Tag: rcb

  • ದಯಾನಂದ್ ಮೇಲೆ ಕೋಪ ಬಂದಿದ್ದರೆ ಕಡ್ಡಾಯ ರಜೆ ಮೇಲೆ ಕಳುಹಿಸಬಹುದಿತ್ತು: ಭಾಸ್ಕರ್ ರಾವ್

    ದಯಾನಂದ್ ಮೇಲೆ ಕೋಪ ಬಂದಿದ್ದರೆ ಕಡ್ಡಾಯ ರಜೆ ಮೇಲೆ ಕಳುಹಿಸಬಹುದಿತ್ತು: ಭಾಸ್ಕರ್ ರಾವ್

    ಸಿದ್ದರಾಮಯ್ಯ ವೀಕ್ ಮುಖ್ಯಮಂತ್ರಿ: ನಿವೃತ್ತ ಪೊಲೀಸ್ ಅಧಿಕಾರಿ ವಾಗ್ದಾಳಿ

    ಮೈಸೂರು: ದಯಾನಂದ್ (B.Dayananda) ಮೇಲೆ ಕೋಪ ಬಂದಿದ್ದರೆ ವರ್ಗಾವಣೆ ಮಾಡಬಹುದಿತ್ತು. ಕಡ್ಡಾಯ ರಜೆ ಮೇಲೆ ಕಳುಹಿಸಬಹುದಿತ್ತು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ (Bhaskar Rao) ಸರ್ಕಾರದ ವಿರುದ್ಧ ಗುಡುಗಿದರು.

    ಸಿದ್ದರಾಮಯ್ಯ ವೀಕ್, ಅಸಹಾಯಕ ಮುಖ್ಯಮಂತ್ರಿ. ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಬಹಳ ಸ್ಟ್ರಾಂಗ್ ಇದ್ರು. ಈಗ ಸಂಪೂರ್ಣವಾಗಿ ಕಳೆದು ಹೋಗಿದ್ದಾರೆ. ಇಡೀ ಪ್ರಕರಣದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಪರಮೇಶ್ವರ್ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಿದೆ. ತಪ್ಪು ಮಾಡಿರುವವರೇ ಇವರು. ಕೇಂದ್ರ ಸರ್ಕಾರ ಕೊಟ್ಟ ಕಾನೂನನ್ನು ದುರುಪಯೋಗಪಡಿಸಿಕೊಂಡು ಐಎಎಸ್ ಅಧಿಕಾರಿಗಳ ಅಮಾನತು ಮಾಡಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆ ಸರ್ಕಾರದ ಪ್ರಾಯೋಜಿತ ಕೊಲೆ: ಅರಗ ಜ್ಞಾನೇಂದ್ರ

    ಇದು ದಯಾನಂದ್‌ಗೆ ಸೀಮಿತವಾದ ವಿಚಾರವಲ್ಲ. ಇಡೀ ಪೊಲೀಸ್ ಇಲಾಖೆ ಮಾಡಿದ ಕಗ್ಗೊಲೆ. ಪೊಲೀಸರ ನೈತಿಕ ಸ್ಥೈರ್ಯವನ್ನೇ ಸಿದ್ದರಾಮಯ್ಯ ಕುಗ್ಗಿಸಿದ್ದಾರೆ. ಹೀಗೆ ಎಷ್ಟು ಜನರ ಮೇಲೆ ಕ್ರಮ ತೆಗೆದುಕೊಳ್ಳುತ್ತಾ ಹೋಗುತ್ತೀರಾ? ತೀರಾ ಅವಮಾನಕರ ರೀತಿಯಲ್ಲಿ ದಯಾನಂದ್ ಅವರನ್ನ ನಡೆಸಿಕೊಂಡಿದ್ದೀರಾ. ಅವರ ಮೇಲೆ ನಿಮಗೆ ಕೋಪ ಬಂದಿದ್ದರೆ ವರ್ಗಾವಣೆ ಮಾಡಬಹುದಿತ್ತು, ಕಡ್ಡಾಯ ರಜೆ ಮೇಲೆ ಕಳುಹಿಸಬಹುದಿತ್ತು. ಅದನ್ನ ಬಿಟ್ಟು ಅಮಾನತು ಮಾಡಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಐಪಿಎಲ್ ಏನು ರಾಜ್ಯ ಮತ್ತು ದೇಶದ ಪಂದ್ಯಾವಳಿನಾ? ಅದೊಂದು ಕ್ಲಬ್ ಪಂದ್ಯ ಅಷ್ಟೇ. ಅದಕ್ಕೆ ಡಿ.ಕೆ.ಶಿವಕುಮಾರ್ ಹೋಗಿದ್ದೇನು, ಮುತ್ತಿಕಿದ್ದೇನು, ಬಾವುಟ ಹಿಡಿದಿದ್ದೇನು. ಇದೆಲ್ಲಾ ಮುಖ್ಯಮಂತ್ರಿಗೆ ಗೊತ್ತಾಗಲಿಲ್ವಾ? ಕಾಂಗ್ರೆಸ್ ಹೈಕಮಾಂಡ್ ಬಿಗಿಯಾಗಿದ್ರೆ ಈ ಸಿಎಂ, ಡಿಸಿಎಂ, ಗೃಹ ಸಚಿವರನ್ನ ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಗೋವಿಂದರಾಜ್ ವಿರುದ್ಧ ಕ್ರಮ – ಅಷ್ಟಾದ್ರೂ ಜ್ಞಾನೋದಯ ಆಗಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆ: ಹೆಚ್‍ಡಿಕೆ ವ್ಯಂಗ್ಯ

    ಯಾವುದೊ ಆಫ್ರಿಕಾ ದೇಶದಲ್ಲಿ ಹೆಣಗಳನ್ನ ಹೊತ್ತುಕೊಂಡು ಹೋದ ರೀತಿಯಲ್ಲಿ ಬೆಂಗಳೂರಿನಲ್ಲಿ ಹೊತ್ತಿಕೊಂಡು ಹೋಗಲಾಗಿದೆ ಎಂದು ಟೀಕಿಸಿದರು.

  • ಆತುರದ ನಿರ್ಧಾರದಿಂದ ತಪ್ಪು ಮಾಡಿದ್ದೇವೆ, ತಡವಾಗಿ ವಿಜಯೋತ್ಸವ ಆಚರಣೆ ಮಾಡ್ಬೋದಿತ್ತು: ಇಕ್ಬಾಲ್ ಹುಸೇನ್

    ಆತುರದ ನಿರ್ಧಾರದಿಂದ ತಪ್ಪು ಮಾಡಿದ್ದೇವೆ, ತಡವಾಗಿ ವಿಜಯೋತ್ಸವ ಆಚರಣೆ ಮಾಡ್ಬೋದಿತ್ತು: ಇಕ್ಬಾಲ್ ಹುಸೇನ್

    ರಾಮನಗರ: ಎಲ್ಲರೂ ಇಷ್ಟಪಡುವ ಆರ್‌ಸಿಬಿ (RCB) ತಂಡ ಕಪ್ ಗೆದ್ದಿತ್ತು, ಆದರೆ ಅದರ ಸಂಭ್ರಮ ಮಾಡಲು ಹೋಗಿ ಸಾವು-ನೋವು ಸಂಭವಿಸಿದೆ. ತಡವಾಗಿ ಆಲೋಚನೆ ಮಾಡಿ ವಿಜಯೋತ್ಸವ ಆಚರಣೆ ಮಾಡಬಹುದಿತ್ತು ಎಂದು ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಹೇಳಿದ್ದಾರೆ.

    ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ (Chinnaswamy Stampede) ಪ್ರಕರಣ ಸಂಬಂಧ ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ತ್ಯಾಗ ಬಲಿದಾನದ ಪ್ರತೀಕವಾಗಿ ಬಕ್ರೀದ್ ಆಚರಣೆ ಮಾಡುತ್ತಿದ್ದೇವೆ. ಕಾಲ್ತುಳಿತದಲ್ಲಿ ಮೃತಪಟ್ಟ 11 ಜನರ ಆತ್ಮಕ್ಕೆ ಶಾಂತಿ ಕೋರಿ ಇಂದು ಪ್ರಾರ್ಥನೆ ಮಾಡಿದ್ದೇವೆ. ಎಲ್ಲಾ ಮಸೀದಿಗಳಲ್ಲೂ ಪ್ರಾರ್ಥನೆ ಸಲ್ಲಿಸಿದ್ದೇವೆ. ಈ ದುರ್ಘಟನೆ ನಡೆಯಬಾತದಿತ್ತು, ನಡೆದು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ – ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಬಾಂಬ್‌

    ಸಿದ್ಧತೆ, ಭದ್ರತೆ ಮಾಡಿಕೊಂಡು ಕಾರ್ಯಕ್ರಮ ಮಾಡಬೇಕಿತ್ತು. ಆದರೆ ಆತುರದಿಂದ ಕಾರ್ಯಕ್ರಮ ಮಾಡಿ ತಪ್ಪು ಮಾಡಿದ್ದೇವೆ. ನಾವೂ ತಪ್ಪು ಮಾಡಿದ್ದೇವೆ, ಅಧಿಕಾರಿ ವರ್ಗದವರು ತಪ್ಪು ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಅನುಮತಿ ಕೊಡಲೇ ಬಾರದಿತ್ತು. ಘಟನೆ ನಮಗೆ ಹೆಚ್ಚು ದುಖಃವನ್ನ ತಂದಿದೆ. ಘಟನೆಯನ್ನ ನಾವು ಖಂಡಿಸುತ್ತೇವೆ ಎಂದರು. ಇದನ್ನೂ ಓದಿ: ಬೆಂಗಳೂರು | ಕಾಲ್ತುಳಿತದಲ್ಲಿ 11 ಜನ ಸಾವು ಪ್ರಕರಣ – ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು

  • ಗೋವಿಂದರಾಜ್ ವಿರುದ್ಧ ಕ್ರಮ – ಅಷ್ಟಾದ್ರೂ ಜ್ಞಾನೋದಯ ಆಗಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆ: ಹೆಚ್‍ಡಿಕೆ ವ್ಯಂಗ್ಯ

    ಗೋವಿಂದರಾಜ್ ವಿರುದ್ಧ ಕ್ರಮ – ಅಷ್ಟಾದ್ರೂ ಜ್ಞಾನೋದಯ ಆಗಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆ: ಹೆಚ್‍ಡಿಕೆ ವ್ಯಂಗ್ಯ

    – ನೈತಿಕತೆ ಇದ್ದರೆ ಸಿಎಂ, ಡಿಸಿಎಂ, ಪರಂ ರಾಜೀನಾಮೆ ಕೊಡಲಿ

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಗೋವಿಂದರಾಜ್ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ. ಸರ್ಕಾರಕ್ಕೆ ಅಷ್ಟಾದ್ರೂ ಜ್ಞಾನೋದಯವಾಗಿದ್ದಕ್ಕೆ ಅಭಿನಂದನೆಗಳು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಹೇಳಿದ್ದಾರೆ.

    ನಗರದಲ್ಲಿ (Bengaluru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಗೋವಿಂದರಾಜ್‍ರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಇದೇ ವೇಳೆ, ಪೊಲೀಸ್ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಅಂತ ಐವರನ್ನು ತರಾತುರಿಯಲ್ಲಿ ಅಮಾನತು ಮಾಡಿದ್ದು ಸರಿಯಲ್ಲ. ಅಮಾನತು ಅವಶ್ಯಕತೆ ಇರಲಿಲ್ಲ. ಸರ್ಕಾರ ಈ ರೀತಿ ತೀರ್ಮಾನ ಮಾಡಿದ್ರೆ ಅಧಿಕಾರಿಗಳು ಕೆಲಸ ಮಾಡೋಕೆ ಆಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಕಾಲ್ತುಳಿತದಲ್ಲಿ 11 ಜನ ಸಾವು ಪ್ರಕರಣ – ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು

    ಸರ್ಕಾರದ ತಪ್ಪುಗಳನ್ನ ಮುಚ್ಚಿಕೊಳ್ಳೋಕೆ ಅಧಿಕಾರಿಗಳ ತಲೆದಂಡ ಮಾಡೋದು ಸರಿಯಲ್ಲ. ಹೀಗೆ ಮಾಡಿದ್ರೆ ಅವರು ಹೇಗೆ ಶ್ರದ್ಧೆಯಿಂದ ಕೆಲಸ ಮಾಡೋಕೆ ಸಾಧ್ಯ? ಸರ್ಕಾರ ಇದನ್ನ ಯೋಚನೆ ಮಾಡಬೇಕಿತ್ತು. ಚಿನ್ನಸ್ವಾಮಿ ಪ್ರಕರಣದಲ್ಲಿ ನಡೆದಿರೋ ವಾಸ್ತವಾಂಶಗಳೇ ಬೇರೆ ಇದೆ. ಸರ್ಕಾರ ಪಾರದರ್ಶಕವಾಗಿ ಆಡಳಿತ ಕೊಡ್ತೀವಿ. ಸತ್ಯ ನಿಷ್ಠೆಯಿಂದ ಆಡಳಿತ ಮಾಡ್ತೀವಿ ಅಂತಾರೆ. ಇಂತಹ ಸನ್ನಿವೇಶದಲ್ಲಿ ಸರ್ಕಾರ ತೆಗೆದುಕೊಂಡ ತೀರ್ಮಾನಕ್ಕೆ ಜನಾಭಿಪ್ರಾಯ ಏನು ಅಂತ ಈಗ ಗೊತ್ತಾಗ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಹೆಣದ ಮೇಲೆ ಬಿಜೆಪಿ-ಜೆಡಿಎಸ್ ರಾಜಕೀಯ ಮಾಡ್ತಿದೆ ಎಂಬ ಸಿಎಂ, ಡಿಸಿಎಂ ಹೇಳಿಕೆ ವಿಚಾರವಾಗಿ, ಹೆಣದ ಮೇಲೆ ರಾಜಕೀಯ ಮಾಡೋ ಅವಶ್ಯಕತೆ ನಮಗೆ ಇಲ್ಲ. ರಾಜ್‍ಕುಮಾರ್ ಘಟನೆ ಬಗ್ಗೆ ನಾನೇ ಹೇಳಿದ್ದೇನೆ. ಆ ಕೇಸಲ್ಲಿ ಅಶಾಂತಿ ವಾತಾವರಣ ಉಂಟು ಮಾಡಲು ಪ್ರಯತ್ನ ಪಟ್ಟರು, ಸೀಮೆಎಣ್ಣೆ, ಪೆಟ್ರೋಲ್ ತಂದು ಶಾಂತಿಯುತವಾಗಿ ಆಗಬೇಕಾದ ಅಂತ್ಯ ಸಂಸ್ಕಾರದಲ್ಲಿ ಅಶಾಂತಿ ಉಂಟು ಮಾಡುವ ಕೆಲಸ ಆಯ್ತು. ಈ ವೇಳೆ, ಗೋಲಿಬಾರ್ ಆಯ್ತು. ಅದರಲ್ಲಿ ಇಬ್ಬರು ಸತ್ತಿದ್ದಾರೆ. ಅದನ್ನು ನಾನು ಓಪನ್ ಆಗಿ ಹೇಳ್ತಿದ್ದೇನೆ. ಆ ಘಟನೆಗೂ ಇದಕ್ಕೂ ಯಾಕೆ ಹೋಲಿಕೆ ಮಾಡ್ತೀರಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಸಿಬ್ಬಂದಿಯಿಂದ ಅಭಿಮಾನಿಗಳ ಮೇಲೆ ಪೈಪ್‌ನಿಂದ ಹಲ್ಲೆ – ಬಹಳ ಭಯಾನಕವಾಗಿದೆ ಕಾಲ್ತುಳಿತದ ದೃಶ್ಯ

    ಮೊದಲ ಬಾರಿಗೆ ಆಗ ಅಧಿಕಾರಕ್ಕೆ ಬಂದಿದ್ದೆ. ಅಂತಹ ದೊಡ್ಡ ವ್ಯಕ್ತಿ ನಿಧನರಾಗಿದ್ದು ಅದೇ ಮೊದಲು. ಅವತ್ತು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳೋದಕ್ಕೂ ಮುನ್ನವೇ ಆಸ್ಪತ್ರೆ ಬುಲೆಟಿನ್ ಹೊರಡಿಸಿತ್ತು. ಅದಕ್ಕೆ ಹಾಗೆ ಆಯ್ತು. ಅದಕ್ಕೂ ಇದಕ್ಕೂ ಹೋಲಿಕೆ ಮಾಡಬೇಡಿ. ಇದು ಹೊಂದಾಣಿಕೆ ಆಗುವುದಿಲ್ಲ ಎಂದಿದ್ದಾರೆ.

    ಕಾಲ್ತುಳಿತ ಪ್ರಕರಣದ ಸಂಪೂರ್ಣ ಜವಾಬ್ದಾರಿ ಸಿಎಂ, ಡಿಸಿಎಂ, ಗೃಹ ಸಚಿವರು ತೆಗೆದುಕೊಳ್ಳಬೇಕು. ಇದರಲ್ಲಿ 3 ಜನರದ್ದು ತಪ್ಪಿದೆ. ಏಕಾಏಕಿ 24 ಗಂಟೆ ಒಳಗೆ ಸನ್ಮಾನ ಮಾಡೋದು ಏನಿತ್ತು? ಸನ್ಮಾನವನ್ನು ಸರಿಯಾಗಿ ಮಾಡಿದ್ರಾ? ಆಟಗಾರರನ್ನ ಸರಿಯಾಗಿ ನಡೆಸಿಕೊಂಡ್ರಾ? ಬೇಕಾಬಿಟ್ಟಿ ಸನ್ಮಾನ ಮಾಡಿದ್ರಿ. ನೀವು ಕೊಟ್ಟ ಶಾಲು, ಟೋಪಿ ಎಲ್ಲಾ ಅವರು ತಗೊಂಡು ಹೋದ್ರಾ, ಬಿಸಾಕಿ ಹೋದ್ರಾ ಗೊತ್ತಿಲ್ಲ. ಇದಕ್ಕೆ ತರಾತುರಿಯಲ್ಲಿ ಕಾರ್ಯಕ್ರಮ ಬೇಕಿತ್ತಾ? ಜವಾಬ್ದಾರಿ ತಗೊಂಡೋರು ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು. ಸಿಎಂ, ಡಿಸಿಎಂ, ಗೃಹ ಸಚಿವರು ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Chinnaswamy Stampede – ಇಂದಿನಿಂದ ಸಿಐಡಿ ತನಿಖೆ ಆರಂಭ

  • ರಾಜ್‌ಕುಮಾರ್‌ ತೀರಿಕೊಂಡಾಗ 4 ಜನಕ್ಕೆ ಗುಂಡು ಹೊಡೆಸಿದ್ರು, ಆಗ ಕುಮಾರಸ್ವಾಮಿ ರಾಜೀನಾಮೆ ಕೊಟ್ರಾ? – ಬೇಳೂರು ಗೋಪಾಲಕೃಷ್ಣ

    ರಾಜ್‌ಕುಮಾರ್‌ ತೀರಿಕೊಂಡಾಗ 4 ಜನಕ್ಕೆ ಗುಂಡು ಹೊಡೆಸಿದ್ರು, ಆಗ ಕುಮಾರಸ್ವಾಮಿ ರಾಜೀನಾಮೆ ಕೊಟ್ರಾ? – ಬೇಳೂರು ಗೋಪಾಲಕೃಷ್ಣ

    – ಮೋದಿ, ಶಾ ರಾಜೀನಾಮೆ ಕೊಟ್ರೆ ನಾವೂ ಕೊಡಿಸ್ತೇವೆ
    – 50 ಲಕ್ಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ಶಾಸಕ ಆಗ್ರಹ

    ಬೆಂಗಳೂರು: ಸಿಎಂ ರಾಜೀನಾಮೆ ಕೇಳುವ ಕುಮಾರಸ್ವಾಮಿ (HD Kumaraswamy) ಅವರಿಗೆ ನಾಚಿಕೆ ಆಗಬೇಕು. ಡಾ. ರಾಜ್‌ಕುಮಾರ್‌ ತೀರಿಕೊಂಡಾಗ 4 ಜನರಿಗೆ ಗುಂಡು ಹೊಡೆಸಿದ್ರಲ್ಲ, ಆಗ ಕುಮಾರಸ್ವಾಮಿ ರಾಜೀನಾಮೆ ಕೊಟ್ರಾ ಅಂತ ಕಾಂಗ್ರೆಸ್‌ ಶಾಸಕ ಬೇಳೂರು ಗೋಪಾಲಕೃಷ್ಣ (Gopala Krishna Beluru) ಪ್ರಶ್ನೆ ಮಾಡಿದ್ದಾರೆ.

    ಬೆಂಗಳೂರಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ರಾಜೀನಾಮೆಗೆ ದೋಸ್ತಿ ನಾಯಕರ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – KSCA ಕಾರ್ಯದರ್ಶಿ ಸೇರಿ ಇಬ್ಬರು ಪದಾಧಿಕಾರಿಗಳು ರಾಜೀನಾಮೆ

    ಡಾ. ರಾಜ್‌ಕುಮಾರ್ ತೀರಿಕೊಂಡಾಗ ನಾಲ್ಕು ಜನರಿಗೆ ಗುಂಡೇಟು ಹೊಡೆಸಿದ್ರು.‌ ಕಂಠೀರವ ಸ್ಟುಡಿಯೋದಲ್ಲಿ ಆಗ ನಾನೂ ಇದ್ದೆ. ಆಗ ಕುಮಾರಸ್ವಾಮಿ ರಾಜೀನಾಮೆ ನೀಡಿದ್ರಾ..? ಹಾವೇರಿಯಲ್ಲಿ ರೈತರ ಮೇಲೆ ಬಿಎಸ್‌ವೈ ಗೋಲಿಬಾರ್ ಮಾಡಿಸಿದ್ರು, ರಾಜೀನಾಮೆ ನೀಡಿದ್ರಾ..? ಪಹಲ್ಗಾಮ್ ಉಗ್ರರ ದಾಳಿಯಲ್ಲಿ (Pahalgam Terror Attack) 26 ಮಂದಿ ಸತ್ರು, ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ ಆಗಿ ಹಲವರು ಸತ್ರು. ಪ್ರಧಾನಿ ಮೋದಿ (Narendra modi), ಅಮಿತ್ ಶಾ ರಾಜೀನಾಮೆ ನೀಡಿದ್ರಾ..? ಮೋದಿ, ಶಾ ರಾಜೀನಾಮೆ ಕೊಡಿಸಲಿ, ನಾವೂ ಕೂಡ ಸಿಎಂ, ಡಿಸಿಎಂ ರಾಜೀನಾಮೆ ಕೊಡಿಸ್ತೀವಿ ಅಂತ ಹೇಳಿದ್ದಾರೆ.

    ಇಂತಹ ಘಟನೆ ಆಗಬಾರದಿತ್ತು, ಆದ್ರೆ ಆಗಿಹೋಗಿದೆ. ಅದಕ್ಕೆ ಪೊಲೀಸ್ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿಯ ನೇಮಕ ಹಿಂಪಡೆಯಲಾಗಿದೆ. ಸಿಎಂ, ಡಿಸಿಎಂ ಇಬ್ರೂ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಇವೆಲ್ಲ ಆಕಸ್ಮಿಕ ಘಟನೆ, ನಾವೂ ಕೂಡ ನೋವಲ್ಲಿ ಇದ್ದೇವೆ. ಗೊಂದಲ ಸೃಷ್ಟಿ ಮಾಡಬಾರದು ಎಂದು ಹೇಳಿದರು. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಸಿಬ್ಬಂದಿಯಿಂದ ಅಭಿಮಾನಿಗಳ ಮೇಲೆ ಪೈಪ್‌ನಿಂದ ಹಲ್ಲೆ – ಬಹಳ ಭಯಾನಕವಾಗಿದೆ ಕಾಲ್ತುಳಿತದ ದೃಶ್ಯ

    ಮುಂದುವರಿದು… 10 ಲಕ್ಷ ರೂ. ಪರಿಹಾರ ಸಾಕಾಗಲ್ಲ, ಕನಿಷ್ಠ 50 ಲಕ್ಷ ರೂ. ಕೊಡಬೇಕು. ನಾನೂ ಕೂಡ ಸರ್ಕಾರಕ್ಕೆ ಈ ಬಗ್ಗೆ ಒತ್ತಾಯ ಮಾಡ್ತೀನಿ. ಸತ್ತವರ ಕುಟುಂಬಸ್ಥರನ್ನ ಇಟ್ಕೊಂಡು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಮೋದಿ ರಾಜೀನಾಮೆ ಕೊಟ್ಟರೆ ನಾವೂ ರಾಜೀನಾಮೆ ಕೊಡಿಸುತ್ತೇವೆ. ಮೋದಿ, ಶಾ ರಾಜೀನಾಮೆ ಕೊಡಿಸಲು ತಾಕತ್ತು ಇದ್ಯಾ? ಕುಂಭಮೇಳದಲ್ಲಿ ಎಷ್ಟು ಜನ ಸತ್ತರು? ಬೆಂಕಿ ಹಚ್ಚೋ ಕೆಲಸ ಮಾಡಬಾರದು ಅಂತ ತಿಳಿವಳಿಕೆ ನೀಡಿದ್ದಾರೆ. ಇದನ್ನೂ ಓದಿ: Stampede Case | ಡಿಸಿ ನೇತೃತ್ವದ ತನಿಖೆ ಚುರುಕು – 25ಕ್ಕೂ ಹೆಚ್ಚು ಗಾಯಾಳುಗಳಿಗೆ ನೋಟಿಸ್, ಜೂ.11ಕ್ಕೆ ವಿಚಾರಣೆ

  • ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – KSCA ಕಾರ್ಯದರ್ಶಿ ಸೇರಿ ಇಬ್ಬರು ಪದಾಧಿಕಾರಿಗಳು ರಾಜೀನಾಮೆ

    ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – KSCA ಕಾರ್ಯದರ್ಶಿ ಸೇರಿ ಇಬ್ಬರು ಪದಾಧಿಕಾರಿಗಳು ರಾಜೀನಾಮೆ

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ (Chinnaswamy Stampede Case) ಸಂಬಂಧಿಸಿದಂತೆ ಇದೀಗ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ನ ಇಬ್ಬರು ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ.

    ಕೆಎಸ್‌ಸಿಎ ಕಾರ್ಯದರ್ಶಿ ಎ. ಶಂಕರ್‌, ಖಜಾಂಚಿ ಜೈರಾಮ್‌ ಶುಕ್ರವಾರ (ಜೂ.6) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಎ. ಶಂಕರ್‌ ಅವರೇ ಪ್ರಕಟಣೆ ಹೊರಡಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು ಕಾಲ್ತುಳಿತ ಕೇಸ್‌ – ಕೊಹ್ಲಿ ವಿರುದ್ಧ ದೂರು ದಾಖಲು

    ಕಾಲ್ತುಳಿತ ಪ್ರಕರಣ ಸಂಬಂಧ ಗುರುವಾರ ರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಅವರು, ತನಿಖೆಯನ್ನ ಸಿಐಡಿಗೆ ವಹಿಸಿರುವುದಾಗಿ ತಿಳಿಸಿದ್ದರು. ಅಲ್ಲದೇ ಕಾಲ್ತುಳಿತಕ್ಕೆ ಕಾರಣರಾದ ಆರ್‌ಸಿಬಿ ಆಡಳಿತ ಮಂಡಳಿ, ಡಿಎನ್‌ಎ ಇವೆಂಟ್‌ ಮ್ಯಾನೇಜ್ಮೆಂಟ್‌ ಸಂಸ್ಥೆ ಹಾಗೂ ಕೆಎಸ್‌ಸಿಎ ಪ್ರತಿನಿಧಿಗಳನ್ನು ಬಂಧಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಸಿಎಂ ಸೂಚನೆ ಬೆನ್ನಲ್ಲೇ ಶುಕ್ರವಾರ ಕೆಎಸ್‌ಸಿಎ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದರು. ಅಲ್ಲದೇ ಆರ್‌ಸಿಬಿ ಮ್ಯಾನೇಜ್‌ಮೆಂಟ್‌, ಡಿಎನ್‌ಎ ಇವೆಂಟ್‌ ಮ್ಯಾನೇಜ್ಮೆಂಟ್ ‌ಹಾಗೂ ಕೆಎಸ್‌ಸಿಎ ನಿಂದ ಒಟ್ಟು 6 ಮಂದಿಯನ್ನು ಬಂಧಿಸಿದ್ದರು. ಈ ಬೆನ್ನಲ್ಲೇ ಕೆಎಸ್‌ಸಿಎನಲ್ಲಿ ಇಬ್ಬರು ಪದಾಧಿಕಾರಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ಈಗ ನಾನು ಇದ್ದಿದ್ರೆ ಕೆ.ಎಲ್‌.ರಾಹುಲ್‌ನ ಆರ್‌ಸಿಬಿಗೆ ಖರೀದಿ ಮಾಡ್ತಿದ್ದೆ: ವಿಜಯ್‌ ಮಲ್ಯ

    Chinnaswamy Stampede

    ಏನಿದು ಪ್ರಕರಣ?
    ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಪಟ್ಟವನ್ನೇನೋ ಅಲಂಕರಿಸಿದೆ. ಆದರೆ, ಆರ್‌ಸಿಬಿ ಫ್ಯಾನ್ಸ್ ಐತಿಹಾಸಿಕ ಕ್ಷಣದ ಸಂಭ್ರಮದಲ್ಲಿ ದುರಂತ ಸಂಭವಿಸಿದೆ. 10ಕ್ಕೂ ಹೆಚ್ಚು ಅಭಿಮಾನಿಗಳು ಸಾವನ್ನಪ್ಪಿ ಸೂತಕವಾಗಿ ಆಗಿಬಿಟ್ಟಿದೆ. ಪಂಜಾಬ್ ವಿರುದ್ಧ ಬೆಂಗಳೂರು 6 ರನ್‌ಗಳ ಭರ್ಜರಿ ಜಯ ಸಾಧಿಸ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರಾತ್ರಿಯೇ ದೀಪಾವಳಿಯಂಥಹ ಸಂಭ್ರಮ ಇತ್ತು. ಇವತ್ತು ಇಡೀ ದಿನ ಹೆಚ್‌ಎಎಲ್ ಏರ್‌ಪೋರ್ಟ್ ರೋಡ್, ತಾಜ್ ವೆಸ್ಟ್ ಎಂಡ್ ಹೊಟೇಲ್ ರೋಡ್, ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ ಸುತ್ತ ಮುತ್ತ ರೆಡ್ ಆರ್ಮಿ ಎಲ್ಲಾ ಕಡೆ ಆರ್‌ಸಿಬಿ ತಂಡಕ್ಕೆ ತಮ್ಮ ಅಭಿಮಾನ ತೋರಿದರು. ಇದನ್ನೂ ಓದಿ: Stampede Case | ಸಿಎಂ ಸೂಚನೆ ಬೆನ್ನಲ್ಲೇ ನಾಲ್ವರು ಅರೆಸ್ಟ್‌, ಉಳಿದವರು ಎಸ್ಕೇಪ್‌

    ಇವತ್ತು ದಿಢೀರನೆ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರಿಂದ ಅಭಿಮಾನಿಗಳ ಸುನಾಮಿಯೇ ಸೃಷ್ಟಿ ಆಯ್ತು… ಉಚಿತ ಪ್ರವೇಶ ಆಗಿದ್ದರಿಂದ ಕ್ರೀಡಾಂಗಣಕ್ಕೆ ಫ್ಯಾನ್ಸ್ ಹರಿದುಬಂದಿತ್ತು. ಗೇಟ್ ನಂಬರ್ 18, 19, 20ರ ಬಳಿ ಅಭಿಮಾನಿ ಸಾಗರ ತಡೆಯಲು ಪೊಲೀಸರು ಹೈರಾಣಾಗಿ ಹೋದರು. ಒಂದು ಹಂತದಲ್ಲಿ ಲಾಠಿಯನ್ನೂ ಬೀಸಿದರು. ಕ್ಷಣ ಕ್ಷಣಕ್ಕೂ ಆರ್‌ಸಿಬಿ ಅಭಿಮಾನಿಗಳ ಸುನಾಮಿ ಹೆಚ್ಚುತ್ತಲೇ ಇತ್ತು. ಆದರೆ, ಗೇಟ್ ನಂ.12ರ ಬಳಿ ಗೇಟ್ ತೆಗೆಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲು ನಡೀತು. ಒಬ್ಬರ ಮೇಲೋಬ್ಬರು ಬಿದ್ದರು, ಉಸಿರಾಡೋಕೂ ಕೂಡ ಸಾಧ್ಯವಾಗಲಿಲ್ಲ. ತಕ್ಷಣವೇ ಹತ್ತಿರದ ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆ (ಮಲ್ಯ ರಸ್ತ್ರೆ), ಮಣಿಪಾಲ್‌ಗೆ ದಾಖಲಿಸಲಾಯಿತು. ಆದರೆ, ಬೌರಿಂಗ್ ಆಸ್ಪತ್ರೆಯಲ್ಲಿ 6, ವೈದೇಹಿ ಆಸ್ಪತ್ರೆಯಲ್ಲಿ 4 ಹಾಗೂ ಮಣಿಪಾಲ ಆಸ್ಪತ್ರೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರು.

  • Chinnaswamy Stampede – ಇಂದಿನಿಂದ ಸಿಐಡಿ ತನಿಖೆ ಆರಂಭ

    Chinnaswamy Stampede – ಇಂದಿನಿಂದ ಸಿಐಡಿ ತನಿಖೆ ಆರಂಭ

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಸಂಭವಿಸಿದ್ದ ಭೀಕರ ಕಾಲ್ತುಳಿತ ಪ್ರಕರಣದ ಸಿಐಡಿ (CID) ತನಿಖೆ ಇಂದು ಆರಂಭವಾಗಿದೆ. ಎಸ್‌ಪಿ ಶುಭನ್ವಿತಾ ನೇತೃತ್ವದಲ್ಲಿ ತನಿಖೆ ನಡೆಯಲಿದೆ.

    ಡಿವೈಎಸ್‌ಪಿ ಗೌತಮ್ ಹಾಗೂ ಪುರುಷೋತ್ತಮ್ ಅವರನ್ನು ತನಿಖಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಈಗಾಗಲೇ ಕೇಸ್ ಫೈಲನ್ನು ಕಬ್ಬನ್ ಪಾರ್ಕ್ ಪೊಲೀಸರು ಸಿಐಡಿಗೆ ವರ್ಗಾವಣೆ ಮಾಡಿದ್ದಾರೆ. ಇಂದು ಕಾಲ್ತುಳಿತ ಉಂಟಾದ ಸ್ಥಳಕ್ಕೆ ಸಿಐಡಿ ತಂಡ ಭೇಟಿ ನೀಡಲಿದೆ. ಇದನ್ನೂ ಓದಿ: Stampede Case | ಡಿಸಿ ನೇತೃತ್ವದ ತನಿಖೆ ಚುರುಕು – 25ಕ್ಕೂ ಹೆಚ್ಚು ಗಾಯಾಳುಗಳಿಗೆ ನೋಟಿಸ್, ಜೂ.11ಕ್ಕೆ ವಿಚಾರಣೆ

    ನೂಕು ನುಗ್ಗಲು ಉಂಟಾಗಿದ್ದ ಗೇಟ್ ನಂಬರ್ 7, 19,18, 16, 21ರ ಬಳಿ ಸಿಐಡಿ ತಂಡ ಪರಿಶೀಲನೆ ನಡೆಯಲಿದೆ. ಘಟನಾ ಸ್ಥಳ ಪರಿಶೀಲನೆ ಬಳಿಕ ಆರೋಪಿಗಳನ್ನ ಕಸ್ಟಡಿಗೆ ಪಡೆಯಲು ಸಿಐಡಿ ತಂಡ ತಯಾರಿ ನಡೆಸಲಿದೆ. ಬಹುತೇಕ ಸೋಮವಾರ ಬಾಡಿ ವಾರೆಂಟ್ ಮೇಲೆ ಬಂಧಿತ ನಾಲ್ವರು ಆರೋಪಿಗಳನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.

    ಶನಿವಾರ ಸರ್ಕಾರಿ ರಜೆ ಮತ್ತು ನಾಳೆ ಭಾನುವಾರವಾದ್ದರಿಂದ ನ್ಯಾಯಾಲಯಕ್ಕೆ ರಜೆ ಇದ್ದು, ಸೋಮವಾರ ಕಸ್ಟಡಿಗೆ ಪಡೆಯಲು ಸಿದ್ಧತೆ ನಡೆದಿದೆ.

    ಜೂ.4 ರಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆರ್‌ಸಿಬಿ (RCB) ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿದಲ್ಲಿ (Stampede) 11 ಜನ ಮೃತಪಟ್ಟಿದ್ದರು. ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾಗರೋಪಾದಿಯಲ್ಲಿ ಜನ ನೆರೆದಿದ್ದರು. ಜನರಲ್ಲಿ ನೂಕುನುಗ್ಗಲಿಂದ ಕಾಲ್ತುಳಿತ ಉಂಟಾಗಿ ದುರಂತ ಸಂಭವಿಸಿತ್ತು. ಈ ಘಟನೆ ಬೆನ್ನಲ್ಲೇ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಹೈಕೋರ್ಟ್‌ ಸುಮೋಟೋ ಕೇಸ್‌ ದಾಖಲಿಸಿಕೊಂಡಿತ್ತು. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಸಿಬ್ಬಂದಿಯಿಂದ ಅಭಿಮಾನಿಗಳ ಮೇಲೆ ಪೈಪ್‌ನಿಂದ ಹಲ್ಲೆ – ಬಹಳ ಭಯಾನಕವಾಗಿದೆ ಕಾಲ್ತುಳಿತದ ದೃಶ್ಯ

  • ಚಿನ್ನಸ್ವಾಮಿ ಸ್ಟೇಡಿಯಂ ಸಿಬ್ಬಂದಿಯಿಂದ ಅಭಿಮಾನಿಗಳ ಮೇಲೆ ಪೈಪ್‌ನಿಂದ ಹಲ್ಲೆ – ಬಹಳ ಭಯಾನಕವಾಗಿದೆ ಕಾಲ್ತುಳಿತದ ದೃಶ್ಯ

    ಚಿನ್ನಸ್ವಾಮಿ ಸ್ಟೇಡಿಯಂ ಸಿಬ್ಬಂದಿಯಿಂದ ಅಭಿಮಾನಿಗಳ ಮೇಲೆ ಪೈಪ್‌ನಿಂದ ಹಲ್ಲೆ – ಬಹಳ ಭಯಾನಕವಾಗಿದೆ ಕಾಲ್ತುಳಿತದ ದೃಶ್ಯ

    – ಸ್ಟೇಡಿಯಂ ಗೇಟ್ ನಂಬರ್ 19ರ ಬಳಿ ಅವತ್ತು ಆಗಿದ್ದೇನು?

    ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ಆಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನ ಗೇಟ್ ನಂಬರ್ 19ರ ಬಳಿ ಸ್ಟೇಡಿಯಂ ಸಿಬ್ಬಂದಿಯಿಂದ ಆರ್‌ಸಿಬಿ ಅಭಿಮಾನಿಗಳ ಮೇಲೆ ಪೈಪ್‌ನಿಂದ ಹಲ್ಲೆ ನಡೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಹಲ್ಲೆ ನಡೆದ ವೇಳೆ ಜನ ಅಲ್ಲಿಂದ ಪಾರಾಗಲು ಯತ್ನಿಸಿದ್ದು, ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಓರ್ವ ವ್ಯಕ್ತಿ ಬ್ಯಾರಿಕೇಡ್‌ಗೆ ಸಿಕ್ಕು ನರಳುತ್ತಿರುವುದು ಸಹ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಗಳನ್ನು ಗಮನಿಸಿದರೆ ಸ್ಟೇಡಿಯಂ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ತೋರುತ್ತಿದೆ. ಇದನ್ನೂ ಓದಿ: ಬೆಂಗ್ಳೂರು ಕಾಲ್ತುಳಿತ ಪ್ರಕರಣ – ನಾಲ್ವರಿಗೆ 14 ದಿನ ನ್ಯಾಯಾಂಗ ಬಂಧನ

    ಕಾಲ್ತುಳಿತಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಿರಾಟ್ ಕೊಹ್ಲಿ ವಿರುದ್ಧವೂ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್‌ ಕಮಿಷನರ್‌ ಸೇರಿದಂತೆ ಐವರು ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

    ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ ಬುಧವಾರ 11 ಅಭಿಮಾನಿಗಳು ದಾರುಣ ಸಾವನ್ನಪ್ಪಿದ್ದರು. ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾಗರೋಪಾದಿಯಲ್ಲಿ ಜನ ನೆರೆದಿದ್ದರು. ಜನರಲ್ಲಿ ನೂಕುನುಗ್ಗಲಿಂದ ಕಾಲ್ತುಳಿತ ಉಂಟಾಗಿ ದುರಂತ ಸಂಭವಿಸಿತ್ತು.

    ಇನ್ನೂ ಆರ್‌ಸಿಬಿಯ (RCB) ಮಾರ್ಕೆಟಿಂಗ್‌ ಮುಖ್ಯಸ್ಥ ನಿಖಿಲ್‌ ಸೋಸಲೆಯವರ (Nikhil Sosale) ಬಂಧನ ಆಗುತ್ತಿದ್ದಂತೆ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ಗೋವಿಂದರಾಜ್‌ (K.Govindaraj) ಅವರು ಬಿಟ್ಟು ಕಳಿಸುವಂತೆ ಪೊಲೀಸರಿಗೆ ಒತ್ತಡ ಹಾಕಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಗೋವಿಂದರಾಜ್‌ ಅವರನ್ನು ತಮ್ಮ‌ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಸಿಎಂ ತೆಗೆದು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಂಗ್ಳೂರು ಕಾಲ್ತುಳಿತ ಕೇಸ್‌ – ಕೊಹ್ಲಿ ವಿರುದ್ಧ ದೂರು ದಾಖಲು

  • Stampede Case | ಡಿಸಿ ನೇತೃತ್ವದ ತನಿಖೆ ಚುರುಕು – 25ಕ್ಕೂ ಹೆಚ್ಚು ಗಾಯಾಳುಗಳಿಗೆ ನೋಟಿಸ್, ಜೂ.11ಕ್ಕೆ ವಿಚಾರಣೆ

    Stampede Case | ಡಿಸಿ ನೇತೃತ್ವದ ತನಿಖೆ ಚುರುಕು – 25ಕ್ಕೂ ಹೆಚ್ಚು ಗಾಯಾಳುಗಳಿಗೆ ನೋಟಿಸ್, ಜೂ.11ಕ್ಕೆ ವಿಚಾರಣೆ

    ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಕಾಲ್ತುಳಿತಕ್ಕೆ (Stampede) 11 ಜನ ಸಾವನ್ನಪ್ಪಿದ್ದು ಇಡೀ ರಾಜ್ಯ ಮರುಗುತ್ತಿದೆ. ಸರ್ಕಾರ ಜಿಲ್ಲಾಧಿಕಾರಿಗಳ ನೇತೃತ್ವದ ತನಿಖೆಗೆ ಸೂಚಿಸಿದ್ದು, ಬೆಂಗಳೂರು ನಗರ ಜಿಲ್ಲಾಧಿಕಾರಿ ತನಿಖೆ ಶುರು ಮಾಡಿದ್ದಾರೆ.

    ಬೆಂಗಳೂರಿನ 4 ಆಸ್ಫತ್ರೆಗಳಿಂದ (Bengaluru Hospitals) ವಿವರಣೆ ಪಡೆದುಕೊಂಡಿದ್ದಾರೆ. ಬೌರಿಂಗ್, ಪೋರ್ಟಿಸ್, ಮಣಿಪಾಲ್ ಮತ್ತು ವೈದೇಹಿ ಆಸ್ಫತ್ರೆಗಳಲ್ಲಿ ಎಷ್ಟು ಗಾಯಾಳುಗಳು ಅಡ್ಮಿಟ್ ಆಗಿದ್ರು? ಎಷ್ಟು ಮಂದಿ ಡಿಸ್ಚಾರ್ಜ್ ಆದರು ಮತ್ತು ಎಷ್ಟು ಡೆತ್ ಆಗಿದೆ? ವಿಗೆ ಕಾರಣ ಏನು ಅಂತಾ ಮಾಹಿತಿ ಪಡೆದುಕೊಂಡಿದ್ದಾರೆ. 4 ಆಸ್ಪತ್ರೆಗಳಿಂದ ಸ್ಟೇಟ್ಮೆಂಟ್ ಪಡೆದಿರೋ ಬಗ್ಗೆ ʻಪಬ್ಲಿಕ್ ಟಿವಿʼಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು ಕಾಲ್ತುಳಿತ ಪ್ರಕರಣ – ನಾಲ್ವರಿಗೆ 14 ದಿನ ನ್ಯಾಯಾಂಗ ಬಂಧನ

    4 ಆಸ್ಫತ್ರೆಗಳಲ್ಲಿ ಮಾಹಿತಿ ಪಡೆಯುವುದಲ್ಲದೇ ಬೆಂಗಳೂರು ನಗರದ ಜಿಲ್ಲಾಧಿಕಾರಿ 25ಕ್ಕೂ ಹೆಚ್ಚು ಗಾಯಾಳುಗಳಿಗೆ ನೋಟಿಸ್ ನೀಡಿದ್ದಾರೆ. ಇದೇ ಜೂನ್ 11 ರಂದು ವಿಚಾರಣೆಗೆ ಹಾಜಾರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಇದುವರೆಗೂ 65 ಗಾಯಾಳುಗಳು ಚಿಕಿತ್ಸೆ ಪಡೆದು ಡಿಶ್ಚಾರ್ಜ್‌ ಆಗಿದ್ದಾರೆ. ಅದರಲ್ಲಿ ಐದು ಜನ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳಿಗೆ ನೋಟಿಸ್ ಜಾರಿ ಮಾಡಿದ್ದು, ಘಟನೆಗೆ ಕಾರಣ ಏನು? ಯಾವ ರೀತಿ ಸಮಸ್ಯೆ ಆಯ್ತು ಮತ್ತು ಯಾವ ರೀತಿ ಸಮಸ್ಯೆ ಆಗಿದೆ ಅಂತೆ ಮಾಹಿತಿ ಪಡೆಯಲಿದ್ದಾರೆ. ಇದನ್ನೂ ಓದಿ: ತ್ಯಾಗದ ಪ್ರತೀಕ ʻಬಕ್ರೀದ್‌ʼ

    ಒಟ್ಟಾರೆ 15 ದಿನಗಳ ಒಳಗೆ ತನಿಖಾ ವರದಿ ಸಲ್ಲಿಕೆ ಮಾಡಬೇಕಾಗಿದೆ. ಮೃತಪಟ್ಟವರ ಕುಟುಂಬಗಳು, ಗಾಯಾಳುಗಳಿಂದ ಮಾಹಿತಿ ಪಡೆದು. ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದ್ದು. ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಿಂದ 11 ಜನರ ಸಾವಿಗೆ ಏನು ಕಾರಣ ಅಂತಾ ಪತ್ತೆಯಾಗುತ್ತಾ ಕಾದು ನೋಡಬೇಕಿದೆ. ಇದನ್ನೂ ಓದಿ: ಈಗ ನಾನು ಇದ್ದಿದ್ರೆ ಕೆ.ಎಲ್‌.ರಾಹುಲ್‌ನ ಆರ್‌ಸಿಬಿಗೆ ಖರೀದಿ ಮಾಡ್ತಿದ್ದೆ: ವಿಜಯ್‌ ಮಲ್ಯ

  • ಈಗ ನಾನು ಇದ್ದಿದ್ರೆ ಕೆ.ಎಲ್‌.ರಾಹುಲ್‌ನ ಆರ್‌ಸಿಬಿಗೆ ಖರೀದಿ ಮಾಡ್ತಿದ್ದೆ: ವಿಜಯ್‌ ಮಲ್ಯ

    ಈಗ ನಾನು ಇದ್ದಿದ್ರೆ ಕೆ.ಎಲ್‌.ರಾಹುಲ್‌ನ ಆರ್‌ಸಿಬಿಗೆ ಖರೀದಿ ಮಾಡ್ತಿದ್ದೆ: ವಿಜಯ್‌ ಮಲ್ಯ

    ಮುಂಬೈ: ಈಗ ನಾನು ಏನಾದರೂ ಆರ್‌ಸಿಬಿ (RCB) ಫ್ರಾಂಚೈಸಿನಲ್ಲಿ ಇದ್ದಿದ್ದರೆ ಕನ್ನಡಿಗ ಕೆ.ಎಲ್‌.ರಾಹುಲ್‌ನನ್ನು (K.L.Rahul) ಬಿಡ್‌ ಮಾಡುತ್ತಿದ್ದೆ ಎಂದು ವಿಜಯ್‌ ಮಲ್ಯ (Vijay Mallya) ತಿಳಿಸಿದ್ದಾರೆ.

    18 ವರ್ಷಗಳ ಸುದೀರ್ಘ ಕಾಯುವಿಕೆ ನಂತರ ಆರ್‌ಸಿಬಿ ಐಪಿಎಲ್‌ ಟ್ರೋಫಿ ಗೆದ್ದಿದೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ಮಾಜಿ ಮಾಲೀಕ ವಿಜಯ್‌ ಮಲ್ಯ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ. 2008ರಲ್ಲಿ ಆರ್‌ಸಿಬಿ ತಂಡವನ್ನು ಸ್ಥಾಪಿಸಿದ ಕುರಿತು ಕುರಿತು ಹಲವು ಸ್ವಾರಸ್ಯಕರ ವಿಚಾರಗಳನ್ನು ಮಲ್ಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ‘ಎಣ್ಣೆ’ ಪ್ರಚಾರಕ್ಕಾಗಿ ಆರ್‌ಸಿಬಿ ಖರೀದಿಸಿದೆ: RCB ಬಗ್ಗೆ ವಿಜಯ್‌ ಮಲ್ಯ ಹೇಳಿದ್ದೇನು?

    ಆರ್‌ಸಿಬಿ ಫ್ರಾಂಚೈಸಿಯಲ್ಲಿ ಈಗ ಇದ್ದಿದ್ದರೆ ಹರಾಜಿನಲ್ಲಿ ಯಾವ ಆಟಗಾರರನ್ನು ಖರೀದಿಸುತ್ತಿದ್ದಿರಿ ಎಂಬ ಪ್ರಶ್ನೆಗೂ ಮಲ್ಯ ಉತ್ತರ ನೀಡಿದ್ದಾರೆ. ನಾಲ್ವರು ಆಟಗಾರರನ್ನು ಹೆಸರಿಸಿದ್ದಾರೆ. ಅವರು ದೇಶದ ಅತ್ಯುತ್ತಮ ಕ್ರಿಕೆಟಿಗರು ಎಂದು ಹೇಳಿಕೊಂಡಿದ್ದಾರೆ.

    ಕೆ.ಎಲ್‌.ರಾಹುಲ್‌, ಜಸ್ಪ್ರಿತ್‌ ಬುಮ್ರಾ, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌ ಈ ನಾಲ್ವರನ್ನು ನಾನು ಆಯ್ಕೆ ಆರ್‌ಸಿಬಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಈ ನಾಲ್ವರು ನನ್ನಲ್ಲಿದ್ದರೆ ನನಗೆ ಬೇರೆ ಯಾರೂ ಬೇಕಾಗಿಲ್ಲ. ಆಗ ಖಂಡಿತವಾಗಿಯೂ ಟ್ರೋಫಿ ಗೆಲ್ಲುತ್ತಿದ್ದೆ ಎಂದು ಮಲ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು ಕಾಲ್ತುಳಿತ ಕೇಸ್‌ – ಕೊಹ್ಲಿ ವಿರುದ್ಧ ದೂರು ದಾಖಲು

    ಆರ್‌ಸಿಬಿ ಒಂದು ಕಾಲದಲ್ಲಿ ಸ್ಥಳೀಯ ಹುಡುಗ ಕೆಎಲ್ ರಾಹುಲ್ ಅವರನ್ನು ತಮ್ಮ ಆಟಗಾರ ಎಂದು ಕರೆದರೆ, ಉಳಿದ ಮೂವರು ಆಟಗಾರರನ್ನು ತಮ್ಮ ಆಟಗಾರ ಎಂದು ಕರೆಯಲು ಅವರಿಗೆ ಎಂದಿಗೂ ಸಾಧ್ಯವಾಗಿಲ್ಲ. ಪಂತ್, ಯಾದವ್‌ ಮತ್ತು ಬುಮ್ರಾ ಎಲ್ಲರೂ 2024 ರಲ್ಲಿ ಭಾರತದ ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಮುಂಬರುವ ವರ್ಷಗಳಲ್ಲಿ ರಾಷ್ಟ್ರೀಯ ತಂಡದ ಬೆನ್ನೆಲುಬಾಗಿ ಕಾಣುತ್ತಾರೆ.

  • ‘ಎಣ್ಣೆ’ ಪ್ರಚಾರಕ್ಕಾಗಿ ಆರ್‌ಸಿಬಿ ಖರೀದಿಸಿದೆ: RCB ಬಗ್ಗೆ ವಿಜಯ್‌ ಮಲ್ಯ ಹೇಳಿದ್ದೇನು?

    ‘ಎಣ್ಣೆ’ ಪ್ರಚಾರಕ್ಕಾಗಿ ಆರ್‌ಸಿಬಿ ಖರೀದಿಸಿದೆ: RCB ಬಗ್ಗೆ ವಿಜಯ್‌ ಮಲ್ಯ ಹೇಳಿದ್ದೇನು?

    – ಅಂಡರ್‌-19ನಲ್ಲಿ ಆಡುತ್ತಿದ್ದ ಹುಡುಗ ಕೊಹ್ಲಿ ಬಿಡ್‌ ಮಾಡಿದ್ದನ್ನು ನೆನಪಿಸಿಕೊಂಡ ಮಲ್ಯ

    ಮುಂಬೈ: 18 ವರ್ಷಗಳ ಹೋರಾಟ, ಛಲ ಮತ್ತು ಪರಿಶ್ರಮದ ನಂತರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಅಂತಿಮವಾಗಿ ಐಪಿಎಲ್‌ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಹೊತ್ತಿನಲ್ಲೇ ಆರ್‌ಸಿಬಿ ಫ್ರಾಂಚೈಸಿ ಮೊದಲ ಮಾಲೀಕರಾಗಿದ್ದ ವಿಜಯ್‌ ಮಲ್ಯ ಸುದ್ದಿಯಲ್ಲಿದ್ದಾರೆ.

    ಐಪಿಎಲ್‌ ಆರಂಭವಾದ ಬಳಿಕ ಆರ್‌ಸಿಬಿ ಫ್ರಾಂಚೈಸಿ ಖರೀದಿಸಿದ ಬಗ್ಗೆ ತಲೆಮರೆಸಿಕೊಂಡಿರುವ ವಿಜಯ್‌ ಮಲ್ಯ ಪಾಡ್‌ಕಾಸ್ಟ್‌ನಲ್ಲಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ನಾನು ಮುಂಬೈ ಇಂಡಿಯನ್ಸ್ ಸೇರಿದಂತೆ ಒಟ್ಟು ಮೂರು ಫ್ರಾಂಚೈಸಿಗಳಿಗೆ ಬಿಡ್ ಮಾಡಿದ್ದೆ. ಮುಂಬೈ ತಂಡವನ್ನು ಮುಖೇಶ್ ಅಂಬಾನಿ ಖರೀದಿಸಿದರು. ಮುಂಬೈನಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಸೋತ ನಂತರ ಅಂತಿಮವಾಗಿ ಆರ್‌ಸಿಬಿಯನ್ನು 112 ಮಿಲಿಯನ್‌ ಯುಎಸ್‌ ಡಾಲರ್‌ಗೆ (ಇದು 2008 ರಲ್ಲಿ 600-700 ಕೋಟಿ ರೂ. ಮೌಲ್ಯ) ಖರೀದಿಸಿದೆ ಎಂದು ಮಲ್ಯ ತಿಳಿಸಿದ್ದಾರೆ.

    ಈ ಲೀಗ್‌ ಬಗ್ಗೆ ಲಲಿತ್‌ ಮೋದಿ ಹೇಳಿದಾಗ ನಾನು ತುಂಬಾ ಪ್ರಭಾವಿತನಾಗಿದ್ದೆ. ಅವರು ಒಂದು ದಿನ ನನಗೆ ಕರೆ ಮಾಡಿ, ತಂಡಗಳನ್ನು ಹರಾಜು ಮಾಡಲಾಗುವುದು ಎಂದು ಹೇಳಿದರು. ನೀವು ಯಾವುದನ್ನು ಖರೀದಿಸುತ್ತೀರಾ? ಎಂದರು. ಹಾಗಾಗಿ, ನಾನು ಮೂರು ಫ್ರಾಂಚೈಸಿಗಳಿಂದ ಬಿಡ್ ಮಾಡಿದೆ. ಮುಂಬೈಯನ್ನು ಬಹಳ ಕಡಿಮೆ ಮೊತ್ತದಿಂದ ಕಳೆದುಕೊಂಡೆ ಎಂದು ಹೇಳಿಕೊಂಡಿದ್ದಾರೆ.

    2008 ರಲ್ಲಿ ನಾನು ಆರ್‌ಸಿಬಿ ಫ್ರಾಂಚೈಸಿಯನ್ನು ಬಿಡ್ ಮಾಡಿದಾಗ, ಐಪಿಎಲ್ ಅನ್ನು ಭಾರತೀಯ ಕ್ರಿಕೆಟ್‌ಗೆ ಒಂದು ದಿಕ್ಕನ್ನೇ ಬದಲಾಯಿಸುವ ತಂಡವೆಂದು ನಾನು ನೋಡಿದೆ. ಬೆಂಗಳೂರಿನ ಉತ್ಸಾಹಭರಿತ, ಕ್ರಿಯಾತ್ಮಕ, ಆಕರ್ಷಕ ಮನೋಭಾವವನ್ನು ಸಾಕಾರಗೊಳಿಸುವ ತಂಡವನ್ನು ರಚಿಸುವುದು ನನ್ನ ಗುರಿಯಾಗಿತ್ತು. ಆರ್‌ಸಿಬಿ ಮೈದಾನದಲ್ಲಿ ಮಾತ್ರವಲ್ಲ, ಹೊರಗೂ ಶ್ರೇಷ್ಠತೆಯನ್ನು ಪ್ರತಿನಿಧಿಸುವ ಬ್ರ್ಯಾಂಡ್ ಆಗಬೇಕೆಂದು ನಾನು ಬಯಸಿದ್ದೆ. ಅದಕ್ಕಾಗಿಯೇ ನಾನು ನಮ್ಮ ಮದ್ಯದ ಬ್ರಾಂಡ್‌ಗಳಲ್ಲಿ ಒಂದಾದ ರಾಯಲ್‌ ಚಾಲೆಂಜ್‌ ಹೆಸರನ್ನೇ ಫ್ರಾಂಚೈಸಿಗೆ ಇಟ್ಟೆ ಎಂದು ಆರ್‌ಸಿಬಿ ಹೆಸರು ಹೇಗೆ ಬಂತು ಎಂಬುದನ್ನು ಮಲ್ಯ ವಿವರಿಸಿದ್ದಾರೆ.

    ಹರಾಜಿನಲ್ಲಿ ವಿರಾಟ್ ಕೊಹ್ಲಿಯನ್ನು ಖರೀದಿಸಿದ್ದನ್ನು ಕೂಡ ಮಲ್ಯ ನೆನಪಿಸಿಕೊಂಡಿದ್ದಾರೆ. ಕೊಹ್ಲಿಯನ್ನು ಅವರ ರಾಜ್ಯ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್ (ಆಗ ಡೆಲ್ಲಿ ಡೇರ್‌ಡೆವಿಲ್ಸ್) ಆಯ್ಕೆ ಮಾಡಿಕೊಳ್ಳುವ ನಿರೀಕ್ಷೆಯಿತ್ತು. ಆದರೆ, ಫ್ರಾಂಚೈಸಿ ಪ್ರದೀಪ್ ಸಾಂಗ್ವಾನ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿತು. ಇದರಿಂದಾಗಿ ಆರ್‌ಸಿಬಿಗೆ ಹದಿಹರೆಯದ ಪ್ರತಿಭೆಯನ್ನು ಸೇರಿಸಿಕೊಳ್ಳಲು ಸಾಧ್ಯವಾಯಿತು. ನಾನು ಆರ್‌ಸಿಬಿಯನ್ನು ಒಂದು ಶಕ್ತಿಶಾಲಿ ತಂಡವನ್ನಾಗಿ ಮಾಡಬಲ್ಲ ಆಟಗಾರರನ್ನು ಆಯ್ಕೆ ಮಾಡಿದೆ. ಅಂಡರ್-19 ವಿಶ್ವಕಪ್ ತಂಡದ ಯುವ ಆಟಗಾರ ವಿರಾಟ್ ಕೊಹ್ಲಿಯನ್ನು ಗುರುತಿಸಿದ್ದು ದೊಡ್ಡ ಹೆಮ್ಮೆ. ಕೊಹ್ಲಿ ವಿಶೇಷ ಎಂದು ನನ್ನ ಮನಸ್ಸು ಆಗಲೇ ಹೇಳಿತ್ತು. ನಾನು ಅವರನ್ನು ಆಯ್ಕೆ ಮಾಡಿದೆ. ರಾಹುಲ್ ದ್ರಾವಿಡ್ ಅವರನ್ನು ನಮ್ಮ ಐಕಾನ್ ಆಟಗಾರನನ್ನಾಗಿ ಪಡೆಯುವುದು ಯಾವುದೇ ತೊಂದರೆಯಾಗಲಿಲ್ಲ. ಅವರು ಬೆಂಗಳೂರಿನ ಹೆಮ್ಮೆ. ನಾವು ಜಾಕ್ವೆಸ್ ಕಾಲಿಸ್, ಅನಿಲ್ ಕುಂಬ್ಳೆ ಮತ್ತು ಜಹೀರ್ ಖಾನ್‌ರಂತಹ ಜಾಗತಿಕ ತಾರೆಗಳನ್ನು ಸಹ ಕರೆತಂದೆವು. ನನಗೆ ಸ್ಥಳೀಯ ನಾಯಕರು ಮತ್ತು ಅಂತರರಾಷ್ಟ್ರೀಯ ಪ್ರತಿಭೆಯ ಮಿಶ್ರಣ ಬೇಕಿತ್ತು. ಐಪಿಎಲ್ ಟ್ರೋಫಿಯನ್ನು ಬೆಂಗಳೂರಿಗೆ ತರುವುದು ನನ್ನ ಕನಸಾಗಿತ್ತು. ಆ ಗುರಿಯೊಂದಿಗೆ ನಾನು ತಂಡವನ್ನು ನಿರ್ಮಿಸಿದೆ ಎಂದು ತಿಳಿಸಿದ್ದಾರೆ.

    ಆಯ್ಕೆ ಪ್ರಕ್ರಿಯೆಗೆ ಸ್ವಲ್ಪ ಮೊದಲು, ಅವರು U-19 ವಿಶ್ವಕಪ್ ಆಡುತ್ತಿದ್ದರು. ನಾನು ಅವರ ಬಗ್ಗೆ ತುಂಬಾ ಪ್ರಭಾವಿತನಾಗಿದ್ದೆ. ಹಾಗಾಗಿ, ನಾನು ಅವರನ್ನು ಆಯ್ಕೆ ಮಾಡಿದೆ. 18 ವರ್ಷಗಳ ನಂತರವೂ ಕೊಹ್ಲಿ ಅದೇ ಟೀಂನಲ್ಲಿದ್ದಾರೆ. ನಾನು ಅವರನ್ನು ಖರೀದಿಸುವಾಗ ಸಣ್ಣ ವಯಸ್ಸಿನ ಹುಡುಗ ಕೊಹ್ಲಿ. ಆದರೆ, ಅವರೊಬ್ಬ ಪ್ರತಿಭಾವಂತ ಎಂಬುದು ನಿಮಗೆ ಗೊತ್ತಾಗಿದೆ. ಇದುವರೆಗಿನ ಶ್ರೇಷ್ಠ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ ಎಂದು ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ.