Tag: recipe

  • 10 ನಿಮಿಷದಲ್ಲಿ ಮಾಡಿ ರೋಲೆಕ್ಸ್..!

    10 ನಿಮಿಷದಲ್ಲಿ ಮಾಡಿ ರೋಲೆಕ್ಸ್..!

    ರೋಲೆಕ್ಸ್ ಎಂಬುದು ಉಗಾಂಡಾದ ಒಂದು ಆಹಾರವಾಗಿದೆ. ಇದು ಅಲ್ಲಿನ ಶ್ರೇಷ್ಠ ಆಹಾರವಾಗಿದ್ದು, ಪ್ರಸ್ತುತ ಎಲ್ಲೆಡೆ ಲಭ್ಯವಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಉಗಾಂಡಾದ ಆಹಾರವಾಗಿರುವ ರೋಲೆಕ್ಸ್ ಅನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಇದು ಮಾಡಲು ತುಂಬಾ ಸುಲಭವಾಗಿದ್ದು, ಕೇವಲ ಹತ್ತು ನಿಮಿಷದಲ್ಲಿ ತಯಾರಿಸಬಹುದು. ಹಾಗಿದ್ರೆ ಇದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಬಾಯಲ್ಲಿ ನೀರೂರಿಸೋ ಸಿಂಪಲ್ ಬಟರ್ ಗಾರ್ಲಿಕ್ ಸ್ಕ್ವಿಡ್

    ಬೇಕಾಗುವ ಸಾಮಗ್ರಿಗಳು:
    ಮೊಟ್ಟೆ – 2
    ಹೆಚ್ಚಿದ ಈರುಳ್ಳಿ – ಸ್ವಲ್ಪ
    ಹೆಚ್ಚಿದ ಟೊಮೆಟೊ – 1 ಚಮಚ
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
    ಹೆಚ್ಚಿದ ಹಸಿರು ಮೆಣಸಿನಕಾಯಿ – ಅರ್ಧ ಚಮಚ
    ಉಪ್ಪು -ರುಚಿಗೆ ತಕ್ಕಷ್ಟು
    ಪೆಪ್ಪರ್ ಪೌಡರ್ – ಅರ್ಧ ಚಮಚ
    ಎಣ್ಣೆ ಅಥವಾ ಬೆಣ್ಣೆ -ಅಗತ್ಯಕ್ಕೆ ತಕ್ಕಷ್ಟು
    ಚಪಾತಿ – 1

    ಮಾಡುವ ವಿಧಾನ:
    * ಮೊದಲಿಗೆ ಒಂದು ಬೌಲ್‌ನಲ್ಲಿ ಮೊಟ್ಟೆಗಳನ್ನು ಒಡೆದು ಹಾಕಿಕೊಳ್ಳಿ. ಬಳಿಕ ಅದಕ್ಕೆ ಎಣ್ಣೆ/ಬೆಣ್ಣೆ ಬಿಟ್ಟು ಉಳಿದೆಲ್ಲಾ ಸಾಮಗ್ರಿಗಳನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಈಗ ಒಂದು ಪ್ಯಾನ್‌ಗೆ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಹಾಕಿಕೊಂಡು ಅದಕ್ಕೆ ಈ ಮಿಶ್ರಣವನ್ನು ಹಾಕಿ ಆಮ್ಲೆಟ್ ರೀತಿ ಬೇಯಿಸಿಕೊಳ್ಳಿ.
    * ಆಮ್ಲೆಟ್ ಚನ್ನಾಗಿ ಬೆಂದ ಬಳಿಕ ಅದನ್ನು ಪ್ಯಾನ್‌ನಿಂದ ತೆಗೆಯಿರಿ.
    * ಈಗ ಆಮ್ಲೆಟ್ ಅನ್ನು ಚಪಾತಿ ಮೇಲೆ ಇರಿಸಿ ರೋಲ್ ಮಾಡಿ. ರೋಲೆಕ್ಸ್ ಸವಿಯಲು ಸಿದ್ಧ.
    * ಮಕ್ಕಳು ಇದನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಇದನ್ನೂ ಓದಿ: ಮಟನ್ ರೆಜಾಲಾ – ಕೋಲ್ಕತ್ತಾದ ಐಕಾನಿಕ್ ಫುಡ್ ಟ್ರೈ ಮಾಡಿ

  • ಬಾಯಲ್ಲಿ ನೀರೂರಿಸೋ ಸಿಂಪಲ್ ಬಟರ್ ಗಾರ್ಲಿಕ್ ಸ್ಕ್ವಿಡ್

    ಬಾಯಲ್ಲಿ ನೀರೂರಿಸೋ ಸಿಂಪಲ್ ಬಟರ್ ಗಾರ್ಲಿಕ್ ಸ್ಕ್ವಿಡ್

    ಟರ್ ಗಾರ್ಲಿಕ್ ಸ್ಕ್ವಿಡ್ ರುಚಿಕರವಾದ ಸೀಫುಡ್. ಘಮಘನಿಸುವ ಈ ಅಡುಗೆ ಸ್ಕ್ವಿಡ್ ಅನ್ನು ಬೆಣ್ಣೆ ಮತ್ತು ಬೆಳ್ಳುಳ್ಳಿಯಲ್ಲಿ ಬೇಯಿಸಿ ಮಾಡಲಾಗುತ್ತದೆ. ಬಾಯಲ್ಲಿ ನೀರೂರಿಸೋ ಈ ಸಿಂಪಲ್ ಅಡುಗೆ ಅನ್ನ ಅಥವಾ ಪಾಸ್ತಾದೊಂದಿಗೆ ಬಡಿಸಬಹುದು. ನೀವು ಕೂಡಾ ಮನೆಯಲ್ಲಿ ಬಟರ್ ಗಾರ್ಲಿಕ್ ಸ್ಕ್ವಿಡ್ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಸ್ಕ್ವಿಡ್ – ಅರ್ಧ ಕೆಜಿ
    ಬೆಣ್ಣೆ – 4 ಟೀಸ್ಪೂನ್
    ಕೊಚ್ಚಿದ ಬೆಳ್ಳುಳ್ಳಿ – 4
    ಉಪ್ಪು – ರುಚಿಗೆ ತಕ್ಕಷ್ಟು
    ಕರಿಮೆಣಸಿನ ಪುಡಿ – ಸ್ವಾದಕ್ಕನುಸಾರ
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಮಟನ್ ರೆಜಾಲಾ – ಕೋಲ್ಕತ್ತಾದ ಐಕಾನಿಕ್ ಫುಡ್ ಟ್ರೈ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಸ್ಕ್ವಿಡ್ ಮೀನುಗಳನ್ನು ಸ್ವಚ್ಛಗೊಳಿಸಿ, ಉಂಗುರಾಕಾರದಲ್ಲಿ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ.
    * ಒಂದು ದೊಡ್ಡ ಬಾಣಲೆಯಲ್ಲಿ ಮಧ್ಯಮ ಉರಿಯಲ್ಲಿ ತುಪ್ಪ ಬಿಸಿ ಮಾಡಿ.
    * ಅದಕ್ಕೆ ಕೊಚ್ಚಿದ ಬೆಳ್ಳುಳ್ಳಿ ಸೇರಿಸಿ, ಪರಿಮಳ ಬರುವವರೆಗೆ ಹುರಿದುಕೊಳ್ಳಿ.
    * ಬಳಿಕ ಸ್ಕ್ವಿಡ್ ತುಂಡುಗಳನ್ನು ಅದಕ್ಕೆ ಸೇರಿಸಿ, ಅದು ಅರೆಪಾರದರ್ಶಕವಾಗುವವರೆಗೆ ಹಾಗೂ ಮೃದುವಾಗುವವರೆಗೆ ಸುಮಾರು 2-3 ನಿಮಿಷಗಳ ವರೆಗೆ ಬೇಯಿಸಿಕೊಳ್ಳಿ.
    * ನಂತರ ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸಿನ ಪುಡಿ ಸೇರಿಸಿ.
    * ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
    * ಇದೀಗ ಸಿಂಪಲ್ ಬಟರ್ ಗಾರ್ಲಿಕ್ ಸ್ಕ್ವಿಡ್ ತಯಾರಾಗಿದ್ದು, ಅನ್ನ ಅಥವಾ ಪಾಸ್ತಾದೊಂದಿಗೆ ಬಡಿಸಿ. ಇದನ್ನೂ ಓದಿ: ಬೆಂಗಾಲಿ ಮಟನ್ ಕರಿ ‘ಕೋಶಾ ಮಾಂಗ್ಶೋ’ ಟ್ರೈ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಶ್ಮೀರಿ ಪಿಂಕ್ ಚಹಾ ಟ್ರೈ ಮಾಡಿದ್ದೀರಾ?

    ಕಾಶ್ಮೀರಿ ಪಿಂಕ್ ಚಹಾ ಟ್ರೈ ಮಾಡಿದ್ದೀರಾ?

    ಬೆಳಗ್ಗೆ ಅಥವಾ ಸಂಜೆ ಒಂದು ಕಪ್ ಚಹಾ ಇಲ್ಲದೇ ಹೋದರೆ ಹೆಚ್ಚಿನವರಿಗೆ ಆ ದಿನ ಕಳೆಯೋದೇ ಕಷ್ಟವೆನಿಸಿಬಿಡುತ್ತದೆ. ನಮ್ಮಲ್ಲಿ ಚಹಾ ಪ್ರಿಯರು ಹೆಚ್ಚಿನವರಿದ್ದಾರೆ. ಅವರಿಗಾಗಿ ನಾವಿಂದು ಡಿಫರೆಂಟ್ ಚಹಾ ರೆಸಿಪಿಯನ್ನು ಹೇಳಿಕೊಡಲಿದ್ದೇವೆ. ಅದುವೇ ಕಾಶ್ಮೀರಿ ಚಹಾ. ಪಿಂಕ್ ಬಣ್ಣದ ಈ ಚಹಾವನ್ನು ಕಾಶ್ಮೀರಿ ನೂನ್ ಚಹಾ ಎಂದು ಕರೆಯಲಾಗುತ್ತದೆ. ಈ ಚಹಾದಲ್ಲಿ ವಿಶೇಷತೆ ಏನೆಂದರೆ ಇದರ ಬಣ್ಣ ಹಾಗೂ ಉಪ್ಪಾದ ರುಚಿ. ಕಾಶ್ಮೀರಿ ಚಹಾ ಪುಡಿ ಎಲ್ಲೆಡೆ ಸಿಗೋದು ಸ್ವಲ್ಪ ಕಷ್ಟವಾಗಿರುವುದರಿಂದ ನಾವು ಸಾಮಾನ್ಯವಾಗಿ ಬಳಸುವ ಯಾವುದೇ ಹಸಿರು ಚಹಾದ ಪುಡಿಯನ್ನು ಬಳಸಿ ಇದನ್ನು ಮಾಡಬಹುದು. ಹಾಗಿದ್ರೆ ಕಾಶ್ಮೀರಿ ಚಹಾ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಐಸ್ ಕ್ಯೂಬ್ – 2-3
    ನೀರು – 2 ಕಪ್
    ಚಹಾ ಪುಡಿ – 2 ಟೀಸ್ಪೂನ್
    ಸ್ಟಾರ್ ಅನೀಸ್ – 2
    ಹಸಿರು ಏಲಕ್ಕಿ – 6-8
    ಲವಂಗ – 2
    ದಾಲ್ಚಿನ್ನಿ ಚಕ್ಕೆ – 1 ಇಂಚು
    ಅಡುಗೆ ಸೋಡಾ – ಚಿಟಿಕೆ
    ಹಾಲು – 1 ಕಪ್
    ಉಪ್ಪು – ಕಾಲು ಟೀಸ್ಪೂನ್
    ಸಕ್ಕರೆ – 2 ಟೀಸ್ಪೂನ್
    ಒರಟಾಗಿ ಪುಡಿ ಮಾಡಿದ ಬಾದಾಮಿ, ಪಿಸ್ತಾ – 1 ಟೀಸ್ಪೂನ್ ಇದನ್ನೂ ಓದಿ: ಸಿಂಪಲ್ ಸ್ಟ್ರಾಬೆರಿ ಕಪ್‌ಕೇಕ್ ಹೀಗೆ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಕಪ್ ನೀರನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ಐಸ್ ಕ್ಯೂಬ್ ಸೇರಿಸಿ ಪಕ್ಕಕ್ಕೆ ಇಡಿ.
    * ಒಂದು ಲೋಹದ ಪಾತ್ರೆಯಲ್ಲಿ ಉಳಿದ ಒಂದು ಕಪ್ ನೀರು ಹಾಕಿ, ಹೆಚ್ಚಿನ ಉರಿಯಲ್ಲಿ ಬಿಸಿ ಮಾಡಿ.
    * ಅದಕ್ಕೆ ಕಾಶ್ಮೀರಿ ಚಾಹಾ ಪುಡಿ, ಸ್ಟಾರ್ ಅನೀಸ್, ಹಸಿರು ಏಲಕ್ಕಿ ಬೀಜಗಳು, ಲವಂಗ ಮತ್ತು ದಾಲ್ಚಿನ್ನಿ ಸೇರಿಸಿ ಮತ್ತು ಕುದಿಸಿ.
    * ಅದು ಕುದಿ ಬಂದ ನಂತರ ಅಡುಗೆ ಸೋಡಾ ಸೇರಿಸಿ. ಈ ಮಿಶ್ರಣವನ್ನು 5-6 ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಕುದಿಸಿಕೊಳ್ಳಿ.
    * ಒಂದು ಗ್ಲಾಸ್ ಬಳಸಿ ಸಾಂದರ್ಭಿಕವಾಗಿ ಸ್ವಲ್ಪ ಸ್ವಲ್ಪವೇ ಚಹಾವನ್ನು ಎತ್ತಿ ಮತ್ತೆ ಅದೇ ಪಾತ್ರೆಗೆ ಮೇಲಿನಿಂದ ಸುರಿಯಿರಿ. ಇದರಿಂದ ಚಹಾದಲ್ಲಿ ನೊರೆ ಮೂಡಿ, ಅದರ ಬಣ್ಣ ನಿಧಾನವಾಗಿ ಹಸಿರಿನಿಂದ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಹೀಗಾಗದಿದ್ದರೆ ನೀವು ಇನ್ನೊಂದು ಚಿಟಿಕೆ ಅಡುಗೆ ಸೋಡಾ ಬೆರೆಸಿ. ನೀರು ಬಹುತೇಕ ಆವಿಯಾಗಲು ಬಿಡಿ.
    * ಈಗ ಬದಿಗಿಟ್ಟಿದ್ದ ಐಸ್ ನೀರನ್ನು ಸೇರಿಸಿ. ಹಾಲು, ಉಪ್ಪು ಮತ್ತು ಸಕ್ಕರೆ ಸೇರಿಸಿ ಸ್ವಲ್ಪ ಕುದಿಯಲು ಬಿಡಿ.
    * ಬಳಿಕ ಉರಿಯನ್ನು ಆಫ್ ಮಾಡಿ ಚಹಾದ ಗ್ಲಾಸ್‌ಗಳಲ್ಲಿ ಸೋಸಿಕೊಳ್ಳಿ.
    * ಅದಕ್ಕೆ ಒಣ ಬಾದಾಮಿ ಹಾಗೂ ಪಿಸ್ತಾ ಚೂರುಗಳಿಂದ ಅಲಂಕರಿಸಿದರೆ ಕಾಶ್ಮೀರಿ ಪಿಂಕ್ ಚಹಾ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಬೇಕರಿ ಮಾದರಿಯ ಪಂಪ್ಕಿನ್‌  ರೋಲ್ ಮಾಡಿ…!

    
    

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಲ್ಕೇ ಪದಾರ್ಥ ಬಳಸಿ ಮಾಡಿ ಸಿಹಿಯಾದ ಚಾಕ್ಲೇಟ್ ಮೈಸೂರ್ ಪಾಕ್

    ನಾಲ್ಕೇ ಪದಾರ್ಥ ಬಳಸಿ ಮಾಡಿ ಸಿಹಿಯಾದ ಚಾಕ್ಲೇಟ್ ಮೈಸೂರ್ ಪಾಕ್

    ರ್ನಾಟಕದ ಅತ್ಯಂತ ಫೇಮಸ್ ಸಿಹಿ ಅದೆಂದರೆ ಮೈಸೂರ್ ಪಾಕ್. ಕಡಲೆ ಹಿಟ್ಟು, ತುಪ್ಪ, ಸಕ್ಕರೆ ಬಳಸಿ ಮಾಡಲಾಗುವ ಈ ಸಿಹಿ ಇಡಿ ದೇಶದಲ್ಲೇ ಜನಪ್ರಿಯ. ಇದನ್ನು ತಯಾರಿಸಲು ತಾಳ್ಮೆ ಹಾಗೂ ಸಮಯ ಅತ್ಯಗತ್ಯ. ರುಚಿಕರವಾದ ಮೈಸೂರ್ ಪಾಕ್‌ಗೆ ವಿಭಿನ್ನ ಫ್ಲೇವರ್ ಸೇರಿಸಿ, ಇನ್ನೂ ಹೆಚ್ಚು ರುಚಿಕರವಾಗಿ ಮಾಡಬಹುದು. ನಾವೀದಿನ ರುಚಿಕರವಾದ ಚಾಕ್ಲೇಟ್ ಮೈಸೂರ್ ಪಾಕ್ ಮಾಡೋದು ಹೇಗೆಂದು ಹೇಳಿಕೊಡಲಿದ್ದೇವೆ.

    ಬೇಕಾಗುವ ಪದಾರ್ಥಗಳು:
    ಕಡಲೆ ಹಿಟ್ಟು – 1 ಕಪ್
    ಸಕ್ಕರೆ – ಒಂದೂವರೆ ಕಪ್
    ತುಪ್ಪ – 1 ಕಪ್
    ಕೋಕೋ ಪೌಡರ್ – 1 ಟೀಸ್ಪೂನ್ ಇದನ್ನೂ ಓದಿ: ಬೇಕರಿ ಮಾದರಿಯ ಪಂಪ್ಕಿನ್‌  ರೋಲ್ ಮಾಡಿ…!

    ಮಾಡುವ ವಿಧಾನ:
    * ಮೊದಲಿಗೆ ಬಾಣಲೆಯಲ್ಲಿ ತುಪ್ಪವನ್ನು ಕರಗಿಸಿ, ಅದನ್ನು ಬೆಚ್ಚಗೆ ಸಿದ್ಧವಾಗಿಡಿ.
    * ಚೌಕಾಕಾರದ ಟ್ರೇ ಅಥವಾ ಬಟ್ಟಲಿಗೆ ಒಂದೆರಡು ಟೀಸ್ಪೂನ್ ತುಪ್ಪವನ್ನು ಗ್ರೀಸ್ ಮಾಡಿ ಬದಿಗಿಡಿ.
    * ಕಡಲೆ ಹಿಟ್ಟನ್ನು ಚೆನ್ನಾಗಿ ಶೋಧಿಸಿ, ದಪ್ಪ ತಳವಿರುವ ಬಾಣಲೆಯಲ್ಲಿ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಇದಕ್ಕೆ ಸುಮಾರು 3-5 ನಿಮಿಷ ತೆಗೆದುಕೊಳ್ಳುತ್ತದೆ. ನಂತರ ಅದನ್ನು ಒಂದು ಬಟ್ಟಲಿನಲ್ಲಿ ಪಕ್ಕಕ್ಕೆ ಇರಿಸಿ.
    * ಕೋಕೋ ಪೌಡರ್ ಜೊತೆಗೆ ಅರ್ಧ ಕಪ್ ತುಪ್ಪವನ್ನು ಕಡಲೆ ಹಿಟ್ಟಿಗೆ ಸೇರಿಸಿ. ಅದರಲ್ಲಿ ಉಂಡೆಗಳು ಹೋಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
    * ಮತ್ತೊಂದು ಬಾಣಲೆಗೆ ಮುಕ್ಕಾಲು ಕಪ್ ನೀರು ಹಾಗೂ ಸಕ್ಕರೆ ಸೇರಿಸಿ ಚೆನ್ನಾಗಿ ಬೆರೆಸಿ.
    * ಸಕ್ಕರೆ ಮಿಶ್ರಣ ಕುದಿಯಲು ಪ್ರಾರಂಭಿಸಿದಾಗ ಕಡಲೆ ಹಿಟ್ಟು ಹಾಗೂ ತುಪ್ಪದ ಮಿಶ್ರಣವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಕ್ಸ್ ಮಾಡಿ.
    * ಉಳಿದ ತುಪ್ಪವನ್ನು ಸ್ವಲ್ಪ ಸ್ವಲ್ಪವೇ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಮಧ್ಯಮ ಉರಿಯಲ್ಲಿ ಬೇಯಿಸಿ.
    * ಇಡೀ ಮಿಶ್ರಣ ದಪ್ಪಗೆ ಮುದ್ದೆಯಾಗುವವರೆಗೆ ಮಿಶ್ರಣ ಮಾಡಿ. ನಂತರ ಉರಿಯನ್ನು ಆಫ್ ಮಾಡಿ.
    * ಈಗ ಗ್ರೀಸ್ ಮಾಡಿದ ಟ್ರೇಗೆ ಮಿಶ್ರಣವನ್ನು ಸುರಿಯಿರಿ ಹಾಗೂ ಸ್ವಲ್ಪ ತಣ್ಣಗಾಗಲು ಬಿಡಿ.
    * 10-15 ನಿಮಿಷಗಳ ನಂತರ ಸ್ವಲ್ಪ ಗಟ್ಟಿಯಾದಾಗ ಅದನ್ನು ಚಾಕು ಸಹಾಯದಿಂದ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ನಂತರ ಅದನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
    * ಇದೀಗ ಸಿಹಿಯಾದ ಚಾಕ್ಲೇಟ್ ಮೈಸೂರ್ ಪಾಕ್ ಸವಿಯಲು ಸಿದ್ಧವಾಗಿದೆ. ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ ಇಡಿ. ಇದನ್ನೂ ಓದಿ: ನಾಲ್ಕು ಪದಾರ್ಥ ಬಳಸಿ ಮಾಡಿ ಬಾಳೆಹಣ್ಣಿನ ಐಸ್‌ಕ್ರೀಮ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಟನ್ ರೆಜಾಲಾ – ಕೋಲ್ಕತ್ತಾದ ಐಕಾನಿಕ್ ಫುಡ್ ಟ್ರೈ ಮಾಡಿ

    ಮಟನ್ ರೆಜಾಲಾ – ಕೋಲ್ಕತ್ತಾದ ಐಕಾನಿಕ್ ಫುಡ್ ಟ್ರೈ ಮಾಡಿ

    ಮೊಘಲರಿಂದ ಸ್ಫೂರ್ತಿ ಪಡೆದ ಮತ್ತು ಕೋಲ್ಕತ್ತಾದಾದ್ಯಂತ ಹಳೆಯ ಹೋಟೆಲುಗಳಲ್ಲಿ ಅತ್ಯಂತ ಫೇಮಸ್ ಆಗಿರುವ ಅದ್ಭುತ ನಾನ್‌ವೆಜ್ ಖಾದ್ಯ ಮಟನ್ ರೆಜಾಲಾ ಎಲ್ಲಾ ಸಂದರ್ಭಗಳಲ್ಲಿಯೂ ಸವಿಯುವ ಭಕ್ಷ್ಯವಾಗಿದೆ. ಬಂಗಾಳದ ಐಕಾನಿಕ್ ಆಹಾರವಾದ ಇದನ್ನು ಮೊಸರು, ಈರುಳ್ಳಿಯ ಗ್ರೇವಿಯೊಂದಿಗೆ ಮಟನ್ ಅನ್ನು ಬೇಯಿಸಿ ತಯಾರಿಸಲಾಗುತ್ತದೆ. ಅರಿಶಿನ ಸೇರಿಸದೇ ತಯಾರಿಸಲಾಗುವ ಈ ರೆಸಿಪಿ ವಿಭಿನ್ನ ರುಚಿಯನ್ನು ನೀಡುತ್ತದೆ. ಮನೆಯಲ್ಲಿ ಯಾವಾಗಲೂ ಭಿನ್ನ ವಿಭಿನ್ನ ನಾನ್‌ವೆಜ್ ರೆಸಿಪಿಗಳನ್ನು ಮಾಡಲಿಚ್ಛಿಸುವವರು ಮಟನ್ ರೆಜಾಲಾ ಒಂದು ಬಾರಿ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಮಟನ್ – 1 ಕೆಜಿ
    ಸಣ್ಣಗೆ ಹೆಚ್ಚಿದ ಈರುಳ್ಳಿ – 2
    ಕರಗಿಸಿದ ಬೆಣ್ಣೆ – 100 ಗ್ರಾಂ
    ಲವಂಗ – 2
    ಏಲಕ್ಕಿ – 3
    ದಾಲ್ಚಿನ್ನಿ ಚಕ್ಕೆ – 1 ಇಂಚು
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
    ಮೊಸರು – 250 ಗ್ರಾಂ
    ತೆಂಗಿನಕಾಯಿ ಪೇಸ್ಟ್ – 2 ಟೀಸ್ಪೂನ್
    ಗೋಡಂಬಿ ಪೇಸ್ಟ್ – 2 ಟೀಸ್ಪೂನ್
    ಗಸಗಸೆ – 1 ಟೀಸ್ಪೂನ್
    ಹಾಲು – 3 ಕಪ್
    ಕಮಲದ ಬೀಜಗಳು – ಕೆಲವು
    ಕೆಂಪು ಮೆಣಸಿನಕಾಯಿ – 2
    ಬಿರಿಯಾನಿ ಮಸಾಲಾ – ಅರ್ಧ ಟೀಸ್ಪೂನ್ ಇದನ್ನೂ ಓದಿ: ಬೆಂಗಾಲಿ ಮಟನ್ ಕರಿ ‘ಕೋಶಾ ಮಾಂಗ್ಶೋ’ ಟ್ರೈ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಕುಕ್ಕರ್‌ನಲ್ಲಿ ಬೆಣ್ಣೆಯನ್ನು ಬಿಸಿ ಮಾಡಿ, ಲವಂಗ, ಏಲಕ್ಕಿ ಮತ್ತು ದಾಲ್ಚಿನ್ನಿ ಸೇರಿಸಿ 30 ಸೆಕೆಂಡುಗಳ ಕಾಲ ಹುರಿಯಿರಿ.
    * ನಂತರ ಕತ್ತರಿಸಿದ ಈರುಳ್ಳಿ ಸೇರಿಸಿ ಮತ್ತು ಮೃದುವಾಗುವವರೆಗೆ ಹುರಿಯಿರಿ.
    * ಈಗ ಮಟನ್ ಅನ್ನು ಸೇರಿಸಿ, ಸ್ವಲ್ಪ ಸಮಯ ಫ್ರೈ ಮಾಡಿ. ಸ್ವಲ್ಪ ನೀರು ಸೇರಿಸಿ, ಹಾಗೂ ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಿ.
    * ಒಂದು ಬಟ್ಟಲಿನಲ್ಲಿ ಮೊಸರು ಹಾಕಿ, ಅದು ನಯವಾಗುವತನಕ ಬೀಟ್ ಮಾಡಿ.
    * ಬಳಿಕ ತೆಂಗಿನಕಾಯಿ ಪೇಸ್ಟ್, ಗೋಡಂಬಿ ಪೇಸ್ಟ್, ಗಸಗಸೆ ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ. ಅದನ್ನು ಪಕ್ಕಕ್ಕೆ ಇರಿಸಿ.
    * ಮತ್ತೊಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ 2 ಟೀಸ್ಪೂನ್ ಬೆಣ್ಣೆಯನ್ನು ಬಿಸಿ ಮಾಡಿ, 2 ಕಪ್ ಹಾಲು ಸುರಿಯಿರಿ. ತಕ್ಷಣ ವಿಸ್ಕರ್ ಬಳಸಿ ಬೆರೆಸಿ. ಯಾವುದೇ ಉಂಡೆಗಳಾಗದಂತೆ ಮಿಶ್ರಣ ಮಾಡಿ.
    * ಅದಕ್ಕೆ ಮೊಸರಿನ ಮಿಶ್ರಣವನ್ನು ಸೇರಿಸಿ ಬೆರೆಸಿಕೊಳ್ಳಿ.
    * ಈ ಮಿಶ್ರಣಕ್ಕೆ ಬೇಯಿಸಿದ ಮಾಂಸವನ್ನು ಸೇರಿಸಿ, ಮಸಾಲೆ ಮಾಂಸಕ್ಕೆ ಚೆನ್ನಾಗಿ ಹೀರಿಕೊಳ್ಳಲು ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ.
    * ಗ್ರೇವಿಯ ಆದ್ಯತೆಗೆ ಅನುಗುಣವಾಗಿ ಸ್ಥಿರತೆಯನ್ನು ಸರಿಹೊಂದಿಸಲು ಹೆಚ್ಚು ಹಾಲು ಸೇರಿಸಿ.
    * ಈಗ ಅದಕ್ಕೆ ಬಿರಿಯಾನಿ ಮಸಾಲಾ ಸೇರಿಸಿ.
    * ಗ್ರೇವಿಯಿಂದ ಬೆಣ್ಣೆ ಬೇರ್ಪಡುವವರೆಗೆ ಕುದಿಸಿ.
    * ಇದೀಗ ರುಚಿಕರವಾದ ಕೋಲ್ಕತ್ತಾ ಶೈಲಿಯ ಬೆಂಗಾಲಿ ಮಟನ್ ರೆಜಾಲಾ ತಯಾರಾಗಿದ್ದು, ಅನ್ನ, ಚಪಾತಿ ಅಥವಾ ಯಾವುದೇ ಭಾರತೀಯ ಫ್ಲಾಟ್‌ಬ್ರೆಡ್‌ನೊಂದಿಗೆ ಆನಂದಿಸಿ. ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ತಯಾರಿಸಿ ಚೀಸೀ ಬ್ರೊಕಲಿ ಪಕೋಡಾ

    
    

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೈಪುರದ ವಿಶಿಷ್ಟ ಉಪಹಾರ – ಮಿರ್ಚಿ ವಡಾ ಟ್ರೈ ಮಾಡಿ

    ಜೈಪುರದ ವಿಶಿಷ್ಟ ಉಪಹಾರ – ಮಿರ್ಚಿ ವಡಾ ಟ್ರೈ ಮಾಡಿ

    ಜೈಪುರದ ವಿಶಿಷ್ಟ ಉಪಹಾರ ಮಿರ್ಚಿ ವಡಾವನ್ನು ಮುಖ್ಯವಾಗಿ ಭಾವನಾಗ್ರಿ ಮೆಣಸಿನಿಂದ ತಯಾರಿಸಲಾಗುತ್ತದೆ. ಜೈಪುರದ ಪ್ರತಿ ಮೂಲೆಗಳಲ್ಲೂ ಮಿರ್ಚಿ ವಡಾ ಮಾರಾಟ ಮಾಡೋ ಸ್ಟಾಲ್‌ಗಳು ಕಂಡುಬರುತ್ತವೆ. ಆದರೆ ಹೆಸರು ಹೇಳುವಂತೆ ಈ ಮಿರ್ಚಿ ವಡಾ ಹೆಚ್ಚು ಖಾರದ ಖಾದ್ಯವಲ್ಲ. ವಿಭಿನ್ನ ರುಚಿಯ ಈ ತಿನಿಸು ಎಲ್ಲರಿಗೂ ಇಷ್ಟವಾಗುತ್ತದೆ. ಹಾಗಿದ್ರೆ ತಡ ಮಾಡದೇ ಈ ಮಿರ್ಚಿ ವಡಾ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಭಾವನಾಗ್ರಿ ಮೆಣಸು – 250 ಗ್ರಾಂ
    ಬೇಯಿಸಿದ ಆಲೂಗಡ್ಡೆ – 4
    ಜೀರಿಗೆ – 1 ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಹಿಂಗ್ – 1 ಚಿಟಿಕೆ
    ಅರಿಶಿನ ಪುಡಿ – ಅರ್ಧ ಟೀಸ್ಪೂನ್
    ಒಣ ಮಾವಿನ ಪುಡಿ – 1 ಟೀಸ್ಪೂನ್
    ಉಪ್ಪು – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್
    ಕಡಲೆ ಹಿಟ್ಟು – 125 ಗ್ರಾಂ
    ಅಜ್ವೈನ್ – 1 ಟೀಸ್ಪೂನ್
    ಉಪ್ಪು – 1 ಟೀಸ್ಪೂನ್
    ಕೆಂಪು ಮೆಣಸಿನಪುಡಿ – 1 ಟೀಸ್ಪೂನ್ ಇದನ್ನೂ ಓದಿ: ಟೇಸ್ಟಿ ಚಾಟ್‌ಗೆ ಬಳಸೋ ಗ್ರೀನ್ ಚಟ್ನಿ ಮಾಡೋದು ಹೇಗೆ?

    ಮಾಡುವ ವಿಧಾನ:
    * ಮೊದಲಿಗೆ ಒಂದು ಬೌಲ್‌ನಲ್ಲಿ ಕಡಲೆ ಹಿಟ್ಟು, ಅಜ್ವೈನ್ ಕಾಳು, ಉಪ್ಪು ಮತ್ತು ಕೆಂಪು ಮೆಣಸಿನ ಪುಡಿ ಹಾಕಿ. ನಿಧಾನವಾಗಿ ನೀರು ಸೇರಿಸಿ ಮತ್ತು ದಪ್ಪ ಪೇಸ್ಟ್‌ನಂತೆ ಕಲಸಿಕೊಳ್ಳಿ.
    * ಹಿಟ್ಟಿನಲ್ಲಿ ಯಾವುದೇ ಉಂಡೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಂತರ ಅದನ್ನು ಪಕ್ಕಕ್ಕೆ ಇರಿಸಿ.
    * ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ತೆಗೆದು ಮ್ಯಾಶ್ ಮಾಡಿ.
    * ಅದಕ್ಕೆ ಉಪ್ಪು, ಅರಿಶಿನ ಪುಡಿ, ಜೀರಿಗೆ, ಒಣ ಮಾವಿನ ಪುಡಿ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಮೆಣಸುಗಳನ್ನು ತೊಳೆದು ದಪ್ಪ ಹತ್ತಿಯ ಬಟ್ಟೆಯಿಂದ ಒರೆಸಿಕೊಳ್ಳಿ. ಮೆಣಸು ತೇವವಾಗಿರಬಾರದು.
    * ಒಂದು ಚಾಕುವಿನ ಸಹಾಯದಿಂದ ಮೆಣಸಿನಕಾಯಿಯ ಒಂದು ಭಾಗದಲ್ಲಿ ಉದ್ದಕ್ಕೆ ಸೀಳಿ. ಅದರ ಒಳಗಿನ ಬೀಜಗಳನ್ನು ಹೊರಗೆ ತೆಗೆಯಿರಿ.
    * ಈಗ ಆಲೂಗಡ್ಡೆ ಮಿಶ್ರಣವನ್ನು ಮೆಣಸಿನಕಾಯಿಯ ಒಳಗೆ ಚೆನ್ನಾಗಿ ತುಂಬಿಸಿಕೊಳ್ಳಿ. ಎಲ್ಲಾ ಮೆಣಸಿನಕಾಯಿಗಳನ್ನೂ ಹೀಗೆ ತಯಾರಿಸಿ ಇಡಿ.
    * ಈಗ ಬಾಣಲೆಯಲ್ಲಿ ಮೆಣಸಿನಕಾಯಿಗಳನ್ನು ಹುರಿಯಲು ಎಣ್ಣೆ ಬಿಸಿ ಮಾಡಿ.
    * ಮೆಣಸಿನಕಾಯಿಗಳನ್ನು ಕಡಲೆ ಹಿಟ್ಟಿನ ಬ್ಯಾಟರ್‌ನಲ್ಲಿ ಅದ್ದಿ, ನಂತರ ಅದನ್ನು ಕಾದ ಎಣ್ಣೆಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಹುರಿಯಿರಿ.
    * ಮಿರ್ಚಿ ವಡಾ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹಾಗೂ ಗರಿಗರಿಯಾಗುವವರೆಗೆ ಫ್ರೈ ಮಾಡಿ.
    * ನಂತರ ಅವುಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
    * ಇದೀಗ ಮಿರ್ಚಿ ವಡಾ ತಯಾರಾಗಿದ್ದು, ಚಟ್ನಿಯೊಂದಿಗೆ ಬಡಿಸಿ. ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ತಯಾರಿಸಿ ಚೀಸೀ ಬ್ರೊಕಲಿ ಪಕೋಡಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಂಪಲ್ ಸ್ಟ್ರಾಬೆರಿ ಕಪ್‌ಕೇಕ್ ಹೀಗೆ ಮಾಡಿ

    ಸಿಂಪಲ್ ಸ್ಟ್ರಾಬೆರಿ ಕಪ್‌ಕೇಕ್ ಹೀಗೆ ಮಾಡಿ

    ಕ್ಕಳಿಗೆ ಸ್ಟ್ರಾಬೆರಿ ಎಂದರೆ ಇಷ್ಟ. ಸ್ಟ್ರಾಬೆರಿಗಳನ್ನು ಬಳಸಿ ಮಾಡುವ ಯಾವುದೇ ಟೇಸ್ಟಿ ತಿನಿಸಾದರೂ ಅವರು ಬೇಡ ಎನ್ನೋಕೆ ಸಾಧ್ಯವೇ ಇಲ್ಲ. ಈ ಸೀಸನ್‌ನಲ್ಲಿ ಸ್ಟ್ರಾಬೆರಿಯಿಂದ ಕಪ್‌ಕೇಕ್ ತಯಾರಿಸಿ ನಿಮ್ಮ ಮಕ್ಕಳಿಗೆ ಖಂಡಿತಾ ನೀಡಿ. ಈ ರೆಸಿಪಿಗೆ ತಾಜಾ ಸ್ಟ್ರಾಬೆರಿಯೇ ಬೇಕೆಂದೇನಿಲ್ಲ. ಫ್ರೋಝನ್ ಸ್ಟ್ರಾಬೆರಿಗಳನ್ನೂ ಬಳಸಿ ಸಿಂಪಲ್ ಆಗಿ ಕಪ್‌ಕೇಕ್ ಟ್ರೈ ಮಾಡಬಹುದು.

    ಬೇಕಾಗುವ ಪದಾರ್ಥಗಳು:
    ಮೃದುಗೊಳಿಸಿದ ಬೆಣ್ಣೆ – 125 ಗ್ರಾಂ
    ಸಕ್ಕರೆ – ಕಾಲು ಕಪ್
    ಮೈದಾ ಹಿಟ್ಟು – ಒಂದೂವರೆ ಕಪ್
    ಹಾಲು – ಅರ್ಧ ಕಪ್
    ವೆನಿಲ್ಲಾ ಸಾರ – 2 ಟೀಸ್ಪೂನ್
    ಮೊಟ್ಟೆ – 2
    ಕತ್ತರಿಸಿದ ಸ್ಟ್ರಾಬೆರಿ – 250 ಗ್ರಾಂ ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ತಯಾರಿಸಿ ಚೀಸೀ ಬ್ರೊಕಲಿ ಪಕೋಡಾ

    ಮಾಡುವ ವಿಧಾನ:
    * ಮೊದಲಿಗೆ ಓವನ್ ಅನ್ನು 180 ಡಿಗ್ರಿಗೆ ಪೂರ್ವಭಾವಿಯಾಗಿ ಕಾಯಿಸಿ.
    * ಮಫಿನ್ ಟ್ರೇ ಅಥವಾ ಮೌಲ್ಡ್‌ಗೆ ಪೇಪರ್ ಕೇಸ್ ಅನ್ನು ಜೋಡಿಸಿ ಇಡಿ.
    * ಒಂದು ಬಟ್ಟಲಿನಲ್ಲಿ ಮೃದುಗೊಳಿಸಿದ ಬೆಣ್ಣೆ, ಸಕ್ಕರೆ, ಹಿಟ್ಟು, ಹಾಲು, ವೆನಿಲ್ಲಾ ಸಾರ ಹಾಕಿ, ಅದಕ್ಕೆ ಮೊಟ್ಟೆಗಳನ್ನು ಒಡೆದು ಹಾಕಿ.
    * ಎಲೆಕ್ಟ್ರಿಕ್ ಬೀಟರ್‌ನಿಂದ ಕಡಿಮೆ ವೇಗದಲ್ಲಿ 2 ನಿಮಿಷಗಳ ಕಾಲ ಅಥವಾ ಚೆನ್ನಾಗಿ ಮಿಶ್ರಣವಾಗುವವರೆಗೆ ಬೀಟ್ ಮಾಡಿ.
    * ನಂತರ ವೇಗವನ್ನು ಹೆಚ್ಚಿಸಿ ಇನ್ನೂ 2 ನಿಮಿಷಗಳ ಕಾಲ ಅಥವಾ ನಯವಾಗುವವರೆಗೆ ಬೀಟ್ ಮಾಡಿ.
    * ಕತ್ತರಿಸಿದ ಸ್ಟ್ರಾಬೆರಿಗಳನ್ನು ಅದಕ್ಕೆ ಸೇರಿಸಿ, ಮಿಶ್ರಣ ಮಾಡಿ.
    * ಈಗ ಚಮಚಗಳಷ್ಟು ಮಿಶ್ರಣವನ್ನು ಕಪ್‌ಕೇಕ್ ಟ್ರೇಗೆ ಹಾಕಿ. ಮೌಲ್ಡ್‌ನ ಮುಕ್ಕಾಲು ಭಾಗಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳಿ.
    * ಈಗ ಅದನ್ನು ಓವನ್‌ನಲ್ಲಿ ಇರಿಸಿ, ಸುಮಾರು 20 ನಿಮಿಷಗಳ ಕಾಲ ಅಥವಾ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಬೇಯಿಸಿ.
    * ಬಳಿಕ ಅದನ್ನು ಹೊರ ತೆಗೆದು ಸ್ವಲ್ಪ ತಣ್ಣಗಾಗಲು ಅನುಮತಿಸಿ.
    * ಇದೀಗ ಟೇಸ್ಟಿ ಹಾಗೂ ಸಿಂಪಲ್ ಸ್ಟ್ರಾಬೆರಿ ಕಪ್‌ಕೇಕ್ ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ನಾಲ್ಕು ಪದಾರ್ಥ ಬಳಸಿ ಮಾಡಿ ಬಾಳೆಹಣ್ಣಿನ ಐಸ್‌ಕ್ರೀಮ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೇಕರಿ ಮಾದರಿಯ ಪಂಪ್ಕಿನ್‌  ರೋಲ್ ಮಾಡಿ…!

    ಬೇಕರಿ ಮಾದರಿಯ ಪಂಪ್ಕಿನ್‌  ರೋಲ್ ಮಾಡಿ…!

    ಕುಂಬಳಕಾಯಿ ಬೀಟಾ ಕ್ಯಾರೋಟಿನ್‌ನಲ್ಲಿ ಸಮೃದ್ಧವಾಗಿದೆ. ಇದು ವಿಟಮಿನ್‌ ʼಎʼಯನ್ನು ಒಳಗೊಂಡಿದೆ. ಇದನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಸೇವಿಸುವುದರಿಂದ ನಮ್ಮ ದೃಷ್ಟಿ ಉತ್ತಮವಾಗಿರುತ್ತದೆ. ಅಲ್ಲದೇ ಕ್ಯಾನ್ಸರ್‌ನಂತಹ ರೋಗಗಳ ವಿರುದ್ಧ ಹೋರಾಡಿ ನಮ್ಮಲ್ಲಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಬೇಕರಿಯಲ್ಲಿ ದೊರೆಯುವ ಪಂಪ್‌ಕಿನ್‌ ರೋಲ್‌ ಅಂದರೆ ಕುಂಬಳಕಾಯಿ ರೋಲ್ ಅನ್ನು ಯಾವರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಟೇಸ್ಟಿ ಚಾಟ್‌ಗೆ ಬಳಸೋ ಗ್ರೀನ್ ಚಟ್ನಿ ಮಾಡೋದು ಹೇಗೆ?

    ಬೇಕಾಗುವ ಸಾಮಗ್ರಿಗಳು:
    ಮೊಟ್ಟೆ – 4
    ಬೇಕಿಂಗ್‌ ಸೋಡ – 1 ಚಮಚ
    ಕುಂಬಳಕಾಯಿ – ಒಂದೂವರೆ ಕಪ್‌
    ಉಪ್ಪು – ಕಾಲು ಚಮಚ
    ವೆನಿಲ್ಲಾ ಸಾರ – ಅಗತ್ಯಕ್ಕೆ ತಕ್ಕಂತೆ
    ಸಕ್ಕರೆ ಪುಡಿ – ಅಗತ್ಯಕ್ಕೆ ಬೇಕಾದಷ್ಟು
    ಸಕ್ಕರೆ – 2 ಕಪ್‌
    ಮೈದಾ ಅಥವಾ ಗೋಧಿ ಪುಡಿ – ಒಂದೂವರೆ ಕಪ್‌
    ದಾಲ್ಚಿನ್ನಿ – 1 ಚಮಚ
    ಬೆಣ್ಣೆ – 1 ಚಮಚ
    ಕ್ರೀಮ್‌ ಚೀಸ್‌ – 100 ಗ್ರಾಂ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬೇಕಿಂಗ್‌ ಪ್ಯಾನ್‌ಗೆ ಒಂದು ಬಟರ್‌ ಪೇಪರ್‌ ಹಾಕಿ ಅದಕ್ಕೆ ಸ್ವಲ್ಪ ಬೆಣ್ಣೆ ಹೆಚ್ಚಿಕೊಳ್ಳಿ. ಬಳಿಕ ಅದನ್ನು 375 ಡಿಗ್ರಿ ಸೆಲ್ಸಿಯಲ್ಲಿ ಓವನ್ ಅಲ್ಲಿ ಬಿಸಿಮಾಡಿಕೊಳ್ಳಿ.
    * ಈಗ ಒಂದು ದೊಡ್ಡ ಪಾತ್ರೆಯಲ್ಲಿ ಮೊಟ್ಟೆಗಳನ್ನು ಒಡೆದು ಹಾಕಿಕೊಳ್ಳಿ. ಬಳಿಕ ಅದಕ್ಕೆ ರುಬ್ಬಿದ ಕುಂಬಳಕಾಯಿ ಮಿಶ್ರಣ, ಮೈದಾ ಅಥವಾ ಗೋಧಿ ಹಿಟ್ಟು, ಅಡಿಗೆ ಸೋಡಾ, ದಾಲ್ಚಿನ್ನಿ, ಉಪ್ಪು ಮತ್ತು ಸಕ್ಕರೆ ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಈಗ ಇದನ್ನು ಬೇಕಿಂಗ್ ಪ್ಯಾನ್ ಮೇಲೆ ಹರಡಿಕೊಳ್ಳಿ. ಬಳಿಕ ಇದನ್ನು ಓವನ್ ಅಲ್ಲಿ 15-20 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ನಂತರ ಇದನ್ನು ಓವನ್‌ನಿಂದ ಆಚೆ ತೆಗೆದು ಸಕ್ಕರೆ ಪುಡಿಯನ್ನು ಸೇರಿಸಿಕೊಳ್ಳಿ. ಈಗ ಮಿಶ್ರಣವನ್ನು ಬಟರ್ ಪೇಪರ್‌ನಿಂದ ತೆಗೆದು ರೋಲ್ ಮಾಡಿಕೊಳ್ಳಿ.
    * ಬಳಿಕ ಒಂದು ಚಿಕ್ಕ ಪಾತ್ರೆಯಲ್ಲಿ ಕ್ರೀಮ್ ಚೀಸ್, ವೆನಿಲ್ಲಾ ಸಾರ ಮತ್ತು ಸಕ್ಕರೆ ಪುಡಿಯನ್ನು ಸೇರಿಸಿಕೊಂಡು ಚನ್ನಾಗಿ ಕಲಸಿಕೊಳ್ಳಿ.
    * ನಂತರ ಈ ಮಿಶ್ರಣವನ್ನು ರೋಲ್ ಮಾಡಿದ ಕುಂಬಳಕಾಯಿ ಮಿಶ್ರಣವನ್ನು ಬಿಡಿಸಿ ಅದರ ಮಧ್ಯೆ ಹಾಕಿಕೊಂಡು ಮತ್ತೊಮ್ಮೆ ರೋಲ್ ಮಾಡಿ ಫ್ರಿಜ್ ಅಲ್ಲಿ ಇಡಿ. ಈಗ ಪಂಪ್ಕಿನ್ ರೋಲ್ ಸವಿಯಲು ಸಿದ್ಧ. ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ತಯಾರಿಸಿ ಚೀಸೀ ಬ್ರೊಕಲಿ ಪಕೋಡಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೇಸ್ಟಿ ಚಾಟ್‌ಗೆ ಬಳಸೋ ಗ್ರೀನ್ ಚಟ್ನಿ ಮಾಡೋದು ಹೇಗೆ?

    ಟೇಸ್ಟಿ ಚಾಟ್‌ಗೆ ಬಳಸೋ ಗ್ರೀನ್ ಚಟ್ನಿ ಮಾಡೋದು ಹೇಗೆ?

    ಸ್ಟ್ರೀಟ್ ಫುಡ್ ಇಲ್ಲವೇ ಚಾಟ್‌ಗಳಿಗೆ ಈ ಗ್ರೀನ್ ಚಟ್ನಿ ಸೇರಿಸದೇ ಹೋದರೆ ಅದರ ಅದ್ಭುತ ಸ್ವಾದ ಸಂಪೂರ್ಣವಾಗುವುದೇ ಇಲ್ಲ. ಪುದೀನಾ, ಕೊತ್ತಂಬರಿ ಸೊಪ್ಪು ಸೇರಿದಂತೆ ಇತರ ಪದಾರ್ಥಗಳನ್ನು ಬಳಸಿ ಮಾಡುವ ಗ್ರೀನ್ ಚಟ್ನಿಯನ್ನು ಮುಖ್ಯವಾಗಿ ಪಾನಿಪೂರಿಗಳಲ್ಲಿ ಬಳಸಲಾಗುತ್ತದೆ. ಮನೆಯಲ್ಲಿಯೇ ಪಾನಿಪೂರಿ ತಯಾರಿಸುವ ಸಂದರ್ಭ ಹೆಚ್ಚು ಕೆಲಸ ಎಂದು ಕೊಂದು ಹಲವರು ಗ್ರೀನ್ ಚಟ್ನಿ ಮಾಡೋದೇ ಕೈಬಿಡುತ್ತಾರೆ. ಆದರೆ ಇದನ್ನು ಮಾಡೋದು ಅಷ್ಟೇ ಸಿಂಪಲ್ ಆಗಿದೆ. ಚಾಟ್‌ಗಳಿಗೆ ಮಾತ್ರವೇ ಯಾಕೆ, ಇದನ್ನು ಸಲಾಡ್ ಹಾಗೂ ಸ್ಯಾಂಡ್‌ವಿಚ್ ಸ್ಪ್ರೆಡ್‌ನಂತೆಯೂ ಉಪಯೋಗಿಸಬಹುದು. ಹಾಗಿದ್ರೆ ಗ್ರೀನ್ ಚಟ್ನಿ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಕೊತ್ತಂಬರಿ ಸೊಪ್ಪು – ಒಂದೂವರೆ ಕಪ್
    ಪುದೀನಾ ಸೊಪ್ಪು – ಅರ್ಧ ಕಪ್
    ಶುಂಠಿ – 1 ಇಂಚು
    ಹಸಿರು ಮೆಣಸಿನಕಾಯಿ – 2
    ಹುರಿದ ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    ಕಪ್ಪು ಉಪ್ಪು- ಅರ್ಧ ಟೀಸ್ಪೂನ್
    ನಿಂಬೆ ರಸ – 1 ಟೀಸ್ಪೂನ್
    ಚಾಟ್ ಮಸಾಲಾ – ಅರ್ಧ ಟೀಸ್ಪೂನ್
    ನೀರು – 4 ಟೀಸ್ಪೂನ್ ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ತಯಾರಿಸಿ ಚೀಸೀ ಬ್ರೊಕಲಿ ಪಕೋಡಾ

    ಮಾಡುವ ವಿಧಾನ:
    * ಮೊದಲಿಗೆ ನಿಂಬೆ ರಸ ಮತ್ತು ನೀರನ್ನು ಹೊರತುಪಡಿಸಿ ಎಲ್ಲಾ ಪದಾರ್ಥಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ.
    * ಸ್ಪೂನ್ ಸಹಾಯದಿಂದ ಅದನ್ನು ಒಂದು ಬಾರಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
    * ಈಗ ನಿಂಬೆ ರಸ ಮತ್ತು 2 ಟೀಸ್ಪೂನ್ ನೀರು ಸೇರಿಸಿ ನಂತರ ಅದನ್ನು ಮತ್ತೆ ನಯವಾಗಿ ರುಬ್ಬಿಕೊಳ್ಳಿ.
    * ಅಗತ್ಯವಿದ್ದರೆ ಇನ್ನೆರಡು ಟೀಸ್ಪೂನ್ ನೀರು ಸೇರಿಸಿ.
    * ಇದೀಗ ಗ್ರೀನ್ ಚಟ್ನಿ ಸಿದ್ಧವಾಗಿದೆ. ಗಾಳಿಯಾಡದ ಡಬ್ಬಿಯಲ್ಲಿ ಇದನ್ನು ಸಂಗ್ರಹಿಸಿ, ಫ್ರಿಜ್‌ನಲ್ಲಿಟ್ಟರೆ ಬೇಕೆಂದಾಗ ಬಳಸಿಕೊಳ್ಳಬಹುದು. ಇದನ್ನೂ ಓದಿ: ಹೈಡ್ರೇಟ್ ಆಗಿರಲು ಸವಿಯಿರಿ ಕಲ್ಲಂಗಡಿ, ದಾಳಿಂಬೆಯ ಪಂಚ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಜೆಯ ಸ್ನ್ಯಾಕ್ಸ್‌ಗೆ ತಯಾರಿಸಿ ಚೀಸೀ ಬ್ರೊಕಲಿ ಪಕೋಡಾ

    ಸಂಜೆಯ ಸ್ನ್ಯಾಕ್ಸ್‌ಗೆ ತಯಾರಿಸಿ ಚೀಸೀ ಬ್ರೊಕಲಿ ಪಕೋಡಾ

    ಚೀಸೀ ಬ್ರೊಕಲಿ ಪಕೋಡಾವನ್ನು ತಯಾರಿಸಲು ಕೇವಲ 5 ಪದಾರ್ಥಗಳು ಸಾಕು. ಎಣ್ಣೆ ಬಳಸದೇ ಬೇಯಿಸಿ ಮಾಡಲಾಗುವ ಈ ಪಕೋಡಾ ತುಂಬಾ ಸರಳವೂ ಆಗಿದೆ. ಸಂಜೆಯ ಸ್ನ್ಯಾಕ್ಸ್, ಲಘು ಆಹಾರ ಅಥವಾ ಊಟಕ್ಕೆ ಸೈಡ್ ಡಿಶ್ ಆಗಿಯೂ ಇದನ್ನು ಸವಿಯಬಹುದು. ಹಾಗಿದ್ರೆ ಚೀಸೀ ಬ್ರೊಕಲಿ ಪಕೋಡಾ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಕತ್ತರಿಸಿದ ಬ್ರೊಕಲಿ – ಮೂರುವರೆ ಕಪ್
    ಕೊಚ್ಚಿದ ಬೆಳ್ಳುಳ್ಳಿ – 3
    ಮೊಟ್ಟೆ – 2
    ಬಾದಾಮಿ ಹಿಟ್ಟು – ಕಾಲು ಕಪ್
    ತುರಿದ ಚೀಸ್ – 2 ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ಮೆಣಸಿನ ಪುಡಿ – ಸ್ವಾದಕ್ಕನುಸಾರ ಇದನ್ನೂ ಓದಿ: ಸ್ನ್ಯಾಕ್ಸ್ ಟೈಂಗೆ ಸಿಂಪಲ್ ದಹಿ ಆಲೂ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಓವನ್ ಅನ್ನು 160 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿ.
    * ಬ್ರೊಕಲಿಯನ್ನು ಸುಮಾರು 5 ನಿಮಿಷಗಳ ಕಾಲ ನೀರಿನಲ್ಲಿ ಬೇಯಿಸಿಕೊಳ್ಳಿ.
    * ನಂತರ ನೀರಿನಿಂದ ಬ್ರೊಕಲಿಯನ್ನು ಬೇರ್ಪಡಿಸಿ, ತಣ್ಣಗಾಗಲು ಬಿಡಿ. ನಂತರ ಅದನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿಕೊಳ್ಳಿ.
    * ಈಗ ಒಂದು ಬೌಲ್‌ನಲ್ಲಿ ಬ್ರೊಕಲಿ, ಬೆಳ್ಳುಳ್ಳಿ, ಮೊಟ್ಟೆ, ಬಾದಾಮಿ ಹಿಟ್ಟು, ತುರಿದ ಚೀಸ್, ಉಪ್ಪು ಮತ್ತು ಮೆಣಸಿನ ಪುಡಿ ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
    * ಈಗ ಸ್ವಲ್ಪ ಸ್ವಲ್ಪವೇ ಮಿಶ್ರಣವನ್ನು ಕೈಯಲ್ಲಿ ತೆಗೆದುಕೊಂಡು ಪ್ಯಾಟಿ ಅಥವಾ ಪಕೋಡಾ ಗಾತ್ರದಲ್ಲಿ ತಟ್ಟಿಕೊಳ್ಳಿ.
    * ಅವುಗಳನ್ನು ಬೇಕಿಂಗ್ ಶೀಟ್‌ನಲ್ಲಿ ಇರಿಸಿ, ಸುಮಾರು 30 ನಿಮಿಷ ಬೇಯಿಸಿಕೊಳ್ಳಿ. ನಡುವೆ ಒಂದು ಬಾರಿ ತಿರುವಿ ಹಾಕಿ ಬೇಯಿಸಿ.
    * ನಂತರ ಪಕೋಡಾಗಳನ್ನು ಓವನ್‌ನಿಂದ ತೆಗೆದು 5 ನಿಮಿಷ ಸ್ವಲ್ಪ ತಣ್ಣಗಾಗಲು ಬಿಡಿ.
    * ಇದೀಗ ಚೀಸೀ ಬ್ರೊಕಲಿ ಪಕೋಡಾ ಸವಿಯಲು ಸಿದ್ಧವಾಗಿದೆ. ಇದನ್ನು ತಣ್ಣಗಾಗಿಸಿಯೂ ಸವಿಯಬಹುದು. ಇದನ್ನೂ ಓದಿ: ಸುಲಭವಾಗಿ ಮಾಡಿ ರುಚಿಕರ ಪಾಲಕ್ ರೈಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]