    ಅರಶಿಣ ಪುಡಿ – ಕಾಲು ಚಮಚ
    ಗರಂ ಮಸಾಲ – ಅರ್ಧ ಚಮಚ
    ಉಪ್ಪು – ರುಚಿಗೆ ತಕ್ಕಷ್ಟು
    ತುಪ್ಪ – 1 ಚಮಚ
    ಎಣ್ಣೆ – ಒಂದೂವರೆ ಚಮಚ

    ಮಾಡುವ ವಿಧಾನ:
    *ಮೊದಲಿಗೆ ಗ್ಯಾಸ್ ಸ್ಟವ್ ಮೇಲೆ ಪ್ಯಾನ್ ಇಟ್ಟುಕೊಂಡು ಅದಕ್ಕೆ ತುಪ್ಪ, ಎಣ್ಣೆ ಹಾಕಿ. ಕಾದ ಮೇಲೆ ಅದಕ್ಕೆ ಸಾಸಿವೆ, ಜೀರಿಗೆ ಹಾಕಿಕೊಳ್ಳಿ. ಸಾಸಿವೆ ಸಿಡಿದ ಬಳಿಕ ಅದಕ್ಕೆ ಗೋಡಂಬಿ ಹಾಗೂ ಒಣ ಮೆಣಸು ಹಾಕಿಕೊಂಡು ಚೆನ್ನಾಗಿ ಹುರಿಯಿರಿ.
    *ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ ಹಾಕಿಕೊಂಡು ಬಾಡಿಸಿಕೊಳ್ಳಿ. ಈಗ ಇದಕ್ಕೆ ಕರಿಬೇವು ಸೇರಿಸಿ.
    *ಬಳಿಕ ಇದಕ್ಕೆ ತುರಿದ ಕ್ಯಾರೆಟ್ ಸೇರಿಸಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈಗ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ.
    *ಈಗ ಈ ಮಿಶ್ರಣಕ್ಕೆ ಖಾರದ ಪುಡಿ, ಅರಶಿಣ ಹಾಗೂ ಗರಂ ಮಸಾಲ ಸೇರಿಸಿಕೊಂಡು ಹುರಿಯಿರಿ.
    *ನಂತರ ಇದಕ್ಕೆ ಬೇಯಿಸಿಟ್ಟುಕೊಂಡಿರುವ ಅನ್ನ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ, ಬಳಿಕ ಕೊತ್ತಂಬರಿ ಸೊಪ್ಪು ಹಾಕಿದರೆ ಕ್ಯಾರೆಟ್ ರೈಸ್ ಸವಿಯಲು ಸಿದ್ಧ.

  • ರುಚಿಕರವಾದ ಆಲೂ ಕಬಾಬ್ ಮಾಡೋದು ಹೇಗೆ ಗೊತ್ತಾ?

    ರುಚಿಕರವಾದ ಆಲೂ ಕಬಾಬ್ ಮಾಡೋದು ಹೇಗೆ ಗೊತ್ತಾ?

    ನಾನ್‌ ವೆಜ್‌ ತಿನ್ನದವರು ಕಬಾಬ್‌ ಟೇಸ್ಟ್‌ ನೋಡ್ಬೇಕಾ? ಹಾಗಾದ್ರೆ ಮನೆಯಲ್ಲೇ ಆಲೋ ಕಬಾಬ್‌ ಮಾಡಿ ತಿನ್ನಿ! ಮನೆಯಲ್ಲೇ ರುಚಿ ರುಚಿಯಾದ ವೆಜ್‌ ಕಬಾಬ್‌ ಮಾಡೋದನ್ನ ಇಲ್ಲಿ ವಿವರಿಸಲಾಗಿದೆ.

    ಆಲೂ ಕಬಾಬ್‌ಗೆ ಏನೆಲ್ಲ ಬೇಕು?
    * ಆಲೂಗಡ್ಡೆ- 3
    *ಖಾರದ ಪುಡಿ- 2 ಚಮಚ
    * ಕಬಾಬ್ ಪೌಡರ್‌ – 1 ಚಮಚ
    * ಮೈದಾ ಹಿಟ್ಟು- 4 ಚಮಚ
    * ಅಕ್ಕಿ ಹಿಟ್ಟು- 2 ಚಮಚ
    * ಕಾರ್ನ್ ಫ್ಲೋರ್- 1 ಚಮಚ
    * ಅರಿಶಿಣದ ಪುಡಿ- ಸ್ವಲ್ಪ
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್-1 ಚಮಚ
    * ಉಪ್ಪು-ರುಚಿಗೆ ತಕ್ಕಷ್ಟು
    * ಎಣ್ಣೆ

    ಆಲೂ ಕಬಾಬ್‌ ಮಾಡೋದು ಹೇಗೆ?
    ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಹೋಳುಗಳಾಗಿ ಕತ್ತರಿಸಿಕೊಳ್ಳಿ, ಬಳಿಕ ಸ್ಟೌ ಮೇಲೆ ಪಾತ್ರೆ ಇಟ್ಟು ನೀರು ಹಾಕಿ ಆಲೂಗಡ್ಡೆಗಳನ್ನು ಹಾಕಿ 2-3 ನಿಮಿಷ ಬೇಯಿಸಿ, ನಂತರ ಆಲೂಗಡ್ಡೆಯನ್ನು ತೆಗೆದಿಟ್ಟುಕೊಳ್ಳಿ.

    ಮತ್ತೊಂದು ಪಾತ್ರೆಯಲ್ಲಿ ಮೈದಾ ಹಿಟ್ಟು. ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್, ಖಾರದ ಪುಡಿ, ಕಬಾಬ್ ಪೌಡರ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಇದೆಲ್ಲ ಹಾಕಿ ಮಿಕ್ಸ್‌ ಮಾಡಬೇಕು. ಬಳಿಕ ಆಲೂಗಡ್ಡೆಯನ್ನು ಸ್ವಲ್ಪ ಸ್ವಲ್ಪವೇ ನೀರು ಹಾಕಿ ಗಟ್ಟಿಗೆ ಕಲಸಿಕೊಳ್ಳಬೇಕು. ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಬೇಕು. ಕಾದ ನಂತರ ಮಸಾಲೆ ಭರಿತ ಆಲೂವನ್ನು ಒಂದಾದಾಗಿ ಹಾಕಿ, ಕೆಂಪಾಗುವ ಹಾಗೆ ಕರಿದರೆ ರುಚಿಕರವಾದ ಆಲೂ ಕಬಾಬ್ ಸಿದ್ಧ.

  • ಶೀತ, ಕೆಮ್ಮಿಗೆ ರಾಮಬಾಣ ಕ್ಯಾರೆಟ್ ಶುಂಠಿ ಸೂಪ್

    ಶೀತ, ಕೆಮ್ಮಿಗೆ ರಾಮಬಾಣ ಕ್ಯಾರೆಟ್ ಶುಂಠಿ ಸೂಪ್

    ಗಂತೂ ಒಂದಿನ ಮಳೆ, ಒಂದಿನ ಬಿಸಿಲು ಹೀಗೆ ಹವಾಮಾನ ಬದಲಾವಣೆ ಆಗುತ್ತಲೇ ಇರುತ್ತದೆ. ಮಳೆ ಬರುವ ವೇಳೆ ಬಿಸಿ ಬಿಸಿಯಾಗಿ ಏನಾದರೂ ಕುಡಿಯಬೇಕು, ತಿನ್ನಬೇಕು ಎಂದೆನಿಸುವುದು ಸಹಜ. ಚಳಿಗೆ ಬೆಚ್ಚಗಿನ ಬಿಸಿ ಬಿಸಿ ಸೂಪ್‌ಗಿಂತ ಉತ್ತಮವಾದ ಆಯ್ಕೆ ಮತ್ತೊಂದಿಲ್ಲ. ಇವತ್ತಿನ ನಮ್ಮ ರೆಸಿಪಿಯಲ್ಲಿ ಕ್ಯಾರೆಟ್ ಶುಂಠಿ ಸೂಪ್ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಅಡುಗೆ ಮನೆಯಲ್ಲಿರುವ ಕೆಲವು ಸಾಮಗ್ರಿಗಳನ್ನು ಬಳಸಿ ಈ ಸೂಪ್ ತಯಾರಿಸಬಹುದು. ಅಲ್ಲದೇ ಶೀತ, ಕೆಮ್ಮಿಗೂ ಈ ಸೂಪ್ ರಾಮಬಾಣ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

    ಬೇಕಾಗುವ ಸಾಮಗ್ರಿಗಳು:
    ಕ್ಯಾರೆಟ್ -ಮೂರು
    ದೊಡ್ಡ ಗಾತ್ರದ ಶುಂಠಿ
    ತರಕಾರಿಗಳು – ಒಂದು ಕಪ್
    ಈರುಳ್ಳಿ – 2
    ಕಿತ್ತಳೆ ರಸ – ಅರ್ಧ ಕಪ್
    ಕರಿಮೆಣಸಿನ ಪುಡಿ – ಸ್ವಲ್ಪ
    ಅಡುಗೆ ಎಣ್ಣೆ – ಎರಡು ಚಮಚ
    ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿಯಾಗುತ್ತಿದ್ದಂತೆ ಹೆಚ್ಚಿಟ್ಟ ಈರುಳ್ಳಿ ಮತ್ತು ಶುಂಠಿ ಹಾಕಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ.
    * ಇದಕ್ಕೆ ಕ್ಯಾರೆಟ್ ಹಾಕಿಕೊಳ್ಳಿ, ಅಗತ್ಯವಿದ್ದಷ್ಟು ನೀರು ಹಾಗೂ ರುಚಿಗೆ ತಕ್ಕ ಉಪ್ಪು ಹಾಕಿ ಬೇಯಲು ಬಿಡಿ.
    * ನೀರಿನಂಶ ಕಡಿಮೆಯಾಗಿ ಸ್ವಲ್ಪ ಗಟ್ಟಿಯಾಗುವವರೆಗೆ ಕುದಿಸಿಕೊಳ್ಳಿ. ನಂತರ ಕಿತ್ತಳೆ ರಸವನ್ನು ಸೇರಿಸಿ 2-3 ನಿಮಿಷ ಕುದಿಯಲು ಬಿಡಿ.
    * ಆ ಬಳಿಕ ಈ ಪಾತ್ರೆಯನ್ನು ಉರಿಯಿಂದ ತೆಗೆದು ತಣ್ಣಗಾಗಲು ಬಿಡಿ. ಬೇಯಿಸಿಟ್ಟ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.
    * ರುಬ್ಬಿದ ಮಿಶ್ರಣವನ್ನು ಮತ್ತೆ ಕುದಿಯಲು ಸ್ಟವ್ ಮೇಲೆ ಇಡಿ. ಕುದಿಯುತ್ತಿದ್ದಂತೆ ಇದಕ್ಕೆ ಕರಿಮೆಣಸಿನ ಪುಡಿ ಸೇರಿಸಿದರೆ ಕ್ಯಾರೆಟ್ ಶುಂಠಿ ಸೂಪ್ ಸವಿಯಲು ಸಿದ್ಧ.

  • ಮನೆಯಲ್ಲೇ ತಯಾರಿಸಿ ರುಚಿಕರ ಓಟ್ಸ್‌ ಇಡ್ಲಿ

    ಮನೆಯಲ್ಲೇ ತಯಾರಿಸಿ ರುಚಿಕರ ಓಟ್ಸ್‌ ಇಡ್ಲಿ

    ಟ್ಸ್‌ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶ ಒದಗಿಸುತ್ತದೆ. ಓಟ್ಸ್‌ನ್ನು ಹಾಗೇ ಬಟ್ಟಲ ಮುಂದೆ ಇಟ್ಟರೆ ಯಾರು ತಿನ್ನಲ್ಲ.. ಹಾಗಾಗಿ ಇದರಿಂದ ತಿಂಡಿ ಮಾಡಿದರೆ ಮಕ್ಕಳು ಹಾಗೂ ದೊಡ್ಡವರಿಗೆ ಇಷ್ಟವಾಗುತ್ತೆ. ಈಗ ಓಟ್ಸ್‌ನಲ್ಲಿ ಇಡ್ಲಿ ಮಾಡೋದು ಹೇಗೆ ಎಂದು ನೋಡೋಣ.

    ಮಾಡಲು ಬೇಕಾಗುವ ಸಾಮಾಗ್ರಿಗಳು
    2 ಕಪ್ ಓಟ್ಸ್
    1 ಚಮಚ ಸಾಸಿವೆ
    ½ ಲೀಟರ್ ಮೊಸರು
    ½ ಟೀಸ್ಪೂನ್ ಚನಾ ದಾಲ್
    1 ಟೀಸ್ಪೂನ್ ಉದ್ದಿನ ಬೇಳೆ
    ½ ಚಮಚ ಎಣ್ಣೆ
    1 ಕಪ್ ತುರಿದ ಕ್ಯಾರೆಟ್
    2 ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ
    ರುಚಿಗೆ ತಕ್ಕಂತೆ ಉಪ್ಪು
    ½ ಚಮಚ ಅರಿಶಿನ ಪುಡಿ

    ಓಟ್ಸ್ ಅನ್ನು ಹುರಿದು ಮಿಕ್ಸಿಯಲ್ಲಿ ಪುಡಿ ಮಾಡಿ. ಬಳಿಕ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದಕ್ಕೆ ಸಾಸಿವೆ ಮತ್ತು ದಾಲ್ ಸೇರಿಸಿ ಕೈ ಆಡಿಸುತ್ತಿರಿ. ದಾಲ್ ಕಂದು ಬಣ್ಣಕ್ಕೆ ತಿರುಗಿದ ನಂತರ ಕೊತ್ತಂಬರಿ ಮತ್ತು ಕ್ಯಾರೆಟ್ ಸೇರಿಸಿ. ಅದಕ್ಕೆ ಅರಿಶಿನ ಸೇರಿಸಿ ಮತ್ತು ಒಂದು ನಿಮಿಷ ಫ್ರೈ ಮಾಡಿ. ಒಂದು ಬಟ್ಟಲಿನಲ್ಲಿ, ಓಟ್ಸ್ ಮತ್ತು ತಯಾರಿಸಿದ ಮಸಾಲೆ ಮತ್ತು ಮೊಸರನ್ನು ಮಿಶ್ರಣ ಮಾಡಿ, ಚನ್ನಾಗಿ ಕಲಸಿ. ಇಡ್ಲಿ ಸ್ಟೀಮರ್‌ನಲ್ಲಿ ನೀವು ಮಾಡುವ ರೀತಿಯಲ್ಲಿ ಇಡ್ಲಿಯನ್ನು ತಯಾರಿಸಿ. ಬೆಂದ ಬಳಿಕ ಇಡ್ಲಿಗಳು ಸವಿಯಲು ಸಿದ್ಧ!

  • 4 ಬ್ರೆಡ್ ಇದ್ರೆ ಸಾಕು – ಥಟ್ ಅಂತ ಮಾಡ್ಬೋದು ಬ್ರೆಡ್ ಉಪ್ಪಿಟ್ಟು

    4 ಬ್ರೆಡ್ ಇದ್ರೆ ಸಾಕು – ಥಟ್ ಅಂತ ಮಾಡ್ಬೋದು ಬ್ರೆಡ್ ಉಪ್ಪಿಟ್ಟು

    ಬ್ರೆಡ್ ಎಂದರೆ ಸಾಮಾನ್ಯವಾಗಿ ಸ್ಯಾಂಡ್ವಿಚ್, ಟೋಸ್ಟ್ ನೆನಪಿಗೆ ಬರುತ್ತದೆ. ಆದರೆ ಬ್ರೆಡ್ ಅಲ್ಲಿ ನಾನಾ ರೀತಿಯ ರೆಸಿಪಿಗಳನ್ನು ಮಾಡಬಹುದು. ಇದ್ರಲ್ಲಿ ಬ್ರೆಡ್ ಉಪ್ಪಿಟ್ಟು ಕೂಡ ಒಂದು. ಈ ಬ್ರೆಡ್ ಉಪ್ಪಿಟ್ಟು ಮಾಡಲು ತುಂಬಾ ಸುಲಭವಾಗಿದ್ದು, ಮಕ್ಕಳು ಸಹ ಇಷ್ಟಪಟ್ಟು ತಿನ್ನುತ್ತಾರೆ. ಅಲ್ಲದೇ ಮಕ್ಕಳ ಲಂಚ್ ಬಾಕ್ಸ್‌ಗೂ ಇದನ್ನು ಮಾಡಿಕೊಡಬಹುದು. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

    ಬೇಕಾಗುವ ಸಾಮಗ್ರಿಗಳು:
    ಸಣ್ಣದಾಗಿ ಹೆಚ್ಚಿದ ಬ್ರೆಡ್ – 4
    ಎಣ್ಣೆ – 2 ಚಮಚ
    ಸಾಸಿವೆ – 1 ಚಮಚ
    ಜೀರಿಗೆ – ಕಾಲು ಚಮಚ
    ಸಣ್ಣದಾಗಿ ಹೆಚ್ಚಿದ ಈರುಳ್ಳಿ ಮತ್ತು ಟೊಮ್ಯಾಟೊ – ಅರ್ಧ ಕಪ್
    ಶುಂಠಿ – 1 ಚಮಚ
    ಕರಿಬೇವು
    ಅರಿಶಿನ ಪುಡಿ – ಕಾಲು ಚಮಚ
    ಕೊತ್ತಂಬರಿ – 1 ಚಮಚ
    ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿಕೊಳ್ಳಿ, ಅದಕ್ಕೆ ಸಾಸಿವೆ ಮತ್ತು ಜೀರಿಗೆ ಸೇರಿಸಿ.
    *ಬಳಿಕ ಈರುಳ್ಳಿ ಸೇರಿಸಿ ಮತ್ತು ಚನ್ನಾಗಿ ಬೇಯಿಸಿ. ಹಾಗೆಯೇ ಅದಕ್ಕೆ ಶುಂಠಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಮಿಶ್ರಣ ಮಾಡಿ.
    *ನಂತರ ಆ ಮಿಶ್ರಣಕ್ಕೆ ಟೊಮ್ಯಾಟೊ, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿ.
    *ಈಗ ಅದಕ್ಕೆ ಬ್ರೆಡ್ ಸೇರಿಸಿ ಮತ್ತು ಐದು ನಿಮಿಷ ಬೇಯಿಸಿದರೆ ಬ್ರೆಡ್ ಉಪ್ಪಿಟ್ಟು ರೆಡಿ.
    *ನಂತರ ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಹೆಚ್ಚಿ ಹಾಕಿ ಮಕ್ಕಳಿಗೆ ತಿನ್ನಲು ಕೊಡಿ.

  • ಆರೋಗ್ಯಕ್ಕೂ ಸೈ, ಟೇಸ್ಟಿಗೂ ಸೈ ಬಾಳೆ ದಿಂಡಿನ ಪೊರಿಯಲ್!

    ಆರೋಗ್ಯಕ್ಕೂ ಸೈ, ಟೇಸ್ಟಿಗೂ ಸೈ ಬಾಳೆ ದಿಂಡಿನ ಪೊರಿಯಲ್!

    ಬಾಳೆದಿಂಡು ಬಿಪಿ, ಶುಗರ್, ಗ್ಯಾಸ್ಟ್ರಿಕ್ ಹಾಗೂ ಕಿಡ್ನಿ ಸಮಸ್ಯೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗೆ ತುಂಬಾ ಪ್ರಯೋಜನಕಾರಿ. ಇದನ್ನು ಪೊರಿಯಲ್ (ಪಲ್ಯ), ಜ್ಯೂಸ್‌ ಸೇರಿದಂತೆ ನಾನಾ ಬಗೆಯಲ್ಲಿ ಸೇವಿಸುತ್ತಾರೆ. ಇಂತಹ ಆರೋಗ್ಯ ವರ್ಧಕ ಬಾಳೆದಿಂಡಿನಿಂದ ಪಲ್ಯ ಮಾಡುವುದು ಹೇಗೆ ಅಂತ ನೋಡೋಣ ಬನ್ನಿ.

    ಬೇಕಾಗುವ ಪದಾರ್ಥಗಳು:
    ಬಾಳೆ ದಿಂಡು – 1 ಅಡಿ ಉದ್ದ
    ಹೆಸರು ಕಾಳು – ¾ ಬಟ್ಟಲು
    ಸೀಳಿದ ಹಸಿ ಮೆಣಸಿನಕಾಯಿ – 2
    ಸಕ್ಕರೆ – 2 ಟೀ ಚಮಚ
    ಮಜ್ಜಿಗೆ – 3 ಬಟ್ಟಲು
    ಉಪ್ಪು – ರುಚಿಗೆ ತಕ್ಕಷ್ಟು

    ಒಗ್ಗರಣೆಗೆ: ಸಾಸಿವೆ ಮತ್ತು ಜೀರಿಗೆ – ತಲಾ 1 ಟೀ ಚಮಚ
    ಕಡಲೆ ಬೇಳೆ ಮತ್ತು ಉದ್ದಿನ ಬೇಳೆ – ತಲಾ 1 ಟೀ ಚಮಚ
    ಚೂರು ಮಾಡಿದ ಒಣ ಮೆಣಸಿನಕಾಯಿ – 1
    ಇಂಗು – 2 ಟೀ ಚಮಚ
    ಕರಿಬೇವು – ಸ್ವಲ್ಪ

    ಮಾಡುವ ವಿಧಾನ:
    1. ಹೆಸರು ಕಾಳನ್ನು ಒಂದು ಬಟ್ಟಲು ನೀರಿನಲ್ಲಿ ಒಂದು ಗಂಟೆ ಕಾಲ ನೆನೆಸಿ.
    2. ಬಾಳೆಯ ದಿಂಡಲ್ಲಿ ಅನಗತ್ಯ ಭಾಗ ತೆಗೆದು, ಕತ್ತರಿಸಿ ಮತ್ತು ಮಜ್ಜಿಗೆಯಲ್ಲಿ ನೆನೆಸಿಡಿ.
    3. ಬಾಣಲೆಯನ್ನು ಬಿಸಿ ಮಾಡಿ ಒಗ್ಗರಣೆಗಾಗಿ ಹಾಕಿ. ಸಾಸಿವೆ ಸಿಡಿದಾಗ, ಹಸಿ ಮೆಣಸಿನಕಾಯಿ, ನೆನೆಸಿದ ಹೆಸರು, ಕತ್ತರಿಸಿದ ಬಾಳೆ ದಿಂಡು, ಉಪ್ಪು, ಸಕ್ಕರೆ ಮತ್ತು ಒಂದು ಬಟ್ಟಲು ನೀರನ್ನು ಹಾಕಿ ಕಲಸಿ.
    4. ಮುಚ್ಚಳವನ್ನು ಮುಚ್ಚಿ ಮತ್ತು ಕಡಿಮೆ ಉರಿಯಲ್ಲಿ ಕುದಿಸಿ. ಬಾಳೆ ದಿಂಡು ಚೆನ್ನಾಗಿ ಬೇಯಬೇಕು ಮತ್ತು ನೀರು ಇಂಗಬೇಕು.
    ಈಗ ನಿಮ್ಮ ಮುಂದೆ ಬಾಳೆದಿಂಡಿ ಪೊರಿಯಲ್ ಸೇವಿಸಲು ಸಿದ್ಧ. ಇದು, ಅನ್ನದ ಜೊತೆ ಹಾಗೂ ತಿಂಡಿಯ ಜೊತೆ ಸೇವಿಸಲು ಉತ್ತಮ ರುಚಿ ಕೊಡುತ್ತೆ.

  • ಗಣೇಶ ಚತುರ್ಥಿ ಸ್ಪೆಷಲ್ – ಸುಲಭವಾಗಿ ಮಾಡಿ ಮೋತಿಚೂರ್ ಲಡ್ಡು

    ಗಣೇಶ ಚತುರ್ಥಿ ಸ್ಪೆಷಲ್ – ಸುಲಭವಾಗಿ ಮಾಡಿ ಮೋತಿಚೂರ್ ಲಡ್ಡು

    ಣಪ ನೈವೈದ್ಯ ಪ್ರಿಯ. ಎಷ್ಟು ಭಕ್ಷ್ಯಗಳನ್ನು ಸಲ್ಲಿಸುತ್ತಿರೋ ಅಷ್ಟು ಸುಲಭವಾಗಿ ಗಣಪ ಒಲಿಯುತ್ತಾನೆ ಎಂಬ ನಂಬಿಕೆ ಇದೆ. ಅದರಲ್ಲೂ ಮೋದಕ, ಪಂಚಕಜ್ಜಾಯ, ಕರ್ಜಿಕಾಯಿ, ಚಕ್ಕುಲಿ ಜೊತೆಗೆ ಮೋತಿಚೂರ್ ಲಡ್ಡು ಕೂಡ ಗಣೇಶನಿಗೆ ಅತ್ಯಂತ ಪ್ರಿಯ. ಕೇಸರಿ ಹಾಗೂ ಸಿಹಿಯನ್ನು ಒಳಗೊಂಡ ಮೋತಿಚೂರ್ ಲಡ್ಡು ಮಾಡೋದು ಕೂಡ ಅಷ್ಟೇ ಸುಲಭ. ಹಾಗಿದ್ರೇ ಗಣೇಶನಿಗೆ ಪ್ರಿಯವಾದ ಮೋತಿಚೂರ್ ಲಡ್ಡು ಮಾಡೋದು ಹೇಗೆ ಎಂಬುದನ್ನು ನಾವಿಂದು ತಿಳಿಸಿಕೊಡುತ್ತಿದ್ದೇವೆ.

    ಬೇಕಾಗುವ ವಸ್ತುಗಳು:
    ಕಡಲೆಹಿಟ್ಟು – 1 ಕಪ್
    ಎಣ್ಣೆ – 1 ಕಪ್
    ಕೇಸರಿ – ಚಿಟಿಕೆ
    ಒಣದ್ರಾಕ್ಷಿ – ಕಾಲು ಕಪ್
    ಗೋಡಂಬಿ – ಕಾಲು ಕಪ್
    ಸಕ್ಕರೆ – ಒಂದೂವರೆ ಕಪ್
    ತುಪ್ಪ – 3ರಿಂದ ನಾಲ್ಕು ಚಮಚ

    ಮಾಡುವ ವಿಧಾನ:
    *ಮೊದಲು ಒಂದು ಬೌಲ್‌ಗೆ ಜರಡಿ ಹಿಡಿದ ಕಡಲೆಹಿಟ್ಟು ಹಾಕಿ ದಪ್ಪನೆಯ ಹಿಟ್ಟಿನ ರೂಪದಲ್ಲಿ ಕಲೆಸಿಕೊಳ್ಳಿ. ಬಳಿಕ ಗ್ಯಾಸ್ ಮೇಲೆ ಎಣ್ಣೆ ಕಾಯಲು ಇಟ್ಟು ಜರಡಿ ಸೌಟಿನ ಮೇಲೆ ಹಿಟ್ಟನ್ನು ಹಾಕಿ ನಿಧಾನಕ್ಕೆ ಸಣ್ಣ ಸಣ್ಣ ಗುಳ್ಳೆಗಳಂತೆ ಕಡಲೆಹಿಟ್ಟನ್ನು ಕರಿದುಕೊಳ್ಳಿ.
    *ಹೊಂಬಣ್ಣ ಬರುವವರೆಗೂ ಕರಿದ ಕಡಲೆಹಿಟ್ಟಿನ ಮಿಕ್ಸರ್ ನ್ನು ಆರಿದ ಬಳಿಕ ಮಿಕ್ಸಿ ಜಾರಿಗೆ ಹಾಕಿ ಒಂದು ರೌಂಡ್ ತಿರುಗಿಸಿ. ಇದರಿಂದ ಕಡಲೆಹಿಟ್ಟಿನ ಕಾಳುಗಳು ಒಡೆದು ಮಿಶ್ರಣ ಸಿದ್ಧವಾಗುತ್ತದೆ.
    *ಬಳಿಕ ಒಂದು ದಪ್ಪ ತಳದ ಪಾತ್ರೆಗೆ ಸಕ್ಕರೆ ನೀರು ಹಾಕಿ ಪಾಕ ಮಾಡಿಕೊಳ್ಳಿ. ಈ ಪಾಕಕ್ಕೆ ಚಿಟಿಕೆ ಕೇಸರಿ ಸೇರಿಸಿ.
    *ನಂತರ ಒಂದೆಳೆ ಪಾಕವಾಗುತ್ತಿದ್ದಂತೆ ಸಿದ್ಧಪಡಿಸಿದ ಕಡಲೆ ಹಿಟ್ಟಿನ ಕಾಳುಗಳ ಮಿಶ್ರಣವನ್ನು ಸೇರಿಸಿಕೊಂಡು, ಡ್ರೈಫ್ರೂಟ್ಸ್‌ಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ತಣಿಯಲು ಬಿಡಿ.
    *ಕೊಂಚ ತಣ್ಣಗಾಗುತ್ತಿದ್ದಂತೆ ಕೈಗೆ ತುಪ್ಪ ಸವರಿಕೊಂಡು ಉಂಡೆಕಟ್ಟಿದರೇ ನೋಡಲು ಆಕರ್ಷಕವಾದ ಹಾಗೂ ರುಚಿಕರವಾದ ಮೋತಿಚೂರ್ ಲಡ್ಡು ಸವಿಯಲು ಸಿದ್ಧ.

  • ಮನೆಯಲ್ಲೇ ತಯಾರಿಸಿ ಟೇಸ್ಟಿ ಬೀಟ್‌ರೂಟ್ ವಡೆ

    ಮನೆಯಲ್ಲೇ ತಯಾರಿಸಿ ಟೇಸ್ಟಿ ಬೀಟ್‌ರೂಟ್ ವಡೆ

    ಬೀಟ್‌ರೂಟ್ ಸೇವನೆಯು ರಕ್ತಹೀನತೆಯನ್ನು ತಡೆಯುವುದು, ಹೃದಯದ ಆರೋಗ್ಯ ಕಾಪಾಡುವುದು, ಜೀರ್ಣಕ್ರಿಯೆ ಸುಧಾರಿಸುವುದು ಮುಂತಾದ ಅನೇಕ ಲಾಭಗಳನ್ನು ನೀಡುತ್ತದೆ. ಇನ್ನೊಂದೆಡೆ, ಉದ್ದಿನ ಬೇಳೆಯಿಂದ ತಯಾರಿಸುವ ವಡೆಗಳು ಪ್ರೋಟೀನ್ ಮತ್ತು ಶಕ್ತಿಯನ್ನು ಒದಗಿಸುತ್ತವೆ. ಈ ಎರಡನ್ನೂ ಸೇರಿಸಿ ಮಾಡುವ ಬೀಟ್‌ರೂಟ್ ಕ್ರಿಸ್ಪಿ ವಡೆಗಳು ಆರೋಗ್ಯಕರವಾಗಿರುವುದರ ಜೊತೆಗೆ ತಿನ್ನಲು ಅತ್ಯಂತ ರುಚಿಕರವಾಗಿರುತ್ತವೆ. ಈ ರೆಸಿಪಿ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರಿಗೂ ಇಷ್ಟವಾಗುವಂತಹದು. ಚಹಾ ಸಮಯದಲ್ಲಿ ಸವಿಯಲು ಇದು ಒಳ್ಳೆಯ ಆಯ್ಕೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

    ಬೇಕಾಗುವ ಪದಾರ್ಥಗಳು:
    ಉದ್ದಿನ ಬೇಳೆ – 2 ಕಪ್
    ತುರಿದ ಬೀಟ್‌ರೂಟ್ – 1
    ಉಪ್ಪು – ರುಚಿಗೆ ತಕ್ಕಷ್ಟು
    ಸಣ್ಣಗೆ ಹೆಚ್ಚಿದ ಹಸಿರು ಮೆಣಸು – 2
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಚಮಚ
    ಇಡ್ಲಿ ಸೋಡಾ – ಸ್ವಲ್ಪ
    ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲು ಉದ್ದಿನ ಬೇಳೆಯನ್ನು 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಅದನ್ನು ನೀರು ಹಾಕದೆ ಮಿಕ್ಸಿಯಲ್ಲಿ ಹಾಕಿ ಮೃದುವಾದ ಹಿಟ್ಟಿನಂತೆ ಮಾಡಿಕೊಳ್ಳಿ.
    * ಒಂದು ದೊಡ್ಡ ಪಾತ್ರೆಯಲ್ಲಿ ಈ ಉದ್ದಿನ ಬೇಳೆಯ ಹಿಟ್ಟಿಗೆ ನುಣ್ಣಗೆ ತುರಿದ ಬೀಟ್‌ರೂಟ್ ಸೇರಿಸಿ.
    * ನಂತರ ಉಪ್ಪು, ಸಣ್ಣಗೆ ಹೆಚ್ಚಿದ ಹಸಿ ಮೆಣಸು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    * ವಡೆಗಳನ್ನು ಹೆಚ್ಚು ಗರಿಗರಿಯಾಗಿಸಬೇಕಾದರೆ ಸ್ವಲ್ಪ ಇಡ್ಲಿ ಸೋಡಾ ಹಾಕಬಹುದು.
    * ಒಂದು ಕಾದ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ.
    * ಎಣ್ಣೆ ಕಾದ ಬಳಿಕ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳಂತೆ ಮಾಡಿ, ಕೈಯಲ್ಲಿ ಒತ್ತಿ ವಡೆಗಳ ಆಕಾರ ನೀಡಿ.
    * ಬಿಸಿ ಎಣ್ಣೆಯಲ್ಲಿ ಇವುಗಳನ್ನು ಹಾಕಿ, ಬಂಗಾರದ ಬಣ್ಣ ಬರುವವರೆಗೆ ಎರಡೂ ಬದಿಗಳಿಂದ ಹುರಿಯಿರಿ.
    * ಬಳಿಕ ಎಣ್ಣೆಯಿಂದ ವಡೆ ತೆಗೆದು ಪ್ಲೇಟ್‌ಗೆ ಹಾಕಿ ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆಗೆ ಸವಿಯಿರಿ.