Tag: rc 16

  • ಜಾನ್ವಿ ಕಪೂರ್‌ಗೆ ವಿಶೇಷ ಉಡುಗೊರೆ ನೀಡಿದ ರಾಮ್ ಚರಣ್ ಪತ್ನಿ

    ಜಾನ್ವಿ ಕಪೂರ್‌ಗೆ ವಿಶೇಷ ಉಡುಗೊರೆ ನೀಡಿದ ರಾಮ್ ಚರಣ್ ಪತ್ನಿ

    ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಅವರು ಸದ್ಯ ರಾಮ್ ಚರಣ್‌ಗೆ (Ram Charan) ನಾಯಕಿಯಾಗಿ ಹೊಸ ಪ್ರಾಜೆಕ್ಟ್ನಲ್ಲಿ ನಟಿಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ಹಿನ್ನೆಲೆ ರಾಮ್ ಚರಣ್ ಪತ್ನಿ ಉಪಾಸನಾ (Upasana) ಭೇಟಿ ನೀಡಿ ಜಾನ್ವಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.

    ಸೆಟ್‌ಗೆ ಬ್ರೇಕ್ ಇದ್ದ ಸಂದರ್ಭದಲ್ಲಿ ಉಪಾಸನಾ ಭೇಟಿ ನೀಡಿದ್ದಾರೆ. ಈ ವೇಳೆ, ‘ಅತ್ತಮ್ಮಾ ಕಿಚನ್’ ಕಡೆಯಿಂದ ಬಾಕ್ಸ್ ನೀಡಲಾಗಿದೆ. ರಾಮ್ ಚರಣ್ ತಾಯಿ ಸುರೇಖಾ ತಯಾರಿಸಿದ ರೆಸಿಪಿ ಇದಾಗಿದೆ. ಇದನ್ನು ‘ಅತ್ತಮ್ಮಾ ಕಿಚನ್’ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

     

    View this post on Instagram

     

    A post shared by Athamma`s Kitchen (@athammaskitchen)

    ಇನ್ನೂ ‘ಆರ್ ಸಿ 16’ ಸಿನಿಮಾದಲ್ಲಿ ರಾಮ್ ಚರಣ್, ಜಾನ್ವಿ ಕಪೂರ್, ಶಿವರಾಜ್‌ಕುಮಾರ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಶೂಟಿಂಗ್ ಭರದಿಂದ ನಡೆಯುತ್ತಿದೆ. ಈ ಚಿತ್ರವನ್ನು ಬುಚಿ ಬಾಬು ಸನಾ ನಿರ್ದೇಶನ ಮಾಡುತ್ತಿದ್ದಾರೆ.

  • RC 16: ಚಿತ್ರೀಕರಣದಲ್ಲಿ ಭಾಗಿಯಾದ ರಾಮ್ ಚರಣ್, ಜಾನ್ವಿ ಕಪೂರ್

    RC 16: ಚಿತ್ರೀಕರಣದಲ್ಲಿ ಭಾಗಿಯಾದ ರಾಮ್ ಚರಣ್, ಜಾನ್ವಿ ಕಪೂರ್

    ‘ಆರ್‌ಆರ್‌ಆರ್’ (RRR) ಸಿನಿಮಾದ ಸ್ಟಾರ್‌ ರಾಮ್‌ ಚರಣ್‌ ಹೊಸ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ RC 16 ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದ ನಾಯಕಿ ಜಾನ್ವಿ ಕಪೂರ್ (Janhvi Kapoor) ಜೊತೆಗಿನ ಚಿತ್ರೀಕರಣದ ಫೋಟೋಗಳನ್ನು ರಾಮ್ ಚರಣ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Ram Charan (@alwaysramcharan)

    ರಾಮ್ ಚರಣ್- ಜಾನ್ವಿ ಕಪೂರ್ (Janhvi Kapoor) ನಟನೆಯ ಹೊಸ ಚಿತ್ರಕ್ಕೆ ಅದ್ಧೂರಿಯಾಗಿ ಮುಹೂರ್ತ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ನೆರವೇರಿತ್ತು. ಈ ಇವೆಂಟ್‌ಗೆ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi), ಬೋನಿ ಕಪೂರ್, ಸುಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿ ಚಿತ್ರತಂಡಕ್ಕೆ ಶುಭಕೋರಿದ್ದರು. ಇದನ್ನೂ ಓದಿ:ಅವಳಿ ಮಕ್ಕಳ ತಾಯಿ ಆಗುತ್ತಿದ್ದಾರೆ ನಟಿ ಅಮಲಾ ಪೌಲ್

    ರಾಮ್ ಚರಣ್ (Ram Charan) ನಟನೆಯ ಹೊಸ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಚಿತ್ರೀಕರಣದಲ್ಲಿ ಮೆಗಾಸ್ಟಾರ್ ಪುತ್ರನ ಜೊತೆ ಜಾನ್ವಿ ಮಾತನಾಡುತ್ತಿರುವ ಫೋಟೋಗಳು ಸದ್ದು ಮಾಡುತ್ತಿದೆ. ಇಬ್ಬರು ಜೊತೆಯಿರುವ ಫೋಟೋ ನೋಡಿ ಅಭಿಮಾನಿಗಳು ಖುಷಿಪಡುತ್ತಿದ್ದಾರೆ. ಈ ವೇಳೆ, ಜಾನ್ವಿ ತಂದೆ ಬೋನಿ ಕಪೂರ್ ಕೂಡ ಶೂಟಿಂಗ್ ಸೆಟ್‌ಗೆ ಹಾಜರಿ ಹಾಕಿದ್ದಾರೆ.

    ಅಂದಹಾಗೆ, ರಾಮ್‌ಚರಣ್ ಈ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಬುಚ್ಚಿಬಾಬು ನಿರ್ದೇಶನದ ಇನ್ನು ಹೆಸರಿಡದ ಈ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. ಎ. ಆರ್ ರೆಹಮಾನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಆರ್.ರತ್ನವೇಲು ಛಾಯಾಗ್ರಹಣ, ಆಂಟೋನಿ ರುಬಿನ್ ಸಂಕಲನ ಚಿತ್ರಕ್ಕಿದೆ. ಚಂದ್ರಬೋಸ್, ಆನಂತ ಶ್ರೀರಾಮ್, ಬಾಲಾಜಿ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

    ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.

  • RC 16: ರಾಮ್‌ಚರಣ್, ಶಿವಣ್ಣ ನಟನೆಯ ಚಿತ್ರಕ್ಕೆ ಅದ್ಧೂರಿ ಚಾಲನೆ

    RC 16: ರಾಮ್‌ಚರಣ್, ಶಿವಣ್ಣ ನಟನೆಯ ಚಿತ್ರಕ್ಕೆ ಅದ್ಧೂರಿ ಚಾಲನೆ

    ಟಾಲಿವುಡ್ ನಟ ರಾಮ್‌ಚರಣ್ (Ramcharan), ಶಿವರಾಜ್‌ಕುಮಾರ್ (Shivarajkumar), ಜಾನ್ವಿ ಕಪೂರ್ ನಟನೆಯ ಹೊಸ ಸಿನಿಮಾಗೆ ಇಂದು (ಮಾ.20) ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಮುಹೂರ್ತ ಕಾರ್ಯಕ್ರಮಕ್ಕೆ ರಾಮ್ ಚರಣ್, ಜಾನ್ವಿ, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಇದನ್ನೂ ಓದಿ:‘ಬ್ಯಾಡ್ ನ್ಯೂಸ್’ ಬಗ್ಗೆ ಖುಷಿ ಇದೆ ಅಂತಿದ್ದಾರೆ ತೃಪ್ತಿ ದಿಮ್ರಿ

    ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ (Janhvi Kapoor) ಇದೀಗ ತೆಲುಗಿನತ್ತ ಮುಖ ಮಾಡಿದ್ದಾರೆ. ಜ್ಯೂ.ಎನ್‌ಟಿಆರ್ ಜೊತೆ ಡ್ಯುಯೇಟ್ ಹಾಡಿದ ಮೇಲೆ ರಾಮ್‌ಚರಣ್ ಜೊತೆ ರೊಮ್ಯಾನ್ಸ್ ಮಾಡೋದಕ್ಕೆ ರೆಡಿಯಾಗಿದ್ದಾರೆ. ಚರಣ್ ನಟನೆಯ 16ನೇ ಚಿತ್ರಕ್ಕೆ ಇದೀಗ ಅದ್ಧೂರಿಯಾಗಿ ಮುಹೂರ್ತ ಸಮಾರಂಭ ನಡೆದಿದೆ.

    ಈ ಕಾರ್ಯಕ್ರಮಕ್ಕೆ ರಾಮ್‌ಚರಣ್-ಉಪಾಸನಾ, ಬುಚ್ಚಿಬಾಬು ಜೊತೆ ಡೈರೆಕ್ಟರ್ ಶಂಕರ್, ಎ.ಆರ್ ರೆಹಮಾನ್, ಪುಷ್ಪ ಡೈರೆಕ್ಟರ್ ಸುಕುಮಾರ್, ಮೆಗಾಸ್ಟಾರ್ ಚಿರಂಜೀವಿ, ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

    ಮೊದಲ ಬಾರಿಗೆ ರಾಮ್- ಜಾನ್ವಿ ಕಪೂರ್ ಜೋಡಿಯಾಗಿ ನಟಿಸುತ್ತಿರೋದ್ರಿಂದ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    ಸುಕುಮಾರ್ ಶಿಷ್ಯ ಬುಚ್ಚಿಬಾಬು ಈ ಹಿಂದೆ ‘ಉಪ್ಪೇನಾ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಈ ಬಾರಿ ಡಿಫರೆಂಟ್ ಆಗಿರುವ ಕಥೆಯನ್ನೇ ಮಾಡಿದ್ದಾರೆ. ಚರಣ್‌ಗೂ ಈ ಕಥೆ ಇಷ್ಟವಾಗಿ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ರಿಲೀಸ್ ಆದ್ಮೇಲೆ ಸಿನಿಮಾ ಅದೆಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಮೋಡಿ ಮಾಡುತ್ತೆ ಎಂದು ಕಾದುನೋಡಬೇಕಿದೆ.

  • ಶಿವಣ್ಣ, ರಾಮ್ ಚರಣ್ ನಟನೆಯ ಸಿನಿಮಾಗೆ ಜಾನ್ವಿ ಕಪೂರ್ ನಾಯಕಿ

    ಶಿವಣ್ಣ, ರಾಮ್ ಚರಣ್ ನಟನೆಯ ಸಿನಿಮಾಗೆ ಜಾನ್ವಿ ಕಪೂರ್ ನಾಯಕಿ

    ಬಾಲಿವುಡ್ ನಟಿ ಶ್ರೀದೇವಿ ಕಪೂರ್ (Sridevi Kapoor) ಪುತ್ರಿ ಜಾನ್ವಿ ಕಪೂರ್ ಇದೀಗ ಸೌತ್‌ನತ್ತ ಮುಖ ಮಾಡಿದ್ದಾರೆ. ‘ದೇವರ’ ಜ್ಯೂ.ಎನ್‌ಟಿಆರ್‌ಗೆ (Shivarajkumar) ಹೀರೋಯಿನ್ ಆಗಿ ನಟಿಸಿದ ಬೆನ್ನಲ್ಲೇ ರಾಮ್ ಚರಣ್- ಶಿವಣ್ಣ ಕಾಂಬಿನೇಷನ್ ಸಿನಿಮಾಗೆ ಜಾನ್ವಿ ಕಪೂರ್ ನಾಯಕಿಯಾಗಿದ್ದಾರೆ. ಇದನ್ನೂ ಓದಿ:‘ನನ್ನಮ್ಮ ಸೂಪರ್ ಸ್ಟಾರ್-3’ನಲ್ಲಿ ತನಿಷಾ ಕುಪ್ಪಂಡ

    ಬುಚ್ಚಿಬಾಬು ಸನಾ ನಿರ್ದೇಶನದ ಹೊಸ ಸಿನಿಮಾದಲ್ಲಿ ರಾಮ್ ಚರಣ್ (Ram Charan) ಜೊತೆ ಬಹುಮುಖ್ಯ ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡ ನಟಿಸುತ್ತಿದ್ದಾರೆ. ರಾಮ್ ಚರಣ್ ಜೋಡಿಯಾಗಿ ಬಾಲಿವುಡ್ ಹಾಟ್ ಬ್ಯೂಟಿ ಜಾನ್ವಿ ಕಪೂರ್ ಕಾಣಿಸಿಕೊಳ್ತಾರೆ. ನಟನೆಗೆ ಹೆಚ್ಚು ಪ್ರಾಮುಖ್ಯತೆ ಇರುವ ಭಿನ್ನ ಪಾತ್ರದಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ.

    ಕೆಲ ತಿಂಗಳುಗಳ ಹಿಂದೆ ಬುಚ್ಚಿಬಾಬು ಸನಾ ಅವರು ಬೆಂಗಳೂರಿಗೆ ಆಗಮಿಸಿ ಶಿವಣ್ಣಗೆ ಭೇಟಿಯಾಗಿ ಕಥೆ ಹೇಳಿದ್ದರು. ಶಿವಣ್ಣಗೂ ಕಥೆ ಕೇಳಿ ಥ್ರಿಲ್ ಆಗಿ ಈ ಚಿತ್ರದ ಭಾಗವಾಗಲು ಓಕೆ ಎಂದಿದ್ದಾರೆ. ಸದ್ಯದಲ್ಲೇ ಸಿನಿಮಾ ಶುರುವಾಗಲಿದೆ.

    ರಾಮ್ ಚರಣ್ ಮತ್ತು ಶಿವಣ್ಣ ಸಾಕಷ್ಟು ವರ್ಷಗಳಿಂದ ಪರಿಚಿತರು. ಇಬ್ಬರಿಗೂ ಉತ್ತಮ ಒಡನಾಟವಿದೆ. ಸಿನಿಮಾಗಾಗಿ ಮೊದಲ ಬಾರಿಗೆ ಜೊತೆಯಾಗ್ತಿರೋದ್ರಿಂದ ಶಿವಣ್ಣ- ಚರಣ್ ಕಾಂಬೋ ನೋಡಲು ಫ್ಯಾನ್ಸ್ಗೆ ಕಾಯ್ತಿದ್ದಾರೆ.