Tag: rcb

  • IPL 2025 | ಸಾರ್ವಕಾಲಿಕ ದಾಖಲೆ ಬರೆದವರು, ಕೆಟ್ಟ ದಾಖಲೆ ಹೆಗಲಿಗೇರಿಸಿಕೊಂಡವರು…

    IPL 2025 | ಸಾರ್ವಕಾಲಿಕ ದಾಖಲೆ ಬರೆದವರು, ಕೆಟ್ಟ ದಾಖಲೆ ಹೆಗಲಿಗೇರಿಸಿಕೊಂಡವರು…

    18ನೇ ಐಪಿಎಲ್‌ (IPL 2025) ಆವೃತ್ತಿಗೆ ಇನ್ನು 3 ದಿನಗಳಷ್ಟೇ ಬಾಕಿಯಿದ್ದು, ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ. ಈ ಟೂರ್ನಿಯಲ್ಲಿ ಮೊದಲಿನಿಂದಲೂ ಬ್ಯಾಟರ್‌ಗಳ ಅಬ್ಬರ ಜೋರಾಗಿದೆ. ಮತ್ತೊಂದೆಡೆ ಬೌಲರ ಕಮಾಲ್‌, ಕ್ಯಾಪ್ಟನ್‌ಗಳ ಚಮತ್ಕಾರ ಎಲ್ಲವೂ ಕಣ್ಣಿಗೆ ಹಬ್ಬ.

    ಟಿ20 ಫಾರ್ಮೆಟ್‌ಗೆ ಹೊಸ ಹೊಳಪು ನೀಡಿದ್ದು ಐಪಿಎಲ್. ಈ ಲೀಗ್ ಆರಂಭವಾದಾಗ ಇಷ್ಟು ದೊಡ್ಡದಾಗಿ ಬೆಳೆಯುತ್ತದೆ ಎಂದು ಯಾರೂ ಊಹಿಸಿರಲು ಸಾಧ್ಯವೇ ಇರಲಿಲ್ಲ. ಆದರೆ ಕಳೆದ 18 ವರ್ಷಗಳಲ್ಲಿ ಈ ಲೀಗ್ ಬೆಳೆದು ನಿಂತ ಪರಿ ಅಮೋಘ. ಈ ಲೀಗ್‌ನಲ್ಲಿ ಬ್ಯಾಟರ್‌ ಅಬ್ಬರ ಜೋರಾಗಿರುತ್ತದೆ. ಬೌಲರ್‌ಗಳ ರಣ ತಂತ್ರವನ್ನು ಬುಡಮೇಲು ಮಾಡಿ ರನ್‌ ವೇಗಕ್ಕೆ ಚುರುಕು ಮುಟ್ಟಿಸುವ ಬ್ಯಾಟರ್‌ಗಳು, ಕೆಲವೊಮ್ಮೆ ಪಂದ್ಯದ ದಿನಕ್ಕನೇ ಬದಲಿಸುವ ಬೌಲರ್‌ಗಳು, ಕೊನೆಯಲ್ಲಿ ರಣತಂತ್ರ ರೂಪಿಸಿ ಎದುರಾಳಿಗಳನ್ನು ಕಟ್ಟಿಹಾಕುವ ಕ್ಯಾಪ್ಟನ್‌ಗಳು ತಮ್ಮ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಇಂತಹ ಅದ್ಭುತ ಕ್ಷಣಗಳಿಗೆ 18ನೇ ಆವೃತ್ತಿಯ ಐಪಿಎಲ್‌ ಕೂಡ ಸಾಕ್ಷಿಯಾಗಲಿದೆ.

    CHRIS GAYLE

    ಐಪಿಎಲ್‌ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್, ಒಂದೇ ಋತುವಿನಲ್ಲಿ ಗಳಿಸಿದ ಅತ್ಯಧಿಕ ಸ್ಕೋರ್, ನಾಯಕನಾಗಿ ಅತಿ ಹೆಚ್ಚು ಗೆಲುವು, ಹೆಚ್ಚು ವಿಕೆಟ್, ಕಡಿಮೆ ಸ್ಕೋರ್ ಗಳಿಸಿದ ತಂಡ ಸೇರಿದಂತೆ ಐಪಿಎಲ್‌ನಲ್ಲಿ ಮುರಿಯಲು ಕಷ್ಟಕರವಾದ ದಾಖಲೆಗಳ ಪಟ್ಟಿಇಂತಿದೆ. ಇದನ್ನೂ ಓದಿ: IPL 2025: ಆರೆಂಜ್‌, ಪರ್ಪಲ್‌ ಕ್ಯಾಪ್‌ ವಿನ್ನರ್ಸ್‌ ಇವರೇ.. – ಶಾನ್‌ ಮಾರ್ಷ್‌ನಿಂದ ಕಿಂಗ್‌ ಕೊಹ್ಲಿ ವರೆಗೆ

    ಕ್ರಿಸ್‌ಗೇಲ್‌ ತೂಫಾನ್‌ ಶತಕ
    ಐಪಿಎಲ್ ಇತಿಹಾಸದಲ್ಲಿ ಕ್ರಿಸ್ ಗೇಲ್ ಅವರ ಈ ದಾಖಲೆ ಮುರಿಯುವುದು ಇಂದಿಗೂ ಅಸಾಧ್ಯವಾಗಿಯೇ ಉಳಿದಿದೆ. ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ದಾಖಲೆ ವೆಸ್ಟ್ ಇಂಡೀಸ್ ದಿಗ್ಗಜನ ಹೆಸರಿನಲ್ಲಿದೆ. 2013ರ ಏಪ್ರಿಲ್ 23ರಂದು ಟೂರ್ನಿಯ 31ನೇ ಪಂದ್ಯದಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ 66 ಎಸೆತಗಳಲ್ಲಿ ಅಜೇಯ 175 ರನ್ ಬಾರಿಸಿದ್ದರು. ಅವರ ಈ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ, 17 ಸಿಕ್ಸರ್ ಗಳಿದ್ದವು. ಇಂದಿಗೂ ಸಹ ಗೇಲ್‌ ಅವರ ಈ ದಾಖಲೆ ಸಮೀಯ ಸುಳಿಯಲೂ ಯಾರಿಂದಲೂ ಸಾಧ್ಯವಾಗಿಲ್ಲ.

    ರನ್‌ ಮಿಷಿನ್‌ ಕೊಹ್ಲಿ
    ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2016ರ ಐಪಿಎಲ್‌ನಲ್ಲಿ ಕೊಹ್ಲಿ 973 ರನ್ ಗಳಿಸಿದ್ದರು. ಯಾವೊಬ್ಬ ಬ್ಯಾಟರ್ ಕೂಡ ಈ ದಾಖಲೆಯ ಸಮೀಪಕ್ಕೂ ಸುಳಿದಿಲ್ಲ. ಆ ಋತುವಿನಲ್ಲಿ ಕೊಹ್ಲಿ 16 ಪಂದ್ಯಗಳಲ್ಲಿ 81.08 ಸರಾಸರಿ ಮತ್ತು 152.03 ಸ್ಟೈಕ್ ರೇಟ್‌ನಲ್ಲಿ ಇಷ್ಟು ರನ್‌ ಸಿಡಿಸಿದ್ದರು. ಅವರು ಆಡಿದ 16 ಪಂದ್ಯಗಳಲ್ಲಿ 4 ಶತಕ ಮತ್ತು 7 ಅರ್ಧಶತಕ ಸಿಡಿಸಿದ್ದರು. ಕೊಹ್ಲಿ ನಂತರ 2ನೇ ಸ್ಥಾನದಲ್ಲಿ ಶುಭಮನ್‌ ಗಿಲ್‌ ಇದ್ದಾರೆ. 2023ರ ಆವೃತ್ತಿಯಲ್ಲಿ ಗಿಲ್‌ 890 ರನ್‌ ಗಳಿಸಿದ್ದರು. ಇದನ್ನೂ ಓದಿ: IPL 2025 | ಅತ್ಯುತ್ತಮ ಜೊತೆಯಾಟದಲ್ಲಿ ಆರ್‌ಸಿಬಿ ಆಟಗಾರರೇ ಟಾಪ್‌!

    ನಾಯಕನಾಗಿ ದಾಖಲೆ ಬರೆದ ಕೂಲ್‌ ಕ್ಯಾಪ್ಟನ್‌
    ಐಪಿಎಲ್ ಇತಿಹಾಸದಲ್ಲೇ ನಾಯಕನಾಗಿ ಅತಿ ಹೆಚ್ಚು ದಾಖಲೆ ಕಂಡ ಆಟಗಾರ ಲೆಜೆಂಡ್‌ ಎಂ.ಎಸ್ ಧೋನಿ. ಈ ದಾಖಲೆಯನ್ನೂ ಮುರಿಯುವುದು ಸುಲಭದ ಮಾತಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಐದು ಟ್ರೋಫಿ ಗೆದ್ದುಕೊಟ್ಟಿರುವ ಧೋನಿ, 226 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಈ ಪೈಕಿ ಧೋನಿ 133 ಪಂದ್ಯಗಳಲ್ಲಿ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ. 91 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಇದನ್ನೂ ಓದಿ: IPL 2025 | 10 ತಂಡಗಳ ನಾಯಕರ ಹೆಸರು ಫೈನಲ್‌ – 9 ಮಂದಿ ಭಾರತೀಯರದ್ದೇ ಆರ್ಭಟ

    ಸ್ಪಿನ್‌ ಮಾಂತ್ರಿಕ ಚಹಲ್‌
    ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಯುಜೇಂದ್ರ ಚಹಲ್‌ ಅವರದ್ದಾಗಿದೆ. ಚಹಲ್‌ ಒಟ್ಟು 205 ವಿಕೆಟ್ ಕಬಳಿಸಿದ್ದು, ಇದು ಈವರೆಗೆ ಸಾರ್ವಕಾಲಿಕ ದಾಖಲೆಯಾಗಿಯೇ ಉಳಿದಿದೆ. ಇಷ್ಟು ವಿಕೆಟ್‌ ಪಡೆಯೋದಕ್ಕಾಗಿ 159 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. 40ಕ್ಕೆ 5 ವಿಕೆಟ್‌ ಪಡೆದಿರುವುದು ಅವರ ಬೆಸ್ಟ್ ಬೌಲಿಂಗ್ ಆಗಿದೆ. ಐಪಿಎಲ್ 2025 ರ ಋತುವಿನಲ್ಲಿ ಪಂಜಾಬ್‌ ಕಿಂಗ್ಸ್ ಪರ ಆಡಲಿರುವ ಚಹಲ್ ತಮ್ಮ ವಿಕೆಟ್ ಬೇಟೆಯನ್ನು ಮುಂದುವರಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: IPL 2025 | ಶ್ರೀಮಂತ ಕ್ರಿಕೆಟ್‌ ಟೂರ್ನಿಯಲ್ಲಿ ರನ್‌ ಹೊಳೆ ಹರಿಸಿದ ವೀರರು ಇವರೇ…

    ಅತೀ ಕಡಿಮೆ ರನ್‌ಗಳಿಗೆ ಆಲೌಟ್‌ ಆಗಿ ಕೆಟ್ಟ ದಾಖಲೆ ಬರೆದ 5 ತಂಡಗಳು
    * ಆರ್‌ಸಿಬಿ – 49 ರನ್‌ – ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ – 2017
    * ರಾಜಸ್ಥಾನ್‌ ರಾಯಲ್ಸ್ – 58 ರನ್‌ – ಆರ್‌ಸಿಬಿ ವಿರುದ್ಧ – 2009
    * ರಾಜಸ್ಥಾನ ರಾಯಲ್ಸ್‌ – 59 ರನ್‌ – ಆರ್‌ಸಿಬಿ ವಿರುದ್ಧ – 2023
    * ಡೆಲ್ಲಿ ಡೇರ್‌ ಡೆವಿಲ್ಸ್‌ – 66 ರನ್‌ – ಮುಂಬೈ ಇಂಡಿಯನ್ಸ್‌ ವಿರುದ್ಧ – 2017
    * ಡೆಲ್ಲಿ ಡೇರ್‌ ಡೆವಿಲ್ಸ್‌ – 67 ರನ್‌ – ಪಂಜಾಬ್‌ ಕಿಂಗ್ಸ್‌ ವಿರುದ್ಧ – 2017

  • ಪುನೀತ್‌ ರಾಜ್‌ಕುಮಾರ್‌ ನೆನೆದ RCB ತರಬೇತುದಾರ ದಿನೇಶ್‌ ಕಾರ್ತಿಕ್‌

    ಪುನೀತ್‌ ರಾಜ್‌ಕುಮಾರ್‌ ನೆನೆದ RCB ತರಬೇತುದಾರ ದಿನೇಶ್‌ ಕಾರ್ತಿಕ್‌

    – ಬೆಂಗಳೂರಿನ ಪ್ರತಿ ಮೂಲೆಯಲ್ಲೂ ಅಪ್ಪು ಫೋಟೊ ನೋಡಿದ್ದೇನೆ ಎಂದ ಮಾಜಿ ಕ್ರಿಕೆಟಿಗ

    ರಾಜ್ಯದ ಎಲ್ಲೆಡೆ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ 50ನೇ ಹುಟ್ಟುಹಬ್ಬ ಆಚರಿಸಲಾಗಿದೆ. ಈ ಹೊತ್ತಿನಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ, ಆರ್‌ಸಿಬಿ ತರಬೇತುದಾರ ದಿನೇಶ್‌ ಕಾರ್ತಿಕ್‌ (Dinesh Karthik), ಅಪ್ಪು ನೆನೆದಿದ್ದಾರೆ.

    ಇನ್‌ಸ್ಟಾದಲ್ಲಿ ವೀಡಿಯೋ ಮಾಡಿರುವ ದಿನೇಶ್‌ ಕಾರ್ತಿಕ್‌, ನಾನು ಮೂಲತಃ ಚೆನೈನವನು. ನನಗೆ ರಜಿನಿಕಾಂತ್, ಕಮಲ್‌ ಹಾಸನ್, ವಿಜಯ್ ಅಂದ್ರೆ ಇಷ್ಟ.‌ ಆದ್ರೆ RCBಗಾಗಿ ಮೂರು ವರ್ಷ ಆಡುವಾಗ ನನಗೆ ಅನ್ಸಿದ್ದು.. ಇಡೀ ಬೆಂಗಳೂರು ಒಬ್ಬರನ್ನ ಇಷ್ಟಪಡುತ್ತೆ ಅಂತ. ಅದು ಯಾರಂದ್ರೆ ಪುನೀತ್ ರಾಜ್‌ಕುಮಾರ್. ಪ್ರತಿ ಮೂಲೆಯಲ್ಲೂ ಅಪ್ಪು ಫೋಟೋವನ್ನ ನೋಡಿದ್ದೇನೆ. ಅವರು ಬೆಂಗಳೂರಿನ ಪ್ರತಿ ಮೂಲೆಯಲ್ಲೂ ಇದ್ದಾರೆ ಅನ್ಸುತ್ತೆ. ಆ ಮಟ್ಟಿಗೆ ಅಭಿಮಾನಿಗಳು ಅವರನ್ನ ಇಷ್ಟ ಪಡ್ತಾರೆ ಎಂದು ಪುನೀತ್‌ ಅವರನ್ನು ಕ್ರಿಕೆಟಿಗ ಕೊಂಡಾಡಿದ್ದಾರೆ.

     

    View this post on Instagram

     

    A post shared by Dinesh Karthik (@dk00019)

    ಅವರ ಹುಟ್ಟುಹಬ್ಬದ ದಿನ ನಾನು ಅವ್ರಿಗೆ ನಮಿಸ್ತೇನೆ. ಮುಂದಿನ ಪೀಳಿಗೆಗೂ ಅವರು ಸ್ಪೂರ್ತಿಯಾಗಿರ್ತಾರೆ. ಅವರ ಸಿನಿಮಾಗಳನ್ನ ನೋಡಲು ಆಗಿಲ್ಲ. ಈಗಿನಿಂದಲೇ ನನಗೆ ಗೈಡ್ ಮಾಡಿ, ಯಾವೆಲ್ಲಾ ಸಿನಿಮಾಗಳನ್ನ ನೋಡಲಿ ಅಂತ ಎಂದು ವೀಡಿಯೋದಲ್ಲಿ ದಿನೇಶ್‌ ಕಾರ್ತಿಕ್‌ ಕೇಳಿದ್ದಾರೆ.

  • IPL 2025 | ಅತ್ಯುತ್ತಮ ಜೊತೆಯಾಟದಲ್ಲಿ ಆರ್‌ಸಿಬಿ ಆಟಗಾರರೇ ಟಾಪ್‌!

    IPL 2025 | ಅತ್ಯುತ್ತಮ ಜೊತೆಯಾಟದಲ್ಲಿ ಆರ್‌ಸಿಬಿ ಆಟಗಾರರೇ ಟಾಪ್‌!

    ಯಾವುದೇ ಟಿ20 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ಮಾಡುವ ತಂಡವು ಬೃಹತ್‌ ಮೊತ್ತ ಬಾರಿಸಬೇಕಾದ್ರೆ, ಸ್ಫೋಟಕ ಬ್ಯಾಟಿಂಗ್‌ ಮಾಡುವ ಹೊರತಾಗಿ ಉತ್ತಮ ಪಾಲುದಾರಿಕೆಯೂ ಮುಖ್ಯವಾಗುತ್ತದೆ. ಐಪಿಎಲ್‌ ಟೂರ್ನಿಗೂ (IPL 2025) ಇದು ಅನ್ವಯಿಸುತ್ತದೆ.

    ಮೊದಲು ಬ್ಯಾಟಿಂಗ್‌ ಮಾಡುವ ತಂಡದ ಪರ ಬ್ಯಾಟಿಂಗ್‌ ಜೋಡಿಯು ಕ್ರೀಸ್‌ ಮೇಲೆ ಭದ್ರವಾಗಿ ನೆಲೆಯೂರಿದರೆ, ದೊಡ್ಡ ಹೊಡೆತ ನೀಡಲು ಮುಂದಾದ್ರೆ, ಕನಿಷ್ಠ 200 ರನ್‌ಗಳನ್ನು ಕಲೆಹಾಕುವುದು ಖಚಿತ. ಕೆಲವೊಮ್ಮೆ ಅಧಿಕ ರನ್‌ ಗಳಿಸಿದ ತಂಡವು ಬೌಲಿಂಗ್‌ನಲ್ಲಿ ಕೊಂಚ ಎಡವಿದರೂ ಎದುರಾಳಿ ತಂಡಕ್ಕೆ ಗೆಲುವು ತಂದುಕೊಡಬಹುದು. ಉದಾಹರಣೆಗೆ 2023ರ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಆರ್‌ಸಿಬಿ (CSK vs RCB) ನಡುವಿನ ಪಂದ್ಯ ಸಾಕ್ಷಿಯಾಗಿದೆ. ಅಂದು ಚೆನ್ನೈ 226 ರನ್‌ ಪೇರಿಸಿದ್ದರೂ, ಕೇವಲ 9 ರನ್‌ಗಳಿಂದ ಗೆಲುವು ಸಾಧಿಸಿತ್ತು. 18ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಳು ಸಮೀಪಿಸುತ್ತಿರುವ ಕಾರಣ ಈ ಹಿಂದಿನ ಅತ್ಯುತ್ತಮ ಜೊತೆಯಾಟವನ್ನು ಮೆಲುಕು ಹಾಕುಬೇಕಾಗಿದ್ದು, ಐಪಿಎಲ್‌ ಇತಿಹಾಸದಲ್ಲೇ ದಾಖಲೆಯ ಜೊತೆಯಾಟ ನೀಡಿದ ಟಾಪ್‌ ಜೋಡಿಗಳನ್ನು ಇಲ್ಲಿ ಕಾಣಬಹುದು.

    RCB 11

    ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್
    ಐಪಿಎಲ್‌ ಇತಿಹಾಸದಲ್ಲಿ ಅತ್ಯುತ್ತಮ ಜೊತೆಯಾಟ ನೀಡಿದ ಟಾಪ್‌-5 ಪಟ್ಟಿಯಲ್ಲಿ ಕೊಹ್ಲಿ ಮೂರರಲ್ಲಿ ಕಾಣಿಸಿಕೊಂಡಿದ್ದಾರೆ, ಅಲ್ಲದೇ ಆರ್‌ಸಿಬಿ ತಂಡ ಮೂವರು ಆಟಗಾರರು ಈ ಪಟ್ಟಿಲ್ಲಿರುವುದು ವಿಶೇಷ. 2016ರ ಆವೃತ್ತಿಯಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಎಬಿ ಡಿವಿಲಿಯರ್ಸ್ (AB de Villiers) ಅವರೊಂದಿಗೆ 2ನೇ ವಿಕೆಟ್​ಗೆ ವಿರಾಟ್​ ಕೊಹ್ಲಿ (Virat Kohli) 229 ರನ್​​ಗಳನ್ನು ಸೇರಿಸಿದ್ದರು. ಈ ಪಂದ್ಯದಲ್ಲಿ ಇಬ್ಬರೂ ಶತಕಗಳನ್ನು ಸಿಡಿಸಿದ್ದರು. ದಕ್ಷಿಣ ಆಫ್ರಿಕಾದ ಬ್ಯಾಟರ್ ಮಿಸ್ಟರ್‌-360, ಕೇವಲ 52 ಎಸೆತಗಳಲ್ಲಿ 12 ಸಿಕ್ಸರ್​ಗಳು ಮತ್ತು 10 ಬೌಂಡರಿಗಳ ಸಹಾಯದಿಂದ 129 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ 55 ಎಸೆತಗಳಲ್ಲಿ 109 ರನ್ ಗಳಿಸುವುದರೊಂದಿಗೆ ಆರ್​ಸಿಬಿ 3 ವಿಕೆಟ್ ನಷ್ಟಕ್ಕೆ 248 ರನ್ ಪೇರಿಸಿತ್ತು. ಪಂದ್ಯದಲ್ಲಿ ಆರ್​​ಸಿಬಿ ಗೆದ್ದಿತ್ತು.

    RCB 2 3

    ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್
    2015ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 2ನೇ ವಿಕೆಟ್​ಗೆ ಕೊಹ್ಲಿ ಮತ್ತು ವಿಲಿಯರ್ಸ್ 215 ರನ್​ಗಳ ಜೊತೆಯಾಟವಾಡಿದ್ದರು. ಆ ಪಂದ್ಯದಲ್ಲಿ ಎಬಿಡಿ ಕೇವಲ 59 ಎಸೆತಗಳಲ್ಲಿ 19 ಬೌಂಡರಿ ಮತ್ತು 4 ಸಿಕ್ಸರ್ ಸೇರಿದಂತೆ 133 ರನ್ ಚಚ್ಚಿದ್ದರು. ವಿರಾಟ್ 50 ಎಸೆತಗಳಲ್ಲಿ 82 ರನ್ ಸಿಡಿಸಿ ಔಟಾದರು. ಮೊದಲ ಇನ್ನಿಂಗ್ಸ್​​ನಲ್ಲಿ 235/1 ಸ್ಕೋರ್ ಮಾಡಿದ್ದ ಆರ್​ಸಿಬಿ ಈ ಪಂದ್ಯವನ್ನು 39 ರನ್​ಗಳಿಂದ ಗೆದ್ದುಕೊಂಡಿತ್ತು.

    GTvsLSG 4

    ಕ್ವಿಂಟನ್‌ ಡಿ ಕಾಕ್‌ & ಕೆ.ಎಲ್‌ ರಾಹುಲ್‌
    2022ರ ಐಪಿಎಲ್‌ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಪರ ಆರಂಭಿಕರಾದ ಕ್ವಿಂಟನ್ ಡಿ ಕಾಕ್ ಮತ್ತು ಕೆ.ಎಲ್ ರಾಹುಲ್ ಅಬ್ಬರದ ಪ್ರದರ್ಶನ ನೀಡಿದ್ದರು. ಕೆಕೆಆರ್ ವಿರುದ್ಧ ರಾಹುಲ್ ಹಾಗೂ ಡಿ ಕಾಕ್ ಜೋಡಿ 210 ರನ್​ಗಳ ಜೊತೆಯಾಟ ದಾಖಲಿಸಿದ್ದರು. ಇದು ಟಿ20 ಲೀಗ್‌ನಲ್ಲಿ 3ನೇ ಅತ್ಯುತ್ತಮ ಜೊತೆಯಾಟವಾಗಿ ದಾಖಲಾಯಿತು.

    ಶುಭಮನ್‌ ಗಿಲ್‌ & ಸಾಯಿ ಸುದರ್ಶನ್‌:
    2024ರ ಐಪಿಎಲ್‌ ಆವೃತ್ತಿಯಲ್ಲಿ ಸಿಎಸ್‌ಕೆ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ ನಾಯಕ ಶುಭಮನ್‌ ಗಿಲ್‌, ಆರಂಭಿಕ ಆಟಗಾರ ಸಾಯಿ ಸುದರ್ಶನ್‌ ಮೊದಲ ವಿಕೆಟ್‌ಗೆ 210 ರನ್‌ಗಳ ಜೊತೆಯಾಟ ನೀಡಿದ್ದರು. ಈ ಪಂದ್ಯದಲ್ಲಿ ಆರಂಭಿಕರಿಬ್ಬರೂ ಶತಕ ಸಿಡಿಸಿ ಮಿಂಚಿದ್ದರು. ಇದು ಐಪಿಎಲ್‌ ಇತಿಹಾಸದಲ್ಲಿ ಅತಿಹೆಚ್ಚು ರನ್‌ಗಳ ನಾಲ್ಕನೇ ಜೊತೆಯಾಟವಾಗಿದೆ.

    ಗಿಲ್​ಕ್ರಿಸ್ಟ್​​ & ಶಾನ್​ ಮಾರ್ಷ್​​
    2011ರ ಆವೃತ್ತಿಯಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ, ಪಂಜಾಬ್ ನಾಯಕ ಆಡಂ ಗಿಲ್​​ಕ್ರಿಸ್ಟ್​​ 55 ಎಸೆತಗಳಲ್ಲಿ 106 ರನ್ ಗಳಿಸುವ ಮೂಲಕ ಅದ್ಭುತ ಶತಕ ಗಳಿಸಿದ್ದರು. ಶಾನ್ ಮಾರ್ಷ್ ಜೊತೆಗೂಡಿ 2ನೇ ವಿಕೆಟ್ ಗೆ 206 ರನ್ ಪೇರಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿನ 4ನೇ ಅತಿ ದೊಡ್ಡ ಜೊತೆಯಾಟವಾಗಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಪಂಜಾಬ್ 2 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿತ್ತು. ಅಂತಿಮವಾಗಿ ಆರ್​ಸಿಬಿ 111 ರನ್ ಗಳ ಸೋಲು ಅನುಭವಿಸಿತ್ತು.

    ದಾಖಲೆ ಜೊತೆಯಾಟ ನೀಡಿದ ಟಾಪ್‌-5 ಜೋಡಿಗಳು:
    * ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್ – 2ನೇ ವಿಕೆಟ್​ಗೆ, 229 ರನ್​, ಗುಜರಾತ್​ ಲಯನ್ಸ್​ ವಿರುದ್ಧ (2016)
    * ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್ – 2ನೇ ವಿಕೆಟ್​ಗೆ 215 ರನ್​, ಮುಂಬೈ ಇಂಡಿಯನ್ಸ್ ವಿರುದ್ಧ (2015)
    * ಕ್ವಿಂಟನ್ ಡಿ ಕಾಕ್ & ಕೆಎಲ್ ರಾಹುಲ್ – ಮೊದಲ ವಿಕೆಟ್​ಗೆ, 210 ರನ್​, ಕೆಕೆಆರ್ ವಿರುದ್ಧ (2022)
    * ಶುಭಮನ್‌ ಗುಲ್‌ & ಸಾಯಿ ಸುದರ್ಶನ್‌ – ಮೊದಲ ವಿಕೆಟ್‌ಗೆ, 210 ರನ್‌, ಸಿಎಸ್‌ಕೆ ವಿರುದ್ಧ (2024)
    * ಆಡಮ್ ಗಿಲ್ಕ್ರಿಸ್ಟ್ & ಶಾನ್ ಮಾರ್ಷ್ – 2ನೇ ವಿಕೆಟ್‌ಗೆ 206 ರನ್‌, ಆರ್​​ಸಿಬಿ ವಿರುದ್ಧ (2011)

  • IPL 2025 | 10 ತಂಡಗಳ ನಾಯಕರ ಹೆಸರು ಫೈನಲ್‌ – 9 ಮಂದಿ ಭಾರತೀಯರದ್ದೇ ಆರ್ಭಟ

    IPL 2025 | 10 ತಂಡಗಳ ನಾಯಕರ ಹೆಸರು ಫೈನಲ್‌ – 9 ಮಂದಿ ಭಾರತೀಯರದ್ದೇ ಆರ್ಭಟ

    ಐಸಿಸಿ ಚಾಂಪಿಯನ್ಸ್ ಟ್ರೋಫಿ, ಡಬ್ಲ್ಯೂಪಿಎಲ್‌ ಬಳಿಕ ಕ್ರಿಕೆಟ್ ಪ್ರಿಯರ ಚಿತ್ತ ಈಗ ಐಪಿಎಲ್ ಕಡೆ ತಿರುಗಿದೆ. ಪ್ರತಿಷ್ಠಿಯ 18ನೇ ಆವೃತ್ತಿಯ ಈ ಕ್ರೀಡಾಕೂಟ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಕ್ರಿಕೆಟ್‌ ಪ್ರೇಮಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಈಗಾಗಲೇ ಎಲ್ಲಾ ಹತ್ತು ಫ್ರಾಂಚೈಸ್ ಗಳು ತಮ್ಮತಮ್ಮ ನಾಯಕರ ಹೆಸರನ್ನು ಆಯಾ ಫ್ರಾಂಚೈಸಿಗಳು ಅಂತಿಮಗೊಳಿಸಿವೆ.

    ಹಿಂದೆಲ್ಲಾ ಟೂರ್ನಿಗಳಲ್ಲಿ ವಿದೇಶಿ ಆಟಗಾರರೇ ಹೆಚ್ಚಾಗಿ ನಾಯಕರಾಗಿದ್ದ ಉದಾಹರಣೆಗಳಿವೆ. ಆದರೆ, ಈ ಬಾರಿಯ ಐಪಿಎಲ್ ನಲ್ಲಿ ಒಬ್ಬರು ಮಾತ್ರವೇ ವಿದೇಶಿ ಆಟಗಾರ ನಾಯಕನಾಗಿದ್ದು, ಮಿಕ್ಕೆಲ್ಲ ತಂಡಗಳಿಗೆ ಟೀಂ ಇಂಡಿಯಾದ ಆಟಗಾರರೇ ನಾಯಕರಾಗಿರುವುದು ವಿಶೇಷ. ಈ ಮೊದಲು ಆಸ್ಟ್ರೇಲಿಯಾದ ಸ್ಟಾರ್ ಆಟಗಾರರಾದ ಡೇವಿಡ್ ವಾರ್ನರ್, ಆಡಂ ಗಿಲ್ಕ್ರಿಸ್ಟ್, ಶೇನ್ ವಾರ್ನ್, ಸ್ಟೀವನ್ ಸ್ಮಿತ್, ಕ್ಯಾಮರೂನ್ ವೈಟ್, ಶ್ರೀಲಂಕಾದ ಕುಮಾರ ಸಂಗಕ್ಕರ, ನ್ಯೂಜಿಲ್ಯಾಂಡ್ ದೇಶದ ಕೇನ್ ವಿಲಿಯಮ್ಸನ್, ಡೇನಿಯಲ್ ವೆಟ್ಟೋರಿ, ಬ್ರಿಂಡನ್‌ ಮಕಲಂ ಮುಂತಾದ ವಿದೇಶಿ ಆಟಗಾರರು ಫ್ರಾಂಚೈಸ್ ನಾಯಕರಾಗಿದ್ದರು.

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನೂ ಮೂವರು ವಿದೇಶಿ ಆಟಗಾರರು ಮುನ್ನಡೆಸಿದ್ದರು. 2009ರಲ್ಲಿ ಕೆವಿನ್ ಪೀಟರ್ಸನ್, 2011 ಮತ್ತು 2012ರಲ್ಲಿ ಡೇನಿಯಲ್ ವೆಟ್ಟೋರಿ ಮತ್ತು 2022, 2023 ಮತ್ತು 2024ರ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ನಾಯಕರಾಗಿದ್ದರು. ಇದೇ ರೀತಿ ಬಹುತೇಕ ಎಲ್ಲಾ ಫ್ರಾಂಚೈಸ್ ನಾಯಕರೂ ಕೆಲವು ಆವೃತ್ತಿಗಳಲ್ಲು ನಾಯಕರಾಗಿದ್ದರು. ಉದಾಹರಣೆಗೆ, ಮುಂಬೈ ಇಂಡಿಯನ್ಸ್ ತಂಡವನ್ನು ದಕ್ಷಿಣ ಆಫ್ರಿಕಾದ ಶಾನ್ ಪೊಲಾಕ್ (2008), ವೆಸ್ಟ್ ಇಂಡೀಸ್ ತಂಡದ ಡ್ವೇನ್‌ ಬ್ರಾವೋ (2010) ಮತ್ತು ಕೀರನ್ ಪೊಲಾರ್ಡ್ (2014 – 2021) ಸ್ಟ್ಯಾಂಡ್ ಇನ್ ನಾಯಕರಾಗಿದ್ದರು. ಆದ್ರೆ 18ನೇ ಆವೃತ್ತಿಯಲ್ಲಿ ಭಾರತೀಯರ ಆರ್ಭಟವೇ ಜೋರಾಗಿದೆ. 10 ತಂಡಗಳ ಪೈಕಿ 9 ಮಂದಿ ಭಾರತೀಯರೇ ನಾಯಕರಾಗಿ ಮಿಂಚುತ್ತಿದ್ದಾರೆ.

    ಚಾಂಪಿಯನ್‌ಗೆ ಪಟ್ಟ ಕಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌
    ಡೆಲ್ಲಿ ಕ್ಯಾಪಿಟಲ್ಸ್ ತಂಡವೂ ನಾಯಕರು ಯಾರು ಎನ್ನುವುದನ್ನು ಶುಕ್ರವಾರ (ಮಾ. 14) ಬಹಿರಂಗಗೊಳಿಸಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಆಲ್ರೌಂಡ್ ಸಾಧನೆ ತೋರಿದ ಮತ್ತು ತಂಡದ ಸಹ ಆಟಗಾರರಿಂದ ಬಾಪೂ ಎಂದು ಕರೆಯಲ್ಪಡುವ ಅಕ್ಷರ್ ಪಟೇಲ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕರ್ನಾಟಕ ಮೂಲದ ಕೆ.ಎಲ್.ರಾಹುಲ್ ಅವರನ್ನೂ 14 ಕೋಟಿಗೆ ಖರೀದಿಸಿತ್ತು. ಅಕ್ಷರ್ ಪಟೇಲ್ ಮತ್ತು ಕೆ.ಎಲ್.ರಾಹುಲ್ ನಡುವೆ ನಾಯಕತ್ವಕ್ಕೆ ಪೈಪೋಟಿ ನಡೆದಿತ್ತು. ಆದರೆ, ನಾಯಕನ ಜವಾಬ್ದಾರಿ ರಾಹುಲ್ ಬೇಡ ಎಂದ ಕಾರಣಕ್ಕಾಗಿ ಅಕ್ಷರ್ ಪಟೇಲ್‌ಗೆ ಕ್ಯಾಪ್ಟೆನ್ಸಿ ಒಲಿದು ಬಂತು ಎಂದು ಹೇಳಲಾಗುತ್ತಿದೆ.

    ಐಪಿಎಲ್‌ನ 10 ತಂಡಗಳು ಮತ್ತು ನಾಯಕರ ಪಟ್ಟಿ ಹೀಗಿದೆ…

    1. ಮುಂಬೈ ಇಂಡಿಯನ್ಸ್ – ಹಾರ್ದಿಕ್ ಪಾಂಡ್ಯ
    2. ರಾಯಲ್ ಚಾಲೆಂಜರ್ಸ್ ಬೆಂಗಳೂರು – ರಜತ್ ಪಾಟೀದಾರ್
    3. ಕೋಲ್ಕತ ನೈಟ್ ರೈಡರ್ಸ್ – ಅಜಿಂಕ್ಯ ರಹಾನೆ
    4. ಚೆನ್ನೈ ಸೂಪರ್ ಕಿಂಗ್ಸ್ – ರುತುರಾಜ್ ಗಾಯಕ್ವಾಡ್
    5. ಗುಜರಾತ್ ಟೈಟನ್ಸ್ – ಶುಭ್ಮನ್ ಗಿಲ್
    6. ರಾಜಸ್ಥಾನ ರಾಯಲ್ಸ್ – ಸಂಜು ಸ್ಯಾಮ್ಸನ್
    7. ಲಕ್ನೋ ಸೂಪರ್ ಜೈಂಟ್ಸ್‌ – ರಿಷಭ್ ಪಂತ್
    8. ಪಂಜಾಬ್ ಕಿಂಗ್ಸ್ – ಶ್ರೇಯಸ್ ಐಯ್ಯರ್
    9. ಡೆಲ್ಲಿ ಕ್ಯಾಪಿಟಲ್ಸ್ – ಅಕ್ಷರ್ ಪಟೇಲ್
    10. ಸನ್ ರೈಸರ್ಸ್ ಹೈದರಾಬಾದ್ – ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ).
  • IPL 2025 | ಈವರೆಗೆ ಚುಟುಕು ಕದನದಲ್ಲಿ ಟ್ರೋಫಿ ಗೆದ್ದ ಚಾಂಪಿಯನ್ಸ್‌ ಯಾರು?

    IPL 2025 | ಈವರೆಗೆ ಚುಟುಕು ಕದನದಲ್ಲಿ ಟ್ರೋಫಿ ಗೆದ್ದ ಚಾಂಪಿಯನ್ಸ್‌ ಯಾರು?

    18ನೇ ಆವೃತ್ತಿಯ ಐಪಿಎಲ್‌ಗೆ ದಿನಗಣನೆ ಶುರುವಾಗಿದ್ದು, ಇದೇ ಮಾರ್ಚ್ 22ರಿಂದ ಮೆಗಾ ಟೂರ್ನಿ ಆರಂಭಗೊಳ್ಳಲಿದೆ. 2025ರ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ ತಂಡಗಳ ನಡುವೆ ನಡೆಯಲಿದೆ. ಇನ್ನೂ ಮೊದಲ ಸೂಪರ್‌ ಸಂಡೇನಲ್ಲಿ ತಲಾ 5 ಬಾರಿ ಚಾಂಪಿಯನ್‌ಗಳಾಗಿರುವ ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್‌ ಮುಖಾಮುಖಿಯಾಗಲಿವೆ. ಇದೀಗ 17 ವರ್ಷಗಳನ್ನೂ ಪೂರೈಸಿರುವ ವಿಶ್ವದ ಶ್ರೀಮಂತ ಟೂರ್ನಿ 18ನೇ ವರ್ಷಕ್ಕೆ ಕಾಲಿಟ್ಟಿದೆ. ಹೀಗಿರುವಾಗ ಈವರೆಗೆ ಯಾವೆಲ್ಲಾ ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿವೆ? ಇದುವರೆಗೂ ಟ್ರೋಫಿ ಗೆಲ್ಲದ ತಂಡ ಯಾವುದು? ಎಂಬ ವಿವರ ಇಲ್ಲಿದೆ…

    2008ರಲ್ಲಿ ಆರಂಭಗೊಂಡ ಐಪಿಎಲ್‌ ಟೂರ್ನಿ 2024ರ ವರೆಗೆ 17 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಇದೀಗ 18ನೇ ಆವೃತ್ತಿಗೆ ಸಜ್ಜಾಗಿದೆ. ಪ್ರಸ್ತುತ ಆಡುತ್ತಿರುವ ತಂಡಗಳು ಮತ್ತು ನಿಷ್ಕ್ರಿಯ ತಂಡಗಳು ಸೇರಿ ಒಟ್ಟು 15 ತಂಡಗಳು ಈವರೆಗೆ ಐಪಿಎಲ್‌ನಲ್ಲಿ ಆಡಿವೆ ಮತ್ತು ಆಡುತ್ತಿವೆ. ಆದರೆ ಟ್ರೋಫಿ ಗೆದ್ದಿರುವ ತಂಡಗಳು ಮಾತ್ರ 7 ಮಾತ್ರ. ಉಳಿದಂತೆ ಪ್ರಸ್ತುತ ಆಡುತ್ತಿರುವ ನಾಲ್ಕು ಸೇರಿ ಒಟ್ಟು 8 ತಂಡಗಳು (ನಿಷ್ಕ್ರಿಯ ತಂಡಗಳು ಸೇರಿ) ಪ್ರಶಸ್ತಿ ಜಯಿಸಿಲ್ಲ ಎಂಬಹುದು ಗಮನಾರ್ಹ.

    ರಾಜಸ್ಥಾನ್‌ ರಾಯಲ್ಸ್‌ ಚೊಚ್ಚಲ ಚಾಂಪಿಯನ್ಸ್‌
    2008ರ ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಆವೃತ್ತಿಯಲ್ಲಿ ರಾಜಸ್ಥಾನ್‌ ರಾಯಲ್ಸ್ ಟ್ರೋಫಿ ಗೆದ್ದುಕೊಂಡಿತು. ಚುಟುಕು ಪಂದ್ಯಾವಳಿಗೆ ಹುಮ್ಮಸು ತುಂಬಿದ್ದ ಈ ಟೂರ್ನಿಯ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ರಾಜಸ್ಥಾನ್‌ ರಾಯಲ್ಸ್‌ ಚೊಚ್ಚಲ ಚಾಂಪಿಯನ್‌ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ಶೇನ್‌ ವಾರ್ನ್‌ ತಂಡದ ನಾಯಕತ್ವ ವಹಿಸಿದ್ದರು.

    2009ರಲ್ಲಿ ಡೆಕ್ಕನ್‌ ಚಾರ್ಜಸ್‌ಗೆ ಕಿರೀಟ
    2009ರ ಐಪಿಎಲ್‌ ಟೂರ್ನಿಯ ಫೈನಲ್‌ ಪಂದ್ಯ ಅತ್ಯಂತ ರೋಚಕವಾಗಿತ್ತು. ಆಗಲೇ ಜನಮನ ಗೆದ್ದಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಪದಾರ್ಪಣೆ ಮಾಡಿದ 2ನೇ ಆವೃತ್ತಿಯಲ್ಲೇ ಫೈನಲ್‌ ತಲುಪಿತ್ತು. ಆದ್ರೆ ಫೈನಲ್‌ನಲ್ಲಿ ಆಡಂ ಗಿಲ್ಕ್ರಿಸ್ಟ್ ನಾಯಕತ್ವದಲ್ಲಿದ್ದ ಡೆಕ್ಕನ್‌ ಚಾರ್ಜಸ್‌ ತಂಡದ ವಿರುದ್ಧ ಸೋತು ನಿರಾಸೆ ಅನುಭವಿಸಿತು. 6 ರನ್‌ಗಳ ರೋಚಕ ಗೆಲುವು ಸಾಧಿಸಿದ ಡೆಕ್ಕನ್‌ ಪ್ರಶಸ್ತಿ ಗೆದ್ದುಕೊಂಡಿತು.

    5 ಬಾರಿ ಚೆನ್ನೈ ʻಸೂಪರ್‌ʼ ಚಾಂಪಿಯನ್‌
    ಐಪಿಎಲ್‌ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್‌ ಹೊರತುಪಡಿಸಿದ್ರೆ ಅತಿಹೆಚ್ಚು ಬಾರಿ ಚಾಂಪಿಯನ್ಸ್‌ ಪಟ್ಟ ಧಕ್ಕಿಸಿಕೊಂಡ ತಂಡವೆಂದರೆ ಅದು ಚೆನ್ನೈ ಸೂಪರ್‌ ಕಿಂಗ್ಸ್‌. ಇದರ ಖ್ಯಾತಿಯೂ ಸಹ ಚೆನ್ನೈ ತಂಡದ ಜೀವಾಳವೇ ಆಗಿರುವ ಕೂಲ್‌ ಕ್ಯಾಪ್ಟನ್‌ ಎಂ.ಎಸ್‌ ಧೋನಿ ಅವರಿಗೆ ಸಲ್ಲುತ್ತದೆ. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ 2010, 2011, 2018, 2021, 2023ರಲ್ಲಿ ಪ್ರಶಸ್ತಿ ಗೆದ್ದಿದೆ. ಪ್ರಸ್ತುತ ಋತುರಾಜ್‌ ಗಾಯಕ್ವಾಡ್ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

    ಮುಂಬೈಗೂ 5 ಬಾರಿ ಕಿರೀಟ:
    ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಂತೆ ಮುಂಬೈ ಇಂಡಿಯನ್ಸ್‌ ಸಹ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ 2013, 2015, 2017, 2019, 2020ರಲ್ಲಿ ಪ್ರಶಸ್ತಿ ಗೆದ್ದಿದೆ. ಪ್ರಸ್ತುತ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ ತಂಡಕ್ಕೆ ನಾಯಕನಾಗಿದ್ದಾರೆ.

    ಹಾಲಿ ಚಾಂಪಿಯನ್‌ ಕೆಕೆಆರ್‌ಗೆ 3 ಬಾರಿ ಪಟ್ಟ:
    2024ರ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಹಾಲಿ ಚಾಂಪಿಯನ್ಸ್‌ ಆಗಿದೆ. 2012, 2014 ಗೌತಮ್‌ ಗಂಭೀರ್‌ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದಿದ್ದ ಕೆಕೆಆರ್‌, 2024 ರಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಟ್ರೋಫಿ ಗೆದ್ದಿದೆ ವಿಶೇಷವೆಂದ್ರೆ ಆಗಲೂ ಕೆಕೆಆರ್‌ಗೆ ಮೆಂಟರ್‌ ಆಗಿದ್ದು ಗೌತಮ್‌ ಗಂಭೀರ್‌ ಅವರೇ. ಅಜಿಂಕ್ಯ ರಹಾನೆ ಪ್ರಸ್ತುತ ನಾಯಕನಾಗಿ ಆಯ್ಕೆಯಾಗಿದ್ದಾರೆ.

    ಸನ್‌ ರೈಸರ್ಸ್‌ 2016ರ ಚಾಂಪಿಯನ್
    2016ರ ರೋಚಕ ಫೈನಲ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಟ್ರೋಫಿ ಗೆದ್ದಿತ್ತು. ರೋಚಕ ಫೈನಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು 8 ರನ್‌ಗಳಿಂದ ಸೋಲಿಸಿತ್ತು. ಅಂದು ಡೇವಿಡ್‌ ವಾರ್ನರ್‌ ತಂಡದ ನಾಯಕತ್ವ ವಹಿಸಿದ್ದರು.

    ಪದಾರ್ಪಣೆ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದ ಟೈಟಾನ್ಸ್‌
    ಇನ್ನೂ 2022ರಲ್ಲಿ ಟೂರ್ನಿಯಲ್ಲಿ ಆಗಷ್ಟೇ ಪದಾರ್ಪಣೆ ಮಾಡಿದ ಗುಜರಾತ್‌ ಟೈಟಾನ್ಸ್‌ ತಂಡ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿಗೆ ಮುತ್ತಿಟ್ಟಿತು. ಹಾರ್ದಿಕ್ ಪಾಂಡ್ಯ ನೇತೃತ್ವದ ಜಿಟಿ ತಂಡವು ರಾಜಸ್ಥಾನ್‌ ರಾಯಲ್ಸ್ ತಂಡವನ್ನು ಪ್ರಶಸ್ತಿ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸೋಲಿಸಿತ್ತು.

    ಈವರೆಗೆ ಮೂರು ಬಾರಿ ಫೈನಲ್ ಪ್ರವೇಶಿಸಿರುವ ಆರ್‌ಸಿಬಿ ಜೊತೆಗೆ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪ್ರಶಸ್ತಿಗೆ ಮುತ್ತಿಕ್ಕಿಲ್ಲ. ನಿಷ್ಕ್ರಿಯಗೊಂಡ ತಂಡಗಳ ಪೈಕಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಪುಣೆ ವಾರಿಯರ್ಸ್, ಗುಜರಾತ್ ಲಯನ್ಸ್, ಕೊಚ್ಚಿ ಟಸ್ಕಸ್ ಕೇರಳ ತಂಡಗಳು ಟ್ರೋಫಿ ಗೆದ್ದಿಲ್ಲ.

  • ಬೆಂಗಳೂರಲ್ಲಿ ಆರ್‌ಸಿಬಿಗೆ ಸತತ 4ನೇ ಸೋಲು – ಡೆಲ್ಲಿ ಪ್ಲೇ ಆಫ್‌ಗೆ

    ಬೆಂಗಳೂರಲ್ಲಿ ಆರ್‌ಸಿಬಿಗೆ ಸತತ 4ನೇ ಸೋಲು – ಡೆಲ್ಲಿ ಪ್ಲೇ ಆಫ್‌ಗೆ

    – ಡೆಲ್ಲಿಗೆ 9 ವಿಕೆಟ್‌ಗಳ ಗೆಲುವು
    – ಶೆಫಾಲಿ ವರ್ಮಾ, ಜೆಸ್‌ 132 ರನ್‌ಗಳ ಜೊತೆಯಾಟಕ್ಕೆ ಒಲಿದ ಜಯ 

    ಬೆಂಗಳೂರು: ಬೆಂಗಳೂರಲ್ಲಿ ಆರ್‌ಸಿಬಿಗೆ ಸತತ 4ನೇ ಸೋಲಿನ ಅನುಭವವಾಗಿದೆ. ಶೆಫಾಲಿ ವರ್ಮಾ, ಜೆಸ್‌ 132 ರನ್‌ಗಳ ಜೊತೆಯಾಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ 9 ವಿಕೆಟ್‌ಗಳ ಜಯದೊಂದಿಗೆ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ.

    ಇಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯದಲ್ಲಿ ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 147 ರನ್‌ ಗಳಿಸಿ, ಡೆಲ್ಲಿಗೆ 148 ರನ್‌ ಗಳ ಗುರಿಯನ್ನು ನೀಡಿತ್ತು. ಗೆಲುವಿನ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ 15.3 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 151 ರನ್‌ ಗಳಿಸುವ ಮೂಲಕ ಗೆಲುವು ತನ್ನದಾಗಿಸಿಕೊಂಡಿದೆ.ಇದನ್ನೂ ಓದಿ: ಪೆರ್ರಿ ಫಿಫ್ಟಿ ಆಟ – ಡೆಲ್ಲಿಗೆ 148ರನ್‌ಗಳ ಟಾರ್ಗೆಟ್‌

    ಆರಂಭಿಕ ಆಟಗಾರ್ತಿಯಾಗಿ ಬಂದ ಮೆಗ್‌ ಲ್ಯಾನಿಂಗ್‌ 12 ಎಸೆತಗಳಲ್ಲಿ 2 ರನ್‌ಗೆ ಔಟಾದರು. ಎರಡನೇ ಕ್ರಮಾಂಕದಲ್ಲಿ ಬಂದ ಜೆಸ್‌ ಜೊನಾಸ್ಸೆನ್‌ ಹಾಗೂ ಶೆಫಾಲಿ ವರ್ಮಾ ಜೊತೆಗೂಡಿ 132 ರನ್‌ ನೀಡುವ ಮೂಲಕ ಗೆಲುವಿಗೆ ನೆರವಾದರು. ಜೆಸ್‌ ಜೊನಾಸ್ಸೆನ್‌ 38 ಎಸೆಗಳಲ್ಲಿ 9 ಬೌಂಡರಿ, 1 ಸಿಕ್ಸ್‌ ಬಾರಿಸಿ 61 ರನ್‌ ಹಾಗೂ ಶೆಫಾಲಿ ವರ್ಮಾ 43 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸ್‌ ಬಾರಿಸುವ ಮೂಲಕ 80 ರನ್‌ ಗಳಿಸಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡದ ಸ್ಮೃತಿ ಮಂಧಾನ 8 ರನ್‌ ಗಳಿಗೆ ಔಟ್‌ ಆಗಿ ಆರಂಭದಲ್ಲಿ ನಿರಾಸೆ ಮೂಡಿಸಿದರು. ಎರಡನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡ್ಯಾನಿ ವ್ಯಾಟ್‌ 18 ಎಸೆತಗಳಲ್ಲಿ 21 ರನ್‌ ಗಳಿಸಿ ಔಟಾದರು. ಮೊದಲ 2 ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ್ದ ಪೆರ್ರಿ, ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇಂದು ಮತ್ತೆ ಫಾರ್ಮ್‌ಗೆ ಬಂದ ಪೆರ್ರಿ ಭರ್ಜರಿ 3 ಸಿಕ್ಸ್, 3 ಬೌಂಡರಿ ಬಾರಿಸಿ 47 ಎಸೆತಗಳಲ್ಲಿ 60 ರನ್‌ಗಳಿಸಿದರು. ಪೆರ್ರಿಗೆ ಜೊತೆಯಾದ ರಾಘ್ವಿ ಬಿಸ್ಟ್‌ 32 ಎಸೆತಗಳಲ್ಲಿ 33 ರನ್‌ ಗಳಿಸಿದರು. ಇನ್ನುಳಿದಂತೆ ರಿಚಾ ಘೋಷ್‌ 5, ಕನಿಕಾ ಅಹುಜಾ 2 ಹಾಗೂ ಜಾರ್ಜಿಯಾ 12 ರನ್‌ ಗಳಿಸಿದರು.

    ಆರ್‌ಸಿಬಿ ಪರ ಬೌಲಿಂಗ್‌ ಮಾಡಿದ ರೇಣುಕಾ ಸಿಂಗ್‌ 1 ವಿಕೆಟ್‌ ಪಡೆದರು. ಇನ್ನೂ ಡೆಲ್ಲಿ ಪರ ಬೌಲಿಂಗ್‌ ಮಾಡಿದ ಶಿಖಾ ಹಾಗೂ ಚರಣಿ ತಲಾ 2 ವಿಕೆಟ್‌ ಪಡೆದುಕೊಂಡರೆ. ಕಪ್ಪ್‌ 1 ವಿಕೆಟ್‌ ಪಡೆದುಕೊಂಡರು.ಇದನ್ನೂ ಓದಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಬೆಲೆ 6 ರೂ. ಏರಿಕೆ

  • ಪೆರ್ರಿ ಫಿಫ್ಟಿ ಆಟ – ಡೆಲ್ಲಿಗೆ 148ರನ್‌ಗಳ ಟಾರ್ಗೆಟ್‌

    ಪೆರ್ರಿ ಫಿಫ್ಟಿ ಆಟ – ಡೆಲ್ಲಿಗೆ 148ರನ್‌ಗಳ ಟಾರ್ಗೆಟ್‌

    ಬೆಂಗಳೂರು: ಎಲಿಸ್‌ ಪೆರ್ರಿಯ ಭರ್ಜರಿ ಫಿಫ್ಟಿ ಆಟಕ್ಕೆ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ 148 ರನ್‌ಗಳ ಗೆಲುವಿನ ಗುರಿಯನ್ನು ನೀಡಿದೆ.

    ಇಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯದಲ್ಲಿ ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 147 ರನ್‌ ಗಳಿಸಿ, ಡೆಲ್ಲಿಗೆ 148 ರನ್‌ ಗಳ ಗುರಿಯನ್ನು ನೀಡಿತು.ಇದನ್ನೂ ಓದಿ: Champions Trophy: ಸೋತ ಇಂಗ್ಲೆಂಡ್‌ ಟೂರ್ನಿಯಿಂದ ಔಟ್‌ – ಗೆದ್ದ ದ. ಆಫ್ರಿಕಾ ಸೆಮಿಗೆ ಎಂಟ್ರಿ

    ಆರ್‌ಸಿಬಿ ತಂಡದ ಸ್ಮೃತಿ ಮಂಧಾನ 8 ರನ್‌ ಗಳಿಗೆ ಔಟ್‌ ಆಗಿ ಆರಂಭದಲ್ಲಿ ನಿರಾಸೆ ಮೂಡಿಸಿದರು. ಎರಡನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡ್ಯಾನಿ ವ್ಯಾಟ್‌ 18 ಎಸೆತಗಳಲ್ಲಿ 21 ರನ್‌ ಗಳಿಸಿ ಔಟಾದರು. ಮೊದಲ 2 ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ್ದ ಪೆರ್ರಿ, ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇಂದು ಮತ್ತೆ ಫಾರ್ಮ್‌ಗೆ ಬಂದ ಪೆರ್ರಿ ಭರ್ಜರಿ 3 ಸಿಕ್ಸ್, 3 ಬೌಂಡರಿ ಬಾರಿಸಿ 47 ಎಸೆತಗಳಲ್ಲಿ 60 ರನ್‌ಗಳಿಸಿದರು. ಪೆರ್ರಿಗೆ ಜೊತೆಯಾದ ರಾಘ್ವಿ ಬಿಸ್ಟ್‌ 32 ಎಸೆತಗಳಲ್ಲಿ 33 ರನ್‌ ಗಳಿಸಿದರು.

    ಇನ್ನುಳಿದಂತೆ ರಿಚಾ ಘೋಷ್‌ 5, ಕನಿಕಾ ಅಹುಜಾ 2 ಹಾಗೂ ಜಾರ್ಜಿಯಾ 12 ರನ್‌ ಗಳಿಸಿದರು. ಡೆಲ್ಲಿ ಪರ ಬೌಲಿಂಗ್‌ ಮಾಡಿದ ಶಿಖಾ ಹಾಗೂ ಚರಣಿ ತಲಾ 2 ವಿಕೆಟ್‌ ಪಡೆದುಕೊಂಡರೆ. ಕಪ್ಪ್‌ 1 ವಿಕೆಟ್‌ ಪಡೆದುಕೊಂಡರು.ಇದನ್ನೂ ಓದಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಬೆಲೆ 6 ರೂ. ಏರಿಕೆ

  • ಬೆಂಗಳೂರಿನಲ್ಲಿ ಹ್ಯಾಟ್ರಿಕ್‌ ಸೋಲು – ಆರ್‌ಸಿಬಿ ವಿರುದ್ಧ ಗುಜರಾತ್‌ಗೆ ಸುಲಭ ಜಯ

    ಬೆಂಗಳೂರಿನಲ್ಲಿ ಹ್ಯಾಟ್ರಿಕ್‌ ಸೋಲು – ಆರ್‌ಸಿಬಿ ವಿರುದ್ಧ ಗುಜರಾತ್‌ಗೆ ಸುಲಭ ಜಯ

    ಬೆಂಗಳೂರು: ತವರು ನೆಲದಲ್ಲೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ (RCB) ಹ್ಯಾಟ್ರಿಕ್‌ ಸೋಲಾಗಿದೆ. ನಾಯಕಿ ಆಶ್ಲೇ ಗಾರ್ಡ್ನರ್ (Ashleigh Gardner) ಸ್ಫೋಟಕ ಅರ್ಧಶತಕದ ನೆರವಿನಿಂದ ಆರ್‌ಸಿಬಿ ವಿರುದ್ಧ ಗುಜರಾತ್‌ ಜೈಂಟ್ಸ್‌ (Gujarat Giants) 6 ವಿಕೆಟ್‌ಗಳ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 7 ವಿಕೆಟ್‌ ನಷ್ಟಕ್ಕೆ 125 ರನ್ ‌ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಗುಜರಾತ್‌ 16.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 126 ರನ್‌ ಹೊಡೆದು ಟೂರ್ನಿಯಲ್ಲಿ ಎರಡನೇ ಜಯ ಸಾಧಿಸಿತು. ಹ್ಯಾಟ್ರಿಕ್‌ ಸೋಲು ಕಂಡರೂ ಅಂಕಪಟ್ಟಿಯಲ್ಲಿ ಆರ್‌ಸಿಬಿ ಮೂರನೇ ಸ್ಥಾನದಲ್ಲೇ ಮುಂದುವರಿದಿದೆ.

    32 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿದ್ದರೂ ಗಾರ್ಡ್ನರ್ 58 ರನ್‌ (31 ಎಸೆತ, 6 ಬೌಂಡರಿ, 3 ಸಿಕ್ಸ್‌) ಸಿಡಿಸಿದರೆ ಫೋಬೆ ಲಿಚ್‌ಫೀಲ್ಡ್ ಔಟಾಗದೇ 30 ರನ್‌ (21 ಎಸೆತ, 3 ಬೌಂಡರಿ, 1 ಸಿಕ್ಸ್‌) ಹೊಡೆದರು. ಆರ್‌ಸಿಬಿ ಪರ ರೇಣುಕಾ ಸಿಂಗ್‌ ಮತ್ತು ಜಾರ್ಜಿಯಾ ವೇರ್‌ಹ್ಯಾಮ್ ತಲಾ 2 ವಿಕೆಟ್‌ ಪಡೆದರು. ಇದನ್ನೂ ಓದಿ: ಕಾರವಾರ| ಪ್ರೀತಿಸಿ ಮದುವೆಯಾಗಿದ್ದ ಮಗಳು-ಅಳಿಯನಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನ


    ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ವಿಫಲವಾಯಿತು. ಸ್ಮೃತಿ ಮಂಧನಾ 10 ರನ್‌, ಡ್ಯಾನಿ ವ್ಯಾಟ್‌ 4 ರನ್‌ ಗಳಿಸಿ ಔಟಾದರು. ಕಳೆದ ಎರಡೂ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದ ಪೆರ್ರಿ ಶೂನ್ಯಕ್ಕೆ ಔಟಾದರು. ರಾಘ್ವಿ ಬಿಸ್ಟ್‌ 22 ರನ್‌, ಕನಿಕಾ ಅಹುಜಾ 33 ರನ್‌, ಜಾರ್ಜಿಯಾ 20 ರನ್‌ ಕಲೆ ಹಾಕಿದರು.

    ಗುಜರಾತ್‌ ಪರ ಉತ್ತಮ ಬೌಲಿಂಗ್‌ ಮಾಡಿದ ತನುಜಾ 16 ಹಾಗೂ ಡಿಯಾಂಡ್ರಾ 31 ರನ್‌ ನೀಡಿ ತಲಾ 2 ವಿಕೆಟ್‌ ಕಿತ್ತರು. ಇನ್ನುಳಿದ ಆಶ್ಲೀ, ಕಾಶ್ವೀ ತಲಾ ವಿಕೆಟ್‌ ಪಡೆದುಕೊಂಡರು.

  • ಬೌಂಡರಿ ಚಚ್ಚಿ ಆರ್‌ಸಿಬಿ ಗೆಲುವು ಕಸಿದ 16ರ ಹುಡುಗಿ – ಯಾರು ಈ ಕಮಲಿನಿ? ಮುಂಬೈ 1.6 ಕೋಟಿ ನೀಡಿದ್ದು ಯಾಕೆ?

    ಬೌಂಡರಿ ಚಚ್ಚಿ ಆರ್‌ಸಿಬಿ ಗೆಲುವು ಕಸಿದ 16ರ ಹುಡುಗಿ – ಯಾರು ಈ ಕಮಲಿನಿ? ಮುಂಬೈ 1.6 ಕೋಟಿ ನೀಡಿದ್ದು ಯಾಕೆ?

    ಬೆಂಗಳೂರು: ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ (WPL) ಆರ್‌ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್‌ (Mumbai Indians) 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಕೊನೆಯಲ್ಲಿ ಬೌಂಡರಿ ಹೊಡೆದ 16 ವರ್ಷದ ಆಲ್‌ರೌಂಡರ್‌ ಕಮಲಿನಿ (G Kamalini) ಈಗ ಎಲ್ಲರ ಕೇಂದ್ರಬಿಂದು ಆಗಿದ್ದಾರೆ.

    17.3 ಓವರ್‌ನಲ್ಲಿ 144 ರನ್‌ಗಳಿಸಿದ್ದಾಗ ಸಂಜೀವನ್‌ ಸಂಜನಾ ಔಟಾದರು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕ್ರೀಸ್‌ಗೆ ಇಳಿದ ಕಮಲಿನಿ ಅಮನ್‌ಜೋತ್‌ ಕೌರ್‌ ಅವರಿಗೆ ಉತ್ತಮ ಸಾಥ್‌ ನೀಡಿದರು. ಮುರಿಯದ 8ನೇ ವಿಕೆಟಿಗೆ ಈ ಜೋಡಿ 14 ಎಸೆತಗಳಲ್ಲಿ 26 ರನ್‌ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟಿತು.

    ಕೊನೆಯ 6 ಎಸೆತಗಳಲ್ಲಿ 6 ರನ್‌ ಬೇಕಿತ್ತು ಮತ್ತು ಸ್ಟ್ರೈಕ್‌ನಲ್ಲಿ ಕಮಲಿನಿ ಇದ್ದರು. ಬಿಶ್ತ್‌ ಎಸೆದ ಮೊದಲ ಎಸೆತದಲ್ಲಿ ಯಾವುದೇ ರನ್‌ ಬಂದಿರಲಿಲ್ಲ. ಎರಡನೇ ಎಸೆತದಲ್ಲಿ ಕಮಲಿನಿ ಎರಡು ರನ್‌ ಓಡಿದರು. ಮೂರು ಮತ್ತು ನಾಲ್ಕನೇ ಎಸೆತದಲ್ಲಿ 1 ರನ್‌ ಬಂದಿತ್ತು. ಕೊನೆಯ ಎರಡು ಎಸೆತದಲ್ಲಿ 2 ರನ್‌ ಬೇಕಿತ್ತು. ಈ ವೇಳೆ 5ನೇ ಎಸೆತವನ್ನು ಕಮಲಿನಿ ಬೌಂಡರಿಗೆ ಅಟ್ಟಿ ಮುಂಬೈ ತಂಡಕ್ಕೆ ಎರಡನೇ ಜಯವನ್ನು ತಂದುಕೊಟ್ಟರು. ಕಮಲಿನಿ ಔಟಾಗದೇ 11 ರನ್‌(8 ಎಸೆತ, 1 ಬೌಂಡರಿ), ಅಮನ್‌ಜೋತ್ ಕೌರ್ ಔಟಾಗದೇ 34 ರನ್‌(27 ಎಸೆತ, 2 ಬೌಂಡರಿ, 2 ಸಿಕ್ಸರ್‌) ಹೊಡೆಯುವ ಮೂಲಕ ತವರಿನಲ್ಲೇ ಆರ್‌ಸಿಬಿಯನ್ನು ಮಣಿಸಿದರು.

    ಬೌಂಡರಿ ಹೊಡೆಯುತ್ತಿದ್ದಂತೆ ಸ್ಟೇಡಿಂಯನಲ್ಲಿ ನಿಂತು ಪಂದ್ಯ ವೀಕ್ಷಿಸುತ್ತಿದ್ದ ಕಮಲಿನಿ ಕುಟುಂಬಸ್ಥರು ಕುಣಿದು ಕುಪ್ಪಳಿಸಿದರು. ಕುಟುಂಬದ ಸದಸ್ಯರು ಸಂತಸ ಪಡುತ್ತಿರುವ ದೃಶ್ಯವನ್ನು ಮುಂಬೈ ಇಂಡಿಯನ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ಆರ್‌ಸಿಬಿ ಹ್ಯಾಟ್ರಿಕ್ ಕನಸು ಭಗ್ನ – ಮುಂಬೈಗೆ 4 ವಿಕೆಟ್‌ಗಳ ರೋಚಕ ಜಯ

    ಯಾರು ಕಮಲಿನಿ?
    ತಮಿಳುನಾಡು ಮೂಲದ ಕಮಲಿನಿ ಡಬ್ಲ್ಯೂಪಿಎಲ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಫೆ.18 ರಂದು ವಡೋದರಾದ ಬರೋಡಾ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕಾಗಿ ಮುಂಬೈ ಇಂಡಿಯನ್ಸ್‌ನ ಪ್ಲೇಯಿಂಗ್ 11 ರಲ್ಲಿ ಕಮಲಿನಿ ಸ್ಥಾನ ಪಡೆದಿದ್ದರು.

     

    16 ವರ್ಷ 213 ದಿನಗಳಲ್ಲಿ ಪಾದಾರ್ಪಣೆ ಮಾಡಿದ ಕಮಲಿನಿ ಅವರು 16 ವರ್ಷ 263 ದಿನಗಳಲ್ಲಿ ಗುಜರಾತ್ ಜೈಂಟ್ಸ್ ಪರ ಆಡಿದ್ದ ಶಬ್ನಮ್ ಶಕಿಲ್ ಅವರ ಹಿಂದಿನ ಅತ್ಯಂತ ಕಿರಿಯ ಚೊಚ್ಚಲ ಆಟಗಾರ್ತಿಯ ದಾಖಲೆಯನ್ನು ಮುರಿದಿದ್ದಾರೆ.

    2025 ರ ಅಂಡರ್ -19 ವಿಶ್ವಕಪ್ ವಿಜೇತ ಭಾರತೀಯ ತಂಡದ ಆಟಗಾರ್ತಿಯಾಗಿರುವ ಕಮಲಿನಿ ತಮಿಳುನಾಡಿನ ಮಧುರೈ ಮೂಲದವರು. WPL 2025ರ ಹರಾಜಿನಲ್ಲಿ ಮುಂಬೈ ತಂಡವು ಅವರನ್ನು 1.6 ಕೋಟಿ ರೂ. ನೀಡಿ ಖರೀದಿಸಿತ್ತು. ಇದನ್ನೂ ಓದಿ: ಡಿವೋರ್ಸ್‌ ಬಳಿಕ ಚಹಲ್‌ನಿಂದ 60 ಕೋಟಿ ಜೀವನಾಂಶ – ಧನಶ್ರೀ ಕುಟುಂಬ ಹೇಳಿದ್ದೇನು?

    ಕಮಲಿನಿ ಅಂಡರ್-19 ವಿಶ್ವಕಪ್‌ನಲ್ಲಿ ಎಂಟು ಪಂದ್ಯಗಳಲ್ಲಿ ಒಟ್ಟು 311 ರನ್ ಗಳಿಸಿದ್ದರು. ಅಷ್ಟೇ ಅಲ್ಲದೇ ಎರಡು ಅರ್ಧಶತಕ ಸಹ ಸಿಡಿಸಿದ್ದರು. ಎಡಗೈ ಬ್ಯಾಟರ್‌ ಆಗಿರುವ ಕಮಲಿನಿ ಅಂಡರ್‌ 19 ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 29 ಎಸೆತಗಳಲ್ಲಿ 44 ರನ್‌ ಸಿಡಿಸಿದ್ದರು. ಪ್ರಸ್ತುತ ಕಮಲಿನಿ ಅವರು ಚೆನ್ನೈನಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಅಕಾಡೆಮಿಯಲ್ಲಿ ಕ್ರಿಕೆಟ್‌ ಅಭ್ಯಾಸ ಮಾಡುತ್ತಿದ್ದಾರೆ.

     

  • 43 ಬಾಲ್‌ಗೆ 81 ರನ್‌ ಚಚ್ಚಿದ ಎಲ್ಲಿಸ್‌ ಪೆರ್ರಿ – ಮುಂಬೈಗೆ 168 ರನ್‌ಗಳ ಗುರಿ ನೀಡಿದ ಆರ್‌ಸಿಬಿ

    43 ಬಾಲ್‌ಗೆ 81 ರನ್‌ ಚಚ್ಚಿದ ಎಲ್ಲಿಸ್‌ ಪೆರ್ರಿ – ಮುಂಬೈಗೆ 168 ರನ್‌ಗಳ ಗುರಿ ನೀಡಿದ ಆರ್‌ಸಿಬಿ

    ಬೆಂಗಳೂರು: ಎಲ್ಲಿಸ್‌ ಪೆರ್ರಿ (Ellyse Perry) ಸ್ಫೋಟಕ ಅರ್ಧಶತಕ ನೆರವಿನಿಂದ ಮುಂಬೈಗೆ ಆರ್‌ಸಿಬಿ (RCB vs MI) 168 ರನ್‌ಗಳ ಗುರಿ ನೀಡಿದೆ.

    ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್‌ ಲೀಗ್‌ ಪಂದ್ಯದಲ್ಲಿ ಆರ್‌ಸಿಬಿ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 167 ರನ್‌ ಗಳಿಸಿದೆ. ಟಾಸ್‌ ಗೆದ್ದ ಮುಂಬೈ ಫೀಲ್ಡಿಂಗ್‌ ಆಯ್ದುಕೊಂಡಿತ್ತು.

    ಆರ್‌ಸಿಬಿ ಪ್ರಮುಖ ಬ್ಯಾಟರ್‌ಗಳು ಕಳಪೆ ಪ್ರದರ್ಶನ ನೀಡಿರುವುದು ಕಂಡುಬಂತು. ಡ್ಯಾನಿ ವ್ಯಾಟ್-ಹಾಡ್ಜ್ 9, ರಾಘ್ವಿ ಬಿಸ್ಟ್ 1, ಕನಿಕಾ ಅಹುಜಾ 3 ರನ್‌ ಗಳಿಸಿ ನಿರಾಸೆ ಮೂಡಿಸಿದರು. ಸ್ಮೃತಿ ಮಂಧಾನ 26, ರಿಚಾ ಘೋಷ್ 28 ರನ್‌ ಗಳಿಸಿದರು.

    ಎಲ್ಲಿಸ್‌ ಪೆರ್ರಿ ಸ್ಫೋಟಕ ಫಿಫ್ಟಿ ಆಟವು ತಂಡ ಸವಾಲಿನ ಮೊತ್ತ ಪೇರಿಸಲು ನೆರವಾಯಿತು. ಅಬ್ಬರಿಸಿದ ಪೆರ್ರಿ 43 ಬಾಲ್‌ಗಳಿಗೆ 81 ರನ್‌ (11 ಫೋರ್‌, 2 ಸಿಕ್ಸರ್‌) ಚಚ್ಚಿದರು.

    ಮುಂಬೈ ಪರ ಅಮನ್‌ಜೋತ್ ಕೌರ್ 3 ವಿಕೆಟ್‌ ಕಿತ್ತು ಗಮನ ಸೆಳೆದರು. ಶಬ್ನಿಮ್ ಇಸ್ಮಾಯಿಲ್, ನ್ಯಾಟ್ ಸಿವರ್-ಬ್ರಂಟ್, ಹೇಲಿ ಮ್ಯಾಥ್ಯೂಸ್, ಸಂಸ್ಕೃತಿ ಗುಪ್ತಾ ತಲಾ 1 ವಿಕೆಟ್‌ ಪಡೆದರು.