Tag: rebel candidate

  • ಕಣದಲ್ಲಿರುವ ಬಂಡಾಯ ವೀರರು ಯಾರು? ಹಿಂದೆ ಸರಿದವರು ಯಾರು?

    ಕಣದಲ್ಲಿರುವ ಬಂಡಾಯ ವೀರರು ಯಾರು? ಹಿಂದೆ ಸರಿದವರು ಯಾರು?

    ಬೆಂಗಳೂರು: ನಾಮಪತ್ರ (Nomination) ಹಿಂಪಡೆಯುವ ಅವಧಿ ಮುಗಿದಿದ್ದು ಕೊನೆಯ ದಿನ ಬಂಡಾಯ ಅಭ್ಯರ್ಥಿಗಳನ್ನು (Rebel Candidate) ಕಣದಿಂದ ಹಿಂದೆ ಸರಿಸಲು ಪ್ರಮುಖ ಪಕ್ಷಗಳು ಪ್ರಯತ್ನಿಸಿದ್ದವು. ಕೆಲವೆಡೆ ಬಂಡಾಯ ಶಮನ ಮಾಡುವುದರಲ್ಲಿ ಯಶಸ್ಸು ಕಂಡರೆ ಇನ್ನೂ ಕೆಲವಡೆ ಬಂಡಾಯ ಶಮನವಾಗಲಿಲ್ಲ. ಇದು ಮೂರು ಪಕ್ಷಗಳಿಗೆ ತಲೆ ಬಿಸಿ ಉಂಟು ಮಾಡಿದೆ.

    ಮಂಗಳೂರು ಉಳ್ಳಾಲದ  ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಾಲ ಇದ್ದಕ್ಕಿದ್ದಂತೆ ನಾಮಪತ್ರ ಹಿಂಪಡೆದಿದ್ದಾರೆ. ಒಟ್ಟು 502 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ಈ ಮಧ್ಯೆ, ಜೆಡಿಎಸ್ ಮುಖಂಡ ಬೋಜೇಗೌಡ, ತಮ್ಮ ಬೆಂಬಲಿಗರಿಗೆ ಕಾಂಗ್ರೆಸ್ ಪರ ಕೆಲಸ ಮಾಡುವಂತೆ ಕರೆ ನೀಡಿರೋ ದೃಶ್ಯ ವೈರಲ್ ಆಗಿದೆ.

    ಕಣದಲ್ಲಿರುವ `ಬಂಡಾಯ’ ವೀರರು
    ಮಾಡಾಳ್ ಮಲ್ಲಿಕಾರ್ಜುನ್ – ಚನ್ನಗಿರಿ – ಬಿಜೆಪಿ ಬಂಡಾಯ
    ಅರುಣ್‍ಕುಮಾರ್ ಪುತ್ತಿಲ – ಪುತ್ತೂರು – ಬಿಜೆಪಿ ಬಂಡಾಯ
    ಕೃಷ್ಣಯ್ಯ ಶೆಟ್ಟಿ – ಗಾಂಧಿನಗರ – ಬಿಜೆಪಿ ಬಂಡಾಯ
    ಗೂಳಿಹಟ್ಟಿ ಶೇಖರ್ – ಹೊಸದುರ್ಗ – ಬಿಜೆಪಿ ಬಂಡಾಯ
    ಅಖಂಡ ಶ್ರೀನಿವಾಸಮೂರ್ತಿ – ಪುಲಕೇಶಿನಗರ – ಕಾಂಗ್ರೆಸ್ ಬಂಡಾಯ
    ಸೌಭಾಗ್ಯ ಬಸವರಾಜನ್ – ಚಿತ್ರದುರ್ಗ – ಕಾಂಗ್ರೆಸ್ ಬಂಡಾಯ
    ವಿಜಯಾನಂದ – ಮಂಡ್ಯ – ಜೆಡಿಎಸ್ ಬಂಡಾಯ  ಇದನ್ನೂ ಓದಿ: Mood Of Karnataka ಚಾಪ್ಟರ್‌ 2 – ಕಾಂಗ್ರೆಸ್ಸಿಗಿಲ್ಲ ಬಹುಮತ, ಮೊದಲಿಗಿಂತ ಬಿಜೆಪಿ ಸ್ವಲ್ಪ ಸುಧಾರಣೆ


    ಮತ ಕಣದಿಂದ ಹಿಂದೆ ಸರಿದವರು
    ರಾಮಣ್ಣ ಲಮಾಣಿ – ಬಿಜೆಪಿ – ಶಿರಹಟ್ಟಿ
    ಮಹದೇವಪ್ಪ ಯಾದವಾಡ, ಬಿಜೆಪಿ – ರಾಮದುರ್ಗಾ
    ಶಾರದಾ ಶೆಟ್ಟಿ, ಕಾಂಗ್ರೆಸ್ – ಕುಮಟಾ (ರಾಜಕೀಯ ನಿವೃತ್ತಿ)
    ಬಸನಗೌಡ ಬಾದರ್ಲಿ, ಕಾಂಗ್ರೆಸ್- ಸಿಂಧನೂರು
    ಕೃಷ್ಣೇಗೌಡ, ಕಾಂಗ್ರೆಸ್ – ಅರಕಲಗೂಡು
    ಗಂಗಾಂಬಿಕೆ, ಕಾಂಗ್ರೆಸ್ – ಚಿಕ್ಕಪೇಟೆ
    ರಾಜೇಶ್ ಗೌಡ, ಬಿಜೆಪಿ – ಕುಣಿಗಲ್
    ಅಶೋಕ್ ಬಾಣಾವರ, ಜೆಡಿಎಸ್ – ಅರಸಿಕೆರೆ

  • ಮಂಡ್ಯದಲ್ಲಿ ಸುಮಲತಾಗೆ ಬಂಡಾಯದ ಬಿಸಿ

    ಮಂಡ್ಯದಲ್ಲಿ ಸುಮಲತಾಗೆ ಬಂಡಾಯದ ಬಿಸಿ

    ಮಂಡ್ಯ: ಬಿಜೆಪಿಯು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಹಾಕದೇ ಸುಮಲತಾ ಅವರಿಗೆ ಬೆಂಬಲ ಘೋಷಿಸಿದೆ. ಆದರೆ ಈಗ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಬಿ.ಮಂಜುನಾಥ್ ಮುಂದಾಗಿದ್ದಾರೆ.

    ಭಜರಂಗಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಅವರು ಮಂಡ್ಯ ಲೋಕಸಭಾ ಚುನಾವಣೆಗೆ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿರುವ ಕರಪತ್ರಗಳನ್ನು ಮುದ್ರಿಸಿದ್ದು, ನಾಮಪತ್ರ ಸಲ್ಲಿಸುವ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಬಿ.ಮಂಜುನಾಥ್ ಅವರ ಸ್ಪರ್ಧೆಯಿಂದಾಗಿ ಬಿಜೆಪಿ ಮತಗಳು ವಿಂಗಡನೆ ಆಗುವುದರಿಂದ ಸುಮಲತಾ ಅವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂಬ ಮಾತುಗಳು ಕೇಳ ಬರತೊಡಗಿವೆ. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ್ದ ಸುಮಲತಾ ಅವರು, ಬಿಜೆಪಿಯ ಬೆಂಬಲ ಕೇಳುತ್ತೇನೆ ಹಾಗೂ ರಾಜ್ಯ ನಾಯಕರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದರು. ಶನಿವಾರ ಸಂಜೆ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ನಾಯಕ ಜೆ.ಪಿ.ನಡ್ಡಾ, ಮಂಡ್ಯದಲ್ಲಿ ನಮ್ಮ ಪಕ್ಷದಿಂದ ಯಾವುದೇ ಅಭ್ಯರ್ಥಿ ಕಣಕ್ಕೆ ಇಳಿಯುತ್ತಿಲ್ಲ. ಪಕ್ಷೇತರ ಅಭ್ಯರ್ಥಿ ಸುಮಲತಾರಿಗೆ ನಾವು ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದರು.