Tag: reality show

  • ‘ನನ್ನಮ್ಮ ಸೂಪರ್ ಸ್ಟಾರ್’ ಯಶಸ್ಸಿನ ಗರಿಯನ್ನ ಮುಡಿಗೇರಿಸಿಕೊಂಡ ಬಿಜ್ಲಿ ಪಟಾಕಿ ವಂಶಿಕಾ – ಯಶಸ್ವಿನಿ

    ‘ನನ್ನಮ್ಮ ಸೂಪರ್ ಸ್ಟಾರ್’ ಯಶಸ್ಸಿನ ಗರಿಯನ್ನ ಮುಡಿಗೇರಿಸಿಕೊಂಡ ಬಿಜ್ಲಿ ಪಟಾಕಿ ವಂಶಿಕಾ – ಯಶಸ್ವಿನಿ

    ನ್ನಡದ ಜನಪ್ರಿಯ ರಿಯಾಲಿಟ ಶೋ ‘ನನ್ನಮ್ಮ ಸೂಪರ್ ಸ್ಟಾರ್’ಗೆ ಅದ್ಧೂರಿ ತೆರೆಬಿದ್ದಿದೆ. ನವೆಂಬರ್ 27 ರಂದು ಅದ್ಧೂರಿಯಾಗಿ ಪ್ರಾರಂಭವಾಗಿದ್ದ ‘ನನ್ನಮ್ಮ ಸೂಪರ್ ಸ್ಟಾರ್’ ನಾಲ್ಕು ತಿಂಗಳು ಪ್ರದರ್ಶನಗೊಂಡ ಬಳಿಕ ಭಾನುವಾರ ಗ್ರ್ಯಾಂಡ್ ಫಿನಾಲೆ ನಡೆದಿದೆ. ಆನಂದ್ ಹಾಗೂ ಯಶಸ್ವಿನಿ ದಂಪತಿ ಪುತ್ರಿ ವಂಶಿಕಾ ಅಂಜನಿ ಕಶ್ಯಪ್ ವಿಜೇತರಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಕಿರುತೆರೆ ಕಲಾವಿದೆ ಪುನೀತಾ ಹಾಗೂ ಮಗಳು ಆರ್ಯ ಪಾಲಿಗೆ ಹೋಗಿದೆ, ಮೂರನೇ ಸ್ಥಾನವನ್ನ ವಿಂಧ್ಯಾ – ರೋಹಿತ್ ಮುಡಿಗೇರಿಸಿಕೊಂಡಿದ್ದಾರೆ.

    ಹನ್ನೆರಡು ಅಮ್ಮಂದಿರು ಅವರ ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ರು. ಕನ್ನಡದ ಖಾಸಗಿ ವಾಹಿನಿಯ ಈ ವಿನೂತನ ರಿಯಾಲಿಟಿ ಶೋ ಕಳೆದ ನಾಲ್ಕು ತಿಂಗಳಿಂದ ಕರುನಾಡ ಅಮ್ಮ ಮಕ್ಕಳನ್ನ ರಂಜಿಸಿತ್ತು. ಇದನ್ನೂ ಓದಿ: 20ಕ್ಕೂ ಹೆಚ್ಚು ಕೆಜಿ ತೂಕದ ಕಾಸ್ಟ್ಯೂಮ್‌ ಹಾಕಿಕೊಂಡು ಶೂಟ್ ಮಾಡಿದ್ದು ಕಷ್ಟವಾಗಿತ್ತು ಎಂದ ಮುನ್ನಾಭಾಯಿ

    ಈ ಶೋಗೆ 12 ಅಮ್ಮ-ಮಕ್ಕಳ ಜೋಡಿ ಆಯ್ಕೆಯಾಗಿದ್ದು, ಕಿರುತೆರೆ ಲೋಕದಲ್ಲಿ ಮಿಂಚಿದ್ದ ಅಮ್ಮಂದಿರು ಹಾಗೂ ಅವರ ಪುಟಾಣಿ ಮಕ್ಕಳ ಟ್ಯಾಲೆಂಟ್ ಹಂಟಿಂಗ್ ಶೋ ಇದಾಗಿತ್ತು. ಮೊದಲ ಎಂಟ್ರಿಯಲ್ಲೇ ವಂಶಿಕಾ ಕರುನಾಡ ಜನಮನ ಗೆದ್ದುಬಿಟ್ಟಿದ್ರು. ಪಟಾ ಪಟಾ ಅಂತ ಮಾತನಾಡುವ ಪೋರಿ, ಗೊಂಬೆಯಂತೆ ಮುದ್ದಾಗಿ ಕುಣಿಯುವ ವಂಶಿಕ ತಂದೆಯಂತೆಯೇ ಮಾತಿನಲ್ಲೇ ಮೋಡಿ ಮಾಡಿದ ಬಾಲ ಪ್ರತಿಭೆ. ಇದೀಗ ಅಮ್ಮ ಯಶಸ್ವಿನಿ ಜೊತೆ ವಂಶಿಕಾ ಬಂಗಾರದ ನನ್ನಮ್ಮ ಸೂಪರ್ ಸ್ಟಾರ್ ಟ್ರೋಫಿ ಗೆದ್ದಿದ್ದಾಳೆ.

    ವಂಶಿಕಾಗೆ ಟಫ್ ಫೈಟ್ ಕೊಟ್ಟಿದ್ದು ಬೇಬಿ ಆರ್ಯ. ಅಮ್ಮ ಪುನೀತಾ ಜೊತೆ ಸೈಲೆಂಟಾಗೇ ಎಂಟ್ರಿ ಕೊಟ್ಟ ಆರ್ಯ ಕೊನೆಗೆ ಜಬರ್ದಸ್ತ್ ಮನರಂಜನೆ ಕೊಟ್ಟ ಪುಟಾಣಿ, ಇದೀಗ ಎರಡನೇ ಸ್ಥಾನದಲ್ಲಿ ಗೆದ್ದಿದ್ದಾಳೆ.

    ಮೂರನೇ ಸ್ಥಾನ ಮಾಸ್ ಬೇಬಿ ಎಂದೇ ಹೆಸರು ಪಡೆದುಕೊಂಡಿದ್ದ ರೋಹಿತ್ ಮುಡಿಗೇರಿದೆ. ಅಮ್ಮ ವಿಂಧ್ಯಾ ಜೊತೆ ಮಸ್ತ್ ಎಂಟರ್ಟೈನ್ಮೆಂಟ್ ಕೊಟ್ಟ ಈ ಪುಟಾಣಿ ಮೊದಲನೆ ಎಪಿಸೋಡ್‍ನಲ್ಲೇ ರಂಜಿಸಿ ಕನ್ನಡಿಗರ ಮನ ಗೆದ್ದಿದ್ದಳು. ಇದನ್ನೂ ಓದಿ: ದೃಢಸಂಕಲ್ಪ, ಜಾಣ್ಮೆ, ತಾಳ್ಮೆ ಇವು ಯಶಸ್ಸಿನ ಸೂತ್ರಗಳು: ಆನಂದ್ ಮಹೀಂದ್ರಾ

    ಅನುಪಮ ಗೌಡ ನಿರೂಪಣೆ, ತಾರಾ ಅನೂರಾಧ, ಸೃಜನ್ ಲೋಕೇಶ್ ಹಾಗೂ ಅನುಪ್ರಭಾಕರ್ ನಿರ್ಣಾಯಕರ ಸ್ಥಾನದಲ್ಲಿದ್ದು ಕಾರ್ಯಕ್ರಮವನ್ನು ಅಂದಗೊಳಿಸಿದ್ದರು. ಇದೀಗ ಕರುನಾಡ ಏಕೈಕ ಅಮ್ಮ ಮಕ್ಕಳ ಮಮತೆಯ ಶೋ ಸಕ್ಸಸ್‍ಫುಲ್ ಆಗಿ ತೆರೆಬಿದ್ದಿದೆ.

  • ಜೈಲಿನಲ್ಲಿರೋದು ವಾಸಿ ಅಂತಿದ್ದಾಳೆ ಪೂನಂ ಪಾಂಡೆ

    ಜೈಲಿನಲ್ಲಿರೋದು ವಾಸಿ ಅಂತಿದ್ದಾಳೆ ಪೂನಂ ಪಾಂಡೆ

    ಕಂಗನಾ ರಣಾವತ್ ನಡೆಸಿಕೊಡುತ್ತಿರುವ ರಿಯಾಲಿಟಿ ಶೋ ನಲ್ಲಿ ವಿವಾದಿತ ತಾರೆ ಪೂನಂ ಪಾಂಡೆ ಅವರದ್ದೇ ಸದ್ದು. ಇನ್ನೂ ಹಲವು ತಾರೆಯರು ಆ ಶೋನಲ್ಲಿ ಭಾಗಿಯಾಗಿದ್ದರೂ,  ಹೆಚ್ಚು ಕಂಟೆಂಟ್ ಕೊಡುತ್ತಿರುವ ಪೂನಂ ಮೇಲೆಯೇ ಹೆಚ್ಚು ಕ್ಯಾಮೆರಾಗಳು ಫೋಕಸ್ ಆಗುತ್ತವೆ. ಇದನ್ನೂ ಓದಿ : ಶಿವಣ್ಣ ನಟನೆಯ ‘ವೇದ’ ಚಿತ್ರದಲ್ಲಿ ರಾಘು ಶಿವಮೊಗ್ಗ : ನಟನೆಯಲ್ಲೂ ಬ್ಯುಸಿಯಾದ ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ

    ಕಾರಣ, ತನ್ನ ನಿಜ ಜೀವನದಲ್ಲಿ ಆಗಿರುವಂತಹ ಒಂದೊಂದೇ ಕಹಿ ಘಟನೆಗಳನ್ನು ಅವರು ಖುಲ್ಲಂ ಖುಲ್ಲಾ ಹೇಳುತ್ತಾ ಸಾಗುತ್ತಿದ್ದಾರೆ. ಪೂನಂ ಮಾತಿಗೆ ಸ್ವತಃ ಕಂಗನಾ ಬೆಚ್ಚಿಬಿದ್ದಿದ್ದಾರೆ.  ಇದನ್ನೂ ಓದಿ : ಇನ್ಮುಂದೆ ಬಾಲಿವುಡ್ ನಿರ್ದೇಶಕರಿಗೆ ಸಿಗಲ್ಲ ಆಲಿಯಾ ಭಟ್

    ಮೊನ್ನೆ ಮೊನ್ನೆಯಷ್ಟೇ ತಮ್ಮ ಮಾಜಿ ಪತಿ ಸ್ಯಾಮ್ ಬಾಂಬೆ ಬಗ್ಗೆ ಸಲ್ಲದ ಆರೋಪಗಳನ್ನು ಮಾಡಿದ್ದರು. ದೈಹಿಕವಾಗಿ ಅವನು ಯಾವ ರೀತಿಯಲ್ಲಿ ಹಿಂಸಿಸುತ್ತಿದ್ದ ಎನ್ನುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ಅವನ ವಿರುದ್ಧ ಕಾನೂನು ಕ್ರಮಕ್ಕೂ ಮುಂದಾಗಿದ್ದ ವಿಷಯಗಳನ್ನು ಹಂಚಿಕೊಂಡಿದ್ದರು. ಈಗ ಮತ್ತೆ ಅದೇ ಸ್ಯಾಮ್ ವಿರುದ್ಧ ಮಾತನಾಡಿದ್ದಾರೆ. ಅವನ ಜೊತೆ ಬದುಕುವುದಕ್ಕಿಂತ ಜೈಲಿನಲ್ಲಿ ಇರುವುದು ಎಷ್ಟೇ ವಾಸಿ ಎಂದು ನೋವು ಹಂಚಿಕೊಂಡಿದ್ದಾರೆ.  ಇದನ್ನೂ ಓದಿ : ರಾಧಿಕಾ ಪಂಡಿತ್ ಬರ್ತಡೇ ಸೆಲೆಬ್ರೆಷನ್: ಫೋಟೋ ಗ್ಯಾಲರಿ

    ಕಂಗನಾ ರಣಾವತ್ ನಡೆಸಿಕೊಡುತ್ತಿರುವ ಶೋ ಜೈಲಿನ ಮಾದರಿಯದ್ದು. ಜೈಲಿನ ವಾಸದಂತೆಯೇ ಭಾಸವಾಗುವಂತಹ ಕಾನ್ಸೆಪ್ಟ್ ಅದು ಹೊಂದಿದೆ. ಹಾಗಾಗಿ ಪೂನಂ ಈ ಜೈಲೇ ಎಷ್ಟು ನೆಮ್ಮದಿ ಕೊಡುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಬಾಲಯ್ಯನ ಕ್ಯಾಂಪ್ ನಲ್ಲಿ ಕಾಣಿಸಿಕೊಂಡ ದುನಿಯಾ ವಿಜಯ್

    ಮಾಜಿ ಪತಿಯೊಂದಿಗೆ ನಾಲ್ಕು ವರ್ಷ ರಿಲೇಶನ್ ಶಿಪ್ ನಲ್ಲಿದ್ದ ವಿಷಯವನ್ನೂ ಹೇಳಿಕೊಂಡಿರುವ ಪೂನಂ, ಅವು ನರಕಯಾತನೆಯ ದಿನಗಳಾಗಿದ್ದವು ಎಂದಿದ್ದಾರೆ. ಪೂನಂ ಮಲಗುವ ಕೋಣೆಗೆ ಬೀಗ ಹಾಕಿಕೊಂಡು ಸ್ಯಾಮ್ ಹೋಗುತ್ತಿದ್ದ ಎಂದು, ತಮ್ಮನ್ನು ಅನುಮಾನದಿಂದಲೇ ಅವನು ನೋಡುತ್ತಿದ್ದ ಎಂದೂ ಶೋ ನಲ್ಲಿ ಹೇಳಿಕೊಂಡಿದ್ದಾರೆ ಪೂನಂ.

  • ಕೆಲಸಕ್ಕಾಗಿ ನನಗೆ ಪ್ರಭಾಸ್‍ರನ್ನು ಬಿಡಲು ಸಾಧ್ಯವಿಲ್ಲ: ಅನುಷ್ಕಾ ಶೆಟ್ಟಿ

    ಕೆಲಸಕ್ಕಾಗಿ ನನಗೆ ಪ್ರಭಾಸ್‍ರನ್ನು ಬಿಡಲು ಸಾಧ್ಯವಿಲ್ಲ: ಅನುಷ್ಕಾ ಶೆಟ್ಟಿ

    ಹೈದರಾಬಾದ್: ಬಾಹುಬಲಿ ಬೆಡಗಿ, ನಟಿ ಅನುಷ್ಕಾ ಶೆಟ್ಟಿ ಕೆಲಸಕ್ಕಾಗಿ ನನಗೆ ಪ್ರಭಾಸ್ ಅವರನ್ನು ನಾನು ಬಿಡಲು ಸಾಧ್ಯವಿಲ್ಲ ಎಂಬ ಹೇಳಿಕೆಯೊಂದನ್ನು ನೀಡಿದ್ದಾರೆ.

    ಅನುಷ್ಕಾ ತಮ್ಮ ಮುಂಬರುವ ‘ನಿಶಬ್ದಂ’ ಚಿತ್ರದ ಪ್ರಮೋಶನ್‍ಗಾಗಿ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಅನುಷ್ಕಾ, “ಕೆಲಸಕ್ಕಾಗಿ ನನಗೆ ಪ್ರಭಾಸ್ ಅವರ ಸ್ನೇಹವನ್ನು ಬಿಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈ ಹಿಂದೆ ಸಂದರ್ಶನವೊಂದರಲ್ಲಿ ಅನುಷ್ಕಾ, “ಕಳೆದ 15 ವರ್ಷಗಳಿಂದ ನನಗೆ ಪ್ರಭಾಸ್ ಗೊತ್ತು. ಪ್ರಭಾಸ್ ನನ್ನ 3 ಎಎಂ ಫ್ರೆಂಡ್. ನಮ್ಮಿಬ್ಬರ ನಡುವೆ ಅದ್ಭುತವಾದ ಗೆಳತನವಿದೆ. ನಮ್ಮಿಬ್ಬರ ಬಗ್ಗೆ ಸಾಕಷ್ಟು ಗಾಸಿಪ್‍ಗಳು ಹರಿದಾಡುತ್ತಿರುತ್ತೆ. ನಮ್ಮಿಬ್ಬರಿಗೂ ಮದುವೆ ಆಗಿಲ್ಲ ಎಂದು ನಮ್ಮ ಬಗ್ಗೆ ಗಾಸಿಪ್‍ಗಳು ಹರಿದಾಡುತ್ತಲೇ ಇರುತ್ತೆ. ನಮ್ಮ ಆನ್‍ಸ್ಕ್ರೀನ್ ಕೆಮಿಸ್ಟ್ರೀ ತುಂಬಾ ಚನ್ನಾಗಿದೆ, ಅದಕ್ಕೆ ಹೀಗೆ ಕೆಲ ಗಾಸಿಪ್‍ಗಳು ಮಾಡಲಾಗುತ್ತೆ. ನಾವಿಬ್ಬರು ಒಳ್ಳೆಯ ಸ್ನೇಹಿತರು. ಇಬ್ಬರೂ ಒಂದೇ ತರಹದ ವ್ಯಕ್ತಿತ್ವ ಹೊಂದಿದ್ದೇವೆ, ನಮ್ಮ ಭಾವನೆಗಳನ್ನು ನಾವು ಮುಚ್ಚಿಡುವುದಿಲ್ಲ” ಎಂದು ಹೇಳಿದ್ದರು.

    ಅನುಷ್ಕಾ ಶೆಟ್ಟಿ `ನಿಶಬ್ದಂ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಸದ್ಯದಲ್ಲೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಹೇಮಂತ್ ಮಧುಕರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಈಗಾಗಲೆ ಟೀಸರ್ ಮತ್ತು ಪೋಸ್ಟರ್‍ಗಳ ಮೂಲಕ ಸಿನಿಮಾ ಬಹಳಷ್ಟು ನಿರೀಕ್ಷೆ ಹೆಚ್ಚಿಸಿದೆ. ಸ್ವೀಟಿ ಹೊಸ ಚಿತ್ರದಲ್ಲಿ ಹೇಗೆ ಮೋಡಿ ಮಾಡಲಿದ್ದಾರೆ ಎಂದು ನೋಡಲು ಅಭಿಮಾನಿಗಳು ಕಾತುರದಿಂದ ಕಾದ ಕುಳಿತಿದ್ದಾರೆ.

    ಇತ್ತ ಪ್ರಭಾಸ್ ‘ಓ ಡಿಯರ್’ ಎಂಬ ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸುತ್ತಿದ್ದು, ಅವರಿಗೆ ನಾಯಕಿಯಾಗಿ ನಟಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಈ ಚಿತ್ರವನ್ನು ರಾಧಾಕೃಷ್ಣ ಕುಮಾರ್ ನಿರ್ದೇಶಿಸುತ್ತಿದ್ದು, ಯುಗಾದಿ ಹಬ್ಬಕ್ಕೆ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗುತ್ತೆ ಎಂದು ಹೇಳಲಾಗುತ್ತಿದೆ.

  • ಬಿಗ್‍ಬಾಸ್ ವಿಜೇತರಾಗಲು ಜನ ಇಷ್ಟ ಪಡೋದು ಮುಖ್ಯವಲ್ಲ, ವೋಟ್ ಮುಖ್ಯ: ವಿಜಯರಾಘವೇಂದ್ರ

    ಬಿಗ್‍ಬಾಸ್ ವಿಜೇತರಾಗಲು ಜನ ಇಷ್ಟ ಪಡೋದು ಮುಖ್ಯವಲ್ಲ, ವೋಟ್ ಮುಖ್ಯ: ವಿಜಯರಾಘವೇಂದ್ರ

    ಬೆಳಗಾವಿ: ಬಿಗ್‍ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯನ್ನು ಜನರು ಇಷ್ಟ ಪಡುವುದು ಮುಖ್ಯವಾಗಲ್ಲ. ವೋಟ್ ಮಾಡುವುದು ಮುಖ್ಯವಾಗುತ್ತದೆ ಎಂದು ಕನ್ನಡ ಚಲನಚಿತ್ರ ನಟ, ಬಿಗ್‍ಬಾಸ್ ಕನ್ನಡ ಮೊದಲ ಆವೃತ್ತಿಯ ವಿಜೇತ ವಿಜಯರಾಘವೇಂದ್ರ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಂಗಳವಾರ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಜನರು ಚರ್ಚೆ ನಡೆಸುವ ಹಾಗೆ ವೋಟ್ ಗಣನೆಗೆ ಬರುವುದಿಲ್ಲ ಎಂದರೆ ಅದು ತಪ್ಪಾಗುತ್ತದೆ. ಹಾಗಾದರೆ ನ್ಯಾಯಾಲಯ ಆ ಕಾರ್ಯಕ್ರಮ ನಡೆಸುವ ವಾಹಿನಿಗೆ ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತದೆ. ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುವುದು ಸರಿಯಲ್ಲ ಎಂದರು.

    ಯಾರೋ ಒಬ್ಬರು ಹೇಳಿದರು ಎಂದು ರಿಯಾಲಿಟಿ ಶೋಗಳಲ್ಲಿ ಅವರು ಗೆಲ್ಲಬೇಕಿತ್ತು. ಇವರು ಗೆಲ್ಲಬೇಕಿತ್ತು ಎನ್ನುವ ಮೊದಲು ವೋಟ್ ಮಾಡಿದ್ದೀರಾ ಎನ್ನುವುದು ಮುಖ್ಯವಾಗುತ್ತದೆ. ನಾನು ಆ ರಿಯಾಲಿಟಿ ಶೋನಲ್ಲಿ ಇದ್ದ ಕಾರಣ ಇದನ್ನು ಹೇಳುತ್ತಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುವ ಹಾಗೆ ಯಾವುದೂ ಆಗುವುದಿಲ್ಲ ಎಂದು ಹೇಳಿದರು.

    ಮಹದಾಯಿ ಸಮಸ್ಯೆ ಬಂದಾಗ ಕನ್ನಡ ಚಿತ್ರೋದ್ಯಮ ತಂಡ ಒಗ್ಗಟ್ಟಾಗಿ ಬಂದು ಹೋರಾಟ ಮಾಡಿದ್ದೇವೆ. ಚಿತ್ರ ಕಲಾವಿದರು ಕಾವೇರಿಗೆ ನೀಡಿದ ಪ್ರಾಸಸ್ತ್ಯ ಮಹದಾಯಿಗೂ ನೀಡಿದ್ದೇವೆ. ಇದರಲ್ಲಿ ಸಂದೇಹವೇ ಇಲ್ಲ. ಕೇವಲ ಚಿತ್ರೋದ್ಯಮ ತಂಡದವರು ಮಾತ್ರವಲ್ಲ. ಉತ್ತರ ಕರ್ನಾಟಕದ ಸಮಸ್ಯೆ ಬಂದಾಗ ಎಲ್ಲರೂ ಬಂದಿದ್ದಾರೆ. ಹಲವಾರು ಬಾರಿ ಈ ಭಾಗದ ವಿವಿಧ ಕಾರ್ಯಕ್ರಮಗಳಿಗೆ ಸ್ವತಃ ನಾನು ಬಂದಿದ್ದೇವೆ. ಮಹದಾಯಿ ಹೋರಾಟದಲ್ಲಿ ಇಡೀ ಚಿತ್ರೋದ್ಯಮವೇ ಬಂದಿದೆ. ಉತ್ತರ ಕರ್ನಾಟಕದ ಪ್ರವಾಹದ ಸಂದರ್ಭದಲ್ಲಿ ಎಲ್ಲರೂ ಸೇರಿಕೊಂಡು ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ತಿಳಿಸಿದರು.

  • ಪೊಲೀಸ್ ಡ್ರೆಸ್ ಹಾಕಿದ್ರೂ ಒದೆ ತಿಂದ ಕುರಿ ಪ್ರತಾಪ್ – ಮನೆಮಂದಿ ಗುಟ್ಟನ್ನು ಬಯಲು ಮಾಡಿದ ಕಿಚ್ಚ

    ಪೊಲೀಸ್ ಡ್ರೆಸ್ ಹಾಕಿದ್ರೂ ಒದೆ ತಿಂದ ಕುರಿ ಪ್ರತಾಪ್ – ಮನೆಮಂದಿ ಗುಟ್ಟನ್ನು ಬಯಲು ಮಾಡಿದ ಕಿಚ್ಚ

    ಬೆಂಗಳೂರು: ರಿಯಾಲಿಟಿ ಶೋ ಬಿಗ್‍ಬಾಸ್ ಶುರುವಾಗಿ ಒಂದು ವಾರ ಕಳೆದಿದೆ. ಹೀಗಾಗಿ ಕಿಚ್ಚ ಸುದೀಪ್ ಮೊದಲ ಬಿಗ್‍ಬಾಸ್ ಪಂಚಾಯ್ತಿ ಕಟ್ಟೆ ನಡೆಸಿದ್ದಾರೆ. ಇಲ್ಲಿ 18 ಸ್ಪರ್ಧಿಗಳು ಒಬ್ಬರ ಬಗ್ಗೆ ಮತ್ತೊಬ್ಬರು ತಿಳಿದುಕೊಳ್ಳುವುದು ತುಂಬಾ ಇದೆ ಅನ್ನೋದನ್ನ ಕಿಚ್ಚ ಸುದೀಪ್ ತಿಳಿಸಿದ್ದಾರೆ.

    18 ಸ್ಪರ್ಧಿಗಳು ಬಿಗ್ ಮನೆಗೆ ಎಂಟ್ರಿ ಕೊಡುವಾಗ ಪ್ರತಿಯೊಬ್ಬರಿಗೂ ಒಂದೊಂದು ಲಕೋಟೆಯನ್ನು ಕೊಟ್ಟು ಕಳುಹಿಸಲಾಗಿತ್ತು. ಅದರಲ್ಲಿ ಸ್ಪರ್ಧಿಗಳ ಗುಟ್ಟನ್ನು ಬರೆಯಲಾಗಿತ್ತು. ಆ ಗುಟ್ಟು ಯಾರದ್ದೆಂದು ಲಕೋಟೆ ಬಂದಿದ್ದ ಸ್ಪರ್ಧಿ ಕಂಡು ಹಿಡಿಯಬೇಕಿತ್ತು. ಈಗ ಈ ಗುಟ್ಟುಗಳನ್ನು ಮೊದಲ ಬಿಗ್‍ಬಾಸ್ ಪಂಚಾಯ್ತಿ ಕಟ್ಟೇಲಿ ಸ್ಪರ್ಧಿಗಳ ಗುಟ್ಟನ್ನು ಕಿಚ್ಚ ಸುದೀಪ್ ರಿವೀಲ್ ಮಾಡಿದ್ದಾರೆ.

    ಬಿಗ್‍ಬಾಸ್ ಸ್ಟರ್ಧಿ ಸುಜಾತ ಅವರಿಗೆ ‘ಪೊಲೀಸ್ ಡ್ರೆಸ್ ಹಾಕಿದ್ರೂ ಒದೆ ತಿಂದವರು’ ಎಂಬ ಗುಟ್ಟು ಬಂದಿತ್ತು. ಈ ಗುಟ್ಟು ಹರೀಶ್ ರಾಜ್ ಅವರದ್ದು ಎಂದು ಬರೆದಿದ್ದರು. ಆದರೆ ಆ ಗುಟ್ಟು ಕುರಿ ಪ್ರತಾಪ್ ಅವರದ್ದಾಗಿತ್ತು. ಹೌದು ಒಂದು ದಿನ ಕುರಿಗಳು ಸಾರ್ ಕುರಿಗಳು ಕಾಮಿಡಿ ಮಾಡುವಾಗ ಪ್ರತಾಪ್ ಪೊಲೀಸ್ ಡ್ರೆಸ್ ಹಾಕಿ ಒಬ್ಬರನ್ನು ಬಕ್ರಾ ಮಾಡಲು ಮುಂದಾಗಿದ್ದರು. ಕಾರ್ಯಕ್ರಮ ಮುಗಿದ ಮೇಲೆ ಸುಮ್ಮನೆ ತಮಾಷೆಗೆ ಮಾಡಿದ್ವಿ ಎಂದು ಹೇಳಿದ್ದಾರೆ. ತಕ್ಷಣ ಅಲ್ಲಿದ್ದ ಜನರು ಕುರಿ ಪ್ರತಾಪ್ ಅವರನ್ನ ಹಿಗ್ಗಾಮುಗ್ಗ ಥಳಿಸಿದ್ದಾರೆ.

    ವಾಸುಕಿ ಅವರಿಗೆ ‘ಇನ್ನೂ ಸ್ವಲ್ಪ ದಿನ ಹಾರಾಡಿದ್ರೆ ಪೈಲಟ್ ಆಗ್ತಿದ್ರು’ ಎಂಬ ಗುಟ್ಟು ಬಂದಿತ್ತು. ಅದಕ್ಕೆ ಅವರು ಗುರುಲಿಂಗ ಸ್ವಾಮೀಜಿ ಎಂದು ಬರೆದಿದ್ದರು. ಆದರೆ ಆ ಗುಟ್ಟು ಜೈ ಜಗದೀಶ್ ಅವರದ್ದಾಗಿತ್ತು. ಜೈ ಜಗದೀಶ್ ಅವರು ಸುಮಾರು ಮೂರು ತಿಂಗಳು ಪೈಲಟ್ ತರಬೇತಿ ಪಡೆದುಕೊಂಡಿದ್ದರು. ಆದರೆ ಇನ್ನೇನು ಪೈಲಟ್ ಆಗಬೇಕು ಎಂದುಕೊಂಡಾಗ ಸಿದ್ದಲಿಂಗ ಅವರ ನಿರ್ದೇಶನದ ‘ಬಿಳಿಗಿರಿಯ ಬಣ’ ಸಿನಿಮಾದ ಸಿನಿಮಾ ಆಫರ್ ಬಂದಿತ್ತು. ಆಗ ಪುಟ್ಟಣ್ಣ ಕಣಗಾಲ್ ಅವರ ಸಲಹೆ ಮೇರೆಗೆ ಪೈಲಟ್ ಕನಸು ಬಿಟ್ಟು ಚಿತ್ರ ತಂಡ ಸೇರಿಕೊಂಡರು.

    ದುನಿಯಾ ರಶ್ಮಿ ಅವರಿಗೆ ‘ಮೈಸೂರು ಮಹಾರಾಣಿ ತ್ರಿಷಿಕಾ ಕುಮಾರಿಗೆ ಮಾರ್ಚಿಂಗ್ ಡ್ರಮ್ಸ್ ಟ್ರೈನಿಂಗ್ ಕೊಟ್ಟವರು’ ಎಂಬ ಪ್ರಶ್ನೆ ಬಂದಿತ್ತು. ಅದಕ್ಕೆ ಸರಿಯಾದ ಉತ್ತರ ಚೈತ್ರಾ ವಾಸುದೇವನ್. ಚೈತ್ರಾ ವಾಸುದೇವನ್ ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಓದುತ್ತಿದ್ದಾಗ ತ್ರಿಷಿಕಾ ಕುಮಾರಿ ಅವರು ಕೂಡ ಅಲ್ಲಿಯೇ ಓದುತ್ತಿದ್ದರು. ಆಗ ಚೈತ್ರಾ ವಾಸುದೇವನ್ ಮಹಾರಾಣಿ ಅವರಿಗೆ ಮಾರ್ಚಿಂಗ್ ಡ್ರಮ್ಸ್ ಟ್ರೈನಿಂಗ್ ಕಲಿಸಿದ್ದರು.

    ಚೈತ್ರಾ ಕೊಟ್ಟೂರು ಎಸ್.ಎಸ್.ಎಲ್.ಸಿಯಲ್ಲಿ ಕನ್ನಡ ಭಾಷೆಯಲ್ಲಿ 125ಕ್ಕೆ 123 ಅಂಕ ಪಡೆದಿದ್ದರು. ವಾಸುಕಿ ವೈಭವ್ ಅವರು, ನಾಟಕ ಮುಗಿಸಿ ಮನೆಗೆ ಬಂದು ರಾತ್ರಿಯಲ್ಲ ಓದಿ ಬೆಳಗ್ಗೆ ಪರೀಕ್ಷೆ ಬರೆಯೋಕೆ ಬಸ್ಸಿನಲ್ಲಿ ಹೋಗಿದ್ದರು. ಆದರೆ ಬಸ್ಸಿನಲ್ಲಿ ನಿದ್ದೆ ಮಾಡಿದ್ದರು. ಬಳಿಕ ಶಿಕ್ಷಕರಿಗೆ ಮನವಿ ಮಾಡಿಕೊಂಡು ಪರೀಕ್ಷೆ ಬರೆದಿದ್ದರು. ಸುಜಾತಾ ಅವರು ಕಿರಿಕ್ ಮಾಡಿದ್ದ ಆಟೋ ಡ್ರೈವರ್ ಗೆ ಪಂಚ್ ಕೊಟ್ಟಿದ್ದರು.

    ಚಂದನ್ ಆಚಾರ್ಯ, ಹೋಟೆಲ್ ನಲ್ಲಿ ಕೆಲಸ ಮಾಡುವಾಗ ಗೆಳೆಯರು ಬಂದಿದ್ದಕ್ಕೆ ಮುಜುಗರ ಪಟ್ಟುಕೊಂಡಿದ್ದರು. ರಾಜು ತಾಳಿಕೋಟೆ ಅವರನ್ನ ಅವರ ಅಜ್ಜಿ ಹುಟ್ಟಿದಾಗಿನಿಂದ ಅಪಶಕುನದ ಮೊಟ್ಟೆ ಎಂದು ಕರೆಯುತ್ತಿದ್ದರು. ಹರೀಶ್ ರಾಜ್ ಶ್ರೀ ಸತ್ಯನಾರಾಯಣ ಸಿನಿಮಾದಲ್ಲಿ ಹರೀಶ್ ರಾಜ್ 16 ಪಾತ್ರಗಳನ್ನು ಒಬ್ಬರೇ ನಿರ್ವಹಿಸಿದ್ದರು ಎಂಬ ಗುಟ್ಟುಗಳನ್ನು ಕಿಚ್ಚ ರಿವಿಲ್ ಮಾಡಿದರು.

  • ಸನ್ನಿ ಲಿಯೋನ್‍ಗೆ ಕಿರುಕುಳ

    ಸನ್ನಿ ಲಿಯೋನ್‍ಗೆ ಕಿರುಕುಳ

    ಮುಂಬೈ: ಬಾಲಿವುಡ್ ಮಾದಕ ಚೆಲುವೆ ಸನ್ನಿ ಲಿಯೋನ್ ಗೆ ನಟನೋರ್ವ ಕಿರುಕುಳ ನೀಡಿರುವ ಹಳೆಯ ಸುದ್ದಿಯೊಂದು ಮತ್ತೊಮ್ಮೆ ಸದ್ದು ಮಾಡುತ್ತಿದೆ.

    ಹೌದು, 2015ರಲ್ಲಿ ನಡೆದ ಪ್ರಕರಣವೊಂದು ಇಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಟ ಕಂ ಮಾಡೆಲಿಂಗ್ ಪಾರಸ್ ಛಾಬ್ರಾ ವಿರುದ್ಧ ಇಂತಹ ಆರೋಪವೊಂದು ಕೇಳಿ ಬಂದಿತ್ತು. ಈಗ ಪಾರಸ್ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್‍ಬಾಸ್ ರಿಯಾಲಿಟಿ ಶೋನ ಸ್ಪರ್ಧಿಯಾಗಿದ್ದಾರೆ. ಸನ್ನಿ ಲಿಯೋನ್ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಇದೀಗ ಸನ್ನಿಗೆ ಕಿರುಕುಳ ನೀಡಿದ ಆರೋಪ ಹೊತ್ತಿರುವ ಪಾರಸ್ ಸಹ ಬಿಗ್ ಮನೆಯಲ್ಲಿದ್ದು, ಲವ್ವರ್ ಬಾಯ್ ಆಗಿದ್ದಾರೆ. ಇದನ್ನೂ ಓದಿ: ನಮ್ಮ ದಿನದ ಬೆಳಕು ನೀನು: ಸನ್ನಿ ಲಿಯೋನ್

    ಈ ಹಿಂದೆ ಪಾರಸ್ ಹೆಸರು ಹಲವು ನಟಿಯರೊಂದಿಗೆ ತಳುಕು ಹಾಕಿಕೊಂಡಿತ್ತು. ಕಿರುತೆರೆ ಮತ್ತು ಫ್ಯಾಶನ್ ಲೋಕದಲ್ಲಿ ಗುರುತಿಸಿಕೊಂಡಿರುವ 29 ವರ್ಷದ ಪಾರಸ್ ಒಂದಿಲ್ಲೊಂದು ಕಾರಣಗಳಿಗೆ ಸುದ್ದಿಯಾಗುತ್ತಾ ಇರ್ತಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲೂ ಸಹ ಸ್ಪರ್ಧಿಗಳಾದ ಶಹನಾಜ್ ಮತ್ತು ಗಿಲ್ ಜೊತೆ ಪಾರಸ್ ತಳುಕು ಹಾಕಿಕೊಳ್ಳುತ್ತಿದೆ. ಮನೆಯಲ್ಲಿ ಇಬ್ಬರೊಂದಿಗೆ ಹೆಚ್ಚು ಒಡನಾಟ ಹೊಂದಿರುವ ಪಾರಸ್ ಲವರ್ ಬಾಯ್ ಇಮೇಜ್ ಹೊಂದಿದ್ದಾರೆ. ಇದನ್ನೂ ಓದಿ: ಅಭಿಮಾನಿ ಬಳಿ ಕ್ಷಮೆ ಕೇಳಿದ ಸನ್ನಿ ಲಿಯೋನ್

    https://www.instagram.com/p/B1txxoEhpJs/

    2015ರಲ್ಲಿ ನಡೆದಿದ್ದೇನು?
    ಸನ್ನಿ ಲಿಯೋನ್ ಖಾಸಗಿ ವಾಹಿನಿಯ ರಿಯಾಲಿಟಿ ಶೋನ ನಿರೂಪಕಿಯಾಗಿದ್ದರು. ಈ ರಿಯಾಲಿಟಿ ಶೋನಲ್ಲಿ ಪಾರಸ್ ಸಹ ಓರ್ವ ಸ್ಪರ್ಧಿಯಾಗಿದ್ದರು. ಶೋ ಬಿಡುವಿನ ವೇಳೆ ಸನ್ನಿ ಲಿಯೋನ್ ಅವರನ್ನು ಇಂಪ್ರೆಸ್ ಮಾಡಲು ಪಾರಸ್ ಪ್ರಯತ್ನಿಸುತ್ತಿದ್ದರು. ಪದೇ ಸನ್ನಿ ಲಿಯೋನ್ ಹತ್ತಿರ ಹೋಗೋದು ಕೆಟ್ಟದಾಗಿ ಸ್ಪರ್ಶಿಸುತ್ತಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವು ಎಂದು ವರದಿಯಾಗಿದೆ. ಇದನ್ನೂ ಓದಿ:  ‘ನಾನು ಸನ್ನಿ ಲಿಯೋನ್ ಅಲ್ಲ, ಪ್ಲೀಸ್ ಕಾಲ್ ಮಾಡ್ಬೇಡಿ’

    ಪಾರಸ್ ಅಸಹಜ ವರ್ತನೆಯನ್ನು ಅರಿತ ಸನ್ನಿ ಲಿಯೋನ್ ಕಾರ್ಯಕ್ರಮದ ಆಯೋಜಕರಿಗೂ ಈ ಸಂಬಂಧ ದೂರು ನೀಡಿದ್ದರಂತೆ. ಕೊನೆಗೆ ಶೂಟಿಂಗ್ ಸೆಟ್ ಗೆ ಸನ್ನಿ ಪತಿ ಡೇನಿಯಲ್ ವೇಬರ್ ಅವರನ್ನು ಕರೆದುಕೊಂಡು ಆರಂಭಿಸಿದ್ದಾರೆ. ಕೊನೆಗೆ ಕಾರ್ಯಕ್ರಮದ ಆಯೋಜಕರು ಪಾರಸ್ ಶೋನಿಂದ ಕೈಬಿಡಲು ನಿರ್ಧರಿಸಿದ ಬಳಿಕವೇ ಸನ್ನಿ ಲಿಯೋನ್ ನಿರೂಪಣೆಗೆ ಒಪ್ಪಿಕೊಂಡರು ಎಂದು ಮಾಧ್ಯಮಗಳು ವರದಿ ಮಾಡಿದೆ. ಇದನ್ನೂ ಓದಿ: ದುಷ್ಕರ್ಮಿಯಿಂದ ಗುಂಡೇಟು ತಿಂದು ಸ್ಥಳದಲ್ಲೇ ಬಿದ್ದ ಸನ್ನಿ ಲಿಯೋನ್

    https://www.instagram.com/p/B3tjmDeBtXI/

    ಅಂದು ಶೋನಿಂದ ಹೊರಬಂದ ಪಾರಸ್ ತನ್ನ ಮೇಲಿರುವ ಆರೋಪಗಳೆಲ್ಲಾ ಸುಳ್ಳು ಮತ್ತು ಆಧಾರರಹಿತ ಎಂದು ಸ್ಪಷ್ಟನೆ ನೀಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಇದೇ ವಿಷಯದ ಬಗ್ಗೆಯೂ ವಾರದ ಕೊನೆಯ ಸಂಚಿಕೆಯಲ್ಲಿ ಚರ್ಚೆ ನಡೆದಿತ್ತು. ಇದನ್ನೂ ಓದಿ: ಮಕ್ಕಳಿಗಾಗಿ ಶಾಲೆ ಆರಂಭಿಸಿದ ಸನ್ನಿ ಲಿಯೋನ್

    https://www.youtube.com/watch?v=64o1DqEYoFE

  • ಮ್ಯೂಸಿಕ್ ರಿಯಾಲಿಟಿ ಶೋಗಳು ಮಕ್ಕಳ ಮುಗ್ಧತೆಯನ್ನು ಬಳಸಿಕೊಳ್ಳುತ್ತಿವೆ: ಗಾಯಕಿ ರೇಖಾ

    ಮ್ಯೂಸಿಕ್ ರಿಯಾಲಿಟಿ ಶೋಗಳು ಮಕ್ಕಳ ಮುಗ್ಧತೆಯನ್ನು ಬಳಸಿಕೊಳ್ಳುತ್ತಿವೆ: ಗಾಯಕಿ ರೇಖಾ

    ಮುಂಬೈ: ಮ್ಯೂಸಿಕ್ ರಿಯಾಲಿಟಿ ಶೋಗಳು ಚಿಕ್ಕ ಮಕ್ಕಳ ಮುಗ್ಧತೆಯನ್ನು ಬಳಸಿಕೊಳ್ಳುತ್ತಿವೆ ಎಂದು ಗಾಯಕಿ ರೇಖಾ ಭಾರದ್ವಾಜ್ ಅವರು ಅಸಮಾಧಾನ ಹೊರ ಹಾಕಿದ್ದಾರೆ.

    ಖಾಸಗಿ ಚಾನೆಲ್‍ಗಳಲ್ಲಿ ಬರುವ ಕೆಲ ಮ್ಯೂಸಿಕ್ ರಿಯಾಲಿಟಿ ಶೋಗಳು ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆ ಆಗಿವೆ. ಆದರೆ ಈ ರೀತಿಯ ಶೋಗಳ ಮೇಲೆ ಕೆಲವರು ಸ್ಫರ್ಧಿಗಳನ್ನು ಮಾಧ್ಯಮಗಳು ಟಿ.ಆರ್‍.ಪಿಗಾಗಿ ಬಳಸಿಕೊಳ್ಳುತ್ತವೆ ಎಂದು ದೂರುತ್ತಾರೆ. ಈಗ ಈ ವಿಚಾರವಾಗಿ ಟ್ವೀಟ್ ಮಾಡಿರುವ ಗಾಯಕಿ ರೇಖಾ ಅವರು ರಿಯಾಲಿಟಿ ಶೋ ಮೇಲೆ ಕಿಡಿ ಕಾಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ರೇಖಾ ಭಾರದ್ವಾಜ್, ರಿಯಾಲಿಟಿ ಶೋಗಳು ಮಕ್ಕಳ ಕೈಯಲ್ಲಿ ಇಷ್ಟು ನಾಟಕವನ್ನು ಏಕೆ ಆಡಿಸುತ್ತವೆ ಎಂದು ನನಗೆ ಅರ್ಥವಾಗುತ್ತಿಲ್ಲ. ಈ ರಿಯಾಲಿಟಿ ಶೋಗಳು ಮಕ್ಕಳ ಮುಗ್ಧತೆಯನ್ನು ಬಳಸಿಕೊಳ್ಳುತ್ತಿವೆ ಎಂದು ಹೇಳುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

    ನನಗೆ ನಿರಾಶೆ ಮತ್ತು ದುಃಖದ ಸಂಗತಿಯೆಂದರೆ. ನಾವು ಮಕ್ಕಳಿಗೆ ಸಂಗೀತವನ್ನು ಹೇಳಿಕೊಡುವುದನ್ನು ಪ್ರಾರ್ಥನೆ ಎಂದು ಪರಿಗಣಿಸಬೇಕು. ಆದರೆ ಅದನ್ನು ನಾವು ಮಕ್ಕಳಲ್ಲಿ ಸ್ಪರ್ಧೆಯನ್ನು ಹುಟ್ಟು ಹಾಕಲು, ಮತ ಕೇಳಲು ಬಳಸಿಕೊಳ್ಳಬಾರದು. ಗುರು ಶಿಷ್ಯರ ಪರಂಪರೆಯ ಹೆಸರಿನಲ್ಲಿ ನಾವು ಮಕ್ಕಳ ವಯಸ್ಸನ್ನು ಬಳಸಿಕೊಂಡು ಅವರ ಮುಗ್ಧತೆಯನ್ನು ಹಾಳು ಮಾಡುತ್ತಿದ್ದೇವೆ ಎಂದು ರೇಖಾ ಭಾರದ್ವಾಜ್ ಹೇಳಿದ್ದಾರೆ.

    ಇದರ ಜೊತೆಗೆ ಈ ರೀತಿಯ ರಿಯಾಲಿಟಿ ಶೋಗಳಲ್ಲಿ ನಾನು ಎಂದಿಗು ಭಾಗವಹಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ರೀಟ್ವೀಟ್ ಮಾಡಿರುವ ರೇಖಾ ಅವರ ಅಭಿಮಾನಿಯೊಬ್ಬರು, ಯಾರು ಮಕ್ಕಳ ಕಾಳಜಿಯ ಬಗ್ಗೆ ಯೋಜನೆ ಮಾಡುವುದಿಲ್ಲ. ಕೇವಲ ಟಿ.ಆರ್‍.ಪಿ ಮತ್ತು ವ್ಯವಹಾರವನ್ನು ಮಾಡುತ್ತಾರೆ. ಶೋಗಳಲ್ಲಿ ದುಃಖದಿಂದ ನಾಟಕೀಯ ಕಥೆ ಹೇಳುವರು, ತೆರೆ ಮೇಲೆ ಅಳುವ ಪೋಷಕರು ಮತ್ತು ನಿರೂಪಕರು ಅದಕ್ಕೆ ಸಾಂತ್ವನ ಹೇಳುವ ತೀರ್ಪುಗಾರರು ಎಲ್ಲಾ ನಕಲಿ ಎಂದು ಹೇಳಿದ್ದಾರೆ.

    ರೇಖಾ ಭಾರದ್ವಾಜ್ ಅವರು ಟ್ವೀಟ್‍ಗೆ ಇನ್ನೊಬ್ಬರು ಕಮೆಂಟ್ ಮಾಡಿದ್ದು, ನಾನು ಈ ರೀತಿಯ ಸಂಗತಿಯನ್ನು ರಿಯಾಲಿಟಿ ಶೋಗಳಲ್ಲಿ ನೋಡಿದ್ದೇನೆ. ಅದ್ದರಿಂದ ಕೆಳೆದ 3-4 ವರ್ಷದಿಂದ ರಿಯಾಲಿಟಿ ಶೋ ನೋಡುವುದನ್ನೇ ಬಿಟ್ಟಿದ್ದೇನೆ. ಅವರು ಜನಪ್ರಿಯತೆಗಾಗಿ ಸ್ಪರ್ಧಿಗಳ ಭಾವನೆಯನ್ನು ಮಾರಾಟ ಮಾಡುತ್ತಿದ್ದಾರೆ. ಕ್ಷಣಿಕ ಜನಪ್ರಿಯತೆಗಾಗಿ ಚಿಕ್ಕ ಮಕ್ಕಳ ಭವಿಷ್ಯವನ್ನು ಕೊಲ್ಲುತ್ತಿದ್ದಾರೆ ಎಂದು ಹೇಳಿದ್ದಾರೆ.

  • ಯುವಕನ ಆತ್ಮಹತ್ಯೆಗೆ ಟ್ವಿಸ್ಟ್- ರಿಯಾಲಿಟಿ ಶೋನಲ್ಲಿ ಚಾನ್ಸ್ ಸಿಗದಿದ್ದಕ್ಕೆ ಸೂಸೈಡ್

    ಯುವಕನ ಆತ್ಮಹತ್ಯೆಗೆ ಟ್ವಿಸ್ಟ್- ರಿಯಾಲಿಟಿ ಶೋನಲ್ಲಿ ಚಾನ್ಸ್ ಸಿಗದಿದ್ದಕ್ಕೆ ಸೂಸೈಡ್

    ಬೆಂಗಳೂರು: ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಟಿಕ್ ಟಾಕ್ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದೀಗ ಯುವಕನಿಗೆ ರಿಯಾಲಿಟಿ ಶೋನಲ್ಲಿ ಚಾನ್ಸ್ ಸಿಗದಿದ್ದಕ್ಕೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

    ಕಿರಣ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿ ಹೀರೋ ಆಗಬೇಕು ಎಂದು ಕನಸು ಕಂಡಿದ್ದನು. ಅಲ್ಲದೆ ಜೊತೆಗೆ ಅದಕ್ಕಾಗಿ ಸಾಕಷ್ಟು ತಯಾರಿ ಕೂಡ ನಡೆಸಿದ್ದನು. ಈ ಬಾರಿ ನನಗೂ ಒಂದು ಚಾನ್ಸ್ ಸಿಕ್ಕಿಯೇ ಸಿಗುತ್ತದೆ ಎಂದು ಮಧ್ಯವರ್ತಿಗಳ ಸಹಾಯದಿಂದ ಕಾದು ಕುಳಿತಿದ್ದನು. ಆದರೆ ಕೊನೆ ಕ್ಷಣದಲ್ಲಿ ಚಾನ್ಸ್ ಸಿಗಲಿಲ್ಲ ಎಂದು ಮಧ್ಯವರ್ತಿಗಳು ಕೈ ಎತ್ತಿದ್ದರು. ಇದರಿಂದ ಮನನೊಂದ ಯುವಕ, ಬುಧವಾರ ರಾತ್ರಿ ಹೊಸಕೋಟೆಗೆ ಬಂದು ಲಾಡ್ಜ್ ನಲ್ಲಿ ರೂಂ ಬಾಡಿಗೆಗೆ ಪಡೆದು ಟಿಕ್‍ಟಾಕ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ರಿಯಾಲಿಟಿ ಶೋ ನಲ್ಲಿ ಏನಾದರೂ ಮಾಡಿ ಚಾನ್ಸ್ ತಗೆದುಕೊಳ್ಳಬೇಕು ಎಂದು ಕಿರಣ್ ಅಂದುಕೊಂಡಿದ್ದನು. ಇದೇ ವೇಳೆ ರಿಯಾಲಿಟಿ ಶೋನಲ್ಲಿ ಚಾನ್ಸ್ ಕೊಡಿಸುತ್ತೇನೆ ಎಂದು ವಂಚಕರು ಹೇಳಿದ ಮಾತು ನಂಬಿ ಒಂದು ಲಕ್ಷಕ್ಕೂ ಅಧಿಕ ಹಣವನ್ನು ನೀಡಿದ್ದಾನೆ. ಆದರೆ ಕಿರಣ್‍ನಿಂದ ಚಾನ್ಸ್ ಕೊಡಿಸುವುದಾಗಿ ಹಣ ಪಡೆದವರು ಕೊನೆ ಕ್ಷಣದವರೆಗೂ ಚಾನ್ಸ್ ಸಿಕ್ಕಿದೆ ಎಂದು ಹೇಳಿದ್ದರು. ಬಳಿಕ ಈ ಬಾರಿ ನಿನಗೆ ಚಾನ್ಸ್ ಸಿಕ್ಕಿಲ್ಲ ಹಣ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದರು. ಇದರಿಂದ ಮನನೊಂದ ಕಿರಣ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಆತನ ಸಂಬಂಧಿಕರು ಸೇರಿದಂತೆ ಗ್ರಾಮಸ್ಥರು ಸಹ ಕಂಬನಿ ಮಿಡಿದಿದ್ದು, ಇಂತಹ ಮೋಸದ ಜಾಲದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

    ವಿಡಿಯೋದಲ್ಲಿ ಕಿರಣ್ ಹೇಳಿದ್ದೇನು?
    ಹಾಯ್ ಫ್ರೆಂಡ್ಸ್ ನಾನು ಕಿರಣ್ ಯಾದವ್. ಈ ವಿಡಿಯೋ ಮಾಡಿದ ಉದ್ದೇಶ ಏನೆಂದರೆ ಕಮೆಂಟ್ಸ್ ನಲ್ಲಿ ನನ್ನ ನಿಮ್ಮ ಸಂಬಂಧ ತುಂಬಾ ಇದೆ. ಅಣ್ಣ ಆಗಿರಬಹುದು, ತಮ್ಮ ಆಗಿರಬಹುದು, ಅಕ್ಕ-ತಂಗಿ ಎಂದು ಜಾಸ್ತಿ ಕರೆದುಕೊಳ್ಳುತ್ತೇವೆ. ನನ್ನ ಒಂದು ಮನವಿ ಇದೆ. ನನ್ನ ತಾಯಿಗೆ ನಾನೊಬ್ಬನೇ ಮಗ. ನನ್ನ ಅಮ್ಮನ ನಿಮ್ಮ ಅಮ್ಮ ಎಂದು ನೋಡಿಕೊಳ್ಳಿ. ಇನ್ಮುಂದೆ ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಯಾಕೆ ಎಂದು ನಾನು ಹೇಳುವುದಿಲ್ಲ. ಇದು ನನ್ನ ಕೊನೆಯ ಟಿಕ್‍ಟಾಕ್ ವಿಡಿಯೋ. ಹಾಗಾಗಿ ನಾನು ಇದನ್ನು ಹೇಳುತ್ತಿದ್ದೇನೆ ಎಂದು ಹೇಳಿದ್ದನು.

  • ಬಾಲಿವುಡ್‍ಗೆ ಕಾಲಿಟ್ಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ

    ಬಾಲಿವುಡ್‍ಗೆ ಕಾಲಿಟ್ಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ

    ಮುಂಬೈ: ಕಳೆದ ತಿಂಗಳು ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಹಾಡು ಹಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಹಿಳೆಗೆ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದರು. ಆದರೆ ಈಗ ಅವರು ಬಾಲಿವುಡ್‍ಗೂ ಎಂಟ್ರಿ ಕೊಟ್ಟಿದ್ದಾರೆ.

    ಖ್ಯಾತ ಬಾಲಿವುಡ್ ಗಾಯಕ ಹಿಮೇಶ್ ರೇಶ್ಮಿಯಾ ಅವರು ತಮ್ಮ ಹೊಸ ಚಿತ್ರದಲ್ಲಿ ಹಾಡಲು ರಾನು ಮೊಂಡಲ್ ಅವರಿಗೆ ಅವಕಾಶ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ಹಿಮೇಶ್ ರೇಶ್ಮಿಯಾ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಹಾಕುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ ಈಗ ರಿಯಾಲಿಟಿ ಶೋಗೆ ಎಂಟ್ರಿ

    ಈ ವಿಡಿಯೋದಲ್ಲಿ ರಾನು ಮೊಂಡಲ್ ಅವರು ಹಾಡು ರೆಕಾರ್ಡ್ ಮಾಡುತ್ತಿದ್ದಾಗ ಹಿಮೇಶ್ ಅವರಿಗೆ ಪ್ರೋತ್ಸಾಹ ನೀಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಹಿಮೇಶ್ ಅವರನ್ನು ಹೊಗಳುತ್ತಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಕೂಡ ಶೇರ್ ಮಾಡಿಕೊಳ್ಳುತ್ತಿದ್ದಾರೆ.

    ವರದಿಗಳ ಪ್ರಕಾರ ಹಿಮೇಶ್ ಅವರು ತಮ್ಮ ಮುಂಬರುವ ‘ಹ್ಯಾಪಿ ಹಾರ್ಡಿ ಮತ್ತು ಹೀರ್’ ಚಿತ್ರದಲ್ಲಿ ಹಾಡು ಹಾಡಲು ಅವಕಾಶ ನೀಡಿದ್ದಾರೆ. ರಾನು ಅವರು ಈ ಚಿತ್ರದ ‘ತೇರಿ ಮೇರಿ ಕಹಾನಿ’ ಎಂಬ ಟೈಟಲ್ ಹಾಡನ್ನು ಹಾಡಲಿದ್ದಾರೆ. ಇದರ ಜೊತೆ ರಾನು ಅವರು ರಿಯಾಲಿಟಿ ಶೋನಲ್ಲಿ ಭಾಗಿಯಾಗಲಿದ್ದಾರೆ.

    ಯಾರಿದ್ದು ರಾನು ಮೊಂಡಲ್?
    ಕಳೆದ ತಿಂಗಳು ಪಶ್ಚಿಮ ಬಂಗಾಳದ ರಣಘಾಟ್ ನಿಲ್ದಾಣದಲ್ಲಿ ಮೊಂಡಲ್ ಎಂಬವರು 1972ರಲ್ಲಿ ಬಿಡುಗಡೆಯಾದ `ಶೋರ್’ ಚಿತ್ರದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿದ “ಏಕ್ ಪ್ಯಾರ್ ಕಾ ನಗ್ಮಾ ಹೇ” ಚಿತ್ರದ ಹಾಡನ್ನು ಹಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಮೊಂಡಲ್ ಅವರ ಈ ವಿಡಿಯೋವನ್ನು `ಬಾರ್ಪೆಟಾ ಟೌನ್ ದಿ ಪ್ಲೇಸ್ ಆಫ್ ಪೀಸ್’ ಪೇಜ್ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋ ವೈರಲ್ ಆಗಿದ್ದು, ಮೊಂಡಲ್ ಅವರಿಗೆ ಮುಂಬೈನಲ್ಲಿ ನಡೆಯುವ ರಿಯಾಲಿಟಿ ಶೋನಲ್ಲಿ ಅವಕಾಶ ಸಿಕ್ಕಿತ್ತು. ಮಹಿಳೆಯೊಬ್ಬರು ಮೊಂಡಲ್ ಅವರನ್ನು ಗುರುತಿಸಿ ಅವರನ್ನು ಸಂಪೂರ್ಣವಾಗಿ ಬದಲಾಯಿಸಿದ್ದರು.

  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ ಈಗ ರಿಯಾಲಿಟಿ ಶೋಗೆ ಎಂಟ್ರಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ ಈಗ ರಿಯಾಲಿಟಿ ಶೋಗೆ ಎಂಟ್ರಿ

    ಕೋಲ್ಕತ್ತಾ: ಕಳೆದ ತಿಂಗಳು ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಹಾಡು ಹಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಹಿಳೆ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ.

    ಕಳೆದ ತಿಂಗಳು ಪಶ್ಚಿಮ ಬಂಗಾಳದ ರಣಘಾಟ್ ನಿಲ್ದಾಣದಲ್ಲಿ ಮೊಂಡಲ್ ಎಂಬವರು 1972ರಲ್ಲಿ ಬಿಡುಗಡೆಯಾದ ‘ಶೋರ್’ ಚಿತ್ರದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿದ “ಏಕ್ ಪ್ಯಾರ್ ಕಾ ನಗ್ಮಾ ಹೇ” ಚಿತ್ರದ ಹಾಡನ್ನು ಹಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

    ಮೊಂಡಲ್ ಅವರ ಈ ವಿಡಿಯೋವನ್ನು ‘ಬಾರ್ಪೆಟಾ ಟೌನ್ ದಿ ಪ್ಲೇಸ್ ಆಫ್ ಪೀಸ್’ ಪೇಜ್ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋ ವೈರಲ್ ಆಗಿದ್ದು, ಮೊಂಡಲ್ ಅವರಿಗೆ ಈಗ ಮುಂಬೈನಲ್ಲಿ ನಡೆಯುವ ರಿಯಾಲಿಟಿ ಶೋನಲ್ಲಿ ಅವಕಾಶ ಸಿಕ್ಕಿದೆ. ಮಹಿಳೆಯೊಬ್ಬರು ಮೊಂಡಲ್ ಅವರನ್ನು ಗುರುತಿಸಿ ಅವರನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ.

    ರಿಯಾಲಿಟಿ ಶೋಗಾಗಿ ಮೊಂಡಲ್ ಪಾರ್ಲರ್ ನಲ್ಲಿ ತಯಾರಾಗುತ್ತಿರುವ ಫೋಟೋಗಳು ವೈರಲ್ ಆಗಿದ್ದು, ಈ ಕಾರ್ಯಕ್ರಮಕ್ಕಾಗಿ ಮೊಂಡಲ್ ಹೊಸ ಹೇರ್ ಸ್ಟೈಲ್ ಕೂಡ ಮಾಡಿಸಿದ್ದಾರೆ. ಮೊಂಡಲ್ ಅವರು ಹಾಡಿದ ವಿಡಿಯೋ ಇದುವರೆಗೂ 39 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದ್ದು, 59 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಲ್ಲದೆ 5 ಸಾವಿರಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ.

    ಮುಂಬೈ ಅಲ್ಲದೆ ಕೇರಳ, ಕೋಲ್ಕತ್ತಾ ಹಾಗೂ ಬಾಂಗ್ಲಾದೇಶದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವಂತೆ ಮೊಂಡಲ್ ಅವರಿಗೆ ಮನವಿ ಮಾಡಲಾಗುತ್ತಿದೆ. ಅಲ್ಲದೆ ತನ್ನದೆ ಸ್ವಂತ ಮ್ಯೂಸಿಕ್ ಆಲ್ಬಂ ಶುರು ಮಾಡುವಂತೆ ಮೊಂಡಲ್ ಅವರಿಗೆ ಅವಕಾಶ ಬರುತ್ತಿದೆ.