Tag: Recession

  • ಜರ್ಮನಿಯಲ್ಲಿ ಆರ್ಥಿಕ ಹಿಂಜರಿತ

    ಜರ್ಮನಿಯಲ್ಲಿ ಆರ್ಥಿಕ ಹಿಂಜರಿತ

    ಬರ್ಲಿನ್: ಜರ್ಮನಿಯಲ್ಲಿ (Germany) ಕುಟುಂಬಗಳು ಖರ್ಚು ವಚ್ಚಗಳನ್ನು ಬಿಗಿಗೊಳಿಸಿರುವ ಹಿನ್ನೆಲೆ ಈ ವರ್ಷದ ತ್ರೈಮಾಸಿಕದಲ್ಲಿ ಆರ್ಥಿಕತೆಯಲ್ಲಿ ಹಿಂಜರಿತ (Recession) ಕಂಡಿದೆ.

    ಗುರುವಾರ ಜರ್ಮನಿಯ ಅಂಕಿಅಂಶಗಳ ಕಚೇರಿ ವರ್ಷದ ಮೊದಲ ತ್ರೈಮಾಸಿಕ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ವರದಿಯನ್ನು ಬಿಡುಗಡೆಗೊಳಿಸಿದೆ. ಜಿಡಿಪಿ (GDP) ಬೆಳವಣಿಗೆ ದರ 0.3%ಕ್ಕೆ ಇಳಿದಿದ್ದು, ಇದೀಗ ಜರ್ಮನಿ ಆರ್ಥಿಕ ಹಿಂಜರಿತದ ಹಾದಿಯಲ್ಲಿದೆ.

     

    2022ರ ಕೊನೆಯ ತ್ರೈಮಾಸಿಕ ವರದಿಯಲ್ಲಿ ಜರ್ಮನಿಯ ಜಿಡಿಪಿ 0.5% ರಷ್ಟು ಇಳಿಕೆಯಾಗಿತ್ತು. ಇದಾದ ಬಳಿಕ ಗುರುವಾರ ಬಿಡುಗಡೆಯಾಗಿರುವ ಜಿಡಿಪಿಯಲ್ಲಿಯೂ ಕುಸಿತ ಕಂಡಿದೆ. ಸತತ ಎರಡು ತ್ರೈಮಾಸಿಕಗಳ ಜಿಡಿಪಿ ಕುಸಿತವಾದರೆ ಅದನ್ನು ತಾಂತ್ರಿಕ ಹಿಂಜರಿತ ಎಂದು ಕರೆಯಲಾಗುತ್ತದೆ.

    ಉಕ್ರೇನ್‌ನ ಮೇಲೆ ರಷ್ಯಾ ಆಕ್ರಮಣ ಮಾಡಿದ ಬಳಿಕ ಮಾಸ್ಕೋದೊಂದಿಗೆ ಸಂಬಂಧಗಳನ್ನು ಕಡಿತಗಿಳಿಸುವ ನಾಯಕರ ನಿರ್ಧಾರದಿಂದ ಯುರೋಪ್‌ನ ಅತಿ ದೊಡ್ಡ ಆರ್ಥಿಕತೆ ಇದೀಗ ಒತ್ತಡದಲ್ಲಿದೆ. ಕೆಲ ಅಂಕಿ ಅಂಶಗಳ ಪ್ರಕಾರ ಮೊದಲ ತ್ರೈಮಾಸಿಕದಲ್ಲಿ ಜರ್ಮನ್‌ನಲ್ಲಿ ನಾಗರಿಕರು ತಮ್ಮ ಗೃಹಬಳಕೆಯ ಖರ್ಚನ್ನು ತೀವ್ರವಾಗಿ ಕಡಿಮೆ ಮಾಡಿದ್ದಾರೆ. ಗ್ರಾಹಕರು ತಮ್ಮ ಹಣವನ್ನು ಬಟ್ಟೆ, ಪೀಠೋಪಕರಣ, ವಾಹನ ಸೇರಿದಂತೆ ದುಬಾರಿ ವಸ್ತುಗಳಿಗಾಗಿ ವ್ಯಯಿಸಲು ಇಷ್ಟಪಡುತ್ತಿಲ್ಲ. ಈ ಹಿನ್ನೆಲೆ ಅಂತಿಮ ಬಳಕೆಯ ವೆಚ್ಚ 1.2% ರಷ್ಟು ಕುಸಿದಿದೆ. ಇದನ್ನೂ ಓದಿ: ಸಂಸತ್‌ ಕಟ್ಟಡವನ್ನು ರಾಷ್ಟ್ರಪತಿ ಉದ್ಘಾಟಿಸಲಿ: ಸುಪ್ರೀಂನಲ್ಲಿ ಪಿಐಎಲ್‌ ಸಲ್ಲಿಕೆ

    ಕಳೆದ ವರ್ಷದ ಕೊನೆಯಲ್ಲಿ ಜರ್ಮನಿ ಆರ್ಥಿಕ ಹಿಂಜರಿತಕ್ಕೆ ಸಿಲುಕಿಕೊಂಡಿತು. ಇದಕ್ಕೆ ಮುಖ್ಯ ಕಾರಣ ಇಂಧನ ಬೆಲೆಯಲ್ಲಿನ ಏರಿಕೆ. ಈ ಹಿನ್ನೆಲೆ ಗ್ರಾಹಕರು ತಮ್ಮ ಖರ್ಚು ವೆಚ್ಚಗಳನ್ನು ಮಿತವಾಗಿ ಬಳಸುತ್ತಿದ್ದಾರೆ ಎಂದು ಪ್ಯಾಂಥಿಯಾನ್ ಮ್ಯಾಕ್ರೋ ಎಕನಾಮಿಕ್ಸ್‌ನ ಮುಖ್ಯ ಯೂರೋ ವಲಯದ ಅರ್ಥಶಾಸ್ತ್ರಜ್ಞ ಕ್ಲಾಸ್ ವಿಸ್ಟೆಸೆನ್ ತಿಳಿಸಿದ್ದಾರೆ. ಇದನ್ನೂ ಓದಿ: IPL 2023: ಧೋನಿಯಿಂದ ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ- ಲಾಸ್ಟ್ 5 ಓವರ್‌ಗೂ ಮುನ್ನ ನಡೆದಿದ್ದೇನು?

  • ಗೂಗಲ್‌ನ 10 ಸಾವಿರ ಉದ್ಯೋಗಿಗಳು ಮನೆಗೆ

    ಗೂಗಲ್‌ನ 10 ಸಾವಿರ ಉದ್ಯೋಗಿಗಳು ಮನೆಗೆ

    ವಾಷಿಂಗ್ಟನ್‌: ಟ್ವಿಟ್ಟರ್‌, ಅಮೆಜಾನ್‌, ಮೆಟಾ ಬಳಿಕ ಗೂಗಲ್‌(Google) ಮಾತೃಸಂಸ್ಥೆ ಅಲ್ಫಾಬೆಟ್‌(Alphabet) ತನ್ನ 10 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗಿದೆ.

    ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ ಆವರಿಸುತ್ತಿದ್ದಂತೆ ಟೆಕ್‌ ಕಂಪನಿಗಳು ಉದ್ಯೋಗಿಗಳನ್ನು ಖರ್ಚು ಕಡಿಮೆ ಮಾಡಲು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ. ಈಗ ಕಳಪೆ ಕಾರ್ಯಕ್ಷಮತೆ ಆಧಾರದ ಮೇಲೆ ಸುಮಾರು 10 ಸಾವಿರ ಉದ್ಯೋಗಿಗಳನ್ನು ಅಥವಾ ಅದರ ಶೇ. 6ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ ಎಂದು ವರದಿಯಾಗಿದೆ.

    ಕಳಪೆ ಕಾರ್ಯಕ್ಷಮತೆ ಗುರುತಿಸಲು ಗೂಗಲ್ ಶ್ರೇಯಾಂಕ ಪದ್ಧತಿ ಅನುಸರಿಸಲಿದೆ. ಯಾರಿಗೆ ಕಡಿಮೆ ರೇಟಿಂಗ್‌ ಸಿಗುತ್ತದೋ ಅವರನ್ನು ಕೆಲಸದಿಂದ ತೆಗೆದು ಹಾಕಲು ಕಂಪನಿ ಪ್ಲ್ಯಾನ್‌ ಮಾಡಿದೆ. ಇದನ್ನೂ ಓದಿ: ಶಾರೀಕ್‌ ಬಳಿಯಿದ್ದ ಕುಕ್ಕರ್‌ ಬಾಂಬ್‌ಗೆ ಬಸ್ಸನ್ನೇ ಸ್ಫೋಟಿಸುವ ಸಾಮರ್ಥ್ಯ ಇತ್ತು

    ಅಲ್ಫಾಬೆಟ್‌ ಕಂಪನಿಯಲ್ಲಿ 1.87 ಲಕ್ಷ ಉದ್ಯೋಗಿಗಳಿದ್ದಾರೆ. ಮೂರನೇ ತ್ರೈಮಾಸಿಕದಲ್ಲಿ ಅಲ್ಫಾಬೆಟ್‌ 13.9 ಶತಕೋಟಿ ಡಾಲರ್‌ ನಿವ್ವಳ ಲಾಭಗಳಿಸಿದೆ. ಆದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.27ರಷ್ಟು ಕುಸಿತವಾಗಿದೆ.

    ಹೊಸ ಉದ್ಯೋಗ ನೇಮಕಾತಿಯನ್ನು ತಡೆಹಿಡಿಯಲಾಗಿದ್ದು ಉದ್ಯೋಗಿಗಳಿಗೆ ಕಂಪನಿಯಲ್ಲೇ ಬೇರೆ ಕೆಲಸವನ್ನು 60 ದಿನಗಳ ಒಳಗಡೆ ಆಯ್ಕೆ ಮಾಡುವಂತೆ ಗೂಗಲ್‌ ಈ ಹಿಂದೆ ಸೂಚಿಸಿತ್ತು ಎಂದು ವರದಿಯಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಇಂಗ್ಲೆಂಡ್‌ನಲ್ಲಿ ಆರ್ಥಿಕ ಬಿಕ್ಕಟ್ಟು – ತೆರಿಗೆ ಹೆಚ್ಚಿಸಿ ವೆಚ್ಚ ಕಡಿತಕ್ಕೆ ಮುಂದಾದ ಸರ್ಕಾರ

    ಇಂಗ್ಲೆಂಡ್‌ನಲ್ಲಿ ಆರ್ಥಿಕ ಬಿಕ್ಕಟ್ಟು – ತೆರಿಗೆ ಹೆಚ್ಚಿಸಿ ವೆಚ್ಚ ಕಡಿತಕ್ಕೆ ಮುಂದಾದ ಸರ್ಕಾರ

    ಲಂಡನ್‌: ಬ್ರಿಟನ್(UK) ಇಂದು ಭಾರೀ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಬ್ರಿಟನ್ ದೇಶ ಆರ್ಥಿಕ ಆರ್ಥಿಕ ಹಿಂಜರಿತಕ್ಕೆ(Recession) ಸಿಲುಕಿದೆ ಎಂದು ಆ ದೇಶದ ವಿತ್ತ ಸಚಿವ ಜೆರೆಮಿ ಹಂಟ್ ಘೋಷಿಸಿದ್ದಾರೆ.

    ಇದೀಗ ದೇಶವನ್ನು ಆರ್ಥಿಕ ಹಿಂಜರಿತದಿಂದ ಮೇಲೆತ್ತಲು ತೆರಿಗೆ ಹೆಚ್ಚಳ ಮತ್ತು ವೆಚ್ಚ ಕಡಿತದ ನಿರ್ಧಾರವನ್ನು ರಿಷಿ ಸುನಾಕ್(Rishi Sunak) ಸರ್ಕಾರ ಪ್ರಕಟಿಸಿದೆ. ಹದಗೆಟ್ಟಿರುವ ಸಾರ್ವಜನಿಕ ಹಣಕಾಸು ವ್ಯವಸ್ಥೆಗೆ ಪುನಶ್ಚೇತನ ನೀಡಲು 66 ಶತಕೋಟಿ ಡಾಲರ್‌  ಮೊತ್ತದ ವಿತ್ತೀಯ ಯೋಜನೆಯನ್ನು ಘೋಷಿಸಿದೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ಹಿಂದೂ-ಮುಸ್ಲಿಂ ಉದ್ವಿಗ್ನತೆಗೆ ಭಾರತದ 500 ಟ್ವಿಟ್ಟರ್‌ ಖಾತೆಗಳು ಕಾರಣ!

    ಸಾರ್ವಜನಿಕ ವೆಚ್ಚ ನಿಯಂತ್ರಣ ಮತ್ತು ತೆರಿಗೆ ಏರಿಕೆಯನ್ನು ಇದು ಒಳಗೊಂಡಿದೆ. ಈ ಯೋಜನೆಯ ಭಾಗವಾಗಿ ಸಿರಿವಂತರಿಗೆ ಮತ್ತು ಇಂಧನ ಕಂಪನಿಗಳಿಗೆ ತೆರಿಗೆ ಹೆಚ್ಚಳ ಮಾಡಿದೆ. ಮತ್ತೊಂದು ಕಡೆ ಅಲ್ಲಿನ ಜನ ವೆಚ್ಚ ನಿಯಂತ್ರಣದ ಮೊರೆ ಹೋಗಿದ್ದಾರೆ.

    ಬ್ರಿಟನ್‍ನಲ್ಲಿ ಕಳೆದ ತಿಂಗಳು ಹಣದುಬ್ಬರ(Inflation) ಪ್ರಮಾಣ ಶೇ.11.1ರಷ್ಟಿತ್ತು. ಇದು ಕಳೆದ 41 ವರ್ಷಗಳಲ್ಲಿಯೇ ಗರಿಷ್ಠ. ಈ ವರ್ಷ ಶೇ. 9.1ರಷ್ಟು, 2023ರಲ್ಲಿ 7.4ರಷ್ಟು ಹಣದುಬ್ಬರ ನಿರೀಕ್ಷಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಏಷ್ಯಾದಲ್ಲಿ ಭಾರತ ಹೊರತುಪಡಿಸಿ 13 ದೇಶಗಳಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ

    ಏಷ್ಯಾದಲ್ಲಿ ಭಾರತ ಹೊರತುಪಡಿಸಿ 13 ದೇಶಗಳಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ

    ನವದೆಹಲಿ: ಏಷ್ಯಾದಲ್ಲಿ ಭಾರತ ಹೊರತುಪಡಿಸಿ 13 ರಾಷ್ಟ್ರಗಳು ಆರ್ಥಿಕ ಹಿಂಜರಿತ ಎದುರಿಸುವ ಸಾಧ್ಯತೆಯಿದೆ ಎಂದು ಬ್ಲೂಮ್‌ಬರ್ಗ್‌ ಅರ್ಥಶಾಸ್ತ್ರಜ್ಞರ ಸಮೀಕ್ಷೆ ತಿಳಿಸಿದೆ.

    ಭಾರತದಲ್ಲಿ ಆರ್ಥಿಕ ಹಿಂಜರಿತ ಎದುರಿಸುವ ಪರಿಸ್ಥಿತಿ ಶೂನ್ಯ ಎಂದು ಹೇಳಿದೆ. ಈಗಾಗಲೇ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಆರ್ಥಿಕ ಹಿಂಜರಿತವಾಗುವ ಸಾಧ್ಯತೆ ಶೇ.85ರಷ್ಟಿದೆ ಎಂದು ಅಂದಾಜಿಸಿದೆ.

