Tag: real star

  • ಉಪೇಂದ್ರ ಅವರ  ಹೊಸ ಸಿನಿಮಾದ ಪೋಸ್ಟರ್: ಅಸಲಿನಾ..? ನಕಲಿನಾ..?

    ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟರ್: ಅಸಲಿನಾ..? ನಕಲಿನಾ..?

    ಮೊನ್ನೆಯಷ್ಟೇ ರಿಲೀಸ್ ಆಗಿರುವ ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟರ್, ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಕೊಂಬಿನ ಕುದುರೆ ಏರಿ ಬಂದ ಉಪೇಂದ್ರ ಅವರು ತಮ್ಮ ಸಿನಿಮಾದ ಪೋಸ್ಟರ್ ಅನ್ನು ಬೇರೆ ಸಿನಿಮಾದಿಂದ ಎರವಲು ಪಡೆದ್ರಾ ಅಥವಾ ಏನೂ ಗೊತ್ತಿಲ್ಲದೇ ತಮ್ಮ ಸ್ವಂತ ಬುದ್ಧಿವಂತಿಕೆಯಿಂದ ತಯಾರು ಮಾಡಿದ್ರಾ ಎನ್ನುವ ಪ್ರಶ್ನೆಯನ್ನು ಹಲವು ಸೋಷಿಯಲ್ ಮೀಡಿಯಾ ಮೂಲಕ ಕೇಳಿದ್ದಾರೆ. ಅದಕ್ಕೆ ಪೂರಕ ದಾಖಲೆಯನ್ನು ಅವರು ನೀಡಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ಕಳೆದ ವರ್ಷವಷ್ಟೇ ಬಿಡುಗಡೆ ಆಗಿರುವ ಜೇಮ್ಸ್ ಡಿಮೊನಾಕೋ ಅವರು ಬರೆದು, ನಿರ್ಮಿಸಿದ  ‘ದಿ ಫಾರೆವರ್ ಪರ್ಜ್’ ಸಿನಿಮಾದ ಪೋಸ್ಟರ್ ಗೂ ಮತ್ತು ಉಪೇಂದ್ರ ಅವರು ಬಿಡುಗಡೆ ಮಾಡಿರುವ ಪೋಸ್ಟರ್ ಗೂ ಸಾಕಷ್ಟು ಹೋಲಿಕೆ ಕಾಣುತ್ತದೆ. ಹೀಗಾಗಿ ಬಹುತೇಕ ಇದೇ ಸಿನಿಮಾದ ಸ್ಫೂರ್ತಿಯಿಂದಾಗಿ ರಿಯಲ್ ಸ್ಟಾರ್ ತಮ್ಮ ಸಿನಿಮಾದ ಪೋಸ್ಟರ್ ತಯಾರಿಸಿದ್ದಾರೆ ಎನ್ನುವ ಅನುಮಾನ ಮೂಡುತ್ತದೆ. ಇದನ್ನೂ ಓದಿ : ಇರುವೆ ಪಾತ್ರವಾಗಿ ಬಂದ ಸಂಚಾರಿ ವಿಜಯ್

    ಉಪೇಂದ್ರ ಅವರ ಪೋಸ್ಟರ್ ನಲ್ಲಿ ಗತಿಸಿದ ಇತಿಹಾಸ, ಮಸೀದೆ, ದೇವಾಲಯ, ಚರ್ಚ್ ಗಳ ಅವಶೇಷಗಳಿವೆ. ರೈಲಿದೆ, ಸ್ಯಾಟ್ ಲೈಟ್ ಕೂಡ ಕಾಣುತ್ತದೆ.  ನಶಿಸಿದ ನಾಗರೀಕತೆಯ ಕುರುಹುಗಳಿವೆ. ಎರಡು ಕಾಲ ಘಟ್ಟವನ್ನು ಬೆಸೆಯುವಂತಹ ಧೀರನಾಗಿ ಕಲ್ಕಿ ಅವತಾರವಿದೆ. ‘ದಿ ಫಾರೆವರ್ ಪರ್ಜ್’ ನಲ್ಲಿ ಯುಎಸ್ ಕಾರ್ಟೆಲ್ ಗಳ ಹಿಂಸಾಚಾರದಿಂದ ಪಾರಾಗಲು ಗಡಿ ದಾಟಿದ ಮೆಕ್ಸಿಕನ್ ವಲಸಿಗರ ಮೇಲಿನ ಕಥೆ ಈ ಸಿನಿಮಾದಲ್ಲಿದೆ. ಹೀಗಾಗಿ ಬಹಳಷ್ಟು ಅಂಶಗಳು ಎರಡೂ ಸಿನಿಮಾದ ಕೊಡುಕೊಳ್ಳುವಿಕೆಯ ಭಾಗವಾಗಿವೆಯಾ ಎಂಬ ಅನುಮಾನ ಕೂಡ ಮೂಡುತ್ತದೆ. ಇದನ್ನೂ ಓದಿ : ಜೇಮ್ಸ್ ಚಿತ್ರದ ಬೆಳಗ್ಗಿನ 6 ಗಂಟೆಯ 200 ಶೋಗಳ ಟಿಕೆಟ್ ಸೋಲ್ಡ್ ಔಟ್: ಏನೆಲ್ಲ ದಾಖಲೆ?

    ಇದರ ಜತೆಗೆ ಇನ್ನೂ ಎರಡು ಪೋಸ್ಟರ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆ ಪೋಸ್ಟರ್ ಗಳು ಯಾವ ಸಿನಿಮಾದ್ದು ಎನ್ನುವ ಹುಡುಕಾಟ ಕೂಡ ನಡೆದಿದೆ. ಈ ಎಲ್ಲದರ ಸ್ಫೂರ್ತಿಯಿಂದಾಗಿಯೇ ಉಪ್ಪಿ ತಮ್ಮ ಚಿತ್ರದ ಪೋಸ್ಟರ್ ರೆಡಿ ಮಾಡಿದ್ದಾರಾ ಎಂದು ಅವರೇ ಸ್ಪಷ್ಟ ಪಡಿಸಬೇಕು.

  • ಪ್ರಜಾಕೀಯ ಪರವಾಗಿ ದೇಶಕ್ಕೆ ಮಾದರಿಯಾಗೋ ಕೆಲಸ ಮಾಡಿದ್ದೀರಿ: ಉಪೇಂದ್ರ

    ಪ್ರಜಾಕೀಯ ಪರವಾಗಿ ದೇಶಕ್ಕೆ ಮಾದರಿಯಾಗೋ ಕೆಲಸ ಮಾಡಿದ್ದೀರಿ: ಉಪೇಂದ್ರ

    – ಟ್ರ್ಯಾಕ್ಟರ್ ಮೇಲೆ ನಿಂತು ರಿಯಲ್ ಸ್ಟಾರ್ ಭಾಷಣ

    ದಾವಣಗೆರೆ: ಪ್ರಜಾಕೀಯ ಪರವಾಗಿ ದೇಶಕ್ಕೆ ಮಾದರಿಯಾಗುವಂತಹ ಕೆಲಸ ಮಾಡಿದ್ದೀರಿ. ನಿಜವಾದ ಪ್ರಜಾಪ್ರಭುತ್ವದ ಪ್ರಭುಗಳು ನೀವು. ಎಲ್ಲಾ ಹಳ್ಳಿಗೂ ನಿಮ್ಮ ಮಾದರಿಯನ್ನು ಸಾರುತ್ತೇನೆ ಎಂದು ಪ್ರಜಾಕೀಯ ಸಂಸ್ಥಾಪಕ, ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದಾರೆ.

    ಪ್ರಜಾಕೀಯ ಬೆಂಬಲಿತ ಅಭ್ಯರ್ಥಿ ಚೇತನ್ ಕುಮಾರ್ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅರೇಹಳ್ಳಿ ಗ್ರಾಮಕ್ಕೆ ರಿಯಲ್ ಸ್ಟಾರ್ ಭೇಟಿ ನೀಡಿ ಚೇತನ್ ನನ್ನು ಅಭಿನಂದಿಸಿದ್ದಾರೆ.

    ಅರೇ ಹಳ್ಳಿಯಲ್ಲಿ ಟ್ರಾಕ್ಟರ್ ಟ್ರೈಲರ್ ಮೇಲೆ ನಿಂತು ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಉಪೇಂದ್ರ, ಪ್ರಜಾಕೀಯ ಪರವಾಗಿ ದೇಶಕ್ಕೆ ಮಾದರಿಯಾಗುವಂತಹ ಕೆಲಸ ಮಾಡಿದ್ದೀರಿ. ನಿಜವಾದ ಪ್ರಜಾಪ್ರಭುತ್ವದ ಪ್ರಭುಗಳು ನೀವು. ಎಲ್ಲಾ ಹಳ್ಳಿಗೂ ನಿಮ್ಮ ಮಾದರಿಯನ್ನು ಸಾರುತ್ತೇನೆ. ಪ್ರತಿ ಹಳ್ಳಿಗೂ ನೀವೇ ಮಾಡೆಲ್. ನೀವು ಗೆಲ್ಲಿಸಿರುವ ಅಭ್ಯರ್ಥಿ ಅವನು ಪ್ರಭುವಲ್ಲ ಅವನು ಕೆಲಸಗಾರ. ಕರ್ನಾಟಕಕ್ಕೆ ನಿಮ್ಮ ಹಳ್ಳಿ ಸ್ಪೂರ್ತಿ ಎಂದು ಬಣ್ಣಿಸಿದರು.

    ಅರೇಹಳ್ಳಿ ಗ್ರಾಮಕ್ಕೆ ಉಪೇಂದ್ರ ಬರುತ್ತಿದ್ದಂತೆಯೇ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದ್ದಾರೆ. ಬಳಿಕ ಉಪೇಂದ್ರ ಅವರು ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇದೇ ವೇಳೆ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದ ಪ್ರಸಂಗವೂ ನಡೆಯಿತು.

  • ಸರ್ಕಾರಕ್ಕೆ ಉಪ್ಪಿ ಟಿಪ್ಸ್- ರಾಜಕೀಯ ಪಕ್ಷಗಳ ವಿರುದ್ಧ ಫುಲ್ ಗರಂ

    ಸರ್ಕಾರಕ್ಕೆ ಉಪ್ಪಿ ಟಿಪ್ಸ್- ರಾಜಕೀಯ ಪಕ್ಷಗಳ ವಿರುದ್ಧ ಫುಲ್ ಗರಂ

    ಬೆಂಗಳೂರು: ಸಿನಿಮಾ ಹಾಗೂ ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ಸರ್ಕಾರಕ್ಕೆ ಸಲಹೆವೊಂದನ್ನು ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ರಿಯಲ್ ಸ್ಟಾರ್, ಸರ್ಕಾರವು ಬಿಪಿಎಲ್, ರಸ್ತೆ ಬದಿಯ ವ್ಯಾಪಾರಸ್ಥರು, ಕಟ್ಟಡ-ವಲಸೆ ಕೂಲಿ ಕಾರ್ಮಿಕರು, ವಿಕಲಾಂಗಚೇತನರು, ವಯೋವೃದ್ಧರು, ಆಟೋ-ಕ್ಯಾಬ್ ಚಾಲಕರು ಇತರೆ ಎಲ್ಲ ವರ್ಗದ ಜನರ ಸಂಪೂರ್ಣ ಮಾಹಿತಿಗಳನ್ನು ಪಾರದರ್ಶಕವಾಗಿ ಸಂಗ್ರಹಿಸಬೇಕು. ಈ ಮೂಲಕ ಅಗತ್ಯವಸ್ತುಗಳು ತಲುಪ ಬೇಕಾದವರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚಿತ್ರರಂಗದ ದಿನಗೂಲಿ ಕಾರ್ಮಿಕರಿಗೆ 4.50 ಲಕ್ಷ ದೇಣಿಗೆ ನೀಡಿದ ಉಪೇಂದ್ರ

    ರಾಜಕೀಯ ಪಕ್ಷಗಳ ವಿರುದ್ಧ ಉಪೇಂದ್ರ ಫುಲ್ ಗರಂ ಆಗಿದ್ದಾರೆ. “ಎಲ್ಲಾ ರೀತಿಯ ಜನಸಾಮಾನ್ಯರ ವಿವರಗಳನ್ನು ಸಂಗ್ರಹಿಸಿ ಅವುಗಳನ್ನು ಪಾರದರ್ಶಕವಾಗಿ ಪ್ರಕಟಿಸಬೇಕು. ಇದರಿಂದಾಗಿ ಇಷ್ಟು ವರ್ಷ ಅದನ್ನು ಮಾಡಿದ್ವಿ, ಇದನ್ನ ಮಾಡಿದ್ವಿ ಎನ್ನುವ ರಾಜಕೀಯ ಪಕ್ಷಗಳ ಮಾತು ಸತ್ಯವೋ? ಸುಳ್ಳೋ? ಅನ್ನೊದು ತಿಳಿಯುತ್ತದೆ” ಎಂದು ಸವಾಲು ಹಾಕಿದ್ದಾರೆ.

    ಅಷ್ಟೇ ಅಲ್ಲದೆ ಸರಿ ಸುಮಾರು ಶೇ.40ರಷ್ಟು ಜನರ ತೆರಿಗೆ ಹಣದಲ್ಲಿ ಸಂಬಳ, ಭತ್ಯೆಗಳನ್ನೆಲ್ಲಾ ಪಡೆಯುವ ದೊಡ್ಡ ಆಡಳಿತ ವ್ಯವಸ್ಥೆ ಹೊಂದಿರುವ ಸರ್ಕಾರಕ್ಕೆ ಇದು ಅಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ರಾಜಕೀಯ ಬೆಂಬಲಿಗರು ಇದಕ್ಕೆ ಉತ್ತರಿಸಬೇಕು ಎಂದು ಕೇಳಿಕೊಂಡಿದ್ದಾರೆ.

  • ರವಿಚಂದ್ರನ್ ರೌಡಿಸಂಗೆ ಹಾರರ್ ಫ್ರೇಮ್?

    ರವಿಚಂದ್ರನ್ ರೌಡಿಸಂಗೆ ಹಾರರ್ ಫ್ರೇಮ್?

    ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಒಂದಾಗಿದ್ದಾರೆ. ಓಂಪ್ರಕಾಶ್ ರಾವ್ ನಿರ್ದೇಶನದ ರವಿಚಂದ್ರ ಚಿತ್ರದಲ್ಲಿ ಅವರಿಬ್ಬರೂ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅದ್ಧೂರಿಯಾಗಿಯೇ ಮುಹೂರ್ತ ಸಮಾರಂಭವೂ ನಡೆದಿದೆ.

    ಕನ್ನಡದ ಮಟ್ಟಿಗೆ ಮಲ್ಟಿ ಸ್ಟಾರರ್ ಚಿತ್ರಗಳು ಅಪರೂಪ. ಈ ಹಿಂದೆ ಮುಕುಂದ ಮುರಾರಿ ಚಿತ್ರದಲ್ಲಿ ಉಪೇಂದ್ರ ಸುದೀಪ್ ಜೊತೆ ನಟಿಸಿದ್ದರಲ್ಲಾ. ಇದೀಗ ಉಪ್ಪಿ ಕ್ರೇಜಿಸ್ಟಾರ್ ಜೊತೆ ನಟಿಸಲು ಮುಂದಾಗಿದ್ದಾರೆ. ಹೀಗಿದ್ದ ಮೇಲೆ ಈ ಚಿತ್ರದ ಕಥೆಯ ಬಗ್ಗೆ, ಉಪ್ಪಿ ಮತ್ತು ರವಿಚಂದ್ರನ್ ಅವರ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡದಿರುತ್ತಾ?

    ಈ ಚಿತ್ರ ಭಯಾನಕ ಡಾನ್ ಗಳಿಬ್ಬರ ಕಥೆ ಹೊಂದಿದೆಯಂತೆ. ಉಪೇಂದ್ರ ಮತ್ತು ರವಿಚಂದ್ರನ್ ಇಬ್ಬರೂ ಡಾನ್‍ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಕಥೆ ಹೀಗಿರೋವಾಗ ಇದು ಪಕ್ಕಾ ಆಕ್ಷನ್ ಸಿನಿಮಾ ಎಂಬುದರಲ್ಲಿ ಯಾವುದೇ ಸಂದೇಹಗಳಿಲ್ಲ. ಆದರೆ ನಿರ್ದೇಶಕ ಓಂಪ್ರಕಾಶ್ ರಾವ್ ಈ ಮಾಸ್ ಕಥೆಯಲ್ಲಿಯೇ ಮೈ ನಡುಗಿಸುವಂಥಾ ಹಾರರ್ ಕಥಾನಕವನ್ನೂ ಸೇರಿಸಿದ್ದಾರಂತೆ. ಅದುವೇ ಈ ಚಿತ್ರದ ಅಸಲೀ ಸ್ಪೆಷಾಲಿಟಿ!

    ಪ್ರೇಮ ಕಥಾನಕಗಳಿಗೇ ಬ್ರ್ಯಾಂಡ್ ಆಗಿರುವವರು ಕ್ರೇಜಿಸ್ಟಾರ್ ರವಿಚಂದ್ರನ್. ಇತ್ತೀಚೆಗೆ ಅದರಾಚೆಗಿನ ಪಾತ್ರಗಳಲ್ಲಿ ನಟಿಸಿದ್ದರೂ ರವಿಚಂದ್ರನ್ ಅವರಿಗೆ ಹಳೇ ಇಮೇಜು ಇದ್ದೇ ಇದೆ. ಅಂಥಾ ರವಿಮಾಮ ಈ ಚಿತ್ರದಲ್ಲಿ ಡಾನ್ ಆಗಿ ಅಬ್ಬರಿಸಲಿದ್ದಾರೆಂದ ಮೇಲೆ ಯಾರಿಗಾದರೂ ಅಚ್ಚರಿದಾಯಕ ಕೌತುಕ ಕಾಡಿಯೇ ಕಾಡುತ್ತದೆ. ಇಂಥಾ ಸೂಕ್ಷ್ಮ ವಿಚಾರಗಳ ಮೂಲಕವೇ ಪ್ರೇಕ್ಷಕರನ್ನು ಸೆಳೆಯೋ ಕಲೆ ಅರಿತುಕೊಂಡಿರುವ ನಿರ್ದೇಶಕ ಓಂಪ್ರಕಾಶ್ ರಾವ್, ಈ ಚಿತ್ರದ ಮೂಲಕ ಮತ್ತೊಂದು ಗೆಲುವಿನ ಪರ್ವಕ್ಕೆ ನಾಂದಿ ಹಾಡೋ ಉತ್ಸಾಹದಿಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಿಯಲ್ ಸ್ಟಾರ್ ಉಪ್ಪಿಯ ರಾಜಕೀಯ ಪಕ್ಷದ ಹೆಸರು ಬಹಿರಂಗ

    ರಿಯಲ್ ಸ್ಟಾರ್ ಉಪ್ಪಿಯ ರಾಜಕೀಯ ಪಕ್ಷದ ಹೆಸರು ಬಹಿರಂಗ

    ಬೆಂಗಳೂರು: ರಾಜಕೀಯಕ್ಕೆ ಬರೋದಾಗಿ ಘೋಷಿಸಿ ತೀವ್ರ ಸಂಚಲನ ಮೂಡಿಸಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ಅವ್ರ ಪಾರ್ಟಿ ಹೆಸರೇನು? ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.

    ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರ ರಾಜಕೀಯ ಪಕ್ಷದ ಹೆಸರು ಬಯಲಾಗಿದೆ. ಉಪೇಂದ್ರ ಅವರ ಪಕ್ಷದ ಹೆಸರು ಪ್ರಜಾಕಾರಣ ಅಲ್ಲ, ಪ್ರಜಾಕೀಯವೂ ಅಲ್ಲ. ಬದಲಾಗಿ ಉಪ್ಪಿಯ ಪೊಲಿಟಿಕಲ್ ಪಾರ್ಟಿ ಹೆಸರು `ಉತ್ತಮ ಪ್ರಜಾ ಪಾರ್ಟಿ’ ಎಂದು ತಿಳಿದುಬಂದಿದೆ. ಸದಸ್ಯತ್ವ ನೋಂದಣಿ ಅರ್ಜಿಯಲ್ಲಿ ಉಪ್ಪಿ ಪಕ್ಷದ ಹೆಸರು ಬಹಿರಂಗವಾಗಿದೆ.

    ಈಗಾಗಲೇ ತಮ್ಮ ಆಪ್ತರ ಜೊತೆ ಸರಣಿ ಸಭೆ ನಡೆಸುತ್ತಿರುವ ಉಪೇಂದ್ರ, ತಮ್ಮ ಹೊಸ ಪಕ್ಷದ ಸದಸ್ಯತ್ವ ಪಡೆಯಲು ಬಯಸುವವರಿಗೆ ಅರ್ಜಿ ರೆಡಿ ಮಾಡಿದ್ದಾರೆ. ಶೀಘ್ರವೇ ರಾಜ್ಯದ ವಿವಿಧೆಡೆ ಸುತ್ತಾಡಿ ಜನರ ಅಭಿಪ್ರಾಯ ಸಂಗ್ರಹಿಸಲು ಉಪೇಂದ್ರ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

    https://www.youtube.com/watch?v=yA2a-QU2DuI

  • ನಟ ಉಪೇಂದ್ರ ಅಣ್ಣನ ಮಗ ಸಿನಿಮಾ ರಂಗಕ್ಕೆ ಎಂಟ್ರಿ

    ನಟ ಉಪೇಂದ್ರ ಅಣ್ಣನ ಮಗ ಸಿನಿಮಾ ರಂಗಕ್ಕೆ ಎಂಟ್ರಿ

    ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣ ಸುರೇಂದ್ರರ ಮಗ ನಿರಂಜನ್ ಸಿನಿಮಾ ರಂಗಕ್ಕೆ ಪಾದಾರ್ಪಣೆಯಾಗುತ್ತಿದ್ದಾರೆ.

    ನಿರಂಜನ್ ಇದೀಗ ಓದು ಮುಗಿಸಿದ್ದು ಬಣ್ಣ ಹಚ್ಚೋಕೆ ತಯಾರಾಗಿದ್ದಾರೆ. ಇದೇ ತಿಂಗಳು 10 ರಂದು ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಇನ್ನೂ ಹೆಸರಿಡದ ಈ ಚಿತ್ರವನ್ನ ಹೊಸ ಪ್ರತಿಭೆ ಯೋಗಿ ದೇವಗಂಗೆ ನಿರ್ದೇಶಿಸುತ್ತಿದ್ದಾರೆ.

    ಈ ಚಿತ್ರದಲ್ಲಿ ನಿರಂಜನ್ ಚಿಕ್ಕಮ್ಮ ಪ್ರಿಯಾಂಕ ಉಪೇಂದ್ರ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗ್ಲೇ ನಿರಂಜನ್ ಫೋಟೋಶೂಟ್ ಮಾಡಲಾಗಿದೆ. ಇದೀಗ ನಿರಂಜನ್ ಎಂಟ್ರಿಯಾಗೋದರ ಮೂಲಕ ಉಪೇಂದ್ರ ಫ್ಯಾಮಿಲಿಯಲ್ಲಿ ಇನ್ನೊಬ್ಬ ಸದಸ್ಯರು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಂತಾಗಿದೆ.