Tag: recipe

  • ಮಹಾರಾಷ್ಟ್ರ ಶೈಲಿಯ ಶೇಂಗಾ ಚಟ್ನಿ ಪುಡಿ ತಿಂದು ನೋಡಿ

    ಮಹಾರಾಷ್ಟ್ರ ಶೈಲಿಯ ಶೇಂಗಾ ಚಟ್ನಿ ಪುಡಿ ತಿಂದು ನೋಡಿ

    ಸಾಮಾನ್ಯವಾಗಿ ಶೇಂಗಾ ಎಲ್ಲರೂ ತಿಂದಿರುತ್ತಾರೆ. ಶೇಂಗಾ ಬೀಜವನ್ನು ಸೇವಿಸುವುದರಿಂದ ಬಹಳಷ್ಟು ಆರೋಗ್ಯ ಲಾಭಗಳಿವೆ. ಇದು ಪ್ರೋಟಿನ್, ಫೈಬರ್ ಮತ್ತು ವಿಟಮಿನ್ ಬಿ6, ವಿಟಮಿನ್ ಇ ಮುಂತಾದ ಪೋಷಕಾಂಶಗಳನ್ನು ಒಳಗೊಂಡಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಅನ್ನ, ಇಡ್ಲಿ, ದೋಸೆ, ಮೊಸರನ್ನ ಮುಂತಾದ ಆಹಾರಗಳ ರುಚಿಯನ್ನು ಹೆಚ್ಚಿಸುವ ಮಹಾರಾಷ್ಟ್ರ ಶೈಲಿಯ ಶೇಂಗಾ ಚಟ್ನಿ ಪುಡಿ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

    ಬೇಕಾಗುವ ಸಾಮಗ್ರಿಗಳು:
    ಶೇಂಗಾ – 1 ಕಪ್
    ಬೆಳ್ಳುಳ್ಳಿ – 5
    ಕೆಂಪು ಒಣ ಮೆಣಸು – 4
    ಜೀರಿಗೆ – 1 ಚಮಚ
    ಅಚ್ಚಖಾರದ ಪುಡಿ – ಅರ್ಧ ಚಮಚ
    ಅರಶಿಣ ಪುಡಿ – ಕಾಲು ಚಮಚ
    ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್ ಬಿಸಿಗಿಟ್ಟು ಅದರಲ್ಲಿ ಶೇಂಗಾ ಹಾಕಿಕೊಂಡು 8 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ಒಂದು ಬೌಲ್‌ನಲ್ಲಿ ತೆಗೆದಿಡಿ.
    * ಬಳಿಕ ಅದೇ ಪ್ಯಾನ್ ಒಣ ಮೆಣಸು ಮತ್ತು ಜೀರಿಗೆಯನ್ನು ಹಾಕಿಕೊಂಡು ಒಂದು ಸಲ ಹುರಿದುಕೊಳ್ಳಿ.
    * ಈಗ ಒಂದು ಮಿಕ್ಸಿ ಜಾರಿಗೆ ಬೆಳ್ಳುಳ್ಳಿ, ಒಣ ಮೆಣಸು, ಜೀರಿಗೆ, ಅಚ್ಚಖಾರದ ಪುಡಿ, ಅರಶಿಣ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ಚನ್ನಾಗಿ ಪುಡಿಮಾಡಿಕೊಳ್ಳಿ.
    * ನಂತರ ಹುರಿದ ಶೇಂಗಾ ಬೀಜದ ಸಿಪ್ಪೆ ತೆಗೆದು ಮಿಕ್ಸಿ ಜಾರಿಗೆ ಹಾಕಿಕೊಂಡು ಮತ್ತೊಂದು ಸಲ ಪುಡಿ ಮಾಡಿ.
    * ಈಗ ಶೇಂಗಾ ಚಟ್ನಿ ಪುಡಿ ಸವಿಯಲು ಸಿದ್ಧ. ಇದನ್ನು ಒಂದು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟುಕೊಂಡು ಬೇಕಾದಾಗ ಉಪಯೋಗಿಸಿಕೊಳ್ಳಬಹುದು.

  • ನಾನ್‌ವೆಜ್ ಪ್ರಿಯರಿಗಾಗಿ ಖೀಮಾ ಮಟರ್ ಪಾವ್ ರೆಸಿಪಿ

    ನಾನ್‌ವೆಜ್ ಪ್ರಿಯರಿಗಾಗಿ ಖೀಮಾ ಮಟರ್ ಪಾವ್ ರೆಸಿಪಿ

    ತ್ತರ ಭಾರತ ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಫೇಮಸ್ ಆಗಿರೋ ಪಾವ್ ಭಾಜಿ ನಿಮಗೆಲ್ಲರಿಗೂ ಗೊತ್ತಿದೆ. ಸ್ಟ್ರೀಟ್ ಫುಡ್ ಪ್ರಿಯರಿಗಂತೂ ಇದು ಅಚ್ಚುಮೆಚ್ಚು. ಇದೇ ಪಾವ್ ಭಾಜಿಗೆ ನಾನ್‌ವೆಜ್ ಟ್ವಿಸ್ಟ್ ನೀಡಿದ್ರೆ ಹೇಗೆ? ಪಾವ್ ಜೊತೆ ಇಲ್ಲಿವರೆಗೆ ಭಾಜಿ ಮಾತ್ರ ನೀವು ಟ್ರೈ ಮಾಡಿದ್ರೆ ಇದೀಗ ನಾನ್‌ವೆಜ್ ಖೀಮಾವನ್ನು ಟ್ರೈ ಮಾಡೋ ಸಮಯ. ನಾವಿಂದು ಪಾವ್ ಜೊತೆ ಸವಿಯೋ ರುಚಿಕರ ಮಟರ್ ಖೀಮಾ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ.

    ಬೇಕಾಗುವ ಪದಾರ್ಥಗಳು:
    ಖೀಮಾ ಅಥವಾ ಕೊಚ್ಚಿದ ಮಾಂಸ – 300 ಗ್ರಾಂ
    ಹಸಿರು ಬಟಾಣಿ – 1 ಕಪ್
    ಸಣ್ಣಗೆ ಹೆಚ್ಚಿದ ಈರುಳ್ಳಿ – 2
    ಸಣ್ಣಗೆ ಹೆಚ್ಚಿದ ಟೊಮೆಟೋ – 2
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ಪಾವ್ ಭಾಜಿ ಮಸಾಲಾ – 1 ಟೀಸ್ಪೂನ್
    ಅರಿಶಿನ ಪುಡಿ – ಅರ್ಧ ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಸಕ್ಕರೆ – ಅರ್ಧ ಟೀಸ್ಪೂನ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಮುಷ್ಟಿಯಷ್ಟು
    ಬೆಣ್ಣೆ – 50 ಗ್ರಾಂ
    ನಿಂಬೆ – 1
    ಪಾವ್ ಬನ್ – 8
    ಎಣ್ಣೆ – 2 ಟೀಸ್ಪೂನ್ ಇದನ್ನೂ ಓದಿ: ವೀಕೆಂಡ್‌ನಲ್ಲಿ ಮಾಡಿ ಕೊಲ್ಹಾಪುರಿ ಪಂದ್ರಾ ರಸ

    ಮಾಡುವ ವಿಧಾನ:
    * ಮೊದಲಿಗೆ ಹಸಿರು ಬಟಾಣಿಯನ್ನು ಕುಕ್ಕರ್‌ಗೆ ಹಾಕಿ, ಉಪ್ಪು, ಸಕ್ಕರೆ ಬೆರೆಸಿ, ಸಾಕಷ್ಟು ನೀರು ಸೇರಿಸಿ, 2 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ. ನಂತರ ಅದನ್ನು ಬದಿಗಿಡಿ.
    * ಈಗ ಕುಕ್ಕರ್‌ಗೆ ಎಣ್ಣೆ ಹಾಕಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಉಪ್ಪು ಹಾಗೂ ಖೀಮಾ ಸೇರಿಸಿ ಹುರಿದು, 5 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
    * ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಈರುಳ್ಳಿ ಹಾಕಿ ಗುಲಾಬಿ ಬಣ್ಣ ಬರುವವರೆಗೆ ಹುರಿಯಿರಿ.
    * ನಂತರ ಟೊಮೆಟೋ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮೆತ್ತಗಾಗುವವರೆಗೆ ಹುರಿಯಿರಿ.
    * ಈಗ ಮಸಾಲಾ ಪುಡಿಗಳನ್ನು ಸೇರಿಸಿ ಎಣ್ಣೆ ಬಿಡುವವರೆಗೆ ಹುರಿದುಕೊಳ್ಳಿ.
    * ಈಗ ಬೇಯಿಸಿದ ಖೀಮಾ ಮತ್ತು ಹಸಿರು ಬಟಾಣಿ ಸೇರಿಸಿ ಎಲ್ಲವೂ ಚೆನ್ನಾಗಿ ಮಿಶ್ರಣವಾಗುವವರೆಗೆ 10 ನಿಮಿಷಗಳ ಕಾಲ ಕುದಿಸಿ.
    * ಅದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
    * ಈಗ ಒಂದು ಪ್ಯಾನ್‌ನಲ್ಲಿ ಪಾವ್ ಬನ್‌ಗಳನ್ನು ಬೆಣ್ಣೆಯೊಂದಿಗೆ ಟೋಸ್ಟ್ ಮಾಡಿ.
    * ಸ್ವಲ್ಪ ಬೆಣ್ಣೆ, ನಿಂಬೆ ತುಂಡು, ಈರುಳ್ಳಿ ಮತ್ತು ಬೆಣ್ಣೆಯಲ್ಲಿ ಟೋಸ್ಟ್ ಮಾಡಿದ ಪಾವ್‌ಅನ್ನು ಪ್ಲೇಟ್‌ನಲ್ಲಿ ಇರಿಸಿ, ಅದರೊಂದಿಗೆ ಖೀಮಾ ಮಟರ್ ಅನ್ನು ಬಡಿಸಿ ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಮಸಾಲೆಯುಕ್ತ ಬಾಂಬೆ ಆಲೂಗಡ್ಡೆ ರೆಸಿಪಿ ಒಮ್ಮೆ ಮಾಡಿ

  • ಮಸಾಲೆಯುಕ್ತ ಬಾಂಬೆ ಆಲೂಗಡ್ಡೆ ರೆಸಿಪಿ ಒಮ್ಮೆ ಮಾಡಿ

    ಮಸಾಲೆಯುಕ್ತ ಬಾಂಬೆ ಆಲೂಗಡ್ಡೆ ರೆಸಿಪಿ ಒಮ್ಮೆ ಮಾಡಿ

    ಬಾಂಬೆ ಆಲೂಗಡ್ಡೆ ಯುಕೆ ರೆಸ್ಟೋರೆಂಟ್‌ಗಳಲ್ಲಿ ಬಡಿಸುವ ಸಾಮಾನ್ಯ ಭಾರತೀಯ ಖಾದ್ಯ ಎಂದರೆ ನೀವು ನಂಬಲೇಬೇಕು. ಮಸಾಲೆಯುಕ್ತ ಬಾಂಬೆ ಆಲೂಗಡ್ಡೆಯನ್ನು ಸರಳವಾಗಿ ನೀವು ಮನೆಯಲ್ಲೇ ತಯಾರಿಸಬಹುದು. ಇದಕ್ಕೆ ಹೆಚ್ಚಾಗಿ ಎಳೆಯ ಆಲೂಗಡ್ಡೆಯನ್ನು ಬಳಸಲಾಗುತ್ತದೆ. ಇದರಿಂದ ಖಾದ್ಯ ಸ್ವಲ್ಪ ಸಿಹಿ ಮತ್ತು ತುಂಬಾ ರಸವತ್ತಾಗಿ ತಯಾರಾಗುತ್ತದೆ. ಊಟದೊಂದಿಗೆ ಸೈಡ್ ಡಿಶ್ ಇಲ್ಲವೇ ಸ್ನ್ಯಾಕ್ಸ್ ಟೈಮ್‌ನಲ್ಲೂ ಆನಂದಿಸಬಹುದಾದ ಮಸಾಲೆಯುಕ್ತ ಬಾಂಬೆ ಆಲೂಗಡ್ಡೆ ನೀವೂ ಮಾಡಿ.

    ಬೇಕಾಗುವ ಪದಾರ್ಥಗಳು:
    ಶುಚಿಗೊಳಿಸಿದ ಎಳೆಯ ಆಲೂಗಡ್ಡೆಗಳು – ಅರ್ಧ ಕೆಜಿ
    ತುಪ್ಪ – 1 ಟೀಸ್ಪೂನ್
    ಕ್ಯಾನೋಲಾ ಎಣ್ಣೆ – 2 ಟೀಸ್ಪೂನ್
    ಕರಿಬೇವಿನ ಸೊಪ್ಪು – ಕೆಲವು ಚಿಗುರು
    ಜೀರಿಗೆ – 1 ಟೀಸ್ಪೂನ್
    ಸಾಸಿವೆ – 1 ಟೀಸ್ಪೂನ್
    ತುರಿದ ಶುಂಠಿ – 1 ಇಂಚು
    ಹೆಚ್ಚಿದ ಕೆಂಪು ಮೆಣಸಿನಕಾಯಿ – 1
    ಮೆಣಸಿನ ಪುಡಿ – 1 ಟೀಸ್ಪೂನ್
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ಅರಿಶಿನ – ಕಾಲು ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ ಇದನ್ನೂ ಓದಿ: ಇಮ್ಯೂನಿಟಿ ಬೂಸ್ಟಿಂಗ್ ಹೆಸರು ಬೇಳೆಯ ಸೂಪ್ ಮಾಡಿ ಸವಿಯಿರಿ

    ಮಾಡುವ ವಿಧಾನ:
    * ಮೊದಲಿಗೆ ಆಲೂಗಡ್ಡೆಯನ್ನು ಬಹುತೇಕ ಮೃದುವಾಗುವವರೆಗೆ ನೀರಿನಲ್ಲಿ ಕುದಿಸಿ. ಬಳಿಕ ನೀರನ್ನು ಬಸಿದು ಆಲೂಗಡ್ಡೆಗಳನ್ನು ಪಕ್ಕಕ್ಕೆ ಇರಿಸಿ.
    * ಬಾಣಲೆಯಲ್ಲಿ ತುಪ್ಪ ಮತ್ತು ಕ್ಯಾನೋಲಾ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
    * ಅದಕ್ಕೆ ಕರಿಬೇವಿನ ಎಲೆ, ಕತ್ತರಿಸಿದ ಮೆಣಸಿನಕಾಯಿ, ಸಾಸಿವೆ, ಶುಂಠಿ ಮತ್ತು ಜೀರಿಗೆ ಹಾಕಿ ಪರಿಮಳ ಬರುವವರೆಗೆ ಹುರಿಯಿರಿ.
    * ಕೊತ್ತಂಬರಿ ಪುಡಿ, ಮೆಣಸಿನ ಪುಡಿ ಮತ್ತು ಅರಿಶಿನ ಪುಡಿ ಸೇರಿಸಿ ಮಿಶ್ರಣ ಮಾಡಿ.
    * ಅದಕ್ಕೆ ಆಲೂಗಡ್ಡೆಯನ್ನು ಹಾಕಿ ಮತ್ತು ಅದು ಮಸಾಲೆಯೊಂದಿಗೆ ಚೆನ್ನಾಗಿ ಲೇಪಿಸುವವರೆಗೆ ಮಿಶ್ರಣ ಮಾಡುತ್ತಾ ಫ್ರೈ ಮಾಡಿ.
    * ಈಗ ಉಪ್ಪು ಹಾಕಿ ಮಿಶ್ರಣ ಮಾಡಿ. ಬಳಿಕ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
    * ಇದೀಗ ಮಸಾಲೆಯುಕ್ತ ಬಾಂಬೆ ಆಲೂಗಡ್ಡೆ ತಯಾರಾಗಿದ್ದು, ಬೆಚ್ಚಗೆ ಬಡಿಸಿ. ಇದನ್ನೂ ಓದಿ: ಟ್ರೈ ಮಾಡಿ ಹಲಸಿನಕಾಯಿ ಮಂಚೂರಿ

    
    
  • ವೀಕೆಂಡ್‌ನಲ್ಲಿ ಮಾಡಿ ಕೊಲ್ಹಾಪುರಿ ಪಂದ್ರಾ ರಸ

    ವೀಕೆಂಡ್‌ನಲ್ಲಿ ಮಾಡಿ ಕೊಲ್ಹಾಪುರಿ ಪಂದ್ರಾ ರಸ

    ಕೊಲ್ಹಾಪುರಿ ಪಂದ್ರಾ ರಸ ಎಂಬುದು ಮಹಾರಾಷ್ಟ್ರದ ಸಾಂಪ್ರದಾಯಿಕ ಖಾದ್ಯ. ಅದರ ಶ್ರೀಮಂತ ಮತ್ತು ಅದ್ಭುತ ಸುವಾಸನೆಯ ಬಿಳಿ ಗ್ರೇವಿಗೆ ಫೇಮಸ್ ಆಗಿದೆ. ಇದನ್ನು ಮಸಾಲೆ ಪದಾರ್ಥಗಳು, ತೆಂಗಿನಕಾಯಿ ಮತ್ತು ಗೋಡಂಬಿಯ ಮಿಶ್ರಣದಲ್ಲಿ ಚಿಕನ್ ಅನ್ನು ಬೇಯಿಸುವ ಮೂಲಕ ತಯಾರಿಸಲಾಗುತ್ತದೆ. ಮಹಾರಾಷ್ಟ್ರದ ಕೊಲ್ಹಾಪುರ ನಗರದಿಂದ ಈ ಅಡುಗೆಗೆ ಅದರ ಹೆಸರು ಬಂದಿದೆ. ತೃಪ್ತಿಕರ ಊಟಕ್ಕಾಗಿ ಅನ್ನ ಅಥವಾ ರೊಟ್ಟಿಯೊಂದಿಗೆ ಇದನ್ನು ಬಡಿಸಿ.

    ಬೇಕಾಗುವ ಪದಾರ್ಥಗಳು:
    ಚಿಕನ್ – ಅರ್ಧ ಕೆಜಿ
    ಮೊಸರು – 1 ಕಪ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
    ಅರಿಶಿನ ಪುಡಿ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಸಣ್ಣಗೆ ಹೆಚ್ಚಿದ ಈರುಳ್ಳಿ – 2
    ತುರಿದ ತೆಂಗಿನಕಾಯಿ – ಕಾಲು ಕಪ್
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ಜೀರಿಗೆ ಪುಡಿ – 1 ಟೀಸ್ಪೂನ್
    ಗಸಗಸೆ – 1 ಟೀಸ್ಪೂನ್
    ತಾಜಾ ಕೊತ್ತಂಬರಿ ಸೊಪ್ಪು – ಅಲಂಕರಿಸಲು
    ಎಣ್ಣೆ – ಅಗತ್ಯಕ್ಕೆ ತಕ್ಕಂತೆ ಇದನ್ನೂ ಓದಿ: ನೀವೂ ಮನೆಯಲ್ಲಿ ಮಾಡಿ ಹಾಂಗ್ ಕಾಂಗ್ ಫ್ರೈಡ್ ರೈಸ್

    ಮಾಡುವ ವಿಧಾನ:
    * ಮೊದಲಿಗೆ ಚಿಕನ್ ತುಂಡುಗಳನ್ನು ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಮತ್ತು ಉಪ್ಪಿನೊಂದಿಗೆ ಮ್ಯಾರಿನೇಟ್ ಮಾಡಿ.
    * ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಈರುಳ್ಳಿಯನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
    * ಗೋಡಂಬಿ, ತೆಂಗಿನಕಾಯಿ, ಕೊತ್ತಂಬರಿ, ಜೀರಿಗೆ, ಗಸಗಸೆಯನ್ನು ಸೇರಿಸಿ, ಮಿಶ್ರಣವು ಗೋಲ್ಡನ್ ಬ್ರೌನ್ ಮತ್ತು ಪರಿಮಳ ಬರುವವರೆಗೆ ಹುರಿಯಿರಿ.
    * ಈ ಮಿಶ್ರಣವನ್ನು ತಣ್ಣಗಾಗಲು ಬಿಟ್ಟು ಬಳಿಕ ಮಿಕ್ಸರ್ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ. ನಂತರ ಅದನ್ನು ಪಕ್ಕಕ್ಕಿಡಿ.
    * ಅದೇ ಬಾಣಲೆಗೆ ಮ್ಯಾರಿನೇಟ್ ಮಾಡಿದ ಚಿಕನ್ ಸೇರಿಸಿ ಮೃದುವಾಗುವವರೆಗೆ ಬೇಯಿಸಿ.
    * ರುಬ್ಬಿದ ಪೇಸ್ಟ್ ಅನ್ನು ಸೇರಿಸಿ ಕೆಲವು ನಿಮಿಷಗಳ ಕಾಲ ಕುದಿಸಿಕೊಳ್ಳಿ.
    * ತಾಜಾ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಕೊಲ್ಹಾಪುರಿ ಪಂದ್ರಾ ರಸವನ್ನು ಅನ್ನ ಅಥವಾ ರೊಟ್ಟಿಯೊಂದಿಗೆ ಬಿಸಿಯಾಗಿ ಬಡಿಸಿ. ಇದನ್ನೂ ಓದಿ: ರಾಜಸ್ಥಾನಿ ಲಾಲ್ ಮಾಸ್ ಮಟನ್ ಕರಿ ಮಾಡ್ನೋಡಿ

  • ಸುಲಭವಾಗಿ ಮಾಡಿ ಆರೋಗ್ಯಕರ ಸಬ್ಬಕ್ಕಿ ಕಿಚಡಿ..!

