Tag: recipe

  • ಸುಲಭವಾಗಿ ಮಾಡಿ ರುಚಿಕರ ಪಾಲಕ್ ರೈಸ್

    ಸುಲಭವಾಗಿ ಮಾಡಿ ರುಚಿಕರ ಪಾಲಕ್ ರೈಸ್

    ನೇಕ ಜನರಿಗೆ ರೈಸ್ ಐಟಂಗಳು ಹೆಚ್ಚು ಪ್ರಿಯವಾಗಿರುತ್ತದೆ. ಬೆಳಗ್ಗಿನ ತಿಂಡಿಗೆ, ಮಕ್ಕಳ ಲಂಚ್ ಬಾಕ್ಸ್‌ಗೆ ರೈಸ್ ಐಟಂಗಳನ್ನು ಮಾಡುತ್ತಾರೆ. ಇದನ್ನು ಮಕ್ಕಳು ಕೂಡ ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಕಲರ್‌ಫುಲ್ ಆದ ಪಾಲಕ್ ರೈಸ್ ಹೇಗೆ ಮಾಡುವುದು ಎಂಬುದನ್ನು ತಿಳಿಸುತ್ತಿದ್ದೇವೆ. ಪಾಲಕ್ ಸೊಪ್ಪು ಕಬ್ಬಿಣಾಂಶವನ್ನು ಒಳಗೊಂಡಿದೆ. ಇದನ್ನು ನಮ್ಮ ನಿತ್ಯ ಆಹಾರದಲ್ಲಿ ಸೇವಿಸುವುದರಿಂದ ಕಣ್ಣಿನ ದೃಷ್ಟಿ ಉತ್ತಮವಾಗಿರುತ್ತದೆ. ಅಲ್ಲದೇ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ. ಹಾಗಿದ್ರೆ ಪಾಲಕ್ ರೈಸ್ ಅನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಕ್ರೀಮಿ ಚಾಕ್ಲೇಟ್ ಮೋಸ್ ಮನೆಯಲ್ಲಿ ಟ್ರೈ ಮಾಡಿ

    ಬೇಕಾಗುವ ಸಾಮಗ್ರಿಗಳು:
    ಅನ್ನ – 1 ಬೌಲ್
    ಬೇಯಿಸಿದ ಪಾಲಕ್ ಸೊಪ್ಪು – ಅರ್ಧ ಕಪ್
    ಕರಿಬೇವು – ಸ್ವಲ್ಪ
    ಚೆಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ – ಅಗತ್ಯಕ್ಕೆ ತಕ್ಕಷ್ಟು
    ಜೀರಿಗೆ – ಅರ್ಧ ಚಮಚ
    ಅರಶಿಣ – ಅರ್ಧ ಚಮಚ
    ಹಸಿರು ಮೆಣಸಿನಕಾಯಿ – 3
    ಹೆಚ್ಚಿದ ಈರುಳ್ಳಿ – 1
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ಬೇಯಿಸಿದ ಪಾಲಕ್ ಸೊಪ್ಪನ್ನು ಮಿಕ್ಸಿ ಜಾರಿಗೆ ಹಾಕಿ ಚನ್ನಾಗಿ ರುಬ್ಬಿಕೊಳ್ಳಿ.
    * ಈಗ ಒಂದು ಬಾಣಾಲೆಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ಮೇಲೆ ಜೀರಿಗೆ, ಪಲಾವ್ ಎಲೆ, ಚೆಕ್ಕೆ, ಲವಂಗ ಹಾಗೂ ಏಲಕ್ಕಿಯನ್ನು ಹಾಕಿಕೊಂಡು ಸ್ವಲ್ಪ ಫ್ರೈ ಮಾಡಿಕೊಳ್ಳಿ.
    * ಬಳಿಕ ಅದಕ್ಕೆ ಕರಿಬೇವು ಮತ್ತು ಉದ್ದ ಹೆಚ್ಚಿದ ಹಸಿರು ಮೆಣಸಿನಕಾಯಿ, ಈರುಳ್ಳಿಯನ್ನು ಹಾಕಿಕೊಂಡು ಚನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿಕೊಂಡು ಹಸಿವಾಸನೆ ಹೋಗುವವರೆಗೆ ತಿರುವಿಕೊಳ್ಳಿ.
    * ಈಗ ಇದಕ್ಕೆ ರುಬ್ಬಿದ ಪಾಲಕ್ ಪೇಸ್ಟ್ ಅನ್ನು ಹಾಕಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಅರ್ಧ ಚಮಚ ಅರಶಿಣ ಹಾಕಿ ಚನ್ನಾಗಿ ಫ್ರೈ ಮಾಡಿಕೊಳ್ಳಿ.
    * ಈಗ ಇದಕ್ಕೆ 2 ಚಮಚ ನೀರನ್ನು ಹಾಕಿಕೊಂಡು ಎಣ್ಣೆ ಬಿಡುವವರೆಗೆ ಕುದಿಸಿಕೊಳ್ಳಿ. ಬಳಿಕ ಇದಕ್ಕೆ ಅನ್ನ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅನ್ನ ಪಾಲಕ್ ಪೇಸ್ಟ್ ಜೊತೆ ಹೊಂದಿಕೊಳ್ಳಬೇಕು.
    * ಈಗ ಪಾಲಕ್ ರೈಸ್ ತಿನ್ನಲು ರೆಡಿ. ಇದನ್ನು ಒಂದು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿಕೊಂಡು ಸಲಾಡ್ ಜೊತೆ ತಿನ್ನಲು ಕೊಡಿ. ಇದನ್ನೂ ಓದಿ: ಗಾರ್ಲಿಕ್ ಬ್ರೆಡ್ ಮನೆಯಲ್ಲೇ ಟ್ರೈ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಂಪಲ್, ಹೆಲ್ತಿ ಆವಕಾಡೋ ಟೋಸ್ಟ್

    ಸಿಂಪಲ್, ಹೆಲ್ತಿ ಆವಕಾಡೋ ಟೋಸ್ಟ್

    ಪ್ರತಿಯೊಬ್ಬರೂ ಮನೆಯಲ್ಲಿ ತಕ್ಷಣ ತಯಾರಿಸೋ ಅಡುಗೆಯಾಗಿ ಆರೋಗ್ಯಕರ, ತೃಪ್ತಿದಾಯಕ ಉಪಹಾರ ಅಥವಾ ಲಘು ಆಹಾರವಾಗಿ ಆವಕಾಡೋ ಟೋಸ್ಟ್ ಮಾಡೋದು ಹೇಗೆ ಎಂಬುದು ತಿಳಿದುಕೊಳ್ಳೋದು ಅಗತ್ಯವಿದೆ. ಗಾರ್ಲಿಕ್ ಬ್ರೆಡ್‌ನೊಂದಿಗೆ ಈ ಆವಕಾಡೋ ಟೋಸ್ಟ್ ಬೆಸ್ಟ್ ಕಾಂಬೋ ಆಗಬಲ್ಲದು. ಕೇವಲ 15 ನಿಮಿಷಗಳಲ್ಲಿ ಇದನ್ನು ಸಿಂಪಲ್ ಆಗಿ ಮಾಡಬಹುದು. ಆರೋಗ್ಯಕರವಾದ ಈ ರೆಸಿಪಿಯನ್ನು ನೀವೂ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಗಾರ್ಲಿಕ್ ಬ್ರೆಡ್ – 8-10 ಸ್ಲೈಸ್
    ಆಲಿವ್ ಎಣ್ಣೆ – 1 ಟೀಸ್ಪೂನ್
    ಆವಕಾಡೋ – 1
    ಹೆಚ್ಚಿದ ಬೆಳ್ಳುಳ್ಳಿ – 1
    ಓರಿಗಾನೋ – ಅರ್ಧ ಟೀಸ್ಪೂನ್
    ಕರಿಮೆಣಸಿನ ಪುಡಿ – ಕಾಲು ಟೀಸ್ಪೂನ್
    ನಿಂಬೆ ರಸ – ಕಾಲು ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಗಾರ್ಲಿಕ್ ಬ್ರೆಡ್ ಮನೆಯಲ್ಲೇ ಟ್ರೈ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಆವಕಾಡೋವನ್ನು ತೆಗೆದುಕೊಂಡು, ಚಾಕು ಸಹಾಯದಿಂದ ಸುತ್ತಲೂ ಅರ್ಧ ಭಾಗಕ್ಕೆ ಸೀಳಿ, 2 ಭಾಗ ಮಾಡಿಕೊಳ್ಳಿ. ಅದರ ಬೀಜವನ್ನು ಬೇರ್ಪಡಿಸಿಕೊಳ್ಳಿ.
    * ಸ್ಪೂನ್ ಸಹಾಯದಿಂದ ಆವಕಾಡೋ ಒಳಭಾಗವನ್ನು ಸ್ಕೂಪ್ ಮಾಡುವ ಮೂಲಕ ಸಿಪ್ಪೆಯಿಂದ ಬೇರ್ಪಡಿಸಿಕೊಳ್ಳಿ.
    * ಈಗ ಆವಕಾಡೋ ತಿರುಳನ್ನು ಮಧ್ಯಮ ಗಾತ್ರದಲ್ಲಿ ಚಾಕು ಸಹಾಯದಿಂದ ಕತ್ತರಿಸಿಕೊಳ್ಳಿ.
    * ಈಗ ಮಿಕ್ಸರ್ ಜಾರ್‌ನಲ್ಲಿ ಆವಕಾಡೋ ತಿರುಳು, ಬೆಳ್ಳುಳ್ಳಿ ಸೇರಿಸಿ ರುಬ್ಬಿಕೊಳ್ಳಿ.
    * ಬಳಿಕ ಆವಕಾಡೋ ಮಿಶ್ರಣಕ್ಕೆ ಓರಿಗಾನೋ, ಕರಿಮೆಣಸಿನ ಪುಡಿ, ಉಪ್ಪು ಹಾಗೂ ನಿಂಬೆ ರಸ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ ಪಕ್ಕಕ್ಕಿಡಿ.
    * ಈಗ ತವಾವನ್ನು ಬಿಸಿ ಮಾಡಿ, ಆಲಿವ್ ಎಣ್ಣೆ ಹಾಕಿ, ಬ್ರೆಡ್ ಸ್ಲೈಸ್‌ಗಳನ್ನು ಮಧ್ಯಮ ಉರಿಯಲ್ಲಿ ಎರಡೂ ಕಡೆ ಟೋಸ್ಟ್ ಮಾಡಿಕೊಳ್ಳಿ.
    * ಈಗ ಆವಕಾಡೋ ಮಿಶ್ರಣವನ್ನು ಬ್ರೆಡ್ ಸ್ಲೈಸ್‌ಗಳ ಮೇಲೆ ಹರಡಿಕೊಳ್ಳಿ.
    * ಇದೀಗ ಸಿಂಪಲ್ ಹಾಗೂ ಆರೋಗ್ಯಕರ ಆವಕಾಡೋ ಟೋಸ್ಟ್ ತಯಾರಾಗಿದ್ದು ತಕ್ಷಣವೇ ಇದನ್ನು ಸವಿಯಿರಿ. ಇದನ್ನೂ ಓದಿ: ಸುಲಭವಾಗಿ ಮಾಡಿ ಮಶ್ರೂಮ್ ಸ್ಯಾಂಡ್‌ವಿಚ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ರೀಮಿ ಚಾಕ್ಲೇಟ್ ಮೋಸ್ ಮನೆಯಲ್ಲಿ ಟ್ರೈ ಮಾಡಿ

    ಕ್ರೀಮಿ ಚಾಕ್ಲೇಟ್ ಮೋಸ್ ಮನೆಯಲ್ಲಿ ಟ್ರೈ ಮಾಡಿ

    ಚಾಕ್ಲೇಟ್ ಮೋಸ್ ಕ್ರೀಮಿ, ರಿಚ್, ಸಿಂಪಲ್ ಆದ ಸಿಹಿಯಾಗಿದ್ದು, ಯಾವುದೇ ಪಾರ್ಟಿಗೂ ಸೂಕ್ತವಾಗಿದೆ. ಕೆಲವೇ ಪದಾರ್ಥಗಳನ್ನು ಬಳಸಿ ಇದನ್ನು ಮನೆಯಲ್ಲಿ ಸುಲಭವಾಗಿ ಮಾಡಬಹುದು. ಇದರ ಕ್ರೀಮಿ ಟೆಕ್ಸ್‌ಚರ್ ಮಕ್ಕಳಿ ಇಷ್ಟವಾಗುತ್ತದೆ. ನೀವೂ ಇದನ್ನು ಸಿಂಪಲ್ ಆಗಿ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಚಾಕ್ಲೇಟ್ – 250 ಗ್ರಾಂ
    ನೀರು – ಅರ್ಧ ಕಪ್ (2 ಪ್ರತ್ಯೇಕ ಬಳಕೆಗೆ)
    ಬೆಣ್ಣೆ – 2 ಟೀಸ್ಪೂನ್
    ವೆನಿಲ್ಲಾ ಸಾರ – 1 ಟೀಸ್ಪೂನ್
    ಮೊಟ್ಟೆಯ ಹಳದಿ ಬಾಗ – 3
    ಸಕ್ಕರೆ ಪುಡಿ – ಕಾಲು ಕಪ್
    ವಿಪ್ಪಿಂಗ್ ಕ್ರೀಮ್ – ಒಂದೂವರೆ ಕಪ್ ಇದನ್ನೂ ಓದಿ: ಒಳಗಡೆ ಮೃದು, ಹೊರಗಡೆ ಕ್ರಂಚಿ – ಸುಲಭದ ಶುಂಠಿ ಕುಕೀಸ್ ಹೀಗೆ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬೌಲ್‌ನಲ್ಲಿ ವಿಪ್ಪಿಂಗ್ ಕ್ರೀಮ್ ಹಾಕಿಕೊಂಡು, ಅದನ್ನು ಎಲೆಕ್ಟ್ರಿಕ್ ವಿಸ್ಕ್ ಬಳಸಿ ಚೆನ್ನಾಗಿ ಬೀಟ್ ಮಾಡಿಕೊಳ್ಳಿ.
    * ಕ್ರೀಮ್ ಮೃದುವಾದ ನಂತರ ಅದನ್ನು ಸೆಟ್ ಆಗಲು ಫ್ರಿಡ್ಜ್‌ನಲ್ಲಿ ಇಡಿ.
    * ಡಬಲ್ ಬಾಯ್ಲರ್ ಅಥವಾ ಒಂದು ಪಾತ್ರೆಯಲ್ಲಿ ನೀರನ್ನು ಮಧ್ಯಮ ಉರಿಯಲ್ಲಿ ಕಾಯಿಸಿಕೊಳ್ಳಿ. ಅದರ ಮೇಲೆ ಡಬಲ್ ಬಾಯ್ಲರ್‌ನ ಇನ್ನೊದು ಭಾಗವನ್ನಿಡಿ. ಅಥವಾ ಇನ್ನೊಂದು ಪಾತ್ರೆಯನ್ನಿಡಿ.
    * ಅದಕ್ಕೆ ಚಾಕ್ಲೇಟ್, ಕಾಲು ಕಪ್ ನೀರು, ಬೆಣ್ಣೆ, ವೆನಿಲ್ಲಾ ಸಾರ ಸೇರಿಸಿ.
    * ಚಾಕ್ಲೇಟ್ ಸಂಪೂರ್ಣ ಕರಗಿದ ಬಳಿಕ ಅದನ್ನು ನಯವಾಗಿ ಮಿಶ್ರಣ ಮಾಡಿಕೊಳ್ಳಿ. ಉರಿಯನ್ನು ಆಫ್ ಮಾಡಿ, ಪಕ್ಕಕ್ಕಿಡಿ.
    * ತಳವಿರುವ ಪಾತ್ರೆಯಲ್ಲಿ ಕಡಿಮೆ ಉರಿಯಲ್ಲಿ ಮೊಟ್ಟೆಯ ಹಳದಿ ಭಾಗವನ್ನು ಹಾಕಿ, ಅದಕ್ಕೆ ಕಾಲು ಕಪ್ ನೀರು, ಸಕ್ಕರೆ ಸೇರಿಸಿ ನಿರಂತರವಾಗಿ ಮಿಶ್ರಣ ಮಾಡುತ್ತಿರಿ.
    * ಶಾಖ 160 ಡಿಗ್ರಿ ಪ್ಯಾರಹೀಟ್ ಆಗುವವರೆಗೂ ಮಿಶ್ರಣ ಮಾಡುತ್ತಿರಿ. ಇದಕ್ಕೆ ಸುಮಾರು 10 ನಿಮಿಷ ತೆಗೆದುಕೊಳ್ಳತ್ತದೆ. ಮೊಟ್ಟೆ ಬೆಂದು ಗಟ್ಟಿಯಾಗದಂತೆ ಎಚ್ಚರವಹಿಸಿ, ದೂರ ಹೋಗದೇ ನಿರಂತರವಾಗಿ ಬೆರೆಸುತ್ತಿರಿ. ಬಳಿಕ ಉರಿಯನ್ನು ಆಫ್ ಮಾಡಿ.
    * ತಯಾರಿಸಿಟ್ಟ ಎಲ್ಲಾ ಮಿಶ್ರಣ ತಣ್ಣಗಾದ ಬಳಿಕ ಮೊಟ್ಟೆಯ ಮಿಶ್ರಣವನ್ನು ಚಾಕ್ಲೇಟ್ ಮಿಶ್ರಣಕ್ಕೆ ಹಾಕಿ, ಚೆನ್ನಾಗಿ ಬೆರೆಸಿಕೊಳ್ಳಿ.
    * ಒಂದು ಅಗಲದ ಪಾತ್ರೆಯಲ್ಲಿ ಐಸ್ ಕ್ಯೂಬ್‌ಗಳನ್ನಿಟ್ಟು, ಅದರ ಮೇಲೆ ಚಾಕ್ಲೇಟ್ ಮಿಶ್ರಣದ ಪಾತ್ರೆಯನ್ನು ಇಡಿ. ಸುಮಾರು 5-7 ನಿಮಿಷಗಳ ಕಾಲ ನಿಧಾನವಾಗಿ ಆಗಾಗ ಕೈಯಾಡಿಸುತ್ತಾ ಚಾಕ್ಲೇಟ್ ಅನ್ನು ತಣ್ಣಗಾಗಲು ಬಿಡಿ.
    * ನಯವಾಗಿ ತಣ್ಣಗಾದ ಚಾಕ್ಲೇಟ್ ಮಿಶ್ರಣಕ್ಕೆ ಫ್ರಿಜ್‌ನಲ್ಲಿ ಇಟ್ಟಿದ್ದ ಕ್ರೀಮ್ ಅನ್ನು ಸೇರಿಸಿ. ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
    * ಇದೀಗ ಚಾಕ್ಲೇಟ್ ಮೋಸ್ ತಯಾರಾಗಿದೆ. ಇದನ್ನು ಡೆಸರ್ಟ್ ಕಪ್‌ಗಳಲ್ಲಿ ಬಡಿಸಿ, ಸವಿಯಿರಿ. ಇದನ್ನೂ ಓದಿ: ಸುಲಭವಾಗಿ ಮಾಡಿ ಮಶ್ರೂಮ್ ಸ್ಯಾಂಡ್‌ವಿಚ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೇಸ್ಟಿ ಚೈನೀಸ್ ಪೆಪ್ಪರ್ ಚಿಕನ್

    ಟೇಸ್ಟಿ ಚೈನೀಸ್ ಪೆಪ್ಪರ್ ಚಿಕನ್

    ರುಚಿಕರವಾದ ಚೈನೀಸ್ ಪೆಪ್ಪರ್ ಚಿಕನ್ ಅನ್ನು ಅನ್ನ ಅಥವಾ ನೂಡಲ್ಸ್‌ನೊಂದಿಗೆ ಸವಿಯಬಹುದು. ಸುಲಭ ಹಾಗೂ ತಕ್ಷಣವೇ ತಯಾರಿಸಬಹುದಾದ ಈ ರೆಸಿಪಿ ತಣ್ಣಗಿನ ದಿನಗಳಲ್ಲಿ ಬೆಚ್ಚಗೆ ಸವಿಯಲು ಮಜವೆನಿಸುತ್ತದೆ. ಚೈನೀಸ್ ಪೆಪ್ಪರ್ ಚಿಕನ್ ಮಾಡೋದು ಹೇಗೆಂದು ನಾವಿಂದು ನಿಮಗೆ ಹೇಳಿಕೊಡುತ್ತೇವೆ.

    ಬೇಕಾಗುವ ಪದಾರ್ಥಗಳು:
    ಮೂಳೆಗಳಿಲ್ಲದ ಚಿಕನ್ – ಅರ್ಧ ಕೆಜಿ
    ಮಧ್ಯಮ ಗಾತ್ರದಲ್ಲಿ ಹೆಚ್ಚಿದ ಕ್ಯಾಪ್ಸಿಕಮ್ – 1
    ಕೊತ್ತಂಬರಿ ಸೊಪ್ಪು – 2
    ಹೆಚ್ಚಿದ ಸ್ಪ್ರಿಂಗ್ ಆನಿಯನ್ – 2
    ಮಧ್ಯಮ ಗಾತ್ರದಲ್ಲಿ ಕತ್ತರಿಸಿದ ಈರುಳ್ಳಿ – 1
    ಕೊಚ್ಚಿದ ಬೆಳ್ಳುಳ್ಳಿ – 1 ಟೀಸ್ಪೂನ್
    ಸೋಯಾ ಸಾಸ್ – ಕಾಲು ಕಪ್
    ಚಿಕನ್ ಸ್ಟಾಕ್ – ಕಾಲು ಕಪ್
    ಕರಿಮೆಣಸಿನ ಪುಡಿ – 1 ಟೀಸ್ಪೂನ್
    ಎಳ್ಳಿನ ಎಣ್ಣೆ – 1 ಟೀಸ್ಪೂನ್
    ಸಕ್ಕರೆ – ಅರ್ಧ ಟೀಸ್ಪೂನ್
    ಕಾರ್ನ್ಫ್ಲೋರ್ – 2 ಟೀಸ್ಪೂನ್
    ಎಣ್ಣೆ – ಒಂದೂವರೆ ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಕೊರಿಯನ್ ಸಾಂಪ್ರದಾಯಿಕ ಆಹಾರ ಕಿಮ್ಚಿ ಮಾಡೋದು ಹೇಗೆ ಗೊತ್ತಾ?

    ಮಾಡುವ ವಿಧಾನ:
    * ಮೊದಲಿಗೆ ಚಿಕನ್ ಅನ್ನು ಸ್ವಚ್ಛಗೊಳಿಸಿ, ಬೈಟ್ಸ್ ಗಾತ್ರದಲ್ಲಿ ಕತ್ತರಿಸಿಕೊಳ್ಳಿ.
    * ಅದಕ್ಕೆ ಅರ್ಧ ಟೀಸ್ಪೂನ್ ಕರಿಮೆಣಸಿನ ಪುಡಿ, 2 ಟೀಸ್ಪೂನ್ ಸೋಯಾ ಸಾಸ್, ಉಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮ್ಯಾರಿನೇಟ್ ಆಗಲು ಪಕ್ಕಕ್ಕೆ ಇಡಿ.
    * ಒಂದು ಬಟ್ಟಲಿನಲ್ಲಿ ಉಳಿದ ಸೋಯಾ ಸಾಸ್, ಎಳ್ಳಿನ ಎಣ್ಣೆ, ಚಿಕನ್ ಸ್ಟಾಕ್, ಉಳಿದ ಕರಿಮೆಣಸಿನ ಪುಡಿ ಸೇರಿಸಿ ಬೆರೆಸಿಕೊಳ್ಳಿ.
    * ಇನ್ನೊಂದು ಪಿಂಗಣಿಯಲ್ಲಿ ಕಾರ್ನ್ ಫ್ಲೋರ್ ಹಾಗೂ ಅದಕ್ಕೆ ಸ್ವಲ್ಪ ನೀರು ಬೆರೆಸಿ, ಮಿಶ್ರಣ ಮಾಡಿ ಸ್ಲರಿ ತಯಾರಿಸಿ. ಇದನ್ನು ಸಾಸ್ ಮಿಶ್ರಣಕ್ಕೆ ಸೇರಿಸಿ.
    * ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಸೇರಿಸಿ, ಹುರಿದುಕೊಳ್ಳಿ.
    * ಚಿಕನ್ ಬೇಯುವ ವೇಳೆ ಈರುಳ್ಳಿ, ಕೊಚ್ಚಿದ ಬೆಳ್ಳುಳ್ಳಿ, ಕ್ಯಾಪ್ಸಿಕಮ್ ಸ್ಪ್ರಿಂಗ್ ಆನಿಯನ್ ಸೇರಿಸಿ 3 ನಿಮಿಷಗಳ ಕಾಲ ಹುರಿಯಿರಿ.
    * ಅದಕ್ಕೆ ತಯಾರಿಸಿಟ್ಟ ಸಾಸ್ ಬೆರೆಸಿ ಮಿಶ್ರಣ ದಪ್ಪವಾಗುವವರೆಗೆ ಟಾಸ್ ಮಾಡಿ. ಬಳಿಕ ಉರಿಯನ್ನು ಆಫ್ ಮಾಡಿ.
    * ಇದೀಗ ಚೈನೀಸ್ ಪೆಪ್ಪರ್ ಚಿಕನ್ ತಯಾರಾಗಿದ್ದು, ನೂಡಲ್ಸ್ ಅಥವಾ ಅನ್ನದೊಂದಿಗೆ ಬೆಚ್ಚಗೆ ಸವಿಯಿರಿ. ಇದನ್ನೂ ಓದಿ: ಪಾರ್ಟಿಗೆ ಸ್ಟಾರ್ಟರ್ – ಮಟನ್ ಶಮಿ ಕಬಾಬ್ ಮಾಡಿ ನೋಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಾರ್ಲಿಕ್ ಬ್ರೆಡ್ ಮನೆಯಲ್ಲೇ ಟ್ರೈ ಮಾಡಿ

    ಗಾರ್ಲಿಕ್ ಬ್ರೆಡ್ ಮನೆಯಲ್ಲೇ ಟ್ರೈ ಮಾಡಿ

    ದೊಡ್ಡ ದೊಡ್ಡ ಮಾಲ್‌ಗಳಲ್ಲಿ, ಹೋಟೆಲ್‌ಗಳಲ್ಲಿ ಅಥವಾ ಡೋಮಿನೋಸ್‌ನ ಆಹಾರದ ಮೆನುವಿನಲ್ಲಿ ಗಾರ್ಲಿಕ್ ಬ್ರೆಡ್ ಇದ್ದೇ ಇರುತ್ತದೆ. ಅನೇಕರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲೂ ಮಕ್ಕಳಿಗೆ ಈ ರೀತಿಯಾದ ತಿಂಡಿ ಬಹುಬೇಗ ಸೇರುತ್ತದೆ. ಹೊರಗಡೆ ಅಂಗಡಿಗಳಲ್ಲಿ ಇವೆಲ್ಲಾ ಸ್ವಲ್ಪ ದುಬಾರಿಯಾಗಿದೆ. ಆದ್ದರಿಂದ ಇವತ್ತಿನ ನಮ್ಮ ರೆಸಿಪಿಯಲ್ಲಿ ಮನೆಯಲ್ಲೇ ಸುಲಭವಾಗಿ ಗಾರ್ಲಿಕ್ ಬ್ರೆಡ್ ಯಾವ ರೀತಿ ಮಾಡಬಹುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಕ್ವಿಕ್ ಆಗಿ ಮಾಡಿ ಆನಿಯನ್ ಪಿಕ್ಕಲ್

    ಬೇಕಾಗುವ ಸಾಮಗ್ರಿಗಳು:
    ಬೆಣ್ಣೆ- 50 ಗ್ರಾಂ
    ತುರಿದ ಬೆಳ್ಳುಳ್ಳಿ – 2 ಚಮಚ
    ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಚಮಚ
    ಓರೆಗಾನೋ – 1 ಚಮಚ
    ಚಿಲ್ಲಿ ಫ್ಲೇಕ್ಸ್ – 1 ಚಮಚ
    ಪೆಪ್ಪರ್ ಪೌಡರ್ – ಕಾಲು ಚಮಚ
    ಉಪ್ಪು – ಅರ್ಧ ಚಮಚ
    ಬ್ರೆಡ್ – ಅಗತ್ಯಕ್ಕೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ಒಂದು ಬೌಲ್‌ನಲ್ಲಿ ಬೆಣ್ಣೆ ಹಾಕಿಕೊಂಡು ಅದಕ್ಕೆ ತುರಿದ ಬೆಳ್ಳುಳ್ಳಿ ಹಾಕಿಕೊಳ್ಳಿ. ಬಳಿಕ ಅದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಓರೆಗಾನೋ, ಚಿಲ್ಲಿ ಫ್ಲೇಕ್ಸ್, ಪೆಪ್ಪರ್ ಪೌಡರ್, ಉಪ್ಪನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಈಗ ಒಂದು ಬ್ರೆಡ್ ತೆಗೆದುಕೊಂಡು ಅದಕ್ಕೆ ಮಿಶ್ರಣವನ್ನು ಹಚ್ಚಿಕೊಳ್ಳಿ. ಬಳಿಕ ಅದನ್ನು ಎರಡು ತುಂಡು ಮಾಡಿಕೊಳ್ಳಿ.
    * ನಂತರ ಒಂದು ಪ್ಯಾನ್ ಮೇಲೆ ಬ್ರೆಡ್ ಇಟ್ಟುಕೊಂಡು ಮೀಡಿಯಮ್ ಫ್ಲೇಮ್‌ನಲ್ಲಿ ರೋಸ್ಟ್ ಮಾಡಿಕೊಳ್ಳಿ. ಬ್ರೆಡ್ ಗೋಲ್ಡನ್ ಕಲರ್ ಬರುವವರೆಗೆ ಫ್ರೈ ಮಾಡಿಕೊಳ್ಳಿ. ಎರಡೂ ಬದಿ ಫ್ರೈ ಆದಮೇಲೆ ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿಕೊಂಡು ಬಿಸಿಬಿಸಿಯಾಗಿ ತಿನ್ನಲು ಕೊಡಿ. ಇದನ್ನೂ ಓದಿ: ಟೇಸ್ಟಿ ವೆಜ್‌ಟೇಬಲ್ ಗಂಜಿ ಸವಿದು ದಿನ ಪ್ರಾರಂಭಿಸಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ವಿಕ್ ಆಗಿ ಮಾಡಿ ಆನಿಯನ್ ಪಿಕ್ಕಲ್

    ಕ್ವಿಕ್ ಆಗಿ ಮಾಡಿ ಆನಿಯನ್ ಪಿಕ್ಕಲ್

    ಕೆಂಪು ಈರುಳ್ಳಿಯ ಪಿಕ್ಕಲ್ ತಕ್ಷಣವೇ ತಯಾರಿಸಬಹುದಾದ ಸುಲಭದ ರೆಸಿಪಿ. ಇದನ್ನು ಸಲಾಡ್, ಸ್ಯಾಂಡ್‌ವಿಚ್, ಟಾಕೋ ಅಥವಾ ಯಾವುದೇ ಅಡುಗೆಯೊಂದಿಗೂ ಸವಿಯಬಹುದು. ಈ ರೆಸಿಪಿಯ ರುಚಿ ಮಾತ್ರವಲ್ಲದೆ ಪರಿಮಳವೂ ಅದ್ಭುತ. ಸರಳವಾದ ಈ ರೆಸಿಪಿಯನ್ನು ಮಾಡಲು ಬೇಕಾಗುವುದು ಕೆಲವೇ ಪದಾರ್ಥಗಳು.

    ಬೇಕಾಗುವ ಪದಾರ್ಥಗಳು:
    ತೆಳ್ಳಗೆ ಹೆಚ್ಚಿದ ಕೆಂಪು ಈರುಳ್ಳಿ – 1 (ಮಧ್ಯಮ ಗಾತ್ರದ್ದು)
    ವಿನೆಗರ್ – ಅರ್ಧ ಕಪ್
    ನೀರು – ಅರ್ಧ ಕಪ್
    ಸಕ್ಕರೆ – 1 ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್ ಇದನ್ನೂ ಓದಿ: ಕೊರಿಯನ್ ಸಾಂಪ್ರದಾಯಿಕ ಆಹಾರ ಕಿಮ್ಚಿ ಮಾಡೋದು ಹೇಗೆ ಗೊತ್ತಾ?

    ಮಾಡುವ ವಿಧಾನ:
    * ಮೊದಲಿಗೆ ಈರುಳ್ಳಿಯನ್ನು ತೆಳ್ಳಗೆ ಕತ್ತರಿಸಿಕೊಂಡು, ಅದನ್ನು ಗಟ್ಟಿ ಮುಚ್ಚಳವಿರುವ ಗಾಜಿನ ಬಾಟಲಿಗೆ ಹಾಕಿ.
    * ಒಂದು ಪಾತ್ರೆಯಲ್ಲಿ ನೀರು, ವಿನೆಗರ್, ಸಕ್ಕರೆ ಹಾಗೂ ಉಪ್ಪನ್ನು ಹಾಕಿ, ಕುದಿಸಿಕೊಳ್ಳಿ.
    * ನಂತರ ಅದನ್ನು ಈರುಳ್ಳಿ ಹಾಕಿರುವ ಗಾಜಿನ ಬಾಟಲಿಗೆ ಸುರಿಯಿರಿ. ಈರುಳ್ಳಿ ದ್ರವ ಪದಾರ್ಥದಲ್ಲಿ ಮುಳುಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಲ್ಲವೆಂದರೆ ಫೋರ್ಕ್ ಸಹಾಯದಿಂದ ಒತ್ತಿಕೊಳ್ಳಿ.
    * ದ್ರವ ಮಿಶ್ರಣ ತಣ್ಣಗಾಗಲು ಬಿಡಿ. ನಂತರ ಅದರ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿ, ಫ್ರಿಜ್‌ನಲ್ಲಿಡಿ.
    * 30 ನಿಮಿಷಗಳ ಬಳಿಕ ಈರುಳ್ಳಿ ಪಿಕ್ಕಲ್ ಸವಿಯಲು ಸಿದ್ಧವಾಗುತ್ತದೆ. ಇದನ್ನು ಸುಮಾರು 3 ವಾರಗಳವರೆಗೆ ಸವಿಯಬಹುದು. ಇದನ್ನೂ ಓದಿ: ಮನೆಯಲ್ಲೇ ಟ್ರೈ ಮಾಡಿ ಆರೋಗ್ಯಕರ ದಾಸವಾಳ ಟೀ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊರಿಯನ್ ಸಾಂಪ್ರದಾಯಿಕ ಆಹಾರ ಕಿಮ್ಚಿ ಮಾಡೋದು ಹೇಗೆ ಗೊತ್ತಾ?

    ಕೊರಿಯನ್ ಸಾಂಪ್ರದಾಯಿಕ ಆಹಾರ ಕಿಮ್ಚಿ ಮಾಡೋದು ಹೇಗೆ ಗೊತ್ತಾ?

    ಕಿಮ್ಚಿ ಕೊರಿಯಾದ ಸಾಂಪ್ರದಾಯಿಕ ಮಾತ್ರವಲ್ಲದೆ ರಾಷ್ಟ್ರೀಯ ಆಹಾರವಾಗಿದೆ. ಈ ದೇಶದಲ್ಲಿ ಕಿಮ್ಚಿ ಇಲ್ಲದೇ ಊಟ ಸಂಪೂರ್ಣ ಆಗೋದೇ ಇಲ್ಲ. ಸುಮಾರು 3,000 ವರ್ಷಗಳ ಹಿಂದೆ ಕಿಮ್ಚಿ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತದೆಯಾದರೂ ಕಾಲಾಕಾಲಕ್ಕೆ ವಿವಿಧ ಮಸಾಲೆಗಳನ್ನು ಸೇರಿಸುತ್ತಾ ಇದನ್ನು ನವೀನವಾಗಿ ಇರಿಸಲಾಗಿದೆ. ಕಿಮ್ಚಿಗೆ ಬಳಸುವ ಪದಾರ್ಥಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಮುಖ್ಯವಾಗಿ ಎಲೆಕೋಸು ಹಾಗೂ ಇತರ ತರಕಾರಿಗಳನ್ನು ಬಳಸಿ, ಮಸಾಲೆ ಪದಾರ್ಥಗಳನ್ನು ಸೇರಿಸಿ, ಹುದುಗಿಸಿ ಇಡಲಾಗುತ್ತದೆ. ಒಂದು ಬಾರಿ ತಯಾರಿಸಿಡುವ ಕಿಮ್ಚಿಯನ್ನು ತಿಂಗಳ ವರೆಗೆ ಸಂಗ್ರಹಿಸಿ ಇಡಬಹುದು. ಅನ್ನ, ನೂಡಲ್ಸ್ ಅಥವಾ ಯಾವುದೇ ಅಡುಗೆಯೊಂದಿಗೂ ಇದನ್ನು ಸೈಡ್ ಡಿಶ್ ಆಗಿ ಸವಿಯಬಹುದು.

    ಬೇಕಾಗುವ ಪದಾರ್ಥಗಳು:
    ಚೈನೀಸ್ ಎಲೆಕೋಸು – 1 ಕೆಜಿ
    ಕ್ಯಾರೆಟ್ – 1
    ಮೂಲಂಗಿ – 1
    ಉಪ್ಪು – 3 ಟೀಸ್ಪೂನ್
    ಚಿಲ್ಲಿ ಫ್ಲೇಕ್ಸ್ – 8 ಟೀಸ್ಪೂನ್
    ಬೆಳ್ಳುಳ್ಳಿ – 4 ಟೀಸ್ಪೂನ್
    ಪ್ಲಮ್ ಸಾರ – 4 ಟೀಸ್ಪೂನ್
    ಕಂದು ಸಕ್ಕರೆ – 3 ಟೀಸ್ಪೂನ್
    ಫಿಶ್ ಸಾಸ್ – 8 ಟೀಸ್ಪೂನ್
    ಎಳ್ಳು – 1 ಟೀಸ್ಪೂನ್
    ಎಳ್ಳಿನ ಎಣ್ಣೆ – 1 ಟೀಸ್ಪೂನ್ ಇದನ್ನೂ ಓದಿ: ಮನೆಯಲ್ಲೇ ಟ್ರೈ ಮಾಡಿ ಆರೋಗ್ಯಕರ ದಾಸವಾಳ ಟೀ

    ಮಾಡುವ ವಿಧಾನ:
    * ಮೊದಲಿಗೆ ಎಲೆಕೋಸನ್ನು ಸ್ವಚ್ಛಗೊಳಿಸಿ, 4 ಅಥವಾ ಮಧ್ಯಮ ಗಾತ್ರದ ಭಾಗಗಳಾಗಿ ಕತ್ತರಿಸಿ.
    * ಕ್ಯಾರೆಟ್ ಹಾಗೂ ಮೂಲಂಗಿ ಸಿಪ್ಪೆ ತೆಗೆದು ತೆಳ್ಳಗಿನ ಪಟ್ಟಿಗಳಾಗಿ ಕತ್ತರಿಸಿಕೊಳ್ಳಿ.
    * ಎಲೆಕೋಸು, ಕ್ಯಾರೆಟ್ ಹಾಗೂ ಮೂಲಂಗಿ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ, ಕೈಗಳಿಂದ ಚೆನ್ನಾಗಿ ಹರಡಿಕೊಳ್ಳಿ.
    * ನಂತರ ಅದಕ್ಕೆ 30 ನಿಮಿಷ ವಿಶ್ರಾಂತಿ ನೀಡಿ. ಬಳಿಕ ಅದರಲ್ಲಿರುವ ಹೆಚ್ಚಿನ ನೀರಿನಂಶವನ್ನು ತೆಗೆದುಹಾಕಲು 3-4 ಬಾರಿ ತೊಳೆಯಿರಿ.
    * ಒಂದು ಬೌಲ್‌ನಲ್ಲಿ ಚಿಲ್ಲಿ ಫ್ಲೇಕ್ಸ್, ಕೊಚ್ಚಿದ ಬೆಳ್ಳುಳ್ಳಿ, ಫಿಶ್ ಸಾಸ್, ಪ್ಲಮ್ ಸಾರ ಮತ್ತು ಸಕ್ಕರೆಯನ್ನು ಹಾಕಿ ಪೇಸ್ಟ್ ಆಗಿ ಮಿಶ್ರಣ ಮಾಡಿ.

    * ಒಂದು ದೊಡ್ಡ ಪಾತ್ರೆಯಲ್ಲಿ ಎಲೆಕೋಸು, ಕ್ಯಾರೆಟ್ ಹಾಗೂ ಮೂಲಂಗಿ ಹಾಕಿ, ತಯಾರಿಸಿಟ್ಟ ಪೇಸ್ಟ್ ಅನ್ನು ಅದಕ್ಕೆ ಸೇರಿಸಿ, ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
    * ಗಟ್ಟಿ ಮುಚ್ಚಳವಿರುವ ಪಾತ್ರೆಗೆ ಈ ಮಿಶ್ರಣವನ್ನು ಹಾಕಿ, ಹುದುಗಲು ಬಿಡಿ.
    * ಇದೀಗ ಕೊರಿಯನ್ ಕಿಮ್ಚಿ ತಯಾರಾಗಿದ್ದು, 2 ದಿನಗಳ ನಂತರ ಎಳ್ಳು ಹಾಗೂ ಎಳ್ಳಿನ ಎಣ್ಣೆ ಸೇರಿಸಿ ಅನ್ನ ಅಥವಾ ಊಟದೊಂದಿಗೆ ಸವಿಯಿರಿ. ಇದನ್ನು 2 ವಾರಗಳ ವರೆಗೆ ಇಡಬಹುದು. ಇದನ್ನೂ ಓದಿ: ಆರೋಗ್ಯಕರ ರಷ್ಯನ್ ಮಶ್ರೂಮ್ ಸೂಪ್ ಟ್ರೈ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುಲಭವಾಗಿ ಮಾಡಿ ಮಶ್ರೂಮ್ ಸ್ಯಾಂಡ್‌ವಿಚ್

    ಸುಲಭವಾಗಿ ಮಾಡಿ ಮಶ್ರೂಮ್ ಸ್ಯಾಂಡ್‌ವಿಚ್

    ಅಣಬೆಗಳು ಆ್ಯಂಟಿ ಆಕ್ಸಿಡೆಂಟ್, ವಿಟಮಿನ್ ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಇದನ್ನು ನಮ್ಮ ದಿನನಿತ್ಯದ ಆಹಾರಗಳಲ್ಲಿ ಬಳಸುವುದರಿಂದ ಕಣ್ಣಿನ ದೃಷ್ಟಿ ಉತ್ತಮವಾಗಿರುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಮಕ್ಕಳಿಗೆ ಹಾಗೂ ದೊಡ್ಡವರೂ ಇಷ್ಟಪಡುವ ಮಶ್ರೂಮ್ ಸ್ಯಾಂಡ್‌ವಿಚ್ ಯಾವರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಗೋಬಿ ಪೆಪ್ಪರ್ ಡ್ರೈ ರೆಸಿಪಿ ನಿಮಗಾಗಿ

    ಬೇಕಾಗುವ ಸಾಮಗ್ರಿಗಳು:
    ಹೆಚ್ಚಿದ ಅಣಬೆಗಳು – 250 ಗ್ರಾಂ
    ಹೆಚ್ಚಿದ ಈರುಳ್ಳಿ- 1
    ಹೆಚ್ಚಿದ ಬೆಳ್ಳುಳ್ಳಿ – 1
    ಚಿಲ್ಲಿ ಫ್ಲೇಕ್ಸ್ – 1 ಚಮಚ
    ಒರೆಗಾನೋ – 1 ಚಮಚ
    ಉಪ್ಪು- ರುಚಿಗೆ ತಕ್ಕಷ್ಟು
    ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
    ಬ್ರೆಡ್ – 4
    ತುರಿದ ಚೀಸ್ – ಕಾಲು ಕಪ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಅದಕ್ಕೆ ಹೆಚ್ಚಿದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹಾಕಿಕೊಂಡು ಹಸಿವಾಸನೆ ಹೋಗುವವರೆಗೆ ಫ್ರೈ ಮಾಡಿಕೊಳ್ಳಿ.
    * ಬಳಿಕ ಇದಕ್ಕೆ ಹೆಚ್ಚಿದ ಮಶ್ರೂಮ್ ಹಾಕಿಕೊಂಡು ಚನ್ನಾಗಿ ಫ್ರೈ ಮಾಡಿಕೊಳ್ಳಬೇಕು.
    * ಈಗ ಇದಕ್ಕೆ ಉಪ್ಪು, ಚಿಲ್ಲಿ ಫ್ಲೇಕ್ಸ್ ಮತ್ತು ಒರೆಗಾನೋ ಹಾಕಿಕೊಂಡು ತಿರುವಿಕೊಳ್ಳಿ.
    * ಬಳಿಕ ಈ ಮಿಶ್ರಣಕ್ಕೆ ತುರಿದ ಚೀಸ್ ಅನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ನಂತರ ಒಂದು ಬ್ರೆಡ್ ಮೇಲೆ ಈ ಮಿಶ್ರಣವನ್ನು ಹದವಾಗಿ ಹಾಕಿಕೋಂಡು ಇನ್ನೊಂದು ಬ್ರೆಡ್‌ನ ಸಹಾಯದಿಂದ ಮುಚ್ಚಿ.
    * ಬಳಿಕ ಇದನ್ನು ಸ್ಯಾಂಡ್‌ವಿಚ್ ಮೇಕರ್ ಅಥವಾ ಗ್ರಿಲ್ ಪ್ಯಾನ್‌ನಲ್ಲಿ ಇಟ್ಟು ಬಿಸಿಮಾಡಿಕೊಳ್ಳಿ.
    * ಈಗ ಟೇಸ್ಟಿ ಮಶ್ರೂಮ್ ಸ್ಯಾಂಡ್‌ವಿಚ್ ತಿನ್ನಲು ರೆಡಿ. ಇದನ್ನೂ ಓದಿ: ಮನೆಯಲ್ಲೇ ಟ್ರೈ ಮಾಡಿ ಆರೋಗ್ಯಕರ ದಾಸವಾಳ ಟೀ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಳಗಡೆ ಮೃದು, ಹೊರಗಡೆ ಕ್ರಂಚಿ – ಸುಲಭದ ಶುಂಠಿ ಕುಕೀಸ್ ಹೀಗೆ ಮಾಡಿ

    ಒಳಗಡೆ ಮೃದು, ಹೊರಗಡೆ ಕ್ರಂಚಿ – ಸುಲಭದ ಶುಂಠಿ ಕುಕೀಸ್ ಹೀಗೆ ಮಾಡಿ

    ಶುಂಠಿ ಕುಕೀಸ್ ಅದ್ಭುತ ರುಚಿ ಹಾಗೂ ಸುವಾಸನೆಯುಕ್ತ ತಿಂಡಿ. ಮಸಾಲೆಯುಕ್ತ ಕುಕೀಸ್ ಹೊರಗಡೆ ಕ್ರಂಚಿ ಹಾಗೂ ಒಳಗಡೆ ಮೃದು ಅನುಭವ ನೀಡುತ್ತದೆ. ಬೆಳಗ್ಗೆ ಅಥವಾ ಸಂಜೆ ಒಂದು ಕಪ್ ಚಹಾದೊಂದಿದೆ ಈ ಕುಕೀಸ್ ಜೊತೆಯಾಗಬಲ್ಲದು. ಸುಲಭವಾಗಿ ತಯಾರಿಸಬಹುದಾದ ಕುಕೀಸ್ ಇದಾಗಿದ್ದು, ನೀವು ಕೂಡಾ ಒಮ್ಮೆ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಸಕ್ಕರೆ ಪುಡಿ – 2 ಟೀಸ್ಪೂನ್
    ಮೈದಾ ಹಿಟ್ಟು – 2 ಕಾಲು ಕಪ್
    ಶುಂಠಿ ಪುಡಿ – 2 ಟೀಸ್ಪೂನ್
    ಅಡುಗೆ ಸೋಡಾ – 1 ಟೀಸ್ಪೂನ್
    ದಾಲ್ಚಿನ್ನಿ ಪುಡಿ – ಮುಕ್ಕಾಲು ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್
    ಮೃದುಗೊಳಿಸಿದ ಬೆಣ್ಣೆ – ಮುಕ್ಕಾಲು ಕಪ್
    ಸಕ್ಕರೆ ಪುಡಿ – 1 ಕಪ್ (ಪ್ರತ್ಯೇಕ ಬಳಕೆಗೆ)
    ಮೊಟ್ಟೆ – 1
    ಕಂದು ಸಕ್ಕರೆ ಸಿರಪ್ – ಕಾಲು ಕಪ್
    ನೀರು – 1 ಟೀಸ್ಪೂನ್ ಇದನ್ನೂ ಓದಿ: ಸಿಂಪಲ್ & ಟೇಸ್ಟಿ ಬ್ಲೂಬೆರಿ ಕಾಫಿ ಕೇಕ್

    ಮಾಡುವ ವಿಧಾನ:
    * ಮೊದಲಿಗೆ ಓವನ್ ಅನ್ನು 175 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
    * ಸಣ್ಣ ಬಟ್ಟಲಿಗೆ 2 ಟೀಸ್ಪೂನ್ ಸಕ್ಕರೆಯನ್ನು ಹರಡಿ ಪಕ್ಕಕ್ಕಿ ಇಟ್ಟುಕೊಳ್ಳಿ.
    * ಇನ್ನೊಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಉಪ್ಪು, ಅಡುಗೆ ಸೋಡಾ, ಶುಂಠಿ ಪುಡಿ, ದಾಲ್ಚಿನ್ನಿ ಪುಡಿ ಹಾಕಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
    * ಮತ್ತೊಂದು ಬಟ್ಟಲಿನಲ್ಲಿ ಬೆಣ್ಣೆ ಹಾಗೂ 1 ಕಪ್ ಸಕ್ಕರೆ ಪುಡಿಯನ್ನು ಹಾಕಿ ಅದನ್ನು ಮೃದುಗೊಳಿಸಿ. ಇದಕ್ಕಾಗಿ ಎಲೆಕ್ಟ್ರಿಕ್ ಮಿಕ್ಸರ್ ಬಳಸುವುದು ಉತ್ತಮ.
    * ನಂತರ ಮೊಟ್ಟೆ, ಕಂದು ಸಕ್ಕರೆ ಸಿರಪ್, 1 ಟೀಸ್ಪೂನ್ ನೀರು ಬೆರೆಸಿ ಮಿಶ್ರಣ ಮಾಡಿ.
    * ಈಗ ಈ ಮಿಶ್ರಣಕ್ಕೆ ಒಣ ಹಿಟ್ಟಿನ ಮಿಶ್ರಣವನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಬೆರೆಸಿಕೊಳ್ಳಿ. ಹಿಟ್ಟು ಹೆಚ್ಚು ಜಿಗುಟಾಗಿರದಂತೆ ಎಚ್ಚರವಹಿಸಿ.
    * ಈಗ ಹಿಟ್ಟಿನಿಂದ ಒಂದೊಂದು ಇಂಚಿನಷ್ಟು ವ್ಯಾಸ ಬರುವಂತೆ ಚೆಂಡುಗಳನ್ನು ರಚಿಸಿ. ಅದರ ಮೇಲೆ ಬದಿಗಿಡಲಾಗಿದ್ದ 2 ಟೀಸ್ಪೂನ್ ಸಕ್ಕರೆ ಪುಡಿಯನ್ನು ಚದುರಿಸಿ.
    * ಗ್ರೀಸ್ ಮಾಡಲಾದ ಬೇಕಿಂಗ್ ಶೀಟ್ ಮೇಲೆ ಹಿಟ್ಟಿನ ಚೆಂಡುಗಳನ್ನು ಜೋಡಿಸಿ.
    * ಈಗ ಅದನ್ನು ಓವನ್‌ನಲ್ಲಿಟ್ಟು ಸುಮಾರು 10-12 ನಿಮಿಷಗಳವರೆಗೆ ಬೇಯಿಸಿಕೊಳ್ಳಿ.
    * ಬೆಂದ ಬಳಿಕ ಕುಕೀಗಳು ಚಪ್ಪಟೆಯಾಗಿ ಬಿರುಕುಗಳು ಮೂಡಿರುತ್ತವೆ.
    * ಇದೀಗ ಸುವಾಸನೆಯುಕ್ತ ಶುಂಠಿ ಕುಕೀಸ್ ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಗೋಬಿ ಪೆಪ್ಪರ್ ಡ್ರೈ ರೆಸಿಪಿ ನಿಮಗಾಗಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೇಸ್ಟಿ ವೆಜ್‌ಟೇಬಲ್ ಗಂಜಿ ಸವಿದು ದಿನ ಪ್ರಾರಂಭಿಸಿ

    ಟೇಸ್ಟಿ ವೆಜ್‌ಟೇಬಲ್ ಗಂಜಿ ಸವಿದು ದಿನ ಪ್ರಾರಂಭಿಸಿ

    ಬೆಳಗ್ಗೆ ಏನಾದ್ರೂ ಆರೋಗ್ಯಕರ ಆಹಾರ ಸೇವಿಸಿದಾಗ ಮಾತ್ರವೇ ಆ ದಿನವಿಡೀ ಉಲ್ಲಾಸಮಯವಾಗಿರುತ್ತದೆ. ದಿನದ ಇತರ ಸಮಯಗಳಿಗಿಂತಲೂ ಬೆಳಗ್ಗೆ ಹೆಚ್ಚು ಆಹಾರ ಸೇವಿಸುವುದು ಕೂಡಾ ಒಳ್ಳೆಯದೇ. ನಾವಿಂದು ನಿಮ್ಮ ಹೊಟ್ಟೆಗೆ ಆರೋಗ್ಯಕರವಾದ ಸಾಕಷ್ಟು ತರಕಾರಿಗಳಿಂದ ಮಾಡುವ ಟೇಸ್ಟಿ ಗಂಜಿ ರೆಸಿಪಿಯೊಂದನ್ನು ಹೇಳಿಕೊಡುತ್ತೇವೆ. ಈ ಅಡುಗೆಯನ್ನೊಮ್ಮೆ ನೀವು ಟ್ರೈ ಮಾಡಿ, ಸವಿದು ದಿನವನ್ನು ಪ್ರಾರಂಭಿಸಿ.

    ಬೇಕಾಗುವ ಪದಾರ್ಥಗಳು:
    ನೆನೆಸಿದ ಅಕ್ಕಿ – 1 ಕಪ್
    ನೆನೆಸಿದ ಹೆಸರು ಬೇಳೆ – ಕಾಲು ಕಪ್
    ಈರುಳ್ಳಿ – 1
    ಟೊಮೆಟೋ – 1
    ಕ್ಯಾರೆಟ್ – 1
    ಬೀನ್ಸ್ – 5
    ಆಲೂಗಡ್ಡೆ – 1
    ಬಟಾಣಿ – 1 ಟೀಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಮೆಣಸಿನ ಪುಡಿ – 1 ಟೀಸ್ಪೂನ್
    ಗರಂ ಮಸಾಲೆ ಪುಡಿ – 1 ಟೀಸ್ಪೂನ್
    ಅರಿಶಿನ ಪುಡಿ – 1 ಟೀಸ್ಪೂನ್
    ಮೊಸರು – ಕಾಲು ಕಪ್ ಇದನ್ನೂ ಓದಿ: ಮನೆಯಲ್ಲೇ ಟ್ರೈ ಮಾಡಿ ಆರೋಗ್ಯಕರ ದಾಸವಾಳ ಟೀ

    ಮಾಡುವ ವಿಧಾನ:
    * ಮೊದಲಿಗೆ ಕುಕ್ಕರ್‌ನಲ್ಲಿ ನೆನೆಸಿದ ಅಕ್ಕಿ, ಹೆಸರು ಬೇಳೆ ಹಾಕಿ.
    * ಈರುಳ್ಳಿ, ಟೊಮೆಟೋ, ಪುದೀನಾ, ಕೊತ್ತಂಬರಿ ಸೊಪ್ಪು, ಹಾಗೂ ಎಲ್ಲಾ ತರಕಾರಿಗಳನ್ನು ಹೆಚ್ಚಿ ಹಾಕಿ.
    * ನಂತರ ಎಲ್ಲಾ ಮಸಾಲೆ ಪುಡಿಗಳನ್ನು ಸೇರಿಸಿ.
    * ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ 4 ಕಪ್ ನೀರು ಸೇರಿಸಿ.
    * ಬಳಿಕ ಕುಕ್ಕರ್‌ನ ಮುಚ್ಚಳ ಮುಚ್ಚಿ, 5-6 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
    * ಕುಕ್ಕರ್ ಸ್ವಲ್ಪ ತಣ್ಣಗಾದ ಬಳಿಕ ಅದರಲ್ಲಿರುವ ಮಿಶ್ರಣವನ್ನು ಸ್ವಲ್ಪ ಮ್ಯಾಶ್ ಮಾಡಿಕೊಳ್ಳಿ.
    * ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. 5 ನಿಮಿಷ ಬಿಸಿ ಮಾಡಿ.
    * ಬಳಿಕ ಒಂದು ಸಣ್ಣ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಜೀರಿಗೆ, ಕರಿಬೇವು ಸೇರಿಸಿ, ಒಗ್ಗರಣೆ ತಯಾರಿಸಿ.
    * ಒಗ್ಗರಣೆಯನ್ನು ಗಂಜಿಗೆ ಸೇರಿಸಿ, ಮಿಶ್ರಣ ಮಾಡಿ.
    * ಇದೀಗ ಟೇಸ್ಟಿ ವೆಜ್‌ಟೇಬಲ್ ಗಂಜಿ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಆರೋಗ್ಯಕರ ರಷ್ಯನ್ ಮಶ್ರೂಮ್ ಸೂಪ್ ಟ್ರೈ ಮಾಡಿ

    
    

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]