Tag: RB Thimmapur

  • ಪ್ರೀಮಿಯಂ ಬ್ರ‍್ಯಾಂಡ್‌ಗಳ ಮದ್ಯದ ದರ ಇಳಿಕೆ ಮಾಡೋ ಚಿಂತನೆ ಇದೆ – ಆರ್.ಬಿ ತಿಮ್ಮಾಪುರ್

    ಪ್ರೀಮಿಯಂ ಬ್ರ‍್ಯಾಂಡ್‌ಗಳ ಮದ್ಯದ ದರ ಇಳಿಕೆ ಮಾಡೋ ಚಿಂತನೆ ಇದೆ – ಆರ್.ಬಿ ತಿಮ್ಮಾಪುರ್

    ಬೆಂಗಳೂರು: ಅಬಕಾರಿ ಇಲಾಖೆಯ (Excise Department) ಆದಾಯವು ಎರಡು ತ್ರೈಮಾಸಿಕದಲ್ಲಿ ನಿರೀಕ್ಷೆ ಮೀರಿ ಸಂಗ್ರಹವಾಗಿದೆ. ಜೊತೆಗೆ ಪ್ರೀಮಿಯಂ ಬ್ರ‍್ಯಾಂಡ್ ಮದ್ಯದ ದರ ಇಳಿಕೆ ಮಾಡುವ ಚಿಂತನೆ ಇದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ (RB Timmapur) ತಿಳಿಸಿದರು.

    ವಿಧಾನಸೌಧದಲ್ಲಿ ಅಬಕಾರಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಬಕಾರಿ ಇಲಾಖೆಯಿಂದ ಆದಾಯದ ನಿರೀಕ್ಷೆ ಇರುತ್ತದೆ. ಎರಡು ತ್ರೈಮಾಸಿಕದಲ್ಲಿ ನಮ್ಮ ಆದಾಯ ನಿರೀಕ್ಷೆಗೂ ಮೀರಿ ಸಂಗ್ರಹವಾಗಿದೆ. 2 ತ್ರೈಮಾಸಿಕದಲ್ಲಿ ನಮ್ಮ ನಿರೀಕ್ಷೆ 16,290 ಕೋಟಿ ರೂ. ಇತ್ತು. ಆದರೆ ಈಗ 16,358.76 ಕೋಟಿ ರೂ. ಸಂಗ್ರಹವಾಗಿದೆ. ನಿರೀಕ್ಷೆ ಮೀರಿ 142% ಜಾಸ್ತಿ ಸಂಗ್ರಹ ಆಗಿದೆ ಎಂದರು.ಇದನ್ನೂ ಓದಿ: ತಲೆಬುರುಡೆ ರಹಸ್ಯ | ಶೀಘ್ರದಲ್ಲೇ ಎಲ್ಲದಕ್ಕೂ ಕ್ಲ್ಯಾರಿಟಿ ಕೊಡ್ತೀನಿ: ಯೂಟ್ಯೂಬರ್ ಸಮೀರ್ ಫಸ್ಟ್ ರಿಯಾಕ್ಷನ್

    ನಮ್ಮ ಇಲಾಖೆಯಲ್ಲಿ ಹೊಸ ಹೊಸ ಬದಲಾವಣೆ ತರಲಾಗಿದೆ. ಮೊದಲ ಬಾರಿಗೆ ಅಬಕಾರಿ ಹುದ್ದೆಗಳ ನೇಮಕ ಕೌನ್ಸಿಲಿಂಗ್ ಮೂಲಕ ಮಾಡಲಾಗ್ತಿದೆ. ಲೈಸೆನ್ಸ್‌ನ್ನು ಪ್ರತಿ ವರ್ಷ ನವೀಕರಣ ಮಾಡಬೇಕಿತ್ತು. ಆದರೆ ಈಗ ಇದನ್ನ 5 ವರ್ಷಕ್ಕೆ ಮಾಡಿದ್ದೇವೆ. CL-7 ಪರ್ಮಿಷನ್‌ಗೆ ಕಾಲಾವಕಾಶ ಬೇಕಿತ್ತು. ಆದರೆ ಈಗ ಇದರಲ್ಲಿ ಕೆಲವು ಬದಲಾವಣೆ ಮಾಡಿ ಆದಷ್ಟು ಬೇಗ ಅನುಮತಿ ಕೊಡುವ ಕೆಲಸ ಮಾಡ್ತಿದ್ದೇವೆ. ಡ್ರಗ್ಸ್, ಗಾಂಜಾ ಹಾವಳಿ ತಡೆಯಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದರು.

    CL2/CL9 ಅನುಮತಿ ಕೊಡಲು ನಿಯಮ ಬದಲಾವಣೆ ಮಾಡಿ, ಹರಾಜು ಮೂಲಕ ಕೊಡುವ ನಿರ್ಧಾರ ಮಾಡಲಾಗಿದೆ. 571 ಹರಾಜು ಹಾಕಿ ಅನುಮತಿ ಕೊಡ್ತೀವಿ. ಆದಷ್ಟೂ ಬೇಗ ಈ ಪ್ರತಿಕ್ರಿಯೆ ಮಾಡ್ತೀವಿ. ಜನಸಂಖ್ಯೆ ಅನುಗುಣವಾಗಿ ಜಾಸ್ತಿ ಅನುಮತಿ ಕೊಡುವ ಕೆಲಸ ಮಾಡ್ತೀವಿ ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ಪಕ್ಷ ವಿರೋಧಿ ಚಟುವಟಿಕೆ; ಪುತ್ರಿ ಕವಿತಾರನ್ನೇ ಪಕ್ಷದಿಂದ ಹೊರಹಾಕಿದ ಕೆಸಿಆರ್‌

    ನಮ್ಮ ಸಂಘಗಳಿಗೆ ಸಮಸ್ಯೆ ಆಗದಂತೆ ಕ್ರಮ ತೆಗೆದುಕೊಳ್ತೀವಿ. ನಮಗೆ ಆದಾಯ ಕಡಿಮೆ ಆಗಬಾರದು. ಆನ್‌ಲೈನ್ ಅರ್ಜಿಗೂ ಕೂಡ ವ್ಯವಸ್ಥೆ ಮಾಡಿದ್ದೇವೆ. ನಕಲಿ ಮದ್ಯ ಮಾರಾಟ, ಗೋವಾ ಡ್ರಿಂಕ್ಸ್ ಮಾರಾಟ ಮಾಡ್ತಾರೆ. ಹೀಗಾಗಿ ಈ ಬಗ್ಗೆ ನಿಗಾ ಇಡಲಾಗಿದೆ. ನಮ್ಮ ಮದ್ಯ ಸ್ಲ್ಯಾಬ್ 5ರ ಮೇಲಿನ ಪ್ರೀಮಿಯಂ ಬ್ರ‍್ಯಾಂಡ್ ಮೇಲೆ ದರ ಜಾಸ್ತಿ ಇದೆ. ಹೊಸ ಎಂಎಸ್‌ಐಎಲ್ ಮಳಿಗೆ ಕೊಡುವುದಿಲ್ಲ. ಇರುವ ಮಳಿಗೆ ಹರಾಜು ಹಾಕಿ ಕೊಡ್ತೀವಿ ಅಷ್ಟೇ ಎಂದು ಸ್ಪಷ್ಟಪಡಿಸಿದರು.

    ಪ್ರೀಮಿಯಂ ಬ್ರ‍್ಯಾಂಡ್‌ಗಳ ಮದ್ಯದ ದರ ಕಡಿಮೆ ಮಾಡೋ ಬಗ್ಗೆ ಚಿಂತನೆ ಇದೆ. ಸದ್ಯಕ್ಕೆ ಈಗಲೇ ಆಗುವುದಿಲ್ಲ. ಅಕ್ಕ ಪಕ್ಕದ ರಾಜ್ಯಗಳ ವಿವರ ನೋಡಿ, ಮುಂದಿನ ದಿನಗಳಲ್ಲಿ ನಾವು ಈ ಬಗ್ಗೆ ತೀರ್ಮಾನ ಮಾಡ್ತೀವಿ. ಅಬಕಾರಿ ಇಲಾಖೆಯಲ್ಲಿ ಯಾರು ತರದ ಬದಲಾವಣೆ ಮಾಡ್ತೀನಿ, ಇದು ತಿಮ್ಮಾಪುರ್ ಸ್ಟೈಲ್ ಎಂದರು.ಇದನ್ನೂ ಓದಿ: ಚಿಕ್ಕಮಗಳೂರು | ಗಣೇಶ ಉತ್ಸವದಲ್ಲಿ ಡ್ಯಾನ್ಸ್ ಮಾಡ್ತಿದ್ದ ಯುವತಿಯರ ಮೇಲೆ ನೋಟು ತೂರಿ ದರ್ಪ

  • ಉಗ್ರರು ನಿಮ್ಮ ಚಡ್ಡಿ ಬಿಚ್ಚಿಸಿ ಚೆಕ್ ಮಾಡಿದ್ರೆ ಏನ್ ಮಾಡ್ತೀರಿ – ತಿಮ್ಮಾಪೂರ್‌ ವಿರುದ್ಧ ಸೂರ್ಯ ಆಕ್ರೋಶ

    ಉಗ್ರರು ನಿಮ್ಮ ಚಡ್ಡಿ ಬಿಚ್ಚಿಸಿ ಚೆಕ್ ಮಾಡಿದ್ರೆ ಏನ್ ಮಾಡ್ತೀರಿ – ತಿಮ್ಮಾಪೂರ್‌ ವಿರುದ್ಧ ಸೂರ್ಯ ಆಕ್ರೋಶ

    ಬೆಂಗಳೂರು/ಬಾಗಲಕೋಟೆ: ಉಗ್ರರು ನಿಮ್ಮ ಚಡ್ಡಿ ಬಿಚ್ಚಿಸಿ ಚೆಕ್ ಮಾಡಿದ್ರೆ ಏನ್ ಮಾಡ್ತೀರಿ ಎಂದು ಪ್ರಶ್ನಿಸುವ ಮೂಲಕ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ (RB Thimmapur) ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

    ಹಿಂದೂ (Hindu) ಧರ್ಮದ ಹೆಸರಿನಲ್ಲಿ ಗುಂಡಿಟ್ಟು ಕೊಂದಿಲ್ಲ, ಇದೆಲ್ಲ ರಾಜಕೀಯ ಎಂದಿದ್ದ ತಿಮ್ಮಾಪುರ ವಿರುದ್ಧ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಿಮಗೆ ಮಂಜುನಾಥ ಹಾಗೂ ಭರತ್ ಕುಟುಂಬದ ಮುಂದೆ ಹೋಗಿ ನಿಂತು ಹೇಳುವುದಕ್ಕೆ ಧೈರ್ಯ ಇದೆಯಾ ಎಂದು ಕೇಳಿದರು.

     

    ತಿಮ್ಮಾಪುರ್‌ ಅವರ ಚಡ್ಡಿ ಬಿಚ್ಚಿ ಚೆಕ್ ಮಾಡಬೇಕಿತ್ತು. ಈ ರೀತಿ ಹೇಳಿಕೆ ನೀಡಿದ ನೀವು ಸಾರ್ವಜನಿಕ ಜೀವನದಲ್ಲಿ ಇರಬೇಡಿ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿ ಇರಿ ಎಂದು ಹೇಳಿದರು.

    ಹಿಂದೂ ಪುರುಷರನ್ನು ಗುರುತಿಸಿ ಅವರ ಹೆಂಡತಿ ಮಕ್ಕಳ ಮುಂದೆ ಕೊಲೆ ಮಾಡಿದ್ದಾರೆ. ಅವರು ಕೊಂದಿದ್ದು ಪ್ರವಾಸಿಗರಲ್ಲ, ತಾವು ಹಿಂದೂ ಎಂದಿದಕ್ಕೆ ಮಾತ್ರವೇ ಅವರನ್ನು ಕೊಂದಿದ್ದಾರೆ. ಇದು ಭಯೋತ್ಪಾದಕರು ಹಿಂದೂಗಳ ಮೇಲೆ ನಡೆಸಿದ ದಾಳಿ ಅಂತ ಓವೈಸಿ ಒಪ್ಪಿದ್ದಾರೆ. ಬೇಸರದ ಸಂಗತಿ ಏನೆಂದರೆ ಕಾಂಗ್ರೆಸ್ ಒಪ್ಪಲು ತಯಾರಿಲ್ಲ ಎಂದರು.

    ಎಂಥ ದರಿದ್ರ ಪರಿಸ್ಥಿತಿಗೆ ಈ ಸರ್ಕಾರ ಇಳಿದಿದೆ ಎಂದರೆ ಈ ಸರ್ಕಾರ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಹಣ ಘೋಷಣೆ ಮಾಡಿದೆ. ಕನಿಷ್ಠ ಮಾನವೀಯತೆ ಇದ್ದರೆ 1 ಕೋಟಿ ರೂ. ಕೊಡಬೇಕಿತ್ತು. ಪಕ್ಕದ ಕೇರಳದಲ್ಲಿ ಆನೆ ತುಳಿತಕ್ಕೆ ಒಳಗಾದವರಿಗೆ ಈ ಸರ್ಕಾರ 15 ಲಕ್ಷ ಹಣ ನೀಡಿದೆ. ಅದಕ್ಕೆ ಸರಿ ಸಮಾನವಾಗಿ ಆದರೂ ಹಣ ಕೊಡಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.

    ಬೆಂಗಳೂರು ದಕ್ಷಿಣ ಕ್ಷೇತ್ರದಿಂದ 20 ಲಕ್ಷ ರೂಪಾಯಿ ಒಗ್ಗೂಡಿಸುವ ಕೆಲಸ ಮಾಡಿದ್ದೇನೆ. ನಾಳೆ ಅಥವಾ ನಾಡಿದ್ದು ಭರತ್ ಭೂಷಣ್ ಮನೆಗೆ 10 ಲಕ್ಷದ 1 ರೂ. ಹಾಗೂ ಮಧುಸೂದನ್ ರಾವ್ ಮನೆಗೆ 10 ಲಕ್ಷದ 1 ರೂ. ಕೊಡುತ್ತೇವೆ. ರಾಜ್ಯ ಸರ್ಕಾರ ಕೊಟ್ಟಿರುವ ಹಣಕ್ಕಿಂತ ಒಂದು ರೂಪಾಯಿ ಹೆಚ್ಚು ಹಣವನ್ನು ನಮ್ಮ ಕ್ಷೇತ್ರದಿಂದಲೇ ನೀಡುತ್ತೇವೆ ಎಂದು ಸಿಟ್ಟು ಹೊರ ಹಾಕಿದರು.

  • ಒಳಮೀಸಲಾತಿ | ನಾಗಮೋಹನ್ ವರದಿ ಜಾರಿಗೆ ಸರ್ಕಾರ ಬದ್ದ – ಆರ್‌ಬಿ ತಿಮ್ಮಾಪುರ್

    ಒಳಮೀಸಲಾತಿ | ನಾಗಮೋಹನ್ ವರದಿ ಜಾರಿಗೆ ಸರ್ಕಾರ ಬದ್ದ – ಆರ್‌ಬಿ ತಿಮ್ಮಾಪುರ್

    ಬೆಂಗಳೂರು: ಒಳಮೀಸಲಾತಿ (Internal Reservation) ಜಾರಿ ಮಾಡೋದಕ್ಕೆ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ನಾಗಮೋಹನದಾಸ್ ಅವರು ಯಾವುದೇ ಶಿಫಾರಸು ಮಾಡಿದರೂ ಸರ್ಕಾರ ಅದನ್ನು ಜಾರಿ ಮಾಡಲಿದೆ ಎಂದು ಸಚಿವ ಆರ್‌ಬಿ ತಿಮ್ಮಾಪುರ್ (RB Thimmapur) ತಿಳಿಸಿದ್ದಾರೆ.

    ಒಳಮೀಸಲಾತಿ ಸಂಬಂಧ ಇಂದು ಮಧ್ಯಂತರ ವರದಿ ಕೊಡುತ್ತಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಒಳ ಮೀಸಲಾತಿ ಬಗ್ಗೆ ನಮಗೆ ಬದ್ದತೆ ಇದೆ. ನಾವು ಒಳಮೀಸಲಾತಿ ಜಾರಿ ಮಾಡಿಯೇ ಮಾಡುತ್ತೇವೆ. ವೈಜ್ಞಾನಿಕವಾಗಿ ಅಂಕಿಅಂಶಗಳು ಬೇಕು. ಆ ನಿಟ್ಟಿನಲ್ಲಿ ಆಯೋಗ ರಚನೆ ಮಾಡಲಾಗಿದೆ. ನಾಗಮೋಹನದಾಸ್ (Nagamohan Das) ಹೇಳುವ ಎಲ್ಲಾ ಶಿಫಾರಸು ಸರ್ಕಾರ ಅನುಷ್ಠಾನ ಮಾಡಲಿದೆ ಎಂದು ಹೇಳಿದರು. ಇದನ್ನೂ ಓದಿ: ಜಾರಕಿಹೊಳಿ ಸಿಎಂ ಆಗಲು ಹೆಚ್‍ಡಿಕೆ ಭೇಟಿ: ಜಿಟಿಡಿ ಬಾಂಬ್

    ಮಧ್ಯಂತರ ವರದಿ ಯಾಕೆ ಕೊಡುತ್ತಿದ್ದಾರೆ ಗೊತ್ತಿಲ್ಲ. ಏನು ಬೇಕು ಏನು ಬೇಡ ಇದೆ ಅಂತ ಹೇಳುತ್ತಾರೆ. ಅದನ್ನ ನಾವು ಮಾಡುತ್ತೇವೆ. ಅವರು ಏನೇ ಕೊಟ್ಟರೂ ಸರ್ಕಾರ ಅನುಷ್ಠಾನ ಮಾಡಲು ಸಿದ್ಧ ಎಂದರು. ಇನ್ನು ಮೀಸಲಾತಿ ವರದಿ ಹಿನ್ನಲೆಯಲ್ಲಿ ಅನೇಕ ನೇಮಕಾತಿ ಸ್ಥಗಿತವಾಗಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಷ್ಟೋ ವರ್ಷಗಳಿಂದ ಮೀಸಲಾತಿ ಬಗ್ಗೆ ಹೋರಾಟ ಆಗುತ್ತಿದೆ. ಇನ್ನು 4-5 ತಿಂಗಳು ತಡೆದುಕೊಳ್ಳಲಿ ಏನು ಆಗಲ್ಲ ಎಂದರು. ಇದನ್ನೂ ಓದಿ: ಬಾಂಗ್ಲಾ ವಿಮೋಚನಾ ದಿನ – 1971ರ ಯುದ್ಧ ನೆನಪಿಸಿ ಯೂನುಸ್‌ಗೆ ಪತ್ರ ಬರೆದ ಪ್ರಧಾನಿ ಮೋದಿ

  • ರಾಜಕಾರಣಿಗಳ ಹನಿಟ್ರ‍್ಯಾಪ್, ಇದೊಂದು ಉದ್ಯೋಗ ಆಗಿದೆ – ಆರ್.ಬಿ.ತಿಮ್ಮಾಪುರ್

    ರಾಜಕಾರಣಿಗಳ ಹನಿಟ್ರ‍್ಯಾಪ್, ಇದೊಂದು ಉದ್ಯೋಗ ಆಗಿದೆ – ಆರ್.ಬಿ.ತಿಮ್ಮಾಪುರ್

    ಬೆಂಗಳೂರು: ರಾಜಕಾರಣಿಗಳ ಹನಿಟ್ರ‍್ಯಾಪ್ ವಿಚಾರ ಮತ್ತೆ ಸದ್ದು ಮಾಡುತ್ತಿದ್ದು, ಪ್ರಭಾವಿಗಳ ಹನಿಟ್ರ‍್ಯಾಪ್ ಬಗ್ಗೆ ಸಚಿವ ಆರ್.ಬಿ.ತಿಮ್ಮಾಪುರ್ (RB Thimmapur) ಪ್ರತಿಕ್ರಿಯಿಸಿದ್ದಾರೆ.ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಕ್ಕೆ 5 ಲಕ್ಷ ಪರಿಹಾರ ಯೋಜನೆ ಘೋಷಣೆ ಮಾಡಿ: ಉಮಾಶ್ರೀ

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಇವೆಲ್ಲವೂ ರಾಜಕಾರಣ ನಡೆಯುತ್ತಲೇ ಇರುತ್ತೆ. ಇದು ದುರ್ದೈವ, ಇದೊಂದು ಉದ್ಯೋಗ ಆಗಿದೆ. ಇದು ಸರಿಯಲ್ಲ ಎಂದರು.

    ಇದೇ ವೇಳೆ ಅಧ್ಯಕ್ಷ ಸ್ಥಾನದಿಂದ ಮುಕ್ತನಾಗುತ್ತೇನೆ ಎಂಬ ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದನ್ನು ನಾನು ಹೇಗೆ ಹೇಳಲಿ? ಯಾರಿಗೂ ಕೂಡ ಆಗಬಾರದು ಅಂತಿಲ್ಲ, ಎಲ್ಲರಿಗೂ ಆಗಬೇಕೆಂಬ ಆಸೆಯಿದೆ. ನಾನು ಕೂಡ ಸಿಎಂ, ಅಧ್ಯಕ್ಷ ಆಗಬೇಕು ಅಂದುಕೊಂಡಿರುತ್ತೇನೆ. ಸಚಿವ ಸಂಪುಟ ವಿಸ್ತರಣೆ ವಿಚಾರ ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಹೇಳಿದರು.ಇದನ್ನೂ ಓದಿ: KPSC ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾದ ಸರ್ಕಾರ – ಸದನದಲ್ಲಿ ಲೋಕಸೇವಾ ಆಯೋಗ ತಿದ್ದುಪಡಿ ವಿಧೇಯಕ ಪಾಸ್

  • ಸಿದ್ದರಾಮಯ್ಯ ಸರ್ಕಾರದ ಸಚಿವರೊಬ್ಬರ ತಲೆದಂಡಕ್ಕೆ ಸಿದ್ಧತೆ!

    ಸಿದ್ದರಾಮಯ್ಯ ಸರ್ಕಾರದ ಸಚಿವರೊಬ್ಬರ ತಲೆದಂಡಕ್ಕೆ ಸಿದ್ಧತೆ!

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಸರ್ಕಾರದ ಸಚಿವರೊಬ್ಬರ ತಲೆದಂಡವಾಗುವ ಸಾಧ್ಯತೆಯಿದೆ

    ಹೌದು. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ (RB Thimmapur) ರಾಜೀನಾಮೆ ಪಡೆಯಲು ಸಿದ್ಧತೆ ನಡೆಯುತ್ತಿದೆ ಎಂಬ ಚರ್ಚೆ ಕಾಂಗ್ರೆಸ್‌ ವಲಯದಲ್ಲೇ ಕೇಳಿ ಬಂದಿದೆ.

    ಅಬಕಾರಿ ಇಲಾಖೆಯಲ್ಲಿ (Excise Department) 700 ಕೋಟಿ ರೂ. ಹಗರಣದ (Scam) ಆರೋಪ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಿತ್ತು. ಮಹಾರಾಷ್ಟ್ರ ಚುನಾವಣೆಯಲ್ಲೂ ಕಾಂಗ್ರೆಸ್ ಪಾಲಿಗೆ ಕಿರಿಕಿರಿಯಾಗಿತ್ತು. ರಾಜ್ಯಪಾಲರಿಗೆ ದೂರು ನೀಡಿ, ಬಂದ್‌ಗೂ ಬಾರ್ ಮಾಲೀಕರು ಮುಂದಾಗಿದ್ದರು.

    ಮಹಾರಾಷ್ಟ್ರ ಚುನಾವಣೆಯ ಸಮಯದಲ್ಲೂ ವಿಪಕ್ಷಗಳು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದು ಕಾಂಗ್ರೆಸ್‌ಗೆ ಇರುಸು ಮುರುಸು ತಂದಿತ್ತು. ಈ ವಿಚಾರದಿಂದ ಸಚಿವ ತಿಮ್ಮಾಪುರ್ ಮೇಲೆ ಹೈಕಮಾಂಡ್ ಭಾರೀ ಅಸಮಾಧಾನಗೊಂಡಿತ್ತು. ಇದನ್ನೂ ಓದಿ: ಟೋಲ್‌ ಕಟ್ಟದೇ ಕೈ ಮುಖಂಡನಿಂದ ದರ್ಪ – ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ

    ತಿಮ್ಮಾಪುರ್ ರಾಜೀನಾಮೆ ವಿಚಾರದಲ್ಲಿ ಸ್ಪಷ್ಟವಾದ ನಿರ್ಧಾರ ತೆಗೆದುಕೊಂಡು ಬನ್ನಿ ಎಐಸಿಸಿ ನಾಯಕರು ಸಿದ್ದರಾಮಯ್ಯಗೆ ಸೂಚಿಸಿದ್ದರು. ಎಐಸಿಸಿ ಪ್ರಮುಖ ನಾಯಕರ ಜೊತೆಗಿನ ಮಾತುಕತೆಯ ವೇಳೆ ಹೈಕಮಾಂಡ್ ನಿರ್ಧಾರಕ್ಕೆ ಬದ್ದ ಎಂಬ ಸಂದೇಶವನ್ನು ಸಿಎಂ ರವಾನೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಎರಡು ಕರ್ನಾಟಕದ ಉಪಚುನಾವಣೆ ಮತ್ತು ಜಾರ್ಖಂಡ್‌, ಮಹಾರಾಷ್ಟ್ರ ಚುನಾವಣೆಯ ಬಳಿಕ ತಿಮ್ಮಾಪೂರ್‌ ವಿಚಾರದಲ್ಲಿ ಹೈಕಾಂಡ್‌ ಸ್ಪಷ್ಟವಾದ  ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

  • ನ.20ಕ್ಕೆ ರಾಜ್ಯಾದ್ಯಂತ ಬಾರ್ ಬಂದ್

    ನ.20ಕ್ಕೆ ರಾಜ್ಯಾದ್ಯಂತ ಬಾರ್ ಬಂದ್

    ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ (Department of Excise) ಭ್ರಷ್ಟಾಚಾರ, ಲಂಚ ಸ್ವೀಕಾರ ಮಿತಿ ಮೀರಿದೆ. ಇದನ್ನು ಖಂಡಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮದ್ಯ ಮಾರಾಟಗಾರರ ಒಕ್ಕೂಟ (Karnataka Wine Merchants’ Association)  ನ.20ರಂದು ಮದ್ಯ ಬಂದ್‌ಗೆ ಕರೆ ಕೊಟ್ಟಿದೆ. ಜೊತೆಗೆ ಮಾಜಿ ಸಚಿವ ಗೋಪಾಲಯ್ಯ, ಮಾಜಿ ಸಚಿವ ನಾಗೇಶ್ ಅಬಕಾರಿ ಸಚಿವರಾಗಿದ್ದಾಗಲೂ ಲಂಚ ಇತ್ತು. ಈಗ ಮಿತಿ ಮೀರಿದೆ ಎಂದು ಮದ್ಯ ಮಾರಾಟಗಾರರ ಒಕ್ಕೂಟ ಆರೋಪಿಸಿದೆ.

    ಅಬಕಾರಿ ಇಲಾಖೆಯಲ್ಲಿ ಕೋಟಿ ಕೋಟಿ ಲಂಚ ಸ್ವೀಕಾರ ಎಂದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಬಿಜೆಪಿ ಮತ್ತು ಕೇಂದ್ರ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಮುಗಿ ಬೀಳುತ್ತಿದ್ದಾರೆ. ಈಗ ಮದ್ಯ ಮಾರಾಟಗಾರರ ಸಂಘ ಭ್ರಷ್ಟಾಚಾರ ಖಂಡಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನವೆಂಬರ್ 20ರಂದು ಮದ್ಯ ಮಾರಾಟ ಬಂದ್ ಮಾಡಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: 39 ಸಾವಿರ ಕೋಟಿ ಅನುದಾನದಲ್ಲಿ ಕರ್ನಾಟಕದಲ್ಲಿ ರೈಲ್ವೆ ಕೆಲಸ ಆರಂಭ: ಸೋಮಣ್ಣ

    ಇನ್ನೂ ಈ ಲಂಚ ಸ್ವೀಕಾರ ಎಲ್ಲಾ ಸರ್ಕಾರದಲ್ಲೂ ಇದೆ. ಗೋಪಾಲಯ್ಯ ಅವರು ಸಚಿವರಾಗಿದ್ದಾಗಲೂ ಇತ್ತು. ನಾಗೇಶ್ ಸಚಿವರಾಗಿದ್ದಾಗಲೂ ಇತ್ತು. ಈಗ ಕಾಂಗ್ರೆಸ್ ಸರ್ಕಾರದಲ್ಲಿ ಮಿತಿ ಮೀರಿದೆ. ಹಾಗಾಗಿ ನ್ಯಾಯ ಬೇಕಿದೆ. ಅಬಕಾರಿ ಸಚಿವರನ್ನ ಬದಲಾವಣೆ ಮಾಡಬೇಕು. ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ಸಭೆ ಮಾಡಬೇಕು. ಹಣಕಾಸು ಇಲಾಖೆಗೆ ನಮ್ಮ ಇಲಾಖೆಯನ್ನ ಸೇರಿಸಬೇಕು ಎಂದು ಮದ್ಯ ಮಾರಾಟಗಾರರ ಒಕ್ಕೂಟ ಆಗ್ರಹಿಸಿದೆ. ಇದನ್ನೂ ಓದಿ: ಚನ್ನಪಟ್ಟಣ ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡ್ರಾ ಯೋಗೇಶ್ವರ್‌?

    ಇನ್ನೂ ನವೆಂಬರ್ 20ರಂದು ಮದ್ಯ ಬಂದ್‌ಗೆ 10ಕ್ಕೂ ಹೆಚ್ಚು ಮದ್ಯದಂಗಡಿ ವ್ಯಾಪಾರಸ್ಥರು ಬೆಂಬಲ ನೀಡಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೂ ಮದ್ಯ ಸಿಗಲ್ಲ. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಿ ಕಾನೂನು ತಿದ್ದುಪಡಿ ಮಾಡುವಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ವಾಯು ಮಾಲಿನ್ಯ; 300ಕ್ಕೂ ಅಧಿಕ ವಿಮಾನಗಳ ಹಾರಾಟ ವ್ಯತ್ಯಯ

    ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಕರೆದರೆ ಕೆಲ ದಾಖಲೆಗಳನ್ನು ನೀಡುತ್ತೇವೆ. ನವೆಂಬರ್ 20ರ ಒಳಗಡೆ ಸರ್ಕಾರ ನಮ್ಮನ್ನ ಕರೆದು ಮಾತನಾಡಿಸಿ, ಬೇಡಿಕೆ ಈಡೇರಿಸುತ್ತೇವೆ ಅಂತಾ ಭರವಸೆ ನೀಡಿದರೆ ಪ್ರತಿಭಟನೆ ಕೈ ಬಿಡುತ್ತೇವೆ ಎಂದು ಒಕ್ಕೂಟ ತಿಳಿಸಿದೆ. ಇದನ್ನೂ ಓದಿ: ಶಾಸಕರನ್ನು ಖರೀದಿ ಮಾಡೋಕೆ ಅವ್ರೇನು ಕತ್ತೆನಾ? ಕುದುರೆನಾ?: ಸಿಎಂ ವಿರುದ್ಧ ಸಿ.ಟಿ ರವಿ ಕಿಡಿ

  • ಸಿಎಂ ಪತ್ನಿ ಸೈಟ್‌ ಮರಳಿಸಿದ್ದು ತಪ್ಪೇ? ಈ ಕೇಸ್‌ನಲ್ಲಿ ತಪ್ಪೇನಿದೆ:  ತಿಮ್ಮಾಪುರ್‌ ಪ್ರಶ್ನೆ

    ಸಿಎಂ ಪತ್ನಿ ಸೈಟ್‌ ಮರಳಿಸಿದ್ದು ತಪ್ಪೇ? ಈ ಕೇಸ್‌ನಲ್ಲಿ ತಪ್ಪೇನಿದೆ:  ತಿಮ್ಮಾಪುರ್‌ ಪ್ರಶ್ನೆ

    ಬಾಗಲಕೋಟೆ: ಸಿದ್ದರಾಮಯ್ಯನವರ (Siddaramaiah)  ಪತ್ನಿ  ಸೈಟ್ ಮರಳಿಸಿದ್ದು  ತಪ್ಪಾ? ಪ್ರಕರಣದಲ್ಲಿ ಏನು ತಪ್ಪಿದೆ ಎಂದು ಜನರಿಗೆ ತೋರಿಸಲಿ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ್ (RB Tiimmapur)  ಹೇಳಿದ್ದಾರೆ.

    ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಮುಡಾ ಪ್ರಕರಣದಿಂದ (MUDA Case) ಸಿಎಂ ಅವರ ಧರ್ಮಪತ್ನಿಗೆ ಮುಜುಗರವಾಗಿದೆ.  ಹೀಗಾಗಿ ಅವರು ಸೈಟ್  ಮರಳಿಸಿದ್ದಾರೆ. ನಮ್ಮ ಮನೆಯವರಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಈ ಆಸ್ತಿಯೇ ಬೇಡ ಎಂದಿದ್ದಾರೆ. ಸೈಟ್ ಮರಳಸಿದ್ದು  ತಪ್ಪಾ? ಪ್ರಕರಣದಲ್ಲಿ ಏನು ತಪ್ಪಿದೆ ಎಂದು ಜನರಿಗೆ ತೋರಿಸಲಿ. ಇದರಲ್ಲಿ ಸಿಎಂ ಅವರ ಚಾರಿತ್ರ್ಯ ವಧೆ ಮಾಡುವ ಕೆಲಸ ನಡೆಯುತ್ತಿದೆ ಇದು ಖಂಡನೀಯ ಎಂದು ಹೇಳಿದರು. ಇದನ್ನೂ ಓದಿ: ಯತ್ನಾಳ್‌ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು: ಮಾಜಿ ಸಂಸದ ಮುನಿಸ್ವಾಮಿ

     

    ಮುಡಾ ಪ್ರಕರಣದಲ್ಲಿ ವಿಪಕ್ಷಗಳು ಹಾಗೂ ಕೇಂದ್ರ ಸರ್ಕಾರದ ಕುತಂತ್ರದಿಂದ ಸಿಎಂ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ.  ವಿಪಕ್ಷ ನಾಯಕರ ಕುತಂತ್ರಗಳು ನಡೆಯುವುದಿಲ್ಲ. ಜನ ನಮ್ಮ ಜೊತೆ ಇದ್ದಾರೆ. ಷಡ್ಯಂತ್ರ ಮಾಡುತ್ತಿರುವ ಬಿಜೆಪಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ. ನಮ್ಮ ಸಿಎಂ ಯಾವ ಆರೋಪಕ್ಕೂ ಜಗ್ಗುವುದಿಲ್ಲ ಎಂದು ಹೇಳಿದರು.

    ರಾಜ್ಯದಲ್ಲಿ ಬಿಜೆಪಿಗೆ (BJP) ಜನ ಬಹುಮತ ನೀಡಿಲ್ಲ. ಅವರು ಕುದುರೆ ವ್ಯಾಪಾರ ಮಾಡಿಯೇ  ಅಧಿಕಾರ ಮಾಡಿದ್ದಾರೆ. ಈಗಲೂ ಅದೇ ಕೆಲಸ ಮಾಡಲು ಮುಂದಾಗಿದ್ದಾರೆ. ಈಗ ನಮ್ಮ ಶಾಸಕರು ಮತ್ತಷ್ಟು ಗಟ್ಟಿಯಾಗಿದ್ದಾರೆ. ಬಿಜೆಪಿಯವರ ಆಪರೇಷನ್ ಯಾವತ್ತೂ ಫಲಿಸಲ್ಲ ಎಂದು ಹೇಳಿದರು.

     

    ಸಿಎಂ ಆಗಲು ಬಿಜೆಪಿಯಲ್ಲಿ ಸಾವಿರ ಕೋಟಿ ಇಟ್ಟಿದ್ದಾರೆ ಎಂಬ ಶಾಸಕ ಯತ್ನಾಳ್‌  ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನೋಡಿ ಇದು ಕರ್ನಾಟಕದ ಜನರಿಗೆ ಗೊತ್ತು, ಜನ ಬಿಜೆಪಿಯವರಿಗೆ ನೀವು ಯೋಗ್ಯರಲ್ಲ ಎನ್ನುವ ದೃಷ್ಟಿಯಿಂದಲೇ ಯಾವತ್ತೂ ಅಧಿಕಾರ ಕೊಟ್ಟಿಲ್ಲ. ಇಂತಹ ಹಣ ಮತ್ತೊಂದು ಮಗದೊಂದು ತೋರಿಸಿ  ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದ್ದಾರೆ.  ಈಗಲೂ ಪ್ರಯತ್ನಿಸಿದ್ದಾರೆಯೋ ಏನೋ  ಹೇಳಕ್ಕಾಗಲ್ಲ. ಆದರೆ ಬಿಜೆಪಿಯವರ ಇತಿಹಾಸ ಕರ್ನಾಟಕದಲ್ಲಿ ಜನ ಬರೆದಿದ್ದಾರೆ, ಬಾಂಬೆಯಲ್ಲಿ  ಏನೇನ್ ಆಯ್ತು ಅಂತ ನಿಮ್ಮ ಟಿವಿಯಲ್ಲಿ ಎಲ್ಲ ನಾವು ನೋಡಿದ್ದೇವೆ. ನಾವು ಅಷ್ಟೇ ಅಲ್ಲ. ಭಾರತ ಜನತೆಗೆ ತೋರಿಸಿದ ನಿಮಗೆ ಧನ್ಯವಾದಗಳು ಎಂದು ಬಿಜೆಪಿ ಬಗ್ಗೆ ವ್ಯಂಗ್ಯವಾಡಿದರು.

     

  • ಬಿಜೆಪಿಯಲ್ಲಿ ಬಿಎಸ್‍ವೈ ವಿರುದ್ಧವೇ ಷಡ್ಯಂತ್ರ: ಆರ್.ಬಿ.ತಿಮ್ಮಾಪುರ

    ಬಿಜೆಪಿಯಲ್ಲಿ ಬಿಎಸ್‍ವೈ ವಿರುದ್ಧವೇ ಷಡ್ಯಂತ್ರ: ಆರ್.ಬಿ.ತಿಮ್ಮಾಪುರ

    -ಮೋದಿ ಹೃದಯದಲ್ಲಿ ಕರ್ನಾಟಕಕ್ಕೆ ಜಾಗವಿಲ್ಲ
    -25 ಸಂಸದರಿಗೆ ಬಾಯಿಯೇ ಇಲ್ಲ

    ಬಾಗಲಕೋಟೆ: ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಯಲ್ಲಿಯೇ ಷಡ್ಯಂತ್ರ ರಚಿಸಲಾಗಿದೆ. ಸ್ವಪಕ್ಷದ ನಾಯಕರ ಸಂಚಿಗೆ ಸಿಲುಕಿ ಯಡಿಯೂರಪ್ಪ ಅಸಹಾಯಕರಾಗಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಆರ್.ಬಿ.ತಿಮ್ಮಾಪುರ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಬಿಜೆಪಿಯಲ್ಲಿ ಲಿಂಗಾಯತ ನಾಯಕನನ್ನು ಮುಗಿಸಲು ಷಡ್ಯಂತ್ರ ರಚಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಆರ್‍ಎಸ್‍ಎಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಸಂತೋಷ್ ಸೇರಿ ಬಿಎಸ್‍ವೈ ವಿರುದ್ಧ ಪಿತೂರಿ ನಡೆಸಿದ್ದಾರೆ. ಲಿಂಗಾಯತರು ಯಡಿಯೂರಪ್ಪನವರ ಮುಖ ನೋಡಿ ಮತ ಹಾಕಿದ್ದಾರೆ ಹೊರತು ನಳಿನ್ ಕುಮಾರ್ ಮುಖ ನೋಡಿ ಅಲ್ಲ. ಕಟೀಲ್‍ಗೆ ಈ ಭಾಗದ ಪರಿಚಯವೇ ಇಲ್ಲ. ಯಡಿಯೂರಪ್ಪನವರ ಮೇಲೆ ಮೂವರು ಡಿಸಿಎಂಗಳನ್ನು ತಂದಿದ್ದು, ಇನ್ನೆರೆಡು ತಿಂಗಳಲ್ಲಿ ಈ ಇಬ್ಬರು ಬಿಎಸ್‍ವೈ ಅವರ ರಾಜಕೀಯ ಜೀವನವನ್ನು ಮುಗಿಸಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪವರಿಗೆ ಟಿಕೆಟ್ ನೀಡಲ್ಲ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ನೆರೆ ಪರಿಹಾರ ಕೊಡದ ಕೇಂದ್ರ ಸರ್ಕಾರ – ಎಲ್ಲಾ ಚೆನ್ನಾಗಿದೆ ಎಂದ ಮೋದಿ ವಿರುದ್ಧ ಕಿಡಿ

    ಐವತ್ತಾರು ಇಂಚಿನ ಎದೆ ಇದೆ ಎಂದು ಪೋಸ್ ಕೊಡುವ ಪ್ರಧಾನಿ ಮೋದಿ ಅವರ ಹೃದಯದಲ್ಲಿ ಕರ್ನಾಟಕಕ್ಕೆ ಜಾಗವಿಲ್ಲ. ರಾಜ್ಯದ ಜನತೆ 25 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದರಿಂದ ಪ್ರಧಾನಿ ಹೃದಯದಲ್ಲಿ ಸಣ್ಣ ಜಾಗವಿದೆ ಅಂತಾ ತಿಳಿದುಕೊಂಡಿದ್ದಿವಿ. ಆದ್ರೆ ನಮ್ಮ ನಂಬಿಕೆ ಸುಳ್ಳಾಗಿದೆ. ನಮ್ಮ ಸಂಸದರಿಗೆ ಬಾಯಿಯೇ ಇಲ್ಲ. ಒಂದಿಂಚು ಸಹ ಜಾಗ ಇರಲಾರದಂತಹ 56 ಇಂಚು ಎದೆ ಇದ್ದರೆಷ್ಟು, ಬಿಟ್ಟರೆಷ್ಟು. ಕರ್ನಾಟಕ ಜನತೆಗೆ ನೋವು ಮಾತ್ರ ತಪ್ಪಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪನವರೇ ನೀವಿಲ್ಲಿಗೆ ಬರಬೇಡಿ – ಸಂತ್ರಸ್ತರ ಆಕ್ರೋಶ

  • ಮಂತ್ರಿಯಾಗೋ ಮೊದ್ಲೇ ತಿಮ್ಮಾಪುರ್ ವಿರುದ್ಧ ದೂರು- ರಾಜಭವನದ ಕದ ತಟ್ಟಿದ ಬಿಜೆಪಿ

    ಮಂತ್ರಿಯಾಗೋ ಮೊದ್ಲೇ ತಿಮ್ಮಾಪುರ್ ವಿರುದ್ಧ ದೂರು- ರಾಜಭವನದ ಕದ ತಟ್ಟಿದ ಬಿಜೆಪಿ

    ಬೆಂಗಳೂರು: ಸಚಿವ ಸ್ಥಾನ ಅಲಂಕರಿಸುವ ಮುನ್ನವೇ ಪರಿಷತ್ ಸದಸ್ಯ ಆರ್‍ಬಿ ತಿಮ್ಮಾಪುರ್ ವಿರುದ್ಧ ಬಿಜೆಪಿ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ.

    ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್‍ನ ಪರಿಷತ್ ಸದಸ್ಯರ ಪ್ರಾಕ್ಸಿ ಮತದಾನ ರಾಜಭವನದ ಅಂಗಳಕ್ಕೆ ತಲುಪಿದೆ. ಜಗದೀಶ್ ಶೆಟ್ಟರ್ ,ಆರ್ ಅಶೋಕ್ ನೇತೃತ್ವದ ನಿಯೋಗ ರಾಜ್ಯಪಾಲ ವಜುಭಾಯ್ ವಾಲಾ ಅವರನ್ನ ಭೇಟಿಯಾಗಿ ತಿಮ್ಮಾಪುರ್ ಸೇರಿದಂತೆ ಒಟ್ಟು ಎಂಟು ಪರಿಷತ್ ಸದಸ್ಯರ ಅನರ್ಹತೆಗೆ ಒತ್ತಾಯ ಮಾಡಿದೆ. ನಿಯೋಗದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಅರವಿಂದ ಲಿಂಬಾವಳಿ ಭಾಗಿಯಾಗಿದ್ದಾರೆ.

    ಪರಿಷತ್ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಲು ನಿರ್ದೇಶನ ನೀಡಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಅಲ್ಲದೆ ಇವತ್ತು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಆರ್.ಬಿ.ತಿಮ್ಮಾಪುರ್ ಅವರನ್ನ ಸಚಿವ ಸ್ಥಾನಕ್ಕೆ ಪರಿಗಣಿಸಬಾರದು. ಅವರನ್ನ ಅನರ್ಹಗೊಳಿಸಬೇಕು ಅಂತಾ ಬಿಜೆಪಿ ಮನವಿ ಮಾಡಿದೆ.