Tag: real estate

  • ಪಬ್ಲಿಕ್‌ ಟಿವಿ ರಿಯಲ್‌ ಎಸ್ಟೇಟ್‌ ಎಕ್ಸ್‌ಪೋಗೆ ನಾಳೆ ಚಾಲನೆ

    ಪಬ್ಲಿಕ್‌ ಟಿವಿ ರಿಯಲ್‌ ಎಸ್ಟೇಟ್‌ ಎಕ್ಸ್‌ಪೋಗೆ ನಾಳೆ ಚಾಲನೆ

    ಬೆಂಗಳೂರು: ಸಾಕು ಈ ಬಾಡಿಗೆ ಮನೆ ಸಹವಾಸ. ಈ ಸಲ ಸಾಲ ಮಾಡಿಯಾದರೂ ನಮ್ಮದೇ ಸ್ವಂತ ಮನೆ ನಿರ್ಮಿಸಬೇಕು ಎಂದು ಕನಸು ಕಾಣುತ್ತಿರುವವರಿಗೆ ನಿಮ್ಮ ಪಬ್ಲಿಕ್‍ ಟಿವಿ ಸುಂದರ ವೇದಿಕೆ ನಿರ್ಮಿಸಿದೆ.

    ಪಬ್ಲಿಕ್‌ ಟಿವಿ ಪ್ರಸ್ತುತ ಪಡಿಸುತ್ತಿರುವ ಶ್ರೀ ಧತ್ರಿ ಡೆವಲಪರ್ಸ್ ಪ್ರಾಯೋಜಿಸುತ್ತಿರುವ `ರಿಯಲ್ ಎಸ್ಟೇಟ್ ಎಕ್ಸ್‌ಪೋ-ನಮ್ಮ ಮನೆ’ಗೆ ನಾಳೆ ಚಾಲನೆ ಸಿಗಲಿದೆ. ಮಲ್ಲೇಶ್ವರದ ಕೆ.ಸಿ ಜನರಲ್ ಆಸ್ಪತ್ರೆ ಮುಂಭಾಗದ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಶನಿವಾರ, ಭಾನುವಾರ ಎರಡು ದಿನ ಎಕ್ಸ್‌ಪೋ ನಡೆಯಲಿದೆ.

    ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಎಕ್ಸ್‌ಪೋ ನಡೆಯಲಿದ್ದು ಸೈಟ್ ರೇಟ್, ಫ್ಲ್ಯಾಟ್‌, ಮನೆ ಹಾಗೂ ವಿಲ್ಲಾಗಳ ಬಗ್ಗೆ ಗ್ರಾಹಕರು ಮಾಹಿತಿ ಪಡೆಯಬಹುದು. ಎಕ್ಸ್‌ಪೋದಲ್ಲಿ ಕೆನರಾ ಬ್ಯಾಂಕ್ ಗೃಹ ಸಾಲದ ಬಗ್ಗೆ ಮಾಹಿತಿ ಕೊಡಲಿದೆ. ಸುಸಜ್ಜಿತ ಒಂದೇ ಸೂರಿನಡಿನಲ್ಲಿ ರಾಜ್ಯ ಹಾಗೂ ದೇಶದ 30ಕ್ಕೂ ಹೆಚ್ಚು ಪ್ರತಿಷ್ಠಿತ ಬಿಲ್ಡರ್ಸ್ ಕಂಪನಿಗಳು ಎಕ್ಸ್‌ಪೋನಲ್ಲಿ ಭಾಗವಹಿಸುತ್ತಿವೆ. ಎಕ್ಸ್‌ಪೋದಲ್ಲಿ ನ ನೊಂದಾಯಿಸಲ್ಪಟ್ಟ ಗ್ರಾಹಕರಿಗೆ ಪ್ರತಿ ಅರ್ಧ ಗಂಟೆಗೆ ಲಕ್ಕಿ ಡಿಪ್‌ ಮೂಲಕ ಗಿಫ್ಟ್‌ ನೀಡಲಾಗುತ್ತದೆ. ಇದನ್ನೂ ಓದಿ: ಜೈಲಿಗೆ ಹೋಗೋ ಸ್ಥಿತಿ ಬಂದರೆ ಹೋಗೋಕೆ ಸಿದ್ಧವಾಗಿದ್ದೇನೆ: ರಮೇಶ್ ಕುಮಾರ್

    ಎಕ್ಸ್‌ಪೋ  ವಿಶೇಷತೆ ಏನು?
    ಎಲ್ಲ ಆರ್ಥಿಕ ಸಮುದಾಯವನ್ನು ನೋಡಿಕೊಂಡು ಆಯೋಜಿಸಲಾಗಿದೆ. ಯಾರು ಬೇಕಾದರೂ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

    ಯಾರೆಲ್ಲ ಭಾಗವಹಿಸುತ್ತಾರೆ?
    – ಕನ್‍ಸ್ಟ್ರಕ್ಷನ್ ಕಂಪನಿಗಳು
    – ಲ್ಯಾಂಡ್ ಡೆವಲಪರ್ಸ್
    – ಪ್ರೀಮಿಯಂ ವಿಲ್ಲಾ ಮತ್ತು ಅಪಾರ್ಟ್‍ಮೆಂಟ್ ಕಂಪನಿಗಳು
    – ಹಣಕಾಸು ಸಂಸ್ಥೆಗಳು
    – ಸಿಮೆಂಟ್ ಮತ್ತು ಸ್ಟೀಲ್ ಕಂಪನಿಗಳು
    – ಸ್ಯಾನಿಟರಿ ಫಿಟ್ಟಿಂಗ್
    – ಒಳಾಂಗಣ ವಿನ್ಯಾಸ ಕಂಪನಿಗಳು
    – ಸ್ಮಾರ್ಟ್ ಹೋಮ್ ಡಿವೈಸ್ ಕಂಪನಿಗಳು

    ಯಾರೆಲ್ಲ ಭಾಗವಹಿಸುತ್ತಾರೆ?
    ಟೈಟಲ್ ಸ್ಪಾನ್ಸರ್ – ಶ್ರೀ ಧತ್ರಿ ಡೆವಲಪರ್ಸ್‌ & ಪ್ರಮೋಟರ್ಸ್, ಪ್ಲಾಟಿನಂ ಸ್ಪಾನ್ಸರ್‌ – ರಾಯಲ್‌ ಪ್ರಾಪರ್ಟೀಸ್‌, ಕೋ ಸ್ಪಾನ್ಸರ್‌ – ಡಿಎಸ್‌ ಮ್ಯಾಕ್ಸ್‌ ಪ್ರಾಪರ್ಟೀಸ್‌ ಪ್ರೈ. ಲಿಮಿಟೆಡ್‌, ಪ್ರಾಮಿನೆಂಟ್‌ ಪ್ರಾರ್ಪಟೀಸ್‌, ಪವರ್ಡ್‌ ಬೈ – ಲೋಟಸ್‌ ವೆಂಚರ್ಸ್‌, ಟ್ರಿಂಕೋ ಇನ್‌ಫ್ರಾ ಪ್ರಾಜೆಕ್ಟ್ಸ್‌ ಪ್ರೈ. ಲಿಮಿಟೆಡ್‌, ಅಸೋಸಿಯೇಟ್‌ ಸ್ಪಾನರ್ಸ್‌ – ಎಚ್‌ಎಸ್‌ಎನ್‌ ಡೆವಲಪರ್ಸ್‌ & ಪ್ರಮೋಟರ್ಸ್, ಸರ್ವ ಸಂತೃಪ್ತಿ ವೆಂಚರ್ಸ್‌, ಅಶ್ವಸೂರ್ಯ ರಿಯಲ್ಟೀಸ್‌ ಇಂಡಿಯಾ ಪ್ರೈ. ಲಿಮಿಟೆಡ್‌, ಎಬಿ ಪ್ರಾಪರ್ಟೀಸ್‌.

    ಬ್ಯಾಂಕ್‌ ಪಾರ್ಟ್‌ನರ್ – ಕೆನರಾ ಬ್ಯಾಂಕ್‌ ಸ್ಟೀಲ್‌ ಪಾರ್ಟ್‌ನರ್‌ – ಟರ್ಬೋ ಸ್ಟೀಲ್‌ ಎಲ್‌ಪಿಎಸ್‌ ಟಿಎಂಟಿ ಬಾರ್ಸ್‌ ಗಿಫ್ಟ್‌ ಪಾರ್ಟ್‌ನರ್‌ – ಜೀನಿ ಮಿಲೆಟ್‌ ಹೆಲ್ತ್‌ ಮಿಕ್ಸ್‌.

    ಸ್ಟಾಲ್‌ ಪಾರ್ಟ್‌ನರ್‌ – ಶ್ರೀ ವಿಸ್ತಾರಾ ಡೆವಲಪರ್ಸ್‌ & ಪ್ರಮೋಟರ್ಸ್‌, ಪಿಕೆಬಿ ಡೆವಲಪರ್ಸ್‌ ಆಂಡ್‌ ಪ್ರಮೋಟರ್ಸ್‌, ಬಿಎಸ್‌ಎನ್‌ಎಲ್‌ ಬ್ಯಾಂಕ್‌ ಎಂಪ್ಲಾಯಿಸ್‌ & ವೆಲ್‌ಫೇರ್‌ ಸೊಸೈಟಿ, ಅಭಿರ್ವೇ ಪ್ರಾಪರ್ಟೀಸ್‌, ಪೃಥ್ವಿ ಪಾರ್ಕ್‌ ಸ್ಕ್ಯಾರ್‌, ಎ4 ಪ್ರಾಪರ್ಟೀಸ್‌, ಮನಶ್ವಿ ವೆಂಚರ್ಸ್‌, ಗುರು ಪುನವಾನಿ, ಅಲಯನ್ಸ್‌ ಸ್ಕ್ಯಾರ್‌ ಪ್ರಾಪರ್ಟೀಸ್‌, ಬೆಂಗಳೂರು ಡೆವಲಪ್‌ಮೆಂಟ್‌ ಅಥಾರಿಟಿ, ಕಲ್ಯಾನ್‌ ಶೆಲ್ಟರ್ಸ್‌, ಮೈಸೂರು ಅರ್ಬನ್‌ ಡೆವಲಪ್‌ಮೆಂಟ್‌ ಅಥಾರಿಟಿ, ಎಟಿಝಡ್‌ ಪ್ರಾಪರ್ಟೀಸ್‌, ಬಿಎಲ್‌ ಪ್ರಾಪರ್ಟೀಸ್‌.

  • ಪಬ್ಲಿಕ್‌ ಟಿವಿ ʼನಮ್ಮ ಮನೆʼಗೆ ಬನ್ನಿ – ಕನಸಿನ ಮನೆ ಖರೀದಿಸಿ

    ಪಬ್ಲಿಕ್‌ ಟಿವಿ ʼನಮ್ಮ ಮನೆʼಗೆ ಬನ್ನಿ – ಕನಸಿನ ಮನೆ ಖರೀದಿಸಿ

    ಬೆಂಗಳೂರು: ಸಾಕು ಈ ಬಾಡಿಗೆ ಮನೆ ಸಹವಾಸ. ಈ ಸಲ ಸಾಲ ಮಾಡಿಯಾದರೂ ನಮ್ಮದೇ ಸ್ವಂತ ಮನೆ ನಿರ್ಮಿಸಬೇಕು ಎಂದು ಕನಸು ಕಾಣುತ್ತಿರುವವರಿಗೆ ನಿಮ್ಮ ಪಬ್ಲಿಕ್‍ ಟಿವಿ ಸುಂದರ ವೇದಿಕೆ ನಿರ್ಮಿಸಿದೆ.

    ಪಬ್ಲಿಕ್‌ ಟಿವಿ ಪ್ರಸ್ತುತ ಪಡಿಸುತ್ತಿರುವ ಶ್ರೀ ಧತ್ರಿ ಡೆವಲಪ್ಪರ್ಸ್ ಪ್ರಾಯೋಜಿಸುತ್ತಿರುವ ರಿಯಲ್ ಎಸ್ಟೇಟ್ ಎಕ್ಸ್‌ಪೋ-ನಮ್ಮ ಮನೆ ಮಲ್ಲೇಶ್ವರದ ಕೆ.ಸಿ ಜನರಲ್ ಆಸ್ಪತ್ರೆ ಮುಂಭಾಗದ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಅ.23, 24 ರಂದು ನಡೆಯಲಿದೆ.

    ಬೆಳಗ್ಗೆ 10:00 ರಿಂದ ಸಂಜೆ 6 ಗಂಟೆಯವರೆಗೆ ಎಕ್ಸ್‌ಪೋ ನಡೆಯಲಿದ್ದು ಸೈಟ್ ರೇಟ್, ಫ್ಲ್ಯಾಟ್‌, ಮನೆ ಹಾಗೂ ವಿಲ್ಲಾಗಳ ಬಗ್ಗೆ ಗ್ರಾಹಕರು ಮಾಹಿತಿ ಪಡೆಯಬಹುದು. ಎಕ್ಸ್‌ಪೋದಲ್ಲಿ ಕೆನರಾ ಬ್ಯಾಂಕ್ ಗೃಹ ಸಾಲದ ಬಗ್ಗೆ ಮಾಹಿತಿ ಕೊಡಲಿದೆ. ಸುಸಜ್ಜಿತ ಒಂದೇ ಸೂರಿನಡಿನಲ್ಲಿ ರಾಜ್ಯ ಹಾಗೂ ದೇಶದ 30ಕ್ಕೂ ಹೆಚ್ಚು ಪ್ರತಿಷ್ಠಿತ ಬಿಲ್ಡರ್ಸ್ ಕಂಪನಿಗಳು ಎಕ್ಸ್‌ಪೋನಲ್ಲಿ ಭಾಗವಹಿಸುತ್ತಿವೆ. ಎಕ್ಸ್‌ಪೋದಲ್ಲಿ ನ ನೊಂದಾಯಿಸಲ್ಪಟ್ಟ ಗ್ರಾಹಕರಿಗೆ ಪ್ರತಿ ಅರ್ಧ ಗಂಟೆಗೆ ಲಕ್ಕಿ ಡಿಪ್‌ ಮೂಲಕ ಗಿಫ್ಟ್‌ ನೀಡಲಾಗುತ್ತದೆ.

    ಎಕ್ಸ್‌ಪೋ  ವಿಶೇಷತೆ ಏನು?
    ಎಲ್ಲ ಆರ್ಥಿಕ ಸಮುದಾಯವನ್ನು ನೋಡಿಕೊಂಡು ಆಯೋಜಿಸಲಾಗಿದೆ. ಯಾರು ಬೇಕಾದರೂ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

    ಯಾರೆಲ್ಲ ಭಾಗವಹಿಸುತ್ತಾರೆ?
    – ಕನ್‍ಸ್ಟ್ರಕ್ಷನ್ ಕಂಪನಿಗಳು
    – ಲ್ಯಾಂಡ್ ಡೆವಲಪರ್ಸ್
    – ಪ್ರೀಮಿಯಂ ವಿಲ್ಲಾ ಮತ್ತು ಅಪಾರ್ಟ್‍ಮೆಂಟ್ ಕಂಪನಿಗಳು
    – ಹಣಕಾಸು ಸಂಸ್ಥೆಗಳು
    – ಸಿಮೆಂಟ್ ಮತ್ತು ಸ್ಟೀಲ್ ಕಂಪನಿಗಳು
    – ಸ್ಯಾನಿಟರಿ ಫಿಟ್ಟಿಂಗ್
    – ಒಳಾಂಗಣ ವಿನ್ಯಾಸ ಕಂಪನಿಗಳು
    – ಸ್ಮಾರ್ಟ್ ಹೋಮ್ ಡಿವೈಸ್ ಕಂಪನಿಗಳು

    ಯಾರೆಲ್ಲ ಭಾಗವಹಿಸುತ್ತಾರೆ?
    ಟೈಟಲ್ ಸ್ಪಾನ್ಸರ್ – ಶ್ರೀ ಧತ್ರಿ ಡೆವಲಪರ್ಸ್‌ & ಪ್ರಮೋಟರ್ಸ್, ಪ್ಲಾಟಿನಂ ಸ್ಪಾನ್ಸರ್‌ – ರಾಯಲ್‌ ಪ್ರಾಪರ್ಟೀಸ್‌, ಕೋ ಸ್ಪಾನ್ಸರ್‌ – ಡಿಎಸ್‌ ಮ್ಯಾಕ್ಸ್‌ ಪ್ರಾಪರ್ಟೀಸ್‌ ಪ್ರೈ. ಲಿಮಿಟೆಡ್‌, ಪ್ರಾಮಿನೆಂಟ್‌ ಪ್ರಾರ್ಪಟೀಸ್‌, ಪವರ್ಡ್‌ ಬೈ – ಲೋಟಸ್‌ ವೆಂಚರ್ಸ್‌, ಟ್ರಿಂಕೋ ಇನ್‌ಫ್ರಾ ಪ್ರಾಜೆಕ್ಟ್ಸ್‌ ಪ್ರೈ. ಲಿಮಿಟೆಡ್‌, ಅಸೋಸಿಯೇಟ್‌ ಸ್ಪಾನರ್ಸ್‌ – ಎಚ್‌ಎಸ್‌ಎನ್‌ ಡೆವಲಪರ್ಸ್‌ & ಪ್ರಮೋಟರ್ಸ್, ಸರ್ವ ಸಂತೃಪ್ತಿ ವೆಂಚರ್ಸ್‌, ಅಶ್ವಸೂರ್ಯ ರಿಯಲ್ಟೀಸ್‌ ಇಂಡಿಯಾ ಪ್ರೈ. ಲಿಮಿಟೆಡ್‌, ಎಬಿ ಪ್ರಾಪರ್ಟೀಸ್‌.

    ಬ್ಯಾಂಕ್‌ ಪಾರ್ಟ್‌ನರ್ – ಕೆನರಾ ಬ್ಯಾಂಕ್‌ ಸ್ಟೀಲ್‌ ಪಾರ್ಟ್‌ನರ್‌ – ಟರ್ಬೋ ಸ್ಟೀಲ್‌ ಎಲ್‌ಪಿಎಸ್‌ ಟಿಎಂಟಿ ಬಾರ್ಸ್‌ ಗಿಫ್ಟ್‌ ಪಾರ್ಟ್‌ನರ್‌ – ಜೀನಿ ಮಿಲೆಟ್‌ ಹೆಲ್ತ್‌ ಮಿಕ್ಸ್‌.

    ಸ್ಟಾಲ್‌ ಪಾರ್ಟ್‌ನರ್‌ – ಶ್ರೀ ವಿಸ್ತಾರಾ ಡೆವಲಪರ್ಸ್‌ & ಪ್ರಮೋಟರ್ಸ್‌, ಪಿಕೆಬಿ ಡೆವಲಪರ್ಸ್‌ ಆಂಡ್‌ ಪ್ರಮೋಟರ್ಸ್‌, ಬಿಎಸ್‌ಎನ್‌ಎಲ್‌ ಬ್ಯಾಂಕ್‌ ಎಂಪ್ಲಾಯಿಸ್‌ & ವೆಲ್‌ಫೇರ್‌ ಸೊಸೈಟಿ, ಅಭಿರ್ವೇ ಪ್ರಾಪರ್ಟೀಸ್‌, ಪೃಥ್ವಿ ಪಾರ್ಕ್‌ ಸ್ಕ್ಯಾರ್‌, ಎ4 ಪ್ರಾಪರ್ಟೀಸ್‌, ಮನಶ್ವಿ ವೆಂಚರ್ಸ್‌, ಗುರು ಪುನವಾನಿ, ಅಲಯನ್ಸ್‌ ಸ್ಕ್ಯಾರ್‌ ಪ್ರಾಪರ್ಟೀಸ್‌, ಬೆಂಗಳೂರು ಡೆವಲಪ್‌ಮೆಂಟ್‌ ಅಥಾರಿಟಿ, ಕಲ್ಯಾನ್‌ ಶೆಲ್ಟರ್ಸ್‌, ಮೈಸೂರು ಅರ್ಬನ್‌ ಡೆವಲಪ್‌ಮೆಂಟ್‌ ಅಥಾರಿಟಿ, ಎಟಿಝಡ್‌ ಪ್ರಾಪರ್ಟೀಸ್‌, ಬಿಎಲ್‌ ಪ್ರಾಪರ್ಟೀಸ್‌.

    2019 ರಲ್ಲಿ ನಡೆದ ನಮ್ಮ ಮನೆ ಕಾರ್ಯಕ್ರಮದ ವಿಡಿಯೋ

  • 2 ತಿಂಗಳ ಅಡ್ವಾನ್ಸ್ ಅಷ್ಟೇ ಪಾವತಿಸಿ – ಮಾದರಿ ಬಾಡಿಗೆ ಕಾಯ್ದೆಯಲ್ಲಿ ಏನಿದೆ?

    2 ತಿಂಗಳ ಅಡ್ವಾನ್ಸ್ ಅಷ್ಟೇ ಪಾವತಿಸಿ – ಮಾದರಿ ಬಾಡಿಗೆ ಕಾಯ್ದೆಯಲ್ಲಿ ಏನಿದೆ?

    ನವದೆಹಲಿ: ಮನೆ ಮಾಲೀಕರು ಮತ್ತು ಬಾಡಿಗೆದಾರರಿಗೆ ಸಹಾಯವಾಗುವ ಹೊಸ ಕಾಯ್ದೆಗೆ ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ‘ಮಾದರಿ ಬಾಡಿಗೆ ಕಾಯ್ದೆ’ಗೆ ಅನುಮೋದನೆ ನೀಡಿದೆ.

    ಪ್ರಸ್ತುತ ಈಗ ಬಾಡಿಗೆದಾರರಿಂದ 10 ತಿಂಗಳ ಮುಂಗಡ ಬಾಡಿಗೆಯನ್ನು ಪಡೆಯಲಾಗುತ್ತದೆ. ಆದರೆ ಹೊಸ ಕಾಯ್ದೆಯಲ್ಲಿ ಕೇವಲ 2 ತಿಂಗಳ ಬಾಡಿಗೆಯನ್ನು ಮುಂಗಡವಾಗಿ ಪಡೆಯಲು ಮಾತ್ರ ಷರತ್ತನ್ನು ವಿಧಿಸಲಾಗಿದೆ. ಇದನ್ನೂ ಓದಿ: ಬಾಡಿಗೆ ಕಟ್ಟುವ ದರದಲ್ಲಿ ಇಎಂಐ ಕಟ್ಟಿ, ಸ್ವಂತ ಮನೆ ನಿಮ್ಮದಾಗಿಸಿಕೊಳ್ಳಿ

    ಹೊಸ ಕಾಯ್ದೆಯನ್ನು ನೇರವಾಗಿ ಕೇಂದ್ರ ಸರ್ಕಾರ ಜಾರಿ ಮಾಡುವುದಿಲ್ಲ. ಶೀಘ್ರವೇ ಈ ಕಾಯ್ದೆಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿ ಕೊಡಲಿದೆ. ರಾಜ್ಯಗಳಲ್ಲಿ ಪ್ರತ್ಯೇಕ ಕಾಯ್ದೆಗಳು ಇರುವ ಕಾರಣ ಹಾಲಿ ಬಾಡಿಗೆ ಕಾಯ್ದೆಗಳಿಗೆ ತಿದ್ದುಪಡಿ ತಂದು ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಮನೆಗಳನ್ನು ಬಾಡಿಗೆ ನೀಡುವ ವ್ಯವಸ್ಥೆಗೆ ಉದ್ಯಮ ಸ್ವರೂಪ ನೀಡಿ, ಈ ಉದ್ಯಮದಲ್ಲಿ ಪಾಲ್ಗೊಳ್ಳುವಂತೆ ಖಾಸಗಿ ವಲಯಕ್ಕೆ ಉತ್ತೇಜನ ನೀಡುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ. ಇದರಿಂದ ವಸತಿ ಕ್ಷೇತ್ರ ಎದುರಿಸುತ್ತಿರುವ ಕೊರತೆಯನ್ನು ನೀಗಿಸಲು ಸಾಧ್ಯವಾಗಲಿದೆ ಎಂಬ ನಿರೀಕ್ಷೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಭೂ ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ವಿವಾದಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕಾಯ್ದೆಯ ಕರಡನ್ನು ಸರ್ಕಾರ  2019 ರಲ್ಲಿ ಬಿಡುಗಡೆ ಮಾಡಿತ್ತು.

    ಕಾಯ್ದೆಯಲ್ಲಿ ಏನಿದೆ?
    ಮಾಲೀಕರು ಮತ್ತು ಬಾಡಿಗೆದಾರರಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಬಾಡಿಗೆ ಪ್ರಾಧಿಕಾರ ರಚನೆ ಮಾಡಬೇಕು. ಮಾಲೀಕರು ಭದ್ರತಾ ಠೇವಣಿಯಾಗಿ ಬಾಡಿಗೆದಾರರಿಂದ ಕೇವಲ 2 ತಿಂಗಳ ಬಾಡಿಗೆಯನ್ನು ಮಾತ್ರ ಪಡೆಯಬೇಕು.

     

    ವಾಣಿಜ್ಯ ಕಟ್ಟಡಗಳಿಗೆ ಭದ್ರತಾ ಠೇವಣಿಯಾಗಿ 6 ತಿಂಗಳ ಹಣವನ್ನು ಮಾತ್ರ ಪಡೆಯಬೇಕು. ಬಾಡಿಗೆ ವಿಚಾರದಲ್ಲಿ ಸಮಸ್ಯೆಯಾದಲ್ಲಿ ಜಿಲ್ಲಾ ಬಾಡಿಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು.

    ಒಪ್ಪಂದ ಮುಗಿದ ಬಳಿಕವೂ ಮನೆಯನ್ನು ಖಾಲಿ ಮಾಡದೇ ಇದ್ದಲ್ಲಿ ಮಾಲೀಕ ಮುಂದಿನ 2 ತಿಂಗಳ ಅವಧಿಗೆ ಬಾಡಿಗೆಯನ್ನು ದ್ವಿಗುಣ ಮಾಡಬಹುದು. 2 ತಿಂಗಳ ಬಳಿಕವೂ ಮನೆ ಖಾಲಿ ಮಾಡದೇ ಇದ್ದರೆ ಬಾಡಿಗೆಯನ್ನು 4 ಪಟ್ಟು ಹೆಚ್ಚಿಸಬಹುದು.

    ಮಾಲೀಕ ಪೂರ್ವ ಸೂಚನೆ ನೀಡದೇ ಬಾಡಿಗೆದಾರನ ಮನೆಯನ್ನು ಪ್ರವೇಶಿಸುವಂತಿಲ್ಲ. 24 ಗಂಟೆಗಳ ಮೊದಲು ನೋಟಿಸ್ ನೀಡಿದರೆ ಮಾತ್ರ ಮಾಲೀಕ ಮನೆಯನ್ನು ಪ್ರವೇಶಿಸುವ ಹಕ್ಕನ್ನು ಹೊಂದಿರುತ್ತಾನೆ. ಕಟ್ಟಡಕ್ಕೆ ಹಾನಿಯಾಗಿದ್ದರೆ ರಿಪೇರಿಗೆ ಬಾಡಿಗೆದಾರನೇ ಹಣವನ್ನು ನೀಡಬೇಕು.

    ವಿವಾದದ ಸಂದರ್ಭದಲ್ಲಿ ಮಾಲೀಕರು ವಿದ್ಯುತ್ ಮತ್ತು ನೀರು ಸರಬರಾಜನ್ನು ಕಡಿತಗೊಳಿಸುವಂತಿಲ್ಲ. ಒಪ್ಪಂದದ ಅವಧಿ ಇರುವವರೆಗೆ ಬಾಡಿಗೆ ದರವನ್ನು ಇದ್ದಕ್ಕಿದ್ದಂತೆ ಹೆಚ್ಚಿಸಲು ಸಾಧ್ಯವಿಲ್ಲ. ಬಾಡಿಗೆ ಪರಿಷ್ಕರಿಸುವ 3 ತಿಂಗಳ ಮೊದಲು ಮಾಲೀಕ ನೋಟಿಸ್ ನೀಡಬೇಕಾಗುತ್ತದೆ.

    ಹೊಸ ಕಾಯ್ದೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ.

  • ಹಚ್ಚಹಸಿರಿನ ಪರಿಸರದಲ್ಲಿ ಸುಂದರ ಪೀಸ್‍ವುಡ್ ಇಕೋ ಫಾರಂ ಲ್ಯಾಂಡ್

    ಹಚ್ಚಹಸಿರಿನ ಪರಿಸರದಲ್ಲಿ ಸುಂದರ ಪೀಸ್‍ವುಡ್ ಇಕೋ ಫಾರಂ ಲ್ಯಾಂಡ್

    ಪ್ರಕೃತಿಯ ಮಡಿಲಲ್ಲಿ ಪೀಸ್‍ವುಡ್ ಇಕೋ ಫಾರಂ ಲ್ಯಾಂಡ್ ನಿರ್ಮಾಣವಾಗಿದೆ. ಸಾವಯವ ಕೃಷಿ ಪದ್ಧತಿ ಅಳವಡಿಸಿದ್ದು ತರಕಾರಿ ಹಾಗೂ ಹಣ್ಣಿನ ಪಾರ್ಕ್ ಇದಾಗಿದೆ.

    ಕೊರೊನಾ ಕಾಲದ ಸಂಕಷ್ಟದಿಂದ ದೂರ ಇರಲು ಪೀಸ್‍ವುಡ್ ಫಾರಂ ಲ್ಯಾಂಡ್‍ನಲ್ಲಿ ತಮ್ಮ ಸುಂದರ ಮನೆ ನಿರ್ಮಿಸಬಹುದು. ಇದಕ್ಕೆ ಬೇಕಾದ ಎಲ್ಲ ಅನುಕೂಲಗಳನ್ನು ಕಲ್ಪಿಸಲಾಗಿದೆ. ಪ್ರತಿ ಕೃಷಿಭೂಮಿಗೆ ನೀರಿನ ವ್ಯವಸ್ಥೆ, ಹನಿ ನೀರಾವರಿ, 24/7 ಭದ್ರತೆ, ಸಿಸಿ ಕ್ಯಾಮೆರಾ, ಕ್ಲಬ್ ಹೌಸ್, ಈಜುಕೊಳ, ಗೇಟ್‍ಡೇಟ್ ಕಮ್ಯುನಿಟಿ, ಕ್ರೀಡಾ ಸೌಲಭ್ಯ ಸೇರಿ ಇನ್ನೂ ಅನೇಕ ಸೌಲಭ್ಯ ಒದಗಿಸಲಾಗಿದೆ.

    ಈ ಪೀಸ್‍ವುಡ್ ಇಕೋ ಫಾರಂ ಲ್ಯಾಂಡ್‍ನಲ್ಲಿ ಹಲವು ಬಗೆಯ ಹಣ್ಣುಗಳು, ತರಕಾರಿಗಳು, ಶ್ರೀಗಂಧ, ತೇಗ, ಅಡಿಕೆ, ತೆಂಗು ಹಾಗೂ ಮಾವಿನಮರಗಳೂ ಇವೆ. ಸುಮಾರು 5 ಗುಂಟೆಯಿಂದ 12 ಗುಂಟೆಯವರೆಗೆ ಭೂಮಿಯನ್ನು ವಿಂಗಡಿಸಲಾಗಿದೆ. ಪೀಸ್‍ವುಡ್ ಇಕೋ ಫಾರಂ ಲ್ಯಾಂಡ್ ಅತ್ಯಂತ ಕಡಿಮೆ ದರದಲ್ಲಿ ಮಾಡಲಾಗುತ್ತಿದ್ದ ಪ್ರತಿ ಚದರ ಅಡಿಗೆ 199 ರೂ. ನಿಗದಿಗೊಳಿಸಲಾಗಿದೆ. ಆಸಕ್ತರು ಆದಷ್ಟು ಬೇಗ ಕೊಂಡುಕೊಳ್ಳಬಹುದು. ಇನ್ನು ಕೆಲವೇ ಕೆಲವು ಪ್ಲಾಟ್‍ಗಳು ಮಾತ್ರ ಲಭ್ಯವಿದೆ. ನಿಮ್ಮ ಬಂಡವಾಳಕ್ಕೆ ಉತ್ತಮ ಲಾಭವನ್ನೂ ತಂದುಕೊಡುತ್ತದೆ.

    ಪೀಸ್‍ವುಡ್ ಇಕೋ ಫಾರಂ ಲ್ಯಾಂಡ್ ಕನಕಪುರ ಹತ್ತಿರ, ನೈಸ್ ರಸ್ತೆಯಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿದೆ.

    ಕೊರೋನಾದಿಂದ ದೂರವಿರಿ, ಪ್ರಕೃತಿಯ ಮಡಿಲಲ್ಲಿ ನೆಲೆಸಿ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ. www.peacewood.in 9880564557, 8073961925

  • ರಮಣೀಯ ಪರಿಸರದಲ್ಲಿ ಫಾರಂ ಲ್ಯಾಂಡ್‌

    ರಮಣೀಯ ಪರಿಸರದಲ್ಲಿ ಫಾರಂ ಲ್ಯಾಂಡ್‌

    – ಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಸಂಸ್ಥೆಯ ಪರಿಸರ ಸ್ನೇಹಿ ಫಾರಂ

    ಬೆಂಗಳೂರು: ಹಸಿರಿನಿಂದ ಕಂಗೊಳಿಸುತ್ತಿರುವ ರಮಣೀಯ ಪರಿಸರದಲ್ಲಿ ಮನೆ ನಿರ್ಮಿಸುವ ಆಸೆ ಹಲವರಿಗಿರುತ್ತದೆ. ಆದರೆ ಆ ಕನಸಿನ ಮನೆ ಕಟ್ಟಲು ಭೂಮಿ ಬೇಕು. ಅದು ಬೆಂಗಳೂರಿನ ಕೂಗಳತೆ ದೂರದಲ್ಲಿ ಸಿಕ್ಕರೆ ಮತ್ತಷ್ಟು  ಖುಷಿ.

    ರಾಮನಗರ ಜಿಲ್ಲೆಯ ಕನಕಪುರ ಬಳಿಯ ಗೇರುಹಳ್ಳಿಯ ಪರಿಸರ ಸ್ನೇಹಿ ವಾತಾವರಣದಲ್ಲಿ ʼಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಸಂಸ್ಥೆʼ ಪರಿಸರ ಸ್ನೇಹಿ ಫಾರಂ ಲ್ಯಾಂಡ್‌ ಅನ್ನು ಸಿದ್ಧಪಡಿಸಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಭೂಮಿಯನ್ನು ಅಭಿವೃದ್ಧಿಪಡಿಸಲಾಗಿದೆ.

    ಬೆಂಗಳೂರು ಸಮೀಪವೇ ಕನಕಪುರ ಜಂಕ್ಷನ್‌ ನೈಸ್‌ ರಸ್ತೆಯಿಂದ ಕೇವಲ 50 ಕಿ.ಮೀ. ದೂರದಲ್ಲಿ ಈ ಜಾಗವಿದೆ. ಕನಕಪುರ-ಕಬ್ಬಾಳ ರಸ್ತೆಯ ಸಮೀಪದಲ್ಲಿ ಫಾರಂ ಲ್ಯಾಂಡ್‌ ನಿರ್ಮಾಣವಾಗಿದ್ದು, ಕನಕಪುರದಿಂದ ಕೇವಲ 9 ಕಿ.ಮೀ ದೂರದಲ್ಲಿದೆ.

    ಗೇರುಹಳ್ಳಿ ಹಸಿರು ಪ್ರದೇಶದಲ್ಲಿ ಜಾಗವನ್ನು ಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಖರೀದಿಸಿದೆ. ಇಲ್ಲಿ ಮಾವು, ಹಲಸು, ನೇರಳೆ, ಕಿತ್ತಳೆ ಸೇರಿದಂತೆ ಹಲವು ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ಭೂಮಿ ಖರೀದಿಸುವ ಗ್ರಾಹಕರಿಗೆ ಭವಿಷ್ಯದಲ್ಲಿ ಸಹಾಯವಾಗಲೆಂದು ಶ್ರೀಗಂಧ, ತೇಗದ ಜೊತೆಗೆ ರಕ್ತ ಚಂದನ, ಅಡಿಕೆ, ತೆಂಗಿನ ಗಿಡಗಳನ್ನು ನೆಡಲಾಗಿದೆ. ಈಗಾಗಲೇ ಸುಮಾರು 20 ಜಾತಿಯ ವಿವಿಧ ಹಣ್ಣಿನ ಗಿಡಗಳು ತಲೆ ಎತ್ತಿವೆ. ಇಷ್ಟೇ ಅಲ್ಲದೇ 20 ವರ್ಷದಷ್ಟು ಹಳೆಯಾದಾದ ಮಾವಿನ ಮರಗಳು ಈ ಜಾಗದಲ್ಲಿದೆ.

    ಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಮಾಲೀಕ ಜಿ.ಆರ್‌. ತಿರುಮಲೇಶ್‌(ಭಾಸ್ಕರ್‌) ಮಾತನಾಡಿ, ಹಸಿರು ಪರಿಸರದಲ್ಲಿ ಮನೆ ಕಟ್ಟಬೇಕೆಂದು ಕನಸು ಕಾಣುತ್ತಿರುವ ಜನರಿಗಾಗಿ ಈ ಭೂಮಿಯನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಶಿಂಷಾ, ಮುತ್ತತ್ತಿ ಸೇರಿದಂತೆ ಅನೇಕ ಪ್ರವಾಸಿ ತಾಣಗಳು ಈ ಪ್ರದೇಶಕ್ಕೆ ಹತ್ತಿರದಲ್ಲಿವೆ ಎಂದಿದ್ದಾರೆ.

    ಹನಿ ನೀರಾವರಿ ವ್ಯವಸ್ಥೆ
    ಈ ಜಾಗದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಅವಕಾಶವಿದೆ. ಖರೀದಿದಾರರು ತಮಗೆ ಬೇಕಾದ ತರಕಾರಿಗಳನ್ನು ಮನೆಯ ಮುಂಭಾಗದಲ್ಲಿ ಬೆಳೆಸಬಹುದು. ಈ ಕಾರಣಕ್ಕೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಕೆ ಮಾಡಲಾಗಿದೆ. ಸುರಕ್ಷತೆಗಾಗಿ 24*7 ಭದ್ರತೆ, ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಕ್ರೀಡಾ ಚಟುವಟಿಕೆಗಳಿಗೆ ಜಾಗ ಮೀಸಲಿಡಲಾಗಿದೆ.

    ದರ ಎಷ್ಟು?
    ಪ್ರತಿ ಚದುರ ಮೀಟರ್‌ಗೆ 199 ರೂ. ದರ ನಿಗದಿ ಮಾಡಲಾಗಿದೆ. 5 ಗುಂಟೆ ಮತ್ತು 12 ಗುಂಟೆ ಪ್ಲಾಟ್‌ಗಳು ಕೂಡ ಖರೀದಿಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ 98805 64557 ನಂಬರ್‌ ಸಂಪರ್ಕಿಸಬಹುದು ಅಥವಾ www.peacewood.in ವೆಬ್‌ಸೈಟಿಗೆ ಭೇಟಿ ನೀಡಬಹುದು.

    ಏಕೆ ಹೂಡಿಕೆ ಮಾಡಬೇಕು?
    ಭೂಮಿ ಒಂದು ಚರಾಸ್ತಿ ಆಗಿದ್ದು, ಬಹಳ ಬೇಡಿಕೆ ಇರುತ್ತದೆ. ವರ್ಷದಿಂದ ವರ್ಷಕ್ಕೆ ಇದರ ಮೌಲ್ಯ ಹೆಚ್ಚಾಗುತ್ತಿರುತ್ತದೆ.

    ದೀರ್ಘಾವಧಿಯ ಹೂಡಿಕೆ
    ಪ್ಲಾಟ್‌ಗಳು ದೀರ್ಘಕಾಲದವರೆಗೆ ಇರುತ್ತದೆ. ಭೂಮಿಯಲ್ಲಿ ಹೂಡಿಕೆ ಮಾಡಿದರೆ ಅದು ದೀರ್ಘಕಾಲದ ಹೂಡಿಕೆ ಆಗಿರುತ್ತದೆ.

    ಹೊಂದಿಕೊಳ್ಳುವಿಕೆ ಮತ್ತು ಗ್ರಾಹಕೀಕರಣ
    ವಸತಿ ಪ್ಲಾಟ್‌ಗಳ ಸಂಪೂರ್ಣ ನಿಯಂತ್ರಣ ಗ್ರಾಹಕರ ಕೈಯಲ್ಲೇ ಇರುತ್ತದೆ. ಇಲ್ಲಿ ನಿಮ್ಮ ಸ್ವಂತ ಮನೆಯನ್ನು ನಿಮಗೆ ಇಷ್ಟ ಬಂದ ರೀತಿಯಲ್ಲಿ ವಿನ್ಯಾಸ ಮಾಡಬಹುದು.

    ವಿಶ್ವಾಸಾರ್ಹತೆ ಮತ್ತು ಸಾಗಣೆ
    ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ (ರೇರಾ) ಜಾರಿಯಲ್ಲಿರುವುದರಿಂದ ಪ್ರತಿ ಕನಿಷ್ಠ ದಾಖಲಾತಿಗಳು ಮತ್ತು ನಿಯಂತ್ರಕ ನೀತಿಗಳಿಂದಾಗಿ ಭೂ ಹೂಡಿಕೆಗಳ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಿವೆ.

    ಹಣಕಾಸು ಸುರಕ್ಷತೆ
    ಭೂಮಿ ಮೇಲೆ ಹೂಡಿಕೆ ಮಾಡುವುದರಿಂದ ಹಣಕ್ಕೂ ಭದ್ರತೆ ಸಿಗುತ್ತದೆ. ಇದು ನಿಮ್ಮ ಹಣವನ್ನು ಸುರಕ್ಷಿತಗೊಳಿಸಲು ಮತ್ತು ಆರ್ಥಿಕ ಪರಿಪಕ್ವತೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಬೇರೆ ಕಡೆ ಹಣವನ್ನು ಹೂಡಿಕೆ ಮಾಡಿದರೆ ಅದಕ್ಕೆ ಭದ್ರತೆ ಇರುವುದಿಲ್ಲ. ಆದರೆ ಭೂಮಿಯಲ್ಲಿ ಹೂಡಿಕೆ ಮಾಡಿದರೆ ಹಣ ಸುರಕ್ಷಿತವಾಗಿರುತ್ತದೆ. ಇದು ನಿಮ್ಮ ಆಸ್ತಿಯೇ ಆಗಿರುವ ಕಾರಣ ಭಯಪಡುವ ಅಗತ್ಯವಿಲ್ಲ.

    ಕನಕಪುರ ರಸ್ತೆಯಲ್ಲಿ ಯಾಕೆ?
    ಪ್ರಕೃತಿಯ ಸೌಂದರ್ಯ ಇರುವ ಕನಕಪುರ ಮುಖ್ಯ ರಸ್ತೆಯಲ್ಲಿ ಈ ಭೂಮಿ ಇದ್ದು, ಮಂದಿನ ದಿನಗಳಲ್ಲಿ ಹತ್ತಿರದ ಪ್ರದೇಶಗಳು ಬೆಳವಣಿಗೆಯಾಗಲಿದೆ. ಅಲ್ಲದೇ ಹತ್ತಿರದ ಪ್ರದೇಶಗಳಿಗೆ ಕಡಿಮೆ ಸಮಯದಲ್ಲಿ ತೆರಳಬಹುದಾಗಿದೆ.

  • ಜಾಗ ನೀಡದ್ದಕ್ಕೆ ವ್ಯಕ್ತಿಯ ಹತ್ಯೆಗೆ ಯತ್ನ – ಆಸಿಡ್ ದಾಳಿ, ಕಾರಿಗೆ ಬೆಂಕಿ

    ಜಾಗ ನೀಡದ್ದಕ್ಕೆ ವ್ಯಕ್ತಿಯ ಹತ್ಯೆಗೆ ಯತ್ನ – ಆಸಿಡ್ ದಾಳಿ, ಕಾರಿಗೆ ಬೆಂಕಿ

    ಚಿತ್ರದುರ್ಗ: ವ್ಯಕ್ತಿಯೊಬ್ಬರ ಕಾರಿಗೆ ಆಸಿಡ್ ದಾಳಿ ನಡೆಸಿ ಬೆಂಕಿ ಹಚ್ಚಿರುವ ಘಟನೆ ಮೊಳಕಾಲ್ಮೂರು ತಾಲೂಕಿನ ಸೂಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿರುವ ಜಮೀನನ್ನು ರಿಯಲ್ ಎಸ್ಟೇಟ್ ಉದ್ಯಮಿಯಾದ ಸುರೇಶ್‍ಗೆ ಮಾರಾಟ ಮಾಡಲು ವೇಣುಗೋಪಾಲ್ ಅವರ ತಂದೆ ಮುಂದಾಗಿದ್ದರು. ಆದರೆ ತಂದೆಯ ನಿರ್ಧಾರವನ್ನು ವಿರೋಧಿಸಿದ್ದರು. ಹೀಗೆ ಕೆಲಸದ ಮೇಲೆ ಅನ್ಯ ಕಾರ್ಯನಿಮಿತ್ತ ಚಳ್ಳಕೆರೆಗೆ ವೇಣುಗೋಪಾಲ್ ಬಂದಿದ್ದರು. ಈ ವೇಳೆ ಆಂಧ್ರ ಪ್ರದೇಶದಿಂದ ಹಿಂಬಾಲಿಸಿಕೊಂಡು ಬಂದಿರುವ ಸುರೇಶ್ ಅಂಡ್ ಟೀಂ, ಮೊಳಕಾಲ್ಮೂರಿನ ಸೂಕೆನಹಳ್ಳಿ ಬಳಿ ಏಕಾಏಕಿ ವೇಣುಗೋಪಾಲ್ ಕಾರಿಗೆ ಬೆಂಕಿ ಹಾಕಿ, ಆಸಿಡ್ ದಾಳಿಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಕೃತ್ಯವೆಸಗಲು ಮೊದಲೇ ಪೂರ್ವಸಿದ್ಧತೆ ಮಾಡಿಕೊಂಡಿರುವ ದುಷ್ಕರ್ಮಿಗಳು ಮೊಳಕಾಲ್ಮೂರಿನಿಂದ ವಾಪಾಸ್ ಹೊರಟ ವೇಣುಗೋಪಾಲ್ ಕಾರನ್ನು ಅಡ್ಡಗಟ್ಟಿ ಹತ್ಯೆಗೆ ಯತ್ನ ಮಾಡಲಾಗಿದೆ. ಆಂಧ್ರಪ್ರದೇಶ ರಾಜ್ಯದ ಹಿಂದುಪುರ ಮೂಲದ ಸುರೇಶ ಹಾಗೂ ಆತನ ಸಹಚರರಾದ ಆಂಜನೇಯ, ಚೌಡಪ್ಪ ಸೇರಿದಂತೆ ಐವರು ಈ ಕೃತ್ಯ ನಡೆಸಿದ್ದಾರೆಂಬ ಎಂದು ಹೇಳಲಾಗುತ್ತಿದೆ.

    ದುಷ್ಕøತ್ಯದಿಂದಾಗಿ ವೇಣುಗೋಪಾಲ್ ಕಾರು ಸುಟ್ಟು ಸಂಪೂರ್ಣ ಭಸ್ಮವಾಗಿದ್ದು, ಗಂಭೀರವಾಗಿ ಗಾಯಗೊಂಡ ವೇಣುಗೋಪಾಲ್‍ರನ್ನು ಬಳ್ಳಾರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಕೃತ್ಯದ ಸ್ಥಳದಿಂದ ಪರಾರಿಯಾಗಿದ್ದಾರೆ.

    ಸದ್ಯ ಘಟನಾ ಸ್ಥಳಕ್ಕೆ ಮೊಳಕಾಲ್ಮೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೃತ್ಯದ ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.

  • ಜನವರಿ 23, 24ಕ್ಕೆ ಯೂನಿಕ್ ಪ್ರಾಪರ್ಟಿ ಎಕ್ಸ್ ಪೋ

    ಜನವರಿ 23, 24ಕ್ಕೆ ಯೂನಿಕ್ ಪ್ರಾಪರ್ಟಿ ಎಕ್ಸ್ ಪೋ

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ನಿವೇಶನ ಮಾಡಬೇಕು, ಪ್ರಾಪರ್ಟಿ ಖರೀದಿ ಮಾಡಬೇಕು, ಮನೆ ಕಟ್ಟಬೇಕು ಎಂದು ಕನಸು ಕಾಣ್ತಿದೀರಾ..? ಹಾಗಿದ್ದರೆ ನಿಮಗೆ ಇಲ್ಲಿದೆ ಸದವಕಾಶ. ನಿಮ್ಮ ಕನಸು ನನಸು ಮಾಡಲು ಈ ಬಾರಿ ನಿಮಗೆ ಡಬಲ್ ಧಮಾಕಾ ಸಿಗಲಿದೆ.

    ಜೆನೆಟಿಕ್ ಇವೆಂಟ್ಸ್ ಬೆಂಗಳೂರಿನ ಎರಡು ಭಾಗದಲ್ಲಿ ಎಕ್ಸ್ ಪೋ ಆಯೋಜಿಸಿದ್ದು ಜನವರಿ 23 ಮತ್ತು 24ರಂದು ‘ಯೂನಿಕ್ ಪ್ರಾಪರ್ಟಿ ಎಕ್ಸ್ ಪೋ-2021’ ನಡೆಯಲಿದೆ.

    ಬೆಂಗಳೂರು ದಕ್ಷಿಣ ಭಾಗದ ಗ್ರಾಹಕರಿಗಾಗಿ ಜೆಪಿ ನಗರ 6ನೇ ಹಂತದ ಕೆಆರ್ ಲೇಔಟ್‍ನ ಎಲೈಟ್ ಕನ್ವೆನ್ಷನ್ ಸೆಂಟರ್ ಹಾಗೂ ಬೆಂಗಳೂರು ನಾರ್ತ್ ಭಾಗದ ಗ್ರಾಹಕರಿಗಾಗಿ ಯಲಹಂಕ ಬೈಪಾಸ್ ರಸ್ತೆಯ ಶಿವನಹಳ್ಳಿಯಲ್ಲಿರುವ ಎಲಾನ್ ಕನ್ವೆನ್ಷನ್ ಸೆಂಟರ್ ನಲ್ಲಿ ಈ ಪ್ರಾಪರ್ಟಿ ಎಕ್ಸ್ ಪೋ ಆಯೋಜಿಸಲಾಗಿದೆ.

    ಯಾರೆಲ್ಲಾ ಸಿಗ್ತಾರೆ..?: ಬೆಂಗಳೂರಿನ ಪ್ರಮುಖ ಬಿಲ್ಡರ್ ಗಳು ಈ ಪ್ರಾಪರ್ಟಿ ಎಕ್ಸ್ ಪೋದಲ್ಲಿ ಭಾಗವಹಿಸಲಿದ್ದಾರೆ. ಡಿಎಸ್ ಮ್ಯಾಕ್ಸ್, ಗಾಡ್ರೆಜ್ ಪ್ರಾಪರ್ಟೀಸ್, ಎಸ್‍ಎಂಆರ್ ಹೋಲ್ಡಿಂಗ್ಸ್, ಅರಿಹಂತ್ ಡೆವಲಪರ್ಸ್, ಎಟಿಝೆಡ್ ಪ್ರಾಪರ್ಟೀಸ್, ಅಪರ್ಣ, ಉಪಕಾರ್ ಡೆವಲಪರ್ಸ್, ಫೈವ್ ಎಲಿಮೆಂಟ್ಸ್ ರಿಯಾಲಿಟಿ, ಎಲಿಗೆಂಟ್ ಬಿಲ್ಡರ್ಸ್ & ಡೆವಲಪರ್ಸ್, ಸಾಯಿ ಕಲ್ಯಾಣ್ ಬಿಲ್ಡರ್ಸ್ & ಡೆವಲಪರ್ಸ್, ಗೃಹ, ಸಿಲ್ವರ್ ಟ್ರೀ ಪ್ರಾಜೆಕ್ಟ್ಸ್, ಆರ್ನಾ ಶೆಲ್ಟರ್ಸ್ ಮುಂತಾದ ಪ್ರಮುಖ ರಿಯಲ್ ಎಸ್ಟೇಟ್ ಕಂಪೆನಿಗಳು ಯೂನಿಕ್ ಪ್ರಾಪರ್ಟಿ ಎಕ್ಸ್ ಪೋದಲ್ಲಿ ಭಾಗವಹಿಸಲಿವೆ.

    ಈ ಎಲ್ಲಾ ಕಂಪನಿಗಳು ಗ್ರಾಹಕರಿಗೆ ತಮ್ಮ ವಸತಿ ಯೋಜನೆಗಳ ಸಂಪೂರ್ಣ ವಿವರಗಳನ್ನು ನೀಡಲಿದೆ. ಈ ಎಕ್ಸ್ ಪೋಗೆ ಆಗಮಿಸಿ ನಿಮ್ಮ ಕನಸಿನ ಮನೆಯನ್ನು ನೀವು ನಿಮ್ಮದಾಗಿಸಿಕೊಳ್ಳಬಹುದು. ನುರಿತ ಮಾರ್ಗದರ್ಶಕರು, ಇಂಟೀರಿಯರ್ ಡಿಸೈನರ್‌ಗಳು ಹಾಗೂ ಸಲಹೆಗಾರರು ಈ ಎಕ್ಸ್‌ಪೋದಲ್ಲಿ ನಿಮಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಗ್ರಾಹಕರು ನಿವೇಶನ, ಫ್ಲ್ಯಾಟ್ ಖರೀದಿಸಲು ಬಯಸಿದರೆ ಬ್ಯಾಂಕ್‍ಗಳು ನೀಡುವ ಸಾಲದ ಬಗ್ಗೆಯೂ ಇದೇ ಸೂರಿನಲ್ಲಿ ನೀವು ಮಾಹಿತಿ ಪಡೆಯಬಹುದು. ಜನವರಿ 23 ಮತ್ತು 24ರಂದು ಶಿವನಹಳ್ಳಿ ಹಾಗೂ ಜೆಪಿ ನಗರದಲ್ಲಿ ನಡೆಯುವ ಪ್ರಾಪರ್ಟಿ ಎಕ್ಸ್ ಪೋಗೆ ಬಂದು ನಿಮ್ಮ ಕನಸು ನನಸಾಗಿಸಿಕೊಳ್ಳಬಹುದು.

  • ಹ್ಯಾಮರ್‌, ಮಚ್ಚಿನಿಂದ ಚಚ್ಚಿ ರಿಯಲ್‌ ಎಸ್ಟೇಟ್‌ ಉದ್ಯಮಿಯ ಬರ್ಬರ ಕೊಲೆ

    ಹ್ಯಾಮರ್‌, ಮಚ್ಚಿನಿಂದ ಚಚ್ಚಿ ರಿಯಲ್‌ ಎಸ್ಟೇಟ್‌ ಉದ್ಯಮಿಯ ಬರ್ಬರ ಕೊಲೆ

    ಹಾಸನ: ಬೆಂಗಳೂರಿನಲ್ಲಿ ರಿಯಲ್‌ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ ಹೋಬಳಿಯ ಕಮರವಳ್ಳಿ‌ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ

    ಲಿಂಗರಾಜು(43) ಕೊಲೆಯಾದ ವ್ಯಕ್ತಿ. ಮೃತ ಲಿಂಗರಾಜು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ‌ ನಡೆಸುತ್ತಿದ್ದರು. ಕೊರೊನಾ ಲಾಕ್‌ಡೌನ್ ನಂತರ ತಮ್ಮ ಸ್ವಗ್ರಾಮ ಕಮರವಳ್ಳಿಗೆ ಬಂದು ತೋಟದ ಮನೆಯಲ್ಲಿ ವಾಸವಾಗಿದ್ದರು.

    ನಿನ್ನೆ ರಾತ್ರಿ ಕಾರ್ ಮತ್ತು ಬೈಕ್‌ನಲ್ಲಿ ಬಂದ ಸುಮಾರು ಎಂಟು ಜನ ದುಷ್ಕರ್ಮಿಗಳು ಹ್ಯಾಮರ್ ಮತ್ತು ಮಚ್ಚಿನಿಂದ ಕೈಕಾಲು, ತಲೆ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಈ ವೇಳೆ ಬಿಡಿಸಲು ಬಂದ ಸಂಬಂಧಿಕರ ಮೇಲೂ ಹಲ್ಲೆ ನಡೆಸಲಾಗಿದೆ. ಅಷ್ಟೇ ಅಲ್ಲದೆ ಸಾಕ್ಷಿ ನಾಶಪಡಿಸಲು ದುಷ್ಕರ್ಮಿಗಳು ಸಿಸಿಟಿವಿಯ ಡಿವಿಆರ್ ಹೊತ್ತೊಯ್ದಿದ್ದಾರೆ. ಘಟನೆ ಸಂಬಂಧ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಿಯಲ್ ಎಸ್ಟೇಟ್ ಡೀಲ್ ವೇಳೆ ಮಾತಿನ ಚಕಮಕಿ- ಇಬ್ಬರ ಮೇಲೆ ಗುಂಡಿನ ದಾಳಿ

    ರಿಯಲ್ ಎಸ್ಟೇಟ್ ಡೀಲ್ ವೇಳೆ ಮಾತಿನ ಚಕಮಕಿ- ಇಬ್ಬರ ಮೇಲೆ ಗುಂಡಿನ ದಾಳಿ

    ಚಿಕ್ಕಮಗಳೂರು: ರಿಯಲ್ ಎಸ್ಟೇಟ್ ವ್ಯವಹಾರದ ಮಾತುಕತೆ ವೇಳೆ ಮಾತಿನ ಚಕಮಕಿ ನಡೆದು ಇಬ್ಬರ ಮೇಲೆ ಗುಂಡು ಹಾರಿಸಿರೋ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬಾಣೂರು ಗ್ರಾಮದಲ್ಲಿ ನಡೆದಿದೆ.

    ಚಿಕ್ಕಮಗಳೂರು ನಗರದ ಬಿಜೆಪಿ ಮುಖಂಡ ಸಂಬಂಧಿ ಕಲ್ಯಾಣ್ ಕುಮಾರ್ ಹಾಗೂ ಖಾಸಗಿ ಶಾಲೆಯ ಉಪನ್ಯಾಕ ಸುಮಂತ್ ಗೆ ಗುಂಡೇಟು ಬಿದ್ದಿದೆ. ಬೆಂಗಳೂರಿನಿಂದ ಬಂದಿದ್ದ ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ವ್ಯವಹಾರದ ವೇಳೆ ಮಾತಿನ ಚಕಮಕಿ ನಡೆದು ಈ ಘಟನೆ ನಡೆದಿದೆ ಎಂದು ಹೇಳಲಾಗ್ತಿದೆ.

    ಗುಂಡೇಟು ಬಿದ್ದ ಇಬ್ಬರಿಗೂ ಚಿಕ್ಕಮಗಳೂರಿನ ಕೆ.ಆರ್.ಎಸ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರಿಗೆ ರವಾನಿಸಲಾಗಿದೆ. ಇಬ್ಬರ ಮೇಲೆ ಫೈರಿಂಗ್ ಮಾಡಿದ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿಗಳು ನಾಪತ್ತೆಯಾಗಿದ್ದಾರೆ. ಗುಂಡೇಟು ತಿಂದ ಕಲ್ಯಾಣ್ ಕುಮಾರ್ ಹಾಗೂ ಸುಮಂತ್ ದೇಹದಲ್ಲಿ ಗುಂಡುಗಳು ಹಾಗೇ ಇದ್ದು ಅವುಗಳನ್ನ ತೆಗೆಯಲು ಇಬ್ಬರನ್ನೂ ಬೆಂಗಳೂರಿಗೆ ರವಾನಿಸಲಾಗಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಖರಾಯಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಸ್ಥಳಕ್ಕೆ ಭೇಟಿ ನೀಡಿರೋ ಸಖರಾಯಪಟ್ಟಣ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ರಿಯಲ್ ಎಸ್ಟೇಟ್ ವಿಷಯವಾಗಿ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಪೊಲೀಸರ ತನಿಖೆಯ ಬಳಿಕ ಘಟನೆ ಸ್ಪಷ್ಟವಾದ ಕಾರಣ ತಿಳಿಯಲಿದೆ.

  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬಿಗ್ ರಿಲೀಫ್

    ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬಿಗ್ ರಿಲೀಫ್

    ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬಿಗ್ ರಿಲೀಫ್ ಸಿಕ್ಕಿದ್ದು ನಾಳೆಯಿಂದ ಸಬ್ ರಿಜಿಸ್ಟ್ರಾರ್ ಕಚೇರಿ ತೆರೆಯಲು ಅನುಮತಿ ಸಿಗಲಿದೆ.

    ಕ್ರಷರ್ ವ್ಯವಹಾರ ಓಪನ್ ಮಾಡಲು ಅನುಮತಿ ನೀಡಲಾಗಿದೆ. ಸಬ್‍ರಿಜಿಸ್ಟ್ರಾರ್ ಚೇರಿಗೆ ಬರುವ ಮುನ್ನ ಕಚೇರಿಗೆ ಕರೆ ಮಾಡಿ ಅಧಿಕಾರಿಗಳಿಗೆ ಸಮಯ ಕೇಳಿ ಬರಬೇಕಾಗುತ್ತದೆ.

    ಕಚೇರಿಗೆ ಬರುವವವರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ಕಂದಾಯ ಸಚಿವ ಅಶೋಕ್ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಲಾಕ್‍ಡೌನ್ ನಿರ್ಧಾರ ರಾಜ್ಯಗಳಿಗೆ ಬಿಟ್ಟರೆ ಬಿಎಸ್‍ವೈ ಪ್ಲಾನ್ ಏನು?

    ಈಗಾಗಲೇ ಅಗತ್ಯ ಸೇವೆ ಜೊತೆ ಆರ್ಥಿಕ ಚಟುವಟಿಕೆಗಾಗಿ ಕೆಲ ನಿಯಮಗಳನ್ನು ಸಡಿಲ ಮಾಡಲಾಗಿದೆ. ಹೀಗಾಗಿ ಕೆಲ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರದಿಂದ ಅಧಿಕೃತ ಆದೇಶ ಇನ್ನೂ ಪ್ರಕಟವಾಗಿಲ್ಲ. ಇಂದು ಈ ಬಗ್ಗೆ ಆದೇಶ ಪ್ರಕಟವಾಗುವ ಸಾಧ್ಯತೆಯಿದೆ.