Tag: rebel MLAs

  • ನಾನು ಕೇವಲ ಜಿಲ್ಲೆ, ಕೋಟಾಕ್ಕೆ ಸೀಮಿತನಲ್ಲ, ನನ್ನ ಜೀವನವೇ ರಾಜ್ಯಕ್ಕೆ ಅರ್ಪಣೆ: ಶ್ರೀರಾಮುಲು

    ನಾನು ಕೇವಲ ಜಿಲ್ಲೆ, ಕೋಟಾಕ್ಕೆ ಸೀಮಿತನಲ್ಲ, ನನ್ನ ಜೀವನವೇ ರಾಜ್ಯಕ್ಕೆ ಅರ್ಪಣೆ: ಶ್ರೀರಾಮುಲು

    ಬಳ್ಳಾರಿ: ನಾನು ಯಾವ ಜಿಲ್ಲೆಗೂ, ಯಾವ ಕೋಟಾಕ್ಕೂ ಸೀಮಿತನಲ್ಲ. ನನ್ನ ಜೀವನ ರಾಜ್ಯಕ್ಕೆ, ರಾಜಕಾರಣಕ್ಕೆ ಅರ್ಪಣೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧವೆಂದು ಬಿಜೆಪಿ ಶಾಸಕ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

    ಸಂಪುಟ ವಿಸ್ತರಣೆ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ಶೀಘ್ರದಲ್ಲೆ ನಿರ್ಧಾರ ತೆಗೆದುಕೊಳ್ಳುತ್ತದೆ. ಡಿಸಿಎಂ ಸ್ಥಾನದ ವಿಚಾರವಾಗಿ, ನಾನು ಏನೂ ಮಾತನಾಡಲ್ಲ. ಹೈಕಮಾಂಡ್ ಏನು ಹೇಳುತ್ತದೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ನಾನು ಯಾವ ಜಿಲ್ಲೆಗೂ, ಯಾವ ಕೋಟಕ್ಕೂ ಸೀಮಿತನಲ್ಲ. ನನ್ನ ಜೀವನ ರಾಜ್ಯಕ್ಕೆ, ರಾಜಕಾರಣಕ್ಕೆ ಅರ್ಪಣೆ ಎಂದು ತಮ್ಮ ನಡೆಯ ಬಗ್ಗೆ ಸ್ಪಷ್ಟಪಡಿಸಿದರು.

    ಸಚಿವ ಸ್ಥಾನ ನೀಡುವುದು ಯಾವ ಜಿಲ್ಲೆಯ ಆಧಾರದ ಮೇಲೂ ಅಲ್ಲ. ನನ್ನಂತಹ ದೊಡ್ಡ ನಾಯಕರು, ಶಕ್ತಿವಂತ ನಾಯಕರು ಪಕ್ಷದಲ್ಲಿ ಬಹಳ ಜನರಿದ್ದಾರೆ. ನಮಗೆ ಹಾಗೂ ಕಾರ್ಯಕರ್ತರಿಗೆ ಬಿಎಸ್ ಯಡಿಯೂರಪ್ಪನವರು ಸಿಎಂ ಆಗಬೇಕು, ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬ ಕಳಕಳಿಯಿತ್ತು. ದೇವರ ಆಶಿರ್ವಾದದಿಂದ ಅದು ನೆರವೇರಿದೆ. ಹೀಗಾಗಿ ಪಕ್ಷ ಏನು ನಿರ್ಧಾರ ಮಾಡುತ್ತದೋ ಅದನ್ನು ನಾವು ಪಾಲಿಸುತ್ತೇವೆ. ಡಿಸಿಎಂ ಸ್ಥಾನ ನೀಡುವ ಬಗ್ಗೆ ಪಕ್ಷ ನಿರ್ಧಾರ ಮಾಡಬೇಕು ಎಂದು ತಿಳಿಸಿದರು.

    ಅತೃಪ್ತ ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ನೀಡುವ ವಿಚಾರವಾಗಿ ಮಾತನಾಡಿ, ಅತೃಪ್ತ ಶಾಸಕರಿಗೂ ಮಂತ್ರಿ ಸ್ಥಾನ ಕೊಡಬೇಕಾಗುತ್ತದೆ. ಅವರೂ ಕೂಡ ನಮಗೆ ಸಹಾಯ ಮಾಡಿದ್ದಾರೆ. ಅವರನ್ನು ಸಮಾಧಾನ ಪಡಿಸಬೇಕು. ಜೊತೆಗೆ ನಮ್ಮ ಪಕ್ಷದ ಹಿರಿಯ ನಾಯಕರನ್ನೂ ಕೂಡ ಗುರುತಿಸಬೇಕು. ಉಪ ಚುನಾವಣೆ ನಡೆಯಲಿರುವ 17 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಈ ವಿಚಾರಗಳು ಹೈಕಮಾಂಡ್‍ಗೆ ಬಿಟ್ಟಿದ್ದು ಎಂದು ಪರೋಕ್ಷವಾಗಿ ರೆಬಲ್ ಶಾಸಕರ ಸಹಾಯವನ್ನು ಶ್ರೀರಾಮುಲು ಒಪ್ಪಿಕೊಂಡಿದ್ದಾರೆ.

  • ಎಲ್ಲಾ ಸಚಿವಸ್ಥಾನ ಲಿಂಗಾಯತರಿಗೆ ಕೊಟ್ರೆ ಅತೃಪ್ತರು ವಿಷ ಕುಡಿಬೇಕಾ: ಮುಖಂಡರಿಗೆ ಬಿಎಸ್‍ವೈ ಪ್ರಶ್ನೆ

    ಎಲ್ಲಾ ಸಚಿವಸ್ಥಾನ ಲಿಂಗಾಯತರಿಗೆ ಕೊಟ್ರೆ ಅತೃಪ್ತರು ವಿಷ ಕುಡಿಬೇಕಾ: ಮುಖಂಡರಿಗೆ ಬಿಎಸ್‍ವೈ ಪ್ರಶ್ನೆ

    ಬೆಂಗಳೂರು: ಲಿಂಗಾಯತ ಮುಖಂಡರ ಬೇಡಿಕೆ ಕೇಳಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.

    ಲಿಂಗಾಯತ ಸಮುದಾಯದ ಮುಖಂಡರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಇಂದು ಅಭಿನಂದಿಸಿದರು. ಈ ವೇಳೆ ಮುಖಂಡರು ತಮ್ಮ ಸಮುದಾಯದ ಶಾಸಕರ ಪರ ಬ್ಯಾಟ್ ಬಿಸಿ, ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದರು. ಅದನ್ನು ಕೇಳಿದ ಬಿ.ಎಸ್.ಯಡಿಯೂರಪ್ಪ ಅವರು ಮುಖಂಡರ ವಿರುದ್ಧ ಫುಲ್ ಗರಂ ಆದರು.

    ಬಿಜೆಪಿಯಲ್ಲಿ ಒಟ್ಟು 16 ಲಿಂಗಾಯತ ಶಾಸಕರಿದ್ದಾರೆ. ಈ ಪೈಕಿ ನಾಲ್ವರಿಗೆ ಸಚಿವ ಸ್ಥಾನ ಕೊಡುವಂತೆ ಲಿಂಗಾಯತ ಮುಖಂಡರು ಸಿಎಂಗೆ ಮನವಿ ಮಾಡಿಕೊಂಡರು. ಮುಖಂಡರ ಮಾತಿನಿಂದ ಕೆರಳಿದ ಸಿಎಂ, ನಾಲ್ಕು ಸಚಿವರು ಸಾಕಾ? ಯಾಕೆ ಐವರು ಶಾಸಕರನ್ನು ಮಂತ್ರಿ ಮಾಡೋದು ಬೇಡ್ವಾ ಎಂದು ಏರುಧ್ವನಿಯಲ್ಲಿ ಗದರಿಸಿದರು.

    ಅಷ್ಟೇ ಅಲ್ಲದೇ ಇರೋ ಬರೋ ಸಚಿವ ಸ್ಥಾನವನೆಲ್ಲ ನಿಮಗೆ ಕೊಟ್ಟರೆ ರಾಜೀನಾಮೆ ಕೊಟ್ಟ ಅತೃಪ್ತ ಶಾಸಕರು ವಿಷ ಕುಡಿಯಬೇಕಾ ಎಂದು ಪ್ರಶ್ನಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪನವರ ಧ್ವನಿ ಜೋರಾಗುತ್ತಿದ್ದಂತೆ ಲಿಂಗಾಯತ ಮುಖಂಡರು ತಣ್ಣಗಾದರು.

  • ಹಣ ಪಡೆದು ಬೇರೆ ಪಕ್ಷಕ್ಕೆ ಹೋಗೋದು ತಪ್ಪು – ಪ್ರಜ್ವಲ್ ರೇವಣ್ಣ

    ಹಣ ಪಡೆದು ಬೇರೆ ಪಕ್ಷಕ್ಕೆ ಹೋಗೋದು ತಪ್ಪು – ಪ್ರಜ್ವಲ್ ರೇವಣ್ಣ

    ಹಾಸನ: ರೆಬೆಲ್ ಶಾಸಕರು ಹಣ ಮತ್ತು ಅಧಿಕಾರಕ್ಕಾಗಿ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಹಣ ಪಡೆದು ಬೇರೆ ಪಕ್ಷಕ್ಕೆ ಹೋಗೋದು ತಪ್ಪು ಎಂದು ಅತೃಪ್ತ ಶಾಸಕರ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ವಾಗ್ದಾಳಿ ಮಾಡಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು, ಅನರ್ಹ ವಿಚಾರದಲ್ಲಿ ಸ್ಪೀಕರ್ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಜನರು ಅತೃಪ್ತರಿಗೆ ತಕ್ಕ ಪಾಠ ಕಲಿಸುತ್ತಾರೆ. ಮುಂದಿನ 6 ತಿಂಗಳಲ್ಲಿ ಚುನಾವಣೆ ನಡೆಯಲಿದೆ ಆಗ ಅವರಿಗೆ ಜನರು ಉತ್ತರ ನೀಡಲಿದ್ದಾರೆ ಎಂದು.

    ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಸಮ್ಮಿಶ್ರ ಸರ್ಕಾರ ಪತನಕ್ಕೆ ತಂದೆ ರೇವಣ್ಣ ಕಾರಣ ಎಂಬ ಆರೋಪ ಸುಳ್ಳು. ಲೋಕೋಪಯೋಗಿ ಇಲಾಖೆಯಲ್ಲಿ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂಬ ಆರೋಪ ಕುರಿತು ದಾಖಲೆ ಬಿಡುಗಡೆ ಮಾಡಲು ಸಿದ್ಧ ಎಂದು ತಿಳಿಸಿದರು.

    ಸದ್ಯಕ್ಕೆ ಬಿಜೆಪಿಯವರು ಸರ್ಕಾರ ರಚನೆ ಮಾಡಿದ್ದಾರೆ. ಅಲ್ಲೂ ಕೂಡ ಸಮಸ್ಯೆ ಇಲ್ಲದೇ ಇಲ್ಲ. ಅವರು ಸರ್ಕಾರ ಎಷ್ಟು ದಿನ ನಡೆಸುತ್ತಾರೋ ನೋಡೋಣ. ಲೋಕಸಭೆ ಚುನಾವಣೆಯಲ್ಲಿ ಸುಳ್ಳು ಅಫಿಡವಿಟ್ ಪ್ರಕರಣ ನನಗೆ ನ್ಯಾಯಾಲಯದಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದ ಪ್ರಜ್ವಲ್ ಸ್ಪಷ್ಟಪಡಿಸಿದರು.

  • ಅನರ್ಹ ಆದೇಶ ಪ್ರಶ್ನಿಸಿದ ಮೂವರು ರೆಬೆಲ್ ಶಾಸಕರಿಂದ ಸುಪ್ರೀಂಗೆ ಅರ್ಜಿ

    ಅನರ್ಹ ಆದೇಶ ಪ್ರಶ್ನಿಸಿದ ಮೂವರು ರೆಬೆಲ್ ಶಾಸಕರಿಂದ ಸುಪ್ರೀಂಗೆ ಅರ್ಜಿ

    ನವದೆಹಲಿ: ಸ್ಪೀಕರ್ ರಮೇಶ್ ಕುಮಾರ್ ಅವರು ಅನರ್ಹತೆಗೊಳಿಸಿದ ಆದೇಶವನ್ನು ಪ್ರಶ್ನಿಸಿ ಮೂವರು ರೆಬೆಲ್ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

    ರೆಬೆಲ್ ಶಾಸಕರಾದ ಮಹೇಶ್ ಕುಮಟಳ್ಳಿ, ರಮೇಶ್ ಜಾರಕಿಹೊಳಿ, ಆರ್.ಶಂಕರ್ ಅವರು ಸ್ಪೀಕರ್ ಆದೇಶ ಪ್ರಶ್ನಿಸಿ ಇಂದು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಸಂಬಂಧ ಇಂದು ವಿಚಾರಣೆ ನಡೆಯುವ ಸಾಧ್ಯತೆ ಇಲ್ಲ. ಹೀಗಾಗಿ ಮಂಗಳವಾರ ಇಲ್ಲವೇ ಬುಧವಾರ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಈ ಮೂವರು ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ಜುಲೈ 23ರಂದು ಅನರ್ಹಗೊಳಿಸಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿರುವ ರೆಬೆಲ್ ಶಾಸಕರು, ಸುಮಾರು ದಿನಗಳಿಂದ ಹಾಗೇ ಉಳಿದಿದ್ದ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಇತ್ಯರ್ಥ ಮಾಡಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಅವರು ಅನರ್ಹತೆ ಮಾಡಲು ಏಕಾಏಕಿ ನಿರ್ಧಾರ ಕೈಗೊಂಡಿದ್ದಾರೆ. ದ್ವೇಷದಿಂದ ಹೀಗೆ ಮಾಡಿದ್ದು ಸರಿಯಲ್ಲ. ಈ ಸಂಬಂಧ ಸೂಕ್ತ ನ್ಯಾಯ ಒದಗಿಸಬೇಕು ಎಂದು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

    ಮುಂದಿನ ದಿನಗಳಲ್ಲಿ ಅನರ್ಹಗೊಂಡ ಉಳಿದ ಶಾಸಕರು ಕೂಡ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದಾರೆ. ಹೀಗಾಗಿ ಎಲ್ಲಾ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಮುಂದಾಗುವ ಸಾಧ್ಯತೆಯಿದೆ.

  • ರಾಜೀನಾಮೆ ಕೊಟ್ಟವರಿಗೂ, ನಮಗೂ ಯಾವುದೇ ಸಂಬಂಧವಿಲ್ಲ: ಆರ್. ಅಶೋಕ್

    ರಾಜೀನಾಮೆ ಕೊಟ್ಟವರಿಗೂ, ನಮಗೂ ಯಾವುದೇ ಸಂಬಂಧವಿಲ್ಲ: ಆರ್. ಅಶೋಕ್

    – ದ್ವೇಷದ ತೀರ್ಪು ಕೊಡುವುದು ಒಳ್ಳೆಯದಲ್ಲ

    ಬೆಂಗಳೂರು: ರಾಜೀನಾಮೆ ಕೊಟ್ಟವರಿಗೂ ನಮಗೂ ಯಾವ ಸಂಬಂಧವಿಲ್ಲ. ನಾವು ಯಾರೂ ಅವರನ್ನು ನೋಡಿಲ್ಲ. ಮಾತಾಡಿಸಿಯೂ ಇಲ್ಲ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿದ್ದಾರೆ.

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾವು ಯಾರೂ ಅತೃಪ್ತ ಶಾಸಕರ ಜೊತೆ ಹೋಗಿಲ್ಲ, ಬಂದಿಲ್ಲ. ಅವರ ಜೊತೆಗೆ ಕಾಣಿಸಿಕೊಂಡಿಲ್ಲ. ನಮ್ಮ ಪಾಡಿಗೆ ನಾವು ಬಂದಿದ್ದೇವೆ. ಅವರ ಪಾಡಿಗೆ ಅವರು ಬಂದಿದ್ದಾರೆ ಅಷ್ಟೇ. ನಾನು ಅಶ್ವತ್ಥ್ ನಾರಾಯಣ್ ಬೇರೆ ಕೆಲಸಕ್ಕೆ ಹೋಗಿದ್ದೆವು ಎಂದು ಅತೃಪ್ತ ಶಾಸಕರ ಜೊತೆಗಿದ್ದ ಮಾತುಗಳನ್ನು ತಳ್ಳಿಹಾಕಿದರು.

    ನೂರಕ್ಕೆ ನೂರು ಪರ್ಸೆಂಟ್ ಬಹುಮತ ಸಾಬೀತು ಪಡಿಸುತ್ತೇವೆ. ರಾಜ್ಯದ ಜನರು ಜೆಡಿಎಸ್‍ಗೆ 37 ಸ್ಥಾನ ಕೊಟ್ಟು ಥರ್ಡ್ ಪ್ಲೇಸ್‍ನಲ್ಲಿ ಇಟ್ಟಿದ್ದರು. ಆದರೆ ಥರ್ಡ್ ಪ್ಲೇಸ್ ಬಂದವರು ಫಸ್ಟ್ ಪ್ಲೇಸ್‍ಗೆ ಬಂದರು. ಇದು ರಾಜ್ಯದ ದುರಂತ. ಈ ದುರಂತ ಹೋಗಿ, ಒಳ್ಳೆಯ ದಿನಗಳು ಬಂದಿವೆ. ಮತ್ತೆ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾರೆ ಎಂದು ತಿಳಿಸಿದರು.