    ಯಾವ ದೇಶದಲ್ಲಿ ಎಷ್ಟು ಸಾಧ್ಯತೆ?
    ಶ್ರೀಲಂಕಾ ಶೇ.85, ನ್ಯೂಜಿಲೆಂಡ್‌ ಶೇ.33, ದಕ್ಷಿಣ ಕೊರಿಯಾ ಶೇ.25, ಜಪಾನ್‌ ಶೇ.25, ಚೀನಾ ಶೇ.20, ಹಾಂಕಾಂಗ್‌ ಶೇ.20, ಆಸ್ಟ್ರೇಲಿಯಾ ಶೇ.20, ತೈವಾನ್‌ ಶೇ.20, ಪಾಕಿಸ್ತಾನ ಶೇ.20, ಮಲೇಷ್ಯಾ ಶೇ.20, ವಿಯೆಟ್ನಾಂ ಶೇ.10, ಥೈಲ್ಯಾಂಡ್‌ ಶೇ.10, ಫಿಲಿಪೈನ್ಸ್ ಶೇ.8, ಇಂಡೋನೇಷ್ಯಾ ಶೇ.3 ಎಂದಿದೆ.

    ಆರ್ಥಿಕವಾಗಿ ಮುಂದುವರಿದ ದೇಶಗಳ ಪೈಕಿ ಇಟಲಿ ಶೇ.65, ಫ್ರಾನ್ಸ್‌ ಶೇ.50, ಜರ್ಮನಿ ಶೇ.45, ಇಂಗ್ಲೆಂಡ್‌ ಶೇ.45, ಅಮೆರಿಕ ಶೇ.40, ಜಪಾನ್‌ ಶೇ.25, ಚೀನಾದಲ್ಲಿ ಶೇ. ಆರ್ಥಿಕ ಹಿಂಜರಿತವಾಗುವ ಸಾಧ್ಯತೆ  ಶೇ.20 ರಷ್ಟಿದೆ.

    ಯುರೋಪ್‌ ಮತ್ತು ಅಮೆರಿಕ ಖಂಡದ ದೇಶಗಳಿಗೆ ಹೋಲಿಸಿದರೆ ಏಷ್ಯಾ ಖಂಡದಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ ಕಡಿಮೆ ಎಂದು ವರದಿ ತಿಳಿಸಿದೆ.

    ವಿಶ್ವಕ್ಕೆ ಹೋಲಿಸಿದರೆ ಭಾರತದಲ್ಲಿ ಆರ್ಥಿಕ ಹಿಂಜರಿತವಾಗುವ ಸಾಧ್ಯತೆ ಕಡಿಮೆ. ಒಂದು ವೇಳೆ ಹಿಂಜರಿತವಾದರೂ ಕಡಿಮೆ ಸಮಯದವರೆಗೆ ಇರಲಿದೆ. ಆರ್ಥಿಕ ಹಿಂಜರಿತದಿಂದಾಗಿ ಜಾಗತಿಕವಾಗಿ ಏರಿಕೆಯಾಗಿರುವ ವಸ್ತುಗಳ ಬೆಲೆಗಳು ಕಡಿಮೆಯಾಗಲಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

    ಬೆಲೆ ಏರಿಕೆ ಮತ್ತು ಹಣದುಬ್ಬರ ನಿಯಂತ್ರಿಸಲು ಅಮೆರಿಕದ ಕೇಂದ್ರ ಬ್ಯಾಂಕ್‌ ಫೆಡರಲ್‌ ರಿಸರ್ವ್‌ ಬಡ್ಡಿದರ ಏರಿಸಿದೆ. ಬಡ್ಡಿ ದರ ಏರಿಸಿದ ಪರಿಣಾಮ ವಿಶ್ವಾದ್ಯಂತ ಕರೆನ್ಸಿಗಳ ಮುಂದೆ ಡಾಲರ್‌ ಮೌಲ್ಯ ಏರಿಕೆಯಾಗುತ್ತಿದೆ. ಹೀಗಿದ್ದರೂ ಮುಂದಿನ ವರ್ಷ ಅಮೆರಿಕ ಆರ್ಥಿಕ ಹಿಂಜರಿತಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಆರ್ಥಿಕ ಹಿಂಜರಿತ? – ಉತ್ತರ ಕೊಟ್ಟ ಬೈಡನ್

    ಸಾಮಾಜಿಕ ಜಾಲತಾಣದಲ್ಲಿ ಈಗ ಆರ್ಥಿಕ ಹಿಂಜರಿತ( Recession) ಟ್ರೆಂಡಿಂಗ್‌ ಟಾಪಿಕ್‌ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಆರ್ಥಿಕ ಹಿಂಜರಿತ ದೇಶದಲ್ಲಿ ಅಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲೂ ಇದೆ: ಶೆಟ್ಟರ್

    ಆರ್ಥಿಕ ಹಿಂಜರಿತ ದೇಶದಲ್ಲಿ ಅಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲೂ ಇದೆ: ಶೆಟ್ಟರ್

    – ಕೇಂದ್ರದಿಂದ ಇವತ್ತಲ್ಲ ನಾಳೆ ಪರಿಹಾರ ಬರುತ್ತೆ

    ಬಾಗಲಕೋಟೆ: ಆರ್ಥಿಕ ಹಿಂಜರಿತ ಕೇವಲ ರಾಜ್ಯ ಮತ್ತು ದೇಶದಲ್ಲಿ ಅಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲೂ ಇದೆ. ಇದು ತಾತ್ಕಾಲಿಕ ಕೇಂದ್ರ ಸರ್ಕಾರ ಅನೇಕ ಪ್ಯಾಕೇಜ್ ಘೋಷಣೆ ಮಾಡಿದೆ. ಸ್ವಲ್ಪ ದಿನಗಳಲ್ಲಿ ಎಲ್ಲಾ ಸರಿಯಾಗುತ್ತದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಯಿಂದ ಸಾಕಷ್ಟು ಹಾನಿಯಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‍ಡಿಆರ್‍ಎಫ್) ನಿಯಮದ ಅನುದಾನದ ಜೊತೆಗೆ ರಾಜ್ಯ ಸರ್ಕಾರ 6,200 ರೂ. ಸೇರಿಸಿ ತಾತ್ಕಾಲಿಕ ಹತ್ತು ಸಾವಿರ ಪರಿಹಾರ ಕೊಟ್ಟಿದ್ದೇವೆ ಎಂದು ತಿಳಿಸಿದರು.

    ಪೂರ್ಣ ಮನೆ ಬಿದ್ದವರಿಗೆ 5 ಲಕ್ಷ ರೂ. ಕೊಡುತ್ತಿದ್ದೇವೆ. ಸರ್ಕಾರ ತಕ್ಷಣಕ್ಕೆ ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ. ಬೆಳೆಹಾನಿಗೂ ಸಹ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಾಗುತ್ತದೆ. ಕೇಂದ್ರದಿಂದ ಇವತ್ತಲ್ಲ ನಾಳೆ ಪರಿಹಾರ ಬರುತ್ತದೆ. ಒಕ್ಕೂಟದ ವ್ಯವಸ್ಥೆ ಅನುದಾನದ ನಿರೀಕ್ಷೆಯಿಂದಲೇ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ಹೇಳಿದರು.

    ಇದೇ ವೇಳೆ 18 ತಿಂಗಳ ನಂತರ ಮತ ಭಿಕ್ಷೆ ಕೇಳಬೇಕಾಗುತ್ತದೆ ಎಂಬ ಕೋಡಿಹಳ್ಳಿ ಮಠದ ಶ್ರೀಗಳ ಭವಿಷ್ಯದ ವಿಚಾರವಾಗಿ ಮಾತನಾಡಿದ ಶೆಟ್ಟರ್, ಭವಿಷ್ಯದ ಮೇಲೆ ಸರ್ಕಾರ ನಡೆಯಲ್ಲ. ಕೆಲವರು ಮೂರು ತಿಂಗಳು ಅಂದರೆ ಮತ್ತೆ ಕೆಲವರು ಐದು ವರ್ಷ ಅಂತಾರೆ ಅದಕ್ಕೇನು ಹೇಳುತ್ತೀರಾ ಎಂದು ಪ್ರಶ್ನೆ ಮಾಡಿದರು.