Tag: reality show

  • ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಡ್ತಿರುವ ವೀಡಿಯೋ ರಿಲೀಸ್ ಮಾಡಿದ ಬಿಗ್‌ಬಾಸ್ ಟೀಂ

    ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಡ್ತಿರುವ ವೀಡಿಯೋ ರಿಲೀಸ್ ಮಾಡಿದ ಬಿಗ್‌ಬಾಸ್ ಟೀಂ

    ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಜಾಲಿವುಡ್ ಸ್ಟುಡಿಯೋಗೆ (Jollywood Studios) ಬೀಗ ಜಡಿದ ಪರಿಣಾಮ ಬಿಗ್‌ಬಾಸ್ ಸ್ಪರ್ಧಿಗಳನ್ನ (Bigg Boss Contestants) ಅಲ್ಲಿಂದ ಸ್ಥಳಾಂತರಗೊಳಿಸಿ ಚಿತ್ರೀಕರಣಕ್ಕೆ ಫುಲ್‌ಸ್ಟಾಪ್ ಇಡಲಾಗಿತ್ತು. ಬಳಿಕ ಸಮಸ್ಯೆ ಬಗೆಹರಿಸುವಂತೆ ಸೂಚಿಸಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂದೇಶ ಕಳುಹಿಸಿದ ಬಳಿಕ ರಾತ್ರೋರಾತ್ರಿ ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳನ್ನ ವಾಪಸ್ ಕರೆದುಕೊಂಡು ಬರಲಾಯಿತು. ಈ ದೃಶ್ಯ ಬಿಗ್‌ಬಾಸ್ (Bigg Boss Kannada 12) ಕಾರ್ಯಕ್ರಮದಲ್ಲಿ ಪ್ರಸಾರವಾಗುವ ಸಂಭವ ಇದೆ. ಆ ಕುರಿತು ಪ್ರೋಮೋ ರಿಲೀಸ್ ಮಾಡಿದೆ ಟೀಂ.

    17 ಸ್ಪರ್ಧಿಗಳನ್ನೊಳಗೊಂಡ ಬಿಗ್‌ಬಾಸ್ ಮನೆಯ ಮುಖ್ಯದ್ವಾರ ತೆರೆದು ಎಲ್ಲರೂ ಮನೆಗೆ ಎಂಟ್ರಿ ಕೊಡ್ತಿರುವ ವೀಡಿಯೋ ಇದೀಗ ರಿಲೀಸ್ ಆಗಿದೆ. ಒಟ್ಟು 17 ಸ್ಪರ್ಧಿಗಳನ್ನ ಬಿಗ್‌ಬಾಸ್ ಹೌಸ್ ಹತ್ತಿರದ ಈಗಲ್‌ಟನ್ ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಮಂಗಳವಾರ ರಾತ್ರಿ 7 ಗಂಟೆಯಿಂದ ಗುರುವಾರದವರೆಗೂ ಇದ್ದ ಸ್ಪರ್ಧಿಗಳು ರಾತ್ರೋರಾತ್ರಿ ಮತ್ತೆ ಬಿಗ್‌ಬಾಸ್ ಹೌಸ್‌ಗೆ ವಾಪಸ್ಸಾಗಿದ್ದಾರೆ.

    ಹೀಗೆ ವಾಪಸ್ಸಾದ ಸ್ಪರ್ಧಿಗಳನ್ನ ವೆಲ್‌ಕಮ್ ಬ್ಯಾಕ್ ಎಂದು ಹೇಳಿ ಬಿಗ್‌ಬಾಸ್ ಸ್ಪಾಗತಿಸುವ ದೃಶ್ಯವನ್ನ ವಾಹಿನಿಯು ಪ್ರೊಮೋದಲ್ಲಿ ತೋರಿಸಿದೆ. ಹೀಗೆ ರಾತ್ರೋರಾತ್ರಿ ಎಲ್ಲಾ ಸ್ಪರ್ಧಿಗಳು ಮತ್ತೆ ಬಿಗ್ ಮನೆಗೆ ಆಗಮಿಸಿದ್ದು, ಅಲ್ಪವಿರಾಮ ಪಡೆದಿದ್ದ ದೊಡ್ಮನೆಯ ಆಟ ಮತ್ತೆ ಶುರುವಾಗಿದೆ.

  • ಅಮ್ಮ ಮಗನ ಮಾತುಕತೆ ಕಂಡು ಕಣ್ಣೀರಿಟ್ಟ ಸಲ್ಮಾನ್ ಖಾನ್

    ಅಮ್ಮ ಮಗನ ಮಾತುಕತೆ ಕಂಡು ಕಣ್ಣೀರಿಟ್ಟ ಸಲ್ಮಾನ್ ಖಾನ್

    ಲ್ಮಾನ್ ಖಾನ್ (Salman Khan) ತಮ್ಮ ವ್ಯಕ್ತಿತ್ವದಲ್ಲಿ ತುಂಬಾ ಖಡಕ್, ಗಟ್ಟಿಮನಸ್ಸುಳ್ಳವರು ಎಂದೆಲ್ಲಾ ವರ್ಣಿಸಿಕೊಳ್ಳುತ್ತಾರೆ. ಆದರೆ ಚಿಕ್ಕದೊಂದು ಭಾವುಕ ಕ್ಷಣವನ್ನೂ ಕಣ್ಣಾರೆ ಕಂಡು ಸಹಿಸಲಾಗದ ಮೃದು ಜೀವಿ ಅನ್ನೋ ವಿಚಾರ ಈ ವಾರದ ಹಿಂದಿಯ ಬಿಗ್‌ಬಾಸ್ ಸೀಸನ್ 19ರ (Bigg Boss 19) ವೀಕೆಂಡ್ ವಾರ್‌ನಲ್ಲಿ ಬಹಿರಂಗವಾಗಿದೆ. ಸ್ಪರ್ಧಿಯೊಬ್ಬರು ಅತ್ತಿದ್ದಕ್ಕೆ ಸಲ್ಮಾನ್ ಖಾನ್ ವೇದಿಕೆ ಮೇಲೆಯೇ ಕಣ್ಣೀರು ಹಾಕಿದ್ದಾರೆ.

    ಬ್ಯಾಡ್‌ಬಾಯ್ ಎಂದು ಕರೆಸಿಕೊಳ್ಳುವ ಸಲ್ಮಾನ್ ಖಾನ್ ವೇದಿಕೆಯಲ್ಲಿ ಕಣ್ಣೀರು ಹಾಕುವುದಕ್ಕೆ ಕಾರಣ ಸ್ಪರ್ಧಿ ಕುನಿಕಾ ಸದಾನಂದ್. ಇವರು ಬಿಗ್‌ಬಾಸ್ ಸೀಸನ್ 19ರ ಓರ್ವ ಸ್ಪರ್ಧಿ. ಸ್ಪರ್ಧಿಗಳ ಜೊತೆ ಸಲ್ಮಾನ್ ಖಾನ್ ಅವರ ವೀಕೆಂಡ್ ಮಾತುಕತೆ ತಮಾಷೆಯಿಂದಲೇ ನಡೆಯುತ್ತಿತ್ತು. ಆದರೆ ಕುನಿಕಾ ಸದಾನಂದ್ ಪುತ್ರ ಅಯಾನ್ ಲಾಲ್ ಮಾತನಾಡುತ್ತಾ ಮನೆಯೊಳಗೆ ದಿಢೀರ್ ಪ್ರವೇಶ ಪಡೆದೊಡನೆ ಅಲ್ಲಿನ ಚಿತ್ರಣವೇ ಬದಲಾಯ್ತು. ನಗುತ್ತಲೇ ಇದ್ದ ಸಲ್ಮಾನ್ ಖಾನ್ ಕೂಡ ದಂಗು ಬಡಿದವರಂತೆ ನೋಡುತ್ತಾ ನಿಂತರು.

    ಬಿಗ್‌ಬಾಸ್ ಮನೆಯಲ್ಲಿ ತಾಯಿ ಕುನಿಕಾ ಕುರಿತು ಹೃದಯಸ್ಪರ್ಶಿ ಮಾತನಾಡುತ್ತಿದ್ದ ಮಗನ ಧ್ವನಿ ಕೇಳಿಸಿಕೊಂಡ ತಾಯಿ ಕುನಿಕಾ ಸದಾನಂದ್ ಬಿಕ್ಕಿ ಬಿಕ್ಕಿ ಅತ್ತರು. `ಅಮ್ಮಾ ನೀನು ನಮ್ಮನ್ನೆಲ್ಲ ಹೆಮ್ಮೆ ಪಡುವಂತೆ ಮಾಡುತ್ತಿದ್ದೀಯ, ನಿಮ್ಮನ್ನು ಇಡೀ ದೇಶ ನೋಡುತ್ತಿದೆ. ನಿನ್ನ ಮೊಮ್ಮಗ ನಾನು ಹಾಗೂ ನಿಮ್ಮ ಸೊಸೆ, ಹಾಗೂ ನೀವು ಸಹಾಯ ಮಾಡಿರುವ ಕಿನ್ನರ ಸಮಾಜ ಎಲ್ಲರೂ ನಿನ್ನನ್ನು ತುಂಬಾ ಇಷ್ಟ ಪಡುತ್ತಾರೆ. ನಿನ್ನ ಮಗನಾಗಿ ಹುಟ್ಟಿದ್ದಕ್ಕೆ ನಾನು ಹೆಮ್ಮೆ ಪಡುತ್ತೇನೆ’ ಎಂದು ಅಮ್ಮನಿಗೆ ಸಂದೇಶ ಕೊಡುತ್ತಾರೆ. ಬಳಿಕ ಸಪ್ರೈಸ್ ಎಂಟ್ರಿಯನ್ನೂ ಕೊಡುತ್ತಾರೆ. ಹೀಗೆ ಅಮ್ಮ ಮಗನ ಭಾವುಕ ಸಂದರ್ಭವನ್ನ ನೋಡುತ್ತಿದ್ದ ಸಲ್ಮಾನ್ ಖಾನ್ ಹೃದಯ ಮಿಡಿದಿದೆ. ತುಂಬು ಕುಟುಂಬಕ್ಕೆ ಹೆಚ್ಚಿನ ಆದ್ಯತೆ ಕೊಡುವ ಸಲ್ಮಾನ್ ಖಾನ್ ಹೃದಯಸ್ಪರ್ಶಿ ಘಟನೆ ಕಂಡು ಕಣ್ಣೀರು ಹಾಕಿದ್ದಾರೆ. ಅಲ್ಲಿಗೆ ಸಲ್ಮಾನ್ ಖಾನ್ ಮುಗ್ಧತೆಯ ದರ್ಶನವಾಗಿದೆ.

  • ಹೊಚ್ಚ ಹೊಸ ಶೋಗೆ ಸಾಕ್ಷಿಯಾಗಲಿದೆ ಜೀ ಕನ್ನಡ : ಕಿರುತೆರೆಗೆ ಶರಣ್, ಅಮೂಲ್ಯ ಎಂಟ್ರಿ

    ಹೊಚ್ಚ ಹೊಸ ಶೋಗೆ ಸಾಕ್ಷಿಯಾಗಲಿದೆ ಜೀ ಕನ್ನಡ : ಕಿರುತೆರೆಗೆ ಶರಣ್, ಅಮೂಲ್ಯ ಎಂಟ್ರಿ

    ಬೆಂಗಳೂರು: ಧಾರಾವಾಹಿಗಳು, ರಿಯಾಲಿಟಿ ಶೋ ಗಳು, ಗೆಮ್ ಶೋ ಗಳಿಂದ ವೀಕ್ಷಕರ ಮನಗೆದ್ದು ನಂಬರ್ 1 ಸ್ಥಾನದಲ್ಲಿ ಇರುವ ಮನರಂಜನೆಯ ಮಹಾತಾಣ ಜೀ ಕನ್ನಡ. ಡ್ರಾಮಾ ಜೂನಿಯರ್ಸ್, ಸರಿಗಮಪ, ವೀಕೆಂಡ್ ವಿತ್ ರಮೇಶ್, ಕಾಮಿಡಿ ಖಿಲಾಡಿಗಳು, ಡಾನ್ಸ್ ಕರ್ನಾಟಕ ಡಾನ್ಸ್, ಜೋಡಿ ನಂಬರ್ 1, ಮತ್ತು ಸೂಪರ್ ಕ್ವೀನ್ ನಂತಹ ಅನೇಕ ಜನಮೆಚ್ಚಿದ ರಿಯಾಲಿಟಿ ಶೋಗಳನ್ನು ಜನರ ಮುಂದಿಟ್ಟು ಅದರಲ್ಲಿ ಯಶಸ್ವೀ ಆಗಿರುವ ಜೀ ಕನ್ನಡ ಈಗ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ.

    ಹೊಚ್ಚ ಹೊಸ ರಿಯಾಲಿಟಿ ಶೋ ಫ್ಯಾಮಿಲಿ ನಂಬರ್ ಇದೇ ಆಗಸ್ಟ್ 2 ರಿಂದ ರಾತ್ರಿ 9 ಗಂಟೆಗೆ ನಿಮ್ಮನ್ನು ಮನರಂಜಿಸಲಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಇದು ವಿಭಿನ್ನ ಪ್ರಯತ್ನವಾಗಿದ್ದು, ನಿಮ್ಮ ನೆಚ್ಚಿನ ತಾರೆಯರು ಅವರ ಕುಟುಂಬದವರ ಜೊತೆಗೆ ಹೇಗೆ ಇರುತ್ತಾರೆ ಎಂಬುದನ್ನು ನಿಮ್ಮ ತನಕ ತಲುಪಿಸುವುದೇ ಈ ರಿಯಾಲಿಟಿ ಶೋ ದ ಮುಖ್ಯ ಉದ್ದೇಶ. ಈ ರಿಯಾಲಿಟಿ ಶೋನಲ್ಲಿ ಸಕ್ಕತ್ ಟ್ವಿಸ್ಟ್ ಜೊತೆಗೆ ಫನ್ ಇರಲಿದ್ದು ನಿಮಗೆ 100% ಮನರಂಜನೆ ಸಿಗೋದಂತೂ ಗ್ಯಾರಂಟಿ. ಅಷ್ಟೇ ಅಲ್ಲದೇ ಪ್ರತಿ ವಾರ ವಿಭಿನ್ನ ಬಗೆಯ ರೌಂಡ್ಸ್ ಇರಲಿದ್ದು ಯಾರು ಹೇಗೆ ಪರ್ಫಾರ್ಮ್ ಮಾಡ್ತಾರೆ ಎನ್ನುವುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

    ತರ್ಲೆ ಮಾತು, ವಿಭಿನ್ನ ನಿರೂಪಣಾ ಶೈಲಿಯಿಂದ ಕನ್ನಡಿಗರ ಮನಗೆದ್ದ ನಿರಂಜನ್ ದೇಶಪಾಂಡೆ ಅವರು ಫ್ಯಾಮಿಲಿ ನಂ.1 ನ ನಿರೂಪಣಾ ಜವಾಬ್ದಾರಿಯನ್ನು ಹೊತ್ತುಕೊಂಡರೆ ಗೋಲ್ಡನ್ ಕ್ವೀನ್ ಅಮೂಲ್ಯ, ಎವರ್ಗ್ರೀನ್ ಚೆಲುವೆ ಮತ್ತು ಪೊಲಿಟಿಷಿಯನ್ ತಾರಾ ಅನುರಾಧ, ಎಲ್ಲರ ನೆಚ್ಚಿನ ನಟ ಶರಣ್ ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ಕರುನಾಡು ಮೆಚ್ಚಿದ ಸೆಲೆಬ್ರಿಟಿಗಳಾದ ರಜತ್-ಅಕ್ಷತಾ, ಸುಜಯ್-ಸಿಂಚನ, ಪ್ರಿಯ ಕೇಸರಿ-ಶಿವರಾಂ,ಅಲ್ಲು ರಘು-ಸುಶ್ಮಿತಾ, ಮಲ್ಲಯ್ಯ-ನೀಲಮ್ಮ, ಮೋಹನ್ ಕುಮಾರ್-ಪಲ್ಲವಿ, ವಿಶಾಲ್ ಹೆಗ್ಡೆ-ಪ್ರಿಯ, ಶಿಲ್ಪಿ-ಶೈಲೇಶ್, ಸಮೀರ್ ಆಚಾರ್ಯ-ಶ್ರಾವಣಿ ತಮ್ಮ ಕುಟುಂಬದವರೊಡನೆ ಸೇರಿ ಈ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಸಲಿದ್ದಾರೆ.

    ಸಂಬಂಧ, ಒಗ್ಗಟ್ಟಿಗೆ ಬೆಲೆಕೊಡುವ ಕೊಡುವ ವಿಭಿನ್ನ ಕಾನ್ಸೆಪ್ಟ್ ಇರುವ ಹೊಚ್ಚಹೊಸ ರಿಯಾಲಿಟಿ ಶೋ ‘ನಾವು ನಮ್ಮವರು’! ಇಲ್ಲಿ ಸ್ಪರ್ಧಿಗಳು ಅನೇಕ ಟ್ವಿಸ್ಟ್ಸ್ ಇರುವ ಬೇರೆ ಬೇರೆ ಟಾಸ್ಕ್‌ಗಳಲ್ಲಿ ತಮ್ಮ ಕುಟುಂಬದವರ ಜೊತೆ ಸೇರಿ ಭಾಗವಹಿಸಲಿದ್ದಾರೆ. ಸಂಬಂಧಗಳನ್ನು ಸಂಭ್ರಮಿಸೋ ‘ನಾವು ನಮ್ಮವರು’ ರಿಯಾಲಿಟಿ ಶೋ ಕುಟುಂಬದ ಹಳೆಯ ನೆನಪುಗಳನ್ನು ಸೆಲೆಬ್ರಿಟಿ ಸ್ಪರ್ಧಿಗಳ ಮೂಲಕ ವೀಕ್ಷಕರ ಮುಂದಿಡುವ ಕನ್ನಡಿ! ಸಂಬಂಧಗಳ ಬೇರನ್ನು ಗಟ್ಟಿ ಮಾಡುವ ಹೊಸ ರಿಯಾಲಿಟಿ ಶೋ ‘ನಾವು ನಮ್ಮವರು’ ಇದೇ ಆಗಸ್ಟ್ 2 ರಿಂದ ರಾತ್ರಿ 9 ಗಂಟೆಗೆ ನಿಮ್ಮ ಜೀ ಕನ್ನಡದಲ್ಲಿ!

  • BBK 12 | ಈ ಬಾರಿ ಬಿಗ್‌ ಬಾಸ್‌ನಲ್ಲಿ ವಿವಾದಿತರಿಗೆ ನೋ ಎಂಟ್ರಿ?

    BBK 12 | ಈ ಬಾರಿ ಬಿಗ್‌ ಬಾಸ್‌ನಲ್ಲಿ ವಿವಾದಿತರಿಗೆ ನೋ ಎಂಟ್ರಿ?

    ಬಿಗ್‌ಬಾಸ್ ಸೀಸನ್ 12ಕ್ಕೆ (Bigg Boss Kannada 12) ಕೌಂಟ್‌ಡೌನ್ ಶುರುವಾಗ್ತಿದೆ. ಇನ್ನು ಕೆಲವೇ ತಿಂಗಳಲ್ಲಿ ಕನ್ನಡ ಬಿಗ್‌ಬಾಸ್ ಶುರುವಾಗಲಿದೆ. ಈ ಬಾರಿಯ ಬಿಗ್‌ಬಾಸ್‌ನ್ನು ಹೋಸ್ಟ್ ಮಾಡಲು ಕಿಚ್ಚ ಒಪ್ಪಿಕೊಂಡಿದ್ದಾರೆ. ಈ ಗುಡ್‌ನ್ಯೂಸ್ ಕೇಳಿ ಸುದೀಪ್ (Kichcha Sudeep ಫ್ಯಾನ್ಸ್ ಖುಷಿಯಿಂದ ಕುಣಿದಾಡಿದ್ದಾರೆ. ಮತ್ತೊಂದು ಕಡೆ ಕಾಂಟ್ರವರ್ಸಿ ಕಿಂಗ್‌/ಕ್ವೀನ್‌ಗಳನ್ನ ಬಿಗ್‌ಬಾಸ್‌ಗೆ ಆಯ್ಕೆ ಮಾಡಿಕೊಳ್ಳುವುದಿಲ್ಲವಾ ಎನ್ನುವ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಪ್ರತಿ ವೀಕೆಂಡ್ ಅಂತ ಬಂದಾಗ ಕಾಂಟ್ರವರ್ಸಿ ಮಾಡಿಕೊಂಡವರ ಪಂಚಾಯ್ತಿಗೆ ಸಮಯ ಹಾಕಬೇಕಾಗುತ್ತೆ. ಕೆಲವರು ಹೊರಗಡೆ, ಸ್ಟೇಜ್‌ಮೇಲೆ ಚನಾಗಿಯೇ ಇರ್ತಾರೆ ಆದ್ರೆ, ಒಳಗಡೆ ಹೋದ್ಮೇಲೆ ಕಾಂಟ್ರವರ್ಸಿ ಶುರು ಮಾಡುತ್ತಾರೆ. ಹಾಗೆ ಯಾರನ್ನೂ ಜಡ್ಜ್ ಮಾಡೋಕೆ ಆಗೋಲ್ಲ. ಆದ್ರೆ ಕೆಲವು ಷರತ್ತುಗಳಿವೆ ಅದು ಏನು ಅಂತಾ ಈಗ ಹೇಳಲ್ಲ ಎಂದಿದ್ದಾರೆ ಕಿಚ್ಚ. ಇನ್ನು ಕಂಟೆಸ್ಟೆಂಟ್‌ ಆಯ್ಕೆ ಬಗ್ಗೆ ಸದ್ಯದಲ್ಲಿಯೇ ಮಾಹಿತಿ ತಿಳಿಸಲಾಗುತ್ತೆ ಎಂದಿದೆ ಕಲರ್ಸ್‌ ತಂಡ. ಇದನ್ನೂ ಓದಿ: BBK 12 | ʻಬಿಗ್‌ ಬಾಸ್‌ʼ ಬಿಗ್ ಅಪ್‌ಡೇಟ್ – 12ನೇ ಸೀಸನ್‌ಗೂ ಕಿಚ್ಚನ ನಿರೂಪಣೆ ಫಿಕ್ಸ್‌

    ಈ ಬಾರಿ ಎರಡು ರೀತಿಯ ಕಂಟೆಸ್ಟೆಂಟ್‌ಗಳು ಇದ್ದಾರೆ. ಒಬ್ಬರು ಬುದ್ದಿವಂತರು, ಮತ್ತೊಬ್ಬರು ಅತೀ ಬುದ್ಧಿವಂತರು. ಬಿಗ್‌ಬಾಸ್ ಶೋ ಜೊತೆಗೆ ವರ್ಷಕ್ಕೆರಡು ಸಿನಿಮಾ ಮಾಡುವ ಡೆಡಿಕೇಶನ್ ಬಗ್ಗೆ ಅಭಿಪ್ರಾಯವನ್ನ ರಿಯಾಲಿಟಿ ಶೋ ಆಯೋಜಕರು ಹಂಚಿಕೊಂಡಿದ್ದಾರೆ. ಬಿಗ್‌ಬಾಸ್ ಸೀಸನ್ 12ರ ನಿರೂಪಣೆ ಮಾಡಲು ಕಿಚ್ಚ ಸುದೀಪ್ ಒಪ್ಪಿಕೊಂಡಿರುವುದು, ಸುದೀಪ್ ಅಭಿಮಾನಿಗಳಿಗೆ ಡಬಲ್ ಹ್ಯಾಪಿ ನೀಡಿದೆ. ಇದನ್ನೂ ಓದಿ: ದಿ ರೈಸ್ ಆಫ್ ಅಶೋಕ: ಡಬ್ಬಿಂಗ್ ಮುಗಿಸಿದ ನೀನಾಸಂ ಸತೀಶ್, ಸಪ್ತಮಿ

  • BBK 12 | ʻಬಿಗ್‌ ಬಾಸ್‌ʼ ಬಿಗ್ ಅಪ್‌ಡೇಟ್ – 12ನೇ ಸೀಸನ್‌ಗೂ ಕಿಚ್ಚನ ನಿರೂಪಣೆ ಫಿಕ್ಸ್‌

    BBK 12 | ʻಬಿಗ್‌ ಬಾಸ್‌ʼ ಬಿಗ್ ಅಪ್‌ಡೇಟ್ – 12ನೇ ಸೀಸನ್‌ಗೂ ಕಿಚ್ಚನ ನಿರೂಪಣೆ ಫಿಕ್ಸ್‌

    ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ (Bigg Boss Kannada) 11 ಸೀಸನ್‌ಗಳನ್ನ ಯಶಸ್ವಿಯಾಗಿ ಪೂರೈಸಿದೆ. ಇದೀಗ ಸೀಸನ್ 12ಕ್ಕೆ ಕೆಲವೇ ತಿಂಗಳು ಬಾಕಿ ಇರೋವಾಗಲೇ ಬಿಗ್‌ಬಾಸ್ ತಂಡದ ಕಡೆಯಿಂದ ಹಾಗೂ ಕಿಚ್ಚ ಸುದೀಪ್ ಅವರಿಂದ ಬಿಗ್ ಅಪ್‌ಡೇಟ್ ಸಿಕ್ಕಿದೆ.

    ಹೌದು, ಕಿಚ್ಚ ಸುದೀಪ್ (Kichcha Sudeep) ಅವರೇ 12ನೇ ಸೀಸನ್‌ಗೂ ನಿರೂಪಣೆ ಮಾಡುವುದಾಗಿ ಸ್ಪಷ್ಟನೆ ಸಿಕ್ಕಿದೆ. ಬಿಗ್‌ಬಾಸ್ ಸಂಯೋಜಕರು ಹಾಗೂ ಕಲರ್ಸ್‌ ತಂಡ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಈ ನಿರ್ಧಾರವನ್ನು ಪ್ರಕಟಿಸಿದೆ.

    11ನೇ ಸೀಸನ್‌ ಸಂದರ್ಭದಲ್ಲಿ ನಿರೂಪಕ ಕಿಚ್ಚ ಸುದೀಪ್ ವಿದಾಯ ಹೇಳಿದ್ದರು. ಇದಾದ ಬಳಿಕ ಸಾಕಷ್ಟು ಚರ್ಚೆಗಳು ಶುರುವಾಗಿದ್ವು, ಈ ಬಗ್ಗೆ ಕಿಚ್ಚ ಸುದೀಪ್ ಕೂಡಾ ಕಾದು ನೋಡಿ ಅನ್ನೋ ಅಭಿಪ್ರಾಯ ಹಂಚಿಕೊಂಡಿದ್ರು. ಇದೀಗ ಮತ್ತೆ 12ನೇ ಸೀಸನ್ ನಡೆಸಿಕೊಡುವ ಬಗ್ಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ ಕಿಚ್ಚ.

    ಕಿಚ್ಚ ಸುದೀಪ್ ಇಲ್ಲದೇ ಬಿಗ್‌ಬಾಸ್ ನಿರೂಪಣೆಯನ್ನ ಊಹೆ ಮಾಡಿಕೊಳ್ಳುವುದಕ್ಕೂ ಆಗುವುದಿಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಹೀಗಾಗಿ ಕಿಚ್ಚ ಸುದೀಪ್ ಈ ಬಾರಿಯ ಬಿಗ್‌ಬಾಸ್ ಕಾರ್ಯಕ್ರಮವನ್ನ ಮುಂದುವರಿಸಿದ್ದಾರೆ.

  • ಬಿಗ್‌ ಬಾಸ್ ಸೀಸನ್-12ಕ್ಕೆ ಕಿಚ್ಚ ಸುದೀಪ್ ಒಪ್ಪಿಕೊಂಡ್ರಾ?

    ಬಿಗ್‌ ಬಾಸ್ ಸೀಸನ್-12ಕ್ಕೆ ಕಿಚ್ಚ ಸುದೀಪ್ ಒಪ್ಪಿಕೊಂಡ್ರಾ?

    ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್‌ಬಾಸ್ (Bigg Boss Kannada) 11 ಸೀಸನ್‌ಗಳನ್ನ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಈ ಕಾರ್ಯಕ್ರಮದ ಏಕಮಾತ್ರ ನಿರೂಪಕ ಕಿಚ್ಚ ಸುದೀಪ್ (Kichcha Sudeep) ಗುಡ್‌ಬೈ ಹೇಳಿದ್ರು. 11ನೇ ಸೀಸನ್ ನಡೆಯುತ್ತಿರುವಾಗಲೇ ಇದು ನಾನು ನಡೆಸಿಕೊಡುವ ಕೊನೆಯ ಸೀಸನ್ ಅಂತಾ ಅನೌನ್ಸ್ ಮಾಡಿದ್ದರು ಕಿಚ್ಚ ಸುದೀಪ್. ಕಿಚ್ಚನ ಈ ಮಾತು ಬಿಗ್‌ಬಾಸ್ ವೀಕ್ಷಕರಿಗೆ ಶಾಕ್ ನೀಡಿತ್ತು.

    ಬಿಗ್‌ಬಾಸ್ ಸೀಸನ್ 12 ಶುರುವಾಗೋದಕ್ಕೆ ಇನ್ನು 3-4 ತಿಂಗಳು ಬಾಕಿ ಇದೆ. ಹೀಗಿರೋವಾಗ ಕಿಚ್ಚ ಸುದೀಪ್ ಅವರ ಮನಸ್ಸನ್ನ ಆ ವಾಹಿನಿ ಒಲಿಸುವುದಕ್ಕೆ ಪ್ರಯತ್ನ ಮಾಡಿದೆ ಎನ್ನಲಾಗುತ್ತಿದೆ. ಜೊತೆಗೆ ಈ ಬಾರಿಯ ಬಿಗ್‌ಬಾಸ್ ಶೋ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿಯನ್ನ ಕರೆಯಲಾಗಿದೆ. ಇದೇ ಜೂನ್ 30ರಂದು ಈ ಬಾರಿಯ ಬಿಗ್‌ಬಾಸ್ ರಿಯಾಲಿಟಿ ಶೋ ಬಗ್ಗೆ ಮಾಹಿತಿ ನೀಡಲು ಆಯೋಜಕರು ಹಾಗೂ ಕಲರ್ಸ್‌ ತಂಡ ಸಜ್ಜಾಗಿದೆ. ಇದನ್ನೂ ಓದಿ: ರಶ್ಮಿಕಾರನ್ನೇ ಫಾಲೋ ಮಾಡ್ತಿದ್ದಾರಾ ‘ಕಿಸ್ಸಿಕ್’ ಬೆಡಗಿ – 7 ಕೋಟಿಗೆ ಸಂಭಾವನೆ ಹೆಚ್ಚಿಸಿಕೊಂಡ ಶ್ರೀಲೀಲಾ!

    ಬಿಗ್‌ಬಾಸ್ ಸೀಸನ್-12ರ ನಿರೂಪಣೆಯನ್ನ ಯಾರು ಮಾಡುತ್ತಾರೆ ಅನ್ನೋದು ಈಗಲೂ ಕೂಡಾ ಪ್ರಶ್ನೆಯಾಗಿ ಕಾಡುತ್ತಿದೆ. ಈ ವಿಚಾರವಾಗಿ ನಟ ಸುದೀಪ್ ಅವರನ್ನ ರಿಯಾಲಿಟಿ ಶೋಗೆ ನಿರೂಪಕರಾಗಿ ಮುಂದುವರೆಯುವಂತೆ ಮನವೊಲಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆದಿದೆಯಂತೆ. ಅಲ್ಲದೇ ಕಿಚ್ಚ ಸುದೀಪ್ ಅವರು ಕೂಡಾ ಕೆಲವು ಷರತ್ತುಗಳನ್ನ ಹಾಕಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಜೂನ್ 30 ಸೋಮವಾರದಂದು ನಡೆಯುವ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಇದನ್ನೂ ಓದಿ: ವೃದ್ಧಾಪ್ಯ ತಡೆಯುವ ಚಿಕಿತ್ಸೆಯೇ ಶೆಫಾಲಿ ಜರಿವಾಲಾಗೆ ಮುಳುವಾಯ್ತಾ ?

    ಅಂದಹಾಗೆ ಈ ಬಾರಿಯ ರಿಯಾಲಿಟಿ ಶೋ ಯಾವ ರೀತಿಯಾದ ಕಾನ್ಸೆಪ್ಟ್‌ನಲ್ಲಿ ಮೂಡಿ ಬರಲಿದೆ..? ಯಾವ ರೀತಿಯಾದ ಸ್ಪರ್ಧಿಗಳಿಗೆ ಅವಕಾಶ ಸಿಗಲಿದೆ ಅನ್ನೋ ಬಗ್ಗೆ ಮಾಹಿತಿ ಕೂಡಾ ಹೊರಬೀಳಲಿದೆ. ಅಲ್ಲದೇ ಕೆಲವರ ಹೆಸರು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಈ ಬಗ್ಗೆ ಕೂಡಾ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆಗಳಿವೆ.  ಇದನ್ನೂ ಓದಿ: ಹನಿಮೂನ್ ಟ್ರಿಪ್‌ನಲ್ಲಿ ವೈಷ್ಣವಿ ಮಸ್ತ್ ಡ್ಯಾನ್ಸ್..ಫುಲ್ ಮಸ್ತಿ!

  • ‘ಮಹಾನಟಿ’ ಶೋಗೆ ಇವರೇ ನೋಡಿ ಜಡ್ಜಸ್

    ‘ಮಹಾನಟಿ’ ಶೋಗೆ ಇವರೇ ನೋಡಿ ಜಡ್ಜಸ್

    ನ್ನ ವಿಭಿನ್ನ ರಿಯಾಲಿಟಿ ಶೋಗಳ (Reality show) ಮೂಲಕ  ಸಾಕಷ್ಟು ಯುವ ಪ್ರತಿಭೆಗಳನ್ನ ಕರುನಾಡಿಗೆ ಪರಿಚಯಿಸಿರುವ ಜೀ಼ ಕನ್ನಡ ವಾಹಿನಿ, ಈ ಬಾರಿ ಮತ್ತೊಂದು ಹೊಸ ರಿಯಾಲಿಟಿ ಶೋ ಮೂಲಕ ಕರುನಾಡಿನ ಯುವ ನಟಿಯರನ್ನ ಹುಡುಕುವ ಕೆಲಸ ಶುರುಮಾಡಿದೆ.

    ಜೀ಼ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳಾದ ಡ್ರಾಮಾ ಜೂನಿಯರ್ಸ್‌,ಕಾಮಿಡಿ ಕಿಲಾಡಿಗಳು, ಡಿಕೆಡಿ, ಭರ್ಜರಿ ಬ್ಯಾಚುಲರ್ಸ್‌ ಮತ್ತು ಸರಿಗಮಪ ಮೂಲಕ ಈಗಾಗಲೆ ಸಾಕಷ್ಟು ನಟನಟಿಯರು, ಗಾಯಕ ಗಾಯಕಿಯರು ಹಾಗು ಕೊರಿಯೋಗ್ರಾಫರ್‌ಗಳನ್ನ ಕರುನಾಡಿಗೆ ಕೊಟ್ಟಿರುವ ಜೀ಼ ಕನ್ನಡ ವಾಹಿನಿ, ಇದೀಗ ಮಹಾನಟಿ ಎಂಬ ಹೊಚ್ಚ ಹೊಸ ರಿಯಾಲಿಟಿ ಶೋ ಮೂಲಕ ನಿಮ್ಮೂರಿನಲ್ಲಿರುವ ನಟಿಯಾಗುವ ಕನಸು ಹೊತ್ತಿರುವ, ಅವಕಾಶ ವಂಚಿತ ಪ್ರತಿಭೆಗಳಿಗೆ ವೇದಿಕೆ ಒದಗಿಸಲು ಈ ಕಾರ್ಯಕ್ರಮವನ್ನ ಹೆಣೆದ್ದಿದ್ದು,ಕನ್ನಡ ಚಿತ್ರರಂಗಕ್ಕೆ ಯುವ ನಾಯಕ ನಟಿಯರನ್ನ ನೀಡುವ ಕೆಲಸವನ್ನ ಈ ರಿಯಾಲಿಟಿ ಶೋ ಮಾಡಲಿದೆ. ಕರುನಾಡಿನ ಧೀಮಂತ ನಟಿಯರ  ಸಾಲಿಗೆ ಸೇರಲು ಬಯಸುವ ಎಲ್ಲಾ ಯುವ ನಟಿಯರಿಗೆ ವೇದಿಕೆ ಕಲ್ಪಿಸಿಕೊಡುವ ಈ ಮಹಾನಟಿ ಕಾರ್ಯಕ್ರಮವು ,ನಿಮ್ಮ ಕನಸನ್ನ ನನಸು ಮಾಡುವ  ನಾಡಿನ 31 ಜಿಲ್ಲೆಗಳನ್ನ ಸಂಚರಿಸಿ, ಪ್ರತಿಭೆಗಳನ್ನ ಅಳೆದು ತೂಗಿ,ವೇದಿಕೆ ಕಲ್ಪಿಸಿ ಕೊಡಲು ಹೊರಟಿರುವ ಈ ಹೊಸ ರಿಯಾಲಿಟಿ ಶೋನ ಆಡಿಷನ್‌ ಕೊನೆಯ ಹಂತ ತಲುಪಿದೆ.

    ನಟಿಯಾಗುವ ಕನಸು ಹೊತ್ತ ಅದೆಷ್ಟೋ ಯುವ ನಟಿಯರಿಗೆ, ಸರಿಯಾದ ವೇದಿಕೆ ಸಿಗದೆ ಅವರ ಕನಸುಗಳು ಕರುಗುವ ಹೊತ್ತಿನಲ್ಲಿ, ಅದನ್ನ ಪೋಷಿಸಿ ಬೆಳೆಸಲು ಮಾಡುತ್ತಿರುವ ಈ ಹೊಸ ಪ್ರಯತ್ನವೇ ಮಹಾನಟಿ.ಇಂತಹ ಹೊಸ ಪ್ರಯೋಗದ ಈ ಮಹಾನಟಿ (Mahanati) ರಿಯಾಲಿಟಿ ಶೋನಲ್ಲಿ ಜಡ್ಜಸ್ಗಳು ಯಾರು ಎಂಬ ಕುತೂಹಲ ಎಲ್ಲರಲ್ಲು ಈಗ ಮನೆಮಾಡಿದ್ದು, ಈ ಬಾರಿ ಮೂರು ಹೊಸ ಜಡ್ಜಸ್ಗಳು ವೇದಿಕೆಯನ್ನ ಅಲಂಕರಿಸಲ್ಲಿದ್ದು, ಅವರಲ್ಲಿ ಸ್ಯಾಂಡಲ್‌ ವುಡ್ಡಿನ ಖ್ಯಾತ ನಿರ್ದೇಶಕ,ನಟ ರಮೇಶ್‌ ಅರವಿಂದ್‌ (Ramesh Aravind), ಖ್ಯಾತ ನಾಯಕ ನಟಿ ಪ್ರೇಮ (Prema), ಕಾಟೇರದಂತಹ ಯಶಸ್ವಿ ಚಿತ್ರಕೊಟ್ಟ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ಯುವ ನಾಯಕ ನಟಿ ನಿಶ್ವಿಕಾ ನಾಯ್ಡು ಈ ರಿಯಾಲಟಿ ಶೋನ ಜಡ್ಜಸ್ಗಳಾಗಿ ಕಾರ್ಯನಿರ್ವಹಿಸಲ್ಲಿದ್ದಾರೆ.

     

    ಆದರೇ ಆ ನಾಲ್ಕು ಜನಗಳಲ್ಲಿ ಒಬ್ಬರು ಹೊಸದಾಗಿ ಬರುವ ನಟಿಯರಿಗೆ ಅಭಿನಯದ ಮಜಲುಗಳನ್ನ ಕಲಿಸುವ ಮೆಂಟರ್‌ ಆಗಿ ಕಾರ್ಯನಿರ್ವಹಿಸಲ್ಲಿದ್ದಾರೆ ಎಂದು ವಾಹಿನಿ ತಿಳಿಸಿದೆ. ಪ್ರತಿ ಬಾರಿ ತನ್ನ ಕಾರ್ಯಕ್ರಮದಲ್ಲಿ ವಿಭಿನ್ನ ಪ್ರಯೋಗಗಳನ್ನ ಮಾಡುವ ಜೀ಼ ಕನ್ನಡ ವಾಹಿನಿ ಈ ಬಾರಿ  ಮಹಾನಟಿಯ ರಿಯಾಲಿಟಿ ಶೋ ಮೂಲಕ ಮನೋರಂಜನೆಯಲ್ಲಿ ಹೊಸತನವನ್ನ ತರಲು ತಯಾರಿ ಮಾಡಿಕೊಂಡಿದ್ದು, ಇದೇ ಮಾರ್ಚ್‌ 3೦ನೇ ತಾರೀಖು ಶನಿವಾರ ತನ್ನ ಮೊದಲ ಸಂಚಿಕೆ ಪ್ರಸಾರ ಮಾಡಲ್ಲಿದ್ದು,ಇನ್ನು ಮುಂದೆ ಈ ಕಾರ್ಯಕ್ರಮವು ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 7.30ಕ್ಕೆ  ಪ್ರಸಾರವಾಗಲಿದೆ.

  • ಮತ್ತೊಂದು ರಿಯಾಲಿಟಿ ಶೋಗೆ ಆಯ್ಕೆಯಾದ ಡ್ರೋನ್ ಪ್ರತಾಪ್

    ಮತ್ತೊಂದು ರಿಯಾಲಿಟಿ ಶೋಗೆ ಆಯ್ಕೆಯಾದ ಡ್ರೋನ್ ಪ್ರತಾಪ್

    ಬಿಗ್ ಬಾಸ್ ಮೊದಲನೇ ರನ್ನರ್ ಅಪ್ ಆದ ಬೆನ್ನಲ್ಲೇ ಕಲರ್ಸ್ ಕನ್ನಡ ವಾಹಿನಿಯು ಡ್ರೋನ್ ಪ್ರತಾಪ್ ಅವರಿಗೆ ಮತ್ತೊಂದು ಬಿಗ್ ಆಫರ್ ನೀಡಿದೆ. ವಾಹಿನಿಯ ಅತ್ಯಂತ ಜನಪ್ರಿಯ ಶೋ ಗಿಚ್ಚಿಗಿಲಿಗಿಲಿ ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್ ಕಂಟೆಸ್ಟೆಂಟ್ ಆಗಿ ಆಯ್ಕೆಯಾಗಿದ್ದಾರೆ. ಇಂದಿನಿಂದ ರಿಯಾಲಿಟಿ ಶೋದ ಚಿತ್ರೀಕರಣ ಕೂಡ ನಡೆಯುತ್ತಿದೆ.

    ಡ್ರೋನ್ ಪ್ರತಾಪ್ ಮಾತ್ರವಲ್ಲ, ತುಕಾಲಿ ಸಂತೋಷ್, ಮೈಕಲ್ ಮತ್ತು ಇಶಾನಿ ಕೂಡ ಈ ಬಾರಿ ಗಿಚ್ಚಿಗಿಲಿಗಿಲಿಯಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸಲಿದ್ದಾರೆ. ಮೂವರು ಕೂಡ ಇಂದಿನಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಶ್ರುತಿ, ಕೋಮಲ್, ಸಾಧು ಕೋಕಿಲಾ ನಿರ್ಣಾಕರಾಗಿದ್ದಾರೆ.

    ಸಂಕಷ್ಟದಲ್ಲಿ ಪ್ರತಾಪ್

    ಡ್ರೋನ್ ಪ್ರತಾಪ್ (Drone Pratap) ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹಲವಾರು ರೀತಿಯಲ್ಲಿ ಅವರ ಮೇಲೆ ಆರೋಪ ಮಾಡಲಾಗಿತ್ತು. ಡಾ.ಪ್ರಯಾಗ್ ಮಾನನಷ್ಟ ದಾವೆ ಹೂಡಿದ್ದರೆ, ಸಾರಂಗ ಎನ್ನುವವರು ಹಣಕಾಸಿನ ವಿಷಯದಲ್ಲಿ ತಮಗೆ ಮೋಸವಾಗಿದೆ ಎಂದು ಆರೋಪ (Allegation) ಮಾಡಿದ್ದರು. ಈಗ ಎಲ್ಲದಕ್ಕೂ ಪ್ರತಾಪ್ ಉತ್ತರ ನೀಡಿದ್ದಾರೆ.  ಮಾಧ್ಯಮಗಳ ಜೊತೆ ಮಾತನಾಡಿರುವ ಪ್ರತಾಪ್, ಕೆಲವು ವಿಷಯಗಳ ಬಗ್ಗೆ ಮಾತನಾಡಬಾರದು. ಸಕಾರಾತ್ಮಕ ವಿಷಯಗಳ ಬಗ್ಗೆ ಮಾತನಾಡೋಣ. ಸಾರಂಗ ಅವರ ಆರೋಪದ ಬಗ್ಗೆ ಶೀಘ್ರದಲ್ಲೇ ನಾವು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ ಪ್ರತಾಪ್.

    ಬಿಗ್ ಬಾಸ್ ಫಿನಾಲೆ ಹಂತಕ್ಕೆ ತಲುಪುತ್ತಿದ್ದಂತೆಯೇ ಡಾ.ಪ್ರಯಾಗ್ ಎನ್ನುವವರು ಡ್ರೋನ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಇದಾದ ಕೆಲವು ದಿನಗಳ ನಂತರ ತಮಗೆ ಡ್ರೋನ್ ಪ್ರತಾಪ್ ಲಕ್ಷ ಲಕ್ಷ ದೋಖಾ ಮಾಡಿದ್ದಾರೆ ಎಂದು ಸಾರಂಗ ಎನ್ನುವವರು ಆರೋಪ ಮಾಡಿದ್ದರು.

    ಪೂಣಾ ಮೂಲದ ಸಾರಂಗ್ ಮಾನೆ (Sarang Mane) ಎನ್ನುವವರು ಡ್ರೋಣ್ ಪ್ರತಾಪ್ ಗೆ ಬರೋಬ್ಬರಿ 83 ಲಕ್ಷ ರೂಪಾಯಿ ನೀಡಿದ್ದಾರಂತೆ. ಈ ಹಣದಲ್ಲಿ 8 ಡ್ರೋಣ್ ನೀಡುವುದಾಗಿ ಪ್ರತಾಪ್ ಹೇಳಿದ್ದರಂತೆ. ಆದರೆ, ಕೊಟ್ಟ ಮಾತಿನಂತೆ ‍ಪ್ರತಾಪ್ ನಡೆದುಕೊಂಡಿಲ್ಲ ಎನ್ನುವುದು ಮಾನೆ ಆರೋಪ.

     

    ಪ್ರತಾಪ್ ಈಗಾಗಲೇ 2 ಡ್ರೋಣ್ ಕಳಿಸಿದ್ದಾರೆ. ಆದರೆ, ಅವು ಸರಿಯಾಗಿ ಕಾರ್ಯ ಮಾಡುತ್ತಿಲ್ಲ. ಒಂದು ವರ್ಷವಾಗಿದೆ ಹಣವನ್ನೂ ಕೊಡುತ್ತಿಲ್ಲ ಎಂದು ಸಾರಂಗ್ ಮಾನೆ. ಆರೋಪ ಮಾಡುತ್ತಿದ್ದಾರೆ. ರೈತರ ಬೆಳೆಗಳಿಗೆ ಕ್ರಿಮಿನಾಶಕ ಔಷಧ ಸಿಂಪಡಿಸುವ ಡ್ರೋಣ್ ಗಳ ಎಕ್ಸಿಬಿಷನ್ ವೇಳೆ ಸಾರಂಗ್ ಮಾನೆ ಅವರಿಗೆ  ಡ್ರೋಣ್ ಪ್ರತಾಪ್ ಪರಿಚವಾಗಿದ್ದರಂತೆ. ರೈತರಿಗೆ ಡ್ರೋಣ್ ಕಳಿಸಿಕೊಡುವ ಟೆಂಡರ್ ಪಡೆದಿದ್ದ ಸಾರಂಗ್ ಮಾನೆ ಅವರು ಪ್ರತಾಪ್ ಗೆ ಆ ಜವಾಬ್ದಾರಿ ನೀಡಿದ್ದರು.

  • ಕನ್ನಡದಲ್ಲಿ ಮತ್ತೊಂದು ರಿಯಾಲಿಟಿ ಶೋ : ಇದು ಫಿಟ್ ಬಾಸ್

    ಕನ್ನಡದಲ್ಲಿ ಮತ್ತೊಂದು ರಿಯಾಲಿಟಿ ಶೋ : ಇದು ಫಿಟ್ ಬಾಸ್

    ಬಿಗ್ ಬಾಸ್, ಸರಿಗಮಪ ಸೇರಿದಂತೆ ಹಲವಾರು ರಿಯಾಲಿಟಿ ಶೋಗಳು (Reality Show) ಕನ್ನಡ ಕಿರುತೆರೆಯಲ್ಲಿ ಮನರಂಜಿಸುತ್ತಿದೆ. ಈ ಗ್ರೂಪ್ ‍ಗೆ ಮತ್ತೊಂದು ರಿಯಾಲಿಟಿ ಶೋ ಸೇರ್ಪಡೆಯಾಗಿದೆ. ಆಯುಷ್‌ ಟಿ.ವಿ ಕಳೆದ ಏಳು ವರ್ಷಗಳಿಂದ ಆರೋಗ್ಯಕರ ಜೀವನ ಶೈಲಿಗಾಗಿ ಎಂಬ ಧ್ಯೇಯದೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರ ಮನ್ನಣೆಗಳಿಸಿರುವ ಏಕೈಕ ಆರೋಗ್ಯದ ಕುರಿತಾದ ವಾಹಿನಿಯಾಗಿದ್ದು,  ಪ್ರಸ್ತುತ ಕರ್ನಾಟಕದ ಜನಪ್ರಿಯ ಮನೋರಂಜನಾ ವಾಹಿನಿ ಸಿರಿಕನ್ನಡ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಕೇಂದ್ರ (ಕ್ಷೇಮವನ) ಇವರ ಸಹಭಾಗಿತ್ವದಲ್ಲಿ ಆಯೋಜಿಸಿರುವ ವಿಶ್ವದ ಮೊಟ್ಟಮೊದಲ ಆರೋಗ್ಯದ ಕುರಿತಾದ ರಿಯಾಲಿಟಿ ಶೋ ‘ಫಿಟ್‌ ಬಾಸ್‌’ (Fit Boss) ನಿರ್ಮಾಣಗೊಂಡಿದೆ.

    ಫಿಟ್ ಬಾಸ್ ರಿಯಾಲಿಟಿ ಶೋ ಕುರಿತು ಹೆಚ್ಚಿನ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.  ಮನುಷ್ಯನಿಗೆ ಎಲ್ಲದಕ್ಕಿಂತ ಆರೋಗ್ಯವೇ ಹೆಚ್ಚು ಎಂಬ ಧ್ಯೇಯದಿಂದ ನಮ್ಮ ಆಯೂಷ್ ಟಿವಿ ಕಳೆದ ಏಳು ವರ್ಷಗಳಿಂದ ಆರೋಗ್ಯದ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಇದೇ ಮೊದಲ ಬಾರಿಗೆ ಸ್ಥೂಲಕಾಯದವರಿಗಾಗಿ (ಹೆಚ್ಚು ದಪ್ಪ) ಫಿಟ್ ಬಾಸ್ ಎಂಬ ರಿಯಾಲಿಟಿ ಶೋ ಆರಂಭಿಸಲಾಗಿದೆ. ನಮ್ಮೊಂದಿಗೆ ಸಿರಿಕನ್ನಡ ವಾಹಿನಿ‌ ಹಾಗೂ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಕೇಂದ್ರ(ಕ್ಷೇಮವನ) ಕೈ ಜೋಡಿಸಿದೆ ಎಂದು ಆಯೂಷ್ ಟಿವಿ‌ ವೈಸ್ ಚೇರ್ಮನ್ ಅರುಣಾಚಲಂ ತಿಳಿಸಿದರು

    ಕಳೆದ ಕೆಲವು ವರ್ಷಗಳಿಂದ ನಮ್ಮ ಸಿರಿಕನ್ನಡ ವಾಹಿನಿ ಹಲವು ಜನಪ್ರಿಯ ಕಾರ್ಯಕ್ರಮಗಳ ಮೂಲಕ ಜನರ ಮೆಚ್ಚುಗೆ ಪಡೆದಿದೆ. ಪ್ರಸ್ತುತ ಆಯೂಷ್ ಟಿವಿಯ “ಫಿಟ್ ಬಾಸ್” ರಿಯಾಲಿಟಿ ಶೋ ಜೊತೆಗೆ ಸಿರಿಕನ್ನಡ ವಾಹಿನಿ ಕೈ ಜೋಡಿಸಿದೆ. ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಈ ರಿಯಾಲಿಟಿ ಶೋ ಅಕ್ಟೋಬರ್ 16 ರಿಂದ ಸೋಮವಾರದಿಂದ ಶುಕ್ರವಾರದವರೆಗೂ ಆಯೂಷ್ ಟಿವಿ ಸಂಜೆ 7 ಕ್ಕೆ ಹಾಗೂ ಸಿರಿಕನ್ನಡ ವಾಹಿನಿಯಲ್ಲಿ ರಾತ್ರಿ 8 ಕ್ಕೆ ಪ್ರಸಾರವಾಗಲಿದೆ ಎಂದರು ಸಿರಿಕನ್ನಡ ವಾಹಿನಿ ಸಂಸ್ಥಾಪಕ ನಿರ್ದೇಶಕ ಸಂಜಯ್ ಶಿಂಧೆ.

    ಈ ರಿಯಾಲಿಟಿ ಶೋ‌ ನ ಆಡಿಷನ್ ನಲ್ಲಿ  ಸುಮಾರು 2000 ಜನ ಪಾಲ್ಗೊಂಡಿದ್ದರು.  ಅದರಲ್ಲಿ ಸುಮಾರು 100 ಕೆಜಿ ಗಿಂತ ಹೆಚ್ಚು ತೂಕವಿರುವ  21 ಜನರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಇಪ್ಪತ್ತೊಂದು ದಿನ, ತಮ್ಮ ದೇಹದ ಅತಿಯಾದ ತೂಕವನ್ನು ಕಡಿಮೆ ಮಾಡಲು ಇಲ್ಲಿ ಪಾಲ್ಗೊಂಡಿದ್ದು ವಿಶೇಷ,  ತಮ್ಮ ಆರೋಗ್ಯದ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಕ್ಯೂರ್‌ ಮಾಡಿಕೊಳ್ಳುವುದರ ಜೊತೆಗೆ ಆಟ, ಮೋಜು, ಮಸ್ತಿ, ಮತ್ತು ಸ್ನೇಹ ಸಂಬಂಧಗಳ ಮೌಲ್ಯಗಳನ್ನು ಈ ರಿಯಾಲಿಟಿ ಶೋ ನಲ್ಲಿ ಕಲಿತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್, ಅಮೂಲ್ಯ, ರೂಪಿಕಾ, ನಿರೂಪಕ ಮುರಳಿ, ಆರ್ಯನ್ ಶಾಮ್ ಮುಂತಾದ ಗಣ್ಯರು ಗ್ರ್ಯಾಂಡ್ ಫಿನಾಲೆಗೆ ಆಗಮಿಸಿ ಸ್ಪರ್ಧಿಗಳಿಗೆ ಶುಭ ಕೋರಿದ್ದಾರೆ. ಗೆದ್ದ ಸ್ಪರ್ಧಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ ಎಂದು ಫಿಟ್ ಬಾಸ್ ರಿಯಾಲಿಟಿ ಶೋ‌ ನಿರ್ದೇಶಕ ಬಾಲಕೃಷ್ಣ ತಿಳಿಸಿದರು.

    21 ದಿನಗಳಕಾಲ ಪ್ರತಿ ದಿನ ಮುಂಜಾನೆ 5 ರಿಂದ ಯೋಗದೊಂದಿಗೆ ಸಾಧಕರ ದಿನಚರಿ ಪ್ರಾರಂಭವಾದರೆ ಕ್ರಮೇಣ ವಿವಿಧ ನ್ಯಾಚುರೋಪತಿ ಚಿಕಿತ್ಸೆಗಳು ಹಾಗೂ ಹಲವು ಮನೋರಂಜನಾ ಕಾರ್ಯಕ್ರಮಗಳು ಸ್ಪರ್ಧಿಗಳನ್ನು ಕ್ರಿಯಾಶೀಲರನ್ನಾಗಿಸಿರುವಂತೆ ಮಾಡಿದ್ದವು ಎಂಬ ಮಾಹಿತಿಯನ್ನು “ಕ್ಷೇಮವನ”ದ ಮುಖ್ಯ ಕ್ಷೇಮಾಧಿಕಾರಿ ನರೇಂದ್ರ ಶೆಟ್ಟಿ ನೀಡಿದರು. ಫಿಟ್ ಬಾಸ್ ರಿಯಾಲಿಟಿ ಶೋ ನ ಆರಂಭದ ದಿನ ಹಾಗೂ ಫಿನಾಲೆ ದಿನ ನಿರೂಪಕನಾಗಿ ಕೆಲಸ ಮಾಡಿದ್ದು ಖುಷಿಯಾಗಿದೆ.‌ ಇಂತಹ ಕಾರ್ಯಕ್ರಮಗಳನ್ನು ಎಲ್ಲರೂ ನೋಡಬೇಕೆಂದರು ಪ್ರಶಾಂತ್ ಸಂಬರ್ಗಿ (Prashant Sambargi). ಫಿಟ್ ಬಾಸ್ ಕಾರ್ಯಕ್ರಮದ ಬಗ್ಗೆ  ಆಯೂಷ್ ಟಿವಿಯ ದಿವ್ಯ ಅವರು ಮಾತನಾಡಿದರು ಹರಿಕೃಷ್ಣ, ವ್ಯವಸ್ಥಾಪಕ ನಿರ್ದೇಶಕರು ಆಯುಷ್‌ ಟಿ ವಿ, ಸಂಜಯ್‌ ಶಿಂಧೆ, ಸಂಸ್ಥಾಪಕ ನಿರ್ದೇಶಕರು ಸಿರಿ ಕನ್ನಡ ವಾಹಿನಿ, ಪ್ರಶಾಂತ್‌ ಸಂಬರ್ಗಿ, ಕಲಾವಿದರು ಹಾಗೂ ಫಿಟ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆ ನಿರೂಪಕರು,  ಬಾಲಕೃಷ್ಣ, ಫಿಟ್‌ ಬಾಸ್‌ ರಿಯಾಲಿಟಿ ಷೋ ನಿರ್ದೇಶಕರು ಅರುಣಾಚಲಂ , ವೈಸ್‌ ಚೇರ್ಮನ್‌ ಆಯುಷ್‌ ಟಿವಿ ಅರವಿಂದ್‌ ಎನ್.ಜೆ , ಪವನ್ ಕುಮಾರ್‌ , ವಿನಾಯಕ್‌ ಪೈ ,  ದಿವ್ಯ(ಆಯೂಷ್ ಟಿವಿ), ರಾಜೇಶ್‌ ರಾಜಘಟ್ಟ  ಮುಖ್ಯಸ್ಥರು , ಸಿರಿ ಕನ್ನಡ ವಾಹಿನಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುರಿಗಾಹಿ ಹನುಮಂತಗೆ ಮದುವೆ ಮಾಡಿಸೋಕೆ ರೆಡಿಯಾದ ಶೋ

    ಕುರಿಗಾಹಿ ಹನುಮಂತಗೆ ಮದುವೆ ಮಾಡಿಸೋಕೆ ರೆಡಿಯಾದ ಶೋ

    ವರು ಒಟ್ಟು 10 ಮಂದಿ ಕಿಲಾಡಿಗಳು. ಅದ್ರಲ್ಲೊಬ್ಬ ಸಿಂಗರ್. ಇನ್ನೊಬ್ಬ ಡಾನ್ಸರ್. ಮತ್ತೊಬ್ಬ ಹಾಸ್ಯಕ್ಕೆ ಪಂಟರ್. ಹಳ್ಳಿ ಹೈದರಿಗೆ ಮಾತೇ ಬಂಡವಾಳ. ಮಾತಿನಿಂದಲೇ ಸುರಸುಂದರಿಯರನ್ನ ಪಟಾಯಿಸೋದ್ರಲ್ಲಿ ಯಶಸ್ವಿಯಾಗ್ತಾರಾ? ವೀಕೆಂಡ್‌ನಲ್ಲಿ ಭರ್ಜರಿ ಮನರಂಜನೆ ಕೊಡ್ತಿರುವ ಹೊಸ ಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಗ್ರ್ಯಾಂಡ್ ಓಪನಿಂಗ್ ಸಖತ್ತಾಗಿತ್ತು.

    ಮಾತಲ್ಲೇ ಮನೆಕಟ್ಟೋ 10 ಹುಡುಗರು. ಮನಸ್ಸು ತುಂಬಾ ದೊಡ್ಡ ದೊಡ್ಡ ಕನಸು ಕಟ್ಟಿಕೊಂಡಿರುವ 10  ಹುಡುಗೀರು. ಈ ಹತ್ತೂ ಹುಡ್ಗೀರದ್ದು ಬಣ್ಣಬಣ್ಣದ ಕನಸು. ಆದರೆ ಈ ಹತ್ತು ಹುಡುಗರದ್ದು ಹುಡುಗಿಯರ ಮನ ಒಲಿಸೋಕೆ ಸರ್ಕಸ್ಸು. ಸೂಟು ಬೂಟು ಹಾಕೊಳ್ಳೋಕೆ ಬರಲ್ಲ. ಹೈಫೈ ಕಾರಂತೂ ಇಲ್ಲವೇ ಇಲ್ಲ. ಇಂಗ್ಲೀಷು ಬರಲ್ಲ. ಕನ್ನಡ ಬಿಟ್ಟು ನಾವಿಲ್ಲ ಎನ್ನುವ ಹಳ್ಳಿ ಹೈಕಳು.

    ಜೀ ಕನ್ನಡ ವಾಹಿನಿಯ ಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಗೆ ಚಾಲನೆ ಸಿಕ್ಕಿದೆ. ನಿರ್ಣಾಯಕರ ಸ್ಥಾನದಲ್ಲಿ ಕನಸುಗಾರ ರವಿಚಂದ್ರನ್ ಹಾಗೂ ಡಿಂಪಲ್‌ ಕ್ವೀನ್ ರಚಿತಾ ಕುಳಿತಿದ್ದಾರೆ. ದಶ ಹುಡುಗರು ದಶ ಹುಡುಗಿಯರು ಈ ರಿಯಾಲಿಟಿ ಶೋ ಮುಖ್ಯ ಸ್ಪರ್ಧಿಗಳು. ತಮ್ಮ ಟ್ಯಾಲೆಂಟ್‌ನಿಂದ ಈಗಾಗ್ಲೇ ಗುರುತಿಸಿಕೊಂಡಿದ್ದಾರೆ ಕಿಲಾಡಿಗಳು. ಆದರೆ ಇವರಿಗೆ ಹುಡ್ಗೀರ್ ಮಾತ್ರಾ ಬೀಳ್ತಿಲ್ಲ. ಯಾಕಂದ್ರೆ ಇವ್ರೆಲ್ಲಾ ಹುಡುಗರ ಬಗ್ಗೆ ದೊಡ್ಡ ದೊಡ್ಡ ಕನಸು ಹೊತ್ತ ಅಲ್ಟ್ರಾ ಮಾಡರ್ನ್ ಹುಡ್ಗೀರು.

    ವಿವಿಧ ಧಾರಾವಾಹಿಗಳಲ್ಲಿ ನಟನೆಯಿಂದ ಹೆಸರು ಮಾಡಿರುವ ನಟಿಯರೇ ಭರ್ಜರಿ ಬ್ಯಾಚುಲರ್ಸ್‍ ಗಳಿಗೆ ಸ್ವಯಂ ವರಕ್ಕೆ ನಿಂತಿರುವ ಸುಂದರಾಂಗಿಯರು. ಅಂದಚಂದ, ನೃತ್ಯ, ಹಾಡು ಓದು ಬರಹದಲ್ಲಿ ಮುಂದಿರುವ ಈ ಸುಂದರಿಯರಿಗೆ ತಕ್ಕಂಥ ಜೋಡಿ ಈ ದಶ ಕಿಲಾಡಿಗಳಲ್ಲಿ ಯಾರಾಗ್ತಾರೆ? ಎಲ್ಲರಿಗೂ ಕುತೂಹಲ ಇದೆ. ಒಬ್ಬೊಬ್ಬರಾಗೇ ಬ್ಯಾಚುಲರ್‌ಗಳು ಅಖಾಡಕ್ಕಿಳಿದು ಸುಂದರಿಯರನ್ನ ಒಲಿಸಿಕೊಳ್ಳುವ ಎಲ್ಲಾ ಪ್ರಯತ್ನ ಮಾಡ್ತಿದ್ದಾರೆ.

    ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಭಾರೀ ಮಿಂಚಿರುವ ಪ್ರತಿಭೆಗಳು ತಮ್ಮ ನಟನೆ, ಮಾತಿನ ಚತುರತೆಯಿಂದ ಹುಡ್ಗೀರ ಮನ ಗೆಲ್ಲಬೇಕಿಗೆ. ಯಾಕಂದ್ರೆ ಲುಕ್ ಇಲ್ಲ. ಆದರೆ ಲಕ್‌ನಿಂದ ಯಾವ ಸುಂದರಿಯರೂ ಮಾತಿಗೆ ಕರುಗುತ್ತಿಲ್ಲ. ಹೀಗಾಗೇ ರಿಯಾಲಿಟಿ ಶೋ ಆರಂಭದಲ್ಲೇ ಹುಡ್ಗೀರ ಮನ ಕದಿಯಲು ಭರ್ಜರಿ ಸರ್ಕಸ್ ಮಾಡ್ತಿದ್ದಾರೆ ಭರ್ಜರಿ ಬ್ಯಾಚುಲರ್ಸ್.

    ಭರ್ಜರಿ ಬ್ಯಾಚುಲರ್ಸ್ ಪಟ್ಟಿಯಲ್ಲಿ ವಿಧ ವಿಧದ ಪ್ರತಿಭೆಗಳಿವೆ. ಮುಗ್ಧತೆಯಿಂದ ಹೆಸರು ಮಾಡಿರುವ ಕುರಿಗಾಹಿ ಸಿಂಗರ್ ಹನುಮಂತ. ಹುಡ್ಗೀರ್ ಕಂಡ್ರೆ ನಾಚಿಕೊಳ್ತಾನೆ. ಈ ಸ್ಪರ್ಧೆಯಲ್ಲಿ ಹೇಗೆ ಕಾಣಿಸ್ಕೊಳ್ತಾನೆ ಅನ್ನೋದು ಕುತೂಹಲ. ಇನ್ನು ಹುಡ್ಗೀರ ಪಾತ್ರದಲ್ಲೇ ಮಿಂಚುವ ರಾಘವೇಂದ್ರಾಗೆ ಹುಡ್ಗೀರ ಸ್ನೇಹವಷ್ಟೇ ಅಲ್ಲದೇ ಪ್ರೀತಿಯೂ ಸಿಗಬೇಕಿದೆ. ಹೇಗೆ ಯಶಸ್ವಿಯಾಗ್ತಾನೆ ಅನ್ನೋದು ನಿರೀಕ್ಷೆ.

    ರಾಕೇಶ್, ಮನೋಹರ್, ಸೂರಜ್ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಸಿಕ್ಕಿರುವ ಜೀ ಪ್ರತಿಭೆಗಳು. ಆದರೆ ನಗಿಸುವಷ್ಟು ಸುಲಭವಾ ಹುಡ್ಗೀರ ಮನ ಗೆಲ್ಲೋದು? ಅದನ್ನ ಸ್ವತಃ ಟ್ರೈ ಮಾಡೋಕೆ ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ಕಾಣಿಸ್ಕೊಂಡಿದ್ದಾರೆ. ಈ ಕಿಲಾಡಿಗಳಿಗೆ ಕಾಳ್ ಹಾಕೋದು ಸುಲಭ. ಆದರೆ ಆ ಕಾಳನ್ನ ಆರಿಸಿಕೊಳ್ಳೋಕೆ ಇಲ್ಲಿ ಹುಡ್ಗೀರಂತೂ ಸಿದ್ಧವಿಲ್ಲ.

    ಬೇರೆ ಬೇರೆ ಕ್ಷೇತ್ರದಲ್ಲಿ ಹೆಸರು ಮಾಡಿರೋ ಹಲವು ಪ್ರತಿಭೆಗಳು ಒಂದೆಡೆ ಸೇಕ್ಕೊಂಡು ಮಸ್ತ್ ಮನರಂಜನೆ ಕೊಡಲು ಬಂದಿದ್ದಾರೆ. ಆದರೆ ಹುಡ್ಗೀರ್ ಮಾತ್ರಾ ಪ್ರತಿಭೆ ಜೊತೆ ಪೈಲ್ವಾನ್ ಗುಣದ ಹುಡುಗ ಬೇಕು ಎನ್ನುತ್ತಿದ್ದಾರೆ. ಹೀಗಾಗಿ ಭರ್ಜರಿ ಬ್ಯಾಚುಲರ್‌ಗಳಿಗೆ ಯಾವ ಯಾವ ಹುಡ್ಗೀರು ಸೆಟ್ ಆಗ್ತಾರೋ ನೋಡ್ಬೇಕಿದೆ.