Tag: recipe

  • ಬೆಂಗಾಲಿ ಮಟನ್ ಕರಿ ‘ಕೋಶಾ ಮಾಂಗ್ಶೋ’ ಟ್ರೈ ಮಾಡಿ

    ಬೆಂಗಾಲಿ ಮಟನ್ ಕರಿ ‘ಕೋಶಾ ಮಾಂಗ್ಶೋ’ ಟ್ರೈ ಮಾಡಿ

    ಬಂಗಾಳ ಶೈಲಿಯ ಮಟನ್ ಕರಿ ಕೋಶಾ ಮಾಂಗ್ಶೋ ಕಟುವಾದ ಮಸಾಲೆಯುಕ್ತ ಅಡುಗೆಯಾಗಿದ್ದು, ಮೊಸರು ಮತ್ತು ಸಾಸಿವೆ ಎಣ್ಣೆಯಿಂದ ಇದರ ಘಮ ವಿಶಿಷ್ಟತೆ ಪಡೆಯುತ್ತದೆ. ನಿಧಾನವಾಗಿ ಬೇಯಿಸಲಾಗುವ ಮಟನ್‌ನ ಈ ಕರಿ ಪ್ರತಿಯೊಬ್ಬ ಬಂಗಾಳಿ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ವಿಶೇಷ ಸಂದರ್ಭಗಳಲ್ಲಿ ತಯಾರಿಸಲಾಗುವ ಈ ನಾನ್ ವೆಜ್ ರೆಸಿಪಿಯನ್ನೊಮ್ಮೆ ನೀವೂ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಮಟನ್ – 1 ಕೆಜಿ
    ಸಿಪ್ಪೆ ಸುಲಿದು ಹೆಚ್ಚಿಕೊಂಡ ಆಲೂಗಡ್ಡೆ – 2
    ಮೊಸರು – ಮುಕ್ಕಾಲು ಕಪ್
    ಸಾಸಿವೆ ಎಣ್ಣೆ – 5 ಟೀಸ್ಪೂನ್
    ಜೀರಿಗೆ – 1 ಟೀಸ್ಪೂನ್
    ಲವಂಗ – 1 ಟೀಸ್ಪೂನ್
    ಏಲಕ್ಕಿ – 2
    ದಾಲ್ಚಿನ್ನಿ ಚಕ್ಕೆ – 1 ಇಂಚು
    ಸೋಂಪು – 1 ಟೀಸ್ಪೂನ್
    ಹೆಚ್ಚಿದ ಈರುಳ್ಳಿ – 600 ಗ್ರಾಂ
    ಅರಿಶಿನ ಪುಡಿ – 1 ಟೀಸ್ಪೂನ್
    ಗರಂ ಮಸಾಲೆ ಪುಡಿ – 2 ಟೀಸ್ಪೂನ್
    ಕೊತ್ತಂಬರಿ ಪುಡಿ – 3 ಟೀಸ್ಪೂನ್
    ಮೆಣಸಿನ ಪುಡಿ – 2 ಟೀಸ್ಪೂನ್
    ಜೀರಿಗೆ ಪುಡಿ – 3 ಟೀಸ್ಪೂನ್
    ಸೀಳಿದ ಹಸಿರು ಮೆಣಸಿನಕಾಯಿ – 5
    ಹೆಚ್ಚಿದ ಶುಂಠಿ – 2 ಟೀಸ್ಪೂನ್
    ಹೆಚ್ಚಿದ ಬೆಳ್ಳುಳ್ಳಿ – 2 ಟೀಸ್ಪೂನ್
    ಒಣ ಕೆಂಪು ಮೆಣಸಿನಕಾಯಿ – 3
    ತುಪ್ಪ – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ನೀರು – ಅಗತ್ಯಕ್ಕೆ ತಕ್ಕಂತೆ ಇದನ್ನೂ ಓದಿ: ಟೇಸ್ಟಿ ಚೈನೀಸ್ ಪೆಪ್ಪರ್ ಚಿಕನ್

    ಮಾಡುವ ವಿಧಾನ:
    * ಮೊದಲಿಗೆ ಮಾಂಸಕ್ಕೆ ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, 2 ಟೀಸ್ಪೂನ್ ಸಾಸಿವೆ ಎಣ್ಣೆ, 2-3 ಟೀಸ್ಪೂನ್ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
    * ಸುಮಾರು 8 ಗಂಟೆಗಳ ಕಾಲ ಈ ಮಿಶ್ರಣವನ್ನು ಫ್ರಿಜ್‌ನಲ್ಲಿಡಿ.
    * ಭಾರವಾದ ತಳದ ಕಬ್ಬಿಣದ ಕಡಾಯಿಗೆ ಉಳಿದ ಸಾಸಿವೆ ಎಣ್ಣೆಯನ್ನು ಹಾಕಿ, ಈರುಳ್ಳಿಯನ್ನು ಸೇರಿಸಿ ಹುರಿಯಿರಿ.
    * ಒಣಗಿದ ಕೆಂಪು ಮೆಣಸಿನಕಾಯಿಯನ್ನು ಸೇರಿಸಿ.
    * ಈರುಳ್ಳಿ ಹುರಿಯುತ್ತಿರುವ ವೇಳೆ ಬ್ಲೆಂಡರ್‌ಗೆ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿಗಳನ್ನು ಹಾಕಿ ಒರಟಾದ ಪೇಸ್ಟ್‌ನಂತೆ ರುಬ್ಬಿಕೊಳ್ಳಿ.
    * ಈರುಳ್ಳಿಗೆ ಈ ಪೇಸ್ಟ್ ಸೇರಿ, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
    * ಈಗ ಗರಂ ಮಸಾಲಾ ಪುಡಿ, ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಜೀರಿಗೆ ಪುಡಿಯನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಮಸಾಲೆ ಪೇಸ್ಟ್ ಮಾಡಿ.
    * ಇದನ್ನು ಈರುಳ್ಳಿ ಮಿಶ್ರಣಕ್ಕೆ ಸೇರಿಸಿ.
    * ಮ್ಯಾರಿನೇಟ್ ಮಾಡಿದ ಮಟನ್ ಸೇರಿಸಿ, ಉರಿಯನ್ನು ಕಡಿಮೆ ಇಟ್ಟು ಸುಮಾರು 90 ನಿಮಿಷಗಳ ಕಾಲ ಮುಚ್ಚಿ ಮತ್ತು ಬೇಯಿಸಿಕೊಳ್ಳಿ.
    * ಮಟನ್ ಸುಡದಂತೆ ಆಗಾಗ ಅದನ್ನು ಪರೀಕ್ಷಿಸುತ್ತಿರಿ. ತಳ ಹಿಡಿಯದಂತೆ ತಡೆಯಲು ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಸಿಂಪಡಿಸುತ್ತಿರಿ.
    * ಈಗ ಉಳಿದ ಮೊಸರನ್ನು ಚೆನ್ನಾಗಿ ವಿಪ್ ಮಾಡಿಕೊಂಡು, ಮಟನ್ ಮಿಶ್ರಣಕ್ಕೆ ಸೇರಿಸಿ.
    * ಹೆಚ್ಚಿದ ಆಲೂಗಡ್ಡೆ ಸೇರಿಸಿ, ನೀರು ಆವಿಯಾಗುವವರೆಗೆ ಮಾಂಸವನ್ನು ಬೇಯಿಸುವುದನ್ನು ಮುಂದುವರಿಸಿ.
    * ಉಪ್ಪು ಬೆರೆಸಿ, ಮಟನ್ ಮೆತ್ತಗಾಗುವವರೆಗೆ ನಿಧಾನವಾಗಿ ಬೇಯಿಸುವುದನ್ನು ಮುಂದುವರಿಸಿ.
    * ಈಗ ಉರಿಯನ್ನು ಆಫ್ ಮಾಡಿ, ತುಪ್ಪವನ್ನು ಸೇರಿಸಿ, ನಿಧಾನವಾಗಿ ಬೆರೆಸಿ.
    * ಇದೀಗ ಬೆಂಗಾಲಿ ಮಟನ್ ಕರಿ ಕೋಶಾ ಮಾಂಗ್ಶೋ ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಪಾರ್ಟಿಗೆ ಸ್ಟಾರ್ಟರ್ – ಮಟನ್ ಶಮಿ ಕಬಾಬ್ ಮಾಡಿ ನೋಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆರೋಗ್ಯಕರ ಓಟ್ಸ್ ಪೀನಟ್ ಸ್ಮೂದಿ ಕುಡಿಯಿರಿ

    ಆರೋಗ್ಯಕರ ಓಟ್ಸ್ ಪೀನಟ್ ಸ್ಮೂದಿ ಕುಡಿಯಿರಿ

    ಟ್ಸ್ ಪೀನಟ್ ಬಟರ್ ಸ್ಮೂದಿ ಅತ್ಯಂತ ಸುಲಭವಾಗಿ ತಯಾರಿಸಬಹುದಾದ ಪೌಷ್ಟಿಕ ಪಾನೀಯಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಜನರು ಸ್ಮೂದಿಗಳನ್ನು ತಮ್ಮ ಬಿಡುವಿನ ಸಮಯದಲ್ಲಿ ತಿನ್ನುವ ಲಘು ಉಪಹಾರವಾಗಿ ಪರಿಗಣಿಸಿದ್ದಾರೆ. ಹೆಚ್ಚಾಗಿ ತಮ್ಮ ತೂಕ ಕಡಿಮೆ ಮಾಡಲು ಬಯಸುವವರಿಗೆ ಇದು ಉಪಯುಕ್ತವಾಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಆರೋಗ್ಯಕರ ಓಟ್ಸ್ ಪೀನಟ್ ಬಟರ್ ಸ್ಮೂದಿ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

    ಬೇಕಾಗುವ ಪದಾರ್ಥಗಳು:
    ಪೀನಟ್ ಬಟರ್– 2ಚಮಚ
    ಬಾಳೆಹಣ್ಣು– 1
    ಚಿಯಾ(ಕಾಮ ಕಸ್ತೂರಿ)- 1 ಚಮಚ
    ಓಟ್ಸ್– 1/2 ಕಪ್
    ಸೋಯ ಮಿಲ್ಕ್– 1/2 ಕಪ್
    ಕಡಲೆ ಬೀಜ– 1/2 ಕಪ್

    ಮಾಡುವ ವಿಧಾನ:
    * ಮೊದಲಿಗೆ ಓಟ್ಸ್ ಮತ್ತು ಪೀನಟ್ ಬಟರ್ ಅನ್ನು ಮಿಕ್ಸಿ ಜಾರಿಗೆ ಹಾಕಿ.
    * ನಂತರ ಅದಕ್ಕೆ ಸೋಯಾ ಹಾಲು ಸೇರಿಸಿ.
    * ಬಳಿಕ ಇದಕ್ಕೆ ಬಾಳೆಹಣ್ಣು ಮತ್ತು ಚಿಯಾ ಬೀಜಗಳನ್ನು ಹಾಕಿ ಚನ್ನಾಗಿ ರುಬ್ಬಿಕೊಳ್ಳಿ.
    * ನಂತರ ಈ ಮಿಶ್ರಣವನ್ನು ಒಂದು ಗ್ಲಾಸಿಗೆ ಹಾಕಿ ಪುಡಿ ಮಾಡಿದ ಕಡಲೆ ಬೀಜದಿಂದ ಅಲಂಕರಿಸಿ.
    * ಈಗ ಓಟ್ಸ್ ಪೀನಟ್ ಬಟರ್ ಸ್ಮೂದಿ ಸರ್ವ್ ಮಾಡಲು ರೆಡಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಲ್ಕು ಪದಾರ್ಥ ಬಳಸಿ ಮಾಡಿ ಬಾಳೆಹಣ್ಣಿನ ಐಸ್‌ಕ್ರೀಮ್

    ನಾಲ್ಕು ಪದಾರ್ಥ ಬಳಸಿ ಮಾಡಿ ಬಾಳೆಹಣ್ಣಿನ ಐಸ್‌ಕ್ರೀಮ್

    ಸ್‌ಕ್ರೀಮ್ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಪುಟಾಣಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಮನಗೆದ್ದ ಶೀತಲ ತಿನಿಸಿದು. ಆದರೆ ಮಾರುಕಟ್ಟೆಯಲ್ಲಿ ಸಿಗುವ ಕೆಲ ಐಸ್‌ಕ್ರೀಮ್‌ಗಳು, ಮನೆ ರುಚಿ ಕೊಡುವುದಿಲ್ಲ. ಆದ್ದರಿಂದ ಇವತ್ತಿನ ನಮ್ಮ ರೆಸಿಪಿಯಲ್ಲಿ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಬಾಳೆಹಣ್ಣಿನ ಐಸ್‌ಕ್ರೀಮ್ ರೆಸಿಪಿಯನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಬೆಚ್ಚಗಿನ ಬಾದಾಮಿ ಸೂಪ್ ಸವಿದು ಆರೋಗ್ಯವಾಗಿರಿ

    ಬೇಕಾಗುವ ಸಾಮಗ್ರಿಗಳು:
    ಸಿಪ್ಪೆ ಸುಲಿದ ಬಾಳೆಹಣ್ಣು – 6
    ಸಕ್ಕರೆ – 4 ಚಮಚ
    ವೆನಿಲ್ಲಾ ಎಸೆನ್ಸ್ – 1 ಚಮಚ
    ಕಾಯಿಸಿ ತಣ್ಣಗಾದ ಹಾಲು – 100 ಗ್ರಾಂ
    ಹೆಚ್ಚಿದ ಬಾದಾಮಿ – ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ಸಿಪ್ಪೆ ಸುಲಿದ ಬಾಳೆಹಣ್ಣನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ.
    * ಬಳಿಕ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಅದಕ್ಕೆ 4 ಚಮಚ ಸಕ್ಕರೆ, 1 ಚಮಚ ವೆನಿಲ್ಲಾ ಎಸೆನ್ಸ್, ತಣ್ಣಗಿನ ಹಾಲು ಹಾಕಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ.
    * ನಂತರ ಈ ಮಿಶ್ರಣವನ್ನು ಒಂದು ಬಾಕ್ಸ್‌ಗೆ  ಹಾಕಿಕೊಳ್ಳಿ. ಬಳಿಕ ಇದರ ಮುಚ್ಚಳ ಹಾಕಿ 4 ಗಂಟೆಗಳ ಕಾಲ ಫ್ರೀಜರ್ ಅಲ್ಲಿ ಇಡಿ.
    * ಈಗ ತಣ್ಣಗಿನ ಐಸ್‌ಕ್ರೀಮ್ ತಿನ್ನಲು ರೆಡಿ. ಇದನ್ನು ಸರ್ವಿಂಗ್ ಬೌಲ್‌ನಲ್ಲಿ ಹಾಕಿಕೊಂಡು ಅದರ ಮೇಲೆ ಹೆಚ್ಚಿದ ಬಾದಾಮಿ ಹಾಕಿ ಮಕ್ಕಳಿಗೆ ಮತ್ತು ಮನೆಯವರಿಗೆ ಸವಿಯಲು ಕೊಡಿ. ಇದನ್ನೂ ಓದಿ: ಹೈಡ್ರೇಟ್ ಆಗಿರಲು ಸವಿಯಿರಿ ಕಲ್ಲಂಗಡಿ, ದಾಳಿಂಬೆಯ ಪಂಚ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಚ್ಚಗಿನ ಬಾದಾಮಿ ಸೂಪ್ ಸವಿದು ಆರೋಗ್ಯವಾಗಿರಿ

    ಬೆಚ್ಚಗಿನ ಬಾದಾಮಿ ಸೂಪ್ ಸವಿದು ಆರೋಗ್ಯವಾಗಿರಿ

    ವರಾತ್ರಿಯು ಚಳಿಗಾಲದ ಆರಂಭವನ್ನು ಸೂಚಿಸುತ್ತದೆ. ಈ ದಿನಗಳಲ್ಲಿ ತಾಪಮಾನ ಇಳಿಕೆಯಾಗುತ್ತಾ ಹೋಗುತ್ತದೆ. ಹವಾಮಾನ ಬದಲಾಗೋ ಈ ದಿನಗಳಲ್ಲಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡಾ ಅಷ್ಟೇ ಮುಖ್ಯ. ಈ ಸಂದರ್ಭದಲ್ಲಿ ಬೆಚ್ಚನೆಯ ಬಾದಾಮಿ ಸೂಪ್ ಸೇವನೆ ಉತ್ತಮವಾಗಿರುತ್ತದೆ. ಇದನ್ನು ಉಪವಾಸದ ಸಂದರ್ಭದಲ್ಲಿಯೂ ಸೇವಿಸಲು ಅರ್ಹವಾಗಿದೆ. ಬಾದಾಮಿ ಸೂಪ್ ಮಾಡುವ ವಿಧಾನವನ್ನು ನಾವಿಂದು ಹೇಳಿಕೊಡಲಿದ್ದೇವೆ. ನೀವು ಕೂಡಾ ಇದನ್ನು ಸವಿದು ಆರೋಗ್ಯವನ್ನು ಕಾಪಾಡಿಕೊಳ್ಳಿ.

    ಬೇಕಾಗುವ ಪದಾರ್ಥಗಳು:
    ಬಾದಾಮಿ – 20
    ಹಾಲು – 2 ಕಪ್
    ನೀರು – 1 ಕಪ್
    ಕಲ್ಲುಪ್ಪು – ರುಚಿಗೆ ತಕ್ಕಷ್ಟು
    ಕರಿ ಮೆಣಸಿನಪುಡಿ – ಸ್ವಾದಕ್ಕನುಸಾರ
    ಬೇಯಿಸಿದ ಆಲೂಗಡ್ಡೆ – 1
    ಫ್ರೆಶ್ ಕ್ರೀಮ್ – ಅರ್ಧ ಕಪ್ ಇದನ್ನೂ ಓದಿ: ಸ್ನ್ಯಾಕ್ಸ್ ಟೈಂಗೆ ಸಿಂಪಲ್ ದಹಿ ಆಲೂ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಬಾದಾಮಿಯನ್ನು ಬೆಚ್ಚಗಿನ ನೀರಿನಲ್ಲಿ ಸುಮಾರು 20 ನಿಮಿಷ ನೆನೆಸಿ.
    * ನಂತರ ಅದರ ಸಿಪ್ಪೆ ತೆಗೆದು, ಮಿಕ್ಸರ್ ಜಾರ್‌ನಲ್ಲಿ ಪೇಸ್ಟ್ ಮಾಡಿಕೊಳ್ಳಿ.
    * ಈಗ ಒಂದು ಪ್ಯಾನ್‌ಗೆ ಈ ಬಾದಾಮಿ ಪ್ಯೂರಿಯನ್ನು ಹಾಕಿ ಬೇಯಿಸಿಕೊಳ್ಳಿ.
    * ನಂತರ ಅದಕ್ಕೆ ಹಾಲು, ನೀರು ಸೇರಿಸಿ ಕುದಿಸಿಕೊಳ್ಳಿ.
    * ಕಲ್ಲುಪ್ಪು, ಕರಿಮೆಣಸಿನಪುಡಿ ಸೇರಿಸಿಕೊಳ್ಳಿ.
    * ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ತೆಗೆದು, ಮ್ಯಾಶ್ ಮಾಡಿ, ಸೂಪ್‌ಗೆ ಸೇರಿಸಿ.
    * ಈಗ ಫ್ರೆಶ್ ಕ್ರೀಮ್ ಸೇರಿಸಿ, ಮಿಶ್ರಣ ಮಾಡಿ.
    * ಇದೀಗ ಆರೋಗ್ಯಕ್ಕೆ ಹಿತವಾದ ಬಾದಾಮಿ ಸೂಪ್ ತಯಾರಾಗಿದ್ದು, ಬೆಚ್ಚಗೆ ಸವಿಯಿರಿ. ಇದನ್ನೂ ಓದಿ: ಇಮ್ಯೂನಿಟಿ ಪವರ್‌ಗಾಗಿ ಸವಿಯಿರಿ ಸೀತಾಫಲ ಸ್ಮೂದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೈಡ್ರೇಟ್ ಆಗಿರಲು ಸವಿಯಿರಿ ಕಲ್ಲಂಗಡಿ, ದಾಳಿಂಬೆಯ ಪಂಚ್

    ಹೈಡ್ರೇಟ್ ಆಗಿರಲು ಸವಿಯಿರಿ ಕಲ್ಲಂಗಡಿ, ದಾಳಿಂಬೆಯ ಪಂಚ್

    ಲ್ಲಂಗಡಿ ಮತ್ತು ದಾಳಿಂಬೆಯ ಪಂಚ್ ಹಗುರ, ರಿಫ್ರೆಶಿಂಗ್ ಮತ್ತು ಸರಳವಾದ ಪಾನೀಯವಾಗಿದೆ. ಈ ಹಣ್ಣುಗಳ ಸೇವನೆ ದೇಹವನ್ನು ಹೈಡ್ರೇಟ್ ಆಗಿ ಇರಿಸಲು ಸಹಾಯ ಮಾಡುತ್ತದೆ. ನವರಾತ್ರಿಯ ಸಂದರ್ಭ ಹೆಚ್ಚಿನವರು ವೃತವನ್ನಾಚರಿಸುತ್ತಾರೆ. ಈ ವೇಳೆ ದೇಹದಲ್ಲಿ ನೀರಿನಂಶದ ಕೊರತೆಯಾಗಬಹುದು. ಇದನ್ನು ನೀಗಿಸಲು ನೀವು ಕಲ್ಲಂಗಡಿ, ದಾಳಿಂಬೆಯ ಪಂಚ್ ಖಂಡಿತಾ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಹೆಚ್ಚಿದ ಕಲ್ಲಂಗಡಿ ಹಣ್ಣು – 4 ಕಪ್
    ದಾಳಿಂಬೆ ಬೀಜಗಳು – 1 ಕಪ್
    ಸಕ್ಕರೆ – ಕಾಲು ಕಪ್
    ಪುದೀನಾ – 6-7 ಎಲೆಗಳು
    ನಿಂಬೆ ರಸ- 2 ಟೀಸ್ಪೂನ್
    ತಣ್ಣಗಿನ ನೀರು – 2 ಕಪ್
    ಐಸ್ ಕ್ಯೂಬ್ – 2 ಕಪ್ ಇದನ್ನೂ ಓದಿ: ಇಮ್ಯೂನಿಟಿ ಪವರ್‌ಗಾಗಿ ಸವಿಯಿರಿ ಸೀತಾಫಲ ಸ್ಮೂದಿ

    ಮಾಡುವ ವಿಧಾನ:
    * ಮೊದಲಿಗೆ ಕಲ್ಲಂಗಡಿ, ದಾಳಿಂಬೆ, ಸಕ್ಕರೆ, ಪುದೀನ ಎಲೆ ಮತ್ತು ನಿಂಬೆ ರಸವನ್ನು ಬ್ಲೆಂಡರ್‌ಗೆ ಹಾಕಿ, 1-2 ನಿಮಿಷಗಳ ಕಾಲ ಅಥವಾ ನಯವಾಗುವ ತನಕ ಬ್ಲೆಂಡ್ ಮಾಡಿ.
    * ನಂತರ ಅದಕ್ಕೆ ನೀರನ್ನು ಹಾಕಿ ಮತ್ತೆ ಸ್ವಲ್ಪ ಬ್ಲೆಂಡ್ ಮಾಡಿ.
    * ಸ್ಟ್ರೈನರ್‌ಗೆ ಈ ಮಿಶ್ರಣವನ್ನು ಹಾಕಿ ಚೆನ್ನಾಗಿ ಸೋಸಿಕೊಳ್ಳಿ.
    * ಸರ್ವಿಂಗ್ ಗ್ಲಾಸ್‌ಗಳಿಗೆ ರಸವನ್ನು ಸುರಿಯಿರಿ. ಅದಕ್ಕೆ ಐಸ್ ಕ್ಯೂಬ್‌ಗಳನ್ನು ಸೇರಿಸಿ.
    * ಇದೀಗ ಕಲ್ಲಂಗಡಿ, ದಾಳಿಂಬೆ ಪಂಚ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಮಖಾನಾ ಖೀರ್ ಮಾಡಿ ನೋಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ನ್ಯಾಕ್ಸ್ ಟೈಂಗೆ ಸಿಂಪಲ್ ದಹಿ ಆಲೂ ರೆಸಿಪಿ

    ಸ್ನ್ಯಾಕ್ಸ್ ಟೈಂಗೆ ಸಿಂಪಲ್ ದಹಿ ಆಲೂ ರೆಸಿಪಿ

    ಸಂಜೆ ವೇಳೆ ಏನಾದ್ರೂ ಸಿಂಪಲ್ ಆಗಿ ಸ್ನ್ಯಾಕ್ಸ್ ತಯಾರಿಸಲು ಬಯಸುತ್ತೀರಾದರೆ ದಹಿ ಆಲೂ ಟ್ರೈ ಮಾಡಬಹುದು. ಹೆಸರೇ ಹೇಳುವಂತೆ ಆಲೂಗಡ್ಡೆ ಹಾಗೂ ಮೊಸರು ಬಳಸಿ ಮಾಡುವ ಈ ರೆಸಿಪಿಗೆ ಕೆಲವೇ ಮಸಾಲೆ ಪದಾರ್ಥಗಳು ಸಾಕು. ಮಕ್ಕಳು ಕೂಡಾ ಇಷ್ಟಪಟ್ಟು ಸವಿಯೋ ರೆಸಿಪಿ ಇದಾಗಿದ್ದು, ಫಟಾಫಟ್ ಅಂತ ತಯಾರಿಸಬೇಕಾಗಿ ಬಂದಾಗ ಖಂಡಿತಾ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಆಲೂಗಡ್ಡೆ – 250 ಗ್ರಾಂ
    ಮೊಸರು – 1 ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ಚಾಟ್ ಮಸಾಲಾ – ಕಾಲು ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಜೀರಿಗೆ – 1 ಟೀಸ್ಪೂನ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಕಪ್
    ಎಣ್ಣೆ – ಅಗತ್ಯಕ್ಕೆ ತಕ್ಕಂತೆ ಇದನ್ನೂ ಓದಿ: ತೆಂಗಿನಕಾಯಿ ಬರ್ಫಿ ಹೀಗೆ ಮಾಡಿ !

    ಮಾಡುವ ವಿಧಾನ:
    * ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.
    * ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಜೀರಿಗೆ ಹಾಕಿ ಹುರಿಯಿರಿ.
    * ಬಳಿಕ ಆಲೂಗಡ್ಡೆ, ಉಪ್ಪು, ಚಾಟ್ ಮಸಾಲಾ, ಕೆಂಪು ಮೆಣಸಿನ ಪುಡಿ ಹಾಕಿ ಹುರಿದುಕೊಳ್ಳಿ.
    * ನಂತರ ಮೊಸರು ಸೇರಿಸಿ ಮಿಶ್ರಣ ಮಾಡಿ.
    * ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ದಹಿ ಆಲೂ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಮಖಾನಾ ಖೀರ್ ಮಾಡಿ ನೋಡಿ

    Web Stories

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಮ್ಯೂನಿಟಿ ಪವರ್‌ಗಾಗಿ ಸವಿಯಿರಿ ಸೀತಾಫಲ ಸ್ಮೂದಿ

    ಇಮ್ಯೂನಿಟಿ ಪವರ್‌ಗಾಗಿ ಸವಿಯಿರಿ ಸೀತಾಫಲ ಸ್ಮೂದಿ

    ಸೀತಾಫಲದಿಂದ ಮಾಡಲಾಗುವ ಆರೋಗ್ಯಕರ ಸ್ಮೂದಿ ಬಾಯಾರಿಕೆಯನ್ನು ತಣಿಸುತ್ತದೆ. ಶುಂಠಿ, ಬಾದಾಮಿಯನ್ನು ಸೇರಿಸಿ ಮಾಡಲಾಗುವ ಸೀತಾಫಲ ಸ್ಮೂದಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ಬಹಳಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಈ ನವರಾತ್ರಿ ಸಂದರ್ಭದಲ್ಲಿ ಸೀತಾಫಲದ ಸ್ಮೂದಿಯನ್ನು ನೀವು ಕೂಡಾ ತಯಾರಿಸಿ, ಸವಿದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

    ಬೇಕಾಗುವ ಪದಾರ್ಥಗಳು:
    ಬಾದಾಮಿ ಹಾಲು – 1 ಕಪ್
    ಸೀತಾಫಲದ ತಿರುಳು – 1 ಕಪ್
    ಕೊಚ್ಚಿದ ಶುಂಠಿ – ಅರ್ಧ ಟೀಸ್ಪೂನ್
    ಜೇನುತುಪ್ಪ – 1 ಟೀಸ್ಪೂನ್
    ಬಾದಾಮಿ ಚೂರುಗಳು – 1 ಟೀಸ್ಪೂನ್
    ಏಲಕ್ಕಿ ಪುಡಿ – 1 ಚಿಟಿಕೆ ಇದನ್ನೂ ಓದಿ: ಮಖಾನಾ ಖೀರ್ ಮಾಡಿ ನೋಡಿ

    ಮಾಡುವ ವಿಧಾನ:
    * ಮೊದಲಿಗೆ ಬಾದಾಮಿ ಚೂರುಗಳನ್ನು ಪೂರ್ವಭಾವಿಯಾಗಿ ಕಾಯಿಸಲ್ಪಟ್ಟ ಓವನ್‌ನಲ್ಲಿ ಸುಮಾರು 5 ನಿಮಿಷಗಳ ಕಾಲ 150 ಡಿಗ್ರಿ ತಾಪದಲ್ಲಿ ಹುರಿದುಕೊಳ್ಳಿ.
    * ಒಂದು ಮಿಕ್ಸರ್ ಜಾರ್‌ನಲ್ಲಿ ಹುರಿದ ಬಾದಾಮಿ ಚೂರುಗಳು, ಕೊಚ್ಚಿದ ಶುಂಠಿ, ಸೀತಾಫಲ ತಿರುಳು, ಬಾದಾಮಿ ಹಾಲು, ಜೇನುತುಪ್ಪ ಮತ್ತು ಚಿಟಿಕೆ ಏಲಕ್ಕಿ ಪುಡಿಯನ್ನು ಸೇರಿಸಿ. ಅದನ್ನು ಸುಮಾರು 4 ನಿಮಿಷಗಳ ಕಾಲ ಬ್ಲೆಂಡ್ ಮಾಡಿಕೊಳ್ಳಿ.
    * ಈಗ ಮಿಶ್ರಣ ಕ್ರೀಮ್‌ನಂತಹ ಟೆಕ್ಸ್ಚರ್ ಹೊಂದಿರುತ್ತದೆ. ಅದನ್ನು ಒಂದು ಪಾತ್ರೆಗೆ ಹಾಕಿ, ಅರ್ಧ ಗಂಟೆ ಫ್ರಿಜ್‌ನಲ್ಲಿಡಿ.
    * ಬಳಿಕ ಗ್ಲಾಸ್‌ಗಳಿಗೆ ಸುರಿದು, ಒಣ ಹಣ್ಣುಗಳಿಂದ ಅಲಂಕರಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸೀತಾಫಲ ಸ್ಮೂದಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ನವರಾತ್ರಿ ಸ್ಪೆಷಲ್‌ – ರಾಜಗಿರಾ ಹಲ್ವಾ ಮಾಡಿ ವ್ರತವನ್ನಾಚರಿಸಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೆಂಗಿನಕಾಯಿ ಬರ್ಫಿ ಹೀಗೆ ಮಾಡಿ !

    ತೆಂಗಿನಕಾಯಿ ಬರ್ಫಿ ಹೀಗೆ ಮಾಡಿ !

    ಕ್ಟೋಬರ್ 15ರಿಂದ ನವರಾತ್ರಿ ಆರಂಭವಾಗಿದ್ದು, ದುರ್ಗೆಯ 9 ಅವತಾರಗಳನ್ನು ಈ ಸಮಯದಲ್ಲಿ ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಕೆಲವರು ವ್ರತ, ಪೂಜೆಗಳನ್ನು ಕೈಗೊಂಡು ದೇವರಿಗೆ ನೈವೇದ್ಯ ಸಮರ್ಪಿಸಿ ನಂತರ ಆಹಾರ ಸೇವಿಸುತ್ತಾರೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಸುಲಭವಾಗಿ ಮಾಡಬಲ್ಲ ತೆಂಗಿನಕಾಯಿ ಬರ್ಫಿಯನ್ನು ಹೇಗೆ ತಯಾರಿಸಬಹುದು ಎಂಬುದನ್ನು ನಿಮಗೆ ತಿಳಿಸಿಕೊಡುತ್ತೇವೆ. ಇದನ್ನು ದೇವರಿಗೂ ಸಮರ್ಪಿಸಬಹುದಾಗಿದ್ದು, ಮಕ್ಕಳಿಗೂ ತುಂಬಾ ಇಷ್ಟವಾಗುವ ಸ್ವೀಟ್ ಇದಾಗಿದೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಮಖಾನಾ ಖೀರ್ ಮಾಡಿ ನೋಡಿ

    ಬೇಕಾಗುವ ಸಾಮಗ್ರಿಗಳು:
    ತೆಂಗಿನಕಾಯಿ ತುರಿ – 2 ಕಪ್
    ಸಕ್ಕರೆ – 1 ಕಪ್
    ಹೆಚ್ಚಿದ ಬಾದಾಮಿ – 4
    ಕುಟ್ಟಿ ಪುಡಿಮಾಡಿದ ಏಲಕ್ಕಿ – 4
    ತುಪ್ಪ – 2 ಚಮಚ
    ಹಾಲು – 2 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್‌ಗೆ ಸ್ವಲ್ಪ ತುಪ್ಪ ಹಾಕಿಕೊಂಡು ತುರಿದ ತೆಂಗಿನಕಾಯಿ ತುರಿಯನ್ನು ಹಾಕಿಕೊಂಡು 3 ನಿಮಿಷಗಳ ಕಾಲ ಚನ್ನಾಗಿ ಫ್ರೈ ಮಾಡಿಕೊಳ್ಳಿ.
    * ತೆಂಗಿನ ತುರಿ ಘಮಬರುವ ಸಮಯದಲ್ಲಿ ಅದಕ್ಕೆ ಹಾಲು ಮತ್ತು ಸಕ್ಕರೆಯನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಸಕ್ಕರೆ ನೀರಾಗಿ ಮಿಶ್ರಣ ಗಟ್ಟಿಯಾದ ಬಳಿಕ ಅದಕ್ಕೆ ಕುಟ್ಟಿದ ಏಲಕ್ಕಿ ಪುಡಿಯನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಈಗ ಒಂದು ಪ್ಲೇಟ್‌ಗೆ ತುಪ್ಪ ಹಚ್ಚಿಟ್ಟುಕೊಳ್ಳಿ. ಬಳಿಕ ಇದಕ್ಕೆ ತೆಂಗಿನತುರಿ ಮಿಶ್ರಣವನ್ನು ಹಾಕಿಕೊಂಡು ಸಮತಟ್ಟಾಗಿ ಮಾಡಿಕೊಳ್ಳಿ. ಬಳಿಕ ಇದರ ಮೇಲೆ ಬಾದಾಮಿ ಹಾಕಿಕೊಂಡು ಚಾಕುವಿನ ಸಹಾಯದಿಂದ ಚೌಕಾಕಾರದಲ್ಲಿ ಕತ್ತರಿಸಿಕೊಳ್ಳಿ.
    * ಬಳಿಕ ಇದನ್ನು ಮೂರು ಗಂಟೆ ಹಾಗೇ ಇಡಿ. ಈಗ ತೆಂಗಿನಕಾಯಿ ಬರ್ಫಿ ಸವಿಯಲು ಸಿದ್ಧ. ಇದನ್ನೂ ಓದಿ: ನವರಾತ್ರಿ ಸ್ಪೆಷಲ್‌ – ರಾಜಗಿರಾ ಹಲ್ವಾ ಮಾಡಿ ವ್ರತವನ್ನಾಚರಿಸಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಖಾನಾ ಖೀರ್ ಮಾಡಿ ನೋಡಿ

    ಮಖಾನಾ ಖೀರ್ ಮಾಡಿ ನೋಡಿ

    ವರಾತ್ರಿ ತುಂಬಾ ಮುಖ್ಯವಾದ ಹಿಂದೂಗಳ ಹಬ್ಬ. ಸಂಭ್ರಮದ ಈ 9 ದಿನಗಳಲ್ಲಿ ದುರ್ಗಾ ದೇವಿಯನ್ನು 9 ವಿವಿಧ ರೂಪಗಳಲ್ಲಿ ಪೂಜಿಸಲಾಗುತ್ತದೆ. ಈ 9 ದಿನಗಳಲ್ಲಿ ಹಲವು ಆಹಾರ ಪದಾರ್ಥಗಳನ್ನು ಸೇವಿಸಬಾರದು ಎನ್ನಲಾಗುತ್ತದೆ. ನವರಾತ್ರಿಯ ವ್ರತವನ್ನು ಪಾಲಿಸುವವರು ಈ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ನಾವಿಂದು ನವರಾತ್ರಿ ದಿನಗಳಲ್ಲಿ ಸೇವಿಸಬಹುದಾದ ಕೆಲ ಸಾಮಾಗ್ರಿಗಳನ್ನಷ್ಟೇ ಬಳಸಿ ಸಿಹಿ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ನವರಾತ್ರಿಯಂದು ಸೇವಿಸಲು ಸೂಕ್ತವಾದ ಮಖಾನಾ (ಕಮಲದ ಹೂವಿನ ಬೀಜ) ಬಳಸಿ ಖೀರ್ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಮಖಾನಾ – 1 ಕಪ್
    ಹಾಲು – 4 ಕಪ್
    ಸಕ್ಕರೆ – ಅರ್ಧ ಕಪ್
    ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
    ಒಣ ಬೀಜಗಳು – ಅಲಂಕರಿಸಲು
    ತುಪ್ಪ – ಹುರಿಯಲು ಬೇಕಾಗುವಷ್ಟು ಇದನ್ನೂ ಓದಿ: ನವರಾತ್ರಿ ಸ್ಪೆಷಲ್‌ – ರಾಜಗಿರಾ ಹಲ್ವಾ ಮಾಡಿ ವ್ರತವನ್ನಾಚರಿಸಿ

    ಮಾಡುವ ವಿಧಾನ:
    * ಮೊದಲಿಗೆ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಮಖಾನಾವನ್ನು ಗರಿಗರಿಯಾಗುವವರೆಗೆ ಹುರಿಯಿರಿ.
    * ಮತ್ತೊಂದು ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಿ, ಕುದಿಸಿಕೊಳ್ಳಿ.
    * ಹುರಿದ ಮಖಾನಾ, ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಹಾಲಿಗೆ ಸೇರಿಸಿ.
    * ಮಿಶ್ರಣವನ್ನು ದಪ್ಪವಾಗಿ, ಕ್ರೀಮ್‌ನಂತೆ ಸ್ಥಿರತೆಯನ್ನು ತಲುಪುವವರೆಗೆ ಕಡಿಮೆ ಶಾಖದಲ್ಲಿ ಬೇಯಿಸಿ.
    * ಕತ್ತರಿಸಿದ ಒಣ ಬೀಜಗಳಿಂದ ಅಲಂಕರಿಸಿದರೆ ಮಖಾನಾ ಖೀರ್ ಸವಿಯಲು ಸಿದ್ಧವಾಗುತ್ತದೆ.
    * ಇದನ್ನು ಬಿಸಿ ಅಥವಾ ತಣ್ಣಗಾಗಿಸಿಯೂ ಸವಿಯಬಹುದು. ಇದನ್ನೂ ಓದಿ: ನವರಾತ್ರಿ ವ್ರತ ಆಚರಣೆ ಹೇಗೆ? ಯಾವ ಆಹಾರ ಸೇವಿಸಬಹುದು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನವರಾತ್ರಿ ಸ್ಪೆಷಲ್‌ – ರಾಜಗಿರಾ ಹಲ್ವಾ ಮಾಡಿ ವ್ರತವನ್ನಾಚರಿಸಿ

    ನವರಾತ್ರಿ ಸ್ಪೆಷಲ್‌ – ರಾಜಗಿರಾ ಹಲ್ವಾ ಮಾಡಿ ವ್ರತವನ್ನಾಚರಿಸಿ

    ರಾಜಗಿರಾ ಧಾನ್ಯ ಆರೋಗ್ಯಕರ ಗುಣಗಳಿಂದ ಸಮೃದ್ಧವಾಗಿದೆ. ಇದರ ನಿಯಮಿತ ಸೇವನೆ ಆರೋಗ್ಯಕ್ಕೆ ಹಲವು ಪ್ರಯೋಜನ ನೀಡುತ್ತದೆ. ರಾಜಗಿರಾ ಹಲ್ವಾ ಅಥವಾ ರಾಜಗಿರಾ ಶೀರಾ ಇದು ರಾಜಗಿರಾ ಅಥವಾ ಅಮರಂಥ್ ಹಿಟ್ಟನ್ನು ಬಳಸಿ ಮಾಡುವ ಸಿಹಿ. ವ್ರತದ ದಿನಗಳಲ್ಲಿ ಮಾಡಲು ಇದು ಅತ್ಯುತ್ತಮ ಆಹಾರ. ಕೆಲವೇ ಪದಾರ್ಥಗಳನ್ನು ಬಳಸಿ ರಾಜಗಿರಾ ಹಲ್ವಾ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ತುಪ್ಪ – ಅರ್ಧ ಕಪ್
    ರಾಜಗಿರ ಹಿಟ್ಟು – ಮುಕ್ಕಾಲು ಕಪ್
    ಬೆಚ್ಚಗಿನ ಹಾಲು – 1 ಕಪ್
    ಸಕ್ಕರೆ ಪುಡಿ – ಅರ್ಧ ಕಪ್
    ಏಲಕ್ಕಿ ಪುಡಿ – 1 ಟೀಸ್ಪೂನ್ ಇದನ್ನೂ ಓದಿ: ಡೈರಿ ಉತ್ಪನ್ನ ಬೇಡ – ಕೂಲ್ ಕೂಲ್ ಗ್ರೇಪ್ ಐಸ್ ಟ್ರೈ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಬಾಣಲೆಗೆ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.
    * ತುಪ್ಪ ಬಿಸಿಯಾದ ನಂತರ ರಾಜಗಿರಾ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಯಾವುದೇ ಉಂಡೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
    * ಹಿಟ್ಟು ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ಇದಕ್ಕೆ ಸುಮಾರು 10-12 ನಿಮಿಷ ತೆಗೆದುಕೊಳ್ಳಬಹುದು. ತಳ ಹಿಡಿಯದಂತೆ ಆಗಾಗ ಬೆರೆಸುವುದನ್ನು ಮುಂದುವರಿಸಿ.
    * ಹಿಟ್ಟು ಗೋಲ್ಡನ್ ಬ್ರೌನ್ ಬಣ್ಣ ಬಂದ ನಂತರ ಪ್ಯಾನ್‌ಗೆ ಬೆಚ್ಚಗಿನ ಹಾಲನ್ನು ಸೇರಿಸಿ ಮತ್ತು 1-2 ನಿಮಿಷ ನೆನೆಯುವವರೆಗೆ ಬೇಯಿಸಿ. ನಿರಂತರವಾಗಿ ಬೆರೆಸುವುದನ್ನು ಮುಂದುವರಿಸಿ.
    * ಈಗ ಸಕ್ಕರೆ ಹಾಗೂ ಏಲಕ್ಕಿ ಪುಡಿ ಸೇರಿಸಿ, ಹಲ್ವಾ ಗಾಢ ಬಣ್ಣಕ್ಕೆ ಬರುವವರೆಗೆ ಬೇಯಿಸಿ.
    * ಬಾದಾಮಿ, ಪಿಸ್ತಾ ಸೇರಿದಂತೆ ಒಣ ಹಣ್ಣುಗಳಿಂದ ಅಲಂಕರಿಸಿ, ಹಲ್ವಾ ತಣ್ಣಗಾಗಲು ಬಿಡಿ. ರಾಜಗಿರಾ ಹಲ್ವಾ ತಯಾಯಾಗಿದ್ದು, ವ್ರತದ ಸಮಯದಲ್ಲಿ ಸೇವಿಸಿ. ಇದನ್ನೂ ಓದಿ: ಒಂದು ಬೈಟ್ ಸಾಕಾಗಲ್ಲ – ಮತ್ತೆ ಮತ್ತೆ ಬೇಕೆನಿಸೋ ಕ್ಯಾರಮೆಲ್ ಮಿಠಾಯಿ ರೆಸಿಪಿ