Tag: Re-release

  • ಅಂಬಿ ಹುಟ್ಟು ಹಬ್ಬಕ್ಕೆ ‘ಅಂತ’ ರೀ ರಿಲೀಸ್

    ಅಂಬಿ ಹುಟ್ಟು ಹಬ್ಬಕ್ಕೆ ‘ಅಂತ’ ರೀ ರಿಲೀಸ್

    ರೆಬೆಲ್ ಸ್ಟಾರ್ ಅಂಬರೀಶ್ (Ambarish) ವೃತ್ತಿ ಬದುಕಿಗೆ ಬಹುದೊಡ್ಡ ಬ್ರೇಕ್ ನೀಡಿದ ‘ಅಂತ’ (Antha) ಸಿನಿಮಾವನ್ನು ಅವರ ಹುಟ್ಟು ಹಬ್ಬದ ದಿನದಂದು ಮರು ಬಿಡುಗಡೆ (Re Release) ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅತ್ಯುತ್ತಮ ತಂತ್ರಜ್ಞಾನದ ಮೂಲಕ ಚಿತ್ರಕ್ಕೆ ಮತ್ತಷ್ಟು ಮೆರಗು ತುಂಬಿದ್ದು, ಹಲವು ಚಿತ್ರ ಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

    ಮೇ 29 ಅಂಬರೀಶ್ ಅವರ ಹುಟ್ಟು ಹಬ್ಬ. ಅವರ ಹುಟ್ಟು ಹಬ್ಬದ ಉಡುಗೊರೆ ಎನ್ನುವಂತೆ ಚಿತ್ರವನ್ನು ರಿಲೀಸ್ ಮಾಡುತ್ತಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾ ಮೊದಲ ಬಾರಿಗೆ ಬಿಡುಗಡೆ ಆಗಿದ್ದು 1981ರಲ್ಲಿ, ಇದೀಗ ಅದೇ ಚಿತ್ರವನ್ನು ಕಲರ್ ಸ್ಕೋಪ್ ಮಾಡಿ, 5.1 ಸೌಂಡ್ ವ್ಯವಸ್ಥೆಯನ್ನು ಅಳವಡಿಸಿ ಮತ್ತೆ ಬಿಡುಗಡೆ ಮಾಡಲಾಗುತ್ತಿದೆ. ಇದನ್ನೂ ಓದಿ:ಮಗಳ ಭವಿಷ್ಯಕ್ಕಾಗಿ ದೇಶ ಬಿಡಲು ಸಿದ್ಧ ಎಂದ ಪ್ರಿಯಾಂಕಾ ಚೋಪ್ರಾ

    ಎಚ್.ಕೆ ಅನಂತ್ ರಾವ್ ಅವರ ಸರಣಿಯ ಕಥೆಗಳನ್ನು ಆಧರಿಸಿ ತಯಾರಾದ ಈ ಚಿತ್ರಕ್ಕೆ ರಾಜೇಂದ್ರ ಸಿಂಗ್ ಬಾಬು (Rajendra Singh Babu) ನಿರ್ದೇಶಕರು. ಆರಂಭದಲ್ಲಿ ಈ ಸಿನಿಮಾ ನಿರ್ಮಾಣಕ್ಕೆ ಯಾರೂ ಮನಸ್ಸು ಮಾಡಲಿಲ್ಲ. ಕೊನೆಗೆ ಕೈ ಹಿಡಿದದ್ದು ಎಚ್.ಎನ್. ಮಾರುತಿ ಹಾಗೂ ವೇಣು ಗೋಪಾಲ್. ಸೆನ್ಸಾರ್ ಮಂಡಳಿಯ ವಿಪರೀತ ತೊಂದರೆ ನಡುವೆಯೂ ಸಿನಿಮಾ ರಿಲೀಸ್ ಆಗಿತ್ತು.

  • ಮತ್ತೆ ಥೀಯೇಟರ್‌ಗೆ ಬಂದ ಟಗರನ್ನು ನೋಡಲು ಸಿದ್ಧವಾದ ಸಲಗ

    ಮತ್ತೆ ಥೀಯೇಟರ್‌ಗೆ ಬಂದ ಟಗರನ್ನು ನೋಡಲು ಸಿದ್ಧವಾದ ಸಲಗ

    ಬೆಂಗಳೂರು: ಮತ್ತೆ ಮರು ಬಿಡುಗಡೆಯಾಗಿರುವ ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ಟಗರು ಸಿನಿಮಾ ನೋಡಲು ಭಾನುವಾರ ಸಲಗ ಚಿತ್ರದ ನಾಯಕ ದುನಿಯ ವಿಜಯ್ ಅವರು ಚಿತ್ರಮಂದಿರಕ್ಕೆ ಹೋಗುತ್ತಿದ್ದಾರೆ.

    ಕೊರೊನಾ ಕಾರಣದಿಂದ ಪ್ರದರ್ಶನಗಳನ್ನು ನಿಲ್ಲಿಸಿದ್ದ ಚಿತ್ರಮಂದಿರಗಳು ಸರ್ಕಾರದ ಆದೇಶದಂತೆ ಮತ್ತೆ ಚಿತ್ರಪ್ರದರ್ಶನ ಶುರು ಮಾಡಿವೆ. ಈ ಹಿಂದೆ ಹಿಟ್ ಆಗಿದ್ದ ಕೆಲ ಸಿನಿಮಾಗಳು ಮತ್ತೆ ಮರು ಬಿಡುಗಡೆಯಾಗುತ್ತೀವೆ. ಅಂತೆಯೇ 2018ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಸೂರಿ ನಿರ್ದೇಶನದ ಟಗರು ಚಿತ್ರ ಹಿಂದಿನಿಂದ ಮತ್ತೆ ತೆರೆಮೇಲೆ ಬರುತ್ತಿದೆ.

    https://www.instagram.com/p/CGr3lotgb6T/

    ಈ ವಿಚಾರವಾಗಿ  ಪೋಸ್ಟ್ ಹಾಕಿರುವ ದುನಿಯಾ ವಿಜಯ್ ಅವರು, ಕಳೆದ ಆರೇಳು ತಿಂಗಳಿನಿಂದ ಕೊರೊನಾ, ಐಸೋಲೇಶನ್, ಕ್ವಾರಂಟೈನ್, ಸೀಲ್‍ಡೌನ್ ಇದೇ ರೀತಿಯ ಪದಗಳನ್ನು ಕೇಳುತ್ತಿದ್ದ ನಮಗೆ ಈಗ ಮಾರ್ನಿಂಗ್ ಶೋ, ಮ್ಯಾಟ್ನಿ, ಲೇಟ್ ನೈಟ್ ಶೋ ಎಂಬ ಪದಗಳನ್ನು ಕೇಳುವ ಸಮಯ ಬಂದಿದೆ. ಕೊರೊನಾಗೆ ವ್ಯಾಕ್ಸಿನ್ ಇನ್ನೂ ಬಂದಿಲ್ಲ. ಆದರೆ ಜೀವನವೂ ನಡೆಯಬೇಕಿರುವುದರಿಂದ ಎಲ್ಲ ಉದ್ಯಮಗಳಂತೆ, ಕಳೆದೊಂದು ವಾರದಿಂದ ಸರ್ಕಾರದ ನಿಯಮಗಳನ್ನು ಪಾಲಿಸುತ್ತಲೇ ನಮ್ಮ ಕನಸಿನ ಮನೆಗಳಾದ ಚಿತ್ರಮಂದಿರಗಳು ಪ್ರದರ್ಶನ ಆರಂಭಿಸಿವೆ ಎಂದಿದ್ದಾರೆ.

    ಜೊತೆಗೆ ಭಯ ಆತಂಕ ಎಲ್ಲದರ ನಡುವೆಯೂ ಒಂದಷ್ಟು ಸಿನಿಮಾ ಪ್ರೇಮಿಗಳು ಥೀಯೇಟರ್‍ಗೆ ಬಂದು ಸಿನಿಮಾ ನೋಡಿದ್ದಾರೆ. ಅವರೆಲ್ಲರಿಗೂ ನನ್ನ ಮನಃಪೂರ್ವಕ ವಂದನೆಗಳು. ನನ್ನ `ಸಲಗ’ ಸಿನಿಮಾದ ನಿರ್ಮಾಪಕರಾದ ಕೆಪಿ ಶ್ರೀಕಾಂತ್ ನಿರ್ಮಾಣದ ಗೆಳೆಯ ಸೂರಿ ನಿರ್ದೇಶನದ ಚಿತ್ರರಂಗದ ನಾಯಕ, ನನ್ನ ಪಾಲಿಗೆ ಅಣ್ಣನ ಸಮಾನರಾದ ಶಿವರಾಜ್‍ಕುಮಾರ್ ಗೆಳೆಯ ಡಾಲಿ ಧನಂಜಯ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ `ಟಗರು’ ಇಂದಿನಿಂದ ಮರು ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

    ಚಿತ್ರ ಮತ್ತೊಮ್ಮೆ ಗಲ್ಲಾಪೆಟ್ಟಿಗೆಯನ್ನು ದೋಚಲಿ ಎಂದು ಹಾರೈಸುತ್ತಾ ಭಾನುವಾರ ಅಂದರೆ ಅಕ್ಟೋಬರ್ 25ರ ಮಧ್ಯಾಹ್ನ 1.15ರ ಪ್ರದರ್ಶನಕ್ಕೆ ಅಭಿಮಾನಿಗಳ ಜತೆ ಸಿನಿಮಾ ನೋಡಲು ಮೈಸೂರು ರಸ್ತೆಯಲ್ಲಿರುವ ಸಿರ್ಸಿ ಸರ್ಕಲ್ ಬಳಿಯ ಗೋಪಾಲನ್ ಸಿನಿಮಾಸ್‍ಗೆ ಬರುತ್ತಿದ್ದೇನೆ. ಸಾಮಾಜಿಕ ಅಂತರ ಕಾಯ್ದುಕೊಂಡು ನಮ್ಮ ಎಚ್ಚರಿಕೆಯಲ್ಲಿ ನಾವು ಇದ್ದುಕೊಂಡು ಸಿನಿಮಾ ನೋಡಲು ಆರಂಭಿಸೋಣ. ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಖುಷಿ ಮತ್ತು ಸಂತೋಷವನ್ನು ಅನುಭವಿಸೋಣ ಎಂದು ಹೇಳಿದ್ದಾರೆ.

  • ಅರ್ಜುನ್ ಸರ್ಜಾ, ಶೃತಿ ಹರಿಹರನ್ ಅಭಿನಯದ ವಿಸ್ಮಯ ಚಿತ್ರ ರೀ ರಿಲೀಸ್!

    ಅರ್ಜುನ್ ಸರ್ಜಾ, ಶೃತಿ ಹರಿಹರನ್ ಅಭಿನಯದ ವಿಸ್ಮಯ ಚಿತ್ರ ರೀ ರಿಲೀಸ್!

    ಬೆಂಗಳೂರು: ಮೀಟೂ ಆರೋಪದ ಮೂಲಕವೇ ಸುದ್ದಿಯಾಗಿದ್ದ ಬಹುಭಾಷಾ ನಟ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಅಭಿನಯದ ವಿಸ್ಮಯ ಚಿತ್ರ ಮತ್ತೊಮ್ಮೆ ಬಿಡುಗಡೆಯಾಗಲಿದೆ.

    ಹೌದು, ನಟಿ ಶೃತಿ ಹರಿಹರನ್ ಅವರು ಚಿತ್ರೀಕರಣದ ವೇಳೆ ನಟ ಅರ್ಜುನ್ ಸರ್ಜಾ ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದರು ಎನ್ನುವ ಮೀಟೂ ಆರೋಪದಿಂದಾಗಿ ವಿಸ್ಮಯ ಚಿತ್ರ ಮತ್ತೆ ಗಾಂಧಿ ನಗರದಲ್ಲಿ ಸದ್ದು ಮಾಡಿತ್ತು.

    2017ರ ಜುಲೈ 27ರಂದು ತೆರೆಕಂಡ ವಿಸ್ಮಯ ಸಿನೆಮಾ, ಪ್ರೇಕ್ಷರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಸಿನೆಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಅರ್ಜುನ್ ಸರ್ಜಾ ಸಖತ್ ಖದರ್ ತೋರಿದ್ದರೆ, ಅವರ ಪತ್ನಿಯಾಗಿ ನಟಿ ಶೃತಿ ಹರಿಹರನ್ ಅಭಿನಯಿಸಿದ್ದರು.

    ಮೀಟೂ ಆರೋಪದಿಂದಾಗಿ ವಿಸ್ಮಯ ಚಿತ್ರ ಮತ್ತೆ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ನಿರ್ಮಾಪಕರು ಹಾಗೂ ವಿತರಕರು ಸಿನಿಮಾವನ್ನು ಮತ್ತೆ ರೀ ರೀಲಿಸ್ ಮಾಡಲು ಮುಂದಾಗಿದ್ದಾರೆ.

    ಈ ಕುರಿತು ಚಿತ್ರ ನಿರ್ಮಾಪಕ ಉಮೇಶ್ ಮಾತನಾಡಿ, ರಾಜ್ಯೋತ್ಸವದ ನಂತರ ವಿಸ್ಮಯ ಚಿತ್ರವನ್ನು ರೀ ರಿಲೀಸ್ ಮಾಡುತ್ತೇನೆ. ಹೀಗಾಗಲೇ ಎಲ್ಲಾ ವಿತರಕರು ನಮ್ಮನ್ನು ಬಲವಂತ ಮಾಡುತ್ತಿದ್ದು ಅವರ ಆಸಕ್ತಿ ಮೇರೆಗೆ ಮತ್ತೊಮ್ಮೆ ತೆರೆಮೇಲೆ ವಿಸ್ಮಯ ಚಿತ್ರ ಮೂಡಿಬರಲಿದೆ. ಈ ಬಗ್ಗೆ ಎಲ್ಲಾ ಚಿತ್ರಮಂದಿರಗಳ ಜೊತೆ ವಿತರಕರು ಸಂಪರ್ಕ ಮಾಡುತ್ತಿದ್ದಾರೆ. ಚಿತ್ರ ರಿಲೀಸ್‍ಗೆ ನಟ ಅರ್ಜುನ್ ಸರ್ಜಾ ಹಾಗೂ ನಟಿ ಶೃತಿ ಹರಿಹರನ್ ಆಗಲಿ ಯಾವುದೇ ಸಂಬಂಧವಿಲ್ಲ. ಚಿತ್ರ ರೀ ರಿಲೀಸ್‍ಗೆ ಯಾವುದೇ ಅಡ್ಡಿ ಇಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ.

    ಇದೇ ವೇಳೆ ನಟ ಚೇತನ್ ಬಗ್ಗೆ ಮಾತನಾಡಿ, ಕನ್ನಡ ಇಂಡಸ್ಟ್ರೀಸ್‍ನಲ್ಲಿ ವಿಸ್ಮಯ ನನ್ನ ಮೊದಲನೇ ಸಿನೆಮಾ ಆಗಿದ್ದು, ಅರುಣ್ ವೈದ್ಯನಾಥನ್ ಅವರು ಅಮೆರಿಕದಿಂದ ಬಂದು ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದರು. ಚಿತ್ರೀಕರಣದ ವೇಳೆ ಖಳನಾಯಕರ ಪಾತ್ರಕ್ಕೆ ಸ್ಥಳೀಯ ಸಹ ನಿರ್ದೇಶಕರ ಸೂಚನೆ ಮೇರೆಗೆ ನಟ ಚೇತನ್ ಹಾಗೂ ಜೆಕೆ ಅವರನ್ನು ಆಯ್ಕೆಮಾಡಿಕೊಂಡು, ಚೇತನ್ ಅವರನ್ನು ಅಶೋಕ ಹೋಟೆಲ್‍ನಲ್ಲಿ ಭೇಟಿಯಾಗಿ ಮಾತನಾಡಿದ್ದೇವು. ಆದರೆ ಚೇತನ್ ರ ಸಮಯದ ಅಭಾವದಿಂದ ನಿರ್ದೇಶಕರು ಜೆಕೆಯವರನ್ನು ಅಂತಿಮವಾಗಿ ಆಯ್ಕೆ ಮಾಡಿದ್ದರು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್ ನ್ಯೂಸ್!

    ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್ ನ್ಯೂಸ್!

    ಬೆಂಗಳೂರು: ಬೆಳ್ಳಿತೆರೆ ಮೇಲೆ ಸಾಹಸಸಿಂಹ ವಿಷ್ಣುವರ್ಧನ್ ನಟಿಸಿದ ‘ನಾಗರಹಾವು’ ಚಿತ್ರ ರಿ-ರಿಲೀಸ್ ಆಗಲಿದೆ.

    ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಸಿನಿಮಾ ರಿ-ರಿಲೀಸ್ ಆಗ್ತಿರೋ ಮೂಲಕ ಬೆಳ್ಳಿತೆರೆ ಮೇಲೆ ಮತ್ತೆ ರಾಮಾಚಾರಿಯ ದರ್ಶನವಾಗುತ್ತಿದೆ. ಇದೀಗ ಹೊಸ ಲುಕ್‍ನಲ್ಲಿ ಅಭಿಮಾನಿ ದೇವರುಗಳಿಗೆ ದರ್ಶನ ಕೊಡೋದಕ್ಕೆ ಸಜ್ಜಾಗಿದ್ದು, ವೆಲ್‍ಕಮ್ ಮಾಡಿಕೊಳ್ಳೋಕ್ಕೆ ಚಿತ್ರರಂಗ ಕೂಡ ತುದಿಗಾಲಲ್ಲಿ ನಿಂತಿದೆ.

    ಚಂದನವನಕ್ಕೆ ಇಬ್ಬರು ದೊಡ್ಡ ನಟರನ್ನು ಕೊಟ್ಟ ನಾಗರಹಾವು ಎಂದೆಂದಿಗೂ ಎವರ್ ಗ್ರೀನ್ ಚಿತ್ರ. ಈ ಬಾರಿ ಬೆಳ್ಳಿತೆರೆ ಮೇಲೆ ಹೈ ಗ್ರೇಡ್ ಕಲರ್ ಫುಲ್ ರಾಮಾಚಾರಿಯನ್ನು ಎಲ್ಲರೂ ನೋಡಬಹುದಾಗಿದೆ.

    7.1 ತಂತ್ರಜ್ಞಾನದಲ್ಲಿ ನಾಗರಹಾವನ್ನ ರೆಡಿ ಮಾಡಿದ್ದು, ಮ್ಯೂಸಿಕ್‍ನ ರಿ-ಕ್ರಿಯೇಟ್ ಮಾಡಲಾಗಿದೆ. ಡಿಜಿಟಲ್ ಸೌಂಡಿಂಗ್ ಎಫೆಕ್ಟ್ ನಲ್ಲಿ ಎದ್ದು ಬರುತ್ತದೆ. ಈಗಾಗಲೇ ರಿಲೀಸ್ ಆಗಿರುವ ನಾಗರಹಾವು ಟೀಸರ್ ಭಾರೀ ಸದ್ದು ಮಾಡ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಹಲ್‍ಚಲ್ ಎಬ್ಬಿಸಿದೆ.

    ಇನ್ನೂ ವಿಶೇಷ ಅಂದ್ರೆ ಡಿಜಿಟಲ್ ತಂತ್ರಜ್ಞಾನದಲ್ಲಿ ಮೂಡಿ ಬರ್ತಿರುವ ನಾಗರಹಾವು ಸಿನಿಮಾ ನೋಡೋದಕ್ಕೆ ಸಿನಿಪ್ರಿಯರು ಮಾತ್ರವಲ್ಲ ಸಿನಿಮಾ ಮಂದಿ ಕೂಡ ಕಾದು ಕುಳಿತಿದ್ದಾರೆ. ಹೊಸ ರಾಮಾಚಾರಿಯ ಬಗ್ಗೆ ಮಾತನಾಡೋದಕ್ಕೆ ಸ್ಯಾಂಡಲ್‍ವುಡ್‍ನ ಹಲವು ಗಣ್ಯರು ಆಗಮಿಸಿದ್ರು.

    ಭಾರತಿ ವಿಷ್ಣುವರ್ಧನ್, ಕ್ರೇಜಿಸ್ಟಾರ್ ರವಿಚಂದ್ರನ್, ಅಂಬರೀಷ್, ಲೀಲಾವತಿ, ಜಯಂತಿ, ರಾಕ್‍ಲೈನ್ ವೆಂಕಟೇಶ್ ಸೇರಿದಂತೆ ಹಲವರು ಹೊಸ ನಾಗರಹಾವಿನ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು. ಒಟ್ಟಿನಲ್ಲಿ ನಾಗರಹಾವು ಸಿನಿಮಾ ಬಿಡುಗಡೆಗೆ ಸಕಲ ಸಿದ್ಧತೆಗಳು ಆಗಿವೆ. ಜುಲೈ 20 ರಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಲಿದೆ.