Tag: rcb

  • ಏನು ತಪ್ಪು ಮಾಡಿದ್ದಾರೆ ಅಂತ ಕ್ರಮ ಕೈಗೊಳ್ಳಬೇಕು: ಸತ್ಯವತಿಗೆ ಕ್ಲೀನ್‌ಚಿಟ್‌ ಕೊಟ್ಟ ಸಿಎಂ

    ಏನು ತಪ್ಪು ಮಾಡಿದ್ದಾರೆ ಅಂತ ಕ್ರಮ ಕೈಗೊಳ್ಳಬೇಕು: ಸತ್ಯವತಿಗೆ ಕ್ಲೀನ್‌ಚಿಟ್‌ ಕೊಟ್ಟ ಸಿಎಂ

    ಮೈಸೂರು: ವಿಧಾನ ಸೌಧದಲ್ಲಿ (Vidhana Soudha) ಏನಾಗಿದೆ? ಸತ್ಯವತಿ ಏನ್ ಮಾಡಿದ್ದಾರೆ? ಏನು ತಪ್ಪಾಗಿದೆ ಎಂದು ಕ್ರಮ ಕೈಗೊಳ್ಳಬೇಕು ಎಂದು ಪ್ರಶ್ನಿಸುವ ಮೂಲಕ ಸಿಎಂ ಸಿದ್ದರಾಮಯ್ಯ (CM Siddaramaiah) ಸತ್ಯವತಿಗೆ ಕ್ಲೀನ್‌ಚಿಟ್‌ ನೀಡಿದ್ದಾರೆ.

    ವಿಧಾನಸೌಧದಲ್ಲಿ (Vidhana Soudha) ಆರ್‌ಸಿಬಿ ವಿಜಯೋತ್ಸವ ಆಚರಣೆಗೆ ಅವಕಾಶ ನೀಡಿದರೆ ಬಂದೋಬಸ್ತ್‌ಗೆ ಸಮಸ್ಯೆಯಾಗುತ್ತದೆ ಎಂದು ವಿಧಾನಸೌಧದ ಡಿಸಿಪಿ ಕರಿಬಸವನಗೌಡ ಅವರು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ (DPAR) ಕಾರ್ಯದರ್ಶಿ ಸತ್ಯವತಿ (Sathyavathi ) ಅವರಿಗೆ ಬರೆದ ಪತ್ರ ಇಂದು ಬಹಿರಂಗವಾಗಿತ್ತು.

    ಈ ಪತ್ರ ಬಹಿರಂಗವಾದ ಬೆನ್ನಲ್ಲೇ ಮಾಧ್ಯಮಗಳು ಇಂದು ಸಂಜೆ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯನವರಿಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದವು. ಇದನ್ನೂ ಓದಿ: ಪರಿಷತ್‌ಗೆ ಶಿಫಾರಸ್ಸಾಗಿದ್ದ 4 ಹೆಸರುಗಳಿಗೆ ಕೊನೆ ಕ್ಷಣದಲ್ಲಿ ಹೈಕಮಾಂಡ್‌ ಬ್ರೇಕ್‌!

    ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ ಸಿಎಂ, ಪೊಲೀಸರ ಪತ್ರಕ್ಕೆ ಸತ್ಯವತಿ ಏನು ಉತ್ತರ ನೀಡಿದ್ದಾಳೆ ಎನ್ನುವುದು ನಿಮಗೆ ಗೊತ್ತಾ ಎಂದು ಮರು ಪ್ರಶ್ನೆ ಹಾಕಿದರು. ಇದನ್ನೂ ಓದಿ: ಪೊಲೀಸರದ್ದೇ ತಪ್ಪು, ಸರ್ಕಾರಕ್ಕೆ ಯಾಕೆ ಮುಜುಗರ ಆಗ್ಬೇಕು: ಸಿದ್ದರಾಮಯ್ಯ ಪ್ರಶ್ನೆ

    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (chinnaswamy Stadium) ನಡೆದ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಇರಲಿಲ್ಲ. ವಿಧಾನಸೌಧದ ಕಾರ್ಯಕ್ರಮವನ್ನು ಸರ್ಕಾರ ಆಯೋಜನೆ ಮಾಡಿಲ್ಲ. ಕರ್ನಾಟಕ ರಾಜ್ಯ ಕ್ರಿಕೆಟ್‌ ಮಂಡಳಿ ಈ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಸತ್ಯವತಿಯವರು ನನ್ನ ಬಳಿ ಈ ಕಾರ್ಯಕ್ರಮದ ಬಗ್ಗೆ ಕೇಳಿದರು. ನಾನು ಅನುಮತಿ ನೀಡಿ ಎಂದು ಹೇಳಿದ್ದೇನೆ. ವಿಧಾನಸೌಧದಲ್ಲಿ ಏನಾದರೂ ಘಟನೆ ಆಗಿದ್ಯಾ? ಸತ್ಯವತಿ ಏನು ತಪ್ಪು ಮಾಡಿದ್ದಾರೆ ಎಂದು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಪ್ರಶ್ನಿಸಿದರು.

     

    ಸರ್ಕಾರದ ಮುಖ್ಯ ಕಾರ್ಯದರ್ಶಿ ಕರೆದಿದ್ದರು ನಾನು ಹೋಗಿದ್ದೆ. ವಿಧಾನಸೌಧದ ಕಾರ್ಯಕ್ರಮಕ್ಕೆ ರಾಜ್ಯಪಾಲರು ಆಗಮಿಸಿದ್ದರು. ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ. ವಿಧಾನಸೌಧದಲ್ಲಿ ಯಾವುದೇ ಘಟನೆ ನಡೆದಿಲ್ಲ ಅಷ್ಟೇ. ಕುಂಭ ಮೇಳದಲ್ಲಿ ಕಾಲ್ತುಳಿತ ನಡೆದಾಗ ಯಾರಾದರೂ ರಾಜೀನಾಮೆ ನೀಡಿದ್ರಾ ಎಂದು ಮರು ಪ್ರಶ್ನೆ ಹಾಕಿದರು.

    ಬಿಜೆಪಿಯವರು ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದರು. ಸರ್ಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ. ಬಿಜೆಪಿಯವರು ರಾಜಕೀಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರೇ ವಿಕ್ಟರಿ ಯಾತ್ರೆಗೆ ಅನುಮತಿ ನೀಡಿಲ್ಲ ಯಾಕೆ ಎಂದು ಪೋಸ್ಟ್‌ ಹಾಕಿ ಈಗ ನಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.

  • ಪೊಲೀಸರದ್ದೇ ತಪ್ಪು, ಸರ್ಕಾರಕ್ಕೆ ಯಾಕೆ ಮುಜುಗರ ಆಗ್ಬೇಕು: ಸಿದ್ದರಾಮಯ್ಯ ಪ್ರಶ್ನೆ

    ಪೊಲೀಸರದ್ದೇ ತಪ್ಪು, ಸರ್ಕಾರಕ್ಕೆ ಯಾಕೆ ಮುಜುಗರ ಆಗ್ಬೇಕು: ಸಿದ್ದರಾಮಯ್ಯ ಪ್ರಶ್ನೆ

    ಮೈಸೂರು: ಸರ್ಕಾರ ತಪ್ಪೇ ಮಾಡಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪೊಲೀಸರು ತಪ್ಪು ಮಾಡಿದ್ದಾರೆ. ಸರ್ಕಾರಕ್ಕೆ ಯಾಕೆ ಮುಜುಗರ ಆಗಬೇಕು ಎಂದು ಪ್ರಶ್ನಿಸುವ ಮೂಲಕ ಸಿದ್ದರಾಮಯ್ಯ (CM Siddaramaiah) ತಿರುಗೇಟು ನೀಡಿದ್ದಾರೆ.

    ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿದ್ದರಾಮಯ್ಯನವರಿಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ (Chinnaswamy Stampede Case) ಸಂಬಂಧಿಸಿದಂತೆ ಮಾಧ್ಯಮಗಳು ಹಲವು ಪ್ರಶ್ನೆಗಳನ್ನು ಕೇಳಿದವು.

     

    ಈ ವೇಳೆ ಮಾತನಾಡಿದ ಸಿಎಂ, ಕಾಲ್ತುಳಿತ ಪ್ರಕರಣದದಲ್ಲಿ ಪೊಲೀಸರಿಂದಲೇ ತಪ್ಪು ನಡೆದಿದೆ. ನನಗೆ ಬಂದೋಬಸ್ತ್ ಮಾಡಿದ್ದೇವೆ ಎಂದು ತಿಳಿಸಬೇಕಾದವರು ಯಾರು? ನಗರ ಪೊಲೀಸ್‌ ಆಯುಕ್ತರು ಸರ್ಕಾರಕ್ಕೆ ಏನಾದ್ರೂ ತಿಳಿಸಬೇಕಲ್ವಾ? ಸರ್ಕಾರದ ಮುಖ್ಯ ಕಾರ್ಯದರ್ಶಿಗಾದ್ರೂ ತಿಳಿಸಬೇಕಲ್ವಾ? ಗೃಹ ಸಚಿವರಿಗೂ ಗೊತ್ತಿಲ್ಲ. ನನಗೂ ತಿಳಿಸಿಲ್ಲ. ಈ ದುರಂತದಲ್ಲಿ ಪೊಲೀಸರೇ ತಪ್ಪಿತಸ್ಥರು ಎಂದು ಹೇಳಿದರು.

    ಸಂಜೆ 3:50ಕ್ಕೆ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಆದರೆ ನನಗೆ ಗೊತ್ತಾಗಿದ್ದು ಸಂಜೆ 5:45ಕ್ಕೆ. ಅಲ್ಲಿಯವರೆಗೆ ನನಗೆ ಏನು ನಡೆದಿದೆ ಎನ್ನುವುದೇ ಗೊತ್ತಾಗಿಲ್ಲ. ಇಲ್ಲಿ ಯಾರು ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕ್ರಮ ತಗೆದುಕೊಂಡಿದ್ದೇವೆ. ವಿಧಾನ ಸೌಧದಲ್ಲಿ ಯಾವುದೇ ದುರಂತ ಸಂಭವಿಸಿಲ್ಲ. ಸ್ಟೇಡಿಯಂನಲ್ಲಿ ನಡೆದ ದುರಂತಕ್ಕೆ ಬೆಂಗಳೂರು ನಗರ ಪೊಲೀಸರನ್ನು ಮಾತ್ರ ಅಲ್ಲ, ಡಿಸಿಪಿ, ಎಸಿಪಿ, ಪೊಲೀಸ್‌ ಇನ್ಸ್‌ಪೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರು.

    ಅಧಿಕಾರಿಗಳ ತಪ್ಪಿನಿಂದ ಈ ಘಟನೆ ನಡೆದಿದೆ. ವೈಯಕ್ತಿಕವಾಗಿ ನನಗೆ ಇಡೀ ಸರಕಾರಕ್ಕೆ ಈ ಘಟನೆಯಿಂದ ನೋವಾಗಿದೆ. ನನ್ನ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಅವರನ್ನು ತೆಗೆದು ಹಾಕಿದ್ದೇವೆ. ತಪ್ಪು ಮಾಡಿದ್ದರೆ ಕಪ್ಪು ಚುಕ್ಕೆ ಬರುತ್ತಿತ್ತು. ನಾವು ತಪ್ಪೇ ಮಾಡೇ ಇಲ್ಲ. ಹೀಗಾಗಿ ನಮಗೆ ಯಾವುದೇ ಕಪ್ಪುಚುಕ್ಕೆ ಇಲ್ಲ ಎಂದರು.

  • ಕಾಲ್ತುಳಿತ ಪ್ರಕರಣದಲ್ಲಿ ಕೊಹ್ಲಿ ವಿರುದ್ಧ ಮಾತನಾಡುವುದು ಮೂರ್ಖತನ: ಸುಮಲತಾ ಬೇಸರ

    ಕಾಲ್ತುಳಿತ ಪ್ರಕರಣದಲ್ಲಿ ಕೊಹ್ಲಿ ವಿರುದ್ಧ ಮಾತನಾಡುವುದು ಮೂರ್ಖತನ: ಸುಮಲತಾ ಬೇಸರ

    – ಸರ್ಕಾರದ ನಿರ್ಲಕ್ಷ್ಯದಿಂದ 11 ಅಮಾಯಕರು ಬಲಿಯಾಗಿದ್ದಾರೆ ಎಂದ ಮಾಜಿ ಸಂಸದೆ

    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭೀಕರ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟಿರುವುದಕ್ಕೆ ಆರ್‌ಸಿಬಿಯ (RCB) ವಿರಾಟ್‌ ಕೊಹ್ಲಿ (Virat Kohli) ವಿರುದ್ಧ ಮಾತನಾಡುವವರನ್ನು ಮಾಜಿ ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ತರಾಟೆಗೆ ತೆಗೆದುಕೊಂಡಿದ್ದಾರೆ.

    ಕಾಲ್ತುಳಿತ ಪ್ರಕರಣ (Bengaluru Stampede) ಬಗ್ಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸುಮಲತಾ ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ. ಶಕ್ತಿ ಸರವಣನ್ ಅವರ ಫೇಸ್‌ಬುಕ್‌ನಲ್ಲಿನ ಪೋಸ್ಟ್‌ ಅನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ | ಕತ್ತು, ಬೆನ್ನು ತುಳ್ಕೊಂಡು ಹೋಗ್ತಿದ್ರು, ಉಸಿರಾಡೋಕೂ ಆಗ್ತಿರಲಿಲ್ಲ – ಗಾಯಾಳು ಪ್ರಶಾಂತ್

    ಒಂದು ದುರಂತ ಘಟನೆಯನ್ನು ಬಳಸಿಕೊಂಡು ವಿರಾಟ್ ಕೊಹ್ಲಿ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಲು ಪ್ರಯತ್ನಿಸುತ್ತಿರುವ ಎಲ್ಲಾ ಮೂರ್ಖರಿಗೆ ಎಂದು ಸಂಸದೆ ಕಟುವಾದ ಸಂದೇಶ ರವಾನಿಸಿದ್ದಾರೆ.

    ಕೊಹ್ಲಿಯನ್ನು ಟೀಕಿಸುವ ಮೊದಲು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ. ಸಾರ್ವಜನಿಕ ಸುರಕ್ಷತೆಯ ಏಕೈಕ ಜವಾಬ್ದಾರಿ ರಾಜ್ಯ ಸರ್ಕಾರ ಮತ್ತು ಆಡಳಿತದ ಮೇಲಿದೆ. ಪರಿಸ್ಥಿತಿ ನಿಭಾಯಿಸುವಲ್ಲಿ ಅವರು ವಿಫಲರಾಗಿದ್ದಾರೆ. ಈ ದುರಂತಕ್ಕೆ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಬದಲಾಗಿ ಅವರ ಅಪರಾಧವನ್ನು ಮರೆಮಾಚುವ ಪ್ರಯತ್ನದಲ್ಲಿ ಬೇರೆಯವರನ್ನು ಬಲಿಪಶುಗಳನ್ನಾಗಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿಯೇ 11 ಅಮಾಯಕರ ಜೀವಗಳು ಬಲಿಯಾಗಿವೆ. ಮೃತರಿಗೆ ನ್ಯಾಯ ಸಿಗಬೇಕಾದರೆ, ತಪ್ಪಿತಸ್ಥರನ್ನು ವಿಚಾರಣೆಗೆ ಒಳಪಡಿಸಬೇಕು. ಇದಕ್ಕಾಗಿ ಕಠಿಣ ಶಿಕ್ಷೆ ವಿಧಿಸಬೇಕು.
    ಒಂದು ತಂಡ ಅಥವಾ ಆಟಗಾರರ ಮೇಲೆ ಆರೋಪ ಹೊರಿಸುವುದು ನಿಮ್ಮ ಅಜ್ಞಾನ ಅಥವಾ ಸಣ್ಣತನವನ್ನು ತೋರಿಸುತ್ತದೆ ಎಂದು ಸಂಸದೆ ತಿಳಿಸಿದ್ದಾರೆ. ಇದನ್ನೂ ಓದಿ: ಗೋವಿಂದರಾಜ್‌ ಎಸಗಿದ ತಪ್ಪನ್ನು ಜನರ ಮುಂದೆ ಹೇಳಿ – ಗಾಢ ಮೌನಕ್ಕೆ ಜಾರಿದ್ದು ಯಾಕೆ: ಸಿಎಂಗೆ ಸುನಿಲ್‌ ಕುಮಾರ್‌ ಪ್ರಶ್ನೆ

    ಶಕ್ತಿ ಸರವಣನ್‌ ಪೋಸ್ಟ್‌ನಲ್ಲಿ ಏನಿತ್ತು?
    ವಿರಾಟ್ ಕೊಹ್ಲಿ ವಿರುದ್ಧ ಅಭಿಯಾನ ನಡೆಯುತ್ತಿರುವುದು ಸರಿಯಲ್ಲ. ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ದುರಂತ ಕಾಲ್ತುಳಿತ ಘಟನೆಗೆ ವಿರಾಟ್ ಕೊಹ್ಲಿಯನ್ನು ಹೊಣೆಗಾರನನ್ನಾಗಿಸಿ, ದ್ವೇಷ ಹರಡುತ್ತಿರುವುದನ್ನು ನೋಡಿ ನನಗೆ ಬೇಸರವಾಗಿದೆ. ಕೊಹ್ಲಿ ಜನಸಮೂಹವನ್ನು ಸಂಘಟಿಸಲಿಲ್ಲ, ಅವರು ಲಾಜಿಸ್ಟಿಕ್ಸ್ ಅನ್ನು ನಿಯಂತ್ರಿಸಲಿಲ್ಲ, ಖಂಡಿತವಾಗಿಯೂ ಯಾವುದೇ ಹಾನಿ ಸಂಭವಿಸುವ ಉದ್ದೇಶವನ್ನು ಹೊಂದಿರಲಿಲ್ಲ. ವರ್ಷಗಳಿಂದಲೂ ಆರ್‌ಸಿಬಿ ಪರ ಇರುವ ಅಭಿಮಾನಿಗಳ ಸಂಭ್ರಮ ನೋಡಲು ಕೊಹ್ಲಿ ಅಲ್ಲಿದ್ದರು. ದುರಂತಕ್ಕೆ ಕೊಹ್ಲಿಯನ್ನು ದೂಷಿಸುವುದು ತಪ್ಪು ಭಾವನೆ. ಅದು ವ್ಯವಸ್ಥೆಯ ವೈಫಲ್ಯ. ಜನಸಂದಣಿ ನಿರ್ವಹಣೆ ವೈಫಲ್ಯ, ಅಸಮರ್ಪಕ ಸುರಕ್ಷತಾ ಯೋಜನೆ ಮತ್ತು ಅಧಿಕಾರಿಗಳಿಂದ ನಿರೀಕ್ಷೆಯ ಕೊರತೆ ಇತ್ತು. ಈ ಹೊತ್ತಲ್ಲಿ, ರಾಷ್ಟ್ರಕ್ಕೆ ಹೆಮ್ಮೆ ಮತ್ತು ಸ್ಫೂರ್ತಿ ನೀಡಿದ ವ್ಯಕ್ತಿಯ ಕಡೆಗೆ ಬೆರಳು ತೋರಿಸುವುದು ಅನ್ಯಾಯ. ತನ್ನ ಅಭಿಮಾನಿಗಳಿಗೆ ಮಾತ್ರ ಪ್ರತಿಫಲ ನೀಡಲು ಬಯಸುವ ಆಟಗಾರನನ್ನು ಟಾರ್ಗೆಟ್‌ ಮಾಡಬಾರದು. ಇದು ಆತ್ಮಾವಲೋಕನಕ್ಕೆ ಸಮಯ, ಆರೋಪಕ್ಕಲ್ಲ. ನಾವು ಉತ್ತಮರಾಗೋಣ. ಮನುಷ್ಯರಾಗೋಣ ಎಂದು ಸಿನಿಮಾಟೋಗ್ರಾಫರ್‌ ಶಕ್ತಿ ಸರವಣನ್‌ ಪೋಸ್ಟ್‌ ಹಂಚಿಕೊಂಡಿದ್ದರು.

  • ಮೊದಲ ನಿಧನದ ಬಳಿಕವೂ ಕಾರ್ಯಕ್ರಮ ಮಾಡಿದ್ದಾರೆ, ಸಿಎಂ, ಡಿಸಿಎಂಗೆ ನಾಚಿಕೆ ಆಗೋದಿಲ್ವಾ? – ಜೋಶಿ ಕಿಡಿ

    ಮೊದಲ ನಿಧನದ ಬಳಿಕವೂ ಕಾರ್ಯಕ್ರಮ ಮಾಡಿದ್ದಾರೆ, ಸಿಎಂ, ಡಿಸಿಎಂಗೆ ನಾಚಿಕೆ ಆಗೋದಿಲ್ವಾ? – ಜೋಶಿ ಕಿಡಿ

    -ತಮ್ಮ ಮೇಲಿನ ಆರೋಪ ತಳ್ಳಿಹಾಕಲು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ ಎಂದ ಕೇಂದ್ರ ಸಚಿವ

    ಧಾರವಾಡ: ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಮೊದಲ ನಿಧನದ ಬಳಿಕವೂ ಕಾರ್ಯಕ್ರಮ ಮಾಡಿದ್ದಾರೆ. ಸಿಎಂ, ಡಿಸಿಎಂಗೆ ನಾಚಿಕೆ ಆಗೋದಿಲ್ವಾ? ಈ ಪ್ರಕರಣದಲ್ಲಿ ಸರ್ಕಾರದ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಕಿಡಿಕಾರಿದ್ದಾರೆ.

    ಜಿಲ್ಲೆಯಲ್ಲಿ ಮಾತನಾಡಿದ ಅವರು, ಆರ್‌ಸಿಬಿ (RCB) ವಿಜಯೋತ್ಸವಕ್ಕೂ ಮೊದಲೇ ಪೊಲೀಸ್ ಆಯುಕ್ತ ಬಿ.ದಯಾನಂದ್ (B Dayanand) ಅವರು ಒಂದೇ ದಿನದಲ್ಲಿ ಭದ್ರತೆ ವ್ಯವಸ್ಥೆ ಆಗುವುದಿಲ್ಲ ಎಂದು ಅನುಮತಿ ನಿರಾಕರಿಸಿದ್ದರು. ಹಿಂದಿನ ದಿನ ರಾತ್ರಿ ಆರ್‌ಸಿಬಿ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಕುಣಿದು ಕುಪ್ಪಳಿಸಿದ್ದರು. ಪೊಲೀಸರಿಗೆ ಅದನ್ನು ನಿರ್ವಹಿಸುವುದೇ ಕಷ್ಟವಾಗಿತ್ತು. ಅವರು ಬೆಳಗ್ಗೆ ಅದರ ಬ್ರೀಫಿಂಗ್‌ಗೂ ಹೋಗಿರಲಿಲ್ಲ. ಪೆಂಡಾಲ್ ಹಾಕುವುದನ್ನು ನೋಡಿಯೇ ಭದ್ರತೆ ಒದಗಿಸುವುದು ಕಷ್ಟವಾಗುತ್ತದೆ ಎಂದು ಸಿಎಂಗೆ ತಿಳಿಸಿದ್ದರು ಎಂದು ಹೇಳಿದರು.ಇದನ್ನೂ ಓದಿ: ಬಿಎಂಟಿಸಿ ಬಸ್ಸು ಡಿಕ್ಕಿ- ದ್ವಿಚಕ್ರ ವಾಹನ ಸವಾರ ಸಾವು

    ಇನ್ನೂ ವಿಜಯೋತ್ಸವಕ್ಕೆ ಅನುಮತಿ ಕೊಡುವ ವಿಚಾರವಾಗಿ ಸಿಎಂ ಹಾಗೂ ಡಿಸಿಎಂ ಮಧ್ಯೆಯೇ ಪೈಪೋಟಿ ಇತ್ತು. ಹೀಗಾಗಿ ಅನುಮತಿ ಇಲ್ಲದೇ ಕಾರ್ಯಕ್ರಮ ಮಾಡಲಾಗಿದೆ. ತಮ್ಮ ಮೇಲಿನ ಆರೋಪ ತಳ್ಳಿ ಹಾಕಲು ಅಧಿಕಾರಿಗಳ ಅಮಾನತು ಮಾಡಿದ್ದಾರೆ. ಇದೊಂದು ತಪ್ಪಿಸಿಕೊಳ್ಳುವ ತಂತ್ರ. ಇದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದರು.

    ಸಿಎಂ ಕಾರ್ಯದರ್ಶಿ ಗೋವಿಂದರಾಜ್ ಅವರನ್ನು ತೆಗೆದಿದ್ದು ಯಾಕೆ? ಅವರು ಏನಾದರೂ ತಪ್ಪು ಮಾಡಿರಬೇಕಲ್ಲ? ಅವರ ಮೇಲೆ ಎಫ್‌ಐಆರ್ ಯಾಕೆ ಆಗಿಲ್ಲ? ಕೆಲವರನ್ನು ಅಮಾನತು ಮಾಡಿ, ಜನರು ಈ ಕೇಸ್ ಮರೆಯಬೇಕೆಂದು ಹೀಗೆ ಮಾಡುತ್ತಿದ್ದಾರೆ. ವಿಧಾನಸೌಧದಲ್ಲಿ ಈ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟಿದ್ದು ಯಾರು? ಇನ್ನೂ ಸಿಎಂ, ಸಚಿವರ ಮಕ್ಕಳು ವಿಧಾನಸೌಧದ ಎದುರು ಸೆಲ್ಫಿ ತೆಗೆದುಕೊಂಡರು. ನೂರಾರು ಜನ ವೇದಿಕೆಯಲ್ಲಿದ್ದರು. ಸಿಎಂ ಹುದ್ದೆ ಬಗ್ಗೆ ನಮಗೆ ಗೌರವವಿದೆ. ಅವರು ನಮ್ಮ ರಾಜ್ಯದ ನಾಯಕರು, ಸಿಎಂ ಇರುವ ವೇದಿಕೆಯಲ್ಲಿ ಹೀಗೆಲ್ಲ ಮಾಡಿದ್ದು ಎಷ್ಟು ಸರಿ? ಇದಕ್ಕೆ ಯಾರು ಹೊಣೆ? ಕಾಲ್ತುಳಿತದ ಬಳಿಕ ಮಧ್ಯಾಹ್ನ 3:10ಕ್ಕೆ ಬೌರಿಂಗ್ ಆಸ್ಪತ್ರೆಯಲ್ಲಿ ಮೊದಲ ನಿಧನ ಆಯಿತು. ಅದಾದ ಬಳಿಕವೂ ಕಾರ್ಯಕ್ರಮ ಮಾಡಿದ್ದಾರೆ. ಸಿಎಂ, ಡಿಸಿಎಂಗೆ ನಾಚಿಕೆ ಆಗೋದಿಲ್ವಾ? ಇದಕ್ಕೆಲ್ಲ ಕೋರ್ಟ್ ಕಠಿಣ ಕ್ರಮ ಕೈಗೊಳ್ಳಲಿದೆ. ಇವರು ಸರ್ಕಾರದಲ್ಲಿ ಮುಂದುವರೆಯೋಕೆ ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: ವರದಕ್ಷಿಣೆ ದುರಾಸೆಗೆ 2ನೇ ಮದುವೆಗೆ ರೆಡಿಯಾಗಿದ್ದ ವ್ಯಕ್ತಿಗೆ ಪತ್ನಿಯಿಂದ ಚಪ್ಪಲಿ ಏಟು

  • ಚಿನ್ನಸ್ವಾಮಿ ಕಾಲ್ತುಳಿತ | ಕತ್ತು, ಬೆನ್ನು ತುಳ್ಕೊಂಡು ಹೋಗ್ತಿದ್ರು, ಉಸಿರಾಡೋಕೂ ಆಗ್ತಿರಲಿಲ್ಲ – ಗಾಯಾಳು ಪ್ರಶಾಂತ್

    ಚಿನ್ನಸ್ವಾಮಿ ಕಾಲ್ತುಳಿತ | ಕತ್ತು, ಬೆನ್ನು ತುಳ್ಕೊಂಡು ಹೋಗ್ತಿದ್ರು, ಉಸಿರಾಡೋಕೂ ಆಗ್ತಿರಲಿಲ್ಲ – ಗಾಯಾಳು ಪ್ರಶಾಂತ್

    – ಕಾಲ್ತುಳಿತದಲ್ಲಿ ನರಕಯಾತನೆಯ ಅನುಭವ ಬಿಚ್ಚಿಟ್ಟ ಪ್ರಶಾಂತ್

    ಬೆಂಗಳೂರು: ಕಾಲ್ತುಳಿತದ (Chinnaswamy Stampede) ವೇಳೆ ಕತ್ತು, ಬೆನ್ನು ತುಳಿದುಕೊಂಡು ಹೋಗುತ್ತಿದ್ದರು. ಉಸಿರಾಡೋಕೆ ತುಂಬಾ ಕಷ್ಟ ಆಗ್ತಿತ್ತು ಎಂದು ಗಾಯಾಳು ಪ್ರಶಾಂತ್ ತಮ್ಮ ನೋವನ್ನು ಬಿಚ್ಚಿಟ್ಟಿದ್ದಾರೆ.

    `ಪಬ್ಲಿಕ್ ಟಿವಿ’ (PUBLiC TV) ಜೊತೆ ಮಾತನಾಡಿದ ಅವರು, ನಾನು ನನ್ನ ತಾಯಿ ಜೊತೆ ಕೋರ್ಟ್ ಕೆಲಸಕ್ಕೆಂದು ಹೋಗಿದ್ದೆ, ಆ ವೇಳೆ ಅಲ್ಲಿ ತುಂಬಾ ಜನ ಸೇರಿದ್ದರು. ಹೀಗಾಗಿ ನಾನು ನನ್ನ ತಾಯಿಯನ್ನು ಮನೆಗೆ ಕಳುಹಿಸಿದೆ. ಜನರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು, ನಾನಿರುವ ಜಾಗದಲ್ಲಿಯೇ ಇಬ್ಬರು ಸಾವನ್ನಪ್ಪಿದರು. ನಾನು ನಮ್ಮ ಮನೆಯವರಿಗೆ ಕಾಲ್ ಮಾಡಿ, ನಂಗೆ ಬರೋಕೆ ಆಗಲ್ಲ ಕ್ಷಮಿಸಿ ಬಿಡಿ ಎಂದು ಹೇಳಿದೆ.ಇದನ್ನೂ ಓದಿ: ಜೈಲಾಧಿಕಾರಿಗಳ ಜೊತೆ ಕಿರಿಕ್‌ – ಹರ್ಷ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಕ್ಲಾಸ್‌

    ನಾನು ಕೆಳಗೆ ಬಿದ್ದಾಗ ನನ್ನನ್ನು ತುಳಿದುಕೊಂಡು ಹೋಗುತ್ತಿದ್ದರು. ನಾನು ಎಷ್ಟೇ ಒದ್ದಾಡುತ್ತಿದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲ. ಕತ್ತು, ಬೆನ್ನು ತುಳಿದುಕೊಂಡು ಹೋಗುತ್ತಿದ್ದರು. ಆಕ್ಸಿಜನ್ ಕೂಡ ಸಿಗುತ್ತಿರಲಿಲ್ಲ. ಉಸಿರಾಡೋಕೆ ತುಂಬಾ ಕಷ್ಟ ಆಗುತ್ತಿತ್ತು. ಎಲ್ಲರೂ ತುಳಿದುಕೊಂಡು ಹೋಗುತ್ತಿರುವಾಗ ಓರ್ವ ವ್ಯಕ್ತಿ ಬಂದು ನನ್ನನ್ನು ಖಾಲಿ ಜಾಗಕ್ಕೆ ಬಿಟ್ಟರು. ಆಗ ಸ್ವಲ್ಪ ಉಸಿರಾಡೋಕೆ ಆಯ್ತು. ಆದರೆ ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯಾರೂ ಬರಲಿಲ್ಲ. ಬಳಿಕ ನಮ್ಮ ಮನೆಯವರೇ ನನ್ನನ್ನು ಹುಡುಕಿಕೊಂಡು ಬಂದು ಪೊಲೀಸರಿಗೆ ಮಾಹಿತಿ ನೀಡಿದರು. ಆಗ ನನ್ನನ್ನ ಬೌರಿಂಗ್ ಆಸ್ಪತ್ರೆಗೆ (Bowring Hospital) ದಾಖಲಿಸಿದರು. ಅಲ್ಲಿ ಸರಿಯಾಗಿ ಚಿಕಿತ್ಸೆ ಸಿಗಲಿಲ್ಲ. ಇವರೆಗೂ ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ ಎಂದು ತಮ್ಮ ಕರಾಳ ಅನುಭವ ಹಂಚಿಕೊಂಡರು.

    ಕಾಲ್ತುಳಿತದ ವೇಳೆ ನಿಧಿ ಎಂಬ ಯುವತಿಯ ಮೇಲೆ ಬ್ಯಾರಿಕೇಡ್ ಬಿದ್ದಿತ್ತು. ಆದರೂ ಕೂಡ ಜನರು ಬ್ಯಾರಿಕೇಡ್‌ನ್ನು ತುಳಿದುಕೊಂಡು ಓಡಾಡುತ್ತಿದ್ದರು. ಯುವತಿ ಎಡಗೈ ಮತ್ತು ಎಡಗಾಲಿಗೆ ಗಾಯವಾಗಿದ್ದು, ರಕ್ತಸ್ರಾವವಾಗಿದೆ. ಸದ್ಯ ಟ್ರೀಟ್‌ಮೆಂಟ್ ಪಡೆದು ಡಿಸ್ಚಾರ್ಜ್ ಆಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.ಇದನ್ನೂ ಓದಿ: ಗೋವಿಂದರಾಜ್‌ ಎಸಗಿದ ತಪ್ಪನ್ನು ಜನರ ಮುಂದೆ ಹೇಳಿ – ಗಾಢ ಮೌನಕ್ಕೆ ಜಾರಿದ್ದು ಯಾಕೆ: ಸಿಎಂಗೆ ಸುನಿಲ್‌ ಕುಮಾರ್‌ ಪ್ರಶ್ನೆ

    ಏನಿದು ಪ್ರಕರಣ?
    ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) 18 ವರ್ಷಗಳ ಬಳಿಕ ಐಪಿಎಲ್ (IPL) ಚಾಂಪಿಯನ್ ಪಟ್ಟವನ್ನೇನೋ ಅಲಂಕರಿಸಿದೆ. ಪಂಜಾಬ್ (PBKS) ವಿರುದ್ಧ ಬೆಂಗಳೂರು 6 ರನ್‌ಗಳ ಭರ್ಜರಿ ಜಯ ಸಾಧಿಸ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ (ಜೂ.3) ರಾತ್ರಿಯೇ ದೀಪಾವಳಿಯಂತಹ ಸಂಭ್ರಮ ಇತ್ತು. ಬುಧವಾರ (ಜೂ.4) ಇಡೀ ದಿನ ಹೆಚ್‌ಎಎಲ್ ಏರ್‌ಪೋರ್ಟ್ ರೋಡ್, ತಾಜ್ ವೆಸ್ಟ್ ಎಂಡ್ ಹೊಟೇಲ್ ರೋಡ್, ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ ಸುತ್ತ ಮುತ್ತ ರೆಡ್ ಆರ್ಮಿ ಎಲ್ಲಾ ಕಡೆ ಆರ್‌ಸಿಬಿ ತಂಡಕ್ಕೆ ತಮ್ಮ ಅಭಿಮಾನ ತೋರಿದರು.

    ಅದೇ ದಿನ ದಿಢೀರನೇ ಆರ್‌ಸಿಬಿ (RCB) ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಉಚಿತ ಪ್ರವೇಶ ಆಗಿದ್ದರಿಂದ ಕ್ರೀಡಾಂಗಣಕ್ಕೆ ಅಭಿಮಾನಿ ಸಾಗರವೇ ಹರಿದುಬಂದಿತ್ತು. ಗೇಟ್ ನಂಬರ್ 18, 19, 20ರ ಬಳಿ ಅಭಿಮಾನಿಗಳನ್ನು ತಡೆಯಲು ಪೊಲೀಸರು ಹೈರಾಣಾಗಿ ಹೋಗಿದ್ದರು. ಒಂದು ಹಂತದಲ್ಲಿ ಲಾಠಿಯನ್ನೂ ಬೀಸಿದರು. ಕ್ಷಣ ಕ್ಷಣಕ್ಕೂ ಆರ್‌ಸಿಬಿ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಆದರೆ, ಗೇಟ್ ನಂ.12ರ ಬಳಿ ಗೇಟ್ ತೆಗೆಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲು ಉಂಟಾಯಿತು. ಒಬ್ಬರ ಮೇಲೋಬ್ಬರು ಬಿದ್ದು, ಉಸಿರಾಟದ ಸಮಸ್ಯೆ ಉಂಟಾಗಿ ಒಟ್ಟು 11 ಜನ ಸಾವನ್ನಪ್ಪಿದ್ದರು.ಇದನ್ನೂ ಓದಿ: ನಾಳೆ ರಾಯಚೂರಿನಲ್ಲಿ ನಡೆಯಬೇಕಿದ್ದ ಸಿಎಂ ಕಾರ್ಯಕ್ರಮ ದಿಢೀರ್ ರದ್ದು

  • ನಾಳೆ ರಾಯಚೂರಿನಲ್ಲಿ ನಡೆಯಬೇಕಿದ್ದ ಸಿಎಂ ಕಾರ್ಯಕ್ರಮ ದಿಢೀರ್ ರದ್ದು

    ನಾಳೆ ರಾಯಚೂರಿನಲ್ಲಿ ನಡೆಯಬೇಕಿದ್ದ ಸಿಎಂ ಕಾರ್ಯಕ್ರಮ ದಿಢೀರ್ ರದ್ದು

    ರಾಯಚೂರು: ಆರ್‌ಸಿಬಿ (RCB) ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ (Stampede) ಪ್ರಕರಣದ ಹಿನ್ನೆಲೆ ನಾಳೆ ಜಿಲ್ಲೆಯಲ್ಲಿ ನಡೆಯಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

    ನಾಳೆ (ಜೂ.9) ನಗರದ ವಾಲ್‌ಕಾಟ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ವಿಭಾಗೀಯ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಪ್ರಜಾಸೌಧ ಕಟ್ಟಡದ ಅಡಿಗಲ್ಲು ಹಾಗೂ ಮುಂಗಾರು ಉತ್ಸವ ಸೇರಿ ವಿವಿಧ ಕಾರ್ಯಕ್ರಮಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಬೇಕಿತ್ತು. ಆದರೆ ಚಿನ್ನಸ್ವಾಮಿಯಲ್ಲಿ (M.Chinnaswamy Stadium) ನಡೆದ ಕಾಲ್ತುಳಿತ ಪ್ರಕರಣದ ಹಿನ್ನೆಲೆ ಕಾರ್ಯಕ್ರಮದ ಸಿದ್ಧತೆಗಳನ್ನು ಆರಂಭದಲ್ಲೇ ಮೊಟಕುಗೊಳಿಸಲಾಗಿದೆ.ಇದನ್ನೂ ಓದಿ: ಪೊಲೀಸರಿಂದ ಸರ್ಕಾರಕ್ಕೆ ಪತ್ರ – ಪ್ರಶ್ನೆ ಕೇಳಿದ್ದಕ್ಕೆ ಉತ್ತರ ನೀಡದೇ ತೆರಳಿದ ಡಿಕೆಶಿ

    ಏನಿದು ಪ್ರಕರಣ?
    ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ (IPL Champions) ಪಟ್ಟವನ್ನೇನೋ ಅಲಂಕರಿಸಿದೆ. ಪಂಜಾಬ್ (PBKS) ವಿರುದ್ಧ ಬೆಂಗಳೂರು 6 ರನ್‌ಗಳ ಭರ್ಜರಿ ಜಯ ಸಾಧಿಸ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ (ಜೂ.3) ರಾತ್ರಿಯೇ ದೀಪಾವಳಿಯಂತಹ ಸಂಭ್ರಮ ಇತ್ತು. ಬುಧವಾರ (ಜೂ.4) ಇಡೀ ದಿನ ಹೆಚ್‌ಎಎಲ್ ಏರ್‌ಪೋರ್ಟ್ ರೋಡ್, ತಾಜ್ ವೆಸ್ಟ್ ಎಂಡ್ ಹೊಟೇಲ್ ರೋಡ್, ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ ಸುತ್ತ ಮುತ್ತ ರೆಡ್ ಆರ್ಮಿ ಎಲ್ಲಾ ಕಡೆ ಆರ್‌ಸಿಬಿ ತಂಡಕ್ಕೆ ತಮ್ಮ ಅಭಿಮಾನ ತೋರಿದರು.

    ಅದೇ ದಿನ ದಿಢೀರನೇ RCB ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಉಚಿತ ಪ್ರವೇಶ ಆಗಿದ್ದರಿಂದ ಕ್ರೀಡಾಂಗಣಕ್ಕೆ ಅಭಿಮಾನಿ ಸಾಗರವೇ ಹರಿದುಬಂದಿತ್ತು. ಗೇಟ್ ನಂಬರ್ 18, 19, 20ರ ಬಳಿ ಅಭಿಮಾನಿಗಳನ್ನು ತಡೆಯಲು ಪೊಲೀಸರು ಹೈರಾಣಾಗಿ ಹೋಗಿದ್ದರು. ಒಂದು ಹಂತದಲ್ಲಿ ಲಾಠಿಯನ್ನೂ ಬೀಸಿದರು. ಕ್ಷಣ ಕ್ಷಣಕ್ಕೂ ಆರ್‌ಸಿಬಿ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಆದರೆ, ಗೇಟ್ ನಂ.12ರ ಬಳಿ ಗೇಟ್ ತೆಗೆಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲು ಉಂಟಾಯಿತು. ಒಬ್ಬರ ಮೇಲೋಬ್ಬರು ಬಿದ್ದು, ಉಸಿರಾಟದ ಸಮಸ್ಯೆ ಉಂಟಾಗಿ ಒಟ್ಟು 11 ಜನ ಸಾವನ್ನಪ್ಪಿದ್ದರು.ಇದನ್ನೂ ಓದಿ: ಭಾರತದ ಬಳಿಯಿರುವಂತೆ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆ ನಮಗೂ ಕೊಡಿ – ಅಮೆರಿಕಕ್ಕೆ ಪಾಕ್‌ ಬೇಡಿಕೆ

  • ಇಡೀ ಬಜೆಟ್ ಪರಿಹಾರವಾಗಿ ಕೊಟ್ರೂ ಹೋದ ಜೀವ ವಾಪಸ್ ಬರುತ್ತಾ? – ಸೋಮಣ್ಣ

    ಇಡೀ ಬಜೆಟ್ ಪರಿಹಾರವಾಗಿ ಕೊಟ್ರೂ ಹೋದ ಜೀವ ವಾಪಸ್ ಬರುತ್ತಾ? – ಸೋಮಣ್ಣ

    ಮೈಸೂರು: ಪರಿಹಾರ ಮೊತ್ತ 25 ಲಕ್ಷ ಅಲ್ಲ, ಇಡೀ ಬಜೆಟ್ ಅನ್ನು ಪರಿಹಾರವಾಗಿ ಕೊಟ್ಟರೂ ಹೋಗಿರುವ ಜೀವ ವಾಪಸ್ ಬರುತ್ತಾ ಎಂದು ಕೇಂದ್ರ ಸಚಿವ ವಿ. ಸೋಮಣ್ಣ (V Somanna) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಚಿನ್ನಸ್ವಾಮಿ ಕಾಲ್ತುಳಿತದ (Chinnaswamy Stampede) ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಡೀ ಘಟನೆಯಿಂದ ಬೆಂಗಳೂರಿಗೆ ಅತ್ಯಂತ ಕೆಟ್ಟ ಹೆಸರು ಬಂದಿದೆ. ಸಿಎಂ (Siddaramaiah) ಪಟಲಾಂ ಮಾಡಿದ ಎಡವಟ್ಟಿನಿಂದ ಇಷ್ಟೆಲ್ಲಾ ಘಟನೆಗಳು ನಡೆದಿವೆ. ಸಿದ್ದರಾಮಯ್ಯ ಅವರಿಂದ ನಾವು ಇಂತಹ ಆಡಳಿತ ನಿರೀಕ್ಷೆ ಮಾಡಿರಲಿಲ್ಲ. ನಿಮ್ಮ ನಿಮ್ಮ ಒಳಜಗಳ, ನಿಮ್ಮ ಒಳ ಒಪ್ಪಂದಗಳು, ನಿಮ್ಮ ನಡುವಿನ ಗೊಂದಲಗಳಿಂದ ಅಮಾಯಕರ ಜೀವ ಹೋಗಿದೆ. ಇದಕ್ಕೆ ಯಾರು ಹೊಣೆ ಮೊದಲು ಹೇಳಿ. ಸಿದ್ದರಾಮಯ್ಯನವರೇ ಇದಕ್ಕೆ ಹೊಣೆ ಅಲ್ವಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: Exclusive | ಸರ್ಕಾರದ ಮತ್ತೊಂದು ಭಂಡಾಟ ಬಯಲು – ಸಿಬ್ಬಂದಿ ಕೊರತೆ, ಸಮಯಾವಕಾಶ ಇಲ್ಲ ಅಂದ್ರೂ ಡೋಂಟ್ ಕೇರ್

    ಕಾಲ್ತುಳಿತ ಘಟನೆಗೆ ಡಾ.ರಾಜ್‌ಕುಮಾರ್ ಅವರ ಸಾವಿನ ಘಟನೆಯನ್ನ ಹೇಗೆ ಹೋಲಿಕೆ ಮಾಡುತ್ತೀರಾ. ರಾಜ್‌ಕುಮಾರ್ ಅವರ ಸಾವಿನ ಸಂಧರ್ಭವೇ ಬೇರೆ, ಅವತ್ತಿನ ಪರಿಸ್ಥಿತಿಯೇ ಬೇರೆ ಇವತ್ತಿನ ಪರಿಸ್ಥಿತಿಯೇ ಬೇರೆ. ನೀವು ಈಗ ಮಾಡಿರುವುದು ಪಾಪದ ಕೆಲಸ. ಮೊದಲು ಅದನ್ನು ನೀವು ಒಪ್ಪಿಕೊಳ್ಳಬೇಕು. ಕುರ್ಚಿಗೆ ಅಂಟಿಕೊಂಡು ಸಿದ್ದರಾಮಯ್ಯ ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಕೊಟ್ಟಿರುವ ಫ್ರೀ ನೆಸ್ ಬೇರೆ ರಾಜ್ಯದ ಯಾವ ಸಿಎಂಗೂ ಕೊಟ್ಟಿಲ್ಲ. ಆದರೂ ಸಿದ್ದರಾಮಯ್ಯ ಇಂತಹ ಕೆಟ್ಟ ಆಡಳಿತ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ನಾಳೆಯಿಂದ ರಾಜ್ಯದಲ್ಲಿ ಮುಂಗಾರು ಚುರುಕು – ಜೂ.13ರವರೆಗೆ ವ್ಯಾಪಕ ಮಳೆ ಸಾಧ್ಯತೆ

    ಒಂದು ಅರ್ಧ ದಿನ ಪ್ರಧಾನ ಮಂತ್ರಿಗಳ ಕಚೇರಿಗೆ ಬನ್ನಿ, ಪ್ರಧಾನ ಮಂತ್ರಿಗಳು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನ ನೋಡಿ. ನೀವು ಕಾಂಗ್ರೆಸ್ ಮುಖ್ಯಮಂತ್ರಿಯಾಗಿರಬಹುದು, ಪ್ರಧಾನಿ ಆಡಳಿತವನ್ನ ಸ್ವಲ್ಪ ಗಮನಿಸಿ ನೋಡಿ. ರಾಜ್ಯ ಸರ್ಕಾರಕ್ಕೆ ಹಳ್ಳಿಗಳೇ ಇಲ್ಲ. ಸಿಎಂ-ಡಿಸಿಎಂ ನಡುವೆ ಹೊಂದಾಣಿಕೆಯೇ ಇಲ್ಲ. ಹಳಿ ಇಲ್ಲದ ಕಾರಣ ಎಲ್ಲೆಲ್ಲೋ ಮುಗ್ಗರಿಸುತ್ತಿದೆ, ಅಫಘಾತ ಮಾಡುತ್ತಿದೆ. ಇವರ ಈ ಅಧ್ವಾನದಲ್ಲಿ ಅಮಾಯಕರ ಜೀವ ಹೋಗುತ್ತಿದೆ. ಇದು ನನಗೆ ಬೇಸರ ತರಿಸಿದೆ. ಬೆಂಗಳೂರಿನ ಕಾಲ್ತುಳಿತಕ್ಕೆ ದೇಶದ ಬೇರೆ ಬೇರೆ ಭಾಗದ ಘಟನೆಯನ್ನ ನೀವು ಹೇಗೆ ಸಮರ್ಥನೆಗೆ ಬಳಸುತ್ತಿದ್ದೀರಿ? ನೀವು ಮಾಡಿರುವುದು ಪಾಪದ ಕೆಲಸ. ಇದಕ್ಕೆ ಸಮರ್ಥನೆಗಳು ಬೇಡ. ಮೊದಲು ನೈತಿಕ ಹೊಣೆ ಹೊತ್ತುಕೊಳ್ಳಿ ಎಂದರು. ಇದನ್ನೂ ಓದಿ: 55ರ ಆಂಟಿ ಜೊತೆಗೆ ಯುವಕ ಲವ್ವಿಡವ್ವಿ; ಲವರ್‌ಗಾಗಿ ಆಕೆಯ ಗಂಡನನ್ನೇ ಕೊಂದು ಸುಟ್ಟುಹಾಕಿದ್ದ ಮೂವರು ಅರೆಸ್ಟ್‌

    ನನಗೆ ಸಿದ್ದರಾಮಯ್ಯ ಮೇಲೆ ವೈಯಕ್ತಿಕವಾಗಿ ಗೌರವ ಇದೆ. ಆದರೆ ಆಡಳಿತ ಯಾವ ಪರಿಸ್ಥಿತಿಯಲ್ಲಿದೆ ನೋಡಿ. ಎರಡೂವರೆ ವರ್ಷದ ಸರ್ಕಾರದದಲ್ಲಿ ಈ ರಾಜ್ಯಕ್ಕೆ ಯಾವ ಮೈಲಿಗಲ್ಲು ಕೊಟ್ಟಿದ್ದೀರಾ ನೀವೇ ನೋಡಿಕೊಳ್ಳಿ. ನಿಮ್ಮ ಪಟಲಾಮ್ ಮಾಡಿದ ತಪ್ಪಿಗೆ ಅಧಿಕಾರಿಗಳನ್ನ ತಪ್ಪಿತಸ್ಥರನ್ನಾಗಿ ಮಾಡಿದ್ದು ಎಷ್ಟು ಸರಿ? ಆರ್‌ಸಿಬಿ ಅವರು ಗೆದ್ದರು. ಅದರ ಕ್ರೆಡಿಟ್ ಪಡೆಯಲು ನೀವು ಪೈಪೋಟಿ ನಡೆಸಲು ಹೋಗಿ ಈ ಅವಘಡ ಮಾಡಿಕೊಂಡಿದ್ದೀರಿ. ಬೇರೆ ಇನ್ಯಾರೋ ಕ್ರೆಡಿಟ್ ತೆಗೆದುಕೊಳ್ಳುತ್ತಾರೆ ಎಂದು ನೀವೆ ಅಚಾತುರ್ಯ ಮಾಡಿ ಅಮಾಯಕರನ್ನು ಬಲಿ ಕೊಟ್ಟಿದ್ದೀರಿ ಎಂದು ಗುಡುಗಿದರು. ಇದನ್ನೂ ಓದಿ: ಹಾಸನ | ಹೊಳೆನರಸೀಪುರದಲ್ಲಿ ನಾಲ್ವರು ಖತರ್ನಾಕ್ ಕಳ್ಳಿಯರ ಬಂಧನ

  • Exclusive | ಮತ್ತೊಂದು ಭಂಡಾಟ ಬಯಲು – ಸಿಬ್ಬಂದಿ, ಸಮಯಾವಕಾಶದ ಕೊರತೆ ಅಂದ್ರೂ ಡೋಂಟ್ ಕೇರ್ ಅಂದಿದ್ದ ಸರ್ಕಾರ

    Exclusive | ಮತ್ತೊಂದು ಭಂಡಾಟ ಬಯಲು – ಸಿಬ್ಬಂದಿ, ಸಮಯಾವಕಾಶದ ಕೊರತೆ ಅಂದ್ರೂ ಡೋಂಟ್ ಕೇರ್ ಅಂದಿದ್ದ ಸರ್ಕಾರ

    – ಕಾರ್ಯಕ್ರಮಕ್ಕೆ ಸಮಯಾವಕಾಶ ಕೇಳಿ ಜೂ.4ರಂದೇ ಪತ್ರ ಬರೆದಿದ್ದ ಡಿಸಿಪಿ

    ಬೆಂಗಳೂರು: ಆರ್‌ಸಿಬಿ (RCB) ವಿಜಯೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣ (Stampede Case) ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸಿಎಂ, ಡಿಸಿಎಂ, ಪರಮೇಶ್ವರ್ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿವೆ. ಈ ನಡುವೆ ಜೂನ್‌ ನಾಲ್ಕರಂದೇ ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌದ ಭದ್ರತಾ ವಿಭಾಗದ ಡಿಸಿಪಿ ಬರೆದ ಪತ್ರ ಸಂಚಲನ ಮೂಡಿಸಿದೆ.‌ ಇದರಿಂದ ಪೊಲೀಸರು ಬೇಡವೆಂದರೂ ಸರ್ಕಾರ ಹಠಕ್ಕೆ ಬಿದ್ದು ಕಾರ್ಯಕ್ರಮ ಮಾಡಿಸಿತಾ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ.

    ಹೌದು.. ಡಿಸಿಪಿ (Vidhan Soudha DCP) ಕರಿಬಸವನಗೌಡ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಸರ್ಕಾರದ ಮತ್ತೊಂದು ಭಂಡಾಟ ಬಯಲಾಗಿದೆ. ಆರ್‌ಸಿಬಿ ಅಭಿಮಾನಿಗಳ ಸಂಖ್ಯೆ ದೇಶಾದ್ಯಂತ ಇದೆ. ಆದ್ರೆ ನಮ್ಮಲ್ಲಿ ಸಿಬ್ಬಂದಿ ಕೊರತೆ ಇರೋದ್ರಿಂದ ಬಂದೋಬಸ್ತ್‌ಗೆ ತೊಂದರೆಯಾಗಲಿದೆ ಅನ್ನೋ ಅಂಶವನ್ನೂ ಪತ್ರದಲ್ಲಿ ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ. ಇದರ ಇನ್ನಷ್ಟು ಎಕ್ಸ್‌ಕ್ಲೂಸಿವ್‌ ಮಾಹಿತಿ ತಿಳಿಯು ಕುತೂಹಲ ನಿಮಗಿದ್ದರೆ ಮುಂದೆ ಓದಿ..

    ಭದ್ರತಾ ವಿಭಾಗದ ಡಿಸಿಪಿ ಬರೆದ ಪತ್ರದಲ್ಲಿ ಏನಿತ್ತು?
    ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡಕ್ಕೆ Fan Following ದೇಶಾದ್ಯಂತ ಇದ್ದು.. ವಿಧಾನಸೌಧ ಭವ್ಯ ಮೆಟ್ಟಿಲುಗಳ ಮುಂಭಾಗ, ಕಾರ್ಯಕ್ರಮವನ್ನು ಆತರುದಲ್ಲಿ ಆಯೋಜಿಸುವುದರಿಂದ ಲಕ್ಷಾಂತರ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ವಿಧಾನಸೌಧಕ್ಕೆ ಆಗಮಿಸುವ ಸಾಧ್ಯತೆಯಿದೆ. ವಿಧಾನಸೌಧ ಭದ್ರತಾ ವಿಭಾಗದಲ್ಲಿ ಅಧಿಕಾರಿ/ಸಿಬ್ಬಂದಿಗಳ ಕೊರತೆ ಇರುವುದರಿಂದ ಬಂದೋಬಸ್ತ್ ಕರ್ತವ್ಯ ನಿರ್ವಹಣೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ.

    ಜೂನ್‌ 4ರಂದು ಕಾರ್ಯಕ್ರಮವನ್ನು ವಿಧಾನಸೌಧ ಭವ್ಯ ಮೆಟ್ಟಿಲುಗಳ ಮುಂಭಾಗ ಆಯೋಜನೆ ಮಾಡುತ್ತಿರುವುದರಿಂದ, ಸದರಿ ದಿನದಂದು ಸಾರ್ವಜನಿಕರಿಗೆ ವಿಧಾನಸೌಧ ಪ್ರವೇಶಿಸಲು ವಿತರಣೆ ಮಾಡುವ ಆನ್ ಲೈನ್ ಮತ್ತು ಆಫ್ ಲೈನ್ ಪಾಸುಗಳನ್ನು ಸಂಪೂರ್ಣವಾಗಿ ನಿರ್ಭಂದಿಸಲು ಕೋರಿದೆ.

    ರಾಯಲ್ ಚಾಲೆಂಜರ್ಸ್ ಬೆಂಗಳೂರು ರವರ ಸಮಾರಂಭ ಭವ್ಯ ಮೆಟ್ಟಿಲುಗಳ ಮುಂಭಾಗ ಜೂನ್‌ 4ರಂದು ಸಂಜೆ 4 ಗಂಟೆಗೆ ಆಯೋಜನೆಗೊಳ್ಳುತ್ತಿದ್ದು, ಸಚಿವಾಲಯದ ಅಧಿಕಾರಿ/ಸಿಬ್ಬಂದಿಗಳು ತಮ್ಮ ತಮ್ಮ ಕುಟುಂಬ ವರ್ಗದವರನ್ನು ಕರೆತರುವ ಸಾಧ್ಯತೆಗಳು ಹೆಚ್ಚಾಗಿದೆ. ಸಚಿವಾಲಯದ ಅಧಿಕಾರಿ/ಸಿಬ್ಬಂದಿಗಳಿಗೆ ಕುಟುಂಬ ವರ್ಗದವರನ್ನು ಕರೆತರದಂತೆ ಆದೇಶ ನೀಡಲು ಮತ್ತು ಸಚಿವಾಲಯದ ಅಧಿಕಾರಿ/ಸಿಬ್ಬಂದಿಗಳಿಗೆ ಅಂದು ಮಧ್ಯಾಹ್ನ ರಜೆ ಘೋಷಿಸಬೇಕು. ಸಚಿವಾಲಯದ ಅಧಿಕಾರಿ/ಸಿಬ್ಬಂದಿಗಳು ಕಾರ್ಯಕ್ರಮದ ಸ್ಥಳಕ್ಕೆ ಬರದಂತೆ ಸೂಚನೆ ಕಳುಹಿಸಬೇಕೆಂದು ಕೋರುತ್ತೇವೆ.

    ವಿಧಾನಸೌದ ಕಟ್ಟಡವು Vital Installation ಕಟ್ಟಡವಾಗಿದ್ದು, ಕಟ್ಟಡದ ಸುರಕ್ಷತೆಯ ಸಂಬಂಧ ವಿಧಾನಸೌಧ ಅವರಣದ ಮತ್ತು ಮುಂಭಾಗಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಈ ಸನ್ಮಾನ ಕಾರ್ಯಕ್ರಮಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಕ್ರಿಕೆಟ್ ಆಗಮಿಸುತ್ತಿರುವುದರಿಂದ ಭದ್ರತೆಯ ದೃಷ್ಟಿಯಿಂದ ಸಿಸಿಟಿವಿಯ ಅವಶ್ಯಕತೆ ಇರುತ್ತದೆ. ಈಗ ಇರುವ ಇರುವ ಭದ್ರತಾ ವ್ಯವಸ್ಥೆಯಲ್ಲಿ ವ್ಯತಯ ಉಂಟಾಗುವ ಸಾಧ್ಯತೆ ಇರುತ್ತದೆ.

    ಅಲ್ಲದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡಕ್ಕೆ Fan Following ದೊಡ್ಡದಾಗಿರುವುದರಿಂದ ಹೊರಗಡೆಯಿಂದ ಅಧಿಕಾರಿ/ಸಿಬ್ಬಂದಿಗಳನ್ನು ಬಂದೋಬಸ್ತ್‌ಗೆ ತೆಗೆದುಕೊಳ್ಳಬೇಕಾಗಿದ್ದು, ಇದಕ್ಕೆ ಸಮಯದ ಅವಶ್ಯಕತೆ ಇದೆ. ಈ ರೀತಿಯ ಬೃಹತ್ ಕಾರ್ಯಕ್ರಮಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಂಚಾರಿ ಪೊಲೀಸ್ ರೊಂದಿಗೆ co-ordination ಮಾಡಿಕೊಳ್ಳುವ ಅವಶ್ಯಕತೆ ಇದ್ದು, ಸಮಯವಕಾಶದ ಕೊರತೆ ಎನ್ನಿಸುತ್ತಿದೆ. ಅಲ್ಲದೇ ಇಂತಹ ಕಾರ್ಯಕ್ರಮಹಳಲ್ಲಿ ಡ್ರೋನ್‌ ಕ್ಯಾಮೆರಾ ಬಳಸುವ ಅವಶ್ಯಕತೆ ಇರುವುದರಿಂದ ಆಂಟಿ ಡ್ರೋನ್‌ ವ್ಯವಸ್ಥೆ ಅಳವಡಿಸುವ ಅವಶ್ಯಕತೆ ಇದೆ.

    ಮುಂದುವರಿದು… ವಿಧಾನಸೌಧ ಕಟ್ಟಡವು ಪಾರಂಪರಿಕ ಕಟ್ಟಡವಾಗುವುದರಿಂದ ಮತ್ತು Vital Installation ಕಟ್ಟಡದ ವ್ಯಾಪ್ತಿಗೆ ಒಳಪಡುವುದರಿಂದ, ಭದ್ರತೆಯ ದೃಷ್ಟಿಯಿಂದ ಕಟ್ಟಡಕ್ಕೆ ಯಾವುದೇ ಧಕ್ಕೆಯಾಗದಂತೆ, ನಿಯಮಗಳನುಸಾರ ಕಾರ್ಯಕ್ರಮ ನಡೆಸಲು ಸಮಯದ ಅವಶ್ಯಕತೆ ಇರುತ್ತದೆ. ಅದಾಗ್ಯೂ ಸರ್ಕಾರ ತೆಗೆದುಕೊಳ್ಳುವ ನಿರ್ಣಯದಂತೆ ನಡೆದುಕೊಳ್ಳಲಾಗುವುದು ಎಂಬ ಅಭಿಪ್ರಾಯವನ್ನು ವರದಿಯನ್ನು ಸಲ್ಲಿಸಲಾಗಿದೆ ಎಂದು ಡಿಸಿಪಿ ಕರಿಬಸವನಗೌಡ ಅವರು ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರದಲ್ಲಿ ಬರೆದಿದ್ದಾರೆ.

  • ಎಲ್ರೂ ಬಂದು ಹೇಗಾಯ್ತು ಹುಷಾರಾಗಿ ಅಂತಾರೆ, ಪರಿಹಾರ ಮಾತ್ರ ಇಲ್ಲ: ಆರ್‌ಸಿಬಿ ಫ್ಯಾನ್ಸ್ ನೋವಿನ ಮಾತು

    ಎಲ್ರೂ ಬಂದು ಹೇಗಾಯ್ತು ಹುಷಾರಾಗಿ ಅಂತಾರೆ, ಪರಿಹಾರ ಮಾತ್ರ ಇಲ್ಲ: ಆರ್‌ಸಿಬಿ ಫ್ಯಾನ್ಸ್ ನೋವಿನ ಮಾತು

    – ನಮಗೂ ಪರಿಹಾರ ನೀಡಿ ಎಂದು ಮನವಿ

    ಬೆಂಗಳೂರು: ಆರ್‌ಸಿಬಿ (RCB) ಸಂಭ್ರಮಾಚರಣೆಯಲ್ಲಿನ ಭೀಕರ ಕಾಲ್ತುಳಿತ (Chinnaswamy Stampede) ಪ್ರಕರಣದಲ್ಲಿ ದಾರುಣವಾಗಿ ಸಾವನ್ನಪ್ಪಿದವರ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ಸೇರಿ ಒಟ್ಟು 40 ಲಕ್ಷ ಪರಿಹಾರ ಘೋಷಿಸಲಾಗಿದೆ. ಆದರೆ ಗಂಭೀರ ಗಾಯಗೊಂಡವರಿಗೆ ಯಾವುದೇ ಪರಿಹಾರ (Compensation) ಘೋಷಣೆ ಮಾಡಿಲ್ಲ. ಇದಕ್ಕೆ ಈಗ ವಿರೋಧ ವ್ಯಕ್ತವಾಗುತ್ತಿದೆ.

    ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಪ್ರಕರಣದಲ್ಲಿ ಸತ್ತವರಿಗಷ್ಟೇ ಪರಿಹಾರ ಘೋಷಣೆ ಮಾಡಿರುವ ಸರ್ಕಾರ, ಆರ್‌ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಗಾಯಗೊಂಡವರು ಬೇಸರ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಚಿಕಿತ್ಸಾ ವೆಚ್ಚ ಅಂದ್ರು, ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಬೇಕು. ಡಿಸ್ಚಾರ್ಜ್ ಆದ್ರೂ ಕನಿಷ್ಟ ಮೂರು ತಿಂಗಳು ಚಿಕಿತ್ಸೆ ಪಡೀಬೇಕು. ಜೊತೆಗೆ ಏನೂ ಕೆಲಸ ಮಾಡಲಾರದ ಪರಿಸ್ಥಿತಿ ಇದೆ. ನಮಗೂ ಪರಿಹಾರ ನೀಡಿ ಎಂದು ಗಾಯಾಳುಗಳು ಮನವಿ ಮಾಡುತ್ತಿದ್ದಾರೆ.

    ಇನ್ನು ಗಾಯಾಳುಗಳ ಪರಿಸ್ಥಿತಿ ಕೇಳೋರಿಲ್ಲ. ಬರೀ ಘಟನೆ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ್ರೆ ಮುಂದಿನ ಪರಿಸ್ಥಿತಿ ಬಗ್ಗೆ ನೆನೆಸಿಕೊಂಡರೆ ಆತಂಕವಾಗುತ್ತದೆ. ಕೇವಲ ಸರ್ಕಾರ ಸತ್ತವರಿಗಷ್ಟೇ ಪರಿಹಾರದ ಹಣ ಘೋಷಣೆ ಮಾಡಿದ್ದಾರೆ. ನಮ್ಮ ಜೀವಕ್ಕೆ ಬೆಲೆ ಇಲ್ವಾ? ಕೇವಲ ಚಿಕಿತ್ಸೆ ಕೊಟ್ಟು ಮನೆಗೆ ಕಳುಹಿಸಿದರೆ, ನಂತರದ ಚಿಕಿತ್ಸೆಗಳಿಗೆ ತುಂಬಾ ಕಷ್ಟ ಆಗುತ್ತದೆ. ದಯಮಾಡಿ ಸರ್ಕಾರ, ಆರ್‌ಸಿಬಿ ಮ್ಯಾನೇಜ್ಮೆಂಟ್ ಹಾಗೂ ಕೆಎಸ್‌ಸಿಎನವರು ನಮಗೂ ಸಹ ಪರಿಹಾರ ಕೊಡಲಿ ಎಂದು ಅಳಲು ತೋಡಿಕೊಂಡಿದ್ದಾರೆ.

    ಮುಂದಿನ ಮೂರು ತಿಂಗಳು ಬೆಡ್ ರೆಸ್ಟ್ ಹೇಳಿದ್ದಾರೆ. ಆದರೆ ನಾವು ಪಾರ್ಟ್‌ಟೈಮ್ ಕೆಲಸ ಮಾಡುತ್ತಾ ಕಾಲೇಜಿಗೆ ಹೋಗುತ್ತಿದ್ದೆವು. ಆದ್ರೆ ಮೂರು ತಿಂಗಳು ಕೆಲಸ ಇಲ್ಲದೆ ಜೀವನ ಸಾಗಿಸೋದು ತುಂಬಾ ಕಷ್ಟ. ಮೆಡಿಸಿನ್‌ಗೆ ಲಕ್ಷಾಂತರ ರೂಪಾಯಿ ಹಣ ಖರ್ಚು ಆಗುತ್ತೆ ಎಂದು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ನೋವಿನ ಮಾತನ್ನು ಆಡಿದ್ದಾರೆ.‌

    ಇನ್ನು ಕ್ಯಾಮೆರಾ ಮುಂದೆ ಮಾತನಾಡಿದ್ರೆ ನಮ್ಮ ಜೀವನ ಎಲ್ಲಿ ಹಾಳಾಗುತ್ತೆ, ಸಂಬಂಧಿಕರು ಏನು ತಿಳಿದುಕೊಳ್ಳುತ್ತಾರೆ, ನಮಗೆ ಮುಂದೆ ಕೆಲಸ ಸಿಗುತ್ತಾ? ನಮ್ಮನ್ನ ಯಾರು ಮದುವೆ ಆಗ್ತಾರೆ? ಹೀಗೆ ನಾನಾ ಪ್ರಶ್ನೆಗಳು ಗಾಯಾಳುಗಳನ್ನ ಕಾಡುತ್ತಿದೆ. ಹೀಗಾಗಿ ಕ್ಯಾಮೆರಾ ಮುಂದೆ ಮಾತನಾಡಲು ಗಾಯಾಳುಗಳು ಹಾಗೂ ಅವರ ಕುಟುಂಬದವರು ಹಿಂದೇಟು ಹಾಕುತ್ತಿದ್ದಾರೆ.

  • ಕಾಲ್ತುಳಿತ ಘಟನೆಯಿಂದ ಸಿಎಂ ಸಿದ್ದರಾಮಯ್ಯ ಬಹಳ ನೊಂದಿದ್ದಾರೆ: ಎಂ.ಸಿ ಸುಧಾಕರ್

    ಕಾಲ್ತುಳಿತ ಘಟನೆಯಿಂದ ಸಿಎಂ ಸಿದ್ದರಾಮಯ್ಯ ಬಹಳ ನೊಂದಿದ್ದಾರೆ: ಎಂ.ಸಿ ಸುಧಾಕರ್

    ಚಿಕ್ಕಬಳ್ಳಾಪುರ: ಕಾಲ್ತುಳಿತ ಘಟನೆಯಿಂದ ಸಿಎಂ ಸಿದ್ದರಾಮಯ್ಯ ಬಹಳ ನೊಂದಿದ್ದಾರೆ, ನಮಗೆಲ್ಲಾ ಬಹಳ ದುಃಖ ಆಗಿದೆ. ಸಿಎಂ ಅಂತೂ ಬಹಳ ನೋವು ತಿಂದಿದ್ದಾರೆ ಎಂದು ಸಚಿವ ಎಂಸಿ ಸುಧಾಕರ್ (MC Sudhakar) ಹೇಳಿದ್ದಾರೆ.

    ಚಿನ್ನಸ್ವಾಮಿ ಕಾಲ್ತುಳಿತದ (Chinnaswamy Stampede) ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ತನಿಖೆ ಮಾಡುತ್ತಿದೆ. ಸತ್ಯಾಸತ್ಯತೆ ಬಂದ ಮೇಲೆ ಖಂಡಿತ ಕ್ರಮ ತೆಗೆದುಕೊಳ್ಳುತ್ತಾರೆ. ಸತ್ತವರ ಜೀವ ತಂದುಕೊಡಲು ಸಾಧ್ಯ ಇಲ್ಲ, ಕುಟುಂಬ ಸದಸ್ಯರ ನೋವು ಮರೆಸಲು ಸಾಧ್ಯ ಇಲ್ಲ. ನನ್ನ ಕ್ಷೇತ್ರದಲ್ಲಿ ಇಬ್ಬರು ಹುಡುಗರ ಸಾವಾಗಿದೆ. ನನಗೂ ನೋವಾಗಿದೆ. ನಾನು ಸಹ ಕ್ರಿಕೆಟ್ ಆಟಗಾರ ಪ್ರೇಮಿ, ವಿಶ್ವಕಪ್ ಪಂದ್ಯ ಗೆದ್ದಾಗಲೂ ಈ ರೀತಿ ಸಂಭ್ರಮ ಇರುತ್ತಿರಲಿಲ್ಲ. ಆದರೆ ಪ್ರೀಮಿಯರ್ ಲೀಗ್‌ಗೆ ಜನ ಈ ರೀತಿ ಸಂಭ್ರಮ ಮಾಡುತ್ತಾರೆ. ಮೈಮರೀತಾರೆ ಅನ್ನೋದು ನಾನು ನೋಡಿಲ್ಲ. ಹಳ್ಳಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಐಪಿಎಲ್ ಆಪರೇಷನ್ ಸಿಂಧೂರದಿಂದ ಕೆಲ ಸಮಯ ವಿಳಂಬ ಆಯಿತು. ಹಾಗಾಗಿ ಆರ್‌ಸಿಬಿ (RCB) ಮ್ಯಾನೇಜ್‌ಮೆಂಟ್ ಆಟಗಾರರ ಕಮಿಟ್ಮೆಂಟ್‌ನಿಂದ ಸಂಭ್ರಮಾಚರಣೆ ತೀರ್ಮಾನ ಮಾಡಿದ್ದು ನಾವಲ್ಲ ಎಂದರು. ಇದನ್ನೂ ಓದಿ: 5 ನಿಮಿಷ ತಬ್ಬಿಕೊಳ್ಳಲು 600 ರೂ. ಕೊಡ್ತಾರಂತೆ ಚೀನಾ ಮಹಿಳೆಯರು!

    ಒಪನ್ ಪರೇಡ್‌ಗೆ ಬಿಟ್ಟಿಲ್ಲ ಅಂದಾಗ ವಿಪಕ್ಷದವರೇ ಕ್ರೀಡಾಭಿಮಾನಿಗಳ ವಿರೋಧಿ ಸರ್ಕಾರ ಎಂದು ಟ್ವೀಟ್ ಮಾಡಿದ್ದರು. ದುರ್ಘಟನೆ ಆದ ಕೂಡಲೇ ಬೇರೆ ರೀತಿ ಯಾಕೆ ಮಾತಾಡ್ತೀರಾ? ಅನಾಹುತ ಆಗಬಹುದು ಎಂದು ಸರ್ಕಾರದ ಗಮನಕ್ಕೂ ಇತ್ತು. ಆದರೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದು ನಮಗೆ ನಂಬಲು ಸಾಧ್ಯವಾಗುತ್ತಿಲ್ಲ. ಬಹಳ ಪಂದ್ಯಗಳು ನಡೆದಿವೆ, ಸಾವಿರಾರು ಜನ ಬಂದಿರೋ ಜಾಗ ಅದು. ಐದಾರು ಪಂದ್ಯಕ್ಕೆ ಬರುವ ಜನ ಒಂದೇ ಬಾರಿ ಬಂದಿದ್ದಾರೆ. ಹಾಗಂತ ನಾವು ಸಮರ್ಥನೆ ಮಾಡಿಕೊಳ್ಳಲು ಸಾಧ್ಯ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಅಮರನಾಥ ಯಾತ್ರಿಕರಿಗಾಗಿ ‘ಆಪರೇಷನ್ ಶಿವ’

    ಪಹಲ್ಗಾಮ್ ಘಟನೆ ಕುಂಭಮೇಳ ಘಟನೆಯನ್ನು ನಾವು ಟೀಕಿಸಿಲ್ಲ. ಬಿಜೆಪಿ, ಜೆಡಿಎಸ್ ನಾಯಕರು ಶವಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೃತ ಪಟ್ಟವರ ಬಗ್ಗೆ ಬಿಜೆಪಿ, ಜೆಡಿಎಸ್ ಗೆ ಕರುಣೆ ಇಲ್ಲ. ಬಿಜೆಪಿ, ಜೆಡಿಎಸ್ ಶವಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಮೆಡ್‌-ಕೆ: ಎಕ್ಸಲೆಂಟ್ ಮೂಡುಬಿದಿರೆಗೆ ರಾಷ್ಟ್ರಮಟ್ಟದಲ್ಲಿ ಮೊದಲ ರ‍್ಯಾಂಕ್