    ಸುಲಭವಾಗಿ ಮಾಡಿ ಆರೋಗ್ಯಕರ ಸಬ್ಬಕ್ಕಿ ಕಿಚಡಿ..!

    ಸಾಬುದಾನ ಅಥವಾ ಸಬ್ಬಕ್ಕಿ ಹೆಚ್ಚಿನ ಫೈಬರ್‌ ಅಂಶವನ್ನು ಒಳಗೊಂಡಿದ್ದು ಇದನ್ನು ನಮ್ಮ ದಿನ ನಿತ್ಯದ ಆಹಾರಕ್ರಮದಲ್ಲಿ ಒಳಗೂಡಿಸಿಕೊಂಡರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಲ್ಲದೇ ಸಬ್ಬಕ್ಕಿಯನ್ನು ಸೇವಿಸುವುದರಿಂದ ನಮ್ಮ ಜೀರ್ಣಕ್ರಿಯೆ ಸುಧಾರಿಸುವುದರೊಂದಿಗೆ ಕೂದಲು ಉದುರುವಿಕೆಯನ್ನು ತಡೆಗಟ್ಟುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಸುಲಭವಾಗಿ ಮಾಡಬಹುದಾದ ಸಬ್ಬಕ್ಕಿ ಕಿಚಡಿ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

    ಬೇಕಾಗುವ ಸಾಮಗ್ರಿಗಳು:
    ಸಬ್ಬಕ್ಕಿ – 1‌ ಕಪ್‌
    ಜೀರಿಗೆ – 1 ಚಮಚ
    ಹೆಚ್ಚಿದ ಹಸಿರುಮೆಣಸಿನ ಕಾಯಿ – 1
    ಹೆಚ್ಚಿದ ಟೊಮೆಟೊ – 1
    ಹೆಚ್ಚಿದ ಈರುಳ್ಳಿ – 1
    ಎಣ್ಣೆ – 2 ಚಮಚ
    ಶೇಂಗಾ – 1 ಚಮಚ
    ಹೆಚ್ಚಿದ ಆಲೂಗೆಡ್ಡೆ – 1
    ಉಪ್ಪು – ರುಚಿಗೆ ತಕ್ಕಷ್ಟು
    ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬೌಲ್‌ನಲ್ಲಿ ಸಬ್ಬಕ್ಕಿಯನ್ನು ಹಾಕಿಕೊಂಡು ಅದಕ್ಕೆ ನೀರನ್ನು ಸೇರಿಸಿಕೊಂಡು 30 ನಿಮಿಷಗಳ ಕಾಲ ನೆನೆಸಿಕೊಳ್ಳಿ.
    * ಈಗ ಒಂದು ಪ್ಯಾನ್‌ಗೆ 2 ಚಮಚ ಎಣ್ಣೆ ಹಾಕಿಕೊಂಡು ಕಾದ ಬಳಿಕ ಅದಕ್ಕೆ ಜೀರಿಗೆ, ಹಸಿರು ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ, ಆಲೂಗೆಡ್ಡೆ ಮತ್ತು ಶೇಂಗಾ ಬೀಜವನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ.
    * ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ಮತ್ತೊಂದು ಬಾರಿ ತಿರುವಿಕೊಳ್ಳಿ.
    * ಬಳಿಕ ಇದಕ್ಕೆ ನೆನೆಸಿಟ್ಟ ಸಬ್ಬಕ್ಕಿಯನ್ನು ಸೇರಿಸಿಕೊಂಡು ಸಬ್ಬಕ್ಕಿ ಮಿಶ್ರಣದೊಂದಿಗೆ ಹೊಂದಿಕೊಳ್ಳುವವರೆಗೆ ಚನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ.
    * ನಂತರ ಇದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಂಡು ಮತ್ತೊಂದು ಬಾರಿ ತಿರುವಿಕೊಂಡು ಸರ್ವಿಂಗ್‌ ಪ್ಲೇಟ್‌ನಲ್ಲಿ ಹಾಕಿ ಬಿಸಿಬಿಸಿಯಾಗಿ ತಿನ್ನಲು ಕೊಡಿ.

  • ಮಾಡರ್ನ್ ಲೈಫ್‌ಸ್ಟೈಲ್‌ಗೆ ಪೌಷ್ಟಿಕಾಂಶ ಭರಿತ ಚನಾ ಚಾಟ್

    ಮಾಡರ್ನ್ ಲೈಫ್‌ಸ್ಟೈಲ್‌ಗೆ ಪೌಷ್ಟಿಕಾಂಶ ಭರಿತ ಚನಾ ಚಾಟ್

    ಧುನಿಕ ಜೀವನಶೈಲಿಯ ವೇಗದಲ್ಲಿ ಆರೋಗ್ಯದ ಅನುಕೂಲಕ್ಕೆ ತಕ್ಕಂತೆ ನಾವು ಕೂಡಾ ಮುಂದುವರಿಯುವುದು ಅಗತ್ಯ. ಪೌಷ್ಟಿಕಾಂಶಯುಕ್ತ ಆಹಾರ ಎಂಬ ವಿಚಾರ ಬಂದಾಗ ಅಲ್ಲಿ ನಾವು ರುಚಿಕರ ತಿಂಡಿಗಳನ್ನು ಮರೆಯಬೇಕಾಗುವುದು ಅನಿವಾರ್ಯ. ಆದರೆ ನಾವಿಂದು ಸಮಕಾಲೀನ ಜೀವನಶೈಲಿಗೆ ಹೊಂದಿಕೊಳ್ಳುವ ಭಾರತೀಯ ಆಹಾರವೂ ಆದ ಆರೋಗ್ಯಕರ ಮಾತ್ರವಲ್ಲದೇ ರುಚಿಕರ ಸಿಂಪಲ್ ರೆಸಿಪಿಯನ್ನು ಹೇಳಿಕೊಡಲಿದ್ದೇವೆ. ಚನಾ ಚಾಟ್ ಇಂಡಿಯನ್ ಸ್ಟ್ರೀಟ್ ಫುಡ್ ಎನಿಸಿಕೊಂಡರೂ ಮನೆಯಲ್ಲಿ ಇನ್ನಷ್ಟು ಆರೋಗ್ಯಕರವಾಗಿ ತಯಾರಿಸಿ ನೀವೂ ಸವಿಯಿರಿ.

    ಬೇಕಾಗುವ ಪದಾರ್ಥಗಳು:
    ಕಪ್ಪು ಕಡಲೆ – ಒಂದೂವರೆ ಕಪ್ (ಬಿಳಿ, ಹಸಿರು ಕಡಲೆಯನ್ನೂ ಬಳಸಬಹುದು)
    ಉಪ್ಪು – ಒಂದೂವರೆ ಟೀಸ್ಪೂನ್
    ಟೊಮೆಟೋ – 1
    ಈರುಳ್ಳಿ – ಅರ್ಧ
    ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಚಾಟ್ ಮಸಾಲಾ ಪುಡಿ – ಎರಡೂವರೆ ಟೀಸ್ಪೂನ್
    ನಿಂಬೆ ರಸ – 3 ಟೀಸ್ಪೂನ್
    ಕೊತ್ತಂಬರಿ ಸೊಪ್ಪು – ಕಾಲು ಕಪ್ ಇದನ್ನೂ ಓದಿ: ಇಮ್ಯೂನಿಟಿ ಬೂಸ್ಟಿಂಗ್ ಹೆಸರು ಬೇಳೆಯ ಸೂಪ್ ಮಾಡಿ ಸವಿಯಿರಿ

    ಮಾಡುವ ವಿಧಾನ:
    * ಮೊದಲಿಗೆ ಕಪ್ಪು ಕಡಲೆಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ.
    * ಪ್ರೆಶರ್ ಕುಕ್ಕರ್‌ಗೆ ನೆನೆಸಿದ ಕಡಲೆ ಹಾಕಿ, ಸಾಕಷ್ಟು ನೀರು ಸೇರಿಸಿ, ಉಪ್ಪು ಹಾಕಿ 3 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
    * ನಂತರ ಅದನ್ನು ತಣ್ಣಗಾಗಲು ಬಿಟ್ಟು, ನೀರನ್ನು ಹರಿಸಿ, ಒಂದು ಮಿಕ್ಸಿಂಗ್ ಬೌಲ್‌ಗೆ ಬೇಯಿಸಿದ ಕಡಲೆಯನ್ನು ಹಾಕಿ.
    * ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೆಟೋ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
    * ನಂತರ ಕೆಂಪು ಮೆಣಸಿನ ಪುಡಿ, ಚಾಟ್ ಮಸಾಲಾ ಮತ್ತು ನಿಂಬೆ ರಸವನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
    * ಇದೀಗ ಪೌಷ್ಟಿಕಾಂಶಯುಕ್ತ ಚನಾ ಚಾಟ್ ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಚಳಿಗೆ ಬಿಸಿಬಿಸಿಯಾಗಿ ತಿನ್ನಿ ಮೂಂಗ್‌ದಾಲ್ ನಗ್ಗೆಟ್ಸ್

  • ಇಮ್ಯೂನಿಟಿ ಬೂಸ್ಟಿಂಗ್ ಹೆಸರು ಬೇಳೆಯ ಸೂಪ್ ಮಾಡಿ ಸವಿಯಿರಿ

    ಇಮ್ಯೂನಿಟಿ ಬೂಸ್ಟಿಂಗ್ ಹೆಸರು ಬೇಳೆಯ ಸೂಪ್ ಮಾಡಿ ಸವಿಯಿರಿ

    ಸೀಸನ್‌ನಲ್ಲಿ ಅನಾರೋಗ್ಯಕ್ಕೊಳಗಾಗೋದು ಸರ್ವೇ ಸಾಮಾನ್ಯ. ಈ ಸಮಯ ನೀವು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಂತಹ ಆಹಾರ ಪದಾರ್ಥಗಳನ್ನು ಸೇವಿಸುವುದು ಕೂಡಾ ಅಷ್ಟೇ ಮುಖ್ಯ. ನಾವಿಂದು ಹೇಳಿಕೊಡುತ್ತಿರುವ ಹೆಸರು ಬೇಳೆಯ ಸೂಪ್ ರೆಸಿಪಿ ಹಲವು ವಿಧಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಪ್ರೋಟೀನ್, ಬಿ-ಕಾಂಪ್ಲೆಕ್ಸ್, ವಿಟಮಿನ್ ಸಿ ಸೇರಿದಂತೆ ಹೆಚ್ಚಿನ ಆರೋಗ್ಯಕರ ಗುಣಗಳನ್ನು ಒಳಗೊಂಡಿದೆ. ಇಮ್ಯೂನಿಟಿ ಬೂಸ್ಟಿಂಗ್‌ಗಾಗಿ ನೀವೂ ಹೆಸರು ಬೇಳೆ ಸೂಪ್ ಮಾಡಿ ಸವಿಯಿರಿ.

    ಬೇಕಾಗುವ ಪದಾರ್ಥಗಳು:
    ಹೆಸರು ಬೇಳೆ – 1 ಕಪ್
    ನೀರು – 4 ಕಪ್
    ಎಣ್ಣೆ ಅಥವಾ ತುಪ್ಪ – 1 ಟೀಸ್ಪೂನ್
    ಜೀರಿಗೆ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಈರುಳ್ಳಿ – 1
    ತುರಿದ ಬೆಳ್ಳುಳ್ಳಿ – 3-4
    ತುರಿದ ಶುಂಠಿ – 1 ಇಂಚು
    ಹೆಚ್ಚಿದ ಟೊಮೆಟೋ – 1
    ಅರಿಶಿನ ಪುಡಿ – ಅರ್ಧ ಟೀಸ್ಪೂನ್
    ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    ಕೊತ್ತಂಬರಿ ಪುಡಿ – ಅರ್ಧ ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – ಕಾಲು ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ತರಕಾರಿ/ಚಿಕನ್ ಸ್ಟಾಕ್ – 4-5 ಕಪ್
    ನಿಂಬೆ – 1
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ ಇದನ್ನೂ ಓದಿ: ಚಳಿಗೆ ಬಿಸಿಬಿಸಿಯಾಗಿ ತಿನ್ನಿ ಮೂಂಗ್‌ದಾಲ್ ನಗ್ಗೆಟ್ಸ್

    ಮಾಡುವ ವಿಧಾನ:
    * ಮೊದಲಿಗೆ ಹೆಸರು ಬೇಳೆಯನ್ನು ಚೆನ್ನಾಗಿ ತಣ್ಣೀರಿನಲ್ಲಿ ತೊಳೆದು, ಒಂದು ಪಾತ್ರೆಗೆ ಹಾಕಿ 4 ಕಪ್ ನೀರು ಸೇರಿಸಿ ಕುದಿಸಿಕೊಳ್ಳಿ. ಮಧ್ಯಮ ಉರಿಯಲ್ಲಿ ಮೆತ್ತಗಾಗುವವರೆಗೆ ಬೇಯಿಸಿ.
    * ಒಂದು ಕಡಾಯಿಗೆ ಎಣ್ಣೆ ಅಥವಾ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ಜೀರಿಗೆ ಬೆರೆಸಿ ಸಿಡಿಸಿ.
    * ಬಳಿಕ ಈರುಳ್ಳಿ ಸೇರಿಸಿ ಮೆತ್ತಗಾಗುವವರೆಗೆ ಹುರಿಯಿರಿ.
    * ತುರಿದ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ, ಸುಮಾರು ಒಂದು ನಿಮಿಷ ಪರಿಮಳ ಬರುವವರೆಗೆ ಹುರಿಯಿರಿ.
    * ಕೆಂಪು ಮೆಣಸಿನ ಪುಡಿ, ಜೀರಿಗೆ, ಕೊತ್ತಂಬರಿ, ಮತ್ತು ಅರಿಶಿನ ಪುಡಿಯನ್ನು ಸೇರಿಸಿ, ಮಸಾಲೆಗಳನ್ನು 1 ನಿಮಿಷ ಟೋಸ್ಟ್ ಮಾಡಿ.
    * ನಂತರ ಟೊಮೆಟೋ ಸೇರಿಸಿ, ಬೇಯಿಸಿಕೊಳ್ಳಿ.
    * ಈಗ ಹುರಿದ ಮಸಾಲೆಗೆ ಬೇಯಿಸಿದ ಹೆಸರು ಬೇಳೆಯನ್ನು ಸೇರಿಸಿ, ಮಿಶ್ರಣ ಮಾಡಿ.
    * ಸ್ಥಿರತೆಯನ್ನು ನೋಡಿಕೊಂಡು ತರಕಾರಿ ಇಲ್ಲವೇ ಚಿಕನ್ ಸ್ಟಾಕ್ ಸೇರಿಸಿ.
    * ಬಳಿಕ ಉಪ್ಪು ಸೇರಿಸಿ 10-15 ನಿಮಿಷಗಳ ಕಾಲ ಕುದಿಸಿ.
    * ಬೇಳೆ ಇನ್ನಷ್ಟು ಮೃದುವಾಗಲು ಮ್ಯಾಶ್ ಮಾಡಿಕೊಳ್ಳಬಹುದು.
    * ಈಗ ಅದಕ್ಕೆ ನಿಂಬೆ ರಸವನ್ನು ಸೇರಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿಬಿಸಿಯಾಗಿ ಹೆಸರು ಬೇಳೆ ಸೂಪ್ ಅನ್ನು ಸವಿಯಿರಿ. ಇದನ್ನೂ ಓದಿ: ಗಂಟಲು ಕೆರೆತಕ್ಕೆ ಸವಿಯಿರಿ ಬೆಚ್ಚಗಿನ ಪುದೀನಾ ಟೀ

  • ನೀವೂ ಮನೆಯಲ್ಲಿ ಮಾಡಿ ಹಾಂಗ್ ಕಾಂಗ್ ಫ್ರೈಡ್ ರೈಸ್

    ನೀವೂ ಮನೆಯಲ್ಲಿ ಮಾಡಿ ಹಾಂಗ್ ಕಾಂಗ್ ಫ್ರೈಡ್ ರೈಸ್

    ಹಾಂಗ್ ಕಾಂಗ್ ಫ್ರೈಡ್ ರೈಸ್ ಅನ್ನು ಅನ್ನ, ತರಕಾರಿ ಮತ್ತು ಪ್ರೋಟೀನ್‌ಯುಕ್ತ ಯಾವುದೇ ಮಾಂಸವನ್ನು ಬಳಸಿ ತಯಾರಿಸುವ ಜನಪ್ರಿಯ ಚೀನೀ ಅಡುಗೆ. ಇದು ಕ್ವಿಕ್ ಹಾಗೂ ಸುಲಭವಾಗಿ ತಯಾರಿಸಬಹುದಾದ ಒನ್ ಪ್ಯಾನ್ ಅಡುಗೆ. ಅದ್ಭುತ ಸುವಾಸನೆಯ ಈ ರೆಸಿಪಿಗೆ ಸಿಗಡಿ, ಚಿಕನ್ ಅಥವಾ ನಿಮ್ಮ ನೆಚ್ಚಿನ ತರಕಾರಿಗಳನ್ನೂ ಸೇರಿಸಬಹುದು. ಹಾಂಗ್ ಕಾಂಗ್ ಫ್ರೈಡ್ ರೈಸ್ ಮಾಡೋದು ಹೇಗೆಂದು ನಾವಿಂದು ಹೇಳಿಕೊಡುತ್ತೇವೆ.

    ಬೇಕಾಗುವ ಪದಾರ್ಥಗಳು:
    ಬೇಯಿಸಿ ತಣ್ಣಗಾಗಿಸಿದ ಅನ್ನ – 3 ಕಪ್
    ಕೊಚ್ಚಿದ ಬೆಳ್ಳುಳ್ಳಿ – 2
    ನಿಮ್ಮ ಆಯ್ಕೆಯ ತರಕಾರಿಗಳು – 1 ಕಪ್ (ಕ್ಯಾರೆಟ್, ಕಾರ್ನ್, ಬಟಾಣಿ ಇತ್ಯಾದಿ)
    ಸಿಗಡಿ/ ಚಿಕನ್ – ಅಗತ್ಯವಿದ್ದಂತೆ
    ಮೊಟ್ಟೆ – 1
    ಸೋಯಾ ಸಾಸ್ – 2 ಟೀಸ್ಪೂನ್
    ಆಯ್ಸ್ಟರ್ ಸಾಸ್ – 1 ಟೀಸ್ಪೂನ್
    ಎಣ್ಣೆ – 2 ಟೀಸ್ಪೂನ್
    ಹೆಚ್ಚಿದ ಸ್ಪ್ರಿಂಗ್ ಆನಿಯನ್ – ಅಲಂಕರಿಸಲು ಇದನ್ನೂ ಓದಿ: ರಾಜಸ್ಥಾನಿ ಲಾಲ್ ಮಾಸ್ ಮಟನ್ ಕರಿ ಮಾಡ್ನೋಡಿ

    ಮಾಡುವ ವಿಧಾನ:
    * ಮೊದಲಿಗೆ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಬೆಳ್ಳುಳ್ಳಿಯನ್ನು ಪರಿಮಳ ಬರುವವರೆಗೆ ಹುರಿಯಿರಿ.
    * ನಿಮ್ಮ ಆಯ್ಕೆಯ ಚಿಕನ್ ಅಥವಾ ಸಿಗಡಿ ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ.
    * ಕ್ಯಾರೆಟ್, ಬಟಾಣಿ ಮತ್ತು ಕ್ಯಾಪ್ಸಿಕಮ್ ಸೇರಿದಂತೆ ತರಕಾರಿಗಳನ್ನು ಸೇರಿಸಿ ಹುರಿದುಕೊಳ್ಳಿ.
    * ಬೇಯಿಸಿದ ಎಲ್ಲಾ ಪದಾರ್ಥಗಳನ್ನು ಪ್ಯಾನ್‌ನ ಒಂದು ಬದಿಗೆ ತಳ್ಳಿ, ಅದರ ಖಾಲಿ ಜಾಗದಲ್ಲಿ ಮೊಟ್ಟೆಯನ್ನು ಒಡೆದು ಹಾಕಿ.
    * ಮೊಟ್ಟೆಯನ್ನು ಹುರಿದು ನಂತರ ಬದಿಗಿಟ್ಟಿದ್ದ ಎಲ್ಲಾ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿ.
    * ಈಗ ಬೇಯಿಸಿದ ಅನ್ನವನ್ನು ಸೇರಿಸಿ, ಸೋಯಾ ಸಾಸ್, ಆಯ್ಸ್ಟರ್ ಸಾಸ್ ಸೇರಿಸಿ ಮಿಕ್ಸ್ ಮಾಡಿ.
    * ಎಲ್ಲವನ್ನೂ ಚೆನ್ನಾಗಿ ಬೆರೆಸಿ ಬಿಸಿಯಾಗುವವರೆಗೆ ಫ್ರೈ ಮಾಡಿ.
    * ಕೊನೆಯಲ್ಲಿ ಸ್ಪ್ರಿಂಗ್ ಆನಿಯನ್ ಹಾಕಿ ಅಲಂಕರಿಸಿ, ಹಾಂಗ್ ಕಾಂಗ್ ಫ್ರೈಡ್ ರೈಸ್ ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: 15 ನಿಮಿಷದಲ್ಲಿ ಮಾಡೋ ಚಿಕನ್ ನೂಡಲ್ ಸೂಪ್ ರೆಸಿಪಿ

  • ಚಳಿಗೆ ಬಿಸಿಬಿಸಿಯಾಗಿ ತಿನ್ನಿ ಮೂಂಗ್‌ದಾಲ್ ನಗ್ಗೆಟ್ಸ್

    ಚಳಿಗೆ ಬಿಸಿಬಿಸಿಯಾಗಿ ತಿನ್ನಿ ಮೂಂಗ್‌ದಾಲ್ ನಗ್ಗೆಟ್ಸ್

    ಳಿಗಾಲ ಆರಂಭವಾಗಿದ್ದು, ನಮ್ಮ ದೇಹವನ್ನು ಬಿಸಿಯಾಗಿಡಲು ಬೆಚ್ಚನೆಯ ಆಹಾರವನ್ನು ಸೇವಿಸುವುದು ಉತ್ತಮ. ಹೆಸರುಬೇಳೆ ಹೆಚ್ಚಿನ ಫೈಬರ್ ಅಂಶವನ್ನು ಒಳಗೊಂಡಿದ್ದು, ನಮ್ಮ ದಿನನಿತ್ಯದ ಆಹಾರದಲ್ಲಿ ಇದನ್ನು ಒಳಗೂಡಿಸಿದರೆ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಚಳಿಗಾಲದಲ್ಲಿ ಬಿಸಿಬಿಸಿಯಾಗಿ ತಿನ್ನಬಹುದಾದ ಮೂಂಗ್‌ದಾಲ್ (ಹೆಸರು ಬೇಳೆ) ನಗ್ಗೆಟ್ಸ್ ಯಾವರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಈ ಸೀಸನ್‌ನಲ್ಲಿ ಮಾಡಿ ಪೇರಳೆ ಹಣ್ಣಿನ ಚಟ್ನಿ

    ಬೇಕಾಗುವ ಸಾಮಗ್ರಿಗಳು:
    ಹಳದಿ ಮೂಂಗ್ ದಾಲ್ – 1/2 ಕಪ್
    ಹಸಿರು ಮೂಂಗ್ ದಾಲ್ – 1/2 ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ಹೆಚ್ಚಿದ ಈರುಳ್ಳಿ – ಅರ್ಧ
    ಹೆಚ್ಚಿದ ಹಸಿರುಮೆಣಸಿನಕಾಯಿ – 2
    ಹೆಚ್ಚಿದ ಕ್ಯಾರೆಟ್ – ಕಾಲು ಕಪ್
    ಕರಿಬೇವು – 6ರಿಂದ 7 ಎಲೆ
    ಬ್ರೆಡ್ ತುಂಡುಗಳು – 1 ಕಪ್
    ಅಚ್ಚಖಾರದ ಪುಡಿ – 1 ಚಮಚ
    ಪೆಪ್ಪರ್ ಪೌಡರ್ – ಕಾಲು ಚಮಚ
    ಚಾಟ್ ಮಸಾಲ – ಅರ್ಧ ಚಮಚ
    ಜೀರಿಗೆ – ಅರ್ಧ ಚಮಚ
    ಜೋಳದ ಹಿಟ್ಟು – 2 ಚಮಚ
    ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ಹಳದಿ ಮತ್ತು ಹಸಿರು ಹೆಸರು ಬೇಳೆಯನ್ನು ಹಾಕಿ ಚನ್ನಾಗಿ ತೊಳೆದುಕೊಳ್ಳಿ. ಬಳಿಕ ಅದನ್ನು 2ರಿಂದ 3 ಗಂಟೆಗಳ ಕಾಲ ನೆನೆಸಿಡಿ.
    * ಈಗ ನೆನೆಸಿದ ಹೆಸರು ಬೇಳೆಯನ್ನು ನೀರಿನೊಂದಿಗೆ ಅರ್ಧದಷ್ಟು ಬೇಯಿಸಿಕೊಳ್ಳಿ. ಬಳಿಕ ಅದನ್ನು ತಣ್ಣಾಗಾಗಲು ಬಿಡಿ.
    * ನಂತರ 2 ಚಮಚದಷ್ಟು ಬೇಳೆಯನ್ನು ತೆಗೆದಿಟ್ಟು ಉಳಿದಿದ್ದನ್ನು ಒಂದು ಮಿಕ್ಸರ್‌ಗೆ ಹಾಕಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ.
    * ಬಳಿಕ ಒಂದು ಬೌಲ್‌ನಲ್ಲಿ ರುಬ್ಬಿದ ಮಿಶ್ರಣವನ್ನು ಹಾಕಿಕೊಂಡು ಅದಕ್ಕೆ ಹೆಚ್ಚಿದ ತರಕಾರಿಗಳು, ತೆಗೆದಿಟ್ಟ ಹೆಸರಬೇಳೆ, ಮಸಾಲೆಗಳು, ಉಪ್ಪು, ಬ್ರೆಡ್ ತುಂಡುಗಳನ್ನು ಹಾಕಿಕೊಳ್ಳಿ. ಈಗ ಅದಕ್ಕೆ ಜೋಳದ ಹಿಟ್ಟನ್ನು ಸೇರಿಸಿಕೊಂಡು ಚನ್ನಾಗಿ ಕಲಸಿಕೊಂಡು ಹಿಟ್ಟನ್ನು ತಯಾರಿಸಿಕೊಳ್ಳಿ.
    * ಈಗ ಈ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ನಿಮಗೆ ಬೇಕಾದ ಆಕಾರದಲ್ಲಿ ತಯಾರಿಸಿಕೊಳ್ಳಿ. ಅದೇ ರೀತಿ ಎಲ್ಲವನ್ನೂ ಮಾಡಿಕೊಳ್ಳಿ.
    * ಬಳಿಕ ಏರ್‌ಫ್ರೈಯರ್ ಅನ್ನು 180 ಡಿಗ್ರಿಯಲ್ಲಿ ಮೊದಲೇ ಬಿಸಿಗಿಟ್ಟು ಬಿಸಿಯಾದ ಬಳಿಕ ಅದರಲ್ಲಿ ಈ ನಗ್ಗೆಟ್ಸ್ ಅನ್ನು ಇರಿಸಿ. ಅದಕ್ಕೂ ಮೊದಲು ತಯಾರಿಸಿದ ನಗ್ಗೆಟ್ಸ್ ಮೇಲೆ ಸ್ವಲ್ಪ ಸ್ವಲ್ಪ ಎಣ್ಣೆಯನ್ನು ಸವರಿಕೊಳ್ಳಿ. ಬಳಿಕ 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ಇದರ ಬದಲಿಗೆ ನಗ್ಗೆಟ್ಸ್ ಅನ್ನು ಎಣ್ಣೆಯಲ್ಲೂ ಕಾಯಿಸಿಕೊಳ್ಳಬಹುದು. ನಗ್ಗೆಟ್ಸ್ ಗೋಲ್ಡನ್ ಬಣ್ಣ ಬರುವವರೆಗೆ ಫ್ರೈ ಮಾಡಿಕೊಂಡು ಬಳಿಕ ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ಬಿಸಿಬಿಸಿಯಾಗಿ ಸರ್ವ್ ಮಾಡಿ. ಇದನ್ನೂ ಓದಿ: ಟ್ರೈ ಮಾಡಿ ಹಲಸಿನಕಾಯಿ ಮಂಚೂರಿ

  • ಈ ಸೀಸನ್‌ನಲ್ಲಿ ಮಾಡಿ ಪೇರಳೆ ಹಣ್ಣಿನ ಚಟ್ನಿ

    ಈ ಸೀಸನ್‌ನಲ್ಲಿ ಮಾಡಿ ಪೇರಳೆ ಹಣ್ಣಿನ ಚಟ್ನಿ

    ಪೇರಳೆ ಹಣ್ಣಿನ ಚಟ್ನಿ ಸಿಹಿ, ಕಟುವಾದ ಮತ್ತು ಮಸಾಲೆಯುಕ್ತ ಪರಿಪೂರ್ಣ ರೆಸಿಪಿ. ಯಾವುದೇ ಆಹಾರದೊಂದಿಗೆ ಇದನ್ನು ಸವಿಯಬಹುದು. ಇದರಲ್ಲಿ ಪೌಷ್ಟಿಕಾಂಶ ಹೇರಳವಾಗಿದ್ದು, ಬಜ್ಜಿ, ಪಕೋಡಾಗಳೊಂದಿಗೆ ಸವಿದರೆ ಸಖತ್ ಆಗಿರುತ್ತದೆ. ಇದನ್ನು ಡಿಪ್ಪಿಂಗ್ ಸಾಸ್, ಸ್ಪ್ರೆಡ್ ಅಥವಾ ಸೈಡ್ ಡಿಶ್ ಆಗಿಯೂ ಬಳಸಬಹುದು. ಪೇರಳೆ ಚಟ್ನಿ ತಯಾರಿಸಲು ಈ ಸೀಸನ್ ಸೂಕ್ತವಾಗಿದೆ. ನೀವು ಕೂಡಾ ಈ ರೆಸಿಪಿ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಮಾಗಿದ ಪೇರಳೆ ಹಣ್ಣು – 4-5
    ಸಕ್ಕರೆ – 1 ಕಪ್
    ಉಪ್ಪು – ಅರ್ಧ ಟೀಸ್ಪೂನ್
    ಚಿಲ್ಲಿ ಫ್ಲೇಕ್ಸ್ – 1 ಟೀಸ್ಪೂನ್
    ತುರಿದ ಶುಂಠಿ – 1 ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ಸಾಸಿವೆ – ಅರ್ಧ ಟೀಸ್ಪೂನ್
    ಅರಿಶಿನ ಪುಡಿ – ಕಾಲು ಟೀಸ್ಪೂನ್
    ಹಿಂಗ್ – ಚಿಟಿಕೆ
    ಎಣ್ಣೆ – 1 ಟೀಸ್ಪೂನ್
    ನೀರು – ಕಾಲು ಕಪ್ ಇದನ್ನೂ ಓದಿ: ಗಂಟಲು ಕೆರೆತಕ್ಕೆ ಸವಿಯಿರಿ ಬೆಚ್ಚಗಿನ ಪುದೀನಾ ಟೀ

    ಮಾಡುವ ವಿಧಾನ:
    * ಮೊದಲಿಗೆ ಪೇರಳೆ ಹಣ್ಣುಗಳನ್ನು ತೊಳೆದು, ಸಿಪ್ಪೆ ತೆಗೆದು, ಬೀಜಗಳನ್ನು ತೆಗೆದುಹಾಕಿ ಮತ್ತು ಚೌಕಾಕಾರದ ತುಂಡುಗಳಾಗಿ ಕತ್ತರಿಸಿ.
    * ಒಂದು ಪ್ಯಾನ್‌ಗೆ ನೀರು ಹಾಕಿ, ಅದರಲ್ಲಿ ಪೇರಳೆ ತುಂಡುಗಳನ್ನು ಹಾಕಿ ಮೃದು ಹಾಗೂ ಸುಲಭವಾಗಿ ಮ್ಯಾಶ್ ಆಗುವವರೆಗೆ ಬೇಯಿಸಿಕೊಳ್ಳಿ.
    * ಈಗ ಮಸಾಲೆ ಮಿಶ್ರಣವನ್ನು ತಯಾರಿಸಲು ಇನ್ನೊಂದು ಪ್ಯಾನ್‌ನಲ್ಲಿ ಸಾಸಿವೆ, ಜೀರಿಗೆ ಮತ್ತು ಮೆಂತ್ಯವನ್ನು ಪರಿಮಳ ಬರುವವರೆಗೆ ಹುರಿದು ತಣ್ಣಗಾಗಿಸಿ ನಂತರ ಒರಟಾಗಿ ಪುಡಿ ಮಾಡಿಕೊಳ್ಳಿ.
    * ಚಿಲ್ಲಿ ಫ್ಲೇಕ್ಸ್ ಅನ್ನು ಸ್ವಲ್ಪ ಎಣ್ಣೆಯಲ್ಲಿ ಸುವಾಸನೆ ಬರುವ ತನಕ ಹುರಿಯಿರಿ.
    * ನಂತರ ಅದೇ ಬಾಣಲೆಯಲ್ಲಿ ಕತ್ತರಿಸಿದ ಈರುಳ್ಳಿಯನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
    * ಕೊಚ್ಚಿದ ಬೆಳ್ಳುಳ್ಳಿ ಮತ್ತು ಶುಂಠಿ ಸೇರಿಸಿ, ಹಸಿ ವಾಸನೆ ಹೋಗುವವರೆಗೆ ಬೇಯಿಸಿ.
    * ಈಗ ಈರುಳ್ಳಿ, ಬೆಳ್ಳುಳಿ, ಶುಂಠಿ ಮಿಶ್ರಣಕ್ಕೆ ಬೇಯಿಸಿದ ಪೇರಳೆಯನ್ನು ಸೇರಿಸಿ.
    * ಅದಕ್ಕೆ ಮಸಾಲೆ ಮಿಶ್ರಣ, ಸಕ್ಕರೆ, ವಿನೆಗರ್ ಮತ್ತು ಉಪ್ಪನ್ನು ಬೆರೆಸಿ. ಚಟ್ನಿ ಅಪೇಕ್ಷಿತ ಸ್ಥಿರತೆ ಬರುವವರೆಗೆ ಬೇಯಿಸಿಕೊಳ್ಳಿ.
    * ನಂತರ ಉರಿಯನ್ನು ಆಫ್ ಮಾಡಿ, ಚಟ್ನಿಯನ್ನು ಆರಲು ಬಿಡಿ. ಬಳಿಕ ಗಾಳಿಯಾಡದ ಡಬ್ಬಿಯಲ್ಲಿ ಚಟ್ನಿಯನ್ನು ಸಂಗ್ರಹಿಸಿ.
    * ಇದನ್ನು ಫ್ರಿಜ್‌ನಲ್ಲಿಟ್ಟರೆ ಹಲವು ವಾರಗಳವರೆಗೆ ಬಳಸಬಹುದು. ಇದನ್ನೂ ಓದಿ: 15 ನಿಮಿಷದಲ್ಲಿ ಮಾಡೋ ಚಿಕನ್ ನೂಡಲ್ ಸೂಪ್ ರೆಸಿಪಿ