Tag: rbi

  • ಇನ್ಮುಂದೆ ನೆಟ್‌ ಇಲ್ಲದಿದ್ದರೂ ಹಣ ವರ್ಗಾವಣೆ ಮಾಡ್ಬೋದು – RBIನಿಂದ ಆಫ್‌ಲೈನ್‌ ಡಿಜಿ ರುಪಿ ಬಿಡುಗಡೆ

    ಇನ್ಮುಂದೆ ನೆಟ್‌ ಇಲ್ಲದಿದ್ದರೂ ಹಣ ವರ್ಗಾವಣೆ ಮಾಡ್ಬೋದು – RBIನಿಂದ ಆಫ್‌ಲೈನ್‌ ಡಿಜಿ ರುಪಿ ಬಿಡುಗಡೆ

    ಇತ್ತೀಚಿನ ದಿನಗಳಲ್ಲಿ ಮೊಬೈಲ್ ಅನ್ನೋದು ಎಷ್ಟು ಮುಖ್ಯವೋ ಅದೇ ರೀತಿ ಇಂಟರ್ನೆಟ್ ಎನ್ನುವುದು ಕೂಡ ತುಂಬಾ ಮುಖ್ಯ. ಪ್ರಸ್ತುತ ದಿನಗಳಲ್ಲಿ ಇಂಟರ್ನೆಟ್ ಇಲ್ಲದೇ ಎಲ್ಲವೂ ಅಸಾಧ್ಯ ಎನ್ನುವಂತಾಗಿದೆ. ಆನ್ಲೈನ್ ಆರ್ಡರ್ ಮಾಡುವುದು, ಹಣ ವರ್ಗಾವಣೆ, ಊಟ, ಕೆಲವು ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳು ಸೇರಿದಂತೆ    ಇನ್ನಿತರವುಗಳನ್ನು ನಾವು ಇಂಟರ್ನೆಟ್ ಮೂಲಕ ಮಾಡುತ್ತೇವೆ. ಅದರಲ್ಲಿ ಮುಖ್ಯವಾಗಿ ಹಣ ವರ್ಗಾವಣೆ. ಆದರೆ ಇದೀಗ ಆರ್‌ಬಿಐ ಇಂಟರ್ನೆಟ್ ಇಲ್ಲದೆ ಹಣ ವರ್ಗಾವಣೆ ಮಾಡುವ ಡಿಜಿ ರುಪಿ  ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಏನಿದು? ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. 

    ಇಂಟರ್ನೆಟ್ ಇಲ್ಲದೆ ಡಿಜಿ ರೂಪಾಯಿ ಹಣ ವರ್ಗಾವಣೆ ಮಾಡಲು ಸಹಾಯ ಮಾಡುತ್ತದೆ. ಇಂಟರ್ನೆಟ್ ಅಥವಾ ದೂರವಾಣಿ ಸಂಪರ್ಕ ಇಲ್ಲದ ಪ್ರದೇಶದಲ್ಲಿ ಈ ಡಿಜಿ ರೂಪಾಯಿ ಹಣ ವರ್ಗಾವಣೆ ಮಾಡಲು ಸಹಾಯಮಾಡುತ್ತದೆ. ಇಂತಹ ಒಂದು ವ್ಯವಸ್ಥೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪರಿಚಯಿಸಿದೆ. ಇದು ದೇಶದ ಡಿಜಿಟಲ್ ಹಣಕಾಸು ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲಾಗಿದೆ. 

    ಇತ್ತೀಚಿಗೆ ಮುಂಬೈನಲ್ಲಿ ನಡೆದ ಫಿನ್ಟೆಕ್ ಫೆಸ್ಟ್ 2025 ರಲ್ಲಿ ಈ ಡಿಜಿ ರುಪಾಯಿ ವ್ಯವಸ್ಥೆಯನ್ನು ಘೋಷಿಸಲಾಯಿತು. ಮೂಲಕ ಭಾರತ ಹಾಗೂ ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವ ಗುರಿಯನ್ನು ಇದು ಹೊಂದಿದೆ.

    ಏನಿದು ಡಿಜಿ ರೂಪಾಯಿ?

    ಡಿಜಿ ರೂಪಾಯಿ ಎನ್ನುವುದು ಭಾರತೀಯ ರಿಸರ್ವ್ ಬ್ಯಾಂಕಿನ ಕರೆನ್ಸಿ ಆಗಿದೆ. ಭೌತಿಕ ಹಣದ ಡಿಜಿಟಲ್ ರೂಪ ಇದಾಗಿದೆ. ಈ ಡಿಜಿಟಲ್ ರೂಪಾಯಿಯನ್ನು ಆರ್‌ಬಿಐ ಬಿಡುಗಡೆ ಮಾಡಿದ್ದು, ಭೌತಿಕ ಹಣಕ್ಕೆ ಇರುವ ಮೌಲ್ಯ ಈ ಡಿಜಿಟಲ್ ರೂಪಾಯಿಗೆ ಇರಲಿದೆ. ಈ ಹಣ ಬ್ಯಾಂಕುಗಳ ವ್ಯಾಲೆಟ್ ನಲ್ಲಿ ಇರಲಿದೆ. ಯುಪಿಐ ವ್ಯವಸ್ಥೆಯಲ್ಲಿ ಬ್ಯಾಂಕಿನಿಂದ ಬ್ಯಾಂಕಿಗೆ ಹಣ ವರ್ಗಾವಣೆಯಾಗುತ್ತದೆ. ಆದರೆ ಡಿಜಿಟಲ್ ರೂಪಾಯಿ ಮೂಲಕ ಹಣ ವರ್ಗಾವಣೆ ಮಾಡುವಾಗ ಬ್ಯಾಂಕ್ ಖಾತೆಯ ಅಗತ್ಯವಿರುವುದಿಲ್ಲ. ಇದು ಯುಪಿಐ ಕಾರ್ಯನಿರ್ವಹಿಸುವ ವಿಧಾನಕ್ಕಿಂತ ವಿಭಿನ್ನವಾಗಿ ಕೆಲಸ ನಿರ್ವಹಿಸುತ್ತದೆ. ಡಿಜಿಟಲ್ ರೂಪಾಯಿ  ಇರುವ ವ್ಯಾಲೆಟ್ ಗಳು ಯುಪಿಐ ಶುಗರ್ ಗಳನ್ನ ಸ್ಕ್ಯಾನ್ ಮಾಡಿ ಕೆಲಸ ನಿರ್ವಹಿಸುತ್ತದೆ.

    ಡಿಜಿಟಲ್ ರೂಪಾಯಿ ಹೇಗೆ ಕಾರ್ಯನಿರ್ವಹಿಸುತ್ತದೆ?

    ಈ ಡಿಜಿಟಲ್ ರೂಪಾಯಿಯು ಟೆಲಿಕಾಂ ನೆರವಿನ ಆಫ್ಲೈನ್ ಪೇಮೆಂಟ್ ಮತ್ತು NFC (Near Field communication) ಆಧಾರಿತ ಪೇಮೆಂಟ್ ವ್ಯವಸ್ಥೆ ಮೂಲಕ ಕಾರ್ಯನಿರ್ವಹಿಸುತ್ತದೆ. ಟೆಲಿಕಾಂ ನೆರವಿನ ಪೇಮೆಂಟ್ ವ್ಯವಸ್ಥೆಗೆ ಕನಿಷ್ಠ ನೆಟ್ವರ್ಕ್ ಸಿಗ್ನಲ್ ಇದ್ದರೆ ಕಾರ್ಯನಿರ್ವಹಿಸುತ್ತದೆ. ಎನ್ ಎಫ್ ಸಿ ವ್ಯವಸ್ಥೆಯು ಇಂಟರ್ನೆಟ್ ಹಾಗೂ ಟೆಲಿಕಾಂ ಸಿಗ್ನಲ್ ಇಲ್ಲದೆಯೂ ಕಾರ್ಯನಿರ್ವಹಿಸುತ್ತದೆ. 

    ಇದನ್ನ ಬಳಸೋದು ಹೇಗೆ? 

    ಹಣ ವರ್ಗಾಯಿಸುವವರು ತಮ್ಮ ಮೊಬೈಲನ್ನು ಟ್ಯಾಪ್ ಮಾಡುವ ಮೂಲಕ ಹಣ ವರ್ಗಾವಣೆಯಾಗುತ್ತದೆ. ಈ ಮೂಲಕ ಹಣ ಯುಪಿಐ ರೀತಿ ವ್ಯಕ್ತಿಯಿಂದ ವ್ಯಾಪಾರಗಳಿಗೆ ಹಣ ವರ್ಗಾವಣೆ ಆಗುತ್ತದೆ. 

    ಸದ್ಯ ಡಿಜಿಟಲ್ ರೂಪಾಯಿ ವ್ಯಾಲೆಟ್ ನೀಡುತ್ತಿರುವ ಬ್ಯಾಂಕುಗಳು: 

    1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 
    2. ಐಸಿಐಸಿಐ ಬ್ಯಾಂಕ್ 
    3. ಐಡಿಎಫ್‍ಸಿ ಫಸ್ಟ್ ಬ್ಯಾಂಕ್ 
    4. ಯೆಸ್ ಬ್ಯಾಂಕ್ 
    5. ಎಚ್ ಡಿ ಎಫ್ ಸಿ ಬ್ಯಾಂಕ್ 
    6. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 
    7. ಬ್ಯಾಂಕ್ ಆಫ್ ಬರೋಡಾ 
    8. ಕೋಟಕ್ ಮಹೀಂದ್ರಾ ಬ್ಯಾಂಕ್ 
    9. ಕೆನರಾ ಬ್ಯಾಂಕ್ 
    10. ಆಕ್ಸಿಸ್ ಬ್ಯಾಂಕ್ 
    11. ಇಂಡಸ್ ಇಂಡ್ ಬ್ಯಾಂಕ್ 
    12. ಪಂಜಾಬ್ ನ್ಯಾಷನಲ್ ಬ್ಯಾಂಕ್ 
    13. ಫೆಡರಲ್ ಬ್ಯಾಂಕ್ 
    14. ಕರ್ನಾಟಕ ಬ್ಯಾಂಕ್ 
    15. ಇಂಡಿಯನ್ ಬ್ಯಾಂಕ್ 

    ಡಿಜಿಟಲ್ ರೂಪಾಯಿ ವ್ಯಾಲೆಟ್ ನೀಡುತ್ತಿರುವ ಬ್ಯಾಂಕುಗಳ ಹೆಸರುಗಳೊಂದಿಗೆ ಆಪ್ ಗಳು ಲಭ್ಯವಿದ್ದು, ಬಳಕೆದಾರರು ಈ ಅಪ್ಲಿಕೇಶನ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಆಪ್ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಬಳಿಕ ಡಿಜಿಟಲ್ ರೂಪಾಯಿ ಮೂಲಕ ಹಣ ವರ್ಗಾಯಿಸುವವರು ಆಪ್ ಮೂಲಕ ವ್ಯಾಲೆಟ್ ಗಳನ್ನು ಬಳಸಬಹುದು. ಕನಿಷ್ಠ ಬ್ಯಾಲೆನ್ಸ್, ಬ್ಯಾಲೆನ್ಸ್ಗಳ ಮೇಲೆ ಪಾವತಿಸಬೇಕಾದ ಬಡ್ಡಿ ಹಾಗೂ ಮೊಬೈಲ್ ಕಳೆದುಹೋದರೂ ಕೂಡ ಈ ಬ್ಯಾಲೆಟ್ ಗಳನ್ನು ಮರಳಿ ಪಡೆಯಬಹುದು.

    ಪ್ರಯೋಜನಗಳೇನು? 

    ಈ ಡಿಜಿಟಲ್ ರುಪಾಯಿ ಮೂಲಕ ನೆಟ್ವರ್ಕ್ ಸಮಸ್ಯೆಗಳಿಂದ ಆಗುವ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಅಥವಾ ಕಡಿಮೆ ನೆಟ್ವರ್ಕ್ ಇರುವ ಸಮಸ್ಯೆಗಳಲ್ಲಿ ಹಣ ವರ್ಗಾವಣೆಗೆ ಇದು ಸಹಾಯ ಮಾಡುತ್ತದೆ. ಸಂಪರ್ಕವಿಲ್ಲದಿದ್ದರೂ ಕೂಡ ಹಣ ವರ್ಗಾವಣೆ ಮಾಡಬಹುದು. ಇದು ದಿನನಿತ್ಯದ ಚಟುವಟಿಕೆಗಳಿಗೆ ಹೆಚ್ಚು ಅನುಕೂಲವಾಗಲಿದ್ದು, ವೈಯಕ್ತಿಕ ಹಣ ವರ್ಗಾವಣೆಯಿಂದ ಹಿಡಿದು ವ್ಯಾಪಾರ ವಹಿವಾಟುಗಳಿಗೂ ಇದನ್ನು ಬಳಸಬಹುದು.

  • 9 ಲಕ್ಷ ಕೋಟಿ ದಾಟಿದ RBI ಚಿನ್ನದ ಮೀಸಲು ಸಂಗ್ರಹ

    9 ಲಕ್ಷ ಕೋಟಿ ದಾಟಿದ RBI ಚಿನ್ನದ ಮೀಸಲು ಸಂಗ್ರಹ

    ಮುಂಬೈ: ಈ ತಿಂಗಳ (ಅಕ್ಟೋಬರ್) 10ರ ವೇಳೆಗೆ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹದ ಪ್ರಮಾಣವು 19,153 ಕೋಟಿ ರೂ. ಕಡಿಮೆ ಆಗಿದೆ. ಇದೇ ಅವಧಿಯಲ್ಲಿ ಆರ್‌ಬಿಐ (RBI) ಚಿನ್ನದ ಮೀಸಲು ಸಂಗ್ರಹದ ಪ್ರಮಾಣ 9 ಲಕ್ಷ ಕೋಟಿ ರೂ. ದಾಟಿದೆ ಎಂದು ಆರ್‌ಬಿಐ ತಿಳಿಸಿದೆ.

    ಈ ಮೂಲಕ ಒಟ್ಟು ಚಿನ್ನದ ಮೀಸಲು ಸಂಗ್ರಹ (RBI Gold Reserves) 61.41 ಲಕ್ಷ ಕೋಟಿ ರೂ. ಅಷ್ಟಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (RBI) ತಿಳಿಸಿದೆ. ಇದನ್ನೂ ಓದಿ: RBI ಉಪ ಗವರ್ನರ್ ಆಗಿ ಶಿರೀಶ್ ಚಂದ್ರ ಮುರ್ಮು ನೇಮಕ

    ಆರ್‌ಬಿಐ ಬಳಿ ಇರುವ ವಿದೇಶಿ ಕರೆನ್ಸಿಗಳ ಸಂಪತ್ತಿನ ಮೌಲ್ಯ 49,333 ಕೋಟಿ ಕಡಿಮೆಯಾಗಿದ್ದು, 50.35 ಲಕ್ಷ ಕೋಟಿಯಾಗಿದೆ. ಚಿನ್ನದ ಮೀಸಲು ಸಂಗ್ರಹ 31,642 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಇದನ್ನೂ ಓದಿ: 2,000 ರೂ. ಮುಖಬೆಲೆಯ 7,581 ಕೋಟಿ ಮೌಲ್ಯದ ನೋಟುಗಳು ಜನರ ಬಳಿಯಿದೆ: RBI

  • RBI ಉಪ ಗವರ್ನರ್ ಆಗಿ ಶಿರೀಶ್ ಚಂದ್ರ ಮುರ್ಮು ನೇಮಕ

    RBI ಉಪ ಗವರ್ನರ್ ಆಗಿ ಶಿರೀಶ್ ಚಂದ್ರ ಮುರ್ಮು ನೇಮಕ

    ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌‌ನ (RBI) ನೂತನ ಉಪಗವರ್ನರ್ (Deputy Governer) ಆಗಿ ಮೂರು ವರ್ಷಗಳ ಅವಧಿಗೆ ಶಿರೀಶ್ ಚಂದ್ರ ಮುರ್ಮು (Shirish Chandra Murmu) ಅವರನ್ನು ನೇಮಕ ಮಾಡಲಾಗಿದೆ.

    ಸದ್ಯ ಆರ್‌ಬಿಐ ಉಪಗವರ್ನರ್ ಆಗಿರುವ ರಾಜೇಶ್ವರ್ ರಾವ್ ಅವರ ಅವಧಿ ಅ.8ರಂದು ಕೊನೆಗೊಳ್ಳಲಿದ್ದು, ಅದಾದ ಬಳಿಕ ಅ.9ರಿಂದ ನೂತನ ಉಪಗವರ್ನರ್ ಆಗಿ ಶಿರೀಶ್ ಚಂದ್ರ ಮುರ್ಮು ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಸ್ತುತ ಆರ್‌ಬಿಐನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇದನ್ನೂ ಓದಿ: 7 ವರ್ಷದ ಬಾಲಕನ ಮೇಲೆ ಶಿಕ್ಷಕಿಯಿಂದ ಇದೆಂಥಾ ಕ್ರೌರ್ಯ – ಹೋಂ ವರ್ಕ್‌ ಮಾಡದಿದ್ದಕ್ಕೆ ತಲೆ ಕೆಳಗಾಗಿ ನೇತುಹಾಕಿ ಹಿಂಸೆ

    ಆರ್‌ಬಿಐ ನಾಲ್ಕು ಉಪಗವರ್ನರ್‌ಗಳನ್ನು ಹೊಂದಿದ್ದು, ಪ್ರತಿಯೊಬ್ಬರೂ ಹಣಕಾಸು ನೀತಿ, ಬ್ಯಾಂಕಿಂಗ್ ಮೇಲ್ವಿಚಾರಣೆ ಮತ್ತು ಹಣಕಾಸು ಮಾರುಕಟ್ಟೆಗಳ ನಿಯಂತ್ರಣದಂತಹ ನಿರ್ಣಾಯಕ ಕ್ಷೇತ್ರಗಳ ಬಗ್ಗೆ ಕಾರ್ಯನಿರ್ವಹಿಸುತ್ತಾರೆ. ಈ ಪೈಕಿ ಶಿರೀಶ್ ಚಂದ್ರ ಮುರ್ಮು ಅವರು ಒಂದು ಅಥವಾ ಹೆಚ್ಚಿನ ಖಾತೆಗಳ ಉಸ್ತುವಾರಿ ವಹಿಸಿಕೊಳ್ಳುವ ನಿರೀಕ್ಷೆಯಿದ್ದು, ಈವರೆಗೂ ಖಾತೆಗಳ ಉಸ್ತುವಾರಿ ಬಗ್ಗೆ ನಿಖರವಾದ ಮಾಹಿತಿ ಅಧಿಕೃತವಾಗಿ ಘೋಷಣೆಯಾಗಿಲ್ಲ. ಈ ಕುರಿತು ಸಂಪುಟ ನೇಮಕಾತಿ ಸಮಿತಿ ಅನುಮೋದನೆ ನೀಡಿದ್ದು, ಆರ್‌ಬಿಐ ಉಪಗವರ್ನರ್ ಆಗಿ ನೇಮಿಸಲಾಗಿದೆ.

  • IMF ಕಾರ್ಯನಿರ್ವಾಹಕ ನಿರ್ದೇಶಕರಾಗಿ RBIನ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ನೇಮಕ

    IMF ಕಾರ್ಯನಿರ್ವಾಹಕ ನಿರ್ದೇಶಕರಾಗಿ RBIನ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ನೇಮಕ

    ನವದೆಹಲಿ: ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ಕಾರ್ಯನಿರ್ವಾಹಕ ನಿರ್ದೇಶಕರಾಗಿ RBIನ ಮಾಜಿ ಗವರ್ನರ್ ಉರ್ಜಿತ್ ಪಟೇಲ್ (Urjit Patel) ನೇಮಕರಾಗಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ (PM Modi) ನೇತೃತ್ವದಲ್ಲಿ ಗುರುವಾರ (ಆ.28) ನಡೆದ ನೇಮಕಾತಿ ಸಭೆಯಲ್ಲಿ ಉರ್ಜಿತ್ ಪಟೇಲ್ ಅವರ ಹೆಸರನ್ನು ಅನುಮೋದಿಸಲಾಗಿತ್ತು. ಅದರಂತೆ ಮೂರು ವರ್ಷಗಳ ಅವಧಿಗೆ ಆರ್‌ಬಿಐನ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ಅವರು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ (ED) ನೇಮಕಗೊಂಡಿದ್ದಾರೆ.ಇದನ್ನೂ ಓದಿ: ಹೆಲ್ಪರ್‌ಗೆ ಬಸ್ ‌ಚಾಲನೆ ಮಾಡಲು ಕೊಟ್ಟು ಸ್ವಲ್ಪ ಹೊತ್ತಲ್ಲೇ ಚಾಲಕ ಸಾವು

    2018ರಲ್ಲಿ ಆರ್‌ಬಿಐನ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದ ಏಳು ವರ್ಷಗಳ ನಂತರ ಇದೀಗ ಮತ್ತೆ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.

    ಈ ಮೊದಲು ಐಎಂಎಫ್ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಕೃಷ್ಣಮೂರ್ತಿ ಸುಬ್ರಮಣಿಯನ್ (Krishnamurthy Subramanian) ಅವರನ್ನು ಐಎಂಎಫ್ ಶಿಷ್ಟಾಚಾರಗಳ ಉಲ್ಲಂಘನೆ ಮಾಡಿದ್ದರು ಎಂಬ ಆರೋಪದ ಮೇಲೆ ವಜಾಗೊಳಿಸಲಾಗಿತ್ತು. ಅದಾದ ನಂತರ ಏ.30ರಿಂದ ಐಎಂಎಫ್ ಇಡಿ ಹುದ್ದೆ ಖಾಲಿಯಾಗಿತ್ತು.ಇದನ್ನೂ ಓದಿ: ವಿಷ್ಣು ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು?

  • ಸುಡುಗಾಡಿಗೆ ಹೋಗಿ ತೆಂಗಿನಕಾಯಿ ಒಡೆದರೂ GST ಅನ್ವಯಿಸುತ್ತೆ: ಸಂತೋಷ್ ಲಾಡ್ ಲೇವಡಿ

    ಸುಡುಗಾಡಿಗೆ ಹೋಗಿ ತೆಂಗಿನಕಾಯಿ ಒಡೆದರೂ GST ಅನ್ವಯಿಸುತ್ತೆ: ಸಂತೋಷ್ ಲಾಡ್ ಲೇವಡಿ

    ಚಿತ್ರದುರ್ಗ: ಸುಡುಗಾಡಿಗೆ ಹೋಗಿ ತೆಂಗಿನಕಾಯಿ ಒಡೆದರೂ GST ಅನ್ವಯಿಸುತ್ತೆ ಎಂದು ಕಾರ್ಮಿಕ ಇಲಾಖೆ ಸಂತೋಷ್ ಲಾಡ್ (Santosh Lad) ಕಿಡಿಕಾರಿದ್ದಾರೆ.

    ಚಿತ್ರದುರ್ಗದಲ್ಲಿ (Chitradurg) ಗ್ರಾಹಕರು ಸಣ್ಣ ವ್ಯಾಪಾರ ವಹಿವಾಟಿಗೆ ಬಳಸಿದ ಗೂಗಲ್ ಪೇ ಹಾಗೂ ಫೋನ್ ಪೇ ಆಧರಿಸಿ, ಜಿಎಸ್‌ಟಿ ಕಟ್ಟುವಂತಿರುವ ನಿಯಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗ ಹಾಲು, ಮೊಸರು, ಅರಶಿಣ ಸೇರಿದಂತೆ ಎಲ್ಲದರ ಮೇಲೂ ಜಿಎಸ್‌ಟಿ ಇದೆ. ಶೇ. 60% ನಿಂದ 70% ಜನರು ಜಿಎಸ್‌ಟಿ ಭರಿಸಬೇಕಾಗಿದೆ. ಈ ಜಿಎಸ್‌ಟಿಯಿಂದ ದೇಶದಲ್ಲಿ ಸಾಹುಕಾರರಿಗೆ ಅನುಕೂಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌ಗೆ ಜೀವ ಬೆದರಿಕೆ – ದೂರು ದಾಖಲು

    ಅಲ್ದೇ ಸುಮಾರು ಹದಿನಾರುವರೆ ಲಕ್ಷ ಕೋಟಿ ರೂ. ಮಾಫಿ ಆಗಿದೆ. ಇದರಿಂದ ರೈತರು, ಬಡವರು ಹಾಗು ಮಧ್ಯಮ ವರ್ಗಕ್ಕೆ ಯಾವ್ದೇ ಅನುಕೂಲವಾಗಿಲ್ಲ. ಈ ಬಗ್ಗೆ ಜನರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: Uttara Kannada | ದಟ್ಟ ಅರಣ್ಯದ ಗುಹೆಯಲ್ಲಿ ಚಿಕ್ಕ ಮಕ್ಕಳೊಂದಿಗೆ ವಾಸ – ರಷ್ಯಾ ಮೂಲದ ವಿದೇಶಿ ಮಹಿಳೆಯ ರಕ್ಷಣೆ

    ಹಾಗೆಯೇ ಯಾವ ಕ್ಯಾಶ್ ಲೆಸ್? ಕೌಂಟರ್ ಫೇಕ್ ನೋಟ್ಸ್ ಪತ್ತೆ ಆಗ್ತಿದ್ದು, ಸುಮಾರು 26,000 ಕೋಟಿಯಷ್ಟು 2 ಸಾವಿರರ ನೋಟನ್ನು ಆರ್‌ಬಿಐ ಪತ್ತೆ ಹಚ್ಚಿದೆ. 1 ಲಕ್ಷ 14 ಸಾವಿರ ಕೋಟಿಯಷ್ಟು 500 ರೂ. ಮುಖಬೆಲೆಯ ನೋಟು ಫೇಕ್ ಕರೆನ್ಸಿ ಸಿಗ್ತಿದೆ. ಆದರೆ ಕೇಂದ್ರ ಸರ್ಕಾರ ಜನಕ್ಕೆ ಸುಳ್ಳು ಹೇಳಿ ಪಿಕ್ಚರ್ ನಡೆಸಿಕೊಂಡು ಹೋಗಿದ್ದಾರೆಂದು ಕೇಂದ್ರ ಸರ್ಕಾರದ ವಿರುದ್ಧ ಸಂತೋಷ್ ಲಾಡ್ ಗುಡುಗಿದ್ದಾರೆ.  ಇದನ್ನೂ ಓದಿ: ದುಪ್ಪಟ್ಟು ಹಣ ವಸೂಲಿ – ಒಂದೇ ವಾರದಲ್ಲಿ ಸಾವಿರಕ್ಕೂ ಹೆಚ್ಚು ಆಟೋ ಸೀಜ್

  • ಮೊದಲ ಬಾರಿಗೆ ಆರ್‌ಬಿಐ `ಚಿನ್ನದ ಖಜಾನೆ’ ಅನಾವರಣ

    ಮೊದಲ ಬಾರಿಗೆ ಆರ್‌ಬಿಐ `ಚಿನ್ನದ ಖಜಾನೆ’ ಅನಾವರಣ

    – ಡಾಕ್ಯುಮೆಂಟರಿ ಮೂಲಕ ಅಪರೂಪದ ದೃಶ್ಯಗಳ ಪ್ರಸಾರ
    – ಕೋಟ್ಯಂತರ ಬೆಲೆಯ ಚಿನ್ನದ ಗಟ್ಟಿ, ಸಂಗ್ರಹಗಾರದ ಆಳ-ಅಗಲ ಬಹಿರಂಗ
    – ಆರ್‌ಬಿಐಗೆ 90 ವರ್ಷ ತುಂಬುತ್ತಲೇ ಈ ಸಾಕ್ಷ್ಯಚಿತ್ರ ರಿಲೀಸ್

    ಮುಂಬೈ: ಮೊದಲ ಬಾರಿಗೆ ಭಾರತದ ಕೇಂದ್ರೀಯ ಬ್ಯಾಂಕ್ ಆರ್‌ಬಿಐ (RBI) ಸಾಕ್ಷ್ಯಚಿತ್ರವೊಂದನ್ನು ಹೊರತಂದಿದೆ. ಈ ಮೂಲಕ ತನ್ನ ಚಿನ್ನದ ಖಜಾನೆಯೊಂದನ್ನು ಅನಾವರಣಗೊಳಿಸಿದೆ.

    ಇಲ್ಲಿಯವರೆಗೆ ಸಾರ್ವಜನಿಕರಿಗೆ ಆರ್‌ಬಿಐ ದೇಶದ ಸಂಪತ್ತನ್ನು ನಗದು ರೂಪದಲ್ಲಿ ಮಾತ್ರವಲ್ಲದೆ ಚಿನ್ನದ ರೂಪದಲ್ಲೂ ಇಟ್ಟುಕೊಂಡಿರುತ್ತದೆ ಎಂಬುದಷ್ಟೇ ತಿಳಿದಿತ್ತು. ಆದರೆ ಇದೇ ಮೊದಲ ಬಾರಿಗೆ ಸಾಕ್ಷ್ಯಚಿತ್ರವೊಂದರ (Documentry) ಮೂಲಕ ಆರ್‌ಬಿಐನ ಚಿನ್ನ ಸಂಗ್ರಹಗಾರದ ಆಳ-ಅಗಲ ಬಹಿರಂಗಗೊಳಿಸಿದೆ.ಇದನ್ನೂ ಓದಿ: ಕುಕ್ಕೆಯಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದ ಅಣ್ಣಾಮಲೈ

    ಓಟಿಟಿ ವೇದಿಕೆಯಾದ ಜಿಯೋ ಹಾಟ್‌ಸ್ಟಾರ್‌ನಲ್ಲಿ (Jio Hotstar) 5 ಭಾಗಗಳಲ್ಲಿ ಪ್ರಸಾರವಾಗುತ್ತಿರುವ `ಆರ್‌ಬಿಐ ಅನ್‌ಲಾಕ್ಡ್‌: ಬಿಯಾಂಡ್ ದ ರುಪಿ’ (RBI Unlocked: Beyond the Rupee) ಎಂಬ ಡಾಕ್ಯುಮೆಂಟರಿಯ ಮೂಲಕ ಆರ್‌ಬಿಐ ಬಳಿ ಇರುವ ಅಗಾಧ ಸಂಪತ್ತಿನ ಅನಾವರಣ ಮಾಡಲಾಗಿದೆ. ಸದ್ಯ 4 ಭಾಗಗಳು ರಿಲೀಸ್ ಆಗಿದ್ದು, ಇನ್ನೂ ಒಂದು ಭಾಗ ರಿಲೀಸ್ ಆಗಬೇಕಷ್ಟೆ. ಆರ್‌ಬಿಐ ಸ್ಥಾಪನೆಯಾಗಿ 90 ವರ್ಷ ತುಂಬಿರುವ ಹೊತ್ತಿನಲ್ಲೇ ಈ ಡಾಕ್ಯುಮೆಂಟರಿ ಹೊರಬಂದಿದೆ.

    ಸಾಕ್ಷ್ಯಚಿತ್ರದಲ್ಲೇನಿದೆ?
    ಚಾಕ್‌ಬೋರ್ಡ್ ಎಂಟರ್‌ಟೇನ್‌ಮೆಂಟ್ (Chalkboard Entertainment) ನಿರ್ಮಿಸಿರುವ ಈ ಡಾಕ್ಯುಮೆಂಟರಿಯಲ್ಲಿ, ಕಳೆದ 90 ವರ್ಷಗಳಲ್ಲಿ ಆರ್‌ಬಿಐನ ಕಾರ್ಯವೈಖರಿಯನ್ನು ವಿವರಿಸಲಾಗಿದೆ. ತಲಾ 12.5 ಕೆ.ಜಿ. ತೂಗುವ ಚಿನ್ನದ ಗಟ್ಟಿಗಳ ಅಟ್ಟಿಯನ್ನು ಬಿಗಿಭದ್ರತೆಯಲ್ಲಿ ಇರಿಸಿರುವುದನ್ನು ತೋರಿಸಲಾಗಿದೆ. ಇವುಗಳ ಮೌಲ್ಯ ಕೋಟಿಯಷ್ಟಿದ್ದು, ಭಾರತದಲ್ಲಿ ಒಟ್ಟು 870 ಟನ್ ಚಿನ್ನದ ಸಂಗ್ರಹವಿದೆ ಎಂಬುದು ಬಹಿರಂಗಪಡಿಸಿದೆ.

    1991ರ ಬಳಿಕ ವಿದೇಶಿ ವ್ಯಾಪಾರ ಸಮತೋಲನವನ್ನು ಕಾಯ್ದುಕೊಳ್ಳಲು ದೇಶದ ಚಿನ್ನವನ್ನು ವಿದೇಶಗಳಿಗೆ ನೀಡಬೇಕಾಗಿತ್ತು. ಇದರ ಹೊರತಾಗಿಯೂ ಆರ್‌ಬಿಐ ತನ್ನ ಚಿನ್ನದ ಸಂಗ್ರಹ ಕುಗ್ಗಲು ಬಿಟ್ಟಿಲ್ಲ. ಇತ್ತೀಚಿನ ವರದಿ ಪ್ರಕಾರ, ಭಾರತದಲ್ಲಿ 7.2 ಲಕ್ಷ ಕೋಟಿ ರೂ. ಮೌಲ್ಯದ ಸ್ವರ್ಣ ಸಂಗ್ರಹವಿದೆ. ಈ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು, `ದೇಶ ಹಾಗೂ ಆರ್ಥಿಕತೆ ಏರಿಳಿತಗಳನ್ನು ಕಾಣುತ್ತಿರುತ್ತವೆ. ಆದರೆ ಚಿನ್ನ ಯಾವಾಗಲೂ ತನ್ನ ಮೌಲ್ಯವನ್ನು ಕಾಯ್ದುಕೊಳ್ಳುತ್ತದೆ’ ಎಂದು ಹೇಳಿದ್ದಾರೆ.

    ಈ ಡಾಕ್ಯುಮೆಂಟರಿ ಮೂಲಕ, ತನ್ನ ಕಾರ್ಯನಿರ್ವಹಣೆ ಹಾಗೂ ಭದ್ರತೆಯನ್ನು ಅನಾವರಣಗೊಳಿಸುವ ಮೂಲಕ ಜನರಲ್ಲಿ ಅರಿವು ನಂಬಿಕೆ ಮೂಡಿಸುವುದು ಆರ್‌ಬಿಐನ ಮುಖ್ಯ ಉದ್ದೇಶವಾಗಿದೆ.ಇದನ್ನೂ ಓದಿ: ಕಬಿನಿಯಿಂದ ನೀರು ಬಿಡುಗಡೆ – ಕಪಿಲಾ ನದಿ ಉಕ್ಕಿ ಭತ್ತದ ಬೆಳೆ ಮುಳುಗಡೆ

  • ಸತತ 3ನೇ ಬಾರಿ ರೆಪೋ ದರ ಇಳಿಕೆ – ಗೃಹ ಸಾಲ, ಇಎಂಐ ಸೌಲಭ್ಯದಾರರಿಗೆ ಗುಡ್‌ನ್ಯೂಸ್‌

    ಸತತ 3ನೇ ಬಾರಿ ರೆಪೋ ದರ ಇಳಿಕೆ – ಗೃಹ ಸಾಲ, ಇಎಂಐ ಸೌಲಭ್ಯದಾರರಿಗೆ ಗುಡ್‌ನ್ಯೂಸ್‌

    ನವದೆಹಲಿ: ದೇಶದ ಜಿಡಿಪಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸತತ 3ನೇ ಬಾರಿಗೆ ರೆಪೋ ದರ (Repo Rate) ಕಡಿತಗೊಳಿಸಿದೆ. ನಿರೀಕ್ಷೆಗೂ ಮೀರಿ 50 ಬೇಸಿಸ್ ಪಾಯಿಂಟ್‌ ಕಡಿತಗೊಳಿಸಿದ್ದು ರೆಪೋ ಬಡ್ಡಿ ದರ ಶೇ.6 ರಿಂದ ಶೇ.5.50ಕ್ಕೆ ಇಳಿಕೆಯಾಗಿದೆ.

    ಆರ್‌ಬಿಐನ ಹಣಕಾಸು ನೀತಿ ಸಮಿತಿಯು (MPC) ಸಭೆಯ ಬಳಿಕ 50 ಮೂಲಾಂಶದಷ್ಟು (ಬೇಸಿಸ್‌ ಪಾಯಿಂಟ್‌) ರೆಪೋ ದರ ಕಡಿಮೆ ಮಾಡಲು ನಿರ್ಧರಿಸಿರುವುದಾಗಿ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.

    ಇದರಿಂದ ಸಾಲ (Loan) ಮತ್ತು ಇಎಂಐಗಳ (EMI) ಬಡ್ಡಿ ದರವೂ ಇಳಿಕೆಯಾಗಲಿದೆ. ಜೊತೆಗೆ ಹೊಸ ಸಾಲಗಾರರಿಗೆ ಗೃಹ ಸಾಲಗಳು, ವಾಹನದ ಮೇಲಿನ ಸಾಲಗಳು ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ. ಆಟೊ ಮೋಬೈಲ್, ಕಾರ್ಪೊರೇಟ್ ಸಾಲಗಳ ಮೇಲಿನ ಮರುಪಾವತಿ ಕಂತುಗಳಲ್ಲಿಯೂ ಇಳಿಕೆಯಾಗುವ ನಿರೀಕ್ಷೆ ಇದೆ.

    ರೆಪೋ ದರದಲ್ಲಿ ಶೇ 0.25ರಷ್ಟು ಇಳಿಕೆ ಆಗಬಹುದೆಂದು ತಜ್ಞರು ನಿರೀಕ್ಷಿಸಿದ್ದರು. ಆದ್ರೆ ಆರ್‌ಸಿಬಿ ನಿರೀಕ್ಷೆಗೂ ಮೀರಿ ಇಳಿಕೆ ಮಾಡಿದೆ. ಜಿಡಿಪಿಯು 4 ವರ್ಷದ ಕನಿಷ್ಠ ಮಟ್ಟ ಶೇ 6.5ಕ್ಕೆ ಕುಸಿದಿತ್ತು. ಹೀಗಾಗಿ ಜಿಡಿಪಿ ಉತ್ತೇಜನಕ್ಕೆ ಕ್ರಮ ಕೈಗೊಳ್ಳುವ ಭಾಗವಾಗಿ ರೆಪೋ ದರ ಕಡಿತಗೊಳಿಸಿದೆ. ಇದು ಕಳೆದ ಮೂರು ವರ್ಷಗಳಲ್ಲಿ ಹೆಚ್ಚಿನ ಇಳಿಕೆ ಕೂಡ ಆಗಿದೆ ಎಂದು ತಿಳಿದುಬಂದಿದೆ. 2022ರ ಆಗಸ್ಟ್ 5 ರಂದು ರೆಪೋ ದರವು ಶೇ 5.40ರಷ್ಟಿತ್ತು.

    ಈ ವರ್ಷದ ಫೆಬ್ರವರಿಯಿಂದ ಆರ್‌ಬಿಐ ರೆಪೋ ದರದಲ್ಲಿ 100 ಮೂಲಾಂಶದಷ್ಟು ಕಡಿತ ಮಾಡಿದೆ. ಏಪ್ರಿಲ್‌ನಲ್ಲಿ 25 ಬೇಸಿಸ್‌ ಪಾಯಿಂಟ್‌ ಕಡಿತಗೊಳಿಸಲಾಗಿತ್ತು. ಆಗ ರೆಪೋ ದರ ಶೇ. 6ಕ್ಕೆ ಇಳಿದಿತ್ತು.

    ರೆಪೋ ರೇಟ್ ಎಂದರೇನು?
    ವಾಣಿಜ್ಯ ಬ್ಯಾಂಕ್‌ಗಳ ರಿಸರ್ವ್ ಬ್ಯಾಂಕ್‍ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ದರ ಎನ್ನುತ್ತಾರೆ. ರೆಪೋ ದರ ಕಡಿಮೆಯಾದರೆ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದು. ಬ್ಯಾಂಕ್‍ಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತಿರುತ್ತವೆ. ರೆಪೋ ರೇಟ್‌ ಜಾಸ್ತಿ ಇದ್ದರೆ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡುತ್ತದೆ. ಇದರಿಂದ ವಾಹನ ಸಾಲ, ಗೃಹ ಸಾಲ್ಯ ಇತ್ಯಾದಿ ಸಾಲಗಳ ಬಡ್ಡಿ ದರ ಏರುತ್ತದೆ.

    ರಿವರ್ಸ್ ರೆಪೋ: ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಲ್ಲಿ ಇಡುವ ಠೇವಣಿಗಳ ಮೇಲೆ ಪಡೆಯುವ ಬಡ್ಡಿದರವೇ ವಿರುದ್ಧ ರೆಪೋ ರೇಟ್. ಆರ್‍ಐನಲ್ಲಿ ಠೇವಣಿ ಇಡುವುದು ಬ್ಯಾಂಕುಗಳಿಗೆ ಸುರಕ್ಷಿತ. ರಿವರ್ಸ್‌ ರೆಪೋ ದರ ಹೆಚ್ಚಾದಾಗ ಬ್ಯಾಂಕುಗಳು ಹೆಚ್ಚಿನ ಮೊತ್ತವನ್ನು ಆರ್‌ಬಿಐಗೆ ವರ್ಗಾಯಿಸುತ್ತದೆ.

    ಉದಾಹರಣೆಗೆ:
    HDFC ಬ್ಯಾಂಕಿನಿಂದ 8.70% ಬಡ್ಡಿದರದಲ್ಲಿ 30 ವರ್ಷಗಳಿಗೆ 50 ಲಕ್ಷ ರೂ. ಗೃಹಸಾಲ ಪಡೆದರೆ
    ಪ್ರಸ್ತುತ EMI: 39,136 ರೂ. ಇದೆ

    ಹೊಸ ರೆಪೋ ದರ ಇಳಿಕೆ ನಂತರ
    ಹೊಸ EMI: 37,346 ರೂ. ಇರಲಿದೆ
    ಮಾಸಿಕ ಉಳಿತಾಯ: 1,790 ರೂ.
    ವಾರ್ಷಿಕ ಉಳಿತಾಯ: 21,480 ರೂ.

  • ಸತತ 2ನೇ ಬಾರಿ ರೆಪೋ ದರ ಕಡಿತ – ಇಳಿಕೆಯಾಗಲಿದೆ ಗೃಹ ಸಾಲ, ಇಎಂಐ

    ಸತತ 2ನೇ ಬಾರಿ ರೆಪೋ ದರ ಕಡಿತ – ಇಳಿಕೆಯಾಗಲಿದೆ ಗೃಹ ಸಾಲ, ಇಎಂಐ

    ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೋ ದರವನ್ನು (Repo Rate) ಸತತ ಎರಡನೇ ಬಾರಿ ಇಳಿಸಿದೆ. 25 ಬೇಸಿಸ್ ಪಾಯಿಂಟ್‌ ಕಡಿತಗೊಳಿಸಿದ್ದರಿಂದ ಸಾಲ (Loan) ಮತ್ತು ಇಎಂಐಗಳ (EMI) ಬಡ್ಡಿ ದರವೂ ಇಳಿಕೆಯಾಗಲಿದೆ.

    25 ಬೇಸಿಸ್ ಪಾಯಿಂಟ್ ಇಳಿಸಿದ್ದರಿಂದ ಈಗ ರೆಪೋದ ದರ 6%ಕ್ಕೆ ಇಳಿದಿದೆ. ಐದು ವರ್ಷಗಳ ಬಳಿಕ ಈ ಫೆಬ್ರವರಿಯಲ್ಲಿ ರೆಪೋ ದರವನ್ನು ಆರ್‌ಬಿಐ ಇಳಿಕೆ ಮಾಡಿತ್ತು. 25 ಬೇಸಿಸ್‌ ಪಾಯಿಂಟ್‌ ಇಳಿಕೆ ಮಾಡಿದ್ದರಿಂದ ರೇಪೋ ದರ 6.25% ಕ್ಕೆ ತಗ್ಗಿತ್ತು. ಆರ್‌ಬಿಐ ರೆಪೋ ದರ ಇಳಿಕೆ ಮಾಡುತ್ತಿದ್ದಂತೆ ಬ್ಯಾಂಕ್‍ಗಳಿಗೆ ಬಿಸಿ ತಟ್ಟಲಿದೆ. ಬ್ಯಾಂಕ್‍ಗಳು ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಬೇಕಾಗುತ್ತದೆ. ಇದನ್ನೂ ಓದಿ: ಕಾನೂನು ಸ್ವರೂಪ ಪಡೆದ ʻವಕ್ಫ್ ಬಿಲ್ʼ – ಕೇಂದ್ರ ಅಧಿಸೂಚನೆ

    ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಹಣಕಾಸು ನೀತಿ ಸಮಿತಿ(MPC)ಯ ವರದಿಯನ್ನು ಬಿಡುಗಡೆ ಮಾಡಿ ರೆಪೋ ಕಡಿತದ ನಿರ್ಧಾರ ಪ್ರಕಟಿಸಿದರು. ಈ ದರ ಕಡಿತದೊಂದಿಗೆ ಗೃಹ ಸಾಲದ ಬಡ್ಡಿದರಗಳು ಮತ್ತೊಮ್ಮೆ 8% ಕ್ಕಿಂತ ಕೆಳಗೆ ಇಳಿಯುವ ಸಾಧ್ಯತೆಯಿದೆ. ಇದನ್ನೂ ಓದಿ: ಮುಂಬೈ ದಾಳಿಕೋರ ಅಮೆರಿಕದಿಂದ ಗಡಿಪಾರು – ನಾಳೆ ಬೆಳಗ್ಗೆ ಭಾರತಕ್ಕೆ ರಾಣಾ

    ಆರ್ಥಿಕತೆಯ ಮುನ್ನೋಟದ ಕುರಿತು ಮಾತನಾಡಿದ ಮಲ್ಹೋತ್ರಾ, ಜಲಾಶಯಗಳು ಭರ್ತಿಯಾಗಿರುವ ಕಾರಣ ಬೆಳೆ ಉತ್ಪಾದನೆಯಿಂದಾಗಿ ಈ ವರ್ಷ ಕೃಷಿ ವಲಯವು ಉತ್ತಮವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಉತ್ಪಾದನಾ ಚಟುವಟಿಕೆಯೂ ವೇಗವನ್ನು ಪಡೆಯುತ್ತಿದೆ, ವ್ಯಾಪಾರ ನಿರೀಕ್ಷೆಗಳು ಸಕಾರಾತ್ಮಕವಾಗಿದೆ ಎಂದರು.

    ರೆಪೋ ರೇಟ್ ಎಂದರೇನು?
    ವಾಣಿಜ್ಯ ಬ್ಯಾಂಕ್‌ಗಳ ರಿಸರ್ವ್ ಬ್ಯಾಂಕ್‍ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ದರ ಎನ್ನುತ್ತಾರೆ. ರೆಪೋ ದರ ಕಡಿಮೆಯಾದರೆ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದು. ಬ್ಯಾಂಕ್‍ಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತಿರುತ್ತವೆ. ರೆಪೋ ರೇಟ್‌ ಜಾಸ್ತಿ ಇದ್ದರೆ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡುತ್ತದೆ. ಇದರಿಂದ ವಾಹನ ಸಾಲ, ಗೃಹ ಸಾಲ್ಯ ಇತ್ಯಾದಿ ಸಾಲಗಳ ಬಡ್ಡಿ ದರ ಏರುತ್ತದೆ.

    ರಿವರ್ಸ್ ರೆಪೋ: ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಲ್ಲಿ ಇಡುವ ಠೇವಣಿಗಳ ಮೇಲೆ ಪಡೆಯುವ ಬಡ್ಡಿದರವೇ ವಿರುದ್ಧ ರೆಪೋ ರೇಟ್. ಆರ್‍ಐನಲ್ಲಿ ಠೇವಣಿ ಇಡುವುದು ಬ್ಯಾಂಕುಗಳಿಗೆ ಸುರಕ್ಷಿತ. ರಿವರ್ಸ್‌ ರೆಪೋ ದರ ಹೆಚ್ಚಾದಾಗ ಬ್ಯಾಂಕುಗಳು ಹೆಚ್ಚಿನ ಮೊತ್ತವನ್ನು ಆರ್‌ಬಿಐಗೆ ವರ್ಗಾಯಿಸುತ್ತದೆ.

  • ಕಾರವಾರ | ಮನೆಯಲ್ಲಿ 14 ಕೋಟಿ ಮೌಲ್ಯದ ನಕಲಿ ನೋಟು ಪತ್ತೆ

    ಕಾರವಾರ | ಮನೆಯಲ್ಲಿ 14 ಕೋಟಿ ಮೌಲ್ಯದ ನಕಲಿ ನೋಟು ಪತ್ತೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ (Dandeli) ಗಾಂಧಿನಗರದ ಅರ್ಷದ್ ಖಾನ್ ಎಂಬಾತನ ಮನೆಯಲ್ಲಿ 500 ರೂ. ಮುಖಬೆಲೆಯ 14 ಕೋಟಿ ರೂ.ನಷ್ಟು ನಕಲಿ ನೋಟುಗಳು (Duplicate Note) ಪತ್ತೆಯಾಗಿದೆ.

    ಸ್ಥಳೀಯರೊಬ್ಬರು ನೀಡಿದ ಮಾಹಿತಿ ಮೇರೆಗೆ ದಾಂಡೇಲಿ ಪೊಲೀಸರು (Dandeli Police) ಅರ್ಷದ್ ಖಾನ್ ಎಂಬಾತನ ಮನೆಗೆ ತೆರಳಿ ಪರಿಶೀಲನೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದಾಗ ಭಾರತೀಯ ರಿಸರ್ವ್ ಬ್ಯಾಂಕ್ ಬರಹ ಇಲ್ಲದ, ಗವರ್ನರ್ ಸಹಿ ಇಲ್ಲದ‌ ನೋಟುಗಳು ಪತ್ತೆಯಾಗಿದೆ. ಅಲ್ಲದೇ ನೋಟುಗಳ ಮೇಲೆ ʻಮೂವಿ‌‌‌ ಶೂಟಿಂಗ್ ಪರ್ಪಸ್ʼ ಎಂದೂ ಸಹ ಬರೆದಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿಯ ಟಿಎಂಸಿಯಲ್ಲಿ ನಾಯಕರ ತಿಕ್ಕಾಟ – ಟಿಎಂಸಿ ವಾಟ್ಸಪ್ ಚಾಟ್ ಬಹಿರಂಗಪಡಿಸಿದ ಬಿಜೆಪಿಯ ಅಮಿತ್ ಮಾಳವೀಯ

    ಇನ್ನೂ ನೋಟಿನ ಸಂಖ್ಯೆಯಲ್ಲಿ ಸೊನ್ನೆ ಅಷ್ಟೇ ನಮೂದು ಮಾಡಲಾಗಿದ್ದು ಯಾವ ಉದ್ದೇಶಕ್ಕಾಗಿ ಈ ನೋಟುಗಳನ್ನು ಬಳಸಲಾಗುತ್ತಿದೆ ಅನ್ನೋದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೇ ಮನೆಯ ಮಾಲೀಕ ಅರ್ಷದ್ ಖಾನ್ ಕಳೆದ ಒಂದು ತಿಂಗಳಿಂದ ಘಟನಾ ಸ್ಥಳಕ್ಕೆ ಆಗಮಿಸಿಯೇ ಇಲ್ಲ. ಆದ್ದರಿಂಧ ಇಷ್ಟೊಂದು ನೋಟುಗಳು ಯಾವುದಕ್ಕೆ ಬಳಕೆ ಮಾಡಲು ಸಂಗ್ರಹಿಸಲಾಗಿದೆ ಎಂಬುದು ನಿಗೂಢವಾಗಿದೆ. ಇದನ್ನೂ ಓದಿ: ಚನ್ನಪಟ್ಟಣ ಬೊಂಬೆ ಉದ್ಯಮಕ್ಕೆ ಮರುಜೀವ ನೀಡುವಂತೆ ಡಾ. ಮಂಜುನಾಥ್ ಮನವಿಗೆ ಸ್ಮಂದಿಸಿದ ಕೇಂದ್ರ

    ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಈ ನೋಟುಗಳನ್ನು ಸಿನಿಮಾ ಚಿತ್ರೀಕರಣಕ್ಕೆ ತರಿಸಲಾಗಿದೆ ಎನ್ನಲಾಗುತಿದೆ. ಮುಂದಿನ ತನಿಖೆ ನಂತರ ಹೆಚ್ಚಿನ ವಿವರ ಹೊರಬರಲಿದೆ. ಸದ್ಯ ಘಟನೆ ಸಂಬಂಧ ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರನ್‌ ಹೊಳೆ ಹರಿಸಿ ಈಡನ್‌ ಗಾರ್ಡನ್‌ನಲ್ಲಿ ದಾಖಲೆ ಬರೆದ ಲಕ್ನೋ