Tag: Reaction

  • ಮುಖ್ಯಮಂತ್ರಿಗಳೇ ಗೂಂಡಾಗಳನ್ನ ನಮ್ಮ ಮನೆಗೆ ಕಳುಹಿಸಿದ್ದು: ಪ್ರೀತಂ ಗೌಡ

    ಮುಖ್ಯಮಂತ್ರಿಗಳೇ ಗೂಂಡಾಗಳನ್ನ ನಮ್ಮ ಮನೆಗೆ ಕಳುಹಿಸಿದ್ದು: ಪ್ರೀತಂ ಗೌಡ

    ಹಾಸನ: ಜೆಡಿಎಸ್‍ನ ಗೂಂಡಾ ಕಾರ್ಯಕರ್ತರನ್ನು ಕಲ್ಲು ತೂರಾಟ ನಡೆಸಿ, ಗಲಾಟೆ ಮಾಡುವಂತೆ ಸಿಎಂ ಕುಮಾರಸ್ವಾಮಿಯವರೇ ಕಳುಹಿಸಿದ್ದಾರೆ ಎಂದು ಶಾಸಕ ಪ್ರೀತಂ ಗೌಡ ಆರೋಪಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಸದನಕ್ಕೆ ತೆರಳಿದ್ದ ವೇಳೆ ನಮ್ಮ ಮನೆಯ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ ನನ್ನನ್ನು ಹುಡುಕಿ ಸಾಯಿಸುವಂತೆ ಸಿಎಂ ಅವರೇ ಹೇಳಿದ್ದಾರೆ ಎಂದು ಗಲಾಟೆ ನಡೆಸಿದ ಕಾರ್ಯಕರ್ತರು ಬಾಯಿಬಿಟ್ಟಿದ್ದಾರೆ. ನೀವು ಪ್ರೀತಂ ಗೌಡನಿಗೆ ಏನಾದರೂ ಮಾಡಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಸಿಎಂ ಹಾಗೂ ಸಚಿವ ರೇವಣ್ಣ ಆಜ್ಞೆ ನೀಡಿದ್ದಾರೆ ಅಂತ ಗೂಂಡಾ ಕಾರ್ಯಕರ್ತರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ಎಚ್‍ಡಿಕೆ, ರೇವಣ್ಣ ಗೂಂಡಾ ಪ್ರವೃತ್ತಿಗೆ ಜಗ್ಗಲ್ಲ – ಕೇಂದ್ರದ ಗಮನಕ್ಕೆ ತರುತ್ತೇವೆ: ಬಿಎಸ್‍ವೈ

    ಅಷ್ಟೇ ಅಲ್ಲದೆ ನಾನು ಇಲ್ಲದ ಹೊತ್ತಿನಲ್ಲಿ ಜೆಡಿಎಸ್ ಕಾರ್ಯಕರ್ತರು ಮನೆಗೆ ನುಗ್ಗಿ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ನನ್ನ ತಂದೆ ತಾಯಿಯನ್ನು ರಕ್ಷಿಸಲು ಬಂದ ನಮ್ಮ ಪಕ್ಷದ ಕಾರ್ಯಕರ್ತನ ಮೇಲೆ ಕಲ್ಲೂ ತೂರಾಟ ಮಾಡಿದ್ದಾರೆ. ರಕ್ತ ಬರುವ ರೀತಿ ಹಲ್ಲೆ ಮಾಡಿದ್ದಾರೆ. ಇಂತಹ ಗೂಂಡಾ ಪ್ರವೃತ್ತಿಗೆ ನಾನೇನಾದರೂ ಹೆದರುತ್ತೇನೆ ಎಂದು ಅವರು ತಿಳಿದಿದ್ದರೆ ಅದು ಅವರ ಭ್ರಮೆ. ಈ ಪರಿಸ್ಥಿತಿಯನ್ನು ಎದುರಿಸಲು ದೈವ ಶಕ್ತಿ ಹಾಗೂ ಬಿಜೆಪಿ ಪಕ್ಷದ ಬೆಂಬಲ ನನ್ನೊಂದಿಗೆ ಇದೆ. ಇದನ್ನು ನಾನು ಎದುರಿಸುತ್ತೇನೆ ಎಂದು ತಮ್ಮ ವಿರುದ್ಧ ಇರುವವರಿಗೆ ತಿರುಗೇಟು ನೀಡಿದ್ದಾರೆ.

    https://www.youtube.com/watch?v=fBzOcNm06cE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಬಂಧ ಇಲ್ಲದೇ ಇರೋ ವಿಷಯದ ಬಗ್ಗೆ ನಾನು ಮಾತನಾಡಲ್ಲ: ಪ್ರೀತಮ್ ಗೌಡ

    ಸಂಬಂಧ ಇಲ್ಲದೇ ಇರೋ ವಿಷಯದ ಬಗ್ಗೆ ನಾನು ಮಾತನಾಡಲ್ಲ: ಪ್ರೀತಮ್ ಗೌಡ

    ಬೆಂಗಳೂರು: ಆಪರೇಷನ್ ಕಮಲದ ಆಡಿಯೋದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ವಿಕೆಟ್ ಉರುಳುತ್ತದೆ ಎನ್ನುವ ಹೇಳಿಕೆಗೆ ಬಿಜೆಪಿಯ ಹಾಸನ ಶಾಸಕ ಪ್ರೀತಮ್‍ ಗೌಡ ನಾನು ಏನು ಮಾತನಾಡಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

    ಪ್ರೀತಮ್ ಗೌಡ ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, “ನಾನು ಈ ಬಗ್ಗೆ ಮಾತನಾಡಲ್ಲ. ಮನೆ ಮೇಲೆ ದಾಳಿ ನಡೆದಿರುವ ವಿಷಯದ ಬಗ್ಗೆ ಮಾತನಾಡಿದ್ದೇನೆ. ದೇವೇಗೌಡರ ಹೇಳಿಕೆಯ ಆಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲ. ಸಂಬಂಧ ಇಲ್ಲದಿರುವ ವಿಷಯದ ಬಗ್ಗೆ ನಾನು ಮಾತನಾಡಲ್ಲ. ಮನೆ ಮೇಲೆ ದಾಳಿ ನಡೆದಿದೆ, ಅದಕ್ಕೆ ನಾನು ಏನೂ ಮಾಡಬೇಕೋ ಕಾನೂನಾತ್ಮಕವಾಗಿ ಮಾಡುತ್ತೇವೆ. ಗೂಂಡಾರಾಜ ಮಾಡುವುದಕ್ಕೆ ನನ್ನ ಸಹಮತ ಇಲ್ಲ. ಅವರು ಏನೇನು ಮಾಡಿದ್ದಾರೆ ಮುಂದೆ ನೋಡೋಣ” ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇವೇಗೌಡರ ವಿಕೆಟ್ ಉರುಳುತ್ತೆ ಎಂದ ಪ್ರೀತಮ್ ಗೌಡ ವಿರುದ್ಧ ಪ್ರತಿಭಟನೆ

    ಪ್ರೀತಮ್‍ಗೌಡ ಹೇಳಿದ್ದೇನು?:
    ಸೂರ್ಯ ಚಂದ್ರ ಇರುವವರೆಗೂ ರಾಷ್ಟ್ರೀಯ ಪಕ್ಷ ದೇಶದಲ್ಲಿ ಇರುತ್ತದೆ. ಮಾಜಿ ಪ್ರಧಾನಿ ದೇವೇಗೌಡರ ವಿಕೆಟ್ ಹೋಗುತ್ತೆ. ಸಿಎಂ ಕುಮಾರಸ್ವಾಮಿ ಆರೋಗ್ಯವೂ ಸರಿಯಿಲ್ಲ. ಇದರಿಂದಾಗಿ ಜೆಡಿಎಸ್ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತದೆ. ಮೈತ್ರಿ ಸರ್ಕಾರ ಈಗಂತೂ ಬಿದ್ದರೆ ಸಾಕು ಎನ್ನುವಂತಿದೆ. ನನಗೂ ಈಗ 35-36ನೇ ವಯಸ್ಸು, ಶಾಸಕನಾಗಿ ಇದ್ದೇನೆ. ನಿನಗೆ 30 ವರ್ಷವಾಗಿದೆ. ಇನ್ನೂ 40 ವರ್ಷ ರಾಜಕಾರಣ ಮಾಡಬೇಕು. ಎಲ್ಲಾ ಒಟ್ಟಿಗೆ ಇರೋಣ ಎಂದು ಅನಾಮಿಕ ವ್ಯಕ್ತಿಯ ಜೊತೆಗೆ ಫೋನಿನಲ್ಲಿ ಮಾತನಾಡಿರುವ ಆಡಿಯೋ ಈಗ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಟಿ ದಾಳಿ ಅಂತ್ಯ: ಯಶ್ ಮೊದಲ ಪ್ರತಿಕ್ರಿಯೆ

    ಐಟಿ ದಾಳಿ ಅಂತ್ಯ: ಯಶ್ ಮೊದಲ ಪ್ರತಿಕ್ರಿಯೆ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ಮನೆಯಲ್ಲಿ ಬರೋಬ್ಬರಿ 40 ಗಂಟೆ ನಡೆದಿದ್ದ ಐಟಿ ರೇಡ್ ಈಗ ಅಂತ್ಯವಾಗಿದೆ. ದಾಳಿಯ ಬಳಿಕ ಯಶ್ ಮಾಧ್ಯಮಗಳೊಂದಿಗೆ ಮಾತನಾಡಿ, ಐಟಿ ಅಧಿಕಾರಿಗಳು ನಿರ್ಮಾಪಕ ವಿಜಯ್ ಕಿರಂಗದೂರ್ ಮತ್ತು ತಿಮ್ಮೇಗೌಡ ಮನೆ ಮೇಲೆ ದಾಳಿ ಮಾಡಿದ್ದಾರೆ. ಹಾಗಂತ ಇದು ಕೆಜಿಎಫ್ ಚಿತ್ರಕ್ಕೆ ಸಂಬಂಧಪಟ್ಟಿದ್ದಲ್ಲ. ಎರಡು ದಿನ ಮನೆಯಲ್ಲೇ ಇರಬೇಕಾಗಿದ್ದರಿಂದ ರಾಧಿಕಾ ಮತ್ತೆ ಮಗುವನ್ನು ನನಗೆ ಬಿಟ್ಟು ಇರಲು ಕಷ್ಟವಾಯಿತು. ಅಲ್ಲದೇ ಮಗುವಿಗೆ ಸ್ನಾನ ಮಾಡಿಸಬೇಕೆಂದು ಅಮ್ಮ ಚಿಂತೆಯಲ್ಲಿದ್ದರು. ಐಟಿ ಅಧಿಕಾರಿಗಳು ಅವರ ಕರ್ತವ್ಯ ಮಾಡಿದ್ದಾರೆ. ನಾವು ಕೂಡ ನಮ್ಮ ಕೆಲಸವನ್ನು ಮಾಡಿದ್ದೇವೆ ಎಂದರು. ಇದನ್ನೂ ಓದಿ: ಸತತ 2 ದಿನ ರಾಧಿಕಾ ತಂದೆ ಮನೆಯಲ್ಲಿ ನಡೆದ ಐಟಿ ದಾಳಿ ಮುಕ್ತಾಯ

    ನನ್ನ ಮನೆಯ ಮೇಲೆ ಮೊದಲ ಬಾರಿ ದಾಳಿ ನಡೆದಿದೆ. ಇದು ಹೊಸ ವಿಚಾರ. ನಮಗೂ ಅರ್ಥ ಮಾಡಿಕೊಳ್ಳುವುದು ಇರುತ್ತೆ, ಅಧಿಕಾರಿಗಳು ಅವರ ಪ್ರೋಸಿಜರ್ ಮಾಡಿದ್ದಾರೆ. ಕೆಲವು ಉಹಾಪೋಹಾಗಳನ್ನು ಮಾಡಬೇಡಿ. ಕೆಲವರು ಇಂತಹ ಅವಕಾಶಕ್ಕಾಗಿ ಕಾಯುಕೊಂಡು ಇರುತ್ತಾರೆ. ಊಹಾಪೋಹಗಳ ಮೇಲೆ ಕೆಲ ಮಾಧ್ಯಮಗಳು ವರದಿ ಬಿತ್ತರಿಸಿವೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ತೆರಿಗೆ ಇಲಾಖೆಗೆ ನಾವು ನಾಗರಿಕರಾಗಿ ಸಹಕಾರ ನೀಡಿದ್ದೇವೆ – ಪುನೀತ್ ಮೊದಲ ಪ್ರತಿಕ್ರಿಯೆ

    ಐಟಿ ದಾಳಿ ಅಂತ್ಯವಾದ ಬಳಿಕ ಪತ್ನಿ ಮತ್ತು ಮಗಳ ಜೊತೆಗೆ ಕೆಲ ಸಮಯ ಕಳೆದು, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟಿಸಿರುವ ‘ನಟಸಾರ್ವಭೌಮ’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹುಬ್ಬಳ್ಳಿಗೆ ತೆರೆಳಿದ್ದಾರೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
  • ಹೆತ್ತಮ್ಮನಿಗೆ ಪೊರಕೆಯಲ್ಲಿ ಹೊಡೆದ ಮಗ- ಡಿಸಿಪಿ ಅಣ್ಣಾಮಲೈ ಪ್ರತಿಕ್ರಿಯೆ

    ಹೆತ್ತಮ್ಮನಿಗೆ ಪೊರಕೆಯಲ್ಲಿ ಹೊಡೆದ ಮಗ- ಡಿಸಿಪಿ ಅಣ್ಣಾಮಲೈ ಪ್ರತಿಕ್ರಿಯೆ

    ಬೆಂಗಳೂರು: ಬುದ್ಧಿವಾದ ಹೇಳಿದ್ದಕ್ಕೆ ಮಗನೊಬ್ಬ ತನ್ನ ಹೆತ್ತಮ್ಮನಿಗೆ ಪೊರಕೆಯಿಂದ ಹೊಡೆದು ಕ್ಲಾಸ್ ತೆಗೆದುಕೊಂಡ ಪ್ರಕರಣಕ್ಕೆ ಡಿಸಿಪಿ ಅಣ್ಣಾಮಲೈ ಪ್ರತಿಕ್ರಿಯಿಸಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಡಿಸಿಪಿ ಅಣ್ಣಾಮಲೈ, “ನಾನು ಈ ಪ್ರಕರಣದ ದೃಶ್ಯಗಳನ್ನು ಪಬ್ಲಿಕ್ ಟಿವಿಯಲ್ಲಿ ನೋಡಿದೆ. ನಂತರ ಈ ಪ್ರಕರಣದ ಬಗ್ಗೆ ಪರಿಶೀಲಿಸಿದಾಗ ಜೆ.ಪಿ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸುದ್ದಿ ನೋಡಿದ ತಕ್ಷಣ ಪೊಲೀಸರು ಸುಮೋಟೋ ಕೇಸ್ ದಾಖಲಿಸಿ ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತೇವೆ” ಎಂದರು. ಇದನ್ನೂ ಓದಿ: ಹೆತ್ತಮ್ಮನಿಗೆ ಪೊರಕೆಯಲ್ಲಿ ಹೊಡೆದು ಮಗನಿಂದ ಕ್ಲಾಸ್..!

    ಈ ಮೊದಲು ಜೀವನ್ ತಾಯಿಯ ಬಳಿ ಮಾತನಾಡಿ ಅವರಿಗೆ ಹಲ್ಲೆಯಿಂದ ಗಾಯಗಾಳಾಗಿದ್ದೀಯಾ ಎಂಬುದು ಪರಿಶೀಲಿಸಬೇಕು. ನಂತರ ಸೂಕ್ತ ಕ್ರಮಕೈಗೊಳ್ಳುತ್ತೇವೆ. ಈ ಪ್ರಕರಣದಲ್ಲಿ ತಾಯಿಯೇ ದೂರು ನೀಡಬೇಕಾಗುತ್ತೆ. ಆದರೆ ಸ್ವಂತ ಮಗನ ವಿರುದ್ಧ ಏಕೆ ದೂರು ನೀಡಬೇಕು ಎಂದು ತಾಯಿ ಹಿಂಜರಿಯುತ್ತಾರೆ. ಕುಟುಂಬದವರು ಯಾರೂ ದೂರು ನೀಡದ ಕಾರಣ ನಾವೇ ಸ್ವತಃ ದೂರು ದಾಖಲಿಸಿಕೊಳ್ಳುತ್ತಿದ್ದೇವೆ ಎಂದರು.

    ಏನಿದು ಪ್ರಕರಣ?
    ಬುದ್ಧಿವಾದ ಹೇಳಿದ್ದಕ್ಕೆ ಜೀವನ್ ತನ್ನ ತಾಯಿಗೆ ಪೊರಕೆಯಿಂದ ಹೊಡೆದು ಕ್ಲಾಸ್ ತೆಗೆದುಕೊಂಡಿದ್ದಾನೆ. ಅಲ್ಲದೇ ಹೊರಗಡೆ ನನ್ನ ವಿಚಾರ ಮಾತಾಡಿದರೆ, ಇದೇ ರೀತಿ ಟ್ರೀಟ್‍ಮೆಂಟ್ ಇರುತ್ತೆ ಎಂದು ಜೀವನ್ ತಾಯಿಗೆ ಧಮ್ಕಿ ಹಾಕಿದ್ದಾನೆ. ತಾಯಿ ತನ್ನ ಮಗನ ಮುಂದೆ ಕೈ ಮುಗಿದರೂ ಜೀವನ್ ಕರುಣೆ ತೋರಲಿಲ್ಲ. ಅಲ್ಲದೇ ತಾಯಿ ಎದುರಲ್ಲೇ ಸಿಗರೇಟ್ ಸೇದಿ ಅಸಭ್ಯವಾಗಿ ವರ್ತಿಸಿದ್ದಾನೆ. ಹಾಗಾಗಿ ತಾಯಿ ಮಗನಿಗೆ ಬುದ್ಧಿವಾದ ಹೇಳುವಂತೆ ಪೊಲೀಸರ ಮೊರೆ ಹೋಗಿದ್ದರು ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೈಲ್ವಾನ್ ಪೋಸ್ಟರ್ ಫೇಕ್ ಅಂದಿದ್ದವರಿಗೆ ಕಿಚ್ಚ ಪ್ರತಿಕ್ರಿಯೆ

    ಪೈಲ್ವಾನ್ ಪೋಸ್ಟರ್ ಫೇಕ್ ಅಂದಿದ್ದವರಿಗೆ ಕಿಚ್ಚ ಪ್ರತಿಕ್ರಿಯೆ

    ಬೆಂಗಳೂರು: ಇತ್ತೀಚೆಗೆ ಕಿಚ್ಚ ಸುದೀಪ್ ನಟನೆಯ ‘ಪೈಲ್ವಾನ್’ ಚಿತ್ರದ ಪೋಸ್ಟರ್ ರಿಲೀಸ್ ಆಗಿತ್ತು. ಈ ಪೋಸ್ಟರ್ ನಲ್ಲಿ ಸುದೀಪ್ ತಮ್ಮ ದೇಹವನ್ನು ಪ್ರರ್ದಶಿಸಿದ್ದಾರೆ. ಸದ್ಯ ಈ ಪೋಸ್ಟರ್ ನೋಡಿ ಕೆಲವರು ಇದು ಸುದೀಪ್ ಅವರ ಫೇಕ್ ಫೋಟೋ ಎಂದು ಹೇಳಲು ಶುರು ಮಾಡಿದ್ದಾರೆ.

    ಸದ್ಯ ಈ ಬಗ್ಗೆ ಟ್ವಿಟ್ಟರಿನಲ್ಲಿ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್ ಅವರು, “ಪೋಸ್ಟರ್ ನಲ್ಲಿರುವುದು ನನ್ನ ನಕಲಿ ದೇಹ ಎನ್ನುವವರಿಗೆ ನಾನು ಏನು ಹೇಳುವುದಿಲ್ಲ. ಬಹುಶಃ ನಾನೇ ಅವರಿಗೆ ಈ ಅಭಿಪ್ರಾಯವನ್ನು ನೀಡಿದ್ದೇನೆ. ಪೈಲ್ವಾನ್ ಚಿತ್ರ ನನಗೆ ಸಾಕಷ್ಟು ಉತ್ಸಾಹ ನೀಡಿದೆ. ಅಲ್ಲದೇ ನಾನು ಈ ಚಿತ್ರದ ಎಲ್ಲ ಪ್ರಕ್ರಿಯೆಯನ್ನು ಎಂಜಾಯ್ ಮಾಡುತ್ತಿದ್ದೇನೆ. ಚಿತ್ರದ ಸ್ಕ್ರಿಪ್ಟ್ ಗಾಗಿ ನಾನು ಜಿಮ್‍ಗೆ ಹೋಗಿದ್ದೇನೆ ಹೊರತು ಬೇರೆ ವಿಷಯವನ್ನು ಸಾಬೀತು ಮಾಡಲು ಅಲ್ಲ” ಎಂದು ತಿಳಿಸಿದ್ದಾರೆ.

    ಕಟ್ಟುಮಸ್ತಾದ ಕುಸ್ತಿಪಟುವಿನ ಪಾತ್ರದಲ್ಲಿರುವ ಸುದೀಪ್ ಮೊದಲ ಬಾರಿಗೆ ಸಿಕ್ಸ್ ಪ್ಯಾಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಯಾವ ಸಿನಿಮಾದಲ್ಲಿ ಸುದೀಪ್ ತಮ್ಮ ಶರ್ಟ್ ತೆಗೆದಿರಲಿಲ್ಲ. ಮೊದಲ ಬಾರಿಗೆ ಪೈಲ್ವಾನ್ ಚಿತ್ರಕ್ಕಾಗಿ ದೇಹವನ್ನು ಪ್ರರ್ದಶಿಸಿದ್ದಾರೆ. ಆದರೆ ಕೆಲವರು ಸುದೀಪ್ ಮುಖಕ್ಕೆ ಬೇರೆಯವರ ದೇಹವನ್ನು ಫೋಟೋಶಾಪ್ ಮಾಡಲಾಗಿದೆ ಎನ್ನುತ್ತಿದ್ದಾರೆ.

    ಪೈಲ್ವಾನ್ ಚಿತ್ರಕ್ಕಾಗಿ ಸುದೀಪ್ ಮಾಂಸಾಹಾರವನ್ನ ತ್ಯಜಿಸಿ ಮೈಕಟ್ಟನ್ನು ಹುರಿಗೊಳಿಸಿದ್ದಾರೆ. ಮೊದಲ ಬಾರಿಗೆ ಪೈಲ್ವಾನ್ ನಾಗಿ ಕಾಣಿಸಿಕೊಳ್ಳುತ್ತಿರುವ ಮಾಣಿಕ್ಯ ಚಿತ್ರದಲ್ಲಿ ಕುಸ್ತಿ ದೃಶ್ಯಗಳು ಇರಲಿವೆ. ಈ ಹಿಂದೆ ಪೈಲ್ವಾನ್ ಸೆಟ್ ಚಿತ್ರದ ಒಂದು ಫೋಟೋ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುವುದರ ಜೊತೆ ಕುತೂಹಲವನ್ನು ಹೆಚ್ಚು ಮಾಡಿತ್ತು. ಈಗ ಕುಸ್ತಿ ಅಖಾಡದ ಫೋಟೋಗಳು ರಿವೀಲ್ ಆಗಿವೆ. ಚಿತ್ರೀಕರಣಕ್ಕಾಗಿ ಚಿತ್ರತಂಡ ಕುಸ್ತಿ ಅಖಾಡದ ಸೆಟ್ ನಿರ್ಮಾಣ ಮಾಡಿದೆ.

    ಗಜಕೇಸರಿ ಕೃಷ್ಣ ನಿರ್ದೇಶನದಲ್ಲಿ ಪೈಲ್ವಾನ್ ಮೂಡಿ ಬರುತ್ತಿದ್ದು, ಚಿತ್ರದ ಮೇಕಿಂಗ್ ನೋಡಿ ತೆಲುಗು, ತಮಿಳು, ಮಲೆಯಾಳಂ, ಪಂಜಾಬಿ, ಬೆಂಗಾಲಿ, ಮರಾಠಿ, ಭೋಜ್‍ಪುರಿ ವಿತರಕರು ಡಬ್ಬಿಂಗ್ ಮಾಡಲು ಮುಂದಾಗಿದ್ದಾರಂತೆ. ಈಗಾಗಲೇ ಸುದೀಪ್ ಅಪ್ತ ರಿತೇಶ್ ದೇಶಮುಖ್ ಹಿಂದಿಯಲ್ಲಿ ಪೈಲ್ವಾನ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರಂತೆ. ಒಟ್ಟು 30ರಿಂದ 40 ಕೋಟಿ ರೂ. ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

    https://www.youtube.com/watch?v=SjnO6D0JtJc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮದ್ವೆಗೊಬ್ಬ, ಸಂಸಾರಕ್ಕೊಬ್ಬ ಅನ್ನೋ ಆರೋಪಕ್ಕೆ ಮಹಿಳೆ ಸ್ಪಷ್ಟನೆ

    ಮದ್ವೆಗೊಬ್ಬ, ಸಂಸಾರಕ್ಕೊಬ್ಬ ಅನ್ನೋ ಆರೋಪಕ್ಕೆ ಮಹಿಳೆ ಸ್ಪಷ್ಟನೆ

    ವಿಜಯಪುರ: ಈಕೆಗೆ ಬೇಕು ಮದುವೆಗೊಬ್ಬ, ಸಂಸಾರಕ್ಕೊಬ್ಬ. ಯಾಮಾರಿ ಹಿಂದೆ ಬಿದ್ರೆ ಊರಹಬ್ಬ ಮಾಡ್ತಾಳೆ ಅನ್ನೋ ಕೊಪ್ಪಳದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹಿಳೆ ಸ್ಪಷ್ಟನೆ ನೀಡಿದ್ದಾಳೆ.

    ಕೊಪ್ಪಳದ ವಿಶ್ವ ಎಂಬಾತನಿಗೆ ಕೈಕೊಟ್ಟು ವಂಚಿಸಿದ್ದ ಶ್ರೀಲತಾ ವಿಜಯಪುರದಲ್ಲಿ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾಳೆ. “ನಾನು ಯಾವ ತಪ್ಪನ್ನು ಮಾಡಿಲ್ಲ ವಿಶ್ವನಿಗೆ ಕೈ ಕೊಟ್ಟಿಲ್ಲ. ನನಗೆ ಬಸ್ ನಿಲ್ದಾಣ, ಮನೆಯಲ್ಲಿ ಸೇರಿದಂತೆ ಹಲವೆಡೆ ಹೊಡೆದು, ಚಿತ್ರಹಿಂಸೆ ನೀಡಿದ್ದಾನೆ. ಸಾಲದ್ದಕ್ಕೆ ನನ್ನ ಆಫೀಸ್‍ಗೆ ಬಂದು ಅಲ್ಲಿಯೂ ನನ್ನ ಗೆಳೆಯರಿಗೆ ನಿಂದಿಸುವುದು, ಹೊಡೆಯುವುದು ಮಾಡಿದ್ದಾನೆ. ಅದಕ್ಕೆ ನಾನು ಬೇಸತ್ತು ಅವನನ್ನು ಬಿಟ್ಟು ಬಂದಿದ್ದೇನೆ. ಅವನಿಗೆ ಡಿವೋರ್ಸ್ ಕೂಡ ನೀಡುತ್ತಿದ್ದೇನೆ” ಎಂದು ಹೇಳಿದ್ದಾಳೆ.

    ಶ್ರೀಲತಾ ಮಾಧ್ಯಮದ ಜೊತೆ ಮಾತನಾಡಿದ್ದನ್ನು ನೋಡಿ ಆಕೆಯ ತಾಯಿ ಸುಶೀಲಾ ಕೂಡ ಮಗಳ ಮಾತಿಗೆ ತಾಳ ಹಾಕಿದ್ದಾರೆ. ಅವಳಿಗೆ ಸಣ್ಣ ವಯಸ್ಸಿನಲ್ಲಿ ಮದುವೆ ಮಾಡಿದ್ದೆವು. ಆದರೆ ವಿಶ್ವ ಪ್ರತಿನಿತ್ಯ ನೀಡುತ್ತಿದ್ದ ಹಿಂಸೆ ತಾಳಲಾರದೆ ಡಿವೋರ್ಸ್ ಕೊಡುವ ನಿರ್ಧಾರಕ್ಕೆ ನನ್ನ ಮಗಳು ಬಂದಿದ್ದಾಳೆ ಎಂದು ತಾಯಿ ಸ್ಪಷ್ಟಪಡಿಸಿದ್ದಾರೆ.

    ಒಂದು ವರ್ಷದ ಹಿಂದೆ ಶ್ರೀಲತಾ ಜೊತೆ ವಿಶ್ವ ಮದುವೆ ಮಾಡಿಕೊಂಡಿದ್ದನು. ವಿಶ್ವನಿಗೆ ಮೊದಲನೇ ಮದುವೆ ಆದರೆ ಶ್ರೀಲತಾ 2ನೇ ಮದುವೆಯಾಗಿತ್ತು. ಶ್ರೀಲತಾ ಮೊದಲು ವಿಜಯಪುರ ಮೂಲದ ಯುವಕನೊಂದಿಗೆ ಮದುವೆ ಮಾಡಿಕೊಂಡಿದ್ದಳು. 6 ವರ್ಷ ಆತನೊಂದಿಗೆ ಸಂಸಾರ ನಡೆಸಿ ನಂತರ ಆತನಿಗೆ ವಿಚ್ಛೇದನ ನೀಡಿದ್ದಳು. ಬಳಿಕ ವಿಶ್ವನ ಜೊತೆ ಮದುವೆ ಮಾಡಿಕೊಳ್ಳಲು ಅವರ ಮನೆಯವರ ಜೊತೆ ಮಾತಾಡಿ ಮದುವೆಯ ಎಲ್ಲಾ ಸಿದ್ಧತೆ ನಡೆಸಿ ಮದುವೆಯಾದಳು.

    ವಿಶ್ವ ಹಾಗೂ ಶ್ರೀಲತಾ ಇಬ್ಬರು ಮದುವೆಯಾಗಿ ಬೆಂಗಳೂರಲ್ಲಿ ಕೆಲ ತಿಂಗಳು ಸಂಸಾರ ನಡೆಸಿದ್ದಾರೆ. ನಂತರ ಹುಡುಗಿಗೆ ಬೆಂಗಳೂರಿನ ಸಾಫ್ಟ್ ವೇರ್ ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿದೆ. ಕೆಲಸ ಸಿಕ್ಕ 3 ತಿಂಗಳಿಗೆ ಹುಡುಗಿ ಶೋಕಿಗೆ ಬಿದ್ದು ವಿಶ್ವನ ಜೊತೆ ಕ್ಯಾತೆ ತೆಗೆದು ಇವನನ್ನು ಬಿಟ್ಟು ಹೋಗಿದ್ದಾಳೆ. ಅಷ್ಟೇ ಅಲ್ಲದೆ ತನ್ನ ಫ್ರೆಂಡ್ ಸರ್ಕಲ್ ನಲ್ಲಿ ನನಗೆ ಮದುವೆ ಆಗಿಲ್ಲ ಎಂದು ಹೇಳಿಕೊಂಡು ಮತ್ತೊಬ್ಬನ ಜೊತೆ ಸುತ್ತಾಡಿದ್ದಾಳೆ. ಇಷ್ಟೆಲ್ಲಾ ಗೊತ್ತಿದ್ದರೂ ವಿಶ್ವ, ನೀನು ಒಂದು ಹೆಣ್ಣಾಗಿ ನನ್ನ ಬಾಳಿಗೆ ಬರುವುದಾದರೆ ಬಾ ನಾನು ನಿನ್ನನ್ನು ಅಂಗೈಯಲ್ಲಿಟ್ಟು ನೋಡಿಕೊಳ್ಳುತ್ತೇನೆ ಎಂದು ಆಕೆಗೆ ಕೆಲ ಕಂಡೀಷನ್ ಹಾಕಿದ್ದನು ಎಂಬುದಾಗಿ ವರದಿಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಆಡಳಿತ ಪಕ್ಷದ ಹಣ ಬಲದ ನಡುವೆಯೂ ಸಮಾಧಾನದ ಫಲಿತಾಂಶ: ಬಿಎಸ್‍ವೈ

    ಆಡಳಿತ ಪಕ್ಷದ ಹಣ ಬಲದ ನಡುವೆಯೂ ಸಮಾಧಾನದ ಫಲಿತಾಂಶ: ಬಿಎಸ್‍ವೈ

    ಬೆಂಗಳೂರು: ರಾಜ್ಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದ್ದು, ಆಡಳಿತ ಪಕ್ಷದ ಹಣ ಬಲದ ನಡುವೆಯೂ ಬಿಜೆಪಿಗೆ ಸಮಾಧಾನದ ಫಲಿತಾಂಶ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದರು.

    ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ವಿಚಾರಕ್ಕೆ ಬಿಎಸ್‍ವೈ ಮಾಧ್ಯಮದೊಂದಿಗೆ ಮಾತನಾಡಿ, ನಾವು ಇನ್ನೂ ಹೆಚ್ಚು ಸ್ಥಾನ ಗೆಲ್ಲಬೇಕಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತ ಇರುವುದರಿಂದ ನಿರೀಕ್ಷಿತ ಸ್ಥಾನ ಗಳಿಸಲು ಸಾಧ್ಯವಾಗಲಿಲ್ಲ. ಆಡಳಿತ ಪಕ್ಷದ ಹಣ ಬಲದ ನಡುವೆಯೂ ನಮಗೆ ಸಮಾಧಾನ ಫಲಿತಾಂಶ ಸಿಕ್ಕಿದೆ. ಇದು ಸಮ್ಮಿಶ್ರ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಲೋಕಸಭಾ ಚುನಾವಣಾ ವಿಚಾರವೇ ಬೇರೆಯಾಗಿದ್ದು, ನೂರಕ್ಕೆ ನೂರರಷ್ಟು ಲೋಕಸಭೆಯಲ್ಲಿ ನಾವೇ ಗೆಲ್ಲುತ್ತೇವೆ. ಒಟ್ಟು 28 ಸ್ಥಾನಗಳ ಪೈಕಿ 23 ರಲ್ಲಿ ನಾವು ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದರು.

    29 ನಗರಸಭೆಗಳ ಪೈಕಿ ಬಿಜೆಪಿ 15, ಕಾಂಗ್ರೆಸ್ 9, ಹಾಗೂ ಜೆಡಿಎಸ್ 3 ಕಡೆ ಗೆದ್ದುಕೊಂಡಿದೆ. 53 ಪುರಸಭೆಯಲ್ಲಿ ಬಿಜೆಪಿಗೆ 11, ಕಾಂಗ್ರೆಸ್ 28, ಜೆಡಿಎಸ್ 8 ಕಡೆ ಗೆಲುವು ಪಡೆದಿದೆ. 23 ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿಗೆ 8, ಕಾಂಗ್ರೆಸ್‍ಗೆ 9 ಹಾಗೂ ಜೆಡಿಎಸ್‍ಗೆ 2 ಸ್ಥಾನ ಪಡೆದಿದೆ. ಮಹಾನಗರ ಪಾಲಿಕೆಯಲ್ಲಿ ಒಂದೇ ಒಂದು ಕಡೆ ಅಂದರೆ ಶಿವಮೊಗ್ಗದಲ್ಲಿ ಬಹುದೊಡ್ಡ ಅಂತರದಲ್ಲಿ ಬಿಜೆಪಿ ಬಹುಮತ ಪಡೆದಿದೆ ಎಂದು ಯಡಿಯೂರಪ್ಪ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸುಪ್ರೀಂ ತೀರ್ಪು: ರಾಜಕೀಯ ನಾಯಕರು ಹೇಳಿದ್ದು ಏನು?

    ಸುಪ್ರೀಂ ತೀರ್ಪು: ರಾಜಕೀಯ ನಾಯಕರು ಹೇಳಿದ್ದು ಏನು?

    ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂನಿಂದ ಕರ್ನಾಟಕಕ್ಕೆ ಸಿಹಿ ಸುದ್ದಿ ಸಿಕ್ಕಿದ್ದು, ರಾಜ್ಯಕ್ಕೆ ಹೆಚ್ಚುವರಿಯಾಗಿ ಕರ್ನಾಟಕಕ್ಕೆ 14.5 ಟಿಎಂಸಿ ಹೆಚ್ಚುವರಿ ನೀರು ಸಿಕ್ಕಿದೆ. ತೀರ್ಪು ಕೇಳಿ ನಾಯಕರು ಪ್ರತಿಕ್ರಿಯಿಸಿದ್ದಾರೆ.

    ಸುಪ್ರೀಂ ತೀರ್ಪು ಹಿನ್ನೆಲೆಯಲ್ಲಿ ನಮ್ಮ ವಕೀಲರ ಜೊತೆ ಮಾತನಾಡಿ ಪ್ರತಿಕ್ರಿಯೆ ನೀಡುತ್ತೇನೆ. 192 ಟಿಎಂಸಿಯಲ್ಲಿ 20 ಟಿಎಂಸಿ ನೀರು ಕಡಿತ ಮಾಡಿದೆ. ಇದು ನಮಗೆ ಅನುಕೂಲ. ಸಂಪೂರ್ಣ ಮಾಹಿತಿ ವಕೀಲರ ಬಳಿ ಪಡೆದು ಮಾತನಾಡುತ್ತೇನೆ ಎಂದು ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

    ಕಾವೇರಿ ತೀರ್ಪು ಕಳೆದ ತೀರ್ಪಿಗಿಂತ ಉತ್ತಮವಾಗಿದೆ. ಈ ತೀರ್ಪು ನಮಗೆ ತೃಪ್ತಿ ತಂದಿಲ್ಲ. ಬ್ರಿಟಿಷ್ ಕಾಲದ ತೀರ್ಪು ಬದಲಾವಣೆ ಆಗಿಲ್ಲ ಎನ್ನುವುದು ದುರಂತ. ನಮ್ಮ ನಿರೀಕ್ಷೆ ಇನ್ನು ಹೆಚ್ಚಿತ್ತು. 40 ಟಿಎಂಸಿ ನೀರು ಸಿಗುವ ನಿರೀಕ್ಷೆ ಇತ್ತು. ಆದರೆ ಈ ತೀರ್ಪು ತೃಪ್ತಿ ತಂದಿಲ್ಲ. ವಕೀಲರು ಉತ್ತಮವಾಗಿ ವಾದ ಮಾಡಿದ್ದಾರೆ. ತೀರ್ಪು ನಮ್ಮ ನಿರೀಕ್ಷೆಯಂತೆ ಬಂದಿಲ್ಲ ಎಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಸಿಟಿ ರವಿ ಹೇಳಿದ್ದಾರೆ.

    ಕಾವೇರಿ ತೀರ್ಪು ಹಿನ್ನಲೆಯಲ್ಲಿ ವಿಧಾನಸೌಧದಲ್ಲಿ ಕಾನೂನು ಸಚಿವ ಜಯಚಂದ್ರ ಪ್ರತಿಕ್ರಿಯೆ ನೀಡಿ ಸುಪ್ರೀಂ ತೀರ್ಪು ಆಶಾದಾಯಕ ಬೆಳವಣಿಗೆ. ನಮ್ಮ ನಿರೀಕ್ಷೆ ಇನ್ನು ಹೆಚ್ಚಿತ್ತು. ಪೂರ್ತಿ ತೀರ್ಪು ಓದಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

    ಸ್ವಲ್ಪ ಮಟ್ಟಿಗೆ ಕರ್ನಾಟಕಕ್ಕೆ ಖುಷಿ ನೀಡಿದೆ. ಮೈಸೂರು, ಮಂಡ್ಯ ಜನರಿಗೆ ಹೆಚ್ಚು ಖುಷಿ ನೀಡಿದೆ. ಬೆಂಗಳೂರಿನ ಜನತೆಗೆ ಹೆಚ್ಚು ನೀರು ನೀಡಿರೋದು ಖುಷಿ ವಿಚಾರ. ನಮ್ಮ ನಿರೀಕ್ಷೆಯಷ್ಟು ನೀರು ಸಿಕ್ಕಿಲ್ಲ. ಸ್ವಲ್ಪ ಮಟ್ಟಿಗೆ ನೆಮ್ಮದಿಯ ತೀರ್ಪು ಇದಾಗಿದೆ. ಕೋರ್ಟ್‍ನ ಒಳಗೆ ಹೊರಗೆ ಹೋರಾಟ ಮುಂದುವರಿಸಬೇಕು ಎಂದು ಸರ್ಕಾರಕ್ಕೆ ಮಾಜಿ ಗೃಹಸಚಿವ ಆರ್. ಅಶೋಕ್ ಸಲಹೆ ನೀಡಿದ್ದಾರೆ.

    ಈ ತೀರ್ಪು ಮೇಲ್ನೋಟಕ್ಕೆ ಸ್ವಾಗತ ಮಾಡುತ್ತೇವೆ. ನಮ್ಮ ನಿರೀಕ್ಷೆಯಷ್ಟು ತೀರ್ಪು ಬಂದಿಲ್ಲ. ನಿರ್ವಹಣಾ ಮಂಡಳಿಯ ತೀರ್ಪು ಸ್ವಾಗತ ಮಾಡುತ್ತೇವೆ. ಕೃಷಿ ಪ್ರದೇಶ ಹೆಚ್ಚುವರಿ ಹೆಚ್ಚಳದ ತೀರ್ಪು ಸ್ವಾಗತಾರ್ಹ. ಹೆಚ್ಚುವರಿ ನೀರಿನ ಬಗ್ಗೆ ಕಾನೂನಾತ್ಮಕ ಹೋರಾಟ ಮುಂದುವರೆಸಬೇಕು. 100% ಸಮಾಧಾನವಾಗದೇ ಇದ್ದರೂ ಮೇಲ್ನೋಟಕ್ಕೆ ಸಮಾಧಾನ ತಂದಿದೆ. ಹಿಂದಿನ ಸುಪ್ರೀಂ ತೀರ್ಪುಗಳು ನಮ್ಮ ವಿರುದ್ಧವೇ ಬರುತ್ತಿತ್ತು. ಆದರೆ ಇವತ್ತಿನ ತೀರ್ಪು ಹಿಂದಿನ ತೀರ್ಪಿಗಿಂತ ಸಮಾಧಾನ ತಂದಿದೆ. ತೀರ್ಪು ಪೂರ್ತಿ ಓದಿ ರಿಯಾಕ್ಷನ್ ಕೊಡುತ್ತೇನೆ ಎಂದು ವಿಧಾನ ಸಭೆಯ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.