    ರಾಜ್ಯದ ಜನತೆಗೆ ಅಭಿವೃದ್ಧಿ, ಸುಭದ್ರ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತ ಕೊಡಬೇಕಿದೆ. ಕೇಂದ್ರದಲ್ಲೂ, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ. ಮೂವತ್ತು ವರ್ಷದ ಬಳಿಕ ಇಂತಹ ಅವಕಾಶ ಬಂದಿದೆ. ಕೇಂದ್ರದ ಯೋಜನೆ, ಅನುದಾನ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

    ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶದ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕರು, ಸ್ಪೀಕರ್ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ದ್ವೇಷದ ತೀರ್ಪು ಕೊಡುವುದು ಒಳ್ಳೆಯದಲ್ಲ. ರಮೇಶ್ ಕುಮಾರ್ ಅವರು ಕೂಡ ಒಬ್ಬ ಶಾಸಕರೇ. ಅವರು ಸ್ಪೀಕರ್ ಹುದ್ದೆಗೆ ಗೌರವ ಕೊಟ್ಟು ಮಾಡಬೇಕಿತ್ತು. ಈ ಹಿಂದೆ ಇಂತಹ ತೀರ್ಪು ಬಂದಿರಲಿಲ್ಲ ಎಂದರು.

    ಭಾನುವಾರ ಮಧ್ಯಾರಾತ್ರಿ 12.50ರ ಸುಮಾರಿಗೆ ಕೆಂಪೇಗೌಡ ಏರ್‍ಪೋರ್ಟಿಗೆ ಬೈರತಿ ಬಸವರಾಜು, ಎಸ್.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಮುನಿರತ್ನ ಹಾಗೂ ಎಂ ಟಿಬಿ ನಾಗರಾಜ್ ಬಂದಿಳಿದಿದ್ದಾರೆ. ಅನರ್ಹರು ಏರ್‍ಪೋರ್ಟಿನಿಂದ ಹೊರಬಂದ ಬಳಿಕ ಆರ್.ಅಶೋಕ್, ಅಶ್ವತ್ಥ್ ನಾರಾಯಣ್ ಕೂಡ ಆಗಮಿಸಿದ್ದಾರೆ. ಇವರ ಜೊತೆ ಪಕ್ಷೇತರ ಶಾಸಕ ನಾಗೇಶ್ ಕೂಡ ಬಂದಿದ್ದು, ಮಾಧ್ಯಮಗಳ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದರು.

  • ಮುಂಬೈನಿಂದ ಹೊರಡಲು ಸಿದ್ಧರಾಗಿದ್ದ ಅನರ್ಹ ಶಾಸಕರಿಗೆ ಬಿಎಸ್‍ವೈ ತಡೆ!

    ಮುಂಬೈನಿಂದ ಹೊರಡಲು ಸಿದ್ಧರಾಗಿದ್ದ ಅನರ್ಹ ಶಾಸಕರಿಗೆ ಬಿಎಸ್‍ವೈ ತಡೆ!

    ಬೆಂಗಳೂರು: ಮುಂಬೈನಿಂದ ಇಂದೇ ಹೊರಡಲು ಸಿದ್ಧರಾಗಿದ್ದ ಅನರ್ಹ ಶಾಸಕರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ತಡೆ ಹಾಕಿದ್ದಾರೆ.

    ಬೆಂಗಳೂರಿಗೆ ಮರಳುವ ಸಂಬಂಧ ಅನರ್ಹ ಶಾಸಕರು ಬಿ.ಎಸ್.ಯಡಿಯೂರಪ್ಪ ಅವರಿಗೆ ಕರೆ ಮಾಡಿ, ಸೋಮವಾರ ನೀವು ಸೂಚಿಸಿದ ಸ್ಥಳಕ್ಕೆ ಬಂದು ನಿಮ್ಮನ್ನು ಒಟ್ಟಾಗಿ ಭೇಟಿ ಮಾಡುತ್ತೇವೆ. ಹೀಗಾಗಿ ಇಂದು ರಾತ್ರಿಯೇ ಮುಂಬೈನಿಂದ ಹೊರಟು ಬೆಂಗಳೂರಿಗೆ ಬರುತ್ತೇವೆ ಎಂಬುದಾಗಿ ಹೇಳಿದ್ದರು ಎನ್ನುವ ವಿಚಾರ ಮೂಲಗಳಿಂದ ಲಭ್ಯವಾಗಿದೆ.

    ಅನರ್ಹ ಶಾಸಕರ ಮನವಿಗೆ ಯಡಿಯೂರಪ್ಪ, ಇವತ್ತು ಒಂದೇ ಒಂದು ದಿನ ವಾಸ್ತವ್ಯ ಮುಂದುವರಿಸಿ. ಸೋಮವಾರ ವಿಶ್ವಾಸ ಮತಯಾಚನೆ ಪೂರ್ಣಗೊಳ್ಳುತ್ತಿದ್ದಂತೆ ಬೆಂಗಳೂರಿಗೆ ವಾಪಸ್ ಆಗಿ. ನೀವು ಬಂದರೆ ಸುಮ್ಮನೆ ಸಮಸ್ಯೆಯಾಗುತ್ತದೆ ಎಂದು ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಅತೃಪ್ತ ಶಾಸಕರ ಉಸ್ತುವಾರಿಗೆ ತೆರಳಿದ್ದ ಮಾಜಿ ಡಿಸಿಎಂ ಆರ್.ಅಶೋಕ್, ಶಾಸಕ ಡಾ.ಅಶ್ವತ್ಥ ನಾರಾಯಣ ಅವರು ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಇತ್ತ ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಅವರು ಅನರ್ಹ ಶಾಸಕರ ಜೊತೆಗೆ ಸೋಮವಾರ ಬೆಂಗಳೂರಿಗೆ ಬರಲಿದ್ದಾರೆ.

  • ಕಾಂಗ್ರೆಸ್ಸಿನಲ್ಲಿ ಒಬ್ಬ ಟ್ರಬಲ್ ಶೂಟರ್ ಇದ್ರೆ, ನಮ್ಮಲ್ಲಿ ಹತ್ತು ಟ್ರಬಲ್ ಕಿಲ್ಲರ್ಸ್ ಇದ್ದಾರೆ: ಕೆ.ಎಸ್ ನಾಯ್ಡು

    ಕಾಂಗ್ರೆಸ್ಸಿನಲ್ಲಿ ಒಬ್ಬ ಟ್ರಬಲ್ ಶೂಟರ್ ಇದ್ರೆ, ನಮ್ಮಲ್ಲಿ ಹತ್ತು ಟ್ರಬಲ್ ಕಿಲ್ಲರ್ಸ್ ಇದ್ದಾರೆ: ಕೆ.ಎಸ್ ನಾಯ್ಡು

    ರಾಮನಗರ: ಕಾಂಗ್ರೆಸ್ಸಿಗರ ಬಳಿ ಒಬ್ಬ ಟ್ರಬಲ್ ಶೂಟರ್ ಇದ್ದರೆ, ನಮ್ಮ ಬಳಿ ಹತ್ತು ಟ್ರಬಲ್ ಕಿಲ್ಲರ್ಸ್ ಇದ್ದಾರೆ ಎಂದು ಬಿಜೆಪಿಯ ಕಟ್ಟಾ ಸುಬ್ರಮಣ್ಯಂ ನಾಯ್ಡು ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

    ಮಾಗಡಿ ತಾಲೂಕಿನ ಸುಗ್ಗನಹಳ್ಳಿಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವೊಂದರಲ್ಲಿ ಕಟ್ಟಾ ಸುಬ್ರಮಣ್ಯಂ ನಾಯ್ಡು ಅವರು ಭಾಗವಹಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಕೆಲವರಿಗೆ ಅಜೀರ್ಣ, ಆಸೂಹೆ, ಅಸಂತೃಪ್ತಿ ಕೂಡ ಬಂದಿದೆ. ಜೆಡಿಎಸ್ ಹಾಗು ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ಅಲ್ಲಿನ ಅಸಂತೃಪ್ತಿಯಿಂದ ಪಕ್ಷ ಬಿಟ್ಟು ಹೊರ ಬಂದಿದ್ದಾರೆ. ಈ ಹಿಂದೆ ಸಮಾಧಾನವಾಗಿದ್ದ ಆ ಶಾಸಕರುಗಳ ಮೇಲೆ ಯಾವ ಟೀಕೆಯೂ ಇರಲಿಲ್ಲ. ಆದ್ರೆ ಪಕ್ಷ ಬಿಟ್ಟ ಮೇಲೆ ಟೀಕೆ ವ್ಯಕ್ತವಾಗುತ್ತಿದೆ ಎಂದರು. ಬಳಿಕ ಕಾಂಗ್ರೆಸ್ಸಿಗರ ಬಳಿ ಒಬ್ಬ ಟ್ರಬಲ್ ಶೂಟರ್ ಇದ್ದರೆ, ನಮ್ಮ ಬಳಿ ಹತ್ತು ಟ್ರಬಲ್ ಕಿಲ್ಲರ್ಸ್ ಇದ್ದಾರೆ ಎಂದು ಟಾಂಗ್ ಕೊಟ್ಟರು.

    ಪಕ್ಷ ಶಾಸಕರನ್ನು ನಡೆಸಿಕೊಂಡಿರುವ ನಡವಳಿಕೆಯಿಂದ ಅವರಿಗೆ ಅಸಮಧಾನವಾಗಿದೆ. ಹೀಗಾಗಿ ಪಕ್ಷ ಬಿಟ್ಟಿದ್ದಾರೆ. ಆದರೆ ಈಗ ಅಂತಹ ಶಾಸಕರನ್ನು ದುಷ್ಟರು, ಭ್ರಷ್ಟರು, ಭೂತಗಳು ಎಂದು ಸಮಾಜದಲ್ಲಿ ಬಿಂಬಿಸುತ್ತಿರುವುದು ಸರಿಯಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಬಳಿ ಇದ್ದಾಗ ಶಾಸಕರು ಸರಿಯಿದ್ದರು. ಈಗ ಅವರು ಭ್ರಷ್ಟರಾಗಿದ್ದಾರಾ ಎಂದು ಪ್ರಶ್ನಿಸಿ ಅನರ್ಹಗೊಂಡ ಶಾಸಕರ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಅತೃಪ್ತ ಶಾಸಕರು ನಿಮ್ಮನ್ನು ತಿಂದುಬಿಡುತ್ತಾರೆ ಎಂಬ ಕೈ-ದಳ ನಾಯಕರ ಮಾತಿಗೆ ಪ್ರತಿಕ್ರಿಯಿಸಿ, ನಾವೇನು ಬಿರಿಯಾನಿನಾ ತಿಂದು ಬಿಡಲು ಎಂದು ಕಿಡಿಕಾರಿದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸುಳ್ಳಿನ ಸೌಧ ಕಟ್ಟುತ್ತಿದ್ದಾರೆ. ಅವರ ಈ ಬುದ್ಧಿಯಿಂದಲೇ ಇಂದು ಕಾಂಗ್ರೆಸ್ ಸರ್ವನಾಶವಾಗಿದೆ. ಅತೃಪ್ತ ಶಾಸಕರು ನಮ್ಮ ಬಳಿ ಸಂಪರ್ಕಿಸಿದ್ದರು ಎಂಬುದು ಸುಳ್ಳು ಸುದ್ದಿ ಎಂದು ತಿಳಿಸಿದರು. ಹಾಗೆಯೇ ಅತೃಪ್ತ ಶಾಸಕರನ್ನು ಅನರ್ಹ ಮಾಡಲು ಸ್ಪೀಕರ್ ಗೆ ಹಕ್ಕಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

  • ಸ್ಪೀಕರ್ ಆದೇಶದ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ: ಬಿ.ಸಿ.ಪಾಟೀಲ್

    ಸ್ಪೀಕರ್ ಆದೇಶದ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ: ಬಿ.ಸಿ.ಪಾಟೀಲ್

    ಹಾವೇರಿ: ಸ್ಪೀಕರ್ ತೀರ್ಪಿನಿಂದ ಅನರ್ಹಗೊಂಡ ಬಿ.ಸಿ.ಪಾಟೀಲ್ ಕ್ಷೇತ್ರದ ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಈ ತೀರ್ಪು ನ್ಯಾಯ ಸಮ್ಮತವಾಗಿಲ್ಲ, ತಲೆ ಕೆಡಿಸಿಕೊಳ್ಳಬೇಡಿ ಎಂದು ಪೋಸ್ಟ್ ಮಾಡಿ ತಿಳಿಸಿದ್ದಾರೆ.

    ಅತೃಪ್ತ ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ಅವರ ತೀರ್ಪಿಗೆ ಯಾರು ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಈ ತೀರ್ಪು ನ್ಯಾಯ ಸಮ್ಮತವಾಗಿಲ್ಲ. ಈ ಬಗ್ಗೆ ನಾವು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ ನ್ಯಾಯವಾದ ತೀರ್ಪು ಪಡಿಯೋಣ. ಕ್ಷೇತ್ರದಲ್ಲಿ ಮತ್ತೊಮ್ಮೆ ಚುನಾವಣೆ ಎದುರಿಸಲು ಸಿದ್ಧರಿರೋಣ ಎಂದು ಮತದಾರರಿಗೆ ಹಾಗೂ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ರವಾನಿಸಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಆತ್ಮೀಯರೇ, ಈ ದಿನದಂದು ಸ್ಪೀಕರ್ ಅವರು ನೀಡಿದ ತೀರ್ಪು ನ್ಯಾಯ ಸಮ್ಮತವಾಗಿರುವುದಿಲ್ಲ. ಈ ತೀರ್ಪಿನ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ ನ್ಯಾಯದ ಪರವಾಗಿರುವ ತೀರ್ಪನ್ನು ಪಡೆಯೋಣ. ತಾವೆಲ್ಲರೂ ಯಾವುದೇ ಕಾರಣಕ್ಕೂ ಧೃತಿಗೆಡದೆ ಮುಂದಿನ ನಡೆಯ ಬಗ್ಗೆ ದೃಢ ನಿರ್ಧಾರವನ್ನು ಕೈಗೊಳ್ಳೋಣ ಹಾಗೂ ಮತ್ತೊಮ್ಮೆ ಚುನಾವಣೆಯನ್ನು ಎದುರಿಸಲು ಸಿದ್ಧರಿರೋಣ. ತಮ್ಮ ಸೇವಕ, ಬಿ.ಸಿ.ಪಾಟೀಲ್ ಎಂದು ವಾಟ್ಸ್ ಆ್ಯಪ್‍ನಲ್ಲಿ ಸಂದೇಶ ಕಳುಹಿಸಿದ್ದಾರೆ.

    ಇಂದು ಸ್ಪೀಕರ್ ರಮೇಶ್ ಕುಮಾರ್ ಅವರು, ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಕಾಗವಾಡದ ಶ್ರೀಮಂತ್ ಪಾಟೀಲ್, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡ ಎಲ್ಲ ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದಾರೆ.

    ಈ ಹಿಂದೆ ಅನರ್ಹಗೊಂಡ ಮೂವರು ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮುಟಳ್ಳಿ ಹಾಗೂ ಆರ್. ಶಂಕರ್ ಬೈ ಎಲೆಕ್ಷನ್ ಗೆ ನಿಲ್ಲುವಂತಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಖಡಕ್ಕಾಗಿ ತಿಳಿಸಿದ್ದಾರೆ.

  • ಸ್ಪೀಕರ್ ನಿರ್ಧಾರ ಕಾನೂನು ಬಾಹಿರ – ಬಿ.ವಿ.ಆಚಾರ್ಯ

    ಸ್ಪೀಕರ್ ನಿರ್ಧಾರ ಕಾನೂನು ಬಾಹಿರ – ಬಿ.ವಿ.ಆಚಾರ್ಯ

    ಬೆಂಗಳೂರು: 14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರ ಕಾನೂನು ಬಾಹಿರವಾಗಿದೆ ಎಂದು ಹಿರಿಯ ವಕೀಲ ಬಿ.ವಿ.ಆಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಹಿರಿಯ ವಕೀಲರು, ರಾಜೀನಾಮೆಯನ್ನು ಮಾತ್ರ ಅಂಗೀಕಾರ ಮಾಡಿ ಎಂದು ಸುಪ್ರೀಂಕೋರ್ಟ್ ಹೇಳಿತ್ತೇ ಹೊರತು ಅನರ್ಹತೆ ಬಗ್ಗೆ ತಿಳಿಸಿರಲಿಲ್ಲ. ಅಷ್ಟೇ ಅಲ್ಲದೆ ರಾಜೀನಾಮೆಯನ್ನು ಕೈಬಿಟ್ಟು ಅನರ್ಹತೆ ಗೊಳಿಸಿದ್ದಾರೆ. ಇಂತಹ ಪ್ರಕರಣಗಳಲ್ಲಿ ರಾಜೀನಾಮೆಯನ್ನು ಮೊದಲು ಅಂಗೀಕಾರ ಮಾಡಬೇಕು ಎಂದು ತಿಳಿಸಿದರು. ಇದನ್ನೂ ಓದಿ:  ಕಾಂಗ್ರೆಸ್ ನಾಯಕರೇ ನಮ್ಮನ್ನು ಪ್ರಚೋದಿಸಿ ರಾಜೀನಾಮೆ ಕೊಡಿಸಿದ್ದು: ಮುನಿರತ್ನ

    ಕಾನೂನಿನ ಪ್ರಕಾರ ಅನರ್ಹತೆಗೆ ಒಂದು ವಾರದ ಕಾಲಾವಕಾಶ ನೀಡಬೇಕಿತ್ತು. ಆದರೆ ಸ್ಪೀಕರ್ ಮೂರು ದಿನಗಳಲ್ಲಿ ದಿಢೀರನೆ ಅನರ್ಹತೆ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಅತೃಪ್ತ ಶಾಸಕರು ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ, ಆದೇಶವನ್ನು ತಡೆಹಿಡಿಯುವ ಅವಕಾಶವಿದೆ ಎಂದರು.

    ಶನಿವಾರ ಹಾಗೂ ಭಾನವಾರ ರಜೆ ಇದ್ದರೂ ಕಚೇರಿಯಲ್ಲಿ ಕುಳಿತು ತರಾತುರಿಯಲ್ಲಿ ಅನರ್ಹತೆ ಆದೇಶ ಹೊರಡಿಸಿದ್ದಾರೆ. ಅದೇ ಶಾಸಕರು ರಾಜೀನಾಮೆ ಸ್ವೀಕರಿಸುವಾಗ ರಜೆ ಇದೆ, ಖಾಸಗಿ ಕಾರ್ಯಕ್ರಮದ ಅಂತ ಹೇಳಿ ವಿಳಂಬ ನೀತಿ ಅನುಸರಿದರು. ಈ ಮೂಲಕ ಮೈತ್ರಿ ಸರ್ಕಾರಕ್ಕೆ ಅನುಕೂಲವಾಗುವಂತೆ ನಡೆದುಕೊಂಡರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಲ್ ಪಾಸಾಗಿಲ್ಲ ಅಂದ್ರೆ ಒಂದು ನಯಾ ಪೈಸೆ ಡ್ರಾ ಆಗಲ್ಲ: ಸ್ಪೀಕರ್ ಗರಂ

    ಸ್ಪೀಕರ್ ರಮೇಶ್ ಕುಮಾರ್ ಒಂದು ರೀತಿಯಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಶಾಸಕರ ಅನರ್ಹತೆಯಿಂದ ವಿಧಾನಸಭೆಯ ಸಂಖ್ಯಾಬಲ ಕಡಿಮೆಯಾಗಿದೆ. ಹೀಗಾಗಿ ಬಿಜೆಪಿಯವರು ಯಾರ ಸಹಾಯವಿಲ್ಲದೇ ವಿಶ್ವಾಸಮತ ಸಾಬೀತು ಮಾಡುತ್ತಾರೆ ಎಂದರು.

    ಶಾಸಕರನ್ನು 2023ರ ವರೆಗೆ ಅನರ್ಹತೆ ಮಾಡಲಾಗಿದೆ ಎಂದು ಸ್ಪೀಕರ್ ಹೇಳುತ್ತಾರೆ. ಇದು ಅಸಂವಿಧಾನಿಕವಾಗಿದೆ. ಕಾನೂನಿನ ಪ್ರಕಾರ ಅನರ್ಹಗೊಂಡ ಶಾಸಕ ಮುಂದಿನ ಉಪ ಚುನಾಮಣೆ ಇಲ್ಲವೇ, ಮುಖ್ಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು. ಸ್ಪೀಕರ್ ಅವರು ಶಾಸಕರನ್ನು ಹೆದರಿಸುವ ತಂತ್ರವನ್ನು ಹೂಡುತ್ತಾ ಬಂದಿದ್ದಾರೆ ಎನ್ನುವ ವಾದಕ್ಕೆ ಸಾಂದರ್ಭಿಕ ಸಾಕ್ಷಿ ಸಿಗುತ್ತದೆ. ಮೊನ್ನೆಯಷ್ಟೇ ಮೂವರು ಶಾಸಕರನ್ನು ಅನರ್ಹಗೊಳಿಸಿದ್ದರು. ಈ ಮೂಲಕ ಮೈತ್ರಿ ಪಕ್ಷಕ್ಕೆ ಬೆಂಬಲ ನೀಡುವಂತೆ ಬಿಸಿ ಮುಟ್ಟಿಸಿದ್ದರು ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಅವರ ತಂತ್ರ ವಿಫಲವಾಗಿದ್ದರಿಂದ ಇಂದು 14 ಜನರನ್ನೂ ಅನರ್ಹಗೊಳಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಯಾವ ಕಾನೂನಿನಡಿಯಲ್ಲಿ ಅನರ್ಹ ಮಾಡಿದ್ರಿ: ಶೋಭಾ ಕರಂದ್ಲಾಜೆ ಪ್ರಶ್ನೆ

    ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಅನರ್ಹಗೊಂಡ ಶಾಸಕರು ಹೈಕೋರ್ಟ್ ಇಲ್ಲವೇ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಬಹುದು. ಈ ಮೂಲಕ ಆದೇಶಕ್ಕೆ ತಡೆತಂದು ಮತ್ತೆ ಕಲಾಪದಲ್ಲಿ ಭಾಗವಹಿಸಬಹುದು. ರೆಬೆಲ್ ಶಾಸಕರು ವಿಪ್ ಉಲ್ಲಂಘನೆ ಮಾಡಿದ್ದಾರೆ ಎಂದು ಪ್ರಸ್ತಾಪಿಸಿದ್ದಾರೆ. ಆದರೆ ಸುಪ್ರೀಂಕೋರ್ಟ್ ಶಾಸಕರ ಮೇಲೆ ಒತ್ತಡ ಹಾಕುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರೂ ಕಾಂಗ್ರೆಸ್ ನಾಯಕರು ವಿಪ್ ಜಾರಿ ಮಾಡಿದ್ದಾರೆ. ಈ ಮೂಲಕ ಸ್ಪೀಕರ್ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಿದರು.

    ಅತೃಪ್ತ ಶಾಸಕರಿಗೆ ಬಿಜೆಪಿಯು ಸಚಿವ ಸ್ಥಾನ ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿರಿಯ ವಕೀಲರು, ಕೊಟ್ಟರೆ ಏನು ತಪ್ಪು? ಮಂತ್ರಿಗಿರಿ ನೀಡಿದರೆ ಪ್ರಳಯವಾಗಲ್ಲ ಬಿಡಿ. ಮಂತ್ರಿಗಿರಿಗಾಗಿಯೇ ಅವರು ರಾಜೀನಾಮೆ ನೀಡಿದ್ದರೆ ತಪ್ಪು. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ವಿಪಕ್ಷಕ್ಕೆ ಬೆಂಬಲ ನೀಡುವ ಉದ್ದೇಶದಿಂದ ರಾಜೀನಾಮೆ ನೀಡುವುದು ಸರಿ ಎಂದು ಅಭಿಪ್ರಾಯಪಟ್ಟರು.

  • ಸ್ಪೀಕರ್ ನಿರ್ಧಾರ ಸಂವಿಧಾನಕ್ಕೆ ಅಪಚಾರ – ಪಿ.ರಾಜೀವ್

    ಸ್ಪೀಕರ್ ನಿರ್ಧಾರ ಸಂವಿಧಾನಕ್ಕೆ ಅಪಚಾರ – ಪಿ.ರಾಜೀವ್

    ಬೆಂಗಳೂರು: ವಂಶಪಾರಂಪರ್ಯದ ರಾಜಕೀಯ ಪಕ್ಷದಲ್ಲಿ ಜನಪ್ರತಿನಿಧಿಗಳಿಗೆ ಸ್ವಾತಂತ್ರ್ಯವಿಲ್ಲ. ಅತೃಪ್ತ ಶಾಸಕರನ್ನು ಹೋಲ್ ಸೇಲ್ ಆಗಿ ಅನರ್ಹಗೊಳಿಸಿರೋದನ್ನ ನಾವು ಸ್ಪೀಕರ್ ಅವರಿಂದ ನಿರೀಕ್ಷಿಸಿರಲಿಲ್ಲ ಎಂದು ಬಿಜೆಪಿ ಶಾಸಕ ಪಿ. ರಾಜೀವ್ ಕಿಡಿಕಾರಿದ್ದಾರೆ.

    ಬಿಎಸ್‍ವೈ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅತೃಪ್ತ ಶಾಸಕರನ್ನ ಸ್ಪೀಕರ್ ರಮೇಶ್ ಕುಮಾರ್ ಹೋಲ್ ಸೇಲ್ ಆಗಿ ಅನರ್ಹ ಮಾಡಿರೋದನ್ನ ನಾವು ನಿರೀಕ್ಷೆ ಮಾಡಿರಲಿಲ್ಲ. ಇದು ಸಂವಿಧಾನಕ್ಕೆ ಮಾಡಿರೋ ಅಪಚಾರ. ಸ್ಪೀಕರ್ ಸುಪ್ರೀಂ ಆದೇಶವನ್ನ ಸಂಪೂರ್ಣವಾಗಿ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ:ಯಾವ ಕಾನೂನಿನಡಿಯಲ್ಲಿ ಅನರ್ಹ ಮಾಡಿದ್ರಿ: ಶೋಭಾ ಕರಂದ್ಲಾಜೆ ಪ್ರಶ್ನೆ

    ಪ್ರಜಾತಂತ್ರ ವ್ಯವಸ್ತೆಯಲ್ಲಿ ಸ್ಪೀಕರ್ ಹುದ್ದೆಯನ್ನ ಇನ್ನೊಬ್ಬರ ಅನುಕೂಲಕ್ಕೆ ಬಳಸಿಕೊಂಡ ದೊಡ್ಡ ಕಪ್ಪು ಚುಕ್ಕೆಯನ್ನ ರಮೇಶ್ ಕುಮಾರ್ ಅವರು ಹೊತ್ತುಕೊಳ್ಳಬೇಕಾಗಿದೆ. ಅತೃಪ್ತ ಶಾಸಕರ ರಾಜೀನಾಮೆಯ ಬಗ್ಗೆ ಇತ್ಯರ್ಥ ಪಡಿಸಿ, ಆ ವರದಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಸುಪ್ರೀಂ ಆದೇಶಿಸಿತ್ತೇ ವಿನಾಃ ಅನರ್ಹಗೊಳಿಸಿ ಎಂದಿರಲಿಲ್ಲ. ಕಾಂಗ್ರೆಸ್, ಜನತಾದಳ ಪಕ್ಷ ಕೆಲವೇ ಕೆಲವು ವ್ಯಕ್ತಿಗಳ ಕಪಿಮುಷ್ಟಿಯಲ್ಲಿದೆ. ಸ್ಪೀಕರ್ ತೀರ್ಪನ್ನು ಸುಪ್ರೀಂ ನಿರಾಕರಿಸಿ, ಈ ವಿಚಾರದಲ್ಲಿ ಅವರಿಗೆ ಎಚ್ಚರಿಕೆ ನೀಡುತ್ತೆ ಎಂದು ನಾನು ಭಾವಿಸಿದ್ದೇನೆ ಎಂದು ರಾಜೀವ್ ಸ್ಪೀಕರ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದರು.

    ವಂಶಪಾರಂಪರ್ಯದ ರಾಜಕೀಯ ಪಕ್ಷದಲ್ಲಿ ಆಯ್ಕೆ ಆಗುವ ಬೇರೆ ಜನಪ್ರತಿನಿಧಿಗಳಿಗೆ ಅವಕಾಶವಿಲ್ಲ, ಸ್ವಾತಂತ್ರ್ಯವಿಲ್ಲ. ಜನರಿಂದ ಆಯ್ಕೆಯಾದರೂ ಅವರ ಅಣತಿಗೆ ಕುಣಿಯುವಂತವರಿಗೆ ಕಾಲ ಎನ್ನುವುದು ಮತ್ತೆ ಸಾಬೀತಾಗಿದೆ. ಈ ತೀರ್ಪು ಸಂವಿಧಾನಕ್ಕೆ, ಕಾನೂನಿಗೆ ಮಾಡದ ಅಪಚಾರವಾಗಿದೆ ಎಂದು ಸ್ಪೀಕರ್ ಹಾಗೂ ಕೈ-ದಳದ ವಿರುದ್ಧ ವಾಗ್ದಾಳಿ ನಡೆಸಿದರು.