Tag: rcb

  • ಐಪಿಎಲ್‌ನಲ್ಲಿ ಆರ್‌ಸಿಬಿ ಗೆಲುವು – ರೊಚ್ಚಿಗೆದ್ದ ಸಿಎಸ್‌ಕೆ ಅಭಿಮಾನಿಗಳಿಂದ ಹಾಸ್ಟೆಲ್ ಸಾಮಗ್ರಿ ಧ್ವಂಸ

    ಐಪಿಎಲ್‌ನಲ್ಲಿ ಆರ್‌ಸಿಬಿ ಗೆಲುವು – ರೊಚ್ಚಿಗೆದ್ದ ಸಿಎಸ್‌ಕೆ ಅಭಿಮಾನಿಗಳಿಂದ ಹಾಸ್ಟೆಲ್ ಸಾಮಗ್ರಿ ಧ್ವಂಸ

    ಚಿತ್ರದುರ್ಗ: ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಸೋತಿದ್ದಕ್ಕೆ ಸಿಟ್ಟುಗೊಂಡು ವಿದ್ಯಾರ್ಥಿಗಳು ಹಾಸ್ಟೆಲ್‌ ಸಾಮಗ್ರಿಗಳನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಹೊರವಲಯದಲ್ಲಿನ ಸರ್ಕಾರಿ ಮೆಟ್ರಿಕ್ ನಂತರದ‌ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಸಾಮಗ್ರಿಗಳನ್ನು ಧ್ವಂಸ ಮಾಡಿದ್ದಾರೆ.

    ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ 2 ರನ್‌ಗಳ ರೋಚಕ ಜಯ ಸಾಧಿಸಿತು. ಹಾಸ್ಟೆಲ್‌ನಲ್ಲಿ ಸಿಎಸ್‌ಕೆ ಫ್ಯಾನ್ಸ್ ರೊಚ್ಚಿಗೆದ್ದು, ಹಾಸ್ಟೆಲ್‌ನಲ್ಲಿರುವ ತಟ್ಟೆ, ಲೋಟ ಮತ್ತು ಟ್ರಂಕ್ ಸೇರಿದಂತೆ ಸರ್ಕಾರಿ ಹಾಸ್ಟೆಲ್‌ಗೆ ಸೇರಿದ ಹಲವು ಸಾಮಗ್ರಿಗಳನ್ನು ಎತ್ತಿ ಹಾಕಿ ದಾಂಧಲೆ ಮಾಡಿದ್ದಾರೆ.

    ಐಪಿಎಲ್ ಶುರುವಾದಾಗಿನಿಂದಲೂ ಈ ಹಾಸ್ಟೆಲ್‌ನಲ್ಲಿ ಇಂತಹ ಘಟನೆ ಮಾಮೂಲಿಯಾಗಿದ್ದು, ಐಪಿಎಲ್ ಪ್ರಿಯರ ಆಟೋಟೋಪಗಳಿಂದ ಇಲ್ಲಿ ಓದುತ್ತಿರುವ ಪ್ರಾಮಾಣಿಕ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ. ಇದರಿಂದಾಗಿ ‌ವಿದ್ಯಾರ್ಥಿಗಳಿಗೆ ಇನ್ನಿಲ್ಲದ ತೊಂದರೆ ಉಂಟಾಗುತ್ತಿದೆ. ವಿದ್ಯಾರ್ಥಿಗಳ ಈ ವರ್ತನೆಯನ್ನು ತಹಬದಿಗೆ ತರಲು ಇಲ್ಲಿರುವ ವಾರ್ಡನ್ ಸಹ ಮುಂದಾಗಿಲ್ಲ ಎಂಬುದು ಹಲವು ವಿದ್ಯಾರ್ಥಿಗಳ ಆರೋಪವಾಗಿದೆ.

    ಇಲ್ಲಿರುವ ವಿದ್ಯಾರ್ಥಿಗಳಿಗೆ ಐಪಿಎಲ್ ಬೆಟ್ಟಿಂಗ್ ಗೀಳು ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಸರ್ಕಾರಿ ಹಾಸ್ಟೆಲ್‌ನಲ್ಲಿ ಇಂತಹ ರಂಪಾಟ ಮಾಡುವ ವಿದ್ಯಾರ್ಥಿಗಳಿಗೆ ಶಿಸ್ತಿನ ಪಾಠ ಕಲಿಸಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆಂಬ ಆರೋಪ ಇಲ್ಲಿನ ಪ್ರಾಮಾಣಿಕ ವಿದ್ಯಾರ್ಥಿಗಳು ಹಾಗೂ ಸ್ಥಳೀಯರದ್ದಾಗಿದೆ.

  • ಮದ್ವೆ ಮನೆಯಲ್ಲಿ ಆರ್‌ಸಿಬಿ ಮ್ಯಾಚ್‌ – ಕುಣಿದು ಕುಪ್ಪಳಿಸಿದ ಅಭಿಮಾನಿಗಳು

    ಮದ್ವೆ ಮನೆಯಲ್ಲಿ ಆರ್‌ಸಿಬಿ ಮ್ಯಾಚ್‌ – ಕುಣಿದು ಕುಪ್ಪಳಿಸಿದ ಅಭಿಮಾನಿಗಳು

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (CSK) ನಡುವಿನ ಪಂದ್ಯನ್ನು ಮದುವೆ (Marriage) ಮನೆಯಲ್ಲೇ ನೇರಪ್ರಸಾರ ಮಾಡಲಾಗಿದೆ.

    ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯ ಮದಗಜಗಳ ಕಾಳಗ ಇದ್ದಂತೆ. ಎರಡೂ ತಂಡಗಳಿಗೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಈ ಕಾರಣಕ್ಕೆ ಬಂದ ಆರ್‌ಸಿಬಿ ಅಭಿಮಾನಿಗಳು ಪಂದ್ಯ ವೀಕ್ಷಿಸುವಂತೆ ಮಾಡಲು ಆರತಕ್ಷತೆ ಕಾರ್ಯಕ್ರಮದಲ್ಲೇ ದೊಡ್ಡ ಸ್ಕ್ರೀನ್‌ನಲ್ಲಿ ಪಂದ್ಯವನ್ನು ನೇರ ಪ್ರಸಾರ ಮಾಡಲಾಗಿತ್ತು  ಇದನ್ನೂ ಓದಿ: ಚೆನ್ನೈ ಎಡವಟ್ಟಿನಿಂದ ಆರ್‌ಸಿಬಿಗೆ ಗೆಲುವು – ಬಿಸಿ ಬಿಸಿ ಚರ್ಚೆಗೆ ಗ್ರಾಸವಾದ DRS

    ಶನಿವಾರದ ಪಂದ್ಯ ಅಂತೂ ಕೊನೆಯ ಎಸೆತವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಕೊನೆಯ ಓವರ್‌ನಲ್ಲಿ ಪಂದ್ಯ ಗೆಲ್ಲಲು 15 ರನ್‌ ಬೇಕಿದ್ದರೆ ಕೊನೆಯ ಎಸೆತದಲ್ಲಿ ಪಂದ್ಯ ಗೆಲ್ಲಲು ಚೆನ್ನೈಗೆ 4 ರನ್‌ಗಳ ಅಗತ್ಯವಿತ್ತು. ಯಶ್‌ ದಯಾಳ್‌ ಎಸೆದ ಕೊನೆಯ ಎಸೆತದಲ್ಲಿ ಶಿವಂ ದುಬೆ 1 ರನ್‌ ಓಡುತ್ತಿದ್ದಂತೆ ಹಾಲ್‌ನಲ್ಲಿದ್ದ ಕ್ರಿಕೆಟ್‌ ಅಭಿಮಾನಿಗಳು ಸಂಭ್ರಮಿಸಿ ಜೈ ಆರ್‌ಸಿಬಿ ಎಂದು ಘೋಷಣೆ ಕೂಗಿದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಈಗ ಹೆಚ್ಚು ಹರಿದಾಡುತ್ತಿದೆ.

     

    View this post on Instagram

     

    A post shared by Mansa (@_mxnsx_shetty_)

    ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ರೋಚಕ 2 ರನ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 5 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿತು. ಕಠಿಣ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ 5 ವಿಕೆಟ್‌ ನಷ್ಟಕ್ಕೆ 211 ರನ್‌ ಹೊಡೆದು ರೋಚಕ ಸೋಲನ್ನು ಅನುಭವಿಸಿತು. ಇದನ್ನೂ ಓದಿ: IPL 2025 | ಆರ್‌ಸಿಬಿಗೆ 2 ರನ್‌ಗಳ ರೋಚಕ ಜಯ – 16 ವರ್ಷಗಳ ಬಳಿಕ ಹೊಸ ಮೈಲುಗಲ್ಲು

    ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿ ಇಲ್ಲಿಯವರೆಗೆ ಒಂದೇ ಆವೃತ್ತಿಯಲ್ಲಿ ಎರಡು ಬಾರಿ ಚೆನ್ನೈ ವಿರುದ್ಧ ಗೆಲುವು ಸಾಧಿಸಿರಲಿಲ್ಲ. ಮಾರ್ಚ್‌ 28 ರಂದು ನಡೆದ ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆರ್‌ಸಿಬಿ 50 ರನ್‌ಗಳ ಜಯ ಸಾಧಿಸಿತ್ತು. ಆರ್‌ಸಿಬಿ 7 ವಿಕೆಟ್‌ ನಷ್ಟಕ್ಕೆ 196 ರನ್‌ ಹೊಡೆದರೆ ಚೆನ್ನೈ 8 ವಿಕೆಟ್‌ ನಷ್ಟಕ್ಕೆ 146 ರನ್‌ ಹೊಡೆದಿತ್ತು.

  • ಚೆನ್ನೈ ಎಡವಟ್ಟಿನಿಂದ ಆರ್‌ಸಿಬಿಗೆ ಗೆಲುವು – ಬಿಸಿ ಬಿಸಿ ಚರ್ಚೆಗೆ ಗ್ರಾಸವಾದ DRS

    ಚೆನ್ನೈ ಎಡವಟ್ಟಿನಿಂದ ಆರ್‌ಸಿಬಿಗೆ ಗೆಲುವು – ಬಿಸಿ ಬಿಸಿ ಚರ್ಚೆಗೆ ಗ್ರಾಸವಾದ DRS

    ಬೆಂಗಳೂರು: ಶನಿವಾರ ರಾತ್ರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ನ (CSK) ಡೆವಾಲ್ಡ್ ಬ್ರೆವಿಸ್ (Dewald Brevis) ಎಲ್‌ಬಿಡಬ್ಲ್ಯೂ (LBW) ತೀರ್ಪು ಈಗ ಚರ್ಚೆಗೆ ಗ್ರಾಸವಾಗಿದೆ.

    ಕೊನೆಯ 24 ಎಸೆತಗಳಲ್ಲಿ ಚೆನ್ನೈ ಗೆಲುವಿಗೆ 43 ರನ್‌ ಬೇಕಿತ್ತು. ಕ್ರೀಸ್‌ನಲ್ಲಿ ಜಡೇಜಾ (Ravindra Jadeja) ಮತ್ತು ​ ಆಯುಷ್ ಮ್ಹಾತ್ರೆ ಇದ್ದರು. ಎರಡನೇ ಎಸೆತದಲ್ಲಿ ​ ಆಯುಷ್ ಮ್ಹಾತ್ರೆ ಕ್ಯಾಚ್‌ ನೀಡಿ ಔಟಾದರು. ಮೂರನೇ ಎಸೆತದಲ್ಲಿ ಕ್ರೀಸಿಗೆ ಬಂದ ಬ್ರೆವಿಸ್ ಪ್ಯಾಡ್‌ಗೆ ಬಾಲ್ ಬಡಿಯಿತು.

    ಎನ್‌ಗಿಡಿ ಮನವಿಯ ಬೆನ್ನಲ್ಲೇ ಅಂಪೈರ್‌ ಔಟ್‌ ತೀರ್ಪು ನೀಡಿದರು. ಬಾಲ್‌ ಹಿಂದಕ್ಕೆ ಹೋದ ಕಾರಣ ಬ್ರೆವಿಸ್‌ ಮತ್ತು ಜಡೇಜಾ ರನ್‌ ಓಡಿದರು. ಇದನ್ನೂ ಓದಿ: IPL 2025 | ಆರ್‌ಸಿಬಿಗೆ 2 ರನ್‌ಗಳ ರೋಚಕ ಜಯ – 16 ವರ್ಷಗಳ ಬಳಿಕ ಹೊಸ ಮೈಲುಗಲ್ಲು

     

    ರನ್‌ ಓಡಿದ ನಂತರ ರಿವ್ಯೂ ಪರಿಶೀಲನೆಗೆ ಮನವಿ ಮಾಡಿದರು. ಆದರೆ ಅಂಪೈರ್‌ ಈ ಮನವಿಯನ್ನು ಪುರಸ್ಕರಿಸಲಿಲ್ಲ. ಈ ವಿಚಾರಕ್ಕೆ ಜಡೇಜಾ ಅಂಪೈರ್‌ ಬಳಿ, ಯಾಕೆ ರಿವ್ಯೂ ಪರಿಶೀಲನೆ ಮಾಡಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಅಂಪೈರ್‌ 15 ಸೆಕೆಂಡ್‌ ಒಳಗಡೆ ಕೇಳದ ಕಾರಣ ಮನವಿ ಪುರಸ್ಕರಿಸುವುದಿಲ್ಲ ಎಂದು ತಿಳಿಸಿದರು. ಕೊನೆಗೆ ಅಸಮಾಧಾನದಿಂದ ಬ್ರೆವಿಸ್‌ ಪೆವಿಲಿಯನ್‌ ಕಡೆಗೆ ಹೆಜ್ಜೆ ಹಾಕಿದರು.

    ರಿಪ್ಲೈಯಲ್ಲಿ ಬಾಲ್‌ ವಿಕೆಟ್‌ಗೆ ತಾಗದೇ ಲೆಗ್‌ ಸೈಡ್‌ಗೆ ಹೋಗುತ್ತಿತ್ತು. ಒಂದು ವೇಳೆ ರನ್‌ ಓಡದೇ ಡಿಆರ್‌ಎಸ್‌ (DRS) ತೆಗೆದುಕೊಂಡಿದ್ದರೆ ಬ್ರೆವಿಸ್‌ ನಾಟೌಟ್‌ ಆಗುತ್ತಿದ್ದರು. ಬ್ರೆವಿಸ್‌ ಔಟಾಗದೇ ಇದ್ದರೆ ಪಂದ್ಯದ ಫಲಿತಾಂಶ ಬದಲಾಗುವ ಸಾಧ್ಯತೆ ಇತ್ತು.

     

     

     

    ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ರೋಚಕ 2 ರನ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 5 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿತು. ಕಠಿಣ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ 5 ವಿಕೆಟ್‌ ನಷ್ಟಕ್ಕೆ 211 ರನ್‌ ಹೊಡೆದು ರೋಚಕ ಸೋಲನ್ನು ಅನುಭವಿಸಿತು.

    ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿ ಇಲ್ಲಿಯವರೆಗೆ ಒಂದೇ ಆವೃತ್ತಿಯಲ್ಲಿ ಎರಡು ಬಾರಿ ಚೆನ್ನೈ ವಿರುದ್ಧ ಗೆಲುವು ಸಾಧಿಸಿರಲಿಲ್ಲ. ಮಾರ್ಚ್‌ 28 ರಂದು ನಡೆದ ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆರ್‌ಸಿಬಿ 50 ರನ್‌ಗಳ ಜಯ ಸಾಧಿಸಿತ್ತು. ಆರ್‌ಸಿಬಿ 7 ವಿಕೆಟ್‌ ನಷ್ಟಕ್ಕೆ 196 ರನ್‌ ಹೊಡೆದರೆ ಚೆನ್ನೈ 8 ವಿಕೆಟ್‌ ನಷ್ಟಕ್ಕೆ 146 ರನ್‌ ಹೊಡೆದಿತ್ತು.

  • RCB vs CSK ಪಂದ್ಯದ ಟಿಕೆಟ್‌ ಬ್ಲಾಕ್‌ನಲ್ಲಿ ಮಾರಾಟ – ನಾಲ್ವರು ಅರೆಸ್ಟ್‌

    RCB vs CSK ಪಂದ್ಯದ ಟಿಕೆಟ್‌ ಬ್ಲಾಕ್‌ನಲ್ಲಿ ಮಾರಾಟ – ನಾಲ್ವರು ಅರೆಸ್ಟ್‌

    – 32 ಟಿಕೆಟ್‌, 1 ಲಕ್ಷ ನಗದು ಸೀಜ್‌

    ಬೆಂಗಳೂರು: ಐಸಿಸಿ ಕ್ರಿಕೆಟ್‌ ಟೂರ್ನಿಗಳಲ್ಲಿ ಭಾರತ ಮತ್ತು ಪಾಕ್‌ ನಡುವಿನ ಪಂದ್ಯ ಹೇಗೋ, ಹಾಗೆಯೇ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಆರ್‌ಸಿಬಿ (CSK vs RCB) ನಡುವಿನ ಪಂದ್ಯ ಬಿಸಿಸಿಐ ಹಾಗೂ ಐಪಿಎಲ್‌ ಮಂಡಳಿ ಪಾಲಿಗೆ ಚಿನ್ನದ ಮೊಟ್ಟೆ. ಉಭಯ ತಂಡಗಳ ನಡುವಿನ ರೋಚಕ ಹಣಾಹಣಿ ವೀಕ್ಷಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿರುತ್ತಾರೆ. ದುಪ್ಪಟ್ಟು ಬೆಲೆಯಾದರೂ ಯೋಚಿಸದೇ ಟಿಕೆಟ್‌ ಖರೀದಿಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಬ್ಲಾಕ್‌ನಲ್ಲಿ ಟಿಕೆಟ್‌ (Black Ticket) ಮಾರಾಟ ಮಾಡ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

    ಚರಣ್ ರಾಜ್, ಹರ್ಷವರ್ಧನ ಸಕ್ಲೇಚ, ವಿನಯ್, ವೆಂಕಟಸಾಯಿ ಬಂಧಿತ ಆರೋಪಿಗಳು. ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯುವ ಆರ್‌ಸಿಬಿ vs ಸಿಎಸ್‌ಕೆ ನಡುವಿನ ಪಂದ್ಯದ ಟಿಕೆಟ್‌ನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 32 ಟಿಕೆಟ್‌ಗಳು ಹಾಗೂ 1 ಲಕ್ಷ ನಗದನ್ನು ಜಪ್ತಿ ಮಾಡಿದ್ದಾರೆ.

    ಪ್ರೇಕ್ಷಕರ ಅಗತ್ಯತೆಯನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ನಿಂತು 1,200 ರೂ. ಬೆಲೆಯ ಟಿಕೆಟ್‌ ಅನ್ನು 10,000 ರೂ.ಗೆ ಮಾರಾಟ ಮಾಡುತ್ತಿದ್ದರು. ಮಾಹಿತಿ ತಿಳಿದ ಸಿಸಿಬಿ ವಿಶೇಷ ತಂಡ ಟಿಕೆಟ್‌ ಖರೀದಿಸುವ ನೆಪದಲ್ಲಿ ಬಂದು ದಂಧೆಕೋರರನ್ನ ಬಂಧಿಸಿದ್ದಾರೆ.

    ಇಂದು ರಾತ್ರಿ 7:30ಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಪಂದ್ಯ ಶುರುವಾಗಲಿದೆ. ಆರ್‌ಸಿಬಿ ಚಿನ್ನಸ್ವಾಮಿಯಲ್ಲಿ ಆಡುತ್ತಿರುವ 100ನೇ ಪಂದ್ಯವೂ ಇದಾಗಿದೆ.

  • ʼಇದು ನನ್ನ ಮೈದಾನʼ – ಟಾಂಗ್‌ ಕೊಟ್ಟ ಕೊಹ್ಲಿಗೆ ಕೈ ಸನ್ನೆ ಮಾಡಿ ತೋರಿಸಿದ ರಾಹುಲ್‌

    ʼಇದು ನನ್ನ ಮೈದಾನʼ – ಟಾಂಗ್‌ ಕೊಟ್ಟ ಕೊಹ್ಲಿಗೆ ಕೈ ಸನ್ನೆ ಮಾಡಿ ತೋರಿಸಿದ ರಾಹುಲ್‌

    ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ಜಯಗಳಿಸಿದ ಬಳಿಕ ವಿರಾಟ್‌ ಕೊಹ್ಲಿ (Virat Kohli) ಇದು ನನ್ನ ಮೈದಾನ ಎಂದು ಹೇಳಿ ಕೆಎಲ್‌ ರಾಹುಲ್‌ಗೆ ಟಾಂಗ್‌ ನೀಡಿದ್ದಾರೆ.

    6 ವಿಕೆಟ್‌ಗಳ ಜಯಗಳಿಸಿದ ಬಳಿಕ ರಾಹುಲ್‌ ಜೊತೆ ಕೊಹ್ಲಿ ಸಂತೋಷದಿಂದ ಮಾತನಾಡುತ್ತಿದ್ದರು. ಈ ವೇಳೆ ಕೊಹ್ಲಿ ನೆಲಕ್ಕೆ ಕೈ ತೋರಿಸುತ್ತಾ ಇದು ನನ್ನ ಮೈದಾನ ಹೇಳಿದರು. ಇದಕ್ಕೆ ರಾಹುಲ್‌, ಪೆವಿಲಿಯನ್‌ಗೆ ಕೊಹ್ಲಿ ಹೆಸರು ಇದೆ ಎಂದು ಸನ್ನೆ ಮಾಡಿದರು. ನಂತರ ಕೊಹ್ಲಿ ರಾಹುಲ್‌ ಅವರನ್ನು ಅಪ್ಪಿ ಮಾತನಾಡಿದರು. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಮೂಲತ: ದೆಹಲಿಯವರಾದ ಕೊಹ್ಲಿ ಈ ಮೈದಾನದಲ್ಲೇ ಕ್ರಿಕೆಟ್‌ ಅಭ್ಯಾಸ ನಡೆಸಿದ್ದರು. ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿರುವ ಒಂದು  ಸ್ಟ್ಯಾಂಡ್‌ಗೆ  ‘ವಿರಾಟ್‌ ಕೊಹ್ಲಿ ಪೆವಿಲಿಯನ್‌’ ಎಂದು ಹೆಸರನ್ನು ಇಡಲಾಗಿದೆ.

    ಟಾಂಗ್‌ ಕೊಟ್ಟಿದ್ದು ಯಾಕೆ?
    ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ (RCB) ವಿರುದ್ಧ ಗೆದ್ದ ಬಳಿಕ ಕನ್ನಡಿಗ ಕೆಎಲ್‌ ರಾಹುಲ್‌ (KL Rahul) ಕಾಂತಾರ ಶೈಲಿಯಲ್ಲಿ ವೃತ್ತ ಬರೆದು ಸಂಭ್ರಮಿಸಿದ್ದರು.

    ಪಂದ್ಯಶ್ರೇಷ್ಠ ಗೌರಕ್ಕೆ ಪಾತ್ರರಾದ ರಾಹುಲ್‌, ಬೆಂಗಳೂರು (Bengaluru) ನನ್ನ ಮನೆ. ಈ ಮೈದಾನದ ಬಗ್ಗೆ ಎಲ್ಲರಿಗಿಂತ ಚೆನ್ನಾಗಿ ನನಗೆ ತಿಳಿದಿದೆ ಎಂದು ತಿಳಿಸಿದರು. ಈ ಡೈಲಾಗ್‌ ಹೊಡೆಯುವ ಮೂಲಕ ಹರಾಜಿನಲ್ಲಿ ತನ್ನನ್ನು ಪರಿಗಣಿಸದ ಆರ್‌ಸಿಬಿಗೆ ಟಾಂಗ್‌ ನೀಡಿದ್ದರು. ಇದನ್ನೂ ಓದಿ: `ಕಾಂತಾರ’ ನನ್ನ ಫೆವರಿಟ್ ಸಿನಿಮಾ, ಅದರಲ್ಲಿರುವಂತೆ ಮಾಡಿದೆ – ಆರ್‌ಸಿಬಿ ವಿರುದ್ಧ ಗೆದ್ದು ಸ್ಪೆಷಲ್ ಸಿಗ್ನೇಚರ್ ಸ್ಟೈಲ್ ಮಾಡಿದ ಕೆಎಲ್ ರಾಹುಲ್

    ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ್ದ ಡೆಲ್ಲಿ  ಕ್ಯಾಪಿಟಲ್ಸ್‌ 8 ವಿಕೆಟ್‌ ನಷ್ಟಕ್ಕೆ 162 ರನ್‌ ಹೊಡೆಯಿತು. ಈ ಮೊತ್ತವನ್ನು ಪೇರಿಸಿದ ಆರ್‌ಸಿಬಿ ಇನ್ನೂ 9 ಎಸೆತ ಬಾಕಿ ಇರುವಂತೆಯೇ 165 ರನ್‌ ಹೊಡೆದಿ ಜಯಗಳಿಸಿತು.

    ಕೃನಾಲ್‌ ಪಾಂಡ್ಯ ಔಟಾಗದೇ 73 ರನ್‌ (47 ಎಸೆತ, 5 ಬೌಂಡರಿ, 4 ಸಿಕ್ಸ್‌) ಹೊಡೆದರೆ ವಿರಾಟ್‌ ಕೊಹ್ಲಿ 51 ರನ್‌( 47 ಎಸೆತ, 4 ಬೌಂಡರಿ) ಹೊಡೆದು ಔಟಾದರು. ಆಡಿದ 10 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು 14 ಅಂಕ ಸಂಪಾದಿಸಿದ ಆರ್‌ಸಿಬಿ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

  • ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಆರ್‌ಸಿಬಿ; 6 ವಿಕೆಟ್‌ಗಳ ಅಮೋಘ ಜಯ – ನಂ.1 ಪಟ್ಟಕ್ಕೇರಿದ ಬೆಂಗಳೂರು

    ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಆರ್‌ಸಿಬಿ; 6 ವಿಕೆಟ್‌ಗಳ ಅಮೋಘ ಜಯ – ನಂ.1 ಪಟ್ಟಕ್ಕೇರಿದ ಬೆಂಗಳೂರು

    ನವದೆಹಲಿ: ಕೃನಾಲ್‌ ಪಾಂಡ್ಯ (Krunal Pandya), ವಿರಾಟ್‌ ಕೊಹ್ಲಿ (Virat Kohli) ಶತಕದ ಜೊತೆಯಾಟ ಹಾಗೂ ಶಿಸ್ತುಬದ್ಧ ಬೌಲಿಂಗ್‌ ದಾಳಿಯ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ.

    ಸೂಪರ್‌ ಸಂಡೇ ಆರ್‌ಸಿಬಿ-ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಹೈವೋಲ್ಟೇಜ್‌ ಪಂದ್ಯ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು. ಏಕೆಂದರೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ಗೆದ್ದಾಗ ಕೆ.ಎಲ್‌ ರಾಹುಲ್‌ ಸಂಭ್ರಮಿಸಿದ ರೀತಿ ಇದಕ್ಕೆ ಕಾರಣವಾಗಿತ್ತು. ಅಂದಿನಿಂದಲೇ ಕೊಹ್ಲಿ ಸೇಡು ತೀರಿಸಿಕೊಳ್ಳಲಿದ್ದಾರೆ ಅನ್ನೋ ಪೋಸ್ಟರ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ಟ್ರೆಂಡಿಂಗ್‌ನಲ್ಲಿತ್ತು. ಇದೀಗ ಆರ್‌ಸಿಬಿ ಗೆಲುವು ಅಭಿಮಾನಿಗಳ ಪಾಲಿಗೆ ಬಹುದೊಡ್ಡ ಗೆಲುವಾಗಿದೆ. ಅಲ್ಲದೇ 10 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿದ್ದು, 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಂ.1 ಪಟ್ಟಕ್ಕೇರಿದೆ.

    ಗೆಲುವಿಗೆ 163 ರನ್‌ಗಳ ಗುರಿ ಪಡೆದ ಆರ್‌ಸಿಬಿ ಪವರ್‌ ಪ್ಲೇ ನಲ್ಲೇ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಮೊದಲ 4 ಓವರ್‌ಗಳಲ್ಲಿ 26 ರನ್‌ಗಳಿಗೆ ಜಾಕೋಬ್‌ ಬೇಥಲ್‌ (12 ರನ್‌), ರಜತ್‌ ಪಾಟೀದಾರ್‌ (6 ರನ್‌), ದೇವದತ್‌ ಪಡಿಕಲ್‌ (0) ವಿಕೆಟ್‌ ಕಳೆದುಕೊಂಡು ಆರ್‌ಸಿಬಿ ಸಂಕಷ್ಟಕ್ಕೀಡಾಯಿತು. 10 ಓವರ್‌ ಕಳೆದರೂ 100 ರನ್‌ಗಳ ಗಡಿ ದಾಟದ ಆರ್‌ಸಿಬಿ ಪಂದ್ಯ ಗೆಲ್ಲುವುದು ಅನುಮಾನ ಎಂದೇ ಹೇಳಲಾಗುತ್ತಿತ್ತು. ಆದ್ರೆ ವಿರಾಟ್‌ ಕೊಹ್ಲಿ ಹಾಗೂ ಕೃನಾಲ್‌ ಪಾಂಡ್ಯ ಅವರ ಶತಕದ ಜೊತೆಯಾಟ ತಂಡದ ಗೆಲುವಿನ ಹಾದಿಯನ್ನು ಸುಗಮವಾಗಿಸಿತು.

    4ನೇ ವಿಕೆಟಿಗೆ ಕೃನಾಲ್‌ ಪಾಂಡ್ಯ, ವಿರಾಟ್‌ ಕೊಹ್ಲಿ ಜೋಡಿ 84 ಎಸೆತಗಳಲ್ಲಿ 119 ರನ್‌ಗಳ ಜೊತೆಯಾಟ ನೀಡಿತು. ಇದು ತಂಡದ ಗೆಲುವಿಗೆ ಕಾರಣವಾಯಿತು. ಇನ್ನೂ ಕೊನೆಯಲ್ಲಿ ಟಿಮ್‌ ಡೇವಿಡ್‌ ಅವರ ಸಿಕ್ಸರ್‌ ಬೌಂಡರಿ ಆಟದಿಂದ ಆರ್‌ಸಿಬಿಗೆ ಗೆಲುವು ಸುಲಭವಾಯಿತು. ಆರ್‌ಸಿಬಿ ಪರ ಕೃನಾಲ್‌ ಪಾಂಡ್ಯ ಅಜೇಯ 73 ರನ್‌ (47 ಎಸೆತ, 5 ಬೌಂಡರಿ, 4 ಸಿಕ್ಸರ್)‌, ವಿರಾಟ್‌ ಕೊಹ್ಲಿ 51 ರನ್‌ (47 ಎಸೆತ, 4 ಬೌಂಡರಿ) ಗಳಿಸಿದ್ರೆ, ಟಿಮ್‌ ಡೇವಿಡ್‌ 5 ಎಸೆತಗಳಲ್ಲಿ 19 ರನ್‌ ಗಳಿಸಿ ಮಿಂಚಿದರು.

    ಟಾಸ್ ಸೋತು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ಉತ್ತಮ ಆರಂಭವನ್ನೇ ಪಡೆಯಿತು. ಅಭಿಷೇಕ್ ಪೊರೇಲ್ 28 ಮತ್ತು ಫಫ್ ಡುಪ್ಲೆಸಿ 22 ರನ್ ಸಿಡಿಸಿದರು. ಕರುಣ್ ನಾಯರ್ 4 ರನ್‌ಗೆ ಪೆವಿಲಿಯನ್ ಸೇರಿಕೊಂಡರು. ಉತ್ತಮವಾಗಿ ಆಡಿದ ಕೆ.ಎಲ್. ರಾಹುಲ್ 41 (39 ಎಸೆತ) ರನ್‌ಗಳ ಕೊಡುಗೆ ನೀಡಿದರು. ಒಂದು ಹಂತದಲ್ಲಿ 200ರ ಸಮೀಪಕ್ಕೆ ತಲುಪಬಹುದು ಎನ್ನುವಂತಿದ್ದ ರನ್ ಗತಿ ಆರ್‌ಸಿಬಿ ಬೌಲರ್‌ಗಳ ಬಿಗಿ ಹಿಡಿತಕ್ಕೆ ರನ್‌ ಕದಿಯಲು ತಿಣುಕಾಡುತ್ತಾ ಸಾಗಿತು. ಅತ್ತ ರನ್‌ ಬರದ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತೊಂದೆಡೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಸಾಗಿತು. ಆದ್ರೆ ಕೊನೆಯಲ್ಲಿ ಅಬ್ಬರಿಸಿದ ಟ್ರಿಸ್ಟನ್‌ ಸ್ಟಬ್ಸ್‌ 18 ಎಸೆತಗಳಲ್ಲಿ 34 ರನ್ ಗಳಿಸುವ ಮೂಲಕ ಡೆಲ್ಲಿ 163 ರನ್‌ಗಳ ಗುರಿ ನೀಡಲು ನೆರವಾದರು.

    ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ 33 ರನ್ ನೀಡಿ 3 ವಿಕೆಟ್ ಕಿತ್ತರೆ, ಹೇಜಲ್ವುಡ್‌ 36 ರನ್ ನೀಡಿ 2 ವಿಕೆಟ್ ಪಡೆದರು.

    ರಾಹುಲ್‌ vs ಕೊಹ್ಲಿ:
    ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರ್‌ಸಿಬಿಯನ್ನು ಸೋಲಿಸಿತ್ತು. ಆಗ ಗೆಲುವಿನ ರುವಾರಿಯಾಗಿದ್ದ ಕೆ.ಎಲ್ ರಾಹುಲ್ ಅವರು, ʻಇದು ನನ್ನ ಗ್ರೌಂಡ್‌ʼ ಎಂದು ʻಕಾಂತಾರʼ ಚಲನಚಿತ್ರದ ದೃಶ್ಯದ ಮಾದರಿಯನ್ನು ಅನುಕರಿಸಿದ್ದರು. ಇದೀಗ ಗೆದ್ದು ಆರ್‌ಸಿಬಿ ಸೋಲಿಗೆ ಸೇಡು ತೀರಿಸಿಕೊಂಡಿದೆ.

  • PBKS vs RCB – ಕೊಹ್ಲಿ ರನೌಟ್‌ ಥ್ರೋ, ಸಂಭ್ರಮಾಚರಣೆ ವಿಡಿಯೋ ವೈರಲ್‌

    PBKS vs RCB – ಕೊಹ್ಲಿ ರನೌಟ್‌ ಥ್ರೋ, ಸಂಭ್ರಮಾಚರಣೆ ವಿಡಿಯೋ ವೈರಲ್‌

    ಮುಲ್ಲಾನ್‌ಪುರ: ಪಂಜಾಬ್‌ ಕಿಂಗ್ಸ್‌ (Punjb Kings) ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) 7 ವಿಕೆಟ್‌ಗಳ ಜಯ ಸಾಧಿಸಿದೆ. ಅತ್ಯುತ್ತಮವಾಗಿ ಬ್ಯಾಟ್‌ ಬೀಸಿದ ಕೊಹ್ಲಿ (Virat Kohli) ಅವರಿಗೆ ಪಂದ್ಯಶ್ರೇಷ್ಠ ಗೌರವ ಸಿಕ್ಕಿದೆ. ಈಗ ಈ ಪಂದ್ಯದಲ್ಲಿ ಕೊಹ್ಲಿ ರನೌಟ್‌ ಥ್ರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗಿದೆ.

    ಸುಯಶ್ ಶರ್ಮಾ ಎಸೆದ 9ನೇ ಓವರ್‌ನ ಕೊನೆಯ ಎಸೆತವನ್ನು ಜೋಸ್‌ ಇಂಗ್ಲಿಸ್‌ ಲಾಂಗ್‌ ಆನ್‌ ಕಡೆ ಹೊಡೆದರು. ಎರಡು ರನ್‌ ತೆಗೆಯಬಹುದಾದ ಕಾರಣ ವಧೇರಾ ಎರಡು ರನ್‌ ಓಡಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಬೌಂಡರಿ ಬಳಿ ಬಾಲ್‌ ತಡೆದ ಟಿಮ್‌ ಡೇವಿಡ್‌ (Tim David) ಬೌಲರ್‌ ಕಡೆ ಚೆಂಡನ್ನು ಎಸೆದರು. ಇದನ್ನೂ ಓದಿ: ಚಿನ್ನದ ಬೆಲೆ ಗಗನಕ್ಕೆ – ಮಾರುಕಟ್ಟೆ ಏರಿಳಿತದ ನಡುವೆಯೂ ನೆಚ್ಚಿನ ಹೂಡಿಕೆಯಾಗಲು ಕಾರಣವೇನು?


    ಬಾಲ್‌ ಬೌಲರ್‌ ಕಡೆ ಬರುತ್ತಿದ್ದಾಗ ವಧೇರಾ ಅವರು ಎರಡು ರನ್‌ ಪೂರ್ಣಗೊಳಿಸಲು ನಾನ್‌ ಸ್ಟ್ರೈಕ್‌ ಕಡೆ ಬರುತ್ತಿದ್ದರು. ಆದರೆ ನಾನ್‌ಸ್ಟ್ರೈಕ್‌ನಲ್ಲಿ ಇಂಗ್ಲಿಷ್‌ ಎರಡು ರನ್‌ ಓಡಲು ಮನಸ್ಸು ಮಾಡಿರಲಿಲ್ಲ. ಈ ವೇಳೆ ಬೌಲರ್‌ ಎಂಡ್‌ ಬಳಿ ಚೆಂಡನ್ನು ಹಿಡಿದ ಕೊಹ್ಲಿ ಕೀಪರ್‌ ಜಿತೇಶ್‌ ಶರ್ಮಾಗೆ ಥ್ರೋ ಮಾಡಿದರು, ವಧೇರಾ ರನೌಟ್‌ ಆದರು. ಇದನ್ನೂ ಓದಿ: ಕೊಹ್ಲಿ, ಪಡಿಕ್ಕಲ್‌ ಮಿಂಚು- ‘ಕಿಂಗ್ಸ್‌’ ವಿರುದ್ಧ ಸೇಡು ತೀರಿಸಿಕೊಂಡ ಆರ್‌ಸಿಬಿ

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿ ಪಂಜಾಬ್‌ ಕಿಂಗ್ಸ್‌ 6 ವಿಕೆಟ್‌ ನಷ್ಟಕ್ಕೆ 159 ರನ್‌ ಗಳಿಸಿತು. ಸುಲಭದ ಸವಾಲನ್ನು ಬೆನ್ನಟ್ಟಿದ ಬೆಂಗಳೂರು ಇನ್ನೂ 7 ಎಸೆತ ಬಾಕಿ ಇರುವಂತೆಯೇ 3 ವಿಕೆಟ್‌ ನಷ್ಟಕ್ಕೆ 159 ರನ್‌ ಹೊಡೆದು ಜಯಗಳಿಸಿತು.

    ವಿರಾಟ್‌ ಕೊಹ್ಲಿ ಅಜೇಯ 73 ರನ್‌ (54 ಎಸೆತ, 7 ಬೌಂಡರಿ, 1 ಸಿಕ್ಸ್‌) ದೇವದತ್‌ ಪಡಿಕ್ಕಲ್‌ 61 ರನ್‌(35 ಎಸೆತ, 5 ಬೌಂಡರಿ, 4 ಸಿಕ್ಸ್‌) ಹೊಡೆದರು.

     

  • ಕೊಹ್ಲಿ, ಪಡಿಕ್ಕಲ್‌ ಮಿಂಚು- ‘ಕಿಂಗ್ಸ್‌’ ವಿರುದ್ಧ ಸೇಡು ತೀರಿಸಿಕೊಂಡ ಆರ್‌ಸಿಬಿ

    ಕೊಹ್ಲಿ, ಪಡಿಕ್ಕಲ್‌ ಮಿಂಚು- ‘ಕಿಂಗ್ಸ್‌’ ವಿರುದ್ಧ ಸೇಡು ತೀರಿಸಿಕೊಂಡ ಆರ್‌ಸಿಬಿ

    – ಆರ್‌ಸಿಬಿಗೆ 7 ವಿಕೆಟ್‌ಗಳ ಜಯ

    ಮೊಹಲಿ: ವಿರಾಟ್‌ ಕೊಹ್ಲಿ (Virat Kohli), ದೇವದತ್‌ ಪಡಿಕ್ಕಲ್‌ ಅಮೋಘ ಡಬಲ್‌ ಫಿಫ್ಟಿ ಆಟಕ್ಕೆ ಪಂಜಾಬ್‌ ಕಿಂಗ್ಸ್‌ (PBKS) ಸೋತು ಶರಣಾಯಿತು. ಕಿಂಗ್ಸ್‌ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಆರ್‌ಸಿಬಿ (RCB) ತವರಿನ ಸೋಲಿಗೆ ಸೇಡು ತೀರಿಸಿಕೊಂಡಿದೆ.

    ಮೊಹಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಪಂಜಾಬ್‌ ಮೊದಲು ಬ್ಯಾಟಿಂಗ್‌ ಮಾಡಿ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 157 ರನ್‌ ಗಳಿಸಿತು. 157 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ 18.5 ಓವರ್‌ಗೆ 3 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿ ಗೆದ್ದು ಬೀಗಿತು.

    ಮೊದಲು ಬ್ಯಾಟಿಂಗ್‌ ಮಾಡಿದ್ದ ಶ್ರೇಯಸ್‌ ಪಡೆ ಉತ್ತಮ ಆರಂಭ ಪಡೆದುಕೊಂಡಿತ್ತು. ಪ್ರಿಯಾಂಶ್ ಆರ್ಯ, ಪ್ರಭಸಿಮ್ರನ್ ಸಿಂಗ್ ಭರವಸೆ ಮೂಡಿಸಿದ್ದರು. ತಂಡದ ಮೊತ್ತ 42 ರನ್‌ ಇದ್ದಾಗ ಮೊದಲ ವಿಕೆಟ್‌ ಬಿದ್ದಿತು. 22 ರನ್‌ ಗಳಿಸಿ ಆರ್ಯ ಔಟಾದರು. ಇವರ ಬೆನ್ನಲ್ಲೇ ಸಿಂಗ್‌ ಕೂಡ (33) ವಿಕೆಟ್‌ ಒಪ್ಪಿಸಿ ಹೊರ ನಡೆದರು. ಇವರ ಬಳಿಕ ಆರ್‌ಸಿಬಿ ಬೌಲರ್‌ಗಳು ಸಾಲು ಸಾಲು ವಿಕೆಟ್‌ ಉರುಳಿಸಿದರು.

    ಕ್ಯಾಪ್ಟನ್‌ ಶ್ರೇಯಸ್‌ ಅಯ್ಯರ್‌ ಕೇವಲ 6 ರನ್‌ಗೆ ಔಟಾಗಿ ನಿರಾಸೆ ಮೂಡಿಸಿದರು. ಜೋಶ್‌ ಇಂಗ್ಲಿಸ್‌ 29, ಶಶಾಂಕ್‌ ಸಿಂಗ್‌ 31, ಮಾರ್ಕೊ ಜಾನ್ಸೆನ್‌ 25 ರನ್‌ ಗಳಿಸಿದರು. ಉಳಿದ ಬ್ಯಾಟರ್‌ಗಳು ಕಳಪೆ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಪರಿಣಾಮವಾಗಿ ಪಂಜಾಬ್‌ 157 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು. ಆರ್‌ಸಿಬಿ ಪರ ಕೃಣಾಲ್‌ ಪಾಂಡ್ಯ, ಸುಯಶ್ ಶರ್ಮಾ ತಲಾ 2 ವಿಕೆಟ್‌ ಪಡೆದರು.

    ಪಂಜಾಬ್‌ ನೀಡಿದ ಸಾಧಾರಣ ಗುರಿ ಬೆನ್ನತ್ತಿದ ಆರ್‌ಸಿಬಿಗೆ ಆರಂಭಿಕ ಆಘಾತ ಎದುರಾಯಿತು. ಫಾರ್ಮ್‌ನಲ್ಲಿರುವ ಓಪನರ್‌ ಫಿಲ್‌ ಸಾಲ್ಟ್‌ ಕೇವಲ 1 ರನ್‌ಗೆ ಔಟಾಗಿದ್ದು, ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಯಿತು. ಈ ನಡುವೆ ಜವಾಬ್ದಾರಿಯುತ ಆಟವಾಡಿದ ವಿರಾಟ್‌ ಕೊಹ್ಲಿ ಮತ್ತು ದೇವದತ್‌ ಪಡಿಕ್ಕಲ್‌ ಜೋಡಿ ಕಿಂಗ್ಸ್‌ ಬೌಲರ್‌ಗಳನ್ನು ಬೆಂಡೆತ್ತಿತು. ಪಡಿಕ್ಕಲ್‌ 35 ಬಾಲ್‌ಗೆ 5 ಫೋರ್‌, 4 ಸಿಕ್ಸರ್‌ನೊಂದಿಗೆ 61 ರನ್‌ ಗಳಿಸಿದರು. ಕೊಹ್ಲಿ ಬೌಟಾಗದೇ 54 ಬಾಲ್‌ಗೆ 7 ಫೋರ್‌, 1 ಸಿಕ್ಸರ್‌ನೊಂದಿಗೆ 73 ರನ್‌ ಬಾರಿಸಿದರು. ಈ ಜೋಡಿ 69 ಬಾಲ್‌ಗೆ 103 ರನ್‌ಗಳ ಅಮೋಘ ಜೊತೆಯಾಟವಾಡಿತು.

    ರಜತ್‌ ಪಾಟೀದಾರ್‌ 12, ಜಿತೇಶ್‌ ಶರ್ಮಾ 11 (ಔಟಾಗದೇ) ರನ್‌ ಗಳಿಸಿದರು. ಅಂತಿಮವಾಗಿ ಆರ್‌ಸಿಬಿ 18.5 ಓವರ್‌ಗೆ 3 ವಿಕೆಟ್‌ ನಷ್ಟಕ್ಕೆ 159 ರನ್‌ ಗಳಿಸಿ ಗೆಲುವು ದಾಖಲಿಸಿತು.

  • ಇಂದು ಆರ್‌ಸಿಬಿ-ಪಂಜಾಬ್‌ ಮುಖಾಮುಖಿ – ಸೇಡು ತೀರಿಸಿಕೊಳ್ಳಲು ಬೆಂಗಳೂರು ರಣಕಲಿಗಳ ಕಾತರ!

    ಇಂದು ಆರ್‌ಸಿಬಿ-ಪಂಜಾಬ್‌ ಮುಖಾಮುಖಿ – ಸೇಡು ತೀರಿಸಿಕೊಳ್ಳಲು ಬೆಂಗಳೂರು ರಣಕಲಿಗಳ ಕಾತರ!

    ಮಲ್ಲನ್‌ಪುರ್‌: ಸೂಪರ್‌ ಸಂಡೇ ಇಂದು ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿದೆ. ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸೋಲಿನ ಸರಪಣಿ ಮತ್ತೆ ಮುಂದುವರಿದಿದೆ. ಶುಕ್ರವಾರ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ ನಡೆದ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಸೋಲು ಅನುಭವಿಸುವ ಮೂಲಕ ತವರಿನಲ್ಲಿ ಹ್ಯಾಟ್ರಿಕ್‌ ಸೋಲು ಕಂಡ ಆರ್‌ಸಿಬಿ ಇಂದು ಪಂಜಾಬ್‌ಗೆ ತವರಿನಲ್ಲೇ ಬಗ್ಗು ಬಡಿಯಲು ಕಾತರದಿಂದ ಕಾಯುತ್ತಿದೆ.

    18ನೇ ಆವೃತ್ತಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ 3ನೇ ಬಾರಿಗೆ ಪರಾಭವಗೊಂಡಿದೆ. ಹೀಗಾಗಿ 3ನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4ನೇ ಸ್ಥಾನಕ್ಕೆ ಕುಸಿದಿದೆ. ಇನ್ನು 4ನೇ ಸ್ಥಾನದಲ್ಲಿದ್ದ ಪಂಜಾಬ್ ಕಿಂಗ್ಸ್ ಆಡಿರುವ 7 ಪಂದ್ಯಗಳ ಪೈಕಿ 5 ಗೆಲುವಿನೊಂದಿಗೆ 10 ಅಂಕ ಪಡೆದು 2ನೇ ಸ್ಥಾನಕ್ಕೆ ಜಿಗಿದಿದೆ. ಇದನ್ನೂ ಓದಿ: ʻಈ ಸಲ ಕಪ್‌ ನಮ್ದೇʼ ಅಂತ ಹೇಳಬೇಡಿ, ಹೇಳಿದಾಗೆಲ್ಲ ತೊಂದ್ರೆ ಆಗುತ್ತೆ: ಅನಿಲ್‌ ಕುಂಬ್ಳೆ

    Punjab Kings 2

    ಆರ್‌ಸಿಬಿ ಸೋಲಿಗೆ ಮಳೆ ಕಾರಣವೇ?
    ಶುಕ್ರವಾರದ ಮಳೆಯಿಂದಾಗಿ ಅಚಡಣೆಗೊಳಗಾದ ಪಂದ್ಯವನ್ನು 14 ಓವರ್‌ಗೆ ಸೀಮಿತಗೊಳಿಸಲಾಗಿತ್ತು. ಆದಾಗ್ಯೂ ಟಿಮ್‌ ಡೇವಿಡ್‌ (Tim David) ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಆರ್‌ಸಿಬಿ ನೀಡಿದ್ದ 96 ರನ್‌ಗಳ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡ ಇನ್ನೂ 11 ಎಸೆತಗಳು ಬಾಕಿ ಉಳಿದಿರುವಂತೆ 5 ವಿಕೆಟ್ ಕಳೆದುಕೊಂಡು ತಲುಪಿತು. ಇದನ್ನೂ ಓದಿ: ಕಾಫಿ ತೋಟದ ಸೊಬಗಿಗೆ ಮಾರುಹೋದ ಬ್ಯಾಡ್ಮಿಂಟರ್ ತಾರೆ – ಪಿವಿ ಸಿಂಧುಗೆ ಕೊಡಗಿನಲ್ಲಿ ಕಾಫಿ ತೋಟ ಖರೀದಿಸುವಾಸೆ!

    ಪಂಜಾಬ್ ತಂಡದ ಮೊದಲೆರಡು ವಿಕೆಟ್‌ಗಳು 32 ರನ್ ಗಳಿಗೆ ಉರುಳಿದಾಗ ಆರ್‌ಸಿಬಿ ಗೆಲುವಿನ ಆಸೆಯಲ್ಲಿತ್ತು. ಬಳಿಕ 53 ರನ್ ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಾಗಲೂ ಗೆಲ್ಲುವ ಅವಕಾಶವಿತ್ತು. ಆದರೆ ಅಂತಿಮ ಹಂತದಲ್ಲಿ ನೇಹಾಲ್ ವಧೇರಾ ಕೇವಲ 19 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಗಳನ್ನೊಳಗೊಂಡ ಅಜೇಯ 33 ರನ್ ಗಳಿಸಿ ತಂಡವನ್ನು ಗೆಲುವಿನ ದಡ ತಲುಪಿಸಿದರು. ಆರ್‌ಸಿಬಿ ಪರ ಜೋಶ್ ಹೇಜಲ್ವುಡ್ 3 ವಿಕೆಟ್ ಮತ್ತು ಭುವನೇಶ್ವರ್ ಕುಮಾರ್ 2 ವಿಕೆಟ್ ಕಬಳಿಸಿದ್ದರು. ಇನ್ನೂ ಸ್ಫೋಟಕ ಪ್ರದರ್ಶನ ನೀಡಿ, 2 ಕ್ಯಾಚ್‌ ಪಡೆದಿದ್ದ ಆರ್‌ಸಿಬಿ ಟಿಂ ಡೇವಿಡ್‌ಗೆ ತಂಡ ಸೋತ ಹೊರತಾಗಿಯೂ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಇದನ್ನೂ ಓದಿ: ಡ್ರೆಸ್ಸಿಂಗ್‌ ರೂಮ್‌ ಮಾಹಿತಿ ಲೀಕ್‌ – ಗಂಭೀರ್‌ ಆಪ್ತ ಸೇರಿ ನಾಲ್ವರು ಕೋಚಿಂಗ್‌ ಸಿಬ್ಬಂದಿಯನ್ನ ಕಿತ್ತೆಸೆದ ಬಿಸಿಸಿಐ

  • ತವರಿನಲ್ಲಿ ಆರ್‌ಸಿಬಿಗೆ ಹ್ಯಾಟ್ರಿಕ್‌ ಸೋಲು – ಬೆಂಗಳೂರಿನಲ್ಲಿ ಪಂಜಾಬ್‌ ಕಿಂಗ್‌

    ತವರಿನಲ್ಲಿ ಆರ್‌ಸಿಬಿಗೆ ಹ್ಯಾಟ್ರಿಕ್‌ ಸೋಲು – ಬೆಂಗಳೂರಿನಲ್ಲಿ ಪಂಜಾಬ್‌ ಕಿಂಗ್‌

    ಬೆಂಗಳೂರು: ತವರಿನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ (RCB) ಹ್ಯಾಟ್ರಿಕ್‌ ಸೋಲಾಗಿದೆ. ಮಳೆಯ (Rain) ಆಟದಲ್ಲಿ ಆರ್‌ಸಿಬಿ ವಿರುದ್ಧ ಪಂಜಾಬ್‌ ಕಿಂಗ್ಸ್‌ (Punjab Kings) 5 ವಿಕೆಟ್‌ಗಳ ಜಯ ಗಳಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಏರಿದೆ.

    ಮಳೆಯಿಂದಾಗಿ 7:30ಕ್ಕೆ ಆರಂಭವಾಗಿದ್ದ ಪಂದ್ಯ 2 ಗಂಟೆ ತಡವಾಗಿ 9:30ಕ್ಕೆ ಆರಂಭವಾಯಿತು. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ಆರಂಭದಲ್ಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತ್ತು. ಕೊನೆಯಲ್ಲಿ ಟಿಮ್‌ ಡೇವಿಡ್‌ (Tim David) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಆರ್‌ಸಿಬಿ 9 ವಿಕೆಟ್‌ ನಷ್ಟಕ್ಕೆ 95 ರನ್‌ ಹೊಡೆಯಿತು.

    ಸುಲಭದ ಸವಾಲನ್ನು ಬೆನ್ನಟ್ಟಿದ ಪಂಜಾಬ್‌ 12.1  ಓವರ್‌ಗಳಲ್ಲಿ 5  ವಿಕೆಟ್‌ ನಷ್ಟಕ್ಕೆ 98 ರನ್‌ ಹೊಡೆದು ಜಯಗಳಿಸಿತು. ಈ ಮೊದಲು ಗುಜರಾತ್‌ ಟೈಟಾನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಪಂದ್ಯವನ್ನು ಸೋತಿತ್ತು. ಈಗ ಮತ್ತೆ ತವರಿನಲ್ಲಿ ರಾಜಸ್ಥಾನದ ವಿರುದ್ಧ ಸೋತಿದೆ. ಇದನ್ನೂ ಓದಿ: ʻಈ ಸಲ ಕಪ್‌ ನಮ್ದೇʼ ಅಂತ ಹೇಳಬೇಡಿ, ಹೇಳಿದಾಗೆಲ್ಲ ತೊಂದ್ರೆ ಆಗುತ್ತೆ: ಅನಿಲ್‌ ಕುಂಬ್ಳೆ

    ಪಂಜಾಬ್‌ ಪರ ನೆಹಾಲ್ ವಧೇರಾ ಔಟಾಗದೇ 33 ರನ್‌ (19 ಎಸೆತ, 3 ಬೌಂಡರಿ, 3 ಸಿಕ್ಸ್‌) ಪ್ರಿಯಾಂಶ್‌ ಆರ್ಯ 16 ರನ್‌, ಪ್ರಭುಸಿಮ್ರಾನ್‌ಸಿಂಗ್‌ 13 ರನ್‌ ಹೊಡೆದು ಜಯವನ್ನು ತಂದುಕೊಟ್ಟರು.

    ಆರ್‌ಸಿಬಿ ಪರ ಸಾಲ್ಟ್‌ 4 ರನ್‌, ಕೊಹ್ಲಿ 1 ರನ್‌, ನಾಯಕ ಪಾಟೀದರ್‌ 23 ರನ್‌ (18 ಎಸೆತ, 1 ಬೌಂಡರಿ, 1 ಸಿಕ್ಸ್‌ ) ಹೊಡೆದು ಔಟಾದರು.

    63 ರನ್‌ಗಳಿಗೆ 9 ವಿಕೆಟ್‌ ಕಳೆದುಕೊಂಡಿದ್ದರೂ ಕೊನೆಯಲ್ಲಿ ಡೇವಿಡ್‌ ಔಟಾಗದೇ ಸ್ಫೋಟಕ 50 ರನ್‌ (26 ಎಸೆತ, 5 ಬೌಂಡರಿ, 3 ಸಿಕ್ಸ್‌) ಹೊಡೆದು ತಂಡದ ಮೊತ್ತವನ್ನು 90 ರನ್‌ಗಳ ಗಡಿಯನ್ನು ದಾಟಿಸಿದರು.

    ಆರ್ಶ್‌ದೀಪ್‌ ಸಿಂಗ್‌, ಜಾನ್‌ಸೆನ್‌ ಚಹಲ್‌, ಹರ್‌ಪ್ರೀತ್‌ ಬಾರ್‌ ತಲಾ 2 ವಿಕೆಟ್‌ ಪಡೆದರು.