Tag: rcb

  • ಸನ್‌ ರೈಸರ್ಸ್‌ ಆರ್ಭಟಕ್ಕೆ ಆರ್‌ಸಿಬಿ ಬರ್ನ್‌ – ಹೈದರಾಬಾದ್‌ಗೆ 42 ರನ್‌ಗಳ ಜಯ, 3ನೇ ಸ್ಥಾನಕ್ಕೆ ಕುಸಿದ ಬೆಂಗಳೂರು

    ಸನ್‌ ರೈಸರ್ಸ್‌ ಆರ್ಭಟಕ್ಕೆ ಆರ್‌ಸಿಬಿ ಬರ್ನ್‌ – ಹೈದರಾಬಾದ್‌ಗೆ 42 ರನ್‌ಗಳ ಜಯ, 3ನೇ ಸ್ಥಾನಕ್ಕೆ ಕುಸಿದ ಬೆಂಗಳೂರು

    ಲಕ್ನೋ: ಸಂಘಟಿತ ಬೌಲಿಂಗ್‌, ಬ್ಯಾಟಿಂಗ್‌ ಪ್ರದರ್ಶನದ ನೆರವಿನಿಂದ ಸನ್‌ ರೈಸರ್ಸ್‌ ಹೈದರಾಬಾದ್‌ (SRH) ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ವಿರುದ್ಧ 42 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಆರ್‌ಸಿಬಿ 3ನೇ ಸ್ಥಾನಕ್ಕೆ ಕುಸಿದಿದೆ. 12 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 17 ಅಂಕ ಗಳಿಸಿರುವ ಪಂಜಾಬ್‌ ಕಿಂಗ್ಸ್‌ 2ನೇ ಸ್ಥಾನಕ್ಕೆ ಜಿಗಿದಿದೆ.

    ಗೆಲುವಿಗೆ 232 ರನ್‌ಗಳ ಬೃಹತ್‌ ಗುರಿ ಪಡೆದಿದ್ದ ಆರ್‌ಸಿಬಿ ಆರಂಭದಿಂದಲೇ ಕೌಂಟರ್‌ ಅಟ್ಯಾಕ್‌ ಮಾಡಲು ಶುರು ಮಾಡಿತ್ತು. ವಿರಾಟ್‌ ಕೊಹ್ಲಿ-ಫಿಲ್‌ ಸಾಲ್ಟ್‌ (Virat Kohli-Phil Salt) ಅವರ ಆರಂಭಿಕ ಜೊತೆಯಾಟದಿಂದ 43 ಎಸೆತಗಳಲ್ಲಿ 80 ರನ್‌ ತಂಡಕ್ಕೆ ಸೇರ್ಪಡೆಯಾಯಿತು. ಈ ಬೆನ್ನಲ್ಲೇ ಮಯಾಂಕ್‌ ಅಗರ್ವಾಲ್‌ ಫಿಲ್‌ ಸಾಲ್ಟ್‌ ಜೋಡಿ 2ನೇ ವಿಕೆಟಿಗೆ 22 ಎಸೆತಗಳಲ್ಲಿ 40 ರನ್‌ ಕಲೆಹಾಕಿತ್ತು. 4ನೇ ವಿಕೆಟಿಗೆ ಜಿತೇಶ್‌ ಶರ್ಮಾ, ರಜತ್‌ ಪಾಟಿದಾರ್‌ ಜೋಡಿ 26 ಎಸೆತಗಳಲ್ಲಿ 44 ರನ್‌ ಕಲೆಹಾಕಿತ್ತು.

    ಟರ್ನಿಂಗ್‌ ಸಿಕ್ಕಿದ್ದೆಲ್ಲಿ?
    ಒಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಿದ್ದ ಹೊರತಾಗಿಯೂ ಸ್ಫೋಟಕ ಪ್ರದರ್ಶನ ನೀಡುತ್ತಿದ್ದ ಆರ್‌ಸಿಬಿ 14 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 163 ರನ್‌ ಗಳಿಸಿತ್ತು. ಇದರಿಂದ ಗೆಲುವು ಸುಲಭ ಎಂದೇ ಭಾವಿಸಲಾಗಿತ್ತು. ಆದ್ರೆ 15-16ನೇ ಓವರ್‌ ದುಬಾರಿಯಾಯಿತು. 15ನೇ ಓವರ್‌ ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ ನಿತೀಶ್‌ ಕುಮಾರ್‌ ರೆಡ್ಡಿ ಕೇವಲ 4 ರನ್‌ ಬಿಟ್ಟುಕೊಟ್ಟರು. 16ನೇ ಓವರ್‌ನಲ್ಲಿ ಎಶಾನ್ ಮಾಲಿಂಗ 7 ರನ್‌ ಬಿಟ್ಟುಕೊಟ್ಟು 2 ಪ್ರಮುಖ ವಿಕೆಟ್‌ ಕಿತ್ತರು. ಮುಂದಿನ 17, 18ನೇ ಓವರ್‌ನಲ್ಲೂ ಆರ್‌ಸಿಬಿ ತಲಾ ಒಂದೊಂದು ಪ್ರಮುಖ ವಿಕೆಟ್‌ ಕಳೆದುಕೊಂಡಿತು. ಹೀಗಾಗಿ ಗೆಲುವಿನ ಓಟದಲ್ಲಿ ಮುನ್ನುಗ್ಗುತ್ತಿದ್ದ ಆರ್‌ಸಿಬಿ ಸೋಲಿನ ರುಚಿ ಕಂಡಿತು.

    ಆರ್‌ಸಿಬಿ ಪರ ಫಿಲ್‌ ಸಾಲ್ಟ್‌ 62 ರನ್‌ (32 ಎಸೆತ, 5 ಸಿಕ್ಸರ್‌, 4 ಬೌಂಡರಿ), ವಿರಾಟ್‌ ಕೊಹ್ಲಿ 43 ರನ್‌ (25 ಎಸೆತ, 1 ಸಿಕ್ಸರ್‌, 7 ಬೌಂಡರಿ), ರಜತ್‌ ಪಾಟಿದಾರ್‌ 18 ರನ್‌, ಜಿತೇಶ್‌ ಶರ್ಮಾ 24 ರನ್‌, ಮಯಾಂಕ್‌ ಅಗರ್ವಾಲ್‌ 11 ರನ್‌, ಟಿಮ್‌ ಡೇವಿಡ್‌ 1 ರನ್‌, ಭುವನೇಶ್ವರ್‌ ಕುಮಾರ್‌, ಯಶ್‌ ದಯಾಳ್‌ ತಲಾ 3 ರನ್‌, ಕೃನಾಲ್‌ ಪಾಂಡ್ಯ 8 ರನ್‌ ಗಳಿಸಿ ಔಟಾದರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿತ್ತು. ಮೊದಲ ಓವರ್‌ನಿಂದಲೇ ಸ್ಪೋಟಕ ಪ್ರದರ್ಶನ ನೀಡಲು ಮುಂದಾದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮೊದಲ ವಿಕೆಟ್‌ಗೆ 25 ಎಸೆತಗಳಲ್ಲಿ 54 ರನ್ ಜೊತೆಯಾಟ ನೀಡಿತ್ತು. ಅತ್ತ ಅಭಿಷೇಕ್ ಶರ್ಮಾ 17 ಎಸೆತಗಳಲ್ಲಿ 34 ರನ್ ಗಳಿಸಿ ಔಟಾಗುತ್ತಿದ್ದಂತೆ ಇತ್ತ ಟ್ರಾವಿಸ್ ಹೆಡ್ ಕೂಡ 10 ಎಸೆತಗಳಲ್ಲಿ 17 ರನ್ ಬಾರಿಸಿ ಪೆವಿಲಿಯನ್‌ಗೆ ಮರಳಿದರು.

    3ನೇ ವಿಕೆಟ್‌ಗೆ ಇಶಾನ್ ಕಿಶನ್ ಮತ್ತು ಕ್ಲಾಸೆನ್ ಜೋಡಿ 27 ಎಸೆತಗಳಲ್ಲಿ 48 ರನ್, 4ನೇ ವಿಕೆಟಿಗೆ ಕಿಶನ್-ಅನಿಕೇತ್ ವರ್ಮಾ ಜೋಡಿ 17 ಎಸೆತಗಳಲ್ಲಿ ಸ್ಫೋಟಕ 43 ರನ್ ಚಚ್ಚಿ ತಂಡದ ಮೊತ್ತ ಹೆಚ್ಚಿಸಿತು. ಇನ್ನೂ ಕೊನೆಯಲ್ಲಿ ನ್ಯಾಯಕ ಪ್ಯಾಟ್ ಕಮ್ಮಿನ್ಸ್ ಹಾಗೂ ಇಶಾನ್ ಕಿಶನ್ ಜೋಡಿ ಕೇವಲ 18 ಎಸೆತಗಳಲ್ಲಿ 43 ರನ್ ಚಚ್ಚಿ ತಂಡದ ಮೊತ್ತವನ್ನು 200 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾಯಿತು. ಹೈದರಾಬಾದ್ ಪರ 195.83 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಇಶಾನ್ ಕಿಶನ್ ಅಜೇಯ 94 ರನ್ (48 ಎಸೆತ, 5 ಸಿಕ್ಸರ್, 7 ಬೌಂಡರಿ) ಚಚ್ಚಿದ್ರೆ , ಅಭಿಷೇಕ್ ಶರ್ಮಾ 34 ರನ್, ಟ್ರಾವಿಸ್ ಹೆಡ್ 17 ರನ್, ಹೆನ್ರಿಕ್ ಕ್ಲಾಸೆನ್ 24 ರನ್, ಅನಿಕೇತ್ ವರ್ಮಾ 26 ರನ್, ಅಭಿನವ್ ಮನೋಹರ್ 12 ರನ್, ಪ್ಯಾಟ್ ಕಮ್ಮಿನ್ಸ್ ಅಜೇಯ 13 ರನ್ ಗಳಿಸಿದರು.

    ಇನ್ನೂ ಆರ್‌ಸಿಬಿ ಪರ ರೊಮಾರಿಯೊ ಶೆಫರ್ಡ್ 2 ವಿಕೆಟ್ ಕಿತ್ತರೆ, ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ, ಸುಯಶ್ ಶರ್ಮಾ, ಕೃನಾಲ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.

  • ಅಭಿಷೇಕ್‌ ಶರ್ಮಾ ಹೊಡೆದ ಸಿಕ್ಸ್‌ಗೆ ಕಾರಿನ ಗ್ಲಾಸ್‌ ಪುಡಿ.. ಪುಡಿ.. – 5 ಲಕ್ಷ ನಷ್ಟ

    ಅಭಿಷೇಕ್‌ ಶರ್ಮಾ ಹೊಡೆದ ಸಿಕ್ಸ್‌ಗೆ ಕಾರಿನ ಗ್ಲಾಸ್‌ ಪುಡಿ.. ಪುಡಿ.. – 5 ಲಕ್ಷ ನಷ್ಟ

    ಲಕ್ನೋ: ಆರ್‌ಸಿಬಿ (Royal Challengers Bengaluru) ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಆಟಗಾರ ಅಭಿಷೇಕ್‌ ಶರ್ಮಾ (Abhishek Sharma) ಎಂದಿನಂತೆ ಸ್ಫೋಟಕ ಪ್ರದರ್ಶನವನ್ನೇ ನೀಡಿದರು. ಈ ವೇಳೆ ಅಭಿ ಹೊಡೆದ ಸಿಕ್ಸ್‌ವೊಂದು ಪ್ರಮೋಷನ್‌ಗಾಗಿ ನಿಲ್ಲಿಸಿದ್ದ ಕಾರಿನ ಗ್ಲಾಸ್‌ಗೆ ಬಡಿದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

    ಆರಂಭಿಕನಾಗಿ ಕಣಕ್ಕಿಳಿದಿದ್ದ ಶರ್ಮಾ ಸಿಕ್ಸರ್‌, ಬೌಂಡರಿ ಬಾರಿಸಲು ಮುಂದಾಗಿದ್ದರು. 17 ಎಸೆತಗಳಲ್ಲಿ 34 ರನ್‌ ಸಿಡಿಸಿದರು. ಅಭಿಷೇಕ್ ಶರ್ಮಾ ಸಿಡಿಸಿದ ಒಂದು ಸಿಕ್ಸರ್ ಕ್ರೀಡಾಂಗಣದಲ್ಲಿ ನಿಲ್ಲಿಸಿದ್ದ ಟಾಟಾ ಕಾರಿನ ಗಾಜನ್ನು ಒಡೆದಿದೆ. ಇದರಿಂದ ಐಪಿಎಲ್‌ ಪ್ರಾಯೋಜಕ ಸಂಸ್ಥೆಗೆ 5 ಲಕ್ಷ ರೂ. ನಷ್ಟವಾಗಿದೆ. ಇದನ್ನೂ ಓದಿ: ಇಶಾನ್‌ ಕಿಶನ್‌ ಸಿಡಿಲಬ್ಬರದ ಬ್ಯಾಟಿಂಗ್‌ – ಆರ್‌ಸಿಬಿ ಗೆಲುವಿಗೆ 232 ರನ್‌ಗಳ ಕಠಿಣ ಗುರಿ

    ಇನ್ನಿಂಗ್ಸ್‌ನ 2ನೇ ಓವರ್‌ನಲ್ಲಿ ಆರ್‌ಸಿಬಿ ತಂಡದ ಇಂದಿನ ಪಂದ್ಯದ ನಾಯಕ ಜೀತೇಶ್ ಶರ್ಮಾ ಅವರು ಭುವನೇಶ್ವರ್ ಕುಮಾರ್ ಅವರನ್ನು ಬೌಲಿಂಗ್ ಮಾಡಲು ಕರೆತಂದಾಗ ಈ ಘಟನೆ ಸಂಭವಿಸಿತು.

    ಆ ಓವರ್‌ನ 5ನೇ ಎಸೆತದಲ್ಲಿ ಅಭಿಷೇಕ್ ಮಿಡ್‌ವಿಕೆಟ್ ಕಡೆಗೆ ಭರ್ಜರಿ ಸಿಕ್ಸರ್ ಬಾರಿಸಿದರು. ಚೆಂಡು ನೇರವಾಗಿ ಐಪಿಎಲ್ 2025 ಲೀಗ್‌ನ ಪ್ರಾಯೋಜಕರಾದ ಟಾಟಾ ಅವರ ಕಾರಿನ ಮೇಲೆ ಬಿದ್ದಿತು. ಇದರಿಂದಾಗಿ ಕಾರಿನ ಮುಂಭಾಗದ ಗಾಜು ಬಿರುಕು ಬಿಟ್ಟಿದೆ. ಇದನ್ನೂ ಓದಿ: ಮ್ಯಾಥ್ಯೂ ಫೋರ್ಡ್ ಸ್ಫೋಟಕ ಫಿಫ್ಟಿ – ಎಬಿಡಿ ವಿಶ್ವದಾಖಲೆ ಸರಿಗಟ್ಟಿದ ವಿಂಡೀಸ್‌ ಬ್ಯಾಟರ್

    5 ಲಕ್ಷ ರೂ. ದೇಣಿಗೆ ನೀಡಲಿದೆ
    ಐಪಿಎಲ್ 2025 ಪ್ರಾರಂಭವಾಗುವ ಮೊದಲು, ಪಂದ್ಯದ ಸಮಯದಲ್ಲಿ ಬ್ಯಾಟ್ಸ್‌ಮನ್ ಕಾರಿನ ಮೇಲೆ ನೇರವಾಗಿ ಶಾಟ್ ಹೊಡೆದರೆ ಹಣವನ್ನು ದೇಣಿಗೆ ನೀಡುವುದಾಗಿ ಟಾಟಾ ಘೋಷಿಸಿತ್ತು. ಒಂದು ವೇಳೆ ಚೆಂಡು ಕಾರಿಗೆ ತಗುಲಿದರೆ, ಟಾಟಾ ಸಂಸ್ಥೆಯು 5 ಲಕ್ಷ ರೂ. ಗಳನ್ನು ದೇಣಿಗೆ ನೀಡುತ್ತದೆ. ಈ ಮೊತ್ತವನ್ನು ಗ್ರಾಮೀಣ ಕ್ರಿಕೆಟ್ ಅಭಿವೃದ್ಧಿಗಾಗಿ ಟಾಟಾ ಕಾರ್ ದೇಣಿಗೆ ನೀಡಲಿದೆ.

    ಇನ್ನೂ ಆರ್‌ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 231 ರನ್‌ ಸಿಡಿಸಿದೆ.

  • ಇಶಾನ್‌ ಕಿಶನ್‌ ಸಿಡಿಲಬ್ಬರದ ಬ್ಯಾಟಿಂಗ್‌ – ಆರ್‌ಸಿಬಿ ಗೆಲುವಿಗೆ 232 ರನ್‌ಗಳ ಕಠಿಣ ಗುರಿ

    ಇಶಾನ್‌ ಕಿಶನ್‌ ಸಿಡಿಲಬ್ಬರದ ಬ್ಯಾಟಿಂಗ್‌ – ಆರ್‌ಸಿಬಿ ಗೆಲುವಿಗೆ 232 ರನ್‌ಗಳ ಕಠಿಣ ಗುರಿ

    ಲಕ್ನೋ: ಇಶಾನ್‌ ಕಿಶನ್‌ (Ishan Kishan) ಸಿಡಿಲಬ್ಬರದ ಬ್ಯಾಟಿಂಗ್‌ ನೆರವಿನಿಂದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 231 ರನ್‌ ಗಳಿಸಿದೆ. ಈ ಮೂಲಕ ಎದುರಾಳಿ ಆರ್‌ಸಿಬಿಗೆ 232 ರನ್‌ಗಳ ಕಠಿಣ ಗುರಿ ನೀಡಿದೆ.

    ಲಕ್ನೋದ ಏಕನಾ ಕ್ರೀಡಾಂಗಣದಲ್ಲಿಂದು ಜಿತೇಶ್‌ ಶರ್ಮಾ (Jitesh Sharma) ನಾಯಕತ್ವದಲ್ಲಿ ಕಣಕ್ಕಿಳಿದ ಆರ್‌ಸಿಬಿ (RCB) ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿತು. ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಹೈದರಾಬಾದ್‌ ತಂಡಕ್ಕೆ ಬಿಟ್ಟುಕೊಟ್ಟಿತು.

    ಮೊದಲ ಓವರ್‌ನಿಂದಲೇ ಸ್ಪೋಟಕ ಪ್ರದರ್ಶನ ನೀಡಲು ಮುಂದಾದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಮೊದಲ ವಿಕೆಟ್‌ಗೆ 25 ಎಸೆತಗಳಲ್ಲಿ 54 ರನ್‌ ಜೊತೆಯಾಟ ನೀಡಿತ್ತು. ಅತ್ತ ಅಭಿಷೇಕ್‌ ಶರ್ಮಾ 17 ಎಸೆತಗಳಲ್ಲಿ 34 ರನ್‌ ಗಳಿಸಿ ಔಟಾಗುತ್ತಿದ್ದಂತೆ ಇತ್ತ ಟ್ರಾವಿಸ್‌ ಹೆಡ್‌ ಕೂಡ 10 ಎಸೆತಗಳಲ್ಲಿ 17 ರನ್‌ ಬಾರಿಸಿ ಪೆವಿಲಿಯನ್‌ಗೆ ಮರಳಿದರು. ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಏಂಜೆಲೊ ಮ್ಯಾಥ್ಯೂಸ್

    3ನೇ ವಿಕೆಟ್‌ಗೆ ಇಶಾನ್‌ ಕಿಶನ್‌ ಮತ್ತು ಕ್ಲಾಸೆನ್‌ ಜೋಡಿ 27 ಎಸೆತಗಳಲ್ಲಿ 48 ರನ್‌, 4ನೇ ವಿಕೆಟಿಗೆ ಕಿಶನ್‌-ಅನಿಕೇತ್‌ ವರ್ಮಾ ಜೋಡಿ 17 ಎಸೆತಗಳಲ್ಲಿ ಸ್ಫೋಟಕ 43 ರನ್‌ ಚಚ್ಚಿ ತಂಡದ ಮೊತ್ತ ಹೆಚ್ಚಿಸಿತು. ಇನ್ನೂ ಕೊನೆಯಲ್ಲಿ ನ್ಯಾಯಕ ಪ್ಯಾಟ್‌ ಕಮ್ಮಿನ್ಸ್‌ ಹಾಗೂ ಇಶಾನ್‌ ಕಿಶನ್‌ ಜೋಡಿ ಕೇವಲ 18 ಎಸೆತಗಳಲ್ಲಿ 43 ರನ್‌ ಚಚ್ಚಿ ತಂಡದ ಮೊತ್ತವನ್ನು 200 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: IPL 2025 | ಮೋದಿ ಸ್ಟೇಡಿಯಂನಲ್ಲೇ ಫೈನಲ್‌ ಮ್ಯಾಚ್‌

    ಹೈದರಾಬಾದ್‌ ಪರ 195.83 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಇಶಾನ್‌ ಕಿಶನ್‌ ಅಜೇಯ 94 ರನ್‌ (48 ಎಸೆತ, 5 ಸಿಕ್ಸರ್‌, 7 ಬೌಂಡರಿ) ಚಚ್ಚಿದ್ರೆ ,‌ ಅಭಿಷೇಕ್‌ ಶರ್ಮಾ 34 ರನ್‌, ಟ್ರಾವಿಸ್‌ ಹೆಡ್‌ 17 ರನ್‌, ಹೆನ್ರಿಕ್‌ ಕ್ಲಾಸೆನ್‌ 24 ರನ್‌, ಅನಿಕೇತ್‌ ವರ್ಮಾ 26 ರನ್‌, ಅಭಿನವ್‌ ಮನೋಹರ್‌ 12 ರನ್‌, ಪ್ಯಾಟ್‌ ಕಮ್ಮಿನ್ಸ್‌ ಅಜೇಯ 13 ರನ್‌ ಗಳಿಸಿದರು. ಇದನ್ನೂ ಓದಿ: ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಉದ್ಧಟತನ – ಒಂದು ಪಂದ್ಯಕ್ಕೆ ದಿಗ್ವೇಶ್ ಅಮಾನತು, ಭಾರೀ ದಂಡ

    ಇನ್ನೂ ಆರ್‌ಸಿಬಿ ಪರ ರೊಮಾರಿಯೊ ಶೆಫರ್ಡ್‌ 2 ವಿಕೆಟ್‌ ಕಿತ್ತರೆ, ಭುವನೇಶ್ವರ್‌ ಕುಮಾರ್‌, ಲುಂಗಿ ಎನ್‌ಗಿಡಿ, ಸುಯಶ್‌ ಶರ್ಮಾ, ಕೃನಾಲ್‌ ಪಾಂಡ್ಯ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ: ಫ್ಯಾಂಟಸಿ ಕ್ರಿಕೆಟ್‌ನಲ್ಲಿ ಗೆದ್ದ ಅಭಿಮಾನಿಗೆ ಲ್ಯಾಂಬೊರ್ಗಿನಿ ಕಾರು ಗಿಫ್ಟ್‌ ಕೊಟ್ಟ ರೋಹಿತ್‌ ಶರ್ಮಾ

  • IPL 2025 | ಮೋದಿ ಸ್ಟೇಡಿಯಂನಲ್ಲೇ ಫೈನಲ್‌ ಮ್ಯಾಚ್‌

    IPL 2025 | ಮೋದಿ ಸ್ಟೇಡಿಯಂನಲ್ಲೇ ಫೈನಲ್‌ ಮ್ಯಾಚ್‌

    ನವದೆಹಲಿ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಫೈನಲ್ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಕ್ವಾಲಿಫೈಯರ್-2 ಪಂದ್ಯಕ್ಕೂ ಅಹಮದಾಬಾದ್‌ನ ಕ್ರೀಡಾಂಗಣವೇ ಆತಿಥ್ಯ ವಹಿಸಲಿದೆ.

    ಕ್ವಾಲಿಫೈಯರ್-1 ಮತ್ತು ಎಲಿಮೀನೇಟರ್ ಪಂದ್ಯಗಳು ಮುಲ್ಲನ್‌ಪುರದ ಕ್ರೀಡಾಂಗಣದಲ್ಲಿ ಮೇ 29 ಮತ್ತು ಮೇ 30ರಂದು ನಡೆಯಲಿದೆ. ಜೂನ್ 3ಕ್ಕೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

    ಮಳೆಯ ಕಾರಣಕ್ಕೆ ಮೇ 23ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಪಂದ್ಯವನ್ನು ಲಕ್ನೋಗೆ ಸ್ಥಳಾಂತರಿಸಲಾಗಿದೆ.

    ಹಿಂದಿನ ವೇಳಾಪಟ್ಟಿ ಪ್ರಕಾರ, ಕ್ವಾಲಿಫೈಯರ್-1 ಮತ್ತು ಎಲಿಮೀನೆಟರ್ ಪಂದ್ಯಗಳು ಹೈದರಾಬಾದ್‌ನಲ್ಲಿ, ಕ್ವಾಲಿಫೈಯರ್-2 ಮತ್ತು ಫೈನಲ್ ಪಂದ್ಯ ಕೋಲ್ಕತ್ತಾದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷದಿಂದ ಪಂದ್ಯಗಳು ಮುಂದೂಡಲ್ಪಟ್ಟಿದ್ದರಿಂದ ವೇಳಾಪಟ್ಟಿಯಲ್ಲಿ ಪರಿಷ್ಕರಣೆಯಾಗಿದೆ.

    ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್ ಆಡಳಿತ ಮಂಡಳಿಯು ಪ್ಲೇ-ಆಫ್ ಪಂದ್ಯಗಳಿಗೆ ಹೊಸ ಸ್ಥಳಗಳನ್ನು ನಿಗದಿಪಡಿಸಿದೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

  • ಬೆಂಗ್ಳೂರಲ್ಲಿ ಮಳೆ ಕಾಟ – ತವರಿನಲ್ಲಿ ನಡೆಯಬೇಕಿದ್ದ RCB ಕೊನೆಯ ಪಂದ್ಯ ಲಕ್ನೋಗೆ ಶಿಫ್ಟ್

    – ಅಭಿಮಾನಿಗಳಿಗೆ ಭಾರೀ ನಿರಾಸೆ

    ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ (Bengaluru) ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆ ಮೇ 23ರಂದು ತವರು ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ಲೀಗ್ ಸುತ್ತಿನ ಪಂದ್ಯ ಲಕ್ನೋಗೆ ಸ್ಥಳಾಂತರಿಸಲಾಗಿದೆ.

    ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ವರುಣನ ಅಬ್ಬರ ಜೋರಾಗಿದ್ದು, ಮೇ 24ರ ವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಮೇ 23ರಂದು ಆರ್‌ಸಿಬಿ ತನ್ನ ತವರೂರಲ್ಲಿ ಆಡಬೇಕಿದ್ದ ಲೀಗ್‌ನ ಕೊನೆಯ ಪಂದ್ಯ ಸ್ಥಳಾಂತರಗೊಂಡಿದೆ. ಮೇ 23ರಂದು ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ (Ekana Cricket Stadium) ಆರ್‌ಸಿಬಿ (RCB) ಹಾಗೂ ಎಸ್‌ಆರ್‌ಹೆಚ್ (SRH) ತಂಡಗಳು ಮುಖಾಮುಖಿಯಾಗಲಿವೆ.ಇದನ್ನೂ ಓದಿ: ರಾಹುಲ್ ಜೆಟ್‌ ಪ್ರಶ್ನೆಗೆ ಬಿಜೆಪಿ ಪಾಕ್ ಪೋಸ್ಟರ್ – ಬಿರಿಯಾನಿ ತಿಂದವರು ಯಾರು? ಅಂತ ಕಾಂಗ್ರೆಸ್ ಕೌಂಟರ್

    ಮುನ್ನ ಮೇ 17ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಆರ್‌ಸಿಬಿ ಹಾಗೂ ಕೆಕೆಆರ್ ಪಂದ್ಯ ಭಾರೀ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯವನ್ನ ಸ್ಥಳಾಂತರಿಸಲಾಗಿದೆ. ಅಲ್ಲಿಗೆ ತವರು ಕ್ರೀಡಾಂಗಣದಲ್ಲಿ ಆರ್‌ಸಿಬಿ ಈ ಆವೃತ್ತಿಯ ಪಂದ್ಯಗಳನ್ನು ಮುಗಿಸಿದಂತಾಗಿದೆ.

    ಈಗಾಗಲೇ 12 ಪಂದ್ಯಗಳನ್ನಾಡಿರುವ ಆರ್‌ಸಿಬಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 17 ಅಂಕ ಗಳಿಸಿ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿರೋ ಆರ್‌ಸಿಬಿ ನಂ.1 ಪಟ್ಟಕ್ಕಾಗಿ ಹಣಾಹಣಿ ನಡೆಸುತ್ತಿದೆ.ಇದನ್ನೂ ಓದಿ: ಪಂಜಾಬ್‌ನಲ್ಲಿ ಏರೋಸ್ಪೇಸ್ ಎಂಜಿನಿಯರ್ ಸಾವು ಕೇಸ್ – ಪ್ರೊಫೆಸರ್ ಅರೆಸ್ಟ್

  • 18ನೇ ಆವೃತ್ತಿ, ಮೇ 18ರಂದೇ ಪ್ಲೇ-ಆಫ್‌ಗೆ ಎಂಟ್ರಿ – 18ರ ನಂಟು ಮುಂದುವರಿಸಿದ ಆರ್‌ಸಿಬಿ

    18ನೇ ಆವೃತ್ತಿ, ಮೇ 18ರಂದೇ ಪ್ಲೇ-ಆಫ್‌ಗೆ ಎಂಟ್ರಿ – 18ರ ನಂಟು ಮುಂದುವರಿಸಿದ ಆರ್‌ಸಿಬಿ

    ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್‌ನ (IPL 2025) ಲೀಗ್‌ ಸುತ್ತಿನ ಪಂದ್ಯಗಳು ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಸೂಪರ್‌ ಸಂಡೇ ಗುಜರಾತ್‌ ಟೈಟಾನ್ಸ್‌ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 3ನೇ ಬಾರಿಗೆ ಪ್ಲೇ ಆಫ್‌ಗೆ ಎಂಟ್ರಿಕೊಟ್ಟಿತು. ಇದರೊಂದಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಮತ್ತು ಪಂಜಾಬ್‌ ಕಿಂಗ್ಸ್‌ (Punjab Kings) ತಂಡಗಳೂ ಪ್ಲೇ ಆಫ್‌ ಪ್ರವೇಶಿಸಿದವು. ಇನ್ನೂ 10ನೇ ಬಾರಿಗೆ ಐಪಿಎಲ್‌ ಪ್ಲೇ ಆಫ್‌ ಪ್ರವೇಶಿಸಿರುವ ಆರ್‌ಸಿಬಿ ಮೇ 18ರೊಂದಿಗೆ ಹೊಂದಿದ್ದ ನಂಟನ್ನು ಮುಂದುವರಿಸಿದೆ.

    AI Image

    18ರ ಜೊತೆಗೆ ಏಕೆ ವಿಶೇಷ ನಂಟು?
    ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿಗೆ ಮೊದಲ ಬಾರಿ 18ರ ನಂಟು ಶುರುವಾಗಿದ್ದು 2013ರಲ್ಲಿ. ಅಂದು ಆರ್‌ಸಿಬಿ ತಂಡ ಸಿಎಸ್‌ಕೆ ಎದುರು 24 ರನ್‌ಗಳ ಜಯ ದಾಖಲಿಸಿತ್ತು. ವಿರಾಟ್‌ ಕೊಹ್ಲಿ (Virat Kohli) ಆ ಪಂದ್ಯದಲ್ಲಿ 29 ಎಸೆತಗಳಲ್ಲಿ ಅಜೇಯ 56 ರನ್‌ ಸಿಡಿಸಿ ಅಬ್ಬರಿಸಿದ್ದರು. ಬಳಿಕ 2014ರಲ್ಲೂ ಸಿಎಸ್‌ಕೆ ಎದುರು ಮೇ 18ರಂದೇ ನಡೆದ ಪಂದ್ಯದಲ್ಲಿ ಆರ್‌ಸಿಬಿ 5 ವಿಕೆಟ್‌ಗಳ ಜಯ ದಾಖಲಿಸಿತ್ತು. ಆ ಪಂದ್ಯದಲ್ಲೂ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡಿದ್ದರು.

    ಇದರೊಂದಿಗೆ 2016ರ ಮೇ 18ರಂದು ಕಿಂಗ್ಸ್‌ ಪಜಾಬ್‌ ವಿರುದ್ಧ, 2023ರ ಮೇ 18ರಂದು ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧವೂ ಆರ್‌ಸಿಬಿ ಗೆದ್ದಿತ್ತು. 2024ರ ಮೇ 18ರಂದಲೇ ಸಿಎಸ್‌ಕೆ ವಿರುದ್ಧ ನಾಕೌಟ್‌ ಕದನದಲ್ಲಿ ಗೆದ್ದು 18ರ ನಂಟು ಮುಂದುವರಿಸಿತ್ತು. ಇದೀಗ 2025ರ ಐಪಿಎಲ್‌ ಆವೃತ್ತಿಯಲ್ಲೇ ಮೇ 18ರಂದೇ ಪ್ಲೇ ಆಫ್‌ ಪ್ರವೇಶಿಸಿದ್ದು, 18ರ ನಂಟು ಮುಂದುವರಿಸಿದೆ.

    ಈ ಆವೃತ್ತಿ ವಿಶೇಷ ಏಕೆ?
    ಆರ್‌ಸಿಬಿ ಅಭಿಮಾನಿಗಳಿಗೆ ಈ ಬಾರಿಯ ಆವೃತ್ತಿಯ ಅತ್ಯಂತ ವಿಶೇಷವೆನ್ನಿಸಿದೆ. ಏಕೆಂದರೆ ಪ್ರಸಕ್ತ ನಡೆಯುತ್ತಿರುವುದು 18ನೇ ಆವೃತ್ತಿಯ ಐಪಿಎಲ್‌, ಆರ್‌ಸಿಬಿ ಅಭಿಮಾನಿಗಳ ಕೋಟೆ ಕಟ್ಟಿದ ಕೊಹ್ಲಿ ಜೆರ್ಸಿ ಸಂಖ್ಯೆಯೂ 18, ಮೇ 18ರಂದೇ ಪ್ಲೇ ಆಫ್‌ ಪ್ರವೇಶಿಸಿದೆ. ಹೀಗಾಗಿ ಈ ಬಾರಿ ಕಪ್‌ ಗೆದ್ದೇ ಗೆಲ್ಲುತ್ತೆ ಎನ್ನುವ ವಿಶ್ವಾಸ ಅಭಿಮಾನಿಗಳಲ್ಲಿದೆ. ಅದರಲ್ಲೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬಳಿಕ ಕಿಂಗ್‌ ಕೊಹ್ಲಿ ಕಣಕ್ಕಿಳಿಯುತ್ತಿದ್ದು, ಅಭಿಮಾನಿಗಳ ಮುಖ್ಯ ಆಕರ್ಷಣೆಯಾಗಲಿದ್ದಾರೆ.

    ಕೊಹ್ಲಿ ಮೇ 18ರಂದು ನೀಡಿರುವ ಬ್ಯಾಟಿಂಗ್‌ ಪ್ರದರ್ಶನ:
    56* (29) – ಸಿಎಸ್‌ಕೆ ವಿರುದ್ಧ 2013ರಲ್ಲಿ (ಆರ್‌ಸಿಬಿಗೆ ಜಯ)
    27 (29) – ಸಿಎಸ್‌ಕೆ ವಿರುದ್ಧ 2014ರಲ್ಲಿ (ಆರ್‌ಸಿಬಿಗೆ ಜಯ)
    113 (50) – ಪಂಜಾಬ್ ಕಿಂಗ್ಸ್‌ ವಿರುದ್ಧ 2016ರಲ್ಲಿ (ಆರ್‌ಸಿಬಿಗೆ ಜಯ)
    100 (63) – ಎಸ್‌ಆರ್‌ಎಚ್‌ ವಿರುದ್ಧ 2023ರಲ್ಲಿ (ಆರ್‌ಸಿಬಿಗೆ ಜಯ)
    47 (29) – ಸಿಎಸ್‌ಕೆ ವಿರುದ್ಧ 2024ರಲ್ಲಿ (ಆರ್‌ಸಿಬಿಗೆ ಜಯ)
    18ನೇ ಆವೃತ್ತಿಯ ಐಪಿಎಲ್‌ – 10ನೇ ಬಾರಿಗೆ ಪ್ಲೇ ಆಫ್‌ ಪ್ರವೇಶ

    ಚಿನ್ನಸ್ವಾಮಿ ಅಂಗಳದಲ್ಲಿ ನಿರಾಸೆ:
    ಮೇ 17ರಂದು ನಿಗದಿಯಾಗಿದ್ದ ಪಂದ್ಯ ಆರ್‌ಸಿಬಿ ಮತ್ತು ವಿರಾಟ್‌ ಕೊಹ್ಲಿಗೆ ಬಹಳ ವಿಶೇಷವಾಗಿತ್ತು. ಟೆಸ್ಟ್‌ ಕ್ರಿಕೆಟ್‌ ನಿವೃತ್ತಿ ಬಳಿಕ ಕೊಹ್ಲಿ ಆಡಲಿದ್ದ ಮೊದಲ ಪಂದ್ಯ ಅದಾಗಿತ್ತು. ಕೊಹ್ಲಿಯ ಸಾವಿರಾರು ಅಭಿಮಾನಿಗಳು ಸಹ ನಂ.18ರ ಬಿಳಿ ಜೆರ್ಸಿ ಧರಿಸಿ ವಿಶೇಷ ಗೌರವ ಸಲ್ಲಿಸಲು ಕಾದುಕುಳಿತಿದ್ದರು. ಆದ್ರೆ ಅಭಿಮಾನಿಗಳ ಆಸೆಗೆ ಮಳೆ ತಣ್ಣೀರು ಎರಚಿತ್ತು.

  • RCB, ಗುಜರಾತ್‌, ಪಂಜಾಬ್‌ ಪ್ಲೇ-ಆಫ್‌ಗೆ ಎಂಟ್ರಿ – ಡೆಲ್ಲಿ ವಿರುದ್ಧ ನೋ ಲಾಸ್‌ನಲ್ಲಿ ಟೈಟಾನ್ಸ್‌ ಪಾಸ್‌

    RCB, ಗುಜರಾತ್‌, ಪಂಜಾಬ್‌ ಪ್ಲೇ-ಆಫ್‌ಗೆ ಎಂಟ್ರಿ – ಡೆಲ್ಲಿ ವಿರುದ್ಧ ನೋ ಲಾಸ್‌ನಲ್ಲಿ ಟೈಟಾನ್ಸ್‌ ಪಾಸ್‌

    ನವದೆಹಲಿ: 18ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಗುಜರಾತ್‌ ಟೈಟಾನ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಪ್ಲೇ ಆಫ್‌ಗೆ ಲಗ್ಗೆಯಿಟ್ಟಿವೆ. ಇಂದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್‌ 10 ವಿಕೆಟ್‌ಗಳ ಜಯ ಸಾಧಿಸಿದ ಬಳಿಕ ಮೂರು ತಂಡಗಳು ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿವೆ. ಗುಜರಾತ್‌ 12ರಲ್ಲಿ 9 ಪಂದ್ಯ ಗೆದ್ದು 18 ಅಂಕ, ಆರ್‌ಸಿಬಿ ಹಾಗೂ ಪಂಜಾಬ್‌ 12ರಲ್ಲಿ ತಲಾ 8 ಪಂದ್ಯ ಗೆದ್ದು 17 ಅಂಕಗಳೊಂದಿಗೆ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿವೆ.

    ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 10ನೇ ಬಾರಿಗೆ ಪ್ಲೇ ಆಫ್‌ ಪ್ರವೇಶಿಸಿದ್ರೆ, ಗುಜರಾತ್‌ ಟೈಟಾನ್ಸ್‌ 3ನೇ ಬಾರಿಗೆ ಹಾಗೂ ಪಂಜಾಬ್‌ ಕಿಂಗ್ಸ್‌ 11 ವರ್ಷಗಳ ಬಳಿಕ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿದೆ.

    2022ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಗುಜರಾತ್‌ ಟೈಟಾನ್ಸ್‌ ಆರಂಭಿಕ 2 ಆವೃತ್ತಿಗಳಲ್ಲಿ ಆವೃತ್ತಿಗಳಲ್ಲೂ ಹಾರ್ದಿಕ್‌ ಪಾಂಡ್ಯ ನಾಯಕತ್ವದಲ್ಲಿ ಪ್ಲೇ ಆಫ್‌ ಪ್ರವೇಶಿಸಿತ್ತು. ಆದ್ರೆ 2024ರ ಆವೃತ್ತಿಯಲ್ಲಿ ಶುಭಮನ್‌ ಗಿಲ್‌ ನಾಯಕತ್ವದಲ್ಲಿ ಟೈಟಾನ್ಸ್‌ ಪಡೆ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿತ್ತು. ಇನ್ನೂ 2014ರಲ್ಲಿ ಕೊನೆಯ ಬಾರಿಗೆ ಪ್ಲೇ ಆಫ್‌ ಪ್ರವೇಶಿಸಿದ್ದ ಪಂಜಾಬ್‌ ಕಿಂಗ್ಸ್‌ ಇದೀಗ 11 ವರ್ಷಗಳ ಬಳಿಕ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದೆ.

    ಡೆಲ್ಲಿ ನೀಡಿದ 200 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್‌ ಒಂದೂ ವಿಕೆಟ್‌ ಕಳೆದುಕೊಳ್ಳದೇ 19 ಓವರ್‌ಗಳಲ್ಲಿ ಗುರಿ ತಲುಪುವಲ್ಲಿ ಯಶಸ್ವಿಯಾಯಿತು. ತಂಡದ ಪರ ಸಾಯಿ ಸುದರ್ಶನ್‌ 4 ಸಿಕ್ಸರ್‌ , 12 ಬೌಂಡರಿ ಸಿಡಿಸಿ 108 ರನ್‌, ಶುಭಮನ್‌ಗಿಲ್‌ 7 ಸಿಕ್ಸರ್‌ 3 ಬೌಂಡರಿ ನೆರವಿಂದ 93 ರನ್‌ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ಕೆ.ಎಲ್. ರಾಹುಲ್ ಆಕರ್ಷಕ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 199 ರನ್ ಕಲೆ ಹಾಕಿತು. ಆರಂಭದಿಂದಲೂ ಅಬ್ಬರದ ಆಟ ಆಡಿದ ಕೆ.ಎಲ್. ರಾಹುಲ್ 65 ಎಸೆತಗಳಲ್ಲಿ 4 ಸಿಕ್ಸರ್‌ 14 ಬೌಂಡರಿ ನೆರವಿನಿಂದ 112 ಚಚ್ಚಿ ಮಿಂಚಿದರು.

    ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡದ ನಿರೀಕ್ಷೆ ತಲೆಕೆಳಗಾಗುವಂತೆ ಮಾಡಿದ್ದ ಕೆ.ಎಲ್ ರಾಹುಲ್. ಕೊನೆವರೆಗೂ ಅವರನ್ನು ಔಟ್ ಮಾಡಲು ಗುಜರಾತ್ ತಂಡದ ಶ್ರಮ ವ್ಯರ್ಥವಾಯಿತು. ತಂಡದ ಪರ ಅಭಿಷೇಕ್ ಪೋರೆಲ್ 30, ಅಕ್ಷರ್ ಪಟೇಲ್ 25 ರನ್ ಬಾರಿಸಿ ನಿರ್ಗಮಿಸಿದರು. ಟ್ರಿಸ್ಟನ್‌ ಸ್ಟಬ್ಸ್‌ 25 ರನ್‌ಗಳ ಕೊಡುಗೆ ನೀಡಿದರು. ಡುಪ್ಲೆಸಿಸ್ 5 ರನ್‌ಗಳಿಸಿ ಬೇಗ ನಿರ್ಗಮಿಸಿದರು.

    ಗುಜರಾತ್‌ ಪರ ಅರ್ಷದ್ ಖಾನ್, ಪ್ರಸಿದ್ಧ್ ಕೃಷ್ಣ, ರಶೀದ್ ಖಾನ್ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

  • ಯಶಸ್ವಿ, ವೈಭವ್‌ ಹೋರಾಟ ವ್ಯರ್ಥ, ಪಂಜಾಬ್‌ಗೆ 10 ರನ್‌ ರೋಚಕ ಜಯ – ಪ್ಲೇ ಆಫ್‌ಗೆ ಇನ್ನೂ ಹತ್ತಿರ!

    ಯಶಸ್ವಿ, ವೈಭವ್‌ ಹೋರಾಟ ವ್ಯರ್ಥ, ಪಂಜಾಬ್‌ಗೆ 10 ರನ್‌ ರೋಚಕ ಜಯ – ಪ್ಲೇ ಆಫ್‌ಗೆ ಇನ್ನೂ ಹತ್ತಿರ!

    ಜೈಪುರ್‌: ಯಶಸ್ವಿ ಜೈಸ್ವಾಲ್‌, ವೈಭವ್‌ ಸೂರ್ಯವಂಶಿ ಅವರ ಸ್ಫೋಟಕ ಆರಂಭದ ಹೊರತಾಗಿಯೂ ರಾಜಸ್ಥಾನ್‌ ರಾಯಲ್ಸ್‌ 10 ರನ್‌ಗಳ ವಿರೋಚಿತ ಸೋಲು ಕಂಡಿದೆ. ರಾಜಸ್ಥಾನ್‌ ವಿರುದ್ಧ ಗೆದ್ದ ಪಂಜಾಬ್‌ 17 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದ್ದು, ಪ್ಲೇ ಆಫ್‌ಗೆ ಇನ್ನೂ ಹತ್ತಿರವಾಗಿದೆ.

    ಅಂಕಪಟ್ಟಿಯಲ್ಲಿ 17 ಅಂಕ ಗಳಿಸಿರುವ ಆರ್‌ಸಿಬಿ +0.482 ನೆಟ್‌ ರನ್‌ರೇಟ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಪಂಜಾಬ್‌ ಕಿಂಗ್ಸ್‌ 17 ಅಂಕ ಗಳಿಸಿದ್ದರೂ +0.389 ನೆಟ್‌ರನ್‌ರೇಟ್‌ನೊಂದಿಗೆ 2ನೇ ಸ್ಥಾನ ಕಾಯ್ದುಕೊಂಡಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ 5 ವಿಕೆಟ್‌ ನಷ್ಟಕ್ಕೆ 219 ರನ್‌ ಗಳಿಸಿತ್ತು. 220 ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್‌ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 209 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಸ್ಫೋಟಕ ಅರ್ಧಶತಕ ಜೊತೆಯಾ:
    ರಾಜಸ್ಥಾನ್‌ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ವೈಭವ್‌ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್‌ ಸ್ಪೋಟಕ ಪ್ರದರ್ಶನ ನೀಡಿದ್ದರು. ಮೊದಲ ಓವರ್‌ನಲ್ಲೇ ಯಶಸ್ವಿ 22 ರನ್‌ ಚಚ್ಚಿದ್ದರು. ಇನ್ನೂ ಮೊದಲ ವಿಕೆಟ್‌ಗೆ ಈ ಜೋಡಿ 29 ಎಸೆತಗಳಲ್ಲಿ ಸ್ಫೋಟಕ 76 ರನ್‌ ಜೊತೆಯಾಟ ನೀಡಿತ್ತು. ಈ ವೇಳೆ ವೈಭವ್‌ 15 ಎಸೆತಗಳಲ್ಲಿ 40 ರನ್‌ (4 ಸಿಕ್ಸರ್‌, 4 ಬೌಂಡರಿ) ಚಚ್ಚಿ ಔಟಾದರು. ಈ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್‌ 25 ಎಸೆತಗಳಲ್ಲಿ 50 ರನ್‌ (1 ಸಿಕ್ಸರ್‌, 9 ಬೌಂಡರಿ) ಗಳಿಸಿ ಔಟಾದರು.

    ಇವರಿಬ್ಬರ ವಿಕೆಟ್‌ ಬೀಳುತ್ತಿದ್ದಂತೆ ಒಂದೆಡೆ ರನ್‌ ವೇಗ ಕಡಿತಗೊಂಡರೆ ಮತ್ತೊಂದೆಡೆ ಪ್ರಮುಖ ವಿಕೆಟ್‌ ಬೀಳುತ್ತಾ ಸಾಗಿತು. ಮಧ್ಯಮ ಕ್ರಮಾಂಕದಲ್ಲಿ ಧ್ರುವ್‌ ಜುರೆಲ್‌ ಅವರ ಅರ್ಧಶತಕದ (53 ರನ್‌) ಹೋರಾಟ ವ್ಯರ್ಥವಾಯಿತು. ಅಂತಿಮವಾಗಿ ರಾಜಸ್ಥಾನ್‌ 7 ವಿಕೆಟ್‌ಗೆ 209 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ್ದ ಪಂಜಾಬ್‌ ಪರ ನೇಹಾಲ್‌ ವಧೇರಾ 70 ರನ್‌ (37 ಎಸೆತ, 5 ಸಿಕ್ಸರ್‌, 5 ಬೌಂಡರಿ), ಶಶಾಂಕ್‌ ಸಿಂಗ್‌ (30 ಎಸೆತ, 3 ಸಿಕ್ಸರ್‌, 5 ಬೌಂಡರಿ), ಶ್ರೇಯಸ್‌ ಅಯ್ಯರ್‌ 30 ರನ್‌, ಪ್ರಭ್‌ ಸಿಮ್ರನ್‌, ಒಮರ್ಝೈ ತಲಾ 21 ರನ್‌, ಪ್ರಿಯಾಂಶ್‌ ಆರ್ಯ 9 ರನ್‌ ಗಳಿಸಿದ್ರೆ ಮಿಚೆಲ್ ಓವನ್ ಶೂನ್ಯ ಸುತ್ತಿದರು.

  • ಭಾರೀ ಮಳೆಯಿಂದ ಪಂದ್ಯ ರದ್ದು – ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಆರ್‌ಸಿಬಿ!

    ಭಾರೀ ಮಳೆಯಿಂದ ಪಂದ್ಯ ರದ್ದು – ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಆರ್‌ಸಿಬಿ!

    ಬೆಂಗಳೂರು: ಭಾರೀ ಮಳೆಯಿಂದಾಗಿ ಶನಿವಾರ (ಮೇ 17) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M. Chinaswamy Stadium) ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಆರ್‌ಸಿಬಿ (RCB) ನಡುವಿನ ಐಪಿಎಲ್ (IPL 2025) ಪಂದ್ಯ ರದ್ದಾಗಿತ್ತು. ಈ ಪಂದ್ಯದ ಎಲ್ಲಾ ಮಾನ್ಯ ಟಿಕೆಟ್ (RCB Refund Tickets) ಹೊಂದಿರುವವರಿಗೆ ಹಣ ಮರುಪಾವತಿ ಮಾಡುವುದಾಗಿ ಫ್ರಾಂಚೈಸಿ ಘೋಷಿಸಿದೆ.

    ಈ ಬಗ್ಗೆ ಆರ್‌ಸಿಬಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಡಿಜಿಟಲ್ ಟಿಕೆಟ್ ಹೊಂದಿರುವವರಿಗೆ ಟಿಕೆಟ್‌ಗಳನ್ನು ಬುಕ್ ಮಾಡಲು ಬಳಸುವ ಅವರ ಖಾತೆಗೆ ಮುಂದಿನ ಕೆಲಸದ 10 ದಿನಗಳಲ್ಲಿ ಮರುಪಾವತಿ ಮಾಡಲಾಗುತ್ತದೆ. ಮೇ 31ರ ಒಳಗೆ ಹಣ ಮರುಪಾವತಿಯಾಗದಿದ್ದರೆ ಬುಕಿಂಗ್ ವಿವರಗಳೊಂದಿಗೆ refund@ticketgenie.in ಗೆ ಇಮೇಲ್ ಕಳುಹಿಸುವಂತೆ ಸೂಚಿಸಲಾಗಿದೆ. ಟಿಕೆಟ್ ಹೊಂದಿರುವವರು ಮರುಪಾವತಿಗೆ ತಮ್ಮ ಮೂಲ ಟಿಕೆಟ್‌ನ್ನು ಖರೀದಿಸಿದ ಸ್ಥಳದಲ್ಲಿ ಒಪ್ಪಿಸಬೇಕಾಗುತ್ತದೆ. ಕಾಂಪ್ಲಿಮೆಂಟರಿ ಟಿಕೆಟ್‌ಗಳಿಗೆ ಈ ಮರುಪಾವತಿ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.

    ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಒಂದು ವಾರಗಳ ಕಾಲ ಐಪಿಎಲ್ ಪಂದ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಕದನ ವಿರಾಮದ ಬಳಿಕ ಪಂದ್ಯವನ್ನು ಪುನರಾರಂಭಗೊಳಿಸಲಾಗಿತ್ತು. ವಿರಾಟ್‌ ಕೊಹ್ಲಿಯೇ ಪ್ರಮುಖ ಆಕರ್ಷಣೆಯಾಗಿದ್ದ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಹಾಗಾಗಿ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ಲಭ್ಯವಾಯಿತು. ಆರ್‌ಸಿಬಿ ಪ್ಲೇ ಆಫ್‌ಗೆ ಹತ್ತಿರವಾದ್ರೆ, ಕೋಲ್ಕತ್ತಾ ನೈಟ್‌ರೈಡರ್ಸ್‌ ರೇಸ್‌ನಿಂದ ಹೊರಬಿದ್ದಿತು.

    ಆದ್ರೆ ಕಿಂಗ್‌ ಕೊಹ್ಲಿ ಅವರಿಗೆ ವಿಶೇಷ ಗೌರವ ಸಲ್ಲಿಸಲು ಬಂದಿದ್ದ ಸಾವಿರಾರು ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿತ್ತು. ಪಂದ್ಯ ನಡೆಯದೇ ಅಭಿಮಾನಿಗಳು ನಿರಾಸೆಯಿಂದ ಹೊರಟಿದ್ದರು. ತಮ್ಮ ಅಭಿಮಾನಿಗಳಿಗೆ ಆಗುವ ಹೊರೆಯನ್ನು ತಪ್ಪಿಸಲು ಆರ್‌ಸಿಬಿ ಪಂದ್ಯದ ಟಿಕೆಟ್‌ ಶುಲ್ಕವನ್ನು ಮರುಪಾವತಿ ಮಾಡುವುದಾಗಿ ಹೇಳಿದೆ.

    ಸದ್ಯ ಆರ್‌ಸಿಬಿಗೆ ಲೀಗ್‌ ಸುತ್ತಿನಲ್ಲಿ ಇನ್ನೆರಡು ಪಂದ್ಯಗಳು ಮಾತ್ರ ಬಾಕಿ ಉಳಿದ್ದು, ತವರಿನಲ್ಲಿ ಒಂದು ಪಂದ್ಯ ಬಾಕಿ ಇದೆ. ಮೇ 23ರಂದು ಹೈದರಾಬಾದ್‌ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ, ಮೇ 27ರಂದು ಲಕ್ನೂ ಸೂಪರ್‌ ಜೈಂಟ್ಸ್‌ ವಿರುದ್ಧ ಏಕನಾ ಕ್ರೀಡಾಂಗಣದಲ್ಲಿ ಲೀಗ್‌ ಸುತ್ತಿನ ಕೊನೆಯ ಪಂದ್ಯವನ್ನಾಡಲಿದೆ.

  • ಮಳೆಯಿಂದ ಪಂದ್ಯ ರದ್ದು, ಕೋಲ್ಕತ್ತಾ ಔಟ್‌ – ಪ್ಲೇ ಆಫ್‌ ಸನಿಹದಲ್ಲಿ ಆರ್‌ಸಿಬಿ

    ಮಳೆಯಿಂದ ಪಂದ್ಯ ರದ್ದು, ಕೋಲ್ಕತ್ತಾ ಔಟ್‌ – ಪ್ಲೇ ಆಫ್‌ ಸನಿಹದಲ್ಲಿ ಆರ್‌ಸಿಬಿ

    ಬೆಂಗಳೂರು: ಮಳೆಯಿಂದಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್‌ ರೈಡರ್ಸ್‌ ನಡುವಿನ ಪಂದ್ಯ ರದ್ದಾಗಿದೆ. ಪಂದ್ಯ ರದ್ದಾದ ಕಾರಣ ಕಳೆದ ಬಾರಿಯ ಚಾಂಪಿಯನ್‌ ಕೋಲ್ಕತ್ತಾ ಪ್ಲೇ  ಆಫ್‌ ರೇಸ್‌ನಿಂದ ನಿರ್ಗಮಿಸಿದೆ.

    ಸಂಜೆಯಿಂದಲೇ ಬೆಂಗಳೂರಿನಲ್ಲಿ ಮಳೆ ಆರಂಭವಾಗಿತ್ತು. ರಾತ್ರಿಯೂ ಜೋರು ಮಳೆ ಸುರಿದ ಕಾರಣ ರಾತ್ರಿ 10:20ಕ್ಕೆ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಿದರು. ಇದನ್ನೂ ಓದಿ: ಬಿಳಿ ಪಾರಿವಾಳಗಳಿಂದಲೂ ಕೊಹ್ಲಿಗೆ ಗೌರವ – ಇದು ವೈಟ್‌ ಆರ್ಮಿ ಎಂದ ಕೊಹ್ಲಿ ಫ್ಯಾನ್ಸ್‌

     

    ಆರ್‌ಸಿಬಿ ಈಗ 12 ಪಂದ್ಯಗಳಿಂದ 17 ಅಂಕ ಪಡೆದು ಪ್ಲೇ ಆಫ್‌ ಸನಿಹದಲ್ಲಿದೆ. ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೂ ಆರ್‌ಸಿಬಿಗೆ ಇನ್ನೂ ಪ್ಲೇ ಆಫ್‌ಗೆ ಅಧಿಕೃತವಾಗಿ ಎಂಟ್ರಿ ಪಡೆದಿಲ್ಲ. ಇನ್ನು ಹೈದರಾಬಾದ್‌ ಮತ್ತು ಲಕ್ನೋ ಜೊತೆ ಪಂದ್ಯ ಆಡಲಿದ್ದು ಕನಿಷ್ಠ ಒಂದು ಪಂದ್ಯವನ್ನು ಗೆಲ್ಲಬೇಕಾಗುತ್ತದೆ.

    ಒಂದು ವೇಳೆ ಎರಡೂ ಪಂದ್ಯ ಸೋತರೆ ನೆಟ್‌ ರನ್‌ ರೇಟ್‌ ಪರಿಗಣನೆ ಮಾಡಲಾಗುತ್ತದೆ. ನೆಟ್‌ ರನ್‌ ರೇಟ್‌ ಉತ್ತಮವಾಗಿದ್ದರೆ ಮಾತ್ರ ಆರ್‌ಸಿಬಿ ಪ್ಲೇ ಆಫ್‌ ಪ್ರವೇಶಿಸಲಿದೆ.