Tag: rcb

  • 18ರ ಇಬ್ಬರು ವರ್ಜಿನ್ಸ್ – ಈ ರಾತ್ರಿ ಯಾರಿಗೆ ಅದೃಷ್ಟ? – IPL ಫೈನಲ್‌ ಪಂದ್ಯಕ್ಕೆ ಡ್ಯುರೆಕ್ಸ್ ಫನ್ನಿ ಪೋಸ್ಟ್‌!

    18ರ ಇಬ್ಬರು ವರ್ಜಿನ್ಸ್ – ಈ ರಾತ್ರಿ ಯಾರಿಗೆ ಅದೃಷ್ಟ? – IPL ಫೈನಲ್‌ ಪಂದ್ಯಕ್ಕೆ ಡ್ಯುರೆಕ್ಸ್ ಫನ್ನಿ ಪೋಸ್ಟ್‌!

    ಹಮದಾಬಾದ್‌ನ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ IPL ಫೈನಲ್‌ ಪಂದ್ಯದ ಬಗ್ಗೆ ಪ್ರಸಿದ್ಧ ಕಾಂಡೋಮ್ ಬ್ರ್ಯಾಂಡ್‌ ಡ್ಯುರೆಕ್ಸ್ ಸಾಮಾಜಿಕ ಜಾಲತಾಣದಲ್ಲಿ ಫನ್ನಿ ಪೋಸ್ಟ್‌‌ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ 18ರ ಇಬ್ಬರು ವರ್ಜಿನ್ಸ್ – ಈ ರಾತ್ರಿ ಯಾರಿಗೆ ಅದೃಷ್ಟ? ಎಂದು ಕಂಪನಿ ಪೋಸ್ಟ್‌ ಹಂಚಿಕೊಂಡಿದೆ.

     

    View this post on Instagram

     

    A post shared by Durex India (@durex.india)

    ಈ ಬಾರಿ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ 17 ವರ್ಷಗಳ ಬಳಿಕ ಕಪ್‌ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಗೆದ್ದರೆ ಎರಡೂ ತಂಡಗಳಿಗೂ ಇದು ಚೊಚ್ಚಲ ಕಪ್‌ ಆಗಲಿದೆ. ಇದರಿಂದ ಈ ಎರಡು ತಂಡದಲ್ಲಿ ಯಾವ ತಂಡ ಗೆದ್ದರೂ ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಇವೆರೆಡೂ ತಂಡಗಳು ಇನ್ನೂ ಕಪ್‌ ಗೆದ್ದಿರದ ಕಾರಣ ಡ್ಯೂರೆಕ್ಸ್ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಈ ತಮಾಷೆಯ ಪೋಸ್ಟ್‌ ಹಂಚಿಕೊಂಡಿದೆ. ಇದನ್ನೂ ಓದಿ: For The First Time ಫೈನಲ್‌ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ – ಇಂದಿನ ಲಕ್‌ ಹೇಗಿದೆ?

    ಈ ಪೋಸ್ಟ್‌ಗೆ ಜನರು ನಾನಾ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಕಂಪನಿಯ ಈ ಸೃಜನಶೀಲತೆಗೆ ಆಸ್ಕರ್‌ ಕೊಟ್ಟರೂ ಕಡಿಮೆ ಆಗುತ್ತೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಏನೇ ಇರಲಿ ಈ ಪೋಸ್ಟ್‌ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

    18ನೇ ಆವೃತ್ತಿಯ ಫೈನಲ್‌ ಪಂದ್ಯ ಆರಂಭವಾಗಿದ್ದು, ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್‌ (Punjab Kings) ತಂಡ ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿದೆ. ಬ್ಯಾಟಿಂಗ್‌ ಮಾಡುವ ಅವಕಾಶವನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡಕ್ಕೆ ಬಿಟ್ಟುಕೊಟ್ಟಿದೆ. ಇದನ್ನೂ ಓದಿ: ಪಂದ್ಯ ಆರಂಭಕ್ಕೂ ಮುನ್ನ ಶ್ರೇಯಸ್‌ಗೆ All The Best ಹೇಳಿ ಕ್ರೀಡಾಸ್ಪೋರ್ತಿ ಮೆರೆದ ಕೊಹ್ಲಿ

  • Photo Gallery | ಭಾರತೀಯ ಸೇನೆಗೆ ಫೈನಲ್‌‌ ಪಂದ್ಯ ಅರ್ಪಣೆ… ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಿ

    Photo Gallery | ಭಾರತೀಯ ಸೇನೆಗೆ ಫೈನಲ್‌‌ ಪಂದ್ಯ ಅರ್ಪಣೆ… ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಿ

    ಅಹಮದಾಬಾದ್‌: 18ನೇ ಆವೃತ್ತಿಯ ಐಪಿಎಲ್‌ ಫೈನಲ್‌ (IPL Final) ಪಂದ್ಯ ಆರಂಭಗೊಂಡಿದೆ. ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್‌ ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿದ್ದು, ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಆರ್‌ಸಿಬಿಗೆ ಬಿಟ್ಟುಕೊಟ್ಟಿದೆ. ಫೈನಲ್‌ ಪಂದ್ಯಕ್ಕೂ ಮುನ್ನ ಭಾರತ ಸೇನೆಗೆ ವಿಶೇಷ ಗೌರವ ಸಲ್ಲಿಸಲಾಯಿತು. ಖ್ಯಾತ ಹಿನ್ನೆಲೆ ಗಾಯಕ ಶಂಕರ್‌ ಮಹಾದೇವನ್‌ ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರ ಮೈನವಿರೇಳುವಂತೆ ಮಾಡಿದರು. ಅಲ್ಲದೇ ವಾಯುಪಡೆಯ ಅದ್ಭುತ ಏರ್‌ಶೋ ಕೂಡ ಗಮನ ಸೆಳೆಯಿತು. ಇಂತಹ ಅದ್ಭುತ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ….

  • ಆರ್‌ಸಿಬಿ ಕಪ್ ಗೆಲ್ಲಲೆಂದು ಮಾದಪ್ಪನಿಗೆ ಮುಡಿ ಕೊಟ್ಟ ಅಭಿಮಾನಿ

    ಆರ್‌ಸಿಬಿ ಕಪ್ ಗೆಲ್ಲಲೆಂದು ಮಾದಪ್ಪನಿಗೆ ಮುಡಿ ಕೊಟ್ಟ ಅಭಿಮಾನಿ

    ಚಾಮರಾಜನಗರ: ಐಪಿಎಲ್ (IPL 2025) ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಆರ್‌ಸಿಬಿ (RCB) ಕಪ್‌ ಗೆಲ್ಲಲೆಂದು ಅಭಿಮಾನಿಗಳು ವಿಶೇಷ, ವಿಭಿನ್ನವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

    ಅಭಿಮಾನಿಯೊಬ್ಬ ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Hills) ಮುಡಿ ಕೊಟ್ಟು ಆರ್‌ಸಿಬಿ ಜಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ನಾನು ಬೆಂಗಳೂರಿನ ಅಳಿಯ, ಗೆದ್ದು ಬಾ ಆರ್‌ಸಿಬಿ: ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್‌ ವಿಶ್‌

    ಮೈಸೂರಿನ ಶಶಿಕುಮಾರ್ ಎಂಬವರು ಮಹದೇಶ್ವರನಿಗೆ ಮುಡಿ ಕೊಟ್ಟಿದ್ದು, ಆರ್‌ಸಿಬಿ ಜೆರ್ಸಿ ಹಿಡಿದು ಮಹದೇಶ್ವರನಿಗೆ ಇಡುಗಾಯಿ ಒಡೆದಿದ್ದಾರೆ. ಅಯ್ಯಪ್ಪನ ದೇಗುಲಕ್ಕೆ 18 ಮೆಟ್ಟಿಲು, ಈ ಬಾರಿ ಸೀಸನ್ 18 ಹಾಗೂ ವಿರಾಟ್ ಜೆರ್ಸಿ ನಂಬರ್ ಕೂಡ 18. ಅದೇ ರೀತಿ 18 ರ ಕಪ್ ಕೂಡ ನಮ್ಮದೇ ಎಂದು ಶಶಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು ಟ್ರೈಲರ್ ಅಷ್ಟೇ, ಆರ್‌ಸಿಬಿ ಗೆದ್ದರೆ ಹೋಮ-ಹವನ ಮಾಡಿಸುತ್ತೇನೆ ಎಂದು ತಿಳಿಸಿದ್ದಾರೆ.

    ಅಹಮದಾಬಾದ್‌ನಲ್ಲಿ ಇಂದು ಐಪಿಎಲ್‌ 2025ರ ಟ್ರೋಫಿಗಾಗಿ ಪಂಜಾಬ್‌ ವಿರುದ್ಧ ಆರ್‌ಸಿಬಿ ಸೆಣಸಲಿದೆ. ಐಪಿಎಲ್‌ ಇತಿಹಾಸದಲ್ಲಿ ಉಭಯ ತಂಡಗಳು ಇದುವರೆಗೂ ಒಂದೇ ಒಂದು ಕಪ್‌ ಗೆದ್ದಿಲ್ಲ. ಈ ದಿನದ ಪಂದ್ಯ ಇಬ್ಬರಿಗೂ ಐತಿಹಾಸಿಕ ಮ್ಯಾಚ್‌ ಆಗಿದೆ. ಇದನ್ನೂ ಓದಿ: ಆರ್‌ಸಿಬಿ ಗೆಲುವಿಗಾಗಿ ರಕ್ತದಾನ ಮಾಡಿದ ಕಿರುತೆರೆ ನಟಿ ರಜಿನಿ

  • ಆರ್‌ಸಿಬಿ ಗೆಲುವಿಗಾಗಿ ರಕ್ತದಾನ ಮಾಡಿದ ಕಿರುತೆರೆ ನಟಿ ರಜಿನಿ

    ಆರ್‌ಸಿಬಿ ಗೆಲುವಿಗಾಗಿ ರಕ್ತದಾನ ಮಾಡಿದ ಕಿರುತೆರೆ ನಟಿ ರಜಿನಿ

    ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್‌ (IPL 2025) ಕೊನೇ ಹಂತಕ್ಕೆ ಬಂದು ನಿಂತಿದೆ. ಇಂದು ಪಂಜಾಬ್‌ ಕಿಂಗ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB vs PBKS) ತಂಡದ ಫೈನಲ್‌ಪಂದ್ಯಕ್ಕೆ ಇಲ್ಲಿ ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. ದಶಕಗಳಿಂದ ಚೊಚ್ಚಲ ಐಪಿಎಲ್‌ ಟ್ರೋಫಿಗಾಗಿ ಕಾದಿರುವ ಬೆಂಗಳೂರು ಮತ್ತು ಪಂಜಾಬ್‌ ತಂಡಕ್ಕೆ ವಿರಾಟ್‌ ಕೊಹ್ಲಿ (Virat Kohli) ಮತ್ತು ಶ್ರೇಯಸ್‌ ಅಯ್ಯರ್‌ ಇಬ್ಬರೂ ಪ್ರಶಸ್ತಿ ಗೆದ್ದುಕೊಡುವ ಉತ್ಸಾಹದಲ್ಲಿ ಎದುರಾಗುತ್ತಿದ್ದಾರೆ. 18 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಳ್ಳುವ ಕಾತರದಲ್ಲಿವೆ ಎರಡೂ ತಂಡಗಳೂ ಇವೆ.

    ಆದ್ರೆ ಗೆಲ್ಲುವ ಫೇವರೆಟ್‌ ಆಗಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಅಭಿಮಾನಿಗಳು (RCB Fans) ಗಣ್ಯರ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಈ ನಡುವೆ ಕಿರುತೆರೆಯ ಖ್ಯಾತ ನಟಿ ರಜಿನಿ ಆರ್‌ಸಿಬಿ ಗೆಲುವಿಗಾಗಿ ರಕ್ತದಾನ ಮಾಡಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ – ಐಪಿಎಲ್ ಫೈನಲ್‌ನಲ್ಲಿ ಆಡಲಿದ್ದಾರೆ ಫಿಲ್ ಸಾಲ್ಟ್

    ಆರ್‌ಸಿಬಿ ಅಭಿಮಾನಿಯೂ ಆಗಿರುವ ʻಅಮೃತ ವರ್ಷಿಣಿʼ ಧಾರಾವಾಹಿ ಖ್ಯಾತಿಯ ನಟಿ ರಜನಿ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಗೆಲ್ಲಲೆಂದು ರಕ್ತದಾನ ಮಾಡಿದ್ದಾರೆ. ಆ ಫೋಟೋವನ್ನ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ʻಆರ್‌ಸಿಬಿ ವಿನ್ ಆಗ್ಲಿ ಅಂತ ಬ್ಲಡ್ ಕೊಟ್ಟಿದ್ದೀವಿ, ಈ ಸಲ ಕಪ್ ನಮ್ದೇ.. ʻಜೈ ಆರ್‌ಸಿಬಿʼ ಅಂತ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

    ಇಂದು ಸಂಜೆ 7:30ಕ್ಕೆ ಪಂದ್ಯ ಶುರುವಾಗಲಿದ್ದು, ಜಿಯೋ ಸ್ಟಾರ್‌ನಲ್ಲಿ ನೇರಪ್ರಸಾರವಾಗಲಿದೆ. 2ನೇ ಅವಧಿಯಲ್ಲಿ ಇಬ್ಬನಿಯ ಪ್ರಭಾವದಿಂದಾಗಿ ಚೇಸಿಂಗ್ ಸುಲಭವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಟಾಸ್‌ ಗೆಲುವು ನಿರ್ಣಾಯಕವಾಗಲಿದೆ. ಟಾಸ್‌ ಗೆದ್ದ ತಂಡ ಮೊದಲು ಫೀಲ್ಡಿಂಗ್‌ ಆಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ. ಇದನ್ನೂ ಓದಿ: RCB ಇಂಪ್ಯಾಕ್ಟ್ ಪ್ಲೇಯರ್ ಆಗಿ ಸಿಂಧನೂರಿನ ಮನೋಜ್ ಬಾಂಡಗೆ – ಕುಟುಂಬಸ್ಥರಿಂದ ಗೆಲುವಿನ ಶುಭಹಾರೈಕೆ

    ಆರ್‌ಸಿಬಿ ಗೆಲ್ಲುವ ಫೇವರೆಟ್
    ಕ್ವಾಲಿಫೈಯರ್‌-1ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು 8 ವಿಕೆಟ್‌ಗಳಿಂದ ಮಣಿಸುವ ಮೂಲಕ ಆರ್‌ಸಿಬಿ ನೇರವಾಗಿ ಫೈನಲ್‌ ಪ್ರವೇಶಿಸಿದೆ. ಹಿಂದಿನ ಆವೃತ್ತಿಗಳಲ್ಲಿನ ನೀರಸ ಪ್ರದರ್ಶನ ಮೀರಿರುವ ಆರ್‌ಸಿಬಿ, ಈ ವರ್ಷ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಅರಂಭಿಕ ಕ್ರಮಾಂಕದಲ್ಲಿ ಕೊಹ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಭದ್ರ ಅಡಿಪಾಯ ಒದಗಿಸಿದ್ದಲ್ಲದೇ, ಈ ಬಾರಿ ಒಟ್ಟು 614 ರನ್‌ ಗಳಿಸಿದ್ದಾರೆ. ಇದನ್ನೂ ಓದಿ: ಸತತ 2ನೇ ವರ್ಷ ರಜತ್‌ Vs ಶ್ರೇಯಸ್‌ ತಂಡಗಳ ಮಧ್ಯೆ ಟಿ20 ಫೈನಲ್!‌

    ಮಳೆ ಸಾಧ್ಯತೆ ಇದೆಯೇ?
    ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2ನೇ ಕ್ವಾಲಿಫೈಯರ್‌ ಪಂದ್ಯ, ಮಳೆಯಿಂದಾಗಿ 2 ಗಂಟೆ ತಡವಾಗಿ ಆರಂಭಗೊಂಡಿತ್ತು. ಫೈನಲ್‌ಗೂ ಸಾಕ್ಷಿಯಾಗಲಿರುವ ಅಹಮದಾಬಾದ್‌ನಲ್ಲಿ ಸದ್ಯದ ಮಾಹಿತಿ ಪ್ರಕಾರ ಮಂಗಳವಾರ ಮಳೆಯ ಸಾಧ್ಯತೆ ಶೇ.62ರಷ್ಟಿದೆ. ಆದರೆ, ಬೆಳಗ್ಗೆ ಅಥವಾ ಮಧ್ಯಾಹ್ನ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ರಾತ್ರಿ ವೇಳೆ ಮಳೆಯ ಸಾಧ್ಯತೆ ಶೇ.5ರಷ್ಟು ಎಂದು ಹವಾಮಾನ ವರದಿ ತಿಳಿಸಿದೆ.

  • ನಾನು ಬೆಂಗಳೂರಿನ ಅಳಿಯ, ಗೆದ್ದು ಬಾ ಆರ್‌ಸಿಬಿ: ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್‌ ವಿಶ್‌

    ನಾನು ಬೆಂಗಳೂರಿನ ಅಳಿಯ, ಗೆದ್ದು ಬಾ ಆರ್‌ಸಿಬಿ: ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್‌ ವಿಶ್‌

    ಲಂಡನ್: ಬ್ರಿಟನ್‌ ಮಾಜಿ ಪ್ರಧಾನಿ ಹಾಗೂ ಕರ್ನಾಟಕದ ಅಳಿಯ ರಿಷಿ ಸುನಕ್‌ (Rishi Sunak) ಅವರು ಪಂಜಾಬ್‌ ಕಿಂಗ್ಸ್‌ ವಿರುದ್ಧ ಐಪಿಎಲ್‌ ಫೈನಲ್‌ಗೆ ಆರ್‌ಸಿಬಿ (RCB) ತಂಡಕ್ಕೆ ಬೆಂಬಲ ಘೋಷಿಸಿದ್ದಾರೆ.

    ಭಾರತ ಭೇಟಿಯ ಸಂದರ್ಭದಲ್ಲಿ ಮಾತನಾಡಿದ್ದ ಸುನಕ್, ಆರ್‌ಸಿಬಿಯೊಂದಿಗಿನ ನನ್ನ ಬಾಂಧವ್ಯ ಕುಟುಂಬದ ಮೂಲಕ ಶುರುವಾಯಿತು ಎಂದು ತಿಳಿಸಿದ್ದರು. ನಾನು ಬೆಂಗಳೂರಿನ ಕುಟುಂಬದಾಕೆಯನ್ನು ಮದುವೆಯಾಗಿದ್ದೇನೆ. ಆದ್ದರಿಂದ ಆರ್‌ಸಿಬಿ ನನ್ನ ತಂಡ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ – ಐಪಿಎಲ್ ಫೈನಲ್‌ನಲ್ಲಿ ಆಡಲಿದ್ದಾರೆ ಫಿಲ್ ಸಾಲ್ಟ್

    ಸುನಕ್‌, ತಮ್ಮ ಅತ್ತೆ-ಮಾವ ಅವರಿಂದ ಮದುವೆಯ ಉಡುಗೊರೆಯಾಗಿ ಆರ್‌ಸಿಬಿ ಜೆರ್ಸಿಯನ್ನು ಪಡೆದಿದ್ದರು. ಅಂದಿನಿಂದ ತಂಡವನ್ನು ಅನುಸರಿಸುತ್ತಿದ್ದಾರೆ. ‘ನಾವು ಬಹಳ ಹಿಂದೆಯೇ ಪಂದ್ಯಗಳಿಗೆ ಹೋಗುತ್ತಿದ್ದೆವು. ನಾನು ಕಚೇರಿಯಲ್ಲಿದ್ದಾಗಲೂ ಸಹ, ಮ್ಯಾಚ್‌ ವೇಳೆ ಆರ್‌ಸಿಬಿ ತಂಡವನ್ನು ಹುರಿದುಂಬಿಸುತ್ತಿದ್ದೆ’ ಎಂದು ನೆನಪಿಸಿಕೊಂಡಿದ್ದಾರೆ.

    ಸತತ 18 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿ ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿ ಜಯಸಲು ಎದುರು ನೋಡುತ್ತಿರುವ ಸಂದರ್ಭದಲ್ಲಿ, ಸುನಕ್ ತಂಡದ ಬಗ್ಗೆ ಅದರಲ್ಲೂ ವಿಶೇಷವಾಗಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯ (Virat Kohli) ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಿಷಿ ಸುನಕ್‌ ಅವರು ಬ್ರಿಟನ್‌ ಪ್ರಧಾನಿಯಾಗಿದ್ದಾಗ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್‌ ನೀಡಿದ್ದ ಕೊಹ್ಲಿ ಸಹಿ ಮಾಡಿದ್ದ ಬ್ಯಾಟ್‌ ಹಿಡಿದು ‘ಕೊಹ್ಲಿ ಅವರೊಬ್ಬ ಲೆಜೆಂಡ್’ ಎಂದು ಹೇಳಿದ್ದರು. ಇದನ್ನೂ ಓದಿ: ಆರ್‌ಸಿಬಿಗೆ ಶಾಕ್‌ – ಟಿಮ್‌ ಡೇವಿಡ್‌ ಆಡೋದು ಡೌಟ್‌!

    ಸುನಕ್‌, ಆರ್‌ಸಿಬಿ ತಂಡದ ಇಂಗ್ಲಿಷ್ ಆಟಗಾರರು ಕೂಡ ದೊಡ್ಡ ಪಾತ್ರ ವಹಿಸುತ್ತಾರೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಫೈನಲ್‌ನಲ್ಲಿ ದೊಡ್ಡ ಕೊಡುಗೆ ನೀಡುತ್ತಾರೆ ಎಂದು ಆಶಿಸಿದ್ದಾರೆ.

  • ಗೆದ್ದು ಬಾ ಆರ್‌ಸಿಬಿ – ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ

    ಗೆದ್ದು ಬಾ ಆರ್‌ಸಿಬಿ – ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ

    – ಪಂಜಾಬ್‌ ಗೆದ್ರೆ ಅವರಿಗೂ ಅಭಿನಂದನೆ

    ಗದಗ: ಇಂದು ನಡೆಯಲಿರುವ ಐಪಿಎಲ್ ಫೈನಲ್‌ (IPL 2025 Final) ಪಂದ್ಯದಲ್ಲಿ ಪಂಜಾಬ್‌ (PBKS) ವಿರುದ್ಧ ಆರ್‌ಸಿಬಿ (RCB) ಗೆಲ್ಲಲಿ ಎಂದು ಸಿಎಂ ಸಿದ್ದರಾಮಯ್ಯ ಶುಭ ಹಾರೈಸಿದರು.

    ಲಕ್ಕುಂಡಿಯಲ್ಲಿ ಐತಿಹಾಸಿಕ ಪ್ರಾಚ್ಯಾವಶೇಷಗಳ ಉತ್ಖನನಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ವೇಳೆ ಐಪಿಎಲ್ ಫೈನಲ್‌ ಪಂದ್ಯದ ವಿಚಾರವಾಗಿ, ಪಂಜಾಬ್ ನವರು ನಮ್ಮ ಜೊತೆ ಮೊದಲು ಕ್ವಾಲಿಫೈಡ್‌ ಮ್ಯಾಚ್‌ನಲ್ಲಿ 101ಕ್ಕೆ ಔಟ್ ಆಗಿದ್ದರು. ಆದರೆ ನಂತರದಲ್ಲಿ ಮುಂಬೈ ವಿರುದ್ಧ ಗೆದ್ದರು. ಮುಂಬೈ ಸ್ಟ್ರಾಂಗ್ ಟೀಮ್, ಅದರಲ್ಲಿ ಒಳ್ಳೆ ಆಟಗಾರರಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

    ಆರ್‌ಸಿಬಿ ನಾಲ್ಕನೆ ಬಾರಿಗೆ ಫೈನಲ್‌ಗೆ ಬಂದಿದೆ. ಈ ಬಾರಿ ಗೆಲ್ಲಲಿ ಎಂದು ಹಾರೈಸುತ್ತೇನೆ. ಗೆದ್ದರೆ ಅಭಿನಂದನೆ ತಿಳಿಸುತ್ತೆನೆ. ಪಂಜಾಜ್ ಗೆದ್ದರೆ ಅವರಿಗೂ ಅಭಿನಂದನೆ ಹೇಳುತ್ತೇನೆ ಎಂದರು. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ – ಐಪಿಎಲ್ ಫೈನಲ್‌ನಲ್ಲಿ ಆಡಲಿದ್ದಾರೆ ಫಿಲ್ ಸಾಲ್ಟ್

  • ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ – ಐಪಿಎಲ್ ಫೈನಲ್‌ನಲ್ಲಿ ಆಡಲಿದ್ದಾರೆ ಫಿಲ್ ಸಾಲ್ಟ್

    ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ – ಐಪಿಎಲ್ ಫೈನಲ್‌ನಲ್ಲಿ ಆಡಲಿದ್ದಾರೆ ಫಿಲ್ ಸಾಲ್ಟ್

    ಅಹಮದಾಬಾದ್: ಐಪಿಎಲ್ ಫೈನಲ್‌ಗೆ (IPL  Final) ಕೆಲವೇ ಗಂಟೆಗಳು ಬಾಕಿಯಿರುವಾಗಲೇ ಆರ್‌ಸಿಬಿ (RCB) ಅಭಿಮಾನಿಗಳಿಗೆ ಫಿಲ್ ಸಾಲ್ಟ್ ಗುಡ್‌ನ್ಯೂಸ್ ಕೊಟ್ಟಿದ್ದಾರೆ.  ಇಂದು ಆರ್‌ಸಿಬಿ ಮತ್ತು ಪಂಜಾಬ್‌ ಮಧ್ಯೆ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಫಿಲ್‌ ಸಾಲ್ಟ್‌ (Phil Salt) ಆಡಲಿದ್ದಾರೆ.

    ಫೈನಲ್ ಪಂದ್ಯಕ್ಕೂ ಮುನ್ನ ಆರ್‌ಸಿಬಿಯ ಅಭ್ಯಾಸ ವೇಳೆ ಸಾಲ್ಟ್ ಕಾಣಿಸಿಲ್ಲ ಎಂದು ವರದಿಯಾಗಿತ್ತು. ಇಂಗ್ಲೆಂಡಿನ ಫಿಲ್ ಸಾಲ್ಟ್ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಹೀಗಾಗಿ ಅವರು ತವರಿಗೆ ತೆರಳಿರಬಹುದು. ಇಂದಿನ ಪಂದ್ಯದಲ್ಲಿ ಅವರು ಆಡುವುದಿಲ್ಲ ಎಂದೆಲ್ಲಾ ಹೇಳಲಾಗುತ್ತಿತ್ತು. ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ.  ಇದೀಗ ಇಂದಿನ ಫೈನಲ್ ಪಂದ್ಯದಲ್ಲಿ ಆಡುವ ಸಲುವಾಗಿ ಫಿಲ್ ಸಾಲ್ಟ್ ಮರಳಿ ಅಹಮದಾಬಾದ್‌ಗೆ ಬಂದಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್‌ಗೆ ಇನ್ಮುಂದೆ ಕರ್ನಾಟಕಕ್ಕೆ ಪ್ರವೇಶವಿಲ್ಲ – ಕರವೇ ನಾರಾಯಣಗೌಡ ಕಿಡಿ

    ಪತ್ನಿಗೆ ಹೆರಿಗೆಯಾದ ಹಿನ್ನೆಲೆ ಮಗುವನ್ನು ನೋಡಲು ಸಾಲ್ಟ್ ತವರಿಗೆ ತೆರಳಿದ್ದರು. ಇಂದು ಮುಂಜಾನೆ 3 ಗಂಟೆಯ ಸುಮಾರಿಗೆ ಮತ್ತೆ ಅಹಮದಾಬಾದ್‌ಗೆ ಫಿಲ್ ಸಾಲ್ಟ್ ಬಂದಿಳಿದಿದ್ದಾರೆ. ಇದರಿಂದ ಐಪಿಎಲ್ ಫೈನಲ್ ಆಡಲು ಆರ್‌ಸಿಬಿ ತಂಡಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ. ಇದನ್ನೂ ಓದಿ: ಆರ್‌ಸಿಬಿಗೆ ಡಬಲ್‌ ಶಾಕ್‌ – ಟಿಮ್‌ ಡೇವಿಡ್‌ ಆಡೋದು ಡೌಟ್‌!

    ಆರ್‌ಸಿಬಿ ಪರ 12 ಪಂದ್ಯ ಆಡಿರುವ ಸಾಲ್ಟ್ ಒಟ್ಟು 387 ರನ್ ಹೊಡೆದು ಟಾಪ್ 20 ಬ್ಯಾಟರ್ ಪಟ್ಟಿಯಲ್ಲಿ 20ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

  • ಆರ್‌ಸಿಬಿಗೆ ಶಾಕ್‌ – ಟಿಮ್‌ ಡೇವಿಡ್‌ ಆಡೋದು ಡೌಟ್‌!

    ಆರ್‌ಸಿಬಿಗೆ ಶಾಕ್‌ – ಟಿಮ್‌ ಡೇವಿಡ್‌ ಆಡೋದು ಡೌಟ್‌!

    ಅಹಮದಾಬಾದ್‌: ಫೈನಲ್‌ ಪಂದಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಆರ್‌ಸಿಬಿಗೆ (RCB) ಡಬಲ್‌ ಆಘಾತವಾಗಿದೆ. ಫಿಲ್‌ ಸಾಲ್ಟ್‌ (Phil Salt) ಆಡುವುದು ಅನುಮಾನ ಎನ್ನುವಾಗಲೇ ಆಲ್‌ರೌಂಡರ್‌ ಟಿಮ್‌ ಡೇವಿಡ್‌ (Tim David) ಈ ಪಂದ್ಯದಲ್ಲಿ ಆಡುತ್ತಾರಾ ಇಲ್ಲವೋ ಎನ್ನುವುದು ಇನ್ನೂ ಅಂತಿಮವಾಗಿಲ್ಲ.

    ಸ್ನಾಯುಸೆಳೆತಕ್ಕೆ ಒಳಗಾಗಿರುವ ಟಿಮ್ ಡೇವಿಡ್ ಲಕ್ನೋ ಮತ್ತು ಪಂಜಾಬ್‌ ವಿರುದ್ಧದ ಕ್ವಾಲಿಫೈಯರ್‌ ಪಂದ್ಯ ಆಡಿಲ್ಲ. ಈ ಬಗ್ಗೆ ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್‌ ಅವರನ್ನು ಮಾಧ್ಯಮಗಳು ಪ್ರಶ್ನಿಸಿವೆ. ಇದನ್ನೂ ಓದಿ: IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

    ಈ ಪ್ರಶ್ನೆಗೆ ಪಾಟಿದಾರ್‌, ಇಲ್ಲಿಯವರೆಗೆ ಟಿಮ್ ಡೇವಿಡ್ ಬಗ್ಗೆ ನನಗ್ಯಾವ ಐಡಿಯಾವೂ ಇಲ್ಲ. ಡಾಕ್ಟರ್ ಈ ಬಗ್ಗೆ ನಿಗಾ ಇರಿಸಿದ್ದಾರೆ. ವೈದ್ಯರು ಸಂಜೆ ನಮಗೆ ಮಾಹಿತಿ ನೀಡಲಿದ್ದಾರೆ ಎಂದು ಉತ್ತರಿಸಿದರು. ವೈದ್ಯರು  ಅನುಮತಿ ನೀಡಿದರೆ ಡೇವಿಡ್‌ ಆರ್‌ಸಿಬಿ ಯ ಪ್ಲೇಯಿಂಗ್‌ 11 ಸೇರಲಿದ್ದಾರೆ. ಇದನ್ನೂ ಓದಿ: ಆರ್‌ಸಿಬಿಗೆ ದೊಡ್ಡ ಶಾಕ್‌ – ಸಾಲ್ಟ್‌ ಆಡೋದು ಅನುಮಾನ

    ಟಿಮ್ ಡೇವಿಡ್ ಅನುಪಸ್ಥಿತಿಯಲ್ಲಿ ಲಿಯಾಮ್ ಲಿವಿಂಗ್‌ಸ್ಟನ್ ಲಕ್ನೋ ವಿರುದ್ಧ ಪಂದ್ಯ ಆಡಿದ್ದರು. ಆದರೆ ಮೊದಲ ಎಸೆತದಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದರು.

    ಈ ಐಪಿಎಲ್‌ನಲ್ಲಿ 12 ಪಂದ್ಯವಾಡಿ 62.33 ಸರಾಸರಿಯಲ್ಲಿ 187 ರನ್‌ ಹೊಡೆದಿದ್ದಾರೆ. 185.15 ಸ್ಟ್ರೈಕ್‌ ರೇಟ್‌ ಹೊಂದಿರುವ ಡೇವಿಡ್‌ 16 ಬೌಂಡರಿ, 14 ಸಿಕ್ಸ್‌ ಮತ್ತು 7 ಕ್ಯಾಚ್‌ ಪಡೆದಿದ್ದಾರೆ.

  • IPL Final | ಸಂಭ್ರಮಾಚರಣೆ ವೇಳೆ ಸಾರ್ವಜನಿಕರಿಗೆ ತೊಂದರೆ ಕೊಟ್ರೆ ಕ್ರಮ – ಬಿ.ದಯಾನಂದ್

    IPL Final | ಸಂಭ್ರಮಾಚರಣೆ ವೇಳೆ ಸಾರ್ವಜನಿಕರಿಗೆ ತೊಂದರೆ ಕೊಟ್ರೆ ಕ್ರಮ – ಬಿ.ದಯಾನಂದ್

    ಬೆಂಗಳೂರು: ಇಂದು ಆರ್‌ಸಿಬಿ (RCB) ಹಾಗೂ ಪಂಜಾಬ್ (Punjab) ನಡುವೆ ಫೈನಲ್ ಪಂದ್ಯ ನಡೆಯಲಿರುವ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ (B Dayanand) ಖಡಕ್ ಸೂಚನೆ ನೀಡಿದ್ದಾರೆ.

    18 ವರ್ಷಗಳ ಕನಸನ್ನು ಹೊತ್ತುಕೊಂಡು ಫೈನಲ್‌ಗೆ ಲಗ್ಗೆಯಿಟ್ಟಿರುವ ಆರ್‌ಸಿಬಿ ಇಂದು ಪಂಜಾಬ್ ವಿರುದ್ಧ ಕೊನೆಯ ಪಂದ್ಯದಲ್ಲಿ ಸೆಣಸಾಡಲಿದೆ. ಹೀಗಾಗಿ ಬಹುಕಾಲದ ಆಸೆ ಈಡೇರಿಕೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.ಇದನ್ನೂ ಓದಿ: IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

    ಪಂದ್ಯದ ಬಳಿಕ ಯಾವುದೇ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಕೆಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಈಗಾಗಲೇ ನಗರದ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ. ಇನ್ನೂ ಸಾರ್ವಜನಿಕ ಸ್ಥಳಗಳಲ್ಲಿ ಎಲ್‌ಇಡಿ ಸ್ಕ್ರೀನ್ ಅಳವಡಿಸಿದ್ರೆ ಅನುಮತಿ ಪಡೆಯಬೇಕು ಎಂದು ತಿಳಿಸಿದ್ದಾರೆ.

    ಇನ್ನೂ ಪೊಲೀಸರಿಗೆ ಮಾಹಿತಿ ಇಲ್ಲದೇ ಎಲ್‌ಇಡಿ ಸ್ಕ್ರೀನ್ ಅಳವಡಿಸಿದ್ರೆ ಹಾಗೂ ಪಂದ್ಯದ ಬಳಿಕ ಸಂಭ್ರಮಾಚರಣೆ ಮಾಡಿ, ಇತರರಿಗೆ ತೊಂದರೆಕೊಟ್ಟರೆ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಸೂಚನೆ ನೀಡಿದ್ದಾರೆ.

    ಇಂದು ಸಂಜೆ 7:30ಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ತಂಡಗಳು ಮುಖಾಮುಖಿಯಾಗಲಿವೆ.ಇದನ್ನೂ ಓದಿ: Chamarajanagar | ಶಿಕ್ಷಕರ ಒಳಜಗಳ ಆರೋಪ – ಮರಿಯಾಲ ಸರ್ಕಾರಿ ಶಾಲೆಯಲ್ಲಿ ಝೀರೋ ಅಡ್ಮಿಷನ್

  • IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

    IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

    ಅಹಮದಾಬಾದ್: ಆರ್‌ಸಿಬಿ (RCB) ಹಾಗೂ ಪಂಜಾಬ್ ಕಿಂಗ್ಸ್ (Punjab Kings) ತಂಡದ ನಡುವೆ ಐಪಿಎಲ್ ಫೈನಲ್ ಪಂದ್ಯ ನಡೆಯಲು ಇನ್ನೇನು ಕೆಲವೇ ಗಂಟೆಗಳು ಬಾಕಿಯಿರುವಾಗಲೇ ನರೇಂದ್ರ ಮೋದಿ ಕ್ರೀಡಾಂಗಣದ (Narendra Modi Stadium) ಹೊರಗೆ ಸಿಲಿಂಡರ್ ಸ್ಫೋಟಗೊಂಡಿದೆ.

    ಸ್ಟೇಡಿಯಂನ ಗೇಟ್ ನಂಬರ್ 1ರ ಬಳಿ ಘಟನೆ ನಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಿಂದ ಕೆಲಹೊತ್ತು ಆತಂಕ ಮನೆಮಾಡಿತ್ತು. ಘಟನೆ ನಡೆದ ತಕ್ಷಣವೇ ಬೆಂಕಿಯನ್ನು ನಂದಿಸಲಾಯಿತು. ಕ್ರೀಡಾಂಗಣದ ಹೊರಗಿನ ಫುಟ್‌ಪಾತ್‌ನಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರ ನಿರ್ಲಕ್ಷ್ಯದಿಂದಾಗಿ ಸಿಲಿಂಡರ್ ಸ್ಫೋಟಗೊಂಡಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಮೊದಲು ಕ್ಷಮೆ ಕೇಳಿ, ಜನರ ಭಾವನೆಗೆ ಧಕ್ಕೆ ತರಬೇಡಿ: ಕಮಲ್‌ಗೆ ಹೈಕೋರ್ಟ್‌ ಚಾಟಿ

    ಸಿಲಿಂಡರ್ ಸ್ಫೋಟದಿಂದಾಗಿ (Cylinder Balst) ಪಂದ್ಯದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಬಿಸಿಸಿಐ ಮೂಲಗಳು ತಿಳಿಸಿವೆ. ಫೈನಲ್ ಪಂದ್ಯಕ್ಕೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಆಪರೇಷನ್ ಸಿಂಧೂರಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸಮಾರಂಭವನ್ನು ಭಾರತೀಯ ಸೇನೆಗೆ ಸಮರ್ಪಿಸಲಾಗುತ್ತದೆ. ಖ್ಯಾತ ಗಾಯಕ ಶಂಕರ್ ಮಹದೇವನ್ ಸೇರಿದಂತೆ ಅನೇಕರು ಪ್ರದರ್ಶನ ನೀಡಲಿದ್ದಾರೆ. ಇದನ್ನೂ ಓದಿ: ಕಪ್‌ ನಮ್ದೆ ಅಂತ ಗೆದ್ದ ಮೇಲೆ ಹೇಳೋಣ: ಅನಿಲ್‌ ಕುಂಬ್ಳೆ

    ಆರ್‌ಸಿಬಿ ತಂಡ 4ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಈ ಮೊದಲು 2009, 2011 ಹಾಗೂ 2016ರಲ್ಲಿ ಫೈನಲ್ ಪ್ರವೇಶಿಸಿದ್ದರೂ ಕಪ್ ಗೆದ್ದಿರಲಿಲ್ಲ. ಇದೀಗ ಮತ್ತೆ ಫೈನಲ್ ಪ್ರವೇಶಿಸಿದ್ದು, ಪಂಜಾಬ್ ಜೊತೆ ಸೆಣಸಾಡಲಿದೆ. ಈ ರೋಚಕ ಪಂದ್ಯ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: 18ನೇ ಐಪಿಎಲ್‌, 18ನೇ ಸಂಖ್ಯೆಗೆ ನಂಟು – 2013 ರಿಂದ ಆರ್‌ಸಿಬಿ ಪರ 18 ಟ್ರೆಂಡಿಂಗ್‌!