Tag: recipe

  • ಮಶ್ರೂಮ್ ರಾಮೆನ್ – ಇನ್ಸ್ಟೆಂಟೆ ನೂಡಲ್ಸ್ ರೆಸಿಪಿ

    ಮಶ್ರೂಮ್ ರಾಮೆನ್ – ಇನ್ಸ್ಟೆಂಟೆ ನೂಡಲ್ಸ್ ರೆಸಿಪಿ

    ಬಿಡುವಿಲ್ಲದ ಸಮಯದಲ್ಲಿ ಹಸಿವಾದಾಗ ನಿಮಿಷಗಳಲ್ಲಿ ಹೊಟ್ಟೆ ತುಂಬಿಸಲು ಒಂದು ಸರಳ ರೆಸಿಪಿಯನ್ನು ನೀವು ಹುಡುಕುತ್ತಿದ್ದರೆ ನಾವಿಂದು ಸಿಂಪಲ್ ರಾಮೆನ್ ರೆಸಿಪಿಯನ್ನು ಹೇಳಿಕೊಡಲಿದ್ದೇವೆ. ನೂಡಲ್ಸ್‌ನಿಂದ ತಯಾರಿಸಲಾಗುವ ಅಡುಗೆಗೆ ರಾಮೆನ್ ಎಂದು ಜಪಾನ್‌ನಲ್ಲಿ ಕರೆಯಲಾಗುತ್ತದೆ. ಅದೇ ಜ್ಯಾಪನೀಸ್ ಸ್ಟೈಲ್‌ನ ಮಶ್ರೂಮ್ ರಾಮೆನ್ ರೆಸಿಪಿಯನ್ನು ನಾವಿಂದು ಹೇಗೆ ಮಾಡೋದೆಂದು ತಿಳಿದುಕೊಂಡು ಬರೋಣ.

    ಬೇಕಾಗುವ ಪದಾರ್ಥಗಳು:
    ಮೊಟ್ಟೆ – 4
    ಮಧ್ಯಮ ಗಾತ್ರದಲ್ಲಿ ಕತ್ತರಿಸಿದ ಮಶ್ರೂಮ್ – 200 ಗ್ರಾಂ
    ಚಿಕನ್/ತರಕಾರಿ ಸ್ಟಾಕ್ – ಒಂದೂವರೆ ಲೀ.
    ನೂಡಲ್ಸ್ – 180 ಗ್ರಾಂ
    ಹೆಚ್ಚಿದ ಸ್ಪ್ರಿಂಗ್ ಆನಿಯನ್ – 4
    ಸೋಯಾ ಸಾಸ್ – 2 ಟೀಸ್ಪೂನ್
    ಎಳ್ಳೆಣ್ಣೆ – 1 ಟೀಸ್ಪೂನ್ ಇದನ್ನೂ ಓದಿ: ನಾಲ್ಕೇ ಪದಾರ್ಥ ಬಳಸಿ ಮಾಡಿ ಫ್ರೆಂಚ್ ಆನಿಯನ್ ಪೋರ್ಕ್ ಚಾಪ್ಸ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ, ಕುದಿಸಿ, ಅದರಲ್ಲಿ ಮೊಟ್ಟೆ ಸೇರಿಸಿ 6 ನಿಮಿಷ ಬೇಯಿಸಿಕೊಳ್ಳಿ.
    * ಬಳಿಕ ಮೊಟ್ಟೆಯನ್ನು ಜಾಗರೂಕತೆಯಿಂದ ನೀರಿನಿಂದ ತೆಗೆದು ತಣ್ಣಗಾಗಲು ಬಿಡಿ. ಬಳಿಕ ಅದರ ಸಿಪ್ಪೆ ತೆಗೆದು ಅರ್ಧಕ್ಕೆ ಕತ್ತರಿಸಿಕೊಳ್ಳಿ.
    * ಇನ್ನೊಂದು ಪಾತ್ರೆಗೆ ಚಿಕನ್ ಅಥವಾ ತರಕಾರಿ ಸ್ಟಾಕ್ ಹಾಕಿ ಕುದಿಸಿಕೊಳ್ಳಿ.
    * ಅದಕ್ಕೆ ಮಶ್ರೂಮ್ ಸೇರಿಸಿ 3 ನಿಮಿಷ ಕುದಿಸಿ.
    * ಬಳಿಕ ಉರಿಯನ್ನು ಹೆಚ್ಚಿಸಿ, ನೂಡಲ್ಸ್ ಸೇರಿಸಿ, ಸುಮಾರು 3-4 ನಿಮಿಷ ಬೇಯಿಸಿಕೊಳ್ಳಿ.
    * ನೂಡಲ್ಸ್ ಬೆಂದ ಬಳಿಕ ಉರಿಯನ್ನು ಆಫ್ ಮಾಡಿ, ಸ್ಪ್ರಿಂಗ್ ಆನಿಯನ್, ಸೋಯಾ ಸಾಸ್ ಹಾಗೂ ಎಳ್ಳೆಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ.
    * ಈಗ ಬೇಯಿಸಿದ ಮೊಟ್ಟೆಗಳನ್ನು ಅದರಲ್ಲಿಟ್ಟು ಅಲಂಕರಿಸಿದರೆ ಮಶ್ರೂಮ್ ರಾಮೆನ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಚಿಪ್ಸ್‌, ನಾಚೋಸ್‌ಗೆ ಪರ್ಫೆಕ್ಟ್‌ ಈ ಟೊಮೆಟೋ ಸಾಲ್ಸಾ

    
    

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೃದುವಾದ ಸಿಹಿ ಕುಂಬಳಕಾಯಿ, ಓಟ್ಸ್ ಕುಕೀಸ್

    ಮೃದುವಾದ ಸಿಹಿ ಕುಂಬಳಕಾಯಿ, ಓಟ್ಸ್ ಕುಕೀಸ್

    ನಾವಿಂದು ಹೇಳಿಕೊಡುತ್ತಿರೋ ಸಿಹಿ ಕುಂಬಳಕಾಯಿ ಹಾಗೂ ಓಟ್ಸ್ ಕುಕೀಸ್ ತುಂಬಾ ಮೃದು, ಕುಂಬಳಕಾಯಿ ಸ್ವಾದದ, ಅಗಿಯಲು ಮಜವೆನಿಸೋ ಸಖತ್ ರುಚಿಯಾದ ರೆಸಿಪಿಯಾಗಿದೆ. ಸಂಜೆ ವೇಳೆ ಒಂದು ಕಪ್ ಚಹಾದೊಂದಿಗೆ ಇಲ್ಲವೇ ಫ್ರೀ ಟೈಮ್‌ನಲ್ಲಿ ಈ ಕುಕೀಸ್ ನಿಮಗೆ ಜೊತೆಯಾಗಬಲ್ಲದು. ಇದಕ್ಕೆ ಓಟ್ಸ್ ಬೆರೆಸಿರುವುದರಿಂದ ಆರೋಗ್ಯಕರವೂ ಎನಿಸುತ್ತದೆ. ಮೃದುವಾದ ಸಿಹಿ ಕುಂಬಳಕಾಯಿ ಓಟ್ಸ್ ಕುಕೀಸ್ ಮಡೋದು ಹೇಗೆಂದು ನಾವಿಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಮೈದಾ ಹಿಟ್ಟು – 1 ಕಪ್
    ದಾಲ್ಚಿನ್ನಿ ಪುಡಿ – ಅರ್ಧ ಟೀಸ್ಪೂನ್
    ಅಡುಗೆ ಸೋಡಾ – ಅರ್ಧ ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್
    ಕರಗಿಸಿದ ಬೆಣ್ಣೆ – ಅರ್ಧ ಕಪ್
    ಬ್ರೌನ್ ಶುಗರ್ – ಅರ್ಧ ಕಪ್
    ಸಕ್ಕರೆ ಪುಡಿ – ಕಾಲು ಕಪ್
    ಮೊಟ್ಟೆಯ ಹಳದಿ ಭಾಗ – 1
    ವೆನಿಲ್ಲಾ ಸಾರ – 1 ಟೀಸ್ಪೂನ್
    ಸಿಹಿ ಕುಂಬಳಕಾಯಿ ಪ್ಯೂರಿ – ಅರ್ಧ ಕಪ್
    ಓಟ್ಸ್ – ಅರ್ಧ ಕಪ್  ಇದನ್ನೂ ಓದಿ: ಬೇಕರಿ ಸ್ಟೈಲ್ ಎಗ್‍ಲೆಸ್ ಹನಿ ಕೇಕ್ ಮನೆಯಲ್ಲೇ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಮೈದಾ ಹಿಟ್ಟು, ದಾಲ್ಚಿನ್ನಿ ಪುಡಿ, ಅಡುಗೆ ಸೋಡಾ ಮತ್ತು ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
    * ಒಂದು ದೊಡ್ಡ ಮಿಕ್ಸಿಂಗ್ ಬೌಲ್‌ನಲ್ಲಿ ಬೆಣ್ಣೆ, ಕಂದು ಸಕ್ಕರೆ, ಸಕ್ಕರೆ ಪುಡಿ ಸೇರಿಸಿ, 1-2 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ.
    * ಮೊಟ್ಟೆಯ ಹಳದಿ ಭಾಗ, ವೆನಿಲ್ಲಾ ಸಾರ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ಬಳಿಕ ಕುಂಬಳಕಾಯಿ ಪ್ಯೂರಿಯನ್ನು ಸೇರಿಸಿ.
    * ಈಗ ಒಣ ಪದಾರ್ಥಗಳನ್ನು ಈ ಮಿಶ್ರಣಕ್ಕೆ ಸೇರಿಸಿ, ನಿಧಾನವಾಗಿ ಬೆರೆಸಿ.
    * ಓಟ್ಸ್ ಅನ್ನು ಮಿಶ್ರಣಕ್ಕೆ ಹಾಕಿ ಬೆರೆಸಿ.
    * ಈಗ ಪಾತ್ರೆಗೆ ಪ್ಲಾಸ್ಟಿಕ್ ಕವರ್‌ನಿಂದ ಬಿಗಿಯಾಗಿ ಮುಚ್ಚಿ, 30 ನಿಮಿಷಗಳ ಕಾಲ ವಿಶ್ರಾಂತಿ ನೀಡಿ.
    * ಓವನ್ ಅನ್ನು 180 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿ, ಬೇಕಿಂಗ್ ಶೀಟ್‌ಗೆ ಬಟರ್ ಪೇಪರ್ ಅನ್ನು ಹೊದಿಸಿ ಇಡಿ.
    * ಈಗ ಸುಮಾರು ಒಂದೂವರೆ ಚಮಚದಷ್ಟು ಮಿಶ್ರಣ ಬರುವಂತೆ ಕುಕೀಸ್ ಆಕಾರದಲ್ಲಿ ಬೇಕಿಂಗ್ ಶೀಟ್ ಮೇಲೆ ಹಾಕಿಕೊಳ್ಳಿ. ಪ್ರತಿ ಹಿಟ್ಟಿನ ಭಾಗಗಳ ನಡುವೆ ಸ್ವಲ್ಪ ಸ್ವಲ್ಪ ಅಂತರವಿರಲಿ.
    * ಈಗ ಬೇಕಿಂಗ್ ಶೀಟ್ ಅನ್ನು ಓವನ್‌ನಲ್ಲಿಟ್ಟು ಸುಮಾರು 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ನಂತರ ಕುಕೀಸ್‌ಗಳನ್ನು ತೆಗೆದು 5 ನಿಮಿಷ ತಣ್ಣಗಾಗಿಸಿದರೆ ಮೃದುವಾದ ಸಿಹಿ ಕುಂಬಳಕಾಯಿ ಹಾಗೂ ಓಟ್ಸ್ ಕುಕೀಸ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಸಿನಿಮಾ ಟೈಮ್‌ನಲ್ಲಿ ಟೇಸ್ಟಿ ಟ್ವಿಸ್ಟ್ – ಡಿಫರೆಂಟ್ ಆಗಿ ಹನಿ ಪಾಪ್‌ಕಾರ್ನ್ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಡಲೆ ಹಿಟ್ಟಿನಿಂದ ಮಾಡೋ ಟೇಸ್ಟಿ ಬಾಂಬೆ ಚಟ್ನಿ

    ಕಡಲೆ ಹಿಟ್ಟಿನಿಂದ ಮಾಡೋ ಟೇಸ್ಟಿ ಬಾಂಬೆ ಚಟ್ನಿ

    ಡಲೆ ಹಿಟ್ಟಿನ ಚಟ್ನಿ ಇದನ್ನು ಬಾಂಬೆ ಚಟ್ನಿ ಎಂತಲೂ ಕರೆಯಲಾಗುತ್ತದೆ. ಇಡ್ಲಿ, ದೋಸೆ, ಪೂರಿ, ರೋಟಿ ಅಥವಾ ಯಾವುದೇ ಉಪಹಾರದೊಂದಿಗೂ ಸರಿಹೊಂದೋ ಟೇಸ್ಟಿ ಚಟ್ನಿ ಇದಾಗಿದೆ. ಭಾರತದ ಸಾಂಪ್ರದಾಯಿಕ ಈರುಳ್ಳಿ, ಟೊಮೆಟೋ, ತೆಂಗಿನಕಾಯಿ ಅಥವಾ ಸೊಪ್ಪಿನಿಂದ ತಯಾರಿಸಲಾಗುವ ಚಟ್ನಿ ಸವಿದು ಬೋರ್ ಎನಿಸಿದ್ದರೆ ಈ ರೆಸಿಪಿ ಟ್ರೈ ಮಾಡೋಕೆ ಪರ್ಫೆಕ್ಟ್ ಟೈಮ್. ಹಾಗಿದ್ರೆ ಫಟಾಫಟ್ ಅಂತ ಬಾಂಬೆ ಚಟ್ನಿ ಮಾಡೋದು ಹೇಗೆಂದು ನೋಡಿಕೊಂಡು ಬರೋಣ.

    ಬೇಕಾಗುವ ಪದಾರ್ಥಗಳು:
    ಕಡಲೆ ಹಿಟ್ಟು – 5 ಟೀಸ್ಪೂನ್
    ಈರುಳ್ಳಿ – 1
    ಹಸಿರು ಮೆಣಸಿನಕಾಯಿ – 5
    ಗರಂ ಮಸಾಲೆ ಪುಡಿ – ಅರ್ಧ ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ನಿಂಬೆ ರಸ – 2 ಟೀಸ್ಪೂನ್
    ಅರಿಶಿನ ಪುಡಿ – ಕಾಲು ಟೀಸ್ಪೂನ್
    ಕರಿಬೇವು – ಕೆಲವು
    ಎಣ್ಣೆ – 1 ಟೀಸ್ಪೂನ್
    ಕೊತ್ತಂಬರಿ ಸೊಪ್ಪು – ಕಾಲು ಕಪ್
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಸಿನಿಮಾ ಟೈಮ್‌ನಲ್ಲಿ ಟೇಸ್ಟಿ ಟ್ವಿಸ್ಟ್ – ಡಿಫರೆಂಟ್ ಆಗಿ ಹನಿ ಪಾಪ್‌ಕಾರ್ನ್ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ 4 ಕಪ್ ನೀರಿಗೆ ಕಡಲೆ ಹಿಟ್ಟನ್ನು ಬೆರೆಸಿ ಯಾವುದೇ ಉಂಡೆಗಳಿಲ್ಲದಂತೆ ಮಿಶ್ರಣ ಮಾಡಿಕೊಳ್ಳಿ.
    * ಅದಕ್ಕೆ ಉಪ್ಪು ಮತ್ತು ಗರಂ ಮಸಾಲೆ ಪುಡಿಯನ್ನು ಸೇರಿಸಿ.
    * ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ, ಈರುಳ್ಳಿ, ಕರಿಬೇವಿನ ಸೊಪ್ಪು, ಹಸಿರು ಮೆಣಸಿನಕಾಯಿ, ಅರಿಶಿನ, ಉಪ್ಪು ಸೇರಿಸಿ ಈರುಳ್ಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
    * ಈಗ ಕಡಲೆ ಹಿಟ್ಟಿನ ಮಿಶ್ರಣವನ್ನು ಅದಕ್ಕೆ ಸೇರಿಸಿ, ಸ್ವಲ್ಪ ಗಟ್ಟಿಯಾಗುವವರೆಗೆ ಬೆರೆಸಿಕೊಳ್ಳಿ.
    * ನಂತರ ಉರಿಯನ್ನು ಆಫ್ ಮಾಡಿ, ನಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ.
    * ಇದೀಗ ಬಾಂಬೆ ಚಟ್ನಿ ತಯಾರಾಗಿದ್ದು, ಪೂರಿ, ಚಪಾತಿ ಅಥವಾ ದೋಸೆಯೊಂದಿಗೆ ಸವಿಯಿರಿ. ಇದನ್ನೂ ಓದಿ: ಚಿಪ್ಸ್‌, ನಾಚೋಸ್‌ಗೆ ಪರ್ಫೆಕ್ಟ್‌ ಈ ಟೊಮೆಟೋ ಸಾಲ್ಸಾ

    
    

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಲ್ಕೇ ಪದಾರ್ಥ ಬಳಸಿ ಮಾಡಿ ಫ್ರೆಂಚ್ ಆನಿಯನ್ ಪೋರ್ಕ್ ಚಾಪ್ಸ್

    ನಾಲ್ಕೇ ಪದಾರ್ಥ ಬಳಸಿ ಮಾಡಿ ಫ್ರೆಂಚ್ ಆನಿಯನ್ ಪೋರ್ಕ್ ಚಾಪ್ಸ್

    ಹಂದಿ ಮಾಂಸ ಪ್ರಿಯರಿಗಾಗಿ ನಾವಿಂದು ಸಿಂಪಲ್ ಹಾಗೂ ವಿದೇಶಿ ಅಡುಗೆಯೊಂದನ್ನು ಹೇಳಿಕೊಡಲಿದ್ದೇವೆ. ಕೇವಲ 4 ಪದಾರ್ಥ ಬಳಸಿ ಕ್ವಿಕ್ ಆಗಿ ಈ ಅಡುಗೆಯನ್ನು ಮಾಡಬಹುದು. ಅಡುಗೆ ಮನೆಯಲ್ಲಿ ಯಾವಾಗಲೂ ಹೊಸ ಹೊಸ ಪ್ರಯೋಗ ಮಾಡಲು ಬಯಸುವವರು ಫ್ರೆಂಚ್ ಆನಿಯನ್ ಪೋರ್ಕ್ ಚಾಪ್ಸ್ ಖಂಡಿತಾ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಮೂಳೆಗಳಿಲ್ಲದ ಹಂದಿ ಚಾಪ್ಸ್ – 4
    ಫ್ರೆಂಚ್ ಆನಿಯನ್ ಸೂಪ್ ಮಿಕ್ಸ್ – 2 ಪ್ಯಾಕೆಟ್
    ಬ್ರೆಡ್ ಕ್ರಂಬ್ಸ್ – ಅರ್ಧ ಕಪ್
    ಮೊಟ್ಟೆ – 2 ಇದನ್ನೂ ಓದಿ: ಹಸಿವನ್ನು ತಣಿಸಲು ಒನ್ ಪಾಟ್ ಗಾರ್ಲಿಕ್ ಚಿಕನ್ ಪಾಸ್ತಾ ಟ್ರೈ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಓವನ್ ಅನ್ನು 200 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
    * 2 ತಟ್ಟೆಗಳನ್ನು ತೆಗೆದುಕೊಂಡು ಒಂದರಲ್ಲಿ ಮೊಟ್ಟೆಗಳನ್ನು ಒಡೆದು ಅದನ್ನು ಚೆನ್ನಾಗಿ ಬೀಟ್ ಮಾಡಿಕೊಳ್ಳಿ.
    * ಇನ್ನೊಂದು ಪ್ಯಾನ್‌ನಲ್ಲಿ ಬ್ರೆಡ್ ಕ್ರಂಬ್ಸ್ ಹಾಗೂ ಸೂಪ್ ಮಿಕ್ಸ್ಅನ್ನು ಸೇರಿಸಿ ಮಿಶ್ರಣ ಮಾಡಿ.
    * ಈಗ ಹಂದಿ ಚಾಪ್ಸ್ ಅನ್ನು ಮೊದಲು ಮೊಟ್ಟೆಯ ಮಿಶ್ರಣದಲ್ಲಿ ಚೆನ್ನಾಗಿ ಅದ್ದಿ, ಬಳಿಕ ಬ್ರೆಡ್ ಕ್ರಂಬ್ಸ್ ಹಾಗೂ ಸೂಪ್ ಮಿಕ್ಸ್ ಮಿಶ್ರಣದಲ್ಲಿ ಹಾಕಿ ಚೆನ್ನಾಗಿ ಕೋಟ್ ಮಾಡಿಕೊಳ್ಳಿ.
    * ಬಳಿಕ ಅವುಗಳನ್ನು ಬೇಕಿಂಗ್ ಶೀಟ್‌ನಲ್ಲಿ ಇರಿಸಿ, 20 ನಿಮಿಷಗಳ ಕಾಲ ಓವನ್ ಅಲ್ಲಿ ಬೇಯಿಸಿ. ನಡುವೆ ಒಂದು ಬಾರಿ ತಿರುವಿ ಹಾಕಿ ಬೇಯಿಸಿಕೊಳ್ಳಿ.
    * ಇದೀಗ ಸಿಂಪಲ್ ಹಾಗೂ ಕ್ವಿಕ್ ಫ್ರೆಂಚ್ ಆನಿಯನ್ ಪೋರ್ಕ್ ಚಾಪ್ಸ್ ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಚಿಕನ್ ಲಿವರ್ ಪೆಪ್ಪರ್ ಫ್ರೈ – ಲಿವರ್ ಪ್ರಿಯರು ಟ್ರೈ ಮಾಡ್ಲೇಬೇಕಾದ ರೆಸಿಪಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೇಕರಿ ಸ್ಟೈಲ್ ಎಗ್‍ಲೆಸ್ ಹನಿ ಕೇಕ್ ಮನೆಯಲ್ಲೇ ಮಾಡಿ

    ಬೇಕರಿ ಸ್ಟೈಲ್ ಎಗ್‍ಲೆಸ್ ಹನಿ ಕೇಕ್ ಮನೆಯಲ್ಲೇ ಮಾಡಿ

    ತ್ತೀಚಿನ ದಿನಗಳಲ್ಲಿ ಜನ್ಮದಿನ, ಮದುವೆ ಹೀಗೆ ವಿಶೇಷ ಕಾರ್ಯಕ್ರಮದಲ್ಲಿ ಖುಷಿಯನ್ನು ವ್ಯಕ್ತಪಡಿಸಲು ಕೇಕ್ ಕತ್ತರಿಸುವುದು ಒಂದು ಟ್ರೆಂಡ್ ಆಗಿದೆ. ಕೇಕ್ ಮಕ್ಕಳಿಗೆ ಮಾತ್ರವಲ್ಲದೇ ದೊಡ್ಡವರಿಗೂ ಇಷ್ಟವಾಗುತ್ತದೆ. ಅದರಲ್ಲೂ ಹನಿ ಕೇಕ್ ತುಂಬಾ ರುಚಿಯಾಗಿರುತ್ತದೆ. ಇದನ್ನು ಬೇಕರಿಯಿಂದ ತರುವ ಬದಲು ಸುಲಭವಾಗಿ ಮನೆಯಲ್ಲೇ ಮಾಡಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಮೊಟ್ಟೆ ಬಳಸದೆ ಹನಿ ಕೇಕ್ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಎಗ್‍ಲೆಸ್ ಹನಿಕೇಕ್ (Eggless Honey Cake) ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಥಾಯ್ ಸ್ಪೆಷಲ್ – ಟೀ ಐಸ್ ಕ್ರೀಮ್ ಮಾಡೋದು ಹೀಗೆ

    ಬೇಕಾಗುವ ಸಾಮಗ್ರಿಗಳು:
    ಮೈದಾ ಹಿಟ್ಟು – 1 ಕಪ್
    ಮೊಸರು -ಕಾಲು ಕಪ್
    ಎಣ್ಣೆ – ಕಾಲು ಕಪ್
    ಸಕ್ಕರೆ ಪುಡಿ – ಅರ್ಧ ಕಪ್
    ಒಣಕೊಬ್ಬರಿ ತುರಿ – ಅರ್ಧ ಕಪ್
    ಸಕ್ಕರೆ – ಅರ್ಧ ಕಪ್
    ಹಾಲು – ಅರ್ಧ ಕಪ್
    ಬೇಕಿಂಗ್ ಸೋಡಾ – ಕಾಲು ಚಮಚ
    ಬೇಕಿಂಗ್ ಪೌಡರ್ – ಅರ್ಧ ಚಮಚ
    ಫ್ರೂಟ್ ಜಾಮ್ – ಕಾಲು ಕಪ್
    ಪೈನಾಪಲ್ ಎಸೆನ್ಸ್ – 1 ಚಮಚ
    ಜೇನುತುಪ್ಪ- 1 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬೌಲ್‍ನಲ್ಲಿ ಕಾಲು ಕಪ್ ಮೊಸರನ್ನು ಹಾಕಿಕೊಂಡು ಅದಕ್ಕೆ ಅರ್ಧ ಕಪ್ ಹಾಲನ್ನು ಹಾಕಿಕೊಳ್ಳಿ. ಬಳಿಕ ಇದಕ್ಕೆ ಕಾಲು ಕಪ್ ಎಣ್ಣೆಯನ್ನು ಹಾಕಿಕೊಳ್ಳಿ.
    * ಈಗ ಇದಕ್ಕೆ ಒಂದು ಚಮಚ ಪೈನಾಪಲ್ ಎಸೆನ್ಸ್ ಹಾಕಿಕೊಂಡು ಚನ್ನಾಗಿ ತಿರುವಿಕೊಳ್ಳಿ. ಮಿಶ್ರಣ ಚನ್ನಾಗಿ ಹೊಂದಿಕೊಂಡ ಬಳಿಕ ಇದನ್ನು ಪಕ್ಕಕ್ಕೆ ಇಡಿ.
    * ಬಳಿಕ ಇನ್ನೊಂದು ಬೌಲ್‍ನಲ್ಲಿ ಒಂದು ಕಪ್ ಮೈದಾ ಹಿಟ್ಟನ್ನು ಹಾಕಿಕೊಂಡು ಅದಕ್ಕೆ ಅರ್ಧ ಕಪ್ ಸಕ್ಕರೆ ಪೌಡರ್ ಅನ್ನು ಹಾಕಿಕೊಳ್ಳಿ. ಈಗ ಇದಕ್ಕೆ ಒಂದು ಚಮಚ ಬೇಕಿಂಗ್ ಪೌಡರ್, ಅರ್ಧ ಚಮಚ ಬೇಕಿಂಗ್ ಸೋಡಾ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
    * ನಂತರ ಇದಕ್ಕೆ ಮೊಸರು ಮತ್ತು ಹಾಲಿನ ಮಿಶ್ರಣವನ್ನು ಸೇರಿಸಿಕೊಂಡು ಗಂಟಾಗದಂತೆ ತಿರುವಿಕೊಳ್ಳಿ. ಮಿಶ್ರಣ ತುಂಬಾ ತೆಳ್ಳಗಾಗಬಾರದು.
    * ಈಗ ಒಂದು ಟ್ರೇಗೆ ಸ್ವಲ್ಪ ಎಣ್ಣೆಯನ್ನು ಹಚ್ಚಿಕೊಂಡು ಅದಕ್ಕೆ ಒಂದು ಚಮಚ ಮೈದಾ ಹಿಟ್ಟನ್ನು ಹರಡಿಕೊಂಡು ಬಳಿಕ ಕೇಕ್ ಮಿಶ್ರಣವನ್ನು ಅದಕ್ಕೆ ಹಾಕಿಕೊಳ್ಳಿ.
    * ಈಗ ಓವನ್ ಅನ್ನು 180 ಡಿಗ್ರಿ ಬಿಸಿಗಿಟ್ಟು ಅದರಲ್ಲಿ ಕೇಕ್ ಟ್ರೇಯನ್ನು ಇಟ್ಟು 35ರಿಂದ 40 ನಿಮಿಷಗಳವರೆಗೆ ಬೇಯಿಸಿಕೊಳ್ಳಿ.
    * ನಂತರ ಟ್ರೇಯನ್ನು ಹೊರತೆಗೆದು ಬಿಸಿ ಆರಲು ಬಿಡಿ. ಬಳಿಕ ಕೇಕ್‍ನ ಮೇಲ್ಭಾಗದಲ್ಲಿರುವ ಕಂದು ಬಣ್ಣದ ಪದರವನ್ನು ಕತ್ತರಿಸಿ ತೆಗೆಯಿರಿ. ಅದೇ ರೀತಿ ಸುತ್ತಲಿರುವ ಪದರವನ್ನು ತೆಗೆಯಿರಿ.
    * ಬಳಿಕ ಟ್ರೇಯಿಂದ ಕೇಕ್ ಅನ್ನು ಹೊರತೆಗೆದು ಒಂದು ಪ್ಲೇಟ್‍ಗೆ ಹಾಕಿಕೊಳ್ಳಿ.
    * ಈಗ ಒಂದು ಪ್ಯಾನ್‍ನಲ್ಲಿ 2 ಚಮಚ ಸಕ್ಕರೆಯನ್ನು ಹಾಕಿಕೊಂಡು ಅದಕ್ಕೆ 2 ಚಮಚ ನೀರನ್ನು ಹಾಕಿಕೊಂಡು ಸಕ್ಕರೆ ಕರಗುವವರೆಗೆ ಗ್ಯಾಸ್‍ನಲ್ಲಿ ಬಿಸಿಗಿಡಿ. ಸಕ್ಕರೆ ಕರಗಿದ ಬಳಿಕ ಗ್ಯಾಸ್ ಆಫ್ ಮಾಡಿ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ಬೌಲ್‍ನಲ್ಲಿ ತೆಗೆದಿಡಿ.
    * ಮತ್ತೆ ಅದೇ ಪ್ಯಾನ್‍ಗೆ ಒಂದು ಚಮಚ ಜೇನುತುಪ್ಪವನ್ನು ಹಾಕಿಕೊಂಡು ಅದಕ್ಕೆ 3ರಿಂದ 4 ಚಮಚ ಜಾಮ್ ಅನ್ನು ಹಾಕಿಕೊಂಡು ಜಾಮ್ ಕರಗುವವರೆಗೆ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ.
    * ಬಳಿಕ ಕೇಕ್ ಮೇಲೆ ಸುತ್ತಲೂ ಸಕ್ಕರೆ ಮಿಶ್ರಣವನ್ನು ಹಚ್ಚಿಕೊಳ್ಳಿ. ಬಳಿಕ ಅದರ ಮೇಲೆ ಜಾಮ್ ಮಿಶ್ರಣವನ್ನು ಸರಿಯಾಗಿ ಹಾಕಿಕೊಳ್ಳಿ. ನಂತರ ಅದರ ಮೇಲೆ ಕೊಬ್ಬರಿ ತುರಿಯನ್ನು ಉದುರಿಸಿಕೊಳ್ಳಿ.
    * ಬಳಿಕ ಇದನ್ನು ಚೌಕಾಕಾರದಲ್ಲಿ ತುಂಡರಿಸಿಕೊಂಡು ಸರ್ವಿಂಗ್ ಪ್ಲೇಟ್‍ಗೆ ಹಾಕಿ ಸವಿಯಲು ಕೊಡಿ. ಇದನ್ನೂ ಓದಿ: ಸಿನಿಮಾ ಟೈಮ್‌ನಲ್ಲಿ ಟೇಸ್ಟಿ ಟ್ವಿಸ್ಟ್ – ಡಿಫರೆಂಟ್ ಆಗಿ ಹನಿ ಪಾಪ್‌ಕಾರ್ನ್ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಥಾಯ್ ಸ್ಪೆಷಲ್ – ಟೀ ಐಸ್ ಕ್ರೀಮ್ ಮಾಡೋದು ಹೀಗೆ

    ಥಾಯ್ ಸ್ಪೆಷಲ್ – ಟೀ ಐಸ್ ಕ್ರೀಮ್ ಮಾಡೋದು ಹೀಗೆ

    ಥೈಲ್ಯಾಂಡ್ ಸ್ಪೆಷಲ್ ಐಸ್ಡ್ ಟೀಯನ್ನು ನಾವಿಂದು ಐಸ್ ಕ್ರೀಮ್ ರೂಪದಲ್ಲಿ ಸವಿಯಲಿದ್ದೇವೆ. ಹೌದು, ಈ ಟೀ ಐಸ್ ಕ್ರೀಮ್‌ಗೆ ಯಾವುದೇ ಮೊಟ್ಟೆ ಅಥವಾ ಕಸ್ಟರ್ಡ್ ಅಗತ್ಯವಿಲ್ಲ. ವಿಪ್ಡ್ ಕ್ರೀಮ್, ಕಂಡೆನ್ಸ್‌ಡ್ ಮಿಲ್ಕ್ ಹಾಗೂ ಥಾಯ್ ಸ್ಪೆಷಲ್ ಚಹಾದ ಎಲೆಯ ಸಂಯೋಜನೆಯಿಂದ ನಾವಿಂದು ಟೀ ಐಸ್ ಕ್ರೀಮ್ ಮಾಡೋದು ಹೇಗೆಂದು ಹೇಳಿಕೊಡಲಿದ್ದೇವೆ. ಊಟದ ನಂತರ ಸವಿಯಲು ಬೆಸ್ಟ್ ಆಗಿರೋ ರೆಸಿಪಿಯನ್ನು ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ವಿಪ್ಡ್ ಕ್ರೀಮ್ – ಒಂದೂವರೆ ಕಪ್
    ಥಾಯ್ ಚಹಾ ಎಲೆಗಳು – ಕಾಲು ಕಪ್
    ಉಪ್ಪು – ಚಿಟಿಕೆ
    ಸಿಹಿ ಕಂಡೆನ್ಸ್‌ಡ್ ಮಿಲ್ಕ್ – ಅರ್ಧ ಕ್ಯಾನ್
    ಐರಿಷ್ ಕ್ರೀಮ್ – ಒಂದೂವರೆ ಟೀಸ್ಪೂನ್ ಇದನ್ನೂ ಓದಿ: ಸಿನಿಮಾ ಟೈಮ್‌ನಲ್ಲಿ ಟೇಸ್ಟಿ ಟ್ವಿಸ್ಟ್ – ಡಿಫರೆಂಟ್ ಆಗಿ ಹನಿ ಪಾಪ್‌ಕಾರ್ನ್ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ವಿಪ್ಪಿಂಗ್ ಕ್ರೀಮ್ ಅನ್ನು ಹಾಕಿ ಆಗಾಗ ಬೆರೆಸುತ್ತಾ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.
    * ಇದಕ್ಕೆ ಚಹಾ ಎಲೆಗಳು ಮತ್ತು ಚಿಟಿಕೆ ಉಪ್ಪನ್ನು ಸೇರಿಸಿ ಕುದಿಯುವವರೆಗೆ ಬಿಸಿ ಮಾಡಿ.
    * ಈಗ ಫಿಲ್ಟರ್ ಅನ್ನು ಬಳಸಿಕೊಂಡು ಕ್ರೀಮ್ ಅನ್ನು ಇನ್ನೊಂದು ಪಾತ್ರೆಗೆ ಸಾಧ್ಯವಾದಷ್ಟು ದ್ರವವನ್ನು ಹಿಂಡಿಕೊಳ್ಳಿ.
    * ಕ್ರೀಮ್ ತಣ್ಣಗಾದ ನಂತರ ವಿಪ್ಪಿಂಗ್ ಮಷಿನ್ ಬಳಸಿ ಅದು ಮೃದುವಾಗುವಂತೆ ಮಾಡಿ.
    * ಮಿಶ್ರಣಕ್ಕೆ ಸ್ವಲ್ಪ ಹಾಲು ಮತ್ತು ಐರಿಶ್ ಕ್ರೀಮ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಲೋಹದ ಪಾತ್ರೆಗೆ ಇದನ್ನು ವರ್ಗಾಯಿಸಿ, ಸುಮಾರು 2-3 ಗಂಟೆ ಫ್ರೀಜರ್‌ನಲ್ಲಿ ಇಟ್ಟು ಗಟ್ಟಿಯಾಗಲು ಬಿಡಿ.
    * ಇದೀಗ ಥಾಯ್ ಟೀ ಐಸ್ ಕ್ರೀಮ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಕರಿ ಎಳ್ಳಿನ ಡಂಪ್ಲಿಂಗ್ – ಇದು ಚೈನೀಸ್ ಸ್ವೀಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿನಿಮಾ ಟೈಮ್‌ನಲ್ಲಿ ಟೇಸ್ಟಿ ಟ್ವಿಸ್ಟ್ – ಡಿಫರೆಂಟ್ ಆಗಿ ಹನಿ ಪಾಪ್‌ಕಾರ್ನ್ ಮಾಡಿ

    ಸಿನಿಮಾ ಟೈಮ್‌ನಲ್ಲಿ ಟೇಸ್ಟಿ ಟ್ವಿಸ್ಟ್ – ಡಿಫರೆಂಟ್ ಆಗಿ ಹನಿ ಪಾಪ್‌ಕಾರ್ನ್ ಮಾಡಿ

    ಪಾಪ್‌ಕಾರ್ನ್ ಕೇವಲ ಸಿನಿಮಾ ಥಿಯೇಟರ್‌ನಲ್ಲಿ ಮಾತ್ರ ಏಕೆ.. ಮನೆಯಲ್ಲಿ ಮಾಡೋಕೆ ಕಷ್ಟ ಏನಿಲ್ಲ. ಪಾಪ್ ಕಾರ್ನ್ ಮಾಡೋದು ಸುಲಭ ಹಾಗೂ ದೇಹಕ್ಕೆ ಆರೋಗ್ಯಕರ. ಒಳ್ಳೆಯ ಪೌಷ್ಟಿಕಾಂಶ ಹಾಗೂ ಫೈಬರ್‌ನಿಂದ ತುಂಬಿದ್ದು, ಕಡಿಮೆ ಕ್ಯಾಲೊರಿ ಹೊಂದಿದೆ. ಇದನ್ನು ಮಾಡೋದು ಸುಲಭವಾಗಿದ್ರೂ ಮಾಲ್‌ಗಳಲ್ಲಿ ಸಿಗೋ ವಿಧ ವಿಧ ರುಚಿಯ ಪಾಪ್‌ಕಾರ್ನ್ ಮನೆಯಲ್ಲಿ ಮಾಡೋದು ಹೇಗೆಂದು ಹೆಚ್ಚಿನವರಿಗೆ ತಿಳಿದಿರಲ್ಲ. ಡಿಫರೆಂಟ್ ರುಚಿಯ ಹನಿ ಪಾಪ್‌ಕಾರ್ನ್ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಮನೆಯಲ್ಲಿಯೇ ಸಿನಿಮಾ ಟೈಮ್‌ನಲ್ಲಿ ಇದನ್ನು ಮಾಡಿ, ಆನಂದಿಸಿ.

    ಬೇಕಾಗುವ ಪದಾರ್ಥಗಳು:
    ಪಾಪ್‌ಕಾರ್ನ್ ಕರ್ನಲ್ಸ್ – 85 ಗ್ರಾಂ
    ಬೆಣ್ಣೆ – 25 ಗ್ರಾಂ
    ಜೇನುತುಪ್ಪ – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಕರಿ ಮೆಣಸಿನಪುಡಿ – ಸ್ವಾದಕ್ಕನುಸಾರ ಇದನ್ನೂ ಓದಿ: ಚಿಪ್ಸ್‌, ನಾಚೋಸ್‌ಗೆ ಪರ್ಫೆಕ್ಟ್‌ ಈ ಟೊಮೆಟೋ ಸಾಲ್ಸಾ

    ಮಾಡುವ ವಿಧಾನ:
    * ಮೊದಲಿಗೆ ಪಾಪ್‌ಕಾರ್ನ್ ಕರ್ನಲ್‌ಗಳನ್ನು ಒಂದು ಪಾತ್ರೆಗೆ ಹಾಕಿ, ಬೆಣ್ಣೆ, ಜೇನುತುಪ್ಪ ಹಾಗೂ ಉಪ್ಪು ಸೇರಿಸಿ.
    * ಉರಿಯನ್ನು ಆನ್ ಮಾಡಿ, ಒಂದು ತಟ್ಟೆಯಿಂದ ಮುಚ್ಚಿ.
    * ಎಲ್ಲಾ ಕಾರ್ನ್‌ಗಳೂ ಪಾಪ್ ಆದ ಬಳಿಕ ಅದನ್ನು ಒಂದು ದೊಡ್ಡ ಬೌಲ್‌ಗೆ ಹಾಕಿ.
    * ಸ್ವಾದಕ್ಕನುಸಾರ ಕರಿ ಮೆಣಸಿನಪುಡಿ, ರುಚಿಗೆ ತಕ್ಕಷು ಉಪ್ಪನ್ನು ಸಿಂಪಡಿಸಿ, ಮಿಶ್ರಣ ಮಾಡಿ.
    * ಇದೀಗ ಹನಿ ಪಾಪ್‌ಕಾರ್ನ್ ತಯಾರಾಗಿದ್ದು, ಬೆಚ್ಚಗೆ ಸಿನಿಮಾ ಟೈಮ್‌ನಲ್ಲಿ ಆನಂದಿಸಿ. ಇದನ್ನೂ ಓದಿ: ಹಸಿವನ್ನು ತಣಿಸಲು ಒನ್ ಪಾಟ್ ಗಾರ್ಲಿಕ್ ಚಿಕನ್ ಪಾಸ್ತಾ ಟ್ರೈ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೃಷ್ಣನಿಗಾಗಿ ಸಿಹಿ ಕರ್ಜಿಕಾಯಿ ಮಾಡುವ ವಿಧಾನ

    ಕೃಷ್ಣನಿಗಾಗಿ ಸಿಹಿ ಕರ್ಜಿಕಾಯಿ ಮಾಡುವ ವಿಧಾನ

    ಇಂದು ಕೃಷ್ಣ ಜನ್ಮಾಷ್ಟಮಿ. ಕೃಷ್ಣನ ಆರಾಧಕರು ದೇವಾಲಯಕ್ಕೆ ಹೋಗಿ ಪೂಜೆ ಮಾಡುತ್ತಾರೆ. ಕೆಲವರು ಮನೆಯಲ್ಲಿಯೇ ಕೃಷ್ಣನ ವಿಗ್ರಹಕ್ಕೆ ಪೂಜೆ ಮಾಡುತ್ತಾರೆ. ಆದರೆ ಪೂಜೆ ಮಾಡುವ ಮುನ್ನ ಕೃಷ್ಣನಿಗಾಗಿ ಸಿಹಿ ಪ್ರಸಾದ ಮಾಡಿ ನೈವೆದ್ಯವನ್ನು ಇಡಬೇಕು. ಪ್ರತಿ ಹಬ್ಬಕ್ಕೂ ಕೇಸರಿ ಬಾತ್, ಪಾಯಸ ಅದೇ ಸಿಹಿ ತಿಂಡಿ ಮಾಡಿ ಬೇಸರವಾಗಿದ್ದರೆ ಈ ಬಾರಿ ಕೃಷ್ಣನಿಗಾಗಿ ಬೇಗ ಹಾಗೂ ಸುಲಭವಾಗಿ ಸಿಹಿ ಕರ್ಜಿಕಾಯಿ ಮಾಡುವ ವಿಧಾನ ನಾವಿಂದು ಹೇಳಿಕೊಡುತ್ತಿದ್ದೇವೆ.

    ಬೇಕಾಗುವ ಪದಾರ್ಥಗಳು:
    ಮೈದಾ ಹಿಟ್ಟು – ಅರ್ಧ ಕೆಜಿ
    ಉಪ್ಪು – ಚಿಟಿಕೆ
    ಎಣ್ಣೆ – ಕರಿಯಲು
    ಕೊಬ್ಬರಿ – ಅರ್ಧ ಕೆಜಿ
    ಸಕ್ಕರೆ – ಕಾಲು ಕೆಜಿ
    ಏಲಕ್ಕಿ ಪುಡಿ – ಸ್ವಲ್ಪ ಇದನ್ನೂ ಓದಿ: ಕರಿ ಎಳ್ಳಿನ ಡಂಪ್ಲಿಂಗ್ – ಇದು ಚೈನೀಸ್ ಸ್ವೀಟ್

    ಮಾಡುವ ವಿಧಾನ:
    * ಮೈದಾ ಹಿಟ್ಟನ್ನು ಜರಡಿ ಅದಕ್ಕೆ ಚಿಟಿಕೆ ಉಪ್ಪು ಹಾಕಿ ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಡಿ.
    * ಕೊಬ್ಬರಿಯನ್ನು ತುರಿದು ಅದಕ್ಕೆ ಪುಡಿ ಮಾಡಿದ ಸಕ್ಕರೆ, ಏಲಕ್ಕಿ ಪುಡಿಯನ್ನು ಬೆರೆಸಿಡಿ.
    * ಇತ್ತ ಚೆನ್ನಾಗಿ ನಾದಿದ ಮೈದಾ ಹಿಟ್ಟನ್ನು ಸಣ್ಣ ಉಂಡೆಯನ್ನಾಗಿ ಮಾಡಿ ಪೂರಿಯಂತೆ ಲಟ್ಟಿಸಿ.
    * ಹೀಗೆ ಲಟ್ಟಿಸಿದ ಹಿಟ್ಟಿನ ಮಧ್ಯ ಭಾಗದಲ್ಲಿ ಕೊಬ್ಬರಿ ಮಿಶ್ರಿತ ಊರ್ಣವನ್ನು ತುಂಬಿ ಮಧ್ಯಕ್ಕೆ ಮಡಚಿ ಸೀಲ್ ಮಾಡಿ. (ಮಾರ್ಕೆಟ್‌ನಲ್ಲಿ ಸಿಗುವ ಕರ್ಜಿಕಾಯಿ ಮೌಲ್ಡ್ ಬಳಸಬಹುದು)
    * ಈ ರೀತಿ ಎಲ್ಲವನ್ನೂ ಮಾಡಿಟ್ಟುಕೊಂಡ ನಂತರ ಕಾದ ಎಣ್ಣೆಗೆ ಹಾಕಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೂ ಕರಿಯಿರಿ.
    * ಕರಿದ ಬಳಿಕ ಎಣ್ಣೆಯಿಂದ ತೆಗೆದು ಒಂದು ಪಾತ್ರೆಗೆ ಹಾಕಿ. ಗರಿ ಗರಿಯಾದ ಕರ್ಜಿಕಾಯಿಯನ್ನು ಹಲವು ದಿನಗಳ ಕಾಲ ಸ್ಟೋರ್ ಮಾಡಿ ತಿನ್ನಬಹುದು. ಇದನ್ನೂ ಓದಿ: ರಕ್ಷಾಬಂಧನ ಸ್ಪೆಷಲ್ – ಒಡಹುಟ್ಟಿದವರಿಗೆ ನಿಮ್ಮ ಕೈಯಾರೆ ಮಾಡಿ ಕೊಡಿ ಚಾಕ್ಲೇಟ್ ಬರ್ಫಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿಪ್ಸ್‌, ನಾಚೋಸ್‌ಗೆ ಪರ್ಫೆಕ್ಟ್‌ ಈ ಟೊಮೆಟೋ ಸಾಲ್ಸಾ

    ಚಿಪ್ಸ್‌, ನಾಚೋಸ್‌ಗೆ ಪರ್ಫೆಕ್ಟ್‌ ಈ ಟೊಮೆಟೋ ಸಾಲ್ಸಾ

    ಚಿಪ್ಸ್, ನಾಚೋಸ್ ಮುಂತಾದ ಸ್ನ್ಯಾಕ್ಸ್‌ಗಳನ್ನು ತಿನ್ನವ ವೇಳೆ ಕೆಲವರು ಸಾಸ್ ಜೊತೆಗೆ ತಿನ್ನಲು ಇಷ್ಟಪಡುತ್ತಾರೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಮನೆಯಲ್ಲೇ ಸಾಲ್ಸಾ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಸಾಲ್ಸಾ ಎಂದರೆ ಸ್ಪ್ಯಾನಿಷ್ ಭಾಷೆಯಲ್ಲಿ ಸಾಸ್ ಎಂದರ್ಥ. ಸಾಸ್‌ಗಳಲ್ಲಿ ಅನೇಕ ಬಗೆಯ ಸಾಸ್‌ಗಳಿರುತ್ತವೆ. ಟೊಮೆಟೋ ಸಾಲ್ಸಾ ಸ್ನಾಕ್ಸ್‌ಗಳಿಗೆ ಪರ್ಫೆಕ್ಟ್ ಕಾಂಬಿನೇಷನ್. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಕರಿ ಎಳ್ಳಿನ ಡಂಪ್ಲಿಂಗ್ – ಇದು ಚೈನೀಸ್ ಸ್ವೀಟ್

    ಬೇಕಾಗುವ ಸಾಮಗ್ರಿಗಳು:
    ಟೊಮೆಟೋ – 6
    ಈರುಳ್ಳಿ – ಒಂದು
    ಹಸಿರು ಮೆಣಸು – 2
    ಕೊತ್ತಂಬರಿ ಸೊಪ್ಪು – ಒಂದು ಹಿಡಿ
    ಜೀರಿಗೆ ಪುಡಿ -1 ಚಮಚ
    ನಿಂಬೆ ರಸ – 3 ಚಮಚ
    ಉಪ್ಪು – 1 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಟೊಮೆಟೋ, ಕೊತ್ತಂಬರಿ ಸೊಪ್ಪು, ಈರುಳ್ಳಿ, ಹಸಿರುಮೆಣಸನ್ನು ಚೆನ್ನಾಗಿ ತೊಳೆದು ಹೆಚ್ಚಿಕೊಳ್ಳಬೇಕು.
    * ಬಳಿಕ ಇದನ್ನು ಮಿಕ್ಸಿಗೆ ಹಾಕಿ ಒಂದು ಸುತ್ತು ತಿರುಗಿಸಿಕೊಳ್ಳಿ. ಇದರ ಬದಲಿಗೆ ಕೈಯಲ್ಲೂ ಕಿವುಚಿಕೊಂಡು ಬಳಿಕ ಒಂದು ಬೌಲ್‌ನಲ್ಲಿ ಹಾಕಿಡಿ.
    * ಈಗ ಈ ಮಿಶ್ರಣಕ್ಕೆ ಜೀರಿಗೆ ಪುಡಿ, ಉಪ್ಪು ಹಾಗೂ ಸ್ವಲ್ಪ ಪೆಪ್ಪರ್ ಪೌಡರ್ ಅನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಬಳಿಕ ಇದಕ್ಕೆ ನಿಂಬೆರಸವನ್ನು ಸೇರಿಸಿಕೊಂಡು ಮಿಶ್ರಣದೊಂದಿಗೆ ನಿಂಬೆರಸ ಹೊಂದಿಕೊಳ್ಳುವಂತೆ ತಿರುವಿಕೊಳ್ಳಿ.
    * ಮಿಶ್ರಣ ತೀರಾ ನೀರಾಗದೆ ಸ್ವಲ್ಪ ದಪ್ಪವಿರಬೇಕು. ತುಂಬಾ ದಪ್ಪವಿದ್ದರೆ ಒಂದು ಚಮಚ ನೀರನ್ನು ಸೇರಿಸಿಕೊಂಡು ಮತ್ತೊಂದು ಬಾರಿ ಕಲಸಿಕೊಳ್ಳಿ. ಈಗ ಟೊಮೆಟೋ ಸಾಲ್ಸಾ ತಿನ್ನಲು ರೆಡಿ.
    * ಮಕ್ಕಳಿಗೆ ಚಿಪ್ಸ್, ನಾಚೋಸ್ ಜೊತೆ ಸಾಲ್ಸಾ ಕೊಟ್ಟರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಇದನ್ನೂ ಓದಿ: ಸ್ಟ್ರೀಟ್ ಸ್ಟೈಲ್ ವೆಜ್ ಫ್ರಾಂಕಿ ತಿಂದು ನೋಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರಿ ಎಳ್ಳಿನ ಡಂಪ್ಲಿಂಗ್ – ಇದು ಚೈನೀಸ್ ಸ್ವೀಟ್

    ಕರಿ ಎಳ್ಳಿನ ಡಂಪ್ಲಿಂಗ್ – ಇದು ಚೈನೀಸ್ ಸ್ವೀಟ್

    ರಿ ಎಳ್ಳನ್ನು ಬಳಸಿ ಚೈನೀಸ್ ಸ್ಟೈಲ್‌ನ ಸಿಹಿ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡಲಿದ್ದೇವೆ. ಡಂಪ್ಲಿಂಗ್ ಎನ್ನಲಾಗುವ ಈ ಸಿಹಿ ಚೀನಾದ ಫೇಮಸ್ ಡಿಶ್. ಇದನ್ನು ಟ್ಯಾಂಗ್ ಯುವಾನ್ ಎಂತಲೂ ಕರೆಯಲಾಗುತ್ತದೆ. ಬಿಸಿ ನೀರು ಅಥವಾ ಶುಂಠಿಯ ಸಿರಪ್‌ನಲ್ಲಿ ಅದ್ದಿ, ಈ ಡಂಪ್ಲಿಂಗ್ ಅನ್ನು ಬಡಿಸಲಾಗುತ್ತದೆ. ಮಳೆ ಅಥವಾ ತಣ್ಣಗಿನ ದಿನಗಳಲ್ಲಿ ಬೆಚ್ಚಗಿನ ಸಿಹಿ ಸವಿಯಲು ಆಹ್ಲಾದಕರವಾಗಿರುತ್ತದೆ. ಹಾಗಿದ್ರೆ ಟ್ಯಾಂಗ್ ಯುವಾನ್ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಜಿಗುಟಾದ ಅಕ್ಕಿ ಹಿಟ್ಟು – 250 ಗ್ರಾಂ
    ನೀರು – 180 ಮಿ.ಲೀ.
    ಕರಿ ಎಳ್ಳು – ಕಾಲು ಕಪ್
    ಸಕ್ಕರೆ – ಕಾಲು ಕಪ್
    ಬೆಣ್ಣೆ – ಕಾಲು ಕಪ್
    ಶುಂಠಿ ಸಿರಪ್ ತಯಾರಿಸಲು:
    ನೀರು – 5 ಕಪ್
    ಸಕ್ಕರೆ – 1 ಕಪ್
    ಸಿಪ್ಪೆ ತೆಗೆದು ಕತ್ತರಿಸಿದ ಶುಂಠಿ – 100 ಗ್ರಾಂ ಇದನ್ನೂ ಓದಿ: ಹಸಿವನ್ನು ತಣಿಸಲು ಒನ್ ಪಾಟ್ ಗಾರ್ಲಿಕ್ ಚಿಕನ್ ಪಾಸ್ತಾ ಟ್ರೈ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಕರಿ ಎಳ್ಳನ್ನು ಬಾಣಲೆಯಲ್ಲಿ ಮಧ್ಯಮ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿದುಕೊಳ್ಳಬೇಕು. ಎಳ್ಳು ಬಿಸಿಯಾದಾಗ ಸಿಡಿಯುತ್ತದೆ. ಇದಕ್ಕಾಗಿ ಬಾಣಲೆಗೆ ಮುಚ್ಚಳ ಬಳಸಿ. ಎಳ್ಳು ಸುಡದಂತೆ ಜಾಗ್ರತೆವಹಿಸಿ.
    * ಎಳ್ಳು ಸುವಾಸನೆ ಬರಲು ಪ್ರಾರಂಭವಾಗುತ್ತಿದ್ದಂತೆ ಉರಿಯನ್ನು ಆಫ್ ಮಾಡಿ ತಕ್ಷಣ ಅದನ್ನು ಇನ್ನೊಂದು ತಟ್ಟೆಗೆ ವರ್ಗಾಯಿಸಿ, ತಣ್ಣಗಾಗಲು ಬಿಡಿ.
    * ಬಳಿಕ ಒಂದು ಬ್ಲೆಂಡರ್ ಬಳಸಿ ಅದರಲ್ಲಿ ಎಳ್ಳನ್ನು ಪುಡಿ ಮಾಡಿಕೊಳ್ಳಿ.
    * ನಂತರ ಅದನ್ನು ಬಾಣಲೆಗೆ ವರ್ಗಾಯಿಸಿ, ಸಕ್ಕರೆ ಮತ್ತು ಬೆಣ್ಣೆ ಬೆರೆಸಿ ದಪ್ಪಗಿನ ಪೇಸ್ಟ್ ಆಗುವಂತೆ ಮಿಶ್ರಣ ಮಾಡಿಕೊಳ್ಳಿ. ಮಿಶ್ರಣ ಒಣ ಎನಿಸಿದರೆ ಇನ್ನಷ್ಟು ಬೆಣ್ಣೆ ಸೇರಿಸಬಹುದು.
    * ಬಳಿಕ ಈ ಮಿಶ್ರಣವನ್ನು ಫ್ರಿಜ್‌ನಲ್ಲಿಟ್ಟು ತಣ್ಣಗಾಗಿಸಿ.
    * ಈಗ ಒಂದು ದೊಡ್ಡ ಬಟ್ಟಲು ತೆಗೆದುಕೊಂಡು ಅದರಲ್ಲಿ ಅಂಟು ಅಕ್ಕಿ ಹಿಟ್ಟನ್ನು ಹಾಕಿ ನಿಧಾನಕ್ಕೆ ನೀರನ್ನು ಬೆರೆಸುತ್ತಾ ಮಿಶ್ರಣ ಮಾಡಿಕೊಳ್ಳಿ. ಇದರಲ್ಲಿ ಸುಮಾರು 15-20 ಉಂಡೆಗಳಾಗುವಂತೆ ವಿಭಜಿಸಿ, ನಿಮ್ಮ ಅಂಗೈ ಸಹಾಯದಿಂದ ಉಂಡೆಯನ್ನು ಚಪ್ಪಟೆಗೊಳಿಸಿ.
    * ಈಗ ಎಳ್ಳಿನ ಪೇಸ್ಟ್ ಅನ್ನು ಒಂದೊಂದೇ ಚಮಚದಷ್ಟು ಚಪ್ಪಟೆಗೊಳಿಸಿದ ಹಿಟ್ಟಿನ ಮೇಲೆ ಹಾಕಿ, ಹಿಟ್ಟಿನ ಅಂಚುಗಳನ್ನು ಮಧ್ಯಕ್ಕೆ ತಂದು ಜೋಡಿಸಿ. ಎರಡೂ ಅಂಗೈಗಳನ್ನು ಬಳಸಿ ಮೃದುವಾಗಿ ಚೆಂಡಿನಾಕಾರಕ್ಕೆ ತನ್ನಿ. ಎಲ್ಲ ಹಿಟ್ಟನ್ನು ಇದೇ ರೀತಿ ಮಾಡುವುದನ್ನು ಮುಂದುವರಿಸಿ.
    * ಶುಂಠಿ ಸಿರಪ್ ತಯಾರಿಸಲು ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು, ಅದಕ್ಕೆ ಶುಂಠಿ ತುಂಡುಗಳನ್ನು ಹಾಕಿ, ಸುಮಾರು 10-15 ನಿಮಿಷ ಕುದಿಸಿಕೊಳ್ಳಿ.
    * ಸಕ್ಕರೆ ಸೇರಿಸಿ ಮತ್ತೆ 5 ನಿಮಿಷ ಕುದಿಸಿ ನಂತರ ಪಕ್ಕಕ್ಕಿಡಿ.
    * ಈಗ ಇನ್ನೊಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ, ಡಂಪ್ಲಿಂಗ್‌ಗಳನ್ನು ಕುದಿಯುತ್ತಿರುವ ನೀರಿಗೆ ಹಾಕಿ. ಅದು ತೇಲಲು ಪ್ರಾರಂಭಿಸಿದ ತಕ್ಷಣ ನೀರಿನಿಂದ ತೆಗೆದು ಶುಂಠಿಯ ಸಿರಪ್‌ಗೆ ವರ್ಗಾಯಿಸಿ.
    * ಇದೀಗ ಕರಿ ಎಳ್ಳಿನ ಡಂಪ್ಲಿಂಗ್ ಅಥವಾ ಟ್ಯಾಂಗ್ ಯುವಾನ್ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಕಬಾಬ್ ಪೌಡರ್ ಇಲ್ಲದೇ ಸೋಯಾ ಕಬಾಬ್ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]