ಶುಕ್ರವಾರ ಅದ್ದೂರಿಯಾಗಿ ಆರತಕ್ಷತೆ ಸಮಾರಂಭ ನಡೆಯಿತು. ರಿಸೆಪ್ಷನ್‌ಗೆ ಗಾಯಕ ವಿಜಯ್ ಪ್ರಕಾಶ್, ನಿರೂಪಕಿ ಅನುಶ್ರೀ, ಬಿಗ್ ಬಾಸ್ ಖ್ಯಾತಿ ಮೋಕ್ಷಿತಾ ಪೈ, ಬಿಗ್‌ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಲಮಾಣಿ, ಪ್ರಥಮ್, ಸಿಂಗರ್ ಸುನೀಲ್ ಹಾಗೂ ಸರಿಗಮಪ ಸ್ಪರ್ಧಿಗಳು ಕೂಡ ಆಗಮಿಸಿದ್ದರು.
ಪೋಷಕರ ವಿರೋಧದ ನಡುವೆಯೂ ಪೃಥ್ವಿ ಭಟ್ ಅವರು ಮಾ.27 ರಂದು ದೇವಾಲಯವೊಂದರಲ್ಲಿ ಅಭಿಷೇಕ್ ಎಂಬ ಹುಡುಗನ ಜೊತೆ ವಿವಾಹವಾದರು. ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಅವರನ್ನು ಪ್ರೀತಿಸಿ ಗಾಯಕಿ ಮದುವೆಯಾಗಿದ್ದರು.
ಪುತ್ರಿ ಪೃಥ್ವಿ ಮದುವೆಗೆ ತಂದೆ ಶಿವಪ್ರಸಾದ್ ವಿರೋಧ ವ್ಯಕ್ತಪಡಿಸಿದ್ದರು. ಈ ಸುದ್ದಿ ಭಾರಿ ವೈರಲ್ ಆಗಿತ್ತು. ಇದೀಗ ಗಾಯಕಿ ಅದ್ದೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದಾರೆ.
ಕ್ರೇಜಿ ಕ್ವೀನ್ ರಕ್ಷಿತಾ (Rakshitha Prem) ಸಹೋದರ ರಾಣಾ (Raana) ಮದುವೆ ಆರತಕ್ಷತೆ ಫೆ.8ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಜರುಗಿದೆ. ಈ ಸಂಭ್ರಮದಲ್ಲಿ ಮೋಹಕತಾರೆ ರಮ್ಯಾ (Ramya) ಸ್ಟೈಲೀಶ್ ಆಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಇದನ್ನೂ ಓದಿ:ಜಯಮಾಲಾ ಪುತ್ರಿಯ ಅದ್ಧೂರಿ ಆರತಕ್ಷತೆ: ಸಿನಿ ತಾರೆಯರ ದಂಡು
ರಾಣಾ ಹಾಗೂ ಫ್ಯಾಷನ್ ಡಿಸೈನರ್ ರಕ್ಷಿತಾಗೆ ಶುಭ ಕೋರಲು ರಮ್ಯಾ ಕೂಡ ಆರತಕ್ಷತೆಗೆ ಆಗಮಿಸಿದ್ದರು. ಒಂದು ಕ್ಷಣ ಮೋಹಕತಾರೆ ರಮ್ಯಾ ಎಂಟ್ರಿ ನೋಡಿ ಅನೇಕರು ದಂಗಾದರು.
ರಕ್ಷಿತಾ ಸಹೋದರನ ಆರತಕ್ಷತೆಯಲ್ಲಿ ಸ್ಲೀವ್‌ಲೆಸ್ ಬ್ಲೌಸ್‌ಗೆ ಕಪ್ಪು ಬಣ್ಣದ ಸೀರೆಯುಟ್ಟು ರಮ್ಯಾ ಮಿರ ಮಿರ ಅಂತ ಮಿಂಚಿದ್ದಾರೆ. ವಯಸ್ಸು 42 ವರ್ಷವಾಗಿದ್ರೂ ಬಳುಕುವ ಬಳ್ಳಿಯಂತೆ ರಮ್ಯಾ ಕಂಗೊಳಿಸಿದ್ದಾರೆ. ಅವರ ಫಿಟ್‌ನೆಸ್‌ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರರಂಗಕ್ಕೆ ಬಂದು ಹಲವು ವರ್ಷಗಳು ಕಳೆದಿದ್ರೂ ಕೂಡ ಇಂದಿಗೂ ರಕ್ಷಿತಾ ಹಾಗೂ ರಮ್ಯಾ ನಡುವಿನ ಅದೆಷ್ಟು ಚೆನ್ನಾಗಿದೇ ಎಂಬುದಕ್ಕೆ ರಾಣಾ ಆರತಕ್ಷತೆಯಲ್ಲಿ ಇಬ್ಬರೂ ಇದ್ದ ರೀತಿಯೇ ಸಾಕ್ಷಿಯಾಗಿದೆ. ರಕ್ಷಿತಾರನ್ನು ನೋಡ್ತಿದ್ದಂತೆ ರಮ್ಯಾ ತಬ್ಬಿಕೊಂಡಿದ್ದಾರೆ.
2002ರಲ್ಲಿ ‘ಅಪ್ಪು’ ಸಿನಿಮಾದಲ್ಲಿ ರಕ್ಷಿತಾ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 2003ರಲ್ಲಿ ‘ಅಭಿ’ ಸಿನಿಮಾದ ಮೂಲಕ ರಮ್ಯಾ ಅವರು ಮೊದಲ ಬಾರಿಗೆ ಬಣ್ಣದ ಹಚ್ಚಿದ್ದರು. ಪುನೀತ್‌ಗೆ ನಾಯಕಿಯಾಗಿ ಸೈ ಎನಿಸಿಕೊಂಡರು.
ರಮ್ಯಾ ಹಾಗೂ ರಕ್ಷಿತಾ ಇಬ್ಬರ ನಡುವೆಯೂ ಒಂದೊಳ್ಳೆಯ ಪೈಪೋಟಿ ಇತ್ತು. ಇನ್ನೂ 2006ರಲ್ಲಿ ‘ತನನಂ ತನನಂ’ ಸಿನಿಮಾದಲ್ಲಿ ಶ್ಯಾಮ್‌ಗೆ ನಾಯಕಿಯರಾಗಿ ರಮ್ಯಾ ಹಾಗೂ ರಕ್ಷಿತಾ ನಟಿಸಿದ್ದರು. ಕವಿತಾ ಲಂಕೇಶ್ ಅವರು ನಿರ್ದೇಶನ ಮಾಡಿದ್ದರು.
ಇನ್ನೂ ರಕ್ಷಿತಾ 2007ರಲ್ಲಿ ಡೈರೆಕ್ಟರ್ ಪ್ರೇಮ್ ಜೊತೆ ಮದುವೆಯಾದರು. ರಮ್ಯಾ ಸಿನಿಮಾ ಬಳಿಕ ಪಾಲಿಟಿಕ್ಸ್ ಎಂಟ್ರಿ ಕೊಟ್ಟಿದ್ದರು. ಪ್ರಸ್ತುತ ರಮ್ಯಾ ಅವರು ಸಿನಿಮಾ, ರಾಜಕೀಯ ಎರಡರಿಂದಲೂ ಅಂತರ ಕಾಯ್ದುಕೊಂಡಿದ್ದಾರೆ.
ಮದುವೆ ಸುದ್ದಿಯನ್ನು ಹಂಚಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು ‘ಬಿಗ್ ಬಾಸ್’ ಬೆಡಗಿ ದೀಪಿಕಾ ದಾಸ್. ಇದೀಗ ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಆರತಕ್ಷತೆ ಮತ್ತು ಬೀಗರೂಟ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ದೀಪಿಕಾ ದಾಸ್ (Deepika Das) ದಂಪತಿ ಶುಭಹಾರೈಸಲು ಸ್ಯಾಂಡಲ್‌ವುಡ್ ನಟ-ನಟಿಯರು ಭಾಗಿಯಾಗಿದ್ದಾರೆ.
ಮಾರ್ಚ್ 10ರಂದು ಮಧ್ಯಾಹ್ನ 12.30ಕ್ಕೆ ಆರತಕ್ಷತೆ ಕಾರ್ಯಕ್ರಮ ಜರುಗಿದ್ದು, ಬಿಗ್ ಬಾಸ್ ಖ್ಯಾತಿ ದಿವ್ಯಾ ಉರುಡುಗ (Divya Uruduga), ಪ್ರಶಾಂತ್ ಸಂಬರಗಿ, ನೀತು ವನಜಾಕ್ಷಿ, ಅನುಪಮಾ ಗೌಡ, ಚಂದನಾ ಅನಂತಕೃಷ್ಣ, ಪ್ರಿಯಾಂಕಾ, ಪನ್ನಗ ಭರಣ, ಕಿಶನ್, ಸಿಂಗರ್ ವಾಸುಕಿ ವೈಭವ್ (Vasuki Vaibhav) ಸೇರಿದಂತೆ ಅನೇಕರು ಮದುವೆ ಆರತಕ್ಷತೆಯಲ್ಲಿ ಭಾಗಿಯಾಗಿ ವಿಶ್ ಮಾಡಿದ್ದಾರೆ.
ಅದಷ್ಟೇ ಅಲ್ಲ, ಸ್ನೇಹಿತೆ ದೀಪಿಕಾ ದಾಸ್ ‘ಇನ್ನೂನು ಬೇಕಾಗಿದೆ ಒಲವು’ ಎಂಬ ಸಾಂಗ್ ಹಾಡಿ ನವ ಜೋಡಿಗೆ ವಿಶೇಷವಾಗಿ ಶುಭಕೋರಿದ್ದಾರೆ ವಾಸುಕಿ ವೈಭವ್. ವಾಸುಕಿ-ದೀಪಿಕಾ ಸ್ನೇಹ ಇದೀಗ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.
ಮಾರ್ಚ್ 1ರಂದು ದೀಪಿಕಾ ಮದುವೆಯ ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಫ್ಯಾನ್ಸ್ಗೆ ಅಚ್ಚರಿ ಮೂಡಿಸಿದ್ದರು. ಜೊತೆಗೆ ಹುಡುಗನ ಬಗ್ಗೆ ಯಾವುದೇ ಮಾಹಿತಿಯನ್ನೂ ಅವರು ಹಂಚಿಕೊಂಡಿರಲಿಲ್ಲ. ಮೊನ್ನೆಯಷ್ಟೇ ತನ್ನ ಕರಿಮಣಿ ಮಾಲೀಕನನ್ನು ನಟಿ ಪರಿಚಯಿಸಿದ್ದರು. ಪತಿಯ ಹೆಸರು ದೀಪಕ್ (Deepak) ಎಂದು ರಿವೀಲ್ ಮಾಡಿ ತಮ್ಮ ಮದುವೆಯ ಬಗ್ಗೆ ನಟಿ ಸಂತಸ ವ್ಯಕ್ತಪಡಿಸಿದ್ದರು.
ಪದ್ಧತಿಯ ಬದ್ಧವಾಗಿ, ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ನನ್ನ ಕನಸಾಗಿತ್ತು. ಇದೀಗ ಅದು ಈಡೇರಿದೆ ಎಂದು ನಟಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದರು. ದಿಢೀರ್ ಅಂತ ಆಗಿದ ಮದುವೆ ಅಲ್ಲ. ಈ ಮದುವೆಗೆ ಹಲವು ದಿನಗಳಿಂದ ಪ್ಲ್ಯಾನ್ ಮಾಡಲಾಗಿತ್ತು. ಸರ್ಪ್ರೈಸ್ ಕೂಡ ಸ್ವೀಟ್ ಆಗಿದೆ. ನನಗೆ ನನ್ನ ಬಾಳ ಸಂಗಾತಿ ಸಿಕ್ಕಿದ್ದು, ಪಕ್ಕಾ ದೇಸಿ. ದಯವಿಟ್ಟು ನಮ್ಮ ಗೌಪ್ಯತೆಯನ್ನು ಗೌರವಿಸಿ ಎಂದು ದೀಪಿಕಾ ದಾಸ್ ಮನವಿ ಮಾಡಿದ್ದರು.
‘ನಾಗಿಣಿ’ (Nagini) ಸೀರಿಯಲ್ ಬಿಗ್ ಬಾಸ್ ಸೀಸನ್ 7ರ (Bigg Boss Kannada 7) ಮೂಲಕ ಮೋಡಿ ಮಾಡಿರುವ ನಟಿ ದೀಪಿಕಾ ದಾಸ್ ಅವರು ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಆಗಿದ್ದಾರೆ. ಗೋವಾದ ಕಡಲ ತೀರದಲ್ಲಿ ಬೆಂಗಳೂರಿನ ಉದ್ಯಮಿ ದೀಪಕ್‌ರನ್ನು ನಟಿ ಮದುವೆ ಆಗಿದ್ದಾರೆ. ಮಾರ್ಚ್ 1ರಂದು ನಡೆದ ದೀಪಿಕಾ ಮದುವೆಯಲ್ಲಿ ಎರಡು ಕುಟುಂಬದ ಸದಸ್ಯರು, ಆಪ್ತರಷ್ಟೇ ಭಾಗಿಯಾಗಿದ್ದರು.
ಮಾರ್ಚ್ 1 ರಂದು ಮದುವೆ ಸುದ್ದಿಯನ್ನು ಹಂಚಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್ (Deepika Das). ಮದುವೆ ಸ್ಥಳ, ಭಾಗಿಯಾದವರು ಯಾರೆಲ್ಲ, ಕನ್ನಡದ ಯಾವ ನಟ ನಟಿಯರು ಇವರ ಮದುವೆಯಲ್ಲಿ ಭಾಗಿಯಾಗಿದ್ದರು ಇತ್ಯಾದಿ ವಿಷಯ ಗೌಪ್ಯವಾಗಿಯೇ ಉಳಿದಿತ್ತು. ಗುಪ್ತವಾಗಿಯೇ ಮದುವೆ ಆಗಿದ್ದ ದೀಪಿಕಾ ದಾಸ್, ಆರತಕ್ಷತೆ ಮಾಡಿಕೊಳ್ಳುವುದಿಲ್ಲವಾ ಎನ್ನುವ ಪ್ರಶ್ನೆಯನ್ನೇ ಅಭಿಮಾನಿಗಳು ಕೇಳಿದ್ದರು. ಇದೀಗ ಆಪ್ತರಿಗಾಗಿ ಆರತಕ್ಷತೆಯನ್ನು ಏರ್ಪಡಿಸಲಾಗಿದೆ.
ನಾಳೆ (ಮಾ.10) ರಂದು ಬೆಂಗಳೂರು ರೆಸಾರ್ಟ್ ವೊಂದರಲ್ಲಿ ಆರತಕ್ಷತೆ (Reception) ಮತ್ತು ಬೀಗರೂಟವನ್ನು ದೀಪಿಕಾ ಆಯೋಜನೆ ಮಾಡಿದ್ದಾರೆ. ತಮ್ಮ ಆಪ್ತರಿಗೆ ಹಾಗೂ ಸಿನಿಮಾ ಮತ್ತು ಕಿರುತೆರೆಯ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿದ್ದಾರೆ. ನಾಳೆ ಮಧ್ಯಾಹ್ನ 12.30ಕ್ಕೆ ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ.
ದೀಪಿಕಾ ಮದುವೆಯ (Wedding) ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಫ್ಯಾನ್ಸ್ಗೆ ಅಚ್ಚರಿ ಮೂಡಿಸಿದ್ದರು. ಜೊತೆಗೆ ಹುಡುಗನ ಬಗ್ಗೆ ಯಾವುದೇ ಮಾಹಿತಿಯನ್ನೂ ಅವರು ಹಂಚಿಕೊಂಡಿರಲಿಲ್ಲ. ಮೊನ್ನೆಯಷ್ಟೇ ತನ್ನ ಕರಿಮಣಿ ಮಾಲೀಕನನ್ನು ನಟಿ ಪರಿಚಯಿಸಿದ್ದರು. ಪತಿಯ ಹೆಸರು ದೀಪಕ್ (Deepak) ಎಂದು ರಿವೀಲ್ ಮಾಡಿ ತಮ್ಮ ಮದುವೆಯ ಬಗ್ಗೆ ನಟಿ ಸಂತಸ ವ್ಯಕ್ತಪಡಿಸಿದ್ದರು.
ಪದ್ಧತಿಯ ಬದ್ಧವಾಗಿ, ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ನನ್ನ ಕನಸಾಗಿತ್ತು. ಇದೀಗ ಅದು ಈಡೇರಿದೆ ಎಂದು ನಟಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದರು. ದಿಢೀರ್ ಅಂತ ಆಗಿದ ಮದುವೆ ಅಲ್ಲ. ಈ ಮದುವೆಗೆ ಹಲವು ದಿನಗಳಿಂದ ಪ್ಲ್ಯಾನ್ ಮಾಡಲಾಗಿತ್ತು. ಸರ್ಪ್ರೈಸ್ ಕೂಡ ಸ್ವೀಟ್ ಆಗಿದೆ. ನನಗೆ ನನ್ನ ಬಾಳ ಸಂಗಾತಿ ಸಿಕ್ಕಿದ್ದು, ಪಕ್ಕಾ ದೇಸಿ. ದಯವಿಟ್ಟು ನಮ್ಮ ಗೌಪ್ಯತೆಯನ್ನು ಗೌರವಿಸಿ’ ಎಂದು ದೀಪಿಕಾ ದಾಸ್ ಮನವಿ ಮಾಡಿದ್ದರು.
ʻನಾಗಿಣಿ’ ಸೀರಿಯಲ್ ಬಿಗ್ ಬಾಸ್ ಸೀಸನ್ 7ರ ಮೂಲಕ ಮೋಡಿ ಮಾಡಿರುವ ನಟಿ ದೀಪಿಕಾ ದಾಸ್ ಅವರು ಗೋವಾದಲ್ಲಿ (Goa) ಡೆಸ್ಟಿನೇಷನ್ ವೆಡ್ಡಿಂಗ್ ಆಗಿದ್ದಾರೆ. ಗೋವಾದ ಕಡಲ ತೀರದಲ್ಲಿ ಕರ್ನಾಟಕ ಮೂಲದ ದುಬೈ ಉದ್ಯಮಿ ದೀಪಕ್‌ರನ್ನು ನಟಿ ಮದುವೆ ಆಗಿದ್ದಾರೆ. ಮಾರ್ಚ್ 1ರಂದು ನಡೆದ ದೀಪಿಕಾ ಮದುವೆಯಲ್ಲಿ ಎರಡು ಕುಟುಂಬದ ಸದಸ್ಯರು, ಆಪ್ತರಷ್ಟೇ ಭಾಗಿದ್ದರು.
ಎರಡು ದಿನಗಳ ಹಿಂದೆಯಷ್ಟೇ ಪುತ್ರಿ ಇರಾ ಖಾನ್ ಮದುವೆ ಮಾಡಿರುವ ಬಾಲಿವುಡ್ ನಟ ಆಮೀರ್ ಖಾನ್ (Aamir Khan), ಇದೀಗ ಮುಂಬೈನಲ್ಲಿ ಆರತಕ್ಷತೆ (Reception) ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಮಗಳ ಮದುವೆಗೆ ಕೆಲವೇ ಕೆಲವು ಗಣ್ಯರನ್ನು ಆಮೀರ್ ಆಮಂತ್ರಿಸಿದ್ದರು. ಜೊತೆಗೆ ಎರಡೂ ಕುಟುಂಬಗಳ ಸದಸ್ಯರು ಇದ್ದರು. ಆದರೆ, ಆರತಕ್ಷತೆಯಲ್ಲಿ ಭಾರತೀಯ ಸಿನಿಮಾ ರಂಗದ ನಾನಾ ದಿಗ್ಗಜರು ಭಾಗಿ ಆಗಲಿದ್ದಾರಂತೆ.
ಜನವರಿ 13ಕ್ಕೆ ಅದ್ಧೂರಿಯಾಗಿಯೇ ಮಗಳ ಆರತಕ್ಷತೆ ಕಾರ್ಯಕ್ರಮವನ್ನು ಆಮೀರ್ ಆಯೋಜನೆ ಮಾಡಿದ್ದಾರಂತೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಜೊತೆಗೆ ಬಾಲಿವುಡ್ ನ ಬಹುತೇಕ ಸ್ಟಾರ್ ನಟರು ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.
ಜನವರಿ 3ರಂದು ಇರಾ ಖಾನ್ ಮದುವೆಯಾಗಿದೆ. ಇರಾ ಖಾನ್ (Ira Khan) ಮತ್ತು ನೂಪುರ್ ಶಿಖಾರೆ (Nupur Shikhare) ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಫೋಟೋ ವೈರಲ್ ಆಗಲು ಕಾರಣ, ನೂಪುರ್ ಧರಿಸಿರುವ ಕಾಸ್ಟ್ಯೂಮ್.
ಸಾಮಾನ್ಯವಾಗಿ ಮದುವೆಯಲ್ಲಿ ಲಕ್ಷಾಂತರ ಬೆಲೆ ಬಾಳು ಸೂಟ್ ಧರಿಸೋದು ವಾಡಿಕೆ. ಆದರೆ, ಮದುವೆಯ ಸಂದರ್ಭದಲ್ಲಿ ನೂಪುರ್ ಚಡ್ಡಿ ಮತ್ತು ಬನಿಯನ್ ಧರಿಸಿದ್ದಾರೆ. ಈ ಕಾಸ್ಟ್ಯೂಮ್ ನೋಡಿದ ಅಭಿಮಾನಿಗಳು ಇದ್ಯಾವ ರೀತಿಯ ದಿರಿಸು ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಅಚ್ಚರಿಯನ್ನೂ ವ್ಯಕ್ತ ಪಡಿಸಿದ್ದಾರೆ.
ಆಮೀರ್ ಪುತ್ರಿ ಇರಾ ಖಾನ್ ಅವರು ನೂಪುರ್ ಜೊತೆ ಹಲವು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇದೀಗ ಗುರುಹಿರಿಯರ ಸಮ್ಮತಿಯ ಮೇರೆಗೆ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ.
ಅಂಬಿ ಪುತ್ರನ ಅಭಿಷೇಕ್- ಅವಿವಾ (Aviva Bidapa) ಆರತಕ್ಷತೆ (Reception) ಅದ್ದೂರಿಯಾಗಿ ನಡೆಯುತ್ತಿದೆ. ಸ್ಯಾಂಡಲ್‌ವುಡ್ (Sandalwood) ನಟ- ನಟಿಯರು ಪರಭಾಷಾ ಸ್ಟಾರ್ಸ್ ಸಾಕ್ಷಿಯಾಗುವ ಮೂಲಕ ನವಜೋಡಿಗೆ ಶುಭಕೋರುತ್ತಿದ್ದಾರೆ. ಇದನ್ನೂ ಓದಿ:ಅಭಿ-ಅವಿವಾ ಆರತಕ್ಷತೆ : ಮಾಜಿ ಸಿಎಂ ಎಸ್.ಎಂ.ಕೃಷ್ಣ ಆಗಮನ
ಐದಾರು ವರ್ಷಗಳ ಪ್ರೀತಿಗೆ ಅಭಿವಾ ಜೂನ್ 5ಕ್ಕೆ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಇದೀಗ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ರಿಸೆಪ್ಷನ್ ಕಾರ್ಯಕ್ರಮ ನಡೆಯುತ್ತಿದೆ. ಅಭಿವಾ ಜೋಡಿ ಗೋಲ್ಡನ್ ಬಣ್ಣದ ಧಿರಿಸಿನಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ:ಅಭಿ-ಅವಿವಾ ಆರತಕ್ಷತೆ : ಮಾಜಿ ಸಿಎಂ ಎಸ್.ಎಂ.ಕೃಷ್ಣ ಆಗಮನ
ಅಭಿಷೇಕ್ ಅವಿವಾ ರಿಸೆಪ್ಷನ್‌ಗೆ ಕನ್ನಡದ ಹಿರಿಯ ನಟ ದೊಡ್ಡಣ್ಣ, ಮೈನಾ ನಿರ್ದೇಶಕ ನಾಗಶೇಖರ್, ರಾಘವೇಂದ್ರ ರಾಜಕುಮಾರ್, ಸೌತ್ ನಟ ಪ್ರಭು, ಬಿಗ್ ಬಾಸ್ ಖ್ಯಾತಿಯ ಸಾನ್ಯ ಅಯ್ಯರ್, ನಿರ್ದೇಶಕಿ ರೂಪಾ ಅಯ್ಯರ್, ಎಸ್.ಎಂ ಕೃಷ್ಣ, ಯದುವೀರ ಒಡೆಯರ್, ಸಚಿವ ಕೆ.ಜೆ ಜಾರ್ಜ್, ಮೆಗಾಸ್ಟಾರ್ ಚಿರಂಜೀವಿ ಕುಟುಂಬ, ನಟಿ ಆಶಿಕಾ ರಂಗನಾಥ್, ಬಾಲಿವುಡ್ ಶತ್ರುಘ್ನ ಸಿನ್ಹಾ, ಕ್ರೇಜಿಸ್ಟಾರ್ ರವಿಚಂದ್ರನ್, ಖುಷ್ಬೂ, ನೆನಪಿರಲಿ ಪ್ರೇಮ್, ಧನ್ವೀರ್ ಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಮಂಡ್ಯದಲ್ಲಿ ಜೂನ್ 16ರಂದು ಬೀಗರ ಊಟ ಕಾರ್ಯಕ್ರಮ ನಡೆಯಲಿದೆ. ಅಂದು ಮಂಡ್ಯದಲ್ಲಿ 1 ಲಕ್ಷಕ್ಕೂ ಅಧಿಕ ಜನ ಸೇರುವ ಸಾಧ್ಯತೆಯಿದೆ.
ಯಂಗ್ ರೆಬಲ್ ಸ್ಟಾರ್ ಅಭಿಷೇಕ್ (Abhishek Ambarish) ಮತ್ತು ಅವಿವಾ (Aviva) ಆರತಕ್ಷತೆ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಸಾಕಷ್ಟು ಗಣ್ಯರು ಆಗಮಿಸುತ್ತಿದ್ದು, ಇದೀಗ ಮಾಜಿ ಸಿಎಂ ಎಸ್.ಎಂ.ಕೃಷ್ಣ (SM Krishna) ಕೂಡ ಆಗಮಿಸಿ, ನವ ಜೋಡಿಗೆ ಶುಭ ಹಾರೈಸಿದರು. ಅಂಬರೀಶ್ ಕುಟುಂಬಕ್ಕೂ ಮತ್ತು ಕೃಷ್ಣ ಕುಟುಂಬಕ್ಕೂ ಹತ್ತಿರದ ಸಂಬಂಧ. ಕುಟುಂಬ ಸಮೇತ ಆಗಮಿಸಿದ್ದ ಕೃಷ್ಣ, ಹೊಸ ಬದುಕಿಗೆ ಕಾಲಿಡುತ್ತಿರುವ ಅಭಿ ಮತ್ತು ಅವಿವಾಗೆ ಆಶೀವರ್ದಿಸಿದರು.
ಎರಡು ದಿನಗಳ ಹಿಂದೆಯಷ್ಟೇ ನಡೆದ ಮದುವೆ ಸಮಾರಂಭದಲ್ಲಿ ನಟರಾದ ರಜನಿಕಾಂತ್, ಸುದೀಪ್, ಯಶ್, ಕ್ರಿಕೆಟಿಗ ಅನಿಲ್ ಕುಂಬ್ಳೆ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಿಳು ನಟ ಮೋಹನ್ ಬಾಬು, ತೆಲುಗು ನಟ ನರೇಶ್, ನಟಿ ಪವಿತ್ರ ಲೋಕೇಶ್, ನಟಿ ಶುಭ್ರ ಅಯ್ಯಪ್ಪ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ಆಗಮಿಸಿದ್ದರು. ಇದನ್ನೂ ಓದಿ:ಮದುವೆಯಾಗಿ ಮೂರುವರೆ ತಿಂಗಳಿಗೆ ಗರ್ಭಿಣಿ: ಸ್ವರಾ ಭಾಸ್ಕರ್ ಸಿಕ್ಕಾಪಟ್ಟೆ ಟ್ರೋಲ್
ಇಂದು ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ (Reception) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬಾಲಿವುಡ್ ನ ಖ್ಯಾತ ನಟ ಅಮಿತಾಭ್, ತೆಲುಗಿನ ಖ್ಯಾತ ನಟ ಚಿರಂಜೀವಿ, ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಸೇರಿದಂತೆ ಹಲವು ಸಚಿವರು ಭಾಗಿಯಾಗುವ ನಿರೀಕ್ಷೆಯಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ- ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.
ಅಭಿಷೇಕ್- ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿಡಪ ಅವರ ಪುತ್ರಿ ಅವಿವ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಒಪ್ಪಿಗೆಯರ ಮೇರೆಗೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಒಂದು ವಾರಗಳಿಂದ ಅಂಬಿ ಮನೆಯಲ್ಲಿ ಸಡಗರ ಮನೆಮಾಡಿದೆ. ಅಂಬರೀಷ್ ಅವರ ಮನೆ ಮುಂದೆ ಹಸಿರು ಚಪ್ಪರ ಹಾಕಲಾಗಿದೆ. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಇಡೀ ಮನೆ ಅಲಂಕಾರಗೊಂಡಿದೆ.
ಅಭಿಷೇಕ್ ಅಂಬರೀಶ್-ಅವಿವಾ (Aviva) ಜೋಡಿಯ ಆರತಕ್ಷತೆಗೆ (Reception) ಕ್ಷಣಗಣನೆ ಶುರುವಾಗಿದೆ. ದುಬಾರಿ ಕಾರಿನಲ್ಲಿ ಅರಮನೆ ಮೈದಾನಕ್ಕೆ ಬಂದಿಳಿದ ಅಭಿ (Abhishek Ambarish) ಹಾಗೂ ಅವಿವಾ ಆರತಕ್ಷತೆ ಕಾರ್ಯಕ್ರಮಕ್ಕೆ ತಯಾರಾದ ವೇದಿಕೆಯತ್ತ ಹೆಜ್ಜೆ ಹಾಕಿದ್ದಾರೆ. ಅಭಿ ಗೋಲ್ಡನ್ ಶೇರ್ವಾನಿ ಧರಿಸಿದ್ದರೆ, ಅವಿವಾ ಗೋಲ್ಡನ್ ಕಲರ್ ಸೀರೆಯಲ್ಲಿ ಮಿಂಚುತ್ತಿದ್ದಾರೆ. ಅದ್ದೂರಿ ಆರತಕ್ಷತೆಗಾಗಿ ಅರಮನೆ ಮೈದಾನ ಸಿಂಗಾರಗೊಂಡಿದೆ. ಅಭಿಷೇಕ್ ಮತ್ತು ಅವಿವಾ ಜೋಡಿಗೆ ಹಾರೈಸುವುದಕ್ಕಾಗಿ ಇಂದು ಕೂಡ ದೇಶದ ವಿವಿಧ ಭಾಗಗಳಿಂದ ಗಣ್ಯರು ಬರುವ ನಿರೀಕ್ಷೆಯಿದೆ. ಸಿನಿಮಾ ಹಾಗೂ ರಾಜಕೀಯ ಗಣ್ಯರ ದೊಡ್ಡ ಪಟ್ಟಿಯೇ ಹರಿದಾಡುತ್ತಿದೆ.
ಎರಡು ದಿನಗಳ ಹಿಂದೆಯಷ್ಟೇ ನಡೆದ ಮದುವೆ ಸಮಾರಂಭದಲ್ಲಿ ನಟರಾದ ರಜನಿಕಾಂತ್, ಸುದೀಪ್, ಯಶ್, ಕ್ರಿಕೆಟಿಗ ಅನಿಲ್ ಕುಂಬ್ಳೆ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಿಳು ನಟ ಮೋಹನ್ ಬಾಬು, ತೆಲುಗು ನಟ ನರೇಶ್, ನಟಿ ಪವಿತ್ರ ಲೋಕೇಶ್, ನಟಿ ಶುಭ್ರ ಅಯ್ಯಪ್ಪ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ಆಗಮಿಸಿದ್ದರು. ಇದನ್ನೂ ಓದಿ:ಮದುವೆಯಾಗಿ ಮೂರುವರೆ ತಿಂಗಳಿಗೆ ಗರ್ಭಿಣಿ: ಸ್ವರಾ ಭಾಸ್ಕರ್ ಸಿಕ್ಕಾಪಟ್ಟೆ ಟ್ರೋಲ್
ಇಂದು ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬಾಲಿವುಡ್ ನ ಖ್ಯಾತ ನಟ ಅಮಿತಾಭ್, ತೆಲುಗಿನ ಖ್ಯಾತ ನಟ ಚಿರಂಜೀವಿ, ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಸೇರಿದಂತೆ ಹಲವು ಸಚಿವರು ಭಾಗಿಯಾಗುವ ನಿರೀಕ್ಷೆಯಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ- ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.
ಅಭಿಷೇಕ್- ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿಡಪ ಅವರ ಪುತ್ರಿ ಅವಿವ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಒಪ್ಪಿಗೆಯರ ಮೇರೆಗೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಒಂದು ವಾರಗಳಿಂದ ಅಂಬಿ ಮನೆಯಲ್ಲಿ ಸಡಗರ ಮನೆಮಾಡಿದೆ. ಅಂಬರೀಷ್ ಅವರ ಮನೆ ಮುಂದೆ ಹಸಿರು ಚಪ್ಪರ ಹಾಕಲಾಗಿದೆ. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಇಡೀ ಮನೆ ಅಲಂಕಾರಗೊಂಡಿದೆ.