Tag: Re-entry

  • ಸ್ಕ್ರಿಪ್ಟ್ ಕೇಳಿದ್ದೀನಿ: ಮತ್ತೆ ಚಿತ್ರರಂಗಕ್ಕೆ ಅಮೂಲ್ಯ ಎಂಟ್ರಿ

    ಸ್ಕ್ರಿಪ್ಟ್ ಕೇಳಿದ್ದೀನಿ: ಮತ್ತೆ ಚಿತ್ರರಂಗಕ್ಕೆ ಅಮೂಲ್ಯ ಎಂಟ್ರಿ

    ಚೆಲುವಿನ ಚಿತ್ತಾರದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ನಟಿ ಅಮೂಲ್ಯ (Amulya), ಮದುವೆ ನಂತರ ಸಿನಿಮಾ ರಂಗದಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಅವರು ಸಿನಿಮಾ (cinema) ರಂಗಕ್ಕೆ ಬರುವ ಕುರಿತು ಸುಳಿವು ನೀಡಿದ್ದಾರೆ. ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ 2024ರ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ ಅಮೂಲ್ಯ, ಆಗಲೇ ಎರಡು ಸ್ಕ್ರಿಪ್ಟ್ ಕೇಳಿದ್ದೇನೆ. ಸ್ಕ್ರಿಪ್ಟ್ ಇಷ್ಟವಾದ ತಕ್ಷಣವೇ ತಿಳಿಸುತ್ತೇನೆ ಎಂದಿದ್ದಾರೆ.

    ಸಿನಿಮಾ ರಂಗಕ್ಕೆ ಅಮೂಲ್ಯ ಮತ್ತೆ ಮರು ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಲೇ ಇತ್ತು. ಆದರೆ, ಅದಕ್ಕೆ ಅಧಿಕೃತತೆ ಇರಲಿಲ್ಲ. ಇಂದು ಸ್ವತಃ ಅಮೂಲ್ಯ  ಅವರೇ ಸಿನಿಮಾ ರಂಗಕ್ಕೆ ಮತ್ತೆ ಬರುವ ಕುರಿತು ಮಾತನಾಡಿದ್ದಾರೆ. ಅಭಿಮಾನಿಗಳಿಗೆ ಈ ಮೂಲಕ ಖುಷಿ ಸುದ್ದಿ ಕೊಟ್ಟಿದ್ದಾರೆ.

    ಬಾಲ್ಯದಿಂದಲೂ ನಾನು ಸಿನಿಮಾ ರಂಗದ ಜೊತೆನೇ ಬೆಳೆದೋಳು. ನನಗೆ ಸಿನಿಮಾ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಬ್ಯುಸಿನೆಸ್ ಅರ್ಥವಾಗಲ್ಲ. ಹಾಗಾಗಿ ಸಿನಿಮಾವನ್ನೇ ನಾನು ಮಾಡಬೇಕು. ಕಂಡಿತಾ ಮತ್ತೆ ಸಿನಿಮಾ ರಂಗಕ್ಕೆ ಬರ್ತೀನಿ. ಸಿನಿಮಾಗಳನ್ನು ಮಾಡುತ್ತೇನೆ. ಅತೀ ಶೀಘ್ರದಲ್ಲೇ ಎಲ್ಲವನ್ನೂ ತಿಳಿಸ್ತೀನಿ ಅಂದಿದ್ದಾರೆ ಅಮೂಲ್ಯ.

  • ಬಿಗ್ ಮನೆಗೆ ಚೈತ್ರಾ ಕೋಟೂರು ರೀ-ಎಂಟ್ರಿ

    ಬಿಗ್ ಮನೆಗೆ ಚೈತ್ರಾ ಕೋಟೂರು ರೀ-ಎಂಟ್ರಿ

    ಬೆಂಗಳೂರು: ಬಿಗ್ ಬಾಸ್ ಮನೆಗೆ ಚೈತ್ರಾ ಕೋಟೂರು ರೀ-ಎಂಟ್ರಿ ನೀಡಿದ್ದು, ಮನೆಯ ಸದಸ್ಯರು ಶಾಕ್ ಆಗಿದ್ದಾರೆ.

    ಮಂಗಳವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಮನರಂಜನೆ ನೀಡಲು ಜಾದೂಗಾರ ಕುದ್ರೋಳಿ ಗಣೇಶ್ ಅವರನ್ನು ಮನೆಗೆ ಕಳುಹಿಸಿದ್ದರು. ಗಣೇಶ್ ಅವರು ಬೆಡ್ ರೂಂ, ಡೈನಿಂಗ್ ಟೇಬಲ್, ಲಿವಿಂಗ್ ಏರಿಯಾದಲ್ಲಿ ಮ್ಯಾಜಿಕ್ ತೋರಿಸಿದ ಬಳಿಕ ಗಾರ್ಡನ್ ಏರಿಯಾದಲ್ಲಿ ಮ್ಯಾಜಿಕ್ ತೋರಿಸುವುದಾಗಿ ಹೇಳಿ ಸ್ಪರ್ಧಿಗಳನ್ನು ಹೊರಗೆ ಕರೆದುಕೊಂಡು ಹೋದರು.

    ಗಣೇಶ್ ಮನೆಯ ಮುಖ್ಯದ್ವಾರದ ಬಳಿ ಹೋಗಿ ಮ್ಯಾಜಿಕ್ ಮಾಡಿದ್ದಾರೆ. ಈ ವೇಳೆ ಚೈತ್ರಾ ಕೋಟೂರು ಅಲ್ಲಿ ಪ್ರತ್ಯಕ್ಷವಾಗಿದ್ದಾರೆ. ಚೈತ್ರಾ ಅವರನ್ನು ನೋಡುತ್ತಿದ್ದಂತೆ ಮನೆಯ ಸದಸ್ಯರು ಶಾಕ್ ಆದರು. ಚೈತ್ರಾ ಅವರು ಮನೆಯೊಳಗೆ ಹೋಗುತ್ತಿದ್ದಂತೆ ಗಣೇಶ್ ಅಲ್ಲಿಂದ ಹೊರಟು ಹೋಗಿದ್ದಾರೆ.

    ಚೈತ್ರಾ ಮನೆಯೊಳಗೆ ಬಂದ ನಂತರ ನಾನು ಮೊದಲೇ ಹೇಳಿದೆ. ಇಲ್ಲಿ ಯಾವುದು ಶಾಶ್ವತ ಅಲ್ಲ. ಟೈಂ ಬಂದಾಗ ಎಲ್ಲರೂ ಹೋಗಬೇಕು. ಮತ್ತೆ ಟೈಂ ಬಂದಾಗ ಬರಬೇಕು ಎಂದು ಹೇಳಿದ್ದಾರೆ. ಸದ್ಯ ಚೈತ್ರಾ ಮನೆಗೆ ಮತ್ತೆ ಎಂಟ್ರಿ ಕೊಟ್ಟಿರುವುದರಿಂದ ಮನೆಯ ಕೆಲವು ಸದಸ್ಯರು ಶಾಕ್‍ನಲ್ಲಿದ್ದು, ಅವರ ಬಗ್ಗೆಯೇ ಮಾತನಾಡುತ್ತಿದ್ದಾರೆ.

    ಸೋಮವಾರವಷ್ಟೇ ವೈಲ್ಡ್ ಕಾರ್ಡ್ ಮೂಲಕ ನಟಿ ರಕ್ಷಾ ಸೋಮಶೇಖರ್ ಅವರು ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಅವರು ಎಂಟ್ರಿ ಕೊಟ್ಟ ಮರುದಿನವೇ ಚೈತ್ರಾ ಕೋಟೂರು ಬಿಗ್ ಬಾಸ್ ಮನೆಗೆ ಮತ್ತೆ ಪ್ರವೇಶಿಸಿದ್ದಾರೆ.

  • ಸಾಮಾಜಿಕ ಜಾಲತಾಣಕ್ಕೆ ನಟ ರಕ್ಷಿತ್ ಶೆಟ್ಟಿ ರೀ-ಎಂಟ್ರಿ

    ಸಾಮಾಜಿಕ ಜಾಲತಾಣಕ್ಕೆ ನಟ ರಕ್ಷಿತ್ ಶೆಟ್ಟಿ ರೀ-ಎಂಟ್ರಿ

    ಬೆಂಗಳೂರು: ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಕೆಲವು ತಿಂಗಳು ಸಾಮಾಜಿಕ ಜಾಲತಾಣದಿಂದ ಬ್ರೇಕ್ ತೆಗೆದುಕೊಂಡಿದ್ದರು. ಈಗ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ರಕ್ಷಿತ್ ಸಾಮಾಜಿಕ ಜಾಲತಾಣಕ್ಕೆ ರೀ-ಎಂಟ್ರಿ ಕೊಡಲಿದ್ದಾರೆ.

    ಸಾಮಾಜಿಕ ಜಾಲತಾಣಕ್ಕೆ ಹಿಂತಿರುವಂತೆ ರಕ್ಷಿತ್ ಅಭಿಮಾನಿಗಳು ಅವರಲ್ಲಿ ಕೇಳಿಕೊಳ್ಳುತ್ತಿದ್ದರು. ಇದೇ ಜೂನ್ 6ರಂದು ರಕ್ಷಿತ್ ತಮ್ಮ ಹುಟ್ಟುಹಬ್ಬ ಇದ್ದು, ಇದೇ ದಿನ ಸಾಮಾಜಿಕ ಜಾಲತಾಣಕ್ಕೆ ರೀ-ಎಂಟ್ರಿ ಕೊಡುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ನೀಡಲು ನಿರ್ಧರಿಸಿದ್ದಾರೆ.

    ರಕ್ಷಿತ್ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣವನ್ನು ಬಳಸುವುದಿಲ್ಲ. ಅವರ ಬದಲಾಗಿ ಅವರ ಟೀಂ ಸದಸ್ಯರು ಅವರ ಸಾಮಾಜಿಕ ಜಾಲತಾಣವನ್ನು ನೋಡಿಕೊಳ್ಳುತ್ತಾರೆ. ರಕ್ಷಿತ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಅವರ ಮುಂದಿನ ಚಿತ್ರದ ಟ್ರೈಲರ್, ಪೋಸ್ಟರ್ ಹಾಗೂ ಫಸ್ಟ್ ಲುಕ್ ಇದರಲ್ಲಿ ಪೋಸ್ಟ್ ಹಾಗೂ ಟ್ವೀಟ್ ಮಾಡಲಾಗುತ್ತದೆ.

    ರಕ್ಷಿತ್ ಅಭಿನಯದ ಬಹುನಿರೀಕ್ಷಿತ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಚಿತ್ರೀಕರಣ ಇಂದು ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಗ್ಗೆ ಯಾವುದೇ ವಿಷಯವನ್ನು ಅವರ ಅಭಿಮಾನಿಗಳು ಮಿಸ್ ಮಾಡಿಕೊಳ್ಳಬಾರದು ಎಂದು ರಕ್ಷಿತ್ ರೀ-ಎಂಟ್ರಿ ಕೊಡಲಿದ್ದಾರೆ.

    ರಕ್ಷಿತ್ ಶೆಟ್ಟಿ ಮೊದಲು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗುತ್ತಿದ್ದರು. ತಮ್ಮ ವೈಯಕ್ತಿಕ ಹಾಗೂ ಸಿನಿಮಾಗಳ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು. ಈಗ ಅವರು ಮತ್ತೆ ಸೋಶಿಯಲ್ ಮೀಡಿಯಾಗೆ ರೀ-ಎಂಟ್ರಿ ಕೊಡುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.

  • ಸ್ಯಾಂಡಲ್‍ವುಡ್‍ಗೆ ಅಮಿತಾಬ್ ಬಚ್ಚನ್ ರೀ-ಎಂಟ್ರಿ

    ಸ್ಯಾಂಡಲ್‍ವುಡ್‍ಗೆ ಅಮಿತಾಬ್ ಬಚ್ಚನ್ ರೀ-ಎಂಟ್ರಿ

    ಬೆಂಗಳೂರು: ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಗಾಯಕರಾಗಿ ಮತ್ತೆ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ.

    ನಟ ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿರುವ ಹಾಗೂ ನಟಿ ಪಾರೂಲ್ ಯಾದವ್ ನಟಿಸುತ್ತಿರುವ ‘ಬಟರ್ ಫ್ಲೈ’ ಚಿತ್ರದ ಮೂಲಕ ಬಿಗ್-ಬಿ ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಟ್ಟಿದ್ದಾರೆ. ಅಮಿತಾಬ್ ಬಚ್ಚನ್ ಈ ಚಿತ್ರದ ಒಂದು ಹಾಡಿಗೆ ಧ್ವನಿಯಾಗಿದ್ದಾರೆ.

    ಅಮಿತಾಬ್ ಬಚ್ಚನ್ ಈ ಚಿತ್ರದ ಪ್ರಮುಖ ಹಾಡನ್ನು ಹಾಡಿದ್ದಾರೆ. ಈ ಹಾಡು ಒಂದು ಕ್ಲಬ್ ಸಾಂಗ್ ಆಗಿದ್ದು, ಖ್ಯಾತ ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಯ ಅವರು ಸಾಹಿತ್ಯ ಬರೆದಿದ್ದಾರೆ. ಈ ಹಾಡಿನ ಸಾಹಿತ್ಯ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿದೆ. ಅಮಿತಾಬ್‍ಗೆ ಗಾಯಕಿ ವಿದ್ಯಾ ವೋಕ್ಸ್ ಜೊತೆಯಾಗಿದ್ದಾರೆ.

    ಅಮಿತಾಬ್ ಅವರು ಹಾಡಿದ ಈ ಹಾಡನ್ನು ಪ್ಯಾರೀಸ್‍ನಲ್ಲಿ ಚಿತ್ರೀಕರಿಸಲಾಗಿದೆ. ಅಲ್ಲದೆ ಪ್ಯಾರೀಸ್‍ನ ಕ್ಲಬ್‍ವೊಂದನ್ನು ನಾಲ್ಕು ದಿನಗಳ ಕಾಲ ಬುಕ್ ಮಾಡಿ ಅಲ್ಲಿಯೇ ಚಿತ್ರೀಕರಣ ನಡೆಸಿದ್ದಾರೆ. ಗಣೇಶ್ ಆಚಾರ್ಯ ಈ ಹಾಡಿಗೆ ಕೋರಿಯೋಗ್ರಾಫಿ ಮಾಡಿದ್ದಾರೆ.

    ಬಿಗ್- ಬಿ ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದ ‘ಅಮೃತಧಾರೆ’ ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು. ಈಗ ಬರೋಬ್ಬರಿ 14 ವರ್ಷದ ನಂತರ ಬಿಗ್-ಬಿ ಅಮಿತಾಬ್ ಬಚ್ಚನ್ ಗಾಯಕರಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಟಾರ್ ನಟನ ಜೊತೆ ಸ್ಯಾಂಡಲ್‍ವುಡ್‍ಗೆ ಪದ್ಮಾವತಿ ರೀ-ಎಂಟ್ರಿ!

    ಸ್ಟಾರ್ ನಟನ ಜೊತೆ ಸ್ಯಾಂಡಲ್‍ವುಡ್‍ಗೆ ಪದ್ಮಾವತಿ ರೀ-ಎಂಟ್ರಿ!

    ಬೆಂಗಳೂರು: ಮದಕರಿ ನಾಯನ ಒಂದೇ ಕತೆಗೆ ಈಗಾಗಲೇ ದರ್ಶನ್ ಹಾಗೂ ಸುದೀಪ್ ಬೇರೆ ಬೇರೆ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿಸುತ್ತಿರುವ ಮದಕರಿ ನಾಯಕನ ಚಿತ್ರಕ್ಕೆ ಸ್ಯಾಂಡಲ್‍ವುಡ್ ಪದ್ಮಾವತಿ ರಮ್ಯಾ ರೀ-ಎಂಟ್ರಿ ನೀಡಲಿದ್ದಾರೆ.

    ಈ ಹಿಂದೆ ಅಂದರೆ 2006 ರಂದು ರಮ್ಯಾ ಅವರು ದರ್ಶನ್ ಅವರ ‘ದತ್ತ’ ಚಿತ್ರದಲ್ಲಿ ನಟಿಸಿದ್ದರು. ಆದರೆ ಈಗ ರಮ್ಯಾ ಬರೋಬ್ಬರಿ 12 ವರ್ಷದ ನಂತರ ದರ್ಶನ್ ಅವರ ಜೊತೆ ‘ಗಂಡುಗಲಿ ಮದಕರಿ ನಾಯಕ’ ಚಿತ್ರದಲ್ಲಿನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ.

    ಈ ಹಿಂದೆ ಪೌರಾಣಿಕ ಚಿತ್ರದಲ್ಲಿ ರಮ್ಯಾ ನಟಿಸಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ‘ಕಠಾರಿ ವೀರ ಸುರಸುಂದರಾಂಗಿ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರವನ್ನು ನಿರ್ಮಾಪಕ ಹಾಗೂ ಕಾಂಗ್ರೆಸ್ ಶಾಸಕ ಮುನಿರತ್ನ ನಿರ್ಮಿಸಿದ್ದರು. ಹೀಗಾಗಿ ರಮ್ಯಾ ಪೌರಾಣಿಕ ಚಿತ್ರವನ್ನು ಮಾಡಿದ್ದರಿಂದ ಗಂಡುಗಲಿ ಮದಕರಿ ನಾಯಕ ಚಿತ್ರದಲ್ಲಿ ಇವರನ್ನೇ ನಾಯಕಿಯಾಗಲಿದ್ದಾರೆ. ಸದ್ಯ ರಮ್ಯಾ ಈ ಹಿಂದೆ ರಾಕ್‍ಲೈನ್ ವೆಂಕಟೇಶ್ ಅವರು ನಿರ್ಮಿಸಿದ್ದ ‘ಬೊಂಬಾಟ್’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಾಯಕಿಯಾಗಿ ನಟಿಸಿದ್ದರು.

    ಈ ದೊಡ್ಡ ಐತಿಹಾಸಿಕ ಚಿತ್ರದಲ್ಲಿ ರಮ್ಯಾ ಅವರನ್ನು ಕರೆತರಲು ಚಿತ್ರತಂಡ ಯೋಚಿಸಿತ್ತು. ಅಲ್ಲದೇ ರಮ್ಯಾ ಅವರಿಗೂ ಕೂಡ ಚಿತ್ರದಲ್ಲಿ ನಟಿಸಬೇಕೆಂಬ ಆಸೆಯಿತ್ತು. ಈ ವಿಷಯವನ್ನು ತಮ್ಮ ಆಪ್ತರ ಬಳಿಯೂ ಹೇಳಿಕೊಂಡಿದ್ದರು ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ.

    ರಾಕ್‍ಲೈನ್ ವೆಂಕಟೇಶ್ ಅವರು ಈಗಾಗಲೇ ಗಂಡುಗಲಿ ಮದಕರಿ ನಾಯಕ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ. ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv