Tag: recipe

  • ಕ್ಯಾರೆಟ್ ಬಾದಾಮ್ ಮಿಲ್ಕ್ ಹೀಗೆ ಮಾಡಿ!

    ಕ್ಯಾರೆಟ್ ಬಾದಾಮ್ ಮಿಲ್ಕ್ ಹೀಗೆ ಮಾಡಿ!

    ಳಿಗಾಲದಲ್ಲಿ ಬೆಚ್ಚಗಿರುವ ಆಹಾರ ಸೇವಿಸಿದರೆ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಅದರಲ್ಲೂ ಹೆಚ್ಚಿನ ಪ್ರಮಾಣದ ವಿಟಮಿನ್, ಪ್ರೋಟಿನ್ ಹೊಂದಿರುವ ಆಹಾರ, ತರಕಾರಿ ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಆರೋಗ್ಯಕರ ಕ್ಯಾರೆಟ್ ಬಾದಾಮ್ ಮಿಲ್ಕ್ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಝೀರೋ ವೇಸ್ಟ್ – ಬ್ರೊಕಲಿ ಕಾಂಡದ ಸೂಪ್ ಮಾಡಿ ನೋಡಿ

    ಬೇಕಾಗುವ ಸಾಮಗ್ರಿಗಳು:
    ಖರ್ಜೂರ – 8ರಿಂದ 10
    ಬಾದಾಮಿ – 10ರಿಂದ 12
    ಕ್ಯಾರೆಟ್ -2
    ಹಾಲು – ಅರ್ಧ ಲೀಟರ್
    ಏಲಕ್ಕಿ – 4
    ಬೆಲ್ಲದ ಪೌಡರ್ – 2 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಬಾದಾಮಿ ಹಾಗೂ ಖರ್ಜೂರವನ್ನು ಒಂದು ಬೌಲ್‌ನಲ್ಲಿ ಹಾಕಿ ಅದಕ್ಕೆ ನೀರನ್ನು ಹಾಕಿ 30 ನಿಮಿಷಗಳ ಕಾಲ ನೆನೆಸಿಡಿ.
    * ಬಳಿಕ ಸಿಪ್ಪೆ ತೆಗೆದ ಬಾದಾಮಿಯನ್ನು ಒಂದು ಮಿಕ್ಸಿ ಜಾರಿನಲ್ಲಿ ಹಾಕಿಕೊಳ್ಳಿ. ಬಳಿಕ ಅದಕ್ಕೆ ಹೆಚ್ಚಿದ ಕ್ಯಾರೆಟ್ ಅನ್ನು ಸೇರಿಸಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ.
    * ನಂತರ ಅದಕ್ಕೆ ಖರ್ಜೂರ ಹಾಗೂ ಅದರ ನೀರನ್ನು ಸೇರಿಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ.
    * ಈಗ ಒಂದು ಬೌಲ್‌ನಲ್ಲಿ ಈ ಮಿಶ್ರಣವನ್ನು ಹಾಕಿಕೊಂಡು ಅದಕ್ಕೆ ಹಾಲನ್ನು ಸೇರಿಸಿಕೊಂಡು ಕುದಿಯಲು ಬಿಡಿ.
    * ನಂತರ ಅದಕ್ಕೆ ಏಲಕ್ಕಿಯನ್ನು ಪುಡಿ ಮಾಡಿ ಹಾಕಿ 2-3 ನಿಮಿಷ ಕುದಿಯಲು ಬಿಡಿ.
    * ಹಾಲು ಕುದಿದ ಬಳಿಕ ಗ್ಯಾಸ್ ಆಫ್ ಮಾಡಿ ಅದಕ್ಕೆ ಬೆಲ್ಲದ ಪುಡಿಯನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಬಿಸಿಬಿಸಿ ಕ್ಯಾರೆಟ್ ಬಾದಾಮ್ ಮಿಲ್ಕ್ ಸವಿಯಲು ಸಿದ್ಧ. ಇದನ್ನೂ ಓದಿ: ಟ್ರೈ ಮಾಡಿ ಟೇಸ್ಟಿ ಗ್ರೀನ್ ಚಟ್ನಿ ಸ್ಯಾಂಡ್‌ವಿಚ್

  • ಚಾಕ್ಲೇಟ್ ಪ್ರಿಯರಿಗಾಗಿ ಲಾವಾ ಕೇಕ್ ರೆಸಿಪಿ

    ಚಾಕ್ಲೇಟ್ ಪ್ರಿಯರಿಗಾಗಿ ಲಾವಾ ಕೇಕ್ ರೆಸಿಪಿ

    ಚಾಕ್ಲೇಟ್ ಎಲ್ಲರಿಗೂ ಇಷ್ಟ. ಇದಕ್ಕೆ ವಯಸ್ಸಿನ ಮಿತಿಯಿಲ್ಲ. ಚಾಕ್ಲೇಟ್ ಎಂದರೆ ಹುಚ್ಚೆದ್ದು ಇಷ್ಟಪಡುವವರೂ ಇದ್ದಾರೆ. ಅಂತಹ ಚಾಕೋಹಾಲಿಕ್‌ಗಳಿಗಾಗಿ ನಾವಿಂದು ಪರ್ಫೆಕ್ಟ್ ರೆಸಿಪಿಯೊಂದನ್ನು ಹೇಳಿಕೊಡಲಿದ್ದೇವೆ. ಬೇಕರಿಗಳಲ್ಲಿ ಸಿಗುವ ಚಾಕ್ಲೇಟ್ ಲಾವಾ ಕೇಕ್ ಎಂದರೆ ಎಂತಹವರ ಬಾಯಲ್ಲೂ ನೀರು ಬರುತ್ತದೆ. ಈ ರೆಸಿಪಿಯನ್ನು ಸಿಂಪಲ್ ಆಗಿ ಮನೆಯಲ್ಲೇ ಹೇಗೆ ಮಾಡ್ಬೋದು ಎಂದು ನಾವಿಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಬೆಣ್ಣೆ – ಅರ್ಧ ಕಪ್
    ಸಿಹಿ ಚಾಕ್ಲೇಟ್ – 100 ಗ್ರಾಂ
    ಸಕ್ಕರೆ ಪುಡಿ – 1 ಕಪ್
    ಮೊಟ್ಟೆ – 2
    ಮೊಟ್ಟೆಯ ಹಳದಿ ಭಾಗ – 2
    ವೆನಿಲ್ಲಾ ಸಾರ – ಅರ್ಧ ಟೀಸ್ಪೂನ್
    ಮೈದಾ ಹಿಟ್ಟು – ಕಾಲು ಕಪ್
    ಉಪ್ಪು – ಚಿಟಿಕೆ
    ವೆನಿಲ್ಲಾ ಐಸ್ ಕ್ರೀಂ ಮತ್ತು ತಾಜಾ ಹಣ್ಣುಗಳು – ಐಚ್ಛಿಕ ಇದನ್ನೂ ಓದಿ: ವಿಂಟರ್ ಸೀಸನ್‌ಗೆ ಟೇಸ್ಟಿ ಮೆಕ್ಸಿಕನ್ ಹಾಟ್ ಚಾಕ್ಲೇಟ್ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಓವನ್ ಅನ್ನು 220 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ. ಮತ್ತು ಪುಟ್ಟ ಪುಟ್ಟ ಕಪ್‌ಗಳಿಗೆ ಬೆಣ್ಣೆಯನ್ನು ಗ್ರೀಸ್ ಮಾಡಿ ಬದಿಗಿಡಿ.
    * ಮೈಕ್ರೋವೇವ್ ಸೇಫ್ ಬೌಲ್‌ನಲ್ಲಿ ಬೆಣ್ಣೆ ಮತ್ತು ಚಾಕ್ಲೇಟ್ ಅನ್ನು ಹಾಕಿ ಬಿಸಿ ಮಾಡಿ. ಅದು ಸಂಪೂರ್ಣ ಕರಗುವವರೆಗೆ ನಯವಾಗಿ ಬೆರೆಸಿಕೊಳ್ಳಿ.
    * ಬಳಿಕ ಸಕ್ಕರೆ ಪುಡಿಯನ್ನು ಹಾಕಿ ಕರಗಿಸಿಕೊಳ್ಳಿ.
    * ನಂತರ ಮೊಟ್ಟೆ, ಮೊಟ್ಟೆಯ ಹಳದಿ ಭಾಗ ಮತ್ತು ವೆನಿಲ್ಲಾ ಸಾರವನ್ನು ಸೇರಿಸಿ ನಯವಾಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಅದಕ್ಕೆ ಮೈದಾ ಹಿಟ್ಟು ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ.
    * ಗ್ರೀಸ್ ಮಾಡಿದ ಕಪ್‌ಗಳಿಗೆ ತಯಾರಿಸಿಟ್ಟ ಮಿಶ್ರಣವನ್ನು ಹಾಕಿ.
    * ಕಪ್‌ಗಳನ್ನು ಓವನ್‌ನಲ್ಲಿಟ್ಟು ಸುಮಾರು 12-14 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಕೇಕ್‌ನ ಅಂಚು ಮಾತ್ರವೇ ಬೆಂದು ಮಧ್ಯಭಾಗ ಇನ್ನೂ ಮೃದುವಾಗಿರಬೇಕೆಂದರೆ ಹೆಚ್ಚು ಬೇಯಿಸಬೇಡಿ.
    * ಈಗ ಕೇಕ್‌ಗಳನ್ನು 1 ನಿಮಿಷ ತಣ್ಣಗಾಗಲು ಬಿಡಿ. ನಂತರ ಅದನ್ನು ಸರ್ವಿಂಗ್ ಪ್ಲೇಟ್‌ನಲ್ಲಿ ಜೋಡಿಸಿ.
    * ನೀವು ಬಯಸುತ್ತೀರಾದರೆ ವೆನಿಲ್ಲಾ ಐಸ್ ಕ್ರೀಮ್ ಹಾಗೂ ತಾಜಾ ಹಣ್ಣುಗಳಿಂದ ಅಲಂಕರಿಸಿದರೆ ಚಾಕ್ಲೆಟ್ ಲಾವಾ ಕೇಕ್ ಸಿದ್ಧವಾಗುತ್ತದೆ. ಇದನ್ನು ಬೆಚ್ಚಗಿರುವಾಗಲೇ ಸವಿಯಿರಿ. ಇದನ್ನೂ ಓದಿ: ಮನೆಯಲ್ಲೇ ಮಾಡಿ ನೋಡಿ ನ್ಯಾಚುರಲ್ ಆಪಲ್ ಜೆಲ್ಲಿ

  • ಝೀರೋ ವೇಸ್ಟ್ – ಬ್ರೊಕಲಿ ಕಾಂಡದ ಸೂಪ್ ಮಾಡಿ ನೋಡಿ

    ಝೀರೋ ವೇಸ್ಟ್ – ಬ್ರೊಕಲಿ ಕಾಂಡದ ಸೂಪ್ ಮಾಡಿ ನೋಡಿ

    ಬ್ರೊಕಲಿ ಪ್ರತಿಯೊಬ್ಬರ ನೆಚ್ಚಿನ ತರಕಾರಿಯಲ್ಲದಿದ್ದರೂ ಆರೋಗ್ಯಕರವಂತೂ ಹೌದು. ಬ್ರೊಕೊಲಿ ಕಾಂಡವನ್ನು ಹೆಚ್ಚಿನವರು ಎಸೆಯುತ್ತಾರೆ. ಏಕೆಂದರೆ ಅದನ್ನು ಅಡುಗೆಯಲ್ಲಿ ಹೇಗೆ ಬಳಸಬೇಕು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ನಾವಿಂದು ಬ್ರೊಕಲಿ ಕಾಂಡದ ಸೂಪ್ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಬ್ರೊಕಲಿ ಕಾಂಡವನ್ನು ವೇಸ್ಟ್ ಎಂದು ತಿಳಿದು ಅದನ್ನು ಎಸೆಯದೇ ನೀವು ಕೂಡಾ ಸೂಪ್ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಆಲಿವ್ ಎಣ್ಣೆ – 1 ಟೀಸ್ಪೂನ್
    ಹೆಚ್ಚಿದ ಈರುಳ್ಳಿ – ಅರ್ಧ
    ಬೆಳ್ಳುಳ್ಳಿ – 2
    ಹೆಚ್ಚಿಕೊಂಡ ಬ್ರೊಕಲಿ ಕಾಂಡ – 4-5 ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ಮೆಣಸಿನ ಪುಡಿ – ಸ್ವಾದಕ್ಕನುಸಾರ
    ಚಿಕನ್/ತರಕಾರಿ ಸ್ಟಾಕ್ – 3 ಕಪ್ ಇದನ್ನೂ ಓದಿ: ಟ್ರೈ ಮಾಡಿ ಟೇಸ್ಟಿ ಗ್ರೀನ್ ಚಟ್ನಿ ಸ್ಯಾಂಡ್‌ವಿಚ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಈರುಳ್ಳಿ, ಬೆಳ್ಳುಳ್ಳಿ ಮತ್ತು ಬ್ರೊಕಲಿ ಕಾಂಡಗಳನ್ನು ಸೇರಿಸಿ ಫ್ರೈ ಮಾಡಿ.
    * ಅದಕ್ಕೆ ಉಪ್ಪು ಮತ್ತು ಮೆಣಸಿನ ಪುಡಿ ಹಾಕಿ ಮಿಶ್ರಣ ಮಾಡಿ.
    * ಇದನ್ನು ಸುಮಾರು 10 ನಿಮಿಷಗಳ ಕಾಲ ಆಗಾಗ ಬೆರೆಸುತ್ತಾ ಚೆನ್ನಾಗಿ ಬೇಯಿಸಿಕೊಳ್ಳಿ.
    * ತರಕಾರಿಗಳು ಮೃದುವಾದ ನಂತರ ಅದಕ್ಕೆ ಚಿಕನ್ ಅಥವಾ ತರಕಾರಿ ಸ್ಟಾಕ್ ಸೇರಿಸಿ.
    * ಸೂಪ್ ಚೆನ್ನಾಗಿ ಕುದಿದ ಬಳಿಕ ಉರಿಯನ್ನು ಆಫ್ ಮಾಡಿ, ಆರಲು ಬಿಡಿ.
    * ಈಗ ಮಿಕ್ಸರ್ ಜಾರ್‌ಗೆ ಸೂಪ್ ಮಿಶ್ರಣ ಹಾಕಿ ನಯವಾಗಿ ರುಬ್ಬಿಕೊಳ್ಳಿ.
    * ಬಳಿಕ ಅದನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಸೂಪ್ ತಣ್ಣಗಾಗಿದ್ದರೆ, ಮತ್ತೆ ಸ್ವಲ್ಪ ಬಿಸಿ ಮಾಡಿಕೊಳ್ಳಿ.
    * ಇದೀಗ ಬ್ರೊಕಲಿ ಸೂಪ್ ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಮನೆಯಲ್ಲೇ ಮಾಡಿ ಟೇಸ್ಟಿ ಪೀನಟ್ ಬಟರ್

  • ಟ್ರೈ ಮಾಡಿ ಟೇಸ್ಟಿ ಗ್ರೀನ್ ಚಟ್ನಿ ಸ್ಯಾಂಡ್‌ವಿಚ್

    ಟ್ರೈ ಮಾಡಿ ಟೇಸ್ಟಿ ಗ್ರೀನ್ ಚಟ್ನಿ ಸ್ಯಾಂಡ್‌ವಿಚ್

    ಗ್ರೀನ್ ಚಟ್ನಿ ನೀವು ಮೊದಲಿನಿಂದಲೇ ಸವಿದಿರುತ್ತೀರಿ. ಸಮೋಸಾ, ಪಾನಿ ಪೂರಿ ಸೇರಿದಂತೆ ಹಲವು ವಿಧದ ತಿಂಡಿಗಳೊಂದಿಗೆ ಸವಿದು ಇದರ ರುಚಿ ನಿಮಗೆ ಗೊತ್ತೇ ಇದೆ. ಆದರೆ ನೀವೆಂದಾದರೂ ಗ್ರೀನ್ ಚಟ್ನಿ ಸ್ಯಾಂಡ್‌ವಿಚ್ ಸವಿದಿದ್ದೀರಾ? ಇಲ್ಲ ಎಂದರೆ ಇಂದು ನೀವೇ ಇದನ್ನು ಮನೆಯಲ್ಲಿ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಕೊತ್ತಂಬರಿ ಸೊಪ್ಪು – 1 ಕಪ್
    ತಾಜಾ ತೆಂಗಿನಕಾಯಿ ತುರಿ – ಕಾಲು ಕಪ್
    ಹಸಿರು ಮೆಣಸಿನಕಾಯಿ – 2-3
    ಸಕ್ಕರೆ – 1 ಟೀಸ್ಪೂನ್
    ನೀರು – 2-3 ಟೀಸ್ಪೂನ್
    ನಿಂಬೆ ರಸ – ಕಾಲು ಟೀಸ್ಪೂನ್
    ಉಪ್ಪು – ಚಿಟಿಕೆ ಇದನ್ನೂ ಓದಿ: ಹೀಗೆ ಮಾಡಿ ಕ್ರಿಸ್ಪಿ ಹಾಗಲಕಾಯಿ ಫ್ರೈಸ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಮಿಕ್ಸರ್ ಜಾರ್‌ಗೆ ಕೊತ್ತಂಬರಿ ಸೊಪ್ಪು, ತಾಜಾ ತುರಿದ ತೆಂಗಿನಕಾಯಿ, ಹಸಿರು ಮೆಣಸಿನಕಾಯಿ, ಸಕ್ಕರೆ, ನಿಂಬೆ ರಸ ಮತ್ತು ಉಪ್ಪು ಸೇರಿಸಿ ನಯವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ.
    * ನಡುವೆ 2-3 ಟೀಸ್ಪೂನ್ ನೀರು ಸೇರಿಸಿ ಮಿಶ್ರಣ ಮಾಡಿ. ಹೆಚ್ಚು ನೀರು ಸೇರಿಸಬೇಡಿ. ಏಕೆಂದರೆ ಚಟ್ನಿ ದಪ್ಪವಿದ್ದಷ್ಟು ಉತ್ತಮ.
    * ಈಗ ಬ್ರೆಡ್ ಸ್ಲೈಸ್‌ಗಳನ್ನು ತೆಗೆದುಕೊಂಡು ಅದರ ಒಂದು ಬದಿಗೆ ಸ್ವಲ್ಪ ಬೆಣ್ಣೆಯನ್ನು ಹರಡಿ.
    * ಅದರ ಮೇಲೆ ಒಂದು ಟೀಸ್ಪೂನ್‌ನಷ್ಟು ಗ್ರೀನ್ ಚಟ್ನಿ ಹಾಕಿಕೊಂಡು ಹರಡಿ.
    * ಎಲ್ಲಾ ಬ್ರೆಡ್‌ಗೂ ಇದೇ ರೀತಿ ಮಾಡಿ, 2-3 ಪದರಗಳಲ್ಲಿ ಜೋಡಿಸಿ.
    * ನಿಮ್ಮ ಆಯ್ಕೆಯಂತೆ ತ್ರಿಕೋನ ಅಥವಾ ಚೌಕಾಕಾರವಾಗಿ ಕತ್ತರಿಸಿ.
    * ಇದೀಗ ಗ್ರೀನ್ ಚಟ್ನಿ ಸ್ಯಾಂಡ್‌ವಿಚ್ ತಯಾರಾಗಿದ್ದು, ಚಹಾ, ಕಾಫಿ ಅಥವಾ ಜ್ಯೂಸ್ ಜೊತೆ ಸವಿಯಿರಿ. ಇದನ್ನೂ ಓದಿ: ಮನೆಯಲ್ಲೇ ಮಾಡಿ ಟೇಸ್ಟಿ ಪೀನಟ್ ಬಟರ್

  • ಮನೆಯಲ್ಲೇ ಮಾಡಿ ಟೇಸ್ಟಿ ಪೀನಟ್ ಬಟರ್

    ಮನೆಯಲ್ಲೇ ಮಾಡಿ ಟೇಸ್ಟಿ ಪೀನಟ್ ಬಟರ್

    ಪೀನಟ್ ಬಟರ್ ಅನ್ನು ನಮ್ಮ ದಿನನಿತ್ಯದ ಆಹಾರದೊಂದಿಗೆ ಸೇವಿಸುವುದರಿಂದ ಆರೋಗ್ಯ ಚನ್ನಾಗಿರುತ್ತದೆ. ಪೀನಟ್ ಬಟರ್ ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಿ ಒಳ್ಳೆಯ ಕೊಲೆಸ್ಟ್ರಾಲ್ ತುಂಬುವಲ್ಲಿ ಸಹಕಾರಿಯಾಗಿದೆ. ಅಲ್ಲದೇ ಒಂದು ವರ್ಷದ ಮಕ್ಕಳಿಂದ ಹಿಡಿದು ದೊಡ್ಡವರೂ ಸಹ ಇದನ್ನು ಸೇವಿಸಬಹುದಾಗಿದೆ. ಸಾಮಾನ್ಯವಾಗಿ ಎಲ್ಲರೂ ಅಂಗಡಿಯಲ್ಲಿ ದೊರೆಯುವ ಪೀನಟ್ ಬಟರ್ ಅನ್ನು ತಂದು ಬಳಸುತ್ತಾರೆ. ಇದನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಮನೆಯಲ್ಲಿಯೇ ಪೀನಟ್ ಬಟರ್ ಹೇಗೆ ತಯಾರಿಸುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಹೀಗೆ ಮಾಡಿ ಕ್ರಿಸ್ಪಿ ಹಾಗಲಕಾಯಿ ಫ್ರೈಸ್

    ಬೇಕಾಗುವ ಸಾಮಗ್ರಿಗಳು: 
    ಶೇಂಗಾ ಬೀಜ – 1 ಕಪ್
    ಜೇನುತುಪ್ಪ – 1 ಚಮಚ
    ಉಪ್ಪು – ಒಂದು ಚಿಟಿಕೆ
    ಕಡಲೆಕಾಯಿ ಎಣ್ಣೆ – 1 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಶೇಂಗಾ ಬೀಜ ಹಾಕಿಕೊಂಡು ಕೆಂಪಗಾಗುವರೆಗೆ ಹುರಿದುಕೊಳ್ಳಿ. ಬಳಿಕ ತಣ್ಣಾಗಗಲು ಬಿಡಿ.
    * ಈಗ ಹುರಿದ ಶೇಂಗಾ ಬೀಜವನ್ನು ಒಂದು ಟವಲ್ ಅಥವಾ ಬಟ್ಟೆಯ ಮೇಲೆ ಹಾಕಿಕೊಂಡು ಅದರ ಸಿಪ್ಪೆ ಹೋಗುವವರೆಗೆ ಚನ್ನಾಗಿ ಉಜ್ಜಿಕೊಂಡು ಒಂದು ಬೌಲ್‌ನಲ್ಲಿ ಹಾಕಿಕೊಳ್ಳಿ.
    * ಬಳಿಕ ಒಂದು ಮಿಕ್ಸಿ ಜಾರಿಗೆ ಶೇಂಗಾ ಬೀಜವನ್ನು ಹಾಕಿಕೊಂಡು ಚನ್ನಾಗಿ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ.
    * ನಂತರ ಇದಕ್ಕೆ 1 ಚಮಚ ಜೇನುತುಪ್ಪವನ್ನು ಹಾಕಿಕೊಂಡು ಅದಕ್ಕೆ ಒಮದು ಚಿಟಿಕೆ ಉಪ್ಪನ್ನು ಹಾಕಿಕೊಳ್ಳಿ. ಬಳಿಕ ಮತ್ತೊಂದು ಬಾರಿ ರುಬ್ಬಿಕೊಳ್ಳಿ.
    * ಈಗ ಈ ಮಿಶ್ರಣಕ್ಕೆ ಒಂದು ಚಮಚ ಕಡಲೆಕಾಯಿ ಎಣ್ಣೆ ಹಾಕಿಕೊಳ್ಳಿ. ಬಳಿಕ ಇನ್ನೊಂದು ಬಾರಿ ರುಬ್ಬಿಕೊಳ್ಳಿ.
    * ಮಿಕ್ಸಿ ಜಾರಿನಲ್ಲಿದ್ದ ಮಿಶ್ರಣವನ್ನು ಒಂದು ಬೌಲ್‌ಗೆ ತೆಗೆದಿಟ್ಟುಕೊಳ್ಳಿ. ಈ ಪೀನಟ್ ಬಟರ್ ಅನ್ನು ಚಪಾತಿ, ಬ್ರೆಡ್ ಅಥವಾ ನಿಮಗಿಷ್ಟವಾದ ಆಹಾರದೊಂದಿಗೆ ಸೇವಿಸಬಹುದು. ಇದನ್ನೂ ಓದಿ: ವಿಂಟರ್ ಸೀಸನ್‌ಗೆ ಟೇಸ್ಟಿ ಮೆಕ್ಸಿಕನ್ ಹಾಟ್ ಚಾಕ್ಲೇಟ್ ಮಾಡಿ

  • ಹೀಗೆ ಮಾಡಿ ಕ್ರಿಸ್ಪಿ ಹಾಗಲಕಾಯಿ ಫ್ರೈಸ್

    ಹೀಗೆ ಮಾಡಿ ಕ್ರಿಸ್ಪಿ ಹಾಗಲಕಾಯಿ ಫ್ರೈಸ್

    ಹಾಗಲಕಾಯಿ ಎಲ್ಲರಿಗೂ ಇಷ್ಟವಾಗುವ ತರಕಾರಿ ಅಲ್ಲ. ಆದರೆ ನಾವಿಂದು ಹೇಳಿಕೊಡುತ್ತಿರುವ ಕ್ರಿಸ್ಪಿ ಹಾಗಲಕಾಯಿ ಫ್ರೈಸ್ ಅನ್ನು ನೀವು ಚಪ್ಪರಿಸಿ ಸವಿಯೋದಂತೂ ಖಂಡಿತಾ. ಏಕೆಂದರೆ ಈ ರೆಸಿಪಿಯಲ್ಲಿ ಹಾಗಲಕಾಯಿ ಹೆಚ್ಚು ಕಹಿ ಎನಿಸಲ್ಲ. ಇದು ಗೋವಾ ಸ್ಟೈಲ್‌ನ ಆಹಾರವಾಗಿದ್ದು, ಊಟಕ್ಕೆ ಸೈಡ್ ಡಿಶ್ ಆಗಿ ಸವಿಯಲು ಪರ್ಫೆಕ್ಟ್ ಆಗಿದೆ. ಕ್ರಿಸ್ಪಿ ಹಾಗಲಕಾಯಿ ಫ್ರೈಸ್ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಹಾಗಲಕಾಯಿ – 5
    ರವೆ/ಒರಟಾದ ಅಕ್ಕಿ ಹಿಟ್ಟು – ಕಾಲು ಕಪ್
    ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಅರಿಶಿನ ಪುಡಿ – ಅರ್ಧ ಟೀಸ್ಪೂನ್
    ಉಪ್ಪು – 1 ಟೀಸ್ಪೂನ್
    ನಿಂಬೆ – 1
    ಎಣ್ಣೆ – 4 ಟೀಸ್ಪೂನ್ ಇದನ್ನೂ ಓದಿ: ಮಹಾರಾಷ್ಟ್ರ ಶೈಲಿಯ ಶೇಂಗಾ ಚಟ್ನಿ ಪುಡಿ ತಿಂದು ನೋಡಿ

    ಮಾಡುವ ವಿಧಾನ:
    * ಮೊದಲಿಗೆ ಹಾಗಲಕಾಯಿಯ ಸಿಪ್ಪೆ ಸುಲಿದು, ತೆಳುವಾದ, ಉದ್ದದ ಪಟ್ಟಿಗಳಾಗಿ ಕತ್ತರಿಸಿಕೊಳ್ಳಿ.
    * ಅದಕ್ಕೆ ಉಪ್ಪು ಹಾಗೂ ನಿಂಬೆ ರಸವನ್ನು ಹಾಕಿ ಮಿಶ್ರಣ ಮಾಡಿ ಸುಮಾರು 15 ನಿಮಿಷಗಳ ಕಾಲ ಪಕ್ಕಕ್ಕಿಡಿ. ಈ ವೇಳೆ ಹಾಗಲಕಾಯಿಯಿಂದ ನೀರು ಬಿಡುಗಡೆಯಾಗಿ ಕಹಿ ಕಡಿಮೆಯಾಗುತ್ತದೆ.
    * ಈಗ ರವೆ ಅಥವಾ ಒರಟಾದ ಅಕ್ಕಿ ಹಿಟ್ಟನ್ನು ಒಂದು ಬಟ್ಟಲಿಗೆ ಹಾಕಿ. ಅದಕ್ಕೆ ಅರಶಿನ ಮತ್ತು ಕೆಂಪು ಮೆಣಸಿನ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
    * ಹಾಗಲಕಾಯಿಯಿಂದ ಬಿಡುಗಡೆಯಾದ ನೀರನ್ನು ಹರಿಸಿಕೊಳ್ಳಿ.
    * ಅಕ್ಕಿ ಹಿಟ್ಟಿನ ಮಿಶ್ರಣಕ್ಕೆ ಹಾಗಲಕಾಯಿ ತುಂಡುಗಳನ್ನು ಹಾಕಿ ಸುತ್ತಲೂ ಕೋಟ್ ಆಗುವಂತೆ ಮಿಶ್ರಣ ಮಾಡಿಕೊಳ್ಳಿ.
    * ಈಗ ಪ್ಯಾನ್ ಅನ್ನು ಬಿಸಿ ಮಾಡಿ, ಅದಕ್ಕೆ ಎಣ್ಣೆ ಹಾಕಿ.
    * ಈಗ ಹಾಗಲಕಾಯಿ ತುಂಡುಗಳನ್ನು ಕಾದ ಎಣ್ಣೆಯಲ್ಲಿ ಬಿಟ್ಟು ಸುತ್ತಲೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
    * ಇದೀಗ ಕ್ರಿಸ್ಪಿ ಹಾಗಲಕಾಯಿ ಫ್ರೈಸ್ ತಯಾರಾಗಿದ್ದು, ಊಟದೊಂದಿಗೆ ಬಡಿಸಿ. ಇದನ್ನೂ ಓದಿ: ಪ್ರಯಾಗ್‌ರಾಜ್‌ನ ಪ್ರಸಿದ್ಧ ಕಚೋರಿ ಸಬ್ಜಿ ಸವಿದಿದ್ದೀರಾ?

  • ಮನೆಯಲ್ಲೇ ಮಾಡಿ ಸ್ವಾದಿಷ್ಟಕರ ಚೀಸ್ ಚಿಕನ್ ಬರ್ಗರ್

    ಮನೆಯಲ್ಲೇ ಮಾಡಿ ಸ್ವಾದಿಷ್ಟಕರ ಚೀಸ್ ಚಿಕನ್ ಬರ್ಗರ್

    ಗಿನ ಮಕ್ಕಳಿಗಂತೂ ಪಿಜ್ಜಾ, ಬರ್ಗರ್ ಸಿಕ್ಕಿಬಿಟ್ಟರೆ ಊಟತಿಂಡಿ ಏನು ಬೇಡ. ಪ್ರತಿದಿನ ಈ ರೀತಿಯಾದ ತಿನಿಸುಗಳೇ ಬೇಕು ಎಂದು ಪೋಷಕರ ಬಳಿ ಹಠ ಹಿಡಿಯುತ್ತಾರೆ. ಆದರೆ ಹೊರಗಡೆ ಲಭ್ಯವಿರುವ ಪಿಜ್ಜಾ ಬರ್ಗರ್ ಎಷ್ಟು ಆರೋಗ್ಯಕರ ಎಂಬ ಕಡೆ ತಂದೆತಾಯಂದಿರು ಗಮನಹರಿಸುವುದು ಉತ್ತಮ. ಹೊರಗಡೆಯಿಂದ ಈ ರೀತಿಯಾದ ತಿನಿಸುಗಳನ್ನು ತರಿಸುವ ಬದಲು ಮನೆಯಲ್ಲೇ ಅದನ್ನು ಮಾಡಿದರೇ ಶುಚಿತ್ವದೊಂದಿಗೆ ಆರೋಗ್ಯವೂ ಕೆಡುವುದಿಲ್ಲ. ಇವತ್ತಿನ ನಮ್ಮ ರೆಸಿಪಿಯಲ್ಲಿ ಮಕ್ಕಳಿಗೆ ಇಷ್ಟವಾಗುವಂತಹ ಚೀಸ್ ಚಿಕನ್ ಬರ್ಗರ್ ಯಾವ ರೀತಿ ಮಾಡುವುದು ಎಂಬದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಹೇಗೆ ತಯಾರಿಸಬಹುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ರಾಜಸ್ಥಾನದ ರಾಯಲ್ ಟೇಸ್ಟ್ – ಜೋಧಪುರಿ ಧುವಾನ್ ಮಾಸ್ ರೆಸಿಪಿ

    ಬೇಕಾಗುವ ಸಾಮಗ್ರಿಗಳು:
    ಚಿಕನ್ ಖೀಮಾ – 100 ಗ್ರಾಂ
    ಬರ್ಗರ್ ಬನ್ – 4
    ಬ್ರೆಡ್ ಕ್ರಂಬ್ಸ್ – 1 ಕಪ್
    ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
    ವೃತ್ತಾಕಾರದಲ್ಲಿ ಹೆಚ್ಚಿದ ಟೊಮೆಟೋ – 2
    ವೃತ್ತಾಕಾರದಲ್ಲಿ ಹೆಚ್ಚಿದ ಈರುಳ್ಳಿ – 2 (ಒಂದನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ)
    ಮಯೋನೀಸ್ – 2 ಚಮಚ
    ಬೆಣ್ಣೆ – 2 ಚಮಚಮ
    ಟೊಮೆಟೋ ಕೆಚಪ್ – 1 ಕಪ್
    ಚೀಸ್ – 4
    ಎಣ್ಣೆ – 2 ಚಮಚ
    ಉಪ್ಪು – ರುಚಿಗೆ ತಕ್ಕಷ್ಟು
    ಕಾಳುಮೆಣಸಿನ ಪುಡಿ – ಅರ್ಧ ಚಮಚ
    ಕೊತ್ತಂಬರಿ ಪುಡಿ – 1 ಚಮಚ

    ಮಾಡುವ ವಿಧಾನ:
    1) ಒಂದು ಬೋಗುಣಿಯಲ್ಲಿ ಖೀಮಾ ಮತ್ತು ಬ್ರೆಡ್ ಟೋಸ್ಟ್ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ಇದಕ್ಕೆ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕಾಳುಮೆಣಸಿನ ಪುಡಿ, ಹೆಚ್ಚಿದ ಈರುಳ್ಳಿ, ಕೊತ್ತೊಂಬರಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
    2) ಇನ್ನು ಇದನ್ನು ನಾಲ್ಕು ಪಾಲು ಮಾಡಿ ಎಣ್ಣೆಹಚ್ಚಿದ ತಟ್ಟೆಯ ಮೇಲೆ ಒಂದು ಬನ್ ವ್ಯಾಸದಷ್ಟು ಅಗಲಕ್ಕೆ ದಪ್ಪನೆಯ ರೊಟ್ಟಿಯಂತೆ ಲಟ್ಟಿಸಿ ಪಕ್ಕಕ್ಕಿಡಿ.
    3) ದಪ್ಪತಳದ ಬಾಣಲೆಯೊಂದರಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಈ ನಾಲ್ಕೂ ರೊಟ್ಟಿಗಳನ್ನು ಬೇಯಿಸಿ. ನಡುನಡುವೆ ತಿರುವುತ್ತಾ ಎರಡೂ ಬದಿಗಳು ಸುಮಾರು ಕಂದು ಬಣ್ಣ ಬರುವಷ್ಟು ಬೇಯಿಸಿ. ಇದಕ್ಕೆ ಸುಮಾರು ಹದಿನೈದು ನಿಮಿಷ ಬೇಕಾಗುತ್ತದೆ.
    4) ಈಗ ಮಯೋನೀಸ್ ಮತ್ತು ಟೊಮೇಟೊ ಕೆಚಪ್‌ಗಳನ್ನು ಒಂದು ಲೋಟಕ್ಕೆ ಹಾಕಿ ಚಮಚದಿಂದ ಚೆನ್ನಾಗಿ ಮಿಶ್ರಣಮಾಡಿ
    5) ಈಗ ಬನ್‌ಗಳನ್ನು ನಡುವೆ ಅಡ್ಡಲಾಗಿ ಕತ್ತರಿಸಿ ಎರಡು ಬಿಲ್ಲೆಗಳನ್ನಾಗಿಸಿ. ಇದರ ಒಳಭಾಗಕ್ಕೆ ಬೆಣ್ಣೆ ಹಚ್ಚಿ ಕಾವಲಿಯ ಮೇಲೆ ಚಿಕ್ಕ ಉರಿಯಲ್ಲಿ ಬಿಸಿಮಾಡಿ.
    6) ಬನ್ ಬಿಸಿಯಾದ ಬಳಿಕ ತಳಭಾಗದ ಬಿಲ್ಲೆಯ ಮೇಲೆ ಮೊದಲು ಮಾಯೋನೀಸ್ ಕೆಚಪ್ ಮಿಶ್ರಣವನ್ನು ಸವರಿ ಅದರ ಮೇಲೆ ವೃತ್ತಾಕಾರದ ಟೊಮೆಟೊ, ಈರುಳ್ಳಿ ಹಾಕಿ ಹರಡಿ ಅದರ ಮೇಲೆ ಚೀಸ್ ಹಾಕಿ. ಇದರ ಮೇಲೆ ಚಿಕನ್ ಖೈಮಾದ ಹುರಿದ ತುಂಡನ್ನಿಡಿ. ಇದರ ಮೇಲೆ ಬನ್‌ನ ಮೇಲಿನ ಭಾಗವನ್ನಿಡಿ.
    7) ಹೀಗೇ ನಾಲ್ಕೂ ಬರ್ಗರ್‌ಗಳು ತಯಾರಾದ ಬಳಿಕ ಸರ್ವಿಂಗ್ ಪ್ಲೇಟ್‌ಗೆ ಹಾಕಿ ಬಿಸಿಬಿಸಿಯಾಗಿ ತಿನ್ನಲು ಕೊಡಿ. ಇದನ್ನೂ ಓದಿ: ನಾನ್‌ವೆಜ್ ಪ್ರಿಯರಿಗಾಗಿ ಖೀಮಾ ಮಟರ್ ಪಾವ್ ರೆಸಿಪಿ

  • ರಾಜಸ್ಥಾನದ ರಾಯಲ್ ಟೇಸ್ಟ್ – ಜೋಧಪುರಿ ಧುವಾನ್ ಮಾಸ್ ರೆಸಿಪಿ

    ರಾಜಸ್ಥಾನದ ರಾಯಲ್ ಟೇಸ್ಟ್ – ಜೋಧಪುರಿ ಧುವಾನ್ ಮಾಸ್ ರೆಸಿಪಿ

    ರಾಜಸ್ಥಾನ ಶ್ರೀಮಂತ ಸಾಂಸ್ಕೃತಿಕ ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಅಲ್ಲಿನ ಆಹಾರ ಸಂಸ್ಕೃತಿ ಗತಕಾಲದ ಸಂಪತ್ತನ್ನು ಪ್ರತಿಬಿಂಬಿಸುತ್ತದೆ. ಜೋಧಪುರಿ ಧುವಾನ್ ಮಾಸ್ ಹಳ್ಳಿಗಾಡು ಹಾಗೂ ರಾಯಲ್ ಎರಡೂ ಆಹಾರವಾಗಿ ಪ್ರಸಿದ್ಧಿ ಪಡೆದಿದೆ. ಇದ್ದಿಲು ಹಾಗೂ ತುಪ್ಪದಿಂದ ಧುವಾನ್ ನೀಡಲಾಗುವ ರಾಯಲ್ ಟೇಸ್ಟ್‌ನ ಅದ್ಭುತ ಜೋಧಪುರಿ ಧುವಾನ್ ಮಾಸ್ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ನಾನ್‌ವೆಜ್‌ನಲ್ಲಿ ಹೊಸ ರುಚಿ ಟ್ರೈ ಮಾಡಲು ಬಯಸುವವರು ಈ ರೆಸಿಪಿಯನ್ನು ಖಂಡಿತಾ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಮಟನ್ – 2 ಕೆಜಿ
    ಎಣ್ಣೆ – 1 ಕಪ್
    ದಾಲ್ಚಿನ್ನಿ ತುಂಡುಗಳು – 3-4
    ಲವಂಗ – 6-7
    ದಾಲ್ಚಿನ್ನಿ ಎಲೆ – 2-3
    ಕತ್ತರಿಸಿದ ಈರುಳ್ಳಿ – 450 ಗ್ರಾಂ
    ಮೊಸರು – 1.5 ಕೆಜಿ
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಕಪ್
    ಅರಿಶಿನ ಪುಡಿ – 2 ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – 2 ಟೀಸ್ಪೂನ್
    ಕೊತ್ತಂಬರಿ ಪುಡಿ – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಕತ್ತರಿಸಿದ ಟೊಮೆಟೊ – 500 ಗ್ರಾಂ
    ಹಸಿರು ಮೆಣಸಿನಕಾಯಿ – 5-6
    ನಿಂಬೆ ರಸ – 1 ಟೀಸ್ಪೂನ್
    ಕೊತ್ತಂಬರಿ ಸೊಪ್ಪು – ಕಾಲು ಕಪ್
    ಹೆಚ್ಚಿದ ಪುದೀನ ಎಲೆಗಳು – ಕಾಲು ಕಪ್
    ಧುವಾನ್ ತಯಾರಿಸಲು:
    ಇದ್ದಿಲು – 2-3 ತುಂಡುಗಳು
    ತುಪ್ಪ – 1 ಟೀಸ್ಪೂನ್ ಇದನ್ನೂ ಓದಿ: ವೀಕೆಂಡ್‌ನಲ್ಲಿ ಮಾಡಿ ಕೊಲ್ಹಾಪುರಿ ಪಂದ್ರಾ ರಸ

    ಮಾಡುವ ವಿಧಾನ:
    * ಮೊದಲಿಗೆ ದಪ್ಪ ತಳದ ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಅದಕ್ಕೆ ಎಲ್ಲಾ ಮಸಾಲೆ ಪದಾರ್ಥಗಳನ್ನು ಸೇರಿಸಿ ಹುರಿಯಿರಿ.
    * ಸುವಾಸನೆ ಬರುತ್ತಿದ್ದಂತೆ ತೆಳ್ಳಗೆ ಹೆಚ್ಚಿದ ಈರುಳ್ಳಿ ಸೇರಿಸಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
    * ಈ ನಡುವೆ ಒಂದು ಬಟ್ಟಲಿನಲ್ಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಎಲ್ಲಾ ಪುಡಿ ಮಸಾಲೆಗಳನ್ನು ಸೇರಿಸಿ, ಮೊಸರನ್ನು ಹಾಕಿ ಬೀಟ್ ಮಾಡಿ.
    * ಈರುಳ್ಳಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿದ ಬಳಿಕ ಮೊಸರಿನ ಮಿಶ್ರಣವನ್ನು ಸೇರಿಸಿ. ಮಿಶ್ರಣದಿಂದ ಸ್ವಲ್ಪ ಎಣ್ಣೆ ಬಿಡುಗಡೆಯಾಗಲು ಪ್ರಾರಂಭಿಸುವುದನ್ನು ನೀವು ಗಮನಿಸುವವರೆಗೆ ಅದನ್ನು ಬೇಯಲು ಬಿಡಿ.
    * ಇದಕ್ಕೆ ಮಟನ್ ತುಂಡುಗಳನ್ನು ಸೇರಿಸಿ, ಅದನ್ನು ಸುಮಾರು 15-20 ನಿಮಿಷಗಳ ಕಾಲ ಬೇಯಿಸಿ.
    * ಹೆಚ್ಚಿದ ಟೊಮೆಟೋ ಹಾಗೂ ಹಸಿರು ಮೆಣಸಿನಕಾಯಿ ಸೇರಿಸಿ ಸುಮಾರು 20-25 ನಿಮಿಷಗಳ ಕಾಲ ಬೇಯಿಸಿ.
    * ತಳ ಹಿಡಿಯುವುದನ್ನು ತಡೆಯಲು ಆಗಾಗ ಬೆರೆಸುತ್ತಿರಿ.
    * ಒಂದು ಪೋರ್ಕ್ ಸಹಾಯದಿಂದ ಮಟನ್ ಚೆನ್ನಾಗಿ ಬೆಂದಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.
    * ಮಟನ್ ಬೆಂದಿದೆ ಎಂಬುದು ಖಚಿತವಾದ ಬಳಿಕ ಉರಿಯನ್ನು ಆಫ್ ಮಾಡಿ ನಿಂಬೆ ರಸವನ್ನು ಸೇರಿಸಿ, ಕೊತ್ತಂಬರಿ ಸೊಪ್ಪು ಹಾಗೂ ಪುದೀನದಿಂದ ಅಲಂಕರಿಸಿ.
    * ಈಗ ಒಂದು ಲೋಹದ ಬಟ್ಟಲಿನಲ್ಲಿ ಕಾದ ಇದ್ದಿಲನ್ನು ಇಟ್ಟು, ಅದಕ್ಕೆ ತುಪ್ಪ ಹಾಕಿ ಹೊಗೆ ಬರುವಂತೆ ಮಾಡಿ. ಅದು ಮುಳುಗದಂತೆ ಎಚ್ಚರಿಕೆಯಿಂದ ಮಟನ್ ಮಿಶ್ರಣದ ಮಧ್ಯದಲ್ಲಿ ಇಡಿ. ಬಳಿಕ ಕಡಾಯಿಯ ಮುಚ್ಚಳ ಮುಚ್ಚಿ 10 ನಿಮಿಷಗಳ ಕಾಲ ಬಿಡಿ.
    * ನಂತರ ಇದ್ದಿಲ ತಟ್ಟೆಯನ್ನು ತೆಗೆಯಿರಿ.
    * ಇದೀಗ ಜೋಧಪುರಿ ಧುವಾನ್ ಮಾಸ್ ರೆಸಿಪಿ ತಯಾರಾಗಿದ್ದು, ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ನೀವೂ ಮನೆಯಲ್ಲಿ ಮಾಡಿ ಹಾಂಗ್ ಕಾಂಗ್ ಫ್ರೈಡ್ ರೈಸ್

    
    
  • ಪ್ರಯಾಗ್‌ರಾಜ್‌ನ ಪ್ರಸಿದ್ಧ ಕಚೋರಿ ಸಬ್ಜಿ ಸವಿದಿದ್ದೀರಾ?

    ಪ್ರಯಾಗ್‌ರಾಜ್‌ನ ಪ್ರಸಿದ್ಧ ಕಚೋರಿ ಸಬ್ಜಿ ಸವಿದಿದ್ದೀರಾ?

    ಪ್ರಯಾಗ್‌ರಾಜ್‌ಗೆ ಭೇಟಿ ಕೊಟ್ಟಾಗ ಈ ರೆಸಿಪಿಯನ್ನೊಮ್ಮೆ ನೀವು ಸವಿಯಲೇಬೇಕು. ಅಲ್ಲಿನ ಈ ಪುರಾತನ ಖಾದ್ಯ ಮಸಾಲೆಯುಕ್ತ ಮತ್ತು ಕಟುವಾದ ರುಚಿಯನ್ನು ಹೊಂದಿರುವ ಕಚೋರಿಯನ್ನು ಉತ್ತರ ಭಾರತದಾದ್ಯಂತ ಪ್ರಸಿದ್ಧವಾಗಿರುವ ಆಲೂಗಡ್ಡೆಯ ಸಬ್ಜಿ ಜೊತೆ ಬಡಿಸಲಾಗುತ್ತದೆ. ಶುದ್ಧ ದೇಸೀ ತುಪ್ಪ ಬಳಸಿ ಕರಿಯುವ ಕಚೋರಿ ಅದ್ಭುತ ರುಚಿ ಹೊಂದಿರುತ್ತದೆ. ಕಚೋರಿ ಸಬ್ಜಿ ಸವಿಯಬೇಕೆಂದು ನಿಮಗೂ ಎನಿಸಿದರೆ ಪ್ರಯಾಗ್‌ರಾಜ್‌ಗೇ ಹೋಗಬೇಕೆಂದೇನಿಲ್ಲ. ನಾವಿಂದು ಈ ರುಚಿಕರ ರೆಸಿಪಿಯನ್ನು ನಿಮಗೂ ಹೇಳಿಕೊಡಲಿದ್ದೇವೆ.

    ಬೇಕಾಗುವ ಪದಾರ್ಥಗಳು:
    ಗೋಧಿ ಹಿಟ್ಟು – ಅರ್ಧ ಕೆಜಿ
    ಎಣ್ಣೆ – ಅರ್ಧ ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ಉದ್ದಿನ ಬೇಳೆ – 1 ಕಪ್
    ಸೋಂಫ್ ಪುಡಿ – 3 ಟೀಸ್ಪೂನ್
    ಕೊತ್ತಂಬರಿ ಪುಡಿ – 3 ಟೀಸ್ಪೂನ್
    ಹಿಂಗ್ – ಚಿಟಿಕೆ
    ಆಮ್ಚೂರ್ ಪುಡಿ – 1 ಟೀಸ್ಪೂನ್
    ಚಾಟ್ ಮಸಾಲಾ – 2 ಟೀಸ್ಪೂನ್
    ಗರಂ ಮಸಾಲಾ – 1 ಟೀಸ್ಪೂನ್
    ತುಪ್ಪ – ಹುರಿಯಲು ಬೇಕಾಗುವಷ್ಟು ಇದನ್ನೂ ಓದಿ: ಮಹಾರಾಷ್ಟ್ರ ಶೈಲಿಯ ಶೇಂಗಾ ಚಟ್ನಿ ಪುಡಿ ತಿಂದು ನೋಡಿ

    ಮಾಡುವ ವಿಧಾನ:
    * ಮೊದಲಿಗೆ ಉದ್ದಿನಬೇಳೆಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಸ್ಟ್ರೈನರ್‌ನಲ್ಲಿ ಹಾಕಿ ಬಸಿದುಕೊಳ್ಳಿ.
    * ಬಾಣಲೆಗೆ ಅದನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಬಳಿಕ ಮಿಕ್ಸರ್ ಜಾರ್‌ಗೆ ಹಾಕಿ ಒರಟಾಗಿ ರುಬ್ಬಿಕೊಳ್ಳಿ.
    * ಬಾಣಲೆಯಲ್ಲಿ 2 ಟೀಸ್ಪೂನ್ ಎಣ್ಣೆ ಹಾಕಿ, ಎಲ್ಲಾ ಒಣ ಮಸಾಲೆ ಮತ್ತು ಕಾಲು ಕಪ್ ನೀರು ಹಾಕಿ.
    * ಅದಕ್ಕೆ ರುಬ್ಬಿದ ಉದ್ದಿನಬೇಳೆ ಹಾಕಿ ಹುರಿಯಿರಿ. ನಂತರ ಉರಿಯನ್ನು ಆಫ್ ಮಾಡಿ ಪಕ್ಕಕ್ಕಿಡಿ.
    * ಈಗ ಗೋಧಿ ಹಿಟ್ಟಿಗೆ ಉಪ್ಪು, ಎಣ್ಣೆ ಮತ್ತು ಉಗುರು ಬೆಚ್ಚಗಿನ ನೀರು ಸೇರಿಸಿ, ದಪ್ಪನೆಯ ಹಿಟ್ಟನ್ನು ತಯಾರಿಸಿ.
    * ಅವುಗಳಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ಸ್ವಲ್ಪ ಚಪ್ಪಟೆ ಮಾಡಿಕೊಂಡು, ಅದರ ಮಧ್ಯೆ ಸ್ವಲ್ಪ ಉದ್ದಿನ ಬೇಳೆಯ ಮಿಶ್ರಣವನ್ನು ಹಾಕಿ, ಹಿಟ್ಟಿನ ಬದಿಗಳನ್ನು ಮಧ್ಯಕ್ಕೆ ತಂದು ಮತ್ತೆ ಉಂಡೆಯಂತೆ ಸುತ್ತಿಕೊಳ್ಳಿ.
    * ನಂತರ ಅನ್ನು ಕಚೋರಿಗಳಂತೆ ಕೈಯಿಂದ ಚಪ್ಪಟೆಗೊಳಿಸಿ.
    * ಈಗ ಕಾದ ತುಪ್ಪದಲ್ಲಿ ಕಚೋರಿಗಳನ್ನು ಬಿಟ್ಟು ಡೀಪ್ ಫ್ರೈ ಮಾಡಿಕೊಳ್ಳಿ.
    * ಕಚೋರಿ ಗೋಲ್ಡನ್ ಬ್ರೌನ್ ಬಂದ ಬಳಿಕ ತುಪ್ಪದಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
    * ಇದೀಗ ಗರಿಗರಿಯಾದ ಪ್ರಯಾಗ್‌ರಾಜ್ ಕಚೋರಿ ತಯಾರಾಗಿದ್ದು, ಇದನ್ನು ಆಲೂಗಡ್ಡೆಯ ಸಬ್ಜಿಯೊಂದಿಗೆ ಬಡಿಸಿ. ಆಲೂಗಡ್ಡೆ ಸಬ್ಜಿ ಇಲ್ಲದಿದ್ದರೆ ಚಟ್ನಿಯೊಂದಿಗೂ ಸವಿಯಬಹುದು. ಇದನ್ನೂ ಓದಿ: ಮಸಾಲೆಯುಕ್ತ ಬಾಂಬೆ ಆಲೂಗಡ್ಡೆ ರೆಸಿಪಿ ಒಮ್ಮೆ ಮಾಡಿ

  • ವಿಂಟರ್ ಸೀಸನ್‌ಗೆ ಟೇಸ್ಟಿ ಮೆಕ್ಸಿಕನ್ ಹಾಟ್ ಚಾಕ್ಲೇಟ್ ಮಾಡಿ

    ವಿಂಟರ್ ಸೀಸನ್‌ಗೆ ಟೇಸ್ಟಿ ಮೆಕ್ಸಿಕನ್ ಹಾಟ್ ಚಾಕ್ಲೇಟ್ ಮಾಡಿ

    ಸಾಂಪ್ರದಾಯಿಕ ಮೆಕ್ಸಿಕನ್ ಹಾಟ್ ಚಾಕ್ಲೇಟ್ ಹಾಲು ಮತ್ತು ಮೆಕ್ಸಿಕನ್ ಚಾಕ್ಲೇಟ್ ಬಳಸಿ ಮಾಡೋ ಬೆಚ್ಚಗಿನ ಪಾನೀಯ. ಆದರೆ ಇತ್ತೀಚಿನ ದಿನಗಳಲ್ಲಿ ಇದಕ್ಕೆ ಮಸಾಲೆ ಪದಾರ್ಥಗಳನ್ನು ಸೇರಿಸಿ ರುಚಿಗೆ ವಿಭಿನ್ನ ಟ್ವಿಸ್ಟ್ ನೀಡಲಾಗುತ್ತದೆ. ಈ ಚುಮುಚುಮು ಚಳಿಯ ಸೀಸನ್‌ನಲ್ಲಿ ಬೆಚ್ಚಗಿನ ಅನುಭವ ನೀಡುವ ಹಾಟ್ ಚಾಕ್ಲೇಟ್ ಅನ್ನು ನೀವೂ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಹಾಲು – 500 ಎಂಎಲ್
    ದಾಲ್ಚಿನ್ನಿ ಚಕ್ಕೆ – 2 ತುಂಡುಗಳು
    ಡಾರ್ಕ್ ಕೋಕೋ ಪೌಡರ್ – 2 ಟೀಸ್ಪೂನ್
    ವೆನಿಲ್ಲಾ ಸಾರ – ಅರ್ಧ ಟೀಸ್ಪೂನ್
    ಮೆಣಸಿನ ಪುಡಿ – ಕಾಲು ಟೀಸ್ಪೂನ್
    ಕಂದು ಸಕ್ಕರೆ – 2 ಟೀಸ್ಪೂನ್ ಇದನ್ನೂ ಓದಿ: ಇಮ್ಯೂನಿಟಿ ಬೂಸ್ಟಿಂಗ್ ಹೆಸರು ಬೇಳೆಯ ಸೂಪ್ ಮಾಡಿ ಸವಿಯಿರಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ಹಾಲನ್ನು ಬಿಸಿಗಿಟ್ಟು, ಅದಕ್ಕೆ ದಾಲ್ಚಿನ್ನಿ ಚಕ್ಕೆಯನ್ನು ಸೇರಿಸಿ.
    * ಆಗಾಗ ಕೈಯಾಡಿಸುತ್ತಾ ಸುಮಾರು 5 ನಿಮಿಷಗಳ ಕಾಲ ಬೇಯಿಸಿ.
    * ಬಳಿಕ ಹಾಲನ್ನು ಸೋಸಿ, ಅದಕ್ಕೆ ಸಕ್ಕರೆ, ಕೋಕೋ ಪೌಡರ್, ವೆನಿಲ್ಲಾ ಸಾರ, ಮೆಣಸಿನ ಪುಡಿಯನ್ನು ಸೇರಿಸಿ.
    * 2 ಮಗ್‌ಗಳನ್ನು ಬಳಸಿ ಹಾಲನ್ನು ನಯವಾದ ನೊರೆ ಬರುವಂತೆ ಒಂದು ಮಗ್ ನಿಂದ ಇನ್ನೊಂದು ಮಗ್‌ಗೆ 2-3 ಸುತ್ತು ಸುರಿದುಕೊಳ್ಳಿ.
    * ಇದೀಗ ಟೇಸ್ಟಿ ಮೆಕ್ಸಿಕನ್ ಹಾಟ್ ಚಾಕ್ಲೇಟ್ ತಯಾರಾಗಿದ್ದು, ಚಳಿಗಾಲದಲ್ಲಿ ಆನಂದಿಸಿ. ಇದನ್ನೂ ಓದಿ: ಮಾಡರ್ನ್ ಲೈಫ್‌ಸ್ಟೈಲ್‌ಗೆ ಪೌಷ್ಟಿಕಾಂಶ ಭರಿತ ಚನಾ ಚಾಟ್