Tag: RCB Playoffs

  • ಆರ್‌ಸಿಬಿ ಪ್ಲೇ-ಆಫ್‌ ಎಂಟ್ರಿ ಕ್ಷಣದಲ್ಲಿ ಭಾವುಕರಾದ ವಿರಾಟ್‌, ಅನುಷ್ಕಾ

    ಆರ್‌ಸಿಬಿ ಪ್ಲೇ-ಆಫ್‌ ಎಂಟ್ರಿ ಕ್ಷಣದಲ್ಲಿ ಭಾವುಕರಾದ ವಿರಾಟ್‌, ಅನುಷ್ಕಾ

    ಬೆಂಗಳೂರು: ತವರಿನಲ್ಲಿ ಸಿಎಸ್‌ಕೆ (CSK) ವಿರುದ್ಧ ಗೆದ್ದು ಆರ್‌ಸಿಬಿ ಪ್ಲೇ-ಆಫ್‌ (RCB Playoffs) ಪ್ರವೇಶಿಸಿದ ಕ್ಷಣ ರಾಜ್ಯಾದ್ಯಂತ ಭಾವುಕತೆ ಸೃಷ್ಟಿಸಿತು. ಪ್ಲೇ-ಆಫ್‌ ಎಂಟ್ರಿಯ ಆ ರೋಚಕ ಸನ್ನಿವೇಶದಲ್ಲಿ ಆರ್‌ಸಿಬಿ ಆಟಗಾರ ವಿರಾಟ್‌ ಕೊಹ್ಲಿ (Virat Kohli) ಭಾವುಕರಾದರು. ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸಿದ ಪಂದ್ಯವನ್ನು ವೀಕ್ಷಿಸುತ್ತಿದ್ದ ವಿರಾಟ್‌ ಪತ್ನಿ ಅನುಷ್ಕಾ ಶರ್ಮಾ ಕೂಡ ಒಮ್ಮೆಲೆ ಭಾವೋದ್ವೇಗದಿಂದ ಪ್ರತಿಕ್ರಿಯಿಸಿದರು. ಈ ಎರಡೂ ದೃಶ್ಯಗಳು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿವೆ.

    ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ (Anushka Sharma) ಅವರು ತಂಡದ ನಿರ್ಣಾಯಕ ಗೆಲುವಿನ ನಂತರ ಭಾವೋದ್ವೇಗದಲ್ಲಿ ಮುಳುಗಿದ್ದರಿಂದ ಪಂದ್ಯವು ಹೃದಯಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾಯಿತು. ಇದನ್ನೂ ಓದಿ: Photos Gallery: ಸಂಭ್ರಮದಲ್ಲಿ ಮಿಂದೆದ್ದ ಆರ್‌ಸಿಬಿ – ಭಾವುಕ ಕ್ಷಣಗಳು ಕ್ಯಾಮೆರಾ ಕಣ್ಣಿಗೆ ಸೆರೆ!

    ಐಪಿಎಲ್‌ನಲ್ಲಿ RCB ಯ ಪ್ರಯಾಣ ಗಮನಾರ್ಹವಾಗಿದೆ. 17 ಆವೃತ್ತಿಗಳಲ್ಲಿ ಇದುವರೆಗೂ 9 ಬಾರಿ ಪ್ಲೇ-ಆಫ್ ಪ್ರವೇಶಿಸಿದೆ. ಆದರೆ ಒಂದು ಬಾರಿಯೂ ಕಪ್‌ ಗೆದ್ದಿಲ್ಲ. ಹೀಗಿದ್ದರೂ ಅಭಿಮಾನಿಗಳು ಮಾತ್ರ ಆರ್‌ಸಿಬಿ ಜೊತೆ ವಿಶೇಷ ನಂಟು ಹೊಂದಿದ್ದಾರೆ.

    ದೊಡ್ಡ ಗೆಲುವಿಗೆ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ವ್ಯಕ್ತಪಡಿಸಿದ ಭಾವನಾತ್ಮಕ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಐಪಿಎಲ್‌ನ ಅಧಿಕೃತ ಸಾಮಾಜಿಕ ಮಾಧ್ಯಮ ಪುಟದಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ಪ್ಲೇ ಆಫ್‍ಗೆ RCB ಕ್ವಾಲಿಫೈ- ಘಾಟಿ ಸುಬ್ರಹ್ಮಣ್ಯದಲ್ಲಿ ಹರಕೆ ತೀರಿಸಿದ ಅಭಿಮಾನಿ

    ನಿನ್ನೆ ನಡೆದ ಪಂದ್ಯದಲ್ಲಿ ತಂಡದ ಪರ ಕೊಹ್ಲಿ ಉತ್ತಮ ಆಟವಾಡಿದರು. ಆರಂಭದಲ್ಲಿ ಬಿರುಸಿನ ಬ್ಯಾಟಿಂಗ್‌ ಮಾಡಿದ ಕೊಹ್ಲಿ 47 ರನ್‌ಗಳ ಕೊಡುಗೆಯೊಂದಿಗೆ ತಂಡದ ಮೊತ್ತ 218/5 ಕ್ಕೆ ಏರಲು ನೆರವಾದರು. ರವೀಂದ್ರ ಜಡೇಜಾ ಮತ್ತು ಎಂ.ಎಸ್‌.ಧೋನಿ ಅವರ ಉತ್ಸಾಹಭರಿತ ಆಟಕ್ಕೂ ಫಲ ಸಿಗಲಿಲ್ಲ. ಯಶ್‌ ದಯಾಳ್‌ ಅವರ ಕೊನೆ ಓವರ್‌ನ ಬೆಂಕಿ ಬೌಲಿಂಗ್‌ ಆರ್‌ಸಿಬಿಗೆ ಗೆಲುವಿನ ಸಿಹಿ ನೀಡಿತು. ಆರ್‌ಸಿಬಿ ಅಭಿಮಾನಿಗಳು ಪಂದ್ಯವನ್ನು ಆನಂದಿಸಿದರು.

  • RCB ಔಟ್, ಮುಂಬೈಗೆ ಪ್ಲೇ ಆಫ್ ಗಿಫ್ಟ್ – ಪಂದ್ಯ ಸೋತಿದ್ದಕ್ಕೆ ಕಣ್ಣೀರಿಟ್ಟ ಕೊಹ್ಲಿ

    RCB ಔಟ್, ಮುಂಬೈಗೆ ಪ್ಲೇ ಆಫ್ ಗಿಫ್ಟ್ – ಪಂದ್ಯ ಸೋತಿದ್ದಕ್ಕೆ ಕಣ್ಣೀರಿಟ್ಟ ಕೊಹ್ಲಿ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಗುಜರಾತ್ ಟೈಟಾನ್ಸ್ (GT) ಹಾಗೂ ಆರ್‌ಸಿಬಿ (RCB) ನಡುವಿನ ಪಂದ್ಯ ರೋಚಕತೆಯಿಂದ ಕೂಡಿತ್ತು. ಆದ್ರೆ ಕೊಹ್ಲಿ (Virat Kohli) ಶತಕದಾಟದ ಹೊರತಾಗಿಯೂ, ಶುಭಮನ್ ಗಿಲ್ (Shubman Gill) ಕೌಂಟರ್ ಅಟ್ಯಾಕ್‌ಗೆ ಆರ್‌ಸಿಬಿ ಮಂಡಿಯೂರಿತು.

    ಕೊನೆ ಕ್ಷಣದಲ್ಲಿ ಶುಭಮನ್ ಗಿಲ್ ಸಿಕ್ಸರ್, ಬೌಂಡರಿ ಬಾರಿಸುತ್ತಿದ್ದಂತೆ ಕ್ಯಾಪ್‌ನಿಂದ ಮುಖ ಮುಚ್ಚಿಕೊಂಡ ಕೊಹ್ಲಿ ಕಣ್ಣೀರಿಟ್ಟರು. ಬಳಿಕ ಕ್ಯಾಪ್ ಕಿತ್ತೆಸೆದು ಕಣ್ಣಲ್ಲಿ ನೀರು ತುಂಬಿಕೊಂಡೇ ಶೇಕ್‌ಹ್ಯಾಂಡ್ ಮಾಡಿದರು. ಈ ಕುರಿತ ವೀಡಿಯೋ ತುಣುಕು ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೊಹ್ಲಿ ಅಭಿಮಾನಿಗಳು ಶುಭಮನ್ ಗಿಲ್ ವಿರುದ್ಧ ತಿರುಗಿಬಿದ್ದಿದ್ದಾರೆ. ಜೊತೆಗೆ ‘ಹೆದರಿಬೇಡಿ ಬಾಸ್, ಮುಂದಿನ ಸಲ ಕಪ್ ನಮ್ದೆ’ ಎಂದು ಧೈರ್ಯ ತುಂಬಿದ್ದಾರೆ. ಇದನ್ನೂ ಓದಿ: IPL 2023: ಶುಭಮನ್‌ ಗಿಲ್‌ ಶತಕದಾಟ, ಗುಜರಾತ್‌ ಟೈಟಾನ್ಸ್‌ಗೆ ಜಯ – RCB ಮನೆಗೆ, ಮುಂಬೈ ಪ್ಲೇ ಆಫ್‌ಗೆ

    ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಕೊಹ್ಲಿ ಭರ್ಜರಿ ಶತಕದೊಂದಿಗೆ 197 ರನ್ ಗಳಿಸಿತ್ತು. ಆದ್ರೆ ಗುಜರಾತ್ ಟೈಟಾನ್ಸ್ ಶುಭಮನ್ ಗಿಲ್ ಬ್ಯಾಟಿಂಗ್ ನೆರವಿನಿಂದ ನಿರಾಯಾಸವಾಗಿ ಗೆದ್ದು ಬೀಗಿತು. ಅಗ್ರ ಕ್ರಮಾಂಕದ ಬ್ಯಾಟ್ಸ್ಮ್ಯಾನ್‌ಗಳು ಕೈಚೆಲ್ಲಿದ ಹೊರತಾಗಿಯೂ ಏಕಾಂಗಿ ಹೋರಾಟ ನಡೆಸಿದ ಕೊಹ್ಲಿ 61 ಎಸೆತಗಳಲ್ಲಿ ಔಟಾಗದೇ 101 ರನ್ (13 ಬೌಂಡರಿ, 1 ಸಿಕ್ಸ್) ಗಳಿಸಿದರು. ಭಾರತ ತಂಡದ ಭವಿಷ್ಯ ಎಂದೇ ಹೇಳಲಾಗುತ್ತಿರುವ ಶುಭಮನ್ ಗಿಲ್ 52 ಎಸೆತಗಳಲ್ಲಿ 104 ರನ್ (8 ಸಿಕ್ಸರ್, 5 ಬೌಂಡರಿ) ಚಚ್ಚಿ ಟೈಟಾನ್ಸ್ಗೆ ಗೆಲುವು ತಂದುಕೊಟ್ಟರು.

    ಸೋತು ಗೆದ್ದ ಕೊಹ್ಲಿ:
    ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ಕೊಹ್ಲಿ ಪಂದ್ಯ ಸೋತರೂ ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ. 237 ಪಂದ್ಯ, 229 ಇನ್ನಿಂಗ್ಸ್‌ಗಳನ್ನಾಡಿರುವ ಕೊಹ್ಲಿ 7,263 ರನ್ ಗಳಿಸಿದ್ದಾರೆ. ಜೊತೆಗೆ ಐಪಿಎಲ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ನಂ.1 ಆಟನಾಗಿದ್ದಾರೆ. ಇದನ್ನೂ ಓದಿ: ಡಿಕೆ ಡಕೌಟ್‌ – IPLನಲ್ಲಿ ಕೆಟ್ಟ ದಾಖಲೆ ಹೆಗಲಿಗೇರಿಸಿಕೊಂಡ ದಿನೇಶ್‌ ಕಾರ್ತಿಕ್‌

    ಆರ್‌ಸಿಬಿ ತಂಡದ ಮಾಜಿ ಕ್ರಿಕೆಟಿಗ ಕ್ರಿಸ್‌ಗೇಲ್ ಐಪಿಎಲ್‌ನಲ್ಲಿ 6 ಶತಕ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಕಳೆದವಾರ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ 6ನೇ ಶತಕ ಸಿಡಿಸಿ ಗೇಲ್ ದಾಖಲೆಯನ್ನ ಸರಿಗಟ್ಟಿದ್ದರು. ಭಾನುವಾರ ಟೈಟಾನ್ಸ್ ವಿರುದ್ಧ ಶತಕ ಸಿಡಿಸುವ ಮೂಲಕ ಅತಿಹೆಚ್ಚು ಶತಕ ಸಿಡಿಸಿದ ಆಟಗಾರನಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಜೋಸ್ ಬಟ್ಲರ್ 5 ಶತಕ ಸಿಡಿಸಿ 3ನೇ ಸ್ಥಾನದಲ್ಲಿದ್ದಾರೆ.

    ಭಾನುವಾರ ರಾಜಕೀಯ ಒತ್ತಡದ ನಡುವೆಯೂ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಪುತ್ರಿ ಐಶ್ವರ್ಯ ಜೊತೆಗೆ ಆರ್‌ಸಿಬಿ ಪಂದ್ಯ ವೀಕ್ಷಿಸಿ ಖುಷಿಪಟ್ಟರು.