Tag: RCB vs LSG

  • IPL 2025 | ಪಂದ್ಯ ಸೋತು ಹೃದಯ ಗೆದ್ದ ಪಂತ್‌

    IPL 2025 | ಪಂದ್ಯ ಸೋತು ಹೃದಯ ಗೆದ್ದ ಪಂತ್‌

    ಲಕ್ನೋ: ಕೊನೆಯವರೆಗೂ ಜಿದ್ದಾಜಿದ್ದಿಯಿಂದ ಕೂಡಿದ್ದ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಲಕ್ನೋ ತಂಡ ಸೋತರೂ ನಾಯಕ ಬಾರಿಸಿದ ರಿಷಭ್‌ ಪಂತ್‌ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

    17ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ದಿಗ್ವೇಶ್‌ ರಾಠಿ ಮೊದಲ ಎಸೆತದಲ್ಲೇ ಜಿತೇಶ್‌ ಶರ್ಮಾರನ್ನ ಔಟ್‌ ಮಾಡಿದ್ದರು. ಆದ್ರೆ ಅದು ನೋಬಾಲ್‌ ಆಗಿತ್ತು. ಈ ಬಗ್ಗೆ ರಿಷಭ್‌ ಪಂತ್‌ ಟಿವಿ ಅಂಪೈರ್‌ಗೂ ಮೊದಲೇ ಸಿಗ್ನಲ್‌ ಸೂಚಿಸುತ್ತಿದ್ದರು. ಆ ಎಸೆತದಲ್ಲಿ ಟಿವಿ ಅಂಪೈರ್‌ ತೀರ್ಪು ಪರಿಶೀಲಿಸುವುದಕ್ಕೂ ಮುನ್ನ‌ ನೋಬಾಲ್‌ ಸಿಗ್ನಲ್‌ ಕೊಡಲಾಯಿತು. ಇನ್ನೂ ಅದೇ ಓವರ್‌ನ ಕೊನೇ ಎಸೆತದಲ್ಲಿ ದಿಗ್ವೇಶ್‌ ರಾಠಿ ಸ್ಫೋಟಕವಾಗಿ ಆಡುತ್ತಿದ್ದ ಜಿತೇಶ್‌ ಶರ್ಮಾರನ್ನ ಮಂಕಡ್‌ ರನೌಟ್‌ ಮಾಡಲು ಯತ್ನಿಸಿದರು. ಈ ಬಗ್ಗೆ ಮೂರನೇ ಅಂಪೈರ್‌ಗೂ ಅಪೀಲ್‌ ಮಾಡಿದ್ದರು. ಇದು ಆರ್‌ಸಿಬಿ ಫಲಿತಾಂಶದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿತ್ತು. ಆದ್ರೆ ತೀರ್ಪು ಹೊರ ಬರುವಷ್ಟರಲ್ಲಿ ಪಂತ್‌ ರಿವೀವ್ಯೂ ಹಿಂಪಡೆದರು. ಇದರಿಂದ ಭಾವುಕರಾದ ಜಿತೇಶ್‌ ಶರ್ಮಾ ಮೈದಾನದಲ್ಲೇ ಒಂದು ಕ್ಷಣ ಪಂತ್‌ರನ್ನ ಅಪ್ಪಿಕೊಂಡರು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಲಕ್ನೋ ತಂಡ ಪಂತ್‌ ಅಮೋಘ ಶತಕದ ನೆರವಿನಿಂದ 3 ವಿಕೆಟ್‌ ನಷ್ಟಕ್ಕೆ 227 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಆರ್‌ಸಿಬಿ 18.4 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ ನಷ್ಟಕ್ಕೆ 230 ರನ್‌ ಗಳಿಸಿ ಗೆದ್ದು ಬೀಗಿದೆ. ಈ ಮೂಲಕ ಏಕನಾ ಕ್ರೀಡಾಂಗಣದಲ್ಲಿ ಅತಿದೊಡ್ಡ ಮೊತ್ತ ಚೇಸಿಂಗ್‌ ಮಾಡಿದ ದಾಖಲೆಯನ್ನೂ ಬರೆದಿದೆ.

    ಮಯಾಂಕ್‌ ಜಿತೇಶ್‌ ಶತಕದ ಜೊತೆಯಾಟ:
    ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಆರ್‌ಸಿಬಿಗೆ ಜಿತೇಶ್‌ ಶರ್ಮಾ – ಮಯಾಂಕ್‌ ಅಗರ್ವಾಲ್‌ ಬ್ಯಾಟಿಂಗ್‌ನಲ್ಲಿ ಬಲ ತುಂಬಿದರು. ಮುರಿಯದ 5ನೇ ವಿಕೆಟಿಗೆ ಈ ಜೋಡಿ 45 ಎಸೆತಗಳಲ್ಲಿ ಸ್ಫೋಟಕ 107 ರನ್‌ ಬಾರಿಸಿತು. ಇದು ತಂಡದ ಗೆಲುವನ್ನು ಸುಲಭವಾಗಿಸಿತು. 257.57 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಜಿತೇಶ್‌ ಶರ್ಮಾ 33 ಎಸೆತಗಳಲ್ಲಿ 85 ರನ್‌ (6 ಸಿಕ್ಸರ್‌, 8 ಬೌಂಡರಿ) ಚಚ್ಚಿದ್ರೆ, ವಿರಾಟ್‌ ಕೊಹ್ಲಿ 54 ರನ್‌ (30 ಎಸೆತ, 10 ಬೌಂಡರಿ), ಮಯಾಂಕ್‌ ಅಗರ್ವಾಲ್‌ 41 ರನ್‌ (23 ಎಸೆತ, 5 ಬೌಂಡರಿ) ಫಿಲ್‌ ಸಾಲ್ಟ್‌ 30 ರನ್‌ (19 ಎಸೆತ, 6 ಬೌಂಡರಿ), ರಜತ್‌ ಪಾಟೀದಾರ್‌ 14 ರನ್‌ ಗಳಿಸಿದ್ರು.

    ಲಕ್ನೋ ಪರ ರೂರ್ಕಿ 2 ವಿಕೆಟ್‌ ಕಿತ್ತರೆ, ಅಕಾಶ್‌ ಸಿಂಗ್‌, ಅವೇಶ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 227 ರನ್‌ ಗಳಿಸಿತ್ತು. ಈಗಾಗಲೇ ಪ್ಲೇ ಆಫ್‌ನಿಂದ ಹೊರಬಿದ್ದಿರುವ ಲಕ್ನೋ ಕೊನೆಯ ಪಂದ್ಯದಲ್ಲಿ ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. 2.4 ಓವರ್‌ಗಳಲ್ಲಿ 25 ರನ್‌ಗಳಿದ್ದಾಗಲೇ ಮೊದಲ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿತು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಂತ್ ಮತ್ತೊಬ್ಬ ಆರಂಭಿಕ ಮಿಚೆಲ್ ಮಾರ್ಷ್ ಜೊತೆಗೂಡಿ ಅಬ್ಬರಿಸಲು ಪ್ರಾರಂಭಿಸಿದರು. 2ನೇ ವಿಕೆಟಿಗೆ ಈ ಜೋಡಿ 78 ಎಸೆತಗಳಲ್ಲಿ ಬರೋಬ್ಬರಿ 152 ರನ್ ಜೊತೆಯಾಟ ನೀಡಿತ್ತು. ಇದರಿಂದ ಲಕ್ನೋ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಲಕ್ನೋ ಪರ 193.44 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಪಂತ್ ಅಜೇಯ 118 ರನ್ (61 ಎಸೆತ, 8 ಸಿಕ್ಸರ್, 11 ಬೌಂಡರಿ), ಮಿಚೆಲ್ ಮಾರ್ಷ್ 67 ರನ್ ?(37 ಎಸೆತ, 5 ಸಿಕ್ಸರ್, 4 ಬೌಂಡರಿ), ಮ್ಯಾಥ್ಯೂ ಬ್ರೀಟ್ಜ್ಕೆ 14 ರನ್, ನಿಕೋಲಸ್ ಪೂರನ್ 13 ರನ್, ಅಬ್ದುಲ್ ಸಮದ್ 1 ರನ್ ಗಳಿಸಿದ್ರೆ, ಲೆಗ್‌ಬೈಸ್, ನೋಬಾಲ್, ವೈಡ್‌ನಿಂದ 14 ಹೆಚ್ಚುವರಿ ರನ್ ತಂಡಕ್ಕೆ ಸೇರ್ಪಡೆಯಾಯಿತು.

    ಆರ್‌ಸಿಬಿ ಪರ ನುವಾನ್ ತುಷಾರ, ಭುವನೇಶ್ಚರ್ ಕುಮಾರ್, ರೊಮಾರಿಯೊ ಶೆಫರ್ಡ್ ತಲಾ ಒಂದೊಂದು ವಿಕೆಟ್ ಪಡೆದರು.

  • IPL 2025 | ಜಿತೇಶ್‌ ನಾಯಕನ ಆಟಕ್ಕೆ ಲಕ್ನೋ ಧೂಳೀಪಟ – ಕ್ವಾಲಿಫೈಯರ್-1ಗೆ ಲಗ್ಗೆಯಿಟ್ಟ ಆರ್‌ಸಿಬಿ

    IPL 2025 | ಜಿತೇಶ್‌ ನಾಯಕನ ಆಟಕ್ಕೆ ಲಕ್ನೋ ಧೂಳೀಪಟ – ಕ್ವಾಲಿಫೈಯರ್-1ಗೆ ಲಗ್ಗೆಯಿಟ್ಟ ಆರ್‌ಸಿಬಿ

    – ದಾಖಲೆಯ ರನ್‌ ಚೇಸ್‌ನೊಂದಿಗೆ 6 ವಿಕೆಟ್‌ಗಳ ಅಮೋಘ ಜಯ

    ಲಕ್ನೋ: ಜಿತೇಶ್‌ ಶರ್ಮಾ (Jitesh sharma) ನಾಯಕನ ಆಟಕ್ಕೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಲಕ್ನೋ ಸೂಪರ್‌ ಜೈಂಟ್ಸ್‌ (LSG) ವಿರುದ್ಧ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ 18ನೇ ಆವೃತ್ತಿಯ ಲೀಗ್‌ ಪಂದ್ಯಗಳನ್ನು ಮುಗಿಸಿದ್ದು, ಕ್ವಾಲಿಫೈಯರ್‌-1ಗೆ ಲಗ್ಗೆಯಿಟ್ಟಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಲಕ್ನೋ ತಂಡ ಪಂತ್‌ ಅಮೋಘ ಶತಕದ ನೆರವಿನಿಂದ 3 ವಿಕೆಟ್‌ ನಷ್ಟಕ್ಕೆ 227 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಆರ್‌ಸಿಬಿ (RCB) 18.4 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ ನಷ್ಟಕ್ಕೆ 230 ರನ್‌ ಗಳಿಸಿ ಗೆದ್ದು ಬೀಗಿದೆ. ಈ ಮೂಲಕ ಏಕನಾ ಕ್ರೀಡಾಂಗಣದಲ್ಲಿ ಅತಿದೊಡ್ಡ ಮೊತ್ತ ಚೇಸಿಂಗ್‌ ಮಾಡಿದ ದಾಖಲೆಯನ್ನೂ ಬರೆದಿದೆ.

    ಚೇಸಿಂಗ್‌ ಆರಂಭಿಸಿದ ಆರ್‌ಸಿಬಿ ಬಿರುಸಿನ ಆಟಕ್ಕೆ ಮುಂದಾಯಿತು. ಮೊದಲ ವಿಕೆಟಿಗೆ ವಿರಾಟ್‌ ಕೊಹ್ಲಿ (Virat Kohli), ಸಾಲ್ಟ್‌ ಜೋಡಿ 34 ಎಸೆತಗಳಲ್ಲಿ 61 ರನ್‌ಗಳ ಜೊತೆಯಾಟ ನೀಡಿತ್ತು. ಫಿಲ್‌ ಸಾಲ್ಟ್‌ 19 ಎಸೆತಗಳಲ್ಲಿ 30 ರನ್‌ಗಳಿಸಿ ಔಟಾಗುತ್ತಿದ್ದಂತೆ ರನ್‌ ವೇಗವೂ ಕಡಿತಗೊಂಡಿತ್ತು. ಅಲ್ಲದೇ ರಜ್‌ ಪಾಟೀದಾರ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ ಬ್ಯಾಟಕ್‌ ಟು ಬ್ಯಾಕ್‌ ವಿಕೆಟ್‌ ಒಪ್ಪಿಸಿದರು. ಇದರಿಂದ ಆರ್‌ಸಿಬಿಗೆ ಗೆಲುವು ಕಠಿಣವಾಗಿತ್ತು.

    ಮಯಾಂಕ್‌ ಜಿತೇಶ್‌ ಶತಕದ ಜೊತೆಯಾಟ:
    ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಆರ್‌ಸಿಬಿಗೆ ಜಿತೇಶ್‌ ಶರ್ಮಾ – ಮಯಾಂಕ್‌ ಅಗರ್ವಾಲ್‌ ಬ್ಯಾಟಿಂಗ್‌ನಲ್ಲಿ ಬಲ ತುಂಬಿದರು. ಮುರಿಯದ 5ನೇ ವಿಕೆಟಿಗೆ ಈ ಜೋಡಿ 45 ಎಸೆತಗಳಲ್ಲಿ ಸ್ಫೋಟಕ 107 ರನ್‌ ಬಾರಿಸಿತು. ಇದು ತಂಡದ ಗೆಲುವನ್ನು ಸುಲಭವಾಗಿಸಿತು. 257.57 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಜಿತೇಶ್‌ ಶರ್ಮಾ 33 ಎಸೆತಗಳಲ್ಲಿ 85 ರನ್‌ (6 ಸಿಕ್ಸರ್‌, 8 ಬೌಂಡರಿ) ಚಚ್ಚಿದ್ರೆ, ವಿರಾಟ್‌ ಕೊಹ್ಲಿ 54 ರನ್‌ (30 ಎಸೆತ, 10 ಬೌಂಡರಿ), ಮಯಾಂಕ್‌ ಅಗರ್ವಾಲ್‌ 41 ರನ್‌ (23 ಎಸೆತ, 5 ಬೌಂಡರಿ) ಫಿಲ್‌ ಸಾಲ್ಟ್‌ 30 ರನ್‌ (19 ಎಸೆತ, 6 ಬೌಂಡರಿ), ರಜತ್‌ ಪಾಟೀದಾರ್‌ 14 ರನ್‌ ಗಳಿಸಿದ್ರು.

    ಲಕ್ನೋ ಪರ ರೂರ್ಕಿ 2 ವಿಕೆಟ್‌ ಕಿತ್ತರೆ, ಅಕಾಶ್‌ ಸಿಂಗ್‌, ಅವೇಶ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 227 ರನ್‌ ಗಳಿಸಿತ್ತು. ಈಗಾಗಲೇ ಪ್ಲೇ ಆಫ್‌ನಿಂದ ಹೊರಬಿದ್ದಿರುವ ಲಕ್ನೋ ಕೊನೆಯ ಪಂದ್ಯದಲ್ಲಿ ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. 2.4 ಓವರ್‌ಗಳಲ್ಲಿ 25 ರನ್‌ಗಳಿದ್ದಾಗಲೇ ಮೊದಲ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿತು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಂತ್ ಮತ್ತೊಬ್ಬ ಆರಂಭಿಕ ಮಿಚೆಲ್ ಮಾರ್ಷ್ ಜೊತೆಗೂಡಿ ಅಬ್ಬರಿಸಲು ಪ್ರಾರಂಭಿಸಿದರು. 2ನೇ ವಿಕೆಟಿಗೆ ಈ ಜೋಡಿ 78 ಎಸೆತಗಳಲ್ಲಿ ಬರೋಬ್ಬರಿ 152 ರನ್ ಜೊತೆಯಾಟ ನೀಡಿತ್ತು. ಇದರಿಂದ ಲಕ್ನೋ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಲಕ್ನೋ ಪರ 193.44 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಪಂತ್ ಅಜೇಯ 118 ರನ್ (61 ಎಸೆತ, 8 ಸಿಕ್ಸರ್, 11 ಬೌಂಡರಿ), ಮಿಚೆಲ್ ಮಾರ್ಷ್ 67 ರನ್ ?(37 ಎಸೆತ, 5 ಸಿಕ್ಸರ್, 4 ಬೌಂಡರಿ), ಮ್ಯಾಥ್ಯೂ ಬ್ರೀಟ್ಜ್ಕೆ 14 ರನ್, ನಿಕೋಲಸ್ ಪೂರನ್ 13 ರನ್, ಅಬ್ದುಲ್ ಸಮದ್ 1 ರನ್ ಗಳಿಸಿದ್ರೆ, ಲೆಗ್‌ಬೈಸ್, ನೋಬಾಲ್, ವೈಡ್‌ನಿಂದ 14 ಹೆಚ್ಚುವರಿ ರನ್ ತಂಡಕ್ಕೆ ಸೇರ್ಪಡೆಯಾಯಿತು.

    ಆರ್‌ಸಿಬಿ ಪರ ನುವಾನ್ ತುಷಾರ, ಭುವನೇಶ್ಚರ್ ಕುಮಾರ್, ರೊಮಾರಿಯೊ ಶೆಫರ್ಡ್ ತಲಾ ಒಂದೊಂದು ವಿಕೆಟ್ ಪಡೆದರು.

  • 9,000 ರನ್‌; ಆರ್‌ಸಿಬಿ ಪರ ಐತಿಹಾಸಿಕ ದಾಖಲೆ ಬರೆದ ಕಿಂಗ್ ಕೊಹ್ಲಿ

    9,000 ರನ್‌; ಆರ್‌ಸಿಬಿ ಪರ ಐತಿಹಾಸಿಕ ದಾಖಲೆ ಬರೆದ ಕಿಂಗ್ ಕೊಹ್ಲಿ

    ಲಕ್ನೋ: ಆರ್‌ಸಿಬಿ ಸೂಪರ್‌ಸ್ಟಾರ್‌ ವಿರಾಟ್‌ ಕೊಹ್ಲಿ (Virat Kohli) ಟಿ20ಯಲ್ಲಿ ಒಂದೇ ತಂಡಕ್ಕೆ 9,000 ರನ್‌ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಐಪಿಎಲ್ 2025 ರ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಏಕಾನಾ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಮಾಡುವಾಗ ಅವರು ಈ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: 7 ವರ್ಷಗಳ ಬಳಿಕ ಶತಕ ಸಿಡಿಸಿ ಪಲ್ಟಿ ಹೊಡೆದ ಪಂತ್‌

    2008 ರ ಐಪಿಎಲ್ ಉದ್ಘಾಟನಾ ಋತುವಿನಿಂದಲೂ ಕೊಹ್ಲಿ ಆರ್‌ಸಿಬಿ ಪರ ಆಟ ಆಡುತ್ತಿದ್ದಾರೆ. ಐಪಿಎಲ್‌ನಲ್ಲಿ ಫ್ರಾಂಚೈಸಿಗಾಗಿ 8,579 ರನ್‌ಗಳನ್ನು ಗಳಿಸಿದ್ದಾರೆ. ಈಗ ಸ್ಥಗಿತಗೊಂಡಿರುವ ಚಾಂಪಿಯನ್ಸ್ ಲೀಗ್ ಟಿ20 ಯಲ್ಲಿ 424 ರನ್‌ಗಳನ್ನು ಗಳಿಸಿದ್ದಾರೆ. ಎರಡೂ ಸೇರಿದರೆ 9000 ರನ್‌ ಪೂರೈಸಿದಂತಾಗುತ್ತದೆ.

    ಆರ್‌ಸಿಬಿ ಮತ್ತು ವಿರಾಟ್‌ ಕೊಹ್ಲಿಗೂ ಬಿಡಿಸಲಾರದ ನಂಟು. ಕ್ರಿಕೆಟ್ ಆಡುವವರೆಗೂ ತಾನು ಆರ್‌ಸಿಬಿ ಆಟಗಾರನಾಗಿರುತ್ತೇನೆ ಎಂದು ಕೊಹ್ಲಿ ಹಲವಾರು ಬಾರಿ ಘೋಷಿಸಿದ್ದಾರೆ. ಇದನ್ನೂ ಓದಿ: LSG vs RCB: ಜೋಶ್ ಹ್ಯಾಜಲ್‌ವುಡ್ ಇಂದು ಪಂದ್ಯಕ್ಕೆ ಮಿಸ್‌ ಆಗಿದ್ಯಾಕೆ?

    ಪಂದ್ಯವನ್ನು ಗೆದ್ದು ಅಗ್ರ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯುವ ಆಶಯದೊಂದಿಗೆ ಆರ್‌ಸಿಬಿ 228 ರನ್‌ಗಳ ಬೃಹತ್ ಸ್ಕೋರ್ ಅನ್ನು ಬೆನ್ನಟ್ಟಿದೆ.

    ತಂಡವೊಂದರ ಪರ ಅತಿ ಹೆಚ್ಚು ರನ್‌ ಸಾಧನೆ ಮಾಡಿದ ಆಟಗಾರರು
    9004* – ಆರ್‌ಸಿಬಿ ಪರ ವಿರಾಟ್ ಕೊಹ್ಲಿ
    6060 – ಎಂಐ ಪರ ರೋಹಿತ್ ಶರ್ಮಾ
    5934 – ಹ್ಯಾಂಪ್‌ಶೈರ್ ಪರ ಜೇಮ್ಸ್ ವಿನ್ಸ್
    5528 – ಸಿಎಸ್‌ಕೆ ಪರ ಸುರೇಶ್ ರೈನಾ
    5314 – ಸಿಎಸ್‌ಕೆ ಪರ ಎಂಎಸ್ ಧೋನಿ

  • 7 ವರ್ಷಗಳ ಬಳಿಕ ಶತಕ ಸಿಡಿಸಿ ಪಲ್ಟಿ ಹೊಡೆದ ಪಂತ್‌

    7 ವರ್ಷಗಳ ಬಳಿಕ ಶತಕ ಸಿಡಿಸಿ ಪಲ್ಟಿ ಹೊಡೆದ ಪಂತ್‌

    ಲಕ್ನೋ: 18ನೇ ಆವೃತ್ತಿಯ ಐಪಿಎಲ್‌ಗೆ 27 ಕೋಟಿ ರೂ.ಗಳಿಗೆ ಬಿಕರಿಯಾಗಿದ್ದ ರಿಷಭ್‌ ಪಂತ್‌ (Rishabh Pant) ಭಾರೀ ನಿರೀಕ್ಷೆಯೊಂದಿಗೆ ಅಖಾಡಕ್ಕಿಳಿದಿದ್ದರು. ಆದ್ರೆ ಆರಂಭಿಕ ಪಂದ್ಯದಿಂದಲೂ ಕಳಪೆ ಬ್ಯಾಟಿಂಗ್‌ ಪ್ರದರ್ಶನದಿಂದ ಟ್ರೋಲ್‌ಗೆ ಒಳಗಾಗಿದ್ದ ಪಂತ್‌ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.

    7 ವರ್ಷಗಳ ಬಳಿಕ ಶತಕ ಸಿಡಿಸಿದ ಪಂತ್‌ ಮೈದಾನದಲ್ಲಿಯೇ ಪಲ್ಟಿ ಹೊಡೆದು ಸಂಭ್ರಮಿಸಿದರು. ಇದು 7 ವರ್ಷಗಳ ಬಳಿಕ ಪಂತ್‌ ಸಿಡಿಸಿದ ಶತಕವಾಗಿದೆ. 2018ರಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌ (ಇಂಡಿನ ಡೆಲ್ಲಿ ಕ್ಯಾಪಿಟಲ್ಸ್) ತಂಡದಲ್ಲಿದ್ದ ಪಂತ್‌‌ ಅಜೇಯ 128 ರನ್‌ (63 ಎಸೆತ, 7 ಸಿಕ್ಸರ್‌, 15 ಬೌಂಡರಿ) ಬಾರಿಸಿದ್ದರು. ಆದ್ರೆ ಆ ಪಂದ್ಯದಲ್ಲೂ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ಡೇರ್‌ಡೆವಿಲ್ಸ್‌ ಸೋತಿತ್ತು.

    ಈ ಆವೃತ್ತಿಯ ಆರಂಭದಿಂದಲೂ ಲಕ್ನೋ ತಂಡ ಉತ್ತಮ ಪ್ರದರ್ಶನ ನೀಡುತ್ತಾ ಬಂದಿತು. ಮೊದಲ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 209 ರನ್‌ಗಳಿಸಿತ್ತು. ಆದ್ರೆ ಆ ಪಂದ್ಯದಲ್ಲೂ ರಿಷಭ್‌ ಪಂತ್‌ ಶೂನ್ಯ ಸುತ್ತಿದರು. ಬಳಿಕ‌ ನಡೆದ ಪಂದ್ಯಗಳಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. ಸಿಎಸ್‌ಕೆ ವಿರುದ್ಧ ನಡೆದ ಪಂದ್ಯದಲ್ಲಿ 63 ರನ್‌ ಗಳಿಸಿತ್ತಾದರೂ 49 ಎಸೆತಗಳನ್ನು ತೆಗೆದುಕೊಂಡಿದ್ದರು. ಇದೂ ಸಹ ಪಂತ್‌ ವಿರುದ್ಧ ಅಭಿಮಾನಿಗಳು ಬೇಸರಗೊಳ್ಳುವಂತೆ ಮಾಡಿತ್ತು. ಆದ್ರೆ ಲೀಗ್‌ ಪಂದ್ಯದಲ್ಲಿ ಪಂತ್‌ ಅಬ್ಬರಿಸಿದ ರೀತಿ ಕಂಡು ಫ್ಯಾನ್ಸ್‌ ದಂಗಾಗಿದ್ದಾರೆ.

    ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕಿಳಿದ ಪಂತ್‌ 54 ಎಸೆತಗಳಲ್ಲಿ 10 ಬೌಂಡರಿ, 6 ಸಿಕ್ಸರ್‌ ಸಹಿತ ಶತಕ ಪೂರೈಸಿದರು. ಒಟ್ಟು ತಾವು ಎದುರಿಸಿದ 61 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್‌ ಸಹಿತ 118 ರನ್‌ ಗಳಿಸಿ ಅಜೇಯರಾಗುಳಿದರು.

  • LSG vs RCB: ಜೋಶ್ ಹ್ಯಾಜಲ್‌ವುಡ್ ಇಂದು ಪಂದ್ಯಕ್ಕೆ ಮಿಸ್‌ ಆಗಿದ್ಯಾಕೆ?

    LSG vs RCB: ಜೋಶ್ ಹ್ಯಾಜಲ್‌ವುಡ್ ಇಂದು ಪಂದ್ಯಕ್ಕೆ ಮಿಸ್‌ ಆಗಿದ್ಯಾಕೆ?

    ಲಕ್ನೋ: ಇಂಪ್ಯಾಕ್ಟ್‌ ಪ್ಲೇಯರ್‌ ಜೋಶ್‌ ಹ್ಯಾಜಲ್‌ವುಡ್‌ (Josh Hazlewood) ಆರ್‌ಸಿಬಿಗೆ (RCB) ಮರಳಿದ್ದರೂ ಲಕ್ನೋ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಳ್ಳದಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಪಂದ್ಯದಲ್ಲಿ ಏಕಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಆರ್‌ಸಿಬಿಗೆ ಹ್ಯಾಜಲ್‌ವುಡ್ ಮರಳುವುದು ಬಹಳ ನಿರೀಕ್ಷೆಯ ವಿಷಯವಾಗಿತ್ತು. ಆದಾಗ್ಯೂ, ಟಾಸ್ ಸಮಯದಲ್ಲಿ ನಾಯಕ ಜಿತೇಶ್ ಶರ್ಮಾ (Jitesh Sharma) ಆಸ್ಟ್ರೇಲಿಯಾದ ಆಟಗಾರ ಈ ಪಂದ್ಯದಲ್ಲಿ ಭಾಗವಹಿಸುವುದಿಲ್ಲ ಎಂದು ದೃಢಪಡಿಸಿದರು. ಆರ್‌ಸಿಬಿಯ ಮುಂದಿನ ಪಂದ್ಯದಲ್ಲಿ ಹ್ಯಾಜಲ್‌ವುಡ್ ಹನ್ನೊಂದರಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ ಎಂದು ಕ್ಯಾಪ್ಟನ್‌ ತಿಳಿಸಿದ್ದಾರೆ. ಇದನ್ನೂ ಓದಿ: ಆರ್‌ಸಿಬಿಗೆ ರಿಷಭ್‌ ʻಪಂಚ್‌ʼ – ಗೆಲುವಿಗೆ 228 ರನ್‌ಗಳ ಕಠಿಣ ಗುರಿ ನೀಡಿದ ಲಕ್ನೋ

    ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕಾರಣ ಒಂದು ವಾರ ಐಪಿಎಲ್‌ ಪಂದ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಈ ವೇಳೆ, ಭುಜದ ಗಾಯದ ಸಮಸ್ಯೆಯಿಂದ ಹ್ಯಾಜಲ್‌ವುಡ್‌ ತವರಿಗೆ ಮರಳಿದ್ದರು. ಏ.27 ರಂದು ದೆಹಲಿಯಲ್ಲಿ ಕೊನೆಯ ಪಂದ್ಯವನ್ನು ಆಡಿದ್ದ ಹ್ಯಾಜಲ್‌ವುಡ್, ವಾಶ್‌ಔಟ್ ಸೇರಿದಂತೆ ಮೂರು ಆರ್‌ಸಿಬಿ ಪಂದ್ಯಗಳಿಂದ ಮಿಸ್‌ ಆಗಿದ್ದಾರೆ.

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಎರಡು ಸ್ಥಾನಗಳಿಗಾಗಿ ಪೈಪೋಟಿ ನಡೆಸಿದೆ. ಇದನ್ನೂ ಓದಿ: ಟಾಸ್‌ ಗೆದ್ದು ಫೀಲ್ಡಿಂಗ್‌ಗೆ ಇಳಿದ ಆರ್‌ಸಿಬಿ – ದೈತ್ಯ ಬ್ಯಾಟರ್‌ ಕೈಬಿಟ್ಟು ತಪ್ಪು ಮಾಡಿತೆ?

    ಲಕ್ನೋ (LSG) ವಿರುದ್ಧದ ಪಂದ್ಯವನ್ನು ಆರ್‌ಸಿಬಿ ಗೆದ್ದರೆ, ಮೇ 29 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಕ್ವಾಲಿಫೈಯರ್ 1 ಪಂದ್ಯವನ್ನು ಆಡಲಿದೆ. ಇಲ್ಲದಿದ್ದರೆ, ಎಲಿಮಿನೇಟರ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಎರಡೂ ಪಂದ್ಯಗಳು ನ್ಯೂ ಚಂಡೀಗಢದಲ್ಲಿ ನಡೆಯಲಿವೆ.

  • ಆರ್‌ಸಿಬಿಗೆ ರಿಷಭ್‌ ʻಪಂಚ್‌ʼ – ಗೆಲುವಿಗೆ 228 ರನ್‌ಗಳ ಕಠಿಣ ಗುರಿ ನೀಡಿದ ಲಕ್ನೋ

    ಆರ್‌ಸಿಬಿಗೆ ರಿಷಭ್‌ ʻಪಂಚ್‌ʼ – ಗೆಲುವಿಗೆ 228 ರನ್‌ಗಳ ಕಠಿಣ ಗುರಿ ನೀಡಿದ ಲಕ್ನೋ

    ಲಕ್ನೋ: 18ನೇ ಆವೃತ್ತಿಯ ಐಪಿಎಲ್‌ನ ಆರಂಭದಿಂದಲೂ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದ ರಿಷಭ್ ‌ಪಂತ್‌ (Rishabh Pant) ಆಟಕ್ಕುಂಟು ಲೆಕ್ಕಕ್ಕಿಲ್ಲದ ಕೊನೆಯ ರೋಷಾವೇಶದ ಬ್ಯಾಟಿಂಗ್‌ ಮಾಡಿದರು. ಕ್ರೀಸ್‌ಗಿಳಿಯುತ್ತಿದ್ದಂತೆ ಸ್ಫೋಟಕ ಪ್ರದರ್ಶನಕ್ಕೆ ಮುಂದಾದ ಪಂತ್‌ ಆರ್‌ಸಿಬಿ (RCB) ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದರು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ನಿಗದಿತ ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 227 ರನ್‌ ಗಳಿಸಿದೆ. ಈ ಮೂಲಕ ಆರ್‌ಸಿಬಿ ಗೆಲುವಿಗೆ 228 ರನ್‌ಗಳ ಕಠಿಣ ಗುರಿ ನೀಡಿದೆ.

    ಈಗಾಗಲೇ ಪ್ಲೇ ಆಫ್‌ನಿಂದ ಹೊರಬಿದ್ದಿರುವ ಲಕ್ನೋ ಕೊನೆಯ ಪಂದ್ಯದಲ್ಲಿ ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. 2.4 ಓವರ್‌ಗಳಲ್ಲಿ 25 ರನ್‌ಗಳಿದ್ದಾಗಲೇ ಮೊದಲ ವಿಕೆಟ್‌ ಕಳೆದುಕೊಂಡು ನಿರಾಸೆ ಅನುಭವಿಸಿತು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಂತ್‌ ಮತ್ತೊಬ್ಬ ಆರಂಭಿಕ ಮಿಚೆಲ್‌ ಮಾರ್ಷ್‌ ಜೊತೆಗೂಡಿ ಅಬ್ಬರಿಸಲು ಪ್ರಾರಂಭಿಸಿದರು. 2ನೇ ವಿಕೆಟಿಗೆ ಈ ಜೋಡಿ 78 ಎಸೆತಗಳಲ್ಲಿ ಬರೋಬ್ಬರಿ 152 ರನ್‌ ಜೊತೆಯಾಟ ನೀಡಿತ್ತು. ಇದರಿಂದ ಲಕ್ನೋ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಲಕ್ನೋ ಪರ 193.44 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಪಂತ್ ಅಜೇಯ 118 ರನ್‌ (61 ಎಸೆತ,‌ 8 ಸಿಕ್ಸರ್‌, 11 ಬೌಂಡರಿ), ಮಿಚೆಲ್‌ ಮಾರ್ಷ್‌ 67 ರನ್‌ ?(37 ಎಸೆತ, 5 ಸಿಕ್ಸರ್‌, 4 ಬೌಂಡರಿ), ಮ್ಯಾಥ್ಯೂ ಬ್ರೀಟ್ಜ್ಕೆ 14 ರನ್‌, ನಿಕೋಲಸ್‌ ಪೂರನ್‌ 13 ರನ್‌, ಅಬ್ದುಲ್‌ ಸಮದ್‌ 1 ರನ್‌ ಗಳಿಸಿದ್ರೆ, ಲೆಗ್‌ಬೈಸ್‌, ನೋಬಾಲ್‌, ವೈಡ್‌ನಿಂದ 14 ಹೆಚ್ಚುವರಿ ರನ್‌ ತಂಡಕ್ಕೆ ಸೇರ್ಪಡೆಯಾಯಿತು.

    ಆರ್‌ಸಿಬಿ ಪರ ನುವಾನ್‌ ತುಷಾರ, ಭುವನೇಶ್ಚರ್‌ ಕುಮಾರ್‌, ರೊಮಾರಿಯೊ ಶೆಫರ್ಡ್‌ ತಲಾ ಒಂದೊಂದು ವಿಕೆಟ್‌ ಪಡೆದರು.