Tag: recipe

  • ಸಿಂಪಲ್ ಜರ್ಮನ್ ಆಲೂಗಡ್ಡೆ ಸಲಾಡ್

    ಸಿಂಪಲ್ ಜರ್ಮನ್ ಆಲೂಗಡ್ಡೆ ಸಲಾಡ್

    ಸುಲಭವಾದ ಜರ್ಮನ್ ಆಲೂಗಡ್ಡೆ ಸಲಾಡ್ ಬಾರ್ಬೆಕ್ಯೂ ಸೈಡ್ ಡಿಶ್ ಆಗಿದ್ದು, ಇದನ್ನು ಫಟಾಫಟ್ ಅಂತ ತಯಾರಿಸಬಹುದು. ಬಿಸಿ ಅಥವಾ ತಣ್ಣಗಾಗಿಸಿಯೂ ಇದನ್ನು ತಿನ್ನಬಹುದು. ಸಿಂಪಲ್ ಆಗಿರೋ ರೆಸಿಪಿಯನ್ನು ನೀವು ಕೂಡಾ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಚೌಕಾಕಾರವಾಗಿ ಕತ್ತರಿಸಿದ ಕೆಂಪು ಆಲೂಗಡ್ಡೆ – 1 ಕೆಜಿ
    ಕತ್ತರಿಸಿದ ಬೇಕನ್ – 250 ಗ್ರಾಂ
    ಹೆಚ್ಚಿದ ಈರುಳ್ಳಿ – 1
    ಆಪಲ್ ಸೈಡರ್ ವಿನೆಗರ್ – ಅರ್ಧ ಕಪ್
    ಡಿಜಾನ್ ಸಾಸಿವೆ – 1 ಟೀಸ್ಪೂನ್
    ಆಲಿವ್ ಎಣ್ಣೆ – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಕರಿಮೆಣಸಿನ ಪುಡಿ – ಸ್ವಾದಕ್ಕನುಸಾರ
    ಹೆಚ್ಚಿದ ಸ್ಪ್ರಿಂಗ್ ಆನಿಯನ್ – 6
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಕಾಲು ಕಪ್ ಇದನ್ನೂ ಓದಿ: ಪಾರ್ಟಿಗೆ ಸ್ಟಾರ್ಟರ್ – ಮಟನ್ ಶಮಿ ಕಬಾಬ್ ಮಾಡಿ ನೋಡಿ

    ಮಾಡುವ ವಿಧಾನ:
    * ಮೊದಲಿಗೆ ಆಲೂಗಡ್ಡೆಯನ್ನು ಮಧ್ಯಮ ಗಾತ್ರದ ಪಾತ್ರೆಯಲ್ಲಿ ಇರಿಸಿ ಮುಳುಗುವಷ್ಟು ನೀರು ಹಾಕಿ, ಮುಚ್ಚಿ, ಕುದಿಸಿ.
    * ಆಲೂಗಡ್ಡೆ ಮೃದುವಾಗುವವರೆಗೆ ಸುಮಾರು 10 ನಿಮಿಷ ಬೇಯಿಸಿಕೊಳ್ಳಿ. ನಂತರ ನೀರನ್ನು ಹರಿಸಿ, ದೊಡ್ಡ ಬಟ್ಟಲಿನಲ್ಲಿ ಇರಿಸಿ.
    * ಈ ನಡುವೆ ಬೇಕನ್ ಅನ್ನು ಫ್ರೈ ಪ್ಯಾನ್‌ನಲ್ಲಿ ಗರಿಗರಿಯಾಗುವವರೆಗೆ ಹುರಿದುಕೊಳ್ಳಿ. ನಂತರ ಬೇಕನ್ ಅನ್ನು ಚಮಚದಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿಕೊಳ್ಳಿ.
    * ಬೇಕನ್ ಅನ್ನು ಹುರಿದುಕೊಂಡ ಎಣ್ಣೆಗೆ ಈರುಳ್ಳಿ ಸೇರಿಸಿ 3 ನಿಮಿಷ ಹುರಿಯಿರಿ.
    * ವಿನೆಗರ್ ಮತ್ತು ಡಿಜಾನ್ ಸಾಸಿವೆ ಸೇರಿಸಿ 2 ನಿಮಿಷ ಬೇಯಿಸಿ.
    * ನಂತರ ಉರಿಯನ್ನು ಆಫ್ ಮಾಡಿ, ಅದಕ್ಕೆ ಬೆಚ್ಚಗಿನ ಆಲೂಗಡ್ಡೆಯನ್ನು ಸೇರಿಸಿ.
    * ಉಪ್ಪು, ಕರಿಮೆಣಸಿನಪುಡಿ, ಸ್ಪ್ರಿಂಗ್ ಆನಿಯನ್, ಕೊತ್ತಂಬರಿ ಸೊಪ್ಪು, ಮತ್ತು ಹುರಿದ ಬೇಕನ್ ಸೇರಿಸಿ.
    * ಎಲ್ಲವನ್ನೂ ಒಟ್ಟಿಗೆ ಟಾಸ್ ಮಾಡಿ, ಬೌಲ್‌ಗೆ ಬಡಿಸಿ.
    * ಇದೀಗ ಜರ್ಮನ್ ಆಲೂಗಡ್ಡೆ ಸಲಾಡ್ ತಯಾರಾಗಿದ್ದು, ಬಿಸಿ ಅಥವಾ ತಣ್ಣಗಾದಮೇಲೂ ಸವಿಯಬಹುದು. ಇದನ್ನೂ ಓದಿ: ಆರೋಗ್ಯಕರ ರಷ್ಯನ್ ಮಶ್ರೂಮ್ ಸೂಪ್ ಟ್ರೈ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೋಬಿ ಪೆಪ್ಪರ್ ಡ್ರೈ ರೆಸಿಪಿ ನಿಮಗಾಗಿ

    ಗೋಬಿ ಪೆಪ್ಪರ್ ಡ್ರೈ ರೆಸಿಪಿ ನಿಮಗಾಗಿ

    ಸಂಜೆ ಮನೆಯವರೊಂದಿಗೆ ಆಚೆ ಹೋದಾಗ ಸ್ನಾಕ್ಸ್, ಚಾಟ್ಸ್ ಮುಂತಾದವುಗಳನ್ನು ತಿನ್ನುತ್ತಾರೆ. ಅದರಲ್ಲೂ ಮಕ್ಕಳೊಂದಿಗೆ ಹೊರಗಡೆ ಹೋದರೆ ಮಕ್ಕಳು ಇವನ್ನೆಲ್ಲಾ ಕೇಳಿಯೇ ಕೇಳುತ್ತಾರೆ. ಹೆಚ್ಚಿನವರು ಮಸಾಲಪುರಿ, ಗೋಬಿ ಮುಂತಾದವುಗಳನ್ನು ತಿನ್ನುವುದು ರೂಢಿ. ಇವತ್ತಿನ ನಮ್ಮ ರೆಸಿಪಿಯಲ್ಲಿ ಗೋಬಿ ಪೆಪ್ಪರ್ ಡ್ರೈ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಮನೆಯಲ್ಲೇ ಟ್ರೈ ಮಾಡಿ ಆರೋಗ್ಯಕರ ದಾಸವಾಳ ಟೀ

    ಬೇಕಾಗುವ ಸಾಮಗ್ರಿಗಳು:
    ಹೂಕೋಸು – 2 ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ಮೈದಾ – 1 ಕಪ್
    ಜೋಳದ ಹಿಟ್ಟು – ಮುಕ್ಕಾಲು ಕಪ್
    ಅರಶಿಣ ಪೌಡರ್ – ಅರ್ಧ ಚಮಚ
    ಪೆಪ್ಪರ್ ಪೌಡರ್ – 1 ಚಮಚ
    ಎಣ್ಣೆ – 2 ಚಮಚ
    ಜೀರಿಗೆ – ಅರ್ಧ ಚಮಚ
    ಫೆನ್ನೆಲ್ – ಅರ್ಧ ಚಮಚ
    ಕರಿಬೇವು – ಸ್ವಲ್ಪ
    ಹೆಚ್ಚಿದ ಈರುಳ್ಳಿ – 1
    ಹೆಚ್ಚಿದ ಬೆಳ್ಳುಳ್ಳಿ – 5
    ಹೆಚ್ಚಿದ ಶುಂಠಿ – ಸ್ವಲ್ಪ
    ಹೆಚ್ಚಿದ ಕ್ಯಾಪ್ಸಿಕಂ – ಅರ್ಧ
    ಜೀರಾ ಪೌಡರ್ – ಅರ್ಧ ಚಮಚ
    ಟೊಮೆಟೊ ಸಾಸ್ – 2 ಚಮಚ
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಹೆಚ್ಚಿದ ಹೂಕೋಸನ್ನು ಬಿಸಿನೀರಿಗೆ ಉಪ್ಪು ಹಾಕಿ ಸ್ವಲ್ಪ ಹೊತ್ತು ನೆನೆಸಿಡಿ. ಬಳಿಕ ನೀರಿನಿಂದ ಹೂಕೋಸು ಅನ್ನು ತೆಗೆದು ಪಕ್ಕಕ್ಕೆ ಇಡಿ.
    * ಈಗ ಒಂದು ಬೌಲ್‌ನಲ್ಲಿ 1 ಕಪ್ ಮೈದಾ, ಮುಕ್ಕಾಲು ಕಪ್ ಜೋಳದ ಹಿಟ್ಟನ್ನು ಹಾಕಿಕೊಳ್ಳಿ. ಬಳಿಕ ಅದಕ್ಕೆ ಅರಶಿಣ, ಪೆಪ್ಪರ್ ಪೌಡರ್ ಮತ್ತು ಸ್ವಲ್ಪ ಉಪ್ಪನ್ನು ಹಾಕಿಕೊಂಡು ಅದಕ್ಕೆ 1 ಕಪ್ ನೀರನ್ನು ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಈಗ ಹೂಕೋಸನ್ನು ಈ ಮಿಶ್ರಣಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮಿಶ್ರಣ ಹೂಕೋಸನ್ನು ಚನ್ನಾಗಿ ಹೊಂದಿಕೊಳ್ಳಬೇಕು.
    * ನಂತರ ಒಂದು ಬಾಣಾಲೆಯಲ್ಲಿ ಎಣ್ಣೆಯನ್ನು ಬಿಸಿಗಿಟ್ಟು ಎಣ್ಣೆ ಕಾದ ಬಳಿಕ ಅದಕ್ಕೆ ಹೂಕೋಸನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದೇ ರೀತಿ ಎಲ್ಲವನ್ನೂ ಮಾಡಿಕೊಳ್ಳಿ.
    * ಈಗ ಒಂದು ಪ್ಯಾನ್‌ಗೆ 2 ಚಮಚ ಎಣ್ಣೆ, ಜೀರಿಗೆ ಮತ್ತಿ ಫನ್ನೆಲ್ ಹಾಕಿಕೊಳ್ಳಿ. ಬಳಿಕ ಅದಕ್ಕೆ ಕರಿಬೇವುಗಳನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮತ್ತು ಕ್ಯಾಪ್ಸಿಕಂ ಹಾಕಿಕೊಂಡು ಚನ್ನಾಗಿ ಫ್ರೈ ಮಾಡಿಕೊಳ್ಳಿ.
    * ಬಳಿಕ ಇದಕ್ಕೆ ಅರಶಿಣ ಪುಡಿ, ಜೀರಾ ಪುಡಿ, ಕೊತ್ತಂಬರಿ ಪುಡಿ, ಪೆಪ್ಪರ್ ಪೌಡರ್ ಮತ್ತು ಸ್ವಲ್ಪ ಉಪ್ಪನ್ನು ಹಾಕಿಕೊಂಡು ಚನ್ನಾಗಿ ತಿರುವಿಕೊಳ್ಳಿ. ಈಗ ಇದಕ್ಕೆ ಸ್ವಲ್ಪ ಟೊಮೆಟೊ ಸಾಸ್ ಹಾಕಿಕೊಂಡು ಮತ್ತೊಮ್ಮೆ ತಿರುವಿಕೊಳ್ಳಿ.
    * ಈಗ ಈ ಮಿಶ್ರಣಕ್ಕೆ ಹುರಿದ ಗೋಬಿಯನ್ನು ಸೇರಿಸಿ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೊನೆಗೆ ಇದಕ್ಕೆ 2 ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಂಡು ಬಿಸಿಬಿಸಿಯಾಗಿ ಸರ್ವ್ ಮಾಡಿ. ಇದನ್ನೂ ಓದಿ: ರೆಸ್ಟೋರೆಂಟ್ ಶೈಲಿಯ ಶಾಹಿ ಪನೀರ್ ಮನೆಯಲ್ಲೇ ಮಾಡಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮನೆಯಲ್ಲೇ ಟ್ರೈ ಮಾಡಿ ಆರೋಗ್ಯಕರ ದಾಸವಾಳ ಟೀ

    ಮನೆಯಲ್ಲೇ ಟ್ರೈ ಮಾಡಿ ಆರೋಗ್ಯಕರ ದಾಸವಾಳ ಟೀ

    ದಾಸವಾಳ ಟೀ ಅಥವಾ ‘ಅಗುವಾ ಡಿ ಜಮೈಕಾ’ ಎಂದೂ ಇದನ್ನು ಕರೆಯಲಾಗುತ್ತದೆ. ರುಚಿಕರ ಮಾತ್ರವಲ್ಲದೆ ರಿಫ್ರೆಶಿಂಗ್ ಅನುಭವ ನೀಡುವ ಟೀ ಮೆಕ್ಸಿಕೋದಾದ್ಯಂತ ತುಂಬಾ ಜನಪ್ರಿಯವಾದ ಪಾನೀಯವಾಗಿದೆ. ದಾಸವಾಳ ಟೀ ಮಾಡೋದು ತುಂಬಾ ಸರಳ. ಕೇವಲ 3 ಪದಾರ್ಥಗಳು ಇದನ್ನು ತಯಾರಿಸಲು ಸಾಕಾಗುತ್ತದೆ. ಸಾಕಷ್ಟು ಆರೋಗ್ಯಕರ ಗುಣಗಳುಳ್ಳ ಚಹಾ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ, ಮಲಬದ್ಧತೆಯನ್ನು ನಿವಾರಿಸುತ್ತದೆ, ಉತ್ತಮ ನಿದ್ರೆಗೂ ಸಹಾಯ ಮಾಡುತ್ತದೆ.

    ಬೇಕಾಗುವ ಪದಾರ್ಥಗಳು:
    ಒಣ ದಾಸವಾಳ ದಳ – 1 ಕಪ್
    ನೀರು – 2 ಕಪ್, 1 ಲೀಟರ್
    ಸಕ್ಕರೆ ಪುಡಿ – 1 ಕಪ್
    ತಂಪಾದ ನೀರು – 1 ಲೀಟರ್
    ಐಸ್ ಕ್ಯೂಬ್ಸ್ – ಅಗತ್ಯಕ್ಕೆ ತಕ್ಕಂತೆ ಇದನ್ನೂ ಓದಿ: ನ್ಯಾಚುರಲ್ ಆಪಲ್ ಜೆಲ್ಲಿ ಮನೆಯಲ್ಲೇ ಮಾಡಿ ನೋಡಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ 2 ಕಪ್ ನೀರು ಹಾಕಿ, ಅದರಲ್ಲಿ ಒಣಗಿದ ದಾಸವಾಳ ದಳಗಳನ್ನು ಸೇರಿಸಿ, ಬಿಸಿ ಮಾಡಿ.
    * ಕುದಿ ಬಂದ ತಕ್ಷಣ ಉರಿಯನ್ನು ಕಡಿಮೆ ಮಾಡಿ, ಸುಮಾರು 15 ನಿಮಿಷಗಳ ಕಾಲ ಕುದಿಸಿಕೊಳ್ಳಿ.
    * ಮತ್ತೊಂದು ಪಾತ್ರೆಯಲ್ಲಿ 1 ಲೀಟರ್ ತಂಪಾದ ನೀರಿಗೆ ಸಕ್ಕರೆ ಪುಡಿ ಹಾಕಿ ಅದು ಕರಗುವತನಕ ಮಿಶ್ರಣ ಮಾಡಿ.
    * ದಾಸವಾಳ ಹಾಗೂ ನೀರಿನ ಮಿಶ್ರಣವನ್ನು ಶಾಖದಿಂದ ತೆಗೆದುಹಾಕಿ ಸುಮಾರು 30 ನಿಮಿಷ ತಣ್ಣಗಾಗಲು ಬಿಡಿ.
    * 30 ನಿಮಿಷಗಳ ನಂತರ ದಾಸವಾಳದ ದಳಗಳನ್ನು ನೀರಿನಿಂದ ಪ್ರತ್ಯೇಕಿಸಿ.
    * ಸಕ್ಕರೆ ಸೇರಿಸಿದ ನೀರಿಗೆ ದಾಸವಾಳದ ದ್ರವವನ್ನು ಸೇರಿಸಿ ಮಿಶ್ರಣ ಮಾಡಿ.
    * ಕೊನೆಯಲ್ಲಿ ಐಸ್ ಕ್ಯೂಬ್ ಸೇರಿಸಿ ಗ್ಲಾಸ್‌ಗಳಲ್ಲಿ ಬಡಿಸಿ, ದಾಸವಾಳ ಟೀಯನ್ನು ಆನಂದಿಸಿ. ಇದನ್ನೂ ಓದಿ: ಡೈರಿ ಉತ್ಪನ್ನ ಬೇಡ – ಕೂಲ್ ಕೂಲ್ ಗ್ರೇಪ್ ಐಸ್ ಟ್ರೈ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾರ್ಟಿಗೆ ಸ್ಟಾರ್ಟರ್ – ಮಟನ್ ಶಮಿ ಕಬಾಬ್ ಮಾಡಿ ನೋಡಿ

    ಪಾರ್ಟಿಗೆ ಸ್ಟಾರ್ಟರ್ – ಮಟನ್ ಶಮಿ ಕಬಾಬ್ ಮಾಡಿ ನೋಡಿ

    ಕ್ಕಳ ಎವರ್ ಗ್ರೀನ್ ಫೇವರಿಟ್ ನಾನ್‌ವೆಜ್ ರೆಸಿಪಿಗಳಲ್ಲೊಂದು ಕಬಾಬ್. ಸ್ನ್ಯಾಕ್ಸ್ ಅಥವಾ ಊಟದ ಸಂದರ್ಭದಲ್ಲಿ ಸವಿಯೋದಕ್ಕೆ ಕಬಾಬ್ ಪರ್ಫೆಕ್ಟ್. ನಾವಿಂದು ಶ್ಯಾಲೋ ಫ್ರೈ ಮಟನ್ ಶಮಿ ಕಬಾಬ್ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ರುಚಿಕರವಾದ ಹಾಗೂ ಸುಲಭದ ಈ ರೆಸಿಪಿ ಯಾವುದೇ ಪಾರ್ಟಿ ಸಂದರ್ಭದಲ್ಲೂ ಸ್ಟಾರ್ಟರ್ ಆಗಿ ಬಡಿಸಬಹುದು. ಬರ್ಗರ್‌ಗೆ ಪ್ಯಾಟಿ ಆಗಿಯೂ ಮಟನ್ ಶಮಿ ಕಬಾಬ್ ಅನ್ನು ಬಳಸಬಹುದು.

    ಬೇಕಾಗುವ ಪದಾರ್ಥಗಳು:
    ಮಟನ್ – ಅರ್ಧ ಕೆಜಿ
    ಕಡಲೆ ಬೇಳೆ – 75 ಗ್ರಾಂ
    ಬೆಳ್ಳುಳ್ಳಿ – 2
    ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 2 ಟೀಸ್ಪೂನ್
    ಅರಿಶಿನ – ಕಾಲು ಟೀಸ್ಪೂನ್
    ದಾಲ್ಚಿನ್ನಿ – 1 ಇಂಚು
    ಲವಂಗ – 4-5
    ಹೆಚ್ಚಿದ ಈರುಳ್ಳಿ – 2
    ಪುದೀನಾ ಸೊಪ್ಪು – 1
    ಹೆಚ್ಚಿದ ಕೊತ್ತಂಬರಿ ಚಿಗುರು – 2
    ಹಸಿರು ಮೆಣಸಿನಕಾಯಿ – 2
    ಮೊಟ್ಟೆ – 1
    ನಿಂಬೆ ರಸ – 1 ಟೀಸ್ಪೂನ್ ಇದನ್ನೂ ಓದಿ: ಆರೋಗ್ಯಕರ ರಷ್ಯನ್ ಮಶ್ರೂಮ್ ಸೂಪ್ ಟ್ರೈ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಕಡಲೆ ಬೇಳೆ, ಬೆಳ್ಳುಳ್ಳಿ, ಮೆಣಸಿನ ಪುಡಿ, ಅರಿಶಿನ, ದಾಲ್ಚಿನ್ನಿ, ಹಾಗೂ ಲವಂಗವನ್ನು ಪ್ರೆಶರ್ ಕುಕ್ಕರ್‌ಗೆ ಹಾಕಿ, ಮಟನ್ ಸೇರಿಸಿ, ಅಗತ್ಯವಿರುವಷ್ಟು ನೀರು ಹಾಗೂ ಉಪ್ಪು ಸೇರಿಸಿ ಬೇಯಿಸಿಕೊಳ್ಳಿ.
    * 1 ವಿಸಿಲ್ ಬಳಿಕ 15-20 ನಿಮಿಷಗಳ ಕಾಲ ಅದನ್ನು ಕುದಿಸಿಕೊಳ್ಳಿ.
    * ಬೇಯಿಸಿದ ಮಾಂಸವನ್ನು ತಣ್ಣಗಾಗಿಸಿ, ಗ್ರೈಂಡರ್‌ಗೆ ವರ್ಗಾಯಿಸಿ ಪುಡಿ ಮಾಡಿ.
    * ಅದಕ್ಕೆ ಈರುಳ್ಳಿ, ಹಸಿರು ಮೆಣಸಿನಕಾಯಿ, ಪುದೀನಾ ಸೇರಿಸಿ.
    * ಮೊಟ್ಟೆ ಒಡೆದು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ.
    * ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಪ್ಯಾಟಿ ರೀತಿಯ ಆಕಾರ ನೀಡಿ.
    * ಈಗ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ, ಬಿಸಿ ಮಾಡಿ ನಂತರ ಕಬಾಬ್‌ಗಳನ್ನು ಅದರಲ್ಲಿ ಹಾಕಿ ಶ್ಯಾಲೋ ಫ್ರೈ ಮಾಡಿ.
    * ಕಬಾಬ್ ಎರಡೂ ಬದಿ ಬೆಂದ ಬಳಿಕ ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ. ಎಲ್ಲಾ ಕಬಾಬ್ ಪ್ಯಾಟಿಗಳನ್ನೂ ಹೀಗೇ ಮುಂದುವರಿಸಿ.
    * ಇದೀಗ ಮಟನ್ ಶಮಿ ಕಬಾಬ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಏರ್ ಫ್ರೈಯರ್ ಸ್ಪೈಸಿ ಹನಿ ಚಿಕನ್ ವಿಂಗ್ಸ್ ರೆಸಿಪಿ

    
    

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೆಸ್ಟೋರೆಂಟ್ ಶೈಲಿಯ ಶಾಹಿ ಪನೀರ್ ಮನೆಯಲ್ಲೇ ಮಾಡಿ!

    ರೆಸ್ಟೋರೆಂಟ್ ಶೈಲಿಯ ಶಾಹಿ ಪನೀರ್ ಮನೆಯಲ್ಲೇ ಮಾಡಿ!

    ರೆಸ್ಟೋರೆಂಟ್‌ಗಳಲ್ಲಿ ಚಪಾತಿ, ಪರೋಟ, ರೋಟಿ ಮುಂತಾದ ತಿನಿಸುಗಳ ಜೊತೆ ಸೈಡ್ ಡಿಶ್ ಆಗಿ ಕಡಾಯಿ, ಗ್ರೇವಿ ಮುಂತಾದವುಗಳನ್ನು ಕೊಡುತ್ತಾರೆ. ಇದು ತಿನ್ನಲು ಬಲು ರುಚಿಯಾಗಿದ್ದು, ತಿನಿಸುಗಳ ಟೇಸ್ಟ್ ಅನ್ನು ಇನ್ನೂ ಹೆಚ್ಚಿಸುತ್ತವೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ರೆಸ್ಟೋರೆಂಟ್ ಶೈಲಿಯ ಶಾಹಿ ಪನೀರ್ ಅನ್ನು ಮನೆಯಲ್ಲೇ ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಡೈರಿ ಉತ್ಪನ್ನ ಬೇಡ – ಕೂಲ್ ಕೂಲ್ ಗ್ರೇಪ್ ಐಸ್ ಟ್ರೈ ಮಾಡಿ

    ಬೇಕಾಗುವ ಸಾಮಗ್ರಿಗಳು:
    ಬೆಣ್ಣೆ – 1 ಚಮಚ
    ಹೆಚ್ಚಿದ ಈರುಳ್ಳಿ – 2
    ಹೆಚ್ಚಿದ ಟೊಮೆಟೊ – 4
    ಶಾಹಿ ಜೀರಿಗೆ – ಅರ್ಧ ಚಮಚ
    ಚೆಕ್ಕೆ – 1
    ಲವಂಗ- 3
    ಏಲಕ್ಕಿ – 2
    ಕಲ್ಲಂಗಡಿ ಬೀಜ – 1 ಚಮಚ
    ಬಾದಾಮಿ, ಗೋಡಂಬಿ – ಸ್ವಲ್ಪ
    ನೀರು – 1 ಕಪ್
    ಹಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    ಪನೀರ್ ಕ್ಯೂಬ್ಸ್ – 200 ಗ್ರಾಂ
    ಅಚ್ಚಖಾರದ ಪುಡಿ – 1 ಚಮಚ
    ಅರಶಿಣ – ಕಾಲು ಚಮಚ
    ಉಪ್ಪು -ರುಚಿಗೆ ತಕ್ಕಷ್ಟು
    ಕೇಸರಿ – ಸ್ವಲ್ಪ
    ಫ್ರೆಶ್ ಕ್ರೀಮ್ – 2 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಾಲೆಗೆ ಒಂದು ಚಮಚ ಬೆಣ್ಣೆ ಹಾಕಿಕೊಂಡು ಅದು ಕರಗಿದ ಬಳಿಕ ಅದಕ್ಕೆ ಹೆಚ್ಚಿದ ಈರುಳ್ಳಿ, ಟೊಮೆಟೊ ಹಾಕಿಕೊಂಡು ಒಂದು ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
    * ಬಳಿಕ ಇದಕ್ಕೆ ಶಾಹಿ ಜೀರಿಗೆ, ಚೆಕ್ಕೆ, ಲವಂಗ, ಏಲಕ್ಕಿಯನ್ನು ಹಾಕಿಕೊಂಡು ಬಳಿಕ ಅದಕ್ಕೆ ಕಲ್ಲಂಗಡಿ ಬೀಜ, ಬಾದಾಮಿ, ಗೋಡಂಬಿ ಹಾಕಿಕೊಂಡು ಮತ್ತೆ ಹುರಿದುಕೊಳ್ಳಿ.
    * ಹುರಿದ ಮೇಲೆ ಅದಕ್ಕೆ 1 ಕಪ್ ನೀರನ್ನು ಸೇರಿಸಿಕೊಂಡು ಮುಚ್ಚಳ ಮುಚ್ಚಿ 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ನಂತರ ಮಿಶ್ರಣಕ್ಕೆ ಹಾಕಿದ್ದ ಮಸಾಲೆ ಪದಾರ್ಥಗಳು ಅಂದರೆ ಚೆಕ್ಕೆ, ಲವಂಗ, ಏಲಕ್ಕಿಯನ್ನು ತೆಗೆದಿಡಿ.
    * ಬಳಿಕ ಮಿಶ್ರಣವನ್ನು ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಅದನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ. ರುಬ್ಬಿದ ಬಳಿಕ ಅದನ್ನು ಸೋಸಿಕೊಳ್ಳಿ.
    * ಬಳಿಕ ಬಾಣಾಲೆಗೆ ಸ್ವಲ್ಪ ಬೆಣ್ಣೆ ಹಾಕಿಕೊಂಡು ಕರಗಿದ ಮೇಲೆ ಅದಕ್ಕೆ ಕೊತ್ತಂಬರಿ ಸೊಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಹಸಿವಾಸನೆ ಹೋಗುವವರೆಗೆ ಫ್ರೈ ಮಾಡಿಕೊಳ್ಳಿ.
    * ಅದಕ್ಕೆ ಪನೀರ್ ಕ್ಯೂಬ್ಸ್ ಹಾಕಿಕೊಂಡು ಒಂದು ನಿಮಿಷಗಳ ಕಾಲ ಹುರಿದುಕೊಳ್ಳಿ. ಬಳಿಕ ಅದಕ್ಕೆ ಅಚ್ಚಖಾರದ ಪುಡಿ, ಅರಶಿಣ ಮತ್ತು ಉಪ್ಪು ಹಾಗೂ ನೀರಲ್ಲಿ ನೆನೆಸಿದ ಕೇಸರಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
    * ನಂತರ ಇದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿಕೊಳ್ಳಿ. ಬಳಿಕ ಸ್ವಲ್ಪ ಸಕ್ಕರೆ ಹಾಗೂ ಫ್ರೆಶ್ ಕ್ರೀಮ್ ಸೇರಿಸಿಕೊಂಡು ಮಿಶ್ರಣ ಸ್ವಲ್ಪ ದಪ್ಪವಾಗುವವರೆಗೆ ತಿರುವಿಕೊಳ್ಳಿ. ಈಗ ಶಾಹಿ ಪನೀರ್ ತಿನ್ನಲು ರೆಡಿ. ಇದನ್ನೂ ಓದಿ: ಆರೋಗ್ಯಕರ ರಷ್ಯನ್ ಮಶ್ರೂಮ್ ಸೂಪ್ ಟ್ರೈ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನ್ಯಾಚುರಲ್ ಆಪಲ್ ಜೆಲ್ಲಿ ಮನೆಯಲ್ಲೇ ಮಾಡಿ ನೋಡಿ

    ನ್ಯಾಚುರಲ್ ಆಪಲ್ ಜೆಲ್ಲಿ ಮನೆಯಲ್ಲೇ ಮಾಡಿ ನೋಡಿ

    ಮಾರುಕಟ್ಟೆಯಲ್ಲಿ ಸಿಗುವ ಫ್ರೂಟ್ ಜೆಲ್ಲಿಗಳಿಗೆ ಹೆಚ್ಚಾಗಿ ಕೃತಕ ಪದಾರ್ಥಗಳನ್ನು ಬಳಸಲಾಗುತ್ತದೆ. ಈ ಮೂಲಕ ಅವುಗಳನ್ನು ಕೆಡದಂತೆ ಹೆಚ್ಚು ದಿನ ಬಳಸಲು ಸಾಧ್ಯವಾಗುವಂತೆ ಮಾಡಲಾಗುತ್ತದೆ. ಆದರೆ ಅವುಗಳಿಂದ ಆರೋಗ್ಯಕ್ಕೆ ಹಾನಿಯಾಗುವ ಭೀತಿ ಹುಟ್ಟೋದು ಸಹಜ. ಹೀಗಾಗಿ ನಾವು ಕೇವಲ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಆಪಲ್ ಜೆಲ್ಲಿ ಮನೆಯಲ್ಲಿಯೇ ಹೇಗೆ ಮಾಡಬಹುದು ಎಂಬುದನ್ನು ಹೇಳಿಕೊಡುತ್ತೇವೆ. ಹೆಚ್ಚಾಗಿ ಮಕ್ಕಳು ಇಷ್ಟಪಟ್ಟು ಸವಿಯೋ ಈ ಜೆಲ್ಲಿಯನ್ನು ಅವರ ಆರೋಗ್ಯದ ಬಗ್ಗೆ ಯಾವುದೇ ಭಯವಿಲ್ಲದೆ ನೀಡಬಹುದು.

    ಬೇಕಾಗುವ ಪದಾರ್ಥಗಳು:
    ಸೇಬು ಹಣ್ಣುಗಳು – 6-7
    ನಿಂಬೆ ರಸ – 1 ಹಣ್ಣು
    ನೀರು – 6 ಕಪ್
    ಸಕ್ಕರೆ – ಅಗತ್ಯಕ್ಕೆ ತಕ್ಕಂತೆ ಇದನ್ನೂ ಓದಿ: ಡೈರಿ ಉತ್ಪನ್ನ ಬೇಡ – ಕೂಲ್ ಕೂಲ್ ಗ್ರೇಪ್ ಐಸ್ ಟ್ರೈ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಸೇಬುಗಳನ್ನು ತೊಳೆದು ತುಂಡುಗಳಾಗಿ ಕತ್ತರಿಸಿ.
    * ಸೇಬಿನ ತುಂಡುಗಳ ಮೇಲೆ ನಿಂಬೆ ರಸವನ್ನು ಸುರಿಯಿರಿ. ಇದರಿಂದ ಅವು ಕಂದು ಬಣ್ಣಕ್ಕೆ ತಿರುಗುವುದಿಲ್ಲ.
    * ಬಾಣಲೆಗೆ ಸೇಬುಗಳನ್ನು ಹಾಕಿ, ನೀರನ್ನು ಸೇರಿಸಿ ಸುಮಾರು 30 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ, ಮೃದುವಾಗುವವರೆಗೆ ಸೇಬುಗಳನ್ನು ಬೇಯಿಸಿ.
    * ಉರಿಯನ್ನು ಆಫ್ ಮಾಡಿ, ಸ್ವಚ್ಛವಾದ ಬಟ್ಟೆಯಲ್ಲಿ ಅದರ ನೀರಿನಂಶವನ್ನು ಸೋಸಿ ಸಂಗ್ರಹಿಸಿ. ಸೇಬುಗಳನ್ನು ಹೆಚ್ಚು ಒತ್ತಬೇಡಿ. ಇದರಿಂದ ಅದರ ಬಣ್ಣ ಸ್ಪಷ್ಟವಿರುವುದಿಲ್ಲ.
    * ಈಗ ಸೇಬನ ರಸವನ್ನು ಮತ್ತೆ ಬಾಣಲೆಗೆ ಹಾಕಿ, ಸಕ್ಕರೆ ಸೇರಿಸಿ ಬಿಸಿ ಮಾಡಿ.
    * ರಸ ಕುದಿಯಲು ಪ್ರಾರಂಭಿಸುತ್ತಿದ್ದಂತೆ ಉರಿಯನ್ನು ಕಡಿಮೆ ಮಾಡಿ ಬೇಯಿಸಿಕೊಳ್ಳಿ.
    * ಮುಚ್ಚಳವಿರುವ ಸ್ವಚ್ಛ ಗಾಜಿನ ಬಾಟಲಿಯಲ್ಲಿ ರಸವನ್ನು ಸುರಿಯಿರಿ. ನಂತರ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ.
    * 24 ಗಂಟೆಗಳ ಬಳಿಕ ಆಪಲ್ ಜೆಲ್ಲಿ ಬಳಕೆಗೆ ಸಿದ್ಧವಾಗುತ್ತದೆ. ಇದನ್ನೂ ಓದಿ: ಮಕ್ಕಳಿಗಾಗಿ ಚೋಕೋ ಚಿಪ್ ಕುಕ್ಕೀಸ್..!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡೈರಿ ಉತ್ಪನ್ನ ಬೇಡ – ಕೂಲ್ ಕೂಲ್ ಗ್ರೇಪ್ ಐಸ್ ಟ್ರೈ ಮಾಡಿ

    ಡೈರಿ ಉತ್ಪನ್ನ ಬೇಡ – ಕೂಲ್ ಕೂಲ್ ಗ್ರೇಪ್ ಐಸ್ ಟ್ರೈ ಮಾಡಿ

    ಡೈರಿ ಉತ್ಪನ್ನಗಳಿಲ್ಲ, ಆದ್ರೆ ಏನಾದ್ರೂ ತಣ್ಣನೆಯ ಸಿಹಿಯನ್ನು ಮನೆಯಲ್ಲೇ ಮಾಡ್ಬೇಕು ಎನಿಸಿದರೆ ನಾವಿಂದು ಹೇಳಿಕೊಡುತ್ತಿರೋ ಸುಲಭದ ರೆಸಿಪಿಯನ್ನು ನೀವು ಕೂಡಾ ಟ್ರೈ ಮಾಡಬಹುದು. ಗ್ರೇಪ್ ಐಸ್ ಇದನ್ನು ಗ್ರೇಪ್ ಸೊರ್‌ಬೆಟ್ ಎಂತಲೂ ಕರೆಯುತ್ತಾರೆ. ಸೊರ್‌ಬೆಟ್ ಎಂದರೆ ಹಣ್ಣಿನ ರಸ ಅಥವಾ ಹಣ್ಣಿನ ಪ್ಯೂರಿಯನ್ನು ಫ್ರಿಜ್‌ನಲ್ಲಿಟ್ಟು ಘನೀಕರಿಸಿ ಮಾಡೋ ಸಿಂಪಲ್ ಡೆಸರ್ಟ್. ಐಸ್‌ಕ್ರೀಮ್ ರೀತಿ ಎನಿಸಿದರೂ ಇದಕ್ಕೆ ಡೈರಿ ಪದಾರ್ಥ ಬೇಕಿಲ್ಲ. ಕೇವಲ 3 ಪದಾರ್ಥಗಳನ್ನು ಬಳಸಿ ಸಿಂಪಲ್ ಆಗಿ ಗ್ರೇಪ್ ಐಸ್ ಹೇಗೆ ಮಾಡೋದು ಎಂಬುದನ್ನು ನೋಡೋಣ.

    ಬೇಕಾಗುವ ಪದಾರ್ಥಗಳು:
    ಹಸಿರು ದ್ರಾಕ್ಷಿ – 3 ಕಪ್
    ಸಕ್ಕರೆ ಅಥವಾ ಜೇನುತುಪ್ಪ – 2 ಟೀಸ್ಪೂನ್
    ನಿಂಬೆ ರಸ – 1 ಟೀಸ್ಪೂನ್ ಇದನ್ನೂ ಓದಿ: ಸಿಂಪಲ್ & ಟೇಸ್ಟಿ ಬ್ಲೂಬೆರಿ ಕಾಫಿ ಕೇಕ್

    ಮಾಡುವ ವಿಧಾನ:
    * ಮೊದಲಿಗೆ ದ್ರಾಕ್ಷಿಯನ್ನು ಕಾಂಡದಿಂದ ಬೇರ್ಪಡಿಸಿ, ಒಂದು ಟ್ರೇಯಲ್ಲಿರಿಸಿ.
    * ಅದನ್ನು ಫ್ರೀಜರ್‌ನಲ್ಲಿ ಇಡಿ. ದ್ರಾಕ್ಷಿಗಳು ಹೆಪ್ಪುಗಟ್ಟುವವರೆಗೆ ಕನಿಷ್ಠ 4 ಗಂಟೆ ಬಿಡಿ.
    * ಬಳಿಕ ಫ್ರೀಜರ್‌ನಿಂದ ತಗೆದು ಹಣ್ಣುಗಳನ್ನು ತಕ್ಷಣ ಬ್ಲೆಂಡರ್‌ಗೆ ಹಾಕಿ. ಅದಕ್ಕೆ ನಿಂಬೆ ರಸ ಹಾಗೂ ಜೇನುತುಪ್ಪ ಸೇರಿಸಿ, ಪ್ಯೂರಿ ರೀತಿ ಬ್ಲೆಂಡ್ ಮಾಡಿ.
    * ನಯವಾದ ಪ್ಯೂರಿಯನ್ನು ತಕ್ಷಣವೇ ಸ್ಕೂಪ್‌ನಲ್ಲಿ ತೆಗೆದು ಬೌಲ್‌ಗಳಲ್ಲಿ ಬಡಿಸಿಕೊಳ್ಳಿ.
    * ಇದನ್ನು ತಕ್ಷಣವೇ ಸವಿಯಬಹುದು. ಪ್ಯೂರಿ ಬೇಗನೆ ಕರಗುತ್ತಿದ್ದರೆ ಅದನ್ನು ಮತ್ತೆ 1-2 ಗಂಟೆ ಫ್ರೀಜರ್‌ನಲ್ಲಿ ಇಟ್ಟು ಬಳಿಕ ಸವಿಯಿರಿ. ಇದನ್ನೂ ಓದಿ: ಸಂಜೆ ಸ್ನಾಕ್ಸ್‌ಗೆ ಮಾಡಿ ಸುಲಭವಾದ ನಾಚೋಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆರೋಗ್ಯಕರ ರಷ್ಯನ್ ಮಶ್ರೂಮ್ ಸೂಪ್ ಟ್ರೈ ಮಾಡಿ

    ಆರೋಗ್ಯಕರ ರಷ್ಯನ್ ಮಶ್ರೂಮ್ ಸೂಪ್ ಟ್ರೈ ಮಾಡಿ

    ಆರೋಗ್ಯಕರ ಮಶ್ರೂಮ್ ಸೂಪ್ ರೆಸಿಪಿ ರಷ್ಯಾದಲ್ಲಿ ಹುಟ್ಟಿಕೊಂಡಿದ್ದು, ಇದರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸೋ ಗುಣಗಳಿವೆ. ಇದರಲ್ಲಿ ಗೋಧಿಯ ಬಳಕೆಯನ್ನೂ ಮಾಡಿರುವುದರಿಂದ ಹೆಚ್ಚು ಪೌಷ್ಟಿಕಾಂಶಯುಕ್ತವೂ ಆಗಿದೆ. ಅನಾರೋಗ್ಯ ಎನಿಸಿದಾಗ ಈ ರೆಸಿಪಿಯನ್ನು ನೀವೂ ಒಮ್ಮೆ ಟ್ರೈ ಮಾಡಿ ಆರೋಗ್ಯ ಹೆಚ್ಚಿಸಿಕೊಳ್ಳಿ.

    ಬೇಕಾಗುವ ಪದಾರ್ಥಗಳು:
    ಮಶ್ರೂಮ್ – 2 ಕಪ್
    ಸಣ್ಣಗೆ ಹೆಚ್ಚಿದ ಕ್ಯಾರೆಟ್ – 1
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – ಕಾಲು ಕಪ್
    ಬೇಯಿಸಿದ ಗೋಧಿ – 2 ಕಪ್
    ಚಿಕನ್/ವೆಜ್‌ಟೇಬಲ್ ಸ್ಟಾಕ್ – 3 ಕಪ್
    ಸಣ್ಣಗೆ ಹೆಚ್ಚಿದ ಸಬ್ಬಸಿಗೆ ಸೊಪ್ಪು – ಕಾಲು ಕಪ್
    ಆಲಿವ್ ಎಣ್ಣೆ – 1 ಟೀಸ್ಪೂನ್
    ಬೆಣ್ಣೆ – 2 ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್ ಇದನ್ನೂ ಓದಿ: ವೆಜಿಟೇಬಲ್ ಮ್ಯಾಂಚೋ ಸೂಪ್ ಕುಡಿದು ಆನಂದಿಸಿ..!

    ಮಾಡುವ ವಿಧನ:
    * ಮೊದಲಿಗೆ ಒಂದು ಪಾತ್ರೆಗೆ ಆಲಿವ್ ಎಣ್ಣೆ, ಬೆಣ್ಣೆ ಹಾಕಿ ಬಿಸಿ ಮಾಡಿ. ಕತ್ತರಿಸಿದ ಕ್ಯಾರೆಟ್, ಕೊತ್ತಂಬರಿ ಸೊಪ್ಪು ಸೇರಿಸಿ ಸುಮಾರು 5 ನಿಮಿಷ ಬೇಯಿಸಿ.
    * ಮಶ್ರೂಮ್ ಅನ್ನು ಅದಕ್ಕೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕರಿಮೆಣಸಿನ ಪುಡಿ ಸೇರಿಸಿ ಮಧ್ಯಮ ಉರಿಯಲ್ಲಿ ಸುಮಾರು 8-10 ನಿಮಿಷ ಬೇಯಿಸಿ.
    * ಬೇಯಿಸಿದ ಗೋಧಿಯನ್ನು ಸೇರಿಸಿ ಮಿಶ್ರಣವನ್ನು ಸುಮಾರು 2 ನಿಮಿಷಗಳ ಕಾಲ ಬೆರೆಸಿ.
    * ಚಿಕನ್/ವೆಜ್‌ಟೇಬಲ್ ಸ್ಟಾಕ್ ಸೇರಿಸಿ ಮತ್ತು ಕುದಿಸಿ.
    * ಉರಿಯನ್ನು ಕಡಿಮೆ ಮಾಡಿ 30 ನಿಮಿಷಗಳ ಕಾಲ ಕುದಿಸಿ.
    * ಬಳಿಕ ಸಬ್ಬಸಿಗೆ ಸೊಪ್ಪು ಸೇರಿಸಿ.
    * ಇದೀಗ ಆರೋಗ್ಯಕರ ರಷ್ಯನ್ ಮಶ್ರೂಮ್ ಸೂಪ್ ತಯಾರಾಗಿದ್ದು, ಹುಳಿ ಕ್ರೀಮ್ ಹಾಗೂ ಟೋಸ್ಟ್ ಮಾಡಿದ ಬ್ರೆಡ್‌ನೊಂದಿಗೆ ಬಡಿಸಿ ಆನಂದಿಸಿ. ಇದನ್ನೂ ಓದಿ: ಸಿಂಪಲ್ & ಟೇಸ್ಟಿ ಬ್ಲೂಬೆರಿ ಕಾಫಿ ಕೇಕ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಂಪಲ್ & ಟೇಸ್ಟಿ ಬ್ಲೂಬೆರಿ ಕಾಫಿ ಕೇಕ್

    ಸಿಂಪಲ್ & ಟೇಸ್ಟಿ ಬ್ಲೂಬೆರಿ ಕಾಫಿ ಕೇಕ್

    ಬ್ಲೂಬೆರಿ ಕಾಫಿ ಕೇಕ್ ಸಿಂಪಲ್ ಹಾಗೂ ಟೇಸ್ಟಿ ತಿನಿಸಾಗಿದ್ದು, ಇದನ್ನು ಬ್ರೇಕ್‌ಫಾಸ್ಟ್ ಆಗಿಯೂ ಸವಿಯಬಹುದು. ರಸಭರಿತ ಬ್ಲೂಬೆರಿ ಹಣ್ಣುಗಳನ್ನು ಬಳಸಿ ಕಾಫಿ ಕೇಕ್ ಅನ್ನು ಮಾಡಿದರೆ ಮಕ್ಕಳು ಮಿಸ್ ಮಾಡದೇ ಪ್ರತಿ ಬಾರಿ ಮನೆಯಲ್ಲಿ ತಯಾರಿಸಲು ಹೇಳುತ್ತಾರೆ. ಸಿಂಪಲ್ ಹಾಗೂ ಟೇಸ್ಟಿ ಬ್ಲೂಬೆರಿ ಕಾಫಿ ಕೇಕ್ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಸಕ್ಕರೆ ಪುಡಿ – ಕಾಲು ಕಪ್
    ಕಂದು ಸಕ್ಕರೆ – ಕಾಲು ಕಪ್
    ದಾಲ್ಚಿನ್ನಿ ಪುಡಿ – 1 ಟೀಸ್ಪೂನ್
    ಏಲಕ್ಕಿ ಪುಡಿ – ಚಿಟಿಕೆ
    ಕರಗಿದ ಬೆಣ್ಣೆ – 8 ಟೀಸ್ಪೂನ್
    ಮೈದಾ ಹಿಟ್ಟು – ಒಂದೂವರೆ ಕಪ್

    ಕಾಫಿ ಕೇಕ್ ತಯಾರಿಸಲು:
    ಮೈದಾ ಹಿಟ್ಟು – ಎರಡೂವರೆ ಕಪ್
    ದಾಲ್ಚಿನ್ನಿ ಪುಡಿ – 1 ಟೀಸ್ಪೂನ್
    ಏಲಕ್ಕಿ ಪುಡಿ – ಕಾಲು ಟೀಸ್ಪೂನ್
    ಅಡುಗೆ ಸೋಡಾ – 1 ಟೀಸ್ಪೂನ್
    ಬೇಕಿಂಗ್ ಪೌಡರ್ – ಮುಕ್ಕಾಲು ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್
    ಬೆಣ್ಣೆ – 8 ಟೀಸ್ಪೂನ್
    ಸಕ್ಕರೆ ಪುಡಿ – ಮುಕ್ಕಾಲು ಕಪ್
    ಕಂದು ಸಕ್ಕರೆ – ಅರ್ಧ ಕಪ್
    ಮೊಟ್ಟೆ – 2
    ಮೊಸರು – 1 ಕಪ್
    ವೆನಿಲ್ಲಾ ಸಾರ – 1 ಟೀಸ್ಪೂನ್
    ತಾಜಾ ಬೆರಿ ಹಣ್ಣುಗಳು – ಒಂದೂವರೆ ಕಪ್ ಇದನ್ನೂ ಓದಿ: ಮಕ್ಕಳಿಗಾಗಿ ಚೋಕೋ ಚಿಪ್ ಕುಕ್ಕೀಸ್..!

    ಮಾಡುವ ವಿಧಾನ:
    * ಮೊದಲಿಗೆ ಓವನ್ ಅನ್ನು 175 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
    * ಒಂದು ಬೌಲ್‌ನಲ್ಲಿ ಸಕ್ಕರೆ, ಮಸಾಲೆ ಪದಾರ್ಥಗಳು, ಬೆಣ್ಣೆ ಹಾಗೂ ಮೈದಾ ಹಿಟ್ಟು ಸೇರಿಸಿ ಮಿಶ್ರಣ ಮಾಡಿ, ಪಕ್ಕಕ್ಕಿಡಿ.
    * ಈಗ ಇನ್ನೊಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಅಡುಗೆ ಸೋಡಾ, ಬೇಕಿಂಗ್ ಪೌಡರ್, ದಾಲ್ಚಿನ್ನಿ ಪುಡಿ, ಏಲಕ್ಕಿ ಪುಡಿ, ಉಪ್ಪು, ಬೆಣ್ಣೆ ಹಾಗೂ ಸಕ್ಕರೆ ಸೇರಿಸಿ ನಯವಾಗುವಂತೆ ಬೀಟ್ ಮಾಡಿಕೊಳ್ಳಿ.
    * ನಂತರ ಮೊಸರು ಹಾಗೂ ವೆನಿಲ್ಲಾ ಸಾರ ಸೇರಿಸಿ, ಬೌಲ್‌ನಲ್ಲಿ ಮಿಶ್ರಣ ಮಾಡಿಟ್ಟಿದ್ದ ಒಣ ಪದಾರ್ಥಗಳನ್ನು ಸೇರಿಸಿ, ಚೆನ್ನಾಗಿ ಸಂಯೋಜಿಸುವಂತೆ ಮಿಕ್ಸ್ ಮಾಡಿ.
    * ಬ್ಯಾಟರ್ ಅನ್ನು ಬೇಕಿಂಗ್ ಪ್ಯಾನ್‌ಗೆ ಹಾಕಿ, ಮೇಲ್ಮೈಯನ್ನು ಸಮತಟ್ಟುಗೊಳಿಸಿ. ಅದರ ಮೇಲೆ ಬ್ಲೂಬೆರಿ ಹಣ್ಣುಗಳನ್ನು ಹರಡಿ.
    * ಈಗ ಕೇಕ್ ಅನ್ನು ಸುಮಾರು 40-45 ನಿಮಿಷಗಳ ಕಾಲ ಓವನ್‌ನಲ್ಲಿ ಇರಿಸಿ, ಬೇಯಿಸಿಕೊಳ್ಳಿ.
    * ಇದೀಗ ಬ್ಲೂಬೆರಿ ಕಾಫಿ ಕೇಕ್ ತಯಾರಾಗಿದ್ದು ಮಕ್ಕಳಿಗೆ ಸವಿಯಲು ನೀಡಿ. ಇದನ್ನೂ ಓದಿ: 30 ನಿಮಿಷ ಸಾಕು – ಫ್ರೆಂಚ್ ಬ್ರೆಡ್ ಪಿಜ್ಜಾ ಸುಲಭವಾಗಿ ಮಾಡಿ

    
    

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏರ್ ಫ್ರೈಯರ್ ಸ್ಪೈಸಿ ಹನಿ ಚಿಕನ್ ವಿಂಗ್ಸ್ ರೆಸಿಪಿ

    ಏರ್ ಫ್ರೈಯರ್ ಸ್ಪೈಸಿ ಹನಿ ಚಿಕನ್ ವಿಂಗ್ಸ್ ರೆಸಿಪಿ

    ರಿಗರಿಯಾದ ಏರ್ ಫ್ರೈಯರ್ ಸ್ಪೈಸಿ ಹನಿ ಚಿಕನ್ ವಿಂಗ್ಸ್ ಪಾರ್ಟಿ, ಗೇಮ್ಸ್ ಅಥವಾ ಯಾವುದೇ ಲಘು ಭೋಜನಕ್ಕೆ ಪರ್ಫೆಕ್ಟ್ ಖಾದ್ಯವಾಗಿದೆ. ಸಿಹಿ ಹಾಗೂ ಮಸಾಲೆಯುಕ್ತ ಚಿಕನ್ ವಿಂಗ್ಸ್ ಅನ್ನು ಏರ್ ಫ್ರೈಯರ್‌ನಲ್ಲಿ ಮಾಡೋದು ಇತರ ವಿಧಾನಗಳಿಗಿಂತಲೂ ಆರೋಗ್ಯಕರ ಎನಿಸುತ್ತದೆ. ಏಕೆಂದರೆ ಇದನ್ನು ಹುರಿಯಲು ಹೆಚ್ಚು ಎಣ್ಣೆಯ ಅಗತ್ಯವಿಲ್ಲ. ಸಂಡೇ ಫ್ರೀ ಟೈಮ್‌ನಲ್ಲಿ ಒಮ್ಮೆ ಈ ರೆಸಿಪಿ ಟ್ರೈ ಮಾಡಿ. ನಿಮ್ಮ ನೆಚ್ಚಿನ ಏರ್ ಫ್ರೈಯರ್ ರೆಸಿಪಿಗಳಲಿ ಇದು ಒಂದಾಗೋದು ಖಂಡಿತ.

    ಬೇಕಾಗುವ ಪದಾರ್ಥಗಳು:
    ಚಿಕನ್ ವಿಂಗ್ಸ್ – 1 ಕೆಜಿ
    ಉಪ್ಪು – ಅರ್ಧ ಟೀಸ್ಪೂನ್
    ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಆಲಿವ್ ಎಣ್ಣೆ – 1 ಟೀಸ್ಪೂನ್
    ಸ್ಪೈಸಿ ಹನಿ ಸಾಸ್ ತಯಾರಿಸಲು:
    ಕಿತ್ತಳೆ ರಸ – ಅರ್ಧ ಕಪ್
    ನಿಂಬೆ ರಸ – 3
    ಬೀಜ ಬೇರ್ಪಡಿಸಿದ ಒಣ ಕೆಂಪು ಮೆಣಸಿನಕಾಯಿ – 6
    ಆಪಲ್ ವಿನೆಗರ್ – ಒಂದೂವರೆ ಟೀಸ್ಪೂನ್
    ಬೆಳ್ಳುಳ್ಳಿ – 2
    ಹೆಚ್ಚಿದ ಈರುಳ್ಳಿ – 2 ಟೀಸ್ಪೂನ್
    ನೀರು – ಅರ್ಧ ಕಪ್
    ಜೇನುತುಪ್ಪ – 2 ಟೀಸ್ಪೂನ್ ಇದನ್ನೂ ಓದಿ: 30 ನಿಮಿಷಗಳಲ್ಲಿ ಮಾಡಿ ಚೀಸೀ ಗಾರ್ಲಿಕ್ ಸಿಗಡಿ

    ಮಾಡುವ ವಿಧಾನ:
    * ಮೊದಲಿಗೆ ಚಿಕನ್ ವಿಂಗ್ಸ್‌ಗಳನ್ನು ಸ್ವಚ್ಛಗೊಳಿಸಿ, ಒಂದು ಬಟ್ಟಲಿಗೆ ಹಾಕಿ ಉಪ್ಪು, ಕರಿಮೆಣಸು, ಆಲಿವ್ ಎಣ್ಣೆ ಸೇರಿಸಿ, ಚೆನ್ನಾಗಿ ಸಂಯೋಜಿಸುವಂತೆ ಮಿಶ್ರಣ ಮಾಡಿ.
    * ಏರ್ ಫ್ರೈಯರ್ ಅನ್ನು 390 ಡಿಗ್ರಿಗೆ 20-25 ನಿಮಿಷಗಳ ಕಾಲ ಪೂರ್ವಭಾವಿಯಾಗಿ ಕಾಯಿಸಿ, ಟ್ರೇಯಲ್ಲಿ ಚಿಕನ್ ವಿಂಗ್ಸ್‌ಗಳನ್ನು ಇರಿಸಿ, ಬೇಯಿಸಿಕೊಳ್ಳಿ. (ನಿಮ್ಮ ಬಳಿ ಚಿಕ್ಕ ಏರ್ ಫ್ರೈಯರ್ ಇದ್ದರೆ ಬ್ಯಾಚ್‌ಗಳಲ್ಲಿ ಬೇಯಿಸಿಕೊಳ್ಳಬಹುದು)
    * ಈ ನಡುವೆ ಸಾಸ್ ತಯಾರಿಸಲು ಒಂದು ಪಾತ್ರೆಯಲ್ಲಿ ಅರ್ಧ ಕಪ್ ನೀರು ಹಾಕಿ ಬೀಜ ಬೇರ್ಪಡಿಸಿದ ಒಣ ಕೆಂಪು ಮೆಣಸಿನಕಾಯಿ ಅದರಲ್ಲಿ ಹಾಕಿ ಸುಮಾರು 5 ನಿಮಿಷಗಳ ಕಾಲ ಕುದಿಸಿ.
    * ಬ್ಲೆಂಡರ್‌ಗೆ ಬೆಳ್ಳುಳ್ಳಿ, ಈರುಳ್ಳಿ, ಕಿತ್ತಳೆ ರಸ, ನಿಂಬೆ ರಸ ಹಾಗೂ ವಿನೆಗರ್ ಹಾಕಿ, ಕುದಿಸಿಕೊಂಡಿದ್ದ ಮೆಣಸನ್ನು ನೀರು ಸಮೇತವಾಗಿ ಅದರಲ್ಲಿ ಸುರಿದು ನಯವಾಗುವತನಕ ಬ್ಲೆಂಡ್ ಮಾಡಿ.
    * ಒಂದು ಪಾತ್ರೆಗೆ 1 ಟೀಸ್ಪೂನ್ ಆಲಿವ್ ಎಣ್ಣೆ ಹಾಕಿ ಬಿಸಿ ಮಾಡಿ, ತಯಾರಿಸಿಟ್ಟ ಸಾಸ್ ಅನ್ನು ಅದರಲ್ಲಿ ಹಾಕಿ ಸ್ವಲ್ಪ ದಪ್ಪವಾಗುವವರೆಗೆ ಸುಮಾರು 10 ನಿಮಿಷ ಬಿಸಿ ಮಾಡಿ.
    * ಅದು ಬಿಸಿಯಾಗುತ್ತಿದ್ದಂತೆ ಜೇನುತುಪ್ಪ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕರಿಮೆಣಸಿನ ಪುಡಿ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
    * ಏರ್ ಫ್ರೈಯರ್‌ನಿಂದ ಚಿಕನ್ ವಿಂಗ್ಸ್‌ಗಳನ್ನು ತೆಗೆದು, ಒಂದು ಬಟ್ಟಲಿನಲ್ಲಿರಿಸಿ. ಅದರ ಮೇಲೆ ತಯಾರಿಸಿಟ್ಟ ಸಾಸ್ ಸುರಿದು ಚಿಕನ್‌ಗೆ ಚೆನ್ನಾಗಿ ಲೇಪನವಾಗುವಂತೆ ಮಿಶ್ರಣ ಮಾಡಿ.
    * ಇದೀಗ ಸ್ಪೈಸಿ ಹನಿ ಚಿಕನ್ ವಿಂಗ್ಸ್ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಟ್ರೈ ಮಾಡಿ ಬಾರ್ಬೆಕ್ಯೂ ಚಿಕನ್ ಸಲಾಡ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]