Tag: Rd

  • ಆರ್ ಆ್ಯಂಡ್ ಡಿ ಕಾರ್ಯಪಡೆಗೆ ಅಶೋಕ್ ಶೆಟ್ಟರ್ ನೇಮಕ

    ಆರ್ ಆ್ಯಂಡ್ ಡಿ ಕಾರ್ಯಪಡೆಗೆ ಅಶೋಕ್ ಶೆಟ್ಟರ್ ನೇಮಕ

    ಹುಬ್ಬಳ್ಳಿ: ಕೈಗಾರಿಕಾ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ರಾಜ್ಯ ಸರ್ಕಾರ ರಚಿಸಿರುವ ಸಂಶೋಧನೆ ಮತ್ತು ಅಭಿವೃದ್ಧಿ(ಆರ್ ಆ್ಯಂಡ್ ಡಿ) ಕಾರ್ಯಪಡೆಗೆ ಹುಬ್ಬಳ್ಳಿಯ ಕೆಎಲ್‍ಇ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಅಶೋಕ್ ಶೆಟ್ಟರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

    ಅಶೋಕ್ ಶೆಟ್ಟರ್ ಅವರು ಅಧ್ಯಕ್ಷರಾಗಿ ನೇಮಕಗೊಳ್ಳುತ್ತಿರುವುದಕ್ಕೆ ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾರ್ಯಪಡೆ ರಚಿಸಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಸ್ಕ್ರೀನ್‍ನಲ್ಲಿ ಅಪ್ಪು ಬಯೋಪಿಕ್ – ಸುಳಿವು ನೀಡಿದ ಸಂತೋಷ್ ಆನಂದ್‍ರಾಮ್

    ಈ ಕಾರ್ಯಪಡೆಗೆ ಸದಸ್ಯರಾಗಿ ಐಐಎಂ ಸಹ ಪ್ರಾಧ್ಯಾಪಕಿ ಶ್ರೀವರ್ಧಿನಿ ಝಾ, ಧಾರವಾಡದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ಪ್ರಾಧ್ಯಾಪಕ ಎಸ್.ಎಂ.ಶಿವಪ್ರಸಾದ್, ಮೈಸೂರಿನ ಕೇಂದ್ರ ಆಹಾರ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಡಾ.ನಂದಿನಿ ಪ್ರಸಾದ್ ಶೆಟ್ಟಿ, ಬೆಂಗಳೂರಿನ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನ ಡೀನ್ ಪ್ರೊ.ರಾಜೇಶ್ ಸುಂದರೇಶನ್, ಐಐಎಸ್‍ಸಿ ಅತಿಥಿ ಸಂಶೋಧಕ ಮಧುಸೂಧನ್ ಅತ್ರೆ, ಸ್ಯಾಮ್‍ಸಂಗ್ ಆರ್ ಆ್ಯಂಡ್ ಡಿ ವಿಭಾಗದ ಮಲ್ಟಿಮೀಡಿಯಾ ವಿಭಾಗದ ಮುಖ್ಯಸ್ಥ ಬಾಲಾಜಿ ಹೋಳೂರ, ಕೆ.ಟು. ಟೆಕ್ನಾಲಜಿ ಕಂಪೆನಿಯ ಅನಂತ ಕೊಪ್ಪರ ಹಾಗೂ ಸೋಶಿಯಲ್ ಆ್ಯಂಡ್ ಎಕನಾಮಿಕ್ ಕೌನ್ಸಿಲ್ ಇನ್‍ಸ್ಟಿಟ್ಯೂಟ್‍ನ ಪ್ರೊ.ಮೀನಾಕ್ಷಿ ರಾಜೀವ್ ಅವರನ್ನು ನೇಮಿಸಲಾಗಿದೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ತೇಜನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಕಾರ್ಯದರ್ಶಿಗಳಾಗಿರುವರು.

    ಅಶೋಕ್ ಶೆಟ್ಟರ್ ನೇತೃತ್ವದ ಕಾರ್ಯಪಡೆಯು ರಾಜ್ಯದ ಆರ್ ಆ್ಯಂಡ್ ಡಿ ನೀತಿ ಸಿದ್ಧಪಡಿಸಲು ಸರ್ಕಾರಕ್ಕೆ ನೆರವಾಗಲಿದೆ. ಇದಕ್ಕಾಗಿ ರಾಜ್ಯದಲ್ಲಿ ಖಾಸಗಿ ಮತ್ತು ಸಾರ್ವಜನಿಕ ವಲಯದ ಉದ್ಯಮ ಕ್ಷೇತ್ರಗಳಿಗೆ ಭೇಟಿ ನೀಡಲಿದೆ. ಶಾಲಾ ಹಂತದಿಂದ ಕಾಲೇಜು ಮತ್ತು ವಿಶ್ವವಿದ್ಯಾಲಯದವರೆಗೂ ಇದರ ಪ್ರಯೋಜನವಾಗುವಂತೆ ಗಮನಹರಿಸಲಿದ್ದು, ಭವಿಷ್ಯದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ವಿಶೇಷವಾಗಿ ಕೃಷಿ ಹಾಗೂ ಆಹಾರ ಕ್ಷೇತ್ರದಲ್ಲಿ ತಂತ್ರಜ್ಞಾನ, ಆವಿಷ್ಕಾರದ ಮಾರ್ಗಸೂಚಿಯನ್ನು ನೀಡಲಿದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಸ್ಕಿಡ್ ಆಗಿ ಕಂದಕಕ್ಕೆ ಬಿದ್ದ ಕಾರು- ಕುಟುಂಬದ 5 ಮಂದಿ ಸಾವು

  • ಮೈಸೂರಿನ ಜನರಿಗೆ ನವಿಲು ಯಾವುದು? ಕೆಂಭೂತ ಯಾವುದು ಎಂಬುದು ಗೊತ್ತಿದೆ: ಮಹದೇವಪ್ಪ

    ಮೈಸೂರಿನ ಜನರಿಗೆ ನವಿಲು ಯಾವುದು? ಕೆಂಭೂತ ಯಾವುದು ಎಂಬುದು ಗೊತ್ತಿದೆ: ಮಹದೇವಪ್ಪ

    ಮೈಸೂರು: ಮೈಸೂರು-ಬೆಂಗಳೂರು ದಶಪಥ ರಸ್ತೆ ಯೋಜನೆ ಶುರು ಮಾಡಿದ್ದು ಯಾರು ಅಂತಾ ಜನರಿಗೆ ಗೊತ್ತಿದೆ. ನಾನೇ ಮಾಡಿದ್ದು ನಾನೇ ಮಾಡಿದ್ದು ಎಂದು ನಾನು ಎಂದು ಹೇಳುವುದಿಲ್ಲ. ಮೈಸೂರಿನ ಜನರಿಗೆ ನವಿಲು ಯಾವುದು ಕೆಂಭೂತ ಯಾವುದು ಎಂದು ಗೊತ್ತಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವ್ಯಂಗ್ಯವಾಡಿದ್ದಾರೆ.

    ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಹದೇವಪ್ಪ, ಮೈಸೂರು-ಬೆಂಗಳೂರು ದಶಪಥ ರಸ್ತೆ ಯೋಜನೆ ಶುರು ಮಾಡಿದ್ದು ಯಾರು ಅಂತಾ ಜನರಿಗೆ ಗೊತ್ತಿದೆ. ನಾನೇ ಮಾಡಿದ್ದು ನಾನೇ ಮಾಡಿದ್ದು ಎಂದು ನಾನು ಯಾವತ್ತು ಹೇಳುವುದಿಲ್ಲ. ಈ ರಸ್ತೆ ವಿಚಾರದಲ್ಲೇ ಯಡಿಯೂರಪ್ಪ ಅವರು ನನಗೆ ಹುಬ್ಬಳ್ಳಿಯಲ್ಲಿ ಸನ್ಮಾನ ಮಾಡಿದ್ದಾರೆ. ಇದಕ್ಕಿಂತಾ ಸಾಕ್ಷಿ ಇನ್ನು ಏನು ಬೇಕು ಎಂದರು. ಇದನ್ನೂ ಓದಿ: ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರಿಡಿ: ಪ್ರತಾಪ್ ಸಿಂಹ

    ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಹೆಸರು ಬದಲಾವಣೆಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿರುವ ಬಗ್ಗೆ ಮಾತನಾಡಿ, ಅವರು ಸದ್ಯ ಭಾರತದ ಹೆಸರು ಬದಲಾಯಿಸಲು ಮುಂದಾಗುತ್ತಿಲ್ಲವಲ್ಲ ಅಷ್ಟೇ ಸಾಕು. ಹೆಸರುಗಳ ಬದಲಾವಣೆ ಅವರ ಮನಃಸ್ಥಿತಿ ತೋರಿಸುತ್ತದೆ. ಹೆಸರು ಬದಲಾವಣೆಗೆ ತೋರಿಸಿರುವ ಆಸಕ್ತಿಯನ್ನು ರಾಷ್ಟ್ರೀಯ ಉದ್ಯಾನವನದ ಸಂರಕ್ಷಣೆಗೆ, ಅಲ್ಲಿನ ಪ್ರಾಣಿಗಳ ಸಂರಕ್ಷಣೆಗೆ ವಹಿಸಬೇಕೆಂದು ಮಹದೇವಪ್ಪ ಟಾಂಗ್ ನೀಡಿದರು. ಇದನ್ನೂ ಓದಿ: ರೋಹಿಣಿ ಸಿಂಧೂರಿಯಿಂದ 6 ಕೋಟಿ ಅಕ್ರಮ: ಸಾರಾ ಮಹೇಶ್ ಆರೋಪ