ಬೆಳಗಾವಿ: ಆರ್‌ಸಿಬಿ (RCB) ಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ಹಿನ್ನೆಲೆ ವಿಜಯೋತ್ಸವ ವೇಳೆ ಕುಣಿದು ಕುಪ್ಪಳಿಸುತ್ತಿದ್ದ ಅಭಿಮಾನಿಯೊಬ್ಬ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ಅಹಮದಾಬಾದ್‌ನಲ್ಲಿ ಐಪಿಎಲ್ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಸಾಧಿಸಿದ ಹಿನ್ನೆಲೆ ಅಭಿಮಾನಿಗಳು ವಿಜಯೋತ್ಸವ ಮಾಡಿದ್ದರು. ಈ ವೇಳೆ ಮಂಜುನಾಥ್ ಟ್ರ‍್ಯಾಕ್ಟರ್‌ನಲ್ಲಿ ಹಾಡು ಹಾಕಿ ಕುಣಿಯುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಾರ್ಗ ಮಧ್ಯೆ ಮಂಜುನಾಥ್ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ:ಸರ್ಕಾರದಿಂದ ಹೊರ ಬಂದ ಬೆನ್ನಲ್ಲೇ ಟ್ರಂಪ್ ವಿರುದ್ಧ ಮಸ್ಕ್ ಕೆಂಡಾಮಂಡಲ
ಚಂಡೀಗಢ: ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ ನಡೆದ 18ನೇ ಆವೃತ್ತಿಯ ಕ್ವಾಲಿಫೈಯರ್-1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಗೆಲುವು ಕಂಡಿದೆ. ಆರಂಭದಿಂದಲೇ ಸಿಕ್ಸರ್, ಬೌಂಡರಿ ಬಾರಿಸುತ್ತಾ ರನ್ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ಆರ್‌ಸಿಬಿ ಇನ್ನೂ 10 ಓವರ್‌ಗಳು ಬಾಕಿಯಿರುವಾಗಲೇ ಗೆದ್ದು, ಫೈನಲ್ ತಲುಪಿತು.
ಈ ನಡುವೆ ಮಹಿಳಾ ಅಭಿಮಾನಿಯೊಬ್ಬರು (RCB Women Fan) ವಿಚ್ಛೇದನದ ಕುರಿತು ವಿಶೇಷ ಭಿತ್ತಿಪತ್ರ ಪ್ರದರ್ಶಿಸಿರುವುದು ಗಮನಸೆಳೆದಿದೆ. ಹೌದು. 17 ಆವೃತ್ತಿ ಕಳೆದರೂ ಒಮ್ಮೆಯೂ ಪ್ರಶಸ್ತಿ ಗೆಲ್ಲದ ಆರ್‌ಸಿಬಿಗೆ ಅಭಿಮಾನಿಗಳ ಕೊರತೆಯಂತೂ ಆಗಿಲ್ಲ. ಆದರೀಗ ತಂಡ ಫೈನಲ್‌ಗೆ ತಲುಪಿದ್ದು, ಈ ಸಲವೂ ಟ್ರೋಫಿ ಗೆಲ್ಲದಿದ್ದರೆ ಪತಿಗೆ ವಿಚ್ಛೇದನ (Devorce) ನೀಡುವುದಾಗಿ ಮಹಿಳೆಯೊಬ್ಬರು ಸ್ಟೇಡಿಯಂನಲ್ಲಿ ಭಿತ್ತಿಪತ್ರ ಪ್ರದರ್ಶನ ಮಾಡಿರುವುದು ಕಂಡುಬಂದಿದೆ. ಇದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ವೈಭವ್ ಸೂರ್ಯವಂಶಿ
ಇತ್ತೀಚೆಗೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದ ವೇಳೆಯೂ ಅಭಿಮಾನಿಯೊಬ್ಬರು ನಾನು, ಆರ್‌ಸಿಬಿ ಕಪ್ ಗೆಲ್ಲುವವರೆಗೆ ಮದುವೆಯಾಗೋದಿಲ್ಲ ಅಂತ ಪೋಸ್ಟರ್ ಹಿಡಿದುಕೊಂಡಿದ್ದರು. ಇದಕ್ಕೂ ಮುನ್ನ 2022 ಐಪಿಎಲ್ ಟೂರ್ನಿ ವೇಳೆಯೂ ಮಹಿಳಾ ಅಭಿಮಾನಿಯೊಬ್ಬರು ಆರ್‌ಸಿಬಿ ಕಪ್ ಗೆಲ್ಲೋವರೆಗೆ ನಾನು ಮದುವೆಯಾಗಲ್ಲ ಅಂತ ಪೋಸ್ಟರ್ ಹಿಡುಕೊಂಡಿದ್ದರು. ಆಗ ಇದು ಭಾರೀ ಟ್ರೆಂಡ್ ಕ್ರೆಯೆಟ್ ಮಾಡಿತ್ತು. ಇದನ್ನೂ ಓದಿ: RCB ಟ್ರೋಫಿ ಗೆದ್ದರೆ ಆ ದಿನವನ್ನ ʻಆರ್‌ಸಿಬಿ ಫ್ಯಾನ್ಸ್ ಹಬ್ಬʼದ ದಿನವನ್ನಾಗಿ ಘೋಷಿಸಿ – ಸಿಎಂಗೆ ವಿಶೇಷ ಪತ್ರ!
ಚಾಮರಾಜನಗರ: ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭವಾದ್ರೆ ಸಾಕು ‘ಈ ಸಲ ಕಪ್ ನಮ್ದೆ’ ಎನ್ನುವ ಡೈಲಾಗ್ ಸಖತ್ ಸದ್ದು ಮಾಡುತ್ತದೆ. ಅದರಲ್ಲೂ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ದೇವರಿಗೆ ಹರಗೆ ಕಟ್ಟುವುದು, ಪೂಜೆ ಸಲ್ಲಿಸಿವುದನ್ನು ಮಾಡುತ್ತಾರೆ. ಅದರಂತೆ ಆರ್‌ಸಿಬಿ ಅಭಿಮಾನಿಯೊಬ್ಬರು ಬಾಳೆ ಹಣ್ಣಿನ ಮೇಲೆ ‘ಈ ಸಲ ಕಪ್ ನಮ್ದೆ’ ಎಂದು ಬರೆದು ಮಾದಪ್ಪನ ತೇರಿಗೆ ಎಸೆದಿದ್ದಾರೆ.
ಆರ್‌ಸಿಬಿ ಅಭಿಮಾನಿ ಮಲೆಮಹದೇಶ್ವರನಿಗೆ ಬೇಡಿಕೆ ಸಲ್ಲಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಕಳೆದ 24ರಂದು ರಥೋತ್ಸವ ಜರುಗಿತ್ತು. ಈ ವೇಳೆ ಆರ್‌ಸಿಬಿ ಅಭಿಮಾನಿ ಹನೂರಿನ ರಘು, ಈ ಬಾರಿಯಾದರೂ ನೆಚ್ಚಿನ ತಂಡ ಚಾಂಪಿಯನ್ ಆಗಲೆಂದು ಮಹದೇಶ್ವರನ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಹೊಸ ದಶಕ, ಹೊಸ ಆರ್‌ಸಿಬಿ- ಹೇಗಿದ್ದ ಲೋಗೋ ಹೇಗೆ ಬದಲಾಯಿತು?
ರಘು ಅವರು ಬಾಳೆ ಹಣ್ಣಿನ ಮೇಲೆ ‘ಈ ಸಲ ಕಪ್ ನಮ್ದೆ’ ಎಂದು ಬರೆದು ಮಾದಪ್ಪನ ರಥಕ್ಕೆ ಎಸೆದು ಬೇಡಿಕೊಂಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. ಐಪಿಎಲ್ 11ನೇ ಆವೃತ್ತಿಯಲ್ಲಿ ಆರ್‌ಸಿಬಿ ಅಭಿಮಾನಿಗಳು ವಿರಾಟ್ ಕೊಹ್ಲಿ ನೇತೃತ್ವದ ಪಡೆಯನ್ನು ಹುರಿದುಂಬಿಸಲು ‘ಈ ಸಲ ಕಪ್ ನಮ್ದೆ’ ಎಂಬ ಘೋಷಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡಿದ್ದರು. ಇದನ್ನೂ ಓದಿ: ಕಪ್ ಗೆಲ್ಲಲು ಆರ್‌ಸಿಬಿ ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ
ಸತತ ಸೋಲಿನಿಂದ ಕಂಗೆಟ್ಟಿದ್ದರೂ ಆರ್‌ಸಿಬಿಗೆ ಅಭಿಮಾನಿ ಬಳಗವೇನು ಕಮ್ಮಿಯಾಗಿಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ‘ಈ ಸಲ ಕಪ್ ನಮ್ದೆ’ ಎಂಬ ಅಭಿಮಾನಿಗಳ ಉದ್ಘಾರ ಈ ಬಾರಿ ಮಲೆಮಹದೇಶ್ವರನಿಗೂ ತಲುಪಿರುವುದು ವಿಶೇಷ.
ಗೆಲ್ಲದ ತಂಡಗಳು:
ಇಲ್ಲಿವರೆಗೆ ಐಪಿಎಲ್ 12 ಆವೃತ್ತಿಗಳು ನಡೆದಿದ್ದು, ಮೂರು ತಂಡಗಳು ಇಲ್ಲಿವರೆಗೂ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ. ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಕಪ್ ಗೆಲ್ಲದೆ ಇರುವ ತಂಡಗಳಾಗಿದೆ.
2019ರ ಐಪಿಎಲ್ ಆವೃತ್ತಿಯಲ್ಲಿ ಗೆಲ್ಲುವ ಮೂಲಕ ಮುಂಬೈ ನಾಲ್ಕನೇ ಬಾರಿ ಟ್ರೋಫಿ ತನ್ನದಾಗಿಸಿಕೊಂಡ ತಂಡವಾಗಿ ಹೊರ ಹೊಮ್ಮಿತು. ಈ ಮೂಲಕ ಐಪಿಎಲ್ ಸೀಸನ್‍ನಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದ ತಂಡವಾಗಿ ಮುಂಬೈ ಇಂಡಿಯನ್ಸ್ ಗುರುತಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್ ಚೊಚ್ಚಲ ಸೀಸನ್ (2008)ರಲ್ಲಿ ಗೆಲುವು ಸಾಧಿಸಿತ್ತು. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ 3, ಕೋಲ್ಕತ್ತಾ ನೈಟ್‍ರೈಡರ್ಸ್ 2 ಹಾಗೂ ಸನ್‍ರೈಸರ್ಸ್ ಹೈದರಾಬಾದ್ ಒಂದು ಬಾರಿ ಟ್ರೋಫಿ ಗೆದ್ದುಕೊಂಡಿದೆ.