Tag: Real estate businessman

  • ಮಂಡ್ಯ | ಆಸ್ತಿಗಾಗಿ ಅಪ್ಪನನ್ನೇ ಟ್ರ್ಯಾಪ್‌ ಮಾಡಲು ಹೋಗಿ ತಗ್ಲಾಕೊಂಡ ಮಗ

    ಮಂಡ್ಯ | ಆಸ್ತಿಗಾಗಿ ಅಪ್ಪನನ್ನೇ ಟ್ರ್ಯಾಪ್‌ ಮಾಡಲು ಹೋಗಿ ತಗ್ಲಾಕೊಂಡ ಮಗ

    – ಅಪ್ಪನ ಅಶ್ಲೀಲ ಫೋಟೋ ಎಡಿಟ್‌ ಮಾಡಿ ವಾಟ್ಸಪ್‌ ಗ್ರೂಪ್‌ನಲ್ಲಿ ಶೇರ್‌ ಮಾಡಿದ್ದ ಪುತ್ರ

    ಮಂಡ್ಯ: ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಆಸ್ತಿಗಾಗಿ (Property) ಜನ್ಮಕೊಟ್ಟ ಅಪ್ಪನಿಗೆ ಖೆಡ್ಡಾ ತೋಡಿದ್ದ ಕುಲಪುತ್ರ ಸಿಕ್ಕಿಬಿದ್ದಿರುವ ವಿಚಿತ್ರ ಪ್ರಕರಣ ನಡೆದಿದೆ.

    ತಂದೆಯ ಕೋಟ್ಯಂತರ ರೂಪಾಯಿ ಆಸ್ತಿಯ ದುರಾಸೆಗೆ ಬಿದ್ದ ಕಿರಾತಕ ಮಗ, ತನ್ನ ವಿರೋಧಿಗಳ ಜೊತೆಗೂಡಿ ತಂದೆಗೆ ಬೆದರಿಕೆ ಹಾಕಿದ್ದಾನೆ. ಇನ್ನು ಈ ಪ್ರಕರಣದಲ್ಲಿ ಮಗ ಸೇರಿದಂತೆ ನಾಲ್ವರು ಆರೋಪಿಗಳನ್ನು ಮದ್ದೂರು ಪೊಲೀಸರು (Maddur Police) ಬಂಧಿಸಿ ಜೈಲಿಗಟ್ಟಿದ್ದಾರೆ. ಮಗ ಪ್ರಣಬ್ ಹಾಗೂ ಮಹೇಶ, ಈಶ್ವರ್, ಪ್ರೀತಮ್ ಬಂಧಿತ ಆರೋಪಿಗಳು. ಇದನ್ನೂ ಓದಿ: ಪಾಟ್ನಾದಲ್ಲಿ ಭೀಕರ ರಸ್ತೆ ಅಪಘಾತ – ಐವರು ಉದ್ಯಮಿಗಳು ಸ್ಥಳದಲ್ಲೇ ಸಾವು

    ಮದ್ದೂರಿನ ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ಸತೀಶ್ (Businessman Satish), ಮದ್ದೂರು ಸೇರಿದಂತೆ ರಾಜ್ಯದ ಹಲವೆಡೆ ʻರಾಣಿ ಐಶ್ವರ್ಯ ಡೆವಲಪರ್ಸ್ʼ ಹೆಸರಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದಾರೆ. ಆದ್ರೆ ತಂದೆ ಮಗ ಪ್ರಣವ್‌ ತಂದೆ ಜೊತೆಗೆ ಆಸ್ತಿ ವಿಚಾರದಲ್ಲಿ ಕಿರಿಕ್‌ ಮಾಡಿಕೊಂಡಿದ್ದ. ಈಗಾಗಲೇ ತಂದೆಯ ಕೋಟ್ಯಂತರ ರೂಪಾಯಿ ಲಾಸ್‌ ಮಾಡಿದ್ದಲ್ಲದೇ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದ. ತಂದೆ ಹಣ ಕೊಡದೇ ಇದ್ದಾಗ ಬ್ಯ್ಲಾಕ್‌ಮೇಲ್‌ ತಂತ್ರ ಹೂಡಲು ಮುಂದಾಗಿದ್ದ ಮಗ ಪ್ರಣವ್‌. ಇದನ್ನೂ ಓದಿ: ಕೊಲೆ, ಸುಲಿಗೆ ಸೇರಿ 18 ಪ್ರಕರಣದಲ್ಲಿ ಬೇಕಾಗಿದ್ದ ಬಿಹಾರದ ಶಂಕಿತ ನಕ್ಸಲ್‌ ರಾಯಚೂರಲ್ಲಿ ಅರೆಸ್ಟ್‌

    ದುಶ್ಚಟಗಳಿಗೆ ಬಲಿಯಾಗಿ ವಿರೋಧಿಗಳ ಜೊತೆ ಸೇರಿ ಆಸ್ತಿಗಾಗಿ ತಂದೆಯನ್ನೇ ಬ್ಲ್ಯಾಕ್‌ ಮೇಲ್‌ ಮಾಡೋಕೆ ಮುಂದಾಗಿದ್ದಾನೆ. ಹಣ ಕೊಡದ ತಂದೆಗೆ ಬುದ್ಧಿ ಕಲಿಸಲು ಕೆಲವರ ಜೊತೆ ಸೇರಿ ಅಪ್ಪನಿಗೆ ಖೆಡ್ಡಾ ತೋಡಿದ್ದಾನೆ. ಅಪ್ಪನ ಭಾವಚಿತ್ರಕ್ಕೆ ಅಶ್ಲೀಲ ಫೋಟೋ ಹಾಗೂ ವಾಯ್ಸ್ ಎಡಿಟ್ ಮಾಡಿ, ವಾಟ್ಸಪ್ ಗ್ರೂಪ್‌ಗೆ ಶೇರ್‌ ಮಾಡಿದ್ದಾನೆ. ಈ ರೀತಿಯ ಕೃತ್ಯದ ಮೂಲಕ ತಂದೆಯನ್ನ ಮಾನಸಿಕವಾಗಿ ಕುಗ್ಗಿಸಿ, ಆಸ್ತಿಯನ್ನ ಲಪಟಾಯಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ.

    ಇದರಿಂದ ರೊಚ್ಚಿಗೆದ್ದ ತಂದೆ ಮದ್ದೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಮಗ ಸೇರಿದಂತೆ ಕೃತ್ಯಕ್ಕೆ ಪ್ರಚೋದಿಸಿದವರ ವಿರುದ್ಧವೂ ದೂರು ನೀಡಿದ್ದರು. ಉದ್ಯಮಿ ಸತೀಶ್‌ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದ ಪೊಲೀಸರು ಮಗ ಪ್ರಣಬ್ ಸೇರಿ ಮಹೇಶ, ಈಶ್ವರ್, ಪ್ರೀತಮ್ ಎಂಬ ನಾಲ್ವರನ್ನ ಬಂಧಿಸಿದ್ದಾರೆ. ಸದ್ಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್‌ ಆದೇಶಿಸಿದೆ. ಇದನ್ನೂ ಓದಿ: Bengaluru| ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ – ಒಂದೂವರೆ ವರ್ಷದ ಮಗು ದುರ್ಮರಣ

  • ಬೀದರ್ | ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ

    ಬೀದರ್ | ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ

    ಬೀದರ್: ಮಾರಕಾಸ್ತ್ರಗಳಿಂದ ಕೊಚ್ಚಿ ಗ್ರಾ.ಪಂ ಸದಸ್ಯ, ರಿಯಲ್ ಎಸ್ಟೇಟ್ ಉದ್ಯಮಿಯನ್ನು ಬೀದರ್(Bidar) ಹೊರ ವಲಯದ ಚಿಕ್ಕಪೇಟೆ(Chikkapete) ಬಳಿಯ ಎಸ್.ಕೆ ಡಾಬಾದ ಬಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ಗ್ರಾ.ಪಂ ಸದಸ್ಯ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಹೊನ್ನಿಕೇರಿ(Honnikeri) ಗ್ರಾಮದ ವೈಜನಾಥ್ ಬಿರಾದರ್(49) ಕೊಲೆಯಾದ ದುರ್ದೈವಿ. ಇಬ್ಬರು ಆರೋಪಿಗಳು, ವೈಜನಾಥ್‌ರನ್ನ ಅಟ್ಟಾಡಿಸಿಕೊಂಡು ಹೋಗಿ, ಮುಖದ ಗುರುತು ಸಿಗದಂತೆ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಹತ್ಯೆಯ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ಸ್ನೇಹಿತೆ ಜೊತೆ ಓಡಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ – ಯುವತಿಯ ಪ್ರಿಯಕರ & ಗ್ಯಾಂಗ್ ಅರೆಸ್ಟ್

    ಕೊಲೆಯಾದ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮೃತದೇಹವನ್ನು ಬ್ರೀಮ್ಸ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಘಟನೆ ಕುರಿತು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ(New Town Police Station) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಖಾಸಗಿ ವೀಡಿಯೊ ಇಟ್ಕೊಂಡು‌ ಬೆದರಿಸಿ ಮದುವೆ, ಅತ್ತೆಯ ಮೇಲೂ ಕಣ್ಣು – ರಿಯಲ್‌ ಎಸ್ಟೇಟ್‌ ಉದ್ಯಮಿ ಹತ್ಯೆಗೆ ಬಿಗ್‌ ಟ್ವಿಸ್ಟ್‌

    ಖಾಸಗಿ ವೀಡಿಯೊ ಇಟ್ಕೊಂಡು‌ ಬೆದರಿಸಿ ಮದುವೆ, ಅತ್ತೆಯ ಮೇಲೂ ಕಣ್ಣು – ರಿಯಲ್‌ ಎಸ್ಟೇಟ್‌ ಉದ್ಯಮಿ ಹತ್ಯೆಗೆ ಬಿಗ್‌ ಟ್ವಿಸ್ಟ್‌

    – ಹತ್ಯೆ ಪ್ಲ್ಯಾನ್‌ಗೆ ಹೌ ಟು ಕಿಲ್ ಅನ್ನೋ ಪುಸ್ತಕ ಓದಿದ್ದ ಅತ್ತೆ

    ಬೆಂಗಳೂರು: ಸೋಲದೇವನಹಳ್ಳಿ ರಿಯಲ್‌ ಎಸ್ಟೇಟ್ ಉದ್ಯಮಿ‌ (Real Estate Businessman) ಲೋಕನಾಥ್ ಸಿಂಗ್ ಕೊಲೆ ಪ್ರಕರಣದಲ್ಲಿ ಉದ್ಯಮಿಯ ಕರಾಳ ಮುಖ ಕೊಲೆ ಬಳಿಕ ರಿವೀಲ್ ಆಗುತ್ತಿದೆ. ಕೊಲೆ ಕೇಸ್‌ನಲ್ಲಿ ಅರೆಸ್ಟ್‌ ಆಗಿರುವ ಆರೋಪಿ ಅಮ್ಮ ಮಗಳ ಸ್ಟೋರಿ ಕೇಳಿ ಪೊಲೀಸರೇ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.

    ಅಪ್ರಾಪ್ತ ವಯಸ್ಸಿನಲ್ಲಿದ್ದಾಗಲೇ ಯುವತಿಯ ಜೊತೆಗೆ ಸಲುಗೆ ಬೆಳೆಸಿದ್ದ ಉದ್ಯಮಿ, ವೀಡಿಯೊ ಮಾಡಿಟ್ಟುಕೊಂಡು ಯುವತಿಯ ಬ್ಲ್ಯಾಕ್‌ಮೇಲ್ ಮಾಡಿ ಮದುವೆಯಾಗಿದ್ದಾನೆ. ಮದುವೆಯಾಗದಿದ್ದರೆ ವೀಡಿಯೊ ಹರಿಬಿಡೋದಾಗಿ ಧಮ್ಕಿ ಹಾಕಿದ್ದಾನೆ. ಬಳಿಕ ಡಿಸೆಂಬರ್‌ನಲ್ಲಿ ಯುವತಿ ಜೊತೆ ಉದ್ಯಮಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದ. ಇದನ್ನೂ ಓದಿ: Bengaluru | ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಕೇಸ್ – ಹೆಣ್ಣು ಕೊಟ್ಟ ಅತ್ತೆಯಿಂದಲೇ ಅಳಿಯನ ಕೊಲೆ

    ಮದುವೆ ಬಳಿಕ ಉದ್ಯಮಿಯ ವಂಚನೆಯ ಜಾಲ ಹೆಂಡತಿಗೆ ಗೊತ್ತಾಗಿದೆ. ಹಲವು ಮಹಿಳೆಯರ ಜೊತೆ ಉದ್ಯಮಿ ಸಂಬಂಧ ಹೊಂದಿದ್ದನಂತೆ. ಅಲ್ಲದೇ ಹೆಂಡ್ತಿಯ ತಾಯಿಯ ಮೇಲೂ ಆತ ಕಣ್ಣಿಟ್ಟಿದ್ದ. ಹೆಂಡತಿಯ ಬಳಿಯೇ ಆಕೆಯ ತಾಯಿಯ ಬಗ್ಗೆ ಕೆಟ್ಟದಾಗಿ ಮಾತಾಡಿದ್ದನಂತೆ. ಹೀಗಾಗಿ ಸಹಿಸಲಾರದೆ ಕೊಲೆ ಮಾಡಿರೋದಾಗಿ ಕೊಲೆಯಾದ ಲೋಕನಾಥ್‌ನ ಪತ್ನಿ ಹಾಗೂ ಅತ್ತೆ (Mother in law) ಹೇಳಿಕೆ ನೀಡಿದ್ದಾರೆ.

    ಅಳಿಯನನ್ನು ಮುಗಿಸುವ ಪ್ಲ್ಯಾನ್‌ ಮಾಡಿದ್ದ ಅತ್ತೆ, ಹೌ ಟು ಕಿಲ್ ಎನ್ನುವ ಪುಸ್ತಕ ಖರೀದಿಸಿ, ಓದಿದ್ದಾಳೆ. ಬಳಿಕ ಪಾರ್ಟಿ ನೆಪದಲ್ಲಿ ಮಗಳ ಮೂಲಕ ಅಳಿಯನನ್ನ ಕರೆಸಿಕೊಂಡು, ಊಟದಲ್ಲಿ ನಿದ್ರೆ ಮಾತ್ರೆ ಹಾಕಿ, ಅಳಿಯನ ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಬಾಗಿಲು ಮುರಿದು ಕಳ್ಳತನ – ನಾಲ್ವರು ಅರೆಸ್ಟ್, 5 ಕೆಜಿ ಚಿನ್ನ ವಶ

  • Bengaluru | ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಕೇಸ್ – ಹೆಣ್ಣು ಕೊಟ್ಟ ಅತ್ತೆಯಿಂದಲೇ ಅಳಿಯನ ಕೊಲೆ

    Bengaluru | ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಕೇಸ್ – ಹೆಣ್ಣು ಕೊಟ್ಟ ಅತ್ತೆಯಿಂದಲೇ ಅಳಿಯನ ಕೊಲೆ

    -ಬ್ಲ್ಯಾಕ್‌ಮೇಲ್‌ ಮಾಡಿ ಯುವತಿಯನ್ನ ವಿವಾಹವಾಗಿದ್ದ ಉದ್ಯಮಿ

    ಬೆಂಗಳೂರು: ಹೆಸರಘಟ್ಟ (Hesaraghatta) ಬಳಿ ಬಿಜಿಎಸ್ ಲೇಔಟ್ (BGS Layout) ಬಳಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ (Real Estate Businessman) ಹತ್ಯೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಹೆಣ್ಣು ಕೊಟ್ಟ ಅತ್ತೆಯೇ ತನ್ನ ಅಳಿಯನನ್ನು ಕೊಲೆಗೈದ ವಿಚಾರ ಪೊಲೀಸರ ತನಿಖೆ ವೇಳೆ ಬಯಲಾಗಿದೆ.

    ಮಾಗಡಿ ಶಾಸಕ ಬಾಲಕೃಷ್ಣ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಲೋಕನಾಥ್ ಸಿಂಗ್ ಮಾ.22ರಂದು ಕೊಲೆಯಾಗಿದ್ದರು. ಮೇಲ್ನೋಟಕ್ಕೆ ಹಳೇ ವೈರಿಗಳು ಅಥವಾ ರೌಡಿಶೀಟರ್‌ಗಳು ಕೊಲೆ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಸ್ವಂತ ಅತ್ತೆಯೇ (Mother-In-Law) ಅಳಿಯನನ್ನು ಕೊಲೆ ಮಾಡಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ. ಇದನ್ನೂ ಓದಿ: ʻಹನಿʼಟ್ರ್ಯಾಪ್‌ ಕೋಲಾಹಲದ ನಡುವೆ ಸಚಿವರು, ಶಾಸಕರ ಫೋನ್‌ ಟ್ಯಾಪಿಂಗ್‌ ಆರೋಪ!

    ಕಳೆದ ಡಿಸೆಂಬರ್‌ನಲ್ಲಿ ರಿಯಲ್ ಎಸ್ಟೆಟ್ ಉದ್ಯಮಿಯೊಬ್ಬರ ಮಗಳಿಗೆ ಬ್ಲಾಕ್‌ಮೇಲ್ ಮಾಡಿ ಲೋಕನಾಥ್ ಮದುವೆ ಮಾಡಿಕೊಂಡಿದ್ದರು. ಮಗಳ ಭವಿಷ್ಯ, ಹಾಗೂ ಕುಟುಂಬದ ಮರ್ಯಾದೆಗೆ ಅಂಜಿ ಯುವತಿಯ ತಂದೆ-ತಾಯಿ ಮಗಳನ್ನು ಮದುವೆ ಮಾಡಿಕೊಡುತ್ತಾರೆ. ಇದರಿಂದ ನೊಂದ ತಂದೆ, ತಾಯಿ ಇವನಿಗೆ ಒಂದು ಗತಿ ಕಾಣಿಸಬೇಕು ಎಂದು ಮೂಹರ್ತ ಫಿಕ್ಸ್ ಮಾಡಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ವಿದ್ಯುತ್ ಕೊರತೆಯಿಲ್ಲ, ಬೇಸಿಗೆಯಲ್ಲೂ ತೊಂದರೆಯಾಗಲ್ಲ: ಕೆಪಿಟಿಸಿಎಲ್ ಎಂಡಿ

    ಅಳಿಯ, ಮಗಳ ಜೊತೆ ಬಿಜಿಎಸ್ ಲೇಔಟ್‌ಗೆ ಮಾರ್ಚ್ 22ರಂದು ಯುವತಿಯ ತಾಯಿ ಬಂದಿದ್ದಾರೆ. ಲೋಕನಾಥ್ ಸಿಂಗ್‌ಗೆ ಸೇರಿದ ಜಾಗಕ್ಕೆ ಬಂದು ಪಾರ್ಟಿ ಮಾಡಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿ ಗಂಡ-ಹೆಂಡತಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಜೊತೆಯಲ್ಲಿದ್ದ ಗನ್ ಮ್ಯಾನ್‌ಗೆ ಏನನ್ನೋ ತರಲು ಹೇಳಿ ಕಳುಹಿಸಿದ್ದಾರೆ. ಚೆನ್ನಾಗಿ ಎಣ್ಣೆ ಹೊಡೆದು ಟೈಟ್ ಆಗಿದ್ದ ಅಳಿಯ ಲೋಕನಾಥ್ ಸಿಂಗ್‌ಗೆ ಅತ್ತೆ ಊಟದಲ್ಲಿ ನಿದ್ದೆ ಮಾತ್ರೆ ಹಾಕಿದ್ದರು. ಯಾವಾಗ ಅಳಿಯ ನಿದ್ರೆಗೆ ಜಾರಿದ್ನೋ ಆಗ ಹರಿತವಾದ ಆಯುಧದಿಂದ ಅತ್ತೆ ಅಳಿಯನ ಕುತ್ತಿಗೆ ಕುಯ್ದಿದ್ದಾರೆ. ಮೊದಲೇ ನಿದ್ರೆ ಮಾತ್ರೆಯಿಂದ ನಿತ್ರಾಣರಾಗಿದ್ದ ಲೋಕನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಸೋಲದೇವನಹಳ್ಳಿ ಪೊಲೀಸರು ಅಮ್ಮ- ಮಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: IPL 2025 | ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್‌ ಕಿತ್ತ ಚಿರಯುವಕ – ಧೋನಿಯಿಂದ ಬೆನ್ನುತಟ್ಟಿಸಿಕೊಂಡ ವಿಘ್ನೇಶ್‌ ಪುತ್ತೂರು ಯಾರು?

  • ಬಿಳಿಗಿರಿರಂಗನ ಬೆಟ್ಟದ ಮೇಲಿಂದ ಜಿಗಿದು ರಿಯಲ್ ಎಸ್ಟೇಟ್ ಉದ್ಯಮಿ ಆತ್ಮಹತ್ಯೆ

    ಬಿಳಿಗಿರಿರಂಗನ ಬೆಟ್ಟದ ಮೇಲಿಂದ ಜಿಗಿದು ರಿಯಲ್ ಎಸ್ಟೇಟ್ ಉದ್ಯಮಿ ಆತ್ಮಹತ್ಯೆ

    ಚಾಮರಾಜನಗರ: ಬೆಟ್ಟದ ಮೇಲಿಂದ ಜಿಗಿದು ರಿಯಲ್ ಎಸ್ಟೇಟ್ ಉದ್ಯಮಿ (Real Estate) ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ (Chamarajanagara) ಜಿಲ್ಲೆಯ ಯಳಂದೂರು (Yelandur) ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ (Biligirirangana Hills) ನಡೆದಿದೆ.

    ಮಹದೇವನಾಯಕ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ. ಬೆಟ್ಟದ ಕಡಿದಾದ ಜಾಗದಲ್ಲಿ ಸಿಲುಕಿದ್ದ ಮಹದೇವನಾಯಕ ಅವರ ಶವವನ್ನು ಶನಿವಾರ ಡ್ರೋನ್ ಬಳಸಿ ಪತ್ತೆ ಮಾಡಲಾಗಿದೆ. ಮಹದೇವನಾಯಕ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಕವಲಂದೆ ಕುಂಬಾರಹಳ್ಳಿಯ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಮಹದೇವನಾಯಕ ಮೇ 5 ರಂದು ನಾಪತ್ತೆಯಾಗಿದ್ದಾರೆ ಎಂದು ಕವಲಂದೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದನ್ನೂ ಓದಿ: ವಿಚ್ಛೇದಿತ ಮಹಿಳೆಯೊಂದಿಗೆ ಯುವಕನ ಲವ್ವಿ ಡವ್ವಿ – ಗರ್ಭಿಣಿ ಆದ್ಮೇಲೆ ಟೀಚರ್‌ಗೆ ಕೈಕೊಟ್ಟು ಜೂಟ್‌!

    ಜೂ.6 ರಂದು ಬಿಳಿಗಿರಿರಂಗನಬೆಟ್ಟದ ಬಳಿ ಬೈಕ್ ಪತ್ತೆಯಾಗಿದೆ. ಈ ಜಾಡನ್ನು ಹಿಡಿದ ಪೊಲೀಸರು ಶನಿವಾರ ಡ್ರೋನ್ ಕ್ಯಾಮೆರಾ ಬಳಸಿ ಹುಡುಕಾಟ ನಡೆಸಿದ್ದಾರೆ. ಡ್ರೋನ್ ಕ್ಯಾಮೆರಾದಲ್ಲಿ ಕಮರಿನ ನಡುವೆ ಶವ ಸಿಲುಕಿರುವುದು ಪತ್ತೆಯಾಗಿದೆ. ಶವದ ಮೇಲಿನ ಬಟ್ಟೆಯನ್ನು ಸಂಬಂಧಿಕರು ಗುರುತಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹೆಚ್‌ಡಿಕೆ, ಜೋಶಿ, ಶೋಭಾ, ಸೋಮಣ್ಣಗೆ ಮಂತ್ರಿ ಸ್ಥಾನ ಫಿಕ್ಸ್‌

  • ಪೋರ್ಶೆ ಕಾರಿಗೆ ಟೆಕ್ಕಿಗಳು ಬಲಿ ಪ್ರಕರಣ – ಅಪ್ರಾಪ್ತನ ತಂದೆಗೆ 2 ದಿನ ಪೊಲೀಸ್ ಕಸ್ಟಡಿ

    ಪೋರ್ಶೆ ಕಾರಿಗೆ ಟೆಕ್ಕಿಗಳು ಬಲಿ ಪ್ರಕರಣ – ಅಪ್ರಾಪ್ತನ ತಂದೆಗೆ 2 ದಿನ ಪೊಲೀಸ್ ಕಸ್ಟಡಿ

    ಮುಂಬೈ: ಪುಣೆಯಲ್ಲಿ ಐಷಾರಾಮಿ ಕಾರು ಪೋರ್ಶೆ (Porsche Car Accident) ಚಲಾಯಿಸಿ ಇಬ್ಬರು ಟೆಕ್ಕಿಗಳನ್ನು ಬಲಿ ಪಡೆದ 17 ವರ್ಷದ ಬಾಲಕನ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗರ್‌ವಾಲ್ ಅವರನ್ನು ಬಂಧಿಸಿದ್ದ ಪೊಲೀಸರು ಇಂದು ನ್ಯಾಯಲಯದ ಮುಂದೆ ಹಾಜರುಪಡಿಸಿ ಎರಡು ದಿನಗಳ ಕಸ್ಟಡಿಗೆ (Police Custody) ಪಡೆದಿದ್ದಾರೆ.

    ಘಟನೆಗೆ ಅಪ್ರಾಪ್ತ ಬಾಲಕನಿಗೆ ಐಷಾರಾಮಿ ಕಾರ್ ನೀಡಿದ್ದು, ಬಾಲಕನ ತಂದೆಯ ನಿರ್ಲಕ್ಷವೂ ಕಾರಣವಾಗಿದ್ದು, ತನಿಖೆ ನಡೆಸಲು ಕಸ್ಟಡಿಗೆ ಬೇಕು ಎಂದು ಪೊಲೀಸರು ಮನವಿ ಮಾಡಿದರು. ವಾದ ಆಲಿಸಿದ ಕೋರ್ಟ್ ಎರಡು ದಿನಗಳ ಕಾಲ ವಿಶಾಲ್ ಅಗರ್‌ವಾಲ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ಇದನ್ನೂ ಓದಿ: ಗೃಹ ಸಚಿವಾಲಯದ ಕಚೇರಿಗೆ ಬಾಂಬ್ ಬೆದರಿಕೆ

    ಈ ನಡುವೆ ಬೆಂಗಳೂರಿನಲ್ಲಿ ಖರೀದಿಸಿದ್ದ ಕಾರಿಗೆ ಶಾಶ್ವತ ನೋಂದಣಿ ಮಾಡಿಸಿರಲಿಲ್ಲ. 1,758 ರೂ. ಶುಲ್ಕ ಬಾಕಿ ಉಳಿಸಿಕೊಂಡು ನಿರ್ಲಕ್ಷ್ಯ ತೋರಿದ್ದ ಹಿನ್ನೆಲೆ ಕಾರಿನ ನೋಂದಣಿಯನ್ನು ಶಾಶ್ವತವಾಗಿ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ದೇಶದಾದ್ಯಂತ ಈ ಪ್ರಕರಣದ ಬಗ್ಗೆ ವಿರೋಧ ವ್ಯಕ್ತವಾದ ಬಳಿಕ ಎಚ್ಚೆತ್ತಿರುವ ಅಧಿಕಾರಿಗಳು ಆರೋಪಿ ಬಾಲಕನಿಗೆ 17 ವರ್ಷ ತುಂಬಿದ್ದು ಆತನಿಗೆ 25 ವರ್ಷ ತುಂಬವವರೆಗೆ ಡ್ರೈವಿಂಗ್ ಲೈಸೆನ್ಸ್ ನೀಡಲಾಗುವುದಿಲ್ಲ ಎಂದು ಪುಣೆ ಆರ್‌ಟಿಓ ತಿಳಿಸಿದೆ. ಇದನ್ನೂ ಓದಿ: ಪುತ್ರನಿಗೆ 2.5 ಕೋಟಿ ಮೌಲ್ಯದ ಕಾರು ಗಿಫ್ಟ್‌; 1,758 ರೂ. ಕೊಟ್ಟು ನೋಂದಣಿಯನ್ನೇ ಮಾಡಿಸಿಲ್ಲ ಪುಣೆಯ ಬಿಲ್ಡರ್‌

    ತನಿಖೆ ಸದ್ಯ ಮುಂದುವರಿದಿದ್ದು, ಅಪ್ರಾಪ್ತ ಮದ್ಯಪಾನ ಮಾಡಲು ಹೋಗಿದ್ದ ಬಾರ್‌ನಿಂದ 48,000 ರೂ ಹಣದ ಬಿಲ್ ಅನ್ನು ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆ – ಒಂದೇ ಕುಟುಂಬದ ನಾಲ್ವರು ದುರ್ಮರಣ

  • ರುಂಡ, ಮುಂಡ ಕತ್ತರಿಸಿ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ – 7 ಮಂದಿ ಅರೆಸ್ಟ್

    ರುಂಡ, ಮುಂಡ ಕತ್ತರಿಸಿ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ – 7 ಮಂದಿ ಅರೆಸ್ಟ್

    ಹೈದರಾಬಾದ್: ತೆಲಂಗಾಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ರುಂಡ ಹಾಗೂ ಮುಂಡವನ್ನು ಕತ್ತರಿಸಿ ಬರ್ಬರವಾಗಿ ಹತ್ಯೆಗೈದು ಸಂಗ ರೆಡ್ಡಿ ಜಿಲ್ಲೆಯ ಸುತ್ತಮುತ್ತಲಿನ ವಿವಿಧ ಜಲಮೂಲಗಳಲ್ಲಿ ಎಸೆದಿದ್ದ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಆರ್ಥಿಕ ವಿವಾದಗಳನ್ನು ಹೊರತು ಪಡಿಸಿ ವ್ಯಕ್ತಿ ಆರೋಪಿಯ ಪತ್ನಿ ಜೊತೆ ಹೊಂದಿದ್ದ ಅಕ್ರಮ ಸಂಬಂಧವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದು, ವ್ಯಕ್ತಿಯನ್ನು ಬಾಡಿಗೆದಾರರೇ ಕೊಂದಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಪಳ ಪಳ ಹೊಳೆಯುವ ಹಲ್ಲು ನಿಮ್ಮದಾಗ ಬೇಕಾ? ಹಾಗಿದ್ರೆ ಒಮ್ಮೆ ಟ್ರೈ ಮಾಡಿ

    POLICE JEEP

    ಮೃತ ದುರ್ದೈವಿಯನ್ನು ಕೆ.ರಾಜು ಎಂದು ಗುರುತಿಸಲಾಗಿದ್ದು, ರಾಜು ನಾಪತ್ತೆ ಆಗಿರುವುದಾಗಿ ಅವರ ಸಹೋದರ ಕೆ. ಗೋಪಾಲ್ ಬುಧವಾರ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ರಾಜು ಕೊನೆಯದಾಗಿ ಮಾತನಾಡಿದ್ದ ಎಲ್ಲರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ರಾಜು ಕೊಲೆಯಾಗಿರುವುದಾಗಿ ಪೊಲೀಸರಿಗೆ ತಿಳಿದುಬಂದಿದೆ. ಅಲ್ಲದೇ ಈ ಕೊಲೆಯಲ್ಲಿ ಆತನ ಸಂಬಂಧಿಕರಾದ ಕಡವತ್ ರಾಮ್ ಸಿಂಗ್, ಕಡವತ್ ವೆಂಕಟೇಶ್, ಕಡವತ್ ಮಲ್ಲೇಶ್, ವಾಡಿತ್ಯ ಬಾಲು ನಾಯ್ಕ್, ಕಡವತ್ ಜಯಪಾಲ್, ಶಂಕರ್ ಸಹ ಶಾಮೀಲಾಗಿರುವ ಸತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಫುಟ್‍ಪಾತ್ ಮೇಲೆ ಕಾರು ಚಾಲನೆ – ಅಪ್ರಾಪ್ತನ ಹುಚ್ಚಾಟಕ್ಕೆ ನಾಲ್ವರು ಬಲಿ

    ಈ ಕುರಿತಂತೆ ಪ್ರತಿಕ್ರಿಯಿಸಿದ ಪೊಲೀಸರು, ಕೊಲೆಯಾದ ವ್ಯಕ್ತಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಇತರರ ಮೇಲೆ ತನ್ನ ಹಿಡಿತವನ್ನು ಸಾಧಿಸುತ್ತಿದ್ದನು ಮತ್ತು ಕೆಲವು ಆರೋಪಿಗಳ ಹೆಂಡತಿಯರೊಂದಿಗೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದನು. ಹೀಗಾಗಿ ರಾಜುವಿನ ಮೇಲೆ ದ್ವೇಷ ಹೊಂದಿದ್ದ ಆತನ ಸಂಬಂಧಿಕರಾದ ರಮೇಶ್, ವಿಷ್ಣು ಮತ್ತು ಮಧು ರಾಜುರನ್ನು ಕೊಲ್ಲಲು ನಿರ್ಧರಿಸಿದರು. ಮಧು ರಾಜು ಹತ್ಯೆಗೈಯ್ಯಲು ಚಾಕುವನ್ನು ಖರೀದಿಸಿದ. ರಮೇಶ್ ಮತ್ತು ವಿಷ್ಣು ರಾಜು ಅವರನ್ನು ಭೇಟಿಯಾಗಿ ಆತನಿಗೆ ಮದ್ಯ ಕುಡಿಸಿದ್ದಾರೆ.  ನಂತರ ರಾಜು ಅವರನ್ನು ಕೊಡಲಿ ಹಾಗೂ ಚಾಕುವಿನಿಂದ ಆರೋಪಿಗಳು ಕೊಂದಿದ್ದಾರೆ ಎಂದು ತಿಳಿಸಿದ್ದಾರೆ.