ಬೆಂಗಳೂರು: ಇಲ್ಲಿನ ಸದಾಶಿವನಗರದಲ್ಲಿರುವ ಡಿಸಿಎಂ ನಿವಾಸದಲ್ಲಿಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ (Anil Kumble) ಡಿ.ಕೆ ಶಿವಕುಮಾರ್ ಅವರನ್ನ ಭೇಟಿಯಾದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ.. ಆರ್‌ಸಿಬಿ ಕಪ್ ಗೆಲ್ಲುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಸಲ ಆರ್‌ಸಿಬಿ (RCB) ಕಪ್ ಗೆಲ್ಲುವ ನಿರೀಕ್ಷೆ ಇದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಅದನ್ನ ಹೇಳಬೇಡಿ, ಹೇಳಿದಾಗೆಲ್ಲ ತೊಂದ್ರೆ ಆಗುತ್ತಲ್ಲ. ಕಪ್ ಗೆಲ್ಲುವ ನಿರೀಕ್ಷೆ ಅಂತು ಇದ್ದೇ ಇದೆ ಅಂತ ಹೇಳಿದ್ದಾರೆ.
ಕಳೆದ 18 ವರ್ಷಗಳಿಂದಲೂ ಐಪಿಎಲ್ ಚೆನ್ನಾಗಿ ನಡೆದುಕೊಂಡು ಬಂದಿದೆ. ಈ ಆವೃತ್ತಿಯಲ್ಲಿ ಏನಾಗುತ್ತೆ ನೋಡೋಣ. ಇವತ್ತಿನ ಆರ್‌ಸಿಬಿ ಮ್ಯಾಚ್‌ಗೆ ಆಲ್ ದಿ ಬೆಸ್ಟ್ ಹೇಳುವೆ ಎಂದರಲ್ಲದೇ, ನಾನು ಪಂಜಾಬ್ ಹಾಗೂ ಬೆಂಗಳೂರು ಎರಡೂ ತಂಡದಲ್ಲಿ ಇದ್ದೆ. ಅದೇ ಸಮಸ್ಯೆ ನನಗೆ ಎಂದು ಮುಗುಳುನಕ್ಕರು.
ಬೆಂಗಳೂರು: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ (Anil Kumble) ಅವರಿಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರನ್ನ ಭೇಟಿಯಾದರು. ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಉಪಮುಖ್ಯಮಂತ್ರಿಗಳನ್ನ ಭೇಟಿಯಾದರು.
Glad to have met former India captain and legendary spinner Shri Anil Kumble at my residence today. Always a pleasure to engage in conversation with this proud Kannadiga who has brought immense pride to Karnataka and Indian cricket. pic.twitter.com/H1zJmiXGDw
ಈ ಕುರಿತು ಡಿಸಿಎಂ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇಂದು ನನ್ನ ನಿವಾಸದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ, ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರನ್ನು ಭೇಟಿ ಮಾಡಿದ್ದು ಖುಷಿ ತಂದಿದೆ. ಕರ್ನಾಟಕ ಮತ್ತು ಭಾರತೀಯ ಕ್ರಿಕೆಟ್‌ಗೆ ಅಪಾರವಾದ ಕೊಡುಗೆ ನೀಡಿದ ಹೆಮ್ಮೆಯ ಹೆಮ್ಮೆಯ ಕನ್ನಡಿಗನೊಂದಿಗೆ ಸಂವಾದದಲ್ಲಿ ತೊಡಗಿಸಿಕೊಂಡಿದ್ದು ಸಂತಸವಾಗಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ನನ್ನ ಹೆಸರಲ್ಲೊಂದು ದೇವಸ್ಥಾನ ಆಗಬೇಕು ಎಂದ ಊರ್ವಶಿ – ಟ್ರೋಲ್ ಆದ ನಟಿ
ಅಲ್ಲದೇ ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪಂದ್ಯಗಳ ಕುರಿತು ಮಾತನಾಡಿ, ಆರ್‌ಸಿಬಿ ಹೀಗೇ ಆಡಲಿ, ಇನ್ನೂ ಅರ್ಧ ಕೂಡ ಟೂರ್ನಿ ಆಗಿಲ್ಲ. ಆರ್‌ಸಿಬಿ ಇನ್ನೂ ಬೆಂಗಳೂರಿನಲ್ಲಿ ಪಂದ್ಯ ಗೆದ್ದಿಲ್ಲ, ಆದ್ರೆ ಪ್ರದರ್ಶನ ನೋಡಿದ್ರೆ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲುವ ನಿರೀಕ್ಷೆ ಇದ್ದೇ ಇದೆ. ಇವತ್ತಿನ ಮ್ಯಾಚ್ ಗೆ ಆಲ್ ದಿ ಬೆಸ್ಟ್ ಹೇಳುವೆ, ನಾನು ಪಂಜಾಬ್ ಹಾಗೂ ಬೆಂಗಳೂರು ಎರಡೂ ತಂಡದಲ್ಲಿ ಇದ್ದೆ. ಅದೇ ಸಮಸ್ಯೆ ನನಗೆ ಎಂದು ಮುಗುಳುನಕ್ಕರು. ಇದನ್ನೂ ಓದಿ: ಲೇಸರ್ ಲೈಟ್ ಎಫೆಕ್ಟ್, ಪಾಟ್ನಾ ಏರ್‌ಪೋರ್ಟ್‌ನಲ್ಲಿ ತಪ್ಪಿತು ದುರಂತ – ಪೈಲಟ್ ಸಾಹಸದಿಂದ ಉಳಿಯಿತು ನೂರಾರು ಜೀವ
ಜೈಪುರ್: ರಜತ್ ಪಾಟಿದಾರ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB_ ತಂಡ ಇಂದು (ಏ.13) ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ಸೆಣಸಲಿದೆ.
ಜೈಪುರದ ಸವಾಯ್ ಮಾನ್ಸಿಂಗ್ ಕ್ರಿಕೆಟ್ ಮೈದಾನದಲ್ಲಿ ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಲಿದೆ. ಆರ್‌ಸಿಬಿ ಆಟಗಾರರು ತಮ್ಮ ಕೆಂಪು ಮತ್ತು ಕಪ್ಪು ಮಿಶ್ರಿತ ಜೆರ್ಸಿ ಬದಲಿಗೆ ಹಸಿರು ಜೆರ್ಸಿಯಲ್ಲಿ (Green Jersey) ಕಾಣಿಸಿಕೊಳ್ಳಲಿದ್ದಾರೆ.
— Royal Challengers Bengaluru (@RCBTweets) April 13, 2025
2011ರ ಐಪಿಎಲ್ನಿಂದಲೂ ಪ್ರತಿ ಆವೃತ್ತಿಯ ಒಂದು ಪಂದ್ಯದಲ್ಲಿ ಆರ್‌ಸಿಬಿ ಗ್ರೀನ್ ಜೆರ್ಸಿ (Green Jersey) ತೊಟ್ಟು ಪಂದ್ಯವನ್ನಾಡಲು ಆರಂಭಿಸಿತು. ಅಂದಿನಿಂದ ಆರ್‌ಸಿಬಿ ಪ್ರತಿ ವರ್ಷ ಐಪಿಎಲ್‌ನಲ್ಲಿ (IPL 2023) ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ತೊಟ್ಟು ಆಡುತ್ತಿದೆ. ನಮ್ಮ ಸುತ್ತಲಿನ ಹಸಿರು ಪರಿಸರವನ್ನು ಸಂರಕ್ಷಿಸುವಂತೆ ಜಾಗೃತಿಗೊಳಿಸುವ ಉದ್ದೇಶವೂ ಇದ್ದಾಗಿದೆ.
ಗೆಲುವಿಗಿಂತ ಸೋಲೇ ಹೆಚ್ಚು:
2011ರಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ 2012, 2013, 2014ರಲ್ಲಿ ಸೋಲು ಕಂಡಿತು. 2015ರಲ್ಲಿ ಯಾವುದೇ ಫಲಿತಾಂಶವಿಲ್ಲದೇ ಪಂದ್ಯ ರದ್ದಾಯಿತು. 2016ರಲ್ಲಿ ಗೆಲುವು ಸಾಧಿಸಿತ್ತು. ನಂತರ 2017, 2018, 2019, 2020ರಲ್ಲಿ ಸೋತಿತ್ತು. 2021 ನೀಲಿ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದರೂ ಸೋಲು ಕಂಡಿತ್ತು. 2023ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ತವರು ಕ್ರೀಡಾಂಗಣದಲ್ಲೇ ಗೆಲುವು ಸಾಧಿಸಿತ್ತು. ಆದ್ರೆ ಕಳೆದ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್ ವಿರುದ್ಧ ಕೇವಲ 1 ರನ್‌ಗಳಿಂದ ವಿರೋಚಿತ ಸೋಲು ಕಂಡಿತ್ತು. ಇದುವರೆಗೆ 14 ಪಂದ್ಯಗಳ ಪೈಕಿ 9ರಲ್ಲಿ ಸೋಲು ಕಂಡಿದ್ದು, 4ರಲ್ಲಿ ಗೆಲುವು ಸಾಧಿಸಿದೆ. 1 ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇಂದಿನ ಪಂದ್ಯದಲ್ಲಿ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ಪುಟಿದೇಳುತ್ತಾ ಆರ್‌ಸಿಬಿ?
ಪ್ರಸಕ್ತ ಆವೃತ್ತಿಯಲ್ಲಿ ಆಡಿರುವ 5 ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಐತಿಹಾಸಿಕ ಗೆಲುವು ದಾಖಲಿಸಿ, ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ. ಅಲ್ಲದೇ ಕಳೆದ ಎರಡೂ ಪಂದ್ಯಗಳಲ್ಲಿ ತವರಿನಲ್ಲೇ ಸೋತಿರುವುದು ಬೇಸರದ ಸಂಗತಿ. ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಪುಟಿದೇಳುತ್ತಾ ಎಂಬುದು ಪ್ರಶ್ನೆಯಾಗಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ (Shiva Rajkumar) ಸಿನಿಮಾ ಹೊರತುಪಡಿಸಿ ಕ್ರಿಕೆಟ್ ಮೇಲೆಯೂ ಅಪಾರ ಅಭಿಮಾನವಿದೆ. ಇದೀಗ ಆರ್‌ಸಿಬಿ ಮತ್ತು ಕ್ರಿಕೆಟಿಗ್ ಕೆ.ಎಲ್ ರಾಹುಲ್ ಬಗ್ಗೆ ಮಾತನಾಡಿದ್ದಾರೆ. ಕೆ.ಎಲ್ ರಾಹುಲ್ (K L Rahul) ಬ್ಯಾಟಿಂಗ್ ತುಂಬಾನೇ ಇಷ್ಟ ಎಂದಿದ್ದಾರೆ. ಇದನ್ನೂ ಓದಿ:ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ರವಿತೇಜ ಪುತ್ರಿ
RCB ಬೆಂಗಳೂರನ್ನು ಪ್ರತಿನಿಧಿಸುತ್ತದೆ. ಆರ್‌ಸಿಬಿ ಅಂದ್ರೆ ಪ್ರೀತಿ ಇದ್ದೆ ಇರುತ್ತದೆ. ಆಟದಲ್ಲಿ ಸೋಲು ಗೆಲುವು ಬರಲ್ಲ. ಆದರೆ ಅಭಿಮಾನ ಅಂತೂ ಹೋಗಲ್ಲ. ಅದು ಯಾವಾಗಲೂ ಇದ್ದೇ ಇರುತ್ತದೆ. ಅದೇ ಆರ್‌ಸಿಬಿ ಪವರ್ ಎಂದಿದ್ದಾರೆ ಶಿವಣ್ಣ. ಇದನ್ನೂ ಓದಿ:RCB ಅಂದ್ರೆ ಜೀವ, ನಮ್ಮ ಪ್ರಾಣ: ಶಿವಣ್ಣ ಗುಣಗಾನ
ಕೆ.ಎಲ್ ರಾಹುಲ್ ಹೋಂ ಗ್ರೌಂಡ್ ವೈರಲ್ ವಿಡಿಯೋ ಬಗ್ಗೆ ಶಿವಣ್ಣ ಪ್ರತಿಕ್ರಿಯಿಸಿ, ರಾಹುಲ್ ಕರ್ನಾಟಕದವರು. ಅವರು ಎಲ್ಲೇ ಆಡಿದ್ರು, ಕರ್ನಾಟಕದವರು ತಾನೇ ಎಂದಿದ್ದಾರೆ. ನನಗೆ ಅವರ ಬ್ಯಾಟಿಂಗ್ ತುಂಬಾ ಇಷ್ಟ. ಆವರು ಆಡಿದಾಗಲೆಲ್ಲಾ ಔಟೇ ಆಗಬಾರದು ಎಂದುಕೊಳ್ಳುತ್ತಿರುತ್ತೇನೆ. ವಿರಾಟ್ ಕೊಹ್ಲಿ ಚೆನ್ನಾಗಿ ಆಡ್ತಾರೆ. ಹಾಗೆಯೇ ರಾಹುಲ್ ಬ್ಯಾಟಿಂಗ್ ಸ್ಟೈಲ್ ನೋಡಿದಾಗ ಹೆಮ್ಮೆ ಎಂದೆನಿಸುತ್ತದೆ. ಯಾರ್ ಗೆದ್ರೂ ಕೂಡ ಕಪ್ ಇಂಡಿಯಾದಲ್ಲೇ ಇರುತ್ತದೆ ಎಂದು ಶಿವಣ್ಣ ಹೇಳಿದ್ದಾರೆ.
ಅಂದಹಾಗೆ, ಏ.10ರಂದು ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ಸಾಧಿಸಿತ್ತು. ಗೆಲುವಿನ ಸಂಭ್ರಮದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಸ್ಪೆಷಲ್ ಸಿಗ್ನೇಚರ್ ಸ್ಟೈಲ್ ಮಾಡಿದ್ದರು. ಬಳಿಕ ‘ಕಾಂತಾರ’ ನನ್ನ ಫೆವರಿಟ್ ಸಿನಿಮಾ. ಸಿನಿಮಾದಲ್ಲಿರುವಂತೆ ಮಾಡಿದೆ ಎಂದು ಅವರು ಹೇಳಿಕೊಂಡಿದ್ದರು.
ಹೊಸ ಸ್ಟೈಲ್ ಹಿಂದಿನ ಕಾರಣವನ್ನು ಬಿಚ್ಚಿಟ್ಟಿರುವ ಕೆಎಲ್ ರಾಹುಲ್, ಇದು ನನಗೆ ವಿಶೇಷವಾದ ಜಾಗ, ಕಾಂತಾರ ಸಿನಿಮಾ ನೆನಪಿಸಿಕೊಂಡೆ. ನಾನು ಸಿನಿಮಾ ನೋಡಿದ್ದೇನೆ. ಸಿನಿಮಾದ ದೃಶ್ಯವೊಂದು ನನ್ನೊಳಗೆ ಹಾಗೆಯೇ ಇದೆ. ಪಂದ್ಯದಲ್ಲಿ ಗೆದ್ದಾಗ ನನಗೆ ಆ ಸಿನಿಮಾದ ದೃಶ್ಯ ನೆನಪಾಯಿತು. ಹಾಗಾಗಿ ನಾನು ಅದೇ ರೀತಿ ಮಾಡಿದೆ. ಅದು ನನ್ನ ನೆಚ್ಚಿನ ಸಿನಿಮಾ. ಈ ಕ್ರೀಡಾಂಗಣ, ಈ ನೆಲ ಇದೆಲ್ಲ ನಾನು ಹುಟ್ಟಿ ಬೆಳೆದ ಜಾಗ. ಇದೆಲ್ಲ ನನ್ನದು ಎಂದಿದ್ದರು.
ಬೆಂಗಳೂರು: ಗುರುವಾರ ನಡೆದ ಆರ್‌ಸಿಬಿ (RCB) ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಗೆಲುವು ಸಾಧಿಸಿತ್ತು. ಗೆಲುವಿನ ಸಂಭ್ರಮದಲ್ಲಿ ಕನ್ನಡಿಗ ಕೆಎಲ್ ರಾಹುಲ್ (KL Rahul) ಸ್ಪೆಷಲ್ ಸಿಗ್ನೇಚರ್ ಸ್ಟೈಲ್ ಮಾಡಿದ್ದರು. ಇದೀಗ `ಕಾಂತಾರ’ (Kantara) ನನ್ನ ಫೆವರಿಟ್ ಸಿನಿಮಾ. ಸಿನಿಮಾದಲ್ಲಿರುವಂತೆ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ನಡೆದ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ 163 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ತಂಡ 17.5 ಓವರ್‌ನಲ್ಲಿ 4 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಗೆಲುವು ಸಾಧಿಸಿತ್ತು. ಡೆಲ್ಲಿ ಪರ ಆಡಿದ ಕೆಎಲ್ ರಾಹುಲ್ ಅಜೇಯರಾಗಿ 53 ಎಸೆತಗಳಲ್ಲಿ ಭರ್ಜರಿ 93 ರನ್ ಗಳಿಸಿದ್ದರು.ಇದನ್ನೂ ಓದಿ: It Is My Territory – ಉಗ್ರಂ ಶೈಲಿಯಲ್ಲಿ ವೃತ್ತ ಬರೆದು ರಾಹುಲ್ ಸಂಭ್ರಮ
ಗೆಲುವಿನ ಸಂಭ್ರಮದಲ್ಲಿದ್ದ ಕೆಎಲ್ ರಾಹುಲ್ ಬ್ಯಾಟ್‌ನಿಂದ ಸುತ್ತು ಗೆರೆ ಎಳೆದು, ಬ್ಯಾಟ್ ಅನ್ನು ಗೆರೆ ನಡುವೆ ನೆಲಕ್ಕೆ ಗುದ್ದಿ ಸ್ಪೆಷಲ್ ಸಿಗ್ನೇಚರ್ ಸ್ಟೈಲ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದಲ್ಲದೇ ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ಹೊಸ ಸ್ಟೈಲ್ ಹಿಂದಿನ ಕಾರಣವನ್ನು ಬಿಚ್ಚಿಟ್ಟಿರುವ ಕೆಎಲ್ ರಾಹುಲ್, ಇದು ನನಗೆ ವಿಶೇಷವಾದ ಜಾಗ, ಕಾಂತಾರ ಸಿನಿಮಾ ನೆನಪಿಸಿಕೊಂಡೆ. ನಾನು ಸಿನಿಮಾ ನೋಡಿದ್ದೇನೆ. ಸಿನಿಮಾದ ದೃಶ್ಯವೊಂದು ನನ್ನೊಳಗೆ ಹಾಗೆಯೇ ಇದೆ. ಪಂದ್ಯದಲ್ಲಿ ಗೆದ್ದಾಗ ನನಗೆ ಆ ಸಿನಿಮಾದ ದೃಶ್ಯ ನೆನಪಾಯಿತು. ಹಾಗಾಗಿ ನಾನು ಅದೇ ರೀತಿ ಮಾಡಿದೆ. ಅದು ನನ್ನ ನೆಚ್ಚಿನ ಸಿನಿಮಾ. ಈ ಕ್ರೀಡಾಂಗಣ, ಈ ನೆಲ ಇದೆಲ್ಲ ನಾನು ಹುಟ್ಟಿ ಬೆಳೆದ ಜಾಗ. ಇದೆಲ್ಲ ನನ್ನದು ಎಂದು ಹೇಳಿಕೊಂಡಿದ್ದಾರೆ.ಇದನ್ನೂ ಓದಿ: RCB | ಪಾಟಿದಾರ್ ಕ್ಯಾಪ್ಟನ್ಸಿ ಬಗ್ಗೆ ಅಸಮಾಧಾನ – ಡಿಕೆಗೆ ಕೊಹ್ಲಿ ದೂರು?
ಹ್ಯಾಟ್ರಿಕ್ ಹೀರೋ ಶಿವಣ್ಣಗೆ (Shivarajkumar) ಸಿನಿಮಾ ಮಾತ್ರವಲ್ಲ ಕ್ರಿಕೆಟ್ ಅಂದರೆ ಪಂಚಪ್ರಾಣ. ಹೀಗಾಗಿ ನೆಚ್ಚಿನ ತಂಡ ಆರ್‌ಸಿಬಿ ಬಗ್ಗೆ ನಟ ಗುಣಗಾನ ಮಾಡಿದ್ದಾರೆ. RCB ಕಂಡರೆ ಅದೇನೋ ಜೋಶ್, ಒಂದು ಉತ್ಸಾಹ ಎಂದು ಶಿವಣ್ಣ ಮಾತನಾಡಿರುವ ವಿಡಿಯೋ ವೈರಲ್ ಆಗ್ತಿದೆ.ಇದನ್ನೂ ಓದಿ:‘ಅಯ್ಯನ ಮನೆ’ ಕಥೆ ಹೇಳಲು ಬಂದ ‘ದಿಯಾ’ ನಟಿ- ರಮೇಶ್ ಇಂದಿರಾ ಆ್ಯಕ್ಷನ್ ಕಟ್
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಐಪಿಎಲ್ ಪ್ರಾರಂಭವಾಗಿ ಇದೀಗ ಹದಿನೆಂಟು ವರ್ಷ. ಈ 18 ವರ್ಷಗಳಲ್ಲಿ ಆರ್‌ಸಿಬಿ ಹೇಗೇ ಆಡಲಿ ನಾವು ಬೆಂಬಲಿಸಿದ್ದೇವೆ. ಆರ್‌ಸಿಬಿ ಕಂಡರೆ ಅದೇನೋ ಜೋಶ್, ಒಂದು ಉತ್ಸಾಹ ಬರುತ್ತದೆ. ಅದೇನೋ ಗೊತ್ತಿಲ್ಲ ಆರ್‌ಸಿಬಿ ಎಂದರೆ ನಮಗೆ ಜೀವ, ನಮ್ಮ ಪ್ರಾಣ ಎಂದಿದ್ದಾರೆ. ಬೆಂಗಳೂರನ್ನು, ನಮ್ಮ ಭಾಷೆ, ನಮ್ಮ ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತದೆ. ಮತ್ತೆ ಆರ್‌ಸಿಬಿಯವರು ಯಾವಾಗ ಆಡಿದರೂ ಒಂದು ಜೋಶ್‌ನಲ್ಲಿ ಆಡುತ್ತಾರೆ. ಹೀಗಾಗಿ 18ನೇ ಸೀಸನ್‌ನಲ್ಲಿ ಆರ್‌ಸಿಬಿಗೆ ಒಳ್ಳೆಯದಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ನೀವು ಹೋಗಿ ಮ್ಯಾಚ್ ಅನ್ನು ಎಂಜಾಯ್ ಮಾಡಿ ಎಂದು ಅಭಿಮಾನಿಗಳಿಗೆ ಶಿವಣ್ಣ ಕರೆ ನೀಡಿದ್ದಾರೆ. ನಟನಿಗೆ ಆರ್‌ಸಿಬಿ ಮೇಲಿರುವ ಅಭಿಮಾನ ಕಂಡು ಫ್ಯಾನ್ಸ್‌ಗೆ ಖುಷಿಯಾಗಿದೆ. ಇದನ್ನೂ ಓದಿ:ರಾಮ್ ಚರಣ್ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ ಶಿವಣ್ಣ
ನಮ್ಮ ಪ್ರೀತಿಯ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ, ಡಾ. ಶಿವರಾಜ್ ಕುಮಾರ್ ಅವರ ಮಾತು ಕೇಳಿ! 🙌
ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೂರು ಐತಿಹಾಸಿಕ ಗೆಲುವು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತವರಿನಲ್ಲಿ ನಡೆದ ಎರಡೂ ಪಂದ್ಯಗಳಲ್ಲೂ ಹೀನಾಯ ಸೋಲು ಕಂಡಿದೆ. ಆದ್ರೆ ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸೋತಿದೆ ಎನ್ನುವುದಕ್ಕಿಂತ ಹೆಚ್ಚಾಗಿ ತಂಡದಲ್ಲೇ ಆಂತರಿಕ ಕಲಹ ಉಂಟಾಗಿದೆ ಅನ್ನೋ ವದಂತಿ ಹೆಚ್ಚು ಸದ್ದು ಮಾಡುತ್ತಿದೆ.
True. He had a long discussion with DK…then he spoke with Bhuvi .. he didn’t even join the group while the last strategic time out.
He was not happy with something for sure.
ಹೌದು. ಚೇಸಿಂಗ್ ವೇಳೆ ಸ್ಫೋಟಕ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರ್‌ಸಿಬಿ ಆರಂಭದಲ್ಲಿ ಪ್ರಬಲ ಪೈಪೋಟಿ ನೀಡಿತ್ತು. 4.3 ಓವರ್‌ಗಳಲ್ಲಿ 30 ರನ್‌ಗಳಿಗೆ 3 ವಿಕೆಟ್, 58 ರನ್‌ಗಳಿಗೆ 4 ಪ್ರಮುಖ ವಿಕೆಟ್‌ಗಳನ್ನು ಆರ್‌ಸಿಬಿ ಪಡೆದುಕೊಂಡಿತ್ತು. ಆ ಬಳಿಕ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಕೆ.ಎಲ್ ರಾಹುಲ್ (KL Rahul_ ಮತ್ತು ಟ್ರಿಸ್ಟನ್ ಸ್ಟಬ್ಸ್ ಮುರಿಯದ 5ನೇ ವಿಕೆಟ್‌ಗೆ 55 ಎಸೆತಗಳಲ್ಲಿ ಸ್ಫೋಟಕ 111 ರನ್‌ಗಳ ಜೊತೆಯಾಟ ನೀಡುವ ಮೂಲಕ ಡೆಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಪಂದ್ಯ ಕೊನೆಯ ಹಂತದಲ್ಲಿರುವಾಗ ಆರ್‌ಸಿಬಿ ಸ್ಟಾರ್ ವಿರಾಟ್ ಕೊಹ್ಲಿ (Virat Kohli) ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ (Dinesh Karthik) ಅವರೊಂದಿಗೆ ಕೋಪ ಮತ್ತು ಬೇಸರಿಂದ ಗಾಢ ಚರ್ಚೆಯಲ್ಲಿ ತೊಡಗಿದ್ರು, ಫೀಲ್ಡ್ ಸೆಟ್‌ನತ್ತ ಕೈತೋರಿಸುತ್ತಾ ಮಾತನಾಡುತ್ತಿದ್ದರು. ಈ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಸ್ಟಾರ್ಕ್‌ಗೆ ಒಂದೇ ಓವರ್‌ನಲ್ಲಿ 30 ರನ್ ಚಚ್ಚಿದ ಸಾಲ್ಟ್ – ಹುಚ್ಚೆದ್ದು ಕುಣಿದ RCB ಫ್ಯಾನ್ಸ್
ಅಲ್ಲದೇ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ರಜತ್ ಪಾಟಿದಾರ್ (Rajat Patidar) ನಾಯಕತ್ವದ ಬಗ್ಗೆ ಕೊಹ್ಲಿ ಅತೃಪ್ತರಾಗಿದ್ದಾರೆ ಎಂಬ ವದಂತಿಗಳು ಸದ್ದು ಮಾಡತೊಡಗಿದೆ. ವಿಡಿಯೋದಲ್ಲಿ, ಕೊಹ್ಲಿ, ನಾಯಕನ ಕೆಲವು ನಿರ್ಧಾರಗಳ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿರುವುದನ್ನು ಕಾಣಬಹುದು. ಈ ಬಗ್ಗೆ ಕಾಮೆಂಟೇಟರ್ ಆಕಾಶ್ ಚೋಪ್ರಾ ಮತ್ತು ವೀರೇಂದ್ರ ಸೆಹ್ವಾಗ್ ಕೂಡ ಮಾತನಾಡಿದರು. ಕೊಹ್ಲಿಗೆ ಯಾವುದೇ ಸಮಸ್ಯೆ ಇದ್ದರೂ ಅದನ್ನು ನಾಯಕ ಪಾಟಿದಾರ್ ಅವರಿಗೆ ಹೇಳಬೇಕು, ಏಕೆಂದರೆ ಈಗ ಕೊಹ್ಲಿ ತಂಡದ ನಾಯಕನಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: RCBvsDC | ಪಂದ್ಯದ ಟಿಕೆಟ್ ಕಾಳಸಂತೆಯಲ್ಲಿ ಮಾರಾಟ – 8 ಮಂದಿ ಸಿಸಿಬಿ ಬಲೆಗೆ
ಅಲ್ಲದೇ ಈ ಬಗ್ಗೆ ಕ್ರಿಕೆಟ್ ತಜ್ಞರು ಹಾಗೂ ಕ್ರಿಕೆಟ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚಿಸುತ್ತಾ, ಕೊಹ್ಲಿ ನಾಯಕನ ನಿರ್ಧಾರಗಳಿಂದ ಕೋಪಗೊಂಡಿದ್ದಾರೆ. ದಿನೇಶ್ ಕಾರ್ತಿಕ್ ಅವರೊಂದಿಗೆ ಬೌಲಿಂಗ್ ಬದಲಾವಣೆಗಳ ಬಗ್ಗೆ ಚರ್ಚಿಸಿದ್ದಾರೆ. ಅಲ್ಲದೇ ಸ್ಟೆಟರ್ಜಿಕ್ ಟೈಮ್ ವೇಳೆ ಕೊಹ್ಲಿ ಕೆಲವು ನಿರ್ಧಾರಗಳ ಬಗ್ಗೆ ಕಾರ್ತಿಕ್, ಅನುಭವಿ ಬೌಲರ್ ಭುವನೇಶ್ವರ್ ಕುಮಾರ್, ಟಿಮ್ ಡೇವಿಡ್ ಅವರೊಂದಿಗೂ ಮಾತನಾಡಿದ್ದಾರೆ. ಆದ್ರೆ ಕೊಹ್ಲಿ, ದಿನೇಶ್ ಕಾರ್ತಿಕ್ ನಡುವಿನ ಸಂಭಾಷಣೆ ಕುರಿತು ನಿಖರ ಕಾರಣ ತಿಳಿದುಬಂದಿಲ್ಲ. ಆರ್‌ಸಿಬಿ ಫ್ರಾಂಚೈಸಿ ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರತಿ ಬಾರಿಯೂ ಆರ್‌ಸಿಬಿ ಒಂದಿಲ್ಲೊಂದು ವಿವಾದಗಳಿಗೆ ಹೆಸರಾಗುತ್ತಲೇ ಇರುತ್ತದೆ. ಕಳೆದ ಬಾರಿ ಪಂಜಾಬ್ ಕಿಂಗ್ಸ್ ಆಟಗಾರನಿಗೆ ಟಾಂಗ್ ಕೊಡುವ ಮೂಲಕ ಕೊಹ್ಲಿ ಅವರ ನಡೆ ಸದ್ದು ಮಾಡಿತ್ತು. ಇದಕ್ಕೂ ಮುನ್ನ 2023ರಲ್ಲಿ ಗೌತಮ್ ಗಂಭೀರ್ ಅವರೊಂದಿಗಿನ ಕಲಹ ದೊಡ್ಡ ಸದ್ದು ಮಾಡಿತ್ತು. ಆದ್ರೆ ಇದೇ ಮೊದಲಬಾರಿಗೆ ತಂಡದಲ್ಲೇ ಆಂತರಿಕ ಕಲಹ ಬಿರುಗಾಳಿ ಎಬ್ಬಿಸಿರುವುದು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ತವರಲ್ಲಿ ಮತ್ತೆ ಸೋತ ಆರ್‌ಸಿಬಿ – ಕೆ.ಎಲ್.ರಾಹುಲ್ ಮಿಂಚು; ಡೆಲ್ಲಿಗೆ 6 ವಿಕೆಟ್‌ಗಳ ಜಯ
ಬೆಂಗಳೂರು: ಆರ್‌ಸಿಬಿ (RCB) ವಿರುದ್ಧ ಗೆದ್ದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದಲ್ಲಿರುವ ಕನ್ನಡಿಗ ಕೆಎಲ್ ರಾಹುಲ್ (KL Rahul) ಉಗ್ರಂ ಶೈಲಿಯಲ್ಲಿ ವೃತ್ತ ಬರೆದು ಸಂಭ್ರಮಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
— The Bengaluru Dialogue🧢 (@Rashmi_Voice) April 11, 2025
ಪಂದ್ಯಶ್ರೇಷ್ಠ ಗೌರಕ್ಕೆ ಪಾತ್ರರಾದ ರಾಹುಲ್, ಬೆಂಗಳೂರು (Bengaluru) ನನ್ನ ಮನೆ. ಈ ಮೈದಾನದ ಬಗ್ಗೆ ಎಲ್ಲರಿಗಿಂತ ಚೆನ್ನಾಗಿ ನನಗೆ ತಿಳಿದಿದೆ ಎಂದು ತಿಳಿಸಿದರು. ಈ ಡೈಲಾಗ್ ಹೊಡೆಯುವ ಮೂಲಕ ಹರಾಜಿನಲ್ಲಿ ತನ್ನನ್ನು ಪರಿಗಣಿಸದ ಆರ್‌ಸಿಬಿಗೆ ಟಾಂಗ್ ನೀಡಿದರು. ಇದನ್ನೂ ಓದಿ: RCBvsDC | ಪಂದ್ಯದ ಟಿಕೆಟ್ ಕಾಳಸಂತೆಯಲ್ಲಿ ಮಾರಾಟ – 8 ಮಂದಿ ಸಿಸಿಬಿ ಬಲೆಗೆ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 7 ವಿಕೆಟ್ ನಷ್ಟಕ್ಕೆ 163 ರನ್ ಹೊಡೆಯಿತು. ಇದಕ್ಕೆ ಉತ್ತರ ನೀಡಿದ ಡೆಲ್ಲಿ ಕೆಎಲ್ ರಾಹುಲ್ ಅವರ ಅತ್ಯುತ್ತಮ ಆಟದಿಂದ 17.5 ಓವರ್‌ಗಳಲ್ಲಿ 169 ರನ್ ಹೊಡೆದು ಜಯಗಳಿಸಿತು.
ರಾಹುಲ್ ಔಟಾಗದೇ 93 ರನ್ (53 ಎಸೆತ, 7 ಬೌಂಡರಿ, 6 ಸಿಕ್ಸ್) ಸಿಡಿಸಿ ತಂಡಕ್ಕೆ ಜಯವನ್ನು ತಂದುಕೊಟ್ಟರು.
ಬೆಂಗಳೂರು: ಕೆ.ಎಲ್.ರಾಹುಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ವಿರುದ್ಧ ಡೆಲ್ಲಿ 6 ವಿಕೆಟ್‌ಗಳ ಜಯ ಸಾಧಿಸಿತು. ಆ ಮೂಲಕ ತವರಲ್ಲಿ ಆರ್‌ಸಿಬಿಗೆ ಮತ್ತೊಂದು ಸೋಲಿನ ಕಹಿ ಅನುಭವವಾಯಿತು.
ಟಾಸ್ ಸೋತರೂ ಗೆಲುವಿನ ಛಲದೊಂದಿಗೆ ಬ್ಯಾಟಿಂಗ್ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭದಲ್ಲೇ ಅಬ್ಬರಿಸಿತು. ಕೇವಲ 3 ಓವರ್‌ಗೆ 50 ರನ್ ಸಿಡಿಸಿ ಗಮನ ಸೆಳೆದಿತ್ತು. ಫಿಲ್ ಸಾಲ್ಟ್ 17 ಬಾಲ್‌ಗೆ 3 ಸಿಕ್ಸರ್ ಮತ್ತು 4 ಫೋರ್ ಚಚ್ಚಿ 37 ರನ್ ಗಳಿಸಿದ್ದರು. ಸಾಲ್ಟ್ ಅಬ್ಬರಕ್ಕೆ ಅಕ್ಷರಶಃ ಡೆಲ್ಲಿ ಬೌಲರ್‌ಗಳು ನಡುಗಿದ್ದರು. ಈ ಮಧ್ಯೆ 1 ರನ್ ಕದಿಯಲು ಹೋಗಿ ಸಾಲ್ಟ್ ರನೌಟ್ ಆಗಿ ಆಘಾತ ನೀಡಿದರು. ನಂತರ ಬಂದ ದೇವದತ್ ಪಡಿಕ್ಕಲ್ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಈ ಮಧ್ಯೆ ಭರವಸೆ ಆಟಗಾರನಾಗಿದ್ದ ವಿರಾಟ್ ಕೊಹ್ಲಿ 2 ಸಿಕ್ಸರ್, 1 ಫೋರ್‌ನೊಂದಿಗೆ 22 ರನ್ ಗಳಿಸಿ ಔಟಾಗಿದ್ದು ನಿರಾಸೆ ಮೂಡಿಸಿತು.
ನಂತರ ಬಂದ ಯಾವೊಬ್ಬ ಬ್ಯಾಟರ್ ಕೂಡ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ರಜತ್ ಪಾಟೀದಾರ್ 25 ರನ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆ ಮುಖ ಮಾಡಿದರು. ಲಿಯಾಮ್ ಲಿವಿಂಗ್‌ಸ್ಟೋನ್ 4, ಜಿತೇಶ್ ಶರ್ಮಾ 3 ರನ್ ಅಷ್ಟೇ ಗಳಿಸಿ ವಿಫಲರಾದರು. ಕೃಣಾಲ್ ಪಾಂಡೆ 18 ರನ್ ಗಳಿಸಿ ಔಟಾದರು. ಕೊನೆ ಘಳಿಗೆಯಲ್ಲಿ ಟಿಮ್ ಡೇವಿಡ್ ಎಂದಿನಂತೆ ತಮ್ಮ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. 20 ಬಾಲ್‌ಗೆ 4 ಸಿಕ್ಸರ್, 2 ಫೋರ್‌ನೊಂದಿಗೆ 37 ರನ್ ಗಳಿಸಿ ತಂಡವು ಸವಾಲಿನ ಮೊತ್ತ ಪೇರಿಸಲು ನೆರವಾದರು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗೆ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು.
164 ರನ್ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಘಾತ ಎದುರಿಸಿತು. ಕೇವಲ 10 ರನ್ ಗಳಿಸಿದ್ದಾಗಲೇ 2 ವಿಕೆಟ್ (ಫಫ್ ಡುಪ್ಲೆಸಿಸ್ 2, ಜೇಕ್ ಫ್ರೇಸರ್-ಮೆಕ್‌ಗುರ್ಕ್ 7 ರನ್) ಕಳೆದುಕೊಂಡಿತ್ತು. 30 ರನ್ ಹೊತ್ತಿಗೆ 3 ವಿಕೆಟ್ ಬಿತ್ತು. 58 ರನ್ ಗಳಿಸಿದಾಗ 4 ವಿಕೆಟ್ ಉದುರಿದ್ದವು. ಹೀಗೆ ಆಡಿದರೆ ಗೆಲುವು ದಕ್ಕಿಸಿಕೊಳ್ಳಬಹುದೆಂದು ಭಾವಿಸಿದ್ದ ಆರ್‌ಸಿಬಿಗೆ ಡೆಲ್ಲಿ ಕ್ಯಾಪ್ಟನ್ ಕೆ.ಎಲ್.ರಾಹುಲ್ ತಲೆನೋವಾದರು. ಜವಾಬ್ದಾರಿಯುತ ಮತ್ತು ಏಕಾಂಗಿ ಹೋರಾಟ ನಡೆಸಿದ ರಾಹುಲ್ 53 ಬಾಲ್‌ಗೆ 6 ಸಿಕ್ಸರ್, 7 ಫೋರ್‌ನೊಂದಿಗೆ 93 ರನ್ ಕಲೆಹಾಕಿದರು. ಆರಂಭದಲ್ಲೇ ರಾಹುಲ್ ಕ್ಯಾಚನ್ನು ಪಾಟೀದಾರ್ ಕೈಚೆಲ್ಲಿದ್ದೇ ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣವಾಯಿತು.
ರಾಹುಲ್‌ಗೆ ಟ್ರಿಸ್ಟಾನ್ ಸ್ಟಬ್ಸ್ (38 ರನ್) ಜೊತೆಯಾಗಿ ಸಾಥ್ ನೀಡಿದರು. ರಾಹುಲ್, ಸ್ಟಬ್ಸ್ ಜೊತೆಯಾಟದ ನೆರವಿನಿಂದ ಆರ್‌ಸಿಬಿ ವಿರುದ್ಧ ಡೆಲ್ಲಿ ಗೆಲುವು ದಾಖಲಿಸಿತು. 17.5 ಓವರ್‌ಗೆ 4 ವಿಕೆಟ್ ನಷ್ಟಕ್ಕೆ ಡೆಲ್ಲಿ ಗುರಿ ತಲುಪಿ ಗೆದ್ದಿತು.
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs DC) ನಡುವಿನ ಐಪಿಎಲ್ ಪಂದ್ಯವನ್ನು ಸಿಎಂ ಸಿದ್ದರಾಮಯ್ಯ (Siddaramaiah) ವೀಕ್ಷಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿದೆ. ಫಿಲ್ ಸಾಲ್ಟ್ 37, ವಿರಾಟ್ ಕೊಹ್ಲಿ 22, ರಜತ್ ಪಾಟಿದಾರ್ 25, ಟಿಮ್ ಡೇವಿಡ್ 37, ಕೃಣಾಲ್ ಪಾಂಡೆ 18 ರನ್ ಗಳಿಸಿದ್ದಾರೆ.