Tag: Re-Tweet

  • ಮೋದಿಯ `ಜಬ್ ವಿ ಮೆಟ್’ ಟ್ವೀಟ್‍ಗೆ ಫಿದಾ ಆದ್ರು ನೆಟ್ಟಿಗರು

    ಮೋದಿಯ `ಜಬ್ ವಿ ಮೆಟ್’ ಟ್ವೀಟ್‍ಗೆ ಫಿದಾ ಆದ್ರು ನೆಟ್ಟಿಗರು

    ನವದೆಹಲಿ: ಬಾಲಿವುಡ್ ನಟ ಕಾರ್ತಿಕ್ ಆರ್ಯಾನ್ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಗಿದ್ದ ಹಿಮ್ಮುಖ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್‍ಗೆ ಮೋದಿ ಅವರು ಕೊಟ್ಟ ಪ್ರತಿಕ್ರಿಯೆ ನೆಟ್ಟಿಗರ ಮನ ಗೆದ್ದಿದೆ.

    ಬಿಟೌನ್‍ನ ನಟ ಕಾರ್ತಿಕ್ ಆರ್ಯಾನ್, ನಿರ್ಮಾಪಕ ಕರಣ್ ಜೊಹರ್, ಇಮ್ತಿಯಾಜ್ ಅಲಿ ಹಾಗೂ ದಿನೇಶ್ ವಿಜಯ್ ಎಲ್ಲ ಸೇರಿ ಪ್ರಧಾನಿ ಮೋದಿಯವರು ಹಿಮ್ಮುಖವಾಗಿ ನಿಂತಿರುವಾಗ ಹಿಂಬದಿಯಿಂದ ಸೆಲ್ಫಿ ಕ್ಲಿಕ್ಕಿಸಿದ್ದಾರೆ. ಬಳಿಕ ಆ ಫೋಟೋವನ್ನು ಕಾರ್ತಿಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಪ್ರಧಾನಿ ಅವರೊಂದಿಗೆ ಹಿಮ್ಮುಖ ಚಿತ್ರ ಅಂತ “Losers’ backfie with the Honorable PM” ಅಂತ ಕ್ಯಾಪ್ಷನ್ ನೀಡಿ ಟ್ವೀಟ್ ಮಾಡಿದ್ದರು.

    ಈ ಟ್ವೀಟ್ ನೋಡಿದ ಪ್ರಧಾನಿ ಅವರು “ನೀವು ಲೂಸರ್ಸ್ ಅಲ್ಲ ರಾಕ್‍ಸ್ಟಾರ್ಸ್! ಈ ಬಾರಿ ಸೆಲ್ಫಿ ತೆಗೆದುಕೊಳ್ಳಲು ಆಗಲಿಲ್ಲ, ಆದ್ರೆ ಮತ್ತೊಮ್ಮೆ ಭೇಟಿಯಾದಾಗ ಸೆಲ್ಫಿ ತೆಗೆಸಿಕೊಳ್ಳೊಣ” (Not losers but Rockstars! No selfie Jab We Met but there will always be another occasion) ಅಂತ ರೀ-ಟ್ವೀಟ್ ಮಾಡಿದ್ದಾರೆ.

    https://twitter.com/RenuGadgil/status/1086980907368660999?ref_src=twsrc%5Etfw%7Ctwcamp%5Etweetembed%7Ctwterm%5E1086980907368660999&ref_url=https%3A%2F%2Fwww.ndtv.com%2Fentertainment%2Fpm-modis-epic-jab-we-met-response-to-kartik-aaryans-post-is-winning-the-internet-1980636

    ಮೋದಿ ಅವರ ಈ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಅಲ್ಲದೆ ಪ್ರಧಾನಿ ಅವರ ಈ ತಿಳಿ ಮಿಶ್ರಿತ ಪ್ರತಿಕ್ರಿಯೆ ಜನರ ಮನ ಗೆದ್ದಿದ್ದು, ಮೋದಿ ಅವರ ಟ್ವೀಟ್‍ಗೆ ಸಾಕಷ್ಟು ಮಂದಿ ರೀ-ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದರಾಮಯ್ಯ ಟಿಪ್ಪು ಜಯಂತಿ ಹೇಳಿಕೆಗೆ ಶಿಲ್ಪಾ ಗಣೇಶ್ ಕಿಡಿ

