Tag: RB Timmapur

  • ಸುರ್ಜೇವಾಲಾ ನನ್ನನ್ನು ಕರೆದಿಲ್ಲ, ಸಂಪುಟದಿಂದ ಕೈ ಬಿಡ್ತಾರೆ ಅಂತನೂ ಹೇಳಿಲ್ಲ – ಆರ್.ಬಿ.ತಿಮ್ಮಾಪುರ್

    ಸುರ್ಜೇವಾಲಾ ನನ್ನನ್ನು ಕರೆದಿಲ್ಲ, ಸಂಪುಟದಿಂದ ಕೈ ಬಿಡ್ತಾರೆ ಅಂತನೂ ಹೇಳಿಲ್ಲ – ಆರ್.ಬಿ.ತಿಮ್ಮಾಪುರ್

    ಬೆಂಗಳೂರು: ಸುರ್ಜೇವಾಲಾ ನನ್ನನ್ನು ಸಭೆಗೆ ಕರೆದಿಲ್ಲ, ಸಂಪುಟದಿಂದ ಕೈ ಬಿಡ್ತಾರೆ ಅಂತನೂ ಹೇಳಿಲ್ಲ ಎಂದು ಸಚಿವ ಆರ್.ಬಿ.ತಿಮ್ಮಾಪುರ್ (RB Timmapur) ಹೇಳಿದರು.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುರ್ಜೇವಾಲಾ (Randeep Surjewala) ನನ್ನನ್ನು ಸಭೆಗೆ ಕರೆದಿಲ್ಲ, ನನ್ನನ್ನು ಸಂಪುಟದಿಂದ ಕೈಬಿಡ್ತಾರೆ ಅಂತನೂ ಹೇಳಿಲ್ಲ, ಕೆಲವು ಮಂತ್ರಿಗಳನ್ನೂ ಕೈಬಿಟ್ಟಿದ್ದೀರಲ್ಲ ಯಾಕೆ ಎಂದು ನೀವೇ ಸುರ್ಜೇವಾಲಾರನ್ನು ಕೇಳಿ. ಉಳಿದವರ ಬಗ್ಗೆ ನಾನೇನು ಹೇಳಲಿ? ಹೈಕಮಾಂಡ್ ಏನಾದರೂ ಕರೆದರೆ ತಕ್ಷಣ ಹೋಗುತ್ತೇವೆ ಎಂದು ಹೇಳಿದರು.ಇದನ್ನೂ ಓದಿ: ಶಾಸಕರ ಅಸಮಾಧಾನಕ್ಕೆ ಬಗ್ಗಿದ ಸಿಎಂ – `ಕೈ’ ಶಾಸಕರಿಗೆ 50 ಕೋಟಿ ಅನುದಾನಕ್ಕೆ ಅಸ್ತು

    ಮಲ್ಲಿಕಾರ್ಜುನ ಖರ್ಗೆ ದಲಿತ ಪಿಎಂ ಆಗಲಿ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವಾಗ ಏನು ನಿರ್ಧರಿಸಬೇಕು ಅದನ್ನು ಮಾಡುತ್ತೇವೆ. ಪಕ್ಷದ ಧ್ಯೇಯ ಧೋರಣೆ ನೋಡಿಕೊಂಡು ನಾವು ನಿರ್ಧಾರ ಮಾಡ್ತೇವೆ. ಸಿಎಂ ಮಾಡುವಾಗಲೂ ನಮಗೊಂದು ಪದ್ಧತಿ ಇದೆ. ಬಿಜೆಪಿಯವರನ್ನು ಕೇಳಿ ಪ್ರಧಾನಿ ಮಾಡೋಕಾಗುತ್ತಾ? ಏನೇನು ನ್ಯೂಸ್ ಇದೆಯೋ ನಿಮಗೆ ಗೊತ್ತು. ಬಿಜೆಪಿಯವರಿಗೆ ಯಾವತ್ತೂ ಅಭಿವೃದ್ಧಿ, ದೇಶದ ರಕ್ಷಣೆ ವಿಚಾರ, ಶಾಂತಿ, ನೆಮ್ಮದಿ ಬೇಕಿಲ್ಲ. ಅದು ಅವರ ಅಜೆಂಡಾ ಅಂತ ಕಿಡಿ ಕಾರಿದ್ದಾರೆ.

    ಖರ್ಗೆ ಅವರಿಗೆ ರಾಜ್ಯದಲ್ಲೂ ಅವಕಾಶ ಇದೆ ಎಂಬ ವಿಚಾರ ನೀವು ಹೇಳಿದ್ದನ್ನೂ ಗಮನದಲ್ಲಿಟ್ಟುಕೊಂಡು ಇರುತ್ತೇವೆ. ನೀವು ಮಾಧ್ಯಮಗಳು ಒಂದು ಗಂಟೆಯಲ್ಲಿ ಮಂತ್ರಿನೂ ಮಾಡ್ತೀರಿ, ಮುಖ್ಯಮಂತ್ರಿನೂ ಮಾಡ್ತೀರಿ, ಪ್ರಧಾನಿಯನ್ನೂ ಮಾಡ್ತೀರಿ. ಶಾಸಕರನ್ನ ಮಂತ್ರಿಯೂ ಮಾಡ್ತೀರಿ ಅಂತ ನುಡಿದಿದ್ದಾರೆ.ಇದನ್ನೂ ಓದಿ: 80,000 ನಗ್ನ ಫೋಟೋಸ್‌, ಸೆಕ್ಸ್‌ ಮಾಡಿ ಬೌದ್ಧ ಬಿಕ್ಕುಗಳ ಟ್ರ್ಯಾಪ್‌ – 100 ಕೋಟಿ ಸುಲಿಗೆ ಮಾಡಿದ್ದ ಹನಿ ಲೇಡಿ ಅರೆಸ್ಟ್‌

  • ಧರ್ಮ ನೋಡಿ ಹೊಡೆದಿಲ್ಲ ಎಂದು ನಾನು ಹೇಳಿಯೇ ಇಲ್ಲ: ಆರ್‌ಬಿ ತಿಮ್ಮಾಪುರ ಯೂ ಟರ್ನ್

    ಧರ್ಮ ನೋಡಿ ಹೊಡೆದಿಲ್ಲ ಎಂದು ನಾನು ಹೇಳಿಯೇ ಇಲ್ಲ: ಆರ್‌ಬಿ ತಿಮ್ಮಾಪುರ ಯೂ ಟರ್ನ್

    ಬಾಗಲಕೋಟೆ: ಪಹಲ್ಗಾಮ್ ದಾಳಿಯಲ್ಲಿ ಉಗ್ರರು (Pahalgam Terror Attack) ಹಿಂದೂಗಳನ್ನ ಹುಡುಕಿ ಹುಡುಕಿ ಕೊಂದ್ರು ಎಂಬ ಆರೋಪಕ್ಕೆ ಆಕ್ಷೇಪವೆತ್ತಿದ್ದ ಸಚಿವ ಆರ್‌ಬಿ ತಿಮ್ಮಾಪುರ (RB Timmapur), ಧರ್ಮ ನೋಡಿ ಹೊಡೆದಿಲ್ಲ ಎಂದು ನಾನು ಹೇಳಿಯೇ ಇಲ್ಲ ಎಂದು ಇದೀಗ ಯೂ ಟರ್ನ್ ಹೊಡೆದಿದ್ದಾರೆ.

    ಬಾಗಲಕೋಟೆ (Bagalkote) ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಖಡಾಖಂಡಿತವಾಗಿ ಹಾಗೆ ಮಾಡಿಲ್ಲ ಎಂದು ಹೇಳಿಲ್ಲ. ನಾನು ನೋಡಿದ ಟಿವಿ ಚಾನೆಲ್‌ಗಳಲ್ಲಿ ಅದು ಬಂದಿರಲಿಲ್ಲ. ಹಾಗಾಗಿ ನಾನು ಸಂಶಯ ವ್ಯಕ್ತಪಡಿಸಿದ್ದೇನೆ ವಿನಃ ಹಿಂದೂಗಳನ್ನು ನೋಡಿ ಮಾಡಿಲ್ಲ ಎಂದು ನಾನು ಹೇಳಿಲ್ಲ. ನಾನು ಭಯೋತ್ಪಾದಕರ ಪರವಾಗಿಯೇ ಮಾತನಾಡಿದ್ದೇನೆ ಎಂಬ ರೀತಿ ಬಿಂಬಿತವಾಗಿದೆ. ನಾನು ಭಯೋತ್ಪಾದನೆಯನ್ನು ಖಂಡನೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ – ಕೇಂದ್ರದ ನಿರ್ಧಾರಕ್ಕೆ ನಮ್ಮ ಸಹಕಾರವಿದೆ: ದೇವೇಗೌಡ

    ಅಲ್ಲಿನ ಪ್ರವಾಸಿಗರಿಗೆ ರಕ್ಷಣೆ ಕೊಡೋದು ನಮ್ಮ ಧರ್ಮ. ಅದು ಪಾಲನೆಯಾಗಿಲ್ಲ ಎಂಬ ನೋವಿದೆ. ನಾವು ಎಲ್ಲರೂ ದೇಶದ ಪಕ್ಷ, ಪಂಗಡ, ರಾಜಕಾರಣ ತರದೇ ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕೆ ವಿನಃ ಅದರಲ್ಲಿ ಸಣ್ಣಪುಟ್ಟ ವಿಷಯಗಳನ್ನ ತರುವುದು ದೇಶಕ್ಕೆ ಒಳ್ಳೆಯದಲ್ಲ. ಧರ್ಮ ನೋಡಿ ಹೊಡಿದಿಲ್ಲ ಎಂದು ನಾನು ಹೇಳಿಯೇ ಇಲ್ಲ. ನಾನು ಕಾರವಾರದ ಘಟನೆ ಬಗ್ಗೆ ಹೇಳಿದೆ. ಕಾರವಾರದಲ್ಲಿ ಹಿಂದೂ ಕೊಲೆ ಆಯ್ತು ಅಂದ್ರು, ನಂತರ ಸಹಜ ಸಾವು ಅಂತಾ ಬಂತು. ಹಾಗೆಯೇ ಇಂತಹದರಲ್ಲಿ ರಾಜಕಾರಣ ಬೇಡ ಅಂದಿದ್ದೆ. ನಾನು ನೋಡಿದ ಚಾನೆಲ್ ಪ್ರಕಾರ ನನಗೆ ಡೌಟ್ ಇದೆ ಅಂತಾ ಹೇಳಿದ್ದೆ ಎಂದು ತಿಳಿಸಿದರು. ಇದನ್ನೂ ಓದಿ: Kolar | ಮನೆಯಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ವ್ಯಕ್ತಿ ನೇಣಿಗೆ ಶರಣು

    ಪಾಕ್ ಮೇಲೆ ಯುದ್ಧ ಬೇಕೋ ಬೇಡವೋ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದು ದೇಶದ ಪರಿಸ್ಥಿತಿ ಇದೆ. ನಮ್ಮ ದೇಶದ ಪ್ರಧಾನಿಗಳು ನಿರ್ಧರಿಸಲಿ. ನಾವೆಲ್ಲ ಬದ್ಧತೆ ತೋರಿಸಬೇಕಲ್ಲ. ಯುದ್ಧ ಎಷ್ಟರಮಟ್ಟಿಗೆ ಬೇಕು ಬೇಡಾ ಎಂದು ಯೋಚನೆ ಮಾಡಿ ಅಂತಾ ಹೇಳಿರಬೇಕೆ ವಿನಃ ಯುದ್ಧ ಬೇಡ ಅಂತಾ ಯಾರೂ ಹೇಳಲ್ಲ. ಬೇಹುಗಾರಿಕೆಯನ್ನ ಬಲಪಡಿಸಲಿ. ನಾಗರಿಕರು ಹಾಗೂ ಪ್ರವಾಸಿಗರ ಮೇಲೆ ಈ ರೀತಿ ಆದರೆ ಹೇಗೆ? ಈಗ ಹೋಗಿ ನಾವು ಹೊಡೆದು ಹಾಕಿದ್ದೇವೆ ಅಂದ್ರೆ ಹೇಗೆ?
    ನಾನು ಈ ಹಿಂದೆಯೂ ಹೇಳಿದ್ದೆ, ಪುಲ್ವಾಮಾ ಏನಾಯ್ತು ಅಂತಾ ಹೇಳಿದ್ದೇನೆ. ಈ ದೇಶದ ವಿಚಾರದಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಿದೆ ವಿನಃ ರಾಜಕಾರಣ ಬೇಡ ಎಂದಿದ್ದೇನೆ. ಅದನ್ನ ಬಿಟ್ಟು ಸಣ್ಣಪುಟ್ಟ ವಿಚಾರಗಳನ್ನ ದೇಶಕ್ಕೆ ತೋರಿಸುವುದರಲ್ಲಿ ಅರ್ಥ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: Pahalgam Terrorist Attack | ನಾಳೆ ಮೋದಿ ನೇತೃತ್ವದಲ್ಲಿ 2ನೇ ಸುತ್ತಿನ ಹೈವೋಲ್ಟೇಜ್‌ ಸಭೆ

    ಸಿಎಂ (CM Siddaramaiah) ಎಎಸ್‌ಪಿ ಮೇಲೆ ಕೈ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ಏಯ್ ನೀನ್ಯಾಕೆ ಹೀಗೆ ಮಾಡಿದೆ ಅಂದಿರಬೇಕು. ಅವರ ಮೇಲೆ ಕೈ ಮಾಡಿದ್ದು ಅಂತಾ ಯಾಕೆ ಹೇಳ್ತೀರಿ? ನೀವು ಕೈ ಮಾಡಿದ್ದಾರೆ ಅಂತಾ ಯಾಕೆ ಅಂದುಕೊಳ್ಳುತ್ತೀರಿ? ಹಿಂದೆ ಯಡಿಯೂರಪ್ಪನವರು ಐಎಎಸ್ ಅಧಿಕಾರಿಗಳ ಮೇಲೆ ಕೈ ಮಾಡಿದ್ದೂ ಗೊತ್ತಿದೆ. ಎಮೋಷನ್‌ನಲ್ಲಿ ಮಾಡಿದ್ದರೂ ಮಾಡಿರಬಹುದು. ಹಿಂದೆ ಯಡಿಯೂರಪ್ಪನವರು ಈ ರೀತಿ ಮಾಡಿಲ್ಲ ಎಂದು ವಿಜಯೇಂದ್ರ ಅವರು ಹೇಳಲಿ ನೋಡೋಣ ಎಂದರು. ಇದನ್ನೂ ಓದಿ: ಮಗುವಿನ ಕಾಲಿಗೆ ಪೆಟ್ಟು – ಮಗುಗೆ ಏನಾಗುತ್ತೋ ಅನ್ನೋ ಆತಂಕದಲ್ಲಿ 12ರ ಬಾಲಕ ಆತ್ಮಹತ್ಯೆ

  • Pahalgam Attack | ಟಿಆರ್‌ಎಫ್‌ಗೆ ಭಾರತೀಯ ಯುವಕರೇ ಟಾರ್ಗೆಟ್‌ – ಈ ಭಯೋತ್ಪಾದಕ ಗುಂಪು ಹೇಗೆ ಕೆಲಸ ಮಾಡುತ್ತೆ?

    Pahalgam Attack | ಟಿಆರ್‌ಎಫ್‌ಗೆ ಭಾರತೀಯ ಯುವಕರೇ ಟಾರ್ಗೆಟ್‌ – ಈ ಭಯೋತ್ಪಾದಕ ಗುಂಪು ಹೇಗೆ ಕೆಲಸ ಮಾಡುತ್ತೆ?

    ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸವು (Pahalgam Terrorist Attack) ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ಇಡೀ ದೇಶವೇ ಒಗ್ಗೂಡುವಂತೆ ಮಾಡಿದೆ. ಈ ಕೃತ್ಯಕ್ಕೆ ಕಾರಣರಾದವರನ್ನ ಶಿಕ್ಷಿಸಲು ಸರ್ಕಾರ ಮಾಡುವ ಎಲ್ಲ ಪ್ರಯತ್ನಗಳಿಗೆ ಇಡೀ ದೇಶ ಬೆಂಬಲವಾಗಿ ನಿಂತಿದೆ. ದೇಶದ ಜನ, ಸಾಮಾಜಿಕ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಬಲವಾದ ಸಂದೇಶ ರವಾನಿಸಿವೆ.

    ಭಾರತ ಸರ್ಕಾರ ಪಾಕಿಸ್ತಾನದ (Pakistan) ವಿರುದ್ಧ ಹೆಜ್ಜೆ ಹೆಜ್ಜೆಗೂ ಕ್ರಮ ಕೈಗೊಳ್ಳುತ್ತಿದೆ. ಇದರಿಂದ ಇಡೀ ಪಾಕಿಸ್ತಾನದಲ್ಲಿ ಭಯದ ವಾತವರಣ ನಿರ್ಮಾಣವಾಗಿದೆ. ಉಭಯ ದೇಶಗಳ ನಡುವೆ ಯಾವುದೇ ಸಂದರ್ಭದಲ್ಲೂ ಯುದ್ಧ ಘೋಷಣೆಯಾಗುವ ಸಾಧ್ಯತೆಗಳು ಮುನ್ನೆಲೆಗೆ ಬಂದಿವೆ. ಹೀಗಾಗಿ ಮೂರು ಸೇನಾ ಪಡೆಗಳಿಂದ ಭರ್ಜರಿ ಸಿದ್ಧತೆ ನಡೆಯುತ್ತಿದೆ, ವಾಯುಸೇನೆ ನೌಕಾಸೇನೆಗಳು ಈಗಾಗಲೇ ತಮ್ಮ ವ್ಯಾಪ್ತಿಯಲ್ಲಿ ತಾಲೀಮು ಪ್ರಾರಂಭಿಸಿ ಶತ್ರು ರಾಷ್ಟ್ರವನ್ನು ಬಗ್ಗು ಬಡಿಯಲು ಸಿದ್ಧರಿದ್ದೇವೆ ಎಂಬ ಸಂದೇಶ ರವಾನಿಸಿವೆ. ಮತ್ತೊಂದೆಡೆ ಗಡಿಯಲ್ಲಿ ಜನ ಬಂಕರ್‌ಗಳನ್ನು ಸ್ವಯಂಪ್ರೇರಿತವಾಗಿ ಶುಚಿಗೊಳಿಸುತ್ತಿದ್ದಾರೆ. ಇಷ್ಟೆಲ್ಲ ಉದ್ವಿಗ್ನತೆಗೆ ಕಾರಣವಾದ ʻಟಿಆರ್‌ಎಫ್‌ʼ (ದಿ ರೆಸಿಸ್ಟೆಂಟ್‌ ಫ್ರಂಟ್‌ – TRF) ಫಾಲ್ಕನ್‌ ಸ್ಕ್ವಾಡ್‌ ಹೇಗೆ ಕೆಲಸ ಮಾಡುತ್ತೆ? ಯುವಕರಿಗೆ ಹೇಗೆ ಬ್ರೈನ್‌ ವಾಶ್‌ ಮಾಡಿ ಸಂಘಟನೆಗೆ ಸೇರಿಸಿಕೊಳ್ಳುತ್ತೆ? ಇದರ ಮಾಸ್ಟರ್‌ ಮೈಂಡ್‌ ಯಾರು? ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಯಾವೆಲ್ಲ ಸಂಘಟನೆಗಳು ಈಗಲೂ ಸಕ್ರೀಯವಾಗಿವೆ ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ಜಮ್ಮುವಿನಿಂದ ಪಥ ಬದಲಿಸಿದ ಉಗ್ರರು

    2014 ರಿಂದ 2018ರ ಅವಧಿ ಜಮ್ಮು ಮತ್ತು ಕಾಶ್ಮೀರ ಸ್ಥಳಗಳು ಉಗ್ರರ ಸ್ವರ್ಗವಾಗಿತ್ತು. 2014ರಿಂದ 2018ರ ವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 1,708 ಉಗ್ರರ ದಾಳಿಗಳು ನಡೆದಿದ್ದವು, 2018ರಿಂದ 2022ರ ವರೆಗೆ 761 ಉಗ್ರರ ದಾಳಿಗಳು ನಡೆದು 174 ಮಂದಿ ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿದಾಳಿ ನಡೆಸಿದ್ದ ಸೇನೆ (Indian Army) 626 ಉಗ್ರರನ್ನು ಬಲಿ ಪಡೆದಿತ್ತು. 2023ರಲ್ಲಿ ಜಮ್ಮು ಪ್ರದೇಶದಲ್ಲಿ ಮಾತ್ರವೇ ಸುಮಾರು 40 ಭಯೋತ್ಪಾದಕ ದಾಳಿಗಳು ನಡೆದಿರುವುದಾಗಿ ಸೇನೆ ಹೇಳಿದೆ. ಆದ್ರೆ 2019ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಭಯೋತ್ಪಾದಕರು ತಮ್ಮ ಕಾರ್ಯತಂತ್ರ ಬದಲಿಸಿದ್ದರು. ಆಗ ಕಾಶ್ಮೀರವನ್ನು ಬಿಟ್ಟು ಜಮ್ಮುವಿನಲ್ಲಿ ದಾಳಿಗಳನ್ನು ನಡೆಸತೊಡಗಿದರು. 2021ರಿಂದ ಜುಲೈ 2024ರ ವರೆಗೆ ಜಮ್ಮುವಿನ ವಿವಿಧ ಭಾಗಗಳಲ್ಲಿ 33 ಉಗ್ರ ದಾಳಿಗಳು ನಡೆದಿದ್ದವು. 2024ರ ಮಧ್ಯಭಾಗದವರೆಗೆ ಜಮ್ಮುವಿನಲ್ಲಿ 8 ದಾಳಿಗಳು ನಡೆದು, 11 ಮಂದಿ ಸಾವಿಗೀಡಾಗಿದ್ದರು; ವರ್ಷದ ಮೊದಲ ಆರು ತಿಂಗಳಲ್ಲಿ ನಡೆದ ದಾಳಿಗಳಿಂದ 12 ಮಂದಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ಕೆಲವು ಸೈನಿಕರನ್ನು ಚೀನಾದ ಗಡಿಗೆ ಕಳಿಸಿದ್ದು ಕೂಡ ಇಲ್ಲಿ ಉಗ್ರ ಚಟುವಟಿಕೆಗಳ ಹೆಚ್ಚಳಕ್ಕೆ ಕಾರಣ ಎನ್ನಲಾಗಿತ್ತು.

    ಭದ್ರತಾ ಪಡೆಗಳನ್ನು ತಪ್ಪು ದಾರಿಗೆಳೆಯುವುದು, ಗುಪ್ತಚರ ಅಧಿಕಾರಿಗಳ ದಿಕ್ಕುತಪ್ಪಿಸುವುದು ಸೇರಿದಂತೆ ಉಗ್ರರ ಹಲವು ತಂತ್ರಗಾರಿಕೆ ಇದರ ಹಿಂದಿತ್ತು. ಕಾಶ್ಮೀರಕ್ಕೆ ಹೋಲಿಸಿದರೆ, ಜಮ್ಮುವಿನಲ್ಲಿ ಕಡಿಮೆ ಸೇನಾ ನಿಯೋಜನೆ ಇದ್ದದ್ದು ಕೂಡ ಅಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗಲು ಕಾರಣವಾಗಿತ್ತು. ಹಾಗಾಗಿ ಜಮ್ಮುವಿನ ಕಥುವಾ ಸೇರಿದಂತೆ ಅನೇಕ ಪ್ರದೇಶಗಳನ್ನೇ ಉಗ್ರರು ಟಾರ್ಗೆಟ್‌ ಮಾಡಿದ್ದರು. ಆದರೆ, 2019ರ ಬಳಿಕ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದಿರುವ ಭೀಕರ ದಾಳಿಯು, ಉಗ್ರರು ಮತ್ತೆ ಕಾಶ್ಮೀರದತ್ತ ದೃಷ್ಟಿ ನೆಟ್ಟಿರಬಹುದೇ ಎನ್ನುವ ಅನುಮಾನ ಮೂಡಿಸಿದೆ.

    ಇದೇ ಏ.17ರಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ದ್ವಿರಾಷ್ಟ್ರ ಸಿದ್ಧಾಂತದ ಬಗ್ಗೆ ಮಾತನಾಡುತ್ತಾ, ಹಿಂದೂ ಹಾಗೂ ಮುಸ್ಲಿಂ ಧರ್ಮಗಳು ಹೇಗೆ ಭಿನ್ನ ಎಂದು ವಿವರಿಸಿದ್ದರು. ಕಾಶ್ಮೀರ ಎಂದೆಂದಿಗೂ ಪಾಕಿಸ್ತಾನದ ʻಕಂಠನಾಳ’ ಎಂದಿದ್ದರು. ಆದರೀಗ ಅವರ ಈ ಮಾತುಗಳಿಗೂ ಪಹಲ್ಲಾಮ್ ದಾಳಿಗೂ ನಂಟು ಇದೆ ಎನ್ನಲಾಗುತ್ತಿದೆ. ಪಾಕಿಸ್ತಾನವು ಆಂತರಿಕ ಸಂಘರ್ಷ ಮತ್ತು ಆರ್ಥಿಕ ಕುಸಿತದಂತಹ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಲ್ಲಿನ ಜನರ ವಿಶ್ವಾಸ ಗಳಿಸುವ ಸಲುವಾಗಿ ಸೇನೆ ಮತ್ತು ರಾಜಕಾರಣಿಗಳು ಕಾಶ್ಮೀರ ವಿವಾದವನ್ನು ಜೀವಂತವಾಗಿಡಲು ಬಯಸುತ್ತಿದ್ದು, ಅದರ ಭಾಗವಾಗಿಯೇ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಎನ್ನುವುದು ತಜ್ಞರ ವಿಶ್ಲೇಷಣೆ.

    ಯಾವ್ಯಾವ ಉಗ್ರ ಸಂಘಟನೆಗಳು ಸಕ್ರೀಯ?

    ಜಮ್ಮುವಿನ ವಿಸ್ತಾರ ಪ್ರದೇಶವನ್ನು ಪಾಕ್‌ ಮೂಲದ ಉಗ್ರರು ಈ ಹಿಂದೆಯೂ ಭಯೋತ್ಪಾದನಾ ಕೃತ್ಯಗಳಿಗೆ ಬಳಸಿದ್ದಾರೆ. ಸುರಂಗಗಳ ಮೂಲಕ ಉಗ್ರರು ದೇಶಕ್ಕೆ ನುಸುಳುತ್ತಿದ್ದು, ಡ್ರೋನ್‌ ಮೂಲಕ ಶಸ್ತ್ರಾಸ್ತ್ರಗಳನ್ನೂ ಸರಬರಾಜು ಮಾಡಿಕೊಳ್ಳುತ್ತಿದ್ದರು. ಅಲ್ಲದೇ ದೇಶದ ಗಡಿ ಭಾಗದಲ್ಲಿ ಹಿಂಸಾಚಾರ ಹೆಚ್ಚಿಸಲು ನಿಗೂಢ ಹತ್ಯೆ ಮಾಡುತ್ತಿದ್ದರು. ಈಗಲೂ ಅನೇಕ ಭಯೋತ್ಪಾದಕ ಗುಂಪುಗಳು ಗಡಿಯಾಚೆಗೆ ಸಕ್ರೀಯವಾಗಿವೆ. ಅದರಲ್ಲಿ ಟಿಆರ್‌ಎಫ್ ಪ್ರಮುಖವಾಗಿದೆ, ಇದನ್ನ ಜೈಶ್-ಎ-ಮೊಹಮ್ಮದ್‌ನ ಪ್ರಾಕ್ಸಿ ಎಂದು ಕರೆಯಲಾಗುತ್ತದೆ. ಇದರ ಹೊರತಾಗಿ ಜಮ್ಮು ಮತ್ತು ಕಾಶ್ಮೀರ ಘಜ್ವಾನಿ ಫೋರ್ಸ್, ಕಾಶ್ಮೀರ ಟೈಗರ್ಸ್ ಮತ್ತು ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ ಉಗ್ರ ಸಂಘಟನೆಗಳು ಸಕ್ರೀಯವಾಗಿವೆ. ಇವು ಆರ್ಟಿಕಲ್‌ 370 ರದ್ದಾದ ಬಳಿಕ ಅಸ್ತಿತ್ವಕ್ಕೆ ಬಂದಿವೆ.

    ಟಿಆರ್‌ಎಫ್‌ ಕೆಲಸ ಹೇಗೆ?

    ಕಾಶ್ಮೀರದಲ್ಲಿ ಸಕ್ರೀಯವಾಗಿರುವ ʻದಿ ರೆಸಿಸ್ಟಂಟ್‌ ಫ್ರಂಟ್‌ʼ ಆಧುನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು ತಿಂಗಳಾನುಗಟ್ಟಲೆ ಕಠಿಣ ತರಬೇತಿ ನೀಡುವುದು, ಬಳಿಕ ಕಣಿವೆ ಪ್ರದೇಶಗಳಲ್ಲಿ ದಾಳಿ ನಡೆಸುವುದು ಇದರ ಕಾರ್ಯತಂತ್ರ. ಒಂದು ವೇಳೆ ದಾಳಿಕೋರರು ಭಾರತೀಯ ಸೇನೆಗೆ ಸಿಕ್ಕಿಬಿದ್ದರೆ ಆತ್ಮಾಹುತಿ ಬಾಂಬ್‌ ಸ್ಫೋಟಿಕೊಳ್ಳುವುದಕ್ಕೂ ತರಬೇತಿ ನೀಡಲಾಗುತ್ತದೆ. ಅದಕ್ಕಾಗಿ ಕಟ್ಟುಮಸ್ತಾದ ಯುವಕರ ತಲೆಗೆ ಮತಾಂಧತೆ ಚಿಂತನೆಗಳನ್ನ ತುಂಬುತ್ತಾರೆ. ಬ್ರೈನ್‌ ವಾಶ್‌ ಮಾಡಿ ತಮ್ಮ ಸಂಘಟನೆಗಳಿಗೆ ಸೇರಿಸಿಕೊಳ್ಳುತ್ತದೆ. ನಿರುದ್ಯೋಗಿಗಳು, ತೀರಾ ಬಡತನ ಕುಟುಂಬದ ಯುವಕರಿಗೆ ಹಣದ ಆಮಿಷ ತೋರಿಸಿ, ನೀನೊಂದು ನಿರ್ದಿಷ್ಟ ಗುರಿ ಸಾಧಿಸಲು ಈ ಭೂಮಿಮೇಲೆ ಹುಟ್ಟಿದ್ದೀಯಾ ಎಂದು ಬ್ರೈನ್‌ ವಾಶ್‌ ಮಾಡುವುದು, ಬಳಿಕ ಅವರಿಗೆ ತರಬೇತಿ ನೀಡಿ ಭಾರತದ ವಿರುದ್ಧವೇ ದಾಳಿಗೆ ನಿಯೋಜಿಸುವುದು ಟಿಆರ್‌ಎಫ್‌ನ ಕೆಲಸ. ಆದ್ರೆ ಇತ್ತೀಚಿನ ದಿನಗಳಲ್ಲಿ ಟಿಆರ್‌ಎಫ್‌ ಆಧುನಿಕ ಶಸ್ತ್ರಾಸ್ತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿದ್ದು, ಭದ್ರತಾ ಪಡೆಗಳು ಹಾಗೂ ಸಾಮಾನ್ಯ ಜನರ ಮೇಲಿನ ದಾಳಿಗಾಗಿ ಬಸಳಸುತ್ತಿದೆ. ಇತ್ತೀಚಿನ ಪಹಲ್ಗಾಮ್‌ ದಾಳಿಗೂ ಸಹ ಎಕೆ-47 ಮತ್ತು M4 ರೈಫಲ್‌ಗಳನ್ನ ಬಳಸಲಾಗಿತ್ತು ಅನ್ನೋದು ಗಮನಾರ್ಹ.

    ಹಣಕಾಸಿನ ನೆರವು ಹೇಗೆ?

    ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಸಂಘಟನೆಗಳು ಜೈಶ್‌ ಎ ಮೊಹಮ್ಮದ್‌ನಿಂದ ಹಣಕಾಸಿನ ನೆರವನ್ನು ಪಡೆಯುತ್ತಿವೆ. ಜೊತೆಗೆ ಭಾರತದ ಮೇಲೆ ಯಾವ ಯಾವ ರೀತಿ ದಾಳಿಗಳನ್ನ ನಡೆಸಬೇಕು ಅನ್ನೋ ರೂಪುರೇಷೆಯೂ ಈ ಸಂಘಟನೆ ಸಿದ್ಧಮಾಡಿಕೊಡುತ್ತದೆ. ಹಿಂದೆಲ್ಲಾ ಗಡಿ ನಿಯಂತ್ರಣ ರೇಖೆ ದಾಟಿ ಬರುತ್ತಿದ್ದ ಉಗ್ರರು, ಗೆರಿಲ್ಲಾ ಯುದ್ಧ ತಂತ್ರಗಳನ್ನು ಬಳಸುತ್ತಿದ್ದರು, ದಾಳಿ ಮಾಡಿ ದಟ್ಟ ಕಾಡುಗಳಲ್ಲಿ ಕಣ್ಮರೆಯಾಗುತ್ತಿದ್ದರು. ಆದ್ರೆ ಉಗ್ರರು ಹೈಬ್ರಿಡ್‌ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಜೊತೆಗೆ ಚೀನಾ ನಿರ್ಮಿತ ಆಪ್‌ಗಳನ್ನ ಬಳಸಿಕೊಂಡು ದಾಳಿಯ ರೂಪುರೇಷೆಗಳನ್ನು ಚರ್ಚಿಸಲಾಗುತ್ತದೆ ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಆಪ್‌ಗಳ ಟ್ರ್ಯಾಕಿಂಗ್‌ ಮಾಡೋದು ಕಷ್ಟವಾಗಿರುವುದರಿಂದ ಭಾರತೀಯ ಸೇನೆಗೂ ಇದು ಸವಾಲಾಗಿದೆ.

    ಭಾರತೀಯ ಸೇನೆಗೆ ಸವಾಲಾಗಿರುವುದು ಏಕೆ?

    ಇತ್ತೀಚೆಗೆ ಜಮ್ಮುವಿನಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಯಲ್ಲಿ ಸೈನಿಕರು ಉಗ್ರರನ್ನು ಮಟ್ಟಹಾಕಲು ಹರಸಾಹಸ ಪಡುತ್ತಿದ್ದಾರೆ, ಇದಕ್ಕೆ ಕಾರಣವೂ ಇದೆ. ಇತ್ತೀಚೆಗೆ ಈ ಸಂಘಟನೆಗಳು ಅತ್ಯುನ್ನತ ತರಬೇತಿ ಪಡೆದ ಭಯೋತ್ಪಾದಕರನ್ನ ಉಗ್ರ ಕೃತ್ಯಗಳಿಗೆ ನಿಯೋಜಿಸುತ್ತಿದ್ದಾರೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಪರ್ವತ ಪ್ರದೇಶಗಳಲ್ಲಿ ತರಬೇತಿ ಪಡೆದ ಉಗ್ರರನ್ನು ಇಲ್ಲಿಗೆ ಕಳಿಸಲಾಗುತ್ತಿದೆ. ಅಲ್ಲದೇ ಅಮೆರಿಕ ನಿರ್ಮಿತ ಎಂ4 ಅತ್ಯಾಧುನಿಕ ರೈಫಲ್‌ ಅನ್ನು ಕೃತ್ಯಕ್ಕೆ ಬಳಸುತ್ತಿದ್ದಾರೆ.

    ಕೃತ್ಯದ ಮಾಸ್ಟರ್‌ ಮೈಂಡ್‌ ಯಾರು?

    ಈ ದಾಳಿಯನ್ನು ಹೊಣೆಯನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯ ಜೊತೆ ಗುರುತಿಸಿಕೊಂಡಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಹೊತ್ತುಕೊಂಡಿದೆ. ಲಷ್ಕರ್‌ ಸಂಘಟನೆಯ ಟಾಪ್‌ ಕಮಾಂಡರ್‌ ಆಗಿರುವ ಸೈಫುಲ್ಲಾ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಇಬ್ಬರು ಈ ಕೃತ್ಯದ ಮಾಸ್ಟರ್‌ ಮೈಂಡ್‌ ಆಗಿದ್ದಾನೆಂದು ತಿಳಿದುಬಂದಿದೆ. ಲಷ್ಕರ್-ಎ-ತೈಬಾ ಉಪ ಮುಖ್ಯಸ್ಥನಾಗಿರುವ ಸೈಫುಲ್ಲಾ ಖಾಲಿದ್ ಮುಂಬೈ ದಾಳಿ (Mumbai Attack) ಸೂತ್ರಧಾರ ಹಫೀಜ್ ಸಯೀದ್‌ ಆಪ್ತ ವ್ಯಕ್ತಿಯಾಗಿದ್ದಾನೆ. ಯಾವಾಗಲೂ ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುವ ಈತನಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಹಿಡಿದಿರುವ ಲಷ್ಕರ್‌ ಉಗ್ರರು ಭದ್ರತೆ ನೀಡುತ್ತಾರೆ.

    ಯಾವಾಗಲೂ ಭಾರತದ ವಿರುದ್ಧವೇ ಕೆಲಸ ಮಾಡುವುದರಿಂದ ಸೇನಾ ಅಧಿಕಾರಿಗಳ (Pakistan Army) ಜೊತೆಗೂ ಈತ ಉತ್ತಮ ಸಂಬಂಧ ಹೊಂದಿದ್ದಾನೆ. ಎರಡು ತಿಂಗಳ ಹಿಂದೆ ಸೈಫುಲ್ಲಾ ಖಾಲಿದ್ ಪಾಕಿಸ್ತಾನದ ಪಂಜಾಬ್‌ನ ಕಂಗನ್‌ಪುರಕ್ಕೆ ಭೇಟಿ ನೀಡಿದ್ದ. ಕಂಗನ್‌ಪುರದಲ್ಲಿ ಪಾಕ್‌ ಸೇನೆಯ ದೊಡ್ಡ ಬೆಟಾಲಿಯನ್‌ ನೆಲೆಗೊಂಡಿದೆ. ಪಾಕಿಸ್ತಾನ ಸೇನೆಯ ಕರ್ನಲ್ ಜಾಹಿದ್ ಜರೀನ್ ಭಾರತದ ವಿರುದ್ಧ ಜಿಹಾದಿ ಭಾಷಣ ಮಾಡಲು ಈತನನ್ನು ಕರೆಸಿದ್ದ.ಭಾಷಣದಲ್ಲಿ ಪಾಕಿಸ್ತಾನ ಸೇನೆಯನ್ನು ಭಾರತದ ವಿರುದ್ಧದ ಕೃತ್ಯಕ್ಕೆ ಪ್ರಚೋದಿಸಿದ್ದ. ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈತ ಭಾರತದ ವಿರುದ್ಧ ವಿಷಕಾರಿದ್ದ. ಇಂದು ಫೆಬ್ರವರಿ 2, 2025. ಕಾಶ್ಮೀರವನ್ನು ವಶಪಡಿಸಿಕೊಳ್ಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಮುಂಬರುವ ದಿನಗಳಲ್ಲಿ ನಮ್ಮ ಮುಜಾಹಿದ್ದೀನ್ ದಾಳಿ ತೀವ್ರಗೊಳ್ಳಲಿದೆ. ಫೆಬ್ರವರಿ 2, 2026 ರೊಳಗೆ ಕಾಶ್ಮೀರ ಸ್ವತಂತ್ರವಾಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಭರವಸೆ ನೀಡಿದ್ದ ಅನ್ನೋದು ಗಮನಾರ್ಹ.

  • ಹೈಕಮಾಂಡ್ ಒಪ್ಪಿದ್ರೆ ನಾನೂ ಸಿಎಂ ಆಗ್ತೀನಿ – ಸಚಿವ ಆರ್.ಬಿ ತಿಮ್ಮಾಪುರ

    ಹೈಕಮಾಂಡ್ ಒಪ್ಪಿದ್ರೆ ನಾನೂ ಸಿಎಂ ಆಗ್ತೀನಿ – ಸಚಿವ ಆರ್.ಬಿ ತಿಮ್ಮಾಪುರ

    – ಡಿಕೆ ನಾಯಕತ್ವ ವಿರುದ್ಧ ಸಿದ್ದು ಬಣ ರಣಕಹಳೆ

    ಬೆಂಗಳೂರು: ಕಾಂಗ್ರೆಸ್ (Congress) ಒಳಜಗಳಕ್ಕೆ ಮದ್ದರೆಯಲು ಸುರ್ಜೇವಾಲ ಕೊಟ್ಟ ವಾರ್ನಿಂಗ್ ಕೆಲಸ ಮಾಡಿಲ್ಲ… ಬದಲಾಗಿ, ಪಟ್ಟದ ಕದನ ಹೊಸ ಸ್ವರೂಪ ಪಡೆದಿದೆ. ಹಳೆಯ ಅಸ್ತ್ರವೊಂದಕ್ಕೆ ಸಿಎಂ ಬಣ ಸಾಣೆ ಹಿಡಿದಿದೆ. ಅಧ್ಯಕ್ಷ ಸ್ಥಾನ ಬದಲಾವಣೆಗೆ ಕೂಗೆಬ್ಬಿಸಿ ಹೊಸ ಆಟಕ್ಕೆ ನಾಂದಿ ಹಾಡಿದೆ. ಸಿಎಂ ಆಪ್ತ ಸಚಿವ ಸತೀಶ್ ಜಾರಕಿಹೊಳಿ ಬಹಿರಂಗವಾಗಿಯೇ, ಡಿಕೆಶಿ (DK Shivakumar) ನಾಯಕತ್ವದ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ.

    ಸಂಘಟನೆ ವಿಚಾರದಲ್ಲಿ 2023ರಲ್ಲಿ ಇದ್ದ ಸ್ಪೀಡ್ ಕಡಿಮೆ ಆಗಿದೆ.. ಕೆಪಿಸಿಸಿಗೆ ಪೂರ್ಣ ಪ್ರಮಾಣದ.. ವರ್ಚಸ್ಸು ಇರುವ ಹೊಸ ಅಧ್ಯಕ್ಷರು ಬೇಕಿದೆ ಎಂಬ ಹಕ್ಕೋತ್ತಾಯ ಮಾಡಿದ್ದಾರೆ. ಕಾಂಗ್ರೆಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಎಂಬ ದಾಳ ಉರುಳಿಸಿದ್ದಾರೆ. ಇದನ್ನೂ ಓದಿ: 12 ಗಂಟೆಯಲ್ಲಿ 1,057 ಪುರುಷರೊಂದಿಗೆ ಸೆಕ್ಸ್‌ – ವಿಶ್ವದಾಖಲೆ ಬರೆದ ನೀಲಿ ತಾರೆ

    ಪವರ್ ಗೇಮ್ ಶುರು ಮಾಡಿದ್ದ ಡಿಕೆ ಶಿವಕುಮಾರ್‌ಗೆ ಸತೀಶ್ ಜಾರಕಿಹೊಳಿ ಚೆಕ್‌ಮೆಟ್ ಇಡಲು ಯತ್ನಿಸಿದ್ದಾರೆ. ಆದ್ರೆ ಅಷ್ಟು ಸುಲಭವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಬಲಾಬಲ ಪ್ರದರ್ಶನ ನಡೆಸಲು ಹೈಕಮಾಂಡ್ ಒಪ್ಪುತ್ತಾ ಅನ್ನೋದೇ ಇಲ್ಲಿನ ಪ್ರಶ್ನೆಯಾಗಿದೆ. ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಿಎಂ ಜಾರಿಕೊಂಡಿದ್ದಾರೆ. ಇದ್ರ ಮಧ್ಯೆ, ಪಕ್ಷದ ಮೊದಲು ಸರ್ಕಾರ ನಂತರ ಎಂದಿದ್ದ ಸುರ್ಜೆವಾಲಾಗೆ, ನಾವಿದ್ದರೇ ತಾನೆ ಪಕ್ಷ.. ಸಮುದಾಯ ಇದ್ರೆ ತಾನೆ ಪಕ್ಷ ಎನ್ನುವ ಮೂಲಕ ಪರಮೇಶ್ವರ್ ಪರೋಕ್ಷವಾಗಿ ಟಕ್ಕರ್ ನೀಡಿದ್ದಾರೆ.

    ಇನ್ನೂ ಐದು ವರ್ಷವೂ ಸಿದ್ದರಾಮಯ್ಯನವ್ರೇ ಸಿಎಂ ಎಂದು ಸಚಿವ ಮಹದೇವಪ್ಪ ಮತ್ತೊಮ್ಮೆ ಹೇಳಿದ್ದಾರೆ. ನಾನ್ಯಾಕೆ ಭವಿಷ್ಯದಲ್ಲಿ ಸಿಎಂ ಆಗಬಾರದು, ಹೈಕಮಾಂಡ್‌ ಒಪ್ಪಿದ್ರೆ ನಾನೂ ಸಿಎಂ ಆಗ್ತೀನಿ ಎಂದು ಸಚಿವ ಆರ್‌.ಬಿ ತಿಮ್ಮಾಪುರ ಕೇಳಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರ ಆತ್ಮಹತ್ಯೆ ಕೇಸ್ – ರಾಜು ಕಪನೂರ್ ಆ್ಯಂಡ್ ಗ್ಯಾಂಗ್‌ಗೆ 3 ದಿನ ಸಿಐಡಿ ಕಸ್ಟಡಿಗೆ

    ಇತ್ತ ಸಿಎಂ ಬದಲಾವಣೆಯ ಸನ್ನಿವೇಶ ಸೃಷ್ಟಿಯಾದ್ರೆ ಪರಮೇಶ್ವರ್ ಸಿಎಂ ಆಗಲಿ ಎಂದಿದ್ದಾರೆ. ಈ ಬೆಳವಣಿಗೆಗಳ ಮಧ್ಯೆ, ಕಳೆದ ರಾತ್ರಿ ಎಐಸಿಸಿ ಅಧ್ಯಕ್ಷರೊಂದಿಗೆ ಡಿಸಿಎಂ ಪ್ರತ್ಯೇಕ ಸಭೆ ಮಾಡಿರೋದು ಕುತೂಹಲ ಕೆರಳಿಸಿದೆ. ಇತ್ತ, ಸಿಎಂ ರಾಜೀನಾಮೆ ಸನ್ನಿಹಿತ ಎಂದು ಬಿಜೆಪಿಯ ವಿಜಯೇಂದ್ರ ಪುನರುಚ್ಚರಿಸಿದ್ದಾರೆ.

  • ಅಕ್ರಮ ಮದ್ಯ ಮಾರಾಟವನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ – ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವು

    ಅಕ್ರಮ ಮದ್ಯ ಮಾರಾಟವನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ – ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವು

    – ಅಬಕಾರಿ ಸಚಿವ ತಿಮ್ಮಾಪುರ ತವರು ಜಿಲ್ಲೆಯಲ್ಲಿ ಕೃತ್ಯ

    ಬಾಗಲಕೋಟೆ: ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ (RB Timmapur) ಅವರ ತವರು ಜಿಲ್ಲೆಯಲ್ಲೇ ಅಕ್ರಮ ಮದ್ಯ ಮಾರಾಟ (Illegal Liquor Sale) ಮಾಡಿದ್ದನ್ನು ಪ್ರಶ್ನಿಸಿದವನನ್ನು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ರಡ್ಡೇರ್ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.

    ಡಿ.21 ರಂದು ಈ ದುರ್ಘಟನೆ ನಡೆದದ್ದು, ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಗ್ರಾಮದ 40 ವರ್ಷದ ವೆಂಕನಗೌಡ ಶೇಷಪ್ಪನವರ್ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಸ್ಫೋಟ ಪ್ರಕರಣ – ಡ್ರೋನ್ ಪ್ರತಾಪ್‌ಗೆ ಜಾಮೀನು

     

    ಕೊಲೆಗೈದ ಆರೋಪಿ ಹನಮಂತ್ ನೀಲರ್, ತನ್ನ ಮನೆಯಲ್ಲೇ ಅಕ್ರಮ ಮದ್ಯ ‌ಮಾರಾಟವನ್ನು  ಮಾಡುತ್ತಿದ್ದ. ಇದರಿಂದ ಪಕ್ಕದ ಮನೆಯ ವೆಂಕನಗೌಡ ಮನೆಯವರಿಗೆ ದಿನಂಪ್ರತಿ ಕುಡುಕರಿಂದ ಕಿರಿಕಿರಿಯಾಗುತ್ತಿತ್ತು. ಹೀಗಾಗಿ ಅಕ್ರಮ ಮದ್ಯ ಮಾರಾಟ ಮಾಡದಂತೆ ಮೃತ ವೆಂಕನಗೌಡ, ಹನಮಂತ್ ನೀಲರ್‌ಗೆ ಸೂಚಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪದೇ ಪದೇ ಜಗಳ ನಡೆಯುತ್ತಿತ್ತು.

    ತನ್ನ ವಿರುದ್ಧ ಮಾತನಾಡಿದ್ದಕ್ಕೆ ಹನಮಂತ್, ಪಕ್ಕದ ಊರಿನಿಂದ ಸಂಬಂಧಿಕರನ್ನು ಕರೆಯಿಸಿ, ವೆಂಕನಗೌಡ ಮೇಲೆ ಡಿಸೆಂಬರ್ 21 ರಂದು ಕಟ್ಟಿಗೆ, ಹಾಗೂ ಕೈಗಳಿಂದ ಮಾರಣಾಂತಿಕ ಹಲ್ಲೆ ಮಾಡಿಸಿದ್ದ. ಹಲ್ಲೆಗೊಳಗಾಗಿ ಪ್ರಜ್ಞಾಹೀನ ಸ್ಥಿತಿ ತಲುಪಿದ್ದ ವೆಂಕನಗೌಡಗೆ ಕರೆಂಟ್ ಶಾಕ್ ಕೊಟ್ಟು ಹಿಂಸೆ ನೀಡಿದ್ದರು.

    ಗಂಭೀರವಾಗಿ ಗಾಯಗೊಂಡಿದ್ದ ವೆಂಕನಗೌಡ ಶೇಷಪ್ಪನವರ್‌ ಅವರನ್ನು ಪರಿಚಯಸ್ಥರು ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಹಲ್ಲೆಗೊಳಗಾಗಿದ್ದ ವೆಂಕನಗೌಡ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ನಾನು ತಪ್ಪು ಮಾಡಿಲ್ಲ, ತಲೆದಂಡ ಯಾಕಾಗುತ್ತೆ? – ಆರ್.ಬಿ.ತಿಮ್ಮಾಪುರ್

    ನಾನು ತಪ್ಪು ಮಾಡಿಲ್ಲ, ತಲೆದಂಡ ಯಾಕಾಗುತ್ತೆ? – ಆರ್.ಬಿ.ತಿಮ್ಮಾಪುರ್

    ಬೆಂಗಳೂರು: ನಾನು ಏನೂ ತಪ್ಪು ಮಾಡಿಲ್ಲ. ನನ್ನ ತಲೆದಂಡದ ಪ್ರಶ್ನೆ ಬರಲ್ಲ ಎಂದು ಸಚಿವ ತಿಮ್ಮಾಪುರ್ (R.B.Timmapur) ಹೇಳಿದ್ದಾರೆ.

    ಅಬಕಾರಿ ಇಲಾಖೆ (Excise Department) ಮೇಲೆ ಭ್ರಷ್ಟಾಚಾರ ಆರೋಪದ ವಿಚಾರ ಮತ್ತು ಮಂಡ್ಯದಲ್ಲಿ ಅಬಕಾರಿ ಇಲಾಖೆ ಅಕ್ರಮದ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಅಬಕಾರಿ ಇಲಾಖೆ ಆಡಿಯೋ ವಿಚಾರದಲ್ಲಿ ಜೆಸಿಯಿಂದ ವರದಿ ಪಡೆದಿದ್ದೇನೆ. ಆ ಅಧಿಕಾರಿಯನ್ನು ಅಮಾನತು ಮಾಡುತ್ತೇನೆ. ಇಲಾಖೆ ಮೇಲೆ ಲಂಚದ ಆರೋಪ ಬಂದಿರೋ ವಿಚಾರವಾಗಿ ವರದಿ ತರಿಸಿಕೊಳ್ಳೋಣ ಎಂದು ತಿಳಿಸಿದರು. ಇದನ್ನೂ ಓದಿ: ತಾಯಿ ಮನೆ ಬಿಜೆಪಿಗೆ ಈಶ್ವರಪ್ಪ ಬೇಗ ವಾಪಸಾಗಬೇಕು: ಕಾಶಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

    ಅಬಕಾರಿ ಇಲಾಖೆ ಮೇಲೆ ಆಗಾಗ ಇಂತಹ ಆರೋಪ ಕೇಳಿ ಬರುತ್ತದೆ. ಇಲಾಖೆಯಲ್ಲಿ ಕೆಲವು ವಿಚಾರಗಳನ್ನು ಸರಿ ಮಾಡಬೇಕು. ಅದನ್ನು ಮಾಡುತ್ತೇನೆ. ನನ್ನ ತಲೆದಂಡದ ಪ್ರಶ್ನೆ ಬರಲ್ಲ. ತಿಮ್ಮಾಪುರ್ ಏನು ತಪ್ಪು ಮಾಡಿಲ್ಲ. ಏನಾದರೂ ಇದ್ದರೆ ನಾನು ಅದನ್ನು ಎದುರಿಸುತ್ತೇನೆ. ಹಿಂದೆಯೂ ಅಬಕಾರಿ ಮಂತ್ರಿ ಆಗಿದ್ದವರ ಮೇಲೆ ಇಂತಹ ಆರೋಪಗಳು ಬಂದಿದೆ. ಎಲ್ಲಾ ಮಂತ್ರಿಗಳ ಮೇಲೂ ಆರೋಪ ಬಂದಿದೆ ಎಂದು ಹೇಳಿದರು. ಇದನ್ನೂ ಓದಿ: ಪಕ್ಷದಲ್ಲಿ ಎರೆಹುಳುಗಳು ನಾಗರಹಾವುಗಳಾಗುತ್ತಿದ್ದಾರೆ: ಡಿವಿಎಸ್‌ ಕಿಡಿ

    ಇಲಾಖೆಯಲ್ಲಿ ಕೆಲವು ಬದಲಾವಣೆ ಆಗಬೇಕು. ಅದನ್ನು ಮಾಡುತ್ತೇನೆ. ಮೋದಿಯವರು 700 ಕೋಟಿ ಅಕ್ರಮದ ಆರೋಪ ಮಾಡುತ್ತಾರೆ. ಇದಕ್ಕೆ ಬೆಲೆ ಇದೆ. ಅಧಿಕಾರಿಗಳ ಹಂತದಲ್ಲಿ ಇವೆಲ್ಲ ನಡೆಯುತ್ತಿದೆ. ಇದನ್ನು ಸರಿ ಮಾಡುತ್ತೇನೆ. ಇಲಾಖೆಯ ವರ್ಗಾವಣೆ ಕೌನ್ಸಿಲಿಂಗ್ ವ್ಯವಸ್ಥೆ ಮಾಡುವ ಪ್ರಕ್ರಿಯೆ ತರುತ್ತೇವೆ. ಮದ್ಯದಂಗಡಿಗಳಿಗೆ ಅನುಮತಿ ನೀಡುವ ವಿಚಾರವಾಗಿಯೂ ಕೆಲವು ಗೊಂದಲ ಆಗುತ್ತಿದೆ. ಇವೆಲ್ಲದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು. ಇದನ್ನೂ ಓದಿ: ಕಾರವಾರ| ವಿದ್ಯುತ್ ಶಾಕ್‌ನಿಂದ ವಿದ್ಯಾರ್ಥಿನಿ ಸಾವು

  • ಬಿಜೆಪಿಯರು ಕನಸು ಕಾಣ್ತಿದ್ದಾರೆ, ಜನ ಯಾವತ್ತಾದರೂ ಬಹುಮತ ಕೊಟ್ಟಿದ್ದಾರಾ: ನಿರಾಣಿಗೆ ತಿಮ್ಮಾಪೂರ್‌ ತಿರುಗೇಟು

    ಬಿಜೆಪಿಯರು ಕನಸು ಕಾಣ್ತಿದ್ದಾರೆ, ಜನ ಯಾವತ್ತಾದರೂ ಬಹುಮತ ಕೊಟ್ಟಿದ್ದಾರಾ: ನಿರಾಣಿಗೆ ತಿಮ್ಮಾಪೂರ್‌ ತಿರುಗೇಟು

    ಬಾಗಲಕೋಟೆ: ಬಿಜೆಪಿಯವರು (BJP) ಪಾಪ ಅವರು ಕನಸು ಕಾಣುತ್ತಿದ್ದಾರೆ. ಇವರಿಗೆ ಜನ ಯಾವತ್ತಾದರೂ ಬಹುಮತ ಕೊಟ್ಟಿದ್ದಾರಾ ಎಂದು ನಿರಾಣಿಗೆ (Murugesh Nirani) ಸಚಿವ ಆರ್ ಬಿ ತಿಮ್ಮಾಪುರ್ (RB Timmapur) ತಿರುಗೇಟು ನೀಡಿದ್ದಾರೆ.

    ಆರು ತಿಂಗಳಲ್ಲಿ ಸರ್ಕಾರ ಢಮಾರ್ ಎಂಬ ಮಾಜಿ ಸಚಿವ ನಿರಾಣಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅಡ್ಡದಾರಿ ಹಿಡಿದು ಹೋಗಬೇಕು ಎನ್ನುತ್ತಾರೆ. ಅಡ್ಡದಾರಿಯಲ್ಲಿ ಹೋದರೆ ಯಶಸ್ವಿಯಾಗುವುದಿಲ್ಲ. ಪಾಪ ಕನಸು ಕಾಣುತ್ತಿದ್ದರೆ ಕಾಣಲಿ. ಅದಕ್ಕೆ ನಾವು ಬೇಡ ಎನ್ನುವುದಿಲ್ಲ ಎಂದು ಟಾಂಗ್‌ ನೀಡಿದರು. ಇದನ್ನೂ ಓದಿ: ಮೋದಿಯವರೇ ಐದೂ ಗ್ಯಾರಂಟಿ ಜಾರಿ ಆಗಿದೆ, ನಿಮ್ಮ ಮಾತು ಸುಳ್ಳಾಗಿದೆ: ಸಿದ್ದರಾಮಯ್ಯ ಲೇವಡಿ

     
    ರೈತರ ಬಗ್ಗೆ ಸಚಿವ ಶಿವಾನಂದ ಪಾಟೀಲ್ (Shivanand Patil) ಹೇಳಿಕೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಿವಾನಂದ ಪಾಟೀಲರು ಯಾಕೆ ಆ ರೀತಿ ಹೇಳಿದ್ದೇನೆ ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಅವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದರು. ಇದನ್ನೂ ಓದಿ: ಏಪ್ರಿಲ್ ವೇಳೆಗೆ ಬಿಎಂಟಿಸಿಗೆ 1400 ಎಲೆಕ್ಟ್ರಿಕ್ ಬಸ್: ಸಿದ್ದರಾಮಯ್ಯ

    ಬಿಜೆಪಿ ಅವರಿಗೆ ರೈತರ ಬಗ್ಗೆ ಯಾವ ಕಾಳಜಿ ಇದೆ? ಯಾವ್ಯಾವ ಮಾತುಗಳನ್ನು ತಿರುಚಿ ಮಾತಾಡಬೇಕು ಎನ್ನುವುದು ಅವರಿಗೆ ಗೊತ್ತಿದೆ. 5 ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ? ಕೃಷಿ ಹೊಂಡ ಬಂದ್ ಮಾಡಿದರು. ಎಲ್ಲಾ ಸಬ್ಸಿಡಿ ಬಂದ್ ಮಾಡಿದರು. ರೈತರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ (BJP) ಅವರಿಗಿಲ್ಲ ಎಂದು ಕಿಡಿಕಾರಿದರು.

    ಬಿಜೆಪಿಯವರು ಯಾವಾಗಲೂ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ಧರ್ಮ ಜಾತಿ ಇತರೇ ವಿಷಯಗಳ ಬಗ್ಗೆ ಗಮನ ಇದೆಯೇ ಹೊರತು ರೈತರು, ಬಡವರು, ಬರಗಾಲದ ವಿಷಯಗಳು ಇವರಿಗೆ ಗೊತ್ತಿಲ್ಲ. ಬರಗಾಲದ ಬಗ್ಗೆ ಯಾರಾದರೂ ಮಾತಾಡಿದ್ದೀರಾ? ಕೇಂದ್ರ ಸರ್ಕಾರದಿಂದ ನಾವು ಇಷ್ಟು ಹಣ ತಂದಿದ್ದೇವೆ. ರಾಜ್ಯ ಸರ್ಕಾರದಿಂದ ಇಷ್ಟು ಮಾಡಿಲ್ಲ ಎಂದು ಹೇಳಲಿ ನೋಡೋಣ ಎಂದು ಸವಾಲ್‌ ಎಸೆದರು.

  • ಶಾಸಕರನ್ನು ಖರೀದಿಸಿ ಅಡ್ಡದಾರಿಯಲ್ಲಿ ಅಧಿಕಾರಕ್ಕೆ ಬರೋದು ಬಿಜೆಪಿ ಕೆಲಸ: ಆರ್‌ಬಿ ತಿಮ್ಮಾಪುರ

    ಶಾಸಕರನ್ನು ಖರೀದಿಸಿ ಅಡ್ಡದಾರಿಯಲ್ಲಿ ಅಧಿಕಾರಕ್ಕೆ ಬರೋದು ಬಿಜೆಪಿ ಕೆಲಸ: ಆರ್‌ಬಿ ತಿಮ್ಮಾಪುರ

    ಚಿತ್ರದುರ್ಗ: ಶಾಸಕರನ್ನು ಅಡ್ಡದಾರಿಯಲ್ಲಿ ಖರೀದಿಸಿ, ಪ್ರಜಾಪ್ರಭುತ್ವ ವಿರೋಧಿ ನೀತಿಯಿಂದ ಅಧಿಕಾರ ಹಿಡಿಯೋದು ಬಿಜೆಪಿಯವರ (BJP) ಕೆಲಸ ಎಂದು ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ (RB Timmapur) ವಾಗ್ದಾಳಿ ನಡೆಸಿದ್ದಾರೆ.

    ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾದಿಗ ನೌಕರರ ಸಂಘದಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದ ಬಳಿಕ ಮಾತನಾಡಿದ ಅವರು, ಆಪರೇಷನ್ ಕಮಲ ಮಾಡೋದು ಅವರ ಕನಸಾಗಿದೆ. ಅಡ್ಡದಾರಿಯಲ್ಲಿ ಶಾಸಕರನ್ನು ಖರೀದಿಸಿ, ಪ್ರಜಾಪ್ರಭುತ್ವ ವಿರೋಧಿ ನೀತಿಯಿಂದ ಬಿಜೆಪಿ ಅಧಿಕಾರ ಹಿಡಿದಿತ್ತು. ಅವರೆಂದು ಬಿಜೆಪಿ ಜನರಿಂದ ಆಯ್ಕೆಯಾಗಿ ಅಧಿಕಾರ ಹಿಡಿಯಲು ಆಗಿಲ್ಲ. ಅಸಹ್ಯದ ನಡವಳಿಕೆಯಿಂದ ಬಿಜೆಪಿ ಸಿಎಂ ಆಗಿದ್ದರೆಂದು ಕಿಡಿಕಾರಿದರು.

    ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ಶಾಸಕ ರವಿ ಗಣಿಗ ಹೇಳಿರುವ ಬಗ್ಗೆಯೂ ಸಚಿವ ಆರ್‌ಬಿ ತಿಮ್ಮಾಪುರ ಪ್ರತಿಕ್ರಿಯಿಸಿದರು. ಅದು ಅವರೊಬ್ಬರ ಅಭಿಪ್ರಾಯವಾಗಿದೆ. ನಾನು ಸಹ ಮಾಧ್ಯಮದಿಂದ ಈ ವಿಚಾರ ಕೇಳುತ್ತಿದ್ದೇನೆ. ನಮ್ಮ ಪಕ್ಷದಲ್ಲಿ ಆ ರೀತಿ ಅಭಿಪ್ರಾಯ ಇಲ್ಲ. ನಮ್ಮಲ್ಲಿ ಹೈಕಮಾಂಡ್ ಇದೆ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಅಲ್ಲಿ ನಡೆಯುತ್ತದೆ. ಆದರೆ ನಾನು, ಮತ್ತೊಬ್ಬರು ಹೇಳುವುದರಿಂದ ಸಿಎಂ ಬದಲಾವಣೆ ಆಗಲ್ಲ ಎಂದರು. ಇದನ್ನೂ ಓದಿ: ಲಾ ಓದ್ಬೇಡ ಎಂದಿದ್ದ ಶಾನುಭೋಗರ ಆಸ್ತಿಗೆ ನಾನೇ ಲಾಯರ್ ಆದೆ: ಸಿಎಂ

    ಇನ್ನು ರಾಜ್ಯದಲ್ಲಿ ದಲಿತ ಸಿಎಂ ಆಯ್ಕೆ ಬಗ್ಗೆ ಸಭೆ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ರಾಜ್ಯದ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆ ಮತ್ತು ಲೋಕಸಭಾ ಚುನಾವಣೆ ದೃಷ್ಟಿಯಿಂದ ಅಳೆದು, ತೂಗಿ ಪಕ್ಷವು ಜನರ ಹಿತದೃಷ್ಟಿಯಿಂದ ನಿಗಮ ಮಂಡಳಿ ಅಧ್ಯಕ್ಷರನ್ನು ಆಯ್ಕೆ ಮಾಡಿದೆ. ಜೊತೆಗೆ ಪರಮೇಶ್ವರ್ ಜೊತೆ ಸಿಎಂ ಸಭೆ ನಡೆಸಿದ್ದಕ್ಕೆ ಇಲ್ಲದ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ರಾಜ್ಯದ ಅಭಿವೃದ್ಧಿ, ಪಕ್ಷ ಸಂಘಟನೆ ಮತ್ತು ಆಡಳಿತ ವಿಚಾರದ ಚರ್ಚೆಗಾಗಿ ಸಿಎಂ ಸಿದ್ಧರಾಮಯ್ಯ ಸಚಿವರ ಮನೆಗೆ ಆಗಾಗ ಬರ್ತಿರ್ತಾರೆ. ಜಾರ್ಜ್ ಹಾಗೂ ಮಹದೇವಪ್ಪ ಅವರ ಮನೆಗೆ ಹೋಗಿದ್ದರು. ಈ ಹಿಂದೆ ಮಾಜಿ ಸಚಿವ ಆಂಜನೇಯ ಮನೆಗೂ ಹೋಗ್ತಿದ್ರು. ಅಂತೆಯೇ ಪರಮೇಶ್ವರ್ ಮನೆಗೂ ಹೋಗಿದ್ದಾರೆ ಎಂದು ಹೇಳಿದರು.

    ಸಿಎಂ, ಸಚಿವರೊಂದಿಗೆ, ಶಾಸಕರೊಂದಿಗೆ ಊಟ ಮಾಡಿದ್ರೆ, ಚಹಾ ಕುಡಿದ್ರೆ ಭಿಮ್ನಮತ ಅನ್ನೋದು ಸರಿಯಲ್ಲ. ನಾವು ಸಹ ಆಗಾಗ ಸ್ನೇಹಿತರೊಂದಿಗೆ ಶಾಸಕರೊಂದಿಗೆ ಊಟ ಮಾಡ್ತಿವಿ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಪ್ರತ್ಯೇಕ ಸಭೆಯು ನಡೆಸಿಲ್ಲ. ಆದರೆ ಮಾಧ್ಯಮಗಳಿಗೆ ಅದೆಲ್ಲವು ಭಿನ್ನ, ವಿಭಿನ್ನವಾಗಿ ಕಾಣುತ್ತದೆ ಎಂದು ಸಚಿವ ತಿಮ್ಮಾಪುರ ವ್ಯಂಗ್ಯವಾಡಿದರು. ಈ ವೇಳೆ ಕೈ ಮುಖಂಡರಾದ ಕರಿಯಪ್ಪ, ಹಫೀಸ್ ಇದ್ದರು. ಇದನ್ನೂ ಓದಿ: ಜನವರಿಯಲ್ಲಿ ಜಾತಿಗಣತಿ ವರದಿ ಸ್ವೀಕಾರ: ಸಿದ್ದರಾಮಯ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಗಳಿಗೆ ಡಿಸೆಂಬರ್ 10 ರವರೆಗೆ ನೀರು: ತಿಮ್ಮಾಪೂರ

    ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಗಳಿಗೆ ಡಿಸೆಂಬರ್ 10 ರವರೆಗೆ ನೀರು: ತಿಮ್ಮಾಪೂರ

    ಬೆಂಗಳೂರು: ಜಲಾಶಯಕ್ಕೆ ಒಳಹರಿವು ಬಂದಿರುವುದರಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ (Krishna Upper Bank Project) ಅಚ್ಚುಕಟ್ಟು ಪ್ರದೇಶಗಳಿಗೆ ಹೆಚ್ಚು ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷ್ಣಾ ಮೇಲ್ದಂಡೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆರ್‌ಬಿ ತಿಮ್ಮಾಪೂರ (RB Timmapur) ತಿಳಿಸಿದ್ದಾರೆ.

    ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಸಚಿವರು, ಜಲಾಶಯಕ್ಕೆ ಒಳ ಹರಿವು ಬಂದಿರುವುದರಿಂದ ಚಾಲು-ಬಂದ್ ಪದ್ದತಿಯನ್ನು ಪರಿಷ್ಕರಿಸಿ 14 ದಿನ ನೀರು ಚಾಲು ಹಾಗೂ 10 ದಿನದ ಬದಲಿಗೆ 8 ದಿನ ಮಾತ್ರ ಬಂದ್ ಪದ್ದತಿಯನ್ನು ಅನುಸರಿಸಿ ಅಕ್ಟೋಬರ್ 17ರ ಬದಲಿಗೆ ಅಕ್ಟೋಬರ್ 14ನೇ ತಾರೀಖಿನಿಂದಲೇ ನೀರು ಚಾಲು ಮಾಡಲು ತೀರ್ಮಾನಿಸಲಾಗಿದೆ. ಅಲ್ಲದೇ ಮುಂಗಾರು ಹಂಗಾಮಿಗೆ ನವೆಂಬರ್ 23 ರವರೆಗೂ ನೀರು ಹರಿಸಲು ಕೈಗೊಂಡಿದ್ದ ನಿರ್ಣಯದ ಬದಲಾಗಿ ಡಿಸೆಂಬರ್ 10 ರವರೆಗೂ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಳೇ ವೈಷಮ್ಯಕ್ಕೆ 9 ಎಕರೆ ಹತ್ತಿ ಬೆಳೆ ನಾಶ – ಲಕ್ಷಾಂತರ ರೂ. ಬೆಳೆ ಕಳೆದುಕೊಂಡ ರೈತರು

    ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿಗಾಗಿ ನೀರು ಹರಿಸುವುದನ್ನು ಮುಖ್ಯಮಂತ್ರಿಗಳ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಚರ್ಚಿಸಿ ರೈತರ ಹಿತಕಾಪಾಡಲು ಕ್ರಮಕೈಗೊಳ್ಳಲಾಗಿದೆ. ಇದರಿಂದ ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ಸುಮಾರು 6 ಲಕ್ಷ ಬೆಕ್ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ ಎಂದು ಸಚಿವ ಆರ್‌ಬಿ ತಿಮ್ಮಾಪೂರ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಚಾಮುಂಡೇಶ್ವರಿ ಬಳಿ ಬೇಡಿಕೊಳ್ಳುವ ಪ್ರತಿಯೊಬ್ಬರು ಮಹಿಷಾ ದಸರಾ ವಿರೋಧ ಮಾಡಬೇಕು: ಪ್ರತಾಪ್ ಸಿಂಹ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಮ್ಮ ಶಾಸಕರು ಬಿಜೆಪಿ ಅವರನ್ನು ಆಟ ಆಡಿಸುತ್ತಿದ್ದಾರೆ: ಆರ್.ಬಿ ತಿಮ್ಮಾಪುರ್

    ನಮ್ಮ ಶಾಸಕರು ಬಿಜೆಪಿ ಅವರನ್ನು ಆಟ ಆಡಿಸುತ್ತಿದ್ದಾರೆ: ಆರ್.ಬಿ ತಿಮ್ಮಾಪುರ್

    ಬೆಳಗಾವಿ: ಬಿಜೆಪಿಯವರು ನಾಲ್ಕು ಜನ ಶಾಸಕರನ್ನು ಇಟ್ಟುಕೊಂಡು ಮೀಟಿಂಗ್ ಮಾಡಿದ್ದೆ ಮಾಡಿದ್ದು, ಆದರೆ ಆ ನಾಲ್ಕು ಜನರು ನಮ್ಮ ಕಡೆಯೆ ಇದ್ದಾರೆ. ಸುಮ್ಮನೆ ಬಿಜೆಪಿಯವರನ್ನು ಆಟ ಆಡಿಸುತ್ತಿದ್ದು, ಅದು ಬಿಜೆಪಿಯವರಿಗೆ ಅರ್ಥ ಆಗುತ್ತಿಲ್ಲ ಎಂದು ಸಚಿವ ಆರ್.ಬಿ ತಿಮ್ಮಾಪುರ್ ವ್ಯಂಗ್ಯವಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಬೀಳುತ್ತೆ ಅನ್ನುವ ಭವಿಷ್ಯಗಳನ್ನು ಬಹಳಷ್ಟು ಕೇಳಿದ್ದೇವೆ. ಈ ರೀತಿಯ ಭವಿಷ್ಯದ ಮೇಲೆ ನಮಗೆ ನಂಬಿಕೆ ಹೋಗಿದೆ. ನಮ್ಮ ಶಾಸಕರು ನಮ್ಮ ಜೊತೆಯಲ್ಲೇ ಇದ್ದಾರೆ ಎಂದು ಹೇಳಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕಾಂಗದ ನಾಯಕತ್ವದಲ್ಲಿ ಇರುವಾಗ ಅಮಿತ್ ಶಾ ಅಂತವರು ನೂರು ಜನ ಬಂದರು ಸರ್ಕಾರಕ್ಕೆ ಏನೂ ಮಾಡಲು ಆಗಲ್ಲ. ನೂರಕ್ಕೆ ನೂರಾ ಒಂದರಷ್ಟು ಸರ್ಕಾರ ಸುಭದ್ರವಾಗಿದೆ. ಡಿಸೆಂಬರ್ ನಲ್ಲಿ ನಮಗೆಲ್ಲಾ ರಾಜೀನಾಮೆ ಕೊಡು ಅಂದಿದ್ದಾರೆ. ನಾವು ರಾಜೀನಾಮೆ ಕೊಡಲು ಸಿದ್ಧರಿದ್ದೇವೆ. ನಮ್ಮ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸಿ ಸರ್ಕಾರ ಒಯ್ಯುತ್ತಿದ್ದಾರೆ. ರಾಹುಲ್ ಗಾಂಧಿ, ದೇವೇಗೌಡರ ನೇತೃತ್ವದಲ್ಲಿ ಮೈತ್ರಿ ಸರ್ಕಾರ ಸುಭದ್ರವಾಗಿ ನಡೆಸಿಕೊಂಡು ಹೋಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಸಿದ್ದರಾಮ್ಯರನ್ನು ಬೈದು ಈಶ್ವರಪ್ಪ ಲೀಡರ್ ಆಗುತ್ತೇನೆ ಎಂದು ಹೊರಟಿರುವುದು ದುರದೃಷ್ಟಕರ. ಈ ರೀತಿಯ ಭಾವನೆ ಅವರು ಬಿಡಬೇಕು ಮತ್ತು ವಿರೋಧ ಪಕ್ಷದಲ್ಲಿದ್ದು ಸರ್ಕಾರಕ್ಕೆ ಸಲಹೆ ಕೊಡುವ ಕೆಲಸ ಮಾಡಬೇಕು. ಈಶ್ವರಪ್ಪ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡುತ್ತಿದ್ದಾರೋ ಸಿದ್ದರಾಮಯ್ಯ ವಿರೋಧಿಯಾಗಿ ಕೆಲಸ ಮಾಡುತ್ತಿದ್ದರೋ ತಿಳಿಯುತ್ತಿಲ್ಲ ಎಂದು ಹೇಳಿದರು.

    ಇಷ್ಟು ದಿನ ಸರ್ಕಾರ ಬಿದ್ದೆ ಹೋಯ್ತು ಇಂದು ಪ್ರಮಾಣವಚನ ಸ್ವೀಕರಿಸುತ್ತೇವೆ, ನಾಳೆ ಸ್ವೀಕರಿಸುತ್ತೇವೆ ಎಂದು ಕೋಟ್ ಹೊಲಸಿಕೊಂಡು ಓಡಾಡಿದ್ದೆ ಓಡಾಡಿದ್ದು. ಈಗ ಆ ಕೋಟ್ ಅನ್ನು ಬಿಜೆಪಿಯವರು ಎಲ್ಲಿ ತೆಗದು ಇಟ್ಟಿದ್ದರೋ ಗೊತ್ತಿಲ್ಲ. ಈಗ ಮತ್ತೆ ಡೈವರ್ಷನ್ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ನಾಯಕರನ್ನು ಕಾಲೆಳೆದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]