Tag: rcb

  • ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ  | ಇದು ಹೃದಯ ವಿದ್ರಾವಕ ಘಟನೆ – ಮೃತರಿಗೆ ಮೋದಿ ಸಂತಾಪ

    ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ | ಇದು ಹೃದಯ ವಿದ್ರಾವಕ ಘಟನೆ – ಮೃತರಿಗೆ ಮೋದಿ ಸಂತಾಪ

    ಬೆಂಗಳೂರು: ಆರ್‌ಸಿಬಿ (RCB) ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಿಂದ ನಡೆದ ಅವಘಡಕ್ಕೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಸಂತಾಪ ಸೂಚಿಸಿದ್ದಾರೆ.

    ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಬೆಂಗಳೂರಿನಲ್ಲಿ (Bengaluru) ನಡೆದಿರುವುದು ನಿಜಕ್ಕೂ ಹೃದಯವಿದ್ರಾವಕ ಘಟನೆ. ಈ ದುರಂತದಲ್ಲಿ ಹಲವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಅವರ ಬಗ್ಗೆ ಕನಿಕರವಿದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರದ ಪ್ರಚಾರದ ಹುಚ್ಚಿಗೆ ಜನ ಬಲಿಯಾಗಿದ್ದಾರೆ: ವಿಜಯೇಂದ್ರ ಆಕ್ರೋಶ

    ಆರ್‌ಸಿಬಿ (RCB) ಗೆಲುವು ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಸಂಭವಿಸಿದ ಕಾಲ್ತುಳಿತಕ್ಕೆ (Stampede) 11 ಆರ್‌ಸಿಬಿ ಫ್ಯಾನ್ಸ್‌ ದುರ್ಮರಣಕ್ಕೀಡಾಗಿದ್ದಾರೆ. 50ಕ್ಕೂ ಹೆಚ್ಚು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

    ಗಾಯಾಳುಗಳಿಗೆ ಬೌರಿಂಗ್‌ ಆಸ್ಪತ್ರೆ, ವೈದೇಹಿ ಆಸ್ಪತ್ರೆ ಹಾಗೂ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಆರ್‌ಸಿಬಿ ವಿಜಯೋತ್ಸವದ ವೇಳೆ ಯಡವಟ್ಟು – ಕಾಲ್ತುಳಿತಕ್ಕೆ 10 ಆರ್‌ಸಿಬಿ ಫ್ಯಾನ್ಸ್‌ ದುರ್ಮರಣ

  • ಅನ್ ಕಂಟ್ರೋಲ್ಡ್ ಕ್ರೌಡ್ ಆಯ್ತು: ಕಾಲ್ತುಳಿತದ ಬಗ್ಗೆ ಡಿಕೆಶಿ ರಿಯಾಕ್ಷನ್

    ಅನ್ ಕಂಟ್ರೋಲ್ಡ್ ಕ್ರೌಡ್ ಆಯ್ತು: ಕಾಲ್ತುಳಿತದ ಬಗ್ಗೆ ಡಿಕೆಶಿ ರಿಯಾಕ್ಷನ್

    – ಅಭಿಮಾನ ಇರಲಿ, ಆದರೆ ಜೀವಕ್ಕಿಂತ ದೊಡ್ಡದಲ್ಲ.. ಸುರಕ್ಷಿತವಾಗಿರಿ ಎಂದ ಡಿಸಿಎಂ

    ಬೆಂಗಳೂರು: ಅನ್ ಕಂಟ್ರೋಲ್ಡ್ ಕ್ರೌಡ್ ಆಯ್ತು. ಹೀಗಾಗಿ, ತೆರೆದ ವಾಹನದಲ್ಲಿ ವಿಜಯೋತ್ಸವ ಮೆರವಣಿಗೆ ರದ್ದು ಮಾಡಿದ್ದೆವು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದರು.

    ಕಾಲ್ತುಳಿತ ದುರಂತ ಕುರಿತು ಮಾತನಾಡಿದ ಡಿಕೆಶಿ, ಪರಿಸ್ಥಿತಿ ಬಗ್ಗೆ ವಿಮಾನ ನಿಲ್ದಾಣದಲ್ಲೇ ಗಮನಿಸಿದ್ದೆವು. ಅದಕ್ಕೆ ನಾವು ಮೆರವಣಿಗೆಯನ್ನು ರದ್ದು ಮಾಡಿ, ಕ್ಲೋಸ್ ವಾಹನದಲ್ಲಿ ಆಟಗಾರರನ್ನು ಕರೆತಂದೆವು. ಆದರೂ, ಅವರ ಮನವಿ ಇತ್ತು. ವಿಧಾನಸೌಧದಿಂದಲಾದರೂ ಬರಬೇಕು ಅಂತ. ಮಳೆ ಬಂದು ತಕ್ಷಣ ಕ್ರೌಡ್ ಅನ್ ಕಂಟ್ರೋಲ್ ಆಯಿತು ಎಂದು ವಿವರಿಸಿದರು. ಇದನ್ನೂ ಓದಿ: ಆರ್‌ಸಿಬಿ ವಿಜಯೋತ್ಸವದ ವೇಳೆ ಯಡವಟ್ಟು – ಕಾಲ್ತುಳಿತಕ್ಕೆ 10 ಆರ್‌ಸಿಬಿ ಫ್ಯಾನ್ಸ್‌ ದುರ್ಮರಣ

    ಇಲ್ಲೂ ಕೂಡ ಅನೇಕ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮೆರವಣಿಗೆ ಇತ್ತು. 1 ಗಂಟೆಗೂ ಹೆಚ್ಚು ಸಮಯ ಕಾರ್ಯಕ್ರಮ ಮಾಡುವುದಿತ್ತು. ಆದರೆ, 10-15 ನಿಮಿಷದಲ್ಲಿ ಕಾರ್ಯಕ್ರಮ ಮುಗಿಸಿದೆವು ಎಂದು ತಿಳಿಸಿದರು.

    ಸಾವು-ನೋವಿನ ಬಗ್ಗೆ ಕೇಳಿದ ಪ್ರಶ್ನೆಗೆ, ನಾನು ಕೂಡ ಆಸ್ಪತ್ರೆಗೆ ಹೋಗ್ತೀನಿ. ಅಧಿಕೃತ ಸಾವಿನ ಮಾಹಿತಿ ತೆಗೆದುಕೊಳ್ಳಬೇಕು ಎಂದರು. ಭದ್ರತಾ ವೈಫಲ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡದೇ ಡಿಸಿಎಂ ತೆರಳಿದರು. ಇದನ್ನೂ ಓದಿ: ಸರ್ಕಾರದ ಪ್ರಚಾರದ ಹುಚ್ಚಿಗೆ ಜನ ಬಲಿಯಾಗಿದ್ದಾರೆ: ವಿಜಯೇಂದ್ರ ಆಕ್ರೋಶ

    ಕಾಲ್ತುಳಿತ ದುರಂತದ ಬಗ್ಗೆ ಎಕ್ಸ್ ಪೋಸ್ಟ್ ಹಾಕಿರುವ ಡಿಸಿಎಂ, ಆರ್‌ಸಿಬಿಯ ಐಪಿಎಲ್ ಗೆಲುವಿನ ಸಂಭ್ರಮಾಚರಣೆಗೆ ಸಾಕ್ಷಿಯಾಗಬೇಕಿದ್ದ ಜನರು ದುರಂತಕ್ಕೆ ಒಳಗಾಗಿ, ಮೃತಪಟ್ಟಿರುವುದು ತೀವ್ರ ನೋವು ಮತ್ತು ಆಘಾತ ತಂದಿದೆ. ಮೃತರಿಗೆ ನನ್ನ ಸಂತಾಪಗಳು. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು. ಅಭಿಮಾನ ಇರಲಿ, ಆದರೆ ಜೀವಕ್ಕಿಂತ ದೊಡ್ಡದಲ್ಲ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

  • ಆರ್‌ಸಿಬಿ ವಿಜಯೋತ್ಸವದ ವೇಳೆ ಯಡವಟ್ಟು – ಕಾಲ್ತುಳಿತಕ್ಕೆ 10 ಆರ್‌ಸಿಬಿ ಫ್ಯಾನ್ಸ್‌ ದುರ್ಮರಣ

    ಆರ್‌ಸಿಬಿ ವಿಜಯೋತ್ಸವದ ವೇಳೆ ಯಡವಟ್ಟು – ಕಾಲ್ತುಳಿತಕ್ಕೆ 10 ಆರ್‌ಸಿಬಿ ಫ್ಯಾನ್ಸ್‌ ದುರ್ಮರಣ

    – ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಸಾವು
    – 20ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ; ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

    ಬೆಂಗಳೂರು: ಆರ್‌ಸಿಬಿ (RCB) ಗೆಲುವು ವಿಜಯೋತ್ಸವದ ವೇಳೆ ಯಡವಟ್ಟು ಸಂಭವಿಸಿದೆ. ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಸಂಭವಿಸಿದ ಕಾಲ್ತುಳಿತಕ್ಕೆ (Stampede) 10 ಆರ್‌ಸಿಬಿ ಫ್ಯಾನ್ಸ್‌ ದುರ್ಮರಣಕ್ಕೀಡಾಗಿದ್ದಾರೆ. 50ಕ್ಕೂ ಹೆಚ್ಚು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

    ಬೌರಿಂಗ್‌ ಆಸ್ಪತ್ರೆಯಲ್ಲಿ 5 ಹಾಗೂ ವೈದೇಹಿ ಆಸ್ಪತ್ರೆಯಲ್ಲಿ 4 ಹಾಗೂ ಮಣಿಪಾಲ್‌ ಆಸ್ಪತ್ರೆಯಲ್ಲಿ ಒಬ್ಬರು ಅಭಿಮಾನಿಗಳು ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮೃತಪಟ್ಟವರು ಯಲಹಂಕ ಮೂಲದ ಓರ್ವ ಯುವತಿ ಹಾಗೂ 6 ಯುವಕರು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಆರ್‌ಸಿಬಿ ಗೆಲುವು ಸಂಭ್ರಮದ ವೇಳೆ ಕಾಲ್ತುಳಿತ – ಮೂವರು ಸಾವು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

    18ನೇ ಆವೃತ್ತಿಯ ಐಪಿಎಲ್‌ ಟ್ರೋಫಿ ಗೆಲುವನ್ನು ಸಂಭ್ರಮಿಸಲು ಆರ್‌ಸಿಬಿ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದರು. ಹೆಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಕೊಹ್ಲಿ ಸೇರಿದಂತೆ ರಜತ್‌ ಪಾಟೀದಾರ್‌ ಪಡೆಗೆ ಆರ್‌ಸಿಬಿ ಫ್ಯಾನ್ಸ್‌ ಅದ್ಧೂರಿ ಸ್ವಾಗತ ಕೋರಿದರು.

    ವಿಶೇಷ ಬಸ್‌ನಲ್ಲಿ ವಿಧಾನಸೌಧಕ್ಕೆ ಆಟಗಾರರನ್ನು ಕರೆತರಲಾಯಿತು. ಈ ವೇಳೆ ಮಾರ್ಗದುದ್ದಕ್ಕೂ ಅಭಿಮಾನಿಗಳು ಕಿಕ್ಕಿರಿದು ಜಮಾಯಿಸಿ ಆಟಗಾರರನ್ನು ಅಭಿನಂದಿಸಿದರು. ಫ್ಯಾನ್ಸ್‌ ಕ್ರೇಜ್‌ ನೋಡಿ ಆಟಗಾರರು ಖುಷಿಪಟ್ಟರು. ಇದನ್ನೂ ಓದಿ: ಆರ್‌ಸಿಬಿ ಗೆಲುವಿನ ನಶೆಯಲ್ಲಿ ತೇಲಿದ ಫ್ಯಾನ್ಸ್‌ – ಒಂದೇ ದಿನ 157 ಕೋಟಿ ಎಣ್ಣೆ ಸೇಲ್

    ಸಂಜೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡದ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಇತ್ತು. ಸಮಾರಂಭದಲ್ಲಿ ಆಟಗಾರರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಾಗರೋಪಾದಿಯಲ್ಲಿ ಸ್ಟೇಡಿಯಂ ಬಳಿ ನೆರೆದಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

  • Namma Bengaluru Scenes – ಆರ್‌ಸಿಬಿ ಅಭಿಮಾನಿಗಳ ಸಂತಸದ ಕ್ಷಣ ಹಂಚಿಕೊಂಡ ಅನುಷ್ಕಾ ಶರ್ಮಾ

    Namma Bengaluru Scenes – ಆರ್‌ಸಿಬಿ ಅಭಿಮಾನಿಗಳ ಸಂತಸದ ಕ್ಷಣ ಹಂಚಿಕೊಂಡ ಅನುಷ್ಕಾ ಶರ್ಮಾ

    ಬೆಂಗಳೂರು: ಬೆಂಗಳೂರಿಗೆ ಆಗಮಿಸಿದ ಆರ್‌ಸಿಬಿ ತಂಡವನ್ನು ಅಭಿಮಾನಿಗಳು ಭರಮಾಡಿಕೊಂಡ ಸಂತಸದ ಕ್ಷಣವನ್ನು ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

    Namma Bengaluru Scenes ಎಂದು ಬರೆದುಕೊಂಡು, ಅಭಿಮಾನಿಗಳು ಸಂಭ್ರಮದಿಂದ ರಸ್ತೆಗಳ ಬದಿಯಲ್ಲಿ ಸ್ವಾಗತಿಸುತ್ತಿದ್ದ ಕ್ಷಣವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ  ಓದಿ: ಆರ್‌ಸಿಬಿ ಗೆಲುವಿನ ನಶೆಯಲ್ಲಿ ತೇಲಿದ ಫ್ಯಾನ್ಸ್‌ – ಒಂದೇ ದಿನ 157 ಕೋಟಿ ಎಣ್ಣೆ ಸೇಲ್

    ಈ ಕ್ಷಣಕ್ಕಾಗಿ ಪ್ರೀತಿಯಿಂದ ಹಾಗೂ ತಾಳ್ಮೆಯಿಂದ ಕಾದ ಮುಖಗಳಿವು ಎಂದು ಬರೆದುಕೊಂಡು ಆರ್‌ಸಿಬಿ ಅಭಿಮಾನಿಗಳ ಸಂಭ್ರಮವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಚಾಂಪಿಯನ್ ಟ್ರೋಫಿಯನ್ನು ಗೆದ್ದಿದೆ. ಇದನ್ನೂ ಓದಿ: ಐಪಿಎಲ್‌ ಟ್ರೋಫಿ ಒಳಗಡೆ ಏನಿದೆ – ಚೆಕ್‌ ಮಾಡಿ ನೋಡಿದ ಕೊಹ್ಲಿ

    ಇದೀಗ ಅಭಿಮಾನಿಗಳ ಸಂಭ್ರಮಕ್ಕೆ ಎಲ್ಲೆ ಇಲ್ಲದಂತಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಹಾಗೂ ವಿಧಾನಸೌಧದ ಎದುರುಗಡೆ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಫ್ಯಾನ್ಸ್‌ಗೆ ಚಾಂಪಿಯನ್ ಟ್ರೋಫಿ ತೋರಿಸಿ ಖುಷಿಪಟ್ಟ ಕಿಂಗ್ ಕೊಹ್ಲಿ

  • ಆರ್‌ಸಿಬಿ ಗೆಲುವು ಸಂಭ್ರಮದ ವೇಳೆ ಕಾಲ್ತುಳಿತ – ಮೂವರು ಸಾವು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

    ಆರ್‌ಸಿಬಿ ಗೆಲುವು ಸಂಭ್ರಮದ ವೇಳೆ ಕಾಲ್ತುಳಿತ – ಮೂವರು ಸಾವು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

    – ಓರ್ವ ಬಾಲಕನ ಸ್ಥಿತಿ ಗಂಭೀರ; ರಸ್ತೆಯಲ್ಲಿ ಬಿದ್ದಿದ್ದ ಯುವತಿರನ್ನು ಹೊತ್ತು ಸಾಗಿದ ಆಪ್ತರು

    ಬೆಂಗಳೂರು: ಐಪಿಎಲ್‌ ಟ್ರೋಫಿ ಗೆದ್ದ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಅವಘಡಗಳು ಸಂಭವಿಸಿವೆ. ಆರ್‌ಸಿಬಿ ತಂಡದ ಆಟಗಾರರನ್ನು ಕಣ್ತುಂಬಿಕೊಳ್ಳಲು ನೆರೆದಿದ್ದ ಜನಸಾಗರದ ನಡುವೆ ನೂಕುನುಗ್ಗಲು ಏರ್ಪಟ್ಟು ಕಾಲ್ತುಳಿತಕ್ಕೆ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

    ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಾವಿರಾರು ಸಂಖ್ಯೆಯಲ್ಲಿ ಆರ್‌ಸಿಬಿ ಅಭಿಮಾನಿಗಳು ಕಿಕ್ಕಿರಿದು ಜಮಾಯಿಸಿದ್ದರು. ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ ಓರ್ವ ಮಹಿಳೆ ಮತ್ತು ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವರ ಪೈಕಿ ಓರ್ವ ಬಾಲಕನ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಸಾಧ್ಯತೆ ಇದೆ. ಇದನ್ನೂ ಓದಿ: Namma Bengaluru Scenes – ಆರ್‌ಸಿಬಿ ಅಭಿಮಾನಿಗಳ ಸಂತಸದ ಕ್ಷಣ ಹಂಚಿಕೊಂಡ ಅನುಷ್ಕಾ ಶರ್ಮಾ

    ಅಸ್ವಸ್ಥಗೊಂಡು ರಸ್ತೆಯಲ್ಲಿ ಬಿದ್ದ ವ್ಯಕ್ತಿಯೊಬ್ಬನಿಗೆ ಅಲ್ಲೇ ಇದ್ದವರು ಸಿಪಿಆರ್‌ ಮಾಡಿ ಎಚ್ಚರಗೊಳಿಸಲು ಯತ್ನಿಸಿದರು. ಗಂಭೀರ ಸ್ಥಿತಿಯಲ್ಲಿದ್ದ ಬಾಲಕನನ್ನು ಪೊಲೀಸ್‌ ಸಿಬ್ಬಂದಿಯೊಬ್ಬರು ಎತ್ತಿಕೊಂಡು ಅಂಬುಲೆನ್ಸ್‌ ಕಡೆಗೆ ಓಡುತ್ತಿರುವ ದೃಶ್ಯ ಕಂಡುಬಂತು.

    ನೂಕುನುಗ್ಗಲಲ್ಲಿ ಗಾಯಗೊಂಡಿದ್ದ ಇಬ್ಬರು ಯುವತಿಯರನ್ನು ಆಪ್ತರು ಎತ್ತಿಕೊಂಡು ಹೋಗುತ್ತಿದ್ದ ದೃಶ್ಯವೂ ಕಂಡುಬಂತು. ಹೆಚ್ಚಿನ ಸಂಖ್ಯೆಯಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಇದನ್ನೂ ಓದಿ: ಆರ್‌ಸಿಬಿ ಗೆಲುವಿನ ನಶೆಯಲ್ಲಿ ತೇಲಿದ ಫ್ಯಾನ್ಸ್‌ – ಒಂದೇ ದಿನ 157 ಕೋಟಿ ಎಣ್ಣೆ ಸೇಲ್

    ಹಲವರು ಮರದ ಮೇಲೆ ಏರಿ ಕುಳಿತಿದ್ದರು. ಇನ್ನೂ ಕೆಲವರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್‌, ಬಿಬಿಎಂಪಿ ಕಸದ ಲಾರಿಯನ್ನೇ ತಡೆದು ಅದರ ಮೇಲೇರಿ ಕಿರಿಕಿರಿ ಉಂಟು ಮಾಡಿದರು.

  • ಆರ್‌ಸಿಬಿ ಗೆಲುವಿನ ನಶೆಯಲ್ಲಿ ತೇಲಿದ ಫ್ಯಾನ್ಸ್‌ – ಒಂದೇ ದಿನ 157 ಕೋಟಿ ಎಣ್ಣೆ ಸೇಲ್

    ಆರ್‌ಸಿಬಿ ಗೆಲುವಿನ ನಶೆಯಲ್ಲಿ ತೇಲಿದ ಫ್ಯಾನ್ಸ್‌ – ಒಂದೇ ದಿನ 157 ಕೋಟಿ ಎಣ್ಣೆ ಸೇಲ್

    ಬೆಂಗಳೂರು: ಐಪಿಎಲ್‌ 2025ರ (IPL 2025) ಟ್ರೋಫಿಗಾಗಿ ನಡೆದ ಮಂಗಳವಾರ ನಡೆದ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ (RCB) ಗೆಲುವಿನ ನಶೆಯಲ್ಲಿ ಫ್ಯಾನ್ಸ್‌ ತೇಲಾಡಿದ್ದಾರೆ. ಫೈನಲ್‌ ಮ್ಯಾಚ್‌ ದಿನ ರಾಜ್ಯದಲ್ಲಿ ದಾಖಲೆಯ ಮದ್ಯ ಮಾರಾಟವಾಗಿದೆ.

    ಜೂನ್ 3 ರಂದು, 1.48 ಲಕ್ಷ ಬಾಟಲ್ ಬಿಯರ್ ಬಾಕ್ಸ್‌ಗಳು ಮಾರಾಟವಾಗಿದ್ದು, 30.66 ಕೋಟಿ ರೂ. ವಹಿವಾಟು ನಡೆದಿದೆ. ಕಳೆದ ವರ್ಷ ಇದೇ ದಿನಾಂಕದಂದು ಕೇವಲ 0.36 ಲಕ್ಷ ಬಾಕ್ಸ್‌ಗಳು ಮಾರಾಟವಾಗಿ, 6.29 ಕೋಟಿ ರೂ. ಆದಾಯ ಬಂದಿತ್ತು. ಈ ಬಾರಿ ಆರ್‌ಸಿಬಿ ಫೈನಲ್‌ಗೆ ತಲುಪಿದ ಖುಷಿಯಲ್ಲಿದ್ದ ಫ್ಯಾನ್ಸ್‌ ಎಣ್ಣೆ ಕಿಕ್‌ನಲ್ಲಿ ಮಿಂದೆದ್ದಿದ್ದಾರೆ. ಇದನ್ನೂ ಓದಿ: ಐಪಿಎಲ್‌ ಟ್ರೋಫಿ ಒಳಗಡೆ ಏನಿದೆ – ಚೆಕ್‌ ಮಾಡಿ ನೋಡಿದ ಕೊಹ್ಲಿ

    ಬಿಯರ್‌ ಅಷ್ಟೇ ಅಲ್ಲ, ಇತರ ಆಲ್ಕೋಹಾಲ್‌ಯುಕ್ತ ಮದ್ಯಗಳು ಕೂಡ ಭರ್ಜರಿಯಾಗಿ ಸೇಲ್‌ ಆಗಿವೆ. 127.88 ಕೋಟಿ ರೂ. ಮೌಲ್ಯದ 1.28 ಲಕ್ಷ ಬಾಕ್ಸ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ದಿನ ಮದ್ಯ ಮಾರಾಟದಿಂದ ಕೇವಲ 19.41 ಕೋಟಿ ರೂ.ಬಂದಿತ್ತು.

    ಒಟ್ಟಾರೆಯಾಗಿ, ಮಂಗಳವಾರ ಒಂದು ದಿನದಲ್ಲಿ ರಾಜ್ಯವು ಮದ್ಯ ಮಾರಾಟದಿಂದ 157.94 ಕೋಟಿ ರೂ. ಗಳಿಸಿದೆ. ಹಿಂದಿನ ವರ್ಷದ ಜೂನ್‌ 3 ರಂದು ಒಟ್ಟು 25 ಕೋಟಿ ರೂ. ಮಾತ್ರ ಬಂದಿತ್ತು. 132.24 ಕೋಟಿ ರೂ.ಗಳ ಹೆಚ್ಚಳವಾಗಿದೆ. ಇದನ್ನೂ ಓದಿ: ಆರ್‌ಸಿಬಿ ಫ್ಯಾನ್ಸ್‌ಗೆ ಚಾಂಪಿಯನ್ ಟ್ರೋಫಿ ತೋರಿಸಿ ಖುಷಿಪಟ್ಟ ಕಿಂಗ್ ಕೊಹ್ಲಿ

    ಐಪಿಎಲ್‌ ಪ್ರಾರಂಭವಾದ 18 ವರ್ಷಗಳ ನಂತರ ಇದು ಆರ್‌ಸಿಬಿಯ ಮೊದಲ ಐಪಿಎಲ್ ಗೆಲುವು. ಆರ್‌ಸಿಬಿ ಅಂತಿಮವಾಗಿ ಐಪಿಎಲ್ 2025 ಅನ್ನು ಗೆದ್ದಂತೆ, ಬೆಂಗಳೂರು ರೆಡ್‌ ಕಾರ್ಪೆಟ್‌ನಲ್ಲಿ ಮಿಂಚಿತು. ಅಭಿಮಾನಿಗಳು ಬೀದಿಗಿಳಿದು ‘ಆರ್‌ಸಿಬಿ.. ಕೊಹ್ಲಿ’, ‘ಈ ಸಲ ಕಪ್ ನಮ್ದು’ ಎಂದು ಘೋಷಣೆ ಕೂಗಿ ಸಂಭ್ರಮಿಸುತ್ತಿದ್ದಾರೆ. ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ಇಂದು ಬೆಂಗಳೂರಿಗೆ ಬಂದಿಳಿದಿದ್ದು, ವಿಜಯೋತ್ಸವ ಆಚರಿಸಲು ಮುಂದಾಗಿದೆ.

  • ಆರ್‌ಸಿಬಿ ಫ್ಯಾನ್ಸ್‌ಗೆ ಚಾಂಪಿಯನ್ ಟ್ರೋಫಿ ತೋರಿಸಿ ಖುಷಿಪಟ್ಟ ಕಿಂಗ್ ಕೊಹ್ಲಿ

    ಆರ್‌ಸಿಬಿ ಫ್ಯಾನ್ಸ್‌ಗೆ ಚಾಂಪಿಯನ್ ಟ್ರೋಫಿ ತೋರಿಸಿ ಖುಷಿಪಟ್ಟ ಕಿಂಗ್ ಕೊಹ್ಲಿ

    ಬೆಂಗಳೂರು: ಇದೀಗ ಬೆಂಗಳೂರಿಗೆ ಬಂದಿಳಿದ ಆರ್‌ಸಿಬಿ ತಂಡವು ಹೆಚ್‌ಎಎಲ್‌ನಿಂದ ತಾಜ್ ವೆಸ್ಟೆಂಡ್ ಹೊಟೇಲ್‌ಗೆ ತೆರಳುತ್ತಿದ್ದ ವೇಳೆ ಅಭಿಮಾನಿಗಳನ್ನ ಕಂಡ ವಿರಾಟ್ ಕೊಹ್ಲಿ, ಚಾಂಪಿಯನ್ ಟ್ರೋಫಿಯನ್ನು ತೋರಿಸಿ ಸಂತಸಪಟ್ಟರು.

    18 ವರ್ಷಗಳ ಬಳಿಕ ಮೊದಲ ಬಾರಿಗೆ ಕಪ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದರು. ಹೆಚ್‌ಎಎಲ್‌ನಿಂದ ತಾಜ್ ವೆಸ್ಟೆಂಡ್‌ವರೆಗಿನ ದಾರಿಯುದ್ದಕ್ಕೂ ಅಭಿಮಾನಿಗಳ ಸಾಗರವೇ ನೆರೆದಿತ್ತು. ಇದನ್ನೂ ಓದಿ: ಆರ್‌ಸಿಬಿ ಸ್ಟಾರ್‌ ಕೊಹ್ಲಿಗೆ ಕನ್ನಡದ ಬಾವುಟ ನೀಡಿದ ಡಿಕೆಶಿ – ಧ್ವಜ ಹಾರಿಸಿ ಸಂಭ್ರಮಿಸಿದ ವಿರಾಟ್‌

    ರಸ್ತೆ ಇಕ್ಕೆಲಗಳಲ್ಲೆಲ್ಲಾ ಫ್ಯಾನ್ಸ್ ನಿಂತು `ಆರ್‌ಸಿಬಿ.. ಆರ್‌ಸಿಬಿ.. ಕೊಹ್ಲಿ.. ಕೊಹ್ಲಿ’ ಎಂದು ಕೂಗಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ಈ ವೇಳೆ ಫ್ಯಾನ್ಸ್‌ಗಳ ಹರುಷವನ್ನು ಕಂಡ ವಿರಾಟ್ ಕೊಹ್ಲಿ ಅವರು ಬಸ್‌ನಲ್ಲೇ ಕುಳಿತು ಅಭಿಮಾನಿಗಳಿಗೆ ಚಾಂಪಿಯನ್ ಟ್ರೋಫಿ ತೋರಿಸಿ ಖುಷಿಪಟ್ಟರು. ಇದನ್ನೂ ಓದಿ: ಬೆಂಗಳೂರಿಗೆ ʻರಾಯಲ್‌ʼ ಆಗಿ ಎಂಟ್ರಿ ಕೊಟ್ಟ ಆರ್‌ಸಿಬಿ ತಂಡ

    ಟ್ರೋಫಿ ಮೇಲೆ ಕೈತಟ್ಟಿ ‘ಈ ಸಲ ಕಪ್ ನಮ್ದು’ ಎಂಬಂತೆ ಸನ್ನೆ ಮಾಡಿದರು. ಕೊಹ್ಲಿಯನ್ನು ಕಂಡು ಅಭಿಮಾನಿಗಳು ಫುಲ್ ಥ್ರಿಲ್ ಆದರು. ಇದನ್ನೂ ಓದಿ: ಆರ್‌ಸಿಬಿ ವಿಜಯೋತ್ಸವ – ಟಿಕೆಟ್‌, ಪಾಸ್‌ ಹೊಂದಿದವರಿಗೆ ಮಾತ್ರ ಚಿನ್ನಸ್ವಾಮಿಗೆ ಎಂಟ್ರಿ

  • ಆರ್‌ಸಿಬಿ ಸ್ಟಾರ್‌ ಕೊಹ್ಲಿಗೆ ಕನ್ನಡದ ಬಾವುಟ ನೀಡಿದ ಡಿಕೆಶಿ – ಧ್ವಜ ಹಾರಿಸಿ ಸಂಭ್ರಮಿಸಿದ ವಿರಾಟ್‌

    ಆರ್‌ಸಿಬಿ ಸ್ಟಾರ್‌ ಕೊಹ್ಲಿಗೆ ಕನ್ನಡದ ಬಾವುಟ ನೀಡಿದ ಡಿಕೆಶಿ – ಧ್ವಜ ಹಾರಿಸಿ ಸಂಭ್ರಮಿಸಿದ ವಿರಾಟ್‌

    ಬೆಂಗಳೂರು: 18ನೇ ಐಪಿಎಲ್‌ (IPL 2025) ಆವೃತ್ತಿಯ ಟ್ರೋಫಿ ಗೆದ್ದ ಖುಷಿಯಲ್ಲಿ ಆರ್‌ಸಿಬಿ (RCB) ತಂಡ ಬುಧವಾರ ತವರಿಗೆ ಆಗಮಿಸಿದೆ. ಟ್ರೋಫಿ ಜಯಿಸಿದ ಆಟಗಾರರನ್ನು ಅಭಿಮಾನಿಗಳು ಸಂಭ್ರಮದಿಂದ ಬರಮಾಡಿಕೊಂಡರು.

    ಆರ್‌ಸಿಬಿ ತಂಡದ ಆಟಗಾರರಿಗೆ ಹೆಎಎಲ್‌ ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ (D.K.Shivakumar) ಸ್ವಾಗತ ಕೋರಿದರು. ಈ ವೇಳೆ, ಆರ್‌ಸಿಬಿ ಸ್ಟಾರ್‌ ವಿರಾಟ್‌ ಕೊಹ್ಲಿಗೆ (Virat Kohli) ಕನ್ನಡದ ಬಾವುಟ ನೀಡಿದರು. ಕನ್ನಡ ಧ್ವಜ ಹಾರಿಸುವ ಮೂಲಕ ವಿರಾಟ್‌ ಖುಷಿಪಟ್ಟರು. ಇದನ್ನೂ ಓದಿ: ಬೆಂಗಳೂರಿಗೆ ʻರಾಯಲ್‌ʼ ಆಗಿ ಎಂಟ್ರಿ ಕೊಟ್ಟ ಆರ್‌ಸಿಬಿ ತಂಡ

    ಇಂದು ವಿಧಾನಸೌಧದ ಬಳಿ ಸಂಭ್ರಮಾಚರಣೆ ಸಮಾರಂಭ ಇದೆ. ಈ ಹಿನ್ನೆಲೆಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದಾರೆ. ಅವರನ್ನು ಸ್ವಾಗತಿಸಲು ಅಭಿಮಾನಿಗಳು ರಸ್ತೆಯುದ್ದಕ್ಕೂ ಕಿಕ್ಕಿರಿದು ಜಮಾಯಿಸಿದ್ದಾರೆ.

    ರಸ್ತೆಯದ್ದಕ್ಕೂ ಅಭಿಮಾನಿಗಳ ಸಾಗರವೇ ನೆರೆದಿದೆ. ರಜತ್‌ ಪಾಟೀದಾರ್‌ ಪಡೆಗೆ ಗ್ರ್ಯಾಂಡ್‌ ವೆಲ್‌ಕಮ್‌ ಕೋರಲು ಫ್ಯಾನ್ಸ್‌ ಕಾತರರಾಗಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ವಿಜಯೋತ್ಸವ – ಟಿಕೆಟ್‌, ಪಾಸ್‌ ಹೊಂದಿದವರಿಗೆ ಮಾತ್ರ ಚಿನ್ನಸ್ವಾಮಿಗೆ ಎಂಟ್ರಿ

    ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ 6 ರನ್‌ಗಳ ರೋಚಕ ಜಯ ಸಾಧಿಸಿತು. ಆ ಮೂಲಕ 18 ವರ್ಷಗಳ ಬಳಿಕ ಚೊಚ್ಚಲ ಐಪಿಎಲ್‌ ಟ್ರೋಫಿ ಎತ್ತಿ ಹಿಡಿಯಿತು. ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಇದು ನಿಜಕ್ಕೂ ಐತಿಹಾಸಿಕ ಕ್ಷಣವಾಗಿತ್ತು. ವಿರಾಟ್‌ ಕೊಹ್ಲಿಗೂ ಈ ಗೆಲುವು ವಿಶೇಷವಾಗಿತ್ತು.

  • ಬೆಂಗಳೂರಿಗೆ ʻರಾಯಲ್‌ʼ ಆಗಿ ಎಂಟ್ರಿ ಕೊಟ್ಟ ಆರ್‌ಸಿಬಿ ತಂಡ

    ಬೆಂಗಳೂರಿಗೆ ʻರಾಯಲ್‌ʼ ಆಗಿ ಎಂಟ್ರಿ ಕೊಟ್ಟ ಆರ್‌ಸಿಬಿ ತಂಡ

    ಬೆಂಗಳೂರು: ಐಪಿಎಲ್ 2025ರ ಫೈನಲ್ (IPL 2025 Final) ಪಂದ್ಯದಲ್ಲಿ ಕಪ್ ಗೆದ್ದ ಆರ್‌ಸಿಬಿ (RCB) ತಂಡ ಅಭಿಮಾನಿಗಳೊಂದಿಗೆ ವಿಜಯೋತ್ಸವ ಆಚರಿಸಲು ತವರಿಗೆ ಬಂದಿಳಿದಿದೆ. ಹೆಚ್‌ಎಎಲ್‌ಗೆ ವಿಶೇಷ ವಿಮಾನದಲ್ಲಿ ಆರ್‌ಸಿಬಿ ಆಟಗಾರರು ಬಂದಿಳಿದಿದ್ದು, ಜೊತೆಗೆ ಎಬಿಡಿ ಹಾಗೂ ಕ್ರಿಸ್ ಗೇಲ್ ಸಹ ಬಂದಿದ್ದಾರೆ. ಕೊಹ್ಲಿಯವರಿಗೆ ಡಿಸಿಎಂ ಡಿ.ಕೆ ಶಿವಕುಮಾರ್‌ ಬಾವುಟ ನೀಡಿ ಸ್ವಾಗತ ಕೋರಿದ್ದಾರೆ.

    ಅಹಮದಾಬಾದ್‌ನಿಂದ ವಿಶೇಷ ವಿಮಾನದಲ್ಲಿ ಆರ್‌ಸಿಬಿ ಆಟಗಾರರು ಹೊರಟು ಮಧ್ಯಾಹ್ನ 2:10ಕ್ಕೆ ಬೆಂಗಳೂರು ಹೆಚ್‌ಎಎಲ್ ವಿಮಾನ ನಿಲ್ದಾಣ ತಲುಪಿದ್ದಾರೆ. ಇಲ್ಲಿಂದ ಆರ್‌ಸಿಬಿ ತಂಡ ತಾಜ್ ವೆಸ್ಟೆಂಡ್ ಹೋಟೆಲ್‌ಗೆ ತೆರಳಲಿದೆ. ಇಲ್ಲಿ ವಿಶ್ರಾಂತಿ ಪಡೆದ ಬಳಿಕ ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಟ್ರೋಫಿ ನೀಡಲಿದೆ. ಇದನ್ನೂ ಓದಿ: ಇಂದು ಸಂಜೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿಕ್ಟರಿ ಪರೇಡ್

    ಸಿಎಂ ಭೇಟಿ ಬಳಿಕ 5 ಗಂಟೆಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ (Chinnaswamy Stadium) ತೆರಳಿ, ಆರ್‌ಸಿಬಿ ತಂಡದ ಪರೇಡ್ ನಡೆಯಲಿದೆ. 6 ಗಂಟೆಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಆರ್‌ಸಿಬಿ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.

    ಅಧಿಕೃತ ಟಿಕೆಟ್‌ ಮತ್ತು ಪಾಸ್‌ ಹೊಂದಿದವರಿಗೆ ಮಾತ್ರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ (Chinnaswamy Stadium) ಆರ್‌ಸಿಬಿ (RCB) ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲು ಅನುಮತಿ ನೀಡಲಾಗುತ್ತದೆ. ಚಿನ್ನಸ್ವಾಮಿ ಕ್ರೀಡಾಂಗಣದತ್ತ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಮಾರ್ಚ್‌ನಲ್ಲಿ ಸ್ಕ್ರಿಪ್ಟ್‌ ಬರೆದು ಜೂನ್‌ನಲ್ಲಿ ‘ಪಿಕ್ಚರ್‌’ ತೆಗೆದ ಜಿತೇಶ್‌ ಶರ್ಮಾ!

  • ಆರ್‌ಸಿಬಿ ವಿಜಯೋತ್ಸವ – ಟಿಕೆಟ್‌, ಪಾಸ್‌ ಹೊಂದಿದವರಿಗೆ ಮಾತ್ರ ಚಿನ್ನಸ್ವಾಮಿಗೆ ಎಂಟ್ರಿ

    ಆರ್‌ಸಿಬಿ ವಿಜಯೋತ್ಸವ – ಟಿಕೆಟ್‌, ಪಾಸ್‌ ಹೊಂದಿದವರಿಗೆ ಮಾತ್ರ ಚಿನ್ನಸ್ವಾಮಿಗೆ ಎಂಟ್ರಿ

    ಬೆಂಗಳೂರು: ಅಧಿಕೃತ ಟಿಕೆಟ್‌ ಮತ್ತು ಪಾಸ್‌ ಹೊಂದಿದವರಿಗೆ ಮಾತ್ರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ (Chinnaswamy Stadium) ಆರ್‌ಸಿಬಿ (RCB) ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲು ಅನುಮತಿ ನೀಡಲಾಗುತ್ತದೆ.

    ಚಿನ್ನಸ್ವಾಮಿ ಕ್ರೀಡಾಂಗಣದತ್ತ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

    ಹೇಳಿಕೆಯಲ್ಲಿ ಏನಿದೆ?
    ಕೆಎಸ್‌ಸಿಎ ವತಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ದಿನ ಸಂಜೆ 5 ಗಂಟೆಗೆ ಆರ್‌ಸಿಬಿ ತಂಡದ ಎಲ್ಲಾ ಆಟಗಾರರಿಗೆ ವಿಶೇಷ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭಕ್ಕೆ ಅಧಿಕೃತ ಟಿಕೆಟ್‌ ಮತ್ತು ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶವನ್ನು ಕಲ್ಪಿಸಲಾಗಿದೆ.

    ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಿಯಮಿತ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇರುವುದರಿಂದ ಸಮಾರಂಭಕ್ಕೆ ಆಗಮಿಸುವವರು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಮೆಟ್ರೋವನ್ನು ಬಳಸಬೇಕೆಂದು ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ.