ಬೆಂಗಳೂರು: ತೆರೆದ ಬಸ್‌ನಲ್ಲಿ ಆರ್‌ಸಿಬಿ ವಿಜಯೋತ್ಸವ ಇಲ್ಲ. ಆರ್‌ಸಿಬಿ ಆಟಗಾರರು ಬಸ್ಸಿನಲ್ಲಿ ಬಂದು ಬಸ್ಸಿನಲ್ಲಿ ಹೋಗುತ್ತಾರೆ ಎಂದು ಗೃಹಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸಂಜೆ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆ ಗ್ರ‍್ಯಾಂಡ್ ಸ್ಟೆಪ್ ಬಳಿ ಸಿದ್ಧತೆ ವೀಕ್ಷಣೆ ಮಾಡಿದ ಬಳಿಕ ಪರಮೇಶ್ವರ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಗೃಹ ಇಲಾಖೆ ಒಪ್ಪದ ಕಾರಣ ಪರೇಡ್‌ಗೆ ಬ್ರೇಕ್ ಹಾಕಲಾಗಿದೆ. ಪೊಲೀಸ್ ಕಮೀಷನರ್ ಪರೇಡ್‌ಗೆ ಒಪ್ಪಿಲ್ಲ. ವಿಧಾನಸೌಧ ಹಾಗೂ ಹೈಕೋರ್ಟ್ ಭದ್ರತೆ ದೃಷ್ಟಿಯಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ವಿಕ್ಟರಿ ಪರೇಡ್‌ಗೆ ಲಕ್ಷಾಂತರ ಜನರು ಸೇರುವುದರಿಂದ ನಿರ್ವಹಣೆ ಕಷ್ಟ. ನಗರದ ಹೃದಯ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಆಗಲಿದೆ. ವಿಧಾನಸೌಧ, ಹೈಕೋರ್ಟ್ ಸೇರಿದಂತೆ ಪ್ರಮುಖ ಸರ್ಕಾರಿ ಕಟ್ಟಡಗಳಿವೆ. ಆದ್ದರಿಂದ ಸೂಕ್ತ ಭದ್ರತೆ ಕಷ್ಟ ಎಂದು ಪೊಲೀಸ್ ಇಲಾಖೆ ಹೇಳಿದೆ.
ಬೆಂಗಳೂರು: ಆರ್‌ಸಿಬಿ (RCB) ಹುಡುಗರು ನಮ್ಮ ಕರ್ನಾಟಕಕ್ಕೆ ಗೌರವ ಹಾಗೂ ಹೆಮ್ಮೆ ತಂದಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಆರ್‌ಸಿಬಿ ತಂಡಕ್ಕೆ ಶುಭಾಶಯ ಕೋರಿದ್ದಾರೆ.
ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಮಣಿಸಿ ಕಪ್ ಗೆದ್ದ ಆರ್‌ಸಿಬಿ ತಂಡದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್‌ಸಿಬಿ ತಂಡವನ್ನು ನಾವು ಗೌರವಿಸಬೇಕು. ಯಾವ ರೀತಿ ಅವರನ್ನು ಗೌರವಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಟ್ರಾಫಿಕ್‌ಗೂ ಸಮಸ್ಯೆ ಆಗಬಾರದು, ಸಾಕಷ್ಟು ಯುವಕರು ಭಾಗವಹಿಸುತ್ತಾರೆ ಎಂದರು. ಇದನ್ನೂ ಓದಿ: ಮಧ್ಯಾಹ್ನ ಬೆಂಗಳೂರಿಗೆ ಚಾಂಪಿಯನ್ಸ್ – ಸಂಜೆ ವಿಜಯೋತ್ಸವ ಮೆರವಣಿಗೆ | ಎಷ್ಟು ಗಂಟೆಗೆ ಏನು?
ಅವರು ಶೆಡ್ಯೂಲ್ ಹಾಕಿಕೊಳ್ಳುತ್ತಾರೆ. ಆದರೆ ಕಂಟ್ರೋಲ್ ಮಾಡೋದು ನಾವು. ಗೃಹ ಸಚಿವರು, ಪೊಲೀಸ್ ಕಮೀಷನರ್ ಎಲ್ಲಾ ಕೂತು ಮಾತನಾಡಿ ಈ ಬಗ್ಗೆ ನಿರ್ಧಾರ ಮಾಡುತ್ತಾರೆ. ನಾನು ಕೂಡ ಸಂಪೂರ್ಣ ಮ್ಯಾಚ್ ನೋಡಿದ್ದೇನೆ. ಆರ್‌ಸಿಬಿ ಟೀಂ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರಿಗೆ ಸನ್ಮಾನ ಮಾಡುವ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಇಂದು ಸಂಜೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿಕ್ಟರಿ ಪರೇಡ್
ಬೆಂಗಳೂರು: ಐಪಿಎಲ್ ಫೈನಲ್‌ನಲ್ಲಿ (IPL Final) ಆರ್‌ಸಿಬಿ ಕಪ್ ತನ್ನದಾಗಿಸಿಕೊಂಡ ಹಿನ್ನೆಲೆ ಗೆಲುವಿನ ಸಂಭ್ರಮಾಚರಣೆಯಲ್ಲಿದ್ದ ಆರ್‌ಸಿಬಿ ಅಭಿಮಾನಿಗೆ (RCB Fan) ದುಷ್ಕರ್ಮಿಗಳು ಚಾಕು ಇರಿದ ಘಟನೆ ಜಾಲಹಳ್ಳಿ ಕ್ರಾಸ್ (Jalahalli Cross) ಬಳಿ ನಡೆದಿದೆ.
ಆರ್‌ಸಿಬಿ ಐಪಿಎಲ್ ಫೈನಲ್ ಪಂದ್ಯಾವಳಿಯಲ್ಲಿ ಜಯಭೇರಿಯಾದ ಹಿನ್ನೆಲೆ ಯುವಕ ಸಂಭ್ರಮಾಚರಣೆ ಮಾಡುತ್ತಾ ಬಾರ್‌ಗೆ ತೆರಳುವ ವೇಳೆ ದುಷ್ಕರ್ಮಿಗಳು ಚಾಕುವಿನಿಂದ ಯುವಕನ ಕುತ್ತಿಗೆಯ ಭಾಗಕ್ಕೆ ಇರಿದು ಎಸ್ಕೇಪ್ ಆಗಿದ್ದಾರೆ. ತಡರಾತ್ರಿ 12 ಗಂಟೆ ವೇಳೆಗೆ ಘಟನೆ ನಡೆದಿದೆ. ಇದನ್ನೂ ಓದಿ: ಇಂದು ಸಂಜೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿಕ್ಟರಿ ಪರೇಡ್
ಅದೃಷ್ಟವಶಾತ್ ಯುವಕ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ. ಪ್ರತಿರೋಧ ಬಳಿಕ ದುಷ್ಕರ್ಮಿಗಳ ಗ್ಯಾಂಗ್ ಘಟನಾ ಸ್ಥಳದಿಂದ ಕಾಲ್ಕಿತ್ತಿದೆ. ಸ್ಥಳೀಯರ ಸಹಾಯದಿಂದ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: IPL 2025 – ಫೈನಲ್ ಪಂದ್ಯದ ‘ಲಕ್ಕಿ ಕ್ರಿಕೆಟರ್’ ಹೇಜಲ್‌ವುಡ್
ಬೆಂಗಳೂರು: ಆರ್‌ಸಿಬಿಯ (RCB) ಬೆಂಗಳೂರಿನ ಅಭಿಮಾನಿಗಳಿಗೆ ಸಿಹಿ ಸುದ್ದಿ. 18 ವರ್ಷಗಳ ಕನಸು ನನಸಾದ ಬೆನ್ನಲ್ಲೇ ಇಂದು ಸಂಜೆ ಬೆಂಗಳೂರಿನಲ್ಲಿ (Bengaluru) ಆರ್‌ಸಿಬಿಯ ವಿಕ್ಟರಿ ಪರೇಡ್ (RCB Victory Parade) ನಡೆಯಲಿದೆ.
ಅಧಿಕೃತವಾಗಿ ಆರ್‌ಸಿಬಿ ಈ ವಿಚಾರವನ್ನು ತಿಳಿಸಿದ್ದು ಮಧ್ಯಾಹ್ನ 3:30ಕ್ಕೆ ವಿಧಾನಸೌಧದಿಂದ ವಿಜಯೋತ್ಸವ ಮೆರವಣಿಗೆ ಆರಂಭಗೊಳ್ಳಲಿದ್ದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊನೆಯಾಗಲಿದೆ. ಈ ಬಗ್ಗೆ ಶೀಘ್ರವೇ ಮತ್ತಷ್ಟು ಮಾಹಿತಿಯನ್ನು ನೀಡಲಾಗುವುದು ಎಂದು ಆರ್‌ಸಿಬಿ ತಿಳಿಸಿದೆ. ಇದನ್ನೂ ಓದಿ: IPL 2025 – ಫೈನಲ್ ಪಂದ್ಯದ ‘ಲಕ್ಕಿ ಕ್ರಿಕೆಟರ್’ ಹೇಜಲ್‌ವುಡ್
🚨 RCB Victory Parade in Bengaluru ‼️
This one’s for you, 12th Man Army.
For every cheer, every tear, every year.
𝐋𝐨𝐲𝐚𝐥𝐭𝐲 𝐢𝐬 𝐑𝐨𝐲𝐚𝐥𝐭𝐲 𝐚𝐧𝐝 𝐭𝐨𝐝𝐚𝐲, 𝐭𝐡𝐞 𝐜𝐫𝐨𝐰𝐧 𝐢𝐬 𝐲𝐨𝐮𝐫𝐬.🏆
ಅಹಮದಾಬಾದ್: ಆರ್‌ಸಿಬಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ (Krunal Pandya) ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಐಪಿಎಲ್‌ನಲ್ಲಿ (IPL) ವಿಶೇಷ ದಾಖಲೆ (Record) ಬರೆದಿದ್ದಾರೆ.
ಎರಡು ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಕೃನಾಲ್ ಪಾತ್ರವಾಗಿದ್ದಾರೆ. 2017ರಲ್ಲಿ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ತಂಡ ಫೈನಲ್‌ನಲ್ಲಿ ಗೆದ್ದಾಗಲೂ ಕೃನಾಲ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರವಾಗಿದ್ದರು.
ಮೊದಲು ಬ್ಯಾಟ್ ಮಾಡಿದ್ದ ಮುಂಬೈ 8 ವಿಕೆಟ್ ನಷ್ಟಕ್ಕೆ 129 ರನ್ ಹೊಡೆದಿತ್ತು. ಈ ಪಂದ್ಯದಲ್ಲಿ ಕೃನಾಲ್ 47 ರನ್(38 ಎಸೆತ, 3 ಬೌಂಡರಿ, 2 ಸಿಕ್ಸ್) ಹೊಡೆದಿದ್ದರು. ಈ ಪಂದ್ಯವನ್ನು ಮುಂಬೈ ರೋಚಕ 1 ರನ್‌ಗಳಿಂದ ಗೆದ್ದುಕೊಂಡಿತ್ತು.
ಪಂದ್ಯವನ್ನು ತಿರುಗಿಸಿದ್ದ ಕೃನಾಲ್:
ಫೈನಲ್ ಪಂದ್ಯ ಪಂಜಾಬ್ ಕಡೆ ವಾಲಿತ್ತು. ಆದರೆ 7ನೇ ಓವರ್‌ನಿಂದ ಕೃನಾಲ್ ಪಾಂಡ್ಯ ಕೈಚಳಕದಿಂದಾಗಿ ಪಂದ್ಯ ಆರ್‌ಸಿಬಿ (RCB) ಕಡೆ ವಾಲಿತ್ತು. ಅಂತಿಮವಾಗಿ 4 ಓವರ್‌ನಲ್ಲಿ ಕೇವಲ 17 ರನ್, 2 ವಿಕೆಟ್ ಪಡೆಯುವ ಮೂಲಕ ಪಂಜಾಬ್ ರನ್ ವೇಗಕ್ಕೆ ಕಡಿವಾಣ ಹಾಕಿದ್ದರು.
ಪಂಜಾಬ್ 6 ಓವರ್ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ರಜತ್ ಪಾಟಿದಾರ್ ಕೃನಾಲ್ ಪಾಂಡ್ಯ (Krunal Pandya) ಕೈಗೆ ಚೆಂಡು ನೀಡಿದರು. ಕೃನಾಲ್ ತಮ್ಮ ಮೊದಲ ಓವರ್‌ನಲ್ಲಿ 3 ರನ್ ನೀಡಿ ರನ್‌ಗೆ ಕಡಿವಾಣ ಹಾಕಿದರು. ತಮ್ಮ ಎರಡನೇ ಓವರ್‌ನಲ್ಲಿ ಪ್ರಭುಸಿಮ್ರಾನ್ ಸಿಂಗ್ ಅವರನ್ನು ಔಟ್ ಮಾಡಿದರು. ಈ ಓವರ್‌ನಲ್ಲಿ ಕೇವಲ 4 ರನ್ ಮಾತ್ರ ನೀಡಿದರು.
ತಮ್ಮ ಮೂರನೇ ಓವರ್‌ನಲ್ಲಿ 11 ರನ್ ನೀಡಿದ ಕೃನಾಲ್ ತಮ್ಮ ಕೊನೆಯ ಓವರ್‌ನಲ್ಲಿ ಜೋಶ್ ಇಂಗ್ಲಿಸ್ ಅವರನ್ನು ಔಟ್ ಮಾಡಿದರು. ಸಿಕ್ಸ್ ಹೊಡೆಯಲು ಹೋದ ಇಂಗ್ಲಿಸ್ ಅವರ ಕ್ಯಾಚನ್ನು ಬೌಂಡರಿ ಬಳಿ ಲಿವಿಂಗ್‌ಸ್ಟೋನ್ ಹಿಡಿದರು. ಇಲ್ಲಿಂದ ಪಂದ್ಯದ ದಿಕ್ಕೇ ಬದಲಾಯಿತು.
4 ಓವರ್‌ನಲ್ಲಿ ರನ್ ನಿಯಂತ್ರಣ ಮಾಡಿದ್ದು ಅಲ್ಲದೇ 2 ವಿಕೆಟ್ ತೆಗೆಯುವ ಮೂಲಕ ಕೃನಾಲ್ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ನಂತರ ಪಂಜಾಬ್ ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಕೊನೆಗೆ ಸೋಲನ್ನು ಒಪ್ಪಿಕೊಂಡಿತು.
ಹಾಗೆ ನೋಡಿದ್ರೆ 4 ಓವರ್ ಎಸೆದ ಭುವನೇಶ್ವರ್ ಕುಮಾರ್ 38 ರನ್ ನೀಡಿದ್ರೆ ಹೆಜಲ್‌ವುಡ್ 54 ರನ್ ನೀಡಿ ದುಬಾರಿಯಾಗಿದ್ದರು. ಸುಯಾಶ್ ಶರ್ಮಾ 2 ಓವರ್ ಎಸೆದಿದ್ದರೂ 19 ರನ್ ನೀಡಿದ್ದರು. ರೋಮಾರಿಯೋ ಶೆಪರ್ಡ್ 3 ಓವರ್ ಎಸೆದು 30 ರನ್ ಕೊಟ್ಟಿದ್ದರು.
ಬೆಂಗಳೂರು: ಅನ್‌ಸೋಲ್ಡ್ ಪ್ಲೇಯರ್, ಟೂರ್ನಿ ಅರ್ಧದಲ್ಲೇ ಆರ್‌ಸಿಬಿ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ನಾಯಕ ಪಟ್ಟ ಅಲಂಕರಿಸಿದ್ದ ರಜತ್ ಪಾಟಿದಾರ್ ಆರ್‌ಸಿಬಿಯ ಯಶಸ್ವಿ ನಾಯಕನಾಗಿ ಹೊರಹೊಮ್ಮಿದ್ದಾರೆ.
ಸಾಧನೆಯ ಜೊತೆ ಅದೃಷ್ಟ ಇದ್ದರೆ ವ್ಯಕ್ತಿಯ ಹುದ್ದೆ ಹೇಗೆ ಬೇಕಾದರೂ ಬದಲಾಗಬಹುದು ಎನ್ನುವುದಕ್ಕೆ ರಜತ್ ಪಾಟಿದಾರ್ ಸಾಕ್ಷಿ.ಟೂರ್ನಿಯ ಅರ್ಧದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಸೇರಿದ್ದ ರಜತ್ ಪಾಟಿದಾರ್ (Rajat Patidar) ಮೊದಲ ಬಾರಿ ತಂಡವನ್ನು ಮುನ್ನಡೆಸಿ ಚಾಂಪಿಯನ್ ಆಗಿ ಮಾಡಿದ್ದಾರೆ.
2022ರ ಆವೃತ್ತಿಯಲ್ಲಿ ಕರ್ನಾಟಕದ ಲುವ್ನಿತ್ ಸಿಸೋಡಿಯಾ (Luvnith Sisodia) ಗಂಭೀರವಾಗಿ ಗಾಯಗೊಳ್ಳುತ್ತಾರೆ. ಇವರ ಜಾಗಕ್ಕೆ ಯಾರನ್ನು ಖರೀದಿಸಬೇಕು ಎಂದು ಯೋಚನೆಯಲ್ಲಿದ್ದಾಗ ಆರ್‌ಸಿಬಿಗೆ ಹೊಳೆದದ್ದೇ ರಜತ್ ಪಾಟಿದಾರ್ ಹೆಸರು. ಹೀಗಾಗಿ ಟೂರ್ನಿಯ ಅರ್ಧದಲ್ಲಿ ರಜತ್ ಮತ್ತೆ ಆರ್‌ಸಿಬಿ ತಂಡವನ್ನು ಸೇರುತ್ತಾರೆ.
20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಆರ್‌ಸಿಬಿಗೆ ಮರಳಿ ಬಂದ ನಂತರ ರಜತ್ ಸ್ಫೋಟಕ ಆಟವನ್ನು ಪ್ರದರ್ಶಿಸುತ್ತಾರೆ. ಅದರಲ್ಲೂ ಎಲಿಮಿನೇಟರ್ ಪಂದ್ಯದಲ್ಲಿ ರಜತ್ ಲಕ್ನೋ ವಿರುದ್ಧ ಕೇವಲ 54 ಎಸೆತಗಳಲ್ಲಿ 112 ರನ್ ( 12 ಬೌಂಡರಿ,7 ಸಿಕ್ಸ್) ಹೊಡೆದು ದಾಖಲೆ ನಿರ್ಮಿಸಿದ್ದರು. ಈ ಪಂದ್ಯವನ್ನು ಆರ್‌ಸಿಬಿ ರೋಚಕ 14 ರನ್‌ಗಳಿಂದ ಗೆದ್ದುಕೊಳ್ಳುತ್ತದೆ. ಈ ಮೂಲಕ ಭಾರತ ತಂಡ ಸೇರದೇ ಶತಕ ಹೊಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರಜತ್ ಪಾತ್ರವಾಗುತ್ತಾರೆ.
2024 ರಲ್ಲಿ ಆರ್‌ಸಿಬಿ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್ ಅವರನ್ನು ಉಳಿಸಿಕೊಂಡಿತ್ತು. ನಾಯಕನಾಗಿದ್ದ ಡುಪ್ಲೆಸಿಸ್ ಅವರನ್ನು ಕೈ ಬಿಟ್ಟು ರಜತ್ ಪಾಟಿದರ್ ಅವರನ್ನು 11 ಕೋಟಿ ರೂ. ನೀಡಿ ಉಳಿಸಿಕೊಂಡಾಗ ಈ ಬಾರಿ ಆರ್‌ಸಿಬಿ ನಾಯಕನಾಗುತ್ತಾರಾ ಎಂಬ ಪ್ರಶ್ನೆ ಆಗಲೇ ಎದ್ದಿತ್ತು. ಆದರೆ ವಿರಾಟ್ ಕೊಹ್ಲಿ ಅವರನ್ನು ಉಳಿಸಿಕೊಂಡಿರುವಾಗ ಯಾರು ನಾಯಕನಾಗಬಹುದು ಎಂಬ ಕುತೂಹಲ ಮೂಡಿತ್ತು. ಕೊನೆಗೆ ಆರ್‌ಸಿಬಿ ತಂಡ ರಜತ್‌ಗೆ ಕ್ಯಾಪ್ಟನ್ ಪಟ್ಟ ನೀಡಿತ್ತು.
ನಾಯಕ ಸ್ಥಾನಕ್ಕೆ ನ್ಯಾಯ ನೀಡಿದ ಪಾಟಿದಾರ್ ಈ ಬಾರಿಯ 15 ಪಂದ್ಯಗಳಿಂದ 312 ರನ್ ಹೊಡೆದಿದ್ದಾರೆ. 143.78 ಸ್ಟ್ರೈಕ್ ರೇಟ್‌ನಲ್ಲಿ2 ಬಾರಿ ಅರ್ಧಶತಕ ಹೊಡೆದಿದ್ದಾರೆ. ರಜತ್ ಪಾಟಿದಾರ್ ಒಟ್ಟು 42 ಐಪಿಎಲ್ ಪಂದ್ಯ ಆಡಿದ್ದು ಒಟ್ಟು 1111 ರನ್ ಹೊಡೆದಿದ್ದಾರೆ.
ಯಾವ ವರ್ಷ ಎಷ್ಟು ರನ್?
2021 – 4 ಪಂದ್ಯ, 71 ರನ್
2022 – 8 ಪಂದ್ಯ, 333 ರನ್
2024 – 15 ಪಂದ್ಯ, 395 ರನ್
2025 – 15 ಪಂದ್ಯ, 312 ರನ್
ಅಹಮದಾಬಾದ್: ಪಂಜಾಬ್ ವಿರುದ್ಧ ಐಪಿಎಲ್ ಫೈನಲ್ ಪಂದ್ಯ ವೀಕ್ಷಣೆಗೆ ಅಹಮದಾಬಾದ್‌ಗೆ ಆಗಮಿಸಿದ್ದ ಬ್ರಿಟನ್ ಮಾಜಿ ಪ್ರಧಾನಿ ಹಾಗೂ ಬೆಂಗಳೂರಿನ ಅಳಿಯ ರಿಷಿ ಸುನಕ್ (Rishi Sunak) ಅವರು ಆರ್‌ಸಿಬಿ (RCB) ಗೆಲುವು ದಾಖಲಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದರು.
ಆರ್‌ಸಿಬಿ ಬ್ಯಾಟರ್‌ಗಳು ಸಿಕ್ಸ್, ಫೋರ್ ಹೊಡೆದಾಗಲೆಲ್ಲ ರಿಷಿ ಸುನಕ್ ಅವರು ಎದ್ದು ಜೋಶ್‌ನಲ್ಲಿ ಸಂಭ್ರಮಿಸುತ್ತಿದ್ದರು. ಹಾಗೆಯೇ ಬೌಲಿಂಗ್ ವೇಳೆ ಪಂಜಾಬ್ ವಿಕೆಟ್ ಬೀಳುತ್ತಿದ್ದಾಗಲೂ ಖುಷಿ ವ್ಯಕ್ತಪಡಿಸುತ್ತಿದ್ದರು. ಅವರ ಜೊತೆ ಐಸಿಸಿ ಅಧ್ಯಕ್ಷ ಜಯ್ ಶಾ ಕೂಡ ಇದ್ದರು.
ನಾನು ಬೆಂಗಳೂರಿನ ಅಳಿಯ. ಆರ್‌ಸಿಬಿಗೂ ನನಗೂ ಬಿಡಿಸಲಾಗದ ನಂಟಿದೆ. ವಿರಾಟ್ ಕೊಹ್ಲಿ ನನ್ನ ಫೇವರಿಟ್ ಎಂದು ಈ ಹಿಂದೆ ರಿಷಿ ಸುನಕ್ ಹೇಳಿಕೊಂಡಿದ್ದರು. ಇನ್ಫೋಸಿಸ್‌ನ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಅವರ ಪುತ್ರಿಯನ್ನು ವಿವಾಹವಾದಾಗಿನಿಂದಲೂ ರಿಷಿ ಸುನಕ್ ಅವರಿಗೆ ಆರ್‌ಸಿಬಿ ಮೇಲೆ ವಿಶೇಷ ಆಸಕ್ತಿ. ಅಲ್ಲಿಂದಲೇ ಅವರಿಗೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಒಲವು ಹೆಚ್ಚಾಗಿದ್ದು. ಇದನ್ನೂ ಓದಿ: ಚೊಚ್ಚಲ ಟ್ರೋಫಿ ಗೆದ್ದ ಆರ್‌ಸಿಬಿಗೆ ಸಿಕ್ಕ ಬಹುಮಾನ ಎಷ್ಟು..? – ಇಲ್ಲಿದೆ ಕಂಪ್ಲೀಟ್ ಲಿಸ್ಟ್…
ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಆರ್‌ಸಿಬಿಗೆ ಬ್ರಿಟನ್ ಮಾಜಿ ಪ್ರಧಾನಿ ವಿಶ್ ಮಾಡಿದ್ದರು. ಅಷ್ಟೇ ಅಲ್ಲದೇ, ಭಾರತಕ್ಕೆ ಆಗಮಿಸಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಿದ್ದು ವಿಶೇಷವಾಗಿತ್ತು.
ಬೆಂಗಳೂರು: ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ.. ಆರ್‌ಸಿಬಿ ಐಪಿಎಲ್ 2025 ಗೆಲುವಿನ ಸಂಭ್ರಮ ಮನೆ ಮಾಡಿದೆ. ಲಾಯಲ್ ಫ್ಯಾನ್ಸ್‌ಗಾಗಿ ರಾಯಲ್ ಗೆಲುವಿನಂತಿತ್ತು ಮಂಗಳವಾರದ ಪಂದ್ಯ.
18 ವರ್ಷಗಳ ಬಳಿಕ ಆರ್‌ಸಿಬಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ. ಆ ಕ್ಷಣಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳ ಆಸೆ ಕೊನೆಗೂ ಈಡೇರಿದೆ. ರಜತ್ ಪಾಟೀದಾರ್ ಪಡೆ ಟ್ರೋಫಿ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮಿಗಿಲು ಮುಟ್ಟಿತು. ಎಲ್ಲೆಡೆ ಸಂಭ್ರಮಾಚರಣೆ ಜೋರಾಗಿತ್ತು. ಪಟಾಕಿ ಸದ್ದುಗಳು ಮೊಳಗಿದವು. ಆರ್‌ಸಿಬಿ.. ಆರ್‌ಸಿಬಿ ಎಂಬ ಜಯಘೋಷ ಕಿವಿ ಗಡಚಿಕ್ಕವಂತಿತ್ತು. ಈ ಸಂಭ್ರಮಕ್ಕೆ ಎಲ್ಲೆ ಇರಲಿಲ್ಲ. ಇದನ್ನೂ ಓದಿ: ಈ ಸಲ ಕಪ್ ನಮ್ದು – ಆರ್‌ಸಿಬಿ ದಿಗ್ವಿಜಯಕ್ಕೆ ಸಿದ್ದರಾಮಯ್ಯ, ಡಿಕೆಶಿ, ಹೆಚ್‌ಡಿಕೆ ಅಭಿನಂದನೆ
ಬೆಂಗಳೂರಿನ ಓರಾಯನ್ ಆವರಣದಲ್ಲಿ ಎಲ್‌ಇಡಿ ಸ್ಕ್ರೀನ್‌ನಲ್ಲಿ ಆರ್‌ಸಿಬಿ ವರ್ಸಸ್ ಪಂಜಾಬ್ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಮ್ಯಾಚ್ ಗೆಲ್ಲುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಚರ್ಚ್ ಸ್ಟ್ರೀಟ್‌ನಲ್ಲಿ ಜನಸಾಗರವೇ ನೆರೆದಿತ್ತು. ಲೈವ್ ಸ್ಕ್ರೀನ್‌ನಲ್ಲಿ ಫ್ಯಾನ್ಸ್ ಸಂಭ್ರಮಾಚರಣೆ ಮಾಡಿದರು. ಕೊಹ್ಲಿ ಅಳುವುದನ್ನು ಕಂಡು ಯುವತಿಯೊಬ್ಬಳು ಕಣ್ಣೀರಿಟ್ಟಳು. ನವರಂಗ್‌ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಗೋವಿಂದರಾಜನಗರ ಗ್ರೌಂಡ್‌ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಭಿಮಾನಿಗಳಲ್ಲಿ ಜೋಶ್ ಇತ್ತು. ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಯಿತು. ಆನೇಕಲ್ ಪಟ್ಟಣದ ತಿಲಕ್ ವೃತ್ತದಲ್ಲಿ ಆರ್‌ಸಿಬಿ ಗೆಳೆಯರ ಬಳಗ ಸಂಭ್ರಮಾಚರಣೆ ಮಾಡಿತು. ಆರ್‌ಸಿಬಿ ಪ್ರೇಮಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ರಾಜ್‌ಕುಮಾರ್ ರಸ್ತೆ, ಮಾರತ್ತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ವಿಜಯನಗರ, ಎಂಜಿ ರಸ್ತೆ ಮೊದಲಾದ ಕಡೆ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಿಸಿದರು. ಪ್ರಮುಖ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಿಗಟ್ಟಿ ಸಂಭ್ರಮಿಸಿದರು.
ಆರ್‌ಸಿಬಿ ಗೆಲ್ಲುತ್ತಿದ್ದಂತೆ ಕೊಪ್ಪಳದ ಹಲವೆಡೆ ಸಂಭ್ರಮ ಮನೆ ಮಾಡಿತ್ತು. ಸಂಸದ ರಾಜಶೇಖರ, ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಸಂಭ್ರಮದಲ್ಲಿ ಭಾಗಿಯಾದರು.
ಮಂಡ್ಯದ ಗೌರಿಶಂಕರ್ ನಗರದಲ್ಲಿ ಎಲ್‌ಇಡಿ ಪರದೆಯಲ್ಲಿ ಮ್ಯಾಚ್ ಲೈವ್ ನೋಡಿ ಅಭಿಮಾನಿಗಳು ಖುಷಿಪಟ್ಟರು. ಚಿಕ್ಕಬಳ್ಳಾಪುರದ ಆಜಾದ್ ಪಾರ್ಕ್ ವೃತ್ತದಲ್ಲಿ ಅಭಿಮಾನಿಗಳ ಸಾಗರವೇ ನೆರೆದಿತ್ತು. ದಾವಣಗೆರೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬೆಳಗಾವಿ ಚಮ್ಮಮ್ಮ ಸರ್ಕಲ್‌ನಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಆರ್‌ಸಿಬಿ ಪರ ಜಯಘೋಷ ಮೊಳಗಿತು. ಕೋಲಾರದಲ್ಲೂ ಸಂಭ್ರಮ ಮನೆ ಮಾಡಿತ್ತು. ಹುಬ್ಬಳ್ಳಿಯಲ್ಲಿ ಅಭಿಮಾನಿಗಳು ಜೈಕಾರ ಕೂಗಿದರು. ಧಾರವಾಡ ಕೆಸಿಡಿಯಿಂದ ಸಪ್ತಾಪೂರ ವರೆಗೂ ಸಂಭ್ರಮದ ವಾತಾವರಣ ನೆರೆದಿತ್ತು. ಆರ್‌ಸಿಬಿ ವಿಜಯಿಯಾದ ಹಿನ್ನೆಲೆಯಲ್ಲಿ ಗದಗದಲ್ಲೂ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಇದನ್ನೂ ಓದಿ: RCB Champions | ಈ ಖುಷಿ ನಮ್ಮಿಂದ ತಡೆಯೋಕೆ ಆಗ್ತಿಲ್ಲ – ಅಭಿಮಾನಿ ದೇವ್ರುಗಳಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ಬಳ್ಳಾರಿಯ ರಾಯಲ್ ವೃತ್ತ, ಹಾಸನ ನಗರದ ಎಂಜಿ ರಸ್ತೆ, ಚಾಮರಾಜನಗರ, ಚಿಕ್ಕಬಳ್ಳಾಪುರದ ಆಜಾದ್ ಪಾರ್ಕ್ ಹಾಗೂ ಬಲಮುರಿ ವೃತ್ತ, ಹುಬ್ಬಳ್ಳಿ-ಸೊಲ್ಲಾಪುರ ರಸ್ತೆ, ಹಾವೇರಿ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣ, ಬೀದರ್ ನಗರದ ಅಂಬೇಡ್ಕರ್ ವೃತ, ದಾವಣಗೆರೆಯ ಜಯದೇವ ವೃತ್ತ ಹಾಗೂ ಜಿಲ್ಲೆಯ ಹೊನ್ನಾಳಿ ಖಾಸಗಿ ಬಸ್ ನಿಲ್ದಾಣ, ಕಲಬುರಗಿಯ ಎಸ್‌ವಿಪಿ ವೃತ್ತ ಮೊದಲಾದ ಕಡೆ ಅಪಾರ ಸಂಖ್ಯೆಯಲ್ಲಿ ಆರ್‌ಸಿಬಿ ಅಭಿಮಾನಿಗಳು ನೆರೆದು ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಗೆಲುವನ್ನು ಸಂಭ್ರಮಿಸಿದರು.
RCB are IPL Champions finally after 18 years. Superb campaign right through the 2025 tournament. A well balanced team Playing Bold with outstanding coaching and support staff. Many congratulations ! Ee sala cup namde !!
ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಒಂದು ಬಾರಿಯಾದರೂ ಕಪ್ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ.
ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಒಂದು ಬಾರಿಯಾದರೂ ಕಪ್ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ.
2009, 2011, 2016ರ ಫೈನಲ್ ಪಂದ್ಯಗಳಲ್ಲಿ ಸೋತು ಭಾರೀ ನಿರಾಸೆ ಅನುಭವಿಸಿದ್ದ ಆರ್‌ಸಿಬಿ 4ನೇ ಬಾರಿ ಫೈನಲ್ ಕಂಟಕದಿಂದ ಮುಕ್ತಿ ಪಡೆದಿದೆ. ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಸಂಘಟಿತ ಪ್ರದರ್ಶನ ನೀಡಿ, ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ, ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ. 4ನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಟ್ರೋಫಿ ಎತ್ತುವಲ್ಲಿ ಸಫಲವಾದ ಆರ್‌ಸಿಬಿ ರಜತ್ ಪಾಟಿದಾರ್ ನಾಯಕತ್ವದಲ್ಲಿ ಐಪಿಎಲ್ ಇತಿಹಾಸ ಪುಟ ಸೇರಿದೆ. ಇದನ್ನೂ ಓದಿ: ಕೊನೆಗೂ ಆರ್‌ಸಿಬಿಗೆ ಸಿಕ್ತು ಕಪ್ – ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಕೊಹ್ಲಿ
ಅಹಮದಾಬಾದ್: 4 ಓವರ್ 17 ರನ್ 2 ವಿಕೆಟ್. ಪಂಜಾಬ್ (PBKS) ಪರ ವಾಲಿದ್ದ ಪಂದ್ಯವನ್ನು ಆರ್‌ಸಿಬಿ (RCB) ಕಡೆ ತಿರುಗಿಸಿದ್ದು ಕೃನಾಲ್ ಪಾಂಡ್ಯ.
ಪಂಜಾಬ್ 6 ಓವರ್ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿತ್ತು. ಈ ಹಂತದಲ್ಲಿ ರಜತ್ ಪಾಟಿದಾರ್ ಕೃನಾಲ್ ಪಾಂಡ್ಯ (Krunal Pandya) ಕೈಗೆ ಚೆಂಡು ನೀಡಿದರು. ಕೃನಾಲ್ ತಮ್ಮ ಮೊದಲ ಓವರ್‌ನಲ್ಲಿ 3 ರನ್ ನೀಡಿ ರನ್‌ಗೆ ಕಡಿವಾಣ ಹಾಕಿದರು. ತಮ್ಮ ಎರಡನೇ ಓವರ್‌ನಲ್ಲಿ ಪ್ರಭುಸಿಮ್ರಾನ್ ಸಿಂಗ್ ಅವರನ್ನು ಔಟ್ ಮಾಡಿದರು. ಈ ಓವರ್‌ನಲ್ಲಿ ಕೇವಲ 4 ರನ್ ಮಾತ್ರ ನೀಡಿದರು.
Rising to the occasion 🫡
Krunal Pandya spins the game #RCB‘s way with a magnificent spell 🪄
ತಮ್ಮ ಮೂರನೇ ಓವರ್‌ನಲ್ಲಿ 11 ರನ್ ನೀಡಿದ ಕೃನಾಲ್ ತಮ್ಮ ಕೊನೆಯ ಓವರ್‌ನಲ್ಲಿ ಜೋಶ್ ಇಂಗ್ಲಿಸ್ ಅವರನ್ನು ಔಟ್ ಮಾಡಿದರು. ಸಿಕ್ಸ್ ಹೊಡೆಯಲು ಹೋದ ಇಂಗ್ಲಿಸ್ ಅವರ ಕ್ಯಾಚನ್ನು ಬೌಂಡರಿ ಬಳಿ ಲಿವಿಂಗ್‌ಸ್ಟೋನ್ ಹಿಡಿದರು. ಇಲ್ಲಿಂದ ಪಂದ್ಯದ ದಿಕ್ಕೇ ಬದಲಾಯಿತು.
4 ಓವರ್‌ನಲ್ಲಿ ರನ್ ನಿಯಂತ್ರಣ ಮಾಡಿದ್ದು ಅಲ್ಲದೇ 2 ವಿಕೆಟ್ ತೆಗೆಯುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ನಂತರ ಪಂಜಾಬ್ ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಕೊನೆಗೆ ಸೋಲನ್ನು ಒಪ್ಪಿಕೊಂಡಿತು.
ಹಾಗೆ ನೋಡಿದ್ರೆ 4 ಓವರ್ ಎಸೆದ ಭುವನೇಶ್ವರ್ ಕುಮಾರ್ 38 ರನ್ ನೀಡಿದ್ರೆ ಹೆಜಲ್‌ವುಡ್ 54 ರನ್ ನೀಡಿ ದುಬಾರಿಯಾಗಿದ್ದರು. ಸುಯಾಶ್ ಶರ್ಮಾ 2 ಓವರ್ ಎಸೆದಿದ್ದರೂ 19 ರನ್ ನೀಡಿದ್ದರು. ರೋಮಾರಿಯೋ ಶೆಪರ್ಡ್ 3 ಓವರ್ ಎಸೆದು 30 ರನ್ ಕೊಟ್ಟಿದ್ದರು. ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕೆ ಅರ್ಹವಾಗಿಯೇ ಕೃನಾಲ್ ಪಾಂಡ್ಯ ಅವರು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.