ದೇಶದಲ್ಲಿ ಎಲ್ಲೆಡೆ ಆರ್‌ಸಿಬಿಗೆ ಅತಿ ಹೆಚ್ಚು ಅಭಿಮಾನಿಗಳಿದ್ದಾರೆ. ಈ ಸಲ ಕಪ್ ನಮ್ಮದಾಗುವ ವಿಶ್ವಾಸ ಇದೆ. ಪ್ರತಿ ಭಾರಿಯೂ ಕಪ್ ನಮ್ಮದೆ ಅಂತ ಹೇಳ್ತಿದ್ದೇವು. ಈ ಬಾರಿಯಾದ್ರೂ ಕಪ್ ನಮ್ಮದಾಗಲಿ, ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಈ ವರ್ಷ ಟ್ರೋಫಿ ಗೆಲ್ಲೋಕೆ ಶ್ರೇಯಸ್ ಅಯ್ಯರ್ ಅರ್ಹರು – ರಾಜಮೌಳಿ
ಬೆಂಗಳೂರು: ಐಪಿಎಲ್ 18ನೇ ಆವೃತ್ತಿಯ ಫೈನಲ್ ಪಂದ್ಯವು ಜೂನ್ 3ರಂದು ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ತಂಡಗಳ ನಡುವೆ ನಡೆಯಲಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ಫ್ಯಾನ್ಸ್‌ಗಳಿಗೆ (RCB Fans) ಜಯನಗರದ ಆರ್‌ಸಿಬಿ ಸ್ನೂಕರ್ ಕ್ಲಬ್ (RCB Snooker Club) ಸ್ಪೆಷಲ್ ಆಫರ್ ನೀಡುತ್ತಿದೆ.
ಸ್ನೂಕರ್ ಪ್ರಿಯರಿಗೆ ಕೇವಲ ಒಂದು ರೂ. ಕೊಟ್ಟು ಸ್ನೂಕರ್ ಆಡುತ್ತಾ ಐಪಿಎಲ್ ಫೈನಲ್ ಮ್ಯಾಚ್ ನೋಡುವ ವಿಶೇಷ ಅವಕಾಶವನ್ನು ನೀಡಿದೆ. ಒಂದು ಗಂಟೆ ಕೇವಲ ಒಂದು ರೂ. ನೀಡಿ ಸ್ನೂಕರ್ ಆಡಬಹುದಾಗಿದೆ. ಸಾಮಾನ್ಯ ದಿನಗಳಲ್ಲಿ ಕ್ಲಬ್‌ನಲ್ಲಿ ಸ್ನೂಕರ್ ಆಡಲು ಗಂಟೆಗೆ 150ರಿಂದ 250 ರೂ ನೀಡಬೇಕಿತ್ತು. ಆದರೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಫೈನಲ್ ಪ್ರವೇಶಿಸಿದ ಹಿನ್ನೆಲೆ ಜಯನಗರದ (Jayanagara) ಸ್ನೂಕರ್ ಕ್ಲಬ್ ಆರ್‌ಸಿಬಿ ಫ್ಯಾನ್ಸ್‌ಗಳಿಗೆ ಮಂಗಳವಾರ ಇಡೀ ದಿನ ಈ ವಿಶೇಷ ಆಫರ್ ನೀಡುತ್ತಿರುವ ಮೂಲಕ ಗುಡ್ ನ್ಯೂಸ್ ನೀಡಿದೆ. ಇದನ್ನೂ ಓದಿ: ಈ ಬಾರಿ ಕಳೆಯಲಿದೆಯೇ ಫೈನಲ್ ಕಂಟಕ? – ಕಪ್ ಗೆದ್ದು ಅಭಿಮಾನಿಗಳಿಗೆ ಔತಣ ಕೊಡಲಿದೆಯೇ ಆರ್‌ಸಿಬಿ?
ಜಯನಗರದಲ್ಲಿ ಈ ಆರ್‌ಸಿಬಿ ಸ್ನೂಕರ್ ಕ್ಲಬ್‌ನ ಒಳಗಡೆ ಆರ್‌ಸಿಬಿ ಆಟಗಾರರ ಫೋಟೋ ವಾಲ್ ಮಾಡುವ ಮೂಲಕ ವಿಶೇಷ ಅಭಿಮಾನವನ್ನು ಹೊರಹಾಕಿದೆ. ಅಲ್ಲದೇ ಕಳೆದ ಡಬ್ಲ್ಯೂಪಿಎಲ್‌ನಲ್ಲಿ ಕಪ್ ಗೆದ್ದ ಆರ್‌ಸಿಬಿ ಮಹಿಳಾ ಆಟಗಾರ ಹಾಗೂ ಕಿಂಗ್ ಕೊಹ್ಲಿಯ (Virat Kohli) ಫೋಟೋ ಫ್ರೇಮ್ ಹಾಕುವ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಇದನ್ನೂ ಓದಿ: ಈ ಬಾರಿ ಐಪಿಎಲ್‌ನಲ್ಲಿ ಹೊಸ ಚಾಂಪಿಯನ್ – ಹಿಂದಿನ ಆರ್‌ಸಿಬಿ, ಪಂಜಾಬ್ ಫೈನಲ್ ಪಂದ್ಯಗಳು ಹೇಗಿತ್ತು?
ಇದೀಗ ನಾಳೆ ನಡೆಯಲಿರುವ ಫೈನಲ್ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳು ಎದುರು ನೋಡುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಕಪ್ ಗೆಲ್ಲುವ ಮೂಲಕ 18 ವರ್ಷಗಳ ವನವಾಸಕ್ಕೆ ಅಂತ್ಯ ಹೇಳಲಿದೆಯೇ ಎಂದು ಆರ್‌ಸಿಬಿ ಫ್ಯಾನ್ಸ್ ಕಾದು ಕುಳಿತ್ತಿದ್ದಾರೆ. ಈ ಎಲ್ಲಾ ಪ್ರಶ್ನೆಗಳಿಗೆ ಜೂ. 3ರಂದು ನಡೆಯಲಿರುವ ಐಪಿಎಲ್ 18ನೇ ಆವೃತ್ತಿಯ ಫೈನಲ್ ಪಂದ್ಯ ತೆರೆ ಎಳೆಯಲಿದೆ.
ಬೆಂಗಳೂರು: ಮಂಗಳವಾರ ನಡೆಯಲಿರುವ ಐಪಿಎಲ್ (IPL 2025) ಫೈನಲ್ ಪಂದ್ಯದಲ್ಲಿ ಆರ್‌ಸಿಬಿ (RCB) ಗೆಲುವಿಗೆ ಕೇಂದ್ರ ಸಚಿವ ಹೆಚ್‌ಡಿಕೆ (H.D Kumaraswamy), ಡಿಸಿಎಂ ಡಿಕೆಶಿ (D.K Shivakumar), ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ.
ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ನಮ್ಮ ಕನ್ನಡದ ತಂಡ ಈ ಬಾರಿ ಕಪ್ ಗೆಲ್ಲುತ್ತೆ. ಈ ಸಲ್ ಕಪ್ ನಮ್ದೆ ಎಂದು ಜೋಶ್‌ನಿಂದ ಹೇಳಿಕೊಂಡಿದ್ದಾರೆ. ಇನ್ನೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನಾನು ಕಿಕೆಟ್‌ನ ದೊಡ್ಡ ಅಭಿಮಾನಿ, ಈ ಬಾರಿ ಫೈನಲ್‌ನಲ್ಲಿ ಆರ್‌ಸಿಬಿ ಆಟಗಾರರಿಗೆ ದೇವರು ಶಕ್ತಿ ಕೊಡಲಿ ಎಂದು ಪ್ರಾರ್ಥನೆ ಮಾಡ್ತೀನಿ. ಈ ಬಾರಿ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲರೂ ತುಂಬಾ ಚೆನ್ನಾಗಿ ಆಡಿದ್ದಾರೆ. ತಾಯಿ ಚಾಮುಂಡೇಶ್ವರಿಯಲ್ಲಿ ನಾನು ವಿಶೇಷ ಪ್ರಾರ್ಥನೆ ಮಾಡುತ್ತೇನೆ. ಈ ಸಲ ಕಪ್ ನಮ್ದೇ ಎಂದಿದ್ದಾರೆ. ಇದನ್ನೂ ಓದಿ: ಈ ವರ್ಷ ಟ್ರೋಫಿ ಗೆಲ್ಲೋಕೆ ಶ್ರೇಯಸ್ ಅಯ್ಯರ್ ಅರ್ಹರು – ರಾಜಮೌಳಿ
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಹಲವಾರು ವರ್ಷಗಳ ನಂತರ ಆರ್‌ಸಿಬಿ ಫೈನಲ್‌ಗೆ ಬಂದಿದೆ. ಕಪ್ ಗೆಲ್ಲಲಿ ಎಂಬುದು ನಮ್ಮೆಲ್ಲರ ನಿರೀಕ್ಷೆಯಾಗಿದೆ. ಆರ್‌ಸಿಬಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಸಹ ಆರ್‌ಸಿಬಿ ಗೆಲುವಿಗೆ ಶುಭ ಹಾರೈಸಿದ್ದಾರೆ.
ಈ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಎಲ್ಲರೂ ತುಂಬಾ ಚೆನ್ನಾಗಿ ಆಡಿದ್ದಾರೆ. ಆರ್‌ಸಿಬಿ ಗೆಲ್ಲಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ನಾನು ವಿಶೇಷ ಪ್ರಾರ್ಥನೆ ಮಾಡುತ್ತೇನೆ. ಆರ್‌ಸಿಬಿ ಒಂದಲ್ಲ ಎರಡಲ್ಲ, ನಾಲ್ಕು ಬಾರಿ ಫೈನಲ್‌ಗೆ ಬಂದಿದೆ. ಆದರೆ ಈ ಬಾರಿ `ಕಪ್ ನಮ್ದೇ’ ಎಂದು ಹೇಳಿ ಆರ್‌ಸಿಬಿ ಫ್ಯಾನ್‌ಗಳನ್ನು ಹುರಿದುಂಬಿಸಿದರು. ಇದನ್ನೂ ಓದಿ: ಈ ವರ್ಷ ಟ್ರೋಫಿ ಗೆಲ್ಲೋಕೆ ಶ್ರೇಯಸ್ ಅಯ್ಯರ್ ಅರ್ಹರು – ರಾಜಮೌಳಿ
ಜೂ. 03ರಂದು ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಫೈನಲ್ ಟ್ರೋಫಿಗೆ ಗುದ್ದಾಡಲಿದೆ. ಇದೀಗ ಎಲ್ಲೆಡೆ ಆರ್‌ಸಿಬಿ ಫ್ಯಾನ್ಸ್‌ಗಳಿಂದ ಈ ಸಲ `ಕಪ್ ನಮ್ದೇ’ ಎಂಬ ಜಯಘೋಷ ಕೇಳುತ್ತಿದೆ.
ಆರ್‌ಸಿಬಿ (RCB) ತಂಡ ಕಳೆದ 17 ಆವೃತ್ತಿಯಲ್ಲಿ ಮೂರು ಬಾರಿ ಫೈನಲ್ ತಲುಪಿ ಕೊನೆಯ ಹಂತದಲ್ಲಿ ಮುಗ್ಗರಿಸಿ, ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿತ್ತು. ಆದರೂ ಆರ್‌ಸಿಬಿಯ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ತಂಡವನ್ನು ಬಿಟ್ಟುಕೊಡದೇ ಇಂದಿಗೂ ಬೆಂಬಲಿಸಿಕೊಂಡೇ ಬಂದಿದ್ದಾರೆ. ಅದೇ ಅಭಿಮಾನಿಗಳ ಆಶೀರ್ವಾದದಿಂದ ಈ ಬಾರಿ ಮತ್ತೆ ಆರ್‌ಸಿಬಿ ಫೈನಲ್‌ಗೆ ತಲುಪಿದೆ.
ಫೈನಲ್‌ಗೆ ಆರ್‌ಸಿಬಿ ತಂಡ ಪ್ರವೇಶಿಸುತ್ತಿದ್ದಂತೆ, ʻಈ ಸಲ ಕಪ್ ನಮ್ದೇʼ ಎಂಬ ಆರ್‌ಸಿಬಿಯ 18 ವರ್ಷಗಳ ಘೋಷವಾಕ್ಯಕ್ಕೆ ಮತ್ತೆ ಬಲ ಬಂದಿದೆ! ಈ ಸೋಲುಗಳ ಸರಣಿ ಮೂರಕ್ಕೆ ಅಂತ್ಯವಾಗಿ, ಈ ಬಾರಿಯಾದರೂ ಕಪ್ ಗೆಲ್ಲಲಿ ಎಂಬುದು ಅಭಿಮಾನಿಗಳ ಹೆಬ್ಬಯಕೆ. ಈ ಬಾರಿ ಕೋಟ್ಯಂತರ ಅಭಿಮಾನಿಗಳ ಕನಸು ನೆರವೇರುವ ನಿರೀಕ್ಷೆ ಸಹ ಇದೆ. ಇದನ್ನೂ ಓದಿ: ಫೈನಲ್‌ನಲ್ಲಿ ಸೆಣೆಸಲಿರುವ ಆರ್‌ಸಿಬಿಗೆ ಗಣ್ಯರಿಂದ ಶುಭಾಶಯಗಳ ಮಹಾಪೂರ!
ಆರ್‌ಸಿಬಿ ಮೂರು ಬಾರಿ ಕಪ್‌ಗಾಗಿ ಸೆಣೆಸಾಡಿದ್ದು ಹೀಗೆ 2009: ಆರ್‌ಸಿಬಿ ಮೊದಲ ಸಲ ಫೈನಲ್ ಪ್ರವೇಶಿಸಿದ್ದು 2009ರಲ್ಲಿ. ಅದು ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಡೆಕ್ಕನ್ ಚಾರ್ಜರ್ಸ್ ಎದುರಿನ ಹೋರಾಟ, ಲೀಗ್‌ನಲ್ಲಿ ಅನಿಲ್ ಕುಂಬ್ಳೆ ನೇತೃತ್ವದ ಆರ್‌ಸಿಬಿ 3ನೇ ಸ್ಥಾನಿಯಾಗಿತ್ತು. ಪಂದ್ಯದಲ್ಲಿ ಸ್ವತಃ ಅನಿಲ್ ಕುಂಬ್ಳೆ 4 ವಿಕೆಟ್ ಉರುಳಿಸಿದ್ದರು. ಡೆಕ್ಕನ್ ಚಾರ್ಜರ್ಸ್ ತಂಡದ ಮೊತ್ತವನ್ನು 6 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತ್ತು. ಆರ್‌ಸಿಬಿಗೆ ಈ ಸಾಮಾನ್ಯ ಗುರಿಯನ್ನೂ ತಲುಪಲು ಸಾಧ್ಯವಾಗಿರಲಿಲ್ಲ. 9 ವಿಕೆಟ್ ನಷ್ಟಕ್ಕೆ 137 ರನ್ ಮಾಡಿ ಕಪ್ ಕಳೆದುಕೊಂಡಿತ್ತು.
2011: ಆರ್‌ಸಿಬಿ 2011 ರಲ್ಲಿ2ನೇ ಸಲ ಫೈನಲ್ ಪ್ರವೇಶಿಸಿತ್ತು. ಲೀಗ್‌ನಲ್ಲಿ ಆರ್‌ಸಿಬಿ 19 ಅಂಕ ಗಳಿಸಿ ಅಗ್ರಸ್ಥಾನದಲ್ಲಿತ್ತು. ಚೆನ್ನೈನಲ್ಲಿ ಎದುರಾಳಿ ಚೆನ್ನೈ ತಂಡವನ್ನು ಎದುರಿಸಿತ್ತು. ಬ್ಯಾಟಿಂಗ್ ವೈಫಲ್ಯದಿಂದ ಆರ್‌ಸಿಬಿ ಕಪ್ ಕೈಚೆಲ್ಲಿತ್ತು. ಚೆನ್ನೈ 5 ವಿಕೆಟ್ ನಷ್ಟಕ್ಕೆ 205 ರನ್ ಪೇರಿಸಿದರೆ, ಡೇನಿಯಲ್ ವೆಟೋರಿ ನಾಯಕತ್ವದಲ್ಲಿ ಆಟಕ್ಕಿಳಿದ ಆರ್‌ಸಿಬಿ 8 ವಿಕೆಟ್ ನಷ್ಟಕ್ಕೆ 147 ರನ್ ಮಾತ್ರ ಗಳಿಸಿತ್ತು. ಇದನ್ನೂ ಓದಿ: ಈ ಬಾರಿ ಐಪಿಎಲ್‌ನಲ್ಲಿ ಹೊಸ ಚಾಂಪಿಯನ್ – ಹಿಂದಿನ ಆರ್‌ಸಿಬಿ, ಪಂಜಾಬ್ ಫೈನಲ್ ಪಂದ್ಯಗಳು ಹೇಗಿತ್ತು?
2016: ಆರ್‌ಸಿಬಿ 3ನೇ ಸಲ ಫೈನಲ್ ತಲುಪಿದ್ದು 2016ರಲ್ಲಿ. ತವರಿನಲ್ಲೇ ನಡೆದ ಪಂದ್ಯವಾದ್ದರಿಂದ ಆರ್‌ಸಿಬಿ ಮೇಲೆ ಅಭಿಮಾನಿಗಳು ಭಾರೀ ಭರವಸೆ ಇಟ್ಟಿದ್ದರು. ಆದರೆ ಇಲ್ಲಿಯೂ ಎದುರಾಳಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲಾಗಿತ್ತು. ಹೈದರಾಬಾದ್ 7 ವಿಕೆಟ್‌ಗೆ 208 ರನ್ ಗಳಿಸಿದರೆ, ಆರ್‌ಸಿಬಿ ಅಂತಿಮವಾಗಿ 7 ವಿಕೆಟ್‌ಗೆ 200 ರನ್ನಷ್ಟೇ ಗಳಿಸಿ ಶರಣಾಗಿತ್ತು.
2025: ಈ ಬಾರಿ ಐಪಿಎಲ್ ಪ್ಲೇಆಫ್ ಪಂದ್ಯದಲ್ಲಿ ಕೆಕೆಆರ್‌ನ ಅತಿ ದೊಡ್ಡ ಗೆಲುವಿನ ಅಂತರದ ದಾಖಲೆಯನ್ನು ಆರ್‌ಸಿಬಿ ಬ್ರೇಕ್ ಮಾಡಿದೆ. ಆ ಮೂಲಕ ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದೆ. ಕ್ವಾಲಿಫೈಯರ್ 1 ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್‌ಸಿಬಿ ಭರ್ಜರಿ ಜಯ ದಾಖಲಿಸಿತು. ಪಂಜಾಬ್ ನೀಡಿದ 102 ರನ್‌ಗಳ ಸಾಧಾರಣ ಗುರಿಯನ್ನು ಆರ್‌ಸಿಬಿ 10 ಓವರ್‌ನಲ್ಲೇ ತಲುಪಿತು. ಇನ್ನೂ 60 ಎಸೆತಗಳು ಬಾಕಿ ಇರುವಾಗಲೇ ಗುರಿ ಮುಟ್ಟಿ ಆರ್‌ಸಿಬಿ ಗೆದ್ದು ಬೀಗಿತ್ತು.
ಕಳೆದ 18 ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಟ್ರೋಫಿ ಗೆದ್ದುಕೊಂಡಿಲ್ಲ. ಆರ್‌ಸಿಬಿ ಈ ಮೊದಲು 3 ಬಾರಿ ಫೈನಲ್ ಪ್ರವೇಶಿಸಿದ್ದರೆ ಪಂಜಾಬ್ ಒಂದು ಬಾರಿ ಫೈನಲ್ ಆಡಿ ಸೋಲನುಭವಿಸಿತ್ತು. 2014 ರಲ್ಲಿ ಕೋಲ್ಕತ್ತಾ ವಿರುದ್ಧ ಪಂಜಾಬ್ ಕಿಂಗ್ಸ್ ಸೋತಿತ್ತು. ಇದೇ ಮೊದಲ ಬಾರಿಗೆ ಎರಡು ತಂಡಗಳು ಫೈನಲಿನಲ್ಲಿ ಮುಖಾಮುಖಿಯಾಗುತ್ತಿವೆ. ಲೀಗ್ ಹಂತದಲ್ಲಿ ಎರಡು ತಂಡಗಳು ಒಂದೊಂದು ಪಂದ್ಯವನ್ನು ಗೆದ್ದುಕೊಂಡಿದ್ದವು. ಆದರೆ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ತಂಡವನ್ನು ಸೋಲಿಸಿ ಆರ್‌ಸಿಬಿ ಫೈನಲ್ ಪ್ರವೇಶಿಸಿತ್ತು. ಹೀಗಾಗಿ ಎರಡು ತಂಡಗಳ ಮಧ್ಯೆ ಸಮಬಲದ ಹೋರಾಟ ನಡೆಯಲಿದೆ. ಹೀಗಾಗಿ ಇಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ತಂಡ ಈ ಹಿಂದೆ ಆಡಿದ ಫೈನಲ್ ಪಂದ್ಯಗಳ ಕಿರು ಮಾಹಿತಿಯನ್ನು ನೀಡಲಾಗಿದೆ. ಇದನ್ನೂ ಓದಿ: ಈ ವರ್ಷ ಟ್ರೋಫಿ ಗೆಲ್ಲೋಕೆ ಶ್ರೇಯಸ್ ಅಯ್ಯರ್ ಅರ್ಹರು – ರಾಜಮೌಳಿ
ಅಹಮದಾಬಾದ್: ಮುಂಬೈ ವಿರುದ್ಧ ರೋಚಕ ಗೆಲುವು ಸಾಧಿಸಿರುವ ಪಂಜಾಬ್ ಕಿಂಗ್ಸ್ 11 ವರ್ಷಗಳ ಬಳಿಕ ಐಪಿಎಲ್ ಫೈನಲ್ ತಲುಪಿದೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್ ಪರ ಟ್ರೋಫಿ ತಂದುಕೊಟ್ಟಿದ್ದ ಅಯ್ಯರ್ ಈ ಬಾರಿ ಪಂಜಾಬ್ ಕಿಂಗ್ಸ್ ತಂಡವನ್ನ ಫೈನಲ್‌ವರೆಗೆ ಕೊಂಡೊಯ್ದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಖ್ಯಾತ ಚಲನಚಿತ್ರ ನಿರ್ಮಾಪಕ ಎಸ್‌ಎಸ್ ರಾಜಮೌಳಿ (SS Rajamouli), ಟ್ರೋಫಿ ಗೆಲ್ಲಲು ಶ್ರೇಯಸ್ ಅಯ್ಯರ್ (Shreyas Iyer) ಅರ್ಹರು ಅಂತ ಹೇಳಿದ್ದಾರೆ.
Iyer guiding Bumrah’s and Boult’s yorkers to the third man boundary… Exquisite…
This man leads Delhi to a final… and is dropped…
Leads Kolkata to a trophy… dropped…
Leads a young Punjab to the finals after 11 years.
He deserves this year’s trophy too…
ಬುಮ್ರಾ ಮತ್ತು ಬೌಲ್ಟ್ ಅವರ ಯಾರ್ಕರ್‌ಗಳಮನ್ನ ಥರ್ಡ್ ಮ್ಯಾನ್ ಬೌಂಡರಿಗಟ್ಟುವ ಶ್ರೇಯಸ್ ಅವರ ಸಾಮರ್ಥ್ಯ ಅದ್ಭುತ. ಅಯ್ಯರ್ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನ ಫೈನಲ್‌ಗೆ ಕೊಂಡೊಯ್ದಿದ್ದರು ಆದ್ರೆ ಫ್ರಾಂಚೈಸಿ ಅವರನ್ನ ಕೈಬಿಟ್ಟಿತು. ಕೋಲ್ಕತ್ತಾ ತಂಡಕ್ಕೆ ಟ್ರೋಫಿ ತಂದುಕೊಟ್ಟರು, ಆದ್ರೂ ಫ್ರಾಂಚೈಸಿ ಅವರನ್ನ ಕೈಬಿಟ್ಟಿತು. ಇದೀಗ 11 ವರ್ಷಗಳ ಬಳಿಕ ಪಂಜಾಬ್ ತಂಡವನ್ನ ಫೈನಲ್‌ಗೆ ಕರೆದೊಯ್ದಿದ್ದಾರೆ, ಈ ವರ್ಷದ ಟ್ರೋಫಿಗೆ ಅವರು ಅರ್ಹರು ಅಂತ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಂಸದೆ ಜೊತೆ ಎಂಗೇಜ್‌ಮೆಂಟ್ ಆಗ್ತಿದ್ದಾರೆ ರಿಂಕು ಸಿಂಗ್ – ಕ್ರಿಕೆಟಿಗನ ಕೈ ಹಿಡಿಯೋ ಚೆಲುವೆ ಯಾರು?
ಮುಂದುವರಿದು… ಮತ್ತೊಂದೆಡೆ, ವಿರಾಟ್ ಕೊಹ್ಲಿ (Virat Kohli) ವರ್ಷದಿಂದ ವರ್ಷಕ್ಕೆ ಪ್ರದರ್ಶನ ನೀಡುತ್ತಿದ್ದಾರೆ. ಸಾವಿರಾರು ಕಲೆಹಾಕಿದ್ದಾರೆ. ಅವರೂ ಕೂಡ ಈ ಟ್ರೋಫಿಗೆ ಅರ್ಹರು. ಫಲಿತಾಂಶ ಏನೇ ಇರಲಿ…. ಹೃದಯ ವಿದ್ರಾವಕವಾಗಲಿದೆ ಎಂದು ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಏಕದಿನಕ್ಕೆ ಆಸೀಸ್ ಆಲ್‌ರೌಂಡರ್ ಮ್ಯಾಕ್ಸ್‌ವೆಲ್ ದಿಢೀರ್ ನಿವೃತ್ತಿ
ಮಳೆಯಿಂದ 2 ಗಂಟೆ 15 ನಿಮಿಷ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಮುಂಬೈ 6 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಇನ್ನೂ 6 ಎಸೆತ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿ ಜಯ ಸಾಧಿಸಿತು.
ಒಂದು ಹಂತದಲ್ಲಿ ಸಂಕಷ್ಟದಲ್ಲಿದ್ದರೂ ಶ್ರೇಯಸ್ ಅಯ್ಯರ್ ಮತ್ತು ನೆಹಲ್ ವಧೇರಾ 47 ಎಸೆತಗಳಲ್ಲಿ 84 ರನ್ ಜೊತೆಯಾಟವಾಡಿ ತಂಡವನ್ನು ಪಾರು ಮಾಡಿದರು. ವಧೇರಾ 48 ರನ್(29 ಎಸೆತ, 4 ಬೌಂಡರಿ, 2 ಸಿಕ್ಸ್) ಹೊಡೆದು ಔಟಾದರೆ ನಾಯಕನ ಆಟವಾಡಿದ ಶ್ರೇಯಸ್ ಅಯ್ಯರ್ ಔಟಾಗದೇ 87 ರನ್(41 ಎಸೆತ, 5 ಬೌಂಡರಿ, 8 ಸಿಕ್ಸ್) ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು. ಅತ್ಯುತ್ತಮ ಆಟವಾಡಿ ತಂಡವನ್ನು ಗೆಲ್ಲಿಸಿಕೊಟ್ಟ ಶ್ರೇಯಸ್ ಅಯ್ಯರ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಅಹಮದಾಬಾದ್: ಈ ಬಾರಿ ಐಪಿಎಲ್‌ನಲ್ಲಿ (IPL 2025) ಹೊಸ ಚಾಂಪಿಯನ್ ತಂಡದ ಉದಯವಾಗಲಿದೆ. ಅಷ್ಟೇ ಅಲ್ಲದೇ ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ (RCB) ಮತ್ತು ಪಂಜಾಬ್ (Punjab Kings) 4 ಬಾರಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ವಿಶೇಷ.
ಕಳೆದ 18 ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಟ್ರೋಫಿ ಗೆದ್ದುಕೊಂಡಿಲ್ಲ. ಆರ್‌ಸಿಬಿ ಈ ಮೊದಲು 3 ಬಾರಿ ಫೈನಲ್ ಪ್ರವೇಶಿಸಿದ್ದರೆ ಪಂಜಾಬ್ ಒಂದು ಬಾರಿ ಫೈನಲ್ ಆಡಿ ಸೋಲನುಭವಿಸಿತ್ತು. 2014 ರಲ್ಲಿ ಕೋಲ್ಕತ್ತಾ ವಿರುದ್ಧ ಪಂಜಾಬ್ ಕಿಂಗ್ಸ್ ಸೋತಿತ್ತು. ಇದೇ ಮೊದಲ ಬಾರಿಗೆ ಎರಡು ತಂಡಗಳು ಫೈನಲಿನಲ್ಲಿ ಮುಖಾಮುಖಿಯಾಗುತ್ತಿವೆ.
ಲೀಗ್ ಹಂತದಲ್ಲಿ ಎರಡು ತಂಡಗಳು ಒಂದೊಂದು ಪಂದ್ಯವನ್ನು ಗೆದ್ದುಕೊಂಡಿದ್ದವು. ಆದರೆ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ತಂಡವನ್ನು ಸೋಲಿಸಿ ಆರ್‌ಸಿಬಿ ಫೈನಲ್ ಪ್ರವೇಶಿಸಿತ್ತು. ಹೀಗಾಗಿ ಎರಡು ತಂಡಗಳ ಮಧ್ಯೆ ಸಮಬಲದ ಹೋರಾಟ ನಡೆಯಲಿದೆ. ಹೀಗಾಗಿ ಇಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ತಂಡ ಈ ಹಿಂದೆ ಆಡಿದ ಫೈನಲ್ ಪಂದ್ಯಗಳ ಕಿರು ಮಾಹಿತಿಯನ್ನು ನೀಡಲಾಗಿದೆ. ಇದನ್ನೂ ಓದಿ: ಕೊಹ್ಲಿ ಮಾಲೀಕತ್ವದ ಬೆಂಗ್ಳೂರು ಪಬ್ ವಿರುದ್ಧ ಮತ್ತೊಂದು ಎಫ್‌ಐಆರ್
2009 – ಫೈನಲ್‌ನಲ್ಲಿ ವಿರೋಚಿತ ಸೋಲು
2009ರ ಆವೃತ್ತಿಯಲ್ಲೂ 8 ತಂಡಗಳು ಭಾಗವಹಿಸಿದ್ದವು. 2ನೇ ಆವೃತ್ತಿಯಲ್ಲಿ ಆರ್‌ಸಿಬಿ ಪುಟಿದೆದ್ದಿತ್ತು. 14 ಪಂದ್ಯಗಳಲ್ಲಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿ 16 ಅಂಕ ಗಳಿಸಿ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿತ್ತು. ಆಗ ಎಲಿಮಿನೇಟರ್ ಪಂದ್ಯ ಇರಲಿಲ್ಲ, 2 ಸೆಮಿಫೈನಲ್ ಪಂದ್ಯಗಳು ಮಾತ್ರ ಇದ್ದವು. ಮೊದಲ ಸೆಮಿಫೈನಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ (ಇಂದಿನ ಡೆಲ್ಲಿ ಕ್ಯಾಪಿಟಲ್ಸ್), ಹೈದರಾಬಾದ್ ಡೆಕ್ಕನ್ ಚಾರ್ಜಸ್ ಕಾದಾಟ ನಡೆಸಿದ್ರೆ, 2ನೇ ಸೆಮಿಸ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಸೆಣಸಾಡಿತ್ತು. ಈ ವೇಳೆ ಸೆಮಿಸ್‌ನಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ್ದ ಆರ್‌ಸಿಬಿ ಫೈನಲ್‌ನಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ 6 ರನ್‌ಗಳ ಅಂತರದಿಂದ ಸೋಲು ಕಂಡಿತ್ತು. ಟ್ರೋಫಿ ಗೆಲ್ಲುವ ಕನಸೂ ಕಮರಿತ್ತು.
2011 ಚೆನ್ನೈ ವಿರುದ್ಧ ಎರಡು ಬಾರಿ ಸೋಲು
2011ರ ಆವೃತ್ತಿ ಆರ್‌ಸಿಬಿ ಪಾಲಿಗೆ ಅತ್ಯಂತ ರೋಚಕ ಘಟ್ಟ. ಲೀಗ್ ಸುತ್ತಿನಲ್ಲಿ 14ರಲ್ಲಿ 9 ಪಂದ್ಯ ಗೆದ್ದು ಪ್ಲೇ ಆಫ್ ಪ್ರವೇಶಿಸಿತ್ತು. ಈ ವೇಳೆಗೆ ಪ್ಲೇ ಆಫ್ ಸ್ವರೂಪ ಸಂಪೂರ್ಣ ಬದಲಾಗಿತ್ತು. ಮೊದಲ ಸೆಮಿಫೈನಲ್‌ನಲ್ಲಿ ಚೆನ್ನೈ ವಿರುದ್ಧ 6 ವಿಕೆಟ್‌ಗಳ ಹೀನಾಯ ಸೋಲು ಕಂಡಿದ್ದ ಆರ್‌ಸಿಬಿಗೆ ಮತ್ತೊಂದು ಅವಕಾಶ ಸಿಕ್ಕಿತ್ತು. ಆಗ 2ನೇ ಕಾಲಿಫೈಯರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಭರ್ಜರಿ ಗೆಲುವು ಕಂಡಿದ್ದ ಆರ್‌ಸಿಬಿ ಪುನಃ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 58 ರನ್‌ಗಳಿಂದ ಸೋಲು ಕಂಡಿತ್ತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಸತತ 2ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಇದನ್ನೂ ಓದಿ:ಸಂಸದೆ ಜೊತೆ ಎಂಗೇಜ್‌ಮೆಂಟ್ ಆಗ್ತಿದ್ದಾರೆ ರಿಂಕು ಸಿಂಗ್ – ಕ್ರಿಕೆಟಿಗನ ಕೈ ಹಿಡಿಯೋ ಚೆಲುವೆ ಯಾರು?
2016 – 8 ರನ್‌ಗಳಿಂದ ಸೋಲು
2016 ಐಪಿಎಲ್ ಆವೃತ್ತಿ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಹಬ್ಬವಾಗಿತ್ತು. ಅಂಕಪಟ್ಟಿಯಲ್ಲಿ ಟಾಪ್-2 ಸ್ಥಾನದೊಂದಿಗೆ ಪ್ಲೇ ಆಫ್ ಪ್ರವೇಶಿಸಿದ್ದ ಆರ್‌ಸಿಬಿ ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಫೈನಲ್ ತಲುಪಿತ್ತು. ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್ ನಷ್ಟಕ್ಕೆ 208 ರನ್ ಸಿಡಿಸಿತ್ತು. ಆದ್ರೆ ಚೇಸಿಂಗ್ ಮಾಡಿದ್ದ ಆರ್‌ಸಿಬಿ ಕ್ರಿಸ್‌ಗೇಲ್ ಮತ್ತು ಕಿಂಗ್ ಕೊಹ್ಲಿ ಆರ್ಭಟದ ಹೊರತಾಗಿ 8 ರನ್‌ಗಳ ವಿರೋಚಿತ ಸೋಲು ಅನುಭವಿಸಿತು. ಆಗ ಸನ್ ರೈಸರ್ಸ್ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಟ್ರೋಫಿ ಎತ್ತಿ ಹಿಡಿದಿತ್ತು.
2014 – ಕೋಲ್ಕತ್ತಾ ವಿರುದ್ಧ ಸೋಲು
ಅಂಕಪಟ್ಟಿಯಲ್ಲಿ 22 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದ ಪಂಜಾಬ್ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಮೊದಲು ಬ್ಯಾಟ್ ಬೀಸಿದ್ದ ಪಂಜಾಬ್ 4 ವಿಕೆಟ್ ನಷ್ಟಕ್ಕೆ 199 ರನ್ ಹೊಡೆದಿತ್ತು. ವೃದ್ಧಿಮಾನ್ ಸಹ ಅಜೇಯ 115 ರನ್ ಹೊಡೆದಿದ್ದರು. ನಂತರ ಬ್ಯಾಟ್ ಬೀಸಿದ್ದ ಕೋಲ್ಕತ್ತಾ ಇನ್ನೂ 3 ಎಸೆತ ಬಾಕಿ ಇರುವಂತೆಯೇ 7 ವಿಕೆಟ್ ನಷ್ಟಕ್ಕೆ 200 ರನ್ ಹೊಡೆದು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಕೋಲ್ಕತ್ತಾ ಪರ ಕನ್ನಡಿಗ ಮನೀಷ್ ಪಾಂಡೆ 50 ಎಸೆತಗಳಲ್ಲಿ 94 ರನ್ ಹೊಡೆದಿದ್ದರು. ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಪಂಜಾಬ್‌ನ ಮ್ಯಾಕ್ಸ್‌ವೆಲ್ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.
ಬೆಂಗಳೂರು: ಈ ಬಾರಿ ಐಪಿಎಲ್‌ನಲ್ಲಿ (IPL) ಆರ್‌ಸಿಬಿ (RCB) ಫೈನಲ್ ತಲುಪಿರುವ ಹಿನ್ನೆಲೆ ಅಭಿಮಾನಿಯೊಬ್ಬರು ಫ್ರೀ ಚಾಟ್ಸ್ ವಿತರಿಸಲಿದ್ದಾರೆ.
ಹೌದು, ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ (Mahalakshmi Layout) ಅನಿಲ್ ಚಾಟ್ಸ್ ಸೆಂಟರ್‌ನ ಮಾಲೀಕರು ಉಚಿತ ಚಾಟ್ಸ್ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ. ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಫೈನಲ್‌ಗೆ ಎಂಟ್ರಿಯಾಗಿರುವ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದಾರೆ. ಇದನ್ನೂ ಓದಿ: ಜೂ.8ರವರೆಗೆ ರಾಜ್ಯದಲ್ಲಿ ಸಾಧಾರಣ ಮಳೆ
ಸದ್ಯ ತಮ್ಮ ಚಾಟ್ ಸೆಂಟರ್ ಮುಂದೆ ಬೋರ್ಡ್ ಹಾಕಿಕೊಂಡಿದ್ದು, ಈ ಸಲ ಕಪ್ ನಮ್ದು ಆದ್ರೆ ಒನ್ ಡೇ ಪಾನಿಪುರಿ ನಿಮ್ದು, ಮಸಾಲಾಪುರಿ, ಪಾನಿಪುರಿ, ಭೇಲ್ ಪುರಿ ಫ್ರೀ ಕೊಡುವುದಾಗಿ ಬರೆದುಕೊಂಡಿದ್ದಾರೆ. ಇದೇ ಜೂ.4 ರಂದು ಸಂಜೆ 5 ಗಂಟೆಯಿಂದ ಉಚಿತ ಚಾಟ್ಸ್ ನೀಡಲಿದ್ದಾರೆ.
– ಶ್ರೇಯಸ್ ಅಯ್ಯರ್ ಸ್ಫೋಟಕ ಅರ್ಧಶತಕ – 2ನೇ ಬಾರಿ ಫೈನಲ್ ಪ್ರವೇಶಿಸಿದ ಪಂಜಾಬ್
ಅಹಮಾದಾಬಾದ್: ಕ್ವಾಲಿಫೈಯರ್-2ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ರೋಚಕ 5 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಪಂಜಾಬ್ (Punjab Kings) ಐಪಿಎಲ್ ಫೈನಲ್‌ಗೆ (IPL Final) ಪ್ರವೇಶಿಸಿದೆ. 5 ಬಾರಿ ಚಾಂಪಿಯನ್ ಮುಂಬೈ ತಂಡವನ್ನು ಬಗ್ಗು ಬಡಿದ ಪಂಜಾಬ್ 2ನೇ ಬಾರಿ ಫೈನಲ್‌ಗೆ ತಲುಪಿದ್ದು ನಾಳೆ ಆರ್‌ಸಿಬಿಯನ್ನು (RCB) ಎದುರಿಸಲಿದೆ
ಮಳೆಯಿಂದ 2 ಗಂಟೆ 15 ನಿಮಿಷ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಮುಂಬೈ 6 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಇನ್ನೂ 6 ಎಸೆತ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿ ಜಯ ಸಾಧಿಸಿತು.
ಪ್ರಿಯಾಂಶ್ ಆರ್ಯ 20 ರನ್, ಪ್ರಭುಸಿಮ್ರಾನ್ ಸಿಂಗ್ 6 ರನ್, ಬುಮ್ರಾ ಮೊದಲ ಓವರ್‌ನಲ್ಲಿ 20 ರನ್ ಹೊಡೆದ ಜೋಶ್ ಇಂಗ್ಲಿಸ್ 38 ರನ್(21 ಎಸೆತ, 5 ಬೌಂಡರಿ, 2 ಸಿಕ್ಸ್) ಹೊಡೆದು ಔಟಾದಾಗ ಪಂಜಾಬ್ ಸ್ಕೋರ್ 3 ವಿಕಟ್ ನಷ್ಟಕ್ಕೆ 72 ರನ್ ಗಳಿಸಿತ್ತು. ಇದನ್ನೂ ಓದಿ: ಮುಂಬೈ ಸಂಘಟಿತ ಬ್ಯಾಟಿಂಗ್ – ಪಂಜಾಬ್‌ಗೆ 204 ರನ್ ಗುರಿ
ಒಂದು ಹಂತದಲ್ಲಿ ಸಂಕಷ್ಟದಲ್ಲಿದ್ದರೂ ಶ್ರೇಯಸ್ ಅಯ್ಯರ್ ಮತ್ತು ನೆಹಲ್ ವಧೇರಾ 47 ಎಸೆತಗಳಲ್ಲಿ 84 ರನ್ ಜೊತೆಯಾಟವಾಡಿ ತಂಡವನ್ನು ಪಾರು ಮಾಡಿದರು. ವಧೇರಾ 48 ರನ್(29 ಎಸೆತ, 4 ಬೌಂಡರಿ, 2 ಸಿಕ್ಸ್) ಹೊಡೆದು ಔಟಾದರೆ ನಾಯಕನ ಆಟವಾಡಿದ ಶ್ರೇಯಸ್ ಅಯ್ಯರ್ ಔಟಾಗದೇ 87 ರನ್(41 ಎಸೆತ, 5 ಬೌಂಡರಿ, 8 ಸಿಕ್ಸ್) ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು. ಅತ್ಯುತ್ತಮ ಆಟವಾಡಿ ತಂಡವನ್ನು ಗೆಲ್ಲಿಸಿಕೊಟ್ಟ ಶ್ರೇಯಸ್ ಅಯ್ಯರ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
11 ವರ್ಷಗಳ ಬಳಿಕ ಫೈನಲ್:
ಪಂಜಾಬ್ ಐಪಿಎಲ್‌ನಲ್ಲಿಎರಡನೇ ಬಾರಿ ಫೈನಲ್ ಪ್ರವೇಶಿಸಿದೆ. 11 ವರ್ಷಗಳ ಹಿಂದೆ 2014 ರಲ್ಲಿ ಕೋಲ್ಕತ್ತಾ ವಿರುದ್ಧ ಫೈನಲ್‌ನಲ್ಲಿ ಸೋತು ಪಂಜಾಬ್ ರನ್ನರ್ ಅಪ್ ಅಗಿತ್ತು.
ರಾಯಚೂರು: ಜಿಲ್ಲೆಯ ಮಸ್ಕಿ (Maski) ತಾಲೂಕಿನ ಹಸಮಕಲ್ ಗ್ರಾಮದಲ್ಲಿ ಆರ್‌ಸಿಬಿ (RCB) ಗೆಲುವಿನ ಸಂಭ್ರಮಾಚರಣೆ ವೇಳೆ ಹುಚ್ಚಾಟ ಮೆರೆದಿದ್ದ ಎಂಟು ಜನ ಆರ್‌ಸಿಬಿ ಅಭಿಮಾನಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪಟಾಕಿ ಹೊಡೆಯುವ ವೇಳೆ ಪೆಟ್ರೋಲ್ ಬಳಸಿ ಭಾರೀ ಸ್ಫೋಟ ಸೃಷ್ಟಿಸಿ ಯುವಕರು ಹುಚ್ಚಾಟ ಮೆರೆದಿದ್ದರು. ಈ ಹಿನ್ನೆಲೆ ಗುರುರಾಜ, ಹಜರತ್, ರಮೇಶ್, ದೇವಯ್ಯ ಸೇರಿ 8 ಜನರನ್ನು ಬಂಧಿಸಲಾಗಿದೆ. ಆರ್‌ಸಿಬಿ ಫೈನಲ್‌ಗೆ ಹೋಗಿದ್ದಕ್ಕೆ ಹಸಮಕಲ್ ಗ್ರಾಮದ ಮುಖ್ಯ ರಸ್ತೆಯಲ್ಲಿ ಯುವಕರು ಸಂಭ್ರಮಾಚರಣೆ ಮಾಡಿದ್ದರು. ಇದನ್ನೂ ಓದಿ: ಹೇಮಾವತಿ ಲಿಂಕ್ ಕೆನಾಲ್ ಕದನ – ಇಬ್ಬರು ಸ್ವಾಮೀಜಿಗಳು ಸೇರಿ ನೂರಾರು ರೈತರ ವಿರುದ್ಧ FIR
ಈ ವೇಳೆ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಪಟಾಕಿ ಇಟ್ಟು, ಪೆಟ್ರೋಲ್ ತುಂಬಿ, ಮೈದಾ ಹಿಟ್ಟು ಬಳಸಿ ಸ್ಫೋಟಿಸಿದ್ದರು. ಯುವಕರ ಹುಚ್ಚಾಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆ ಸಿಂಧನೂರಿನ ಬಳಗಾನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಂಟು ಜನರನ್ನು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಫೈನಲ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ – `ಈ ಸಲ ಕಪ್ ನಮ್ದೇʼ ಎಂದ ಡಿಂಪಲ್ ಕ್ವೀನ್