ಮುಂಬೈ: ರಾಜಸ್ಥಾನ್ ರಾಯಲ್ಸ್ (Rajasthan Royals) ಜೊತೆಗಿನ ಸಂಬಂಧ ಹದಗೆಟ್ಟಿರುವುದರಿಂದ ಸಂಜು ಸ್ಯಾಮ್ಸನ್ ಅವರು 2026ರ ಐಪಿಎಲ್ ಮಿನಿ ಹರಾಜಿಗೂ ಮುನ್ನವೇ ಫ್ರಾಂಚೈಸಿಯಿಂದ ಹೊರಬರಲು ಇಚ್ಛಿಸಿದ್ದಾರೆ. ಈ ಬೆನ್ನಲ್ಲೇ ವೈರಲ್ ಆಗಿರುವ ಫೋಟೋಗಳು ಸಂಜು ಸ್ಯಾಮ್ಸನ್ (Sanju Samson) ಆರ್‌ಸಿಬಿ ಸೇರೋದು ಪಕ್ಕಾ ಎಂದು ಹೇಳುತ್ತಿವೆ.
ಹೌದು. 2026ರ ಐಪಿಎಲ್‌ಗೆ (IPL 2025) ಮುಂಚಿತವಾಗಿ ನಡೆಯಲಿರುವ ಮಿನಿ ಹರಾಜಿಗೂ ಮುನ್ನ ತಮ್ಮನ್ನು ಫ್ರಾಂಚೈಸಿಯಿಂದ ಬಿಡುಗಡೆಗೊಳಿಸುವಂತೆ ಕೇಳಿಕೊಂಡಿದಾರಂತೆ. ಈ ಬೆನ್ನಲ್ಲೇ ಸಂಜು ಆರ್‌ಸಿಬಿ (RCB) ಥ್ರೋ ಡೌನ್ ಸ್ಪೆಷಲಿಸ್ಟ್ ಜೊತೆ ತರಬೇತಿ ಪಡೆಯುತ್ತಿರುವ ಫೋಟೋಗಳು ವೈರಲ್ ಆಗಿದ್ದು, ಭಾರೀ ಹೈಪ್ ಕ್ರಿಯೆಟ್ ಮಾಡಿದೆ.
ಕಳೆದ ತಿಂಗಳು ಮುಕ್ತಾಯಗೊಂಡ ಟಿ20 ಏಷ್ಯಾಕಪ್ (T20 Asia Cup) ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದರು. ಅಲ್ಲದೇ ಅಕ್ಟೋಬರ್ 29ರಿಂದ ಶುರುವಾಗಲಿರುವ 5 ಪಂದ್ಯಗಳ ಟಿ20 ಸರಣಿಗೆ ಆಯ್ಕೆಯಾಗಿದ್ದು, ಆಸ್ಟ್ರೇಲಿಯಾಗೆ (Australia) ಪ್ರಯಾಣಿಸಲಿದ್ದಾರೆ. ಅದಕ್ಕೂ ಮುನ್ನ ಸಂಜು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಥ್ರೋ-ಡೌನ್ ಸ್ಪೆಷಲಿಸ್ಟ್ ಗೇಬ್ರಿಯಲ್ ಅವರಿಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಸ್ಯಾಮ್ಸನ್ ಆರ್‌ಆರ್ ತೊರೆಯಲು ಕಾರಣ ಏನು?
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿದ್ದ ಸಂಜು ಸ್ಯಾಮ್ಸನ್ 2025ರ ಐಪಿಎಲ್ ಟೂರ್ನಿಯ ಬಹುತೇಕ ಪಂದ್ಯಗಳಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದರು. ರಿಯಾನ್ ಪರಾಗ್ ನಾಯಕನಾಗಿ ಅನೇಕ ಪಂದ್ಯಗಳನ್ನ ಮುನ್ನಡೆಸಿದ್ದರು. ಇದು ಅಸಮಾಧಾನ ಮೂಡಿಸಿತ್ತು ಎನ್ನಲಾಗಿದೆ. ಅಲ್ಲದೇ ಜೋಸ್ ಬಟ್ಲರ್ ಅವರನ್ನ ಫ್ರಾಂಚೈಸಿಯಿಂದ ಕೈಬಿಟ್ಟಿದ್ದು ಸಹ ಸಂಜುಗೆ ಬೇಸರ ತರಿಸಿತ್ತಂತೆ. ಹೀಗಾಗಿ 2025ರ ಟೂರ್ನಿ ಮುಗಿದ ಬೆನ್ನಲ್ಲೇ ತನ್ನನ್ನು ಹರಾಜಿನಲ್ಲಿ ಬಿಡುಗಡೆ ಮಾಡಲು ಅಥವಾ ಬೇರೆ ಫ್ರಾಂಚೈಸಿ ಜೊತೆಗೆ ವಿನಿಮಯ ಮಾಡುವಂತೆ ಕೇಳಿಕೊಂಡಿದ್ದರು. ಆರಂಭದಲ್ಲಿ ಸಂಜು ಸಿಎಸ್‌ಕೆ ಸೇರಿಕೊಳ್ಳಲಿದ್ದು, ಧೋನಿ ಬಳಿಕ ವಿಕೆಟ್ ಕೀಪರ್ ಬ್ಯಾಟರ್ ಆಗಲಿದ್ದಾರೆ ಎನ್ನಲಾಗಿತ್ತು. ಆದರೀಗ ಅವರು ಆರ್‌ಸಿಬಿ ಫ್ರಾಂಚೈಸಿ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ 2026ರ ಐಪಿಎಲ್‌ನ ಮಿನಿ ಹರಾಜಿಗೆ ತಯಾರಿ ನಡೆಯುತ್ತಿದೆ. ನವೆಂಬರ್ 15ರ ಒಳಗೆ ಎಲ್ಲಾ ಫ್ರಾಂಚೈಸಿಗಳು ರಿಟೇನ್ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸುವಂತೆ ಐಪಿಎಲ್ ಮಂಡಳಿ ತಿಳಿಸಿದೆ. ಡಿಸೆಂಬರ್ 13 ರಿಂದ 15ರ ಒಳಗೆ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಮಾತ್ರವೆ ಮೆಗಾ ಹರಾಜು ನಡೆಯಲಿದೆ.
– ಐವರು ಸ್ಟಾರ್ ಪ್ಲೇಯರ್‌ಗಳನ್ನ ಹೊರದಬ್ಬಲು ಮುಂದಾದ ಸಿಎಸ್‌ಕೆ
– ಫ್ರಾಂಚೈಸಿಗಳ ಪರ್ಸ್ ಮೊತ್ತ 151 ಕೋಟಿಗೆ ಹೆಚ್ಚಳ
ಮುಂಬೈ: ಮುಂದಿನ ಡಿಸೆಂಬರ್ 13 ರಿಂದ 15ರ ಅವಧಿಯಲ್ಲಿ 2026ರ ಐಪಿಎಲ್ ಟೂರ್ನಿಗೆ ಮಿನಿ ಹರಾಜು (IPL Mini Auction) ನಡೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಫ್ರಾಂಚೈಸಿಗಳು ರಿಟೇನ್ ಆಟಗಾರರ ಪಟ್ಟಿ ಪ್ರಕಟಿಸಲು ಡೆಡ್‌ಲೈನ್ ಫಿಕ್ಸ್ ಮಾಡಲಾಗಿದೆ.
3 ವರ್ಷಗಳಿಗೊಮ್ಮೆ ಮೆಗಾ ಹರಾಜು ನಡೆಯಲಿದೆ. 2025ರ ಐಪಿಎಲ್ ಟೂರ್ನಿ ವೇಳೆ ಮೆಗಾ ಹರಾಜು ನಡೆದಿತ್ತು. ಆದ್ದರಿಂದ ಈ ಬಾರಿ ಮಿನಿ ಹರಾಜು ನಡೆಯಲಿದೆ. ಆದ್ರೆ ಬಿಸಿಸಿಐ (BCCI) ಈಗಾಗಲೇ ವಿಧಿಸಿರುವಂತೆ ಕಳೆದಬಾರಿಗಿಂತ ಫ್ರಾಂಚೈಸಿಗಳ ಪರ್ಸ್ ಮೊತ್ತ ಹಿಗ್ಗಲಿದೆ.
