Tag: RCB Unbox

  • RCB Unbox: ‘ಬೆಂಗಳೂರ್‌’ ಅಲ್ಲ ಇನ್ಮುಂದೆ ಹೇಳಿ ‘ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು’

    RCB Unbox: ‘ಬೆಂಗಳೂರ್‌’ ಅಲ್ಲ ಇನ್ಮುಂದೆ ಹೇಳಿ ‘ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು’

    – ಆರ್‌ಸಿಬಿಗೆ ಬಂತು ಹೊಸ ಹೆಸರು, ಹೊಸ ಜೆರ್ಸಿ
    – ನಾವು ಪ್ರೀತಿಸುವ ನಗರ.. ನಿಮ್ಮ ತಂಡ, ನಿಮ್ಮ ಆರ್‌ಸಿಬಿ ಎಂದ ಕೊಹ್ಲಿ ಪಡೆ

    ಬೆಂಗಳೂರು: ನಿರೀಕ್ಷೆಯಂತೆ ಅನ್‌ಬಾಕ್ಸ್‌ (RCB Unbox) ಕಾರ್ಯಕ್ರಮದಲ್ಲಿ ಆರ್‌ಸಿಬಿ ತನ್ನ ಹೆಸರಿನಲ್ಲಿ ಬದಲಾವಣೆ ಮಾಡಿಕೊಂಡಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರ್‌ (Royal Challengers Bengalore) ಇನ್ಮುಂದೆ ‘ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು’ (Royal Challengers Bengaluru) ಎಂದು ಬದಲಾಗಿದೆ.

    ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಆರ್‌ಸಿಬಿ (RCB) ತಂಡದ ಅನ್‌ಬಾಕ್ಸ್‌ ಕಾರ್ಯಕ್ರಮ ನಡೆಯಿತು. ಈ ವೇಳೆ ಆರ್‌ಸಿಬಿ ಹೆಸರಿನಲ್ಲಿ ‘ಬೆಂಗಳೂರ್‌’ ಪದವನ್ನು ತೆಗೆದು ‘ಬೆಂಗಳೂರು’ ಎಂದು ಬದಲಾಯಿಸಿಕೊಂಡಿದೆ. ಇದನ್ನೂ ಓದಿ: RCB Unbox: ಡಬ್ಲ್ಯೂಪಿಎಲ್‌ ಟ್ರೋಫಿ ಗೆದ್ದ ಆರ್‌ಸಿಬಿ ಮಹಿಳಾ ತಂಡಕ್ಕೆ ಪುರುಷರ ಟೀಂ ಭವ್ಯ ಸ್ವಾಗತ

    ಹೆಸರು ಬದಲಾಯಿಸಿರುವ ಲೋಗೋ ಹಾಗೂ ನೀಲಿ ಬಣ್ಣ ಹೊಸ ಜೆರ್ಸಿ ತೊಟ್ಟಿರುವ ಆರ್‌ಸಿಬಿ ತಂಡದ ಆಟಗಾರರು ಫೋಟೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 2024 ರ ಐಪಿಎಲ್‌ಗೆ ಕೊಹ್ಲಿ ಪಡೆ (Virat Kohli) ಹೊಸ ಹೆಸರು ಮತ್ತು ಜೆರ್ಸಿಯೊಂದಿಗೆ ಅಖಾಡಕ್ಕೆ ಇಳಿಯಲಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಆರ್‌ಸಿಬಿ, ‘ನಾವು ಪ್ರೀತಿಸುವ ನಗರ, ನಾವು ಸ್ವೀಕರಿಸುವ ಪರಂಪರೆ ಮತ್ತು ಇದು ನಮ್ಮ ಹೊಸ ಅಧ್ಯಾಯದ ಸಮಯ. ನಿಮಗೆ ಪ್ರಸ್ತುತಪಡಿಸಲಾಗುತ್ತಿದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಿಮ್ಮ ತಂಡ, ನಿಮ್ಮ RCB!’ ಎಂದು ಬರೆದುಕೊಂಡಿದೆ. ಇದನ್ನೂ ಓದಿ: ಟ್ರೋಫಿ ಗೆದ್ದು ಕೋಟಿ ಕೋಟಿ ದೋಚಿದ ಹೆಣ್ಮಕ್ಕಳು – ಆರ್‌ಸಿಬಿಗೆ ಸಿಕ್ಕ ನಗದು ಬಹುಮಾನ ಎಷ್ಟು ಗೊತ್ತಾ?

    ಆರ್‌ಸಿಬಿ ಆಟಗಾರರು ಹೊಸ ಜೆರ್ಸಿ ತೊಟ್ಟಿರುವ ಫೋಟೋವನ್ನು ಹಂಚಿಕೊಂಡು, ‘RCB ಕೆಂಪಾಗಿದೆ. ಈಗ ನೀಲಿ ಬಣ್ಣಕ್ಕೆ ಮುತ್ತಿಕ್ಕಿದೆ. ನಮ್ಮ ಹೊಸ ರಕ್ಷಾಕವಚದೊಂದಿಗೆ ನಾವು ಸಿದ್ಧರಿದ್ದೇವೆ. ನಿಮಗಾಗಿ ಬೋಲ್ಡ್ ಆಗಿ ಆಡಲು’ ಎಂದು ಬರೆದುಕೊಂಡಿದೆ.

  • ಐಪಿಎಲ್‌,  RCB Unbox ಕಾರ್ಯಕ್ರಮ – ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌ ಸೇವೆ

    ಐಪಿಎಲ್‌, RCB Unbox ಕಾರ್ಯಕ್ರಮ – ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌ ಸೇವೆ

    ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Cricket Stadium) ಮಂಗಳವಾರ ನಡೆಯಲಿರುವ ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮ (RCB Unbox Event) ಮತ್ತು ಮೂರು ಐಪಿಎಲ್‌ (IPL) ಪಂದ್ಯಗಳನ್ನು ವೀಕ್ಷಿಸುವ ಕ್ರಿಕೆಟ್‌ ಅಭಿಮಾನಿಗಳಿಗೆ ಬಿಎಂಟಿಸಿ (BMTC) ಸಿಹಿ ಸುದ್ದಿ ನೀಡಿದೆ.

    ಮಾರ್ಚ್‌ 19 ಮಂಗಳವಾರ ‘ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮ’ ನಡೆಯಲಿದೆ. ಮಾರ್ಚ್‌ 25, 29 ಮತ್ತು ಏಪ್ರಿಲ್‌ 2ರಂದು ಐಪಿಎಲ್ ಕ್ರಿಕೆಟ್‌ ಪಂದ್ಯನಡೆಯಲಿದ್ದು ಆ ದಿನ ಸಂಜೆ ಮತ್ತು ರಾತ್ರಿ ಹೆಚ್ಚುವರಿ ಬಿಎಂಟಿಸಿ ಬಸ್ಸುಗಳನ್ನು ಇಳಿಸುವುದಾಗಿ ತಿಳಿಸಿದೆ.  ಇದನ್ನೂ ಓದಿ: ರಾಜಕೀಯವಾಗಿ ಡಿಕೆಶಿ ನನಗೆ ವಿಷ ಹಾಕಿದ್ದಾರೆ: ಹೆಚ್‍ಡಿಕೆ ಕಿಡಿ

    ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೊಸೂರು ರಸ್ತೆ ಮೂಲಕ ಎಲೆಕ್ಟ್ರಾನಿಕ್‌ ಸಿಟಿಗೆ, ಎಂಟಿಸಿಟಿ–ನಾಯಂಡಹಳ್ಳಿ ಮೂಲಕ ಕೆಂಗೇರಿ ಕೆಎಚ್‌ಬಿ ಕ್ವಾರ್ಟರ್ಸ್‌ಗೆ, ಎಚ್‌ಎಎಲ್ ರಸ್ತೆ ಮೂಲಕ ಕಾಡುಗೋಡಿ ಬಸ್‌ ನಿಲ್ದಾಣಕ್ಕೆ, ಹೂಡಿ ರಸ್ತೆ ಮೂಲಕ ಕಾಡುಗೋಡಿ ಬಸ್‌ ನಿಲ್ದಾಣಕ್ಕೆ ಮಾಗಡಿ ರಸ್ತೆ ಮೂಲಕ ಜನಪ್ರಿಯ ಟೌನ್‌ಶಿಪ್‌ಗೆ, ನಾಗವಾರ–ಟ್ಯಾನರಿ ರಸ್ತೆ ಮೂಲಕ ಆರ್‌.ಕೆ. ಹೆಗಡೆ ನಗರಕ್ಕೆ, ಹೆಣ್ಣೂರು ರಸ್ತೆ ಮೂಲಕ ಬಾಗಲೂರಿಗೆ ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ. ಇದನ್ನೂ ಓದಿ: ಯೋಗ ಗುರು ಬಾಬಾ ರಾಮ್‌ದೇವ್, ಪತಂಜಲಿ ಮುಖ್ಯಸ್ಥನಿಗೆ ಸುಪ್ರೀಂ ಸಮನ್ಸ್

    ಸರ್ಜಾಪುರ, ಬನ್ನೇರುಘಟ್ಟ ಮೃಗಾಲಯ, ನೆಲಮಂಗಲ, ಯಲಹಂಕ 5ನೇ ಹಂತ, ಹೊಸಕೋಟೆಗಳಿಗೂ ಹೆಚ್ಚುವರಿ ಬಸ್‌ ವ್ಯವಸ್ಥೆ ಇರಲಿದೆ.