Tag: rcb

  • ಕೊಹ್ಲಿಗಾಗಿ ಆರ್‌ಸಿಬಿಯ ಆತುರವೇ ಕಾಲ್ತುಳಿತಕ್ಕೆ ಕಾರಣ – ಸಿಐಡಿ ತನಿಖೆಯಲ್ಲಿ ಸ್ಫೋಟಕ ವಿಚಾರ ಬಯಲು

    ಕೊಹ್ಲಿಗಾಗಿ ಆರ್‌ಸಿಬಿಯ ಆತುರವೇ ಕಾಲ್ತುಳಿತಕ್ಕೆ ಕಾರಣ – ಸಿಐಡಿ ತನಿಖೆಯಲ್ಲಿ ಸ್ಫೋಟಕ ವಿಚಾರ ಬಯಲು

    – ಕೊಹ್ಲಿ ಆಪ್ತ ನಿಖಿಲ್ ಸೋಸಲೆಯಿಂದ ವಿಜಯೋತ್ಸವಕ್ಕೆ ಒತ್ತಡ
    – ಕಾಲ್ತುಳಿತದ ವೇಳೆ ಗೇಟ್‌ಗಳ ಬಳಿ ಪೊಲೀಸರೇ ಇರಲಿಲ್ಲ

    ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಸಂಬಂಧ ಸಿಐಡಿ ಬಹುತೇಕ ತನಿಖೆ ಮುಗಿಸಿದ್ದು, ವಿರಾಟ್ ಕೊಹ್ಲಿಗಾಗಿ ಆರ್‌ಸಿಬಿ (RCB) ಮ್ಯಾನೇಜ್‌ಮೆಂಟ್ ತೆಗೆದುಕೊಂಡ ಆತುರದ ನಿರ್ಧಾರವೇ 11 ಜನರ ಸಾವಿಗೆ ಕಾರಣ ಎಂದು ವರದಿ ಸಿದ್ಧಪಡಿಸಿದೆ.

    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stampede) ಉಂಟಾದ ಕಾಲ್ತುಳಿತ ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೂರು ಎಫ್‌ಐಆರ್‌ಗಳ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ ಕಾಲ್ತುಳಿತಕ್ಕೆ ಕಾರಣವಾದ ಅಂಶಗಳನ್ನ ಪತ್ತೆ ಮಾಡಿದೆ. ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅರ್ಧನಾರೇಶ್ವರರನ್ನ ಹುಡುಕಿಕೊಳ್ಳಲಿ: ಹರಿಪ್ರಸಾದ್

    ಸಾವಿರಾರು ವಿಡಿಯೋಗಳು, ಸಿಸಿಟಿವಿ ಕ್ಯಾಮೆರಾ, ಚಿನ್ನಸ್ವಾಮಿ ಸ್ಟೇಡಿಯಂನ 13 ಗೇಟ್‌ಗಳಲ್ಲಿ ಅವ್ಯವಸ್ಥೆ, ಪೊಲೀಸರ ನಿಯೋಜನೆ, ನೂಕುನುಗ್ಗಲು ಉಂಟಾಗಲು ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಿ, ಸಿಐಡಿ ವರದಿ ಸಿದ್ಧಪಡಿಸಿದೆ. ಇದನ್ನೂ ಓದಿ: ರಾಜಮೌಳಿ ಸಿನಿಮಾ ರಿಜೆಕ್ಟ್ ಮಾಡಿದ ನಟ ವಿಕ್ರಂ – ಕಾರಣ ಏನ್ ಗೊತ್ತಾ?

    ವರದಿಯಲ್ಲೇನಿದೆ?
    ಆರ್‌ಸಿಬಿ ಸಿಇಓ ರಾಜೇಶ್ ಮೆನನ್, ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆಯಿಂದ ಕಾರ್ಯಕ್ರಮ ಆಯೋಜನೆ ನಿರ್ಧಾರ ಮಾಡಲಾಗಿತ್ತು. ವಿರಾಟ್ ಕೊಹ್ಲಿಯ (Virat Kohli) ಕಾರಣ ಕೊಟ್ಟು ಕೊಹ್ಲಿ ಆಪ್ತ ನಿಖಿಲ್ ಸೋಸ್ಲೆ ಕೆಎಸ್‌ಸಿಎ ಮೇಲೆ ಅತಿಯಾದ ಒತ್ತಡ ಹಾಕಿ ಕಾರ್ಯಕ್ರಮ ಆಯೋಜಿಸಿದ್ದರು.

    ಕಾರ್ಯಕ್ರಮ ಮುಂದೂಡಿಕೆ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಕೆಎಸ್‌ಸಿಎ ಅಭಿಪ್ರಾಯ ನೀಡಿತ್ತು. ಆದರೆ ಕೊಹ್ಲಿ ಕಾರಣ ಹೇಳಿ ನಾಳೆಯೇ ಕಾರ್ಯಕ್ರಮ ಆಯೋಜನೆ ಆಗಬೇಕು ಎಂದು ನಿಖಿಲ್ ಸೋಸಲೆ ಒತ್ತಡ ಹಾಕಿದ್ದರು. ಕೊಹ್ಲಿ ಯುಕೆಗೆ ಹೋಗಬೇಕು. ಮುಂದೂಡಿದರೆ ಕೊಹ್ಲಿ ಬರುವುದಿಲ್ಲ ಎಂದಿದ್ದರು. ನಿಖಿಲ್ ಸೋಸಲೆ ಒತ್ತಡಕ್ಕೆ ಕಾರ್ಯಕ್ರಮ ಆಯೋಜನೆ ನಡೆದಿತ್ತು. ಇದನ್ನೂ ಓದಿ: ಹಿಮಾಚಲದಲ್ಲಿ ಮೇಘಸ್ಫೋಟ| ಮಧ್ಯರಾತ್ರಿ ಬೊಗಳಿ 67 ಜನರ ಪ್ರಾಣ ಉಳಿಸಿದ ಶ್ವಾನ

    ಟಿಕೆಟ್ ಗೊಂದಲ, ಟ್ವೀಟ್ ಹಿಂದೆಯೂ ನಿಖಿಲ್ ಸೋಸಲೆ ಕಾರಣ. ಟ್ವೀಟ್‌ನಿಂದಲೇ ಸಾಕಷ್ಟು ಜನ ಸೇರಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅಲ್ಲದೇ ಫ್ರೀ ಟಿಕೆಟ್ ಅನೌನ್ಸ್ ಮಾಡಿದ್ದರಿಂದಲೇ ಜನ ಹೆಚ್ಚು ಸೇರಿದ್ದರು.

    ಪೊಲೀಸ್ ಬಂದೋಬಸ್ತ್ನಲ್ಲಿ ಎಡವಟ್ಟಾಗಿತ್ತು. ಕಾಲ್ತುಳಿತದ ವೇಳೆ ಗೇಟ್‌ಗಳ ಬಳಿ ಪೊಲೀಸರೇ ಇರಲಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಹೆಚ್ಚಿನ ಬಂದೋಬಸ್ತ್ ಆಗಿರಲಿಲ್ಲ. ವಿಧಾನಸೌಧದ ಬಳಿಯೇ ಪೊಲೀಸ್ ಇಲಾಖೆ ಹೆಚ್ಚು ಗಮನಹರಿಸಿತ್ತು. ಇದನ್ನೂ ಓದಿ: ಬಹುಭಾಷಾ ನಟ ಆಂಧ್ರ, ತಮಿಳುನಾಡಿನಲ್ಲೇಕೆ ಹೋರಾಡುತ್ತಿಲ್ಲ: ಪ್ರಕಾಶ್ ರೈಗೆ ಕುಟುಕಿದ ಎಂಬಿ ಪಾಟೀಲ್‌

    ಸ್ಟೇಡಿಯಂ ಬಂದೋಬಸ್ತ್ ಬಗ್ಗೆ ಪೊಲೀಸ್ ಅಧಿಕಾರಿಗಳು ನಿಯೋಜನೆ ಬಗ್ಗೆ ರೋಲ್‌ಕಾಲ್ ಆಗಿರಲಿಲ್ಲ. ಕೆಎಸ್‌ಆರ್‌ಪಿ ಸಿಬ್ಬಂದಿಗೂ ಸರಿಯಾದ ಸಂದೇಶ ನೀಡಿರಲಿಲ್ಲ. ಐಪಿಎಲ್ ಮ್ಯಾಚ್ ವೇಳೆಯಂತೆಯೇ ಕೆಎಸ್‌ಆರ್‌ಪಿಗೆ ಸಂದೇಶ ನೀಡಲಾಗಿತ್ತು. ಲಕ್ಷಾಂತರ ಜನ ಸೇರುತ್ತಾರೆ. ಸಿಬ್ಬಂದಿ ಗಸ್ತು ಹಾಗೂ ಬಂದೋಬಸ್ತ್ ಬಗ್ಗೆ ಕೆಎಸ್‌ಆರ್‌ಪಿ ಸಿಬ್ಬಂದಿಗೂ ಸೂಚನೆ ನೀಡಿರಲಿಲ್ಲ ಎಂದು ಸಿಐಡಿ ವರದಿಯಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಹತ್ಯೆ – ಪ್ರಮುಖ ಆರೋಪಿ ಎನ್‌ಕೌಂಟರ್‌ಗೆ ಬಲಿ

    ಸದ್ಯ ಈ ಎಲ್ಲಾ ಅಂಶಗಳನ್ನ ಸಿಐಡಿ ವರದಿಯಲ್ಲಿ ದಾಖಲಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಉಳಿದ ತನಿಖೆ ಮುಗಿಸಿ ಕೋರ್ಟ್‌ಗೆ ವರದಿ ಸಲ್ಲಿಸಲಿದೆ.

  • ಕಾಲ್ತುಳಿತ ಕೇಸ್‌; IPS ಅಧಿಕಾರಿ ವಿಕಾಸ್‌ ಕುಮಾರ್‌ಗೆ ರಿಲೀಫ್‌ – ಅಮಾನತು ರದ್ದಿಗೆ CAT ಆದೇಶ

    ಕಾಲ್ತುಳಿತ ಕೇಸ್‌; IPS ಅಧಿಕಾರಿ ವಿಕಾಸ್‌ ಕುಮಾರ್‌ಗೆ ರಿಲೀಫ್‌ – ಅಮಾನತು ರದ್ದಿಗೆ CAT ಆದೇಶ

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ ವಿಕಾಸ್‌ ಕುಮಾರ್ ವಿಕಾಸ್‌ಗೆ (Vikas Kumar Vikas) ಬಿಗ್‌ ರಿಲೀಫ್‌ ಸಿಕ್ಕಿದೆ.

    ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ವಿಕಾಸ್‌ ಕುಮಾರ್‌ ಅವರ ಅಮಾನತು ರದ್ದುಗೊಳಿಸುವಂತೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT) ಆದೇಶಿಸಿದೆ. ಇದನ್ನೂ ಓದಿ: ಬೆಂಗಳೂರು ಜನತೆಗೆ ಮತ್ತೆ ದರ ಏರಿಕೆ ಬಿಸಿ – ಹೊಸೂರು ರಸ್ತೆಯ ಎರಡು ಟೋಲ್ ದರ ಏರಿಕೆ

    ಸಿಎಟಿ ಆದೇಶದಿಂದ ಸರ್ಕಾರಕ್ಕೆ ಮುಖಭಂಗ ಆಗಿದೆ. ಇನ್ನಿಬ್ಬರು ಅಧಿಕಾರಿಗಳ ಅಮಾನತುನ್ನು ಗಮನಿಸುವಂತೆ ಸರ್ಕಾರಕ್ಕೆ ಸಿಎಟಿ ಆದೇಶಿಸಿದೆ. ಇನ್ನಿಬ್ಬರ ಅಮಾನತು ಅನ್ನು ವಾಪಸ್‌ ಪಡೆಯಬಹುದು ಎಂದು ಸಲಹೆ ನೀಡಿದೆ. ಇಬ್ಬರು ಅಧಿಕಾರಿಗಳು CATಗೆ ಹೋಗದಿದ್ದಕ್ಕೆ ಸರ್ಕಾರಕ್ಕೆ ಸಲಹೆ ನೀಡಿದೆ.

    ಜೂ.4 ರಂದು ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದರು. ಮ್ಯಾಜಿಸ್ಟ್ರೇಟಿಯಲ್‌ಗೆ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಹಿಸಿತ್ತು. ಇದನ್ನೂ ಓದಿ: Hassan | ಎರಡೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಹೃದಯಾಘಾತಕ್ಕೆ ಬಲಿ

    ಪ್ರಕರಣದಲ್ಲಿ ಬೆಂಗಳೂರು ಕಮಿಷನರ್‌ ಆಗಿದ್ದ ದಯಾನಂದ್‌ ಸೇರಿದಂತೆ 6 ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ತಮ್ಮ ಅಮಾನತು ಆದೇಶ ಪ್ರಶ್ನಿಸಿ ವಿಕಾಸ್‌ ಕುಮಾರ್‌ ಅವರನ್ನು ಸಿಎಟಿ ಮೆಟ್ಟಿಲೇರಿದ್ದರು.

  • ಆರ್‌ಸಿಬಿ ಸ್ಟಾರ್‌ ವೇಗಿ ಯಶ್‌ ದಯಾಳ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ – FIR ದಾಖಲು

    ಆರ್‌ಸಿಬಿ ಸ್ಟಾರ್‌ ವೇಗಿ ಯಶ್‌ ದಯಾಳ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ – FIR ದಾಖಲು

    – ಮದ್ವೆಯಾಗೋದಾಗಿ ನಂಬಿಸಿ ಮೋಸ – ಸಿಎಂ ಯೋಗಿಗೂ ಅಧಿಕೃತ ದೂರು ನೀಡಿದ ಯುವತಿ

    ಲಕ್ನೋ: ಐಪಿಎಲ್‌ನಲ್ಲಿ ರಿಂಕು ಸಿಂಗ್‌ನಿಂದ 5 ಸಿಕ್ಸರ್‌ ಹೊಡೆಸಿಕೊಂಡು ಕುಖ್ಯಾತಿ ಪಡೆದಿದ್ದ ಹಾಗೂ 2025ರ ಆವೃತ್ತಿಯಲ್ಲಿ ಆರ್‌ಸಿಬಿ ತಂಡವನ್ನ ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸ್ಟಾರ್‌ ವೇಗಿ ಯಶ್‌ ದಯಾಳ್‌ (Yash Dayal) ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

    ದಯಾಳ್ ಅವರ ಮೇಲೆ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ, ಹಿಂಸೆ ಮತ್ತು ವಂಚನೆ ಆರೋಪ ಹೊರಿಸಿದ್ದಾರೆ. ಹಾಗೆಯೇ ಯಶ್ ದಯಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತ ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ನ್ಯಾಯಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಪೊಲೀಸರಿಗೂ ಮನವಿ ಕೂಡ ಮಾಡಿದ್ದಾರೆ. ಇದನ್ನೂ ಓದಿ: ಭಾರತ, ಪಾಕ್‌ ಮಧ್ಯೆ ಜುಲೈ 20 ರಂದು ಹೈವೋಲ್ಟೇಜ್‌ ಮ್ಯಾಚ್‌

    ಭಾವಿ ಸೊಸೆ ಎಂದು ಪರಿಚಯಿಸಿದ್ರು
    ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಸಿಎಂ ಹೆಲ್ಪ್‌ಲೈನ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದು, ಅದರ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಜಾಲತಾಣಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಮಹಿಳೆ ದಯಾಳ್ ಜೊತೆಗಿನ ತನ್ನ ಫೋಟೋ ಸಹ ಹಂಚಿಕೊಂಡಿದ್ದಾರೆ. ಕಳೆದ 5 ವರ್ಷಗಳಿಂದ ದಯಾಳ್ ಜೊತೆ ಸಂಬಂಧ ಹೊಂದಿದ್ದು, ದಯಾಳ್ ಮದುವೆಯಾಗುವುದಾಗಿ ನಂಬಿಸಿ ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ತನ್ನನ್ನು ಶೋಷಿಸಿದ್ದಾರೆ. ಅಲ್ಲದೇ ದಯಾಳ್ ನನ್ನನ್ನು ನಿಮ್ಮ ಭಾವಿ ಸೊಸೆ ಎಂದು ಅವರ ಕುಟುಂಬಕ್ಕೆ ಪರಿಚಯಿಸಿ, ಆ ಬಳಿಕ ನನಗೆ ವಂಚಿಸಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: 1st Test: ಮಿಂಚಿದ ಡಕೆಟ್- ಭಾರತದ ವಿರುದ್ಧ ಇಂಗ್ಲೆಂಡ್‌ಗೆ 5 ವಿಕೆಟ್‌ಗಳ ಜಯ

    ಅನೇಕ ಮಹಿಳೆಯರೊಟ್ಟಿಗೆ ಸಂಬಂಧ
    ದಯಾಳ್ ತನಗೆ ಮೋಸ ಮಾಡುತ್ತಿದ್ದಾನೆಂದು ತಿಳಿದ ತಕ್ಷಣ ನಾನು ಇದನ್ನು ಪ್ರತಿಭಟಿಸಿದೆ. ಇದರಿಂದ ನಾನು ದೈಹಿಕ ಹಿಂಸೆ ಮತ್ತು ಮಾನಸಿಕ ಕಿರುಕುಳವನ್ನು ಎದುರಿಸಬೇಕಾಯಿತು. ದಯಾಳ್ ನನ್ನೊಂದಿಗೆ ಮಾತ್ರವಲ್ಲದೆ ಅನೇಕ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ದೂರುದಾರೆ ಆರೋಪಿಸಿದ್ದಾರೆ. ಈ ಬಗ್ಗೆ ನಾನು ಜೂನ್ 14 ರಂದು ಮಹಿಳಾ ಸಹಾಯವಾಣಿಗೆ ಪ್ರಕರಣದ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಸಂತ್ರಸ್ತೆ ಪೊಲೀಸರ ವಿರುದ್ಧವೂ ಆರೋಪ ಹೊರಿಸಿದ್ದಾರೆ. ಇದನ್ನೂ ಓದಿ: ಆಂಗ್ಲರ ನೆಲದಲ್ಲಿ ಶತಕ ಸಿಡಿಸಿ ಮೆರೆದಾಡಿದ ರಾಹುಲ್‌ – ಇದು ತುಂಬಾ ಸ್ಪೆಷಲ್‌ ಅಂದ್ರು ಅಥಿಯಾ ಶೆಟ್ಟಿ

  • ಚಿನ್ನಸ್ವಾಮಿ ಕಾಲ್ತುಳಿತ – ಮೂವರು ಐಪಿಎಸ್ ಅಧಿಕಾರಿಗಳ ಅಮಾನತು ಆದೇಶ ಅಂಗೀಕರಿಸಿದ ಕೇಂದ್ರ

    ಚಿನ್ನಸ್ವಾಮಿ ಕಾಲ್ತುಳಿತ – ಮೂವರು ಐಪಿಎಸ್ ಅಧಿಕಾರಿಗಳ ಅಮಾನತು ಆದೇಶ ಅಂಗೀಕರಿಸಿದ ಕೇಂದ್ರ

    ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ಪ್ರಕರಣ ಸಂಬಂಧ ಮೂವರು ಐಪಿಎಸ್ ಅಧಿಕಾರಿಗಳನ್ನು (IPS Officers) ಅಮಾನತುಗೊಳಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ವರದಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ.

    ಆರ್‌ಸಿಬಿ (RCB) ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಸಾವನ್ನಪ್ಪಿದ ಹಿನ್ನೆಲೆ ಕರ್ತವ್ಯ ಲೋಪ ಆರೋಪದಡಿ ರಾಜ್ಯ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ರವಾನೆ ಮಾಡಿತ್ತು. ಇದನ್ನೂ ಓದಿ: ಭದ್ರಾ ಬಲದಂಡೆ ಕಾಲುವೆ ಸೀಳಿ ಕುಡಿಯುವ ನೀರಿನ ಅವೈಜ್ಞಾನಿಕ ಕಾಮಗಾರಿ – ಇಂದು ದಾವಣಗೆರೆ ಬಂದ್

    ಇದೀಗ ರಾಜ್ಯ ಸರ್ಕಾರದ ವರದಿಯನ್ನು ಅಂಗೀಕರಿಸಿದ ಕೇಂದ್ರ ಡಿಪಿಎಆರ್‌ಗೆ ಮಾಹಿತಿ ರವಾನೆ ಮಾಡಿದೆ. ದಯಾನಂದ್, ವಿಕಾಸ್ ಕುಮಾರ್ ಮತ್ತು ಶೇಖರ್ ಎಂಬ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿತ್ತು. ಇದನ್ನೂ ಓದಿ: ವಿಮಾನ ದುರಂತವಾಗಿ ದಿನಗಳೂ ಕಳೆದಿರಲಿಲ್ಲ – ಪಾರ್ಟಿ ಮೂಡ್‌ನಲ್ಲಿದ್ದ ಉದ್ಯೋಗಿಗಳ ವಜಾಗೊಳಿಸಿದ Air India ವೆಂಚರ್‌

  • ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಐಪಿಎಸ್ ಅಧಿಕಾರಿ ದಯಾನಂದ್ ವಿಚಾರಣೆಗೆ ಹಾಜರು

    ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಐಪಿಎಸ್ ಅಧಿಕಾರಿ ದಯಾನಂದ್ ವಿಚಾರಣೆಗೆ ಹಾಜರು

    – ಒಂದು ಗಂಟೆಗಳ ಕಾಲ ಜಿಲ್ಲಾಧಿಕಾರಿ ಜಗದೀಶ್‌ರಿಂದ ದಯಾನಂದ್ ವಿಚಾರಣೆ

    ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ಪ್ರಕರಣ ಸಂಬಂಧ ಅಮಾನತು ಆದ ಐಪಿಎಸ್ ಅಧಿಕಾರಿ ದಯಾನಂದ್ (B Dayanand) ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಎರಡು ನೋಟಿಸ್‌ಗಳ ಜಾರಿ ಬಳಿಕ ಇಂದು ದಯಾನಂದ್ ವಿಚಾರಣೆಗೆ ಹಾಜರಾಗಿದ್ದರು

    ಒಂದು ಗಂಟೆಗೂ ಹೆಚ್ಚು ಕಾಲ ಜಿಲ್ಲಾಧಿಕಾರಿ ಜಗದೀಶ್ ದಯಾನಂದ್ ಅವರ ಹೇಳಿಕೆಯನ್ನು ದಾಖಲು ಮಾಡಿಕೊಂಡರು. ಭದ್ರತಾ ಲೋಪ, ಕರ್ತವ್ಯ ಲೋಪ ಸಂಬಂಧ ಪ್ರಶ್ನೆಗಳ ಸುರಿಮಳೆಗೈದರು. ಡಿಸಿಪಿ ವಿಧಾನಸೌಧ ಕರಿ ಬಸವನಗೌಡ ಪತ್ರದ ಬಗ್ಗೆಯೂ ಜಿಲ್ಲಾಧಿಕಾರಿ ಮಾಹಿತಿ ಕೇಳಿದರು. ಇದನ್ನೂ ಓದಿ: ಮಂಗಳೂರು| ಹೆತ್ತ ತಾಯಿಯನ್ನೇ ಕೊಲೆಗೈದು ಸುಟ್ಟು ಹಾಕಿದ ಪಾಪಿ ಮಗ

    ಆರ್‌ಸಿಬಿ ಹಾಗೂ ಡಿಎನ್‌ಎ ಅಧಿಕಾರಿಗಳಿಗೆ ನೀವೇನಾದರೂ ಇವೆಂಟ್ ಮಾಡಲು ತಿಳಿಸಿದ್ದೀರಾ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ನಿಮಗೆ ಮಾಹಿತಿ ನೀಡಿದ್ದಾರಾ? ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಬರುತ್ತಾರೆ ಎಂದು ನಿರೀಕ್ಷೆ ಇತ್ತಾ? ಒಂದು ವೇಳೆ ನಿರೀಕ್ಷೆ ಇಟ್ಟಿದ್ದರೆ ಯಾಕೆ ನೀವು ಸರಿಯಾದ ರೀತಿ ಬಂದೋಬಸ್ತ್ ಮಾಡಲಿಲ್ಲ? ನೀವು ಆರ್‌ಸಿಬಿ ತಂಡಕ್ಕೆ ಅಥವಾ ಡಿಎನ್‌ಎ ತಂಡಕ್ಕೆ ನೋಟಿಸ್ ನೀಡಿದ್ದೀರಾ? ನಿಮಗೆ ಸಾವಿನ ಬಗ್ಗೆ ಯಾವಾಗ ತಿಳಿಯಿತು? ಮಧ್ಯಾಹ್ನ ಮೂರು ಗಂಟೆಗೆ ಇರುವ ಕಾರ್ಯಕ್ರಮಕ್ಕೆ ಬೆಳಗ್ಗೆ ಯಾಕೆ ಬಂದೋಬಸ್ತ್ ಮಾಡಲು ತಡವಾಯಿತು ಎಂಬ ಪ್ರಶ್ನೆಗಳನ್ನು ಕೇಳಲಾಯಿತು. ಈ ಎಲ್ಲಾ ಪ್ರಶ್ನೆಗಳಿಗೆ ದಯಾನಂದ್ ಉತ್ತರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಜೀವನ ತುಂಬಾ ಆಕರ್ಷಕ: ವರ್ಗಾವಣೆ ವಿರೋಧಿಸಿ ವೈದ್ಯರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ

    ಈಗಾಗಲೇ 65 ಗಾಯಾಳುಗಳು, ಮೃತರಾದ 11 ಕುಟುಂಗಳ ಜೊತೆಗೆ ಭದ್ರತೆಗೆ ಇದ್ದ ಎಸಿಪಿ, ಡಿಸಿಪಿ, ಇನ್ಸ್ಪೆಕ್ಟರ್ ಸೇರಿ 60ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವಿಚಾರಣೆ ಮುಕ್ತಾಯ ಆಗಿದ್ದು, ಏನಾದ್ರು ಸ್ಪಷ್ಟನೆ ಬೇಕಿದ್ದರೆ ಕೆಲ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ. ಮ್ಯಾಜಿಸ್ಟ್ರೇಟ್ ತನಿಖೆ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಈ ವಾರ ಅಥವಾ ಮುಂದಿನ ವಾರದಲ್ಲಿ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳು ವರದಿ ಸಲ್ಲಿಕೆ ಮಾಡಲಿದ್ದಾರೆ. ಇದನ್ನೂ ಓದಿ: ಮೈಕ್ರೋಸಾಫ್ಟ್‌ ಹಿಂದಿಕ್ಕಿ ವಿಶ್ವದ ಮೌಲ್ಯಯುತ ಕಂಪನಿಯಾದ ಎನ್‌ವಿಡಿಯಾ

  • ಸಿದ್ಧವಾಗಿದೆ ಐಪಿಎಸ್ ಅಧಿಕಾರಿಗಳ ಸಸ್ಪೆಂಡ್ ರಿಪೋರ್ಟ್ – ನಾಳೆ ಕೇಂದ್ರಕ್ಕೆ ಸಲ್ಲಿಕೆ?

    ಸಿದ್ಧವಾಗಿದೆ ಐಪಿಎಸ್ ಅಧಿಕಾರಿಗಳ ಸಸ್ಪೆಂಡ್ ರಿಪೋರ್ಟ್ – ನಾಳೆ ಕೇಂದ್ರಕ್ಕೆ ಸಲ್ಲಿಕೆ?

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ (Chinnaswamy Stadium Stampede) ಕೇಸ್‌ಗೆ ಸಂಬಂಧಿಸಿದ ಐಪಿಎಸ್ ಅಧಿಕಾರಿಗಳ ಸಸ್ಪೆಂಡ್ ರಿಪೋರ್ಟ್ ಸಿದ್ಧವಾಗಿದೆ. ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಾಳೆಯೊಳಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ.

    ಯುಪಿಎಸ್‌ಸಿ ನಿಯಾಮವಳಿಗಳ ಪ್ರಕಾರ 15 ದಿನದೊಳಗಾಗಿ ವರದಿ ಸಲ್ಲಿಸಬೇಕು. ಐಪಿಎಸ್ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿದ್ರೆ ವರದಿ ಸಲ್ಲಿಸಬೇಕು. ಆದರೆ, ಅಮಾನತು ಬಗ್ಗೆ ಕೇಂದ್ರಕ್ಕೆ ಮಾಹಿತಿಯನ್ನಷ್ಟೇ ನೀಡಿರುವ ರಾಜ್ಯ ಸರ್ಕಾರ ಲಿಖಿತ ವರದಿ ನೀಡಬೇಕಿದೆ. ಡಿಪಿಎಆರ್‌ನಿಂದಲೇ ಐಪಿಎಸ್ ಅಧಿಕಾರಿಗಳ ಸಸ್ಪೆಂಡ್ ವರದಿ ತಯಾರಾಗಿದೆ. ಇದನ್ನೂ ಓದಿ: ಕಾಲ್ತುಳಿತ ತಡೆಗೆ ಹೊಸ ಕಾನೂನು – 3 ವರ್ಷ ಜೈಲು, 5 ಲಕ್ಷ ದಂಡ

    ಐಪಿಎಸ್ ಅಧಿಕಾರಿಗಳಾದ ದಯಾನಂದ್, ಶೇಖರ್, ವಿಕಾಸ್ ಕುಮಾರ್ ಅವರನ್ನು ಚಿನ್ನಸ್ವಾಮಿ ಕಾಲ್ತುಳಿತದ ಕರ್ತವ್ಯಲೋಪದಡಿಯಲ್ಲಿ ಅಮಾನತು ಮಾಡಲಾಗಿತ್ತು. ಇದೀಗ ವರದಿಯಲ್ಲೂ ಪೊಲೀಸರ ಲೋಪ ಎತ್ತಿ ಹಿಡಿದಿದ್ಯಾ ರಾಜ್ಯ ಸರ್ಕಾರ ಎಂಬ ಪ್ರಶ್ನೆ ಮೂಡಿದೆ.

    ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದ ಹೊಣೆ ಪೊಲೀಸರದ್ದಾಗಿದ್ದು, ಐಪಿಎಸ್ ಅಧಿಕಾರಿಗಳ ಮೇಲೆ ಕರ್ತವ್ಯಲೋಪದ ಚಾರ್ಜ್‌ಶೀಟ್ ಇದೆ ಎನ್ನಲಾಗಿದೆ. ರಾಜ್ಯ ಸರ್ಕಾರದ ಸಸ್ಪೆಂಡ್ ರಿಪೋರ್ಟ್ ಏನಾಗುತ್ತೆ? ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಸಸ್ಪೆಂಡ್ ಕ್ರಮವನ್ನ ಎತ್ತಿ ಹಿಡಿಯುತ್ತಾ ಅಥವಾ ರಿಜೆಕ್ಟ್ ಮಾಡುತ್ತಾ ಎಂಬುದು ಸದ್ಯದ ಕುತೂಹಲವಾಗಿದೆ. ಇದನ್ನೂ ಓದಿ: ಕಾಲ್ತುಳಿತ ತನಿಖೆಗೆ ಇನ್ನೊಂದು ವಾರ ಗಡುವು ಕೇಳಲು ಚಿಂತನೆ – ಸಿಸಿಟಿವಿ ಫೂಟೇಜ್ ನೀಡುವಂತೆ ಡಿಸಿ ಪತ್ರ

  • ಕಾಲ್ತುಳಿತ ತಡೆಗೆ ಹೊಸ ಕಾನೂನು – 3 ವರ್ಷ ಜೈಲು, 5 ಲಕ್ಷ ದಂಡ

    ಕಾಲ್ತುಳಿತ ತಡೆಗೆ ಹೊಸ ಕಾನೂನು – 3 ವರ್ಷ ಜೈಲು, 5 ಲಕ್ಷ ದಂಡ

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ (Chinnaswamy Stampede) ಪ್ರಕರಣದ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು ಹೊಸ ಕಾನೂನು ತರಲು ಹೊರಟಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಜನಸಂದಣಿ ನಿಯಂತ್ರಣ ಮಸೂದೆ (Crowd Control Bill) ಮಂಡಿಸಿದ್ದು ಮುಂದಿನ ಕ್ಯಾಬಿನೆಟ್‌ನಲ್ಲಿ (Cabinet) ವಿಸ್ತಾರವಾಗಿ ಚರ್ಚೆ ನಡೆಸಲಿದೆ.

    ಕ್ರೀಡೆ, ಸರ್ಕಸ್ ಇತರೇ ವಾಣಿಜ್ಯ ಉದ್ದೇಶದ ಕಾರ್ಯಕ್ರಮಗಳಿಗೆ ಸರ್ಕಾರ ಬಿಗಿ ನಿಯಮ ಜಾರಿಗೆ ಮುಂದಾಗಿದೆ. ಕಾರ್ಯಕ್ರಮಕ್ಕೂ ಮುನ್ನ ಅಥವಾ ಕಾರ್ಯಕ್ರಮ ನಡೆಯುವಾಗ ಜನರನ್ನು ನಿಯಂತ್ರಿಸಲಾಗದಿದ್ದರೆ ಆಯೋಜಕರಿಗೆ 3 ವರ್ಷದ ತನಕ ಜೈಲು, 5 ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ.

    ಕಾರ್ಯಕ್ರಮದ ಆಯೋಜಕರು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮತಿಗೆ ಅರ್ಜಿ ಹಾಕಬೇಕು. ಅಲ್ಲಿಯೇ ಸ್ಥಳ, ಸಮಯ ಎಲ್ಲವೂ ನಿರ್ಧಾರ ಮಾಡಬೇಕಾಗುತ್ತದೆ. ಇದನ್ನೂ ಓದಿ: ಗುತ್ತಿಗೆ ಆಯ್ತು ಈಗ ವಸತಿ ಯೋಜನೆಯಲ್ಲೂ ಮುಸ್ಲಿಮ್‌ ಮೀಸಲಾತಿ ಶೇ.15ಕ್ಕೆ ಹೆಚ್ಚಳ

     

    ಜಾತ್ರೆ, ರಥೋತ್ಸವ, ಪಲ್ಲಕ್ಕಿ ಉತ್ಸವ, ತೆಪ್ಪದ ತೇರು, ಉರುಸ್ ಅಥವಾ ಯಾವುದೇ ಧರ್ಮ, ಜಾತಿ ಅಥವಾ ಪಂಥಕ್ಕೆ ಸಂಬಂಧಿಸಿದ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಕಾನೂನು ಅನ್ವಯ ಆಗುವುದಿಲ್ಲ.

    ಮಸೂದೆಯಲ್ಲಿ ಏನಿದೆ?
    ಕ್ರೀಡೆ, ಸರ್ಕಸ್, ಪ್ರಾಯೋಜಿತ ಕಾರ್ಯಕ್ರಮಗಳು, ರಾಜಕೀಯ ರ್‍ಯಾಲಿ ಸೇರಿದಂತೆ ಇತರೇ ವಾಣಿಜ್ಯ ಉದ್ದೇಶದ ಕಾರ್ಯಕ್ರಮಗಳು ಈ ಮಸೂದೆ ವ್ಯಾಪ್ತಿಯಲ್ಲಿ ಬರುತ್ತದೆ. ಕಾರ್ಯಕ್ರಮಗಳಲ್ಲಿ ಗಲಾಟೆ, ಅಹಿತಕರ ಘಟನೆ, ದೇಹ ಹಾನಿ, ಸಾವು ನೋವಿಗೆ ಕಾರ್ಯಕ್ರಮ ಆಯೋಜಕರೇ ಜವಾಬ್ದಾರಿಯಾಗುತ್ತಾರೆ.

    ಗಾಯಾಳುಗಳಿಗೆ, ಮೃತ ಕುಟುಂಬಗಳಿಗೆ ಪರಿಹಾರ ನೀಡದಿದ್ದರೆ ಕಾರ್ಯಕ್ರಮ ಆಯೋಜಕರ ಆಸ್ತಿ ಹರಾಜು ಮೂಲಕ ಪರಿಹಾರ ವಸೂಲಿ ಮಾಡಲಾಗುತ್ತದೆ.

    ಶಾಂತಿ ಭಂಗ ತರುವ ಮುನ್ಸೂಚನೆ ಇದ್ದರೆ, ಗಲಾಟೆ, ಅಹಿತಕರ ಘಟನೆ ನಡೆದರೆ ಅನುಮತಿ ಇದ್ದರೂ ಅಹಿತಕರ ಘಟನೆ ನಡೆದರೆ ಕಾರ್ಯಕ್ರಮ ನಿಷೇಧಿಸುವ ಅಧಿಕಾರವನ್ನು ನೀಡಲಾಗಿದೆ.

  • ಆರ್‌ಸಿಬಿ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿದೆ – ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಬಾಂಬ್

    ಆರ್‌ಸಿಬಿ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿದೆ – ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಬಾಂಬ್

    – ಬಿಸಿಸಿಐಗೆ ಶೀಘ್ರದಲ್ಲೇ ದೂರು ಕೊಡ್ತೇನೆ ಎಂದ ಅಬ್ರಹಾಂ

    ಬೆಂಗಳೂರು: 2025ರ ಐಪಿಎಲ್‌ ಫೈನಲ್‌ನಲ್ಲಿ ಪಂಜಾಬ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಗೆದ್ದು 18 ವರ್ಷಗಳ ಬಳಿಕ ಟ್ರೋಫಿ ಮುಡಿಗೇರಿಸಿಕೊಂಡಿತು. ಆದ್ರೆ ಈ ಖುಷಿ ಒಂದು ದಿನವೂ ಉಳಿಯಲಿಲ್ಲ. ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮದ ವೇಳೆ ಕಾಲ್ತುಳಿತ ಸಂಭವಿಸಿ 11 ಜನ ಸಾವನ್ನಪ್ಪಿದ್ರು. ಈ ಎಲ್ಲ ಬೆಳವಣಿಗೆಗಳ ನಡುವೆ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ (TJ Abraham) ಆರ್‌ಸಿಬಿ ವಿರುದ್ಧ ಫಿಕ್ಸಿಂಗ್‌ ಬಾಂಬ್‌ ಸಿಡಿಸಿದ್ದಾರೆ.

    ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ (Bengaluru Stampede Case) ಸಂಬಂಧಿಸಿದಂತೆ ಸಿಎಂ, ಡಿಸಿಎಂ ಸೇರಿದಂತೆ ಐಎಎಸ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಟಿಜೆ ಅಬ್ರಹಾಂ ದೂರು ದಾಖಲಿಸಿದ್ದಾರೆ. ಇದೇ ವೇಳೆ ಆರ್‌ಸಿಬಿ ವಿರುದ್ಧ ಫಿಕ್ಸಿಂಗ್‌ ಆರೋಪ ಮಾಡಿದ್ದಾರೆ. ಇದನ್ನೂ ಓದಿ: `ಬನ್ನಿ ಹಾಪ್ ಕ್ಯಾಚ್’ ರೂಲ್ಸ್‌ಗೆ ಐಸಿಸಿ ಬ್ರೇಕ್ – ಶೀಘ್ರವೇ ಹೊಸ ರೂಲ್ಸ್

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫೈನಲ್ ಪಂದ್ಯಕ್ಕೂ ಮುನ್ನವೇ ವಿಧಾನಸೌಧದ ಬಳಿ ಸಂಭ್ರಮಾಚರಣೆ, ಮೆರವಣಿಗೆ ಸಂಬಂಧ ಕಬ್ಬನ್ ಪಾರ್ಕ್ ಎಸಿಪಿಗೆ ಮಾಹಿತಿ ನೀಡಿ, ವಿಧಾನಸೌಧ ಬಳಿ ತಯಾರಿ ಮಾಡಿದ್ರಿ. ನಮ್ಮ ತಂಡ ಗೆಲ್ಲುತ್ತೆ ಅನ್ನೋ ಬಗ್ಗೆ ನಿಮಗೆ ಗೊತ್ತಾಗಿದ್ದು ಹೇಗೆ? ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಆಸೀಸ್‌ ಲಕ್ಕಿ ಚಾರ್ಮ್‌ಗಳಿಗೆ ಸೋಲಿನ ರುಚಿ ತೋರಿಸಿದ ಹರಿಣರು – ಹೇಜಲ್ವುಡ್‌ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌

    ಪಂದ್ಯ ಆರಂಭಕ್ಕೂ ಮುನ್ನವೇ ಕಾರ್ಯಕ್ರಮ ಆಯೋಜನೆ ಪ್ಲ್ಯಾನ್ ಮಾಡಿದ್ದು ಹೇಗೆ? ಆಗಿದ್ದರೆ ಮೊದಲೇ ಆರ್‌ಸಿಬಿ ಗೆಲ್ಲುವ ಬಗ್ಗೆ ನಿಮಗೆ ಮಾಹಿತಿ‌ ಇತ್ತಾ? ಅಥವಾ ಮ್ಯಾಚ್ ಫಿಕ್ಸಿಂಗ್ ಆಗಿತ್ತಾ? ಈ ಬಗ್ಗೆ ಅನುಮಾನ ಇದೆ. ಈ ಬಗ್ಗೆಯೂ ಬಿಸಿಸಿಐಗೆ ಮುಂದಿನ ದಿನಗಳಲ್ಲಿ ದೂರು ಕೊಡ್ತೇನೆ ಎಂದಿದ್ದಾರೆ. ಇದನ್ನೂ ಓದಿ: 5 ಎಸೆತಗಳಲ್ಲಿ 5 ವಿಕೆಟ್‌ – ಮತ್ತೆ ದಿಗ್ವೇಶ್‌ ರಾಥಿ ಕಮಾಲ್‌

  • ಕಾಲ್ತುಳಿತ ತನಿಖೆಗೆ ಇನ್ನೊಂದು ವಾರ ಗಡುವು ಕೇಳಲು ಚಿಂತನೆ – ಸಿಸಿಟಿವಿ ಫೂಟೇಜ್ ನೀಡುವಂತೆ ಡಿಸಿ ಪತ್ರ

    ಕಾಲ್ತುಳಿತ ತನಿಖೆಗೆ ಇನ್ನೊಂದು ವಾರ ಗಡುವು ಕೇಳಲು ಚಿಂತನೆ – ಸಿಸಿಟಿವಿ ಫೂಟೇಜ್ ನೀಡುವಂತೆ ಡಿಸಿ ಪತ್ರ

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ (Chinnaswamy Stampede) ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್ ತನಿಖೆ ಚುರುಕು ಗೊಳಿಸಿದ ಜಿಲ್ಲಾಧಿಕಾರಿ ಜಗದೀಶ್ ಟೆಕ್ನಿಕಲ್ ಎವಿಡೆನ್ಸ್ ಮೇಲೆ ಕಣ್ಣಿಟ್ಟಿದ್ದಾರೆ.

    ಚಿನ್ನಸ್ವಾಮಿ ಕ್ರೀಡಾಂಗಣದ ಸಂಪೂರ್ಣ ಸಿಸಿಟಿವಿ (CCTV) ದೃಶ್ಯಾವಳಿ ನೀಡುವಂತೆ ಪತ್ರ ಬರೆದಿದ್ದು, ಸ್ಟೇಡಿಯಂ ಹೊರ ಭಾಗ, ಒಳಭಾಗದ ಫೂಟೇಜ್ ಒದಗಿಸಲು ಸೂಚನೆ ನೀಡಲಾಗಿದೆ. ಆದರೆ ಎಲ್ಲಾ ಸಿಸಿಟಿವಿ ವೀಡಿಯೋ ಸಿಐಡಿ ವಶಕ್ಕೆ ಪಡೆದುಕೊಂಡಿದ್ದು, ಸಿಸಿಟಿವಿ ಬಗ್ಗೆ ಸಿಐಡಿ ಜೊತೆಗೂ ಡಿಸಿ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡ | ಅರಬ್ಬಿ ಸಮುದ್ರದಲ್ಲಿ ಭಾರೀ ಅಲೆ ಸಾಧ್ಯತೆ – ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

    ಚಿನ್ನಸ್ವಾಮಿ ಮುಂಭಾಗ ರಸ್ತೆಯಲ್ಲಿದ್ದ ಬಹುತೇಕ ಸುಮಾರು 30ಕ್ಕು ಹೆಚ್ಚು ಫೂಟೇಜ್‌ಗಳನ್ನು ಪಡೆದು ದೃಶ್ಯಾವಳಿ ಪರಿಶೀಲನೆ ನಡೆಸಿ ಘಟನೆ ಕುರಿತು ವಿಶ್ಲೇಷಣೆ ನಡೆಸಲಾಗುತ್ತಿದೆ. ಭದ್ರತಾ ವ್ಯವಸ್ಥೆ, ಪೊಲೀಸರ ನಿಯೋಜನೆ, ಪೊಲೀಸ್ ಸಿಬ್ಬಂದಿ ಸಂಖ್ಯೆ, ಜನರ ಕ್ರೌಡ್ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಇದೇ ವೇಳೆ ಕಾಲ್ತುಳಿತ ಸಂಬಂಧ 70ಕ್ಕೂ ಹೆಚ್ಚು ಮಂದಿಯಿಂದ ಕಾಲ್ತುಳಿತ, ನೂಕು ನುಗ್ಗಲು ಬಗ್ಗೆ ಹೇಳಿಕೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: 6 ಲಕ್ಷ ಹಣ ನೀಡುವಂತೆ ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್‌ಗೆ ಬೆದರಿಕೆ – ಎನ್‌ಸಿಆರ್ ದಾಖಲು

    ಮೃತರ ಕುಟುಂಬದವರು, ಗಾಯಾಳುಗಳು, ಪ್ರತ್ಯಕ್ಷದರ್ಶಿಗಳು, ಕೆಎಸ್‌ಸಿಎ, ಆರ್‌ಸಿಬಿ, ಡಿಎನ್‌ಎ, ಬಿಬಿಎಂಪಿ, ಪೊಲೀಸ್ ಅಧಿಕಾರಿಗಳ ಸುಮಾರು 70 ಮಂದಿಯ ಹೇಳಿಕೆ ಪಡೆದು ಕಾಲ್ತುಳಿತ ಸಂಬಂಧ ಸವಿವರವಾಗಿ ವರದಿ ತಯಾರಿ ಮಾಡಲಾಗುತ್ತಿದೆ. ಸದ್ಯ ಇನ್ನೂ ಕೆಲವರ ಹೇಳಿಕೆ ಬಾಕಿ ಹಿನ್ನೆಲೆ ಒಂದು ವಾರ ಅವಧಿ ವಿಸ್ತರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲು ಚಿಂತನೆ ನಡೆಸಲಾಗಿದೆ. ಇದನ್ನೂ ಓದಿ: ಬಿಸಿಯೂಟ ತಯಾರಕರಿಗೆ ಮಾಸಿಕ ಗೌರವ ಸಂಭಾವನೆ 1,000 ರೂ. ಹೆಚ್ಚಳ

  • ಸಿದ್ದರಾಮಯ್ಯ, ಡಿಕೆಶಿ ವಿಸ್ಕಿ ಪ್ರಚಾರ ಮಾಡೋದಕ್ಕೆ RCB ಸಂಭ್ರಮ ಕಾರ್ಯಕ್ರಮ ಮಾಡಿದ್ರಾ?: ಸಿ.ಟಿ.ರವಿ ವಾಗ್ದಾಳಿ

    ಸಿದ್ದರಾಮಯ್ಯ, ಡಿಕೆಶಿ ವಿಸ್ಕಿ ಪ್ರಚಾರ ಮಾಡೋದಕ್ಕೆ RCB ಸಂಭ್ರಮ ಕಾರ್ಯಕ್ರಮ ಮಾಡಿದ್ರಾ?: ಸಿ.ಟಿ.ರವಿ ವಾಗ್ದಾಳಿ

    ಬೆಂಗಳೂರು: ಸರ್ಕಾರಕ್ಕೂ ಆರ್‌ಸಿಬಿಗೂ (RCB) ಏನ್ ಸಂಬಂಧ! ಅದು ಹೇಗೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಮಾಡಿದ್ರು? ರಾಯಲ್ ಚಾಲೆಂಜರ್ಸ್ ಅಂದ್ರೆ ಏನು..!? ವಿಸ್ಕಿ ಪ್ರಚಾರಕ್ಕೆ ಅಂತಾ ಮಲ್ಯ ಹೇಳಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ವಿಸ್ಕಿ ಪ್ರಚಾರ ಮಾಡೋದಕ್ಕೆ ಕಾರ್ಯಕ್ರಮ ಮಾಡಿದ್ರಾ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ (C.T.Ravi) ಕಿಡಿಕಾರಿದರು.

    ಸಿಎಂ ಸಿದ್ದರಾಮಯ್ಯಗೆ (Siddaramaiah) ತಿರುಗೇಟು ನೀಡಿದ ರವಿ, ಆರ್‌ಸಿಬಿ ನಮ್ಮ ರಾಜ್ಯವನ್ನ ಪ್ರತಿನಿಧಿಸಿತ್ತಾ? ರಾಜ್ಯದ ಆಟಗಾರರು ಯಾರು ಇದ್ರು? ಮಾಲೀಕರು ಕರ್ನಾಟಕದವರು ಇದ್ರಾ? ಸರ್ಕಾರಕ್ಕೆ ಮಾಡೋದಕ್ಕೆ ಬೇರೆ ಏನೂ ಕೆಲಸ ಇರಲಿಲ್ಲವಾ? ರಾಜ್ಯದ ಮರ್ಯಾದೆ ಹರಾಜು ಹಾಕಿದ್ದಾರೆ. ಸರ್ಕಾರ ಅನುಮತಿ ‌ಕೊಡದಿದ್ದರೆ ಅಭಿಮಾನಿಗಳು ಸ್ಟೇಡಿಯಂಗೆ ಬರ್ತಾ ಇರಲಿಲ್ಲ. ಇದು ಸರ್ಕಾರದ ಉದ್ದೇಶಪೂರ್ವಕ ನಿರ್ಲಕ್ಷ್ಯ. ಅದಕ್ಕೆ ರಾಜೀನಾಮೆ ಕೇಳ್ತಿರೋದು ಅಂತಾ ವಾಗ್ದಾಳಿ ‌ನಡೆಸಿದರು. ಇದನ್ನೂ ಓದಿ: EXCLUSIVE | ಲೋಕಾಯುಕ್ತ ಲಂಚ ಪ್ರಕರಣಕ್ಕೆ ಡೈರಿ ಮಿಸ್ಟರಿ – ನಿಂಗಪ್ಪ ಮನೆಯಲ್ಲಿದ್ದ 2 ಡೈರಿ ರಿಕವರಿ

    ಆರ್ಗನೈಸೈಡ್ ಕ್ರೈಂ ಬೇರೆ, ಆಕಸ್ಮಿಕ ಘಟನೆ ಬೇರೆ. ವಿಧಾನಸೌಧದಲ್ಲಿ ಸಂಭ್ರಮಾಚರಣೆ ಮಾಡಿದ್ದು ಆರ್ಗನೈಸೈಡ್ ಕ್ರೈಂ‌. ಅಹಮದಾಬಾದ್‌ನಲ್ಲಿ ನಡೆದಿರುವುದು ಆಕಸ್ಮಿಕ ಘಟನೆ. ಬೇರೆ ರಾಜ್ಯಗಳಲ್ಲಿ ಆರ್ಗನೈಸೈಡ್ ಕ್ರೈಂ ನಡೆದಿದ್ರೆ, ಅಲ್ಲಿ ಹೋಗಿ ರಾಜೀನಾಮೆ ಕೇಳಲಿ ಎಂದು ಟಾಂಗ್ ಕೊಟ್ಟರು.

    ಇದೇ ವೇಳೆ ರಾಮಲಿಂಗಾರೆಡ್ಡಿಗೆ ತಿರುಗೇಟು ನೀಡಿದ ಸಿ.ಟಿ.ರವಿ, ರಾಮಲಿಂಗಾರೆಡ್ಡಿಗೆ ಮನುಷ್ಯತ್ವ ಇದ್ರೆ 11 ಜನರ ಸಾವಿನ ಸಂಕಟ ಕೇಳಲಿ. ಅವರ ಮನೆಗೆ ಹೋಗಿ ನೋಡಲಿ. ಇವರು ಏಕೆ ಅನುಮತಿ ಕೊಟ್ರು? ಇವರು ಅನುಮತಿ ಕೊಟ್ಟಿದ್ದಕ್ಕೆ ಸ್ಟೇಡಿಯಂಗೆ ಬಂದಿದ್ದು. ಸಿಎಂ, ಡಿಸಿಎಂಗೂ‌ ಮನುಷ್ಯತ್ವ ಇಲ್ಲ. ಒಬ್ಬರು ದೋಸೆ ತಿನ್ನಲು ಹೋಗ್ತಾರೆ, ಇನ್ನೊಬ್ಬರು ಕಪ್‌ಗೆ ಮುತ್ತಿಡ್ತಾರೆ ಎಂದು ಸಿಎಂ, ಡಿಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಏನೇ ಆದ್ರೂ ನಾವು 2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡ್ತೇವೆ: ಡಿಕೆಶಿ