Tag: Re-Voting

  • ಇಂಡಿಗನತ್ತ ಗ್ರಾಮದಲ್ಲಿ ಮರು ಮತದಾನಕ್ಕೆ ನೀರಸ ಪ್ರತಿಕ್ರಿಯೆ- ಗ್ರಾಮ ಖಾಲಿ ಖಾಲಿ

    ಇಂಡಿಗನತ್ತ ಗ್ರಾಮದಲ್ಲಿ ಮರು ಮತದಾನಕ್ಕೆ ನೀರಸ ಪ್ರತಿಕ್ರಿಯೆ- ಗ್ರಾಮ ಖಾಲಿ ಖಾಲಿ

    ಚಾಮರಾಜನಗರ: ಇವಿಎಂ ದ್ವಂಸ ಪ್ರಕರಣ ಸಂಬಂಧ ಚಾಮರಾಜನಗರದ ಇಂಡಿಗನತ್ತ (Indiganatta, Chamarajanagar) ಗ್ರಾಮದಲ್ಲಿ ನಡೆಯುತ್ತಿರುವ ಮರುಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಚಾಮರಾಜನಗರ ಲೋಕಸಭಾ ಕ್ಷೇತ್ರದ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಇಂದು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಿಗದಿಪಡಿಸಲಾಗಿದೆ. ಇಂಡಿಗನತ್ತ ಹಾಗೂ ಮೆಂದಾರೆ ಎರಡೂ ಗ್ರಾಮಗಳು ಸೇರಿ 528 ಮತದಾರರಿಗೆ ಮತಗಟ್ಟೆ 146 ರಲ್ಲಿ ಮರು ಮತದಾನ ನಡೆಯುತ್ತಿದೆ. ಸದ್ಯ 528 ಮತದಾರರ ಕೇವಲ ಪೈಕಿ 54 ಮತಗಳು ಮಾತ್ರ ಚಲಾವಣೆಯಾಗಿವೆ. ಮೆಂದಾರೆ ಹಾಡಿಯ 54 ಜನರಿಂದ ಮತದಾನವಾಗಿದೆ.

    ಮೆಂದಾರೆ ಗ್ರಾಮಸ್ಥರನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ಕರೆತಂದು ಮತದಾನ ಮಾಡಿಸುತ್ತಿದ್ದಾರೆ. ಆದರೆ ಇಂಡಿಗನತ್ತ ಗ್ರಾಮಸ್ಥರು ಮತದಾನದಿಂದ ದೂರ ಉಳಿದಿದ್ದಾರೆ. ಈಗಾಗಲೇ ಇವಿಎಂ ಧ್ವಂಸ ಪ್ರಕರಣ ಸಂಬಂಧ 33 ಮಂದಿಯನ್ನು ಬಂಧಿಸಲಾಗಿದೆ. ಈ ಹಿನ್ನೆಲೆ ಇಂಡಿಗನತ್ತ ಗ್ರಾಮ ಖಾಲಿ ಹೊಡೆಯುತ್ತಿದೆ. ಬಂಧನದ ಭೀತಿಯಿಂದ ಗ್ರಾಮಸ್ಥರು ತಲೆ ಕರೆಸಿಕೊಂಡಿದ್ದಾರೆ.

    ಮತಗಟ್ಟೆ ಸುತ್ತಮುತ್ತ 100 ವ್ಯಾಪ್ತಿಯಲ್ಲಿ 144ನೇ ಸೆಕ್ಷನ್ ಅನ್ವಯ ಇಂದು ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇದಾಜ್ಞೆ ಜಾರಿಗೊಳಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಲ್ಲಿ ಗ್ರಾಮಸ್ಥರಿಂದ ದಾಂಧಲೆ, ಇವಿಎಂ ಧ್ವಂಸ

  • ಇಂದು ಲೊಟ್ಟೆಗೊಲ್ಲಹಳ್ಳಿ, ಮನ್ನೇರಾಳದಲ್ಲಿ ಮರು ಮತದಾನ- ಮತ ಎಣಿಕೆಗೆ ಆಯೋಗದಿಂದ ಸಕಲ ಸಿದ್ಧತೆ

    ಇಂದು ಲೊಟ್ಟೆಗೊಲ್ಲಹಳ್ಳಿ, ಮನ್ನೇರಾಳದಲ್ಲಿ ಮರು ಮತದಾನ- ಮತ ಎಣಿಕೆಗೆ ಆಯೋಗದಿಂದ ಸಕಲ ಸಿದ್ಧತೆ

    ಬೆಂಗಳೂರು: ತಾಂತ್ರಿಕ ದೋಷದಿಂದಾಗಿ ಸ್ಥಗಿತ ಗೊಂಡಿದ್ದ ಹೆಬ್ಬಾಳದ ಲೊಟ್ಟೆಗೊಲ್ಲಹಳ್ಳಿ ಹಾಗು ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಇಂದು ಮರು ಮತದಾನ ನಡೆಯಲಿದೆ.

    ಮೇ 12ರಂದು ಲೊಟ್ಟೆಗೊಲ್ಲಹಳ್ಳಿಯ ಪೊಲಿಂಗ್ ಬೂತ್ 2ರಲ್ಲಿನ ಮತಯಂತ್ರದಲ್ಲಿ ತಾಂತ್ರಿಕ ದೋಷ ಉಂಟಾಗಿದರಿಂದ ಮತದಾನವನ್ನು ಸ್ಥಗಿತ ಮಾಡಲಾಗಿತ್ತು. ಅಲ್ಲದೆ ಕುಷ್ಟಗಿಯ ಬೂತ್ ನಂಬರ್ 20ರಲ್ಲಿ ಮತಗಟ್ಟೆ ಕೇಂದ್ರ ಬದಲಾಗಿದರಿಂದ ಅಲ್ಲಿನ 21 ಮತಗಟ್ಟೆಯ ಮತದಾರರು 20 ನಂಬರಿನ ಮತಗಟ್ಟೆಯಲ್ಲಿ ಮತದಾನ ಮಾಡಿದ್ರು. ಇದರಿಂದ ಈ ಮತಗಟ್ಟೆ ಕೇಂದ್ರದಲ್ಲಿನ ಮತದಾನವನ್ನು ಸ್ಥಗಿತ ಮಾಡಲಾಗಿತ್ತು.

    ಎರಡು ಮತಗಟ್ಟೆ ಕೇಂದ್ರಗಳಲ್ಲೂ ಇಂದು ಮರು ಮತದಾನ ನಡೆಸುವುದಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ. ವಿಕಾಸಸೌಧದಲ್ಲಿ ಮಾತನಾಡಿರುವ ಅವರು, ತಾಂತ್ರಿಕ ದೋಷಗಳಿಂದಾಗಿ ಸ್ಥಗಿತಗೊಂಡಿರುವ ಲೊಟ್ಟೆಗೊಲ್ಲಹಳ್ಳಿಯ ಬೂತ್ ನಂಬರ್ 2 ಹಾಗು ಕೊಪ್ಪಳದ ಕುಷ್ಟಗಿಯ 21 ನಂಬರಿನ ಮತಗಟ್ಟೆ ಕೇಂದ್ರದಲ್ಲಿ ಇಂದು ಮರು ಮತದಾನ ನಡೆಸಲು ತೀರ್ಮಾನಿಸಲಾಗಿದೆ ಅಂತಾ ತಿಳಿಸಿದ್ರು.

    ಇಂದು ನಡೆಯುವ ಮರು ಮತದಾನಕ್ಕೆ ಎಲ್ಲಾ ಸಿದ್ದತೆಯನ್ನು ಮಾಡಿಕೊಳ್ಳಲಾಗಿದ್ದು, ಮರು ಮತದಾನ ಮಾಡುವರಿಗೆ ಎಡಗೈ ತೋರುಬೆರಳು ಬದಲು ಮಧ್ಯದ ಬೆರಳಿಗೆ ಶಾಹಿಯನ್ನು ಹಾಕಲಾಗುವುದು. ಇನ್ನು ಕುಷ್ಟಗಿಯ ಮತಗಟ್ಟೆ ಕೇಂದ್ರಗಳಲ್ಲಿ ಉದ್ದೇಶಪೂರ್ವಕಾಗಿ ಅಧಿಕಾರಿಗಳು ತಪ್ಪು ಎಸಗಿದ್ರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಇಂದು ಮರುಮತದಾನ ನಡೆಯುವ ಸರ್ಕಾರಿ ಹಾಗು ಖಾಸಗಿ ಕಂಪನಿಯ ನೌಕರರಿಗೆ ರಜೆ ಕೊಡಲಾಗಿದ್ದು, ತಪ್ಪದೇ ಮತದಾನ ಮಾಡುವಂತೆ ಸಂಜೀವ್ ಕುಮಾರ್ ಹೇಳಿದ್ದಾರೆ.

    ರಾಜ್ಯದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯದ ಸಕಲ ಸಿದ್ದತೆ ಮುಗಿದಿದ್ದು, ಪ್ರತಿಯೊಂದು ಜಿಲ್ಲೆಯಲ್ಲೂ ಮತ ಎಣಿಕೆ ಕೇಂದ್ರ ಮಾಡಲಾಗಿದೆ. ಚಿತ್ರದುರ್ಗ -2, ದಕ್ಷಿಣ ಕನ್ನಡ – 2, ಮೈಸೂರು – 2, ತುಮಕೂರಿನಲ್ಲಿ -3ಕಡೆ ಮತ್ತು ಬೆಂಗಳೂರಲ್ಲಿ ನಾಲ್ಕು ಕಡೆ ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಕಾರ್ಯಕ್ಕೆ 11,160 ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ರಾಜ್ಯದಲ್ಲಿ ಶನಿವಾರ ನಡೆದ ಮತದಾನದಲ್ಲಿ ಶೇ 72.13 ರಷ್ಟು ದಾಖಲೆಯ ಮತದಾನವಾಗಿದ್ದು, ಹೋಸಕೊಟೆಯಲ್ಲಿ ಅತಿಹೆಚ್ಚು ಅಂದ್ರೇ ಶೇ.89 ರಷ್ಟು ಮತದಾನವಾಗಿದ್ದು, ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಮತದಾನವಾಗಿದೆ.