Tag: Reaction

  • ರವೀನಾ ಟಂಡನ್ ರಸ್ತೆ ಅಪಘಾತ: ಪ್ರತಿಕ್ರಿಯೆ ಕೊಟ್ಟ ಕೆಜಿಎಫ್ ರಮಿಕಾ

    ರವೀನಾ ಟಂಡನ್ ರಸ್ತೆ ಅಪಘಾತ: ಪ್ರತಿಕ್ರಿಯೆ ಕೊಟ್ಟ ಕೆಜಿಎಫ್ ರಮಿಕಾ

    ಕೆಜಿಎಫ್ 2′ (KGF 2) ಸಿನಿಮಾದಲ್ಲಿ ರಮಿಕಾ ಪಾತ್ರದಲ್ಲಿ ನಟಿಸಿದ್ದ ರವೀನಾ ಟಂಡನ್ (Raveena Tandon) ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಜೂನ್ 1ರಂದು ರಾತ್ರಿ ರವೀನಾ ಕಾರು (Car Accident) ಮೂವರು ಮಹಿಳೆಯರಿಗೆ ಗುದ್ದಿದೆ. ಈ ಪರಿಣಾಮ, ನಟಿ ರವೀನಾ ಮತ್ತು ಕಾರು ಚಾಲಕನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ರವೀನಾ ಮೇಲೆ ಹಲ್ಲೆಗೆ ಯತ್ನ ಕೂಡ ಮಾಡಲಾಗಿತ್ತು.

    ರಿಜ್ವಿ ಕಾಲೇಜು ಬಳಿಯ ಕಾರ್ಟರ್ ರಸ್ತೆಯಲ್ಲಿ ರವೀನಾ ಅವರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಮೂವರಿಗೆ ಡಿಕ್ಕಿ ಹೊಡೆದಿದ್ದ. ಇದರಿಂದ ಅವರ ತಲೆ ಮತ್ತು ಮೂಗಿಗೆ ಗಾಯಗಳಾಗಿದ್ದವು. ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳಿಯರು ಕಾರು ಚಾಲಕನ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದರು. ಕಾರು ಚಾಲಕನ್ನು ಪಾರು ಮಾಡಲು ಬಂದ ನಟಿ, ತನ್ನ ಕಾರಿನಿಂದ ಇಳಿದು ಸಂತ್ರಸ್ತರಿಗೆ ನಿಂದಿಸಿದ್ದಾರೆ ಎನ್ನಲಾಗಿತ್ತು.

    ಈ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ (Reaction) ನೀಡಿದ್ದಾರೆ ರವೀನಾ ಟಂಡನ್. ನನ್ನ ಕಾರು ಯಾರಿಗೂ ಡಿಕ್ಕಿ ಹೊಡೆದಿಲ್ಲ. ನಾನು ಕುಡಿದಿರಲಿಲ್ಲ. ನನ್ನ ಡ್ರೈವರ್ ನೆರವಿಗೆ ಧಾವಿಸಿದೆ. ಈ ಸಂದರ್ಭದಲ್ಲಿ ಅವರೇ ನನ್ನನ್ನು ಹೊಡೆಯೋಕೆ ಬಂದರು. ಇದರಲ್ಲಿ ನನ್ನದು ಮತ್ತು ನನ್ನ ಡ್ರೈವರ್ ದ್ದು ತಪ್ಪಿಲ್ಲ ಎಂದು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

     

    ಅಪಘಾತದಿಂದ ಮಹಿಳೆಗೆ ರಕ್ತಸ್ರಾವವಾಗಿದೆ ಎಂಬುದು ತಿಳಿದಿದೆ. ಈ ವಿಚಾರ ದೊಡ್ಡದಾಗುತ್ತಿದ್ದಂತೆ ವಿಡಿಯೋಗಳನ್ನು ರೆಕಾರ್ಡ್ ಮಾಡಬೇಡಿ ಎಂದು ರವೀನಾ ನೆರದವರಲ್ಲಿ ವಿನಂತಿಸಿದ್ದರು. ತಳ್ಳಬೇಡಿ, ದಯವಿಟ್ಟು ನನಗೆ ಹೊಡೆಯಬೇಡಿ ಎಂದು ರವೀನಾ ಕೇಳಿಕೊಂಡಿದ್ದರು. ಚಾಲಕನ ರಕ್ಷಣೆಗೆ ಬಂದ ರವೀನಾ ಟಂಡನ್ ಮೇಲೆ ಮಹಿಳೆಯೊಬ್ಬರು ಹಲ್ಲೆಗೆ ಪ್ರಯತ್ನಿಸಿದ್ದರು.

  • ದ್ರಾವಿಡ ಪಕ್ಷಗಳು ಕರ್ನಾಟಕ ಅಂದ್ರೆ ಪಾಕಿಸ್ತಾನ ಅಂದ್ಕೊಂಡಿವೆ: ಕಾವೇರಿ ಕುರಿತು ಅನಂತ್ ಕಿಡಿ

    ದ್ರಾವಿಡ ಪಕ್ಷಗಳು ಕರ್ನಾಟಕ ಅಂದ್ರೆ ಪಾಕಿಸ್ತಾನ ಅಂದ್ಕೊಂಡಿವೆ: ಕಾವೇರಿ ಕುರಿತು ಅನಂತ್ ಕಿಡಿ

    ನಿನ್ನೆಯಿಂದ ಕಾವೇರಿ ಹೋರಾಟದ ಕುರಿತಂತೆ ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು ಮಾತನಾಡುತ್ತಿದ್ದಾರೆ. ಬಹುತೇಕರು ಸೋಷಿಯಲ್ ಮೀಡಿಯಾ ಮೂಲಕ ಕರ್ನಾಟಕದ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಅದರಲ್ಲೂ ಹಿರಿಯ ನಟ ಅನಂತ್ ನಾಗ್ (Anant Nag), ಕಾವೇರಿ ಹೋರಾಟದ ಬಗ್ಗೆ ಸುದೀರ್ಘವಾಗಿ ಮಾತನಾಡಿದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತಮಿಳು ನಾಡು ನಿಲುವನ್ನು ಕಟು ಭಾಷೆಯಲ್ಲಿ ಟೀಕಿಸಿದ್ದಾರೆ.

    ಮಳೆ ಇಲ್ಲದ ಸಂದರ್ಭದಲ್ಲಿ ಕಾವೇರಿ ಗಲಾಟೆ ಆಗುವುದು ಸಹಜ ಎನ್ನುವಂತಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ತಮಿಳು ನಾಡಿ ಕಾವೇರಿ ವಿಷಯದಲ್ಲಿ ಖ್ಯಾತೆ ತೆಗೆದಿದೆ. 60 ವರ್ಷದಿಂದಲೂ ನಾನು ಇದನ್ನು ನೋಡುತ್ತಾ ಬಂದಿರುವೆ. ಈ ದ್ರಾವಿಡ ಪಕ್ಷಗಳು ಪದೇ ಪದೇ ಅಲ್ಲಿನ ಜನರನ್ನು ಕಾವೇರಿ ವಿಷಯದಲ್ಲಿ ತಪ್ಪು ದಾರಿಗೆ ಎಳೆಯುತ್ತಿವೆ ಎಂದು ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ.

    ನಾವು ಪ್ರತಿ ವರ್ಷವೂ ಅಗತ್ಯಕ್ಕಿಂತಲೂ ಹೆಚ್ಚಿನ ನೀರನ್ನು ಕೊಡುತ್ತಲೇ ಬಂದಿದ್ದೇವೆ. ದ್ರಾವಿಡ ಪಕ್ಷಗಳು ಕರ್ನಾಟಕವನ್ನು ಪಾಕಿಸ್ತಾನ, ಶ್ರೀಲಂಕಾದಂತೆ ನೋಡುತ್ತಿವೆ. ಅವರು ಒಟ್ಟಾಗಿ ಹೋಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುತ್ತಾನೆ. ನಮ್ಮಲ್ಲಿ ಹಾಗೆ ಆಗುತ್ತಿಲ್ಲ. ಈ ಕೆಲಸವನ್ನು ನಾವು ಮಾಡಬೇಕಿದೆ ಎಂದು ಅನಂತ್ ನಾಗ್ ವಿಡಿಯೋದಲ್ಲಿ ಹೇಳಿದ್ದಾರೆ.

    ಕಾವೇರಿ ಹೋರಾಟಕ್ಕೆ ಸ್ಯಾಂಡಲ್ ವುಡ್ ಬೆಂಬಲ

    ಸ್ಯಾಂಡಲ್ ವುಡ್ (Sandalwood) ತಾರೆಯರ ಮೇಲೆ ಕಾವೇರಿ (Cauvery) ಹೋರಾಟಗಾರರು ಮುಗಿ ಬೀಳುತ್ತಿದ್ದಂತೆಯೇ ಒಬ್ಬೊಬ್ಬರೇ ಈ ಕುರಿತು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕನ್ನಡ ನಾಡು, ನುಡಿ, ಜಲದ ಬಗ್ಗೆ ಸದಾ ಅಪಾರ ಗೌರವವನ್ನು ಇಟ್ಟುಕೊಂಡು ಬಂದಿರುವ ಡಾ.ರಾಜ್ ಕುಮಾರ್ ಕುಟುಂಬ ಕೂಡ ಕಾವೇರಿ ಕುರಿತಂತೆ ಪ್ರತಿಕ್ರಿಯೆ ನೀಡಿದೆ. ಬೆಳಗ್ಗೆಯಷ್ಟೇ ರಾಘವೇಂದ್ರ ರಾಜಕುಮಾರ್ ಮಾತನಾಡಿದ್ದರು. ಇದೀಗ ಶಿವರಾಜ್ ಕುಮಾರ್  (Shivaraj Kumar) ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

    ‘ರೈತನ ಬೆನ್ನೆಲುಬು ಕಾವೇರಿ. ರಾಜ್ಯದಲ್ಲಿ ಈಗಾಗಲೇ ಮಳೆಯ ಅಭಾವ ಇರುವ ಕಾರಣದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಎರಡು ರಾಜ್ಯಗಳ ನಾಯಕರು, ನ್ಯಾಯಾಲಯ ಇದಕ್ಕೊಂದು ಸಮಾಧಾನಕರ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಇದು ನನ್ನ ಪ್ರಾರ್ಥನೆ ಕೂಡ ಆಗಿದೆ’ ಎಂದಿದ್ದಾರೆ.

    ಹಲವು ದಿನಗಳಿಂದ ಮಂಡ್ಯ ಭಾಗದ ರೈತರು ಕಾವೇರಿ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ರೈತರು, ರೈತ ಸಂಘಗಳು ಮತ್ತು ಕನ್ನಡಪರ ಹೋರಾಟಗಾರು ಈ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡಿದ್ದರೂ, ಕನ್ನಡ ಸಿನಿಮಾ ರಂಗದವರು ಮಾತ್ರ ಮೌನವಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಇವತ್ತು ಹಲವು ಕಡೆ ಚಿತ್ರರಂಗದವರ ವಿರುದ್ಧ ಪ್ರತಿಭಟನೆ ಕೂಡ ಮಾಡಿದ್ದರು. ವಿರೋಧದ ಹೋರಾಟ ಹೆಚ್ಚಾಗುತ್ತಿದ್ದಂತೆಯೇ ಒಬ್ಬೊಬ್ಬ ನಟರು ಸೋಷಿಯಲ್ ಮೀಡಿಯಾ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.

    ಹಿರಿಯ ನಟಿ, ಮಂಡ್ಯ ಕ್ಷೇತ್ರದ ಸಂಸದೆಯೂ ಆಗಿರುವ ಸುಮಲತಾ ಅಂಬರೀಶ್ ಅವರು ನಿರಂತರವಾಗಿ ರೈತರ ಹೋರಾಟಗಳಿಗೆ ಬೆಂಬಲ ಸೂಚಿಸುತ್ತಾ ಬಂದಿದ್ದಾರೆ. ಜಲಶಕ್ತಿ ಸಚಿವರನ್ನು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ನಿನ್ನೆಯಷ್ಟೇ ಭೇಟಿ ಮಾಡಿ ಕ್ಷೇತ್ರದ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಅಲ್ಲದೇ, ನೇರವಾಗಿ ಅವರು ಹೋರಾಟಕ್ಕೂ ಇಳಿದಿದ್ದರು. ಇವರ ಹೊರತಾಗಿ ಬೇರೆ ಯಾವ ಕಲಾವಿದರೂ ಹೋರಾಟದಲ್ಲಿ ಭಾಗಿಯಾಗಿಲ್ಲ ಎನ್ನುವ ಅಸಮಾಧಾನ ಹೋರಾಟಗಾರರಲ್ಲಿ ಇತ್ತು.

    ಬೆಳಗ್ಗೆ ನಟ ದರ್ಶನ್ ಟ್ವೀಟ್ ಮಾಡಿ, ‘ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ, ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ’ ಎಂದು ಬರೆದಿದ್ದರು.

     

    ಸುದೀಪ್ (Sudeep) ಕೂಡ ಟ್ವೀಟ್ ಮಾಡಿದ್ದು, ‘ಸ್ನೇಹಿತರೆ, ನಮ್ಮ ಕಾವೇರಿ ನಮ್ಮ ಹಕ್ಕು. ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು  ನಾನು ನಂಬಿದ್ದೇನೆ . ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ . ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ. ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ’ ಎಂದು ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಜಕ್ಕೂ ರಶ್ಮಿಕಾಗೆ ಮ್ಯಾನೇಜರ್ ಮೋಸ ಮಾಡಿದ್ನಾ?: ಸತ್ಯ ಬಿಚ್ಚಿಟ್ಟ ನಟಿ

    ನಿಜಕ್ಕೂ ರಶ್ಮಿಕಾಗೆ ಮ್ಯಾನೇಜರ್ ಮೋಸ ಮಾಡಿದ್ನಾ?: ಸತ್ಯ ಬಿಚ್ಚಿಟ್ಟ ನಟಿ

    ಶ್ಮಿಕಾ ಮಂದಣ್ಣ (Rashmika Mandanna) ವಾರದಿಂದ ಇದೊಂದು ಸುದ್ದಿಯಿಂದ ಲೈಮ್‌ಲೈಟಿನಲ್ಲಿದ್ದರು. ಹಲವು ವರ್ಷಗಳಿಂದ ಇವರ ಬಳಿ ಮ್ಯಾನೇಜರ್ (Manager) ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೋಸ (Cheating)  ಮಾಡಿದ್ದಾನೆ ಎನ್ನುವುದು ಸುದ್ದಿಯ ಸಾರವಾಗಿತ್ತು. ಸುಮಾರು ಎಂಬತ್ತು ಲಕ್ಷ ರೂಪಾಯಿ ಲಪಟಾಸಿದ್ದಕ್ಕೆ ಮ್ಯಾನೇಜರ್‌ನನ್ನು ಕಿತ್ತು ಬಿಸಾಕಿದ್ದಾರೆ ರಶ್ಮಿಕಾ ಅನ್ನೋ ಸುದ್ದಿ ಹರಿದಾಡುತ್ತಿತ್ತು.

    ಒಂದರ ಹಿಂದೊಂದು ಬಾಲಿವುಡ್ ಸಿನಿಮಾ ಒಪ್ಪಿಕೊಳ್ಳುತ್ತಿರುವ ರಶ್ಮಿಕಾ ಈಗ ಸಿಕ್ಕಾಪಟ್ಟೆ ಬಿಜಿ ಬಿಜಿ. ಇದನ್ನೆಲ್ಲ ನೋಡಿಕೊಳ್ಳಲು ಒಂದೊಂದಕ್ಕೆ ಒಬ್ಬೊಬ್ಬ ಕೆಲಸಗಾರರು ಇದ್ದಾರೆ. ಹೈದ್ರಾಬಾದ್, ಮುಂಬೈಗೆ ರಶ್ಮಿಕಾ ಓಡಾಡುತ್ತಿದ್ದಾರೆ. ಈ ನಡುವೆ ಇದೊಂದು ಸಮಾಚಾರ ಎಲ್ಲರಲ್ಲೂ ಕುತೂಹಲ ಮೂಡಿಸಿತು. ರಶ್ಮಿಕಾ ಬಳಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಭರ್ತಿ ಎಂಬತ್ತು ಲಕ್ಷ ರೂಪಾಯಿ ಮೋಸ ಮಾಡಿದ್ದಾನೆ. ಅಂದರೆ ನುಂಗಿ ಹಾಕಿದ್ದಾನೆ. ಅದಕ್ಕಾಗಿ ಅವನನ್ನು ಕಿತ್ತು ಹಾಕಿದ್ದಾರೆ ರಶ್ಮಿಕಾ. ಇದು ಎಲ್ಲ ಮಾಧ್ಯಮದಲ್ಲಿ ಸುದ್ದಿಯಾಯಿತು. ಪೊಲೀಸು, ಕೇಸು, ಕೋರ್ಟು ಇತ್ಯಾದಿಯನ್ನು ಪಕ್ಕಕ್ಕಿಟ್ಟು ರಶ್ಮಿಕಾ ತಣ್ಣಗೆ ಕೆಲಸ ಮುಗಿಸಿದ್ದಾರೆ ಎಂದು ಹೇಳಲಾಗಿತ್ತು.

    ಅಯ್ಯೋ.. ಕೇಳಿದ್ದರೆ ರಶ್ಮಿಕಾ ಸಾಲ ಕೊಡುತ್ತಿರಲಿಲ್ಲಾವಾ? ಅಷ್ಟು ನಂಬಿಕೆ ಇಟ್ಟಿದ್ದ ಹುಡುಗಿಗೆ ಹೀಗೆ ಮಾಡೋದಾ? ಅವನ್ಯಾವನೋ ಪಕ್ಕಾ ಕಳ್ಳನೇ ಇರಬೇಕು. ಹೀಗಂತ ಎಲ್ಲರೂ ಮಾತಾಡಿಕೊಂಡರು. ಅದನ್ನೇ ನಿಜ ಎಂದು ನಂಬಿದ್ದರು. ಆದರೆ ಅದೇ ರಶ್ಮಿಕಾ ಆಪ್ತರು ಇನ್ನೊಂದು ರೀತಿ ವಿಷಯ ಬಿಚ್ಚಿಟ್ಟಿದ್ದರು. ಮ್ಯಾನೇಜರ್ ನಮ್ಮಲ್ಲಿ ಇದ್ದದ್ದು ನಿಜ. ಆದರೆ ಆತ ಯಾವುದೇ ಮೋಸ ಮಾಡಿಲ್ಲ. ಎಂಬತ್ತು ಲಕ್ಷದ ಕತೆಯಂತೂ ಸುಳ್ಳೆ ಸುಳ್ಳು. ಆತನ ಅವಧಿ ಮುಗಿದಿತ್ತು. ಜೊತೆಗೆ ಆತ ಇನ್ನೇನೊ ಹೊಸ ಕೆಲಸ ಕಂಡುಕೊಂಡಿದ್ದ. ಈ ಕಾರಣಕ್ಕೆ ಇಬ್ಬರೂ ಮಾತಾಡಿ ದೂರವಾಗಿದ್ದಾರೆ ಅಷ್ಟೇ ಎಂದು ಹೇಳಿದ್ದರು. ಇದನ್ನೂ ಓದಿ:ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ

    ಹೀಗಾಗಿ ಎರಡರಲ್ಲಿ ಯಾವುದು ನಿಜ? ಯಾವುದು ಸುಳ್ಳು? ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲವಲ್ಲ? ಮಾಧ್ಯಮಕ್ಕೆ ಸಿಕ್ಕ ಮಾಹಿತಿ ಸುಳ್ಳಾ? ಎಲ್ಲವೂ ಬರೀ ಪ್ರಶ್ನೆಗಳೇ. ಇದಕ್ಕೆ ರಶ್ಮಿಕಾ ಯಾವುದೇ ಪ್ರತಿಕ್ರಿಯೆ  (Reaction)ಕೊಟ್ಟಿರಲಿಲ್ಲ. ಇದೀಗ ಎಂಬತ್ತು ಲಕ್ಷ ರೂಪಾಯಿ ಮೋಸ ಮತ್ತು ಮ್ಯಾನೇಜರ್ ಕುರಿತಾಗಿ ಸ್ವತಃ ರಶ್ಮಿಕಾ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಮ್ಯಾನೇಜರ್ ಮೋಸ ಮಾಡಿದ್ದಾರೆ ಎನ್ನುವುದು ಸುಳ್ಳು. ಸ್ವತಂತ್ರವಾಗಿ ಕೆಲಸ ಮಾಡಲು ಮ್ಯಾನೇಜರ್ ಬಯಸಿದ್ದರು. ಸೌಹಾರ್ದಯುತವಾಗಿ ಇಬ್ಬರೂ ಬೇರ್ಪಟ್ಟಿದ್ದೇವೆ. ಹಬ್ಬಿರುವ ಸುದ್ದಿ ಸುಳ್ಳು. ನಾವು ಚೆನ್ನಾಗಿಯೇ ಇದ್ದೇವೆ. ಯಾವುದೇ ಮೋಸ ಆಗಿಲ್ಲ ಮತ್ತು ಮಾಡಿಲ್ಲ ಎನ್ನುವ ಅರ್ಥದಲ್ಲಿ ರಶ್ಮಿಕಾ ಪೋಸ್ಟ್ ಮಾಡಿದ್ದಾರೆ.

  • ಇನ್ನು ವಾಟ್ಸಪ್ ರಿಯಾಕ್ಷನ್ ಫೀಚರ್‌ನಲ್ಲಿ ಯಾವುದೇ ಎಮೋಜಿ ಬಳಸಬಹುದು

    ಇನ್ನು ವಾಟ್ಸಪ್ ರಿಯಾಕ್ಷನ್ ಫೀಚರ್‌ನಲ್ಲಿ ಯಾವುದೇ ಎಮೋಜಿ ಬಳಸಬಹುದು

    ವಾಷಿಂಗ್ಟನ್: ವಾಟ್ಸಪ್‌ನಲ್ಲಿ ರಿಯಾಕ್ಷನ್ ಫೀಚರ್ ಅನ್ನು ಹೊರತಂದು 2 ತಿಂಗಳಷ್ಟೇ ಕಳೆದಿದೆ. ಆದರೆ ಬಳಕೆದಾರರು ಇಲ್ಲಿಯವರೆಗೆ ಕೇವಲ 6 ಎಮೋಜಿಗಳನ್ನು ಮಾತ್ರವೇ ರಿಯಾಕ್ಷನ್ ಆಗಿ ಬಳಸಬಹುದಿತ್ತು. ಇದೀಗ ರಿಯಾಕ್ಷನ್ ಫೀಚರ್‌ನಲ್ಲಿ ಯಾವುದೇ ಎಮೋಜಿಗಳನ್ನು ಬಳಸಲು ವಾಟ್ಸಪ್ ಅನುಮತಿ ನೀಡಿದೆ.

    ಇಲ್ಲಿಯವರೆಗೆ ಲೈಕ್, ಪ್ರೀತಿ, ನಗು, ಆಶ್ಚರ್ಯ, ದುಃಖ ಹಾಗೂ ಧನ್ಯವಾದದ ಎಮೋಜಿಗಳನ್ನಷ್ಟೇ ರಿಯಾಕ್ಷನ್ ಆಗಿ ಕಳುಹಿಸಲು ಅವಕಾಶ ನೀಡಿತ್ತು. ಇದೀಗ ರಿಯಾಕ್ಷನ್‌ನಲ್ಲಿ ಯಾವುದೇ ಎಮೋಜಿಗಳನ್ನು ಬಳಸಬಹುದಾಗಿದ್ದು, ಈ ಬಗ್ಗೆ ವಾಟ್ಸಪ್‌ನ ಮಾತೃ ಸಂಸ್ಥೆ ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಇನ್‌ಸ್ಟಾಗ್ರಾಮ್‌ನಲ್ಲಿ ರೋಲ್‌ಔಟ್ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.

    ಬೀಟಾ ಪರೀಕ್ಷಕರ ವರದಿಗಳ ಪ್ರಕಾರ ಇತ್ತೀಚಿನ ದಿನಗಳಲ್ಲಿ ವಾಟ್ಸಪ್ ಹಲವಾರು ಫೀಚರ್‌ಗಳನ್ನು ಪರೀಕ್ಷಿಸುತ್ತಿದೆ. ಬಳಕೆದಾರರು ವಾಟ್ಸಪ್ ಅನ್ನು ಇನ್ನೊಂದು ಹ್ಯಾಂಡ್‌ಸೆಟ್‌ನಿಂದ ಲಾಗ್‌ಇನ್ ಮಾಡಲು ಆಂಡ್ರಾಯ್ಡ್‌ಗಳಿಗಾಗಿ ಚ್ಯಾಟ್ ಸಿಂಕ್ ಫೀಚರ್, ನಿಮ್ಮ ಆನ್‌ಲೈನ್ ಸ್ಥಿತಿಯನ್ನು ಮರೆಮಾಡುವ ಸಾಮರ್ಥ್ಯದಂತಹ ಫೀಚರ್‌ಗಳು ಟೆಸ್ಟಿಂಗ್‌ನಲ್ಲಿ ಒಳಗೊಂಡಿವೆ. ಇದನ್ನೂ ಓದಿ: ಹಿಂದೂ ಬಾಲಕಿಯ ಹೃದಯ ಮುಸ್ಲಿಂ ಯುವಕನಿಗೆ ಕಸಿ

    ಜೂನ್‌ನಲ್ಲಿ ವಾಟ್ಸಪ್ ಬಳಕೆದಾರರಿಗೆ ಗೌಪ್ಯತೆಯನ್ನು ನಿಯಂತ್ರಿಸುವ ಫೀಚರ್‌ಗಳನ್ನು ಹೊರತರಲು ಪ್ರಾರಂಭಿಸಿತು. ಅದರಲ್ಲಿ ಕೊನೆಯದಾಗಿ ಆನ್‌ಲೈನ್‌ನಲ್ಲಿದ್ದ ಸಮಯವನ್ನು ಮರೆಮಾಡುವುದು ಹಾಗೂ ಪ್ರೊಫೈಲ್ ಫೋಟೋವನ್ನು ಆಯ್ಕೆ ಮಾಡಿದವರಿಗಷ್ಟೇ ತೋರುವಂತೆ ಮಾಡುವಂತಹ ಅವಕಾಶವನ್ನು ನೀಡಿದೆ.

    ಜುಕರ್‌ಬರ್ಗ್ ಇತ್ತೀಚೆಗೆ ಆಂಡ್ರಾಯ್ಡ್ ಸ್ಮಾರ್ಟ್ಫೋನ್‌ನಿಂದ ಐಫೋನ್‌ಗೆ ತಮ್ಮ ವಾಟ್ಸಪ್ ಡೇಟಾವನ್ನು ಸುಲಭವಾಗಿ ವರ್ಗಾಯಿಸುವ ಸಾಮರ್ಥ್ಯವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ವರದಿಗಳ ಪ್ರಕಾರ ಇದು ಇನ್ನೂ ಪರೀಕ್ಷೆಯಲ್ಲಿದೆ. ಇದನ್ನೂ ಓದಿ: ಧೋ ಎಂದು ಸುರಿಯುತ್ತಿರುವ ಮಳೆಯಲ್ಲೇ ಡಾಂಬರೀಕರಣ – 4 ಎಂಜಿನಿಯರ್‌ಗಳು ಸಸ್ಪೆಂಡ್

    Live Tv
    [brid partner=56869869 player=32851 video=960834 autoplay=true]

  • ಲಿಂಗಾಯತರ ಧೀಮಂತ ನಾಯಕ ಬಿಎಸ್‍ವೈಯನ್ನು ಸಿಎಂ ಸ್ಥಾನದಿಂದ ಇಳಿಸಬೇಡಿ: ಎಂ.ಬಿ ಪಾಟೀಲ್

    ಲಿಂಗಾಯತರ ಧೀಮಂತ ನಾಯಕ ಬಿಎಸ್‍ವೈಯನ್ನು ಸಿಎಂ ಸ್ಥಾನದಿಂದ ಇಳಿಸಬೇಡಿ: ಎಂ.ಬಿ ಪಾಟೀಲ್

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪದಚ್ಯುತಿಗೊಳಿಸಿದರೆ, ಬಿಜೆಪಿ ವರಿಷ್ಠರು ಲಿಂಗಾಯತರ ಅವಕೃಪೆಗೆ ತುತ್ತಾಗುತ್ತಾರೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ :  ಸಿಎಂ ಬದಲಾದರೆ ಪಕ್ಷಕ್ಕೆ ದೊಡ್ಡ ಹೊಡೆತ ಬೀಳುತ್ತದೆ: ರಂಭಾಪುರಿ ಶ್ರೀ

    ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ಧೀಮಂತ ನಾಯಕರು. ಅವರನ್ನು ಪದಚ್ಯುತಿಗೊಳಿಸಿದರೆ, ನಿಶ್ಚಿತವಾಗಿಯೂ ಬಿಜೆಪಿ ವರಿಷ್ಠರು ಲಿಂಗಾಯತರ ಅವಕೃಪೆಗೆ ತುತ್ತಾಗುತ್ತಾರೆ. ಯಡಿಯೂರಪ್ಪನವರ ವಯಸ್ಸು ಮತ್ತು ಕೊಡುಗೆಯನ್ನು ಪರಿಗಣಿಸಿ, ಅವರನ್ನು ಘನತೆ ಮತ್ತು ಮರ್ಯಾದೆಯಿಂದ ನಡೆಸಿಕೊಳ್ಳಬೇಕೆಂಬುದು ನನ್ನ ವೈಯಕ್ತಿಕ ಅನಿಸಿಕೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ :  ಮಂತ್ರಿ ಸ್ಥಾನ ಹೋದರೆ ಗೂಟ ಹೋದ ಹಾಗೆ: ಕೆ.ಎಸ್ ಈಶ್ವರಪ್ಪ

    ರಾಜ್ಯದಲ್ಲಿ ಸಿಎಂ ಬದಲಾವಣೆಯ ಸುದ್ದಿ ಹಲವಾರು ದಿನಗಳಿಂದ ಹರಿದಾಡುತ್ತಿತ್ತು. ಈ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದೀಗ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಈ ಕುರಿತಾಗಿ ಗಣ್ಯರು, ನಾಯಕರು ತಮ್ಮ ಅಭಿಪ್ರಾಯಗಳನ್ನು ಟ್ವೀಟ್ ಮಾಡುತ್ತಿದ್ದಾರೆ. ಇದನ್ನೂ ಓದಿ :  ಈಶ್ವರಪ್ಪ, ಜಗದೀಶ್ ಶೆಟ್ಟರ್ ಎರಡು ಕಣ್ಣುಗಳಿದ್ದಂತೆ: ನಳಿನ್ ಕುಮಾರ್ ಕಟೀಲ್

    ಆಡಿಯೋದಲ್ಲಿ, ಯಾರಿಗೂ ಹೇಳಬೇಡ ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಅವರ ಟೀಮ್‍ನ್ನು ತೆಗೆಯುತ್ತೇವೆ. ಹೊಸ ತಂಡವನ್ನು ಕಟ್ಟುತ್ತೇವೆ. ಈಗ ಸದ್ಯಕ್ಕೆ ಯಾರಿಗೂ ಹೇಳಬೇಡ. ದೆಹಲಿಯಿಂದನೇ ಮಾಡುತ್ತಾರೆ. ಏನೂ ಸಮಸ್ಯೆ ಇಲ್ಲ, ಭಯಪಡಬೇಡ, ನಾವಿದ್ದೇವೆ. ಯಾರೇ ಆದ್ರೂ ಎಲ್ಲ ನಮ್ಮ ಕೈಯಲ್ಲೇ ಇರುತ್ತೆ. ಮೂರು ಹೆಸರು ಇದೆ, ಇದರಲ್ಲಿ ಯಾರಾದರೂ ಆಗುವ ಚಾನ್ಸ್ ಇದೆ ಎಂದು ಹೇಳಲಾಗಿದೆ. ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ ಎನ್ನಲಾದ ಆಡಿಯೋ ಇದು ಎಂದು ವೈರಲ್ ಆಗುತ್ತಿದ್ದು, ಆದರೆ ಇದು ನಕಲಿ ಆಡಿಯೋ ಎಂದು ಕಟೀಲ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ತನಿಖೆಗೆ ಕೂಡ ಆಗ್ರಹಿಸಿದ್ದಾರೆ.

  • ನಂಜನಗೂಡಿಗೆ ಕೊರೊನಾ ಬಂದಿದ್ದು ಹೇಗೆ? ನೌಕರನ ಮಾತು

    ನಂಜನಗೂಡಿಗೆ ಕೊರೊನಾ ಬಂದಿದ್ದು ಹೇಗೆ? ನೌಕರನ ಮಾತು

    – ಕೊರೊನಾ ಪರೀಕ್ಷೆಗೂ ಮೊದಲು ಎಲ್ಲೆಲ್ಲೆ ಹೋಗಿದ್ದ ರೋಗಿ?
    – ಕೊರೊನಾದಿಂದ ಗುಣಮುಖ ಬಳಿಕ ಹೇಳಿದ್ದೇನು?

    ಮೈಸೂರು: ನಂಜನಗೂಡು ಕಾರ್ಖಾನೆಯ ಕೊರೊನಾ ಸೋಂಕಿನಿಂದ ಇಡೀ ಮೈಸೂರು ಜಿಲ್ಲೆಯ ಜನರನ್ನು ಆತಂಕಕ್ಕೆ ತಳ್ಳಿದೆ. ಹೀಗಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಾಟ್‍ಸ್ಪಾಟ್ ಜಿಲ್ಲೆಗಳ ಪಟ್ಟಿಯಲ್ಲಿ ಮೈಸೂರು ಸೇರಿಕೊಂಡಿದೆ.

    ನಂಜನಗೂಡು ಕಾರ್ಖಾನೆಯಲ್ಲಿ ಉದ್ಯೋಗಿ ಕೊರೊನಾ ಸೋಂಕಿತ ರೋಗಿ-52 ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಖಾಸಗಿ ವೆಬ್‍ಸೈಟ್ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ ಅವರು ತಮ್ಮ ಪ್ರಯಾಣದ ವಿವರ ಹಾಗೂ ಕೆಲವು ಪ್ರಮುಖ ಮಾಹಿತಿಯನ್ನು ನೀಡಿದ್ದಾರೆ.

    ರೋಗಿ-52: ನನ್ನ ಹತ್ತಿರ ಪಾಸ್‍ಪೋರ್ಟ್ ಇಲ್ಲ, ನಾನು ಚೀನಾಕ್ಕೆ ಹೇಗೆ ಹೋಗ್ಲಿ….?
    ಪ್ರತಿನಿಧಿ: ಹೌದಾ..?
    ರೋಗಿ-52: ನನಗೆ ಕೊರೊನಾ ಹೇಗೆ ಬಂತು ಅಂತ ಗೊತ್ತಿಲ್ಲ. ನಾನು ಕಂಪನಿ ಬಿಟ್ರೆ ಮನೆ, ಮನೆ ಬಿಟ್ರೆ ಕಂಪನಿ. ಎಲ್ಲೂ ಹೊರಗಡೆ ಹೋದವನಲ್ಲ. ಡೀಟೈಲ್ಸ್ ನೋಡಿದ್ದೀರ. ನಾನು ಚಾಮರಾಜನಗರ, ಗುಂಡ್ಲುಪೇಟೆಗೆ ಹೋಗಿದ್ದೆ. ಡೇಟ್ ಗೊತ್ತಿಲ್ಲ ಯಾವಾಗಂತ. ಚಾಮರಾಜನಗರದಲ್ಲಿ ಈ ಥರ ಕೊರೊನಾ ಕನ್ಸರ್ನ್ ಏನೂ ಇಲ್ಲ.
    ಪ್ರತಿನಿಧಿ: ಚೀನಾದಿಂದ ನಿಮ್ಮ ಕಂಪನಿಗೆ ಶಿಪ್‍ಮೆಂಟ್ ಬಂದಿತ್ತಂತೆ ನಿಜನಾ..?

    ರೋಗಿ-52: ಮೇಡಂ ನಂದು ಕಾರ್ಡಿನೇಷನ್ ಡಿಪಾರ್ಟ್‍ಮೆಂಟ್. ನಮಗದು ಬರಲ್ಲ, ಅದೇನಿದ್ರೂ ಸ್ಟೋರ್ ಡಿಪಾರ್ಟ್‍ಮೆಂಟ್‍ಗೆ ಬರುತ್ತೆ. ನಮ್ಮದೇನಿದ್ರೂ ಡಾಂಕ್ಯುಮೆಂಟೇಷನ್ ಸೆಕ್ಷನ್ ಅಷ್ಟೇ.
    ಪ್ರತಿನಿಧಿ: ನಿಮ್ದು ಬರೀ ಡಾಂಕ್ಯುಮೆಂಟೇಷನ್ ಸೆಕ್ಷನ್ ಅಲ್ವಾ?
    ಸಂಖ್ಯೆ 52: ಹೌದು, ಬರೀ ಡಾಂಕ್ಯುಮೆಂಟೇಷನ್ ಸೆಕ್ಷನ್..
    ಪ್ರತಿನಿಧಿ: ಶಿಪ್‍ನಿಂದ ನೀವು ರಿಸೀವ್ ಮಾಡ್ಕೊಂಡಿಲ್ವಾ..?
    ರೋಗಿ-52: ಇಲ್ಲ, ಇಲ್ಲ ಮೇಡಂ… ನಮ್ಮದೇನಿದ್ರೂ ಡಾಂಕ್ಯುಮೆಂಟೇಷನ್ ಸೆಕ್ಷನ್. ನಮ್ಮದೇನಿದ್ರೂ ಡಾಂಕ್ಯುಮೆಂಟ್ ಏನ್ ಬರುತ್ತೆ ಅದನ್ನ ಸ್ಟೋರ್ ಮಾಡ್ತೀವಿ ಮೇಡಂ.

    ಪ್ರತಿನಿಧಿ: ಸೋ.. ನೀವು ಆಫೀಸ್ ರೂಂನಿಂದ ಹೊರಗಡೆ ಬರೋ ಇದೇ ಇಲ್ವಾ.?
    ರೋಗಿ-52: ಬರ್ತಿವಿ ಮೇಡಂ, ಯಾಕಂದ್ರೆ ಮ್ಯಾನೇಜರ್ ಇರ್ತಾರೆ ಅವರಿಗೆ ರಿಪೋರ್ಟಿಂಗ್ ಮಾಡ್ಬೇಕಲ್ವಾ..? ಅವರು ಕೆಲ್ಸ ಹೇಳಿರ್ತಾರೆ. ಅವರನ್ನ ಮೀಟ್ ಮಾಡ್ತಾ ಇರ್ತಿವಿ, ಅವರೊಂದಿಗೆ ಮಾತಾಡ್ತಾ ಇರ್ತಿವಿ.
    ಪ್ರತಿನಿಧಿ: ಸೋ.. ನೀವು ಗೋಡಾನ್‍ಗೆಲ್ಲ ಹೋಗ್ತೀರಾ, ರೆಗ್ಯುಲರ್ ಆಗಿ..?
    ರೋಗಿ 52: ಇಲ್ಲ ಇಲ್ಲ… ನಾವೇನ್ ಗೋಡಾನ್‍ಗೆ ಹೋಗಲ್ಲ ಮೇಡಂ. ನಮ್ಮ ಡಿಪಾರ್ಟ್‍ಮೆಂಟ್‍ನಲ್ಲಿ ಡಾಂಕ್ಯುಮೆಂಟ್ ಬರೋದನ್ನು ಸ್ಟೋರ್ ಮಾಡ್ತೀವಿ. ಇನ್ವೆಷ್ಟಿಗೇಷನ್ ಡಾಂಕ್ಯುಮೆಂಟೇಷನ್ ಬೇಕು ಅಂದ್ರೆ ಕೊಡ್ತೀವಿ.
    ಪ್ರತಿನಿಧಿ: ಅಷ್ಟೇನಾ ನಿಮ್ ಕೆಲ್ಸ?
    ರೋಗಿ-52: ರಿಪೋರ್ಟಿಂಗ್ ಮ್ಯಾನೇಜರ್ ಕೆಲ್ಸ ಹೇಳಿದ್ರೆ ಅವರ ಜೊತೆ ಸ್ವಲ್ಪ ಮಾಡ್ತೇವೆ.
    ಪ್ರತಿನಿಧಿ: ನಿಮ್ಮ ರಿಪೋರ್ಟಿಂಗ್ ಮ್ಯಾನೇಜರೆಲ್ಲ ಪಾಸಿಟಿವ್ ಆಗಿ ಟೆಸ್ಟ್ ಆಗಿದ್ದಾರಾ..? ಅವರದೆಲ್ಲ ಏನ್ ರಿಪೋರ್ಟ್ ಬಂದಿದೆ?
    ರೋಗಿ-52: ಅವರದ್ದನ್ನೆಲ್ಲ ನೆಗೆಟಿವ್ ಬಂದಿದೆ, ಮೇಡಂ.

  • ಉದ್ದೇಶಪೂರ್ವಕವಾಗಿಯೇ ದರ್ಶನ್ ಮನೆ ಮೇಲೆ ಕಲ್ಲು ತೂರಿದ್ದಾರೆ: ಸುಮಲತಾ

    ಉದ್ದೇಶಪೂರ್ವಕವಾಗಿಯೇ ದರ್ಶನ್ ಮನೆ ಮೇಲೆ ಕಲ್ಲು ತೂರಿದ್ದಾರೆ: ಸುಮಲತಾ

    – ದರ್ಶನ್, ಯಶ್ ಬೆಂಬಲ ನೋಡಿ ಹೆದರಿದ್ದಾರೆ

    ಮಂಡ್ಯ: ಉದ್ದೇಶಪೂರ್ವಕವಾಗಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಹೇಳಿದ್ದಾರೆ.

    ಜಿಲ್ಲೆಯ ಮದ್ದೂರು ತಾಲೂಕಿನ ಬೊಪ್ಪ ಸಮುದ್ರ ಗ್ರಾಮದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಬೇಕಂತಲೇ ಉದ್ದೇಶ ಪೂರ್ವಕವಾಗಿಯೇ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ನನ್ನ ಬೆಂಬಲಕ್ಕೆ ದರ್ಶನ್ ಹಾಗೂ ಯಶ್ ನಿಂತಿರುವುದು ನೋಡಿ ಹೆದರಿಕೊಂಡಿದ್ದಾರೆ. ಹಾಗಾಗಿ ಈ ರೀತಿ ಮಾಡಿದ್ದಾರೆ. ಈ ಮಟ್ಟಕ್ಕೆ ಮಾಡ್ತಿರೋ ರಾಜಕಾರಣ ಮನಸ್ಸಿಗೆ ನೋವು ತಂದಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ದರ್ಶನ್ ಹಾಗೂ ಯಶ್ ಬರುತ್ತಿರುವುದಕ್ಕೆ ಹೆದರಿ ಈ ರೀತಿ ದಾಳಿ ಮಾಡಿದ್ದಾರೆ. ದಾಳಿ ಮಾಡುವ ಮೂಲಕ ದರ್ಶನ್ ಹಾಗೂ ಯಶ್‍ರನ್ನು ಹೆದರಿಸುತ್ತಿದ್ದಾರೆ. ಆದರೆ ಇದಕ್ಕೆಲ್ಲಾ ಅವರು ಹೆದರೋದಿಲ್ಲ. ಅಭಿಮಾನಿಗಳು ಯಾವುದೇ ಕಾರಣಕ್ಕೂ ಪ್ರವೋಕ್ ಆಗಬೇಡಿ. ಏಕೆಂದರೆ ಯಾರು ಏನೇ ಮಾಡಿದ್ರೂ ಫಲಿತಾಂಶದಲ್ಲಿ ಉತ್ತರ ಸಿಗುತ್ತದೆ. ನಾವು ಅವರಂತೆ ಮಾಡೋದು ಬೇಡ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಏನಿದು ಘಟನೆ?
    ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ದರ್ಶನ್ ಮನೆ ಹಾಗೂ ಕಚೇರಿ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಇಂದು ಬೆಳಗ್ಗಿನ ಜಾವ 3 ಗಂಟೆಗೆ ಕಲ್ಲು ತೂರಿ ಎಸ್ಕೇಪ್ ಆಗಿದ್ದಾರೆ. ಕಲ್ಲು ತೂರಾಟದಿಂದ ದರ್ಶನ್ ಅವರ ಕಾರಿನ ಗಾಜು ಜಖಂ ಆಗಿದೆ. ಈ ಘಟನೆ ನಡೆದಾಗ ದರ್ಶನ್ ಮನೆಯಲ್ಲಿ ಇರಲಿಲ್ಲ. ದರ್ಶನ್ ಗಿರಿನಗರದಲ್ಲಿ ಇರುವ ತಮ್ಮ ಪತ್ನಿ ವಿಜಯಲಕ್ಷ್ಮಿ ಫ್ರೆಸ್ಟಿಜ್ ಅಪಾರ್ಟ್‍ಮೆಂಟ್‍ನಲ್ಲಿ ಇದ್ದರು.

    ಒಬ್ಬನೇ ವ್ಯಕ್ತಿ ಬಂದು ಮನೆ ಮೇಲೆ ಕಲ್ಲು ಎಸೆದಿದ್ದಾನೆ. ಅಲ್ಲದೆ ಮನೆ ಮುಂದೆ ಇದ್ದ ಬ್ಯಾನರ್ ಕೂಡ ಹರಿದ ಹಾಕಿದ್ದಾನೆ. ಈ ವೇಳೆ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಹೊರತುಪಡಿಸಿ ಯಾರೂ ಇರಲಿಲ್ಲ. ಕಲ್ಲು ಬಿದ್ದ ಶಬ್ದ ಕೇಳಿ ವಾಚ್‍ಮೆನ್ ಹೊರಬರ್ತಿದ್ದಂತೆ ದುಷ್ಕರ್ಮಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ.

    ಸ್ಥಳಕ್ಕೆ ರಾಜರಾಜೇಶ್ವರಿ ನಗರ ಪೊಲೀಸರು, ಕೆಂಗೇರಿ ಎಸಿಪಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ಮಗನನ್ನು ನೋಡುವವರೆಗೂ ಪ್ರತಿಕ್ರಿಯಿಸಲ್ಲ: ಅಭಿನಂದನ್ ತಂದೆ

    ಮಗನನ್ನು ನೋಡುವವರೆಗೂ ಪ್ರತಿಕ್ರಿಯಿಸಲ್ಲ: ಅಭಿನಂದನ್ ತಂದೆ

    ನವದೆಹಲಿ: ಧೀರ ಯೋಧ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಇಂದು ಸ್ವದೇಶಕ್ಕೆ ಆಗಮಿಸಲಿದ್ದಾರೆ. ಅವರ ಸ್ವಾಗತಕ್ಕಾಗಿ ಇಡೀ ದೇಶ ಕಾಯುತ್ತಿದ್ದು, ಅವರ ಪೋಷಕರು ಕೂಡ ವಾಘಾ ಗಡಿಗೆ ತಲುಪಿದ್ದಾರೆ.

    ಅಭಿನಂದನ್ ಅವರ ಪೋಷಕರು ವಾಘಾ ಬಾರ್ಡರ್ ಗೆ ಬರುತ್ತಿದ್ದಂತೆ ಮಾಧ್ಯಮದವರು ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಅಭಿನಂದನ್ ಅವರ ತಂದೆ ನಿವೃತ್ತ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ತಮಾನ್, “ಮೊದಲು ನನ್ನ ಮಗನನ್ನು ನೋಡಬೇಕು, ಆಮೇಲಷ್ಟೇ ಪ್ರತಿಕ್ರಿಯೆ ಕೊಡ್ತೇನೆ” ಎಂದು ಹೇಳಿದ್ದಾರೆ.

    ಅಭಿನಂದನ್ ಅವರನ್ನು ಪಾಕಿಸ್ತಾನ ವಶಕ್ಕೆ ಪಡೆದುಕೊಂಡಾಗ ಅವರ ತಂದೆ ಭಾರತೀಯರಿಗೆ ಧನ್ಯವಾದ ತಿಳಿಸಿದ್ದರು. ನನ್ನ ಮಗ ನಿಜಕ್ಕೂ ಒಬ್ಬ ಯೋಧ. ಆತನ ಬಗ್ಗೆ ನನಗೆ ಹೆಮ್ಮೆಯಿದ್ದು, ಆತ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸಾಗುವಂತೆ ಪ್ರಾರ್ಥಿಸುತ್ತಿದ್ದೇನೆ. ಅಲ್ಲದೆ ಭಾರತೀಯರು ಕೂಡ ಮಗ ವಾಪಸ್ ಬರುವಂತೆ ಪ್ರಾರ್ಥಿಸುತ್ತಿರುವುದಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಎಸ್. ವರ್ಥಮಾನ್ ಅವರು ಸಂದೇಶ ರವಾನಿಸಿದ್ದರು.

    ಅಭಿನಂದನ್ ಪಾಕ್ ವಶವಾಗಿದ್ದು ಹೇಗೆ..?
    ಪಾಕಿಸ್ತಾನ ಮಂಗಳವಾರ ಭಾರತದ ಗಡಿಯೊಳಗೆ ಯುದ್ಧ ವಿಮಾನಗಳನ್ನು ನುಗ್ಗಿಸಿ ದುಸ್ಸಾಹಸ ಮಾಡಿತ್ತು. ಭಾರತದ ಗಡಿ ದಾಟಿದ 3 ವಿಮಾನಗಳ ಪೈಕಿ, ಪಾಕಿಸ್ತಾನದ ಎಫ್-16 ಒಂದು ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿಸಿದೆ. ಇನ್ನೆರಡು ವಿಮಾನಗಳನ್ನು ಮಿಗ್-21 ವಿಮಾನವನ್ನು ಅಟ್ಟಾಡಿಸಿಕೊಂಡು ಹೋಗಿದೆ. ಪಾಕ್ ನೆಲದಲ್ಲಿ ಮಿಗ್ 22 ನೆಲಕ್ಕುರುಳಿದೆ. ಈ ವೇಳೆ ಅಭಿನಂದನ್ ಪ್ಯಾರಾಚೂಟ್‍ನಿಂದ ಜಿಗಿದು ನೆಲಕ್ಕೆ ಬಿದ್ದಿದ್ದಾರೆ. ತಮ್ಮ ನೆಲದಲ್ಲಿ ಅಭಿನಂದನ್ ಇರುವುದನ್ನು ಗಮನಿಸಿದ ಸ್ಥಳಿಯರು ಪಾಕಿಸ್ತಾನ ಸೇನೆಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪಾಕ್ ಸೈನಿಕರು ಅಭಿನಂದನ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಣ್ಣೆ ವಿಡಿಯೋ ಬಗ್ಗೆ ರಾಜೇಶ್ ಪತ್ನಿ ಶ್ರುತಿ ಪ್ರತಿಕ್ರಿಯೆ

    ಎಣ್ಣೆ ವಿಡಿಯೋ ಬಗ್ಗೆ ರಾಜೇಶ್ ಪತ್ನಿ ಶ್ರುತಿ ಪ್ರತಿಕ್ರಿಯೆ

    ಬೆಂಗಳೂರು: ಅಗ್ನಿಸಾಕ್ಷಿ ನಟ ರಾಜೇಶ್ ಧ್ರುವ ಅವರು ತಮ್ಮ ಪತ್ನಿ ಶ್ರುತಿ ಮದ್ಯಪಾನ ಮಾಡುತ್ತಿರುವ ವಿಡಿಯೋ ಬಿಡುಗಡೆ ಮಾಡಿದ್ದು, ಈ ವಿಡಿಯೋ ಬಗ್ಗೆ ಶ್ರುತಿ ಪ್ರತಿಕ್ರಿಯಿಸಿದ್ದಾರೆ.

    ರಾಜೇಶ್ ತಮ್ಮ ಪತ್ನಿ ಶ್ರುತಿ ಮದ್ಯಪಾನದ ಮತ್ತಿನಲ್ಲಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಶ್ರುತಿ ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡಿದ್ದಾರೆ. ರಾಜೇಶ್ ಹಾಗೂ ಶ್ರುತಿ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದಾಗ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ.  ಇದನ್ನೂ ಓದಿ: ಅಗ್ನಿಸಾಕ್ಷಿ ಅಖಿಲ್ ವಿರುದ್ಧ ದೂರು ದಾಖಲು

    ಈ ಬಗ್ಗೆ ಶ್ರುತಿ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, “ಈ ವಿಡಿಯೋ ಮಾಡುವಾಗ ರಾಜೇಶ್ ಅವರು ಇದ್ದರು. ಹೊಸ ವರ್ಷದಂದು ಈ ವಿಡಿಯೋವನ್ನು ಮಾಡಲಾಗಿದ್ದು, ರಾಜೇಶ್ ಅವರ ಸ್ನೇಹಿತ ಈ ವಿಡಿಯೋವನ್ನು ಮಾಡಿದ್ದರು. ರಾಜೇಶ್ ಅವರು ಈ ವಿಡಿಯೋವನ್ನು ಮೊದಲೇ ಮಾಡಬಹುದಿತ್ತು. ಆದರೆ ನಾನು ಸಾಕ್ಷಿ ನೀಡಿದ ಬಳಿಕ ಅವರು ಈ ಮದ್ಯಪಾನದ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ” ಎಂದರು. ಇದನ್ನೂ ಓದಿ: ಹೊರಗಡೆ ಮಾಂಸ ತಿಂದು ಮನೆಯಲ್ಲಿ ತಾಯಿಗೆ ಕಿರುಕುಳ: ಶ್ರುತಿ ಆರೋಪಕ್ಕೆ ರಾಜೇಶ್ ಧ್ರುವ ತಿರುಗೇಟು

    ಈ ವಿಡಿಯೋ ಅವರು ಬಿಡುಗಡೆ ಮಾಡಿ ನಾನು ದಿನ ಕುಡಿಯುತ್ತೇನೆ ಎಂದು ತೋರಿಸುತ್ತಿದ್ದಾರೆ. ಈ ವಿಡಿಯೋವನ್ನು 2015ರಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಆಗ ನಾವು ರಿಜಿಸ್ಟರ್ ಮದುವೆ ಆಗಿದ್ದೇವು. ಆ ದಿನ ಹೊಸ ವರ್ಷ ಎಂದು ಎಲ್ಲರು ಮದ್ಯಪಾನ ಮಾಡೋಣ ಎಂದು ಹೇಳಿದ್ದರು. ಆಗ ಅಖಿಲ್ ಅವರೇ ಈ ಎಣ್ಣೆಯ ಬಾಟಲ್ ತೆಗೆದುಕೊಂಡು ಬಂದು ನನಗೆ ನೀಡಿದ್ದರು. ನನಗೆ ಈ ಬಗ್ಗೆ ಯಾವುದೇ ವಿಷಯ ಗೊತ್ತಿಲ್ಲ. ಈ ವಿಡಿಯೋವನ್ನು ರಾಜೇಶ್ ಸ್ನೇಹಿತ ಚಿತ್ರೀಕರಿಸಿದ್ದು, ನನ್ನ ಹೆಸರು ಹಾಳು ಮಾಡಲು ಈಗ ಬಿಡುಗಡೆ ಮಾಡಿದ್ದಾರೆ ಎಂದು ಶ್ರುತಿ ಹೇಳಿದ್ದಾರೆ. ಇದನ್ನೂ ಓದಿ: ನಿಮ್ಮ ಹೆಣ್ಣಿನ ಹುಚ್ಚಿಗೆ ನನ್ನ ಮೇಲೆ ಆರೋಪ ಬೇಡ – ರಾಜೇಶ್ ಧ್ರುವ ಪತ್ನಿ ಕಣ್ಣೀರು

    ಆದರೆ ರಾಜೇಶ್ ಅವರು, ಈ ಹೊಸ ವರ್ಷದಲ್ಲಿ ತೆಗೆದ ವಿಡಿಯೋ ಅಲ್ಲ. ಶ್ರುತಿ ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದರು. ಹಾಗಾಗಿ ನಾನು ವಿಡಿಯೋ ಮಾಡಿದ್ದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿ `ಎಣ್ಣೆ’ ಹೊಡೆಯೋ ವಿಡಿಯೋ ಬಿಡುಗಡೆ ಮಾಡಿದ ನಟ ಅಖಿಲ್!

    ವಿಡಿಯೋದಲ್ಲಿ ಏನಿದೆ?
    ಈ ವಿಡಿಯೋದಲ್ಲಿ ರಾಜೇಶ್ ಅವರು ಶ್ರುತಿಗೆ ನಾ ಯಾರು ಎಂದು ಪ್ರಶ್ನಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಶ್ರುತಿ ಹೇ ಸುಮ್ನೆ ಹಚ್ಚೋ ನೀನು ಎಂತೆಲ್ಲಾ ಮಾಡ್ತಿಯಾ? ಎಂದು ಅವಾಜ್ ಹಾಕಿದ್ದಾರೆ. ಬಳಿಕ ರಾಜೇಶ್ ನಾ ಯಾರು? ನಾ ಯಾರು? ಎಂದು ಮತ್ತೆ ಪ್ರಶ್ನಿಸಿದ್ದಾರೆ. ಅದಲ್ಲದೇ ಉಪ್ಪಿನಕಾಯಿ ಬೇಕಾ? ಎಂದು ಕೇಳಿದ್ದಾರೆ. ಆಗ ಶ್ರುತಿ ಬೇಕು ಎಂದು ಹೇಳಿದ್ದಾರೆ. ಮತ್ತೆ ರಾಜೇಶ್ ಅವರು ಶ್ರುತಿ ಕುಡಿಯುತ್ತಿರುವುದನ್ನು ನೋಡಿ, ಸರಿಯಾಗ್ ಕುಡಿತಿಯಲ್ಲೇ?. ಎಂದು ಕೇಳಿದ್ದಾರೆ. ಆದರೆ ಇದಕ್ಕೆ ಶ್ರುತಿ ಪ್ರತಿಕ್ರಿಯಿಸದೇ ಫಸ್ಟ್ ಹಚ್ಚಲೇ ಎಂದು ರಾಜೇಶ್‍ಗೆ ಬೈದಿದ್ದಾರೆ. ಆಗ ನನಗ್ಯಾಕ್ ಬೈತಿ? ನಾನೇನು ನಿನ್ನ ಗಂಡನಾ? ಎಂದು ಕೇಳಿದ್ದಾಗ ನನಗೆ ಅಳು ಬರ್ತಾಯಿದೆ. ಅಂವ ಅಲ್ಲಿ ನಿಂತು ಏನು ಮಾಡಕ್ಕತ್ಯಾನ?. ಹಚ್ಚಲ್ಲಿ. ಬ್ಯಾಕ್ ಬಾ ಎಂದು ಶ್ರುತಿ ಎಣ್ಣೆ ಮತ್ತಿನಲ್ಲಿ ಎಲ್ಲರಿಗೂ ಅವಾಜ್ ಹಾಕಿದ್ದಾರೆ.

    https://www.youtube.com/watch?v=8gF1jnbCQMY

    https://www.youtube.com/watch?v=yoxkgVdHfw4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಗ್ರರಿಗೆ ಪಾಠ ಕಲಿಸಿ, ಪಾಕಿಸ್ತಾನವನ್ನು ತುಂಡರಿಸಿ ಮೋದಿ ಹೊಸ ಇತಿಹಾಸ ಸೃಷ್ಟಿಸಬೇಕು: ಅನಂತ್‍ನಾಗ್

    ಉಗ್ರರಿಗೆ ಪಾಠ ಕಲಿಸಿ, ಪಾಕಿಸ್ತಾನವನ್ನು ತುಂಡರಿಸಿ ಮೋದಿ ಹೊಸ ಇತಿಹಾಸ ಸೃಷ್ಟಿಸಬೇಕು: ಅನಂತ್‍ನಾಗ್

    ಮಂಗಳೂರು: ಪುಲ್ವಾಮದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧರ ಸಾವಿನಿಂದ ಬೇಸರ, ಅಸಹನೆ, ಸಿಟ್ಟು ಉಕ್ಕಿಬರುತ್ತಿದೆ. ಕಾಶ್ಮೀರದ ಪ್ರಜಾಪ್ರಭುತ್ವ ಹೆಸರಲ್ಲಿ ಕೆಟ್ಟ ಜನರಿಗೆ ಬೆಂಬಲ ಕೊಟ್ಟು ಸರ್ಕಾರ ಯೋಧರ ಸಾವಿಗೆ ಕಾರಣವಾಗುತ್ತಿದೆ ಎಂದು ಹಿರಿಯ ನಟ ಅನಂತ್‍ನಾಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯೋಧರು ಅನ್ಯಾಯವಾಗಿ ಸಾಯುವಂತೆ ರಾಜಕಾರಣಿಗಳು ಮಾಡುತ್ತಿದ್ದಾರೆ. ಕಾಶ್ಮೀರದ ಪ್ರಜಾಪ್ರಭುತ್ವ ನೆಪದಲ್ಲಿ ಯೋಧರ ಸಾವಿಗೆ ಕಾರಣರಾಗುತ್ತಿದ್ದಾರೆ. ಪಾಕಿಸ್ತಾನವನ್ನು ತುಂಡರಿಸಿ, ಉಗ್ರರಿಗೆ ಪಾಠ ಕಲಿಸಿ ನರೇಂದ್ರ ಮೋದಿಯವರು ಮತ್ತೊಂದು ಇತಿಹಾಸ ಸೃಷ್ಟಿಸಬೇಕಾಗಿದೆ ಎಂದು ಅನಂತ್ ನಾಗ್ ಹೇಳಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪುಲ್ವಾಮದಲ್ಲಿ ಹುತಾತ್ಮರಾದ ಯೋಧರ ಸಾವಿಗೆ ಸಂತಾಪ ಸೂಚಿಸಿ, ಈ ವಿಚಾರದಲ್ಲಿ ಅಸಹಾಯಕತೆ ನಮ್ಮನ್ನು ಸುತ್ತುವರಿದಿದೆ. ರಾಜಕಾರಣಿಗಳು ಭಾರತದ ಎಡ ಮತ್ತು ಬಲ ಭುಜಗಳನ್ನು ಕತ್ತರಿಸಿದ್ದಾರೆ. ಧರ್ಮದ ಆಧಾರದ ಮೇಲೆ ವಿಭಜನೆಯಾದರೂ, ಸಮಸ್ಯೆಗಳಿಗೆ ಉತ್ತರ ಸಿಕ್ಕಿಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗ 1965ರಲ್ಲಿ ಪಾಕಿಸ್ತಾನದ ಅಯೂಬ್ ಖಾನ್ ಭಾತರದ ಮೇಲೆ ದಾಳಿ ಮಾಡಿದಾಗ, ಅವನಿಗೆ ಪಾಠ ಕಲಿಸಿದ್ದರು. 1971ರಲ್ಲಿ ಇಂದಿರಾ ಗಾಂಧಿ ಅವರು ಪೂರ್ವ ಪಾಕಿಸ್ಥಾನವನ್ನು ಬಾಂಗ್ಲಾದೇಶವನ್ನಾಗಿ ನಿರ್ಮಾಣ ಮಾಡಿ ಕ್ರಮ ತೆಗೆದುಕೊಂಡಿದ್ದರು. ಈಗ ಉಗ್ರರ ದಾಳಿಯಿಂದ ದೇಶದ ಯೋಧರು ಬಲಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇನ್ನು ತಡ ಮಾಡಬಾರದು, ಇಂತಹ ದುಷ್ಕೃತ್ಯ ಮೆರೆದವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.

    ಕಾಶ್ಮೀರದಂತಹ ಸಣ್ಣ ಜಾಗದಲ್ಲಿ ಇಂತಹ ಘೋರ ಘಟನೆಗಳು ನಡೆಯಲು ಬಿಟ್ಟಿದ್ದೇ ತಪ್ಪಾಗಿದೆ. ಒಂದೆಡೆ ಪೂರ್ವ ಪಾಕಿಸ್ತಾನ ಬಾಂಗ್ಲಾದೇಶವಾಗಿದೆ, ಇನ್ನೂ ನೆರೆಯ ಪಾಕಿಸ್ಥಾನವನ್ನು ಯಾವ ಸ್ಥಾನ ಮಾಡಬೇಕೆಂದು ಮೋದಿ ಅವರಿಗೆ ಗೊತ್ತಿದೆ. ಪಾಕಿಸ್ತಾನ ಭಯೋತ್ಪಾದಕರ ದೇಶ ಅನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ಬೇರೆ ರಾಷ್ಟ್ರಗಳಿಂದ ಹಣ ಪಡೆದು ಇಂದು ಪಾಕಿಸ್ತಾನ ಬದುಕುತ್ತಿದೆ. ಕಾಶ್ಮೀರಿ ಹುಡುಗನ ಕೈಗೆ 350 ಕೆಜಿಯಷ್ಟು ಸಿಡಿಮದ್ದು ಕೊಟ್ಟವರು ಯಾರು? ಸ್ವಾತಂತ್ರ್ಯ ಸಂದರ್ಭದಲ್ಲಿ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುವಂತಾಗಿದೆ ಎಂದು ಅನಂತ್‍ನಾಗ್ ಕಿಡಿಕಾರಿದ್ದಾರೆ.

    ಕಾಶ್ಮೀರವನ್ನು ಪೂರ್ತಿ ಸೇನೆಯ ಕೈಗೆ ಕೊಟ್ಟು ಉಗ್ರರಿಂದ ತಕ್ಕ ಪಾಠ ಕಲಿಸಬೇಕು. ಕಾಶ್ಮೀರದಲ್ಲಿ ಯೋಧರಿಗೆ ಕಲ್ಲು ತೂರುತ್ತಿದ್ದರೂ ಆಡಳಿತ ಸಹಿಸಿಕೊಳ್ತಿರೋದ್ಯಾಕೆ? ಅಲ್ಲಿ ಯೋಧರಿಗೆ ಸ್ವಾತಂತ್ರ್ಯ ನೀಡದಿರುವುದೇ ಇಂಥ ಸ್ಥಿತಿಗೆ ಕಾರಣ ಎಂದು ಹಿರಿಯ ನಟ ಅನಂತ್‍ನಾಗ್ ಅಭಿಪ್ರಾಯ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv