Tag: rcb

  • ಗ್ರೌಂಡ್‌ ಹೊರಗೂ ದಾಖಲೆ ಬರೆದ ನಾಕೌಟ್‌ ಕದನ – ಆರ್‌ಸಿಬಿಗೆ ಮುಂದಿರುವ ಕಠಿಣ ಸವಾಲುಗಳೇನು?

    ಗ್ರೌಂಡ್‌ ಹೊರಗೂ ದಾಖಲೆ ಬರೆದ ನಾಕೌಟ್‌ ಕದನ – ಆರ್‌ಸಿಬಿಗೆ ಮುಂದಿರುವ ಕಠಿಣ ಸವಾಲುಗಳೇನು?

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (RCB vs CSK) ನಡುವಿನ ಟಾಟಾ ಐಪಿಎಲ್ 2024ರ ನಾಕೌಟ್‌ ಪಂದ್ಯವು ಜಿಯೋಸಿನಿಮಾದಲ್ಲಿ‌ ಏಕಕಾಲಕ್ಕೆ 50 ಕೋಟಿ ಜನರಿಂದ ವೀಕ್ಷಣೆ ಕಂಡಿದ್ದು, ಮೈದಾನದ ಹೊರಗೂ ದಾಖಲೆ ಬರೆದಿದೆ.

    ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯವು ರಣರೋಚಕವಾಗಿತ್ತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಆರ್‌ಸಿಬಿ 218 ರನ್‌ ಗಳಿಸಿ ಸಿಎಸ್‌ಕೆ ಗೆಲುವಿಗೆ 219 ರನ್‌ಗಳ ಗುರಿ ನೀಡಿತ್ತು. ಆದ್ರೆ ಸಿಎಸ್‌ಕೆ ಪ್ಲೇ ಆಫ್‌ಗೆ (IPL Playoffs) ಲಗ್ಗೆಯಿಡಲು ಅಗತ್ಯವಿದ್ದ ಗುರಿ 201 ರನ್‌ ಮಾತ್ರವಾಗಿತ್ತು. ಕೊನೇ ಕ್ಷಣದವರೆಗೂ ಹೋರಾಡಿದ ಸಿಎಸ್‌ಕೆ 27 ರನ್‌ಗಳಿಂದ ಸೋತರೆ, 10 ರನ್‌ಗಳ ಅಂತರದಲ್ಲಿ ಪ್ಲೇ ಆಫ್‌ ತಲುಪುವ ಅವಕಾಶವನ್ನು ಕೈಚೆಲ್ಲಿತು. ಆದ್ರೆ ಉಭಯ ತಂಡಗಳ ಈ ರಣರೋಚಕ ಕದನ ಗ್ರೌಂಡ್‌ ಹೊರಗೂ ದಾಖಲೆ ಬರೆದಿರುವುದೇ ವಿಶೇಷ.

    ವೀಕ್ಷಣೆಯಲ್ಲೂ ದಾಖಲೆ:
    ಪ್ರಸಕ್ತ ವರ್ಷದ ಎಲ್ಲ ಪಂದ್ಯಗಳಲ್ಲೂ ದಾಖಲೆ ವೀಕ್ಷಕರನ್ನು ಕಂಡಿರುವ ಆರ್‌ಸಿಬಿ‌, ಶನಿವಾರ ನಡೆದ ನಾಕೌಟ್‌ ಕದನದಲ್ಲಿ ಬರೋಬ್ಬರಿ 50 ಕೋಟಿ ನೋಡುಗರನ್ನ (JioCinema Viewers) ಕಂಡಿದ್ದು, ದಾಖಲೆ ವೀಕ್ಷಕರನ್ನು ಕಂಡ ಪಂದ್ಯ ಎನಿಸಿಕೊಂಡಿದೆ.

    ಯಾರ ವಿರುದ್ಧ – ಯಾವ ಪಂದ್ಯದಲ್ಲಿ ಎಷ್ಟು ಮಂದಿ ವೀಕ್ಷಣೆ?
    ಆರ್‌ಸಿಬಿ vs ಸಿಎಸ್‌ಕೆ – 50 ಕೋಟಿ
    ಆರ್‌ಸಿಬಿ vs ಸಿಎಸ್‌ಕೆ – 38 ಕೋಟಿ
    ಎಸ್‌ಆರ್‌ಹೆಚ್‌ vs ಎಂಐ – 28 ಕೋಟಿ
    ಸಿಎಸ್‌ಕೆ vs ಎಂಐ – 26 ಕೋಟಿ
    ಆರ್‌ಸಿಬಿ vs ಕೆಕೆಆರ್‌ – 25 ಕೋಟಿ
    ಸಿಎಸ್‌ಕೆ vs ಜಿಟಿ – 25 ಕೋಟಿ
    ಆರ್‌ಸಿಬಿ vs ಪಿಬಿಕೆಎಸ್‌ – 24 ಕೋಟಿ
    ಸಿಎಸ್‌ಕೆ vs ಡಿಸಿ – 24 ಕೋಟಿ
    ಆರ್‌ಸಿಬಿ vs ಎಸ್‌ಆರ್‌ಹೆಚ್‌ – 24 ಕೋಟಿ
    ಆರ್‌ಸಿಬಿ vs ಎಂಐ – 23 ಕೋಟಿ
    ಆರ್‌ಸಿಬಿ vs ಆರ್‌ಆರ್‌ – 23 ಕೋಟಿ

    ಆರ್‌ಸಿಬಿಗೆ ಮುಂದಿದೆ ಕಠಿಣ ಸವಾಲು?
    ಸತತ 6 ಪಂದ್ಯಗಳನ್ನು ಗೆದ್ದು ಬೀಗಿರುವ ಆರ್‌ಸಿಬಿ ಮುಂದೆ ಬಲಿಷ್ಠ ತಂಡಗಳನ್ನು ಎದುರಿಸಬೇಕಾಗಿದೆ. ಈಗಾಗಲೇ ಕೋಲ್ಕತ್ತಾ ನೈಟ್‌ರೈಡರ್ಸ್‌ ಅಗ್ರಸ್ಥಾನದಲ್ಲಿದ್ದು, 2ನೇ ಸ್ಥಾನಕ್ಕೆ ರಾಜಸ್ಥಾನ್‌ ರಾಯಲ್ಸ್‌ ಹಾಗೂ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ತೀವ್ರ ಪೈಪೋಟಿ ನಡೆಯುತ್ತಿದೆ. ಮೊದಲ ಕ್ವಾಲಿಫೈಯರ್ (Qualifier) ಪಂದ್ಯದಲ್ಲಿ ಅಗ್ರಸ್ಥಾನ ಪಡೆದ ಎರಡು ತಂಡಗಳು ಕಾದಾಟ ನಡೆಸಲಿವೆ. ಗೆದ್ದ ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದ್ದು, ಸೋತ ತಂಡ ಎಲಿಮಿನೇಟರ್‌ -2 (Eliminator) ಹಂತದಲ್ಲಿ ಕಣಕ್ಕಿಳಿಯಲಿದೆ. ಆದ್ರೆ ಆರ್‌ಸಿಬಿ 4ನೇ ಸ್ಥಾನದಲ್ಲಿರುವುದರಿಂದ 3ನೇ ಸ್ಥಾನ ಪಡೆದ ತಂಡದೊಂದಿಗೆ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಸೆಣಸಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ ಎಲಿಮಿನೇಟರ್‌ 2ರಲ್ಲಿ, ಕ್ವಾಲಿಫೈಯರ್-1ರಲ್ಲಿ ಸೋತ ತಂಡದೊಂದಿಗೆ ಕಾದಾಟ ನಡೆಸಬೇಕಾಗುತ್ತದೆ. ಈ ಎರಡರಲ್ಲಿ ಯಾವುದೇ ಪಂದ್ಯದಲ್ಲಿ ಸೋತರೂ ಆರ್‌ಸಿಬಿ ಗಂಟುಮೂಟೆ ಕಟ್ಟಬೇಕಾಗುತ್ತದೆ. ಇಲ್ಲವಾದ್ರೆ ಈ ಎರಡು ಹಂತಗಳನ್ನು ದಾಟಿದ ನಂತರ ಫೈನಲ್‌ ಪ್ರವೇಶಿಸುವ ಅವಕಾಶ ಪಡೆಯಲಿದೆ.

    ಪ್ಲೇ ಆಫ್‌ ಪಂದ್ಯಗಳು ನಡೆಯುವುದು ಎಲ್ಲಿ?
    ಮೇ 21 ನಡೆಯುವ ಮೊದಲ ಕ್ವಾಲಿಫೈಯರ್ ಮತ್ತು ಮೇ 22ರಂದು ನಡೆಯುವ ಮೊದಲ ಎಲಿಮಿನೇಟರ್‌ ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೇ 24ರಂದು ನಡೆಯುವ ಕ್ವಾಲಿಫೈಯರ್-2 ಹಾಗೂ ಮೇ 26ರಂದು ನಡೆಯುವ ಫೈನಲ್‌ ಪಂದ್ಯಗಳು ಚೆನ್ನೈನ ಎಂ.ಎ ಚಿದಂಬರಂ (ಚೆಪಾಕ್‌) ಕ್ರೀಡಾಂಗಣದಲ್ಲಿ ನಡೆಯಲಿದೆ.

  • ಆರ್‌ಸಿಬಿ ಪ್ಲೇ-ಆಫ್‌ ಎಂಟ್ರಿ ಕ್ಷಣದಲ್ಲಿ ಭಾವುಕರಾದ ವಿರಾಟ್‌, ಅನುಷ್ಕಾ

    ಆರ್‌ಸಿಬಿ ಪ್ಲೇ-ಆಫ್‌ ಎಂಟ್ರಿ ಕ್ಷಣದಲ್ಲಿ ಭಾವುಕರಾದ ವಿರಾಟ್‌, ಅನುಷ್ಕಾ

    ಬೆಂಗಳೂರು: ತವರಿನಲ್ಲಿ ಸಿಎಸ್‌ಕೆ (CSK) ವಿರುದ್ಧ ಗೆದ್ದು ಆರ್‌ಸಿಬಿ ಪ್ಲೇ-ಆಫ್‌ (RCB Playoffs) ಪ್ರವೇಶಿಸಿದ ಕ್ಷಣ ರಾಜ್ಯಾದ್ಯಂತ ಭಾವುಕತೆ ಸೃಷ್ಟಿಸಿತು. ಪ್ಲೇ-ಆಫ್‌ ಎಂಟ್ರಿಯ ಆ ರೋಚಕ ಸನ್ನಿವೇಶದಲ್ಲಿ ಆರ್‌ಸಿಬಿ ಆಟಗಾರ ವಿರಾಟ್‌ ಕೊಹ್ಲಿ (Virat Kohli) ಭಾವುಕರಾದರು. ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸಿದ ಪಂದ್ಯವನ್ನು ವೀಕ್ಷಿಸುತ್ತಿದ್ದ ವಿರಾಟ್‌ ಪತ್ನಿ ಅನುಷ್ಕಾ ಶರ್ಮಾ ಕೂಡ ಒಮ್ಮೆಲೆ ಭಾವೋದ್ವೇಗದಿಂದ ಪ್ರತಿಕ್ರಿಯಿಸಿದರು. ಈ ಎರಡೂ ದೃಶ್ಯಗಳು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿವೆ.

    ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ (Anushka Sharma) ಅವರು ತಂಡದ ನಿರ್ಣಾಯಕ ಗೆಲುವಿನ ನಂತರ ಭಾವೋದ್ವೇಗದಲ್ಲಿ ಮುಳುಗಿದ್ದರಿಂದ ಪಂದ್ಯವು ಹೃದಯಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾಯಿತು. ಇದನ್ನೂ ಓದಿ: Photos Gallery: ಸಂಭ್ರಮದಲ್ಲಿ ಮಿಂದೆದ್ದ ಆರ್‌ಸಿಬಿ – ಭಾವುಕ ಕ್ಷಣಗಳು ಕ್ಯಾಮೆರಾ ಕಣ್ಣಿಗೆ ಸೆರೆ!

    ಐಪಿಎಲ್‌ನಲ್ಲಿ RCB ಯ ಪ್ರಯಾಣ ಗಮನಾರ್ಹವಾಗಿದೆ. 17 ಆವೃತ್ತಿಗಳಲ್ಲಿ ಇದುವರೆಗೂ 9 ಬಾರಿ ಪ್ಲೇ-ಆಫ್ ಪ್ರವೇಶಿಸಿದೆ. ಆದರೆ ಒಂದು ಬಾರಿಯೂ ಕಪ್‌ ಗೆದ್ದಿಲ್ಲ. ಹೀಗಿದ್ದರೂ ಅಭಿಮಾನಿಗಳು ಮಾತ್ರ ಆರ್‌ಸಿಬಿ ಜೊತೆ ವಿಶೇಷ ನಂಟು ಹೊಂದಿದ್ದಾರೆ.

    ದೊಡ್ಡ ಗೆಲುವಿಗೆ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ವ್ಯಕ್ತಪಡಿಸಿದ ಭಾವನಾತ್ಮಕ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಐಪಿಎಲ್‌ನ ಅಧಿಕೃತ ಸಾಮಾಜಿಕ ಮಾಧ್ಯಮ ಪುಟದಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ಪ್ಲೇ ಆಫ್‍ಗೆ RCB ಕ್ವಾಲಿಫೈ- ಘಾಟಿ ಸುಬ್ರಹ್ಮಣ್ಯದಲ್ಲಿ ಹರಕೆ ತೀರಿಸಿದ ಅಭಿಮಾನಿ

    ನಿನ್ನೆ ನಡೆದ ಪಂದ್ಯದಲ್ಲಿ ತಂಡದ ಪರ ಕೊಹ್ಲಿ ಉತ್ತಮ ಆಟವಾಡಿದರು. ಆರಂಭದಲ್ಲಿ ಬಿರುಸಿನ ಬ್ಯಾಟಿಂಗ್‌ ಮಾಡಿದ ಕೊಹ್ಲಿ 47 ರನ್‌ಗಳ ಕೊಡುಗೆಯೊಂದಿಗೆ ತಂಡದ ಮೊತ್ತ 218/5 ಕ್ಕೆ ಏರಲು ನೆರವಾದರು. ರವೀಂದ್ರ ಜಡೇಜಾ ಮತ್ತು ಎಂ.ಎಸ್‌.ಧೋನಿ ಅವರ ಉತ್ಸಾಹಭರಿತ ಆಟಕ್ಕೂ ಫಲ ಸಿಗಲಿಲ್ಲ. ಯಶ್‌ ದಯಾಳ್‌ ಅವರ ಕೊನೆ ಓವರ್‌ನ ಬೆಂಕಿ ಬೌಲಿಂಗ್‌ ಆರ್‌ಸಿಬಿಗೆ ಗೆಲುವಿನ ಸಿಹಿ ನೀಡಿತು. ಆರ್‌ಸಿಬಿ ಅಭಿಮಾನಿಗಳು ಪಂದ್ಯವನ್ನು ಆನಂದಿಸಿದರು.

  • ಪ್ಲೇ ಆಫ್‍ಗೆ RCB ಕ್ವಾಲಿಫೈ- ಘಾಟಿ ಸುಬ್ರಹ್ಮಣ್ಯದಲ್ಲಿ ಹರಕೆ ತೀರಿಸಿದ ಅಭಿಮಾನಿ

    ಪ್ಲೇ ಆಫ್‍ಗೆ RCB ಕ್ವಾಲಿಫೈ- ಘಾಟಿ ಸುಬ್ರಹ್ಮಣ್ಯದಲ್ಲಿ ಹರಕೆ ತೀರಿಸಿದ ಅಭಿಮಾನಿ

    ಚಿಕ್ಕಬಳ್ಳಾಪುರ: ‘ಈ ಸಲ ಕಪ್ ನಮ್ದೇ’ ಎನ್ನುತ್ತಿದ್ದ ಅಭಿಮಾನಿಗಳಿಗೆ ಆರ್ ಸಿಬಿ ಕೊನೆಗೂ ಗುಡ್ ನ್ಯೂಸ್ ಕೊಟ್ಟಿದೆ. ಐಪಿಎಲ್ ಪ್ಲೇ ಆಫ್ ಗೆ ಆರ್ ಸಿಬಿ ಕ್ವಾಲಿಫೈ ಆಗಿದ್ದು, ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಈ ನಡುವೆ ಅಭಿಮಾನಿಯೊಬ್ಬ ಮ್ಯಾಚ್‍ಗೂ ಮುನ್ನ ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸುವ ಮೂಲಕ ಇದೀಗ ಸುದ್ದಿಯಾಗಿದ್ದಾನೆ.

    ಆರ್ ಸಿಬಿ ಅಭಿಮಾನಿ ಅಂಬರೀಶ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯ ಸ್ವಾಮಿಗೆ ಆರ್ ಸಿಬಿ ಗೆದ್ರೆ 101 ತೆಂಗಿನಕಾಯಿ ಒಡೆಯುವುದಾಗಿ ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಇದೀಗ 101 ಈಡುಗಾಯಿ ಒಡೆದು ಹರಕೆ ತೀರಿಸಿದ್ದಾರೆ. ಕೇವಲ ಅಂಬರೀಶ್ ಮಾತ್ರವಲ್ಲ ಆರ್ ಸಿಬಿಯ ಇತರೆ ಅಭಿಮಾನಿಗಳು ಕೂಡ ತೆಂಗಿನಕಾಯಿ ಈಡುಗಾಯಿ ಹೊಡೆದು ಪೂಜೆ ಸಲ್ಲಿಸಿದ್ದಾರೆ.

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಚೆನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ ಆರ್ ಸಿಬಿ ಗೆದ್ದು ಬೀಗಿದೆ. 20ನೇ ಓವರ್ 5ನೇ ಎಸೆತದಲ್ಲೇ ಆರ್ ಸಿಬಿಗೆ (RCB) ಗೆಲುವು ಖಚಿತವಾಗುತ್ತಿದಂತೆ ಅಭಿಮಾನಿಗಳ ಸಂತಸ ಇಮ್ಮಡಿಯಾಯ್ತು. ಕೆಲವರು ಅಲ್ಲಲ್ಲಿ ಕೇಕ್ ಮಾಡಿ ಸಂಭ್ರಮಿಸಿದರೆ, ಇನ್ನೂ ಕೆಲವರು ರಸ್ತೆಯಲ್ಲಿ ಬಾವುಟ ಹಿಡಿದು ಕುಣಿದಾಡಿದ್ದಾರೆ. ಇದನ್ನೂ ಓದಿ: ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ; ಬೆಂಗ್ಳೂರಲ್ಲಿ ಅಭಿಮಾನಿಗಳ ಜಾತ್ರೆ – ಫ್ಯಾನ್ಸ್‌ ನೋಡಿ ವಿರಾಟ್‌ ಖುಷ್‌

  • IPL Playoffs: ಪಂದ್ಯದ ಪ್ರತಿ ಕ್ಷಣವನ್ನೂ ಆನಂದಿಸಿದ್ದೇನೆ – ಆರ್‌ಸಿಬಿ ಗೆಲುವನ್ನು ಕೊಂಡಾಡಿದ ಸಿಎಂ!

    IPL Playoffs: ಪಂದ್ಯದ ಪ್ರತಿ ಕ್ಷಣವನ್ನೂ ಆನಂದಿಸಿದ್ದೇನೆ – ಆರ್‌ಸಿಬಿ ಗೆಲುವನ್ನು ಕೊಂಡಾಡಿದ ಸಿಎಂ!

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ (CSK) ವಿರುದ್ಧ ನಡೆದ ನಾಕೌಟ್‌ ಕದನದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಆರ್‌ಸಿಬಿ (RCB) ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮನಸಾರೆ ಹೊಗಳಿದ್ದಾರೆ. ಬ್ಯುಸಿ ರಾಜಕೀಯ ಒತ್ತಡದ ನಡುವೆಯೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಚಿವರೊಂದಿಗೆ ಕುಳಿತು ಪೂರ್ಣ ಪಂದ್ಯ ವೀಕ್ಷಣೆ ಮಾಡಿದ್ದಾರೆ.

    ಈ ಕುರಿತು ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ, ಸತತ 6ನೇ ಗೆಲುವಿನೊಂದಿಗೆ ನಮ್ಮ ಆರ್‌ಸಿಬಿ ಪ್ಲೇಆಫ್ ಸುತ್ತಿಗೆ ಲಗ್ಗೆಯಿಟ್ಟಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಜರಿದ್ದು ಪಂದ್ಯದ ಪ್ರತಿ ಕ್ಷಣವನ್ನು ಆನಂದಿಸಿದೆ. ನಮ್ಮ ಆರ್‌ಸಿಬಿ (Namma RCB) ತಂಡದ ಐತಿಹಾಸಿಕ ಗೆಲುವಿನ ಕ್ಷಣಗಳಿಗೆ ಸಾಕ್ಷಿಯಾದುದ್ದು ಖುಷಿಕೊಟ್ಟಿದೆ. ಇದು ಆರ್.ಸಿ.ಬಿ ಯ ಹೊಸ ಅಧ್ಯಾಯ ಎಂದು ಬರೆದುಕೊಂಡಿದ್ದಾರೆ.

    ಹೌದು. ʻಇದು ಹೊಸ ಅಧ್ಯಾಯʼ ಎಂದು ಹೇಳಿಕೊಂಡು ಸೋಲಿನೊಂದಿಗೆ ಲೀಗ್‌ ಆರಂಭಿಸಿದ್ದ ಆರ್‌ಸಿಬಿ ನಿಜಕ್ಕೂ ಹೊಸ ಅಧ್ಯಾಯವನ್ನೇ ಸೃಷ್ಟಿಸಿದೆ. ಮೊದಲ 8 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ ಲೀಗ್‌ ಸುತ್ತಿನಲ್ಲೇ ಹೊರ ಬೀಳುವ ಸಾಧ್ಯತೆಯಿತ್ತು. ಅಷ್ಟರಲ್ಲಿ ಪುಟಿದೆದ್ದ ಆರ್​ಸಿಬಿ ಇದೀಗ ಯಾರೂ ಊಹಿಸಿದ, ಪವಾಡ ಸಂಭವಿಸಿದ ರೀತಿಯಲ್ಲಿ ಗೆದ್ದು ಪ್ಲೇ ಆಫ್​ಗೆ ಅಧಿಕೃತ ಎಂಟ್ರಿ ಕೊಟ್ಟಿದೆ.

    ಪ್ಲೇ ಆಫ್​ ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ 27 ರನ್​ ಗಳ ಗೆಲುವು ಸಾಧಿಸಿ ಈ ಅಭೂತಪೂರ್ವ ಸಾಧನೆ ಮಾಡಿದೆ. ಒಂದೊಮ್ಮೆ ಚೆನ್ನೈ 201 ರನ್​ ಬಾರಿಸುತ್ತಿದ್ದರೂ ಆರ್​ಸಿಬಿ ಪ್ಲೇ ಆಫ್​ನಿಂದ ಹೊರ ಬೀಳಬೇಕಿತ್ತು. ಸದ್ಯ ಆರ್‌ಸಿಬಿ ತಂಡದ ಅದ್ಭುತ ಜಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಎಕ್ಸ್‌, ಇನ್ಸ್ಟಾಗ್ರಾಮ್‌, ಫೇಸ್‌ಬುಕ್‌ ಸೋಷಿಯಲ್‌ ಮೀಡಿಯಾಗಳಲ್ಲಿ ಅಭಿಮಾನಿಗಳು ಆರ್‌ಸಿಬಿ ಪಂದ್ಯದ ಒಂದೊಂದೇ ದೃಶ್ಯಗಳನ್ನು ಹಂಚಿಕೊಳ್ಳುತ್ತಾ ಕೊಂಡಾಡುತ್ತಿದ್ದಾರೆ.

    ಬೆಂಗಳೂರಿನಲ್ಲಂತೂ ಬೀದಿ ಬೀದಿಗಳಲ್ಲಿ ಪಟಾಕಿ ಸಿಡಿಸಿ, ತಡರಾತ್ರಿ ವರೆಗೂ ಕುಣಿದು ಕುಪ್ಪಳಿಸಿದ್ದಾರೆ. ಆರ್‌ಸಿಬಿ ಕಪ್‌ ಗೆಲ್ಲದಿದ್ದರೂ ಪರವಾಗಿಲ್ಲ, ಚೆನ್ನೈ ವಿರುದ್ಧ ಗೆದ್ದಿದ್ದೇ ನಮಗೆ ಖುಷಿ ಕೊಟ್ಟಿದೆ ಎಂದು ಕೂಗಿ ಹೇಳಿದ್ದಾರೆ.

    ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ 218 ರನ್‌ ಸಿಡಿಸಿ, ಸಿಎಸ್‌ಕೆ ಗೆಲುವಿಗೆ 219 ರನ್‌ಗಳ ಗುರಿ ನೀಡಿತ್ತು. ಆದ್ರೆ ಸಿಎಸ್‌ಕೆ ಪ್ಲೇ ಆಫ್‌ ತಲುಪಲು 201 ರನ್‌ಗಳ ಅಗತ್ಯವಿತ್ತು. ಕೊನೆಯವರೆಗೂ ಹೋರಾಡಿದ ಸಿಎಸ್‌ಕೆ 27 ರನ್‌ ಗಳ ಅಂತರದಿಂದ ಸೋತು ಪ್ಲೇ ಆಫ್‌ ಪ್ರವೇಶಿಸುವ ಅರ್ಹತೆಯನ್ನೇ ಕಳೆದುಕೊಂಡಿತು.

  • ಆರ್‌ಸಿಬಿಯ ಹೊಸ ಅಧ್ಯಾಯ – ಪ್ಲೇ ಆಫ್‌ ಪ್ರವೇಶಿಸಿದ ಬೆಂಗಳೂರು ಬಾಯ್ಸ್‌ಗೆ ಹೊಗಳಿಕೆಯ ಮಹಾಪೂರ!

    ಆರ್‌ಸಿಬಿಯ ಹೊಸ ಅಧ್ಯಾಯ – ಪ್ಲೇ ಆಫ್‌ ಪ್ರವೇಶಿಸಿದ ಬೆಂಗಳೂರು ಬಾಯ್ಸ್‌ಗೆ ಹೊಗಳಿಕೆಯ ಮಹಾಪೂರ!

    ಬೆಂಗಳೂರು: ಈ ಬಾರಿ ಹೊಸ ಅಧ್ಯಾಯ ಎಂದು ಹೇಳಿಕೊಂಡು ಸೋಲಿನೊಂದಿಗೆ ಲೀಗ್‌ ಆರಂಭಿಸಿದ್ದ ಆರ್‌ಸಿಬಿ (RCB) ನಿಜಕ್ಕೂ ಹೊಸ ಅಧ್ಯಾಯವನ್ನೇ ಸೃಷ್ಟಿಸಿದೆ. ಮೊದಲ 8 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ ಲೀಗ್‌ ಸುತ್ತಿನಲ್ಲೇ ಹೊರ ಬೀಳುವ ಸಾಧ್ಯತೆಯಿತ್ತು. ಅಷ್ಟರಲ್ಲಿ ಪುಟಿದೆದ್ದ ಆರ್​ಸಿಬಿ ಇದೀಗ ಯಾರೂ ಊಹಿಸಿದ, ಪವಾಡ ಸಂಭವಿಸಿದ ರೀತಿಯಲ್ಲಿ ಗೆದ್ದು ಪ್ಲೇ ಆಫ್​ಗೆ (IPL Playoffs) ಅಧಿಕೃತ ಎಂಟ್ರಿ ಕೊಟ್ಟಿದೆ.

    ಪ್ಲೇ ಆಫ್​ ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್ (CSK)​ ವಿರುದ್ಧ 27 ರನ್​ ಗಳ ಗೆಲುವು ಸಾಧಿಸಿ ಈ ಅಭೂತಪೂರ್ವ ಸಾಧನೆ ಮಾಡಿದೆ. ಒಂದೊಮ್ಮೆ ಚೆನ್ನೈ 201 ರನ್​ ಬಾರಿಸುತ್ತಿದ್ದರೂ ಆರ್​ಸಿಬಿ ಪ್ಲೇ ಆಫ್​ನಿಂದ ಹೊರ ಬೀಳಬೇಕಿತ್ತು. ಸದ್ಯ ಆರ್‌ಸಿಬಿ ತಂಡದ ಅದ್ಭುತ ಜಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಎಕ್ಸ್‌, ಇನ್ಸ್ಟಾಗ್ರಾಮ್‌, ಫೇಸ್‌ಬುಕ್‌ ಸೋಷಿಯಲ್‌ ಮೀಡಿಯಾಗಳಲ್ಲಿ ಅಭಿಮಾನಿಗಳು ಆರ್‌ಸಿಬಿ (RCB Fans) ಪಂದ್ಯದ ಒಂದೊಂದೇ ದೃಶ್ಯಗಳನ್ನು ಹಂಚಿಕೊಳ್ಳುತ್ತಾ ಕೊಂಡಾಡುತ್ತಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಮುಖ್ಯಕೋಚ್‌ ಹುದ್ದೆಗೆ ಗೌತಮ್‌ ಗಂಭೀರ್‌ ಹೆಸರು ಪ್ರಸ್ತಾಪ!

    ಈ ಸಂಭ್ರಮದಲ್ಲಿ ಸಿನಿ ತಾರೆಯರೂ ಭಾಗಿಯಾಗಿದ್ದಾರೆ. ತಮ್ಮ ಸೋಶಿಯಲ್‌ ಮೀಡಿಯಾಗಳಲ್ಲಿ ಆರ್‌ಸಿಬಿ ತಂಡದ ಗೆಲುವನ್ನು ಕೊಂಡಾಡಿದ್ದಾರೆ. ಹಾಗಾದ್ರೆ ಯಾರು ಏನು ಹೇಳಿದ್ದಾರೆ ಎಂಬುದನ್ನೊಮ್ಮೆ ನೋಡೋಣ… ಇದನ್ನೂ ಓದಿ: ಆರ್‌ಸಿಬಿ ‘ರಾಯಲ್‌’ ಆಗಿ ಪ್ಲೇ-ಆಫ್‌ಗೆ; ಚೆನ್ನೈ ಮನೆಗೆ

    ಕಿಚ್ಚ ಸುದೀಪ್‌ (Kichcha Sudeep):
    ಅಭಿನಂದನೆಗಳು ಆರ್‌ಸಿಬಿ ಎಂತಹ ಹೊಂದಾಣಿಕೆ, ಆದ್ರೆ ದುರಾದೃಷ್ಟ ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಚೆನ್ನಾಗಿ ಆಡಿದೆ ಎಂದು ಆರ್‌ಸಿಬಿ ಗೆಲುವನ್ನು ಹೊಗಳಿದ್ದಾರೆ.

    ನಿರ್ದೇಶಕ ಸಿಂಪಲ್‌ ಸುನಿ (Simple Suni):
    ಬರ್ತೀವಿ ಬರ್ತೀವಿ .. ಗುಜರಾತ್ ಗು ಬರ್ತೀವಿ, ಚೆನ್ನೈಗೂ ಬರ್ತೀವಿ, ಬರೀ ಹೊಡೆದಿಲ್ಲ ..ಇಷ್ಟ್ ರನ್ ಒಳಗೆ ಹೊಡಿತೀವಿ ಅಂತ ಹೇಳಿ ಹೊಡೆದಿರೋದು ಅಂತಾ ತಮ್ಮದೇ ಶೈಲಿಯಲ್ಲಿ ಶ್ಲಾಘಿಸಿದ್ದಾರೆ.

    ಪಂದ್ಯ ವೀಕ್ಷಿಸಿದ ರಿಷಭ್‌ ಶೆಟ್ಟಿ (Rishab Shetty):
    ಇನ್ನೂ ಮೊದಲಿನಿಂದಲೂ ಆರ್‌ಸಿಬಿ ಪಕ್ಕಾ ಫ್ಯಾನ್‌ ಆಗಿರುವ ಕಾಂತಾರ ನಟ ರಿಷಭ್‌ ಶೆಟ್ಟಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಸ್‌ಗೇಲ್‌ ಅವರೊಟ್ಟಿಗೆ ಕುಳಿತು ಪಂದ್ಯ ವೀಕ್ಷಣೆ ಮಾಡಿದ್ದಾರೆ. ಕೊನೆಯವರೆಗೂ ಕುಳಿತು ಆರ್‌ಸಿಬಿ ಗೆಲುವನ್ನು ಕಣ್ತುಂಬಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇದು ಇತಿಹಾಸ, ಕ್ರೀಡಾಂಗಣದಲ್ಲಿ ನಾನು ವೀಕ್ಷಿಸಿದ ಮೊದಲ ಪಂದ್ಯ. ಮೇಲ್ಭಾಗದಲ್ಲಿ ನಿಮ್ಮನ್ನು ನೋಡೋಣ ಆರ್‌ಸಿಬಿ! ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  • ಬಿಡುವು ಕೊಟ್ಟ ವರುಣ – RCB vs CSK ನಾಕೌಟ್‌ ಕದನ ಪುನಾರಂಭ; ಅಭಿಮಾನಿಗಳಲ್ಲಿ ಚಿಗುರಿದ ಉತ್ಸಾಹ

    ಬಿಡುವು ಕೊಟ್ಟ ವರುಣ – RCB vs CSK ನಾಕೌಟ್‌ ಕದನ ಪುನಾರಂಭ; ಅಭಿಮಾನಿಗಳಲ್ಲಿ ಚಿಗುರಿದ ಉತ್ಸಾಹ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB vs CSK) ತಂಡಗಳ ನಡುವಿನ ನಾಕೌಟ್‌ ಕದನಕ್ಕೆ ಕೊನೆಗೂ ವರುಣ ಅಡ್ಡಿಯುಂಟುಮಾಡಿದ್ದು, ಕೆಲವೇ ನಿಮಿಷಗಳಲ್ಲಿ ಬಿಡುವುಮಾಡಿಕೊಟ್ಟಿದ್ದಾನೆ. ಸುಮಾರು 15 ನಿಮಿಷಕ್ಕೂ ಅಧಿಕ ಸಮಯ ಸುರಿದ ಮಳೆ (Bengaluru Rains) ಇದೀಗ ಬಿಡುವುಕೊಟ್ಟಿದ್ದು, ಸದ್ಯದಲ್ಲೇ ಪಂದ್ಯ ಆರಂಭವಾಗಲಿದೆ.

    ಈ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಲೇ ಬಾರದು ಎಂದು ಆರ್‌ಸಿಬಿ ಅಭಿಮಾನಿಗಳು (RCB Fans) ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು, ದೇವರಲ್ಲಿ ಪ್ರಾರ್ಥಿಸಿದ್ದರು. ಆದ್ರೆ ಅಭಿಮಾನಿಗಳ ಆಸೆಗೂ ವರುಣ ತಣ್ಣೀರು ಎರಚಿದ್ದ. ಇದೀಗ ಪಂದ್ಯ ಪುನಾರಂಭವಾಗುತ್ತಿರುವುದು ಮತ್ತೆ ಅಭಿಮಾನಿಗಳಲ್ಲಿ ಉತ್ಸಾಹ ಚಿಗುರಿಸಿದೆ. ಇದನ್ನೂ ಓದಿ: ಟೀಂ ಇಂಡಿಯಾ ಮುಖ್ಯಕೋಚ್‌ ಹುದ್ದೆಗೆ ಗೌತಮ್‌ ಗಂಭೀರ್‌ ಹೆಸರು ಪ್ರಸ್ತಾಪ!

    ಟಾಸ್‌ ಸೋತು ಕ್ರೀಸ್‌ಗಿಳಿದಿರುವ ಆರ್‌ಸಿಬಿ ಉತ್ತಮ ಆರಂಭವನ್ನೇ ಪಡೆದುಕೊಂಡಿದೆ. ನಾಯಕ ಫಾಫ್‌ ಡು ಪ್ಲೆಸಿಸ್‌, ವಿರಾಟ್‌ ಕೊಹ್ಲಿ ಭರ್ಜರಿ ಬ್ಯಾಟಿಂಗ್‌ನೊಂದಿಗೆ ತಂಡವನ್ನು ಮುನ್ನಡೆಸುತ್ತಿದ್ದಾರೆ. 3 ಓವರ್‌ಗಳಲ್ಲಿ 31 ರನ್‌ ‌ಕಲೆಹಾಕಿರುವ ಆರ್‌ಸಿಬಿ ಪರ ಫಾಫ್‌ ಡು ಪ್ಲೆಸಿಸ್‌ 9 ಎಸೆತಗಳಲ್ಲಿ 12 ರನ್‌ ಗಳಿಸಿದ್ದರೆ, ಕೊಹ್ಲಿ 9 ಎಸೆತಗಳಲ್ಲಿ 19 ರನ್‌ ಚಚ್ಚಿದ್ದಾರೆ. ಆರ್‌ಸಿಬಿ ಮೊದಲು ಬ್ಯಾಟಿಂಗ್‌ ಮಾಡುತ್ತಿರುವುದರಿಂದ 18 ರನ್‌ಗಳ ಅಂತರದಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಬಂದೊದಗಿದೆ.

    ಸದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಹಬ್ಬದ ವಾತಾವರಣವೇ ನಿರ್ಮಾಣವಾಗಿದ್ದು, ಪ್ರತಿ ಎಸೆತವನ್ನು ಉಭಯ ತಂಡದ ಅಭಿಮಾನಿಗಳು ಎಂಜಾಯ್‌ ಮಾಡುತ್ತಿದ್ದಾರೆ. ಆಟಗಾರರು ಸಿಕ್ಸರ್‌, ಬೌಂಡರಿ ಸಿಡಿಸುತ್ತಿದ್ದಂತೆ ತಾವಿದ್ದ ಸ್ಥಳದಲ್ಲೇ ಕುಣಿದು ಕುಪ್ಪಳಿಸುತ್ತಿದ್ದಾರೆ. ನಿರೀಕ್ಷೆಯಂತೆ ಕಿಗ್‌ ಕೊಹ್ಲಿ, ಕೂಲ್‌ ಕ್ಯಾಪ್ಟನ್‌ ಮಹಿ ಪರ ಘೋಷಣೆಗಳು ಕೇಳಿಬರುತ್ತಿದೆ. ಇದನ್ನೂ ಓದಿ: ಟಿ20 ವಿಶ್ವಕಪ್‌: ಸ್ಕಾಟ್ಲೆಂಟ್‌ ತಂಡದ ಜೆರ್ಸಿಯಲ್ಲಿ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌ ಲೋಗೋ

  • ಬೆಂಗಳೂರಿನಲ್ಲಿಂದು RCB vs CSK ಹೈವೋಲ್ಟೇಜ್ ಪಂದ್ಯ – ಚಿನ್ನಸ್ವಾಮಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್

    ಬೆಂಗಳೂರಿನಲ್ಲಿಂದು RCB vs CSK ಹೈವೋಲ್ಟೇಜ್ ಪಂದ್ಯ – ಚಿನ್ನಸ್ವಾಮಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಇಂದು ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (csk) ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಎರಡೂ ತಂಡಗಳಿಗೆ ಇಂದಿನ ಐಪಿಎಲ್ (IPL 2024) ಪಂದ್ಯ ಡು ಆರ್ ಡೈ ಮ್ಯಾಚ್ ಆಗಿದೆ.

    ಐಪಿಎಲ್ ಪಂದ್ಯ ಹಿನ್ನೆಲೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ನೀಡಲಾಗಿದೆ. ಐಪಿಎಲ್ ಪಂದ್ಯ ಬಂದೋಬಸ್ತ್‌ಗೆ 1,200 ಪೊಲೀಸರನ್ನು ನಿಯೋಜಿಸಲಾಗಿದೆ. ನಾಲ್ವರು ಡಿಸಿಪಿಗಳು, 12 ಎಸಿಪಿ, 28 ಇನ್ಸ್ಪೆಕ್ಟರ್, 80 ಸಬ್ ಇನ್ಸ್ಪೆಕ್ಟರ್ ಸೇರಿ ಒಟ್ಟು 1,200 ಪೊಲೀಸರನ್ನು ಕ್ರೀಡಾಂಗಣದ ಸುತ್ತಮುತ್ತ ನಿಯೋಜಿಸಲಾಗಿದೆ. 4 ಕೆಎಸ್‌ಆರ್‌ಪಿ ತುಕಡಿ, ಹೋಂ ಗಾರ್ಡ್ ಸಹ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: 18 ರನ್, 18.1 ಓವರ್, ಕೊಹ್ಲಿ ಜೆರ್ಸಿ ನಂ.18 – ಮೇ 18ರಂದು ಸೋಲೇ ಕಾಣದ ಆರ್‌ಸಿಬಿಗೆ ಅಗ್ನಿಪರೀಕ್ಷೆ!

    ಕ್ಯೂಆರ್‌ಟಿ, ವಾಟರ್ ಜೆಟ್, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳವನ್ನೂ ನಿಯೋಜಿಸಿದೆ. ಮಫ್ತಿಯಲ್ಲೂ ಸ್ಟೇಡಿಯಂ ಸುತ್ತಮುತ್ತ ಪೊಲೀಸರನ್ನು ನಿಯೋಜಿಸಲಾಗಿದೆ. ನಕಲಿ ಟಿಕೆಟ್ ಹಾವಳಿ ತಡೆಗಟ್ಟಲು ಮಫ್ತಿಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: RCB vs CSK – ಸೈಬರ್‌ ಖದೀಮರಿಂದ ಭಾರೀ ವಂಚನೆ, ದೂರು ದಾಖಲು

  • 18 ರನ್, 18.1 ಓವರ್, ಕೊಹ್ಲಿ ಜೆರ್ಸಿ ನಂ.18 – ಮೇ 18ರಂದು ಸೋಲೇ ಕಾಣದ ಆರ್‌ಸಿಬಿಗೆ ಅಗ್ನಿಪರೀಕ್ಷೆ!

    18 ರನ್, 18.1 ಓವರ್, ಕೊಹ್ಲಿ ಜೆರ್ಸಿ ನಂ.18 – ಮೇ 18ರಂದು ಸೋಲೇ ಕಾಣದ ಆರ್‌ಸಿಬಿಗೆ ಅಗ್ನಿಪರೀಕ್ಷೆ!

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (CSK) ನಡುವಿನ ಮಹಾಕಾಳಗಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ (Chinnaswamy Stadium) ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶನಿವಾರ (ಮೇ 18) ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ.

    2024ರ ಐಪಿಎಲ್‌ ಆವೃತ್ತಿಯ ಪ್ಲೇ ಆಫ್‌ (IPL Playoffs) ಪ್ರವೇಶಿಸಲು ಉಭಯ ತಂಡಗಳಿಗೆ ಈ ಪಂದ್ಯ ನಿರ್ಣಾಯಕವಾಗಿದೆ. ವಿಶೇಷವೆಂದರೆ ನಂ.18 ಜೆರ್ಸಿ ಹೊಂದಿರುವ ಕಿಂಗ್‌ ಕೊಹ್ಲಿ ಅವರಿಗೂ ಇದು ಸವಾಲಿನದ್ದಾಗಿದೆ. ಮೇ 18ರಂದು ನಡೆಯುತ್ತಿರುವ ಈ ಪಂದ್ಯದಲ್ಲಿ ಆರ್‌ಸಿಬಿ ಮೊದಲು ಬ್ಯಾಟಿಂಗ್‌ ಮಾಡಿದರೆ 18 ರನ್‌ಗಳ ಅಂತರದಿಂದ ಗೆಲ್ಲಬೇಕು, ಚೇಸಿಂಗ್‌ ಮಾಡಿದರೆ 18.1 ಓವರ್‌ಗಳಲ್ಲಿ ಗೆಲುವು ಸಾಧಿಸಬೇಕು. ಇದನ್ನೂ ಓದಿ: RCB vs CSK – ಸೈಬರ್‌ ಖದೀಮರಿಂದ ಭಾರೀ ವಂಚನೆ, ದೂರು ದಾಖಲು

    ಆರ್‌ಸಿಬಿಗೆ ಅಗ್ನಿ ಪರೀಕ್ಷೆ:
    ಹಿಂದಿನ ವರ್ಷಗಳಲ್ಲಿ ಮೇ 18ರಂದು ನಡೆದ ಪಂದ್ಯಗಳಲ್ಲಿ ಸಿಎಸ್‌ಕೆ ವಿರುದ್ಧವೇ ಆರ್‌ಸಿಬಿ ಎರಡು ಬಾರಿ ಗೆದ್ದಿರುವ ಉದಾಹರಣೆಯಿದೆ. 2013 ಮತ್ತು 2014ರ ಮೇ 18ರಂದು ಸಹ ಆರ್‌ಸಿಬಿ ಚೆನ್ನೈ ವಿರುದ್ಧ ಗೆದ್ದು ಬೀಗಿತ್ತು. 2016ರ ಮೇ 18ರಂದು ಕಿಂಗ್ಸ್‌ ಪಜಾಬ್‌ ವಿರುದ್ಧ, 2023ರ ಮೇ 18ರಂದು ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧವೂ ಆರ್‌ಸಿಬಿ ಗೆದ್ದಿತ್ತು. ಹಾಗಾಗಿ ಈ ಬಾರಿಯೂ ಆರ್‌ಸಿಬಿ ಗೆಲ್ಲುವ ಉತ್ಸಾಹದಲ್ಲೇ ಇದೆ. ಮಳೆ ಬಿಡುವು ಕೊಟ್ಟರೆ ಆರ್‌ಸಿಬಿ ಗೆಲುವಿನ ಕನಸು ಈಡೇರುವ ಸಾಧ್ಯೆಯಿದೆ. ಮಳೆಯಿಂದ ಪಂದ್ಯ ರದ್ದಾದರೆ ಆರ್‌ಸಿಬಿ ಒಂದು ಅಂಕದೊಂದಿಗೆ ಪ್ಲೇ ಆಫ್‌ ನಿಂದ ಹೊರಗುಳಿಯಲಿದೆ. ಇದನ್ನೂ ಓದಿ: ಈ ಸಾಧನೆ ಮಾಡಿಲ್ಲ ಅಂತ ನಾಳೆದಿನ ಚಿಂತಿಸಬಾರದು – ನಿವೃತ್ತಿ ಬಗ್ಗೆ ಸುಳಿವು ಕೊಟ್ರಾ ಕಿಂಗ್‌ ಕೊಹ್ಲಿ?

    ʻಸಬ್‌ ಏರ್‌ ಸಿಸ್ಟಮ್‌ʼ ಒಂದೇ ಆಧಾರ?
    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಷ್ಟೇ ಮಳೆಯಾದರೂ, ಮಳೆ ನಿಂತ ನಂತರ ಕೆಲವೇ ನಿಮಿಷಗಳಲ್ಲಿ ಪಂದ್ಯಗಳು ಆರಂಭಿಸಬಹುದಾಗಿದೆ. ಉದಾಹರಣೆಗೆ ಒಂದು ಗಂಟೆ ಭಾರೀ ಮಳೆ ಸುರಿದರೆ ಕೇವಲ 7 ನಿಮಿಷಗಳಲ್ಲಿ ಪಂದ್ಯವನ್ನು ಆರಂಭಿಸಬಹುದು. ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಂ ಅಳವಡಿಕೆಯಾಗಿದ್ದು ಕೂಡಲೇ ನೀರನ್ನು ಹೊರ ಹಾಕಲಾಗುತ್ತದೆ. ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನ ಒಣಗಿಸುವ ವ್ಯವಸ್ಥೆಯಿದೆ. 4.5 ಕೋಟಿ ರೂ. ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆದ್ದರಿಂದ ಮಳೆಯು 9 ಗಂಟೆ ವೇಳೆಗೆ ಬಿಡುವು ಕೊಟ್ಟರೂ 9:30 ರಿಂದ ಕನಿಷ್ಠ 15 ಓವರ್‌ಗಳ ಪಂದ್ಯ ನಡೆಸಬಹುದಾಗಿದೆ. ಒಂದು ವೇಳೆ 10:30 ರಿಂದ ಪಂದ್ಯ ಆರಂಭಿಸಿದರೆ 10 ಓವರ್‌ ಅಥವಾ 5 ಓವರ್‌ಗಳ ಪಂದ್ಯ ನಡೆಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

  • RCB vs CSK – ಸೈಬರ್‌ ಖದೀಮರಿಂದ ಭಾರೀ ವಂಚನೆ, ದೂರು ದಾಖಲು

    RCB vs CSK – ಸೈಬರ್‌ ಖದೀಮರಿಂದ ಭಾರೀ ವಂಚನೆ, ದೂರು ದಾಖಲು

    ಬೆಂಗಳೂರು: ಆರ್‌ಸಿಬಿ (RCB) ಕ್ರಿಕೆಟ್ ಅಭಿಮಾನಿಗಳಿಗೆ ಇಂದು ರಸದೌತಣ. ಫ್ಲೇಆಫ್ ಹಂತಕ್ಕೆ ಆರ್‌ಸಿಬಿ ಹೋಗಬೇಕಾದರೆ ಸಿಎಸ್‌ಕೆಯನ್ನು (CSK) ಟೂರ್ನಿಯಿಂದ ಹೊರಕ್ಕೆ ಹಾಕಲು ಇರುವ ಕೊನೆಯ ಅವಕಾಶ. ಚಿನ್ನಸ್ವಾಮಿಯಲ್ಲಿ (Chinnaswamy Stadium) ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ (Ticket) ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್‌ ನೀಡುತ್ತೇವೆ ಎಂದು ಹೇಳಿ ಸೈಬರ್ ಕಳ್ಳರು ಅಭಿಮಾನಿಗಳಿಗೆ ಮೋಸ ಮಾಡುತ್ತಿದ್ದಾರೆ.

    ಇವತ್ತಿನ ಪಂದ್ಯದ ಮೇಲೆ ಎಲ್ಲರ ಚಿತ್ತವಿದ್ದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಖದೀಮರು ಆನ್‌ಲೈನ್‌ನಲ್ಲಿ ಮ್ಯಾಚ್‌ ಟಿಕೆಟ್‌ ಬೇಕಾದರೆ ಲಿಂಕ್ ಓಪನ್ ಮಾಡಿ ಟಿಕೆಟ್ ಬುಕ್ ಮಾಡಿಕೊಳ್ಳಿ ಎಂಬ ಪೋಸ್ಟ್‌ ಕಳುಹಿಸುತ್ತಿದ್ದಾರೆ.  ಇದನ್ನೂ ಓದಿ: ಟೀಂ ಇಂಡಿಯಾ ಮುಖ್ಯಕೋಚ್‌ ಹುದ್ದೆಗೆ ಗೌತಮ್‌ ಗಂಭೀರ್‌ ಹೆಸರು ಪ್ರಸ್ತಾಪ!

     

    ನಕಲಿ ಲಿಂಕ್‌ನಿಂದ ಟಿಕೆಟ್ ಬುಕ್ ಮಾಡಿಕೊಂಡವರು ಹಣವನ್ನ ಕಳೆದುಕೊಂಡಿದ್ದು ಬಿಟ್ಟರೆ ಬೇರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗೆ ಬಂದ ಲಿಂಕ್‌ಮೇಲೆ ಕ್ಲಿಕ್ ಮಾಡಿ 3 ಟಿಕೆಟ್‌ಗೆ 3,600 ರೂ. ಪಾವತಿ ಮಾಡಿದ್ದ ಆಕಾಶ್ ಕುಮಾರ್‌ ಈಗ ಸೈಬರ್‌ ಠಾಣೆಗೆ ದೂರು ನೀಡಿದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಚಿನ್ನ‌‌ಸ್ವಾಮಿ ಸ್ಟೇಡಿಯಂನಲ್ಲಿ ಫುಡ್ ಟೆಸ್ಟ್‌ಗೆ ಮುಂದಾದ ಸರ್ಕಾರ

    ಸೈಬರ್ ಖದೀಮರು ರಿಯಲ್ ವೆಬ್‌ಸೈಟ್‌ಗೆ ಹೇಗೆ ಇದೆಯೇ ಅದೇ ರೀತಿ ಸೈಟ್‌ ಸೃಷ್ಟಿ ಮಾಡಿ ಟಿಕೆಟ್ ಬುಕ್ ಮಾಡುವವರ ಬಳಿ ಹಣ ಪೀಕುತ್ತಿದ್ದಾರೆ. ಅದೆಷ್ಟೋ ಜನ ಮ್ಯಾಚ್ ನೋಡುವ ಆತುರದಲ್ಲಿ ಹಣ ಕಳೆದುಕೊಂಡಿದ್ದಾರೆ. ಹೀಗೆ ಯಾರು ವಂಚನೆಗೊಳಗಾಗಬೇಡಿ ಆಕಾಶ್ ಮನವಿ ಮಾಡಿದ್ದಾರೆ.

     

  • ನಾಳೆ ಆರ್‌ಸಿಬಿ ಮ್ಯಾಚ್‌ – ಚಿನ್ನ‌‌ಸ್ವಾಮಿ ಸ್ಟೇಡಿಯಂನಲ್ಲಿ ಫುಡ್ ಟೆಸ್ಟ್‌ಗೆ ಮುಂದಾದ ಸರ್ಕಾರ

    ನಾಳೆ ಆರ್‌ಸಿಬಿ ಮ್ಯಾಚ್‌ – ಚಿನ್ನ‌‌ಸ್ವಾಮಿ ಸ್ಟೇಡಿಯಂನಲ್ಲಿ ಫುಡ್ ಟೆಸ್ಟ್‌ಗೆ ಮುಂದಾದ ಸರ್ಕಾರ

    ಬೆಂಗಳೂರು: ಶನಿವಾರ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ಹಿನ್ನೆಲೆಯಲ್ಲಿ ಆಹಾರ ಮತ್ತು ಸುರಕ್ಷತಾ ಇಲಾಖೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಆಹಾರ ಪರೀಕ್ಷೆ ನಡೆಸಲು ಮುಂದಾಗಿದೆ.

    ಸ್ಟೇಡಿಯಂ ಕ್ಯಾಂಟೀನ್‌ನಲ್ಲಿರುವ ಆಹಾರ ಸೇವಿಸಿ ವ್ಯಕ್ತಿಯೊಬ್ಬರು ಅಸ್ವಸ್ಥರಾದ ವರದಿ ಬೆನ್ನಲ್ಲೇ ಆಹಾರ ಮತ್ತು ಸುರಕ್ಷತಾ ಇಲಾಖೆ ಎಚ್ಚೆತ್ತುಕೊಂಡು ಪರೀಕ್ಷೆ ನಡೆಸುವುದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ಗೆ ಪತ್ರದ ಮೂಲಕ ತಿಳಿಸಿದೆ. ಇದನ್ನೂ ಓದಿ: ಸಿಎಸ್‌ಕೆಗೆ ಗುಡ್‌ನ್ಯೂಸ್‌, ಆರ್‌ಸಿಬಿಗೆ ಬ್ಯಾಡ್‌ ನ್ಯೂಸ್‌ – ಮುಂದಿನ 5 ದಿನ ಬೆಂಗ್ಳೂರಿನಲ್ಲಿ ಮಳೆ ವಾತಾವರಣ ಹೇಗಿದೆ?

    ಪರೀಕ್ಷೆ ಹೇಗೆ?
    ಕ್ಯಾಂಟೀನ್‌ನಲ್ಲಿ ಸಿದ್ಧವಾದ ಆಹಾರವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಪರೀಕ್ಷಾ ವರದಿಯಲ್ಲಿ ನೆಗೆಟಿವ್‌ ಬಂದರೆ ಆ ಆಹಾರವನ್ನು ವಿತರಣೆ ಮಾಡಲು ಅನುಮತಿ ನೀಡಲಾಗುತ್ತದೆ.

    ಒಂದು ವೇಳೆ ಪಾಸಿಟಿವ್‌ ಬಂದರೆ ಆಹಾರ ವಿತರಣೆ ಮಾಡುವ ಕ್ಯಾಂಟೀನ್‌ ಮುಚ್ಚಿ ಮಾಲೀಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.