ಪರ್ಸ್ ಮೊತ್ತ ಇನ್ನಷ್ಟು ಹೆಚ್ಚಳ
ಈ ಹಿಂದೆ 90 ಕೋಟಿ ರೂ.ಗಳಷ್ಟಿದ್ದ ಐಪಿಎಲ್ ಫ್ರಾಂಚೈಸಿಗಳ ಪರ್ಸ್ 2023-24ರ ಐಪಿಎಲ್ ಟೂರ್ನಿಯಲ್ಲಿ 100 ಕೋಟಿ ರೂ.ಗೆ ಹೆಚ್ಚಿಸಲಾಗಿತ್ತು. 2025ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿಗೂ ಮುನ್ನ ಬಿಸಿಸಿಐ ಮೂರು ವರ್ಷಗಳ ಅವಧಿಗೆ ವೇತನ ಸೇರಿ ಪರ್ಸ್ ಮೊತ್ತವನ್ನ 157 ಕೋಟಿ ರೂ.ಗಳ ವರೆಗೆ ಹೆಚ್ಚಿಸಿದೆ. ಅದರಂತೆ 2025ರ ಐಪಿಎಲ್ ಟೂರ್ನಿಯಲ್ಲಿ ಫ್ರಾಂಚೈಸಿಗಳು ಸಂಬಳ ಮಿತಿ ಸೇರಿ ತಲಾ 146 ಕೋಟಿ ರೂ. ಬಳಕೆ ಮಾಡಿದ್ದವು. 2026ರ ಟೂರ್ನಿಗೆ 151 ಕೋಟಿ ರೂ. ಬಳಕೆ ಮಾಡಲಿದ್ದು, 2027ರ ಟೂರ್ನಿಗೆ 157 ಕೋಟಿ ರೂ.ಗಳನ್ನು ಫ್ರಾಂಚೈಸಿಗಳು ಬಳಸಲಿವೆ. ಇದನ್ನೂ ಓದಿ: 2027ರ ವಿಶ್ವಕಪ್ ಆಡೋದು ಡೌಟ್ – ಆಸೀಸ್ ಸರಣಿ ಬಳಿಕ ʻಹಿಟ್‌ಮ್ಯಾನ್, ಕ್ರಿಕೆಟ್ ಲೋಕದ ಕಿಂಗ್ ಯುಗ ಅಂತ್ಯ?
ಐವರು ಸ್ಟಾರ್‌ಗಳನ್ನ ಹೊರದಬ್ಬಲು ಮುಂದಾದ ಸಿಎಸ್‌ಕೆ
ಇನ್ನೂ ಮಿನಿ ಹರಾಜಿಗೂ ಮುನ್ನ ರಿಟೇನ್ ಆಟಗಾರರ ಪಟ್ಟಿ ಬಿಡುಗಡೆಗೊಳಿಸಲು ಡೆಡ್‌ಲೈನ್ ಫಿಕ್ಸ್ ಮಾಡ್ತಿದ್ದಂತೆ ದೀಪಕ್ ಹೂಡ, ವಿಜಯ್ ಶಂಕರ್, ರಾಹುಲ್ ತ್ರಿಪಾಟಿ, ಸ್ಯಾಮ್ ಕರ್ರನ್, ಡಿವೋನ್ ಕಾನ್ವೆ ಅವರನ್ನ ತಂಡದಿಂದ ಹೊರಬ್ಬಲು ಫ್ರಾಂಚೈಸಿ ನಿರ್ಧರಿಸಿದೆ ಎಂಧು ತಿಳಿದುಬಂದಿದೆ. ಈ ಬಗ್ಗೆ ಸಿಎಸ್‌ಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದನ್ನೂ ಓದಿ: 6 ಆಟಗಾರರ ರಿಟೇನ್‌ಗೆ ಬಿಸಿಸಿಐ ಅವಕಾಶ, ಪರ್ಸ್ ಮೊತ್ತ 120 ರಿಂದ 157 ಕೋಟಿ ರೂ.ಗೆ ಹೆಚ್ಚಳ!
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮಾರಾಟವಾಗುತ್ತಾ? ಕೋವಿಡ್ ಲಸಿಕೆ (Covid Vaccine) ಕೋವಿಶೀಲ್ಡ್ ತಯಾರಿಸಿದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನವಾಲಾ (Adar Poonawalla) ಖರೀದಿಸುತ್ತಾರಾ ಈ ಪ್ರಶ್ನೆ ಈಗ ಎದ್ದಿದೆ.
ಹೌದು. ಆರ್‌ಸಿಬಿ ಷೇರನ್ನು ಮಾರಾಟ ಮಾಡಲು ಡಿಯಾಜಿಯೊ ಮುಂದಾಗಿದೆ ಎಂದು ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಸಾಮಾಜಿಕ ಜಾಲತಾಣದಲ್ಲಿ ಬಾಂಬ್ ಸಿಡಿಸಿದ್ದಾರೆ. ಎಕ್ಸ್‌ನಲ್ಲಿ ಸ್ಫೋಟಕ ವಿಚಾರ ಬಹಿರಂಗ ಪಡಿಸಿದ ಬೆನ್ನಲ್ಲೇ ಅದಾರ್ ಪೂನವಾಲಾ ಆರ್‌ಸಿಬಿ ಖರೀದಿಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
There have been a lot of rumour about the sale of an @IPL franchise specifically @RCBTweets – well in the past they have been denied. But it seems the owners have finally decided to take it off their balance sheet and sell it. I am sure having won the IPL last season and also… pic.twitter.com/ecXfU5n5v5
ಮೋದಿ ಹೇಳಿದ್ದೇನು?
ಆರ್‌ಸಿಬಿ ಫ್ರಾಂಚೈಸಿ ಮಾರಾಟದ ಬಗ್ಗೆ ಇಲ್ಲಿ ಸಾಕಷ್ಟು ವದಂತಿಗಳಿತ್ತು. ನಂತರ ಈ ವದಂತಿಗಳನ್ನು ನಿರಾಕರಿಸಲಾಗಿತ್ತು. ಆದರೆ ಮಾಲೀಕರು ಅಂತಿಮವಾಗಿ ಮಾರಾಟ ಮಾಡಲು ಮುಂದಾಗಿದ್ದಾರೆ. ಕಳೆದ ಬಾರಿ ಚಾಂಪಿಯನ್ ಆಗಿರುವ ತಂಡಕ್ಕೆ ಅತಿ ಹೆಚ್ಚು ಅಭಿಮಾನಿಗಳಿದ್ದಾರೆ ಮತ್ತು ಅತ್ಯುತ್ತಮ ಮ್ಯಾನೆಜ್ಮೆಂಟ್ ತಂಡವಿದೆ. ಫ್ರಾಂಚೈಸಿಗಳ ಪೈಕಿ ಅತ್ಯುತ್ತಮ ತಂಡ ಆಗಿರುವ ಕಾರಣ ದೊಡ್ಡ ಜಾಗತಿಕ ಹೂಡಿಕೆದಾರರು ಭಾರತದ ಹೂಡಿಕೆ ತಂತ್ರವಾಗಿ ಹೂಡಿಕೆ ಮಾಡಲು ಮುಂದಾಗಿವೆ. ಇದಕ್ಕಿಂತ ಉತ್ತಮ ಹೂಡಿಕೆ ಅವಕಾಶ ಇನ್ನೊಂದಿಲ್ಲ ಎಂದು ನಾನು ಭಾವಿಸುತ್ತೇನೆ. ಮಾರಾಟದ ಮೊತ್ತ ದಾಖಲೆಯಾಗಲಿದೆ. ಇದು ಐಪಿಎಲ್ ವೇಗವಾಗಿ ಬೆಳೆಯುತ್ತಿರುವ ಗ್ಲೋಬಲ್ ಸ್ಪೋರ್ಟಿಂಗ್ ಲೀಗ್ ಮಾತ್ರವಲ್ಲದೆ ಅತ್ಯಂತ ಮೌಲ್ಯಯುತವಾಗಿದೆ ಎಂದು ತೋರಿಸುತ್ತದೆ. ಎಲ್ಲರಿಗೂ ಶುಭವಾಗಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮತ್ತೆ ಹೊಸ ನಾಟಕ- ಕಪ್ ನೀಡಲು ಹೊಸ ಷರತ್ತು ಮುಂದಿಟ್ಟ ನಖ್ವಿ
ಲಲಿತ್ ಮೋದಿ ಬಾಂಬ್ ಸಿಡಿಸಿದ ಬೆನ್ನಲ್ಲೇ ಆರ್‌ಸಿಬಿ ಖರೀದಿಸಲು ಅದರ್ ಪೂನವಾಲಾ ಮುಂದಾಗಿದ್ದು ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ. ಡಿಯಾಜಿಯೊ ಸದ್ಯ ಸಂಭಾವ್ಯ ಸಲಹೆಗಾರರೊಂದಿಗೆ ಚರ್ಚೆ ನಡೆಸಿದೆ ಮತ್ತು 2 ಬಿಲಿಯನ್ ಡಾಲರ್ ಮೌಲ್ಯಮಾಪನವನ್ನು ಬಯಸುತ್ತಿದೆ ಮತ್ತು ಹೂಡಿಕೆದಾರರಿಂದ ಒಂದು ಬಾರಿಯ ಪಾವತಿಯನ್ನು ಬಯಸುತ್ತಿದೆ ಎನ್ನಲಾಗುತ್ತಿದೆ.
ಈ ಹಿಂದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಸಂಭವಿಸಿದ ಬಳಿಕ ಆರ್‌ಸಿಬಿ ಫ್ರಾಂಚೈಸಿಯಲ್ಲಿರುವ ತನ್ನ ಪಾಲನ್ನು ಮಾರಾಟ ಮಾಡಲು ಡಿಯಾಜಿಯೊ (Diageo) ಮುಂದಾಗಿದೆ ಎಂದು ವರದಿಯಾಗಿತ್ತು. ವರದಿ ಬೆನ್ನಲ್ಲೇ ಬಾಂಬೆ ಷೇರು ಮಾರುಕಟ್ಟೆಗೆ ಡಿಯಾಜಿಯೊದ ಮಾಲೀಕತ್ವ ಹೊಂದಿರುವ ಯುನೈಟೆಡ್ ಸ್ಪಿರಿಟ್ಸ್, ಆರ್‌ಸಿಬಿಯ ಸಂಭಾವ್ಯ ಪಾಲು ಮಾರಾಟಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳ ಊಹಾತ್ಮಕ ಸ್ವರೂಪದ್ದಾಗಿವೆ. ಅಂತಹ ಯಾವುದೇ ಚರ್ಚೆಗಳನ್ನು ನಡೆದಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಇದನ್ನೂ ಓದಿ: 1 ಗಂಟೆ ಹೈಡ್ರಾಮಾ, ಟ್ರೋಫಿ ಜೊತೆ ಓಡಿದ ನಖ್ವಿ – ಮಧ್ಯರಾತ್ರಿ ಏನಾಯ್ತ? ಇಲ್ಲಿದೆ ಪೂರ್ಣ ವಿವರ
ಡಿಯಾಜಿಯೊ ತೆಕ್ಕೆಗೆ ಆರ್‌ಸಿಬಿ ಹೋಗಿದ್ದು ಹೇಗೆ?
2008 ರಲ್ಲಿ ವಿಜಯ್ ಮಲ್ಯ ಒಡೆತನದ ಯುನೈಟೆಡ್ ಸ್ಪೀರಿಟ್ಸ್ ಆರ್‌ಸಿಬಿ ತಂಡವನ್ನು 111.6 ಮಿಲಿಯನ್ ಡಾಲರ್(ಆಗಿನ 700-800 ಕೋಟಿ ರೂ.) ನೀಡಿ ಖರೀದಿಸಿತ್ತು. 2012ರಲ್ಲಿ ಕಿಂಗ್‌ಫಿಶರ್ ಏರ್‌ಲೈನ್ಸ್ ಕಾರ್ಯಾಚರಣೆ ನಿಲ್ಲಿಸಿತು. ಉದ್ಯಮದಲ್ಲಿ ನಷ್ಟವಾದ ಕಾರಣ ಮಲ್ಯ ಅವರ ಯುನೈಟೆಡ್ ಸ್ಪಿರಿಟ್ಸ್ ಕಂಪನಿಯನ್ನು ಡಿಯಾಜಿಯೊ ಸ್ವಾಧೀನಪಡಿಸಿಕೊಂಡಿತು. ಆರ್‌ಸಿಬಿಯಲ್ಲಿ ಯುನೈಟೆಡ್ ಸ್ಪಿರಿಟ್ಸ್ ಷೇರುಗಳು ಇದ್ದ ಕಾರಣ ಅದರ ಮಾಲೀಕತ್ವ ಡಿಯಾಜಿಯೊಗೆ (Diageo) ಹೋಗಿತ್ತು.
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(GST) ಸ್ಲ್ಯಾಬ್ ಪರಿಷ್ಕರಣೆ ಬೆನ್ನಲ್ಲೇ 2026ನೇ ಆವೃತ್ತಿಯ ಐಪಿಎಲ್ ಪಂದ್ಯಗಳ (IPL Match) ಟಿಕೆಟ್ ದರ ದುಬಾರಿಯಾಗಲಿದೆ.
ಇಲ್ಲಿಯವರೆಗೆ ಐಪಿಎಲ್ ಟಿಕೆಟ್‌ಗಳು 28% ರಷ್ಟು ತೆರಿಗೆ ಸ್ಲ್ಯಾಬ್ ಅಡಿಯಲ್ಲಿದ್ದವು. ಆದರೆ ಪರಿಷ್ಕರಣೆಯಾದ ಬಳಿಕ ಇವು 40% ರ ವಿಭಾಗದಲ್ಲಿ ಬರುವುದರಿಂದ ಟಿಕೆಟ್ ದರ (Ticket Price) ಏರಿಕೆಯಾಗಲಿದೆ.
ತಂಬಾಕು ಉತ್ಪನ್ನಗಳು ಹಾಗೂ ಕ್ಯಾಸಿನೊ, ರೇಸ್ ಕ್ಲಬ್‌ಗಳು ಮತ್ತು ಇತರ ಐಷಾರಾಮಿ ಖರ್ಚುಗಳಿಗೆ 40% ತೆರಿಗೆ ಹಾಕಲಾಗಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಬೆಂಗಳೂರಿನ ಪಂದ್ಯದ ಟಿಕೆಟ್ ದರ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ.
ಈ ವರ್ಷ ಆರ್‌ಸಿಬಿಯ ಬೆಂಗಳೂರು ಪಂದ್ಯದ ದುಬಾರಿ ಟಿಕೆಟ್ ಬೆಲೆ 42,350 ರೂ. ಇತ್ತು. ಈ ದರಕ್ಕೆ 40% ಜಿಎಸ್‌ಟಿ ಹಾಕಿದರೆ ಸುಮಾರು 4 ಸಾವಿರ ರೂ. ಏರಿಕೆ ಕಾಣಬಹುದು. ಚೆಪಾಕ್‌ನಲ್ಲಿ ಅತ್ಯಂತ ದುಬಾರಿ ಟಿಕೆಟ್ (7,000 ರೂ.) 7,656 ಕ್ಕೆ ಏರುವ ಸಾಧ್ಯತೆಯಿದೆ. ಆರ್‌ಸಿಬಿಯ ಬೆಂಗಳೂರು ಪಂದ್ಯದ ಕಡಿಮೆ ಬೆಲೆಯ ಟಿಕೆಟ್‌ಗೆ 2,300 ರೂ. ಇತ್ತು. ಇನ್ನು ಮುಂದೆ ಈ ದರ 2,515 ರೂ. ಆಗಬಹುದು.
ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಚೆನ್ನೈ ತಂಡಕ್ಕೆ ಭಾರೀ ಅಭಿಮಾನಿಗಳಿದ್ದಾರೆ. ಬೇರೆ ತಂಡಗಳಿಗೆ ಹೋಲಿಸಿದರೆ ಈ ಎರಡು ತಂಡಗಳ ಟಿಕೆಟ್ ದರ ಜಾಸ್ತಿ ಇರುತ್ತದೆ. ಮನರಂಜನಾ ತೆರಿಗೆ ವಿಧಿಸುವುದರಿಂದ ಟಿಕೆಟ್ ದರ ಮತ್ತಷ್ಟು ಏರಿಕೆಯಾಗುತ್ತದೆ. ಆರ್‌ಸಿಬಿಯಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಈ ಹಿಂದೆ ಹಲವು ಸ್ಟಾರ್ ಪ್ಲೇಯರ್‌ಗಳು ಹಿಂದೆ ಆಡಿದ್ದರಿಂದ ಬೆಲೆ ಜಾಸ್ತಿಯಿದೆ. ಆದರೆ ಬೆಂಗಳೂರು ಹೊರತುಪಡಿಸಿ ಬೇರೆ ಕಡೆ ನಡೆಯುವ ಆರ್‌ಸಿಬಿ ಪಂದ್ಯದ ಟಿಕೆಟ್ ದರ ಕಡಿಮೆ ಇರುತ್ತದೆ. ಇದನ್ನೂಓದಿ: ಅಕ್ರಮಬೆಟ್ಟಿಂಗ್ ಆ್ಯಪ್ಪ್ರಕರಣ–ಟೀಂಇಂಡಿಯಾದಮಾಜಿಕ್ರಿಕೆಟಿಗಶಿಖರ್ ಧವನ್ಗೆಇಡಿಸಮನ್ಸ್
ಟಿಕೆಟ್ ದರಗಳಿಗೆ ಸಂಬಂಧಿಸಿದಂತೆ ಐಪಿಎಲ್‌ನಲ್ಲಿ ಯಾವುದೇ ನಿಯಮಗಳು ಇಲ್ಲ. ಹೀಗಾಗಿ ಫ್ರಾಂಚೈಸಿಗಳು ಪಂದ್ಯದ ಟಿಕೆಟ್ ದರವನ್ನು ತಮಗೆ ಇಷ್ಟ ಬಂದಂತೆ ನಿಗದಿ ಮಾಡುತ್ತವೆ.
ಐಪಿಎಲ್ ಮಾತ್ರವಲ್ಲ, ಪ್ರೊ ಕಬಡ್ಡಿ ಲೀಗ್ ಮತ್ತು ಇಂಡಿಯನ್ ಸೂಪರ್ ಲೀಗ್ ಕೂಡ ಟಿಕೆಟ್ ಬೆಲೆಯಲ್ಲಿ ಹೆಚ್ಚಳವಾಗಬಹುದು. 500 ರೂ. ಗಿಂತ ಹೆಚ್ಚಿಲ್ಲದ ಮಾನ್ಯತೆ ಪಡೆದ ಕ್ರೀಡಾಕೂಟಗಳು ಸೇರಿದಂತೆ ಇತರ ಕ್ರೀಡಾಕೂಟಗಳಿಗೆ ಪ್ರವೇಶಕ್ಕೆ ವಿನಾಯಿತಿ ನೀಡಲಾಗಿದೆ. ಟಿಕೆಟ್ ದರ 500 ರೂ.ಗಿಂತ ಜಾಸ್ತಿ ಇದ್ದರೆ ಅದಕ್ಕೆ 18% ರ ಪ್ರಮಾಣಿತ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ.
ಈ ಬಾರಿ ಆರ್‌ಸಿಬಿ ಟಿಕೆಟ್ ದರ ಎಷ್ಟಿತ್ತು?
ಕೆಐಎ ವೈರ್ ಮತ್ತು ಕೇಬಲ್‌ಗಳು ಎ ಸ್ಟ್ಯಾಂಡ್: 2,300 ರೂ.
ಬೋಟ್ ಸಿ ಸ್ಟ್ಯಾಂಡ್ – 3,300
ಪೂಮಾ ಬಿ ಸ್ಟ್ಯಾಂಡ್ 3,300
ಟಿಕೆಟ್ ಜಿಟಿ ಅನೆಕ್ಸ್ – 4,000 ರೂ.
ಕತಾರ್ ಏರ್‌ವೇಸ್ ಜಾವಗಲ್ ಶ್ರೀನಾಥ್ ಸ್ಟ್ಯಾಂಡ್ – 10,000 ರೂ.
ಬಿರ್ಲಾ ಎಸ್ಟೇಟ್ ಬಿಎಸ್ ಚಂದ್ರಶೇಖರ್ ಸ್ಟ್ಯಾಂಡ್ – 15,000 ರೂ.
– ಘಟನೆಯಾದ 3 ತಿಂಗಳ ಬಳಿಕ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಸಂದೇಶ
ಬೆಂಗಳೂರು: ಯಾವ ದಿನ ಆರ್‌ಸಿಬಿ (RCB) ಫ್ರ್ಯಾಂಚೈಸಿಯ ಇತಿಹಾಸದಲ್ಲಿಯೇ ಅತ್ಯಂತ ಸಂತೋಷದ ಕ್ಷಣವಾಗಬೇಕಿತ್ತೋ, ಅದು ದುರಂತದ ಕ್ಷಣವಾಯಿತು ಎಂದು ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ನೆನೆದು ವಿರಾಟ್ ಕೊಹ್ಲಿ ದುಃಖಿಸಿದ್ದಾರೆ. ದುರಂತವಾದ 3 ತಿಂಗಳ ಬಳಿಕ ಆರ್‌ಸಿಬಿ ಆಟಾಗಾರ ವಿರಾಟ್ ಕೊಹ್ಲಿ (Virat Kohli) ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ.ಇದನ್ನೂ ಓದಿ: ಕೇರಳ ಮೂಲದ ಅರ್ಚಕನ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ – ಪ್ರತಿದೂರು; ದೂರುದಾರೆ ಸೇರಿ ಐವರ ಬಂಧನ
ಆರ್‌ಸಿಬಿ ಅಧಿಕೃತ ಎಕ್ಸ್ (RCB Official) ಖಾತೆಯ ಮೂಲಕ ಸಂದೇಶ ನೀಡಿರುವ ಕೊಹ್ಲಿ, ಜೂ.4ರಂದು ನಡೆದ ಘಟನೆಯನ್ನು ಎದುರಿಸಲು ಜೀವನದಲ್ಲಿ ಯಾರಿಂದಲೂ ಸಾಧ್ಯವಿಲ್ಲ. ಯಾವ ದಿನ ಆರ್‌ಸಿಬಿ ಫ್ರ್ಯಾಂಚೈಸಿಯ ಇತಿಹಾಸದಲ್ಲಿಯೇ ಅತ್ಯಂತ ಸಂತೋಷದ ಕ್ಷಣವಾಗಬೇಕಿತ್ತೋ, ಅದು ದುರಂತವಾಗಿ ಬದಲಾಯ್ತು. ಆ ಸಮಯದಲ್ಲಿ ಜೀವ ಕಳೆದುಕೊಂಡವರು ಮತ್ತು ಗಾಯಾಳುಗಳ ಬಗ್ಗೆ ನಾನು ಚಿಂತಿತನಾಗಿದ್ದೇನೆ. ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸಿದ್ದೇನೆ. ನೀವೆಲ್ಲರೂ ಇದೀಗ ನಮ್ಮ ಕಥೆಯ ಭಾಗವಾಗಿದ್ದೀರಿ. ಇನ್ಮುಂದೆ ನಾವು ಒಟ್ಟಾಗಿ ಕಾಳಜಿ, ಜವಾಬ್ದಾರಿ ಹಾಗೂ ಗೌರವದೊಂದಿಗೆ ಮುಂದುವರಿಯೋಣ ಎಂದು ಬರೆದುಕೊಂಡಿದ್ದಾರೆ.
“Nothing in life really prepares you for a heartbreak like June 4th. What should’ve been the happiest moment in our franchise’s history… turned into something tragic. I’ve been thinking of and praying for the families of those we lost… and for our fans who were injured. Your… pic.twitter.com/nsJrKDdKWB
ಜೂ.3ರಂದು ನಡೆದ ಐಪಿಎಲ್ 2025ರ (IPL 2025) ಫಿನಾಲೆಯಲ್ಲಿ ಆರ್‌ಸಿಬಿ ತಂಡ 18 ವರ್ಷಗಳ ಬಳಿಕ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಜೂ.4ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದ್ದರು. ಹಲವರು ಆರ್‌ಸಿಬಿ ಅಭಿಮಾನಿಗಳು ಗಾಯಗೊಂಡಿದ್ದರು.ಇದನ್ನೂ ಓದಿ: ಸಚಿವ ಹೆಚ್.ಸಿ ಮಹದೇವಪ್ಪ ಹೆಸರಿನಲ್ಲಿ ಬರೋಬ್ಬರಿ 27 ಲಕ್ಷ ರೂ. ವಂಚಿಸಿದ ಮಹಿಳೆ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ಸಂಭವಿಸಿದ ಕಾಲ್ತುಳಿತದಲ್ಲಿ (Stampede )ಮೃತಪಟ್ಟವರ ಕುಟುಂಬಗಳಿಗೆ ಹಾಲಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ (Royal Challengers Bengaluru) ತಲಾ 25 ಲಕ್ಷ ರೂ. ಪರಿಹಾರ (Compensation) ಘೋಷಿಸಿದೆ. ಫ್ರಾಂಚೈಸಿ ತನ್ನ ಹೊಸ ಉಪಕ್ರಮ `ಆರ್‌ಸಿಬಿ ಕೇರ್ಸ್’ ಅಡಿಯಲ್ಲಿ ಆರ್ಥಿಕ ಸಹಾಯವನ್ನು ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದೆ.
𝗥𝗖𝗕 𝗖𝗮𝗿𝗲𝘀: 𝗢𝗳𝗳𝗶𝗰𝗶𝗮𝗹 𝗔𝗻𝗻𝗼𝘂𝗻𝗰𝗲𝗺𝗲𝗻𝘁
Our hearts broke on June 4, 2025.
We lost eleven members of the RCB family. They were part of us. Part of what makes our city, our community & our team unique. Their absence will echo in the memories of each one of… pic.twitter.com/1hALMHZ6os
ಈ ಸಂಬಂಧ ಆರ್‌ಸಿಬಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಜೂ.4 2025ರ ಈ ದಿನ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ. ನಾವು ಕಳೆದುಕೊಂಡಿದ್ದು 11 ಅಭಿಮಾನಿಗಳನ್ನಷ್ಟೇ ಅಲ್ಲ, ಅವರು ನಮ್ಮ ಕುಟುಂಬದ ಸದಸ್ಯರಾಗಿದ್ದರು. ನಮ್ಮ ಹೃದಯದ ಭಾಗವಾಗಿದ್ದರು. ಅವರ ಉತ್ಸಾಹವೇ ನಮ್ಮ ಶಕ್ತಿ. ಅದು ತಂಡಕ್ಕೆ ಜೀವ ತುಂಬುವ ಬೆಳಕಾಗಿತ್ತು. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ – ಅಭಿಮಾನಿಗಳಿಗೆ ಕೇರ್ ಸೆಂಟರ್ ತೆರೆಯಲಿದೆ ಆರ್‌ಸಿಬಿ
ನಮ್ಮ ನೆನಪುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ. ಜಾಗವನ್ನು ಯಾವ ಸಹಾಯವೂ ತುಂಬಲಾರದು. ಗೌರವದ ಸಂಕೇತವಾಗಿ, ಆರ್‌ಸಿಬಿ ಪ್ರತಿ ಕುಟುಂಬಕ್ಕೆ ತಲಾ 25 ಲಕ್ಷ ರೂ. ನೆರವು ನೀಡುತ್ತಿದೆ. ಇದು ಕೇವಲ ಆರ್ಥಿಕ ಸಹಾಯವಲ್ಲ, ಕರುಣೆ, ಒಗ್ಗಟ್ಟು ಮತ್ತು ನಿರಂತರ ಕಾಳಜಿಯ ಭರವಸೆಯಾಗಿದೆ.
ಇದು ಆರ್‌ಸಿಬಿ ಕೇರ್ಸ್‍ನ ಆರಂಭವೂ ಹೌದು. ಅವರ ನೆನಪನ್ನೂ ಗೌರವಿಸುವ ಮೂಲಕ ಶುರುವಾದ ಈ ಪ್ರಯತ್ನ ಅಭಿಮಾನಿಗಳ ಭಾವನೆ, ನಂಬಿಕೆ ಮತ್ತು ಸುರಕ್ಷತೆ ಪ್ರತಿಬಿಂಬಿಸುವ ಬದ್ಧತೆಯಾಗಿದೆ ಎಂದು ಪೋಸ್ಟ್‍ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದೆ.
ಏನಿದು ದುರ್ಘಟನೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 18 ವರ್ಷಗಳ ಬಳಿಕ ಐಪಿಎಲ್ (IPL) ಚಾಂಪಿಯನ್ ಪಟ್ಟವನ್ನ ಮುಡಿಗೇರಿಸಿಕೊಂಡಿತ್ತು. ಆರ್‌ಸಿಬಿ ಫ್ಯಾನ್ಸ್ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಜೂ.4 ಸಂಭ್ರಮಾಚರಣೆಗೆ ಬಂದಿದ್ದಾಗ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 11 ಮಂದಿ ಸಾವಿಗೀಡಾಗಿದ್ದರು. ಉಚಿತ ಪ್ರವೇಶ ಘೋಷಣೆಯಿಂದ ಮಿತಿಮೀರಿದ ಜನ ಬಂದಿದ್ದರಿಂದ ಈ ಅವಘಡ ನಡೆದಿತ್ತು. ಇದನ್ನೂ ಓದಿ: Stampede Case | ಸಿಎಂ ಸೂಚನೆ ಬೆನ್ನಲ್ಲೇ ನಾಲ್ವರು ಅರೆಸ್ಟ್, ಉಳಿದವರು ಎಸ್ಕೇಪ್
ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಿಂದ (Bengaluru Stampede) ಭಾರೀ ನೋವು ಅನುಭವಿಸಿದ್ದ ಆರ್‌ಸಿಬಿ (RCB) ಆಡಳಿತ ಮಂಡಳಿ ಈಗ ಅಭಿಮಾನಿಗಳಿಗಾಗಿ ಕೇರ್ ಸೆಂಟರ್ ತೆರೆಯಲು ಮುಂದಾಗಿದೆ.
ಈ ದುರ್ಘಟನೆಯಿಂದ ಸಾಕಷ್ಟು ಕಲಿತಿದ್ದೇವೆ. ಇದಕ್ಕಾಗಿಯೇ ನಾವು ಅಭಿಮಾನಿಗಳ ಜೊತೆ ನಿಲ್ಲಲು ನಿರ್ಧರಿಸಿದ್ದೇವೆ. ಇದೇ ಕಾರಣಕ್ಕೆ ಅಭಿಮಾನಿಗಳಿಗಾಗಿ ಕೇರ್ ಸೆಂಟರ್ ತೆರೆಯಲು ನಿರ್ಧರಿಸಲಾಗಿದೆ. ಈ ಮೂಲಕ ಕರ್ನಾಟಕದ ಹೆಮ್ಮೆಯಾಗಿ ಮುಂದುವರಿಯುತ್ತೇವೆ. ಈ ಬಗ್ಗೆ ಹೆಚ್ಚಿನ ವಿವರ ಶೀಘ್ರದಲ್ಲೇ ಹಂಚಿಕೊಳ್ಳುತ್ತೇವೆ ಎಂದು ಆರ್‌ಸಿಬಿ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದೆ.
ಏನಿದು ದುರ್ಘಟನೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 18 ವರ್ಷಗಳ ಬಳಿಕ ಐಪಿಎಲ್ (IPL) ಚಾಂಪಿಯನ್ ಪಟ್ಟವನ್ನ ಮುಡಿಗೇರಿಸಿಕೊಂಡಿತ್ತು. ಆರ್‌ಸಿಬಿ ಫ್ಯಾನ್ಸ್ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಜೂ.4 ಸಂಭ್ರಮಾಚರಣೆಗೆ ಬಂದಿದ್ದಾಗ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 11 ಮಂದಿ ಸಾವಿಗೀಡಾಗಿದ್ದರು. ಉಚಿತ ಪ್ರವೇಶ ಘೋಷಣೆಯಿಂದ ಮಿತಿಮೀರಿದ ಜನ ಬಂದಿದ್ದರಿಂದ ಈ ಅವಘಡ ನಡೆದಿತ್ತು. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ | ಕುನ್ಹಾ ಆಯೋಗದ ವರದಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ – ರಾಜ್ಯಕ್ಕೆ ಹೈಕೋರ್ಟ್ ಸೂಚನೆ
– ಕಾಲ್ತುಳಿತದಲ್ಲಿ ಸರ್ಕಾರದ ತಪ್ಪಿಲ್ಲ, ತಪ್ಪು ಮಾಡಿದವರ ವಿರುದ್ಧ ಕ್ರಮ ವಹಿಸಿದ್ದೇವೆ ಎಂದ ಸಿದ್ದರಾಮಯ್ಯ
ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತದಿಂದ (Chinnaswamy Stampede) ತುಂಬಾ ಡಿಸ್ಟರ್ಬ್ ಆಗಿದ್ದೇನೆ, ನನ್ನ ರಾಜಕೀಯ ಬದುಕಿನಲ್ಲೇ ಬಹಳ ದು:ಖ ಕೊಟ್ಟಂತಹ ಘಟನೆಯಿದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಭಾವುಕರಾದರು.
ಮುಂಗಾರು ಅಧಿವೇಶನದ ಕೊನೆಯ ದಿನವಾದ ಶುಕ್ರವಾರ (ಆ.22) ವಿಧಾನಸಭೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ ಪ್ರತಿಧ್ವನಿಸಿತು. ಈ ಬಗ್ಗೆ ನಡೆದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಅವರು ಉತ್ತರಿಸಿ, ಪ್ರಕರಣದಲ್ಲಿ ಸರ್ಕಾರದ ಪಾತ್ರ ಇಲ್ಲ, ಇದಕ್ಕೆ ಸರ್ಕಾರ ಕಾರಣ ಅಲ್ಲ, ಯಾರೂ ರಾಜೀನಾಮೆ ಕೊಡಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದು ಸ್ಪಷ್ಟನೆ ಕೊಟ್ಟರು. ಬಿಜೆಪಿಯವರ (BJP) ಸಾರ್ವಜನಿಕ ಕ್ಷಮಾಪಣೆಯ ಆಗ್ರಹ ತಳ್ಳಿಹಾಕಿದ ಸಿಎಂ ಸದನದಲ್ಲಿ ಮತ್ತೊಮ್ಮೆ ಘಟನೆಗೆ ವಿಷಾದ ವ್ಯಕ್ತಪಡಿಸಿದರು. ಇದೇ ವೇಳೆ ಆರ್.ಅಶೋಕ್ (R.Ashok) ಮಾತನಾಡಿ, ನಿಮಗೆ ಹೃದಯ, ಮನುಷ್ಯತ್ವ ಇದ್ದಿದ್ರೆ ಕ್ಷಮೆ ಕೇಳಬೇಕಿತ್ತು ಎಂದಿದ್ದಾರೆ.ಇದನ್ನೂ ಓದಿ: ಹೈದ್ರಾಬಾದ್‌ನಲ್ಲಿ ಕಲಬುರಗಿ ಮೂಲದ ಒಂದೇ ಕುಟುಂಬದ ಐವರ ನಿಗೂಢ ಸಾವು
ಸಿಎಂ ಅವರು, ನನಗೆ ಈ ಘಟನೆ ತುಂಬಾ ಡಿಸ್ಟರ್ಬ್ ಮಾಡಿದೆ. ಇಂಥ ದುರಂತ ಆಗಬಾರದಿತ್ತು, ಆಗಿಹೋಗಿದೆ. ನಾನು ಘಟನೆ ನಡೆದ ದಿನವೇ ವಿಷಾದ ವ್ಯಕ್ತಪಡಿಸಿದ್ದೆ. ನನ್ನ ರಾಜಕೀಯ ಜೀವನದಲ್ಲಿ ಇಂಥ ಕಹಿ ಘಟನೆ ಯಾವತ್ತೂ ಆಗಿರಲಿಲ್ಲ. ಕಾಲ್ತುಳಿತದಿಂದ 11 ಜನರ ಸಾವನ್ನು ನಾನು ನೋಡೇ ಇರಲಿಲ್ಲ. ದುರ್ಘಟನೆಗೆ ನಾನು ತುಂಬಾ ದು:ಖಪಟ್ಟಿದ್ದೇನೆ. ವಿಷಾದ ವ್ಯಕ್ತಪಡಿಸಿದ್ದೇನೆ. ಮನುಷ್ಯತ್ವ ಇರೋರಿಗೆ ದು:ಖ ಆಗೇ ಆಗುತ್ತೆ, ನನಗೂ ಆಗಿದೆ ಎಂದು ಭಾವುಕರಾಗಿ ನುಡಿದರು.
ಇನ್ನೂ ನಾವು ಪ್ರಕರಣದಲ್ಲಿ ಕ್ರಮ ತಗೊಂಡಿದ್ದೇವೆ, ಐವರು ಅಧಿಕಾರಿಗಳ ಅಮಾನತು ಮಾಡಿದ್ದೇವೆ. ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಅವರನ್ನು ಅರೆಸ್ಟ್ ಮಾಡಿಸಿದ್ದೀವಿ. ಮ್ಯಾಜಿಸ್ಟ್ರಿಯಲ್, ಕುನ್ಹಾ ನೇತೃತ್ವದಲ್ಲಿ ತನಿಖೆ ಮಾಡಿಸಿದ್ದೇವೆ. ಕಾಲ್ತುಳಿತ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ತಗೊಂಡಿದ್ದೀವಿ. ನ್ಯಾಯ ಕೊಡುವ ಕೆಲಸವನ್ನು ಜವಾಬ್ದಾರಿಯಿಂದ ಮಾಡಿದ್ದೀವಿ. ನಾವು ಏನೆಲ್ಲ ಕ್ರಮ ತೆಗೊಳ್ಳಬೇಕೋ ಅದೆಲ್ಲವನ್ನು ಮಾಡಿದ್ದೇವೆ. ಹೈಕೋರ್ಟ್‌ನವರು ಕೂಡ ಸುಮೊಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಕೋರ್ಟ್ ಹೇಳಿದ ಕೂಡಲೇ ಜಾರ್ಜ್ಶೀಟ್ ಸಲ್ಲಿಕೆ ಮಾಡ್ತೀವಿ ಎಂದು ತಿಳಿಸಿದರು. ಮುಂದುವರೆದು, ಕಾಲ್ತುಳಿತ ಘಟನೆ ನಡೆಯಬಾರದಾಗಿತ್ತು, ನಡೆದುಹೋಗಿದೆ. ಇದಕ್ಕೆ ಸರ್ಕಾರ ಕಾರಣ, ಸಿಎಂ, ಡಿಸಿಎಂ, ಹೋಮ್ ಮಿನಿಸ್ಟರ್ ಕಾರಣ, ರಾಜೀನಾಮೆ ಕೊಡಬೇಕು ಎಂದು ಹೇಳೋದು ಸರಿಯಲ್ಲ. ನಿಮ್ಮ ಅವಧಿಯಲ್ಲಿ ಆದ ಘಟನೆಗಳಿಗೆ ನೀವು ಕ್ಷಮೆ ಕೇಳಿಲ್ಲ, ವಿಷಾದ ವ್ಯಕ್ತಪಡಿಸಲಿಲ್ಲ, ರಾಜೀನಾಮೆ ಕೊಡಲಿಲ್ಲ, ತನಿಖೆಯೂ ಮಾಡಿಸಲಿಲ್ಲ ಅಂತ ಸಿಎಂ ಕೌಂಟರ್ ಕೊಟ್ಟರು.
ಕಾಲ್ತುಳಿತ ಪ್ರಕರಣ ನಡೆದಾಗ ಸಿಎಂ ಜನಾರ್ದನ ಹೊಟೇಲ್‌ಗೆ ಹೋಗಿದ್ದರು ಎಂಬ ಬಿಜೆಪಿ ಆರೋಪಕ್ಕೂ ಪ್ರತಿಕ್ರಿಯೆ ನೀಡಿ, ನಾನು ಜನಾರ್ದನ ಹೊಟೇಲ್‌ಗೆ ಆ ದಿನ 5:30ಕ್ಕೆ ಹೋಗಿದ್ದು ನಿಜ, ನಾನು ಸುಳ್ಳು ಹೇಳಲ್ಲ. ನನ್ನ ಮೊಮ್ಮಗ ಹಿಂದಿನ ದಿನ ಲಂಡನ್‌ನಿಂದ ಬೆಂಗಳೂರಿಗೆ ಬಂದಿದ್ದ. ಗ್ರ‍್ಯಾಂಡ್ ಸ್ಟೆಪ್ಸ್‌ಗೆ ಅವನೂ ಬಂದಿದ್ದ, ದೋಸೆ ತಿನ್ನೋಣ ಅಂದಿದ್ದಕ್ಕೆ ಜನಾರ್ದನ ಹೊಟೇಲ್‌ಗೆ ಹೋಗಿದ್ವಿ. ಆ ದಿನ 5:30ರವರೆಗೂ ನನಗೆ ಕಾಲ್ತುಳಿತ ಸಾವು ಬಗ್ಗೆ ಗೊತ್ತಾಗಿರಲಿಲ್ಲ. ಪೊನ್ನಣ್ಣ ಹೇಳೋವರೆಗೂ ನನಗೆ ಗೊತ್ತಾಗಿರಲಿಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಟೀಂ ಇಂಡಿಯಾಗೆ ಅಯ್ಯರ್ ಒನ್‌ಡೇ ಕ್ಯಾಪ್ಟನ್? – ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ
ಬಿಜೆಪಿ ಅವಧಿಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ನಡೆದ ದುರಂತಗಳನ್ನು ಅಂಕಿಅಂಶದೊಂದಿಗೆ ಸಿಎಂ ಉಲ್ಲೇಖಿಸಿದರು. ಕಾಲ್ತುಳಿತ ಪ್ರಕರಣಗಳಲ್ಲಿ ಯಾವ ಸಿಎಂ ಸಹ ರಾಜೀನಾಮೆ ಕೊಟ್ಟಿಲ್ಲ. ಪ್ರಯಾಗ್‌ರಾಜ್ ಕಾಲ್ತುಳಿತಕ್ಕೆ (Prayagraj Stampede) ಯೋಗಿ ಆದಿತ್ಯನಾಥ್ (Yogi Adityanath) ರಾಜೀನಾಮೆ ಕೊಟ್ರಾ? ಅಹಮದಾಬಾದ್ ವಿಮಾನ ದುರಂತಕ್ಕೆ (Ahmedabad Plane Crash) ಗುಜರಾತ್ (Gujarat) ಸಿಎಂ ರಾಜೀನಾಮೆ ಕೊಟ್ರಾ? ಹಾವೇರಿ ಗೋಲಿಬಾರ್‌ಗೆ ಯಡಿಯೂರಪ್ಪ (Yediyurappa) ರಾಜೀನಾಮೆ ಕೊಟ್ರಾ? 2006ರಲ್ಲಿ ಡಾ.ರಾಜ್ ನಿಧನ ವೇಳೆ 7 ಜನ ಸಾವನ್ನಪ್ಪಿದ್ದರು. ಹೆಚ್‌ಡಿಕೆ ಆಗ ಸಿಎಂ, ಬಿಎಸ್‌ವೈ ಡಿಸಿಎಂ. ಆಗ ಕುಮಾರಸ್ವಾಮಿ (HD Kumaraswamy) ರಾಜೀನಾಮೆ ಕೊಟ್ರಾ? ರಾಜೀನಾಮೆ ಕೇಳಿದ್ರಾ? ಗೋಲಿಬಾರ್‌ನಲ್ಲಿ ಸತ್ತ ರೈತರ ಬಗ್ಗೆ ವಿಷಾದ ವ್ಯಕ್ತಪಡಿಸಿಲ್ಲ, ಕ್ಷಮೆ ಕೋರಲಿಲ್ಲ, ರಾಜೀನಾಮೆ ಕೊಡಲಿಲ್ಲ. ಸುರೇಶ್ ಕುಮಾರ್ ನಮ್ಮನ್ನೇ ಕುಮ್ಮಕ್ಕು ಕೊಟ್ಟವರು ಅಂದುಬಿಟ್ಟಿದ್ದಾರೆ. ಕೊರೋನಾ ಇದ್ದಾಗ ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೇ 36 ಜನ ಸಾವನ್ನಪ್ಪಿದ್ದರು. ಆಗ ಸುಧಾಕರ್ ಆರೋಗ್ಯ ಮಂತ್ರಿ, ಬೊಮ್ಮಾಯಿ ಸಿಎಂ. ಆಗ ನೀವು ಅಬೇಟ್ಟರ್ (ಪ್ರೇರಣೆ) ಅಂತ ಸುಧಾಕರ್‌ಗೆ, ಬೊಮ್ಮಾಯಿಗೆ ಕರೆದ್ರಾ? ಇಲ್ಲ. ಈಗ ನನಗೆ ಮಾತ್ರ ಅಬೇಟ್ಟರ್ ಅಂತ ಕರೆಯುತ್ತಿದ್ದೀರಿ. ಕಾಲ್ತುಳಿತ ಪ್ರಕರಣ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ಇಂಥ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಬಿಜೆಪಿ ನಾಯಕರಿಗೆ ಸಿಎಂ ತಿವಿದರು.
ಆರ್‌ಸಿಬಿ ಆಟಗಾರರ ತೆರೆದ ವಾಹನ ಮೂಲಕ ಮೆರವಣಿಗೆ ಸಂಬಂಧ ಬಿಜೆಪಿ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದನ್ನೂ ಉಲ್ಲೇಖಿಸಿ ಸಿಎಂ ಟಾಂಗ್ ಕೊಟ್ಟರು. ನಾವು ಸಂಭ್ರಮಕ್ಕೆ ಅವಕಾಶ ಕೊಡದೇ ಇದ್ದಿದ್ರೆ ಬಿಜೆಪಿಯವ್ರು ಅದನ್ನೇ ದೊಡ್ಡದಾಗಿ ಬಿಂಬಿಸಿ ಚಳುವಳಿ ಮಾಡ್ತಿದ್ರು ಎಂದು ಟಕ್ಕರ್ ಕೊಟ್ಟರು. ಜು.3ರಂದೇ ಸಂಭ್ರಮಾಚರಣೆಗೆ ಕೆಎಸ್‌ಸಿಎ ಪತ್ರ ಕೊಡ್ತಾರೆ. ಇನ್ಸ್ಪೆಕ್ಟರ್ ಗಿರೀಶ್ ಪರ್ಮಿಶನ್ ಕೊಡಲಿಲ್ಲ. ಮಧ್ಯಾಹ್ನ 1 ಗಂಟೆಗೆ ಆರ್‌ಸಿಬಿ, ಕೆಎಸ್‌ಸಿಎ ಟ್ವೀಟ್ ಮಾಡ್ತಾರೆ. ಅವರ ಟ್ವೀಟ್‌ನ್ನು ಲಕ್ಷಾಂತರ ಜನ ನೋಡ್ತಾರೆ. ಇಷ್ಟೆಲ್ಲಾ ಇದ್ರೂ ಪೊಲೀಸರು ಕ್ರಮವೇಕೆ ತೆಗೆದುಕೊಳ್ಳಲಿಲ್ಲ. ಟ್ವೀಟ್‌ಗಳನ್ನು ಡೀಲಿಟ್ ಮಾಡಿಸಲಿಲ್ಲ ಎಂದು ದುರಂತಕ್ಕೆ ಸರ್ಕಾರ ಕಾರಣ ಅಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಉತ್ತರಕ್ಕೆ ಒಪ್ಪದೇ ಬಿಜೆಪಿ, ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು. ಕಾಲ್ತುಳಿತಕ್ಕೆ, 11 ಜನರ ಸಾವಿಗೆ ಸರ್ಕಾರವೇ ಕಾರಣ. ಸಿಎಂ ಇನ್ನೂ ಕ್ಷಮಾಪಣೆ ಕೇಳಿಲ್ಲ. ಸಿಎಂ ಉತ್ತರ ಖಂಡಿಸಿ ಸಭಾತ್ಯಾಗ ಮಾಡ್ತೇವೆ ಎಂದು ಅಶೋಕ್ ಹೇಳಿದರು.
ಒಟ್ಟಿನಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರವನ್ನು ಮಣಿಸುವ ವಿಚಾರದಲ್ಲಿ ಬಿಜೆಪಿಗೆ ಹಿನ್ನಡೆ ಆಗಿದೆ. ಸರ್ಕಾರದ ತಪ್ಪು ಯಾವತ್ತೂ ಒಪ್ಪಿಕೊಳ್ಳುವಂತೆ ಕಾಣದ ಸಿಎಂ ಬಿಜೆಪಿಯನ್ನೇ ತಮ್ಮ ಮಾತುಗಳಿಂದ ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಯಶಸ್ವಿಯಾದರು.ಇದನ್ನೂ ಓದಿ: ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ: ಸಿಎಂ ಘೋಷಣೆ
ಬೆಂಗಳೂರು: ಆರ್‌ಸಿಬಿ (RCB) ತಂಡದವರಿಗೆ 10 ನಿಮಿಷಗಳಲ್ಲಿ ಕಾರ್ಯಕ್ರಮ ಮುಗಿಸುವಂತೆ ಸೂಚನೆ ನೀಡಿ ಎಂದು ಪೊಲೀಸ್ ಆಯುಕ್ತರು ನನಗೆ ಮನವಿ ಮಾಡಿಕೊಂಡಿದ್ದರು. ಹೀಗಾಗಿ ನಾನು ಆ ಕಾರ್ಯಕ್ರಮಕ್ಕೆ ಹೋಗಿ ಸೂಚನೆ ನೀಡಿದ್ದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.
ವಿಧಾನಸಭೆಯಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಉತ್ತರ ನೀಡುವ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R.Ashok) ಮಾತನಾಡಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಿಲ್ಲವಾದರೆ ಉಪಮುಖ್ಯಮಂತ್ರಿಗಳು ಹೋಗಿದ್ದು ಯಾಕೆ ಎಂದು ಪ್ರಶ್ನೆ ಮಾಡಿದರು.ಇದನ್ನೂ ಓದಿ: Video | RCB ನಮ್ಮ ಟೀಮೇ ಅಲ್ಲ, ಅವ್ರು ಕರ್ನಾಟಕದವ್ರೇ ಅಲ್ಲ, ಕಾರ್ಯಕ್ರಮಕ್ಕೆ ಬರಲ್ಲ ಅಂದಿದ್ದೆ: ಸಿಎಂ
ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಉತ್ತರಿಸಿ, ನನ್ನನ್ನು ಪದೇ ಪದೇ ನೆನೆಯದಿದ್ದರೆ ನಿಮಗೆ ಸಮಾಧಾನ ಆಗುವುದಿಲ್ಲ, ನಿಮ್ಮ ಪಕ್ಷದವರಿಗೆ ಖುಷಿ ಪಡಿಸಲೂ ಆಗುವುದಿಲ್ಲ. ನಿಮಗೆ ಖುಷಿ ಆಗುವಂತೆ ಉತ್ತರ ಕೊಡಲೂ ಆಗುವುದಿಲ್ಲ ಎಂದು ಛೇಡಿಸಿದರು.
ಆರ್‌ಸಿಬಿ ವಿಜಯೋತ್ಸವದಂದ ವಿಧಾನಸೌಧದ ಎದುರು ನಡೆದ ಸರ್ಕಾರಿ ಕಾರ್ಯಕ್ರಮಕ್ಕೆ ಬಂದಿದ್ದ ಕೆಎಸ್‌ಸಿಎ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕ್ರೀಡಾಂಗಣಕ್ಕೆ ಹೋಗಲು ಸಾಧ್ಯವಾಗದೇ ಹತಾಶರಾಗಿದ್ದರು. ಇನ್ನೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕೇವಲ 10 ನಿಮಿಷಗಳಲ್ಲಿ ಮುಗಿಸುವಂತೆ ನೀವೇ ಬಂದು ವ್ಯವಸ್ಥೆ ಮಾಡಬೇಕು ಎಂದು ಪೊಲೀಸ್ ಆಯುಕ್ತರು ನನ್ನ ಬಳಿ ಮನವಿ ಮಾಡಿದರು. ನಾನು ಕಾರ್ಯಕ್ರಮಕ್ಕೆ ಹೋಗಿದ್ದೂ ನಿಜ, ಅಲ್ಲಿ ಇದ್ದಿದ್ದೂ ನಿಜ, ಆರ್‌ಸಿಬಿ ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದು ನಿಜ. 10 ನಿಮಿಷಗಳಲ್ಲಿ ಈ ಕಾರ್ಯಕ್ರಮ ಮುಗಿಸುವಂತೆ ಅವರಿಗೆ ಸೂಚನೆ ಕೊಟ್ಟಿದ್ದೂ ನಿಜ. ಇದೇ ಮಾತನ್ನು ನಾನು ನ್ಯಾ.ಕುನ್ಹಾ ಅವರ ತನಿಖಾ ತಂಡದ ಮುಂದೆ ಹೇಳಿಕೆ ನೀಡಿದ್ದೂ ನಿಜ. ನಾನು ಅಲ್ಲಿಗೆ ಹೋಗಿಲ್ಲ ಎಂದು ಹೇಳುತ್ತಿಲ್ಲ. ಅಲ್ಲಿಗೆ ಹೋಗಲು ನಿಮ್ಮ ಅನುಮತಿಯ ಅಗತ್ಯವೂ ನನಗಿಲ್ಲ. ಪೊಲೀಸರ ಮನವಿ ಮೇಲೆ ನನ್ನ ಜವಾಬ್ದಾರಿಯಿಂದ ನಾನು ಹೋಗಿ ಅವರಿಗೆ ಸೂಚನೆ ನೀಡಿದ್ದೇನೆ. ಕಪ್‌ಗೆ ಮುತ್ತು ನೀಡಿದ್ದೇನೆ, ಆಟಗಾರರಿಗೆ ಅಭಿನಂದಿಸಿದ್ದೇನೆ ಎಂದರು.ಇದನ್ನೂ ಓದಿ: ಸುದೀಪ್ ಕನಸಿನ ವಿಷ್ಣು ಸ್ಮಾರಕ – ಪುತ್ಥಳಿ ನಿರ್ಮಾಣಕ್ಕೆ ಚಾಲನೆ
ಬೆಂಗಳೂರು: ಆರ್‌ಸಿಬಿ ಜಗತ್ತಿನಲ್ಲೇ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ. 18 ವರ್ಷಗಳ ಬಳಿಕ ಟ್ರೋಫಿ ಗೆದ್ದಾಗ, ನಮ್ಮ ಕರ್ನಾಟಕದ್ದೇ ತಂಡ ಗೆದ್ದಿದೆ ಅಂದುಕೊಂಡ್ರು. ಆದ್ರೆ ನನ್ನನ್ನ ಕಾರ್ಯಕ್ರಮಕ್ಕೆ ಕರೆದಾಗ ಓ ಬಿಡಪ್ಪ, ಆರ್‌ಸಿಬಿ ನಮ್ಮ ಟೀಮೇ ಅಲ್ಲ, ಅವರು ನಮ್ಮ ಕರ್ನಾಟಕದವರೇ ಅಲ್ಲ, ನಾನು ಕಾರ್ಯಕ್ರಮಕ್ಕೆ ಬರಲ್ಲ ಅಂತ ಹೇಳಿದ್ದೆ ಎಂದು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹೇಳಿದರು. ಈ ಕುರಿತ ವಿಡಿಯೋ ಇಲ್ಲಿದೆ…