    ಸಿದ್ದರಾಮಯ್ಯ ಟಿಪ್ಪು ಜಯಂತಿ ಹೇಳಿಕೆಗೆ ಶಿಲ್ಪಾ ಗಣೇಶ್ ಕಿಡಿ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟಿಪ್ಪು ಜಯಂತಿಗೆ ಹೇಳಿಕೆಗೆ ಗೋಲ್ಡನ್ ಸ್ಟಾರ್ ಪತ್ನಿ, ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಶಿಲ್ಪಾ ಗಣೇಶ್ ಪ್ರಶ್ನಿಸಿ ಮೂಲಕ ತಿರುಗೇಟು ನೀಡಿದ್ದಾರೆ.

    ಈ ಹಿಂದೆ ಸಿದ್ದರಾಮಯ್ಯ ಟಿಪ್ಪು ಜಯಂತಿ ಕುರಿತು ಟ್ವಿಟ್ಟರಿನಲ್ಲಿ, “ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ, ಒಂದು ಸಂಸ್ಥಾನದ ರಾಜ ಎನ್ನುವ ವಾದ ಹುಟ್ಟಿಕೊಂಡಿದೆ. ಇಂತಹ ಮೊಂಡುವಾದದವರು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರ ಸಿಂಧೂರ ಲಕ್ಷ್ಮಣ, ರಾಣಿ ಅಬ್ಬಕ್ಕದೇವಿ ಸೇರಿದಂತೆ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದವರನ್ನು ಯಾವ ಗುಂಪಿಗೆ ಸೇರಿಸುತ್ತಾರೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.

    ಅಲ್ಲದೇ ಟಿಪ್ಪು ಯುದ್ಧದ ವೇಳೆ ಜನರನ್ನು ಸಾಯಿಸಿದ್ದ ಲೂಟಿ ಮಾಡಿದ್ದ ಎನ್ನುವುದು ವಿರೋಧಿಗಳ ಆರೋಪ. ಟಿಪ್ಪು ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಲಿಲ್ಲ, ಟಿಪ್ಪು ಪ್ರಜಾತಾಂತ್ರಿಕವಾಗಿ ಆಯ್ಕೆಯಾದವನ್ನಲ್ಲ. ಆತ ಒಬ್ಬ ರಾಜ. ಆ ಕಾಲದಲ್ಲಿ ಯುದ್ಧಧರ್ಮಕ್ಕೆ ತಕ್ಕಂತೆ ನಡೆದುಕೊಂಡಿದ್ದ ಎಂದು ಟ್ವೀಟ್ ಮಾಡಿ ಟಿಪ್ಪು ಜಯಂತಿಯನ್ನು ಸಮರ್ಥಿಸಿಕೊಂಡಿದ್ದರು.

    ಇದಕ್ಕೆ ಶಿಲ್ಪಾ ಗಣೇಶ್ ಸಿದ್ದರಾಮಯ್ಯನವರ ಟ್ವೀಟ್ ಸ್ಕ್ರೀನ್ ಶಾಟ್ ತೆಗೆದು ಅದನ್ನು ತಮ್ಮ ಟ್ವಿಟ್ಟರಿನಲ್ಲಿ ಹಾಕಿ “ದೇಶವಿರೋಧಿ ಘೋಷಣೆ ಕೂಗುವುದು, ದೇಶ ದ್ರೋಹಿಗಳಿಗೆ ಜೈಕಾರ ಹಾಕುವುದು, ಬೆಂಬಲಿಸುವುದು, ಭಗವದ್ಗೀತೆ ಸುಡುವುದು, ಹಿಂದೂ ಧರ್ಮವನ್ನು-ದೇವರನ್ನು ಅವಮಾನಿಸುವುದು, ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುವುದು, ಅಭಿವ್ಯಕ್ತಿ ಸ್ವಾತಂತ್ರ್ಯ. ಆದರೆ ಇತಿಹಾಸವೇ ಹೇಳಿರುವ ಮತಾಂಧನೊಬ್ಬನನ್ನು ಮತಾಂಧ ಎಂದರೆ, ನೀನು ಸಂವಿಧಾನ ವಿರೋಧಿ, ಕೋಮುಗಲಭೆಯ ಪ್ರಚೋದಕ, ಸಮಾಜ ಘಾತುಕ” ಎಂದು ಬರೆದು ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews