Tag: recipe

  • ವೆಜಿಟೇಬಲ್ ಮ್ಯಾಂಚೋ ಸೂಪ್ ಕುಡಿದು ಆನಂದಿಸಿ..!

    ವೆಜಿಟೇಬಲ್ ಮ್ಯಾಂಚೋ ಸೂಪ್ ಕುಡಿದು ಆನಂದಿಸಿ..!

    ಯಾವುದೇ ರೆಸ್ಟೋರೆಂಟ್‌ಗಳಿಗೆ ಹೋದರೂ ವೈಟರ್ ಸೂಪ್ ಅಥವಾ ಸ್ಟಾರ್ಟರ್ಸ್ ಏನಾದ್ರೂ ತೆಗೆದುಕೊಳ್ಳುತ್ತೀರಾ ಎಂದು ಮೊದಲು ಕೇಳುತ್ತಾರೆ. ಊಟಕ್ಕೂ ಮೊದಲು ಸೂಪ್ ಸೇವಿಸುವುದರಿಂದ ಚಯಾಪಚಯ ಕ್ರಿಯೆ ಸರಿಯಾಗಿ ಆಗುತ್ತದೆ. ಅಲ್ಲದೇ ದೇಹಕ್ಕೆ ನವಚೈತನ್ಯವನ್ನು ತುಂಬುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಮನೆಯಲ್ಲೇ ವೆಜಿಟೇಬಲ್ ಮ್ಯಾಂಚೋ ಸೂಪ್ ಯಾವ ರೀತಿ ಮಾಡಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ. ಈ ಸೂಪನ್ನು ಕುಡಿಯುವುದರಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಅಲ್ಲದೇ ಶೀತ, ಕೆಮ್ಮಿಗೂ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಡಿನ್ನರ್‌ಗೆ ಮಾಡಿ ಸ್ಪೆಷಲ್ ಚಿಲ್ಲಿ ಪೈನಾಪಲ್ ರೈಸ್

    ಬೇಕಾಗುವ ಸಾಮಗ್ರಿಗಳು:
    ನೀರು – 4 ಕಪ್
    ಹೆಚ್ಚಿದ ಶುಂಠಿ – 1 ಚಮಚ
    ಹೆಚ್ಚಿದ ಬೆಳ್ಳುಳ್ಳಿ – 1 ಚಮಚ
    ಹೆಚ್ಚಿದ ಹಸಿರು ಮೆಣಸಿನಕಾಯಿ – 1 ಚಮಚ
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಚಮಚ
    ಹೆಚ್ಚಿದ ಫ್ರೆಂಚ್ ಬೀನ್ಸ್ – 2 ಚಮಚ
    ಹೆಚ್ಚಿದ ಕ್ಯಾರೆಟ್ – 2 ಚಮಚ
    ಹೆಚ್ಚಿದ ಕ್ಯಾಬೇಜ್ – 2 ಚಮಚ
    ಹೆಚ್ಚಿದ ಕ್ಯಾಪ್ಸಿಕಮ್ – 2 ಚಮಚ
    ಹೆಚ್ಚಿದ ಮಶ್ರೂಮ್ – 2 ಚಮಚ
    ಹೆಚ್ಚಿದ ಸ್ಪ್ರಿಂಗ್ ಆನಿಯನ್ – 2 ಚಮಚ
    ಪೆಪ್ಪರ್ ಪೌಡರ್ – 1 ಚಮಚ
    ಸೋಯಾ ಸಾಸ್ – 1 ಚಮಚ
    ಜೋಳದ ಹಿಟ್ಟು – 4 ಚಮಚ
    ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
    ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ ಗ್ಯಾಸ್ ಮೇಲೆ ಇಡಿ. ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಹಸಿರು ಮೆಣಸಿನ ಕಾಯಿಯನ್ನು ಹಾಕಿಕೊಂಡು 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
    * ನಂತರ ಅದಕ್ಕೆ ಎಲ್ಲಾ ತರಕಾರಿಗಳನ್ನು ಹಾಕಿಕೊಂಡು ಬಳಿಕ ಪೆಪ್ಪರ್ ಪೌಡರ್, ಅಜಿನೊಮೊಟೊ ಮತ್ತು ಉಪ್ಪನ್ನು ಹಾಕಿಕೊಂಡು ಮತ್ತೆ ಎರಡು ನಿಮಿಷಗಳ ಕಾಲ ಚನ್ನಾಗಿ ಫ್ರೈ ಮಾಡಿಕೊಳ್ಳಿ.
    * ಈಗ ಇದಕ್ಕೆ ಸೋಯಾ ಸಾಸ್, ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ.
    * ಇದು ಚೆನ್ನಾಗಿ ಕುದಿಯಲು ಪ್ರಾರಂಭವಾದ ಬಳಿಕ ಜೋಳದ ಹಿಟ್ಟನ್ನು ನೀರಿನಲ್ಲಿ ಮಿಕ್ಸ್ ಮಾಡಿ ಈ ಮಿಶ್ರಣಕ್ಕೆ ಸೇರಿಸಿಕೊಂಡು ದಪ್ಪಗಾಗುವವರೆಗೆ ತಿರುವಿಕೊಳ್ಳಿ.
    * ಸೂಪ್ ಸಾಧಾರಣ ದಪ್ಪವಾದ ಬಳಿಕ ಗ್ಯಾಸ್ ಆಫ್ ಮಾಡಿ ಸರ್ವಿಂಗ್ ಬೌಲ್‌ನಲ್ಲಿ ಹಾಕಿ ಬಿಸಿ ಬಿಸಿ ಸವಿಯಲು ಕೊಡಿ. ಇದನ್ನೂ ಓದಿ: ಮಕ್ಕಳಿಗಾಗಿ ಚೋಕೋ ಚಿಪ್ ಕುಕ್ಕೀಸ್..!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಿನ್ನರ್‌ಗೆ ಮಾಡಿ ಸ್ಪೆಷಲ್ ಚಿಲ್ಲಿ ಪೈನಾಪಲ್ ರೈಸ್

    ಡಿನ್ನರ್‌ಗೆ ಮಾಡಿ ಸ್ಪೆಷಲ್ ಚಿಲ್ಲಿ ಪೈನಾಪಲ್ ರೈಸ್

    ಡಿನ್ನರ್‌ಗೆ ಏನಾದ್ರೂ ಸ್ಪೆಷಲ್ ಆಗಿ ಆರೋಗ್ಯಕರ, ರುಚಿಕರ ಹಾಗೆಯೇ ಕಡಿಮೆ ಮಸಾಲೆಯುಕ್ತ ಅಡುಗೆ ಮಾಡಬೇಕೆನಿಸಿದರೆ ನಾವಿಂದು ಹೇಳಿಕೊಡುತ್ತಿರೋ ರೆಸಿಪಿ ಪರ್ಫೆಕ್ಟ್ ಮ್ಯಾಚ್. ಚಿಲ್ಲಿ ಪೈನಾಪಲ್ ರೈಸ್ ಸರಳ ಹಾಗೂ ಸೌಮ್ಯವಾಗಿದ್ದು, ಲಂಚ್ ಬಾಕ್ಸ್ಗೂ ಉತ್ತಮವಾಗಿದೆ. ಜೀರಾ ರೈಸ್, ಪಲಾವ್ ಅಥವಾ ಯಾವುದೇ ರೈಸ್ ಐಟಮ್ ಮಾಡಿ ಬೋರ್ ಎನಿಸಿದಾಗ ಈ ರೆಸಿಪಿ ಖಂಡಿತಾ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಅಕ್ಕಿ – 1 ಕಪ್
    ಹೆಚ್ಚಿದ ಅನಾನಸ್ – ಅರ್ಧ ಕಪ್
    ಹೆಚ್ಚಿದ ಕ್ಯಾಪ್ಸಿಕಮ್/ ಬೆಲ್ ಪೆಪ್ಪರ್ – ಅರ್ಧ ಕಪ್
    ಹೆಚ್ಚಿದ ಹಸಿರು ಮೆಣಸಿನಕಾಯಿ – 2
    ಉಪ್ಪು – ರುಚಿಗೆ ತಕ್ಕಷ್ಟು
    ಜೀರಿಗೆ – ಅರ್ಧ ಟೀಸ್ಪೂನ್
    ಚಿಲ್ಲಿ ಫ್ಲೇಕ್ಸ್ – ಅರ್ಧ ಟೀಸ್ಪೂನ್
    ತುಪ್ಪ – 2 ಟೀಸ್ಪೂನ್ ಇದನ್ನೂ ಓದಿ: ವೈಟ್ ಸಾಸ್ ಪಾಸ್ತಾ ಹೀಗೆ ಮಾಡಿ..

    ಮಾಡುವ ವಿಧಾನ:
    * ಮೊದಲಿಗೆ ಅಕ್ಕಿಯನ್ನು ತೊಳೆದು 20 ನಿಮಿಷಗಳ ಕಾಲ ನೆನೆಸಿ, ನೀರನ್ನು ಹರಿಸಿ.
    * ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಜೀರಿಗೆ, ಹಸಿರು ಮೆಣಸಿನಕಾಯಿ ಬೆರೆಸಿ.
    * ನಂತರ ಕ್ಯಾಪ್ಸಿಕಮ್ ಸೇರಿಸಿ ಕೆಲ ಸೆಕೆಂಡುಗಳ ಕಾಲ ಫ್ರೈ ಮಾಡಿ.
    * ಅಕ್ಕಿ, ಅನಾನಸ್, ಉಪ್ಪು, ಚಿಲ್ಲಿ ಫ್ಲೇಕ್ಸ್ ಸೇರಿಸಿ ಕೆಲ ಸೆಕೆಂಡುಗಳ ಕಾಲ ಬೆರೆಸಿ.
    * ಬಳಿಕ ಸುಮಾರು 3 ಕಪ್ ನೀರು ಸೇರಿಸಿ, ಅಕ್ಕಿ ಸಂಪೂರ್ಣ ಬೇಯುವವರೆಗೆ ಮುಚ್ಚಿ, ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ.
    * ಇದೀಗ ಚಿಲ್ಲಿ ಪೈನಾಪಲ್ ರೈಸ್ ತಯಾರಾಗಿದ್ದು, ಇದನ್ನು ಮೊಸರು ಅಥವಾ ಪುದೀನ ಮೊಸರು ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಬಡಿಸಿ, ಸವಿಯಿರಿ. ಇದನ್ನೂ ಓದಿ: ಸಂಜೆ ಸ್ನಾಕ್ಸ್‌ಗೆ ಮಾಡಿ ಸುಲಭವಾದ ನಾಚೋಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಕ್ಕಳಿಗಾಗಿ ಚೋಕೋ ಚಿಪ್ ಕುಕ್ಕೀಸ್..!

    ಮಕ್ಕಳಿಗಾಗಿ ಚೋಕೋ ಚಿಪ್ ಕುಕ್ಕೀಸ್..!

    ಸಂಜೆ ಚಹಾದ ಜೊತೆ ಜೊತೆ ಕೆಲವರಿಗೆ ಬಿಸ್ಕೆಟ್ ತಿನ್ನುವ ಅಭ್ಯಾಸವಿರುತ್ತದೆ. ಅದರಲ್ಲೂ ಮಕ್ಕಳಿಗೆ ಬಿಸ್ಕೆಟ್ ಕೊಟ್ಟರೆ ತುಂಬಾ ಖುಷಿಯಿಂದ ತಿಂದು ಮುಗಿಸುತ್ತಾರೆ. ಸಾಮಾನ್ಯವಾಗಿ ಮಕ್ಕಳಿಗೆ ಸಂಜೆ ಸ್ನಾಕ್ಸ್‌ಗೆ ಕೆಲ ಅಮ್ಮಂದಿರು ಬಿಸ್ಕೆಟ್ ಕೊಡುತ್ತಾರೆ. ಇದರಿಂದ ಮಕ್ಕಳ ಹಸಿವು ತಕ್ಕಮಟ್ಟಿಗೆ ನೀಗುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಕೆಲವೇ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ಚೋಕೋ ಚಿಪ್ ಕುಕ್ಕೀಸ್ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: 30 ನಿಮಿಷಗಳಲ್ಲಿ ಮಾಡಿ ಚೀಸೀ ಗಾರ್ಲಿಕ್ ಸಿಗಡಿ

    ಬೇಕಾಗುವ ಸಾಮಗ್ರಿಗಳು:
    ಬೆಣ್ಣೆ- 100 ಗ್ರಾಂ
    ಚೋಕೋ ಚಿಪ್ಸ್ – 2 ಕಪ್
    ಬ್ರೌನ್ ಶುಗರ್ – 1 ಕಪ್
    ಸಕ್ಕರೆ – ಅರ್ಧ ಕಪ್
    ಮೈದಾ ಹಿಟ್ಟು – 2 ಕಪ್
    ಬೇಕಿಂಗ್ ಸೋಡಾ – 1 ಚಮಚ
    ವೆನಿಲ್ಲಾ ಎಸೆನ್ಸ್- 2 ಚಮಚ
    ಉಪ್ಪು – ಅರ್ಧ ಚಮಚ
    ಮೊಟ್ಟೆ – 2

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಗೆ ಬೆಣ್ಣೆ ಹಾಕಿಕೊಂಡು ಅದಕ್ಕೆ ಬ್ರೌನ್ ಶುಗರ್, ಸಕ್ಕರೆ ಹಾಕಿಕೊಂಡು ಗಂಟಿಲ್ಲದಂತೆ ಚನ್ನಾಗಿ ತಿರುವಿಕೊಳ್ಳಿ. ಬೆಣ್ಣೆ ತುಂಬಾ ಗಟ್ಟಿಯಾಗಿರಬಾರದು.
    * ಈಗ ಈ ಮಿಶ್ರಣಕ್ಕೆ ಎರಡು ಮೊಟ್ಟೆಯನ್ನು ಒಡೆದು ಹಾಕಿಕೊಳ್ಳಿ. ನಂತರ ಇದಕ್ಕೆ ವೆನಿಲ್ಲಾ ಎಸೆನ್ಸ್ ಹಾಕಿಕೊಂಡು ಮತ್ತೊಮ್ಮೆ ಚನ್ನಾಗಿ ತಿರುವಿಕೊಳ್ಳಿ.
    * ಇನ್ನೊಂದು ಬೌಲ್‌ನಲ್ಲಿ ಮೈದಾ ಹಿಟ್ಟನ್ನು ಹಾಕಿಕೊಂಡು ಅದಕ್ಕೆ ಉಪ್ಪು ಮತ್ತು ಬೇಕಿಂಗ್ ಸೋಡಾ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ನಂತರ ಮೈದಾ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಮೊಟ್ಟೆ ಮಿಶ್ರಣಕ್ಕೆ ಹಾಕಿಕೊಂಡು ಗಂಟಿಲ್ಲದಂತೆ ಮಿಕ್ಸ್ ಮಾಡಿಕೊಳ್ಳಿ.
    * ಬಳಿಕ ಈ ಮಿಶ್ರಣಕ್ಕೆ ಚೋಕೋ ಚಿಪ್ಸ್ ಹಾಕಿಕೊಂಡು ಚಿಪ್ಸ್ ಮಿಶ್ರಣಕ್ಕೆ ಹೊಂದಿಕೊಳ್ಳುವಂತೆ ತಿರುವಿಕೊಳ್ಳಿ.
    * ಈಗ ಒಂದು ಚಮಚದ ಸಹಾಯದಿಂದ ಸ್ವಲ್ಪ ಸ್ವಲ್ಪವೇ ಈ ಮಿಶ್ರಣವನ್ನು ತೆಗೆದುಕೊಂಡು ಅಂಗೈಯಲ್ಲಿ ಬಿಸ್ಕೆಟ್ ಗಾತ್ರ ಮಾಡಿಕೊಂಡು ಒಂದು ಬೇಕಿಂಗ್ ಟ್ರೇಯಲ್ಲಿ ಹಾಕಿಕೊಳ್ಳಿ. ನಂತರ ಓವನ್ 180 ಡಿಗ್ರಿ ಬಿಸಿಗಿಟ್ಟುಕೊಂಡು ಅದರಲ್ಲಿ 15 ನಿಮಿಷ ಬೇಯಿಸಿಕೊಳ್ಳಿ.
    * ಈಗ ಬಿಸಿ ಬಿಸಿ ಚೋಕೋ ಚಿಪ್ ಕುಕ್ಕೀಸ್ ತಿನ್ನಲು ರೆಡಿ. ಇದನ್ನು ಒಂದು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ಮಕ್ಕಳಿಗೆ ತಿನ್ನಲು ಕೊಡಿ. ಇದನ್ನೂ ಓದಿ: ವೈಟ್ ಸಾಸ್ ಪಾಸ್ತಾ ಹೀಗೆ ಮಾಡಿ..

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 30 ನಿಮಿಷಗಳಲ್ಲಿ ಮಾಡಿ ಚೀಸೀ ಗಾರ್ಲಿಕ್ ಸಿಗಡಿ

    30 ನಿಮಿಷಗಳಲ್ಲಿ ಮಾಡಿ ಚೀಸೀ ಗಾರ್ಲಿಕ್ ಸಿಗಡಿ

    ಬಿಡುವಿಲ್ಲದ ದಿನಗಳಿದ್ದರೂ ಅಂತ್ಯದಲ್ಲಿ ಏನಾದ್ರೂ ಸುಲಭವಾಗಿ ಹಾಗೂ ರುಚಿಕರವಾಗಿ ನಾನ್‌ವೆಜ್ ಅಡುಗೆ ಮಾಡಬೇಕಾಗಿ ಬಂದಾಗ ತಲೆ ಓಡಿಸೋ ಅಗತ್ಯ ಹೆಚ್ಚಿರುತ್ತದೆ. ನಾವಿಂದು ಹೇಳಿಕೊಡುತ್ತಿರುವ ಚೀಸೀ ಗಾರ್ಲಿಕ್ ಸಿಗಡಿ ಮಾಡೋದು ಸಿಂಪಲ್ ಹಾಗೂ 30 ನಿಮಿಷಗಳಲ್ಲಿ ಇದನ್ನು ತಯಾರಿಸಬಹುದು. ಹೆಚ್ಚು ಮಸಾಲೆ ಎನಿಸದ ಈ ರೆಸಿಪಿಯನ್ನು ಮಕ್ಕಳು ಇಷ್ಟಪಡುತ್ತಾರೆ. ಫಟಾಫಟ್ ಅಂತ ಮಾಡಬಹುದಾದ ನಾನ್‌ವೆಜ್ ಲಿಸ್ಟ್ನಲ್ಲಿ ನೀವು ಕೂಡಾ ಚೀಸೀ ಗಾರ್ಲಿಕ್ ಸಿಗಡಿ ರೆಸಿಪಿಯನ್ನು ಸೇರಿಸಿಕೊಳ್ಳಬಹುದು.

    ಬೇಕಾಗುವ ಪದಾರ್ಥಗಳು:
    ಹಾಲು – 2 ಕಪ್
    ಕ್ರೀಮ್ ಚೀಸ್ – 100 ಗ್ರಾಂ
    ಮೈದಾ ಹಿಟ್ಟು – 2 ಟೀಸ್ಪೂನ್
    ಬೆಣ್ಣೆ – 3 ಟೀಸ್ಪೂನ್
    ಕೊಚ್ಚಿದ ಬೆಳ್ಳುಳ್ಳಿ – 3 ಟೀಸ್ಪೂನ್
    ಸಿಪ್ಪೆ ಸುಲಿದು ಸ್ವಚ್ಛಗೊಳಿಸಿದ ಸಿಗಡಿ – ಅರ್ಧ ಕೆಜಿ
    ತುರಿದ ಮೊಝಿರೆಲ್ಲಾ ಚೀಸ್ – 1 ಕಪ್
    ಕರಿಮೆಣಸಿನ ಪುಡಿ – ರುಚಿಗೆ ತಕ್ಕಷ್ಟು
    ಕೊತ್ತಂಬರಿ ಸೊಪ್ಪು – ಅಲಂಕರಿಸಲು ಇದನ್ನೂ ಓದಿ: ಟ್ರೈ ಮಾಡಿ ಬಾರ್ಬೆಕ್ಯೂ ಚಿಕನ್ ಸಲಾಡ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಬ್ಲೆಂಡರ್‌ನಲ್ಲಿ ಹಾಲು, ಕ್ರೀಮ್ ಚೀಸ್, ಮೈದಾ ಹಿಟ್ಟು ಮತ್ತು ಉಪ್ಪನ್ನು ಹಾಕಿ ನಯವಾಗುವತನಕ ಬ್ಲೆಂಡ್ ಮಾಡಿ ಪಕ್ಕಕ್ಕಿಡಿ.
    * ಒಂದು ಪ್ಯಾನ್‌ನಲ್ಲಿ ಬೆಣ್ಣೆಯನ್ನು ಕರಗಿಸಿ ಬೆಳ್ಳುಳ್ಳಿ ಸೇರಿಸಿ ಸುಮಾರು 1 ನಿಮಿಷ ಹುರಿಯಿರಿ. ನಂತರ ಸಿಗಡಿಯನ್ನು ಸೇರಿಸಿ 3-5 ನಿಮಿಷ ಬೇಯಿಸಿ.
    * ಪ್ಯಾನ್‌ನಿಂದ ಸಿಗಡಿ ತೆಗೆದುಹಾಕಿ, ಬೆಳ್ಳುಳ್ಳಿ ಮತ್ತು ಬೆಣ್ಣೆ ಅದರಲ್ಲೇ ಇರಲಿ.
    * ಈಗ ಅದಕ್ಕೆ ಹಾಲಿನ ಮಿಶ್ರಣ ಸೇರಿಸಿ, ಮಧ್ಯಮ ಉರಿಯಲ್ಲಿ ಸುಮಾರು 4 ನಿಮಿಷ ಬೆರೆಸಿ. ಹಾಲು ಕುದಿ ಬಂದು ದಪ್ಪವಾಗಲು ಪ್ರಾರಂಭವಾಗುವವರೆಗೆ ಸುಮಾರು 6 ನಿಮಿಷ ಬೆರೆಸಿ.
    * ನಂತರ ಉರಿಯನ್ನು ಆಫ್ ಮಾಡಿ, ತುರಿದ ಚೀಸ್ ಅನ್ನು ಸೇರಿಸಿ.
    * ಮುಚ್ಚಳ ಮುಚ್ಚಿ, 5 ನಿಮಿಷ ಹಾಗೆಯೇ ಬಿಡಿ.
    * ಈಗ ಸಾಸ್‌ಗೆ ಸಿಗಡಿ ಸೇರಿಸಿ, ಮತ್ತೆ 5 ನಿಮಿಷ ಹಾಗೆಯೇ ಬಿಡಿ.
    * ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚೀಸೀ ಗಾರ್ಲಿಕ್ ಸಿಗಡಿ ಸಿದ್ಧವಾಗುತ್ತದೆ. ಇದನ್ನು ನಿಮ್ಮಿಷ್ಟದ ನೂಡಲ್ಸ್ನೊಂದಿಗೆ ಬಡಿಸಬಹುದು. ಇದನ್ನೂ ಓದಿ: ಮಶ್ರೂಮ್ ರಾಮೆನ್ – ಇನ್ಸ್ಟೆಂಟೆ ನೂಡಲ್ಸ್ ರೆಸಿಪಿ

    
    

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೈಟ್ ಸಾಸ್ ಪಾಸ್ತಾ ಹೀಗೆ ಮಾಡಿ..

    ವೈಟ್ ಸಾಸ್ ಪಾಸ್ತಾ ಹೀಗೆ ಮಾಡಿ..

    ಪಾಸ್ತಾ ಸಾಮಾನ್ಯವಾಗಿ ಎಲ್ಲರೂ ತಿನ್ನುತ್ತಾರೆ. ಅದರಲ್ಲೂ ಮಕ್ಕಳಿಗೆ ಈ ರೀತಿಯ ತಿಂಡಿಗಳು ಅಥವಾ ಸ್ನಾಕ್ಸ್‌ಗಳು ಬಹುಬೇಗ ಇಷ್ಟವಾಗುತ್ತದೆ. ಪಾಸ್ತಾದಲ್ಲಿ ಅನೇಕ ಬಗೆಯ ಪಾಸ್ತಾಗಳಿವೆ. ಒಬ್ಬೊಬ್ಬರಿಗೆ ಒಂದೊಂದು ಬಗೆಯ ಪಾಸ್ತಾ ಇಷ್ಟವಾಗುತ್ತದೆ. ಇದನ್ನು ಬಹಳ ಸುಲಭವಾಗಿ ಮನೆಯಲ್ಲಿಯೇ ಮಾಡಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ವೈಟ್ ಸಾಸ್ ಪಾಸ್ತಾ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ:‌ ಸಂಜೆ ಸ್ನಾಕ್ಸ್‌ಗೆ ಮಾಡಿ ಸುಲಭವಾದ ನಾಚೋಸ್

    ಬೇಕಾಗುವ ಸಾಮಗ್ರಿಗಳು:
    ನೀರು- ಅಗತ್ಯಕ್ಕೆ ತಕ್ಕಷ್ಟು
    ಉಪ್ಪು- ಅಗತ್ಯಕ್ಕೆ ತಕ್ಕಷ್ಟು
    ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
    ಪೆನ್ನೆ ಪಾಸ್ತಾ- 2 ಕಪ್
    ಹೆಚ್ಚಿದ ಬೆಳ್ಳುಳ್ಳಿ – ಸ್ವಲ್ಪ
    ಹೆಚ್ಚಿದ ಈರುಳ್ಳಿ – 1
    ಹೆಚ್ಚಿದ ಕ್ಯಾಪ್ಸಿಕಮ್ – 1
    ಹೆಚ್ಚಿದ ಬೀನ್ಸ್ – 10
    ಹೆಚ್ಚಿದ ಕ್ಯಾರೆಟ್ – 1
    ಸ್ವೀಟ್ ಕಾರ್ನ್ – ಅರ್ಧ ಕಪ್
    ಬೆಣ್ಣೆ- 2 ಚಮಚ
    ಮೈದಾ ಹಿಟ್ಟು – 2 ಚಮಚ
    ಹಾಲು – ಅರ್ಧ ಲೀಟರ್
    ರೆಡ್‌ಚಿಲ್ಲಿ ಫ್ಲೇಕ್ಸ್ – 1 ಚಮಚ
    ಒರೆಗಾನೋ – 1 ಚಮಚ
    ಪೆಪ್ಪರ್ ಪೌಡರ್ – ಅರ್ಧ ಚಮಚ
    ಚೀಸ್ – 2 ಸ್ಲೈಸ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ 2 ಕಪ್ ನೀರನ್ನು ಬಿಸಿಗಿಟ್ಟು ಅದಕ್ಕೆ 1 ಚಮಚ ಉಪ್ಪು ಮತ್ತು 1 ಚಮಚ ಎಣ್ಣೆಯನ್ನು ಸೇರಿಸಿಕೊಳ್ಳಿ.
    * ನೀರು ಕುದಿದ ಮೇಲೆ ಅದಕ್ಕೆ 2 ಕಪ್ ಪಾಸ್ತಾ ಹಾಕಿಕೊಂಡು ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ.
    * ಪಾಸ್ತಾ ಚನ್ನಾಗಿ ಬೆಂದ ಬಳಿಕ ನೀರನ್ನು ಸೋಸಿಕೊಳ್ಳಿ. ಬಳಿಕ ಅದಕ್ಕೆ ತಣ್ಣೀರು ಹಾಕಿಕೊಂಡು ಇನ್ನೊಂದು ಬಾರಿ ಸೋಸಿ.
    * ಈಗ ಪಾಸ್ತಾದ ಮೇಲೆ 1 ಚಮಚ ಎಣ್ಣೆ ಹಾಕಿ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ನಂತರ ಸ್ಟವ್ ಮೇಲೆ ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ, ಹೆಚ್ಚಿದ ಬೆಳ್ಳುಳ್ಳಿ ಹಾಕಿ ಬೆಳ್ಳುಳ್ಳಿ ಹಸಿವಾಸನೆ ಹೋಗುವವರೆಗೆ ಹುರಿಯಿರಿ.
    * ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ, ಹೆಚ್ಚಿದ ಕ್ಯಾಪ್ಸಿಕಮ್, ಬೀನ್ಸ್, ಕ್ಯಾರೆಟ್, ಸ್ವೀಟ್ ಕಾರ್ನ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚನ್ನಾಗಿ ಹುರಿಯಿರಿ. ತರಕಾರಿ ಅರ್ಧ ಬೆಂದ ಬಳಿಕ ಅದನ್ನು ತೆಗೆದು ಪಕ್ಕಕ್ಕೆ ಇಡಿ.
    * ನಂತರ ಒಂದು ಪ್ಯಾನ್ ಬಿಸಿಗಿಟ್ಟು 2 ಚಮಚ ಬೆಣ್ಣೆ, 2 ಚಮಚ ಮೈದಾ ಹಿಟ್ಟು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಬಳಿಕ ಇದಕ್ಕೆ ಒಂದು ಕಪ್ ಹಾಲನ್ನು ಹಾಕಿಕೊಂಡು ಕುದಿಸಿಕೊಳ್ಳಿ. ಮಿಶ್ರಣ ದಪ್ಪವಾದ ಬಳಿಕ ಮತ್ತೆ 1 ಕಪ್ ಹಾಲನ್ನು ಸೇರಿಸಿಕೊಂಡು ಮತ್ತೆ ತಿರುವಿಕೊಳ್ಳಿ. ಹೀಗೆ ಸ್ವಲ್ಪಸ್ವಲ್ಪವೇ ಹಾಲನ್ನು ಸೇರಿಸುತ್ತಾ ಪೂರ್ತಿ ಹಾಲನ್ನು ಹಾಕಿಕೊಳ್ಳಿ. ನಂತರ ಚನ್ನಾಗಿ ಕುದಿಸಿಕೊಳ್ಳಿ.
    * ಹಾಲು ದಪ್ಪವಾದ ಬಳಿಕ ಅದಕ್ಕೆ ರೆಡ್ ಚಿಲ್ಲಿ ಫ್ಲೇಕ್ಸ್, ಒರೆಗಾನೋ, ಪೆಪ್ಪರ್ ಪೌಡರ್, ಸ್ವಲ್ಪ ಉಪ್ಪು ಹಾಕಿಕೊಂಡು ಚನ್ನಾಗಿ ತಿರುವಿಕೊಳ್ಳಿ.
    * ನಂತರ ಈ ಮಿಶ್ರಣಕ್ಕೆ ಬೇಯಿಸಿದ ಪಾಸ್ತಾವನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಬೇಯಿಸಿದ ತರಕಾರಿಗಳನ್ನೂ ಹಾಕಿಕೊಂಡು ಮತ್ತೊಮ್ಮೆ ತಿರುವಿಕೊಳ್ಳಿ.
    * ಈಗ ಇದರ ಮೇಲೆ ಚೀಸ್ ಹಾಕಿಕೊಂಡು 5 ನಿಮಿಷ ಬೇಯಲು ಬಿಡಿ. ನಂತರ ಇನ್ನೊಂದು ಬಾರಿ ಮಿಶ್ರಣವನ್ನು ತಿರುವಿಕೊಂಡು ಸರ್ವಿಂಗ್ ಪ್ಲೇಟ್‌ಗೆ ಹಾಕಿ ಬಿಸಿಬಿಸಿ ತಿನ್ನಲು ಕೊಡಿ. ಇದನ್ನೂ ಓದಿ: 30 ನಿಮಿಷ ಸಾಕು – ಫ್ರೆಂಚ್ ಬ್ರೆಡ್ ಪಿಜ್ಜಾ ಸುಲಭವಾಗಿ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಣೇಶನಿಗಾಗಿ ಸಿಹಿ ಕಡುಬು ಮಾಡುವ ವಿಧಾನ

    ಗಣೇಶನಿಗಾಗಿ ಸಿಹಿ ಕಡುಬು ಮಾಡುವ ವಿಧಾನ

    ಇಡೀ ಭಾರತ ದೇಶವೇ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ ಅಂದರೆ ಗಣೇಶ ಚತುರ್ಥಿ. ಹಬ್ಬಗಳು ಬಂದರೆ ಸಾಕು ಸಿಹಿ ತಿನಿಸುಗಳನ್ನು ಮಾಡಬೇಕು. ಅದರಲ್ಲೂ ಗಣೇಶ ಹಬ್ಬವೆಂದರೆ ಮುಂಚಿತವಾಗಿ ಗಣಪನಿಗೆ ಇಷ್ಟವಾಗುವ ತಿಂಡಿ-ತಿನಿಸುಗಳನ್ನು ಮಾಡಿ ಸಿದ್ಧ ಮಾಡಿಕೊಳ್ಳಬೇಕು. ಗಣೇಶನಿಗೆ ವಿಶೇಷವಾಗಿ ಸಿಹಿ ಕಡುಬು ಎಂದರೆ ಇಷ್ಟವಾಗುತ್ತದೆ. ಆದ್ದರಿಂದ ಗಣಪನಿಗೆ ಸಿಹಿ ಕಡುಬು ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಅಕ್ಕಿ ಹಿಟ್ಟು – ಅರ್ಧ ಕೆಜಿ
    2. ಬೆಲ್ಲ – 1 ಅಚ್ಚು
    3. ಹುರಿಗಡಲೆ – 1/4 ಕೆಜಿ
    4. ಕೊಬ್ಬರಿ ತುರಿ – 1 ಬಟ್ಟಲು
    5. ಏಲಕ್ಕಿ – 2-3
    6. ತುಪ್ಪ – 2 ಚಮಚ
    7. ಬಾಳೆ ಎಲೆ ಇದನ್ನೂ ಓದಿ: ಕೃಷ್ಣನಿಗಾಗಿ ಸಿಹಿ ಕರ್ಜಿಕಾಯಿ ಮಾಡುವ ವಿಧಾನ

    ಮಾಡುವ ವಿಧಾನ
    * ಬೆಲ್ಲವನ್ನು ತುರಿದುಕೊಳ್ಳಿ. ಹಾಗೆಯೇ ಹುರಿಗಡಲೆಯನ್ನು ಸ್ವಲ್ಪ ಹುರಿದು ಪುಡಿ ಮಾಡಿಕೊಳ್ಳಿ.
    * ಈಗ ಒಂದು ಮಿಕ್ಸಿಂಗ್ ಬೌಲ್‍ಗೆ ಪುಡಿ ಮಾಡಿದ ಹುರಿಗಡಲೆ, ತುರಿದ ಬೆಲ್ಲ, ಕೊಬ್ಬರಿ ತುರಿ, ಏಲಕ್ಕಿ ಪುಡಿ ಸೇರಿಸಿ ಊರ್ಣ ತಯಾರಿಸಿಕೊಳ್ಳಿ. (ಸಿಹಿ ಜಾಸ್ತಿ ಬೇಕಾದ್ರೆ ಬೆಲ್ಲ ಸೇರಿಸಿ, ಬೇಕಿದ್ದರೆ ಗೋಡಂಬಿ, ದ್ರಾಕ್ಷಿ. ಬಾದಾಮಿಯನ್ನು ಸಣ್ಣಗೆ ಕಟ್ ಮಾಡಿ ಸೇರಿಸಬಹುದು. ಗಸಗಸೆ ಕೂಡ ಸೇರಿಸಬಹುದು)
    * ಒಂದು ಅಗಲವಾದ ತಳಹತ್ತದ ಅಥವಾ ನಾನ್ ಸ್ಟಿಕ್ ಪಾತ್ರೆಗೆ ಒಂದು ಲೋಟ ನೀರು ಹಾಕಿ ಕುದಿಸಿ.
    * ನೀರು ಕುದಿಯುತ್ತಿರುವಾಗ ನಿಧಾನವಾಗಿ ಅಕ್ಕಿ ಹಿಟ್ಟು ಸೇರಿಸಿ ಮಿಕ್ಸ್ ಮಾಡಿ ಹಿಟ್ಟು ಗಂಟು ಕಟ್ಟದಂತೆ ನೋಡಿಕೊಳ್ಳಿ.
    * ಕೈ ಬಿಡದೇ ಹಿಟ್ಟಿನ ಕೋಲನ್ನು ಬಳಸಿ ತಿರುಗಿಸುತ್ತೀರಿ. ಈಗ 2 ಚಮಚ ತುಪ್ಪ ಸೇರಿಸಿ.
    * ಹಿಟ್ಟು ತೀರ ತೆಳ್ಳಗೂ ಅಲ್ಲದೆ, ತೀರ ಗಟ್ಟಿಯಾಗಿಯೂ ಇರಬಾರದು.

    * ಈಗ ಲಾಡು ಸೈಜ್‍ನ ಅಕ್ಕಿ ಹಿಟ್ಟಿನ ಮುದ್ದೆ ತೆಗೆದುಕೊಂಡು ಕೈಯಲ್ಲೇ ಅಗಲ ಮಾಡಿ ಒಳಗೆ ಊರ್ಣ ಇಟ್ಟು ಕಡುಬು ಶೇಪ್‍ನಲ್ಲಿ ಮಡಿಚಿ.
    * ಹಿಟ್ಟು ಬಿಸಿ ಇರುವಾಗಲೇ ಮಾಡಬೇಕು, ಆಮೇಲೆ ಮಾಡಿದರೆ ಹಿಟ್ಟು ಒಡೆಯುತ್ತದೆ. ಬಿಸಿ ಆರಿದ್ರೆ ಬೇಕಾದಲ್ಲಿ ಮತ್ತೆ ಒಲೆಯ ಮೇಲಿಟ್ಟು ಬಿಸಿ ಮಾಡಿಕೊಳ್ಳಬಹುದು.
    * ಹೀಗೆ ಮಾಡಿಟ್ಟುಕೊಂಡ ಕಡುಬುಗಳನ್ನು ಬಾಳೆಎಲೆಯಲ್ಲಿ ಅಥವಾ ಅರಿಶಿನ ಎಲೆಯ ಒಳಗಿಟ್ಟು ಇಡ್ಲಿ ಕುಕ್ಕರ್ ನಲ್ಲಿಟ್ಟು 10-12 ನಿಮಿಷ ಬೇಯಿಸಿ.
    * ಬಿಸಿಬಿಸಿ ಇರುವಾಗಲೇ ಸರ್ವ್ ಮಾಡಿ. ಕಾಯಿ ಹಾಲು, ತುಪ್ಪ ಸೇರಿಸಿ ತಿಂದರೆ ಟೇಸ್ಟೇ ಬೇರೆಯಾಗಿರುತ್ತದೆ. ಇದನ್ನೂ ಓದಿ: ಒಂದು ಬೈಟ್ ಸಾಕಾಗಲ್ಲ – ಮತ್ತೆ ಮತ್ತೆ ಬೇಕೆನಿಸೋ ಕ್ಯಾರಮೆಲ್ ಮಿಠಾಯಿ ರೆಸಿಪಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟ್ರೈ ಮಾಡಿ ಬಾರ್ಬೆಕ್ಯೂ ಚಿಕನ್ ಸಲಾಡ್

    ಟ್ರೈ ಮಾಡಿ ಬಾರ್ಬೆಕ್ಯೂ ಚಿಕನ್ ಸಲಾಡ್

    ಚಿಕನ್ ಬಾರ್ಬೆಕ್ಯೂ ಎಂದರೆ ನಾನ್‌ವೆಜ್ ಪ್ರಿಯರ ಬಾಯಲ್ಲಿ ನೀರು ಬರದೇ ಇರಲಾರದು. ರೆಸ್ಟೊರೆಂಟ್ ಇಲ್ಲವೇ ಸ್ಟ್ರೀಟ್ ಫೂಡ್ ಆಗಿ ಇದು ಹೆಚ್ಚು ಫೇಮಸ್ ಇದ್ದರೂ ಕಡಿಮೆ ವೆಚ್ಚದಲ್ಲಿ ಮನೆಯಲ್ಲಿಯೂ ಮಾಡಬಹುದು. ಹಾಲಿಡೇ ಟೈಮ್‌ನಲ್ಲಿ ಟ್ರೈ ಮಾಡೋಕೆ ಪರ್ಫೆಕ್ಟ್ ರೆಸಿಪಿ ಕೂಡಾ ಹೌದು. ನಾವಿಂದು ಬಾರ್ಬೆಕ್ಯೂ ಚಿಕನ್ ಸಲಾಡ್ ಮಾಡೋದು ಹೇಗೆಂದು ಹೇಳಿಕೊಡಲಿದ್ದೇವೆ. ಇದನ್ನೂ ಒಮ್ಮೆ ಟ್ರೈ ಮಾಡಿ, ಬಾರ್ಬೆಕ್ಯೂ ವಿವಿಧ ರೀತಿಯಲ್ಲಿ ಸವಿದು ನೋಡಿ.

    ಬೇಕಾಗುವ ಪದಾರ್ಥಗಳು:
    ಆಲಿವ್ ಎಣ್ಣೆ – 1 ಟೀಸ್ಪೂನ್
    ಮೂಳೆಗಳಿಲ್ಲದ, ಚರ್ಮರಹಿತ ತೆಳ್ಳಗೆ ಕತ್ತರಿಸಿದ ಚಿಕನ್ ಬ್ರೆಸ್ಟ್ – 2
    ಕರಿಮೆಣಸಿನ ಪುಡಿ – ಸ್ವಾದಕ್ಕನುಸಾರ
    ಉಪ್ಪು – ರುಚಿಗೆ ತಕ್ಕಷ್ಟು
    ಬೇಯಿಸಿದ ಕಾರ್ನ್ ಕರ್ನಲ್ಸ್ – ಮುಕ್ಕಾಲು ಕಪ್
    ಬೇಯಿಸಿದ ಕಪ್ಪು ಬೀನ್ಸ್ ಕಾಳು – ಮುಕ್ಕಾಲು ಕಪ್
    ಹೆಚ್ಚಿದ ಈರುಳ್ಳಿ – ಕಾಲು ಕಪ್
    ಹೆಚ್ಚಿದ ಟೊಮೆಟೋ – ಕಾಲು ಕಪ್
    ತುರಿದ ಚೀಸ್ – ಅರ್ಧ ಕಪ್
    ಮೆಯಾನೀಸ್ – ಕಾಲು ಕಪ್
    ಬಾರ್ಬೆಕ್ಯೂ ಸಾಸ್ – ಕಾಲು ಕಪ್ ಇದನ್ನೂ ಓದಿ: ನಾಲ್ಕೇ ಪದಾರ್ಥ ಬಳಸಿ ಮಾಡಿ ಫ್ರೆಂಚ್ ಆನಿಯನ್ ಪೋರ್ಕ್ ಚಾಪ್ಸ್

    ಮಾಡುವ ವಿಧಾನ:
    * ಮೊದಲಿಗೆ ಚಿಕನ್ ಬ್ರೆಸ್ಟ್‌ಗೆ ಉಪ್ಪು ಹಾಗೂ ಕರಿಮೆಣಸಿನ ಪುಡಿ ಹಾಕಿ ಸುತ್ತಲೂ ಚೆನ್ನಾಗಿ ಸವರಿ.
    * ಬಾಣಲೆಯನ್ನು ಮಧ್ಯಮ ಉರಿಯಲ್ಲಿ ಬಿಸಿಗಿಟ್ಟು, ಎಣ್ಣೆ ಹಾಕಿ. ಅದರಲ್ಲಿ ಚಿಕನ್ ಅನ್ನು ಹಾಕಿ ಬೇಯಿಸಿಕೊಳ್ಳಿ.
    * ಪ್ರತಿ ಬದಿಯಲ್ಲೂ ಸುಮಾರು 3-4 ನಿಮಿಷ ಬೇಯಿಸಿಕೊಳ್ಳಿ.
    * ಬಳಿಕ ಉರಿಯನ್ನು ಆಫ್ ಮಾಡಿ, ತಣ್ಣಗಾಗಿಸಿ, ಬಳಿಕ ಅದನ್ನು ಬೈಟ್ಸ್ ಗಾತ್ರದ ತುಂಡುಗಳಾಗಿ ಕತ್ತರಿಸಿಕೊಳ್ಳಿ.
    * ಈಗ ದೊಡ್ಡ ಬಟ್ಟಲಿನಲ್ಲಿ ಚಿಕನ್, ಕಾರ್ನ್, ಕಪ್ಪು ಬೀನ್ಸ್, ಈರುಳ್ಳಿ, ಟೊಮೆಟೋಗಳನ್ನು ಇರಿಸಿ.
    * ಅದರ ಮೇಲೆ ಚೀಸ್, ಮೆಯಾನೀಸ್, ಬಾರ್ಬೆಕ್ಯೂ ಸಾಸ್ ಸುರಿದು, ಎಲ್ಲವೂ ಚೆನ್ನಾಗಿ ಸಂಯೋಜಿಸುವಂತೆ ನಿಧಾನವಾಗಿ ಟಾಸ್ ಮಾಡಿ.
    * ಇದೀಗ ಬಾರ್ಬೆಕ್ಯೂ ಚಿಕನ್ ಸಲಾಡ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನು ಟೋರ್ಟಿಲ್ಲಾ ಸ್ಟ್ರಿಪ್‌ನೊಂದಿಗೂ ಸವಿಯಬಹುದು. ಇದನ್ನೂ ಓದಿ: ಹಸಿವನ್ನು ತಣಿಸಲು ಒನ್ ಪಾಟ್ ಗಾರ್ಲಿಕ್ ಚಿಕನ್ ಪಾಸ್ತಾ ಟ್ರೈ ಮಾಡಿ

    
    

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಜೆ ಸ್ನಾಕ್ಸ್‌ಗೆ ಮಾಡಿ ಸುಲಭವಾದ ನಾಚೋಸ್

    ಸಂಜೆ ಸ್ನಾಕ್ಸ್‌ಗೆ ಮಾಡಿ ಸುಲಭವಾದ ನಾಚೋಸ್

    ಕ್ಕಳಿಗೆ ಚಿಪ್ಸ್ ರೀತಿಯ ಕುರುಕುಲು ತಿಂಡಿ ಎಂದರೆ ಬೇಗ ಇಷ್ಟವಾಗುತ್ತದೆ. ಆದರೆ ಅದನ್ನು ಮನೆಯಲ್ಲಿಯೇ ಮಾಡುವುದರಿಂದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹಣವನ್ನೂ ಉಳಿಸಬಹುದು. ಹೊರಗಡೆ ಅಂಗಡಿಗಳಲ್ಲಿ ಅಥವಾ ಮಾಲ್‌ಗಳಲ್ಲಿ ನಾಚೋಸ್ ತುಂಬಾ ದುಬಾರಿ. ಆದ್ದರಿಂದ ಇದನ್ನು ಮನೆಯಲ್ಲಿಯೇ ತಯಾರಿಸುವ ಸುಲಭ ವಿಧಾನವನ್ನು ಇವತ್ತಿನ ನಮ್ಮ ರೆಸಿಪಿಯಲ್ಲಿ ತಿಳಿಸಿಕೊಡುತ್ತೇವೆ. ಹಾಗಿದ್ರೆ ಮನೆಯಲ್ಲಿಯೇ ನಾಚೋಸ್ ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಮೃದುವಾದ ಸಿಹಿ ಕುಂಬಳಕಾಯಿ, ಓಟ್ಸ್ ಕುಕೀಸ್

    ಬೇಕಾಗುವ ಸಾಮಗ್ರಿಗಳು:
    ನೀರು-ಕಾಲು ಕಪ್
    ಉಪ್ಪು- ಕಾಲು ಚಮಚ
    ಅಕ್ಕಿ ಹಿಟ್ಟು – 1ಕಪ್
    ಅಚ್ಚಖಾರದ ಪುಡಿ – 1ಚಮಚ
    ಜೋಳದ ಹಿಟ್ಟು – ಅರ್ಧ ಕಪ್
    ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

    ಮಾಡುವ ವಿಧಾನ:
    *ಮೊದಲಿಗೆ ಒಂದು ಪ್ಯಾನ್ ಬಿಸಿಗಿಟ್ಟು ಕಾಲು ಕಪ್ ನೀರನ್ನು ಹಾಕಿಕೊಂಡು ಅದಕ್ಕೆ ಕಾಲು ಚಮಚ ಉಪ್ಪನ್ನು ಸೇರಿಸಿಕೊಳ್ಳಿ.
    * ನೀರು ಬಿಸಿಯಾದ ಬಳಿಕ ಅದಕ್ಕೆ 1 ಕಪ್ ಅಕ್ಕಿ ಹಿಟ್ಟನ್ನು ಸೇರಿಸಿಕೊಂಡು ಗಂಟಾಗದಂತೆ ಚನ್ನಾಗಿ ತಿರುವಿಕೊಂಡು 2 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    *ಈಗ ಈ ಮಿಶ್ರಣವನ್ನು ಒಂದು ಬೌಲ್‌ಗೆ ಹಾಕಿಕೊಂಡು ಅದಕ್ಕೆ 1 ಚಮಚ ಖಾರದ ಪುಡಿಯನ್ನು ಹಾಕಿಕೊಳ್ಳಿ. ಬಳಿಕ ಇದಕ್ಕೆ ಅರ್ಧ ಕಪ್ ಜೋಳದ ಹಿಟ್ಟನ್ನು ಹಾಕಿಕೊಂಡು ಚಪಾತಿ ಹಿಟ್ಟಿನ ರೀತಿಯಲ್ಲಿ ಕಲಸಿಕೊಳ್ಳಿ.
    *ಬಳಿಕ ಈ ಮಿಶ್ರಣದ ಮೇಲೆ 1 ಚಮಚ ಎಣ್ಣೆ ಹಾಕಿಕೊಂಡು ಚನ್ನಾಗಿ ನಾದಿಕೊಳ್ಳಿ. ಬಳಿಕ ಹಿಟ್ಟನ್ನು ಚೆಂಡಿನ ಗಾತ್ರದಲ್ಲಿ ಉಂಡೆ ಮಾಡಿಕೊಂಡು ತೆಳ್ಳಗೆ ಲಟ್ಟಿಸಿಕೊಳ್ಳಿ.
    * ಬಳಿಕ ಇದರ ಮೇಲೆ ಫೋರ್ಕ್ ಚಮಚದ ಸಹಾಯದಿಂದ ಅಲ್ಲಲ್ಲಿ ಚುಚ್ಚಿಕೊಳ್ಳಿ. ಬಳಿಕ ಇದನ್ನು ತ್ರಿಕೋನ ಆಕಾರದಲ್ಲಿ ಕತ್ತರಿಸಿಕೊಂಡು ಎಣ್ಣೆಯಲ್ಲಿ 3 ನಿಮಿಷಗಳವರೆಗೆ ಕರಿಯಿರಿ.
    * ನಾಚೋಸ್ ಗೋಲ್ಡನ್ ಬಣ್ಣ ಬಂದ ಬಳಿಕ ಅದನ್ನು ಎಣ್ಣೆಯಿಂದ ತೆಗೆದು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ಸಾಲ್ಸಾ ಅಥವಾ ಮಯೋನೀಸ್ ಜೊತೆ ಸವಿಯಲು ಕೊಡಿ. ಇದನ್ನೂ ಓದಿ: ಬೇಕರಿ ಸ್ಟೈಲ್ ಎಗ್‍ಲೆಸ್ ಹನಿ ಕೇಕ್ ಮನೆಯಲ್ಲೇ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 30 ನಿಮಿಷ ಸಾಕು – ಫ್ರೆಂಚ್ ಬ್ರೆಡ್ ಪಿಜ್ಜಾ ಸುಲಭವಾಗಿ ಮಾಡಿ

    30 ನಿಮಿಷ ಸಾಕು – ಫ್ರೆಂಚ್ ಬ್ರೆಡ್ ಪಿಜ್ಜಾ ಸುಲಭವಾಗಿ ಮಾಡಿ

    ವೆಜ್ ಫ್ರೆಂಚ್ ಬ್ರೆಡ್ ಪಿಜ್ಜಾ ಕೇವಲ 30 ನಿಮಿಷಗಳಲ್ಲಿ ಸುಲಭವಾಗಿ ಮಾಡಬಹುದಾದ ರೆಸಿಪಿಯಾಗಿದೆ. ಇದಕ್ಕೆ ಪೆಸ್ಟೊ ಸಾಸ್, ಬ್ರೋಕಲಿ, ಟೊಮೆಟೋ ಅಥವಾ ಯಾವುದೇ ತರಕಾರಿಗಳು ಇದ್ದರೆ ಸಾಕಾಗುತ್ತದೆ. ಪಿಜ್ಜಾ ಕ್ರಸ್ಟ್ ಮಾಡೋದು ನಿಮಗೆ ಕಷ್ಟ ಎನಿಸಿದಾಗ ಕೆಲ ಬ್ರೆಡ್ ಸ್ಲೈಸ್‌ಗಳನ್ನು ಅಥವಾ ಫ್ರೆಂಚ್ ಬ್ರೆಡ್ ಬಳಸಿ ಸುಲಭವಾಗಿ ಇದನ್ನು ಮಾಡಬಹುದು. ಫ್ರೆಂಚ್ ಬ್ರೆಡ್ ಪಿಜ್ಜಾ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಫ್ರೆಂಚ್ ಬ್ರೆಡ್ – 1
    ಪೆಸ್ಟೊ ಸಾಸ್ – 1 ಕಪ್
    ತುರಿದ ಚೀಸ್ – 1 ಕಪ್
    ಟೊಮೆಟೋ – 2
    ಬೇಯಿಸಿದ ಬ್ರೋಕಲಿ – 1 ಕಪ್ ಇದನ್ನೂ ಓದಿ:  ಮಶ್ರೂಮ್ ರಾಮೆನ್ – ಇನ್ಸ್ಟೆಂಟೆ ನೂಡಲ್ಸ್ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಓವನ್ ಅನ್ನು 210 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಬಿಸಿ ಮಾಡಿ.
    * ಫ್ರೆಂಚ್ ಬ್ರೆಡ್ ಅನ್ನು ಅರ್ಧದಷ್ಟು ಉದ್ದವಾಗಿ ಹಾಗೂ ಬದಿಗಳನ್ನು ಚಾಕುವಿನಿಂದ ಕತ್ತರಿಸಿ, ಬೇಕಿಂಗ್ ಶೀಟ್‌ನಲ್ಲಿ ಇರಿಸಿ.
    * ಸ್ಲೈಸ್‌ಗಳಿಗೆ ಪೆಸ್ಟೊ ಸಾಸ್ ಹರಡಿ, ಅದರ ಮೇಲೆ ತುರಿದ ಚೀಸ್, ಕತ್ತರಿಸಿದ ಟೊಮೆಟೋ ಹಾಗೂ ಬ್ರೋಕಲಿ ಚೂರುಗಳನ್ನು ಇರಿಸಿ.
    * ಅದನ್ನು ಓವನ್‌ನಲ್ಲಿ ಇರಿಸಿ, ಗರಿಗರಿಯಾಗುವವರೆಗೆ ಹಾಗೂ ಚೀಸ್ ಕರಗುವವರೆಗೆ ಸುಮಾರು 10-15 ನಿಮಿಷ ಬೇಯಿಸಿಕೊಳ್ಳಿ.
    * ನಂತರ ಪಿಜ್ಜಾವನ್ನು ಓವನ್‌ನಿಂದ ತೆಗೆದು, ಸ್ಲೈಸ್‌ಗಳಾಗಿ ಕತ್ತರಿಸಿ.
    * ಇದೀಗ ಫ್ರೆಂಚ್ ಬ್ರೆಡ್ ಪಿಜ್ಜಾ ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಚಿಪ್ಸ್‌, ನಾಚೋಸ್‌ಗೆ ಪರ್ಫೆಕ್ಟ್‌ ಈ ಟೊಮೆಟೋ ಸಾಲ್ಸಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಂದು ಬೈಟ್ ಸಾಕಾಗಲ್ಲ – ಮತ್ತೆ ಮತ್ತೆ ಬೇಕೆನಿಸೋ ಕ್ಯಾರಮೆಲ್ ಮಿಠಾಯಿ ರೆಸಿಪಿ

    ಒಂದು ಬೈಟ್ ಸಾಕಾಗಲ್ಲ – ಮತ್ತೆ ಮತ್ತೆ ಬೇಕೆನಿಸೋ ಕ್ಯಾರಮೆಲ್ ಮಿಠಾಯಿ ರೆಸಿಪಿ

    ಬಾಯಲ್ಲಿ ಕರಗೋ ಕ್ಯಾರಮೆಲ್ ಮಿಠಾಯಿ ಮನೆಯಲ್ಲಿ ಮಕ್ಕಳಿರೋವಾಗಿ ಟೈ ಮಾಡೋಕೆ ಒಂದು ಪರ್ಫೆಕ್ಟ್ ರೆಸಿಪಿ. ನೆಂಟರಿಷ್ಟರು ಮನೆಯಲ್ಲಿದ್ದಾಗಲೂ ನೀವಿದನ್ನು ಮಾಡಿ, ಅವರ ಪ್ರಶಂಸೆಯನ್ನು ಖಂಡಿತಾ ಪಡೆದುಕೊಳ್ಳುತ್ತೀರಿ. ಇದರ ಒಂದು ಬೈಟ್ ನೀವು ಸವಿದರೆ ಅದು ಸಾಲೋದಿಲ್ಲ ಖಂಡಿತಾ. ಇಂತಹ ಒಂದು ಸಿಹಿ ಮಿಠಾಯಿಯನ್ನು ನೀವು ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಬೆಣ್ಣೆ – 125 ಗ್ರಾಂ
    ಸಿಹಿ ಕಂಡೆನ್ಸ್ಡ್ ಮಿಲ್ಕ್ – 400 ಗ್ರಾಂ
    ಗೋಲ್ಡನ್ ಸಿರಪ್ – 2 ಟೀಸ್ಪೂನ್
    ಕಂದು ಸಕ್ಕರೆ – 1 ಕಪ್
    ವೈಟ್ ಚಾಕ್ಲೇಟ್ – ಮುಕ್ಕಾಲು ಕಪ್ ಇದನ್ನೂ ಓದಿ: ಮೃದುವಾದ ಸಿಹಿ ಕುಂಬಳಕಾಯಿ, ಓಟ್ಸ್ ಕುಕೀಸ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ಕಡಿಮೆ ಉರಿಯಲ್ಲಿ ಬೆಣ್ಣೆಯನ್ನು ಕರಗಿಸಿ.
    * ಕಂಡೆನ್ಸ್ಡ್‌ ಮಿಲ್ಕ್, ಗೋಲ್ಡನ್ ಸಿರಪ್ ಹಾಗೂ ಕಂದು ಸಕ್ಕರೆಯನ್ನು ಸೇರಿಸಿ, ಕುದಿಯುವ ತನಕ ಕಡಿಮೆ ಉರಿಯಲ್ಲಿ ಬೆರೆಸಿ.
    * 10 ನಿಮಿಷಗಳ ಕಾಲ ಕುದಿಸುತ್ತಾ ಆಗಾಗ ಕೈಯಾಡಿಸುತ್ತಿರಿ.
    * ನಂತರ ಉರಿಯನ್ನು ಆಫ್ ಮಾಡಿ, ವೈಟ್ ಚಾಕ್ಲೇಟ್ ಅನ್ನು ಬೆರೆಸಿಕೊಳ್ಳಿ.
    * ಈಗ ಒಂದು ಟ್ರೇಯಲ್ಲಿ ಬಟರ್ ಪೇಪರ್ ಅನ್ನು ಜೋಡಿಸಿ, ಅದರ ಮೇಲೆ ತಯಾರಾದ ಮಿಶ್ರಣವನ್ನು ಹಾಕಿ, ಮೇಲ್ಮೈ ಅನ್ನು ಸಮಗೊಳಿಸಿ.
    * ಮಿಶ್ರಣವನ್ನು ತಣ್ಣಗಾಗಲು ಬಿಟ್ಟ ಬಳಿಕ ಗಟ್ಟಿಯಾಗಲು ಫ್ರಿಜ್‌ನಲ್ಲಿಡಿ.
    * ನಂತರ ಅದನ್ನು ಚೌಕಾಕಾರವಾಗಿ ಕತ್ತರಿಸಿಕೊಳ್ಳಿ.
    * ಇದೀಗ ಸಿಹಿಯಾದ ಕ್ಯಾರಮೆಲ್ ಮಿಠಾಯಿ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಬೇಕರಿ ಸ್ಟೈಲ್ ಎಗ್‍ಲೆಸ್ ಹನಿ ಕೇಕ್ ಮನೆಯಲ್ಲೇ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]