Tag: recipe for chicken

  • ಮನೆಯಲ್ಲಿಯೇ ಮಾಡಿ ಬೊಂಬಾಟ್ ಲೆಮನ್ ಚಿಕನ್

    ಮನೆಯಲ್ಲಿಯೇ ಮಾಡಿ ಬೊಂಬಾಟ್ ಲೆಮನ್ ಚಿಕನ್

    ಬ್ಬಕ್ಕೆ ಸಿಹಿ ಅಡುಗೆಗಳನ್ನು ಮಾಡಿ ತಿಂದಿದ್ದಿರಾ. ಅದೇ ಹಬ್ಬ ಮಗಿದ ವಾರಾಂತ್ಯದಲ್ಲಿ ರುಚಿ ರುಚಿಯಾಗಿ ಮಾಂಸಹಾರದ ಅಡುಗೆ ತಿನ್ನಬೇಕು ಎಂದು ಬಯಸುವುದು ಸಹಜ. ಹೀಗಿರುವಾಗ ಮನೆಯಲ್ಲಿ ಸರಳವಾಗಿ ಮಾಡುವ ಬೊಂಬಾಟ್ ಆಗಿರವ ಲೆಮನ್ ಚಿಕನ್ ಮಾಡುವ ವಿಧಾನ ಇಲ್ಲಿದೆ.

     

    ಬೇಕಾಗುವ ಸಾಮಗ್ರಿಗಳು:

    * ಬೋನ್‍ಲೆಸ್ ಚಿಕನ್- ಅರ್ಧ ಕೆಜಿ
    * ಒಂದು ಮೊಟ್ಟೆ
    * ನಿಂಬೆಹಣ್ಣು – 2 ದೊಡ್ಡ ಗಾತ್ರದ್ದು
    * ಡಾರ್ಕ ಸೋಯಾ ಸಾಸ್ -2 ಟೇಬಲ್ ಸ್ಪೂನ್
    * ಗ್ರೀನ್ ಚಿಲ್ಲಿ ಸಾಸ್- 2 ಟೇಬಲ್ ಸ್ಪೂನ್
    * ಪೆಪ್ಪರ್ ಪೌಡರ್- 2 ಟೀ ಸ್ಪೂನ್
    * ಬಿಳಿಎಳ್ಳು- 2 ಟೀ ಸ್ಪೂನ್
    * ಹಸಿಮೆಣಸು- 4 ರಿಂದ 5
    * ಬಳ್ಳುಳ್ಳಿ ಒಂದು ದೊಡ್ಡ ಗಾತ್ರದ್ದು
    * ಶುಂಠಿ- ಅರ್ಧ ಇಂಚು
    * ಅರಿಶಿನ ಪುಡಿ- 2 ಟೀ ಸ್ಪೂನ್
    * ಮೈದಾಹಿಟ್ಟು- 2 ಟೀ ಸ್ಪೂನ್
    * ಕಾನ್ಪ್ಲೋರ್- 4 ಟೇಬಲ್ ಸ್ಪೂನ್
    * ಜೇನುತುಪ್ಪ- 1 ಟೇಬಲ್ ಸ್ಪೂನ್
    * ಶುಂಟಿ ಮತ್ತು ಬೆಳುಳ್ಳಿ ಪೆಸ್ಟ್- 2 ಟೇಬಲ್ ಸ್ಪೂನ್
    * ಕೊತ್ತಂಬರಿ- ಸ್ವಲ್ಪ
    * ಅಡುಗೆ ಎಣ್ಣೆ 1 ಕಫ್
    * ರುಚುಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಚೆನ್ನಾಗಿ ತೊಳೆದಿರುವ ಬೋನ್ ಲೆಸ್ ಚಿಕನ್ ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಬೇಕು.
    * ಒಂದು ಮೊಟ್ಟೆಯನ್ನು ಈ ಬೋನ್ ಲೆಸ್ ಚಿಕನ್ ಇರುವ ಪಾತ್ರೆಗೆ ಹಾಕಿ ಚಿಕನ್‍ನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಬೇಕು.
    * ಈ ಮಿಶ್ರಣಕ್ಕೆ ಪೆಪ್ಪರ್ ಪೌಡರ್, ಡಾರ್ಕ ಸೋಯಾ ಸಾಸ್ ಹಾಗೂ ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಚಿಕನ್‍ನೊಂದಿಗೆ ಮಸಾಲೆ ಹೊಂದಿಕೊಳ್ಳುವಂತೆ ಮಿಶ್ರಣ ಮಾಡುತ್ತಿರಬೇಕು.

     

    * ಇದೇ ಪಾತ್ರೆಗೆ ಕಾನ್ಪ್ಲೋರ್, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಮೈದಾ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡುತ್ತಿರಬೇಕು.
    * ಈ ಮಿಶ್ರಣ ಚೆನ್ನಾಗಿ ಮಸಾಲೆಗೆ ಹೊಂದಿಕೊಳ್ಳುವವರೆಗೆ ಅರ್ಧಗಂಟೆಗಳ ಕಾಲ ಒಂದುಕಡೆ ಇಟ್ಟಿರಬೇಕು.

    * ಒಂದು ಪಾತ್ರೆಯಲ್ಲಿ ಎಣ್ಣೆಹಾಕಿ ಎಣ್ಣೆ ಬಿಸಿಯಾದ ನಂತರ ಮಸಾಲೆಯೊಂದಿಗೆ ಮಿಶ್ರಣವಾಗಿರುವ ಚಿಕನ್ ಸಣ್ಣ ಉರಿ ಬೆಂಕಿಯಲ್ಲಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಬೇಕು.
    * ಒಂದು ಕಪ್‍ಗೆ ಕಾನ್ಪ್ಲೋರ್, ಲಿಂಬ ರಸ ಹಾಗೂ ಜೇನು ತುಪ್ಪವನ್ನು ಒಂದೊಂದು ಟೀ ಸ್ಪೂನ್ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣಕ್ಕೆ ಒಂದು ಗ್ಲಾಸ್ ನೀರು ಹಾಕಿ ಸಾಸ್ ತಯಾರಿಸಿ ಒಂದು ಕಡೆ ತೆಗೆದಿಟ್ಟುಕೊಳ್ಳಬೇಕು.

    * ಮತ್ತೊಂದು ಬಾಣಲೆಯಲ್ಲಿ ಎಣ್ಣೆಹಾಕಿ ಬಿಸಿಯಾದ ಮೇಲೆ ಮೆಣಸು, ಶುಂಠಿ, ಬಳ್ಳುಳ್ಳಿ, ಅರಿಶಿಣ ಹಾಗೂ ಈ ಮೊದಲು ತಯಾರಿಸಿದ ಸಾಸ್ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.
    * ನಂತರ ಈ ಮಿಶ್ರಣಕ್ಕೆ ಫ್ರೈ ಮಾಡಿ ತೆಗೆದಿಟ್ಟಿರುವ ಚಿಕನ್ ಹಾಕಿ ಫ್ರೈ ಮಾಡಬೇಕು.
    * ಕೊತ್ತಂಬರಿ, ಬಿಳಿಎಳ್ಳು, ಹಸಿಮೆಣಸು ಹಾಕಿ ಚೆನ್ನಾಗಿ 5 ನಿಮಿಷಗಳಕಾಲ ಫ್ರೈ ಮಾಡಿದರೆ ಲೆಮನ್ ಚಿಕನ್ ಸವಿಯಲು ಸಿದ್ಧವಾಗುತ್ತದೆ.